Categories
ರಾಜ್ಯ

ಟಾಪ್ ನ್ಯೂಸ್ ಕರ್ನಾಟಕ

ಮೂಡಿಗೆರೆ: ಮೀನು ಹಿಡಿಯಲು ಹೋದ ಇಬ್ಬರು ಬಾಲಕರ ಸಾವು: ಇನ್ನೋರ್ವನ ನಾಪತ್ತೆ..!
– ದೆಹಲಿಯಲ್ಲಿ ಭೂಕಂಪ: ನಡುಗಿದ ಭೂಮಿ
– ಆರಗ ಜ್ಞಾನೇಂದ್ರ ವಿರುದ್ದ ಮತ್ತೊಂದು ಕೇಸ್
– ಕುಣಿಗಲ್: ಪ್ರೇಯಸಿ ಕೊಲೆ ಮಾಡಿ ಶವದ ಜತೆಯೇ ಇದ್ದ!

NAMMUR EXPRESS NEWS
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯ ಹ್ಯಾಂಡ್ ಪೋಸ್ಟ್ ಬಳಿ ಮೀನು ಹಿಡಿಯಲು ಹೋಗಿ ಇಬ್ಬರು ಮೃತಪಟ್ಟ ದುರಂತ ಶನಿವಾರ ರಾತ್ರಿ ನಡೆದಿದೆ. ಇನ್ನೊರ್ವ ಬಾಲಕನ ಪತ್ತೆ ಕಾರ್ಯ ನಡೆಯುತ್ತಿದೆ. ಕೂಲಿ ಕೆಲಸಕ್ಕೆ ಬಂದಿದ್ದ ಕುಟುಂಬದ ಈ ಮೂವರು ಮೀನು ಹಿಡಿಯಲು ಕೆರೆಗೆ ಇಳಿದಿದ್ದಾಗ ಘಟನೆ ನಡೆದಿದೆ. ಕಿಶೋರ್( 19) ಹಾಗೂ ತನ್ಮಯ(18) ಮೃತ ಬಾಲಕರು.

ಆರಗ ಜ್ಞಾನೇಂದ್ರ ವಿರುದ್ಧ ಸಾಗರದಲ್ಲಿ ದೂರು!

ಮಲ್ಲಿಕಾರ್ಜುನ ಖರ್ಗೆ ಬಣ್ಣದ ಬಗ್ಗೆ ಅವಮಾನಕಾರಿ ಮಾತನಾಡಿದ ಆರೋಪದ ಮೇಲೆ ಮಾಜಿ ಗೃಹ ಸಚಿವ, ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ವಿರುದ್ಧ ಸಾಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಶ್ರೀಧರ್ ಎಂಬುವರು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅವಮಾನ ಮಾಡಿರುವುದು ದಲಿತರಿಗೆ ಅನ್ಯಾಯವಾದಂತೆ, ಕೊಡಲೇ ಆರಗ ಅವರನ್ನು ಬಂಧಿಸಬೇಕು ಎಂದು ಸಾಗರ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.

ದೆಹಲಿಯಲ್ಲಿ ಭೂಕಂಪ: ನಡುಗಿತು ಭೂಮಿ!

ದೇಶದ ರಾಜಧಾನಿ ನವ ದೆಹಲಿಯಲ್ಲಿ ಭೂಕಂಪ ಆಗಿದೆ. ರಿಕ್ಟರ್ ಮಾಪನದಲ್ಲಿ 5.8 ರಷ್ಟು ತೀವ್ರತೆ ಇದ್ದ ಭೂಕಂಪನ 9:31ಕ್ಕೆ ಸಂಭವಿಸಿದೆ. ಪಕ್ಕದ ಅಫಘನಿಸ್ಥಾನ, ಪಾಕಿಸ್ತಾನದಲ್ಲೂ ಭೂಕಂಪನ ಆಗಿದೆ.

ಲಾಡ್ಜ್‌ನಲ್ಲಿ ಕುತ್ತಿಗೆ ಬಿಗಿದು ಪ್ರೇಯಸಿಯ ಕೊಲೆ!

ತುಮಕೂರು ಜಿಲ್ಲೆಯ ಕುಣಿಗಲ್ ನಗರದ ಲಾಡ್ಜ್‌ನಲ್ಲಿ ಮಹಿಳೆಯನ್ನು ಕೊಲೆ ಮಾಡಿದ ಆರೋಪಿ ನೇರವಾಗಿ ಪೊಲೀಸ್ ಠಾಣೆಗೆ ಬಂದು ಶರಣಾದ ಘಟನೆ ನಡೆದಿದೆ. ಮಾಗಡಿ ತಾಲೂಕಿನ ತಾವರೆಕೆರೆ ಮೂಲದ ಲಕ್ಷ್ಮೀ ದೇವಿ ಕೊಲೆಯಾದವರು. ದಾವಣಗೆರೆ ಮೂಲದ ಮಂಜುನಾಥ್‌ ಕೊಲೆ ಆರೋಪಿ ಎಂದು ತಿಳಿದುಬಂದಿದೆ. ಕೊಲೆಯಾದ ಲಕ್ಷ್ಮೀ ದೇವಿ ಹಾಗೂ ಮಂಜುನಾಥ್ ಇಬ್ಬರು ಬೆಂಗಳೂರು ಗ್ರಾಮಾಂತರ ತಾವರೇಕೆರೆ ಬಳಿ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಲಕ್ಷ್ಮೀ ದೇವಿಗೆ ಮದುವೆಯಾಗಿ ಕಳೆದ ಮೂರು ವರ್ಷದಿಂದ ಗಂಡನನ್ನು ಬಿಟ್ಟು ಒಬ್ಬಳೆ ಜೀವನ ಸಾಗಿಸುತ್ತಿದ್ದಳು. ಇನ್ನೂ ಕಾರ್ಖಾನೆಯಲ್ಲಿ ಮಂಜುನಾಥ್‌ನ ಪರಿಚಯವಾಗಿ ಇಬ್ಬರ ನಡುವೆ ಎರಡು ವರ್ಷದಿಂದ ಪ್ರೇಮ ಬೆಳೆದು ಇಬ್ಬರು ಅಕ್ರಮ ಸಂಬಂಧ ಬೆಳೆಸಿಕೊಂಡಿದ್ದರು ಎನ್ನಲಾಗಿದೆ.

ಈ ನಡುವೆ ಮಹಿಳೆ ಮಂಜುನಾಥ ಬೇರೆ ಮಹಿಳೆಯೊಂದಿಗೆ ಸಂಬಂಧ ಇಟ್ಟುಕೊಂಡಿದ್ದಾನೆ ಎಂದು ಅನುಮಾನ ಪಟ್ಟು ಪದೇ ಪದೇ ಶುಕ್ರವಾರ ರಾತ್ರಿ ಲಕ್ಷ್ಮೀ ದೇವಿ ಹಾಗೂ ಮಂಜುನಾಥ್‌ ಕುಣಿಗಲ್ ಪಟ್ಟಣದ ಲಾಡ್ಜ್‌ಗೆ ಬಂದು ರೂಂ ಮಾಡಿದ್ದಾರೆ. ರಾತ್ರಿ ಇಬ್ಬರ ನಡುವೆ ಜಗಳವಾಗಿದ್ದು, ಲಕ್ಷ್ಮೀ ದೇವಿ ಅತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾಳೆ. ಇದರಿಂದ ರೋಸಿ ಜಗಳ ಮಾಡುತ್ತಿದ್ದಳು.ಹೋಗಿದ್ದ ಮಂಜುನಾಥ್‌ ಆಕೆ ಧರಿಸಿದ್ದ ಚೂಡಿದಾರ್ ವೇಲ್‌ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ. ಬೆಳಗೆ ಆಗುವ ತನಕ ಶವದ ಜೊತೆಯಲ್ಲಿ ಇದ್ದು ನಂತರ ಎದ್ದು ಕುಣಿಗಲ್ ಪೋಲಿಸ್ ಠಾಣಿಗೆ ಬಂದು ಕೊಲೆ ಮಾಡಿರುವುದಾಗಿ ಹೇಳಿ ಪೋಲಿಸರಿಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ

ಇದನ್ನೂ ಓದಿ : ನಾನು ಬದುಕಿರುವುದೇ ಕಿಮ್ಮನೆಗೆ ಸಹಿಸಲಾಗುತ್ತಿಲ್ಲ

HOW TO APPLY : NEET-UG COUNSELLING 2023

Categories
ಮೈಸೂರು

ಮೈಸೂರು: ಮಾಜಿ ಸಚಿವ ವಿಶ್ವನಾಥ್ ಪುತ್ರನಿಗೆ ವಂಚನೆ!

