Categories
ಮಂಗಳೂರು

ಮಂಗಳೂರು ವಿಮಾನ ನಿಲ್ದಾಣದ ಆಡಳಿತ ಅದಾನಿಗೆ!

ಮಂಗಳೂರು ವಿಮಾನ ನಿಲ್ದಾಣದ ಆಡಳಿತ ಅದಾನಿಗೆ!
– ಹತ್ತು ಹಲವು ನೂತನ ಯೋಜನೆಯನ್ನು ಜಾರಿಗೊಳಿಸಲಿದೆ ಅದಾನಿ ಗ್ರೂಪ್‌ : 97ಅಧಿಕಾರಿಗಳ ವರ್ಗಾವಣೆ

NAMMUR EXPRESS NEWS
ಮಂಗಳೂರು : ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೂರ್ಣ ಆಡಳಿತ ಮೂರು ವರ್ಷದ ಬಳಿಕ ಅ.31ರಂದು ಅದಾನಿ ಗ್ರೂಪ್‌ ತೆಕ್ಕೆಗೆ ಸೇರಲಿದೆ. ಇನ್ನು ಮುಂದೆ ಈ ವಿಮಾನ ನಿಲ್ದಾಣದ ಎಲ್ಲ ಆಗು ಹೋಗುಗಳು ಅದಾನಿ ಗುಂಪಿನಿಂದಲೇ ನಡೆಯಲಿದೆ. 2020 ಅ.31ರಂದು ಮಂಗಳೂರು ಸೇರಿದಂತೆ ದೇಶದ 6 ವಿಮಾನ ನಿಲ್ದಾಣಗಳ ಆಡಳಿತವನ್ನು ದೇಶದ ಪ್ರತಿಷ್ಠಿತ ಉದ್ದಿಮೆ ಕಂಪನಿ ಅದಾನಿ ತನ್ನ ವಶಕ್ಕೆ ಪಡೆದುಕೊಂಡಿತ್ತು. ಕೇಂದ್ರ ಸರ್ಕಾರ ಖಾಸಗಿ ರಂಗದ ಮೂಲಕ ವಿಮಾನ ನಿಲ್ದಾಣಗಳ ಅಭಿವೃದ್ಧಿಗೆ ತೆಗೆದುಕೊಂಡ ನಿರ್ಧಾರದ ಹಿನ್ನೆಲೆ ಇದಾಗಿದೆ.

ದೇಶದ ಆರು ವಿಮಾನ ನಿಲ್ದಾಣಗಳ ಪೈಕಿ ಮಂಗಳೂರು ವಿಮಾನ ನಿಲ್ದಾಣ ಪ್ರಥಮವಾಗಿ ಅದಾನಿ ಕೈವಶವಾಗಿತ್ತು. ಆ ಬಳಿಕ ಅಹಮ್ಮದಾಬಾದ್‌, ಲಕ್ನೋ, ಜೈಪುರ, ಗುವಾಹಟಿ ಹಾಗೂ ತ್ರಿವೆಂಡ್ರಂ ವಿಮಾನ ನಿಲ್ದಾಣಗಳನ್ನು ಅದಾನಿ ತೆಕ್ಕೆಗೆ ತೆಗೆದುಕೊಂಡಿತ್ತು. ಮುಂಬೈ ವಿಮಾನ ನಿಲ್ದಾಣವನ್ನು 2020 ಜುಲೈನಲ್ಲಿ ಅದಾನಿ ಕಂಪನಿ ಜಿವಿಕೆ ಕೈನಿಂದ ತೆಗೆದುಕೊಂಡಿತ್ತು. ಪ್ರಸಕ್ತ ನವಿ ಮುಂಬೈನಲ್ಲಿ ಅದಾನಿ ಗ್ರೂಪ್‌ನ ಹೊಸ ವಿಮಾನ ನಿಲ್ದಾಣ ನಿರ್ಮಾಣವಾಗುತ್ತಿದ್ದು, 2024ರ ವೇಳೆಗೆ ಕಾರ್ಯಾರಂಭಿಸುವ ನಿರೀಕ್ಷೆ ಇದೆ.

ಒಪ್ಪಂದ ಪ್ರಕಾರ ಮೂರು ವರ್ಷಗಳ ವರೆಗೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ(ಎಎಐ) ಅರ್ಧದಷ್ಟು ಸಿಬ್ಬಂದಿ ಹಾಗೂ ಅದಾನಿ ಸಿಬ್ಬಂದಿ ಜತೆಯಾಗಿಯೇ ಕೆಲಸ ಮಾಡಬೇಕಿತ್ತು. ಇದೀಗ ಒಪ್ಪಂದದ ಅವಧಿ ಅ.30ಕ್ಕೆ ಮುಕ್ತಾಯಗೊಳ್ಳುತ್ತಿದ್ದು, ಇಡೀ ವಿಮಾನ ನಿಲ್ದಾಣ ಆಡಳಿತ ಅದಾನಿ ತೆಕ್ಕೆಗೆ ಹೋಗುತ್ತಿದೆ.

ಎಎಐ ಎಲ್ಲ ಸಿಬ್ಬಂದಿ ವರ್ಗಾವಣೆ:

ಅದಾನಿ ತೆಕ್ಕೆಗೆ ಸೇರ್ಪಡೆಗೊಂಡ ವೇಳೆ 118 ಮಂದಿ ಎಎಐ ಸಿಬ್ಬಂದಿ ಇದ್ದರು. ಅವರಲ್ಲಿ 97 ಮಂದಿಯನ್ನು ಉಳಿಸಿಕೊಳ್ಳಲಾಗಿತ್ತು. ಇವರೆಲ್ಲ ಎಜಿಎಂ ಹಾಗೂ ಕೆಳಗಿನ ಹಂತದವರು. ಅವರೆಲ್ಲ ಹಣಕಾಸು, ಎಚ್‌ಆರ್‌, ಆಡಳಿತ, ವಾಣಿಜ್ಯ, ಅಗ್ನಿಶಾಮಕ, ಟರ್ಮಿನಲ್‌ ಸೇರಿದಂತೆ ಆರು ವಿಭಾಗಗಳಲ್ಲಿ ಅದಾನಿ ಸಿಬ್ಬಂದಿಯೊಂದಿಗೆ ಜತೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈಗ ಒಪ್ಪಂದ ಅವಧಿ ಮುಕ್ತಾಯಗೊಳ್ಳುತ್ತಿರುವುದರಿಂದ ಈಗ ಈ 97 ಮಂದಿಯನ್ನು ಬೇರೆ ಬೇರೆ ವಿಮಾನ ನಿಲ್ದಾಣಗಳಿಗೆ ವರ್ಗಾವಣೆಗೊಳಿಸಲಾಗಿದೆ. ಇನ್ನು ಈ ಆರು ವಿಭಾಗ ಕೂಡ ಅದಾನಿ ಆಡಳಿತಕ್ಕೆ ಒಳಪಡಲಿದೆ. ಏರ್‌ಟ್ರಾಫಿಕ್‌ ಕಂಟ್ರೋಲ್‌(ಎಟಿಸಿ), ಕಾರ್ಗೊ ಹಾಗೂ ಸಿಎನ್‌ಎಸ್‌(ಕಮ್ಯುನಿಕೇಷನ್‌ ನೇವಿಗೇಷನ್‌ ಅಂಡ್‌ ಸರ್ವೆಲೆನ್ಸ್‌) ಮಾತ್ರ ಅದಾನಿ ಹೊರತಾಗಿ ಇರಲಿದೆ. ಆದರೆ ವಿಮಾನ ನಿಲ್ದಾಣದ ಹೆಸರಿನಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ವಿಮಾನ ನಿಲ್ದಾಣ ಮೂಲಗಳು ಸ್ಪಷ್ಟಪಡಿಸಿವೆ.

