Categories
ತೀರ್ಥಹಳ್ಳಿ

ರಾಜ್ಯ ಮಟ್ಟಕ್ಕೆ ತೀರ್ಥಹಳ್ಳಿ ಸಹ್ಯಾದ್ರಿ ಕಾಲೇಜು ವಿದ್ಯಾರ್ಥಿಗಳು!

ರಾಜ್ಯ ಮಟ್ಟಕ್ಕೆ ತೀರ್ಥಹಳ್ಳಿ ಸಹ್ಯಾದ್ರಿ ಕಾಲೇಜು ವಿದ್ಯಾರ್ಥಿಗಳು!
– 20 ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ
– ಜಿಲ್ಲಾ ಮಟ್ಟದಲ್ಲಿ ಸಾಧನೆ ಮಾಡಿದವರಿಗೆ ಅಭಿನಂದನೆಗಳು

NAMMUR EXPRESS NEWS
ತೀರ್ಥಹಳ್ಳಿ: ಸಹ್ಯಾದ್ರಿ ಪಿಯ ಕಾಲೇಜು ತೀರ್ಥಹಳ್ಳಿ ಮತ್ತೊಮ್ಮೆ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿಯು ಮೇಲುಗೈ ಸಾಧಿಸುವುದರೊಂದಿಗೆ 20 ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದು ರಾಜ್ಯ ಮಟ್ಟದಲ್ಲಿ ತೀರ್ಥಹಳ್ಳಿ ಹಿರಿಮೆಯನ್ನು ಹೆಚ್ಚಿಸಲಿದ್ದಾರೆ. ಸೆಪ್ಟೆಂಬರ್ 23 ಮತ್ತು 24ರಂದು ನೆಹರು ಕ್ರೀಡಾಂಗಣದಲ್ಲಿ ನಡೆದ ಶಿವಮೊಗ್ಗ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಸಹ್ಯಾದ್ರಿ ಕಾಲೇಜಿನ ವಿದ್ಯಾರ್ಥಿಗಳು ಗೆಲುವು ಸಾಧಿಸಿದ್ದಾರೆ.

ಬಾಲಕರ ವಿಭಾಗದಲ್ಲಿ ಸ್ಥಾನ

ಥ್ರೋಬಾಲ್- ಪ್ರಥಮ
ಬಾಲ್ ಬ್ಯಾಡ್ಮಿಂಟನ್-ದ್ವಿತೀಯ
400 ಮೀಟರ್ ಓಟ- ಪ್ರಥಮ
ವಾಕಿಂಗ್ ರೇಸ್- ಪ್ರಥಮ
800m ಓಟ- ದ್ವಿತೀಯ
4*400m ರಿಲೇ- ದ್ವಿತೀಯ
4*100m ರಿಲೇ- ದ್ವಿತೀಯ
200m ಓಟ- ತೃತೀಯ

ಬಾಲಕಿಯರ ವಿಭಾಗದಲ್ಲಿ ಸ್ಥಾನ

ಥ್ರೋಬಾಲ್- ಪ್ರಥಮ
ವಾಕಿಂಗ್ ರೇಸ್- ದ್ವಿತೀಯ
ಜಾವ್ಲಿನ್- ದ್ವಿತೀಯ

ಈ ಎಲ್ಲಾ ಆಟೋಟ ಸ್ಪರ್ಧೆಗಳಲ್ಲಿ ವಿಜಯಶಾಲಿಗಳಾಗುವ ಮೂಲಕ ರಾಜ್ಯ ಮಟ್ಟಕ್ಕೆ ಆಯ್ಕೆಯಾಗುವುದರೊಂದಿಗೆ ತೀರ್ಥಹಳ್ಳಿ ತಾಲ್ಲೂಕಿಗೆ ಹಾಗೂ ಶಿಕ್ಷಣ ಸಂಸ್ಥೆಗೆ ಕೀರ್ತಿ ತಂದಿದ್ದಾರೆ. ಈ ಉದಯೋನ್ಮುಖ ಸಾಧಕ ಕ್ರೀಡಾ ಪ್ರತಿಭೆಗಳನ್ನು ಹಾಗೂ ಇವರನ್ನು ತರಬೇತುಗೊಳಿಸುವ ಮೂಲಕ ರಾಜ್ಯ ಮಟ್ಟದ ಕ್ರೀಡಾ ಪಟುಗಳಾಗಿ ತರಬೇತಿ ನೀಡಿದ ದೈಹಿಕ ಶಿಕ್ಷಣ ಶಿಕ್ಷಕರಾದ ಜಗದೀಶ್ ಎಂ ಎಸ್ ಹಾಗೂ ತರಬೇತುದಾರರಾದ ಸಿರಾಜ್ ಇವರನ್ನು ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ, ಆಡಳಿತಾಧಿಕಾರಿಗಳು ,ಪ್ರಾಂಶುಪಾಲರು ಬೋಧಕ ಹಾಗೂ ಬೋಧಕೇತರ ವರ್ಗದವರು ಹಾರ್ದಿಕವಾಗಿ ಅಭಿನಂದಿಸಿ ಶುಭ ಹಾರೈಸಿದ್ದಾರೆ.

Categories
ಸಿನಿಮಾ

ಬಿಗ್ ಬಾಸ್-10 ಗೆ ಬರುತ್ತಾ ಚಾರ್ಲಿ ನಾಯಿ!

ಬಿಗ್ ಬಾಸ್-10 ಗೆ ಬರುತ್ತಾ ಚಾರ್ಲಿ ನಾಯಿ!
– ಅಕ್ಟೋಬರ್ 8ರಿಂದ ಬಿಗ್ ಬಾಸ್ ಆರಂಭ
– ಯಾರೆಲ್ಲಾ ಬಿಗ್ ಬಾಸ್ ನಲ್ಲಿ ಇದ್ದಾರೆ..?

NAMMUR EXPRESS NEWS
ಕನ್ನಡ ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್-10 ಆರಂಭಕ್ಕೆ ಮುಹೂರ್ತ ಫಿಕ್ಸ್ ಆಗಿದ್ದು ಅಕ್ಟೋಬರ್ 8, 2023 ರಿಂದ ಪ್ರಸಾರವಾಗಲಿದೆ. ಮುಂಬರುವ ಸೀಸನ್ ತನ್ನ 10 ನೇ ವಾರ್ಷಿಕೋತ್ಸವವನ್ನು ಆಚರಿಸಲು ‘ಹ್ಯಾಪಿ ಬಿಗ್ ಬಾಸ್’ ಎಂಬ ಥೀಮ್ ಅನ್ನು ಹೊಂದಿರುತ್ತದೆ. ಭಾರಿ ಡ್ರಾಮಾ ಮತ್ತು ವಿವಾದಗಳಿಗೆ ಹೆಸರುವಾಸಿಯಾದ ಈ ಕಾರ್ಯಕ್ರಮವು ಕರ್ನಾಟಕದ ಅತ್ಯಂತ ಜನಪ್ರಿಯ ರಿಯಾಲಿಟಿ ಟಿವಿ ಸರಣಿಗಳಲ್ಲಿ ಒಂದಾಗಿದೆ. ನಟ ಸುದೀಪ್ ಕಾರ್ಯಕ್ರಮದ ಪ್ರೋಮೋವನ್ನು ಇತ್ತೀಚೆಗೆ ಬಿಡುಗಡೆ ಮಾಡಿದ್ದಾರೆ. ಚಾರ್ಲಿ ಚಿತ್ರದ ಮೂಲಕ ಇಡೀ ದೇಶದ ಗಮನ ಸೆಳೆದ ಚಾರ್ಲಿ ನಾಯಿ ಕೂಡ ಈ ಬಿಗ್ ಬಾಸ್ ಅಲ್ಲಿ ಭಾಗಿಯಾಗಲಿದೆಯಾ ಎಂಬ ಬಗ್ಗೆ ಚರ್ಚೆ ಶುರುವಾಗಿದೆ. ಈ ಬಗ್ಗೆ ಕಲರ್ಸ್ ಕನ್ನಡದ ಅನುಬಂಧ ಅವಾರ್ಡ್ ಕಾರ್ಯಕ್ರಮದಲ್ಲಿ ನಿರೂಪಕರು ಹೇಳಿದ್ದಾರೆ.