ಮೈಸೂರು: ಮಾಜಿ ಸಚಿವ ವಿಶ್ವನಾಥ್ ಪುತ್ರನಿಗೆ ವಂಚನೆ!
– ಬ್ಯಾಂಕ್ ಖಾತೆಯಿಂದ 1.99 ಲಕ್ಷ ರೂ. ದೋಚಿದ ಸೈಬರ್ ಕಳ್ಳರು

NAMMUR EXPRESS NEWS
ಮೈಸೂರು: ಆನ್‌ಲೈನ್ ವಂಚನೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಹಣ ವಂಚಿಸಲು ಸೈಬರ್ ಖದೀಮರು ಹೊಸ ಹೊಸ ಮಾರ್ಗಗಳನ್ನು ಕಂಡುಕೊಂಡಿದ್ದಾರೆ. ಈ ನಡುವೆ ಎಂಎಲ್‌ಸಿ ವಿಶ್ವನಾಥ್ ಪುತ್ರನಿಗೆ 1.99 ಲಕ್ಷ ರೂ. ವಂಚನೆ ಮಾಡಿರುವ ಘಟನೆ ನಡೆದಿದೆ. ನಕಲಿ ಬ್ಯಾಂಕ್ ಕಸ್ಟಮರ್‌ ಕೇರ್‌ಗೆ ಕಾಲ್ ಮಾಡಿದ್ದರಿಂದ ಅಡಗೂರು ಎಚ್.ವಿಶ್ವನಾಥ್ ಪುತ್ರ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಮಿತ್ ದೇವರಹಟ್ಟಿ ಅವರ ಬ್ಯಾಂಕ್ ಖಾತೆಗೆ ಸೈಬರ್ ಕಳ್ಳರು ಕನ್ನ ಹಾಕಿ ದೊಡ್ಡ ಮೊತ್ತದ ಹಣವನ್ನು ಎಗರಿಸಿದ್ದಾರೆ.

ಬೆಂಗಳೂರಿನ ಎಟಿಎಂನಲ್ಲಿ ಹಣ ಡ್ರಾ ಮಾಡಲು ಅಮಿತ್ ದೇವರಹಟ್ಟಿ ಮುಂದಾಗಿದ್ದಾರೆ. ಹಣ ಬಾರದೆ ಇದ್ದರೂ ಬ್ಯಾಂಕ್‌ನಿಂದ ಡೆಬಿಟೆಡ್ ಎಂದು ಮೆಸೇಜ್ ಬಂದಿದೆ. ಇದನ್ನು ಕಂಡು ಗೂಗಲ್‌ನಲ್ಲಿ ಕಸ್ಟಮರ್ ಕೇರ್ ನಂಬರ್ ಹುಡುಕಿ ಕರೆ ಮಾಡಿದ್ದಾರೆ. ಕಸ್ಟಮರ್ ಕೇರ್ ನಂಬರ್ ನಕಲಿ ಎಂದು ಗೊತ್ತಿಲ್ಲದೆ ಕಾಲ್ ಮಾಡಿದ್ದರಿಂದ ಕೆಲವೇ ನಿಮಿಷಗಳಲ್ಲಿ ಬ್ಯಾಂಕ್ ಖಾತೆ ಹ್ಯಾಕ್ ಆಗಿದೆ. ಖಾತೆಯಿಂದ 1.99 ಲಕ್ಷ ರೂ.ಗಳನ್ನು ಸೈಬರ್ ಕಳ್ಳರು ಲಪಟಾಯಿಸಿದ್ದಾರೆ. ಈ ಸಂಬಂಧ ಮೈಸೂರಿನ ಸೆನ್ (CEN) ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಇದನ್ನೂ ಓದಿ : ನಾನು ಬದುಕಿರುವುದೇ ಕಿಮ್ಮನೆಗೆ ಸಹಿಸಲಾಗುತ್ತಿಲ್ಲ

HOW TO APPLY : NEET-UG COUNSELLING 2023

Categories
ರಾಷ್ಟ್ರೀಯ ವಾರ್ತೆ

ಅಯೋಧ್ಯೆಯಲ್ಲಿ ಮೊಳಗಲಿದೆ ಸಂಭ್ರಮ!

ಅಯೋಧ್ಯೆಯಲ್ಲಿ ಮೊಳಗಲಿದೆ ಸಂಭ್ರಮ!
– ರಾಮಲಲ್ಲಾ ಪ್ರತಿಷ್ಠಾಪನೆ ಮುಹೂರ್ತ ನಿಗದಿ
– ಜ 21 ರಿಂದ ಮೂರು ದಿನ ಅದ್ದೂರಿ ಕಾರ್ಯಕ್ರಮ
– ಪ್ರಧಾನಿ ಸಹಿತ ಅನೇಕ ನಾಯಕರು ಭಾಗಿ: 25,000ಕ್ಕೂ ಅಧಿಕ ಹಿಂದು ಮುಖಂಡರು ಹಾಜರ್

NAMMUR EXPRESS NEWS
ಅಯೋಧ್ಯೆ : ಭವ್ಯ ರಾಮಮಂದಿರದಲ್ಲಿ ಬಹು ನಿರೀಕ್ಷಿತ ರಾಮಲಲ್ಲ ಮೂರ್ತಿ ಪ್ರತಿಷ್ಠಾಪನೆಯನ್ನು 2024ರ ಜನವರಿ 21, 22 ಅಥವಾ 23 ರಂದು ಪ್ರತಿಷ್ಠಾಪನೆ ನೆರವೇರಿಸಲು ನಿರ್ಧರಿಸಲಾಗಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಧಿಕೃತ ಆಹ್ವಾನ ಕಳುಹಿಸಲಾಗಿದ್ದು, ಅವರು ಪಾಲ್ಗೊಳ್ಳುವುದು ಬಹುತೇಕ ಖಚಿತವಾಗಿದೆ. ಆದರೆ ಮೂರು ದಿನಗಳ ಕಾರ್ಯಕ್ರಮಗಳಲ್ಲೂ ಅವರು ಭಾಗಿಯಾಗಲಿದ್ದಾರೆಯೇ ಎಂಬುದು ಇನ್ನೂ ದೃಢಪಟ್ಟಿಲ್ಲ. ಪ್ರಮುಖ ಸಾಧುಗಳು ಮತ್ತು ಇತರ ಗಣ್ಯರು ಭಾಗವಹಿಸಲಿದ್ದಾರೆ ಎಂದು ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ತಿಳಿಸಿದ್ದಾರೆ.
ಮುಖ್ಯ ಕಾರ್ಯಕ್ರಮವನ್ನು ರಾಜಕೀಯೇತರವಾಗಿ ಇರಿಸಲಾಗುವುದು. ವಿವಿಧ ರಾಜಕೀಯ ಪಕ್ಷಗಳ ಅತಿಥಿಗಳನ್ನು ಸಹ ಆಹ್ವಾನಿಸಲಾಗುವುದು. ಮೂರ್ತಿ ಪ್ರತಿಷ್ಠಾಪನೆಯ ಧಾರ್ಮಿಕ ಕಾರ್ಯಕ್ರಮದ ಸಂದರ್ಭದಲ್ಲಿ ವೇದಿಕೆ ಅಥವಾ ಸಾರ್ವಜನಿಕ ಸಭೆ ಇರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಅದ್ದೂರಿ ಕಾರ್ಯಕ್ರಮಕ್ಕೆ ಸಿದ್ಧತೆ :

ಕೋವಿಡ್ 19 ಮಾರ್ಗಸೂಚಿಗಳ ಕಾರಣದಿಂದಾಗಿ ದೇವಾಲಯದ ಭೂಮಿ ಪೂಜೆ ಕಾರ್ಯಕ್ರಮವನ್ನು 2020ರ ಆಗಸ್ಟ್ 5 ರಂದು ಸೀಮಿತ ಪ್ರಮಾಣದಲ್ಲಿ ನಡೆಸಲಾಗಿತ್ತು. ಈಗ ರಾಮಲಲ್ಲಾ ಗರ್ಭಗುಡಿ ಪೂರ್ಣಗೊಳ್ಳುವ ಹಂತದಲ್ಲಿದೆ. ಜನವರಿ ತಿಂಗಳಲ್ಲಿ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಯೋಜಿಸಲಾಗುವುದು. ಇದಕ್ಕೆ ಭರದ ಸಿದ್ಧತೆ ಸಾಗುತ್ತಿದೆ ಎಂದು ದೇವಸ್ಥಾನದ ಟ್ರಸ್ಟ್ ಸದಸ್ಯ ಅನಿಲ್ ಮಿಶ್ರ ಹೇಳಿದ್ದಾರೆ.