‘ಏರ್‌ಪೋರ್ಟ್‌ ವಿಲೇಜ್‌’ ಶಾಪಿಂಗ್‌ ಅಂಗಡಿ

ಕಳೆದ ಮೂರು ವರ್ಷಗಳಿಂದ ಅದಾನಿ ಹಾಗೂ ಎಎಐ ಜಂಟಿ ಆಡಳಿತದಲ್ಲಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಕೆಲವೊಂದು ಸುಧಾರಣೆ ಮಾಡಲಾಗಿದೆ. ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಆಗಮನ ಹಾಲ್‌ನ್ನು ರಚಿಸಲಾಗಿದೆ. ಹಿಂದಿನ ಹಾಲ್‌ನ್ನು ವಿಶಾಲವಾಗಿ ದೇಶೀಯ ಯಾನಿಗಳಿಗೆ ಮೀಸಲಿರಿಸಲಾಗಿದೆ. ನಾಲ್ಕು ಏರೋಬ್ರಿಡ್ಜ್‌ ಸಾರಿಗೆ ಮತ್ತೆ ಎರಡು ಸೇರ್ಪಡೆಯಾಗಿದೆ. ರನ್‌ವೇಗೆ ಡಾಂಬರೀಕರಣ ನಡೆಸಿ ಸುರಕ್ಷತೆಗೆ ಹೆಚ್ಚಿನ ಗಮನ ನೀಡಲಾಗಿದೆ. ಕೆಳ ಅಂತಸ್ತಿನಲ್ಲಿ ಆಗಮನ ಹಾಗೂ ನಿರ್ಗಮನಕ್ಕೆ ಒಂದೇ ದಾರಿ ರಚನೆ, ಪಾರ್ಕಿಂಗ್‌ನಲ್ಲಿ ತಾಂತ್ರಿಕತೆ ಅಳವಡಿಕೆ, ಮುಂಗಡ ಬುಕ್ಕಿಂಗ್‌ ವಾಹನ ಸೌಕರ್ಯ, ಟ್ಯಾಕ್ಸಿ ಚಾಲಕರಿಗೆ ವಿಶ್ರಾಂತಿ ಗೃಹ ಹಾಗೂ ಕುಡಿವ ನೀರು ಸೌಲಭ್ಯ, ವಿಮಾನ ನಿಲ್ದಾಣ ಒಳಗೆ ಹೆಚ್ಚುವರಿ ತಿಂಡಿ, ತಿನಿಸುಗಳ ವ್ಯವಸ್ಥೆ ಏರ್ಪಡಿಸಲಾಗಿದೆ. ಈಗ ಕೆಳ ಅಂತಸ್ತಿನಲ್ಲಿ ‘ಏರ್‌ಪೋರ್ಟ್‌ ವಿಲೇಜ್‌’ ಪರಿಕಲ್ಪನೆಯಲ್ಲಿ ಕಂಟೈನ್‌ ಮಾದರಿಯಲ್ಲಿ ಶಾಪಿಂಗ್‌ ಅಂಗಡಿಗಳಿಗೆ ಸಿದ್ಧತೆ ನಡೆಯುತ್ತಿದೆ.

Categories
ತೀರ್ಥಹಳ್ಳಿ

ಮಂಜುನಾಥ ಗೌಡರಿಗೆ ಇಡಿ ಕಿರುಕುಳ: ಸಿಡಿದೆದ್ದ ತೀರ್ಥಹಳ್ಳಿ

ಮಂಜುನಾಥ ಗೌಡರಿಗೆ ಇಡಿ ಕಿರುಕುಳ: ಸಿಡಿದೆದ್ದ ತೀರ್ಥಹಳ್ಳಿ
– ಹಿರಿಯ, ಕಿರಿಯ ಮುಖಂಡರು, ಕಾರ್ಯಕರ್ತರಿಂದ ಆಕ್ರೋಶ
– ಬಿಜೆಪಿ ಸರ್ಕಾರದ ವಿರುದ್ಧ ಕಿಮ್ಮನೆ, ಸುಂದರೇಶ್ ವಾಗ್ದಾಳಿ

NAMMUR EXPRESS NEWS
ತೀರ್ಥಹಳ್ಳಿ: ಡಿಸಿಸಿ ಬ್ಯಾಂಕ್ ನೂತನ ಅಧ್ಯಕ್ಷಡಾ.ಆರ್‌ಎಂ ಮಂಜುನಾಥ ಗೌಡರಿಗೆ ರಾಜಕೀಯ ಷಡ್ಯಂತರ ರೂಪಿಸಿ ಅನಗತ್ಯ ಕಿರುಕುಳ ನೀಡುತ್ತಿರುವುದನ್ನು ಖಂಡಿಸಿ ತೀರ್ಥಹಳ್ಳಿಯಲ್ಲಿ ಭಾರೀ ಹೋರಾಟ ಮಾಡಲಾಗಿದೆ.
ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಮಾತನಾಡಿ ಮಂಜುನಾಥ ಗೌಡರಿಗೆ ಒಂದು ಅಭಿನಂದನಾ ಕಾರ್ಯಕ್ರಮ ಮಾಡಬೇಕೆಂದು ಯೋಚನೆ ಮಾಡಿದ್ದೆವು. ವಿಜಯದೇವ್ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಅದನ್ನು ಗಮನದಲ್ಲಿಟ್ಟುಕೊಂಡು ಜಿಲ್ಲಾದ್ಯಂತ ಒಂದು ರೀತಿಯಲ್ಲಿ ಕಾಂಗ್ರೆಸ್ ಸಂಘಟನೆ ಆಗುತ್ತಿದೆ. ಅದನ್ನು ತಪ್ಪಿಸಬೇಕು ಎಂದು ಮಂಜುನಾಥಗೌಡರಿಗೆ ಹಿಂಸೆ ಕೊಡುವಂತಹ ಪ್ರಯತ್ನವನ್ನು ಬಿಜೆಪಿ ಕೇಂದ್ರ ಸರ್ಕಾರ ಮಾಡುತ್ತಿದೆ. ಅದಕ್ಕೆ ಆರಗ ಜ್ಞಾನೇಂದ್ರ ಬೆಂಬಲವನ್ನು ನೀಡುತ್ತಿದ್ದಾರೆ ಇದನ್ನು ಖಂಡಿಸಿ ನಾವು ಇಂದು ಪ್ರತಿಭಟನೆ ಮಾಡಿದ್ದೇವೆ.

