Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ರಾರಾಜಿಸಿದ ಕನ್ನಡ ಭಾವುಟ!

ತೀರ್ಥಹಳ್ಳಿಯಲ್ಲಿ ರಾರಾಜಿಸಿದ ಕನ್ನಡ ಭಾವುಟ!
– ಅಂಗಡಿ ಅಂಗಡಿಗೆ ಕನ್ನಡ ಭಾವುಟ ವಿತರಿಸಿದ ಕರವೇ
– ಇಂದು ಗೋಪಾಲಗೌಡ ರಂಗಮಂದಿರದಲ್ಲಿ ರಾಜ್ಯೋತ್ಸವ
– ಕನ್ನಡ ಡ್ಯಾನ್ಸ್ ಧಮಾಕಾ, ನಗೆ ನಾಟಕ: ಸರ್ವರಿಗೂ ಸ್ವಾಗತ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಕನ್ನಡ ರಕ್ಷಣಾ ವೇದಿಕೆ ತೀರ್ಥಹಳ್ಳಿ ವತಿಯಿಂದ ಕನ್ನಡ ರಾಜ್ಯೋತ್ಸವವನ್ನು ನ.25ರ ಶನಿವಾರ ಸಂಜೆ 5:30ಕ್ಕೆ ತೀರ್ಥಹಳ್ಳಿಯ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಆಯೋಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪಟ್ಟಣದ ಎಲ್ಲಾ ಅಂಗಡಿ, ಕಚೇರಿಗಳಲ್ಲಿ ಕನ್ನಡ ಭಾವುಟ ರಾರಾಜಿಸುತ್ತಿದೆ. ಕರವೇ ಪ್ರಮುಖರು ತೀರ್ಥಹಳ್ಳಿ ಪಟ್ಟಣದಲ್ಲಿ ಕನ್ನಡ ಭಾವುಟವನ್ನು ಅಂಗಡಿ ಅಂಗಡಿಗಳಿಗೆ ಹಂಚಿದರು. ಕರವೇ ರಾಜ್ಯ ಸಂಘಟನಾ ಕಾರ್ಯದರ್ಶಿ ಪಟೇಲ್ ವೆಂಕಟೇಶ್ ಹೆಗ್ಡೆ, ಕರವೇ ಅಧ್ಯಕ್ಷರಾದ ಸುರೇಂದ್ರ ಯಡೂರು ಸೇರಿದಂತೆ 30ಕ್ಕೂ ಹೆಚ್ಚು ಕರವೇ ಕಾರ್ಯಕರ್ತರು ಪ್ರತಿ ಅಂಗಡಿಗೆ ಭಾವುಟ ಹಂಚಿ ರಸ್ತೆಯ ಇಕ್ಕೆಲಗಳಲ್ಲಿ ಭಾವುಟ ಹಾಕಿದ್ದಾರೆ.

ಅದ್ದೂರಿ ಸಾಂಸ್ಕೃತಿಕ ಕಾರ್ಯಕ್ರಮ

ಸಂಜೆ 5:30ಕ್ಕೆ ಶುರುವಾಗುವ ಕಾರ್ಯಕ್ರಮದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ 125 ಕ್ಕೆ 125 ಅಂಕ ಗಳಿಸಿದ ತಾಲೂಕಿನ ವಿದ್ಯಾರ್ಥಿಗಳಿಗೆ ಗೌರವ ಪುರಸ್ಕಾರ ಇರುತ್ತದೆ. ಹಾಗೂ ತೀರ್ಥಹಳ್ಳಿಯ ಡ್ಯಾನ್ಸ್ ಪ್ಯಾಲೇಸ್ ಅಕಾಡೆಮಿ ಇವರಿಂದ ಡ್ಯಾನ್ಸ್ ಕಾರ್ಯಕ್ರಮ ನಂತರ ಶ್ರೀ ದುರ್ಗಾ ಕಲಾತಂಡ ಹಾರಾಡಿ ಬ್ರಹ್ಮಾವರ ಇವರಿಂದ “ಒಂದಲ್ಲ ಒಂದು ಸಮಸ್ಯೆ ” ಎನ್ನುವ ಕುಂದ ಕನ್ನಡದ ಹಾಸ್ಯಮಯ ನಗೆ ನಾಟಕ ನಡೆಯಲಿದೆ.

ಸರ್ವರಿಗೂ ಸ್ವಾಗತ
ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು
ಕರವೇ, ತೀರ್ಥಹಳ್ಳಿ

Categories
ತೀರ್ಥಹಳ್ಳಿ

ತೀರ್ಥಹಳ್ಳಿ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ರಂಗು!