25,000ಕ್ಕೂ ಅಧಿಕ ಹಿಂದೂ ಮುಖಂಡರು ಹಾಜರ್

ಸಮಾರಂಭಕ್ಕೆ 136 ಸನಾತನ ಸಂಪ್ರದಾಯಗಳ 25,000ಕ್ಕೂ ಹೆಚ್ಚು ಹಿಂದೂ ಧಾರ್ಮಿಕ ಮುಖಂಡರನ್ನು ಆಹ್ವಾನಿಸಲು ಟ್ರಸ್ಟ್ ಯೋಜಿಸಿದೆ. ಸಂತರ ಪಟ್ಟಿಯನ್ನು ದೇವಾಲಯದ ಟ್ರಸ್ಟ್ ಸಿದ್ದಪಡಿಸುತ್ತಿದೆ. ಶೀಘ್ರದಲ್ಲೇ ಟ್ರಸ್ಟ್ ಅಧ್ಯಕ್ಷ ಮಹಂತ್ ನೃತ್ಯ ಗೋಪಾಲ್ ದಾಸ್ ಅವರ ಸಹಿಯೊಂದಿಗೆ ಆಹ್ವಾನ ಪತ್ರಿಕೆಯನ್ನು ಕಳುಹಿಸಲಾಗುವುದು ಎಂದು ಸಂಪತ್ ರಾಯ್ ತಿಳಿಸಿದ್ದಾರೆ. ಅಯೋಧ್ಯೆಯ ದೊಡ್ಡ ಮಟ್ಟಗಳಲ್ಲಿ ಎಲ್ಲಾ ಪ್ರಮುಖ ಸಂತರಿಗೆ ಉಳಿದುಕೊಳ್ಳುವ ಅವಕಾಶ ಕಲ್ಪಿಸಲು ಟ್ರಸ್ಟ್ ಯೋಜಿಸಿದೆ. 25000 ಸಂತರು 10000 ವಿಶೇಷ ಅತಿಥಿಗಳು ಸಮಾರಂಭ ವೀಕ್ಷಣೆ ಮಾಡಲಿದ್ದಾರೆ.

ಇದನ್ನೂ ಓದಿ : ನಾನು ಬದುಕಿರುವುದೇ ಕಿಮ್ಮನೆಗೆ ಸಹಿಸಲಾಗುತ್ತಿಲ್ಲ

HOW TO APPLY : NEET-UG COUNSELLING 2023

Categories
ರಾಷ್ಟ್ರೀಯ ವಾರ್ತೆ

ಟೊಮೆಟೊ ಆಯ್ತು, ಈರುಳ್ಳಿ ದುಬಾರಿ!?

ಟೊಮೆಟೊ ಆಯ್ತು, ಈರುಳ್ಳಿ ದುಬಾರಿ!?
– ಆಲೂ, ಬೆಳೆ, ಅಕ್ಕಿ ಎಲ್ಲವೂ ಹೆಚ್ಚಾಯ್ತು
– ದೇಶದಲ್ಲಿ ಈಗ ಜನರಿಗೆ ಬೆಲೆ ಏರಿಕೆ ಬರೆ
– ಈರುಳ್ಳಿ ಕೆಜಿಗೆ 70 ರೂ. ಆಗುವ ಸಾಧ್ಯತೆ

NAMMUR EXPRESS NEWS
ಹೊಸದಿಲ್ಲಿ: ದೇಶದಲ್ಲಿ ಟೊಮೆಟೊ ಮಾತ್ರವಲ್ಲ, ಆಲೂಗಡ್ಡೆ ಹೊರತಾಗಿ ಅಡುಗೆ ಮನೆಯ ಬಹುತೇಕ ಆಹಾರ ಪದಾರ್ಥಗಳ ದರ ಗಣನೀಯವಾಗಿ ಏರಿಕೆಯಾಗಿದೆ. ಇದರಿಂದ ಜನರ ಊಟವೂ ದುಬಾರಿ ಆಗಿದೆ.
ಯಾವುದು ಹೆಚ್ಚಳ?: ಕಳೆದ ವರ್ಷಕ್ಕೆ ಹೋಲಿಸಿದರೆ ತೊಗರಿ ಬೇಳೆ ದರ ಶೇ.28ರಷ್ಟು ಹೆಚ್ಚಾಗಿದ್ದರೆ, ಅಕ್ಕಿ ದರ ಶೇ. 10.5ರಷ್ಟು ಏರಿಕೆ ಕಂಡಿದೆ. ಉದ್ದಿನ ಬೇಳೆ ಮತ್ತು ಗೋಧಿ ಹಿಟ್ಟಿನ ದರ ತಲಾ ಶೇ. 8ರಷ್ಟು ಹೆಚ್ಚಳವಾಗಿದೆ. ಬೆಲೆ ಏರಿಕೆ ಕುರಿತಾಗಿ ಸಂಸತ್ತಿಗೆ ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರ ಸಚಿವಾಲಯವು ಈ ವಿವರ ನೀಡಿದೆ. ವರ್ಷದ ಹಿಂದೆ ಅಕ್ಕಿ ಚಿಲ್ಲರೆ ದರ ಸರಾಸರಿ 37 ರೂಪಾಯಿ ಇತ್ತು. ಈಗ ಇದೇ ಅಕ್ಕಿ ದರ 41 ರೂಪಾಯಿಗೆ ಏರಿಕೆಯಾಗಿದೆ. ಕಳೆದ ವರ್ಷ ತೊಗರಿ ಬೇಳೆ ದರ ಕೆ.ಜಿಗೆ 106.5 ರೂ. ಇದ್ದರೆ, ಈಗ 136 ರೂ.ಗೆ ಏರಿಕೆ ಕಂಡಿದೆ. ಉದ್ದಿನ ಬೇಳೆ ದರ ಕಳೆದ ವರ್ಷ 106.5 ರೂ. ಇತ್ತು. ಅದೀಗ 114 ರೂ.ಗೆ ಏರಿಕೆಯಾಗಿದೆ. ಈರುಳ್ಳಿ ದರವೂ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 5ರಷ್ಟು ಹೆಚ್ಚಾಗಿದೆ.
ಮಳೆಯ ಅತಿವೃಷ್ಟಿ – ಅನಾವೃಷ್ಟಿಗಳು ದೇಶೀಯ ಉತ್ಪಾದನೆಯ ಮೇಲೆ ಪರಿಣಾಮ ಬೀರಿವೆ. ತೊಗರಿ ಇಳುವರಿ ಕಡಿಮೆಯಾಗಿದ್ದು, ಇದರಿಂದಾಗಿ ಬೆಲೆ ಏರಿಕೆಯಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಈರುಳ್ಳಿ ಕಣ್ಣೀರು ತರಿಸುತ್ತೆ!

ಆಗಸ್ಟ್ ಅಂತ್ಯದ ವೇಳೆಗೆ ಚಿಲ್ಲರೆ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಏರಿಕೆ ಪ್ರಾರಂಭವಾಗುವ ಸಾಧ್ಯತೆಯಿದೆ. ಮುಂದಿನ ತಿಂಗಳು ಸರಬರಾಜು ಮತ್ತು ಪೂರೈಕೆಯಲ್ಲಿನ ಅಸಮತೋಲನದಿಂದ ಪ್ರತಿ ಕೆಜಿ ಈರುಳ್ಳಿಗೆ 60 ರಿಂದ 70 ರೂಪಾಯಿಗೆ ಏರುವ ಸಾಧ್ಯತೆಯಿದೆ ಎಂದು ಆಗಸ್ಟ್ 4 ರಂದು ವರದಿಯೊಂದು ತಿಳಿಸಿದೆ. ಆದರೂ, ಬೆಲೆಗಳು 2020 ರಲ್ಲಿ ಏರಿಕೆಯಾಗಿದ್ದಕ್ಕಿಂತ ಕಡಿಮೆ ಇರಲಿದೆ ಎಂದು ತಿಳಿಸಿದೆ. “ಸರಬರಾಜು ಮತ್ತು ಬೇಡಿಕೆ ಅಸಮತೋಲನದಿಂದಾಗಿ ಆಗಸ್ಟ್ ಅಂತ್ಯದ ವೇಳೆಗೆ ಈರುಳ್ಳಿ ಬೆಲೆಯಲ್ಲಿ ಏರಿಕೆಯಾಗುವ ನಿರೀಕ್ಷೆಯಿದೆ. ನಮ್ಮ ಅಂದಾಜಿನ ಪ್ರಕಾರ, ಚಿಲ್ಲರೆ ಮಾರುಕಟ್ಟೆಯಲ್ಲಿ ಸೆಪ್ಟೆಂಬರ್ ಆರಂಭದಿಂದ ಬೆಲೆಗಳು ಗಮನಾರ್ಹ ಏರಿಕೆಯನ್ನು ತೋರಿಸುತ್ತಿವೆ. ಕಡಿಮೆ ಎಂದರೆ ಪ್ರತಿ ಕೆಜಿಗೆ 60 ರಿಂದ 70 ರೂಪಾಯಿಗೆ ತಲುಪುತ್ತದೆ.

ಇದನ್ನೂ ಓದಿ : ನಾನು ಬದುಕಿರುವುದೇ ಕಿಮ್ಮನೆಗೆ ಸಹಿಸಲಾಗುತ್ತಿಲ್ಲ

HOW TO APPLY : NEET-UG COUNSELLING 2023

Categories
ಇತರೆ ಸುದ್ದಿ

ಕೊಪ್ಪ ವಿದ್ಯಾರ್ಥಿನಿ ಆತ್ಮಹತ್ಯೆ ತನಿಖೆಗೆ ಪಟ್ಟು!