ಯಾರು ಯಾರು ಭಾಗಿ ಸಾಧ್ಯತೆ?

ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್, ‘ಗೀತಾ’ ಸೀರಿಯಲ್ ಖ್ಯಾತಿಯ ಭವ್ಯಾ ಗೌಡ, ‘ಲಕ್ಷಣ’ ಧಾರಾವಾಹಿ ನಟಿ ಸುಕೃತಾ ನಾಗ್, ಜೊತೆಜೊತೆಯಲಿ ಧಾರವಾಹಿ ಖ್ಯಾತಿಯ ಮೇಘಾ ಶೆಟ್ಟಿ, ಡಾ.ಬ್ರೋ ಅವರ ಹೆಸರುಗಳು ಕೂಡ ಪ್ರಮುಖವಾಗಿ ಕೇಳಿಬಂದಿವೆ.
ನಾಗಿಣಿ 2 ಖ್ಯಾತಿಯ ನಟಿ ನಮ್ರತಾ ಗೌಡ, ಹುಚ್ಚ ಚಿತ್ರದ ನಾಯಕಿ ರೇಖಾ, ವರ್ಷ ಕಾವೇರಿ, ಅಗ್ನಿಸಾಕ್ಷಿ ರಾಜೇಶ್, ಸೋಶಿಯಲ್ ಮೀಡಿಯಾ ಸ್ಟಾರ್ ಭೂಮಿಕಾ ಬಸವರಾಜ್, ಸೇರಿದಂತೆ ಹಲವರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡ್ತಿದ್ದಾರೆ ಎನ್ನಲಾಗಿದೆ.

Categories
ಕರಾವಳಿ

ಕರಾವಳಿ ಟಾಪ್ ನ್ಯೂಸ್

– ಬಂಟ್ವಾಳ : ಲಾರಿ ಡಿಕ್ಕಿಯಾಗಿ ಬೈಕ್ ಸವಾರ ಸಾವು
– ಮಂಗಳೂರು: ಅಕ್ರಮ ಮರಳುಗಾರಿಕೆಗೆ ದಾಳಿ
– ವಿಟ್ಲ: 4 ವರ್ಷದ ಬಾಲಕಿ ಹೃದಯ ಸಂಬಂಧಿ ಖಾಯಿಲೆಯಿಂದ ಮೃತ್ಯು!
– ವಿಟ್ಲ: ಗಾಂಜಾ ಸೇವಿಸಿ ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದ ಯುವಕರು ಪೊಲೀಸರ ವಶಕ್ಕೆ
– ಮಣಿಪಾಲ: ಮಣಿಪಾಲ ಸಾರ್ವಜನಿಕ ಸ್ಥಳದಲ್ಲಿ ಹೊಡೆದಾಟ ಯುವತಿ ಸಹಿತ 6 ಮಂದಿ ವಶಕ್ಕೆ!

NAMMUR EXPRESS NEWS :
ಬಂಟ್ವಾಳ: ಜಲ್ಲಿಕಲ್ಲು ಸಾಗಿಸುವ ಲಾರಿ ಡಿಕ್ಕಿಯಾಗಿ ಬೈಕ್ ಸವಾರ ಮೃತಪಟ್ಟ ಘಟನೆ ಸೆ.24ರ ಭಾನುವಾರ ಬೆಳಿಗ್ಗೆ ಪಾಣೆಮಂಗಳೂರು ನೂತನ ಸೇತುವೆಯಲ್ಲಿ ನಡೆದಿದೆ. ಸಜೀಪ ಬೇಂಕ್ಯ ನಿವಾಸಿ ವಾಸುದೇವ ಮಯ್ಯ ಅವರ ಹಿರಿಯ ಮಗ ರಾಜ್ ಕುಮಾರ್ ಮೃತಪಟ್ಟ ದುರ್ದೈವಿ. ರಾಜ್ ಕುಮಾರ್ ಅವರು ವಾಮದಪದವು ಎಂಬಲ್ಲಿ ಜಾಗ ಖರೀದಿ ಮಾಡಿದ್ದು,ಕೃಷಿ ಮಾಡಿಕೊಂಡಿದ್ದರು. ವಾಮದಪದವಿನ ಮನೆಯಿಂದ ಸಜೀಪದಲ್ಲಿರು ಮೂಲ ಮನೆಗೆ ಬರುವ ವೇಳೆ ಎದುರಿನಿಂದ ಬಂದ ಪವಿತ್ರ ಕನ್ಸ್ ಟ್ರಕ್ಷನ್ ಗೆ ಸೇರಿದ ಲಾರಿ ಡಿಕ್ಕಿಯಾಗಿದೆ. ಲಾರಿ ಡಿಕ್ಕಿಯಾದ ರಭಸಕ್ಕೆ ಬೈಕ್ ಸವಾರ ಗಂಭೀರ ಗಾಯಗೊಂಡಿದ್ದು, ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ.

ಅಕ್ರಮ ಮರಳುಗಾರಿಕೆಗೆ ದಾಳಿ: ಟಿಪ್ಪರ್, ದೋಣಿ ವಶ

ಮಂಗಳೂರು : ಮಂಗಳೂರಿನ ಅದ್ಧೂರು ಗ್ರಾಮದ ನಂದ್ಯಾ ಎಂಬಲ್ಲಿ ಗುರುಪುರ (ಪಲ್ಗುಣಿ) ನದಿಯಿಂದ ಅಕ್ರಮವಾಗಿ ಮರಳು ತೆಗೆಯುತ್ತಿದ್ದ ಸ್ಥಳಕ್ಕೆ ಪೊಲೀಸರು ದಾಳಿ ಮಾಡಿ ಎರಡು ಟಿಪ್ಪರ್ ಲಾರಿಗಳು ಮತ್ತು 15 ದೋಣಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸ್ಥಳದಲ್ಲಿದ್ದ ತಲಾ 5ಲಕ್ಷ ರೂ. ಮೌಲ್ಯದ ಎರಡು ಟಿಪ್ಪರ್ ಲಾರಿಗಳು, ತಲಾ 50 ಸಾವಿರ ರೂ. ಮೌಲ್ಯದ 15 ದೋಣಿಗಳು ಹಾಗೂ ಅಕ್ರಮ ಮರಳುಗಾರಿಕೆಗೆ ಬಳಸುತ್ತಿದ್ದ ಪರಿಕರಗಳು ಸೇರಿ ಒಟ್ಟು 17.50 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

4 ವರ್ಷದ ಬಾಲಕಿ ಹೃದಯ ಸಂಬಂಧಿ ಖಾಯಿಲೆಯಿಂದ ಮೃತ್ಯು

ವಿಟ್ಲ: ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದ ಪುಟ್ಟ ಬಾಲಕಿಯೊಬ್ಬಳು ಮೃತಪಟ್ಟಿದ್ದಾಳೆ.
ಮೃತ ಬಾಲಕಿಯನ್ನು ಮಿತ್ತೂರು ಸಮೀಪದ ಪಾಟ್ರಕೋಡಿ ನಿವಾಸಿ ಇಬ್ರಾಹಿಂ ಬಾತಿಷಾ ರವರ ಪುತ್ರಿ ಜಮೀಲಾ ಸನಿಕ (4) ಎಂದು ಗುರುತಿಸಲಾಗಿದೆ. ಪುತ್ತೂರಿನ ಮುರದಲ್ಲಿರುವ ಖಾಸಗಿ ಸ್ಕೂಲ್ ನ ಎಲ್.ಕೆ.ಜಿ.ಯಲ್ಲಿ ಕಲಿಯುತ್ತಿದ್ದ ಈಕೆ ಅನಾರೋಗ್ಯದ ಕಾರಣ ಬೆಂಗಳೂರಿನ ಹೃದಯಾಲಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಭಾನುವಾರ ಮುಂಜಾನೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲೇ ಮರಣ ಹೊಂದಿದ್ದಾಳೆ.

