Categories
ಬೆಂಗಳೂರು

ಪಡಿತರ ಪಡೆಯದಿದ್ದರೆ ಬಿಪಿಎಲ್ ಕಾರ್ಡ್‌ ರದ್ದು..!

ಪಡಿತರ ಪಡೆಯದಿದ್ದರೆ ಬಿಪಿಎಲ್ ಕಾರ್ಡ್‌ ರದ್ದು..!
– ಸರ್ಕಾರದಿಂದ ಕೊನೆಯ ಎಚ್ಚರಿಕೆ
– ಸರಕಾರಿ, ವೈದ್ಯ ಸೌಲಭ್ಯಕ್ಕಷ್ಟೇ ಬಿಪಿಎಲ್‌ ಕಾರ್ಡ್‌ ಸೀಮಿತವಾಗಿಸಿಕೊಂಡವರಿಗೆ ಸಂಕಷ್ಟ

NAMMUR EXPRESS NEWS
ಬೆಂಗಳೂರು: ಸತತ ಆರು ತಿಂಗಳ ಕಾಲ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಪದಾರ್ಥಗಳನ್ನು ಪಡೆಯದಿದ್ದರೆ ಪಡಿತರ ಚೀಟಿಯನ್ನೇ ರದ್ದುಗೊಳಿಸಲಾಗುತ್ತಿದ್ದು, ಇದೀಗ ಅಂಥಹವರಿಗೆ ಅಂತಿಮ ಎಚ್ಚರಿಕೆಯನ್ನು ನೀಡುವ ಪ್ರಕ್ರಿಯೆ ನಡೆದಿದೆ.
ಕೇವಲ ಸರಕಾರಿ ಸೌಲಭ್ಯಗಳು, ಆರೋಗ್ಯ ಸಂಬಂಧಿ ಶಸ್ತ್ರ ಚಿಕಿತ್ಸೆ ಉದ್ದೇಶಕ್ಕಾಗಿಯೇ ಸಾವಿರಾರು ಮಂದಿ ಬಿಪಿಎಲ್‌ ಕಾರ್ಡ್‌ ಪಡೆದಿದ್ದಾರೆ. ಅಂಥವರಿಗೆ ಪಡಿತರ ಪದಾರ್ಥ ಬೇಕಿಲ್ಲ. ನ್ಯಾಯಬೆಲೆ ಅಂಗಡಿಗೆ ಹೋಗುವ ವ್ಯವಧಾನವೂ ಅವರಿಗಿಲ್ಲ. ಹೀಗೆ ಸತತ 6 ತಿಂಗಳು ಪಡಿತರ ಪಡೆಯದಿದ್ದರೆ ಅವರ ಹೆಸರಿನಲ್ಲಿರುವ ಪಡಿತರ ಚೀಟಿಯನ್ನೇ ರದ್ದುಗೊಳಿಸಲಾಗುವುದು ಎಂದು ಆಹಾರ ಇಲಾಖೆ ಎಚ್ಚರಿಕೆ ನೀಡಿದೆ.

ಮುಂದಿನ ತಿಂಗಳು ಪಡಿತರ ಪದಾರ್ಥ ಪಡೆಯದಿದ್ದರೆ ಅವರ ರೇಷನ್‌ ಕಾರ್ಡ್‌ ರದ್ದುಗೊಳ್ಳಲಿದೆ. ಪಡಿತರ ಪದಾರ್ಥವಷ್ಟೇ ಅಲ್ಲ, ಅವರಿಗೆ ರೇಷನ್‌ ಕಾರ್ಡ್‌ ಮೂಲಕ ದೊರೆಯುವ ಸರಕಾರದ ಇನ್ಯಾವುದೇ ಸೌಲಭ್ಯ ಸಿಗುವುದಿಲ್ಲ. ಬಡವರಿಗೆ ಮಾರುಕಟ್ಟೆ ದರದಲ್ಲಿ ಅಕ್ಕಿಯನ್ನು ಖರೀದಿಸಲು ಸಾಧ್ಯವಾಗುವುದಿಲ್ಲಎಂಬ ಕಾರಣಕ್ಕೆ ರಾಜ್ಯ ಸರಕಾರ ಬಿಪಿಎಲ್‌ ಕಾರ್ಡುದಾರರಿಗೆ ಅಕ್ಕಿ ಹಾಗೂ ಹಣವನ್ನು ನೀಡುತ್ತಿದೆ. ನಿಜಕ್ಕೂ ಈ ಸೌಲಭ್ಯ ನೈಜ ಬಡವರಿಗೆ ಸಿಗುತ್ತಿದೆಯೇ ಎಂಬುದನ್ನು ಪತ್ತೆ ಹಚ್ಚಲು ಸಹ ಈ ಮಾಹಿತಿ ಸಂಗ್ರಹಿಸುವ ಕಾರ್ಯ ಸಹಾಯಕವಾಗಲಿದೆ.

ಬಿಪಿಎಲ್ ಕುಟುಂಬ ಬೇರೆಡೆಗೆ ತೆರಳಿದೆಯೇ? ಅವರು ಕೇವಲ ಆರೋಗ್ಯ ಸಂಬಂಧಿ ಸೌಲಭ್ಯಕ್ಕಾಗಿ ಪಡಿತರ ಚೀಟಿ ಪಡೆದುಕೊಂಡಿದ್ದಾರೆಯೇ ? ಆ ಪಡಿತರ ಚೀಟಿದಾರರು ಮರಣ ಹೊಂದಿದ್ದಾರೆಯೇ ? ಎಂಬಿತ್ಯಾದಿ ಮಾಹಿತಿಗಳನ್ನು ಇದೀಗ ಅರೋಗ್ಯ ಇಲಾಖೆ ಕಲೆ ಹಾಕಲಾಗುತ್ತಿದೆ. ಇದೆಲ್ಲವನ್ನೂ ಸಂಗ್ರಹಿಸಿ ರಾಜ್ಯ ಮಟ್ಟಕ್ಕೆ ಕಳುಹಿಸಲಾಗುತ್ತದೆ. ಸೂಕ್ತ ಮಾಹಿತಿ ಆಧರಿಸಿ ಯಾವ್ಯಾವ ಪಡಿತರ ಚೀಟಿಗಳನ್ನು ರದ್ದು ಮಾಡಬೇಕೆಂಬುದನ್ನು ಹಿರಿಯ ಅಧಿಕಾರಿಗಳು ನಿರ್ಧಾರ ಮಾಡುತ್ತಾರೆ.
ಪಡಿತರ ಚೀಟಿಗೆ ಬ್ಯಾಂಕ್‌ನಲ್ಲಿ ಆಧಾರ್‌ಗೆ ಪಡಿತರ ಕಾರ್ಡ್‌ ಲಿಂಕ್‌ ಆಗಿದೆಯೇ, ಬ್ಯಾಂಕ್‌ ಅಕೌಂಟ್‌ ಮಾಹಿತಿ ಸರಿಯಾಗಿದೆಯೇ?, ಇ ಕೆವೈಸಿ ಅಪ್‌ಡೇಟ್‌ ಆಗಿದೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳಬೇಕು ಎಂಬುದಾಗಿ ಆಹಾರ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Categories
ಬೆಂಗಳೂರು

