Categories
ತೀರ್ಥಹಳ್ಳಿ

ಅರ್. ಎಂ ದಾಳಿ ಖಂಡಿಸಿ ನಾಳೆ ಪ್ರತಿಭಟನೆ!

ಅರ್. ಎಂ ದಾಳಿ ಖಂಡಿಸಿ ನಾಳೆ ಪ್ರತಿಭಟನೆ!
– ಸಮಸ್ತ ಕಾಂಗ್ರೆಸ್ ಕಾರ್ಯಕರ್ತರಿಗೆ ಸ್ವಾಗತ
– ತನಿಖಾ ಸಂಸ್ಥೆ ಬಳಸಿ ಕಿರುಕುಳ: ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ

NAMMUR EXPRESS NEWS
ತೀರ್ಥಹಳ್ಳಿ: ಕಾಂಗ್ರೆಸ್ ಪಕ್ಷದ ಮುಖಂಡ, ಶಿವಮೊಗ್ಗ ಜಿಲ್ಲಾ ಸಹಕಾರಿ ಬ್ಯಾಂಕ್ ಅಧ್ಯಕ್ಷರಾದ ಡಾ.ಆರ್ ಎಂ ಮಂಜುನಾಥ ಗೌಡರ ಮನೆಗಳ ಮೇಲೆ ಕೇಂದ್ರ ಇಡಿ ಇಲಾಖೆಯು ದಾಳಿ ಮಾಡಿದ್ದು ಕೇಂದ್ರದ ಈ ದಮನಕಾರಿ ನೀತಿಯನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಅ.6ರಂದು ತೀರ್ಥಹಳ್ಳಿಯಲ್ಲಿ ಪ್ರತಿಭಟನಾ ಸಭೆ ಹಮ್ಮಿಕೊಂಡಿದೆ. ತೀರ್ಥಹಳ್ಳಿ ಪಟ್ಟಣದ ಗಾಂಧಿಭವನದಲ್ಲಿ ಸಭೆ ಸೇರಿ ನಂತರ ಪಾದಯಾತ್ರೆಯ ಮೂಲಕ ತಾಲ್ಲೂಕು ಕಛೇರಿಗೆ ತೆರಳಿ ಮನವಿ ಪತ್ರ ಸಲ್ಲಿಸಲಾಗುದು. ಈ ಪ್ರತಿಭಟನೆಗೆ ಪಕ್ಷದ ಎಲ್ಲಾ ಮುಖಂಡರು ಕಾರ್ಯಕರ್ತರು ಅಭಿಮಾನಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆಸ್ತೂರು ಮಂಜುನಾಥ್ ಮತ್ತು ಮುಡುಬ ರಾಘವೇಂದ್ರ ಮತ್ತು ಮಂಜುನಾಥ ಗೌಡ ಅಭಿಮಾನಿಗಳು ಎಲ್ಲರನ್ನು ಆಗಮಿಸುವಂತೆ ಮನವಿ ಮಾಡಿದ್ದಾರೆ.

Categories
ಮಂಗಳೂರು

ಪ್ರವೀಣ್ ನೆಟ್ಟಾರು ಹತ್ಯೆ ಆರೋಪಿಗಳಿಗಿಲ್ಲ ಜಾಮೀನು!

ಪ್ರವೀಣ್ ನೆಟ್ಟಾರು ಹತ್ಯೆ ಆರೋಪಿಗಳಿಗಿಲ್ಲ ಜಾಮೀನು!
– ಅರ್ಜಿ ನಿರಾಕರಿಸಿದ ಹೈಕೋರ್ಟ್
– ಮಹೇಶ್ ತಿಮರೋಡಿ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ

NAMMUR EXPRESS NEWS
ಮಂಗಳೂರು: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧ ಮೂವರು ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದೆ ನ್ಯಾಯಮೂರ್ತಿ ಎಚ್.ಬಿ.ಪ್ರಭಾಕರ್ ಶಾಸ್ತ್ರಿ ನ್ಯಾ. ಅನಿಲ್ ಕೆ.ಕಟ್ಟಿ ಅವರಿದ್ದ ವಿಭಾಗೀಯ ಪೀಠವು ಪ್ರವೀಣ್ ನೆಟ್ಟಾರುಹತ್ಯೆ ಸಂಬಂಧ ಸಂಚಿನಲ್ಲಿ ಆರೋಪಿಗಳು ಭಾಗಿಯಾದ ಆರೋಪವಿದೆ ಹೀಗಾಗಿ ಕೆ.ಇಸ್ಮಾಯಿಲ್ ಶಫಿ, (ಆರೋಪಿ 9), ಕೆ.ಮೊಹಮ್ಮದ್ ಇಟ್ಬಾಲ್ (ಆರೋಪಿ 10) ಹಾಗೂ ಎಂ.ಶಾಹೀದ್ (ಆರೋಪಿ 11) ಸಲ್ಲಿಸಿದ್ದ ಜಾಮೀನು ಅರ್ಜಿ ವಜಾಗೊಳಿಸಿದೆ.

ಏನಿದು ಘಟನೆ?:

ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ 2022ರ ಜುಲೈ 26 ರಂದು ಬಿಜೆಪಿ ಯುವ ಮುಂಖಡ ಪ್ರವೀಣ್ ನೆಟ್ಟಾರು ಅವರನ್ನು ಮಾರಕಾಸ್ತ್ರಗಳಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿತ್ತು ಈ ಪ್ರಕರಣ ಸಂಬಂಧ ಪ್ರಮುಖ ಆರೋಪಿಗಳು ಇನ್ನೂ ಪತ್ತೆಯಾಗಿಲ್ಲ. ಮೂವರು ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಹೈಕೋರ್ಟ್‌ ನಿರಾಕರಿಸಿದೆ.

