Categories
ಮಾಹಿತಿ

ಶಾಲಾ ಮಕ್ಕಳಿಗೆ ಸಿಗುತ್ತೆ ಸ್ಕಾಲರ್ ಶಿಪ್.. ಹಾಕೋದು ಹೇಗೆ?

ಶಾಲಾ ಮಕ್ಕಳಿಗೆ ಸಿಗುತ್ತೆ ಸ್ಕಾಲರ್ ಶಿಪ್.. ಹಾಕೋದು ಹೇಗೆ?
– ಎಸ್‌ಬಿಐ ಆಶಾ ಸ್ಕಾಲರ್‌ ಶಿಪ್‌ಗೆ ಅರ್ಜಿ ಆಹ್ವಾನ
– ಶಾಲಾ ಮಕ್ಕಳಿಗೆ ಈ ವಿದ್ಯಾರ್ಥಿ ವೇತನ

NAMMUR EXPRESS NEWS
ಶಾಲಾ ಮಕ್ಕಳಿಗೆ ನೀಡುವ ಎಸ್‌ಬಿಐಎಫ್‌ ಆಶಾ ಸ್ಕಾಲರ್‌ಶಿಪ್‌ ಪ್ರೋಗ್ರಾಮ್‌ ಎಸ್‌ಬಿಐ ಫೌಂಡೇಷನ್‌ನ ಒಂದು ಶೈಕ್ಷಣಿಕ ಆಶಯದ – ಇಂಟಿಗ್ರೇಟೆಡ್ ಮಿಷನ್‌ನ ಉಪಕ್ರಮವಾಗಿದೆ. ಈ ಸ್ಕಾಲರ್‌ಶಿಪ್‌ ದೇಶದ ಬಡಕುಟುಂಬದ ವಿದ್ಯಾರ್ಥಿಗಳು / ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸವನ್ನು ನಿರಂತರವಾಗಿ ಮುಂದುವರೆಸಲು ಹಣಕಾಸು ಸಹಾಯ ಮಾಡುವ ಉದ್ದೇಶ ಹೊಂದಿದೆ. Buddy4study ಈ ಸ್ಕಾಲರ್‌ಶಿಪ್‌ ಅನ್ನು ಅನುಷ್ಠಾನ ಮಾಡುವ ಪಾಲುದಾರ ಆಗಿದೆ. ಆದ್ದರಿಂದ ಈ ವೆಬ್‌ಸೈಟ್‌ನ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ. ಅರ್ಹತೆ, ಅರ್ಜಿ ವಿಧಾನ, ಪ್ರಮುಖ ದಿನಾಂಕಗಳು, ಇತರೆ ಮಾಹಿತಿಗಳನ್ನು ಕೆಳಗಿನಂತೆ ನೀಡಲಾಗಿದೆ.

ಅರ್ಹತೆಗಳು  : 

6 ರಿಂದ 12ನೇ ತರಗತಿವರೆಗೆ ಓದುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
ಅರ್ಜಿ ಹಾಕುವ ವಿದ್ಯಾರ್ಥಿಗಳು ತಮ್ಮ ಹಿಂದಿನ ಶಿಕ್ಷಣ ತರಗತಿಯಲ್ಲಿ ಕನಿಷ್ಠ ಶೇಕಡ.75 ಅಂಕಗಳನ್ನು ಗಳಿಸಿರಬೇಕು.
ಅರ್ಜಿ ಹಾಕುವ ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯ ರೂ.3,00.000 ಮೀರಿರಬಾರದು.
ದೇಶದ ಯಾವುದೇ ವಿದ್ಯಾರ್ಥಿ ಅರ್ಜಿ ಹಾಕಬಹುದು.

ಎಸ್‌ಬಿಐಎಫ್‌ ಆಶಾ ಸ್ಕಾಲರ್‌ಶಿಪ್‌ ಪ್ರೋಗ್ರಾಮ್‌ ನಿಂದ ವಿದ್ಯಾರ್ಥಿಗಳಿಗೆ ಸಿಗುವ ವಿದ್ಯಾರ್ಥಿವೇತನ : ರೂ.10,000 ವಾರ್ಷಿಕ.

ವಾರ್ಷಿಕ ರೂ.75000 ವರೆಗೆ HDFC ಪರಿವರ್ತನಾ ಸ್ಕಾಲರ್‌ಶಿಪ್‌: ಅರ್ಹತೆಗಳೇನು, ಅರ್ಜಿ ಸಲ್ಲಿಕೆ ಹೇಗೆ ಇಲ್ಲಿ ತಿಳಿಯಿರಿ.

ಅರ್ಜಿ ಸಲ್ಲಿಸುವ ವಿಧಾನ
– ಎಸ್‌ಬಿಐ ಫೌಂಡೇಷನ್‌ನ ಅಧಿಕೃತ ವೆಬ್‌ಸೈಟ್‌ ಗೆ ಭೇಟಿ ನೀಡಿ.
– ತೆರೆದ ಮುಖಪುಟದಲ್ಲಿ ”SBIF ASHA SCHOLARSHIP’ ಎಂದಿರುವಲ್ಲಿ ಕ್ಲಿಕ್ ಮಾಡಿ.
– ಮತ್ತೊಂದು ವೆಬ್‌ಪುಟ ತೆರೆಯುತ್ತದೆ.
– ಈ ಹಂತದಲ್ಲಿ ‘Application for School Students 2023’ ಎಂದಿರುವಲ್ಲಿ ಕ್ಲಿಕ್ ಮಾಡಿ.
– ನಂತರ ತೆರೆಯುವ ವೆಬ್‌ಪುಟದಲ್ಲಿ ಸ್ಕ್ರಾಲ್‌ ಡೌನ್‌ ಮಾಡಿ, ‘Apply Now’ ಎಂದಿರುವಲ್ಲಿ ಕ್ಲಿಕ್ ಮಾಡಿ.
ಜಿಮೇಲ್‌ / ಮೊಬೈಲ್‌ ನಂಬರ್ / ಇ-ಮೇಲ್‌ ಐಡಿ ಮೂಲಕ ಲಾಗಿನ್‌ ಆಗುವ ಮೂಲಕ ಅರ್ಜಿ ಸಲ್ಲಿಸಿ.
– ಕೇಳಲಾದ ಮಾಹಿತಿ / ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸಬೇಕಾಗುತ್ತದೆ.