ಈ ಭಾರತೀಯ ಜನತಾ ಪಾರ್ಟಿ ಎನ್ನುವುದು ಏನಾದ್ರೂ ಪಾತ್ರೆ ತೊಳೆಯುವ ಮಿಷನ್ ಅದು? 10 ಕೋಟಿ ಜನ ಇದ್ದಾರೆ. ಅವರಲ್ಲಿ ಯಾರು ಭ್ರಷ್ಟರೇ ಇಲ್ಲವಾ? ಅವರು ಯಾರು ಮನೆ ಮಠ ಮಾಡಿಕೊಂಡಿಲ್ಲವಾ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಿವಮೊಗ್ಗ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಹೆಚ್ಎಸ್ ಸುಂದರೇಶ್ ಮಾತನಾಡಿ, ಜಿಲ್ಲೆಯ ರೈತರು ಕಾರ್ಮಿಕರು ಸೇರಿದಂತೆ ಪ್ರತಿಯೊಬ್ಬರೂ ಕೂಡ ನಮಗೆ ಒಳ್ಳೆಯ ಒಬ್ಬ ನಾಯಕ ಬಂದಿದ್ದಾನೆ, ನಮಗೆಲ್ಲ ನ್ಯಾಯ ಸಿಗುತ್ತದೆ ಮತ್ತು ನಮಗೆ ಸಹಾಯ ಮಾಡುವಂತಹ ಒಬ್ಬ ನಾಯಕ ಬಂದಿದ್ದಾನೆ ಎಂದು ಇಡೀ ಜಿಲ್ಲೆಯಲ್ಲಿ ಸಂಚಲನ ಮೂಡಿತ್ತು. ಅದರಿಂದ ಬಿಜೆಪಿಯವರು ಯಾವುದೇ ಒಬ್ಬ ನಾಯಕ ಬೆಳೆದರೂ ಅದನ್ನು ಸಹಿಸುವುದಿಲ್ಲ ಏನಾದರೂ ಮಾಡಿ ಅದಕ್ಕೆ ಒಂದು ಕಪ್ಪು ಚುಕ್ಕೆಯನ್ನು ಇಡುವಂತಹ ಕೆಲಸ ಬಿಜೆಪಿ ಸದಾಕಾಲ ಮಾಡುತ್ತಾರೆ ಎಂದು ಹೇಳಿದರು.

ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಅವರ ಮೇಲು ಇದೆ ಪ್ರೀತಿ ಸುಳ್ಳು ಕೇಸುಗಳನ್ನು ದಾಖಲಿಸಿ ಅವರನ್ನು ಜೈಲಿಗೆ ಕಳಿಸುವಂತಹ ಕೆಲಸವನ್ನು ಕೂಡ ಬಿಜೆಪಿ ಮಾಡಿತ್ತು. ಈಗ ಲೋಕಸಭಾ ಚುನಾವಣೆ ಗೆಲ್ಲಬೇಕೆಂದು ಬಿಜೆಪಿ ಈ ಷಡ್ಯಂತ್ರ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಕೆಪಿಸಿಸಿ ಉಸ್ತುವಾರಿಯಾದ ಕಲಗೋಡು ರತ್ನಾಕರ್, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮುಡುಬ ರಾಘವೇಂದ್ರ, ಕೆಸ್ತೂರು ಮಂಜುನಾಥ್, ಸರಕಾರಿ ರತ್ನ ಪುರಸ್ಕೃತ ಬಸವಾನಿ ವಿಜಯದೇವ್, ಮತ್ತು ಡಾಕ್ಟರ್ ಸುಂದರೇಶ್, ಬಿಪಿ ರಾಮಚಂದ್ರ, ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಗೀತಾ ರಮೇಶ್, ಉಪಾಧ್ಯಕ್ಷರಾದ ರೆಹಮತ್ತುಲ್ಲಾ ಅಸಾದಿ, ರಾಘವೇಂದ್ರ ಶೆಟ್ಟಿ, ಕಟ್ಟೆಹಕ್ಲು ಕಿರಣ, ಪುಟ್ಟೋಡ್ಲು ರಾಘವೇಂದ್ರ, ಸಚೀಂದ್ರ ಹೆಗಡೆ, ಮಾಸ್ತಿಕಟ್ಟೆ ಸುಬ್ರಮಣ್ಯ, ಅಮರನಾಥ್ ಶೆಟ್ಟಿ, ರತ್ನಾಕರ್ ಶೆಟ್ಟಿ, ಸುಶೀಲಾ ಶೆಟ್ಟಿ, ಕುರುವಳ್ಳಿ ನಾಗರಾಜ್, ಬಂಡೆ ವೆಂಕಟೇಶ್ ಮತ್ತು ಪಟ್ಟಣ ಪಂಚಾಯತಿಯ ಸದಸ್ಯರು ಹಾಗೂ ಪಕ್ಷದ ಎಲ್ಲಾ ಮುಖಂಡರು ಮತ್ತು ಕಾರ್ಯಕರ್ತರುಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Categories
ರಾಜ್ಯ

ಪಂಚಾಯಿತಿಗೊಂದು ಬಾರ್..? ಏನಿದು ವಿವಾದ!

ಪಂಚಾಯಿತಿಗೊಂದು ಬಾರ್..? ಏನಿದು ವಿವಾದ!
– ಚಿಲ್ಲರೆ ಮದ್ಯ ಮಾರಾಟ ಮಳಿಗೆಗಳಿಗೆ ಪರವಾನಗಿ ವಿಚಾಕ್ಕೆ ಸಿಎಂ ಹೇಳಿದ್ದೇನು?

NAMMUR EXPRESS NEWS
ಗ್ಯಾರಂಟಿ ಯೋಜನೆಗಳ ಆರ್ಥಿಕ ಭಾರದಿಂದ ನಲುಗುತ್ತಿರುವ ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರ, ಅಬಕಾರಿ ಇಲಾಖೆ ಮೂಲದಿಂದ ಹೆಚ್ಚಿನ ಆದಾಯ ಗಳಿಸಲು ರಾಜ್ಯಾದ್ಯಂತ ಗ್ರಾಮ ಪಂಚಾಯಿತಿ, ಮಾಲ್ ಹಾಗೂ ಸೂಪರ್ ಮಾರ್ಕೆಟ್‌ಗಳಲ್ಲಿ ಚಿಲ್ಲರೆ ಮದ್ಯ ಮಾರಾಟ ಮಳಿಗೆಗಳಿಗೆ ಪರವಾನಗಿ ನೀಡಲು ಚಿಂತನೆ ನಡೆಸಿದೆ ಎನ್ನುವ ಸುದ್ದಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರದಿಂದ ಹಿಂದೆ ಸರಿದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ನಮ್ಮ ಸರ್ಕಾರ ಮದ್ಯದ ಅಂಗಡಿ ತೆಗೆಯಲ್ಲ, ಬಿಜೆಪಿ ಆಡಳಿತದಲ್ಲಿ ರಾಜ್ಯದ ಆರ್ಥಿಕ ಪರಿಸ್ಥಿತಿ ಹಾಳಾಗಿದೆ. ನಮ್ಮ ಅವಧಿಯಲ್ಲಿ ರಾಜ್ಯದ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಕ್ರಮ ಕೈಗೊಳ್ಳಲಾಗಿದೆ. ಗ್ಯಾರಂಟಿ ಯೋಜನೆ, ಅಭಿವೃದ್ಧಿ ಕಾರ್ಯಗಳಿಗೆ ಹಣದ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿದರು. ಇದರೊಂದಿಗೆ ಎಲ್ಲಾಗೊಂದಲಗಳಿಗೆ ತೆರೆ ಎಳೆದರು.

ಮತ್ತೊಂದೆಡೆ ಇದೇ ವಿಚಾರವಾಗಿ ರಾಮನಗರದ ಕುದೂರಿನಲ್ಲಿ ಮಾತನಾಡಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಕಳೆದ 30 ವರ್ಷದಿಂದ ಯಾವುದೇ ಅಬಕಾರಿ ಲೈಸೆನ್ಸ್ ನೀಡಿಲ್ಲ. ಹಳ್ಳಿಯಲ್ಲಿ ನಾವು ಬಾ‌ ರ್ ತೆಗೆಯುವುದಿಲ್ಲ. ಚರ್ಚಿಸಿ ಸೂಕ್ತ ಪ್ರದೇಶಗಳಲ್ಲಿ ಬಾ‌ ಗಳನ್ನು ತೆರೆಯಲಾಗುವುದು. ಕುಡಿಯುವುದನ್ನು ಯಾರೂ ತಪ್ಪಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.