ನಟ ದರ್ಶನ್‌, ರಾಕ್‌ಲೈನ್‌, ವಿನಯ್‌ ಗುರೂಜಿಗೂ ಹುಲಿ ಉಗುರು ಕಂಟಕ?

ನಟ ದರ್ಶನ್‌, ರಾಕ್‌ಲೈನ್‌, ವಿನಯ್‌ ಗುರೂಜಿಗೂ ಹುಲಿ ಉಗುರು ಕಂಟಕ?
– ಹುಲಿಯುಗುರು ಧರಿಸಿದ ಕಾರಣಕ್ಕೆ ವರ್ತೂರು ಸಂತೋಷ್‌ ಬಂಧನ
– ಜನತಾ ಪಕ್ಷದ ಹೆಸರಿನಲ್ಲಿ ಪೊಲೀಸರಿಗೆ ದೂರು ನೀಡಲು ಸಿದ್ಧತೆ

NAMMUR EXPRESS NEWS
ಬೆಂಗಳೂರು: ಹುಲಿಯುಗುರಿನ ಪೆಂಡೆಂಟ್‌ ಧರಿಸಿದ್ದ ಕಾರಣಕ್ಕಾಗಿ ಕೃಷಿಕ ವರ್ತೂರು ಸಂತೋಷ್‌ ಅವರನ್ನು ಬಿಗ್‌ ಬಾಸ್‌ ಮನೆಯಿಂದಲೇ ಅರಣ್ಯಾಧಿಕಾರಿಗಳು ಅರೆಸ್ಟ್‌ ಮಾಡಿದ ಘಟನೆಯ ಬೆನ್ನಿಗೇ ಸಾರ್ವಜನಿಕ ವಲಯದಲ್ಲಿ ಭಾರಿ ಸಂಚಲನ ಸೃಷ್ಟಿಯಾಗಿದೆ. ಹುಲಿಯುಗುರಿನ ಚೈನ್‌ ಧರಿಸಿದ ನಟರು, ಹುಲಿಯ ಚರ್ಮದ ಮೇಲೆ ಕುಳಿತ ಸ್ವಾಮೀಜಿಗಳ ಮೇಲೆ ಜನರ ಕಣ್ಣು ಬಿದ್ದಿದೆ. ಇದರಲ್ಲಿ ಮುಖ್ಯವಾಗಿ ಈಗ ಜನರ ಗಮನ ಸೆಳೆದಿರುವುದು ನಟ ದರ್ಶನ್‌ ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಮತ್ತು ಕೊಪ್ಪದ ಗೌರಿ ಗದ್ದೆ ಆಶ್ರಮದ ಶ್ರೀ ವಿನಯ್‌ ಗುರೂಜಿ ಅವರು. ಅವರ ವಿರುದ್ಧವೂ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿ ಪೊಲೀಸರಿಗೆ ದೂರು ಕೂಡಾ ನೀಡಲು ಸಿದ್ಧತೆ ನಡೆದಿದೆ.

ಜನತಾ ಪಕ್ಷದ ಹೆಸರಿನಲ್ಲಿ ಪೊಲೀಸರಿಗೆ ದೂರು ನೀಡಲು ಸಿದ್ಧತೆ

ಚಾಲೆಂಜಿಂಗ್ ಸ್ಟಾರ್ ದರ್ಶನ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್‌ ಹಾಗೂ ಗೌರಿಗದ್ದೆ ಮಠದ ಶ್ರೀ ವಿನಯ್ ಗುರೂಜಿ ಅವರ ವಿರುದ್ಧ ಪೊಲೀಸರಿಗೆ ಮತ್ತು ಅರಣ್ಯಾಧಿಕಾರಿಗಳಿಗೆ ದೂರು ನೀಡುವುದಾಗಿ ಜನತಾ ಪಕ್ಷದ ನಾಯಕರು ಹೇಳಿದ್ದಾರೆ.
ಜನತಾಪಕ್ಷದಿಂದ ಸಲ್ಲಿಕೆಯಾಗಿರುವ ದೂರು ವನ್ಯಜೀವಿ ಕಾಯಿದೆ 1972 ಅಡಿಯಲ್ಲಿ ಪ್ರಿನ್ಸಿಪಲ್ ಸೆಕ್ರೆಟರಿ ಸಂಜಯ್ ಎಸ್ ಬಿಜ್ಜು ಅವರಿಗೆ ಮತ್ತು ನಂತರ ಮಲ್ಲೇಶ್ವರಂನಲ್ಲಿರುವ ಅರಣ್ಯ ಇಲಾಖೆಯ ಮುಖ್ಯಾಧಿಕಾರಿಗಳಿಗೆ ದೂರು ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಲಾಗಿದೆ. ಜನತಾ ಪಕ್ಷದ ರಾಜ್ಯಾಧ್ಯಕ್ಷ ಕೆ.ಎಂ ಪಾಲಾಕ್ಷಪ್ಪ, ಬೆಂಗಳೂರು ಘಟಕದ ಅಧ್ಯಕ್ಷರ ರಾಜು ಎ, ರಾಜ್ಯ ಪ್ರಧಾನ ಕಾರ್ಯದರ್ಶಿ ಈಶ್ವರ್ ಎಚ್.ಎ, ರಾಜ್ಯ ಉಪಾಧ್ಯಕ್ಷ ನಳಿನಿ ಗೌಡ, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಅಬ್ದುಲ್ ರೌಫ್ ಸೇರಿದಂತೆ ಪಕ್ಷದ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಲಾಗಿದೆ.