SBIF ASHA SCHOLARSHIP Apply Online – Click Here

ವಿದ್ಯಾರ್ಥಿಗಳು ಕರಿಯರ್ ಗೈಡೆನ್ಸ್‌ ಯಾವ ಹಂತದಲ್ಲಿ ಪಡೆದುಕೊಳ್ಳುವುದು ಉತ್ತಮ? ಅನುಕೂಲಗಳೇನು?

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು
ಹಿಂದಿನ ತರಗತಿಯ ಅಂಕಪಟ್ಟಿ
ಆಧಾರ್ ಕಾರ್ಡ್‌
ಪ್ರಸ್ತುತ ತರಗತಿಯ ಪ್ರವೇಶಾತಿ ದಾಖಲೆ
ಬ್ಯಾಂಕ್‌ ಪಾಸ್‌ ಬುಕ್‌ ಜೆರಾಕ್ಸ್‌ ಕಾಪಿ
ಜಾತಿ ಮತ್ತು ಆದಾಯ ಪ್ರಮಾಣ ಪತ್ರ
ವಿದ್ಯಾರ್ಥಿಯ ಪಾಸ್‌ಪೋರ್ಟ್‌ ಅಳತೆಯ ಭಾವಚಿತ್ರ.

ವಿದ್ಯಾರ್ಥಿಗಳು ಆನ್‌ಲೈನ್‌ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕಾಗುತ್ತದೆ. ಇತರೆ ಯಾವುದೇ ಮಾರ್ಗದಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಇಲ್ಲ. ಆದ್ದರಿಂದ ಪೋಷಕರ, ಮಾರ್ಗದರ್ಶಕರ ಅಥವಾ ಶಿಕ್ಷಕರ ಸಹಾಯ ಪಡೆದು ಅರ್ಜಿ ಸಲ್ಲಿಸಬಹುದು.

Categories
ಬೆಂಗಳೂರು

ಯಜಮಾನಿಯರ ಅಕೌಂಟ್ ಸರಿ ಇಲ್ದಿದ್ರೆ ಗಂಡನಿಗೆ ಗೃಹ ಲಕ್ಷ್ಮಿ ಹಣ!

ಯಜಮಾನಿಯರ ಅಕೌಂಟ್ ಸರಿ ಇಲ್ದಿದ್ರೆ ಗಂಡನಿಗೆ ಗೃಹ ಲಕ್ಷ್ಮಿ ಹಣ!
– ಇನ್ಮುಂದೆ ಗಂಡನ ಖಾತೆಗೆ ಜಮಾ: ಏನಿದು ಯೋಜನೆ
– ಮನೆಗೆ ಬಂದು ಮಾಹಿತಿ ಪಡೆದು ಹಣ ವರ್ಗಾವಣೆ

NAMMUR EXPRESS NEWS
ಬೆಂಗಳೂರು: ರಾಜ್ಯ ಕಾಂಗ್ರೆಸ್‌ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆಯಡಿ ಹಣವನ್ನು ಬಿಡುಗಡೆ ಮನೆ ಯಜಮಾನಿಯರ ಹೆಸರಿಗೆ ಬಿಡುಗಡೆ ಮಾಡಲಾಗುತ್ತಿದೆ. ಆದರೆ ಕೆಲವು ಮಹಿಳೆಯರ ಅಕೌಂಟ್ ತಾಂತ್ರಿಕ ಸಮಸ್ಯೆ ಇರುವುದರಿಂದ ಕೆಲವು ಮಂದಿಗೆ ಹಣ ಇನ್ನೂ ಬಿಡುಗಡೆಯಾಗಿಲ್ಲ.ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರವು ಮಹತ್ವದ ತೀರ್ಮಾನವನ್ನು ಕೈಗೊಂಡಿದೆ. ಇನ್ಮುಂದೆ ಮಹಿಳೆಯರ ಖಾತೆಗೆ ಮಾತ್ರವಲ್ಲದೇ ಮನೆ ಯಜಮಾನನ ಖಾತೆಗೆ ಕೂಡ ಹಣ ಬರಲಿದೆ.

ಯಜಮಾನಿಯ ಖಾತೆಯಲ್ಲಿ ಸಮಸ್ಯೆ ಇದ್ದರೆ ಎರಡನೇ ಸದಸ್ಯ ಅಥವಾ ಎರಡನೇ ಹಿರಿಯ ಸದಸ್ಯರಿಗೆ ಹಣ ವರ್ಗಾವಣೆ ಮಾಡುವುದಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಇನ್ನು ಮುಂದೆ ಗ್ರಾಮ ಪಂಚಾಯತ್ ಸಿಬ್ಬಂದಿಗಳು ಮನೆ ಮನೆಗೆ ಬಂದು ಮಹಿಳೆಯರ ಖಾತೆಯಲ್ಲಿ ಇರುವ ಸಮಸ್ಯೆಗಳನ್ನು ಬಗೆ ಹರಿಸಿಲಿದ್ದಾರೆ. ಯೋಜನೆಗೆ ಸಂಬಂಧಪಟ್ಟಂತೆ, ಆಧಾರ್ ಲಿಂಕ್ ಆಗದಿರುವುದು ಮೊದಲಾದ ಕಾರಣಗಳಿಂದ ಹಣ ವರ್ಗಾವಣೆಯಾಗಿಲ್ಲ, ಈ ನಿಟ್ಟಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಫಲಾನುಭವಿಗಳನ್ನು ಬ್ಯಾಂಕಿಗೇ ಕರೆದೊಯ್ದು ಸಮಸ್ಯೆಯನ್ನು ಬಗೆಹರಿಸುವುದಕ್ಕೆ ಮುಂದಾಗಿದ್ದಾರೆ.