ಕೊಪ್ಪ ವಿದ್ಯಾರ್ಥಿನಿ ಆತ್ಮಹತ್ಯೆ ತನಿಖೆಗೆ ಪಟ್ಟು!
– ಮೂಡಿಗೆರೆಯಲ್ಲಿ ಪತ್ತೆಯಾಯ್ತು ಕೊಳೆತ ಮೃತ ದೇಹ
– ಕಳಸ: ಸುಂದರನಾಗಬೇಕೆಂದು ದೇವರಿಗೆ ಪತ್ರ ಬರೆದ!

NAMMUR EXPRESS NEWS
ಕೊಪ್ಪ: ಮುರಾರ್ಜಿ ದೇಸಾಯಿ ವಸತಿಯಲ್ಲಿ ವಿದ್ಯಾ ರ್ಥಿನಿ ಅಮೂಲ್ಯಾ ಆತ್ಮಹತ್ಯೆ ಪ್ರಕರಣವನ್ನು ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಡಿಎಸ್‌ಎಸ್‌ ಚಂದ್ರ ಕಾಂತ್ ಎಸ್.ಕಾದೊಳ್ಳಿ ಬಣದ ಪ್ರಮುಖರು ಶಿರಸ್ತೇ ದಾರ್ ರಶ್ಮಿ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ಕೊಪ್ಪದಲ್ಲಿ ಮನವಿ ಸಲ್ಲಿಸಿದ ಅವರು, ಶಾಲೆಗೆ ಹೆಚ್ಚಿನ ಭದ್ರತೆ ಒದಗಿಸಬೇಕು. ತಿಂಗಳಿ ಗೊಮ್ಮೆ ಮಕ್ಕಳ ದೈಹಿಕ ಮತ್ತು ಮಾನಸಿಕ ಆರೋಗ್ಯ ತಪಾಸಣೆ ಮಾಡಬೇಕು. ಮಾನಸಿಕವಾಗಿ ಯಾವುದೇ ತರಹದ ಹಿಂಸೆಗಳಾಗದಂತೆ ಕ್ರಮ ಕೈಗೊಳ್ಳಬೇಕೆಂದು ಆಗ್ರಯಿಸಿದರು. ಡಿ ಎಸ್ ಎಸ್ ಕಾರ್ಯದಕ್ಷರು ರಾಜಾಶಂಕರ್, ಸುರೇಶ್ ಹರಿಹರಪುರ ಇದ್ದರು.

ಅರ್ಧ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆ!

ಮೂಡಿಗೆರೆ ತಾಲ್ಲೂಕಿನ ಲೋಕವಳ್ಳಿ ಕಾಫಿ ಎಸ್ಟೇಟ್ ನಲ್ಲಿ ಮೃತದೇಹವೊಂದು ಪತ್ತೆಯಾಗಿದೆ. ತೋಟಕ್ಕೆ ತೆರಳಿದವರಿಗೆ ಮೃತದೇಹ ಪತ್ತೆಯಾಗಿದೆ.ಮೃತದೇಹ ಅರ್ಧ ಕೊಳೆತ ಸ್ಥಿತಿಯಲ್ಲಿದೆ.ಮೂಡಿಗೆರೆ ತಾಲ್ಲೂಕಿನ ಲೋಕವಳ್ಳಿ ಕಾಫಿ ಎಸ್ಟೇಟ್ ನಲ್ಲಿ ಈ ಘಟನೆ ನಡೆದಿದೆ. ಸ್ಥಳಕ್ಕೆ ಪೊಲೀಸರ ಭೇಟಿ, ಪರಿಶೀಲನೆ ನಡೆಸಿದ್ದಾರೆ. ಮೃತ ದೇಹದ ಗುರುತು ಪತ್ತೆಯಾಗಿಲ್ಲ, ಮೃತ ದೇಹವನ್ನ ನೋಡಲು ಕಾಫಿತೋಟಕ್ಕೆ ಸ್ಥಳೀಯರು ದಂಡು ಆಗಮಿಸಿದೆ. ಮೂಡಿಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಸುಂದರನಾಗಬೇಕೆಂದು ದೇವರಿಗೆ ಪತ್ರ ಬರೆದ!

ನಾನು ಒಬ್ಬ ಉತ್ತಮ ನಟ ಹಾಗೂ ಫ್ಯಾಷನ್ ಮಾಡೆಲ್ ಆಗಬೇಕೆಂದು ಇಚ್ಚಿಸಿದ್ದೇನೆ. ಈ ಕನಸನ್ನು ನನಸು ಮಾಡುವ ಹೊಣೆ ನಿಮ್ಮದು. ನಿಮ್ಮಂತೆ ನಾನು ಸರ್ವಾಂಗ ಸುಂದರನಾಗಬೇಕು. ಹೀಗೆ ದೇವರಿಗೆ ಭಕ್ತನೊಬ್ಬ ಬರೆದಿರುವ ಹರಕೆ ಪತ್ರ ವೈರಲ್ ಆಗಿದೆ. ಚಿಕ್ಕಮಗಳೂರಿನ ಕಳಸದ ಕಳಸೇಶ್ವರ ಸ್ವಾಮಿ ದೇವಾಲಯಕ್ಕೆ ಸಾವಿರಾರು ಜನರು ಆಗಮಿಸುತ್ತಾರೆ.
ಇಲ್ಲಿ ಭಕ್ತರು ಹರಕೆಯನ್ನು ಕಟ್ಟಿಕೊಳ್ಳುತ್ತಾರೆ. ಹೀಗೆ ಹುಂಡಿಯಲ್ಲಿ ಕಾಣಿಕೆಯ ಜತೆಗೆ ಭಕ್ತರ ಹರಕೆ ಪತ್ರವೂ
ಲಭ್ಯವಾಗಿದೆ. ಹುಂಡಿ ಹಣ ಎಣಿಕೆ ವೇಳೆ ಅಧಿಕಾರಿಗಳಿಗೆ ಭಕ್ತನೊಬ್ಬನ ಹರಕೆ ಪತ್ರವು ನಗು ತರಿಸಿದೆ. ಗಿರಿಜಾದೇವಿಗೆ ರಕ್ಷಿತ್ ಎಂಬಾತ ಪತ್ರ ಬರೆದಿದ್ದಾನೆ.

ಇದನ್ನೂ ಓದಿ : ನಾನು ಬದುಕಿರುವುದೇ ಕಿಮ್ಮನೆಗೆ ಸಹಿಸಲಾಗುತ್ತಿಲ್ಲ

HOW TO APPLY : NEET-UG COUNSELLING 2023

Categories
ಬೆಂಗಳೂರು

ಸ್ವಾತಂತ್ರ್ಯ ಸಂಭ್ರಮಕ್ಕೆ ಗೃಹಲಕ್ಷ್ಮೀ ಭಾಗ್ಯ?

ಸ್ವಾತಂತ್ರ್ಯ ಸಂಭ್ರಮಕ್ಕೆ ಗೃಹಲಕ್ಷ್ಮೀ ಭಾಗ್ಯ?
– ಗೃಹ ಲಕ್ಷ್ಮಿ ಯೋಜನೆ ಒಂದು ವಾರ ಮುಂದೂಡಿಕೆ
-:ಯಾರಿಗೆ ಸಿಗುತ್ತೆ ಹಣ… ಯಾಕೆ ಲೇಟು..?