Categories
ತೀರ್ಥಹಳ್ಳಿ ರಾಜ್ಯ ರಾಷ್ಟ್ರೀಯ ವಾರ್ತೆ

ಡಾ.ಶ್ರೀಕರ ಕೊಳಿಗೆ ಅವರಿಗೆ ರಾಷ್ಟ್ರ ಮಟ್ಟದಲ್ಲಿ ಹುದ್ದೆ

ಡಾ.ಶ್ರೀಕರ ಕೊಳಿಗೆ ಅವರಿಗೆ ರಾಷ್ಟ್ರ ಮಟ್ಟದಲ್ಲಿ ಹುದ್ದೆ
– ಕೇಂದ್ರದ ಸಮಾಜ ಕಲ್ಯಾಣ ಇಲಾಖೆಯ ಸಂಸ್ಥೆಗೆ ಕಾರ್ಯಕಾರಿ ಸದಸ್ಯ ಸ್ಥಾನ

NAMMUR EXPRESS NEWS
ನವ ದೆಹಲಿ: ಕೇಂದ್ರ ಸರ್ಕಾರದ ಸಮಾಜ ಅಭಿವೃದ್ಧಿ ಮತ್ತು ವಿಕಲಚೇತನರ ಸಬಲೀಕರಣ ಇಲಾಖೆಯ ಅಧೀನದಲ್ಲಿರುವ ನ್ಯಾಷನಲ್ ಇನ್ಸ್ಟಿಟ್ಯೂಟ್ ಫಾರ್ ಎಂಪವರ್ಮೆಂಟ್ ಪರ್ಸನಲಿಟಿಸ್ ಇಂಟೆಲೆಕ್ಚ್ಯಲ್ ಡಿಸಬಲೀಸ್ ಸಂಸ್ಥೆಯ ಕಾರ್ಯಕಾರಿ ಕಮಿಟಿ ಸದಸ್ಯರಾಗಿ ಯುವ ಉದ್ಯಮಿ, ತೀರ್ಥಹಳ್ಳಿ ಮೂಲದ ಡಾ.ಶ್ರೀಕರಗೌಡ ನೇಮಕಗೊಂಡಿದ್ದಾರೆ.
ನರೇಂದ್ರ ಮೋದಿ ವಿಕಾಸ್ ಮಿಷನ್ ರಾಜ್ಯ ಉಪಾಧ್ಯಕ್ಷರಾಗಿರುವ ಯುವ ಉದ್ಯಮಿ ಡಾ. ಶ್ರೀಕರ ಗೌಡ ಅವರಿಗೆ ರಾಷ್ಟ್ರ ಮಟ್ಟದಲ್ಲಿ ಗೌರವ ಸಿಕ್ಕಿದೆ.

ಈಗಾಗಲೇ ಕೇಂದ್ರ ಸರ್ಕಾರದ ರೈಲ್ವೆ ಸಮಿತಿಯಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕೆಲಸ ಮಾಡುತ್ತಿದ್ದಾರೆ.
ನಿರ್ದೇಶಕ ಸ್ಥಾನ ಎರಡು ವರ್ಷದ ಅವಧಿ ಇದ್ದು ರಾಷ್ಟ್ರಮಟ್ಟದಲ್ಲಿ ಡಿಸಾಬಲಿಟೀಸ್ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲಿದ್ದಾರೆ.

Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ಇಡಿ ದಾಳಿ ಖಂಡಿಸಿ ಬೃಹತ್ ಹೋರಾಟ!

ತೀರ್ಥಹಳ್ಳಿಯಲ್ಲಿ ಇಡಿ ದಾಳಿ ಖಂಡಿಸಿ ಬೃಹತ್ ಹೋರಾಟ!
– ಕಿಮ್ಮನೆ, ಸುಂದರೇಶ್, ಕಲಗೋಡು ಸೇರಿ ಅನೇಕ ನಾಯಕರು ಹಾಜರ್
– ಅರ್. ಎಂ. ಎಂ ಮನೆ ಮೇಲೆ ದಾಳಿ ಖಂಡಿಸಿ ಪ್ರತಿಭಟನೆ

NAMMUR EXPRESS NEWS
ತೀರ್ಥಹಳ್ಳಿ: ಕಾಂಗ್ರೆಸ್ ಪಕ್ಷದ ಮುಖಂಡ, ಶಿವಮೊಗ್ಗ ಜಿಲ್ಲಾ ಸಹಕಾರಿ ಬ್ಯಾಂಕ್ ಅಧ್ಯಕ್ಷರಾದ ಡಾ.ಆರ್ ಎಂ ಮಂಜುನಾಥ ಗೌಡರ ಮನೆಗಳ ಮೇಲೆ ಕೇಂದ್ರ ಇಡಿ ಇಲಾಖೆಯು ದಾಳಿ ಮಾಡಿದ್ದು ಕೇಂದ್ರದ ಈ ದಮನಕಾರಿ ನೀತಿಯನ್ನು ಖಂಡಿಸಿ ತೀರ್ಥಹಳ್ಳಿಯಲ್ಲಿ ಕಾಂಗ್ರೆಸ್ ಪಕ್ಷದ ಪ್ರತಿಭಟನಾ ಸಭೆ ಹಮ್ಮಿಕೊಂಡಿದ್ದು 300ಕ್ಕೂ ಹೆಚ್ಚು ಮಂದಿ ಭಾಗವಹಿಸಿ ಪ್ರತಿಭಟನೆ ನಡೆಸಿದರು. ತೀರ್ಥಹಳ್ಳಿ ಪಟ್ಟಣದ ಗಾಂಧಿಭವನದಲ್ಲಿ ಸಭೆ ಸೇರಿ ನಂತರ ಪಾದಯಾತ್ರೆಯ ಮೂಲಕ ತಾಲ್ಲೂಕು ಕಛೇರಿಗೆ ತೆರಳಿ ಮನವಿ ಪತ್ರ ಸಲ್ಲಿಸಲಾಯಿತು.

ಮಾಜಿ ಸಚಿವ ಕಿಮ್ಮನೆ ರತ್ನಾಕರ್ ನೇತೃತ್ವದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಸುಂದರೇಶ್, ಪ್ರಮುಖ ನಾಯಕರಾದ ಕಲಗೋಡು ರತ್ನಾಕರ್, ಸಹಕಾರಿ ನಾಯಕ ವಿಜಯದೇವ್, ಮುಡುಬ ರಾಘವೇಂದ್ರ, ಕೆಸ್ತೂರು ಮಂಜುನಾಥ್, ಬಂಡಿ ರಾಮಚಂದ್ರ ಸೇರಿ ಅನೇಕ ನಾಯಕರು, ನೂರಾರು ಮಂದಿ ಕಾರ್ಯಕರ್ತರು ಹಾಜರಿದ್ದರು. ಈ ಪ್ರತಿಭಟನೆಯಲ್ಲಿ ಎಲ್ಲಾ ಮುಖಂಡರು ರಾಜಕೀಯ ಪ್ರೇರಿತ ಈ ದಾಳಿಯನ್ನು ಖಂಡಿಸಿದರು.