Categories
ತೀರ್ಥಹಳ್ಳಿ

ತೀರ್ಥಹಳ್ಳಿ ಕನ್ನಡ ಸಾಹಿತ್ಯ ಸಮ್ಮೇಳನ: ಮಳಿಗೆ ಹಾಕಲು ಆಹ್ವಾನ

ತೀರ್ಥಹಳ್ಳಿ ಕನ್ನಡ ಸಾಹಿತ್ಯ ಸಮ್ಮೇಳನ: ಮಳಿಗೆ ಹಾಕಲು ಆಹ್ವಾನ
– ನ.29ರಂದು ಕನ್ನಡ ಸಾಹಿತ್ಯ ಸಮ್ಮೇಳನ: ಸರ್ವರಿಗೂ ಸ್ವಾಗತ

ನ.29ರ ಬುಧವಾರದಂದು ತೀರ್ಥಹಳ್ಳಿಯ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ 10ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಈ ಸಮ್ಮೇಳನದಂದು ಗೋಪಾಲಗೌಡ ರಂಗಮಂದಿರದ ಎದುರು ಮಳಿಗೆಗಳನ್ನು ಹಾಕಲು ಇಚ್ಛಿಸುವವರು ದಿನಾಂಕ: 27-11-2023 ರೊಳಗೆ ಈ ಕೆಳಗಿನ ನಂಬರ್ ಗೆ ತಿಳಿಸಬೇಕಾಗಿ ವಿನಂತಿ. ಸಂಪರ್ಕ ಸಂಖ್ಯೆ: 91132 32422

Categories
ತೀರ್ಥಹಳ್ಳಿ

ನ.26ಕ್ಕೆ ತೀರ್ಥಹಳ್ಳಿ ತಾಲೂಕು ಒಕ್ಕಲಿಗರ ಸಂಘದ ಪ್ರತಿಭಾ ಪುರಸ್ಕಾರ

ನ.26ಕ್ಕೆ ತೀರ್ಥಹಳ್ಳಿ ತಾಲೂಕು ಒಕ್ಕಲಿಗರ ಸಂಘದ ಪ್ರತಿಭಾ ಪುರಸ್ಕಾರ
– 2022-23 ನೇ ಸಾಲಿನ ಸನ್ಮಾನ ಸಮಾರಂಭ, ದತ್ತ ನಿಧಿ ವಿತರಣಾ ಕಾರ್ಯಕ್ರಮ
– ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದ ಗಣ್ಯರಿಗೆ ಪ್ರತಿಭಾ ಪುರಸ್ಕಾರ

NAMMUR EXPRESS NEWS
ತೀರ್ಥಹಳ್ಳಿ : 2022-23 ನೇ ಸಾಲಿನ ತೀರ್ಥಹಳ್ಳಿ ತಾಲ್ಲೂಕು ಒಕ್ಕಲಿಗರ ಸಂಘದ ಸನ್ಮಾನ ಸಮಾರಂಭ, ಪ್ರತಿಭಾ ಪುರಸ್ಕಾರ ಹಾಗೂ ದತ್ತ ನಿಧಿ ವಿತರಣಾ ಕಾರ್ಯಕ್ರಮವನ್ನು ನ. 26ರ ಭಾನುವಾರ ಬೆಳಗ್ಗೆ 10.30 ಕ್ಕೆ ತೀರ್ಥಹಳ್ಳಿಯ ಸಹ್ಯಾದ್ರಿ ಶಾಲಾ ಆವರಣದಲ್ಲಿ ನಡೆಯಲಿದ್ದು, ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದ ಗಣ್ಯರಿಗೆ ಪ್ರತಿಭಾ ಪುರಸ್ಕಾರ ಮತ್ತು ದತ್ತ ನಿಧಿ ವಿತರಣಾ ಸಮಾರಂಭ ಆಯೋಜಿಸಲಾಗಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷರಾದ ಶ್ರೀಮತಿ ಸುಜಿನಿ ತಿಮ್ಮಪ್ಪ ಗೌಡರು ವಹಿಸಲಿದ್ದು, ಗೌರವಾನ್ವಿತ ಮುಖ್ಯ ಅತಿಥಿಗಳಾಗಿ ಶಾಸಕ ಆರಗ ಜ್ಞಾನೇಂದ್ರ, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಡಾ. ಆರ್ ಎಂ ಮಂಜುನಾಥಗೌಡ, ಬೆಂಗಳೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಧ್ಯಕ್ಷರಾದ ಸಿರಿಬೈಲ್ ದರ್ಮೇಶ್, ಮಾಜಿ ಶಾಸಕರಾದ ಕಡಿದಾಳ್ ದಿವಾಕರ್, ಉದ್ಯಮಿ ಆರ್ ಮದನ್ ರವರು ಆಗಮಿಸಲಿದ್ದಾರೆ.
ಸನ್ಮಾನ ಸಮಾರಂಭದಲ್ಲಿ ಶಾಸಕ ಆರಗ ಜ್ಞಾನೇಂದ್ರ, ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಡಾ.ಆರ್ ಎಂ ಮಂಜುನಾಥ್ ಗೌಡ,

ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷರಾದ ಕಂಪದಗದ್ದೆ ನಾಗಪ್ಪ ಗೌಡರು, ಬೆಂಗಳೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಧ್ಯಕ್ಷರಾದ ಸಿರಿಬೈಲ್ ದರ್ಮೇಶ್, ಮೈಸೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾದ ಪ್ರೋ. ಎನ್ ಕೆ ಲೋಕನಾಥ್ ನೆರಟೂರು ಅವರಿಗೆ ಸನ್ಮಾನಿಸಲಾಗುವುದು. ಹಾಗೂ ಗರಗ ಕಿಕ್ಕೇರಿ ಡಾಕಮ್ಮ ಮಂಜಪ್ಪ ಗೌಡ ಅವರ ನೆನಪಿನ ಸ್ಮರಣಾರ್ಥ ಉತ್ತಮ ರೈತ ಪ್ರಶಸ್ತಿಯನ್ನು ಪಿ ಜಿ ತಿಮ್ಮಪ್ಪ ಪುಟ್ಟೋಡ್ಲು ಅವರಿಗೆ ನೀಡಲಾಗುವುದು. ಈ ಸಮಾರಂಭಕ್ಕೆ ಅಧ್ಯಕ್ಷರು, ಪದಾಧಿಕಾರಿಗಳು, ನಿರ್ದೇಶಕರು ಹಾಗೂ ಆಡಳಿತ ಮಂಡಳಿ ಸರ್ವರಿಗೂ ಸ್ವಾಗತ ಕೋರಿದ್ದಾರೆ.