NAMMUR EXPRESS NEWS
Bengaluru : ಕಾಂಗ್ರೆಸ್ ನೀಡಿದ ಗ್ಯಾರಂಟಿ ಯೋಜನೆಯಲ್ಲಿ ಒಂದಾದ ಗೃಹ ಲಕ್ಷ್ಮೀ’ ಗ್ಯಾರಂಟಿ ಯೋಜನೆಯಡಿ 2 ಸಾವಿರ ರೂ. ಪಡೆಯುವುದಕ್ಕೆ ಮಹಿಳೆಯರು ಇನ್ನು ಒಂದು ವಾರ ಕಾಯಬೇಕು. ಗೃಹ ಲಕ್ಷ್ಮಿ ಯೋಜನೆಯಡಿ ಪ್ರತಿ ಕುಟುಂಬದ ಮಹಿಳಾ ಮುಖ್ಯಸ್ಥರಿಗೆ ಮಾಸಿಕ 2,000 ರೂ.ಗಳ ನೆರವು ನೀಡುವುದಾಗಿ ಕರ್ನಾಟಕ ಕಾಂಗ್ರೆಸ್ ಭರವಸೆ ನೀಡಿತ್ತು. ಆದರೆ ಗೃಹಲಕ್ಷ್ಮಿ ಯೋಜನೆ ಇನ್ನೂ ಕೆಲದಿನ ವಿಳಂಬವಾಗುವ ಸಾಧ್ಯತೆಯಿದೆ ಎನ್ನಬಹುದು, ಮತ್ತು ಸ್ವಾತಂತ್ಯ ದಿನಚರಣೆಯಂದು ತಮ್ಮ ಖಾತೆಗೆ ಹಣ ಬರಲಿದೆ ಎನ್ನಲಾಗಿದೆ. ಹೌದು, ಐಸಿಸಿ ನಾಯಕಿ ಸೋನಿಯಾ ಗಾಂಧಿ ಅವರನ್ನು ಕರೆಸಿ ಈ ಮಹತ್ವದ ಯೋಜನೆಗೆ ಚಾಲನೆ ನೀಡಲು ಸರ್ಕಾರ ಬಯಸಿರುವ ಕಾರಣ ಕನಿಷ್ಠ ಒಂದು ವಾರಕ್ಕೆ ಮುಂದೂಡಿಕೆಯಾಗುವ ಸಾಧ್ಯತೆಯಿದೆ. ಗೃಹಲಕ್ಷ್ಮಿ ಯೋಜನೆಯು ಕರ್ನಾಟಕ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾಗಿದೆ. ಬಿಪಿಎಲ್/ಎಪಿಎಲ್/ ಅಂತ್ಯೋದಯ ಕಾರ್ಡ್ ನಲ್ಲಿ ನಮೂದಿಸಿರುವ ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು ರೂ.2000/- ಗಳನ್ನು DBT ಮೂಲಕ ನೀಡುವ ಯೋಜನೆ, ಸಬಲೀಕರಣಗೊಂಡಲ್ಲಿ ಕುಟುಂಬದ ಯಜಮಾನಿಯು ಆರ್ಥಿಕವಾಗಿ ಕುಟುಂಬದ ಸಮಗ್ರ ಅಭಿವೃದ್ಧಿಯನ್ನು ಖಚಿತ ಪಡಿಸುತ್ತದೆ.

ಅರ್ಜಿದಾರರು ಏನು ಮಾಡಬೇಕು?

ಅರ್ಜಿಗಳನ್ನು ಆನ್‌ಲೈನ್ ಮೂಲಕ ಅಥವಾ ಭೌತಿಕವಾಗಿ ಗ್ರಾಮ ಆನ್/ಬೆಂಗಳೂರು ಆನ್/ ಕರ್ನಾಟಕ ಕೇಂದ್ರಗಳಲ್ಲಿ ಸೇವಾಸಿಂಧು ಪೋರ್ಟಲ್ ಮೂಲಕ ಸಲ್ಲಿಸಬಹುದು. https://sevasindhugs.karnataka
ಅರ್ಜಿ ಸಲ್ಲಿಸಲು ಅರ್ಜಿದಾರರು ಹಾಗೂ ಪತಿಯ ಆಧಾರ್ ಕಾರ್ಡ್ ಸಂಖ್ಯೆ, ಮೊಬೈಲ್ ಸಂಖ್ಯೆ ಮತ್ತು ಅರ್ಜಿದಾರರ ಬ್ಯಾಂಕ್ ಖಾತೆ ವಿವರಗಳನು ನೀಡಬೇಕು. ಮಂಜೂರಾತಿಯ ನಂತರ DBT ಮೂಲಕ ನೇರ ನಗದು ವರ್ಗಾವಣೆ ಮಾಡಲಾಗುವುದು. ಅರ್ಜಿ ಸಲ್ಲಿಕೆಗೆ ಯಾವುದೇ ಶುಲ್ಕ ಸಂಪೂರ್ಣ ಉಚಿತವಾಗಿದೆ.

ಇದನ್ನೂ ಓದಿ : ನಾನು ಬದುಕಿರುವುದೇ ಕಿಮ್ಮನೆಗೆ ಸಹಿಸಲಾಗುತ್ತಿಲ್ಲ

HOW TO APPLY : NEET-UG COUNSELLING 2023

Categories
ಇತರೆ ಸುದ್ದಿ

ದೇವರಿಗೂ ಕಳ್ಳ ನೋಟು ಕಾಣಿಕೆ ಹಾಕಿದ ಭೂಪ!

ದೇವರಿಗೂ ಕಳ್ಳ ನೋಟು ಕಾಣಿಕೆ ಹಾಕಿದ ಭೂಪ!
– ಕಳಸದ ಕಳಸೇಶ್ವರನಿಗೆ 2000 ರೂ. ನಕಲಿ ನೋಟು
– ಕರ್ಮ ಕರ್ಮ..ಬಾಲಕಿ ರೇಪ್ ಮಾಡಿದ ಅಜ್ಜ!?
– ಚಲಿಸುತ್ತಿದ್ದ ಆ್ಯಂಬುಲೆನ್ಸ್ ಟೈಯರ್ ಸ್ಪೋಟ!

NAMMUR EXPRESS NEWS
ಕಳಸ: ದೇವರನ್ನೇ ಮಂಗ ಮಾಡುವ ಜನರೂ ಇದ್ದಾರೆ. ಹೌದು. ದೇವರ ದರ್ಶನದ ನಂತರ ಹುಂಡಿಗೆ ಕೈಲಾದಷ್ಟು ಕಾಣಿಕೆ ಹಾಕಿ ಪ್ರಾರ್ಥಿಸುವುದು ವಾಡಿಕೆ. ಆದರೆ ಇಲ್ಲೊಬ್ಬ ಭೂಪ ದೇವರ ಹುಂಡಿಗೆ ನಕಲಿ ನೋಟು ಹಾಕಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಕಳಸದ ಕಳಸೇಶ್ವರ ದೇವಸ್ಥಾನದಲ್ಲಿ ನಡೆದಿದೆ. ದಕ್ಷಿಣ ಕಾಶಿ ಕಳಸೇಶ್ವರ ದೇವಾಲಯಕ್ಕೆ ಭೇಟಿಕೊಟ್ಟ ಭಕ್ತನೊಬ್ಬ ಕಾಣಿಕೆ ಹುಂಡಿಗೆ 2000 ರೂ. ಮುಖಬೆಲೆಯ ನಕಲಿ ನೋಟನ್ನು ಹಾಕಿದ್ದಾನೆ. ಈ ಕಲರ್ ಜೆರಾಕ್ಸ್ ನೋಟು ಹುಂಡಿಯ ಹಣ ಎಣಿಕೆಯ ವೇಳೆ ಪತ್ತೆಯಾಗಿದೆ. ಈ ನಕಲಿ ನೋಟನ್ನು ನೋಡಿ ದೇವಸ್ಥಾನದ ಆಡಳಿತ ಮಂಡಳಿ ಬೆರಗಾಗಿದೆ. ಕೊನೆಗೆ ಆಡಳಿತ ಮಂಡಳಿಯ ಸದಸ್ಯರು ನಕಲಿ ನೋಟನ್ನು ಹರಿದು ಹಾಕಿದ್ದಾರೆ.

ಕರ್ಮ ಕರ್ಮ..ಬಾಲಕಿ ರೇಪ್ ಮಾಡಿದ ಅಜ್ಜ!?
– ರಾಜಧಾನಿಯಲ್ಲೊಂದು ಹೇಯ ಕೃತ್ಯ: ಪ್ರಾಂಶುಪಾಲ ಸೆರೆ

ಹತ್ತು ವರ್ಷ ವಯಸ್ಸಿನ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿರುವ ಆರೋಪದಡಿ ಶಾಲೆಯೊಂದರ ಪ್ರಾಂಶುಪಾಲ ಲ್ಯಾಂಬರ್ಟ್ ಪುಷ್ಪರಾಜ್ (65) ಅವರನ್ನು ವರ್ತೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
‘2ನೇ ತರಗತಿಯಲ್ಲಿ ಓದುತ್ತಿರುವ ಬಾಲಕಿ, ತರಗತಿ ಕೊಠಡಿಯಲ್ಲಿ ಗುರುವಾರ ಒಂಟಿಯಾಗಿ ಕುಳಿತಿದ್ದಳು. 11.30 ಗಂಟೆ ಸುಮಾರಿಗೆ ತರಗತಿಯೊಳಗೆ ನುಗ್ಗಿದ್ದ ಆರೋಪಿ, ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿರುವ ಆರೋಪವಿದೆ. ಪೋಷಕರು ನೀಡಿರುವ ದೂರು ಆಧರಿಸಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ (ಪೋಕ್ಕೊ) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.
ಅತ್ಯಾಚಾರದ ಬಳಿಕ ಆರೋಪಿ, ಬಾಲಕಿಗೆ ಕೇಕ್ ಕೊಟ್ಟು ಮನೆಗೆ ಕಳುಹಿಸಿದ್ದ. ಮನೆಗೆ ಹೋಗಿದ್ದ ಬಾಲಕಿ ಹೊಟ್ಟೆ ನೋವಿನಿಂದ ಬಳಲುತ್ತಿದ್ದಳು. ಜೊತೆಗೆ, ಒಳ ಉಡುಪಿನಲ್ಲಿ ರಕ್ತಸ್ರಾವವಾಗಿತ್ತು. ಅದನ್ನು ಗಮನಿಸಿದ್ದ ತಾಯಿ, ಆಸ್ಪತ್ರೆಗೆ ಕರೆದೊಯ್ದಿದ್ದರು. ತಪಾಸಣೆ ನಡೆಸಿದ ವೈದ್ಯರು, ಅತ್ಯಾಚಾರವಾಗಿರುವುದಾಗಿ ತಿಳಿಸಿದ್ದರು. ನಂತರವೇ ಪೋಷಕರು ಠಾಣೆಗೆ ಬಂದು ದೂರು ನೀಡಿದ್ದಾರೆ. ಬಾಲಕಿ ಸಹ ಅತ್ಯಾಚಾರದ ಬಗ್ಗೆ ಹೇಳಿಕೆ ನೀಡಿದ್ದಾಳೆ’ ಎಂದು ಪೊಲೀಸರು ಹೇಳಿದ್ದಾರೆ.