Categories
ತೀರ್ಥಹಳ್ಳಿ

ತೀರ್ಥಹಳ್ಳಿ ತಾಲೂಕು ಧ್ವನಿವರ್ಧಕ, ಶಾಮಿಯಾನ ಮತ್ತು ಫ್ಲವರ್ ಡೆಕೋರೇಷನ್ ಯೂನಿಯನ್ ರಚನೆ

ತೀರ್ಥಹಳ್ಳಿ ತಾಲೂಕು ಧ್ವನಿವರ್ಧಕ, ಶಾಮಿಯಾನ ಮತ್ತು ಫ್ಲವರ್ ಡೆಕೋರೇಷನ್ ಯೂನಿಯನ್ ರಚನೆ
– ಗೌರವಾಧ್ಯಕ್ಷರಾಗಿ ಬಾಳೆಬೈಲು ರಾಘವೇಂದ್ರ ನಾಯಕ್, ಅಧ್ಯಕ್ಷರಾಗಿ ಸುಬ್ರಹ್ಮಣ್ಯ ರಂಜದ ಕಟ್ಟೆ,
– ಉಪಾಧ್ಯಕ್ಷರಾಗಿ ಪಿ.ಮಂಜುನಾಥ್, ಕಾರ್ಯದರ್ಶಿಯಾಗಿ ರಾಘವೇಂದ್ರ,ಟಿ.ಸಿ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನಲ್ಲಿ ಶುಭ ಸಮಾರಂಭಗಳಿಗೆ ಧ್ವನಿವರ್ಧಕ, ವಿದ್ಯುತ್ ದೀಪ ಅಲಂಕಾರ ಮತ್ತು ಹೂವಿನ ಅಲಂಕಾರ ವ್ಯವಸ್ಥೆ ಕಲ್ಪಿಸುವ ವಿವಿಧ ಸಂಸ್ಥೆಯ ಮತ್ತು ವೃತ್ತಿಬಾಂಧವರ ಸಂಘ ತೀರ್ಥಹಳ್ಳಿ ತಾಲೂಕು ಧ್ವನಿವರ್ಧಕ, ಶಾಮಿಯಾನ ಮತ್ತು ಫ್ಲವರ್ ಡೆಕೋರೇಷನ್ ಯೂನಿಯನ್ ಅಸ್ತಿತ್ವಕ್ಕೆ ಬಂದಿದೆ. ಗೌರವಾಧ್ಯಕ್ಷರಾಗಿ ಬಾಳೆಬೈಲು ರಾಘವೇಂದ್ರ ನಾಯಕ್, ಅಧ್ಯಕ್ಷರಾಗಿ ಸುಬ್ರಹ್ಮಣ್ಯ ರಂಜದ ಕಟ್ಟೆ, ಉಪಾಧ್ಯಕ್ಷರಾಗಿ ಮೇಲಿನ ಕುರುವಳ್ಳಿ ಪಿ.ಮಂಜುನಾಥ್, ಕಾರ್ಯದರ್ಶಿಯಾಗಿ ರಾಘವೇಂದ್ರ,ಟಿ.ಸಿ, ಸಹಕಾರ್ಯದರ್ಶಿಯಾಗಿ ಮುನ್ನ, ಖಜಾಂಚಿಯಾಗಿ ಶಶಿಧರ್ ಭಟ್, ಸಹ ಖಜಾಂಚಿಯಾಗಿ ವಿಜೇತ್.

ವಿ. ಜಾಧವ್, ಸಂಘಟನಾ ಕಾರ್ಯದರ್ಶಿಯಾಗಿ ಸಮೀರ್ ಮತ್ತು ಚೇತನ್ ಹೆನ್ನಂಗಿ, ಸಲಹಾ ಸಮಿತಿಯ ಸದಸ್ಯರುಗಳಾಗಿ ಅಲ್ಫಾಂಸ್, ಭಾಸ್ಕರ್ ಆಚಾರ್, ನಾಗರಾಜ್ ಕೋಳಿ ಕಾಲುಗುಡ್ಡ, ಮಹೇಶ್ ಬಾಳೇಬೈಲು, ನೊಣಬೂರು ಮಂಜುನಾಥ ಆಚಾರ್ಯ, ಕಟ್ಟೆಹಕ್ಕಲು ಪ್ರದೀಪ್,ಗಣಪತಿ, ವಾಟಗರು ಗಣೇಶ್, ಸುಂದರೇಶ್ ಗಬಡಿ, ಬೆಜ್ಜವಳ್ಳಿ ಗಣೇಶ್, ಆರಗ ಕೇಶವ, ಬೆಟ್ಟಮಕ್ಕಿ ಶರೀಫ್, ಕೋಣಂದೂರು ಶ್ರೀನಿವಾಸ್, ರಾಘವೇಂದ್ರ ಕುರುವಳ್ಳಿ, ತಿಮ್ಮಪ್ಪ ಆಚಾರ್ಯ, ಹರಳಿಮಠ ಶ್ರೀನಾಥ್ ಇವರುಗಳು ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳಾಗಿ ಆಯ್ಕೆಯಾಗಿದ್ದಾರೆ.

Categories
ಬೆಂಗಳೂರು

ಮೋದಿ ಬ್ರೇಕಪ್ ಸಾಂಗ್ ವೈರಲ್..!

ಮೋದಿ ಬ್ರೇಕಪ್ ಸಾಂಗ್ ವೈರಲ್..!
– ಸೋಶಿಯಲ್ ಮೀಡಿಯಾದಲ್ಲಿ ಮೋದಿಯ ದನಿ ಮಾದರಿಯಲ್ಲಿ ವಿವಿಧ ಹಾಡು
– ವಾಯ್ಸ್ ಡಬ್ಬಿಂಗಿಗೂ ಬಂತು ಆರ್ಟಿಫಿಶಿಯಲ್ ಇಂಟಲಿಜೆನ್ಸ್!

NAMMUR EXPRESS NEWS
ಬೆಂಗಳೂರು: ಪ್ರಧಾನಿ ಮೋದಿ ಕುರಿತಾದ ವಿವಿಧ ಹಾಡುಗಳು ಮತ್ತು ಅವರದೇ ದನಿ ಹೋಲುವ ವಿಡಿಯೋಗಳು ವೈರಲ್ ಆಗುತ್ತಿವೆ. ಈ ನಡುವೆ ಅವರ ಮತ್ತು ವಿವಿಧ ರಾಜ ತಾಂತ್ರಿಕರ ಕುರಿತಾದ ನೀ..ರಾಜ್ ಕುಮಾರಿ…., ಅನುರಾಗದ ಈ ನೋವಿಗೆ ಏನ್ ಹೆಸರಿಡಲಿ… ನನ್ನ ಕನಸಿನಲ್ಲಿ… ಹೀಗೆ ಇನ್ಸ್‌ಟಾಗ್ರಾಮ್ ತೆರೆದರೆ ಇಂಥದ್ದೊಂದು ವಿಡಿಯೋಗಳು ಇತ್ತೀಚೆಗೆ ವೈರಲ್ ಆಗುತ್ತಿವೆ. ಹಾಗಂತ ಇದು ಮೂಲ ಹಾಡಲ್ಲ. ಪ್ರಧಾನಿ ಮೋದಿ ಅವರ ರೀತಿಯಂಥ ಧ್ವನಿಯಲ್ಲಿ ಇಂಥ ಹಾಡುಗಳು ವೈರಲ್ ಆಗುತ್ತಿದೆ.