ಮಹೇಶ್ ಶೆಟ್ಟಿಯ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ

ಬೆಂಗಳೂರು : ನ್ಯಾಯಾಲಯದ ಆದೇಶದ ಉಲ್ಲಂಘಿಸಿ, ನಿರಂತರ ನ್ಯಾಯಲಯದ ತೀರ್ಪಿನ ವಿರುದ್ಧ ಭಾಷಣ ಮಾಡುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿ ಆಂಡ್ ಗ್ಯಾಂಗ್ ಗೆ ಹೈಕೋರ್ಟ್ ಹಾಗೂ ಸಿಟಿ ಸಿವಿಲ್ ಕೋರ್ಟ್ ಈ ಮೊದಲೇ ಎಚ್ಚರಿಕೆ ನೀಡಿತ್ತು, ಆದರೆ, ಅದನ್ನೂ ಮೀರಿ ಭಾಷಣ ಮಾಡುತ್ತಿರುವ ತಿಮರೋಡಿ ಆಂಡ್ ಗ್ಯಾಂಗ್ ಗೆ ಇದೀಗ ಬಹುದೊಡ್ಡ ಸಂಕಷ್ಟ ಎದುರಾಗುವ ಸಾದ್ಯತೆ ದಟ್ಟವಾಗಿದೆ. ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ನ್ಯಾಯಾಂಗ ನಿಂದನೆ ಮಾಡುತ್ತಿರುವುದರ ವಿರುದ್ಧ ಕ್ರಮದ ಕುರಿತು ಡಿ.ಜಿ. ಹಾಗೂ ಐಜಿಪಿ ) ಉನ್ನತ ಪೋಲೀಸ್ ಅಧಿಕಾರಿಗಳಿಗೆ ಸೂಚನೆಗೆ ಅರ್ಜಿ ದಾಖಲಾಗಿದ್ದು, ಭಾರೀ ಸಂಕಷ್ಟ ಎದುರಾಗಿದೆ. ಅಕ್ಟೋಬರ್ 09 ರಂದು ಈ ಕುರಿತುಆಕ್ಷೇಪಣೆ ಸಲ್ಲಿಸಲು ಮಹೇಶ್ ಶೆಟ್ಟಿ ತಿಮರೋಡಿಗೆ ನ್ಯಾಯಾಲಯ ಸೂಚಿಸಿದೆ. ಇನ್ನೊಂದು ಪ್ರತ್ಯೇಕ ಪ್ರಕರಣದಲ್ಲಿ ಮಹೇಶ್ ಶೆಟ್ಟಿ ತಿಮರೋಡಿ, ವಿಠಲ ಗೌಡ, ಸೋಮನಾಥ ನಾಯಕ್ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲಾಗಿತ್ತು. ಈ ಬಗ್ಗೆಯೂ ಉತ್ತರ ನೀಡುವಂತೆ ನ್ಯಾಯಲಯ ಸೂಚಿಸಿದೆ

Categories
ಕರಾವಳಿ

ಕರಾವಳಿ ಟಾಪ್ ನ್ಯೂಸ್

ಗುದದ್ವಾರದಲ್ಲಿ ಚಿನ್ನ ಬಚ್ಚಿಟ್ಟುಕೊಂಡ ಮಹಿಳೆ!
– 20.41 ಲಕ್ಷ ರೂ. ಮೌಲ್ಯದ ಚಿನ್ನ ಇಟ್ಟುಕೊಂಡಿದ್ದಳು
– ಮಂಗಳೂರು ವಿಮಾನ ನಿಲ್ದಾಣದಲ್ಲಿ ಘಟನೆ
– ಹೆಬ್ರಿ: ಫ್ಯಾಕ್ಟರಿಯಿಂದ ಗೇರು ಬೀಜ ಕಳವು
– ಪುತ್ತೂರು: ಅಪರಿಚಿತ ಶವ ಪತ್ತೆ
– ಉಡುಪಿ: ಗೋವುಗಳ ಸರಣಿ ಹತ್ಯೆ ಖಂಡಿಸಿ ಬಜರಂಗದಳದಿಂದ ಪ್ರತಿಭಟನೆ
– ಮಂಗಳೂರು: ತಪ್ಪಿದ ದುರಂತ

NAMMUR EXPRESS NEWS
ಮಂಗಳೂರು: ಗುದದ್ವಾರದಲ್ಲಿ ಚಿನ್ನ ಕಳ್ಳ ಸಾಗಣೆ ಮಾಡುತ್ತಿದ್ದ ಮಹಿಳಾ ಪ್ರಯಾಣಿಕರೊಬ್ಬರು ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದಿದ್ದಾರೆ. ವಿದೇಶದಿಂದ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಒಟ್ಟು 20.41 ಲಕ್ಷ ರೂ. ಮೌಲ್ಯದ ಚಿನ್ನವನ್ನು ಮಂಗಳೂರು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಅ.4 ರಂದು ದುಬೈನಿಂದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಮಹಿಳೆಯ ತಪಾಸಣೆ ವೇಳೆ ಡಿಟೆಕ್ಟರ್ ನಲ್ಲಿ ಬೀಪ್ ಶಬ್ದ ಬಂದಿದ್ದು ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿರುವುದು ಧೃಡಪಟ್ಟಿದೆ. ಎರಡು ಗೋಳಾಕಾರದ ಕ್ಯಾಪ್ಸುಲ್ ಮಾದರಿಗಳಲ್ಲಿ ಪೇಸ್ಟ್ ರೂಪದ ಚಿನ್ನವನ್ನು ಗುದದ್ವಾರದಲ್ಲಿ ಬಚ್ಚಿಟ್ಟುಕೊಂಡು ಸಾಗಣೆ ಮಾಡುತ್ತಿದ್ದು, 24 ಕ್ಯಾರೆಟ್‌ನ 345 ಗ್ರಾಂ ಚಿನ್ನ ಪತ್ತೆಯಾಗಿದ್ದು, ಇದರ ಮೌಲ್ಯ 20,41,650 ರೂ. ಎಂದು ಅಂದಾಜಿಸಲಾಗಿದೆ.

ಫ್ಯಾಕ್ಟರಿಯಿಂದ ಗೇರು ಬೀಜ ಕಳವು!

ಹೆಬ್ರಿ : ವರಂಗ ಗ್ರಾಮದ ಮುನಿಯಾಲಿನಲ್ಲಿರುವ ಗುರುರಾಜ್ ಎಕ್ಸ್‌ಪೋರ್ಟ್ ಗೇರು ಬೀಜ ಫ್ಯಾಕ್ಟರಿಯಿಂದ 24 ಲಕ್ಷ ರೂ. ಮೌಲ್ಯದ ಗೇರು ಬೀಜ ಕಳವು ಸಂಸ್ಥೆಯ ಪಾಲುದಾರ ಎಂ.ಅರವಿಂದ ಮಲ್ಯ ಸೆ. 18ರಂದು ಸಂಜೆ 7 ಗಂಟೆಗೆ ಫ್ಯಾಕ್ಟರಿಗೆ ಬೀಗ ಹಾಕಿ ಮನೆಗೆ ಹೋಗಿದ್ದು, ಸೆ. 20ರಂದು ಬೆಳಗ್ಗೆ ಫ್ಯಾಕ್ಟರಿಗೆ ಬಂದು ನೋಡಿದಾಗ ಗೇರುಬೀಜದ ಬಾಕ್ಸ್‌ಗಳು ಕಡಿಮೆಯಾಗಿರುವುದು ಗಮನಕ್ಕೆ ಬಂದಿದೆ, ಸಂಶಯ ಬಂದು ಪರಿಶೀಲಿಸಿದಾಗ ಸುಮಾರು 3570 ಕೆಜಿ (1 ಟನ್ 10 ಕೆಜಿ ಗೇರು ಬೀಜ) ಗೇರು ಬೀಜ ಕಳವು ಆಗಿದು ತಿಳಿದುಬಂದಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಪುತ್ತೂರಿನಲ್ಲಿ ಅಪರಿಚಿತ ಶವ ಪತ್ತೆ!

ಪುತ್ತೂರು : ಪುತ್ತೂರು ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರುಗಡೆ ಸುಮಾರು 60 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಬಸವರಾಜ ಕಲ್ಲಪ್ಪ ಜಂಲಾಳಿ ಮೃತ ವ್ಯಕ್ತಿ. ಇವರು ಗದಗ ಮೂಲದ ವ್ಯಕ್ತಿ ಎಂದು ತಿಳಿದು ಬಂದಿದೆ.