ಚಲಿಸುತ್ತಿದ್ದ ಆ್ಯಂಬುಲೆನ್ಸ್ ಟೈಯರ್ ಸ್ಪೋಟ!

ಚಲಿಸುತ್ತಿದ್ದ ಆ್ಯಂಬುಲೆನ್ಸ್ ಟೈಯರ್ ಸ್ಫೋಟಗೊಂಡು ರೋಗಿ ಮತ್ತು ಸಂಬಂಧಿಕರು ಪರದಾಡಿರುವಂತಹ ಘಟನೆ ವಿಜಯಪುರ ಜಿಲ್ಲೆಯ ಶೆಳ್ಳಗಿ ಗ್ರಾಮದ ಬಳಿ ನಡೆದಿದೆ. ಕೆಂಭಾವಿಯಿಂದ ವಿಜಯಪುರಕ್ಕೆ ಆ್ಯಂಬುಲೆನ್ಸ್ ವಾಹನ ತೆರಳುತ್ತಿದ್ದು ಮಾರ್ಗ ಮಧ್ಯೆ ಆ್ಯಂಬುಲೆನ್ಸ್ ಹಿಂಬದಿಯ ಟೈಯರ್ ಸ್ಫೋಟಗೊಂಡು ಅವಘಡ ಸಂಭವಿಸಿದೆ. ಆ್ಯಂಬುಲೆನ್ಸ್‌ನಲ್ಲಿ ರೋಗಿಯನ್ನು ಕರೆದು ಕೊಂಡು ಹೋಗುವ ಮಾರ್ಗ ಮಧ್ಯೆ ಆ್ಯಂಬುಲೆನ್ಸ್ ಹಿಂಬದಿಯ ಟೈಯರ್ ಸ್ಫೋಟಗೊಂಡು ಅವಘಡ ಸಂಭವಿಸಿದೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಸುರಪುರ ತಾಲೂಕಿನ ಪರಸನಹಳ್ಳಿಯ ರೋಗಿ ಸೋಮನಗೌಡರನ್ನು ಆಸ್ಪತ್ರೆಗೆ ಸಾಗಿಸಲಾಗುತ್ತಿತ್ತು. ಸದ್ಯ ಆ್ಯಂಬುಲೆನ್ಸ್ ಕೈಕೊಟ್ಟಿದ್ದಕ್ಕೆ ರೋಗಿ ಸಂಬಂಧಿಕರು ಪರದಾಡಿದ್ದಾರೆ.

ಇದನ್ನೂ ಓದಿ : ನಾನು ಬದುಕಿರುವುದೇ ಕಿಮ್ಮನೆಗೆ ಸಹಿಸಲಾಗುತ್ತಿಲ್ಲ

HOW TO APPLY : NEET-UG COUNSELLING 2023

Categories
ಶಿವಮೊಗ್ಗ

ಇನ್ಮುಂದೆ ಶಿವಮೊಗ್ಗ ಜಿಲ್ಲೆಯಲ್ಲಿ ಇ-ಆಫೀಸ್!

ಇನ್ಮುಂದೆ ಶಿವಮೊಗ್ಗ ಜಿಲ್ಲೆಯಲ್ಲಿ ಇ-ಆಫೀಸ್!
– ರಾಜ್ಯದಲ್ಲೇ ಶಿವಮೊಗ್ಗ ಜಿಲ್ಲಾಡಳಿತದ ಹೊಸ ಮೈಲುಗಲ್ಲು!
– ನಗರ ಸ್ಥಳೀಯ ಸಂಸ್ಥೆಗಳಲ್ಲಿ ಇ-ಆಫೀಸ್ ವ್ಯವಸ್ಥೆ

NAMMUR EXPRESS NEWS
ಶಿವಮೊಗ್ಗ: ಆಡಳಿತದಲ್ಲಿ ದಕ್ಷತೆ, ಸ್ಥಿರತೆ ಮತ್ತು ಯೋಜನೆಗಳ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಆಗಸ್ಟ್ 1ರಿಂದ ಅನ್ವಯಗೊಳ್ಳುವಂತೆ ಶಿವಮೊಗ್ಗ ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ ಇ- ಆಡಳಿತ ವ್ಯವಸ್ಥೆ ಜಾರಿಗೊಳ್ಳಲಿದೆ.
ಶಿವಮೊಗ್ಗ ಮಹಾನಗರ ಪಾಲಿಕೆ ಸೇರಿದಂತೆ ಜಿಲ್ಲೆಯ 11 ಸ್ಥಳೀಯ ಸಂಸ್ಥೆಗಳಿಗೆ ಅನುಕುಲವಾಗುವಂತೆ ವಿನ್ಯಾಸಗೊಳಿಸಿದ ಇ- ಆಡಳಿತ ತಂತ್ರಾಂಶವನ್ನು ಜಿಲ್ಲಾಧಿಕಾರಿ ಸೆಲ್ವಮಣಿ ಉದ್ಘಾಟಿಸಿದರು. ಯೋಜನೆ ಬಗ್ಗೆ ಮಾಹಿತಿ ನೀಡಿದ ಅವರು, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಇ-ಆಫೀಸ್ ವ್ಯವಸ್ಥೆ ಅನುಷ್ಠಾನಗೊಳ್ಳುತ್ತಿರುವ ರಾಜ್ಯದ ಮೊದಲ ಜಿಲ್ಲೆ ಇದಾಗಿದೆ. ಸಾರ್ವಜನಿಕರ ಅಮೂಲ್ಯ ಸಮಯವನ್ನು ಉಳಿಸುವುದಲ್ಲದೆ ಅವರ ಬೇಡಿಕೆಗಳಿಗನುಗುಣವಾಗಿ ಕಾರ್ಯನಿರ್ವಹಿಸಲು ಇ- ತಂತ್ರಾಂಶ ಸಹಕಾರಿಯಾಗಲಿದೆ. ಕಡತಗಳ ಅನಗತ್ಯ ವಿಳಂಬವನ್ನು ತಪ್ಪಿಸಿ, ಆಡಳಿತದಲ್ಲಿ ಗುಣಮಟ್ಟವನ್ನು ಸುಧಾರಿಸುವಲ್ಲಿ ಪಾರದರ್ಶಕತೆ ಕಂಡುಕೊಂಡು ಅಧಿಕಾರಿಗಳಿಗೆ ಹೊಣೆಗಾರಿಕೆಯನ್ನು ಸ್ಥಾಪಿಸಿ, ರಚನಾತ್ಮಕವಾಗಿ ಕಾರ್ಯನಿರ್ವಹಿಸುವಲ್ಲಿ ಸಹಕಾರಿಯಾಗಲಿದೆ.

ಎಲ್ಲಾ ಅಧಿಕಾರಿಗಳು ಈ ಸದವಕಾಶದ ಲಾಭ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳು ಎಲ್ಲಾ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಸಮುದಾಯ ಸಂಪರ್ಕಾಧಿಕಾರಿ ಮೋಹನ್‌ಕುಮಾರ್, ಇ-ಆಫೀಸ್ ಸಂಪರ್ಕಾಧಿಕಾರಿ ಅನೂಪ್, ಜಿಲ್ಲಾ ನೋಡಲ್ ಅಧಿಕಾರಿ ಸುದೀಪ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಪೇಪರ್ ಲೆಸ್ ಆಡಳಿತ.. ಇನ್ನು ದಾಖಲೆ ಪಡೆಯೋದು ಸುಲಭ!