ತೀರ್ಥಹಳ್ಳಿ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ರಂಗು!
– ತೀರ್ಥಹಳ್ಳಿಯ ವಿವಿಧ ಕ್ಷೇತ್ರಗಳ 13 ಸಾಧಕರಿಗೆ ಗೌರವಾರ್ಪಣೆ
– ನ.29ರಂದು ಕನ್ನಡ ಹಬ್ಬಕ್ಕೆ ತೀರ್ಥಹಳ್ಳಿ ಸಜ್ಜು

NAMMUR EXPRESS NEWS
ತೀರ್ಥಹಳ್ಳಿ: ನವಂಬರ್ 29ರಂದು ಬೆಳಿಗ್ಗೆಯಿಂದ ತೀರ್ಥಹಳ್ಳಿ ತಾಲ್ಲೂಕು 10ನೇ ಕನ್ನಡ ಸಾಹಿತ್ಯ ಸಮ್ಮೇಳನ ಶಾಂತವೇರಿ ಗೋಪಾಲ ಗೌಡ ರಂಗ ಮಂದಿರದಲ್ಲಿ ನಡೆಯಲಿದೆ. ಖ್ಯಾತ ಸಾಹಿತಿ ನವೀನ್ ಕುಮಾರ್ ಎಂ ಸಮ್ಮೇಳನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಎಳೆಯೋಣ ಬನ್ನಿ ಕನ್ನಡ ತೇರು ಎಂಬ ಕಲ್ಪನೆಯೊಂದಿಗೆ ತೀರ್ಥಹಳ್ಳಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಟಿ. ಕೆ.ರಮೇಶ್ ಶೆಟ್ಟಿ ನೇತೃತ್ವದಲ್ಲಿ ಕಸಾಪ ತಂಡ ಹಗಲಿರುಳು ದುಡಿಯುತ್ತಿದ್ದಾರೆ.

ತೀರ್ಥಹಳ್ಳಿ ಸಾಧಕರಿಗೆ ಸನ್ಮಾನದ ಗೌರವ

ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮಾರೋಪ ವೇದಿಕೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅನನ್ಯ ಸಾಧನೆಗೈದ 13 ಮಂದಿಯನ್ನು ಸನ್ಮಾನಿಸಿ ಗೌರವಿಸಲಾಗುತ್ತಿದೆ. ಪ್ರಗತಿಪರ ಕೃಷಿಕ ಕೂಳೂರು ಸತ್ಯನಾರಾಯರಾವ್, ಆರಗದ ಸಮಾಜ ಸೇವಕಿ ನೈಜಲ ಪಟಮಕ್ಕಿ ರತ್ನಾಕರ್, ಪರಿಸರವಾದಿ ತೀರ್ಥಹಳ್ಳಿ ಕೆ ಜಿ.ಶ್ರೀಧರ್, ಇಂಡಸ್ ಹರ್ಬ್ ಆಡಳಿತ ನಿರ್ದೇಶಕ ರವೀಂದ್ರ ತುಂಬರಮನೆ, ಸಮಾಜ ಸೇವಕಿ ಸುಚರಿತ ಚಂದ್ರ, ವಿಟೆಕ್ ಸಮೂಹ ಸಂಸ್ಥೆಗಳ ಮುಖ್ಯಸ್ಥ ವಿಶ್ವನಾಥ ಕುಂಟುವಳ್ಳಿ, ಉಡುಪಿ ಹೈಟೆಕ್‌ ಆಸ್ಪತ್ರೆಯ ಕ್ರೀಡಾಪಟು ಹಾಗೂ ಕ್ರೀಡಾ ಪೋಷಕ ಅಬ್ದುಲ್ ಕಲಾಂ ಅಜಾದ್, ಖ್ಯಾತ ನರರೋಗ ತಜ್ಞರಾದ ಡಾ.ವಿನೋದ್ ಕುಮಾರ್, ಮುಖ್ಯಮಂತ್ರಿಗಳ ಚಿನ್ನದ ಪದಕ ಪುರಸ್ಕೃತರಾದ ಗಸ್ತು ವನಪಾಲಕ ರಾಮಚಂದ್ರ (ಅಣ್ಣಯ್ಯ), ಸಮಾಜ ಸೇವಕ ಕೋಣಂದೂರು ಅಶೋಕ್ ಕೆ.ಇ, ಕಸಾಪ ಸದಸ್ಯರು, ಕೃಷಿಕ ಸರುವಿನಕೊಪ್ಪ ಸತೀಶ್, ರಾಷ್ಟ್ರೀಯ ವಾಲಿಬಾಲ್ ಆಟಗಾರ ಆರ್ಯನ್ ಅನಿಲ್ ಕುರುವಳ್ಳಿ, ರಾಷ್ಟ್ರೀಯ ಚೆಸ್ ಆಟಗಾರ್ತಿ ಸಾನ್ವಿಕ್ ಇವರನ್ನು ಸನ್ಮಾನಿಸಲಾಗುವುದು.

ಸರ್ವರಿಗೂ ಸ್ವಾಗತ

ಅಧ್ಯಕ್ಷರು, ಪದಾಧಿಕಾರಿಗಳು,ಸದಸ್ಯರು
ಕನ್ನಡ ಸಾಹಿತ್ಯ ಪರಿಷತ್, ತೀರ್ಥಹಳ್ಳಿ

Categories
ಅಡಿಕೆ-ದರ

ಅಡಿಕೆ ದರ ಎಷ್ಟಿದೆ?