ಗೋವುಗಳ ಸರಣಿ ಹತ್ಯೆ ಖಂಡಿಸಿ ಪ್ರತಿಭಟನೆ!

ಉಡುಪಿ: ಜಿಲ್ಲೆಯ ಕೊಲ್ಲೂರಿನ ಬೆಳ್ಳಾಲ ಸಮೀಪ ನಾಲ್ಕು ದಿನಗಳ ಹಿಂದೆ ನಡೆದ ಗೋವುಗಳ ಸರಣಿ ಹತ್ಯೆಯನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್‌ ಬಜರಂಗದಳ ಬೈಂದೂರು ಪ್ರಖಂಡದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಬಳಿಕ ಆರೋಪಿ ನರಸಿಂಹ ಕುಲಾಲ್ ನನ್ನನ್ನು ತಕ್ಷಣ ಬಂಧಿಸಲು ಕೊಲ್ಲೂರು ಪೊಲೀಸ್‌ ಠಾಣೆಗೆ ತೆರಳಿ ಮನವಿ ಸಲ್ಲಿಸಿ, ಠಾಣಾಧಿಕಾರಿ ಮನವಿ ಸಲ್ಲಿಸಿದ್ದಾರೆ. ನಂತರ ವಿಶ್ವ ಹಿಂದೂ ಪರಿಷತ್‌ ಬಜರಂಗದಳ ಬೈಂದೂರು ಪ್ರಖಂಡದ ನೇತೃತ್ವದ ಗೋವುಗಳನ್ನು ಕಳೆದುಕೊಂಡ ಸಂತ್ರಸ್ತ ಮನೆಗಳಿಗೆ ತೆರಳಿ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಿದೆ.

ತಪ್ಪಿದ ದುರಂತ ಬಾರಿ ದೊಡ್ಡ ಅವಘಡ!

ಮಂಗಳೂರು : ಮಂಗಳೂರಿನ ತುಂಬೆ ಬಳಿ ಲಾರಿಯೊಂದಕ್ಕೆ ವಿದ್ಯುತ್ ತಂತಿ ಸಿಲುಕಿ, ವಿದ್ಯುತ್ ಕಂಬವೊಂದು ಕಿತ್ತು ರಸ್ತೆಗೆ ವಾಲಿದ ಘಟನೆ ನಡೆದಿದ್ದು, ಅದೃಷ್ಟವಾಶತ್ ಯಾವುದೇ ಅಪಾಯವಿಲ್ಲದೇ ಹಲವು ವಾಹನ ಸವಾರರು ಪಾರಾಗಿ ಹೋಗಿದ್ದಾರೆ. ಬೆಂಗಳೂರಿನಿಂದ ಎಚ್‌ಪಿಸಿಎಲ್‌ಗೆ ತೆರಳುತ್ತಿದ್ದ ಲಾರಿಯ ಚಾಲಕ ತನ್ನ ತುಂಬೆ ಬಳಿ ಲಾರಿಯ ಹಿಂಭಾಗದಲ್ಲಿ ಲೋಡ್ ಆಗಿದ್ದ ಕೆಲವು ವಸ್ತುಗಳಿಗೆ ರಸ್ತೆ ಬದಿಯ ವಿದ್ಯುತ್ ಕಂಬದ ತಂತಿಗಳು ಸಿಲುಕಿದೆ. ಈ ಬಗ್ಗೆ ಅರಿವಿಲ್ಲದೇ ಚಾಲಕ ಮುಂದಕ್ಕೆ ಚಲಿಸಿದಾಗ ವಿದ್ಯುತ್‌ ತಂತಿಗಳು ಏಳಿದಾಡಿದಂತಾಗಿ ಕಂಬವು ರಸ್ತೆಗೆ ವಾಲಿಕೊಂಡಿದ್ದು, ಜೊತೆಗೆ ವಿದ್ಯುತ್ ತಂತಿಗಳು ರಸ್ತೆಗೆ ಬಿದ್ದವು. ಹಲವು ವಾಹನ ಸಂಚರಿಸುತ್ತಿದ್ದು, ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ.

Categories
ಶಿವಮೊಗ್ಗ

ರಾಜಕೀಯ ದಾಳಿ: ಅರ್.ಎಂ ಅಭಿಮಾನಿಗಳ ಆಕ್ರೋಶದ ಕಿಚ್ಚು!

ರಾಜಕೀಯ ದಾಳಿ: ಅರ್.ಎಂ ಅಭಿಮಾನಿಗಳ ಆಕ್ರೋಶದ ಕಿಚ್ಚು!
– ತೀರ್ಥಹಳ್ಳಿ ಸೇರಿ ಹಲವೆಡೆ ಡಾ. ಅರ್.ಎಂ. ಮಂಜುನಾಥ ಗೌಡರ ಮನೆ ಮೇಲೆ ದಾಳಿ
– ಡಿಕೆಶಿ ಅಭಿಮಾನಿ ಬಳಗದ ಅಧ್ಯಕ್ಷರಾದ ನಾಗೇಶ್ ಮೊಗವೀರ, ವಿಶ್ವನಾಥ್ ಕೌರಿ ಆಕ್ರೋಶ

NAMMUR EXPRESS NEWS
ಶಿವಮೊಗ್ಗ: ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಆರ್ ಎಂ ಮಂಜುನಾಥ್ ಗೌಡ ಅವರ ತೀರ್ಥಹಳ್ಳಿ, ಕರಕುಚ್ಚಿ ಮನೆ ಮೇಲೆ ಇಡಿ ದಾಳಿ ನಡೆದಿದ್ದು, ಇದೊಂದು ರಾಜಕೀಯ ಪ್ರೇರಿತ ದಾಳಿ. ವಿರೋಧ ಪಕ್ಷ ಬಿಜೆಪಿ ರಾಜ್ಯದಲ್ಲಿ ಪ್ರಬಲ ಕಾಂಗ್ರೆಸ್ ನಾಯಕರ ಮೇಲೆ ದಾಳಿ ಮಾಡಿಸುತ್ತಿದೆ. ಶಿವಮೊಗ್ಗ ಜಿಲ್ಲೆಯ ಪ್ರಭಾವಿ ನಾಯಕ ಆರ್ ಎಂಎಂ ಅವರನ್ನು ಮಟ್ಟ ಹಾಕಲು ಇಡಿ ದಾಳಿ ನಡೆಸಿದ್ದಾರೆ. ತೀರ್ಥಹಳ್ಳಿಯಲ್ಲಿ ಅ.6ಕ್ಕೆ ಅವರ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಂಡಿದ್ದು ಇಂತಹ ರಾಜಕೀಯ ಮಾಡಬಾರದು. ಪಕ್ಷಾತೀತವಾಗಿ ಮಂಜುನಾಥ ಗೌಡ ಎಲ್ಲರಿಗೂ ಸಹಕಾರ ಮಾಡಿದ್ದಾರೆ ಎಂದು ಡಿಕೆಶಿ ಅಭಿಮಾನಿ ಬಳಗದ ತೀರ್ಥಹಳ್ಳಿ ಅಧ್ಯಕ್ಷ ನಾಗೇಶ್ ಮೊಗವೀರ, ಹೊಸನಗರ ಅಧ್ಯಕ್ಷ ವಿಶ್ವನಾಥ ಕೌರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಹಕಾರಿ ಧುರೀಣ ಆರ್ ಎಂ ಮಂಜುನಾಥ್ ಗೌಡ ಅವರ ಮನೆ ಮೇಲೆ ನಡೆದ ಇ ಡಿ ದಾಳಿಯು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ರಾಜಕೀಯ ಪ್ರೇರಿತವಾಗಿದ್ದು, ರಾಜಕೀಯವಾಗಿ ಅವರನ್ನು ಎದುರಿಸಲು ಸಾಧ್ಯವಾಗದೆ ಇಂತಹ ದಾಳಿಯನ್ನು ನಡೆಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷರಾಗುವ ಸಂದರ್ಭದಲ್ಲಿ ಸಾವಿರಾರು ಜನ ಇವರ ಬೆಂಬಲಕ್ಕೆ ನಿಲ್ಲುವುದರ ಜೊತೆಗೆ ಕೆಲವು ತಾಲ್ಲೂಕುಗಳಲ್ಲಿ ಇವರಿಗೆ ಅಭಿನಂದನೆಗಳ ಮಹಾಪೂರ ಒದಗಿರುವುದನ್ನು ನೋಡಿ ವಿರೋಧ ಪಕ್ಷದವರು ಆರ್ ಎಂಎಂ ರನ್ನು ಮಟ್ಟ ಹಾಕಲು ಇಡಿ ದಾಳಿ ನಡೆಸಿದ್ದಾರೆ ಎಂದರು.