ಆಡಳಿತ ಮಂಡಳಿ:
– ಶ್ರೀಮತಿ ಸುಜಿನಿ ತಿಮ್ಮಪ್ಪ ಗೌಡರು – ಹೊಸಕೊಪ್ಪ, ಅಧ್ಯಕ್ಷರು
– ಶ್ರೀ ಲೋಕೇಶ್ ಎಸ್ ವಿ – ಸರಳ, ಉಪಾಧ್ಯಕ್ಷರು
– ಶ್ರೀ ಶಶಿಧರ್ ಎಂ ಆರ್ – ಮೇಲಿನ ಕೊಪ್ಪ, ಪ್ರಧಾನ ಕಾರ್ಯದರ್ಶಿ
– ಶ್ರೀ ಕೆಸಿ ವೀರೇಂದ್ರ – ಕೆರೆಕೊಪ್ಪ ಖಜಾಂಚಿ
– ಶ್ರೀ ಆದರ್ಶ ಹೆಚ್ ಎಂ – ಹೊಸೂರು, ಸಹಕಾರ್ಯದರ್ಶಿ
– ಶ್ರೀ ಬಾಳೆಹಳ್ಳಿ ಪ್ರಭಾಕರ್ – ನಿರ್ದೇಶಕರು
– ಶ್ರೀ ಚಂದವಳ್ಳಿ ಸೋಮಶೇಖರ್ – ನಿರ್ದೇಶಕರು
– ಶ್ರೀ ಕೂಳೂರು ಕೃಷ್ಣಮೂರ್ತಿ – ನಿರ್ದೇಶಕರು
– ಶ್ರೀ ಸುಧೀರ್ ಬಿವಿ – ಹೆಗ್ಗೋಡು, ನಿರ್ದೇಶಕರು
– ಶ್ರೀ ಯುಡಿ ವೆಂಕಟೇಶ್ – ಬಿಳಿಗೆರೆ, ನಿರ್ದೇಶಕರು
– ಶ್ರೀಮತಿ ಶೈಲಾ ಡಿ ಎನ್ – ಅಲ್ಮನೆ, ನಿರ್ದೇಶಕರು
– ಡಾ. ಚೇತನ ನಂದನ್ – ಹಸಿರು ಮನೆ, ನಿರ್ದೇಶಕರು
– ಶ್ರೀಮತಿ ಧನ್ಯ ಅಶ್ವಲ್ – ಬೊಬ್ಬಿ, ನಿರ್ದೇಶಕರು
– ಶ್ರೀ ಸುನಿಲ್ ಗೌಡ – ಆಡಿನಸರ, ನಿರ್ದೇಶಕರು
– ಶ್ರೀ ಸಂದೀಪ್ ಡಿ – ಕುಡುಮಲ್ಲಿಗೆ, ನಿರ್ದೇಶಕರು
– ಶ್ರೀ ಸಿರಿಬೈಲ್ ಧರ್ಮೇಶ್ – ನಿರ್ದೇಶಕರು, ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷರು

Categories
ಉಡುಪಿ

ಅಂಗನವಾಡಿ ಕಾರ್ಯಕರ್ತೆಯರಿಗೆ ಸಿಹಿ ಸುದ್ದಿ!

ಅಂಗನವಾಡಿ ಕಾರ್ಯಕರ್ತೆಯರಿಗೆ ಸಿಹಿ ಸುದ್ದಿ!
– ಸ್ಮಾರ್ಟ್ ಫೋನಿಗೆ ಸರ್ಕಾರದಿಂದ ಕರೆನ್ಸಿ ಭಾಗ್ಯ
– ಏನಿದು ಕರೆನ್ಸಿ… ಯಾರಿಗೆ ಲಾಭ…?

NAMMUR EXPRESS NEWS
ಉಡುಪಿ : ಅಂಗನವಾಡಿ ಕಾರ್ಯಕರ್ತೆಯರಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಅಂಗನವಾಡಿ ಕಾರ್ಯಕರ್ತೆಯರ ಮೊಬೈಲ್ ಗೆ ತಿಂಗಳಾಂತ್ಯದಲ್ಲಿ ಕರೆನ್ಸಿ ನೀಡಲು ಮುಂದಾಗಿದೆ. ಈ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು, ಕೇಂದ್ರ ಸರ್ಕಾರದ ಪೋಷನ್ ಅಭಿಯಾನದಡಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡಿರುವ ಸ್ಮಾರ್ಟ ಫೋನ್ ಗಳಿಗೆ ಕಳೆದ ನಾಲ್ಕು ತಿಂಗಳುಗಳಿಂದ ಹಣ ಬಿಡುಗಡೆ ಆಗಿಲ್ಲ. ಈಗ ತಿಂಗಳಾಂತ್ಯದಲ್ಲಿ ಹಣ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಪೋಷಣ್‌ ಅಭಿಯಾನದಡಿಯಲ್ಲಿ ಗರ್ಭಿಣಿಯರ ದಾಖಲಾತಿ, ಆರೋಗ್ಯ, ಮಕ್ಕಳ ದಾಖಲಾತಿ, ಆರೋಗ್ಯ, ಆಹಾರ ವಿತರಣೆ ಮಾಹಿತಿ ಅಪ್ ಲೋಡ್ ಮಾಡಬೇಕು. ಆದರೆ ಮೊಬೈಲ್ ಗೆ ಕರೆನ್ಸಿ ಇಲ್ಲದ ಕಾರಣ ನಾಲೈದು ತಿಂಗಳಿನಿಂದ ತೊಂದರೆ ಅನುಭವಿಸುವಂತಾಗಿತ್ತು.

Categories
ಚಿಕ್ಕಮಗಳೂರು

ಮೂವರ ಬಲಿ ಪಡೆದ ಕಾಡಾನೆ ಹಿಡಿಯಲು ಪ್ಲಾನ್!