ಅಡಿಕೆ ದರ ಎಷ್ಟಿದೆ?
– ಬೆಟ್ಟೆ, ಹಸ, ಗೊರಬಲು ಯಾವುದಕ್ಕೆ ಎಷ್ಟು?

NAMMUR EXPRESS NEWS
ಬೆಟ್ಟೆ 46099-53299
ಗೊರಬಲು – 22669-38100
ರಾಶಿ – 35089-47398
ಸರಕು- 45099-83500
ರಾಶಿ ನ್ಯೂ – 41039-46599
ಸಿಪ್ಪೆಗೋಟು – 15100-21139
ಚಾಲಿ- 34899-38739
ಕೋಕಾ- 15619-34369
ಕರೆ ಗೋಟು – 23299-35039
ಬಿಳೆಗೋಟು – 26899-32782

Categories
ಬೆಂಗಳೂರು

ಗೃಹಲಕ್ಷ್ಮಿ 3 ಕಂತು ಬರೆದಿದ್ದರೆ ಒಟ್ಟಿಗೆ 6 ಸಾವಿರರೂ ಜಮೆ

ಗೃಹಲಕ್ಷ್ಮಿ 3 ಕಂತು ಬರೆದಿದ್ದರೆ ಒಟ್ಟಿಗೆ 6 ಸಾವಿರರೂ ಜಮೆ
– ವಾರದಲ್ಲಿ ಅದಾಲತ್ ನಡೆಸಿ ಸಮಸ್ಯೆ ಇತ್ಯರ್ಥ

NAMMUR EXPRESS NEWS
ಬೆಂಗಳೂರು: ಇನ್ನೊಂದು ವಾರದೊಳಗೆ ಅದಾಲತ್ ಆರಂಭಿಸಿ ಗೃಹಲಕ್ಷ್ಮಿ ಯೋಜನೆಗೆ ಉಂಟಾಗಿರುವ ಸಣ್ಣಪುಟ್ಟ ಅಡ್ಡಿಗಳನ್ನು ಶೀಘ್ರ ಪರಿಹರಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ. ಇದುವರೆಗೂ ಮೂರು ಕಂತಿನ ದುಡ್ಡು ಬಾರದೆ ಇದ್ದವರಿಗೆ ಏಕಕಾಲಕ್ಕೆ 6000 ಖಾತೆಗೆ ಜಮಾ ಮಾಡುವ ಪ್ರಕ್ರಿಯೆ ನಡೆಯುತ್ತಿದೆ ಎಂದರು. ಈವರೆಗೆ 1.10 ಕೋಟಿ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ ತಲುಪಿದೆ. ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಬಾಕಿ ಉಳಿದಿರುವ ಫಲಾನುಭವಿಗಳಿಗೆ ಆಯಾ ಪಂಚಾಯಿತಿ, ಪುರಸಭೆ, ನಗರಸಭೆ ವ್ಯಾಪ್ತಿಯಲ್ಲಿ ಸಭೆ ನಡೆಸಿ ಹಣ ಹಾಕುವ ವ್ಯವಸ್ಥೆ ಮಾಡಲಾಗುವುದು ಎಂದರು. ಯೋಜನೆಗೆ ಸುಮಾರು 50 ಸಾವಿರ ತೆರಿಗೆದಾರರು ಕೂಡ ಅರ್ಜಿ ಹಾಕಿದ್ದು, ಅರ್ಜಿಗಳನ್ನು ನಿರಾಕರಿಸಿ ಡಿಲೀಟ್ ಮಾಡಲಾಗಿದೆ ಎಂದು ಇದೇ ವೇಳೆ ಹೇಳಿದರು.

Categories
ಮೈಸೂರು

ಮದುವೆಗೆ ಹೆಣ್ಣು ಸಿಗದಕ್ಕೆ ಪಾದಯಾತ್ರೆ!

ಮದುವೆಗೆ ಹೆಣ್ಣು ಸಿಗದಕ್ಕೆ ಪಾದಯಾತ್ರೆ!
– ಮೈಸೂರಿನಿಂದ ಆದಿಚುಂಚನಗಿರಿ ಮಠಕ್ಕೆ ಪಾದಯಾತ್ರೆ
– ರೈತರಿಗೆ ಹೆಣ್ಣು ಸಿಗಲ್ಲ ಕಷ್ಟ ಕಷ್ಟ: ಏನಿದು ಯೋಜನೆ?