ಡಾ. ಮಂಜುನಾಥ ಗೌಡ ಅವರು ಇಂತಹ ದಾಳಿಗೆ ಬಗ್ಗುವುದು ಇಲ್ಲ ಕುಗ್ಗುವುದು ಇಲ್ಲ. ಕೆಲ ವರ್ಷಗಳ ಹಿಂದೆ ಸುಳ್ಳು ಆರೋಪಗಳನ್ನು ಹೊರಿಸಿ ಅವರ ಮೇಲೆ ಗೂಬೆ ಕೂರಿಸುವ ಯತ್ನ ನಡೆದಿತ್ತು ಅದನ್ನು ಸಮರ್ಥವಾಗಿ ಎದುರಿಸಿ ನ್ಯಾಯಲಯದಲ್ಲಿಕ್ಲೀನ್ ಚಿಟ್ ಪಡೆದು ಮತ್ತೆ ಫಿನಿಕ್ಸ್ ನಂತೆ ಎದ್ದು ಬಂದಿರುವ ಗೌಡರ ಅಭೂತಪೂರ್ವ ಜನಬೆಂಬಲಕ್ಕೆ ಬೆದರಿರುವ ವಿರೋಧಿಗಳು ಇಂತಹ ದಾಳಿಯ ಮೂಲಕ ಮಟ್ಟ ಹಾಕಲು ಯತ್ನಿಸುತಿದ್ದಾರೆ ಎಂದು ಆರೋಪಿಸಿದ್ದಾರೆ.

Categories
ತೀರ್ಥಹಳ್ಳಿ

ತೌರೂರು ಸಂಮಾನ ಕಾರ್ಯಕ್ರಮ ಮುಂದೂಡಿಕೆ!

ತೌರೂರು ಸಂಮಾನ ಕಾರ್ಯಕ್ರಮ ಮುಂದೂಡಿಕೆ!
– ಮಂಜುನಾಥ್ ಗೌಡರ ಮನೆ ಮೇಲೆ ಇಡಿ ದಾಳಿ ಮುಂದುವರಿಕೆ
– ಶೀಘ್ರದಲ್ಲಿ ಕಾರ್ಯಕ್ರಮ: ಬಸವಾನಿ ವಿಜಯದೇವ್‌ ಹೇಳಿಕೆ

NAMMUR EXPRESS NEWS
ತೀರ್ಥಹಳ್ಳಿ: ಸಹಕಾರಿ ನಾಯಕ ಡಾ.ಅರ್.ಎಂ.ಮಂಜುನಾಥ ಗೌಡ ಅವರಿಗೆ ಅ.6ಕ್ಕೆ ಹಮ್ಮಿಕೊಂಡಿದ್ದ ತೌರೂರು ಸಂಮಾನ ಕಾರ್ಯಕ್ರಮ ಮುಂದೂಡಲಾಗಿದೆ. ರಾಜ್ಯ ಸಹಕಾರಿ ಮುಖಂಡ, ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತರಾದ, ಶಿವಮೊಗ್ಗ ಜಿಲ್ಲಾ ಸಹಕಾರಿ ಬ್ಯಾಂಕ್‌ ಅಧ್ಯಕ್ಷ ಡಾ.ಆರ್.ಎಂ.ಮಂಜುನಾಥ ಗೌಡರಿಗಾಗಿ ಅಕ್ಟೋಬರ್‌ 6ರ ಶುಕ್ರವಾರ ಬೆಳಿಗ್ಗೆ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಆಯೋಜಿಸಿದ್ದ “ತೌರೂರ ಸಂಮಾನ” ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇದೀಗ ಕಾರ್ಯಕ್ರಮ ಮುಂದೂಡಲಾಗಿದೆ ಎಂದು ಸಹಕಾರಿ ವೇದಿಕೆ ಅಧ್ಯಕ್ಷ ಬಸವಾನಿ ವಿಜಯದೇವ್‌ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿರುವ ಡಾ.ಆರ್.‌ಎಂ. ಮಂಜುನಾಥ ಗೌಡರು ವಿವಿಧ ರೀತಿಯ ದಾಖಲೆಗಳನ್ನು ಪೂರೈಸುವ ಹಿನ್ನಲೆಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸುವುದು ಸಾಧ್ಯವಾಗುತ್ತಿಲ್ಲ. ಸರ್ಕಾರದ ಹಂತದಲ್ಲಿ ದಾಖಲೆಗಳನ್ನು ಪೂರೈಸಬೇಕು ಹಾಗೂ ಶೋಧಕ್ಕೆ ಬಂದಿರುವ ಅಧಿಕಾರಿಗಳು ಸಹಕಾರ ನೀಡಬೇಕಿದ್ದು ವಿವಿಧ ಕಡೆಗಳಲ್ಲಿ ನಡೆದಿರುವ ಶೋಧ ದಾಖಲೆಗಳಿಗೆ ಸಹಿ ಒದಗಿಸಬೇಕು. ಹಾಗಾಗಿ ಈ ಒತ್ತಡದ ಸಂದರ್ಭದಲ್ಲಿ ಸ್ವತಃ ಮಂಜುನಾಥ ಗೌಡರೇ ಈ ಕಾರ್ಯಕ್ರಮದಲ್ಲಿ ಭಾಗಿಯಾಗುವುದು ಬಹುತೇಕ ಅನುಮಾನವಾಗಿರುವ ಕಾರಣ ಅನಿವಾರ್ಯವಾಗಿ ಈ ಕಾರ್ಯಕ್ರಮ ಮುಂದೂಡಲಾಗುತ್ತಿದ್ದು, ನಿಗಧಿ ಪಡಿಸಿದಂತೆ ಶೀಘ್ರದಲ್ಲಿ ಮತ್ತೊಂದು ದಿನಾಂಕದಲ್ಲಿ ಅದ್ದೂರಿಯಾಗಿ ನೆರವೇರಲಿದೆ ಎಂದು ಬಸವಾನಿ ವಿಜಯದೇವ್‌ ತಿಳಿಸಿದ್ದಾರೆ.