ಜನಪರ ವೇದಿಕೆ ಸಂಘಟನೆಯಿಂದಲೂ ದೂರಿಗೆ ಸಿದ್ಧತೆ

ಈ ನಡುವೆ, ಜನಪರ ವೇದಿಕೆ ಎಂಬ ಹೆಸರಿನಲ್ಲಿ ಶಿವಕುಮಾರ್‌ ಎಂಬವರು ಚಿತ್ರನಟ ದರ್ಶನ್ ಹಾಗು ವಿನಯ್ ಗುರೂಜಿ‌ ವಿರುದ್ದ ದೂರು ದಾಖಲಿಸಲು ಮುಂದಾಗಿದ್ದಾರೆ. ದರ್ಶನ್ ಹುಲಿ ಉಗುರು ಧರಿಸಿರುವ ಹಾಗು ವಿನಯ್ ಗುರೂಜಿ ಹುಲಿ ಚರ್ಮದ ಮೇಲೆ ಕುಳಿತಿರುವ ಪೋಟೊ ವೈರಲ್ ಆಗುತ್ತಿರುವ ಹಿನ್ನೆಲೆಯಲ್ಲಿ ದೂರು ನೀಡಲು ನಿರ್ಧರಿಸಲಾಗಿದೆ. ಅರಣ್ಯಧಿಕಾರಿಯನ್ನು ಭೇಟಿ ಮಾಡಿ ದೂರು ಸಲ್ಲಿಸಿರುವ ಶಿವಕುಮಾರ್, ಬುಧವಾರ ಇಬ್ಬರ ಮೇಲೂ ದೂರನ್ನು ದಾಖಲು ಮಾಡಬೇಕು. ಇಲ್ಲವಾದಲ್ಲಿ ಅರಣ್ಯ ಇಲಾಖೆ ಮುಂಭಾಗ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ. ದರ್ಶನ್ ಧರಿಸಿದ ಬಂಗಾರದ ಚೈನ್‌ನಲ್ಲಿ ಹುಲಿಯ ಉಗುರು ಇದೆ. ಇದು ಕಾನೂನಿನ ಉಲ್ಲಂಘನೆ. ವಿನಯ್ ಗುರೂಜಿ ಹುಲಿಯ ಚರ್ಮದ ಮೇಲೆ ಕೂತಿದ್ದಾರೆ. ಹುಲಿಯ ಉಗುರು ಇದ್ದ ಕಾರಣ ವರ್ತೂರು ಸಂತೋಷರ ಬಂಧನವಾಗಿರುವ ಹಿನ್ನೆಲೆಯಲ್ಲಿ ನಟ ದರ್ಶನ್, ವಿನಯ್ ಗುರೂಜಿಯನ್ನು ಕರೆಸಿ ಅವರು ಧರಿಸಿದ್ದು ಅಸಲಿನೋ, ನಕಲಿಯೋ ಪರಿಶೀಲಿಸಬೇಕು ಎಂದು ಅಧಿಕಾರಿಗಳನ್ನು ಒತ್ತಾಯಿಸಲಾಗಿದೆ.

Categories
ತೀರ್ಥಹಳ್ಳಿ

ಆಯುಧ ಪೂಜೆ ತೀರ್ಥಹಳ್ಳಿ ರಂಗು!

ಆಯುಧ ಪೂಜೆ ತೀರ್ಥಹಳ್ಳಿ ರಂಗು!
– ಬೆಳಕಿನ ಅಲಂಕಾರ, ಸಿಂಗಾರದಲ್ಲಿ ಮಿಂದೆದ್ದ ತೀರ್ಥಹಳ್ಳಿ
– ಆಟೋ ನಿಲ್ದಾಣಗಳಿಗೆ ಆರಗ ಜ್ಞಾನೇಂದ್ರ ಭೇಟಿ

NAMMUR EXPRESS NEWS
ತೀರ್ಥಹಳ್ಳಿಯ ಪಟ್ಟಣ ಮತ್ತು ತಾಲೂಕಿನ ಎಲ್ಲಾ ಕಡೆ ಆಯುಧ ಪೂಜೆ ಸಂಭ್ರಮದಿಂದ ನಡೆಯಿತು. ಅಂಗಡಿ ಮಳಿಗೆಗಳು ಅಲಂಕಾರ ಮಾಡಿದ್ದು, ಬಸ್, ಕಾರು, ಲಾರಿಗಳಿಗೂ ಪೂಜೆ ಮಾಡಲಾಯಿತು. ಆಟೋ ನಿಲ್ದಾಣ, ಕಾರು ನಿಲ್ದಾಣ, ಬಸ್ ನಿಲ್ದಾಣ, ವಾಹನಗಳ ಸಿಂಗಾರ ಮಾಡಿದ್ದು ವಿದ್ಯುತ್ ಅಲಂಕಾರ ಮಾಡಿದ್ದು ಗಮನ ಸೆಳೆಯಿತು ತೀರ್ಥಹಳ್ಳಿ ಮುಖ್ಯ ಬಸ್ ನಿಲ್ದಾಣ, ಆಸ್ಪತ್ರೆ ಎದುರು, ಕೊಪ್ಪ ಸರ್ಕಲ್, ತಾಲೂಕು ಆಫೀಸ್, ಗಾಂಧಿ ಚೌಕ, ಆಗುಂಬೆ ನಿಲ್ದಾಣ, ಸಾಗರ ರಸ್ತೆ ಆಟೋ ನಿಲ್ದಾಣ, ಬಸ್ ನಿಲ್ದಾಣ, ಕಾರು ನಿಲ್ದಾಣ, ಕಚೇರಿಗಳು ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದ್ದವು. ಎಲ್ಲೆಡೆ ಅಂಗಡಿಗಳು, ವಾಹನಗಳಿಗೆ ಹೂವುಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ಕೊಪ್ಪ ಸರ್ಕಲ್ ಮತ್ತು ಆಸ್ಪತ್ರೆ ಆಟೋ ನಿಲ್ದಾಣಕ್ಕೆ ಮಾಜಿ ಗೃಹ ಸಚಿವ, ಶಾಸಕ ಆರಗ ಜ್ಞಾನೇಂದ್ರ ಭೇಟಿ ನೀಡಿ ಶುಭ ಹಾರೈಸಿದರು.