ಗಾಂಜಾ ಸೇವಿಸಿ ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದ ಯುವಕರು ಪೊಲೀಸರ ವಶಕ್ಕೆ

ವಿಟ್ಲ : ಕೆಲ ದಿನಗಳಿಂದ ಇಡಿದು ಗ್ರಾಮದ ಮುಂಡ್ರಬೈಲು ಎಂಬಲ್ಲಿ ಹದಿಹರೆಯದ ಯುವಕರ ತಂಡ ಯಾರೂ ಇಲ್ಲದ ನಿರ್ಜನ ಪ್ರದೇಶಕ್ಕೆ ಬಂದು ಗಾಂಜಾ ಮತ್ತು ಮಾದಕ ವಸ್ತುವನ್ನು ಸೇವಿಸುತ್ತಿದ್ದರು ಎಂಬ ಮಾಹಿತಿಯೊಂದು ಊರವರಿಗೆ ದೊರೆತಿದ ಅಲ್ಲದೇ ನಶೆಯಲ್ಲಿ ದಾರಿಯಲ್ಲಿ ಹೋಗುತ್ತಿದ್ದ ಮಹಿಳೆಯರಿಗೆ ಮತ್ತು ಹೆಣ್ಣು ಮಕ್ಕಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕಿರುಕುಳ ನೀಡುತ್ತಿದ್ದರು ಎಂಬ ಮಾಹಿತಿ ಗ್ರಾಮಸ್ಥರಿಗೆ ತಿಳಿಸಿದ್ದರು. ಮಾಹಿತಿ ತಿಳಿದ ಗ್ರಾಮಸ್ಥರು ಕಾದು ಕುಳಿತಿದ್ದರು.
ಅದೇ ಸಮಯಕ್ಕೆ ಬಂದ ಯುವಕರು ಇನ್ನೇನು ತಮ್ಮ ಕೆಲಸ ಮಾಡಬೇಕೆನ್ನುವಷ್ಟರಲ್ಲಿ ಅವರನ್ನು ಹಿಡಿದು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ವಿಟ್ಲ ಪೊಲೀಸರು ಮೂವರು ಯುವಕರನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿಗಳನ್ನು ಕಂಬಳಬೆಟ್ಟು ನೂಜಿ ನಿವಾಸಿಗಳಾದ ಸಾಹಿಲ್, ಶರ ಎನ್ನಲಾಗಿದೆ. ಆರೋಪಿಗಳಿಂದ 1ಬೈಕ್‌ ಹಾಗೂ 1ಸ್ಕೂಟರ್‌ನ್ನು ವಶಕ್ಕೆ ಪಡೆಯಲಾಗಿದೆ.

ಮಣಿಪಾಲ ಸಾರ್ವಜನಿಕ ಸ್ಥಳದಲ್ಲಿ ಹೊಡೆದಾಟ ಯುವತಿ ಸಹಿತ 6 ಮಂದಿ ವಶಕ್ಕೆ

ಮಣಿಪಾಲ: ಬಾರ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಮಧ್ಯರಾತ್ರಿ ವೇಳೆ ಪರಸ್ಪರ ಹೊಡೆದಾಡಿಕೊಳ್ಳುತ್ತಿದ್ದ ಯುವತಿ ಸೇರಿದಂತೆ ಆರು ಮಂದಿಯನ್ನು ಮಣಿಪಾಲ ಪೊಲೀಸರು ವಶಕ್ಕೆ ಪಡೆದಿರುವ ಬಗ್ಗೆ ವರದಿಯಾಗಿದೆ. ವಶಕ್ಕೆ ಪಡೆದುಕೊಂಡವರನ್ನು ವಿನಾಯಕ, ಶಶಾಂಕ, ಆದರ್ಶ, ಶೈಲೇಶ, ಅರುಣ ಹಾಗೂ ಕಾವ್ಯ ಎಂದು ಗುರುತಿಸಲಾಗಿದೆ. ಇವರು ಪರಸ್ಪರ ಕೈ-ಕೈ ಮಿಲಾಯಿಸಿಕೊಂಡು, ಜಗಳ ಮಾಡಿ ಹೊಡೆದಾಡಿಕೊಳ್ಳುತ್ತಿದ್ದು, ಕೂಡಲೇ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಮಣಿಪಾಲ ಪೊಲೀಸರು ಆರು ಮಂದಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Categories
ಮಲ್ನಾಡ್

ಈಜಲು ಹೋಗಿದ್ದ ಇಬ್ಬರು ಜೋಗದಲ್ಲಿ ನೀರಿಗೆ ಬಲಿ..!

ಈಜಲು ಹೋಗಿದ್ದ ಇಬ್ಬರು ಜೋಗದಲ್ಲಿ ನೀರಿಗೆ ಬಲಿ..!
– ಪ್ರವಾಸಕ್ಕೆ ಹೋದಾಗ ಜೋಗದ ದೇವಿ ಗುಂಡಿ ಬಳಿ ದುರಂತ
– ಹೊಸನಗರ: ಬೈಕ್ ಸವಾರನ ಮೇಲೆ ಬಿದ್ದ ಮರದ ತುಂಡು
– ಕೊಪ್ಪ: ರಸ್ತೆ ಮಧ್ಯೆ ಹೊತ್ತಿ ಉರಿದ ಚಲಿಸುತ್ತಿದ್ದ ಕಾರು!

NAMMUR EXPRESS NEWS
ಸಾಗರ: ಮಲೆನಾಡಿನಲ್ಲಿ ಮತ್ತೊಂದು ನೀರಿನ ದುರಂತ ಸಂಭವಿಸಿದೆ. ಜೋಗದ ದೇವಿ ಗುಂಡಿ ಬಳಿ ಸಾಗರದ ಕೃಷಿ ಅಧಿಕಾರಿ ಕುಮಾರ್ ಕೆ. ಟಿ. ಹಾಗೂ ಕಲೆಕ್ಟರ್ ಅರುಣ್ ಈಜಲು ಹೋಗಿ ಮುಳುಗಿ ಸಾವು ಕಂಡಿದ್ದಾರೆ. ಸಾಗರದ ಕರ್ತವ್ಯ ನಿರತ ಕೃಷಿ ಅಧಿಕಾರಿ ಕುಮಾರ್ ಕೆ. ಟಿ ಹಾಗೂ ಕುಟುಂಬ ಜೋಗ ನೋಡಲು ಪ್ರವಾಸಕ್ಕೆ ಆಗಮಿಸಿದ್ದರು. ಜೋಗ ಸನಿಹದ ದೇವಿ ಗುಂಡಿ ಬಳಿ ಈಜಲು ಹೋಗಿ ಕೃಷಿ ಅಧಿಕಾರಿ ಕುಮಾರ್ ಕೆ. ಟಿ ಹಾಗೂ ಐಡಿಎಫ್ಸಿ ಬ್ಯಾಂಕ್ ಕಲೆಕ್ಟರ್ ಅರುಣ್ ಮುಳುಗಿ ನಿಧನರಾಗಿರುವ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಪೊಲೀಸ್ ಇಲಾಖೆ ಸ್ಥಳದಲ್ಲಿ ಮುಂದಿನ ತನಿಖೆಯಲ್ಲಿ ಮುಳುಗಿ ನಿಧನರಾಗಿರುವ ಶವ ಪತ್ತೆಯಾಗಿದೆ. ಶವವನ್ನೂ ಸಾಗರದ ಉಪ ವಿಭಾಗೀಯ ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗುತ್ತಿದೆ.