ತೀರ್ಥಹಳ್ಳಿ, ಕರಕುಚ್ಚಿಯಲ್ಲಿ ಮುಂದುವರಿದ ಶೋಧ

ತೀರ್ಥಹಳ್ಳಿ, ಶಿವಮೊಗ್ಗ, ಕರಕುಚ್ಚಿ, ಬೆಂಗಳೂರು ಸೇರಿ ಎಲ್ಲೆಡೆ ಶೋಧ ಮುಂದುವರಿದಿದೆ. ಯಾವುದೇ ದಾಖಲೆ ಸಿಕ್ಕಿಲ್ಲ ಎನ್ನಲಾಗಿದೆ.

Categories
ಹಾವೇರಿ

ಸರ್ಕಾರಿ ಬಸ್ಸಲ್ಲಿ ಕೋತಿ ಜಾಲಿ ರೈಡ್!

ಸರ್ಕಾರಿ ಬಸ್ಸಲ್ಲಿ ಕೋತಿ ಜಾಲಿ ರೈಡ್!
– ವಿಂಡೋ ಸೀಟ್‌ನಲ್ಲಿ 30 ಕಿ.ಮೀ ಟ್ರಾವೆಲ್
– ತಣ್ಣಗೆ ಬೀಸುತ್ತಿದ್ದ ಗಾಳಿ ಸವಿಯುತ್ತಾ ಎಂಜಾಯ್

NAMMUR EXPRESS NEWS
ಹಾವೇರಿ: ಮಂಗನಾಟಕ್ಕೆ ಮನಸೋಲದವರು ಯಾರಿದ್ದಾರೆ? ಅದೆಷ್ಟೇ ಕಿಟಲೆ ಮಾಡಲಿ, ಮಂಗಗಳ ಬುದ್ದಿಗೆ ಎಲ್ಲರೂ ತಲೆಬಾಗಲೇಬೇಕು. ಅವುಗಳ ಆಟ-ತುಂಟಾಟವು ನಮ್ಮಲ್ಲಿ ಸಿಟ್ಟು ತರಿಸುವುದಕ್ಕಿಂತ ನಗು ತರಿಸುವುದೇ ಹೆಚ್ಚು. ಸದ್ಯ ಹಾವೇರಿಯಲ್ಲಿ ಫ್ರೀ ಬಸ್ ಹತ್ತಿದ ಕೋತಿಯೊಂದು ಯಾರ ಭಯವಿಲ್ಲದೇ ಬಸ್‌ನಲ್ಲಿ ಪ್ರಯಾಣಿಕರೊಂದಿಗೆ ಜಾಲಿ ರೈಡಿಂಗ್ ಮಾಡಿದೆ. ಹಾವೇರಿಯಿಂದ ಹಿರೇಕೆರೂರಿಗೆ ಹೊರಟಿದ್ದ ಸಾರಿಗೆ ಬಸ್ ಹತ್ತಿದ ಕೋತಿಯು ಬಸ್ ಕೊನೆಯ ಸೀಟ್‌ಗೆ ಹೋಗಿ ವಿಂಡೋ ಸೀಟ್‌ನಲ್ಲಿ ಕುಳಿತು ಪ್ರಯಾಣಿಸಿದೆ. ಡ್ರೈವರ್ ಏನಾದರೂ ಬ್ರೇಕ್ ಹಾಕಿದಾಗ ಬಿದ್ದು ಬಿಟ್ಟರೆ ಎಂದು ಬಲಗೈಯಲ್ಲಿ ಕಂಬಿಯನ್ನು ಗಟ್ಟಿ ಹಿಡಿದು ಕೊಂಡಿತ್ತು.ಶಾಲಾ ಮಕ್ಕಳು ಬಿಟ್ಟುಕೊಟ್ಟ ವಿಂಡೋ ಸೀಟ್‌ನಲ್ಲೇ ಭದ್ರವಾಗಿ ಕುಳಿತ ಕೋತಿ ಸುಮಾರು 30 ಕಿ.ಮೀ ದೂರದವರೆಗೆ ಬಸ್‌ನಲ್ಲಿ ಪ್ರಯಾಣ ಮಾಡಿದೆ. ಜನರಿಂದ ತುಂಬಿ ತುಳುಕುತ್ತಿದ್ದ ಬಸ್‌ನಲ್ಲಿ ಭಯವಿಲ್ಲದೆ ಪ್ರಯಾಣಿಸಿದೆ.

ಬಸ್‌ನಲ್ಲಿ ಮಂಗನ ಜಾಲಿ ರೈಡ್‌ ಕಂಡು ಜನರು ಖುಷಿಯಾದರು. ಪಕ್ಕದಲ್ಲಿದ್ದ ಪ್ರಯಾಣಿಕರು ಮಂಗನ ರೈಡಿಂಗ್‌ನನ್ನು ಸೆರೆಯಿಡಿದರು. ಕೋತಿ ಪ್ರಯಾಣದಲ್ಲಿ ಜನರು ಬಾಳೆ ಹಣ್ಣು ಬಿಸ್ಕೆಟ್ ನೀಡಿದ್ದಾರೆ. ಆದರೆ ಅದ್ಯಾವುದನ್ನು ಸ್ವೀಕರಿಸಿದ ಕೋತಿ, ತನ್ನ ಪ್ರಯಾಣವನ್ನು ಆನಂದಿಸಿದೆ. ರಸ್ತೆಯಲ್ಲಿ ಹೋಗುವವರನ್ನು ನೋಡುತ್ತಾ ತಣ್ಣಗೆ ಬೀಸುತ್ತಿದ್ದ ಗಾಳಿಯನ್ನು ಸವಿಯುತ್ತಾ ಎಂಜಾಯ್ ಮಾಡಿದೆ. ಮರದಿಂದ ಮರಕ್ಕೆ ಜಿಗಿಯುತ್ತಿದ್ದ ಮಂಗನ, ಬಸ್ ಪ್ರಯಾಣಕ್ಕೆ ಜನರು ಖುಷಿಯಿಂದ ಕಾಮೆಂಟ್ ಮಾಡಿದ್ದಾರೆ.

Categories
ಬೆಂಗಳೂರು

ಸಾಲುಮರದ ತಿಮ್ಮಕ್ಕ ಸಾವಿನ ಸುಳ್ಳು ಸುದ್ದಿ!