Categories
ರಾಜ್ಯ

ವೈಭವದ ನವರಾತ್ರಿಗೆ ಇಂದು ತೆರೆ!

ವೈಭವದ ನವರಾತ್ರಿಗೆ ಇಂದು ತೆರೆ!
– 9 ದಿನವೂ ದೇವಸ್ಥಾನಗಳಲ್ಲಿ ವಿಶೇಷ ಅಲಂಕಾರ
– ಮೈಸೂರು ಸೇರಿ ಇಂದು ಎಲ್ಲೆಡೆ ಜಂಬೂ ಸವಾರಿ
– ವಿಜಯದ ಸಂಕೇತ ವಿಜಯ ದಶಮಿ

NAMMUR EXPRESS NEWS
ನಾಡಿನಾದ್ಯಂತ ನವರಾತ್ರಿ ಹಬ್ಬದ ಸಂಭ್ರಮ ಈ ಬಾರಿ ಅದ್ದೂರಿಯಾಗಿ ಆಚರಣೆ ಆಗಿದ್ದು ಕೊನೆ ಹಂತಕ್ಕೆ ಬಂದಿದೆ.
ಅಕ್ಟೋಬರ್ 15ರಂದು ನವರಾತ್ರಿ ಶುರುವಾಗಿದ್ದು, ಕೆಟ್ಟದರ ವಿರುದ್ಧ ಒಳಿತಿನ ವಿಜಯದ ಸಂಕೇತವಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ನವರಾತ್ರಿಯನ್ನು ವಿಶೇಷವಾಗಿ ಮೈಸೂರಿನಲ್ಲಿ ಆಚರಣೆ ಮಾಡಲಾಗುತ್ತಿದೆ. ಇಂದು ಜಂಬೂ ಸವಾರಿ ನಡೆಯಲಿದೆ. ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಸ್ಥಳವಾಗಿ ಗುರುತಿಸಿಕೊಂಡಿರುವ ಶೃಂಗೇರಿ ಶಾರದಾಂಬ ದೇವಸ್ಥಾನ ಪ್ರತಿನಿತ್ಯ ಸಾವಿರಾರು ಭಕ್ತರನ್ನು ತನ್ನತ್ತ ಸೆಳೆಯುತ್ತಿದೆ. ಅದರಲ್ಲೂ ನವರಾತ್ರಿ ಸಮಯದಲ್ಲಂತೂ ಭಕ್ತರ ಪ್ರವಾಹವೇ ಹರಿದು ಬಂದಿದೆ.

ಎಲ್ಲಾ ದೇವಿ ದೇವಾಲಯಗಳಲ್ಲಿ ಪ್ರತಿ ದಿನ ಕ್ರಮವಾಗಿ ಹಂಸವಾಹನ ಅಲಂಕಾರ, ವೃಷಭವಾಹನ ಅಲಂಕಾರ, ಮಯೂರವಾಹನ ಅಲಂಕಾರ, ಗರುಡವಾಹನ ಅಲಂಕಾರ, ಇಂದ್ರಾಣಿ ಅಲಂಕಾರ, ವೀಣಾಶಾರದಾ ಅಲಂಕಾರ, ಮೋಹಿನಿ ಅಲಂಕಾರ, ರಾಜರಾಜೇಶ್ವರಿ ಅಲಂಕಾರ, ಸಿಂಹವಾಹನ ಅಲಂಕಾರ, ಗಜಲಕ್ಷ್ಮೀ ಅಲಂಕಾರಗಳನ್ನು ಮಾಡಲಾಗಿದೆ.
ಚಂಡಿಕಾ ಹೋಮ, ರಥೋತ್ಸವ, ವಿವಿಧ ಅಲಂಕಾರ, ಪೂಜೆ, ಮಹಾಭಿಷೇಕ, ಶತರುದ್ರಾಭಿಷೇಕ ನಡೆದಿದೆ.

ಮೈಸೂರು ದಸರಾವನ್ನು ನಾಡಹಬ್ಬ ಎಂದೂ ಕರೆಯಲಾಗುತ್ತದೆ. ವಿಜಯ ದಶಮಿಯಂದು ನಡೆಯುವ ಜಂಬೂ ಸವಾರಿ ಪ್ರವಾಸಿಗರ ಆಕರ್ಷಣೆಯ ಕೇಂದ್ರ. ಮೆರವಣಿಗೆ ಜತೆ ಸಾಗುವ ಕಲಾತಂಡಗಳು, ಕವಾಯತು, ಅಶ್ವ ಪಡೆ, ಪೋಲಿಸ್ ವಾದ್ಯಗೋಷ್ಠಿ, ಸರ್ಕಾರದ ವಿವಿಧ ಇಲಾಖೆಗಳ ಸ್ತಬ್ಧ ಚಿತ್ರಗಳು ಸಂಭ್ರಮವನ್ನು ಹೆಚ್ಚಿಸುತ್ತವೆ. ಅಂಬಾರಿಯಲ್ಲಿ ಚಾಮುಂಡಿ ದೇವರ ವಿಗ್ರಹವನ್ನು ಇಟ್ಟು ಪೂಜಿಸಲಾಗುತ್ತದೆ. ಎಲ್ಲೆಡೆ ವಿಜಯ ದಶಮಿಯಂದು ಹೊಸ ಉದ್ಯಮಗಳು ಶುರುವಾಗುತ್ತಿವೆ.

Categories
ಚಿಕ್ಕಮಗಳೂರು

ಹುಲಿ ಉಗುರಿನ ಡಾಲರ್ ಧರಿಸಿದ್ದ ಇಬ್ಬರು ಅರೆಸ್ಟ್!

ಹುಲಿ ಉಗುರಿನ ಡಾಲರ್ ಧರಿಸಿದ್ದ ಇಬ್ಬರು ಅರೆಸ್ಟ್!
– ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಅರಣ್ಯ ಇಲಾಖೆ ಅಧಿಕಾರಿಗಳ ದಾಳಿ
– ಏನಿದು ಘಟನೆ… ದಾಳಿ ಮಾಡಿದ್ದು ಏಕೆ..?