ಬೈಕ್ ಸವಾರನ ಮೇಲೆ ಬಿದ್ದ ಮರದ ತುಂಡು: ಗಂಭೀರ

ಹೊಸನಗರ: ರಿಪ್ಪನ್‌ಪೇಟೆ ಸಮೀಪದ ಬಿಲ್ಲೇಶ್ವರದಲ್ಲಿ ಚಲಿಸುತಿದ್ದ ಬೈಕ್ ಸವಾರನ ಮೇಲೆ ಟಿಂಬರ್ ಲಾರಿಯಿಂದ ಮರದ ತುಂಡು ಬಿದ್ದು ಬೈಕ್ ಸವಾರ ಗಂಭೀರ ಗಾಯಗೊಂಡಿರುವ ಘಟನೆ ಶನಿವಾರ ರಾತ್ರಿ ನಡೆದಿದೆ. ಕಡಸೂರು ಗ್ರಾಮದ ನವೀನ್ ಗಂಭೀರ ಗಾಯಗೊಂಡಿದ್ದಾರೆ. ಗಾಯಗೊಂಡ ನವೀನ್ ಕುತ್ತಿಗೆ ಬಳಿ ಗಂಭೀರ ಗಾಯಗಳಾಗಿವೆ. ಮೆಗ್ಗಾನ್ ನಲ್ಲಿ ನವೀನ್ ಗೆ ಚಿಕಿತ್ಸೆ ನೀಡಲಾಗುತ್ತಿದೆ. ಬಿಲ್ಲೇಶ್ವರ ಗ್ರಾಮದ ಮುಖ್ಯ ರಸ್ತೆಯಲ್ಲಿ ಬೈಕ್ ನಲ್ಲಿ ತೆರಳುತಿದ್ದ ನವೀನ್ ತಲೆ ಮೇಲೆ ಟಿಂಬರ್ ಲಾರಿಯಲ್ಲಿದ್ದ ಮರದ ತುಂಡು ಕುತ್ತಿಗೆ ಮೇಲೆ ಬಿದ್ದ ಪರಿಣಾಮ ಗಾಯಾಳುವಿನ ಕುತ್ತಿಗೆಯ ಭಾಗ ತುಂಡಾಗಿ ತೀವ್ರ ರಕ್ತಸ್ರಾವವಾಗಿದೆ.

ರಸ್ತೆ ಮಧ್ಯೆ ಹೊತ್ತಿ ಉರಿದ ಚಲಿಸುತ್ತಿದ್ದ ಕಾರು!

ಕೊಪ್ಪ: ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಕಾರೊಂದು ರಸ್ತೆ ಮಧ್ಯೆಯೇ ಬೆಂಕಿಗಾಹುತಿಯಾದ ಘಟನೆ ಶನಿವಾರ ಕೊಪ್ಪ ತಾಲೂಕಿನ ಕುದುರೆಗುಂಡಿಯಲ್ಲಿ ನಡೆದಿದೆ. ಕಾರಿನಲ್ಲಿದ್ದ ಮೂವರು ಪ್ರಯಾಣಿಕರು ಬೆಂಕಿ ಕಂಡ ತಕ್ಷಣ ಕಾರಿನಿಂದ ಇಳಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆನ್ನಲಾಗಿದೆ.
ಶಾರ್ಟ್ ಸರ್ಕ್ಯೂಟ್ ನಿಂದ ಈ ಅವಘಡ ಸಂಭವಿಸಿರಬಹುದು ಎಂದು ಸಂಶಯ ವ್ಯಕ್ತವಾಗಿದೆ. ಸ್ಥಳೀಯರು ಬೆಂಕಿ ನಂದಿಸಲು ಹರಸಾಹಸ ಪಟ್ಟರು. ಆದರೆ, ಬೆಂಕಿಯ ತೀವ್ರತೆಯಿಂದ ಕಾರು ಸಂಪೂರ್ಣ ಸುಟ್ಟು ಕರಕಲಾಗಿದೆ.

Categories
ಅಡಿಕೆ-ದರ

ಶಿವಮೊಗ್ಗ ತೀರ್ಥಹಳ್ಳಿ ಅಡಿಕೆ ದರ

ಶಿವಮೊಗ್ಗ ತೀರ್ಥಹಳ್ಳಿ ಅಡಿಕೆ ದರ

ಸರಕು – 60009 – 82720
ಬೆಟ್ಟೆ –   47009 – 53009
ರಾಶಿ –   43009 – 48509
ಗೊರಬಲು – 34009 – 36609

ಮಾಹಿತಿ: ಸಹ್ಯಾದ್ರಿ ವಿವಿಧೋದ್ದೇಶ ಅಡಿಕೆ ಬೆಳೆಗಾರರ ಮಾರಾಟ ಸಹಕಾರ ಸಂಘ ತೀರ್ಥಹಳ್ಳಿ

Categories
ರಾಜ್ಯ

ಟಾಪ್ 3 ನ್ಯೂಸ್ ಕರ್ನಾಟಕ

15 ಟನ್ ಅಕ್ರಮ ಗೋಮಾಂಸ ಸಾಗಣೆ ಕಾರಿಗೆ ಬೆಂಕಿ!
– ಕಾರಿಗೆ ಬೆಂಕಿ ಹಚ್ಚಿದ ಶ್ರೀರಾಮಸೇನೆ ಕಾರ್ಯಕರ್ತರು
– ದೇವನಹಳ್ಳಿಯಲ್ಲಿ ಘಟನೆ: ಭಾರೀ ಬಂದೋಬಸ್ತ್
– ಚಿಕ್ಕಮಗಳೂರಲ್ಲಿ ಗಣೇಶ ವಿಸರ್ಜನೆ ವೇಳೆ ಸಾವು
– ಕೋಲಾರದಲ್ಲಿ ಡಾನ್ಸ್ ಮಾಡಬೇಡ ಎಂದಿದಕ್ಕೆ ಯುವತಿ ಆತ್ಮಹತ್ಯೆ!

NAMMUR EXPRESS NEWS
ದೇವನಹಳ್ಳಿ: ಅಕ್ರಮವಾಗಿ 15 ಟನ್ ಗೋಮಾಂಸ ಸಾಗಿಸಲಾಗುತ್ತಿತ್ತೆನ್ನಲಾದ ನಾಲ್ಕು ಗೂಡ್ಸ್ ವಾಹನಗಳನ್ನು ಶ್ರೀರಾಮಸೇನೆ ಕಾರ್ಯಕರ್ತರು ತಡೆದ ಘಟನೆ ನಡೆದಿದ್ದು, ಈ ವೇಳೆ ಗೋಮಾಂಸ ಸಾಗಾಟಗಾರರು ಶ್ರೀರಾಮ ಸೇನೆ ಕಾರ್ಯಕರ್ತರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ ಎಂದು ಆರೋಪಿಸಿ ಗೋಮಾಂಸ ಸಾಗಾಟ ಮಾಡುತ್ತಿದ್ದವರ ಕಾರಿಗೆ ಬೆಂಕಿ ಹಚ್ಚಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ನಗರದ ಐಬಿ ವೃತ್ತದಲ್ಲಿ ನಡೆದಿದೆ.
ಕಾರಿಗೆ ಬೆಂಕಿ ಹಚ್ಚಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ. ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದೇ ವೇಳೆ ಗೂಡ್ಸ್
ವಾಹನಗಳಲ್ಲಿದ್ದ ಗೋಮಾಂಸವನ್ನು ವಶಕ್ಕೆ ಪಡೆದಿದ್ದಾರೆ.