ಸಾರ್ವಜನಿಕರಿಗೆ ಒದಗಿಸುವ ಮಾಹಿತಿಯಲ್ಲಿ ಪಾರದರ್ಶಕತೆ ಮತ್ತು ನಿಖರತೆಯೊಂದಿಗೆ ಸರ್ಕಾರದ ಆಡಳಿತವನ್ನು ವೇಗಗೊಳಿಸುವ ಮಹತ್ವದ ಉದ್ದೇಶದೊಂದಿಗೆ ಮಾಹಿತಿ ಮತ್ತು ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಲ್ಲಿ ರಾಜ್ಯವು ಮುಂಚೂಣಿಯಲ್ಲಿದೆ. ಇ-ಆಫೀಸ್ ಕಚೇರಿ ವ್ಯವಸ್ಥೆಯು ಸರಳೀಕೃತ, ಸ್ಪಂದಿಸುವ, ಪರಿಣಾಮಕಾರಿ, ಜವಾಬ್ದಾರಿಯುತ ಮತ್ತು ಪಾರದರ್ಶಕ ಕೆಲಸವನ್ನು ಸಾಧಿಸುವ ಮಾಧ್ಯಮವಾಗಿದೆ. ಇ-ಆಫೀಸ್‌ನ ವೇಗ ಮತ್ತು ದಕ್ಷತೆಯು ಇಲಾಖೆಗಳಿಗೆ ತಿಳುವಳಿಕೆಯುಳ್ಳ ಮತ್ತು ಕ್ಷಿಪ್ರ ನಿರ್ಧಾರಕ್ಕೆ ಸಹಕರಿಸುವುದಲ್ಲದೆ ಬಹುಮುಖ್ಯವಾಗಿ ಅವುಗಳನ್ನು ಕಾಗದ ರಹಿತವಾಗುವಂತೆ ಮಾಡಲಿದೆ.

ಇದನ್ನೂ ಓದಿ : ನಾನು ಬದುಕಿರುವುದೇ ಕಿಮ್ಮನೆಗೆ ಸಹಿಸಲಾಗುತ್ತಿಲ್ಲ

HOW TO APPLY : NEET-UG COUNSELLING 2023

Categories
ಚಿಕ್ಕಮಗಳೂರು

ಶೃಂಗೇರಿಯಲ್ಲಿ ಭಾರೀ ಮಳೆಗೆ ಭೂ ಕುಸಿತ!

ಶೃಂಗೇರಿಯಲ್ಲಿ ಭಾರೀ ಮಳೆಗೆ ಭೂ ಕುಸಿತ!
– ಜಮೀನು, ಮನೆ, ರಸ್ತೆ, ಸೇತುವೆ ಹಾನಿ
– ಜಿಲ್ಲಾ ಅಧಿಕಾರಿಗಳು, ಶಾಸಕ ರಾಜೇಗೌಡ ಪರಿಶೀಲನೆ

NAMMUR EXPRESS NEWS
ಶೃಂಗೇರಿ: ಶೃಂಗೇರಿ ತಾಲೂಕಿನಲ್ಲಿ ಸುರಿದ ಭಾರೀ ಮಳೆಗೆ ಶೃಂಗೇರಿ ಕ್ಷೇತ್ರದ ವ್ಯಾಪ್ತಿಯ ನೇರಳಕೊಡಿಗೆ,‌ ಹೆಗ್ಗಾರುಕೊಡಿಗೆ, ಗುಡ್ಡೇತೋಟ, ಹುತ್ತಿನಗದ್ದೆ ಬಳಿ ಭೂಕುಸಿತ ಸಂಭವಿಸಿ ಅನೇಕ ಮನೆ ಹಾಗೂ ಸರ್ಕಾರಿ ಜಾಗ ಹಾನಿಯಾಗಿದೆ.
ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ರಾಜೇಂದ್ರ ಕುಮಾರ್ ಕಟಾರಿಯ, ಜಿಲ್ಲಾಧಿಕಾರಿಗಳಾದ ಮೀನಾ ನಾಗರಾಜ್, ಜಿಲ್ಲಾ ಪಂ ಸಿ.ಇ.ಒ ಡಾ.ಗೋಪಾಲ ಕೃಷ್ಣ, ಉಪ ವಿಭಾಗಾಧಿಕಾರಿ ಎಚ್.ಡಿ ರಾಜೇಶ್ ,ತಹಶಿಲ್ದಾರ್ ಪಿ ಗೌರಮ್ಮ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಶೃಂಗೇರಿ ಕ್ಷೇತ್ರದ ಶಾಸಕರಾದ ಟಿ.ಡಿ ರಾಜೇಗೌಡರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇದನ್ನೂ ಓದಿ : ನಾನು ಬದುಕಿರುವುದೇ ಕಿಮ್ಮನೆಗೆ ಸಹಿಸಲಾಗುತ್ತಿಲ್ಲ

HOW TO APPLY : NEET-UG COUNSELLING 2023

Categories
ಹುಬ್ಬಳ್ಳಿ

ಉಡುಪಿ ಬಳಿಕ ಹುಬ್ಬಳ್ಳಿ ಅಶ್ಲೀಲ ವಿಡಿಯೋ ಸದ್ದು!

ಉಡುಪಿ ಬಳಿಕ ಹುಬ್ಬಳ್ಳಿ ಅಶ್ಲೀಲ ವಿಡಿಯೋ ಸದ್ದು!
– ಮೂವರು ವಿದ್ಯಾರ್ಥಿನಿಯರ ಅಶ್ಲೀಲ ಫೋಟೋ ಇನ್ಸ್ಟಾಗ್ರಾಮ್ ಅಲ್ಲಿ ಎಡಿಟ್ ಮಾಡಿ ಪೋಸ್ಟ್
– ಪೊಲೀಸರಿಗೆ ತಲೆನೋವಾದ ಅನಾಮಿಕ!
– ಹಾಸನದಲ್ಲಿ ಪೊಲೀಸರ ವಿರುದ್ಧವೇ ವಿದ್ಯಾರ್ಥಿಗಳ ದೂರು

NAMMUR EXPRESS NEWS
ಹುಬ್ಬಳ್ಳಿ: ಮೂವರು ವಿದ್ಯಾರ್ಥಿನಿಯರ ಫೋಟೋಗಳನ್ನು ಎಡಿಟ್ ಮಾಡಿ ಪೋಸ್ಟ್ ಮಾಡಿದ ಕಿಡಿಗೇಡಿಯ ಹುಡುಕಾಟ ಜೋರಾಗುತ್ತಿದ್ದಂತೆಯೇ ಆತ ಪೋಸ್ಟನ್ನು ಡಿಲೀಟ್ ಮಾಡಿದ್ದಾನೆ. ಹುಬ್ಬಳ್ಳಿಯ ಸಮರ್ಥ್ ಕಾಲೇಜಿನ ಮೂವರು ಹಿಂದು ವಿದ್ಯಾರ್ಥಿನಿಯರ ಫೋಟೊಗಳನ್ನು ಬಳಸಿಕೊಂಡು ಅವುಗಳಿಗೆ ಬೆತ್ತಲೆ ದೇಹಗಳನ್ನು ಸೇರಿಸಿ ಎಡಿಟ್ ಮಾಡಿದ್ದಲ್ಲದೆ ಇನ್‌ಸ್ಟಾ ಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ ಕಿಡಿಗೇಡಿಗಳಿಗಾಗಿ ಪೊಲೀಸರ ಹುಡುಕಾಟ ಜೋರಾಗಿರುವಂತೆಯೇ ಇತ್ತ ಆ ಕಿಡಿಗೇಡಿ ಇನ್‌ಸ್ಟಾ ಪೋಸ್ಟ್ ಡಿಲೀಟ್ ಮಾಡಿದ್ದಾನೆ.

ಕಾಲೇಜಿನ ವಿದ್ಯಾರ್ಥಿನಿಯರು ತಮ್ಮಫೋಟೊಗಳನ್ನು ಈ ರೀತಿಯಾಗಿ ದುರ್ಬಳಕೆ ಮಾಡಲಾಗಿದೆ ಎಂದು ಕಾಲೇಜಿನ ಆಡಳಿತ ಮಂಡಳಿಗೆ ಕಳೆದ ಜೂನ್ 20ರಂದೇ ದೂರು ನೀಡಿದ್ದರು. ಆದರೆ, ಆಡಳಿತ ಮಂಡಳಿ ಇದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿರಲಿಲ್ಲ. ಹೀಗಾಗಿ ವಿದ್ಯಾರ್ಥಿನಿಯರು ಶುಕ್ರವಾರ ವಿದ್ಯಾನಗರ ಪೊಲೀಸರಿಗೆ ದೂರು ನೀಡಿದ್ದರು. ಇದರ ಬೆನ್ನಿಗೇ ಪೊಲೀಸರು ಸಮರ್ಥ್ ಕಾಲೇಜಿಗೆ ಬಂದು ವಿಚಾರಣೆ ನಡೆಸಿದ್ದಾರೆ. ಇತ್ತ ದೂರು ದಾಖಲಾಗುತಿದ್ದಂತೆಯೇ ಸೈಬರ್ ವಂಚಕ ಅಲರ್ಟ್ ಆಗಿದ್ದಾನೆ. ಇನ್‌ಸ್ಟಾದಲ್ಲಿ ಹಾಕಿರೋ ಪೋಸ್ಟ್ ಡಿಲೀಟ್ ಮಾಡಿದ್ದಾನೆ. kashmira1990_0 ಇನ್ ಸ್ಟಾ ಅಕೌಂಟ್ ನಲ್ಲಿ ಕೆಟ್ಟದಾಗಿ ಪೋಸ್ಟ್ ಮಾಡಿದ್ದ ಕಿಡಿಗೇಡಿ ಈ ಪೋಸ್ಟನ್ನು ಡಿಲೀಟ್ ಮಾಡಿದ್ದಾನೆ.