ಸಾಲುಮರದ ತಿಮ್ಮಕ್ಕ ಸಾವಿನ ಸುಳ್ಳು ಸುದ್ದಿ!
– ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಿಮ್ಮಕ್ಕ
– ಸೋಷಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿ

NAMMUR EXPRESS NEWS
ಬೆಂಗಳೂರು: ಅನಾರೋಗ್ಯದಿಂದಾಗಿ ರಾಷ್ಟ್ರಪ್ರಶಸ್ತಿ ಪುರಸ್ಕೃತೆ ಸಾಲು ಮರದ ತಿಮ್ಮಕ್ಕ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದ್ರೆ ಅವರು ಇನ್ನಿಲ್ಲ, ಸಾವನ್ನಪ್ಪಿದ್ದಾರೆ ಅಂತ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ವೈರಲ್ ಆಗಿತ್ತು. ಆ ಬಗ್ಗೆ ದತ್ತು ಪುತ್ರ ಉಮೇಶ್ ಮಾತನಾಡಿ,, ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾದ ಸಾಲು ಮರದ ತಿಮ್ಮಕ್ಕ ಆರೋಗ್ಯ ಸ್ಥಿರವಾಗಿದೆ. ವಯೋಸಹಜ ಆರೋಗ್ಯ ಸಮಸ್ಯೆಯಿಂದ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವೈದ್ಯರ ಚಿಕಿತ್ಸೆಗೆ ಸ್ಪಂದನೆ ನೀಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅವರು ಇನ್ನಿಲ್ಲ, ನಿಧನ ಅನ್ನೋ ಸುದ್ದಿ ಸುಳ್ಳು. ಇಂತಹ ಸುದ್ದಿಗಳನ್ನು ಹರಡಬೇಡಿ. ಅವರು ಬೇಗ ಗುಣಮುಖರಾಗುವಂತೆ ಬೇಡಿಕೊಳ್ಳುವಂತೆ ಮನವಿ ಮಾಡಿದ್ದಾರೆ.

ಅಂದಹಾಗೇ ಕೆಲ ದಿನಗಳ ಹಿಂದೆ ಬೆಂಗಳೂರಿನ ಜಯನಗರದ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಸಾಲುಮರದ ತಿಮ್ಮಕ್ಕ ಉಸಿರಾಟದ ಸಮಸ್ಯೆಯಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ತಿಮ್ಮಕ್ಕ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ.
ಬೆಂಗಳೂರಿನಿಂದ ತೆರಳಿ ಹಾಸನ ಜಿಲ್ಲೆಯ ಬೇಲೂರಿನಲ್ಲಿ ತಿಮ್ಮಕ್ಕ ವಾಸವಿದ್ದರು. ಬೇಲೂರು ಮಲೆನಾಡು ಪ್ರದೇಶ ಆಗಿರುವುದರಿಂದ ಶೀತ ಜಾಸ್ತಿಯಾಗಿದೆ. ಕಳೆದ ಮೂರು ದಿನಗಳಿಂದ ಸ್ವಲ್ಪ ಉಸಿರಾಟದ ಸಮಸ್ಯೆಯಾಗಿತ್ತು. ಬೇಲೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ಬಳಿಕವೂ ಕಡಿಮೆ ಆಗಿರಲಿಲ್ಲ. ಹೀಗಾಗಿ ಬೆಂಗಳೂರಿಗೆ ಆಗಮಿಸಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಎಂದು ಹೇಳಿದ್ದಾರೆ.

Categories
ಚಿಕ್ಕಮಗಳೂರು

ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾದ ಮಹಿಳೆ

– ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾದ ಮಹಿಳೆ
– ಕಡೂರು ತಾಲೂಕು ರಂಗೇನಹಳ್ಳಿ ಗ್ರಾಮದಲ್ಲಿ ಘಟನೆ
– ಚಿಕ್ಕಮಗಳೂರು ನಗರ ಸಭೆ ಹೈಡ್ರಾಮಾ
– ರಾಜೀನಾಮೆ ನೀಡಿದ ವರಸಿದ್ದಿ ವೇಣುಗೋಪಾಲ್

NAMMUR EXPRESS NEWS
ಚಿಕ್ಕಮಗಳೂರು: ಸಾಲ ಬಾಧೆ ತಾಳಲಾರದೆ ರೈತ ಮಹಿಳೆ ಆತ್ಮಹತ್ಯೆ ಗೆ ಶರಣಾಗಿರುವ ಘಟನೆ ಜಿಲ್ಲೆಯ ಕಡೂರು ತಾಲೂಕು ರಂಗೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತ ಮಹಿಳೆ ಹನುಮಮ್ಮ(75) ಎಂದು ಗುರುತಿಸಲಾಗಿದ್ದು, ಕೆರೆಗೆ ಹಾರಿ ಆತ್ಮಹತ್ಯೆ ಗೆ ಶರಣಾಗಿದ್ದಾರೆ. ಇವರು ಕೆನರಾ ಬ್ಯಾಂಕ್ ನಲ್ಲಿ ಆರು ಲಕ್ಷ ರೂ. ಸಾಲ ಪಡೆದಿದ್ದರು.ಮಳೆ ಕೊರತೆಯಿಂದ ಬೆಳೆ ನಷ್ಟ ಉಂಟಾಗಿದ್ದು, ಸಾಲ ತೀರಿಸಲಾಗದೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಸಂಬಂಧ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜೀನಾಮೆ ನೀಡಿದ ವರಸಿದ್ದಿ ವೇಣುಗೋಪಾಲ್

ಚಿಕ್ಕಮಗಳೂರು: ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ವರಸಿದ್ದಿ ವೇಣುಗೋಪಾಲ್ ಬುಧವಾರ ರಾಜೀನಾಮೆ ಸಲ್ಲಿಸಿದ್ದಾರೆ. ಬುಧವಾರ ಸಂಜೆ 5 ಗಂಟೆ ವೇಳೆಗೆ ಜಿಲ್ಲಾಧಿಕಾರಿಗಳಿಗೆ ಅವರ ರಾಜೀನಾಮೆ ಪತ್ರ ನೀಡಿದ್ದು, ರಾಜೀನಾಮೆ ವಿಚಾರದಲ್ಲಿ ಕಳೆದ ಮೂರಾಲ್ಕು ತಿಂಗಳಿನಿಂದ ಬಿಜೆಪಿ ನಗರಸಭೆ ಸದಸ್ಯರು ಹಾಗೂ ಅಧ್ಯಕ್ಷರ ನಡುವೆ ನಡೆಯುತ್ತಿದ್ದ ಜಟಾಪಟಿಗೆ ತೆರೆ ಬಿದ್ದಂತಾಗಿದೆ.ಪಕ್ಷದ ಆಂತರಿಕ ಒಪ್ಪಂದದ ಪ್ರಕಾರ ಒಂದು ವರ್ಷದ ಅವಧಿಯನ್ನು ವೇಣುಗೋಪಾಲ್ ಅವರಿಗೆ ಬಿಟ್ಟು ಕೊಡಲಾಗಿತ್ತು. ಆ ಪ್ರಕಾರ ರಾಜೀನಾಮೆಯನ್ನೂ ಸಲ್ಲಿಸಿದ್ದರಾದರೂ, ಚುನಾವಣೆ ಸಂದರ್ಭದಲ್ಲಿ ಅಧ್ಯಕ್ಷರ ಬದಲಾವಣೆ ಬೇಡ ಎನ್ನುವ ಕಾರಣಕ್ಕೆ ಪಕ್ಷ ಅವರ ರಾಜೀನಾಮೆಯನ್ನು ಹಿಂತೆಗೆಸಿತ್ತು.