ಕಾರಿಗೆ ಬೆಂಕಿ ಹಚ್ಚಿದರೂ ಸಮಾಧಾನಗೊಳ್ಳದ ಶ್ರೀರಾಮಸೇನೆ ಕಾರ್ಯಕರ್ತರು, ಗೋಮಾಂಸ ಸಾಗಾಟ ಮಾಡುತ್ತಿದ್ದವರ ತಲೆಯ ಮೇಲೆ ಹಸುಗಳ ರುಂಡಗಳನ್ನು ಇರಿಸಿದ್ದು ಎದೆಗೆ ಒದ್ದು ಗೂಂಡಾಗಿರಿ ಪ್ರದರ್ಶಿಸಿದರು. ಈ ವೇಳೆ ಮಧ್ಯ ಪ್ರವೇಶಿಸಿದ ಪೊಲೀಸರು ಹಲ್ಲೆ ನಡೆಸದಂತೆ ಸೂಚನೆ ನೀಡಿದ್ದಾರೆ ಎಂದು ವರದಿಯಾಗಿದೆ. ಘಟನೆಗೆ ಸಂಬಂಧಿಸಿದಂತೆ ಗೂಂಡಾಗಿರಿ ನಡೆಸಿದ 20 ಕ್ಕೂ ಅಧಿಕ ಶ್ರೀರಾಮಸೇನೆ ಕಾರ್ಯಕರ್ತರನ್ನು ದೊಡ್ಡಬಳ್ಳಾಪುರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ನಗರದೆಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಸ್ಥಳದಲ್ಲಿ ಎಸ್ಪಿ, ಎಎಸ್ಪಿ, ಡಿವೈಎಸ್ಪಿ ಹಾಗೂ ಇಸ್ಪೆಕ್ಟರ್ ಮೊಕ್ಕಾಂ ಹೂಡಿದ್ದಾರೆ. ಐಬಿ ವೃತ್ತ ಹಾಗೂ ಗುಂಜೂರು ಟೋಲ್‌ಗಳ ಸಿಸಿಟಿವಿಯನ್ನು ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಗಣಪತಿ ವಿಸರ್ಜನೆ ವೇಳೆ ಕೆರೆಯಲ್ಲಿ ಮುಳುಗಿ ಸಾವು!

ಗಣೇಶೋತ್ಸವದ ಗಣಪತಿ ವಿಸರ್ಜನೆ ವೇಳೆ ಯುವಕನೋರ್ವ ಕೆರೆ ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ಚಿಕ್ಕಮಗಳೂರು ತಾಲೂಕಿನ ಕುರುಬರಹಳ್ಳಿ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ.ಮೃತರನ್ನು ಸ್ಥಳೀಯ ನಿವಾಸಿ ಗಣೇಶ್ (25) ಎಂದು ಗುರುತಿಸಲಾಗಿದೆ.

ಡಾನ್ಸ್ ಕ್ಲಾಸ್‌ಗೆ ಹೋಗಬೇಡವೆಂದಿದಕ್ಕೆ ಆತ್ಮಹತ್ಯೆ!

ಕೋಲಾರ: ಡಾನ್ಸ್ ಕ್ಲಾಸ್‌ಗೆ ಹೋಗಬೇಡವೆಂದು ಪೋಷಕರು ಗದರಿಸಿದ್ದರಿಂದ ಮನನೊಂದ ಯುವತಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಚಿನ್ನಕೋಟೆ ಗ್ರಾಮದ ಕೀರ್ತನಾ ಆತ್ಮಹತ್ಯೆ ಮಾಡಿಕೊಂಡ ಯುವತಿ. ಡ್ಯಾನ್ಸ್ ಎಂದರೆ ತುಂಬಾ ಇಷ್ಟಪಡುತ್ತಿದ್ದ ಕೀರ್ತನಾ ಡ್ಯಾನ್ಸ್ ಕ್ಲಾಸ್ ಗೆ ಹೋಗುತ್ತಿದ್ದಳು. ಆದರೆ ಈಕೆಗೆ ಡಾನ್ಸ್ ಕ್ಲಾಸ್ ಗೆ ಹೋಗಬೇಡವೆಂದು ಪೋಷಕರು ಗದರಿಸಿದ್ದಾರೆ. ಇದರಿಂದ ಮನನೊಂದ ಕೀರ್ತನಾ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಕುರಿತು ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Categories
ಶಿವಮೊಗ್ಗ

ವಿದ್ಯುತ್ ಕಂಬದ ಮೇಲೆ ಲೈನ್ ಮ್ಯಾನ್ ಸಾವು!

ವಿದ್ಯುತ್ ಕಂಬದ ಮೇಲೆ ಲೈನ್ ಮ್ಯಾನ್ ಸಾವು!
– ಶಿವಮೊಗ್ಗದ ಮಾಚೇನಹಳ್ಳಿಯಲ್ಲಿ ನಡೆದ ದುರಂತ
– ಸಾಗರ: ಲಕ್ಷ್ಮಿದೇವಿ ವಿಗ್ರಹ ಹಾನಿಗೊಳಿಸಿ ನಿಧಿ ಶೋಧ: ಇಬ್ಬರು ಅರೆಸ್ಟ್!
– ಶಿವಮೊಗ್ಗ: 6 ಜನರಿಗೆ ಚಾಕು ಇರಿತ ಪ್ರಕರಣ 9 ಜನರಿಗೆ ಜೈಲು ಶಿಕ್ಷೆ
– ಶಿವಮೊಗ್ಗ: ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಪಲ್ಟಿ

NAMMUR EXPRESS NEWS
ಶಿವಮೊಗ್ಗ: ವಿದ್ಯುತ್ ರಿಪೇರಿ ಕಾರ್ಯದ ಸಂದರ್ಭ ವಿದ್ಯುತ್ ಶಾಕ್‌ಗೆ ಒಳಗಾಗಿ ಲೈನ್ ಮ್ಯಾನ್ ಸಾವನ್ನಪ್ಪಿದ ಘಟನೆ ಶಿವಮೊಗ್ಗದ ಮಾಚೇನಹಳ್ಳಿಯಲ್ಲಿ ಭಾನುವಾರ ನಡೆದಿದೆ.ಮಾಚೇನಹಳ್ಳಿ ಇಂಡಸ್ಟ್ರಿಯಲ್ ಏರಿಯಾದ ಮೊದಲ ಅಡ್ಡರಸ್ತೆಯಲ್ಲಿ ಭಾನುವಾರ ಬೆಳಗ್ಗೆ ಘಟನೆ ಸಂಭವಿಸಿದೆ. ನಲ್ಲೂರಿನ ಕಿರಣ್ ಅವರಿಗೆ ವಿದ್ಯುತ್ ಶಾಕ್ ತಗುಲಿ ಮೃತಪಟ್ಟಿದ್ದಾರೆ. ಮತ್ತೊಬ್ಬ ಲೈನ್ ಮ್ಯಾನ್ ಸುನಿಲ್ ಎಂಬುವವರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ರಿಪೇರಿ ಕಾರ್ಯಕ್ಕಾಗಿ ಕಿರಣ್ ವಿದ್ಯುತ್ ಕಂಬದ ಮೇಲೆ ಹತ್ತಿದ್ದರು. ಈ ವೇಳೆ ವಿದ್ಯುತ್ ಶಾಕ್ ತಗುಲಿದೆ. ಶಬ್ದವಾಗಿದ್ದರಿಂದ ಸಮೀಪದ ಕೈಗಾರಿಕೆಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕರು ಸ್ಥಳಕ್ಕೆ ದೌಡಾಯಿಸಿದ್ದರು. ಆಂಬುಲೆನ್ಸ್‌ಗೆ ಕರೆಯಿಸಿ ಕಿರಣ್ ಅವರನ್ನು ಶಿವಮೊಗ್ಗದ ಆಸ್ಪತ್ರೆಗೆ ರವಾನಿಸಲಾಗಿತ್ತು. ಆ ಹೊತ್ತಿಗಾಗಲೆ ಅವರು ಕೊನೆಯುಸಿರೆಳೆದಿದ್ದರು ಎಂದು ಹೇಳಲಾಗುತ್ತಿದೆ.