ಮೂವರ ಬಲಿ ಪಡೆದ ಕಾಡಾನೆ ಹಿಡಿಯಲು ಪ್ಲಾನ್!
– ಕಾಡಾನೆ ದಾಳಿಗೆ ಬಲಿ: ಯುವಕನ ನಾಯಿ ಕಣ್ಣೀರು
– ತರೀಕೆರೆ: ಸೆರೆ ಸಿಕ್ಕ ಚಿರತೆ, ನಿಟ್ಟುಸಿರು ಬಿಟ್ಟ ಜನತೆ

NAMMUR EXPRESS NEWS
ತರೀಕೆರೆ: ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಎಂ.ಸಿ.ಹಳ್ಳಿ ಹಾಗೂ ಕಾರೇಹಳ್ಳಿ ಭಾಗದಲ್ಲಿ ಆಗಾಗ ಪ್ರತ್ಯಕ್ಷವಾಗುತ್ತಿದ್ದ ಚಿರತೆಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ತಾಳೆ ಎಣ್ಣೆ ಫ್ಯಾಕ್ಟರಿ ಆವರಣದಲ್ಲಿ ಕೆಲವು ದಿನಗಳಿಂದ ಸಂಚರಿಸುತ್ತಾ ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದಿದ್ದಾರೆ. ತಾಳೆ ಎಣ್ಣೆ ಫ್ಯಾಕ್ಟರಿ ಆವರಣದಲ್ಲಿ ಇರಿಸಿದ್ದ ಬೋನಿನಲ್ಲಿ ಚಿರತೆ ಸೆರೆಯಾಗಿದೆ.

ರಾಕ್ಷಸ ಆನೆಯನ್ನು ಹಿಡಿಯಲು ಅರಣ್ಯ ಇಲಾಖೆ ಆದೇಶ

ಮೂಡಿಗೆರೆ ಅರಣ್ಯ ವಲಯದ ಊರುಬಗೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಉಪಟಳ ನೀಡುತ್ತಿರುವ ಮೂರು ಕಾಡಾನೆಗಳನ್ನು ಸೆರೆಹಿಡಿಯಲು ಅರಣ್ಯ ಇಲಾಖೆಯಿಂದ ಅಧಿಕೃತ ಆದೇಶ ಹೊರಡಿಸಲಾಗಿದೆ. ಮೂಡಿಗೆರೆ ತಾಲ್ಲೂಕಿನ ಹೊಸಕೆರೆ ಗ್ರಾಮದಲ್ಲಿ ಬುಧವಾರ ಕಾಡಾನೆಯಿಂದ ಆನೆ ಕಾರ್ಯಪಡೆಯ ನೌಕರ ಕಾರ್ತಿಕ್ ಗೌಡ ಎಂಬುವವರನ್ನು ಸಾವನ್ನಪ್ಪಿದ ಘಟನೆ ನಡೆದಿತ್ತು. ಈ ಸಂದರ್ಭದಲ್ಲಿ ಸ್ಥಳೀಯರು ಕಾಡಾನೆಗಳನ್ನು ಹಿಡಿದು ಬೇರೆಡೆಗೆ ಸಾಗಿಸಬೇಕೆಂದು ಅರಣ್ಯ ಇಲಾಖೆಯ ಮೇಲೆ ಒತ್ತಡ ಹೇರಿದ್ದರು.

ಈ ಸಂದರ್ಭದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಈ ಭಾಗದ ಮೂರು ಕಾಡಾನೆಗಳನ್ನು ಹಿಡಿದು ಬೇರೆಡೆಗೆ ಸಾಗಿಸುವ ಭರವಸೆ ನೀಡಿದ್ದರು. ಈ ಸಂಬಂಧ ರಾಜ್ಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದರು. ಕ್ಷೇತ್ರದ ಶಾಸಕಿ ಶ್ರೀಮತಿ ನಯನ ಮೋಟಮ್ಮ ಅವರು ಸಹ ಸರ್ಕಾರದ ಮೇಲೆ ಒತ್ತಡ ಹೇರಿದ್ದರು. ಇದೀಗ ಅರಣ್ಯ ಇಲಾಖೆ ವನ್ಯಜೀವಿ ವಿಭಾಗದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ಯುವಕನ ನಾಯಿಯ ರೋಧನೆ!

ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಗೌಡಹಳ್ಳಿ ಬಳಿ ಸಿಬ್ಬಂದಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಯಜಮಾನನ ಮೃತದೇಹ ನೋಡಿ ಸಾಕುನಾಯಿಯ ರೋಧನೆ ಮುಗಿಲು ಮುಟ್ಟಿದೆ. ಕಾಡಾನೆ ದಾಳಿಗೆ ಸಾವನ್ನಪ್ಪಿದ ಗೌಡಹಳ್ಳಿ ಗ್ರಾಮದ ಸಿಬ್ಬಂದಿ ಕಾರ್ತಿಕ್ ತನ್ನ ನಾಯಿಯನ್ನು ಪ್ರೀತಿಯಿಂದ ಸಾಕಿದ್ದರು. ಈ ಹಿನ್ನಲೆ ಒಡೆಯನ ಮೃತದೇಹದ ಎದುರು ಸಾಕು ನಾಯಿ ಕಣ್ಣೀರು ಹಾಕುತ್ತಿದೆ. ಈ ನಾಯಿಯ ಪ್ರೀತಿ ನೋಡಿ ಅಂತ್ಯಕ್ರಿಯೆಗೆ ಬಂದಿದ್ದ ಸ್ಥಳೀಯರು ಕೂಡ ಕಣ್ಣೀರು ಹಾಕಿರುವ ಮನ ಕಲಕುವ ಘಟನೆ ನಡೆದಿದೆ.

Categories
ತೀರ್ಥಹಳ್ಳಿ

ವಿದ್ಯುತ್ ಮೀಟರ್ ಸಮಸ್ಯೆ ಮಾಡಿದ್ದೆ ಬಿಜೆಪಿ!