NAMMUR EXPRESS NEWS
ಮೈಸೂರು: ಇತ್ತೀಚಿನ ವರ್ಷಗಳಲ್ಲಿ ಕೃಷಿ ಕೆಲಸ ಮಾಡುವ ಯುವ ರೈತರಿಗೆ ಮದುವೆಯಾಗಲು ಹೆಣ್ಣು ಸಿಗುವುದಿಲ್ಲ ಎಂಬ ಮಾತನ್ನು ಎಲ್ಲ ಕಡೆ ಕೇಳುತ್ತೇವೆ. ಮೈಸೂರು ಮತ್ತು ಮಂಡ್ಯ ಗ್ರಾಮಾಂತರ ಭಾಗದಲ್ಲಿ ಹಲವು ರೈತ ಯುವಕರು ವಧು ಹುಡುಕಲು ಪರದಾಡುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆಯ ಸದಸ್ಯರು ಮೈಸೂರಿನಿಂದ ಆದಿಚುಚುನಗಿರಿ ಮಠದವರೆಗೆ ಪಾದಯಾತ್ರೆ ನಡೆಸಲು ಮುಂದಾಗಿದ್ದಾರೆ. ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳನ್ನುದ್ದೇಶಿಸಿ ಮಾತನಾಡಿದ ವೇದಿಕೆ ಅಧ್ಯಕ್ಷೆ ಯಮುನಾ ಎಚ್‌ಆರ್, ಮಹಿಳೆಯರು ಮತ್ತು ಅವರ ಕುಟುಂಬದವರು ಗ್ರಾಮೀಣ ಜೀವನವನ್ನು ಅಳವಡಿಸಿಕೊಳ್ಳಲು ಮತ್ತು ಕೃಷಿ ಕೆಲಸ ಮಾಡಲು ಹಿಂಜರಿಯುತ್ತಿರುವುದನ್ನು ನೋಡುತ್ತಿರುವಾಗ ಈ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.

ಹಳ್ಳಿ ಜೀವನ, ಕೃಷಿ ಕೆಲಸದ ಬಗ್ಗೆ ಇಂದಿನ ಯುವತಿಯರು ಮತ್ತು ಅವರ ಪೋಷಕರಿಗಿರುವ ತಪ್ಪು ಭಾವನೆ, ಅಸಡ್ಡೆ ದೂರವಾಗಬೇಕೆಂಬುದು ನಮ್ಮ ಉದ್ದೇಶ ಎಂದರು. ರೈತರಿಗೆ ಮದುವೆಯಾಗಲು ಹುಡುಗಿ ಸಿಗುತ್ತಿಲ್ಲ ಎಂಬ ಸಮಸ್ಯೆ ಹೊಸದೇನಲ್ಲ. ಗ್ರಾಮೀಣ ಜೀವನಕ್ಕೆ ಹೊಂದಿಕೊಳ್ಳಲು ಇಷ್ಟಪಡದ ಹೆಚ್ಚಿನ ಮಹಿಳೆಯರು ರೈತ ವರನನ್ನು ಮದುವೆಯಾಗಲು ನಿರ್ಲಕ್ಷ್ಯ ಮನೋಭಾವವನ್ನು ಹೊಂದಿದ್ದಾರೆ ಎಂದು ಅವರು ಹೇಳಿದರು. ಈ ಬಗ್ಗೆ ಅರಿವು ಮೂಡಿಸಲು ಡಿಸೆಂಬರ್ 8, 9 ಮತ್ತು 10 ರಂದು ಮೈಸೂರಿನಿಂದ ಮೂರು ದಿನಗಳ ಕಾಲ ಈ ಪಾದಯಾತ್ರೆ ನಡೆಸುತ್ತಿದ್ದೇವೆ. ಪಾದಯಾತ್ರೆಯಲ್ಲಿ ಸಾರ್ವಜನಿಕರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ ಜೊತೆಗೆ ರಾಜ್ಯದಲ್ಲಿ ಉತ್ತಮ ಮಳೆಯಾಗಲಿ ಎಂದು ಮತ್ತು ಧರ್ಮಸ್ಥಳದ ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಭಾಗಿಯಾದವರಿಗೆ ಕಠಿಣ ಶಿಕ್ಷೆಯಾಗಬೇಕೆಂದು ಒತ್ತಾಯಿಸುತ್ತೇವೆ ಎಂದರು.

Categories
ತೀರ್ಥಹಳ್ಳಿ

ವಾಹನ ಸವಾರರಿಗೆ ಬಿಸಿ ಮುಟ್ಟಿಸುತ್ತಿರುವ ಪೊಲೀಸರು!