ಲಕ್ಷ್ಮಿದೇವಿ ವಿಗ್ರಹ ಹಾನಿ, ನಿಧಿ ಶೋಧ: ಇಬ್ಬರು ಅರೆಸ್ಟ್!

ಸಾಗರ ತಾಲ್ಲೂಕಿನಲ್ಲಿ ನಿಧಿಶೋಧಕ್ಕಾಗಿ ದೇವಿ ವಿಗ್ರಹವನ್ನು ಹಾನಿ ಮಾಡಿ ಭೂಮಿ ಅಗೆದ ಪ್ರಕರಣವೊಂದು ದಾಖಲಾಗಿದೆ.
ಬೆಳಂದೂರು ಗ್ರಾಮದಲ್ಲಿ ಕಳೆದ ಮಂಗಳವಾರ ಈ ಘಟನೆ ನಡೆದಿದೆ. ಗ್ರಾಮದ ಹೊರವಲಯದಲ್ಲಿರುವ ಲಕ್ಷ್ಮೀ ದೇವರ ಮೂರ್ತಿಯನ್ನು ಹಾನಿ ಮಾಡಿದ್ದ ಆರೋಪಿಗಳು ಭೂಮಿಯನ್ನು ಅಗೆದು ನಿಧಿಶೋಧ ನಡೆಸಿದ್ದರು.ಈ ಸಂಬಂಧ ಗ್ರಾಮ ಸುಧಾರಣೆ ಸಮಿತಿ ಪ್ರಮುಖರು ಆನಂದಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.ಪ್ರಕರಣದ ತನಿಖೆ ಆರಂಭಿಸಿದ್ದ ಆನಂದಪುರ ಪೊಲೀಸರು, ಕೇಶವ, ಸಾಜು, ಅಂತೋನಿ, ಜನಾರ್ಧನ, ಸೋಮಶೇಖರ ಎಂಬುವವರ ವಿರುದ್ಧ ಕೇಸ್ ದಾಖಲಿಸಿ, ಈ ಪೈಕಿ ಕೇಶವ, ಅಂತೋನಿಯನ್ನು ಬಂಧಿಸಿದ್ದಾರೆ.

6 ಜನರಿಗೆ ಚಾಕು ಇರಿತ: 9 ಜನರಿಗೆ ಜೈಲು ಶಿಕ್ಷೆ

ಶಿವಮೊಗ್ಗದಲ್ಲಿ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಮಾಡಿಕೊಂಡು ಚಾಕು ಇರಿತಕ್ಕೆ ಕಾರಣವಾಗಿದ್ದ ಪ್ರಕರಣದಲ್ಲಿ 9 ಜನರನ್ನ ಬಂಧಿಸಲಾಗಿದೆ. ನ್ಯಾಯಾಂಗ ಬಂಧ ಕ್ಕೊಳಪಡಿಸಲಾಗಿದೆ. ಕಿರಣ್ ಹಾಗೂ ಅವರ ಸ್ನೇಹಿತರಾದ ಅಭಿಶೇಕ್, ಅರುಣ, ರಾಜು, ಅಣ್ಣಪ್ಪ ಹಾಗೂ ಕಿಶೋರ್ ಇತರರು ಶಿವಮೊಗ್ಗ ನೇತಾಜಿ ಸರ್ಕಲ್ ನಲ್ಲಿ ಭಗತ್ ಯುವಕರ ಸಂಘ ಹೆಸರಿನಲ್ಲಿ ಗಣಪತಿ ಪ್ರತಿಷ್ಟಾಪನೆ ಮಾಡಿದ್ದು, 21 ರಂದು ಮೊನ್ನೆ ರಾತ್ರಿ ಗಣಪತಿ ಪೆಂಡಾಲ್ ನಲ್ಲಿ ಅಂಧ ಯುವಕರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಅಂದು ರಾತ್ರಿ 9-00 ಗಂಟೆಗೆ ಕಾರ್ಯಕ್ರಮ ಮುಗಿದಾಗ ಪವನ್ ಎಂಬುವವನು ಕಿರಣ್ ಸ್ನೇಹಿತನಾದ ಅಭಿಶೇಕ್ ನೊಂದಿಗೆ ಜಗಳ ಮಾಡಿಕೊಳ್ಳುತ್ತಿದ್ದಾಗ ಕಿರಣ್ ಸಹ ಅಲ್ಲಿಗೆ ಹೋಗಿರುತ್ತಾರೆ ಅತನೊಂದಿಗೂ ಸಹ ಪವನ್ ಜಗಳ ಮಾಡಿಕೊಂಡು ಅಲ್ಲಿಂದ ಹೋಗಿರುತ್ತಾನೆ.ನಂತರ ಕಿರಣ್ ತಮ್ಮ ಸ್ನೇಹಿತರಾದ ಅಭಿಶೇಕ್, ಅರುಣ, ರಾಜು ಆಣಪ್ಪ ಹಾಗೂ ಕಿಶೋರ್ ರವರುಗಳು ರಾತ್ರಿ 11-00 ಗಂಟೆಯಿಂದ 11-30 ಗಂಟೆ ಮಧ್ಯಾವಧಿಯಲ್ಲಿ ಬಿ.ಎಸ್.ಎನ್.ಎಲ್, ಆಫೀಸ್ ಹಿಂಭಾಗದ ಮುನ್ಸಿಪಲ್ ಕಸ ಹಾಕುವ ಜಾಗದಲ್ಲಿ ಕುಳಿತುಕೊಂಡು ಮಾತನಾಡುತ್ತಿದ್ದಾಗ ಸುಮಾರು 3-4 ಬೈಕ್ ಗಳಲ್ಲಿ ಪವನ್ ಜೊತೆಯಲ್ಲಿ ಸುಮಾರು 7-8 ಜನ ಹುಡುಗರು ಗುಂಪು ಕಟ್ಟಿಕೊಂಡು ಒಂದು ಚಾಕುಗಳಿಂದ ಏಕಾಏಕಿ ದಾಳಿ ಮಾಡಲಾಗಿತ್ತು.

ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಪಲ್ಟಿ

ಶಿವಮೊಗ್ಗದ ಮಲವಗೊಪ್ಪದ ಬಳಿಯಲ್ಲಿ ಕಾರೊಂದು ಅಪಘಾತಕ್ಕೀಡಾಗಿದೆ. ಶಿವಮೊಗ್ಗದ ಕಡೆಗೆ ಬರುತ್ತಿದ್ದ ಕಾರು, ರಸ್ತೆಯಲ್ಲಿದ್ದ ಮಣ್ಣಿನ ದಿಬ್ಬಕ್ಕೆ ಬಡಿದು ಪಲ್ಟಿಯಾಗಿದ್ದು, ಜಖಂಗೊಂಡಿದೆ. ಕಾರಿನಲ್ಲಿದ್ದ ಮೂವರು ಪ್ರಯಾಣಿಕರು ಘಟನೆಯಲ್ಲಿ ಗಾಯಗೊಂಡಿದ್ದಾರೆ.