ಅದಕ್ಕೆ ಕೆಲವೊಂದಿಷ್ಟು ಪೋಟೋಗಳನ್ನು ಹಾಕಿ ಮೋದಿ ಬ್ರೇಕಪ್ ಸಾಂಗ್ ಎಂದು ವೈರಲ್ ಮಾಡುತ್ತಿದ್ದಾರೆ. ಹಿಂದೊಮ್ಮೆ ಪ್ರಧಾನಿ ನರೇಂದ್ರ ಮೋದಿ ಅವರೇ ಸೋಶಿಯಲ್ ಮೀಡಿಯಾದಲ್ಲಿ ಇರುವ ಟ್ರೋಲ್‌ಗಳು ಹಾಗೂ ತಮಾಷೆಯ ವಿಡಿಯೋಗಳ ಬಗ್ಗೆ ಅದರ ಕ್ರಿಯೇಟಿವಿಟಿ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದರು. ಹೊಸ ಹೊಸ ಟ್ರೆಂಡ್‌ಗಳ ಬಗ್ಗೆ ತಾವು ಇದರಿಂದಲೇ ಅಪ್‌ಡೇಟ್ ಪಡೆಯೋದಾಗಿ ತಿಳಿಸಿದ್ದರು. ಈಗ ಪ್ರಧಾನಿ ನರೇಂದ್ರ ಮೋದಿ ಅವರನ್ನೇ ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.

ಜಿ20 ಶೃಂಗಸಭೆಗೆ ಇಟಲಿಯ ಪ್ರಧಾನಿ ಜಿಯಾರ್ಜಿಯೋ ಮೆಲೋನಿ ಬಂದಿದ್ದರು. ಈ ವೇಳೆ ಬಂದಂಥ ಕೆಲ ಚಿತ್ರಗಳನ್ನು ಕೊಲಾಜ್ ಮಾಡಿಸಿ, ಅದಕ್ಕೆ ಬ್ರೇಕಪ್ ಸಾಂಗ್ ಮಾಡಿ ಪೋಸ್ಟ್ ಮಾಡುತ್ತಿದ್ದಾರೆ. ಇದನ್ನು ನೋಡಿದ ಹೆಚ್ಚಿನವರು ಹೀಗೇ ಮಾಡ್ತಾ ಇದ್ರೆ, ಮೋದಿ ಶೀಘ್ರದಲ್ಲಿಯೇ ಇನ್ಸ್ಟಾಗ್ರಾಮ್ ಕೂಡ ಬ್ಯಾನ್ ಮಾಡ್ತಾರೆ ನೋಡ್ತಿರಿ ಎಂದು ತಮಾಷೆಯಾಗಿ ಎಚ್ಚರಿಸಿದ್ದಾರೆ.

ಮೋದಿ ಧ್ವನಿಯಲ್ಲಿ ಈ ಹಾಡು ಬಂದಿದ್ದೇಗೆ?

ಇದು ಸಂಪೂರ್ಣವಾಗಿ ಆರ್ಟಿಫಿಶಿಯಲ್ ಇಂಟಲಿಜೆನ್ಸ್, ಕವರ್ಸ್.ಎಐ ವೆಬ್‌ಸೈಟ್ ಮೂಲಕ ಇದನ್ನು ಮಾಡುತ್ತಾರೆ. ಇದರಲ್ಲಿ ಪ್ರಧಾನಿ ಮೋದಿ ಅವರ ವಾಯ್ಸ್ ಗೀತೆಯೇ ಟಾಪ್ ಟ್ರೆಂಡಿಂಗ್‌ನಲ್ಲಿದೆ. ವೆಬ್‌ಸೈಟ್ ಹೇಳುವಂತೆ, ಎಐ- ಧ್ವನಿಗಳೊಂದಿಗೆ ನಿಮ್ಮ ಹಾಡುಗಳ ಕವರ್‌ಗಳನ್ನು ರಚಿಸಲು Covers.ai ನಿಮಗೆ ಅನುಮತಿ ನೀಡುತ್ತದೆ ಎಂದಿದೆ. ನರೇಂದ್ರ ಮೋದಿ ಮಾತ್ರವಲ್ಲ, ರಜನಿಕಾಂತ್, ನವಾಜುದ್ದೀನ್ ಸಿದ್ದಿಕಿ ಹೀಗೆ ಹಲವು ಖ್ಯಾತನಾಮರ ಎಐ ಧ್ವನಿಗಳ ಹಾಡುಗಳನ್ನು ಇದು ಕ್ರಿಯೇಟ್ ಮಾಡುತ್ತದೆ.

Categories
ಬೆಂಗಳೂರು ಮಾಹಿತಿ

ರೇಷನ್ ಕಾರ್ಡ್ ತಿದ್ದುಪಡಿ ಇದ್ರೆ ಮಾಡಿಸಿಕೊಳ್ಳಿ!

ರೇಷನ್ ಕಾರ್ಡ್ ತಿದ್ದುಪಡಿ ಇದ್ರೆ ಮಾಡಿಸಿಕೊಳ್ಳಿ!
– ಅ.13ರವರೆಗೆ ಅವಕಾಶ: ಬೆಂಗಳೂರು ಒನ್ ಕರ್ನಾಟಕ ಒನ್‌, ಗ್ರಾಮ ಒನ್ ಕೇಂದ್ರಗಳಲ್ಲಿ ತಿದ್ದುಪಡಿ
– ಬೆಳಗ್ಗೆ 10ರಿಂದ 7 ಗಂಟೆಯವರೆಗೆ ರೇಷನ್ ಕಾರ್ಡ್ ತಿದ್ದುಪಡಿ

NAMMUR EXPRESS NEWS
ಬೆಂಗಳೂರು: ಪಡಿತರ ಚೀಟಿಯಲ್ಲಿನ ಫಲಾನುಭವಿಗಳ ಮಾಹಿತಿಯ ತಿದ್ದುಪಡಿ ಹಾಗೂ ಹೆಚ್ಚುವರಿ ಫಲಾನುಭವಿಗಳ ಹೆಸರು ಸೇರ್ಪಡೆಗೆ ಅ.5ರಿಂದ 13ರವರೆಗೆ ಆಹಾರ ಇಲಾಖೆ ಮತ್ತೊಮ್ಮೆ ಅವಕಾಶ ನೀಡಿದೆ. ಬೆಂಗಳೂರು ವಲಯದ ಜಿಲ್ಲೆಗಳಲ್ಲಿ ಅ.5ರಿಂದ 7ರವರೆಗೆ, ಕಲಬುರಗಿ ವಲಯದಲ್ಲಿ ಅ.8ರಿಂದ 10ರವರೆಗೆ ಮತ್ತು ಬೆಳಗಾವಿ ವಲಯದಲ್ಲಿ ಅ.11ರಿಂದ 13ರವರೆಗೆ ಫಲಾನುಭವಿ ಹೆಸರು ಬದಲಾವಣೆ, ಪಡಿತರ ಕೇಂದ್ರ ಬದಲಾವಣೆ, ಕಾರ್ಡ್ ಸದಸ್ಯರ ಹೆಸರು ರದ್ದು ಮತ್ತು ಸೇರ್ಪಡೆ, ಕಾರ್ಡ್ ಮುಖ್ಯಸ್ಥರ ಹೆಸರು ಬದಲಾವಣೆ, ಮಹಿಳಾ ಮುಖ್ಯ ಸ್ಥರ ಹೆಸರು ಬದಲಾವಣೆ ಮಾಡಿಕೊಳ್ಳಬಹುದು.