ವಿದ್ಯುತ್ ಮೀಟರ್ ಸಮಸ್ಯೆ ಮಾಡಿದ್ದೆ ಬಿಜೆಪಿ!
– ಅಡಿಕೆ ಸುಲಿಯುವ ಯಂತ್ರಗಳಿಗೆ ವಿದ್ಯುತ್ ಕನೆಕ್ಷನ್ ಪಡೆಯಬೇಕು ಎಂದು ಕಾನೂನು ಮಾಡಿದ ಆರಗ
– ಈಗ ಪ್ರತಿಭಟನೆ ಮಾಡ್ತಾರಂತೆ: ಹುಂಚದಕಟ್ಟೆ ಆದರ್ಶ

NAMMUR EXPRESS NEWS
ತೀರ್ಥಹಳ್ಳಿ : ಮಾಜಿ ಸಚಿವರೇ ನಿಮಗಿದು ಓಪನ್ ಚಾಲೆಂಜ್, ಅಡಿಕೆ ಸುಲಿಯುವ ಯಂತ್ರಗಳಿಗೆ ಕಮರ್ಷಿಯಲ್ ಕನೆಕ್ಷನ್ ಪಡೆಯಲೇ ಬೇಕು ಎಂದು ಕಾನೂನು ಮಾಡಿದ್ದ ಈಗಿನ ಕಾಂಗ್ರೆಸ್ ಸರ್ಕಾರವಾದರೆ ನಾನು ಕಾಂಗ್ರೆಸ್ ಮಾತ್ರ ಅಲ್ಲ ನಾನು ಸೋಗಲಾಡಿ ಅಂತ ಒಪ್ಪಿಕೊಂಡು ರಾಜಕೀಯ ನಿವೃತ್ತಿ ಪಡೆಯುವೆ, ನೀವು ನಿಮ್ಮ ಸರ್ಕಾರವಾಗಿದ್ದರೆ ಸೋಗಲಾಡಿತನ

ಒಪ್ಪಿಕೊಂಡು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಿರಾ?

ಈ ಪ್ರಶ್ನೆ ಇದೀಗ ಮಾಜಿ ಸಚಿವ ಆರಗ ಜ್ಞಾನೇಂದ್ರ ಅವರಿಗೆ ರಾಷ್ಟ್ರೀಯ ಯುವ ಕಾಂಗ್ರೆಸ್ ವಕ್ತಾರ ಆದರ್ಶ ಹುಂಚದಕಟ್ಟೆ ಹಾಕಿದ್ದಾರೆ. ವಿದ್ಯುತ್ ದರ ಏರಿಸಿದ್ದು ನಿಮ್ಮದೇ ಸರ್ಕಾರ. ಕಮರ್ಷಿಯಲ್ ಕಲೆಕ್ಷನ್ ಪಡೆಯುವಂತೆ ರೈತರ ಮೇಲೆ ದಬ್ಬಾಳಿಕೆ ಮಾಡುವ ಕಾನೂನು ತಂದಿದ್ದು ನಿಮ್ಮದೇ ಬಿಜೆಪಿ ಸರ್ಕಾರ ಎನ್ನುವುದು ಗೊತ್ತಿದ್ದು ಯಾವ ಮುಖ ಹೊತ್ತು ಪ್ರತಿಭಟನೆ ಮಾಡುವಿರಿ?. ಗೃಹಜೋತಿ ಯೋಜನೆ ಮನೆ ಮನೆಯನ್ನು ಹೇಗೆ ತಲುಪಿದೆ ಎಂಬುದನ್ನು ತೀರ್ಥಹಳ್ಳಿ ಕ್ಷೇತ್ರದ ಪ್ರತಿ ಮನೆಗೂ ಹೋಗಿ ತಿಳಿಸುವ ಕೆಲಸ ಮಾಡುತ್ತೇವೆ. ಸಾಧ್ಯವಾದರೆ ಸದನದಲ್ಲಿ ನಿಮ್ಮ ಸರ್ಕಾರದ ತಪ್ಪು ಒಪ್ಪಿಕೊಂಡು ಕಮರ್ಷಿಯಲ್ ಅಗತ್ಯವಿಲ್ಲ ಎಂದಾದರೂ ಧ್ವನಿ ಎತ್ತಿ ಅಥವಾ ಅಡಿಕೆ ಯಂತ್ರಗಳಿಗೆ ಬಳಕೆಯಾಗುವ ಎರಡು ತಿಂಗಳಿಗೆ ಬಿಲ್ ಕಟ್ಟಿಸುವ ಯೋಜನೆಗೆ ಮನವಿ ಮಾಡಿ. ಸೋಗಲಾಡಿತನ ಬಿಡಿ ಎಂದು ಶಾಸಕ ಆರಗ ಜ್ಞಾನೇಂದ್ರ ಪ್ರತಿಭಟನೆಯ ನಿಲುವಿಗೆ ರಾಷ್ಟ್ರೀಯ ಯುವ ಕಾಂಗ್ರೆಸ್ ವಕ್ತಾರ ಪಂಚದ ಕಟ್ಟೆ ಆದರ್ಶ ಪ್ರತಿಕ್ರಿಯಿಸಿದ್ದಾರೆ. ಬಿಜೆಪಿ ರೈತರ ಶೋಷಣೆಯ ಕಾನೂನು ಜಾರಿಗೆ ತಂದು ಈಗ ಕಾಂಗ್ರೆಸ್ ವಿರುದ್ಧ ಪ್ರತಿಭಟಿಸುವುದು ಅವರ ಡೋಂಗಿತನಕ್ಕೆ ಸಾಕ್ಷಿ ಎಂದಿದ್ದಾರೆ.

ಏನಿದು ವಿವಾದ…?

ಮಲೆನಾಡ ಅಡಿಕೆ ಬೆಳೆಗಾರರು ಅನಿವಾರ್ಯವಾಗಿ ಕಾರ್ಮಿಕರ ಕೊರತೆಯಿಂದ ಅಡಿಕೆ ಮಿಷನ್ ಮೊರೆ ಹೋಗಿದ್ದಾರೆ. ಆದರೆ ಅಡಿಕೆ ಮಿಷನ್ ಹಾಕಲು ಕೆ ಇ ಬಿ ಯಿಂದ ತಾತ್ಕಾಲಿಕ ಮೀಟರ್ ಪಡೆಯಬೇಕೆಂಬ ಆದೇಶವನ್ನು ಸರ್ಕಾರ ಮಾಡಿದೆ. ಇದು ರೈತರಿಗೆ ನುಂಗಲಾರದ ತುತ್ತಾಗಿದೆ. ಈ ಹಿನ್ನೆಲೆ ಈ ಆದೇಶ ವಾಪಾಸ್ ಪಡೆಯುವಂತೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಕಳೆದ ವರ್ಷವೂ ಜಾರಿಯಲ್ಲಿತ್ತು. ಆದರೆ ಇಷ್ಟು ಕಠಿಣ ನಿಯಮ ಆಗಿರಲಿಲ್ಲ.