Categories
ತೀರ್ಥಹಳ್ಳಿ

ತೀರ್ಥಹಳ್ಳಿ ಸಹಕಾರಿ ದಿಗ್ಗಜ ಬಿ. ಎಸ್.ವಿಶ್ವನಾಥ್ ಇನ್ನಿಲ್ಲ!

ತೀರ್ಥಹಳ್ಳಿ ಸಹಕಾರಿ ದಿಗ್ಗಜ ಬಿ. ಎಸ್.ವಿಶ್ವನಾಥ್ ಇನ್ನಿಲ್ಲ!
– ಅನಾರೋಗ್ಯದಿಂದ ಬೆಂಗಳೂರಲ್ಲಿ ವಿಧಿವಶ :ನಾಳೆ ಅಂತ್ಯಕ್ರಿಯೆ:
– ಸಹಕಾರಿ ನಾಯಕ ಮಂಜುನಾಥ ಗೌಡ, ವಿಜಯದೇವ ಸೇರಿ ಅನೇಕ ಗಣ್ಯರ ಸಂತಾಪ

NAMMUR EXPRESS NEWS
ತೀರ್ಥಹಳ್ಳಿ/ಬೆಂಗಳೂರು: ಹಿರಿಯ ಸಹಕಾರಿ ನಾಯಕ, ತೀರ್ಥಹಳ್ಳಿ ಮೂಲದ ಬಿ. ಎಸ್. ವಿಶ್ವನಾಥ್ ಬೆಂಗಳೂರಲ್ಲಿ ವಿಧಿವಶರಾಗಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರಿನಲ್ಲಿ ಅವರು ಭಾನುವಾರ ವಿಧಿವಶರಾಗಿದ್ದಾರೆ. ತೀರ್ಥಹಳ್ಳಿ ಕಟ್ಟೆಹಕ್ಕಲು ಬಳಿಯ ಬಸರವಳ್ಳಿ ಮೂಲದ ವಿಶ್ವನಾಥ್ ತಮ್ಮ ಮಕ್ಕಳ ಜತೆ ಬೆಂಗಳೂರಲ್ಲಿ ನೆಲೆಸಿದ್ದರು. ಸಹಕಾರ ಕ್ಷೇತ್ರದಲ್ಲಿ ದೇಶದಲ್ಲೇ ತೀರ್ಥಹಳ್ಳಿ ಹೆಸರನ್ನು ಮೂಡಿಸಿದ್ದರು. ತೀರ್ಥಹಳ್ಳಿ ಪಿಎಲ್ ಡಿ ಬ್ಯಾಂಕ್ ನಿರ್ದೇಶಕರಾಗಿ, ಜಿಲ್ಲಾ ಸಹಕಾರ, ರಾಜ್ಯ ಸಹಕಾರ ಕ್ಷೇತ್ರದಲ್ಲಿ ತಮ್ಮದೇ ಸೇವೆ ನೀಡಿದ್ದರು.

ತೀರ್ಥಹಳ್ಳಿಯಿಂದ ರಾಷ್ಟ್ರ ಮಟ್ಟಕ್ಕೆ..

1978ರಲ್ಲಿ ರಾಷ್ಟ್ರೀಯ ಸಹಕಾರ ಮಹಾ ಮಂಡಲ ಅಧ್ಯಕ್ಷರಾಗಿ, ರಾಜ್ಯ ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷರಾಗಿ ಹಲವು ವರ್ಷ ಸೇವೆ ಸಲ್ಲಿಸಿದ್ದರು. ರಾಜ್ಯ ಸಹಕಾರ ಮಹಾ ಮಂಡಲ ಅಧ್ಯಕ್ಷರು ಸೇರಿ ಅನೇಕ ಸಹಕಾರ ಹುದ್ದೆ ಅಲಂಕರಿಸಿದ್ದರು.

ಮಂಜುನಾಥ ಗೌಡ ಸಂತಾಪ

ರಾಜ್ಯ ಸಹಕಾರ ಕ್ಷೇತ್ರಕ್ಕೆ ತುಂಬಲಾರದ ನಷ್ಟ. ನಮಗೆಲ್ಲ ಮಾರ್ಗದರ್ಶಕರಾಗಿದ್ದ ವಿಶ್ವನಾಥ್ ಅವರ ಸಾವು ತೀರ್ಥಹಳ್ಳಿ, ರಾಜ್ಯಕ್ಕೆ ತುಂಬಲಾರದ ನಷ್ಟ ಎಂದು ಮಾಜಿ ಅಪೇಕ್ಸ್ ಬ್ಯಾಂಕ್ ಅಧ್ಯಕ್ಷ ಮಂಜುನಾಥ ಗೌಡ ಸಂತಾಪ ಸೂಚಿಸಿದ್ದಾರೆ.

ತೀರ್ಥಹಳ್ಳಿ ಟಿಎಪಿಸಿಎಂಎಸ್ ಸೇರಿ ಎಲ್ಲರಿಗೂ ಸಹಕಾರ

ತೀರ್ಥಹಳ್ಳಿ ಟಿಎಪಿಸಿಎಂಎಸ್ ಸಮುದಾಯ ಭವನದ ನಿರ್ಮಾಣಕ್ಕೆ ಎಲ್ಲಾ ಮಾರ್ಗದರ್ಶನ, ಸಾಲ ಸೌಲಭ್ಯವನ್ನು ಕೊಡಿಸುವಲ್ಲಿ ವಿಶ್ವನಾಥ ಅವರ ಸೇವೆ ಅಪಾರ. ತೀರ್ಥಹಳ್ಳಿ ದೊಡ್ಡ ಸಾಧಕನನ್ನು ಕಳೆದುಕೊಂಡಿದೆ ಎಂದು ಟಿಎಪಿಸಿಎಂಎಸ್ ಅಧ್ಯಕ್ಷರಾದ ನಾಗರಾಜ್ ಶೆಟ್ಟಿ ಸಂತಾಪ ವ್ಯಕ್ತಪಡಿಸಿದ್ದಾರೆ.

ಆರಗ ಸೇರಿ ಗಣ್ಯರ ಸಂತಾಪ

ತೀರ್ಥಹಳ್ಳಿ ಶಾಸಕರಾದ ಆರಗ ಜ್ಞಾನೇಂದ್ರ, ಮಾಜಿ ಶಾಸಕ ಕಿಮ್ಮನೆ ರತ್ನಾಕರ್, ಸಹಕಾರಿ ನಾಯಕ ವಿಜಯದೇವ್ ಸೇರಿದಂತೆ ಎಲ್ಲಾ ಸಹಕಾರಿಗಳು ಸಂತಾಪ ಸೂಚಿಸಿದ್ದಾರೆ.

Categories
ಮಲ್ನಾಡ್

ಹಸು ಅಡ್ಡ ಬಂದು ಬಸ್ ಚರಂಡಿಗೆ ಬಿತ್ತು!

ಹಸು ಅಡ್ಡ ಬಂದು ಬಸ್ ಚರಂಡಿಗೆ ಬಿತ್ತು!
– ಶೃಂಗೇರಿ ಸಮೀಪದ ಗುಬ್ಬಿಬಯ್ಲು ಬಳಿ ಘಟನೆ
– ಅಪಾಯದಿಂದ ಪ್ರಯಾಣಿಕರು ಪಾರು

NAMMUR EXPRESS NEWS
ಶೃಂಗೇರಿ: ಹಸು ಅಡ್ಡ ಬಂದು ಬಸ್ ಚರಂಡಿಗೆ ಬಿದ್ದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ಸಮೀಪದ ಗುಬ್ಬಿಬಯ್ಲು ಬಳಿ ಭಾನುವಾರ ಬೆಳಗ್ಗೆ ನಡೆದಿದೆ. ಬಸ್ಸಿನಲ್ಲಿದ್ದ ಪ್ರಯಾಣಿಕರು ಅಪಾಯದಿಂದ ಪ್ರಯಾಣಿಕರು ಪಾರಾಗಿದ್ದಾರೆ.
ಗುಬ್ಬಿಬಯ್ಲು ಬಳಿ ಬಸ್ಸಿಗೆ ಹಸು ಅಡ್ಡ ಕಾರಣ ಚಾಲಕ ಬಸ್ ಅನ್ನೆ ಚರಂಡಿಗೆ ಹಾರಿಸಿದ್ದು ಚಾಲಕನ ಗೋ ಪ್ರೇಮ ಮೆಚ್ಚುಗೆಗೆ ಪಾತ್ರವಾಗಿದೆ.