ವಾಹನ ಸವಾರರಿಗೆ ಬಿಸಿ ಮುಟ್ಟಿಸುತ್ತಿರುವ ಪೊಲೀಸರು!
– ಟ್ರಾಫಿಕ್ ನಿಯಮ ಪಾಲಿಸದೆ ಬೇಕಾಬಿಟ್ಟಿ ವಾಹನ ಸಂಚಾರ
– ತೀರ್ಥಹಳ್ಳಿ ಪಟ್ಟಣದಲ್ಲಿ ಪೊಲೀಸರ ಕಾರ್ಯಾಚರಣೆ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣದಲ್ಲಿ ದಿನೇ ದಿನೇ ವಾಹನ ಸಂಖ್ಯೆ ಹೆಚ್ಚಾಗುತ್ತಿದೆ. ಅಲ್ಲದೆ ನಿಯಮ ಉಲ್ಲಂಘನೆ ಪ್ರಕರಣಗಳು ಹೆಚ್ಚುತ್ತಿವೆ. ಎಲ್ಲೆಡೆ ಅತೀ ವೇಗ ಹಾಗೂ ನಿಯಮ ಪಾಲನೆ ಇಲ್ಲದ ಕಾರಣ ಅಪಘಾತ ಹೆಚ್ಚುತ್ತಿವೆ. ಈ ಹಿನ್ನೆಲೆ ತೀರ್ಥಹಳ್ಳಿಯಲ್ಲಿ ಪ್ರತಿದಿನ ಟ್ರಾಫಿಕ್ ಪೊಲೀಸರು ಪರಿಶೀಲಿಸುತ್ತಿದ್ದು ಇದೀಗ ವಾಹನ ಸವಾರರಿಗೆ ಬಿಸಿ ಮುಟ್ಟಿಸುತ್ತಿದ್ದಾರೆ.
ಟ್ರಾಫಿಕ್ ನಿಯಮ ಪಾಲಿಸದ ವಾಹನ ಸವಾರರು ಹಾಗೂ ಹೆಲ್ಮೆಟ್ ಧರಿಸದೆ ಚಲಾಯಿಸುವುದು, ತ್ರಿಬಲ್ ರೈಡಿಂಗ್ ಗೆ ಕ್ರಮ ಕೈಗೊಳ್ಳುತ್ತಿದ್ದಾರೆ. ಪಟ್ಟಣದಲ್ಲಿ ಶುಕ್ರವಾರ ಆಟೋ ಒಂದು ರಾಂಗ್ ಸೈಡ್ ಬರುವುದನ್ನು ಗಮನಿಸಿದ ಡಿವೈಎಸ್ಪಿ ಗಜಾನನ ವಾಮನ ಸುತಾರ ಅವರ ತಂಡ ತಡೆದು ದಂಡ ಕಟ್ಟಿಸಿಕೊಂಡು ನಂತರ ಡಿ ವೈ ಎಸ್ ಪಿ ಯವರು ಆಗುಂಬೆ ಸ್ಟ್ಯಾಂಡ್ ಆಟೋ ಚಾಲಕರನ್ನು ಕರೆಸಿ, ವಯೂನಿಫಾರಂ ಹಾಗೂ ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ರೂಲ್ಸ್ ಪಾಲಿಸದೆ ಇದ್ದಲ್ಲಿ ದಂಡ ಹಾಗೂ ನಿಮ್ಮ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ತೀರ್ಥಹಳ್ಳಿ ಪಟ್ಟಣದ ಎಲ್ಲಾ ಕಡೆ ಕಾರ್ಯಾಚರಣೆ

ಬೈಕ್, ಆಟೋ,ಬಸ್, ಕಾರು, ಟ್ರ್ಯಾಕ್ಟರ್ ಸೇರಿದಂತೆ ಎಲ್ಲ ವಾಹನದ ಚಾಲಕರಿಗೆ ಪಟ್ಟಣದ ಎಲ್ಲಾ ಭಾಗಗಳಲ್ಲಿ ಖಾಕಿ ಪಡೆ ಸಂಚಾರ ನಿಯಮ ಉಲ್ಲಂಘಿಸುವವರ ಮೇಲೆ ದಂಡ ವಿಧಿಸುತ್ತಿದ್ದಾರೆ.

Categories
ಉದ್ಯೋಗ ಸುದ್ದಿ

ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್

ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್
– 75 ಸಾವಿರ ಜಿಡಿ ಕಾನ್ಸ್ ಟೇಬಲ್ ಗಳ ನೇಮಕಾತಿ
– ಇಂದಿನಿಂದ ಅರ್ಜಿ ಸಲ್ಲಿಕೆ ಆರಂಭ

NAMMUR EXPRESS NEWS
10 ನೇ ತರಗತಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ವಿವಿಧ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ ಬಂಪ‌ರ್ ನೇಮಕಾತಿಗೆ ಅವಕಾಶವಿದೆ. ಸ್ಟಾಫ್ ಸೆಲೆಕ್ಷನ್‌ ಕಮಿಷನ್‌ ಜಿಡಿ ಕಾನ್ಸ್ಟೇಬಲ್ ನೇಮಕಾತಿ 2023 ರ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಇದರ ಮೂಲಕ 75768 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಹೊರಡಿಸಿದ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು ಇಂದಿನಿಂದ ನವೆಂಬರ್ 24 ರಿಂದ ಎಸ್ಎಸ್ಸಿಯ ಅಧಿಕೃತ ವೆಬೈಟ್ ssc.nic.in ಭೇಟಿ ನೀಡುವ ಮೂಲಕ ಆನೈನ್ ಅರ್ಜಿಗಳನ್ನು ಸಲ್ಲಿಸಲು ಸಾಧ್ಯವಾಗುತ್ತದೆ. ಅರ್ಜಿ ಸಲ್ಲಿಸಲು ಡಿಸೆಂಬರ್ 28 ಕೊನೆಯ ದಿನವಾಗಿದೆ. ವಿವಿಧ ಭದ್ರತಾ ಪಡೆಗಳಲ್ಲಿ ಜನರಲ್ ಡ್ಯೂಟಿ ಕಾನ್ಸೆಬಲ್ ಹುದ್ದೆಗಳನ್ನು ನೇಮಕಾತಿ ಮೂಲಕ ಭರ್ತಿ ಮಾಡಲಾಗುತ್ತದೆ. ಇದರಲ್ಲಿ ಬಿಎಸ್‌ಎಫ್‌ 27,875 ಹುದ್ದೆಗಳು, ಸಿಐಎಸ್‌ಎಘ್ನ 8,598 ಹುದ್ದೆಗಳು, ಸಿಆರ್ಪಿಎಘ್ನ 25,427 ಹುದ್ದೆಗಳು, ಎಸ್ಎಸ್ಪಿಯ 5,278 ಹುದ್ದೆಗಳು, ಐಟಿಬಿಪಿಯ 3,006 ಹುದ್ದೆಗಳು, ಅಸ್ಸಾಂ ರೈಫಲ್ಸ್ 4,776 ಹುದ್ದೆಗಳು ಮತ್ತು ಎಸ್‌ಎಸ್‌ಎಫ್ ನ 583 ಹುದ್ದೆಗಳು ಸೇರಿವೆ.