ಸಮರ್ಥ ಕಾಲೇಜಿನ ವಿದ್ಯಾರ್ಥಿಗಳ ಮೇಲೆಯೇ ಗುಮಾನಿ!:

ಪೊಲೀಸರು ಸಮರ್ಥ್ ಕಾಲೇಜಿಗೆ ಹೋಗಿ ವಿಚಾರಣೆ ನಡೆಸಿದರೂ ಅಲ್ಲಿ ಅವರಿಗೆ ಹೆಚ್ಚಿನ ಮಾಹಿತಿಯೇನೂ ಸಿಕ್ಕಿಲ್ಲ, ಕಳೆದ ಮೂರು ತಿಂಗಳಿನಿಂದ ಫೋಟೊಗಳನ್ನು ಎಡಿಟ್ ಮಾಡಿ ಹಾಕಲಾಗುತ್ತಿದೆ. ಇಷ್ಟಾದರು ಕಾಲೇಜಿನ ಆಡಳಿತ ಮಂಡಳಿ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಆಡಳಿತ ಮಂಡಳಿ ಹೆಚ್ಚಿನ ಮಾಹಿತಿಯನ್ನೂ ನೀಡಿಲ್ಲ ಸಹಕರಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ವಿದ್ಯಾರ್ಥಿನಿಯರ ಅಶ್ಲೀಲ ಪೋಟೊ ಎಡಿಟ್ ಮಾಡಿ ಅಪ್ಲೋಡ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ನಡೆಸುತ್ತಿದ್ದೇವೆ. ಸದ್ಯವೇ ಆರೋಪಿಯನ್ನು ಹಿಡಿಯುತ್ತೇವೆ ಎಂದು ಹುಬ್ಬಳ್ಳಿ- ಧಾರವಾಡ ಪೊಲೀಸ್ ಆಯುಕ್ತ ಸಂತೋಷ ಬಾಬು ಹೇಳಿದ್ದಾರೆ.

ಯವತಿಯರು ದೂರು ನೀಡಿದ್ದಾರೆ. ಅವರಿಗೆ ಯಾರ ಮೇಲೆ ಅನುಮಾನವಿದೆ ಎಂದು ಕೂಡಾ ಕೇಳಿ ತಿಳಿದುಕೊಂಡಿದ್ದೇವೆ. ಹಲವರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸುತ್ತಿದ್ದೇವೆ. ಇನ್‌ಸ್ಟಾ ಗ್ರಾಂನಲ್ಲಿ ಇಂಥ ಹಲವು ಪ್ರಕರಣಗಳು ಆಗಾಗ ನಡೆಯುತ್ತಲೇ ಇರುತ್ತವೆ. ಈ ಪ್ರಕರಣ ಕಾಲೇಜಿನಲ್ಲೇ ನಡೆದಿದೆ. ಕಾಲೇಜಿನ ವಿದ್ಯಾರ್ಥಿಗಳೇ ಇದನ್ನು ಮಾಡಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಸಂತೋಷ್ ಬಾಬು ಹೇಳಿದ್ದಾರೆ.

ಹಾಸನದಲ್ಲಿ ಪೊಲೀಸರ ವಿರುದ್ಧವೇ ವಿದ್ಯಾರ್ಥಿಗಳ ದೂರು

ಹಾಸನದ ವಿದ್ಯಾನಗರದಲ್ಲಿರುವ ಎಸ್‌ಸಿ/ಎಸ್‌ಟಿ ವಸತಿ ನಿಲಯದ ಆವರಣಕ್ಕೆ ಬುಧವಾರ ತಡರಾತ್ರಿ ಹಲವಾರು ರಾತ್ರಿ ಬೀಟ್ ಪೊಲೀಸ್ ಸಿಬ್ಬಂದಿ ನುಗ್ಗಿದ ನಂತರ ಭಾರಿ ಕೋಲಾಹಲಕ್ಕೆ ಸಾಕ್ಷಿಯಾಯಿತು. ಹಾಸ್ಟೆಲ್ ವಾರ್ಡನ್ ಅಥವಾ ಹಿರಿಯ ಅಧಿಕಾರಿಗಳಿಂದ ಅನುಮತಿ ಪಡೆಯದೆ ಮೂವರು ಪೊಲೀಸ್ ಪೇದೆಗಳು ಹಾಸ್ಟೆಲ್‌ಗೆ ನುಗ್ಗಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿಗಳು ಗುರುವಾರ ಮುಂಜಾನೆ 3 ಗಂಟೆಯವರೆಗೆ ಪ್ರತಿಭಟನೆ ನಡೆಸಿದರು.

ವಿದ್ಯಾರ್ಥಿಯೊಬ್ಬನ ಜಾತಿ ಬಗ್ಗೆ ಕೇಳುವ ಮೂಲಕ ಕಾನ್‌ಸ್ಟೆಬಲ್‌ಗಳು ನಿಂದಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಅಂಬೇಡ್ಕರ್ ಹಾಸ್ಟೆಲ್‌ನಲ್ಲಿ ಉಳಿದುಕೊಂಡಿದ್ದೇವೆ ಎಂದು ವಿದ್ಯಾರ್ಥಿಯೊಬ್ಬ ಹೇಳಿದಾಗ, ಪೊಲೀಸ್ ಪೇದೆಯೊಬ್ಬರು ಡಾ. ಬಿಆರ್ ಅಂಬೇಡ್ಕರ್ ಯಾರು ಎಂದು ಕೇಳಿದರು ಎಂದು ವಿದ್ಯಾರ್ಥಿಯೊಬ್ಬರು ದೂರಿದ್ದಾರೆ. ಘಟನೆಯನ್ನು ವಿಡಿಯೋ ರೆಕಾರ್ಡ್ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬರ ಸೆಲ್ ಫೋನ್ ಅನ್ನು ಸಹ ಒಬ್ಬ ಕಾನ್‌ಸ್ಟೇಬಲ್ ಕಸಿದುಕೊಂಡು ಒಡೆದು ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.

ಹಾಸನ ಉಪ ಪೊಲೀಸ್ ವರಿಷ್ಠಾಧಿಕಾರಿ ಮುರುಳೀಧರ್ ಅವರು ಮಧ್ಯರಾತ್ರಿ 2 ಗಂಟೆಗೆ ಹಾಸ್ಟೆಲ್‌ಗೆ ಭೇಟಿ ನೀಡಿ ವಿದ್ಯಾರ್ಥಿಗಳನ್ನು ಸಮಾಧಾನಪಡಿಸಿದರು. ಅಂಬೇಡ್ಕರ್ ಅವರಿಗೆ ಅಗೌರವ ತೋರಿದ್ದಕ್ಕಾಗಿ ಮೂವರು ಪೊಲೀಸ್ ಪೇದೆಗಳು ಕ್ಷಮೆ ಯಾಚಿಸಿದ್ದಾರೆ ಎಂದು ವರದಿಯಾಗಿದೆ. ವರದಿ ಆಧರಿಸಿ ಒಬ್ಬ ಕಾನ್‌ಸ್ಟೆಬಲ್‌ನನ್ನು ಅಮಾನತು ಮಾಡಲಾಗಿದ್ದು, ಇಬ್ಬರಿಗೆ ನೋಟಿಸ್ ಜಾರಿ ಮಾಡಲಾಗಿದೆ.

ಹಾಸ್ಟೆಲ್‌ನಿಂದ ಕರೆ ಬಂದ ನಂತರವೇ ಕಾನ್‌ಸ್ಟೆಬಲ್‌ಗಳು ಹಾಸ್ಟೆಲ್‌ಗೆ ಹೋದರು ಎಂದು ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಹೇಳಿದ್ದಾರೆ. ಕಾನ್ಸ್‌ಟೇಬಲ್‌ಗಳು ಮದ್ಯ ಸೇವಿಸಿಲ್ಲ ಮತ್ತು ಘಟನೆ ನಂತರ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ

ಇದನ್ನೂ ಓದಿ : ನಾನು ಬದುಕಿರುವುದೇ ಕಿಮ್ಮನೆಗೆ ಸಹಿಸಲಾಗುತ್ತಿಲ್ಲ

HOW TO APPLY : NEET-UG COUNSELLING 2023