Categories
ಮಾಹಿತಿ

ಮೊಬೈಲ್ ಕಳುವಾದ್ರೆ… ಏನು ಮಾಡಬೇಕು?

ಮೊಬೈಲ್ ಕಳುವಾದ್ರೆ… ಏನು ಮಾಡಬೇಕು?
– ಕರ್ನಾಟಕ ಪೊಲೀಸ್ ಇಲಾಖೆಯಿಂದ ಮೊಬೈಲ್ ಬ್ಲಾಕ್ ಮಾಡಲು ಹೊಸ ಅಪ್ಲಿಕೇಶನ್
– ಪೊಲೀಸರಿಗೆ ದೂರು ಕೂಡ ನೀಡಬಹುದು!

NAMMUR EXPRESS NEWS
ಮೊಬೈಲ್‌ ಇದ್ದಕ್ಕಿದ್ದ ಹಾಗೆ ಕಳೆದುಹೋಗುತ್ತದೆ. ಎಲ್ಲೋ ಬಿಟ್ಟು ಮರೆತು ಹೋದರೆ, ಅದನ್ನು ಇನ್ಯಾರೋ ತೆಗೆದುಕೊಂಡು ಹೋಗಿರುತ್ತಾರೆ. ಅಲ್ಲವೇ ಯಾರೋ ಮೊಬೈಲ್ ಕದ್ದು ಹೋಗಿರತ್ತಾರೆ. ಆಗ ಏನು ಮಾಡೋದು ಮೊಬೈಲ್ ಹುಡುಕೋದು ಹೇಗೆ? ಸಿಗುತ್ತಾ? ಕಂಪ್ಲೆಂಟ್ ಕೊಡಬೇಕಾ? ಪೊಲೀಸ್ ಸ್ಟೇಷನ್ ಗೆಲ್ಲಾ ಓಡಾಡಬೇಕಾ? ಯಾರು ಓಡಾಡುತ್ತಾರೆ. ಸಿಂಪಲ್ ದಾರಿ ಇಲ್ವಾ? ಹೀಗೆ ಕಾಡುವ ಹತ್ತಾರು ಪ್ರಶ್ನೆ ಪೊಲೀಸ್ ಇಲಾಖೆಯೇ ಉತ್ತರವನ್ನು ನೀಡುತ್ತಿದೆ. ನಿಮ್ಮ ಮೊಬೈಲ್‌ಗಳ ಕರ್ನಾಟಕ ಪೊಲೀಸ್‌ ಇಲಾಖೆ ಹೇಳೋದೇನು ಅನ್ನುವುದನ್ನ ನೋಡುವುದಾದರೆ ವಿವರ ಹೀಗಿದೆ.

ನಿಮ್ಮಫೋನ್ ಕಳೆದುಹೋಗಿದೆಯೇ?

ಹಾಗಿದ್ದಲ್ಲಿ, ಕೆಎಸ್ ಪಿ ಅಪ್ಲಿಕೇಶನ್ ನಲ್ಲಿ ನಿಮ್ಮ ಕಳೆದುಹೋದ ಫೋನ್ ಅನ್ನು ಬ್ಲಾಕ್ ಮಾಡಲು ಈ ಕೆಳಕಂಡ ವಿಧಾನಗಳನ್ನು ಅನುಸರಿಸಿ. ಕಳೆದು ಹೋದ ಮೊಬೈಲ್‌ನ್ನು ಬ್ಲಾಕ್‌ ಮಾಡಲು ಪೊಲೀಸ್ ಇಲಾಖೆ ತಿಳಿಸಿದ ಈ ವಿಧಾನವನ್ನು ಬಳಸಿ

– ಮೊದಲಿಗೆ ಗೂಗಲ್ ಪ್ಲೇಸ್ಟೋರ್ ನಿಂದ ಕೆಎಸ್ ಪಿ ಅಪ್ಲಿಕೇಶನ್ ನ್ನು ಡೌನ್‌ಲೋಡ್ ಮಾಡಿಕೊಂಡು ನಿಮ್ಮಹೆಸರನ್ನು ರಿಜಿಸ್ಟರ್ ಮಾಡಿಕೊಳ್ಳಿ.
– ಅದರಲ್ಲಿ ಮೊಬೈಲ್ ದೂರನ್ನು E-lost ನಲ್ಲಿ ವರದಿ ಮಾಡಲು ಕೆಎಸ್ ಪಿ ಅಪ್ಲಿಕೇಶನ್ ನ್ನು ಒಪೆನ್ ಮಾಡಿ ಅಲ್ಲಿರುವ E-lost ವರದಿ ಆಪ್ಷನ್ ನ್ನು ಆಯ್ಕೆ ಮಾಡಿ
– ನಂತರ E-lost ವರದಿಯನ್ನು ನೋಂದಾಯಿಸಿ’ ಆಪ್ಷನ್ ನ್ನು ಆಯ್ಕೆ ಮಾಡಿ
– ನಂತರ ನಿಮ್ಮ ಹೆಸರು, ವಿಳಾಸ, ಜಿಲ್ಲೆ ರಾಜ್ಯ ಮೊಬೈಲ್ ನಂಬರ್ ಹಾಗೂ ಸಾಧ್ಯವಾದರೆ ಇಮೆಲ್ ಐಡಿ ನೋಂದಾಯಿಸಿ, ನಂತರ ನೆಕ್ಸ್ಟ್ ಆಪ್ಷನ್ ನ್ನು ಆಯ್ಕೆ ಮಾಡಿ
– ನಂತರ ಮೊಬೈಲ್‌ನ ಬಿಲ್ ಇದ್ದರೆ ಅದನ್ನು ಅಪ್‌ಲೋಡ್ ಮಾಡಿ ನಂತರ ಸೆಲೆಕ್ಟ್ ಆರ್ಟಿಕಲ್ ಆಪ್ಷನ್ ನ್ನು ಆಯ್ಕೆ ಮಾಡಿ
– ನಂತರ “ಮೊಬೈಲ್ ” ಆಪ್ಷನ್ ನ್ನು ಆಯ್ಕೆ ಮಾಡಿ
– ನಂತರ ಮೊಬೈಲ್ ಮಾಹಿತಿಯನ್ನು ನೋಂದಾಯಿಸಿ ನಂತರ ಆಡ್ ಆಪ್ಷನ್ ನ್ನು ಆಯ್ಕೆ ಮಾಡಿ
– ನಂತರ ಮೊಬೈಲ್ ಕಳೆದುಹೋದ ದಿನಾಂಕ, ಸಮಯ, ಸ್ಥಳದ ಮಾಹಿತಿಯನ್ನು ಹಾಗೂ ಕಳೆದು ಹೋದ ಬಗೆಯ ಬಗ್ಗೆ ಮಾಹಿತಿ ನೋಂದಾಯಿಸಿ ಸುಭ್ಮಿತ್ ಆಪ್ಷನ್ ನ್ನು ಆಯ್ಕೆ ಮಾಡಿ ಕೋನೆಗೆ ರಶೀದಿಯನ್ನು ಪಡೆಯಿರಿ.