ಸಾಮರ್ಥ್ಯ:

ನೇಮಕಾತಿ ಅಡಿಯಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10 ನೇ ತರಗತಿ ಉತ್ತೀರ್ಣ ಪ್ರಮಾಣಪತ್ರವನ್ನು ಹೊಂದಿರಬೇಕು. ಇದಲ್ಲದೆ, ಅವರ ವಯಸ್ಸು 18 ರಿಂದ 23 ವರ್ಷಗಳ ನಡುವೆ ಇರಬೇಕು. ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 3 ವರ್ಷದಿಂದ 5 ವರ್ಷಗಳಿಗೆ ಸಡಿಲಿಕೆ ಇರುತ್ತದೆ.

ಆಯ್ಕೆ ಪ್ರಕ್ರಿಯೆ:

ಎಸ್‌ಎಸ್ಸಿ ಜಿಡಿ ಕಾನ್ಸಬಲ್‌ ನೇಮಕಾತಿ ಪ್ರಕ್ರಿಯೆಯಲ್ಲಿ, ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ದೈಹಿಕ ದಕ್ಷತೆ ಪರೀಕ್ಷೆ, ದೈಹಿಕ ಮಾನದಂಡ ಪರೀಕ್ಷೆ ಮತ್ತು ವೈದ್ಯಕೀಯ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತದೆ. ಲಿಖಿತ ಪರೀಕ್ಷೆಯಲ್ಲಿ ರೀಸನಿಂಗ್, ಜಿಕೆ, ಗಣಿತ ಮತ್ತು ಹಿಂದಿ-ಇಂಗ್ಲಿಷ್ ನಿಂದ ಪ್ರಶ್ನೆಗಳು ಇರುತ್ತವೆ. ನೇಮಕಾತಿ ಅಧಿಸೂಚನೆಗೆ ಭೇಟಿ ನೀಡುವ ಮೂಲಕ ನೀವು ಸಂಪೂರ್ಣ ಮಾಹಿತಿಯನ್ನು ಪರಿಶೀಲಿಸಬಹುದು.

Categories
ಮಾಹಿತಿ

ತುಳಸಿ ಪೂಜೆಯ ಸಂಭ್ರಮ..!

ತುಳಸಿ ಪೂಜೆಯ ಸಂಭ್ರಮ..!
– ಎಲ್ಲೆಡೆ ತುಳಸಿ ಪೂಜೆ ಸಿದ್ಧತೆ: ಆಚರಣೆ ಹೇಗೆ?
– ತುಳಸಿ ವಿವಾಹ ಕುರಿತು ಪುರಾಣದಲ್ಲಿ ಏನಿದೆ?

NAMMUR EXPRESS NEWS
ಹಿಂದೂಗಳು ಹತ್ತು ಹಲವು ಪೂಜೆಗಳನ್ನು ಮಾಡುವುದರ ಜೊತೆ ಗಿಡ ಮರಗಳಲ್ಲಿ ದೇವರನ್ನು ಕಂಡು ಅದಕ್ಕೆ ಪೂಜೆ ಸಲ್ಲಿಸುತ್ತಾರೆ ಅದರಂತೆ ಪವಿತ್ರವಾದ ತುಳಸಿ ಗಿಡಕ್ಕೆ ಗೌರವದೊಂದಿಗೆ ಪೂಜೆಯನ್ನು ಸಲ್ಲಿಸುವ ತುಳಸಿ ಪೂಜೆಗೆ ಎಲ್ಲಾ ಕಡೆ ಸಿದ್ಧತೆ ನಡೆದಿದೆ. ತುಳಸಿ ಕಟ್ಟೆ ಇಲ್ಲದ ಮನೆ ಇರೋದಿಲ್ಲ. ಹಿಂದೂ ಧರ್ಮದಲ್ಲಿ ತುಳಸಿಗೆ ಪವಿತ್ರ ಸ್ಥಾನವಿದೆ.

ಪುರಾಣ ಕಥೆಗಳು ಹೇಳುವುದು ಏನು?