ಆದರೆ ಚುನಾವಣೆ ಮುಗಿದ ಕೂಡಲೇ ರಾಜೀನಾಮೆ ನೀಡುವುದಾಗಿ ತಿಳಿಸಿದ್ದ ವೇಣುಗೋಪಾಲ್ ನಂತರ ಕಾರಣಗಳನ್ನು ಹೇಳುತ್ತಾ ಮುಂದೂಡುತ್ತಲೇ ಬಂದಿದ್ದರು. ಮಾಜಿ ಶಾಸಕ ಸಿ.ಟಿ.ರವಿ ಸೇರಿದಂತೆ ಬಹುತೇಕ ಬಿಜೆಪಿ ಸದಸ್ಯರು ರಾಜೀನಾಮೆ ನೀಡುವಂತೆ ಒತ್ತಡ ಹೇರಿದರೂ ಅದಕ್ಕೆ ಒಪ್ಪಿರಲಿಲ್ಲ. ಈ ಬಗ್ಗೆ ಪಕ್ಷದಲ್ಲೇ ಅಸಮಾಧನವೂ ವ್ಯಕ್ತವಾಗಿತ್ತು. ಕೆಲವರು ವೇಣು ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಸಹ ಒತ್ತಾಯಿಸಿದ್ದರು.

Categories
ರಾಜ್ಯ

ಕರ್ನಾಟಕ ಕ್ಕೆ ಸುವರ್ಣ ಸಂಭ್ರಮ.!

ಕರ್ನಾಟಕ ಕ್ಕೆ ಸುವರ್ಣ ಸಂಭ್ರಮ.!
– ಕರ್ನಾಟಕ ಎಂದು ಹೆಸರು ನಾಮಕರಣಗೊಂಡು 50 ವರ್ಷ
– ವರ್ಷವಿಡೀ ಕಾರ್ಯಕ್ರಮ: ಸರ್ಕಾರದ ತೀರ್ಮಾನ
– ಕರ್ನಾಟಕಕ್ಕೆ ಕೊಡುಗೆ ನೀಡಿದ 50 ಮಹಿಳೆಯರಿಗೆ ಪ್ರಶಸ್ತಿ

NAMMUR EXPRESS NEWS
ಬೆಂಗಳೂರು: ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಎಂಬ ಹೆಸರಿನಲ್ಲಿ 2023 ನ.1 ರಿಂದ 2024 ನ.1ರವರೆಗೆ ಕರ್ನಾಟಕ ಸಂಭ್ರಮ ಆಚರಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಕರ್ನಾಟಕ ಎಂದು ನಾಮಕರಣಗೊಂಡು 50 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ, ಪ್ರವಾಸೋದ್ಯಮ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸುವ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ದೇಶೀ ಕ್ರೀಡೆಗಳನ್ನು ಹಮ್ಮಿಕೊಳ್ಳಬೇಕು. ಕರ್ನಾಟಕದ ಸಂಸ್ಕೃತಿ ಹೆಚ್ಚು ಬಿಂಬಿಸಬೇಕು, ಕನ್ನಡ ನಾಡು, ಸಂಸ್ಕೃತಿ ಮತ್ತು ಪ್ರಾದೇಶಿಕ ಭವ್ಯತೆಯನ್ನು ಈ ಸಂದರ್ಭದಲ್ಲಿ ಯುವ ಪೀಳಿಗೆಗೂ ಮುಟ್ಟಿಸುವ ರೀತಿ ಅರ್ಥಪೂರ್ಣ ಮತ್ತು ಸಂಭ್ರಮದ ಕಾರ್ಯಕ್ರಮ ಆಯೋಜಿಸಿ ಎಂದು ನಿರ್ದೇಶನ ನೀಡಿದರು. ನಾಡಿನ ಸಾಹಿತಿಗಳೊಂದಿಗೆ ಈ ಬಗ್ಗೆ ಚರ್ಚಿಸಿ ಅವರ ಸಲಹೆಗಳನ್ನು ಪಡೆಯಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ತಿಳಿಸಿದ್ದಾರೆ.

ಸ್ಮಾರಕ ಅಭಿವೃದ್ಧಿ, ಜೀರ್ಣೋದ್ಧಾರ

ವಿಧಾನಸೌಧ ಹಾಗೂ ಶಾಸಕರ ಭವನದ ಮಧ್ಯೆ ತಾಯಿ ಭುವನೇಶ್ವರಿ ಪ್ರತಿಮೆ ಸ್ಥಾಪಿಸುವುದು, ಮೈಸೂರಿನಲ್ಲಿ ದೇವರಾಜ ಅರಸರ ಪ್ರತಿಮೆ ಸ್ಥಾಪನೆ, ಧಾರವಾಡದ ಅದರಗುಂಚಿ ಶಂಕರಗೌಡ, ಬಳ್ಳಾರಿಯ ಹುತಾತ್ಮ ರಂಜಾನ್ ಸಾಬ್ ಹಾಗೂ ಗದಗ ಜಿಲ್ಲೆಯ ಅಂದಾನಪ್ಪ ದೊಡ್ಡಮೇಟಿ ಅವರ ಸ್ಮಾರಕ ಅಭಿವೃದ್ಧಿ, ಜೀಣೋದ್ಧಾರ ಕಾರ್ಯ ಹಮ್ಮಿಕೊಳ್ಳುವುದು ಸೇರಿ ಹಲವು ಕಾರ್ಯಕ್ರಮ ರೂಪಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಅ.17ರಂದು ಲಾಂಛನ ಬಿಡುಗಡೆ

ಕರ್ನಾಟಕ ಸಂಭ್ರಮ-50ರ ಲಾಂಛನವನ್ನು ಅ.17ರಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಯಿತು. ಹಲ್ಮಡಿ ಶಾಸನದ ಪ್ರತಿಕೃತಿಗಳ ಸ್ಥಾಪನೆ, ಲೇಸರ್ ಶೋ/ಧ್ವನಿ, ಬೆಳಕು ಕಾರ್ಯಕ್ರಮ, ಕರ್ನಾಟಕಕ್ಕೆ ಕೊಡುಗೆ ನೀಡಿದ 50 ಮಹಿಳೆಯರಿಗೆ ಪ್ರಶಸ್ತಿ ನೀಡಲು ಸಭೆ ನಿರ್ಧರಿಸಿತು.

ಹಿಂದಿನ ಸರ್ಕಾರವೇ ಮಾಡಬೇಕಿತ್ತು!