NAMMUR EXPRESS NEWS
ಚಿಕ್ಕಮಗಳೂರು: ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದ ಬಿಗ್ ಬಾಸ್ ಸ್ಪರ್ಧಿ ವರ್ತೂರ್ ಸಂತೋಷ್ ಈಗ ಜೈಲು ಪಾಲಾಗಿದ್ದಾರೆ. ಈ ನಡುವೆ ಎಲ್ಲೆಡೆ ಇಂತಹ ಪ್ರಕರಣಗಳ ಮೇಲೆ ಅರಣ್ಯ ಇಲಾಖೆ ಕಣ್ಣಿಟ್ಟಿದೆ.
ಚಿಕ್ಕಮಗಳೂರಿನಲ್ಲಿಯೂ ಅಂಥದ್ದೇ ಪ್ರಕರಣ ಹೊರಬಿದ್ದಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಅರಣ್ಯ ಇಲಾಖೆ ಸಿಬ್ಬಂದಿಯಿಂದ ಹುಲಿ ಉಗುರಿನ ಡಾಲರ್ ಧರಿಸಿದ್ದ ಇಬ್ಬರನ್ನು ಬಂಧಿಸಿದ್ದು, ಮತ್ತಿಬ್ಬರು ಎಸ್ಕೆಪ್ ಆಗಿದ್ದಾರೆ.
ಭಾರತಿಬೈಲು ಬಳಿಯ ಕುಂಡ್ರ ಗ್ರಾಮದ ನಿವಾಸಿಯಾದ ಸತೀಶ್ ಹಾಗೂ ಹಲ್ಲೇಮನೆ ಕುಂದೂರು ನಿವಾಸಿ ಕೆ.ಎಸ್.ರಂಜಿತ್ ಬಂಧಿತ ಆರೋಪಿಗಳು, ಮೂಡಿಗೆರೆ ತಾಲೂಕಿನ ಕುಂಡ್ರ, ಹಲ್ಲೇಮನೆ ಗ್ರಾಮದಲ್ಲಿ ಹುಲಿ ಉಗುರು ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳು ಪರಾರಿ ಆಗಿದ್ದಾರೆ. ಹುಲಿ ಉಗುರಿನ ಒಂದು ಡಾಲರ್‌ನ್ನು ಅರಣ್ಯ ಸಿಬ್ಬಂದಿಗಳು ವಶಪಡಿಸಿಕೊಂಡಿದ್ದಾರೆ.

Categories
ಶಿವಮೊಗ್ಗ

ದಸರಾಗೆ ಬಂದಿದ್ದ ಆನೆ ಹೆಣ್ಣು ಮರಿಗೆ ಜನ್ಮ ನೀಡಿತು!

ದಸರಾಗೆ ಬಂದಿದ್ದ ಆನೆ ಹೆಣ್ಣು ಮರಿಗೆ ಜನ್ಮ ನೀಡಿತು!
– ಶಿವಮೊಗ್ಗದಲ್ಲಿ ಹೆಣ್ಣು ಮರಿಗೆ ಜನ್ಮ ನೀಡಿದ ನೇತ್ರಾವತಿ
– ಸಕ್ರೆಬೈಲು ಆನೆ ಬಿಡಾರದಿಂದ ಬಂದಿದ್ದ ಆನೆ
– ಶಿವಮೊಗ್ಗದಲ್ಲೂ ಸಂಭ್ರಮದ ದಸರಾ

NAMMUR EXPRESS NEWS
ಶಿವಮೊಗ್ಗ: ಜಂಬೂ ಸವಾರಿಯಲ್ಲಿ ಭಾಗವಹಿಸಲು ಬಂದಿದ್ದ ನೇತ್ರಾವತಿ ಆನೆ ಮರಿ ಹಾಕಿದ ಘಟನೆ ಬೆಳಕಿಗೆ ಬಂದಿದೆ. ಶಿವಮೊಗ್ಗದ ಕೋಟೆ ರಸ್ತೆಯ ವಾಸವಿ ಶಾಲೆ ಆವರಣದಲ್ಲಿ ಆನೆ ಹೆಣ್ಣು ಮರಿಗೆ ಜನ್ಮ ನೀಡಿದೆ. 28 ವರ್ಷದ ನೇತ್ರಾವತಿ ಜಂಬೂ ಸವಾರಿಯಲ್ಲಿ ಭಾಗವಹಿಸಲು ಬಂದಿತ್ತು. ಸಕ್ರೇಬೈಲು ಆನೆ ಬಿಡಾರದಿಂದ ಆಗಮಿಸಿತ್ತು. ಇಂದು ದಸರಾ ಮೆರವಣಿಗೆಯಲ್ಲಿ ಭಾಗವಹಿಸಲು ಬಂದಿತ್ತು. ಇದೀಗ ನೇತ್ರಾವತಿ ಆನೆ 5ನೇ ಬಾರಿ ಮರಿ ಹಾಕುವ ಮೂಲಕ ಎಲ್ಲರಿಗೂ ಅಚ್ಚರಿ ನೀಡಿದೆ.

ಇನ್ನು ನೇತ್ರಾವತಿ ಆನೆಯನ್ನು ವೈದ್ಯ ಡಾ. ವಿನಯ್ ಪರಿಶೀಲಿಸಿದ್ದರು. ಕಳೆದ 3 ತಿಂಗಳ ಹಿಂದೆ ಡಾ.ವಿನಯ್ ಅನಾರೋಗ್ಯಕ್ಕೀಡಾಗಿ ರಜೆಯಲ್ಲಿದ್ದರು. ಆದರೆ ಆನೆ ಗರ್ಭ ಧರಿಸಿದ್ದು, ಗೊತ್ತಾಗದೆ ನೇತ್ರಾವತಿಯನ್ನು ಕರೆ ತಂದಿದ್ದರು. ಸದ್ಯ ಬಾಣಂತಿ ಆನೆಯ ಆರೈಕೆಯಲ್ಲಿ ತೊಡಗಿರುವ ಮಾವುತರು, ಕಾವಾಡಿಗರು ತೊಡಗಿದ್ದಾರೆ. ಹಾಗಾಗಿ ಇಂದಿನ ಜಂಬೂ ಸವಾರಿಯಲ್ಲಿ ನೇತ್ರಾವತಿ ಭಾಗವಹಿಸುವುದು ಅನುಮಾನ. ಮತ್ತೊಂದೆಡೆ ಗರ್ಭಿಣಿ ಆನೆಯನ್ನು ಮೆರವಣಿಗೆಗೆ ಕರೆತಂದ ಬಿಡಾರದ ವೈದ್ಯರು-ಸಿಬ್ಬಂದಿ ಬಗ್ಗೆ ಸ್ಥಳೀಯರ ಅಸಮಾಧಾನ ಹೊರಹಾಕಿದ್ದಾರೆ. ಶಿವಮೊಗ್ಗದಲ್ಲೂ ಸಂಭ್ರಮದ ದಸರಾ ಆಚರಣೆ ಮಾಡಲಾಗುತ್ತಿದ್ದು, ಇಂದು ತೆರೆ ಕಾಣಲಿದೆ.