ಬೆಂಗಳೂರು ಒನ್, ಕರ್ನಾಟಕ ಒನ್‌, ಗ್ರಾಮ ಒನ್ ಕೇಂದ್ರಗಳಲ್ಲಿ ಬೆಳಗ್ಗೆ 10ರಿಂದ 7 ಗಂಟೆಯವರೆಗೆ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ನೀಡಲಾಗಿದೆ ಎಂದು ಆಹಾರ ಇಲಾಖೆ ಹೆಚ್ಚುವರಿ ನಿರ್ದೇಶಕ ಜ್ಞಾನೇಂದ್ರ ಮಾಹಿತಿ ನೀಡಿದ್ದಾರೆ. ಈ ಹಿಂದೆ ಸೆ.9ರಿಂದ 14ರವರೆಗೆ ಆಹಾರ ಇಲಾಖೆಯು ಪಡಿತರ ಚೀಟಿ ತಿದ್ದುಪಡಿಗೆ ಅವಕಾಶ ನೀಡಿತ್ತು.

Categories
ಕರಾವಳಿ

ಕರಾವಳಿ ಟಾಪ್ ನ್ಯೂಸ್

ಕರಾವಳಿಯಲ್ಲಿ ಚಿರತೆ ಕಾಟ!
– ಹೆಚ್ಚಿದ ಚಿರತೆಗಳು: ಆನೇಕ ಕಡೆ ಚಿರತೆಯದ್ದೇ ಸುದ್ದಿ
– ಹೆಬ್ರಿ: ವಾಹನ ಡಿಕ್ಕಿಯಾಗಿ ಚಿರತೆ ಸಾವು
– ಪುತ್ತೂರು: ಕಳವು ಮಾಡಿದ್ದ ಕಳ್ಳನನ್ನು ಹಿಡಿದ ಶಿಕ್ಷಕರು
– ಕುಂದಾಪುರ: ಬನ್ಸ್ ರಾಘು ಕೊಲೆ: ಬಂಧನ
– ಬೆಳ್ತಂಗಡಿ :ನಿದ್ದೆ ಮಂಪರಿನಿಂದ ಚರಂಡಿಗೆ ಕಾರು!

NAMMUR EXPRESS NEWS
ಕಾರ್ಕಳ: ಕರಾವಳಿಯ ಹಲವೆಡೆ ಚಿರತೆ ಕಾಟ ಜೋರಾಗಿದೆ. ಈ ನಡುವೆ ಕಾರ್ಕಳದ ಕೆರ್ವಾಶೆ ಗ್ರಾಮದ ಶೆಟ್ಟಿಬೆಟ್ಟು ಎಂಬಲ್ಲಿ ಕೋಳಿಫಾರ್ಮ್‌ಗೆ ನುಗ್ಗಿರುವ ಚಿರತೆ ನೂರಾರು ಕೋಳಿಗಳನ್ನು ಮಾರಣಹೋಮ ಮಾಡಿದೆ. ಕೆರ್ವಾಶೆ ನಿವಾಸಿ ವೆಂಕಟೇಶ್ ಶರ್ವಗಾ‌ ಅವರ ಕೋಳಿ ಫಾರ್ಮ್‌ಗೆ ಈ ವಾರದಲ್ಲಿ ಎರಡು ಸಲ ಚಿರತೆ ದಾಳಿ ಮಾಡಿದೆ. ಭಾನುವಾರ ಮತ್ತು ಮಂಗಳವಾರ ಚಿರತೆ ಸುಮಾರು 200 ಕೋಳಿಗಳನ್ನು ಕೊಂದು ಹಾಕಿರುವುದು ಲೆಕ್ಕ ಸಿಕ್ಕಿದೆ. ಎಷ್ಟು ಕೋಳಿಗಳನ್ನು ತಿಂದಿದೆ ಎಂದು ಗೊತ್ತಾಗಿಲ್ಲ. ಬಳಿಕ ಅರಣ್ಯ ಇಲಾಖೆಗೆ ದೂರು ನೀಡಿದ್ದರು. ಅರಣ್ಯ ಅಧಿಕಾರಿಗಳು ಬಂದು ಪರಿಶೀಲನೆ ಮಾಡಿ ಚಿರತೆ ಹಿಡಿಯಲು ಬೋನು ಇರಿಸಿದ್ದಾರೆ. ಆದ್ರೂ ಬೋನಿಗೆ ಬೀಳಲಿಲ್ಲ.

ವಾಹನ ಡಿಕ್ಕಿಯಾಗಿ ಚಿರತೆ ಸಾವು
ಮುದ್ರಾಡಿ : ಮುದ್ರಾಡಿ ಹೊಸ ಕಟ್ಟಣ ಬಳಿ ವಾಹನವೊಂದು ಚಿರತೆಗೆ ಡಿಕ್ಕಿಯಾಗಿ ಚಿರತೆ ಸ್ಥಳದಲ್ಲೇ ಮೃತಪಟ್ಟ ಘಟನೆ ಅ.5ರ ಸಂಜೆ ಸಂಭವಿಸಿದೆ. ರಸ್ತೆ ದಾಟುತ್ತಿದ್ದ ವೇಳೆ ವಾಹನ ಡಿಕ್ಕಿಯಾಗಿ ಚಿರತೆ ಸಾವಿಗೀಡಾಗಿದೆ. ಘಟನಾ ಸ್ಥಳಕ್ಕೆ ಹೆಬ್ರಿ ಅರಣ್ಯ ಅಧಿಕಾರಿಗಳು ಭೇಟಿ ನೀಡಿದ್ದಾರೆ.

ಕಳ್ಳನನ್ನು ಹಿಡಿದ ಶಿಕ್ಷಕರು..!

ಪುತ್ತೂರು: ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗಕ್ಕೆ ಸಂಬಂಧಿಸಿದ ಸೊತ್ತುಗಳನ್ನು ಕದಿಯುತ್ತಿದ್ದಾತನನ್ನು ಶಾಲಾ ಶಿಕ್ಷಕರೇ ಹಿಡಿದ ಘಟನೆ ಅ.5ರಂದು ನಡೆದಿದೆ. ಪುತ್ತೂರು ಕೊಂಬೆಟ್ಟು ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ನೀರು ಕುಡಿಯಲು ಇಟ್ಟಿದ್ದ ಡ್ರಮ್ ಮತ್ತು ಇತರ ಸ್ಟೀಲ್ ಮತ್ತು ಪ್ಲಾಸ್ಟಿಕ್ ಸೊತ್ತುಗಳು ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿತ್ತು. ಈ ಕುರಿತು ಶಾಲೆಯ ಉಪಪ್ರಾಂಶುಪಾಲರು ಸಿಸಿ ಟಿವಿ ಪರಿಶೀಲಿಸಿದಾಗ ವ್ಯಕ್ತಿಯೋರ್ವ ಕಳವು ಮಾಡುವುತ್ತಿರುವ ವಿಚಾರ ಬೆಳಕಿಗೆ ಬಂದಿತ್ತು. ಈ ಕುರಿತು ಶಾಲೆಯ ಶಿಕ್ಷಕರಿಗೆ, ಎಸ್‌ಡಿಎಂಸಿ ಮತ್ತು ನಗರಸಭಾ ಸ್ಥಳೀಯ ಸದಸ್ಯರಿಗೆ, ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಅ. 5ರಂದು ಸ್ಟೀಲ್‌ ಡ್ರಮ್ ಕದ್ದೊಯ್ದ ವ್ಯಕ್ತಿ ಶಾಲೆಯ ಆವರಣದಲ್ಲಿ ಓಡಾಡುತ್ತಿರುವುದನ್ನು ಗಮನಿಸಿದ ಉಪಪ್ರಾಂಶುಪಾಲರು ಮತ್ತು ಶಿಕ್ಷಕರು ಆತನನ್ನು ಹಿಡಿದಿದ್ದಾರೆ. ಹಿಂದಿ ಭಾಷೆಯಲ್ಲಿ ಮಾತನಾಡುತ್ತಿರುವ ಕಳ್ಳ ಉತ್ತರಪ್ರದೇಶ ಮೂಲದವನೆನ್ನಲಾಗಿದೆ