Categories
ಶಿವಮೊಗ್ಗ

ಧೀವರ ಸಾಂಸ್ಕೃತಿಕ ವೈಭವಕ್ಕೆ ಶಿವಮೊಗ್ಗ ಸಜ್ಜು!

ಧೀವರ ಸಾಂಸ್ಕೃತಿಕ ವೈಭವಕ್ಕೆ ಶಿವಮೊಗ್ಗ ಸಜ್ಜು!
– ನ.27ರಂದು ಈಡಿಗರ ಸಂಭ್ರಮದ ಕಾರ್ಯಕ್ರಮ
– ಬೂಮಣ್ಣಿ ಬುಟ್ಟಿ, ಹಸೆ ಚಿತ್ತಾರ ಸ್ಪರ್ಧೆ ಮತ್ತು ಪ್ರದರ್ಶನ
– ರಾಜ್ಯ ಮಟ್ಟದ ಚಿತ್ತಾರಗಿತ್ತಿ ಪ್ರಶಸ್ತಿ, ಧೀರ ದೀವರು ಪುರಸ್ಕಾರ

NAMMUR EXPRESS NEWS
ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಆರ್ಯ ಈಡಿಗರ ಸಂಘ, ರಾಮ ಮನೋಹರ ಲೋಹಿಯಾ ಟ್ರಸ್ಟ್ ಕಾಗೋಡು, ಬ್ರಹ್ಮಶ್ರೀ ನಾರಾಯಣಗುರು ಪತ್ತಿನ ಸಹಕಾರ ಸಂಘ, ಶಿವಮೊಗ್ಗ, ಅಕ್ಷಯ ವಿವಿಧ ಉದ್ದೇಶ ಸಹಕಾರ ಸಂಘ, ಶಿವಮೊಗ್ಗ, ಶಿವಮೊಗ್ಗ ಜಿಲ್ಲಾ ಬ್ರಹ್ಮಶ್ರೀ ನಾರಾಯಣ ಗುರು ಆರ್ಯ ಈಡಿಗರ ಮಹಿಳಾ ಸಂಘದ ವತಿಯಿಂದ ಶಿವಮೊಗ್ಗದ ಆರ್ಯ ಈಡಿಗರ ಭವನದಲ್ಲಿ ಧೀವರ ಸಾಂಸ್ಕೃತಿಕ ವೈಭವ-2023 ನ.26ರ ಭಾನುವಾರ ನಡೆಯಲಿದೆ.
ಬೆಳಗ್ಗೆ 10 ಗಂಟೆಗೆ ಬೂಮಣ್ಣಿ ಬುಟ್ಟಿ, ಹಸೆ ಚಿತ್ತಾರ ಸ್ಪರ್ಧೆ ಮತ್ತು ಪ್ರದರ್ಶನ ನಡೆಯಲಿದೆ. ಕಾರ್ಯಕ್ರಮದ ಚಾಲನೆಯನ್ನು ಶ್ರೀ ಕ್ಷೇತ್ರ ಕಾರ್ತಿಕೇಯ ಪೀಠದ ಶ್ರೀ ಶ್ರೀ ಯೋಗೇಂದ್ರ ಅವಧೂತ ಶ್ರೀಗಳು ಹಾಗೂ ಬ್ರಹ್ಮ ಶ್ರೀ ನಾರಾಯಣ ಗುರು ಮಹಾಸಂಸ್ಥಾನದ ಶ್ರೀ ಶ್ರೀ ರೇಣುಕಾನಂದ ಸ್ವಾಮೀಜಿಯವರು ಚಾಲನೆ ನೀಡಲಿದ್ದಾರೆ.
ಕಾರ್ಯಕ್ರಮವು ದೀವರ ಸಾಂಸ್ಕೃತಿಕ ವೈಭವದ ಸಂಚಾಲಕರಾದ ನಾಗರಾಜ್ ನೇರಿಗೆ ರವರ ಉಪಸ್ಥಿತಿಯಲ್ಲಿ ಹಾಗೂ ಧೀರ ದೀವರ ಬಳಗ ಸಂಚಾಲಕರಾದ ಸುರೇಶ್ ಕೆ ಬಾಳೆಗುಂಡಿ ರವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಮಾಜಿ ಸಚಿವ ಕುಮಾರ್ ಬಂಗಾರಪ್ಪ, ಮಾಜಿ ಸಚಿವ ಹರತಾಳು ಹಾಲಪ್ಪರವರು ಆಗಮಿಸಲಿದ್ದಾರೆ.