ಶುಭ-ಅಶುಭ ಕಾರ್ಯಗಳಲ್ಲಿ ತುಳಸಿ ಎಲೆಗೆ ಮಹತ್ವದ ಸ್ಥಾನವಿದೆ. ಬೆಳಕಿನ ಹಬ್ಬ ದೀಪಾವಳಿ ಮುಗಿದ ನಂತರ ಹಿಂದೂಗಳು ಆಚರಿಸುವ ಕಿರು ದೀಪಾವಳಿ ಹಬ್ಬವೇ ತುಳಸಿ ಪೂಜೆ. ಚಾಂದ್ರಮಾನ ಕಾರ್ತಿಕಮಾಸದ ಶುಕ್ಲಪಕ್ಷದ 12ನೇ ದಿನ ಅಂದರೆ ದ್ವಾದಶಿಯಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಜಲಂಧರನೆಂಬ ರಾಕ್ಷಸನಿಗೆ ಬೃಂದಾ ಎಂಬ ಮಹಾಪತಿವ್ರತೆ ಹೆಂಡತಿ. ಈಕೆಯ ಪವಿತ್ರತೆ ಹಾಗೂ ಧರ್ಮನಿಷ್ಠೆಯೆ ರಾಕ್ಷಸ ಜಲಂಧರನಿಗೆ ಶ್ರೀರಕ್ಷೆ ಎಂಬಂತೆ ಇತ್ತು.ಅಮರ ಶಕ್ತಿಯನ್ನು ಪಡೆದುಕೊಂಡು ಅಜೇಯನಾಗಿದನ್ನು ಬೃಂದೆಯು ಪರಿಶುದ್ಧತೆ ತಪ್ಪದರ ಹೊರತು ಆಕೆಯ ಪತಿಯನ್ನು ಸೋಲಿಸಲಾಗುವುದಿಲ್ಲ ಎಂಬುದು ದೇವತೆಗಳಿಗೆ ತಿಳಿದಿತ್ತು. ದೇವತೆಗಳ ಕೋರಿಕೆಯ ಅಂತೆ ವಿಷ್ಣುವು ಜಲಂಧರನ ವೇಷ ಧರಿಸಿ ಅವಳ ಬಳಿ ಹೋದನು. ವಿಷ್ಣುವಿನ ರೂಪವೆಂದು ಅರಿಯದೆ ಆತ ತನ್ನ ಪತಿಯೆಂದೇ ಬೃಂದಾ ಭಾವಿಸಿದ್ದಳು ಇದರಿಂದ ಆಕೆಯ ಪವಿತ್ರತೆಗೆ ಅಡ್ಡಿಯಾಯಿತು. ಜಲಂಧರನ ಶಕ್ತಿ ಕುಂದಿತು. ಇದೇ ಸಮಯ ನೋಡಿ ಶಿವನು ಜಲಂಧರನನ್ನು ಯುದ್ಧದಲ್ಲಿ ಕೊಂದನು.

ತನ್ನ ಪತಿ ಅಲ್ಲ ಎಂದು ತಿಳಿದ ಬೃಂದಾ ಭಗವಾನ್ ವಿಷ್ಣುವಿಗೆ ಕಪ್ಪಾಗುತ್ತಾನೆ ಮತ್ತು ಹೆಂಡತಿಯಿಂದ ಬೇರ್ಪಡುತ್ತಾನೆ ಎಂದು ಶಪಿಸಿದಳು. ಬೃಂದಾ ವಿಷ್ಣುವಿಗೆ ಶಾಪ ನೀಡಿದಕ್ಕೆ ಸತಿ ಸಹಗಮನವಾದಳು. ಆ ಬೂದಿಯಿಂದ ತುಳಸಿ ಗಿಡ ಹುಟ್ಟಿತು. ಬೃಂದಾಳ ಪಾತಿವ್ರತ್ಯಕ್ಕೆ ಹಾನಿ ತಂದಿದ್ದನ್ನು ಸರಿಪಡಿಸಲು ತುಳಸಿಯನ್ನು ವಿಷ್ಣು ವಿವಾಹವಾದನು. ಹಾಗಾಗಿ ಇದನ್ನ ತುಳಸಿ ವಿವಾಹ ಎಂದು ಕರೆಯಲಾಗುತ್ತದೆ. ಅದರಿಂದ ವಿಷ್ಣುವಿನ ಪೂಜೆಯಲ್ಲಿ ತುಳಸಿ ಕಡ್ಡಾಯವಾಗಿದೆ.

ತುಳಸಿ ಪೂಜೆಯಿಂದ ಆಗುವ ಪ್ರಯೋಜನವೇನು?