ಬನ್ಸ್ ರಾಘು ಕೊಲೆ: ಆರೋಪಿಗಳ ಬಂಧನ

ಕುಂದಾಪುರ: ಕುಂದಾಪುರದ ರಾಘವೇಂದ್ರ ಶೇರುಗಾರ್ ಅಲಿಯಾಸ್ ಬನ್ಸ್ ರಾಘು(42) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಂದಾಪುರದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಭಾನುವಾರ ಸಂಜೆ ಕೃತ್ಯ ನಡೆದ ಪೊಲೀಸ್ ಇಲಾಖೆ ಆರೋಪಿ ಬಂಧನಕ್ಕೆ ಕಾರ್ಯಪ್ರವೃತ್ತರಾಗಿದ್ದರೆ ಉಡುಪಿ ಎಸ್ಪಿ ಡಾ.ಅರುಣ್ ಕೆ. ಮೂರು ವಿಶೇಷ ತನಿಖಾ ತಂಡ ರಚಿಸಿದ್ದರು. ಪೊಲೀಸ್ ತಂಡಗಳು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದು ಸಿಸಿ ಟಿವಿ ದೃಶ್ಯಾವಳಿ ಸಹಿತ ಅಗತ್ಯ ದಾಖಲೆಗಳನ್ನು ಪರಿಶೀಲಿಸಿದ್ದು, ಪ್ರತ್ಯಕ್ಷದರ್ಶಿಗಳಿಂದ ಮಾಹಿತಿ ಕಲೆಹಾಕಿ ಆರೋಪಿಗಳ ಪತ್ತೆಗೆ ಶಿವಮೊಗ್ಗ, ಬೆಂಗಳೂರು ಸಹಿತ ವಿವಿಧ ಕಡೆಗಳಿಗೆ ತನಿಖಾ ತಂಡ ತರಳಿತ್ತು. ಪೊಲೀಸರ ತಂಡ ಶಿವಮೊಗ್ಗ ಮೂಲದ ಆರೋಪಿಗಳನ್ನು ಗುರುವಾರ ವಶಕ್ಕೆ ಪಡೆದಿದ್ದು ವಿಚಾರಣೆಗೆ ಒಳಪಡಿಸಲಾಗಿದೆ.

ನಿದ್ದೆ ಮಂಪರಿನಿಂದ ಚರಂಡಿಗೆ ಇಳಿದ ಕಾರು!

ಬೆಳ್ತಂಗಡಿ: ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಮುಂಡಾಜೆ ಗ್ರಾಮದ ಸೀಟು- ಅಂಬಡ್ತಾರು ಎನ್ನುವಲ್ಲಿ ಕೊಟ್ಟಿಗೆಹಾರ ಕಡೆಯಿಂದ ಉಜಿರೆಯತ್ತ ಚಲಿಸುತ್ತಿದ್ದ ಕಾರು ಚರಂಡಿಗೆ ಉರುಳಿದ ಘಟನೆ ಗುರುವಾರ ನಡೆದಿದೆ.
ಬೆಂಗಳೂರು ಮೂಲದ ಕಾರು ಇದಾಗಿದ್ದು, ಚಾಲಕನ ನಿದ್ದೆಯ ಮಂಪರಿನಿಂದ ಚರಂಡಿಗೆ ಜಾರಿದೆ ಎಂದು ಹೇಳಲಾಗಿದೆ. ಘಟನೆಯಲ್ಲಿ ಕಾರಿನ ಚಾಲಕ ಮತ್ತು ಪ್ರಯಾಣಿಕರು ಯಾವುದೇ ಹೆಚ್ಚಿನ ಗಾಯಗಳಿಲ್ಲದೆ ಅಪಾಯದಿಂದ ಪಾರಾಗಿದ್ದಾರೆ.

Categories
ಚಿಕ್ಕಮಗಳೂರು

ಮಾಜಿ ಸಚಿವ ಜೀವರಾಜ್ ವಿರುದ್ಧ ಆತ್ಯಾಚಾರ ಆರೋಪ ಮಾಡಿದ್ದ ಮಹಿಳೆಗೆ ಶಿಕ್ಷೆ!

ಮಾಜಿ ಸಚಿವ ಜೀವರಾಜ್ ವಿರುದ್ಧ ಆತ್ಯಾಚಾರ ಆರೋಪ ಮಾಡಿದ್ದ ಮಹಿಳೆಗೆ ಶಿಕ್ಷೆ!
– ಎನ್.ಆರ್‌ಪುರ ನ್ಯಾಯಾಲಯ ಆದೇಶ
– ಏನಿದು ಜೀವರಾಜ್ ಮೇಲಿದ್ದ ಕೇಸ್..?

NAMMUR EXPRESS NEWS
ನರಸಿಂಹರಾಜಪುರ: ಮಾಜಿ ಸಚಿವ, ಬಿಜೆಪಿ ಮುಖಂಡ ಡಿ.ಎನ್ ಜೀವರಾಜ್ ವಿರುದ್ಧ 2013ರಲ್ಲಿ ದಾಖಲಾಗಿದ್ದ ಆತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವರಾಜ್ ವಿರುದ್ಧ ಆರೋಪ ಮಾಡಿದ ಮಹಿಳೆಗೆ ಶಿಕ್ಷೆಯಾಗಿದೆ. ಈ ಹಿಂದೆ ಅರಣ್ಯ ಎಂಬುವವರು ಜೀವರಾಜ್ ವಿರುದ್ಧ ಆತ್ಯಾಚಾರದ ಆರೋಪ ಹೊರಿಸಿ ದೂರು ನೀಡಿದ್ದರು. ನಂತರ ಕೋರ್ಟ್ ಆರೋಪದಲ್ಲಿ ಹುರುಳಿಲ್ಲ ಎಂದು ಕೇಸ್ ವಜಾ ಮಾಡಿತ್ತು. ಜೀವರಾಜ್ ನಿರಪರಾಧಿ ಎಂದು ಸಾಬೀತು ಆಗಿತ್ತು.

ಡಿ.ಎನ್.ಜೀವರಾಜ್, ಮಾಜಿ ಪ.ಪಂ ಅಧ್ಯಕ್ಷ ಆಶಿಶ್ ಕುಮಾರ್, ಮಾಜಿ ತಾ.ಪಂ ಅಧ್ಯಕ್ಷ ನಾಗರಾಜ್ ರವರು ನೀಡಿದ್ದ ಪ್ರತ್ಯೇಕ ಮೂರು ಪ್ರಕರಣಗಳಲ್ಲಿ ಅರಣ್ಯ ಮತ್ತು ಮನು ಎಂಬಾತನ ಮೇಲೆ ಮಾನಹಾನಿ ಪ್ರಕರಣವನ್ನು ದಾಖಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಎನ್.ಆರ್ ಪುರ ನ್ಯಾಯಾಲಯ ಅರಣ್ಯ ಮತ್ತು ಮನು ತಪ್ಪಿತಸ್ಥರು ಎಂದು ಆದೇಶಿಸಿದೆ.