Categories
ತೀರ್ಥಹಳ್ಳಿ

ತೀರ್ಥಹಳ್ಳಿ ದಸರಾದಲ್ಲಿ ಸ್ತಬ್ದ ಚಿತ್ರದ ಝಲಕ್!

ತೀರ್ಥಹಳ್ಳಿ ದಸರಾದಲ್ಲಿ ಸ್ತಬ್ದ ಚಿತ್ರದ ಝಲಕ್!
– 20ಕ್ಕೂ ಹೆಚ್ಚು ಸ್ತಬ್ದ ಚಿತ್ರಗಳ ಮೆರವಣಿಗೆ
– ನಾಡಿನ ಖ್ಯಾತ ಜಾನಪದ ತಂಡಗಳ ಕಲರವ
– ಹಿರಣ್ಯ ಕಶಪು ಸೇರಿ ವಿಶೇಷ ಟ್ಯಾಬ್ಲೂಗಳ ಪ್ರದರ್ಶನ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ದಸರಾದಲ್ಲಿ ಟ್ಯಾಬ್ಲೋಗಳು ಪ್ರತಿ ವರ್ಷ ಗಮನ ಸೆಳೆಯುತ್ತಾ ಇದೆ. ವಿಭಿನ್ನ ಬಗೆಯ ದೇವತೆಗಳು,ಅರಣ್ಯ, ಪರಿಸರ ಉಳಿಸಿ ಜಾಗೃತಿ ಸೇರಿದಂತೆ ಅನೇಕ ಟ್ಯಾಬ್ಲೂಗಳನ್ನ ನಾವು ನೋಡಿದ್ದೇವೆ. ಈ ಬಾರಿ ವಿಶೇಷವಾಗಿ ಹಿರಣ್ಯ ಕಶಪು ಟ್ಯಾಬ್ಲೋ ಗಮನ ಸೆಳೆಯುತ್ತಾ ಇದೆ. ಈಗಾಗಲೇ ಕೋಳಿ ಕಾಲು ಗುಡ್ಡದಲ್ಲಿ ಸ್ತಬ್ದ ಚಿತ್ರ ಸಿದ್ಧವಾಗುತ್ತಿದೆ. ಯುವ ಮುಖಂಡ ಆದರ್ಶ, ಇಂಜಿನಿಯರ್ ನವೀನ್ ನೇತೃತ್ವದಲ್ಲಿ ಈ ಸ್ತಬ್ದ ಚಿತ್ರ ನಿರ್ಮಾಣ ಮಾಡಲಾಗುತ್ತಿದೆ. ಇನ್ನು ತೀರ್ಥಹಳ್ಳಿ ಜನಪದ ಪರಿಷತ್ ವತಿಯಿಂದ ವಿಭಿನ್ನ ಜನಪದ ಕಲಾವಿದರ ಸ್ತಬ್ದ ಚಿತ್ರ ಇದೆ. ವರಹ ಸೇರಿ ಈ ಬಾರಿ ದಸರಾದಲ್ಲಿ 20ಕ್ಕೂ ಹೆಚ್ಚು ಟ್ಯಾಬ್ಲೋಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ. ಇನ್ನು ದಸರಾ ಮೆರವಣಿಗೆಯಲ್ಲಿ ಜನಪದ ಕಲಾವಿದರು ವಿವಿಧ ವೇಷ ಭೂಷಣಗಳು ಹಾಗೂ ಚಿತ್ತಾರಗಳು ಗಮನ ಸೆಳೆಯಲಿದ್ದು ಸರ್ವರನ್ನ ದಸರಾ ಸಮಿತಿ ಸ್ವಾಗತಿಸಿದೆ.

Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ನೂತನ ಚಿಟ್ಸ್ ಫಂಡ್ಸ್ ಶುರು

ತೀರ್ಥಹಳ್ಳಿಯಲ್ಲಿ ನೂತನ ಚಿಟ್ಸ್ ಫಂಡ್ಸ್ ಶುರು
– ವಿಜಯದಶಮಿಯಂದು ಸಪ್ತಸಿರಿ ಚಿಟ್ಸ್ ಫಂಡ್ಸ್ ಉದ್ಘಾಟನೆ
– ತೀರ್ಥಹಳ್ಳಿಯ ಪ್ರಸಿದ್ಧ ಉದ್ಯಮಿಗಳ ಉದ್ಯಮ
– ಸರ್ವರಿಗೂ ಸ್ವಾಗತ ಕೋರಿದ ಆಡಳಿತ ಮಂಡಳಿ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಅನೇಕ ಉದ್ಯಮಗಳು ಹುಟ್ಟಿ ಬೆಳೆದಿವೆ. ಜೊತೆಗೆ ಅನೇಕರ ಅಭಿವೃದ್ಧಿಗೆ ಕಾರಣವಾಗಿವೆ. ಈ ನಡುವೆ ತೀರ್ಥಹಳ್ಳಿಯಲ್ಲಿ ಮತ್ತೊಂದು ಹೊಸ ಉದ್ಯಮ ವಿಜಯದಶಮಿ ಎಂದು ಉದ್ಘಾಟನೆಗೊಳ್ಳಲಿದೆ.
ಸಪ್ತ ಸಿರಿ ಚಿಟ್ಸ್ ಫಂಡ್ ಪ್ರೈವೇಟ್ ಲಿಮಿಟೆಡ್ ಎಂಬ ನೂತನ ಉದ್ಯಮ ತೀರ್ಥಹಳ್ಳಿಯ ಗಾಂಧಿ ಚೌಕ ಸಮೀಪದ ಅನ್ನಪೂರ್ಣ ಜ್ಯುವೆಲ್ಲರಿ ಕಟ್ಟಡದ ಮೇಲ್ಭಾಗದಲ್ಲಿ ಶುರುವಾಗಲಿದೆ. ಅಕ್ಟೋಬರ್ 24ರ ಮಂಗಳವಾರ ಬೆಳಗ್ಗೆ 11 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನೆರವೇರಲಿದೆ. ಈಗಾಗಲೇ ಉದ್ಯಮ ಕ್ಷೇತ್ರದಲ್ಲಿ ತೀರ್ಥಹಳ್ಳಿಯಲ್ಲಿ ಚಾಪು ಮೂಡಿಸಿರುವ ಎಮ್ ಚಂದ್ರಶೇಖರ್ ವ್ಯವಸ್ಥಾಪಕ ನಿರ್ದೇಶಕರಾಗಿದ್ದು, ಅನ್ನಪೂರ್ಣ ಜ್ಯುವೆಲ್ಲರಿಯ ಹೆಚ್ ಎಂ ದಿನೇಶ್ ನಿರ್ದೇಶಕರಾಗಿದ್ದಾರೆ. ಯುವ ಉದ್ಯಮಿ ಅಮರನಾಥ್ ಶೆಟ್ಟಿ , ಪತ್ರಕರ್ತ ರಾಘವೇಂದ್ರ ಮೇಗರವಳ್ಳಿ, ಪ್ರಮುಖರಾದ ಶ್ರೀನಾಥ್ ಮೇಲಿನ ಕೊಪ್ಪ, ತಾರಾನಾಥ್ ಹೆಚ್ ವಿ, ಯುವ ಮುಖಂಡರಾದ ಪ್ರದೀಪ್ ಕೆಳಕೆರೆ ನಿರ್ದೇಶಕರಾಗಿದ್ದಾರೆ.

ಈ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮ ಅಕ್ಟೋಬರ್ 24ರಂದು ನಡೆಯಲಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ತೀರ್ಥಹಳ್ಳಿಯ ಶಾಸಕರಾದ ಆರಗ ಜ್ಞಾನೇಂದ್ರ, ಮಾಜಿ ಶಾಸಕರಾದ ಕಿಮ್ಮನೆ ರತ್ನಾಕರ್, ಸಹಕಾರಿ ನಾಯಕರದ ಡಾ. ಆರ್ ಎನ್ ಮಂಜುನಾಥ ಗೌಡ, ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಗೀತಾ ರಮೇಶ್, ಹಿರಿಯ ಸಹಕಾರಿಗಳು ರಾಜ್ಯ ಅಪೇಕ್ಸ್ ಬ್ಯಾಂಕಿನ ನಿರ್ದೇಶಕರಾದ ಬಸವಾನಿ ವಿಜಯದೇವ್, ಸಹಕಾರಿ ಕ್ಷೇತ್ರದ ಪ್ರಮುಖರಾದ ನಾಗರಾಜ್ ಶೆಟ್ಟಿ, ಬಾಳೆಬೈಲು ರಾಘವೇಂದ್ರ, ರಾಘವೇಂದ್ರ ಶೆಟ್ಟಿ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ತೀರ್ಥಹಳ್ಳಿಯ ಪ್ರಸಿದ್ಧ ಉದ್ಯಮಿಗಳಾದ ನ್ಯಾಷನಲ್ ಸಮೂಹ ಸಂಸ್ಥೆಯ ಪ್ರಮುಖರಾದ ಇಬ್ರಾಹಿಂ ಶರೀಫ್, ವಿ ಟೆಕ್ ಇಂಜಿನಿಯರ್ ಸಂಸ್ಥೆಯ ವಿಶ್ವನಾಥ್ ಕುಂಟವಳ್ಳಿ, ವರ್ತಕ ಸಂಘದ ಅಧ್ಯಕ್ಷರಾದ ಚೈತನ್ಯ ಜವಳಿ, ದಿವ್ಯ ಚೇತನ ಸಹಕಾರಿ ಸಂಸ್ಥೆಯ ಪ್ರಮುಖ ಅಧ್ಯಕ್ಷರಾದ ಜಿನ್ ವಿಕ್ಟರ್ ಡಿಸೋಜ , ಉದ್ಯಮಿಗಳು ಮುಖಂಡರಾದ ಆರ್ ಮದನ್, ಒಕ್ಕಲಿಗ ಸಂಘದ ನಿರ್ದೇಶಕರಾದ ಎಸ್ ಕೆ ಧರ್ಮೇಶ್, ರಾಜ್ಯ ನಾರಾಯಣ ಗುರು ವಿಚಾರ ವೇದಿಕೆ ರಾಜ್ಯ ಕಾರ್ಯಧ್ಯಕ್ಷರಾದ ಮುಡುಬ ರಾಘವೇಂದ್ರ, ಸರ್ಕಾರಿ ನೌಕರ ಸಂಘದ ಅಧ್ಯಕ್ಷರಾದ ಟಿ ವಿ ಸತೀಶ್ ಶೆಟ್ಟಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಮಹಾಬಲೇಶ್ ಹೆಗಡೆ, ಸೇರಿದಂತೆ ತೀರ್ಥಹಳ್ಳಿಯ ಪ್ರಮುಖರು ಭಾಗಿಯಾಗಲಿದ್ದಾರೆ. ಈ ಕಾರ್ಯಕ್ರಮಕ್ಕೆ ಸಪ್ತಸಿರಿ ಚಿಟ್ಸ್ ಪ್ರೈವೇಟ್ ಲಿಮಿಟೆಡ್ ನ ಎಲ್ಲಾ ನಿರ್ದೇಶಕರು ಸರ್ವರನ್ನು ಸ್ವಾಗತಿಸಿದ್ದಾರೆ.

Categories
ಮಲ್ನಾಡ್

ಮಳೆ ಇಲ್ಲ, ಬಿಸಿಲು ಜೋರು, ಚಳಿ ಶುರು..!

ಮಳೆ ಇಲ್ಲ, ಬಿಸಿಲು ಜೋರು, ಚಳಿ ಶುರು..!
– ಬಿಸಿಲಿಗೆ ಕಂಗೆಟ್ಟ ಜನ: ಸಂಜೆಯಾಗುತ್ತಿದ್ದಂತೆ ಕೊಂಚ ಚಳಿ
– ಹವಾಮಾನದ ಏರುಪೇರು: ಮುಂದೇನು ಎಂಬ ಆತಂಕ..!