ಐವತ್ತನೇ ವರ್ಷದ ಸಂಭ್ರಮವನ್ನು ಹಿಂದಿನ ಸರ್ಕಾರ 2022 ನ.1 ರಿಂದ 2023 ನ.1ರವರೆಗೆ ವೈಭವದಿಂದ ಆಚರಿಸಬೇಕಿತ್ತು. ಏಕೆ ಆಚರಿಸಲಿಲ್ಲ? ಈ ನಿರ್ಲಕ್ಷ್ಯ ಸರಿನಾ? ಎಂದು ಅಧಿಕಾರಿಗಳನ್ನು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು. ಈಗ 50 ವರ್ಷ ತುಂಬಿ 51ನೇ ವರ್ಷಕ್ಕೆ ಕಾಲಿಡಲಿದ್ದು, ಹಿಂದಿನ ಸರ್ಕಾರ ಈ ವಿಚಾರದಲ್ಲಿ ಎಡವಿದೆ ಎಂದು ಆರೋಪಿಸಿದರು.

Categories
ಮಲ್ನಾಡ್ ಮಾಹಿತಿ

ಹೊಯ್ ನಮ್ಮನೆ ಮಾಲಯಕ್ಕೆ ಬನ್ನಿ!

ಹೊಯ್ ನಮ್ಮನೆ ಮಾಲಯಕ್ಕೆ ಬನ್ನಿ!
– ಮಲೆನಾಡಲ್ಲಿ ಮಹಾಲಯ ಅಮಾವಾಸ್ಯೆ ಆಚರಣೆ
– ಪೂರ್ವಜರಿಗೆ ಎಡೆ ಹಾಕಿ ಗೌರವ ಕೊಡುವ ಸಾಂಪ್ರದಾಯ

NAMMUR EXPRESS NEWS
ಪಿತೃ ಪಕ್ಷದಲ್ಲಿ ಪೂರ್ವಜರ ಆತ್ಮ ಶಾಂತಿಗಾಗಿ ಶ್ರಾದ್ಧ ಆಚರಣೆಗಳನ್ನು ಮಾಡಲಾಗುತ್ತದೆ. ಈ ಬಾರಿ ಪಿತೃ ಪಕ್ಷ ಅಥವಾ ಮಹಾಲಯ ಸೆಪ್ಟೆಂಬರ್ 29ರಿಂದ ಆರಂಭ ವಾಗಿದ್ದು, ಅಕ್ಟೋಬರ್ 14ರವರೆಗೆ ಇರಲಿದೆ. ಪ್ರತಿ ವರ್ಷ ಪಿತೃ ಪಕ್ಷವು ಭಾದ್ರಪದ ಮಾಸದ ಹುಣ್ಣಿಮೆಯ ದಿನದಿಂದ ಪ್ರಾರಂಭವಾಗಿ ಅಮಾವಾಸ್ಯೆಯ ಹುಣ್ಣಿಮೆಯವರೆಗೂ ಇರುತ್ತದೆ. ಇದನ್ನು ಸರ್ವ ಪಿತೃ ಅಮಾವಾಸ್ಯೆ ಎಂದೂ ಕರೆಯುತ್ತಾರೆ.ಪಿತೃ ಪಕ್ಷವು ಭಾದ್ರಪದ ಮಾಸದ ಹುಣ್ಣಿಮೆಯ ತಿಥಿಯಿಂದ ಪ್ರಾರಂಭವಾಗುತ್ತದೆ. ಪಿತೃಪಕ್ಷದ ನಿಜವಾದ ಅರ್ಥವೆಂದರೆ ಪಿತೃಗಳಿಗೆ ಪಿಂಡವನ್ನು ಅರ್ಪಿಸುವ ಮೂಲಕ ಪೂರ್ವಜರಿಗೆ ಗೌರವ ಸಲ್ಲಿಸುವ ಸಮಯ ಎಂದಾಗಿದೆ.

ಪಿತೃಪಕ್ಷ ದಿನವು ಪೂರ್ವಜರಿಗೆ ಶ್ರಾದ್ಧವನ್ನು ಮಾಡಲು ಪ್ರಮುಖ ದಿನವೆಂದು ಪರಿಗಣಿಸಲಾಗಿದೆ. ಪಿತೃ ಪಕ್ಷದ ದಿನದಂದು ಪೂರ್ವಜರು ಭೂಮಿಗೆ ಬರುತ್ತಾರೆ ಎಂದು ನಂಬಲಾಗಿದೆ. ಆದ್ದರಿಂದ ಪಿತೃಪಕ್ಷದ ಸಮಯದಲ್ಲಿ ತರ್ಪಣ ಮತ್ತು ಶ್ರಾದ್ಧವನ್ನು ಮಾಡುವುದರಿಂದ ಪೂರ್ವಜರ ಕೃಪೆಯು ದೊರೆಯುತ್ತದೆ ಎಂಬ ನಂಬಿಕೆ ಇದೆ. ಅದೇ ಸಮಯದಲ್ಲಿ ಪಿತೃಪಕ್ಷದಲ್ಲಿ ತಿಥಿಗಳಿಗನುಸಾರವಾಗಿ ಪಿತೃಗಳ ಶ್ರಾದ್ಧವನ್ನು ಮಾಡುವುದರಿಂದ ವಿಶೇಷ ಫಲಗಳು ದೊರೆಯುತ್ತವೆ. ಆದ್ದರಿಂದ ಪೂರ್ವಜರ ಶಾಂತಿಗಾಗಿ ಪಿತೃಪಕ್ಷದ ದಿನದಂದು ಶ್ರಾದ್ಧದ ಜೊತೆಗೆ ಬ್ರಾಹ್ಮಣರಿಗೂ ಅನ್ನ ನೀಡಬೇಕು ಎನ್ನಲಾಗಿದೆ.

ಆಚರಣೆ ಏಕೆ..?!

ಬ್ರಹ್ಮವೈವರ್ತ ಪುರಾಣವು ಪೂರ್ವಜರ ಆತ್ಮವನ್ನು ತೃಪ್ತಿಪಡಿಸಲು ಹಿರಿಯ ಮಗ ತನ್ನ ತಂದೆ ಮತ್ತು ಅವನ ವಂಶಸ್ಥರಿಗೆ ಶ್ರಾದ್ಧ ಪಿಂಡ ಮತ್ತು ತರ್ಪಣವನ್ನು ಬಿಡಬೇಕು ಎಂದು ವಿವರಿಸುತ್ತದೆ. ಪಿತೃಗಳ ಮೋಕ್ಷಕ್ಕಾಗಿ ಪುತ್ರರು ಪಿಂಡ ದಾನ ಮಾಡುವುದು ಅಗತ್ಯವೆಂದು ಪರಿಗಣಿಸಲಾಗಿದೆ. ಆದರೆ ಒಬ್ಬ ವ್ಯಕ್ತಿಗೆ ಮಗನಿಲ್ಲದಿದ್ದರೆ, ಅಂತಹ ಸಂದರ್ಭದಲ್ಲಿ ಆತನ ಮಗಳು, ಹೆಂಡತಿ ಮತ್ತು ಸೊಸೆ ಕೂಡ ಶ್ರಾದ್ಧ ಮತ್ತು ಪಿಂಡದಾನವನ್ನು ಮಾಡಬಹುದು ಎನ್ನಲಾಗಿದೆ.