ಕಂಕಣ ಭಾಗ್ಯ ಕೂಡಿಬರದೇ ಇರುವವರು ಹಾಗೂ ವಿವಾಹ ಕಾರ್ಯಗಳಲ್ಲಿ ಅಡೆತಡೆಗಳನ್ನು ಎದುರಿಸುತ್ತಿರುವವರು ಶಾಸ್ತ್ರೋಕ್ತವಾಗಿ ತುಳಸಿ ವಿವಾಹವನ್ನು ನೆರವೇರಿಸಿದರೆ ಕೂಡಲೇ ಕಂಕಣ ಭಾಗ್ಯ ಕೂಡಿಬರುತ್ತದೆ ಹಾಗೂ ಅಡೆತಡೆಗಳು, ವಿಘ್ನಗಳು ದೂರವಾಗುತ್ತವೆ ಎಂಬುದು ನಂಬಿಕೆಯಾಗಿದೆ ನಮ್ಮಲ್ಲಿ ಆಚರಿಸುವ ಪ್ರತೀ ಆಚರಣೆ ಅಷ್ಟೇ ಅಲ್ಲ ಅದರಲ್ಲಿ ತನ್ನದೇ ಆದ ವಿಶಿಷ್ಟತೆಯಿದೆ. ತುಳಸಿ ಅಲಂಕಾರ ಮಾಡಿ ದೀಪ ಹಚ್ಚಿ ಪೂಜೆ ಮಾಡಲಾಗುತ್ತದೆ.

Categories
ರಾಜ್ಯ

ರಾಜ್ಯದಲ್ಲಿ 3 ದಿನ ಮಳೆ: ರೈತರಿಗೆ ಆತಂಕ!

ರಾಜ್ಯದಲ್ಲಿ 3 ದಿನ ಮಳೆ: ರೈತರಿಗೆ ಆತಂಕ!
– ಮಲೆನಾಡಲ್ಲಿ ಸಂಜೆ ಮಳೆ: ಇನ್ನಷ್ಟು ಮಳೆ ಸಾಧ್ಯತೆ
– ಭತ್ತ, ಅಡಿಕೆ ಕೊಯ್ಲಿಗೆ ಮಳೆ ಅಡ್ಡಿ
– ರಾಜಧಾನಿಯಲ್ಲೂ ಸುರಿಯಲಿದೆ ಮಳೆ

NAMMUR EXPRESS NEWS
ಬೆಂಗಳೂರ: ಈಗ ಮತ್ತೆ ಮಳೆ ಸುರಿಯುವ ಭೀತಿ ಎದುರಾಗಿದೆ. ಗುರುವಾರ ಹಲವೆಡೆ ಸಂಜೆ ವೇಳೆಗೆ ಮಳೆಯಾಗಿದೆ. ಮೂರು ದಿನಗಳ ಕಾಲ ರಾಜ್ಯದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯು ಮನ್ಸೂಚನೆ ನೀಡಿದೆ. ಕೆಲ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಕೂಡ ಘೋಷಿಸಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮಳೆಯಾಗಲಿದ್ದು, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗದಲ್ಲಿ ಯೆಲ್ಲೋ ಅಲರ್ಟ್ ಘೋಷಿಸಿದೆ. ರಾಜ್ಯದ ಕರಾವಳಿ, ಮಲೆನಾಡು ಭಾಗಕ್ಕೆ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ. ಬಹುತೇಕ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಸುರಿಯುವ ಸಾಧ್ಯತೆಗಳಿವೆ. ಬೆಂಗಳೂರಿನಲ್ಲಿ 3 ದಿನ ಮೋಡ ಕವಿದ ವಾತಾವರಣವಿದೆ.

ಭತ್ತ, ಅಡಿಕೆ ಕೊಯ್ಲಿಗೆ ಅಡ್ಡಿ

ಕರಾವಳಿ, ಮಲೆನಾಡು ಸೇರಿ ಅನೇಕ ಕಡೆ ಭತ್ತದ ಕೊಯ್ಲು, ಅಡಿಕೆ ಕೊಯ್ಲು ನಡೆಯುತ್ತಿದೆ. ಆದ್ರೆ ಈಗ ಮಳೆ ಮೋಡ, ಮಳೆ ರೈತರನ್ನು ಆತಂಕಕ್ಕೆ ತಳ್ಳಿದೆ. ಹೇಗೆ ಅಡಿಕೆ ಕೊಯ್ಲು ಮಾಡುವುದು ಎಂಬ ಬಗ್ಗೆ ಚಿಂತೆ ಮಾಡುತ್ತಿದ್ದಾರೆ.

Categories
ಅಡಿಕೆ-ದರ

ಅಡಿಕೆ ಧಾರಣೆ ಎಷ್ಟಿದೆ?

ಅಡಿಕೆ ಧಾರಣೆ ಎಷ್ಟಿದೆ?
ಅಡಿಕೆ ರೇಟ್ ಏರಿಕೆಯಾಗಿದೆಯಾ ಅಥವಾ ಇಳಿಕೆನಾ?

NAMMUR EXPRESS NEWS
ಶಿವಮೊಗ್ಗ ಮಾರುಕಟ್ಟೆ
ಗೊರಬಲು 16800 – 37999
ನ್ಯೂ ವೆರೈಟಿ 43699 – 47099
ಬೆಟ್ಟೆ 41000 – 52909
ರಾಶಿ 39600 – 47299
ಸರಕು 52100 – 83410