NAMMUR EXPRESS NEWS
ಮಲೆನಾಡು: ಮಲೆನಾಡಿನಲ್ಲಿ ಈ ಬಾರಿ ಮಳೆ ಕಡಿಮೆಯಾಗಿದೆ. ಮಳೆ ಪ್ರಮಾಣ ಕಡಿಮೆಯಾಗಿರುವುದರಿಂದ ನದಿ ಕೆರೆಗಳು ಬತ್ತಿ ಹೋಗಿವೆ, ಈಗಾಗಲೇ ಬಿಸಿಲಿನ ಜಳ ಹೆಚ್ಚಿದ್ದು ಗಿಡಗಳು ಒಣಗುತ್ತಿವೆ. ಈ ನಡುವೆ ಮಲೆನಾಡಿನಲ್ಲಿ ಕಳೆದ ಒಂದು ವಾರದಿಂದ ಬಿಸಿಲಿನ ದಗೆ ಹೆಚ್ಚಾಗಿದೆ. 33 ಸೆ. ಮೀ ತಾಪಮಾನ ದಾಖಲಾಗುತ್ತಿದೆ. ಇದರಿಂದಾಗಿ ಜನ ಕಂಗಲಾಗಿದ್ದಾರೆ. ಇನ್ನು ಅಡಿಕೆ ಕೊಯ್ಲು ಸೀಸನ್ ಆಗಿರುವುದರಿಂದ ಜನತೆ ಈಗಾಗಲೇ ಕೃಷಿ ಚಟುವಟಿಕೆಯಲ್ಲಿ ನಿರತರಾಗಿದ್ದಾರೆ. ಜೊತೆಗೆ ಭತ್ತದ ಗದ್ದೆಗಳಲ್ಲಿ ಕೂಡ ಕೃಷಿ ಚಟುವಟಿಕೆ ಜೋರಾಗಿದೆ. ಈ ನಡುವೆ ನೀರಿಲ್ಲದೆ ಗಿಡಗಳು ಒಣಗುವ ಸಾಧ್ಯತೆ ಹೆಚ್ಚಿದೆ. ಇನ್ನೂ ಚಳಿ ಕೂಡ ಶುರುವಾಗಿದ್ದು ಹವಾಮಾನದಲ್ಲಿ ವೈಪರಿತ್ಯ ಉಂಟಾಗಿದೆ. ಇನ್ನು ಹಲವರಲ್ಲಿ ಸಾಂಕ್ರಾಮಿಕ ರೋಗಗಳು ಹೆಚ್ಚಾಗಿದೆ. ಹೀಗಾಗಿ ಮುಂದೆ ನೀರಿಗೆ ಅಭಾವ ಉಂಟಾಗುವ ಆತಂಕ ಕೂಡ ಎದುರಾಗಿದೆ.

Categories
ತೀರ್ಥಹಳ್ಳಿ

ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಆಯುಧ ಪೂಜೆ!

ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಆಯುಧ ಪೂಜೆ!
– ಡಿವೈಎಸ್, ಇನ್ಸ್ಪೆಕ್ಟರ್ ಸೇರಿ ಎಲ್ಲಾ ಪೊಲೀಸರು ಭಾಗಿ
– ಮೇಲಿನ ಕುರುವಳ್ಳಿಯಲ್ಲಿ ಲಾರಿಗಳಿಗೆ ಪೂಜೆ

NAMMUR EXPRESS NEWS
ತೀರ್ಥಹಳ್ಳಿ: ಆಯುಧ ಪೂಜೆಯನ್ನು ಪಟ್ಟಣದಲ್ಲಿ ಸಡಗರ ಮತ್ತು ಸಂಭ್ರಮದಿಂದ ಆಚರಿಸಿದ್ದು ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಚಾಮುಂಡೇಶ್ವರಿ ದೇವಿಯ ಫೋಟೋ ಜೊತೆಗೆ ಕಲಶ ಪ್ರತಿಷ್ಠಾಪನೆ ಮಾಡಿ ಪೂಜೆ ಮಾಡಿ ಆಯುಧ ಪೂಜೆ ಮಾಡಲಾಯಿತು. ಪೊಲೀಸ್ ವಾಹನಗಳಿಗೆ ಪೂಜೆ ಸಲ್ಲಿಸಿ ಬಂದೂಕು ಮತ್ತು ರಿವಾಲ್ವರ್ ಗಳಿಗೆ ಪೂಜೆ ಮಾಡಲಾಯಿತು. ಈ ಪೂಜೆಯಲ್ಲಿ ಡಿವೈಎಸ್ ಪಿ ಗಜಾನನ ವಾಮನ ಸುತಾರ, ಇನ್ಸೆಕ್ಟರ್ ಅಶ್ವಥ್ ಗೌಡ, ಪಿಎಸ್‌ಐ ಸುಷ್ಮಾ, ಪಿಎಸ್‌ಐ ಶಿವನಗೌಡ ಸೇರಿ ಪೊಲೀಸ್ ಸಿಬ್ಬಂದಿಗಳು ಭಾಗಿಯಾಗಿದ್ದರು.

ಕುರುವಳ್ಳಿಯಲ್ಲಿ ಲಾರಿಗಳಿಗೆ ಪೂಜೆ

ತೀರ್ಥಹಳ್ಳಿ ಉಧ್ಯಮದ ಬೆನ್ನೆಲುಬು ಕುರುವಳ್ಳಿ ಬಂಡೆ. ಕುರುವಳ್ಳಿಯಲ್ಲಿ ಲಾರಿಗಳನ್ನು ಪೂಜೆ ಮಾಡಲಾಯಿತು.

ಆಟೋಗಳಿಗೆ ಬಣ್ಣ ಬಣ್ಣದ ಸಿಂಗಾರ!

ತೀರ್ಥಹಳ್ಳಿ ಗಾಂಧಿ ಚೌಕ ಆಟೋ ನಿಲ್ದಾಣ, ಕಾರು ನಿಲ್ದಾಣಗಳಲ್ಲಿ ಆಟೋ, ಕಾರು ಸಿಂಗಾರ ಮಾಡಲಾಗಿದೆ.