ರಾಜ್ಯಮಟ್ಟದ ಚಿತ್ತಾರಗಿತ್ತಿ ಪ್ರಶಸ್ತಿ, ಧೀರ ದೇವರು ಪುರಸ್ಕಾರ

ಮಧ್ಯಾಹ್ನ 3 ಗಂಟೆಗೆ ರಾಜ್ಯಮಟ್ಟದ ಚಿತ್ತಾರಗಿತ್ತಿ ಪ್ರಶಸ್ತಿ ಹಾಗೂ ಧೀರ ದೇವರು ಪುರಸ್ಕಾರ ಪ್ರಧಾನ ಸಮಾರಂಭ ನಡೆಯಲಿದ್ದು ಹಸಿ ಚಿತ್ತಾರ ಕಲಾವಿದರಾದ ಸಿರಿವಂತ ಚಂದ್ರಶೇಖರ್ ಅವರು ಸಮರೂಪ ನುಡಿ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರಾದ ಎಸ್ ಮಧು ಬಂಗಾರಪ್ಪ ರವರು ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಸಾಗರ ಕ್ಷೇತ್ರ ಶಾಸಕರು ಬೇಳೂರು ಗೋಪಾಲಕೃಷ್ಣ, ಶಿವಮೊಗ್ಗ ಶಾಸಕ ಚನ್ನಬಸಪ್ಪ ಕೆ, ಆರ್ಯ ಈಡಿಗ ಸಂಘದ ಅಧ್ಯಕ್ಷರಾದ ಶ್ರೀಧರ್ ಆರ್ ಹುಲ್ತಿಕೊಪ್ಪ, ರಾಮ ಮನೋಹರ ಲೋಹಿಯಾ ಟ್ರಸ್ಟ್ ಡಾ.ರಾಜ ನಂದಿನಿ ಕಾಗೋಡು, ಶಿರಸಿ ಕ್ಷೇತ್ರ ಶಾಸಕರು ಭೀಮಣ್ಣ ಟಿ ನಾಯ್ಕ್ , ನಗರಾಭಿವೃದ್ಧಿ ಇಲಾಖೆ ಉಪ ಕಾರ್ಯದರ್ಶಿ ಕೃಷ್ಣಮೂರ್ತಿ ಹೆಚ್ ಕೆ, ಬ್ರಹ್ಮಶ್ರೀ ನಾರಾಯಣಗುರು ಪತ್ತಿನ ಸಹಕಾರ ಸಂಘದ ಅಧ್ಯಕ್ಷರು ಡಾ. ಜಿ. ಡಿ ನಾರಾಯಣಪ್ಪ, ಜಿಲ್ಲಾ ಈಡಿಗ ಮಹಿಳಾ ಸಂಘದ ಅಧ್ಯಕ್ಷರಾದ ಗೀತಾಂಜಲಿ ದತ್ತಾತ್ರೇಯ ಆಗಮಿಸಲಿದ್ದಾರೆ.
ಕಾರ್ಯಕ್ರಮವು ಸಹ ಸಂಚಾಲಕರಾದ ಸುರೇಶ್ ಕೆ ಬಾಳೆಗುಂಡಿ ಹಾಗೂ ಹಳೆಪೈಕ ಧೀವರ ಸಂಸ್ಕೃತಿ ಸಂವಾದ ಬಳಗದ ಅರವಿಂದ ಕರ್ಕಿಕೋಡಿ ಹೊನ್ನಾವರ ರವರ ಉಪಸ್ಥಿತಿಯಲ್ಲಿ ನಡೆಯಲಿದ್ದು ದೀವರ ಸಾಂಸ್ಕೃತಿಕ ವೈಭವದ ಸಂಚಾಲಕರಾದ ನಾಗರಾಜ ನೇರಿಗೆ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.

ಧೀರ ಧೀವರ ಪ್ರಶಸ್ತಿ ಪುರಸ್ಕೃತರು :

– ಡಾ. ರಾಮಪ್ಪ, ಧರ್ಮದರ್ಶಿಗಳು, ಶ್ರೀ ಕ್ಷೇತ್ರ ಸಿಗಂದೂರು
– ಶ್ರೀಮತಿ ಲಕ್ಷ್ಮಮ್ಮ ಗಡೇಮನೆ, ಹಿರಿಯ ಹಸೆ ಚಿತ್ತಾರ ಕಲಾವಿದೆ, ಸಾಗರ
– ಶ್ರೀ ಬಿ. ಟಾಕಪ್ಪ ಕಣ್ಣೂರು, ಅಂತರಾಷ್ಟ್ರೀಯ ಜಾನಪದ ಕಲಾವಿದರು

ಸಹಕಾರ :
ಧೀವರ ಯುವ ವೇದಿಕೆ, ಸಾಗರ
ಶ್ರೀ ನಾರಾಯಣ ಗುರು ವಿಚಾರ ವೇದಿಕೆ, ಶಿವಮೊಗ್ಗ
ಬಿಎಸ್ಎನ್‌ಡಿಪಿ, ಶಿವಮೊಗ್ಗ
ಮಲೆನಾಡು ಧೀವರ ಕ್ಷೇಮಾಭಿವೃದ್ಧಿ ಸಂಘ, ಶಿವಮೊಗ್ಗ

ಮಾಹಿತಿಗಾಗಿ ಸಂಪರ್ಕಿಸಿ: 9341110728, 9886700061,9901144300,9741887088,9986860866

Categories
ಬೆಂಗಳೂರು

ರಾಜಧಾನಿಯಲ್ಲಿ ಕರಾವಳಿ ಸಂಸ್ಕೃತಿ ವೈಭವ!

ರಾಜಧಾನಿಯಲ್ಲಿ ಕರಾವಳಿ ಸಂಸ್ಕೃತಿ ವೈಭವ!
– ಕರಾವಳಿ ಜನರ ಸಮಾಗಮ: ಕೋಣಗಳ ನೋಡಲು ಜನ ಸಾಗರ
– ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ವಿಶಾಲ ವೇದಿಕೆ

NAMMUR EXPRESS NEWS
ಬೆಂಗಳೂರು: ಐತಿಹಾಸಿಕ ಕಂಬಳಕ್ಕೆ ರಾಜಧಾನಿಯಲ್ಲಿ ಭಾರೀ ಜನ ಬೆಂಬಲ ವ್ಯಕ್ತವಾಗಿದೆ. ವಿಶಾಲ ಮೈದಾನದಲ್ಲಿ ಕೋಣಗಳ ಓಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಮೈದಾನದ ಮತ್ತೊಂದೆಡೆ ಸಾಂಸ್ಕೃತಿಕ ವೈಭವಕ್ಕೆ ಸಜ್ಜಾಗಿರುವ ವಿಶಾಲ ವೇದಿಕೆ, ಸಿದ್ದವಾದ ಬೆಂಗಳೂರು ರಾಜ ಮಹಾರಾಜಾ ಜೋಡುಕೆರೆ ಕಂಬಳ ಗಮನ ಸೆಳೆದಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ವಿಶಾಲ ಪ್ರದೇಶದಲ್ಲಿ ಇದೆ ಮೊದಲ ಬಾರಿಗೆ ಕಂಬಳ ಆಯೋಜಿಸಲು ಬೆಂಗಳೂರು ಕಂಬಳ ಸಮಿತಿ ಮಾಡುತ್ತಿದೆ. ಕರಾವಳಿ ಮಣ್ಣಿನ ಸೊಗಡಿನ ಕಂಪನ್ನು ರಾಜಧಾನಿ ಬೆಂಗಳೂರಿಗೆ ಪಸರಿಸಲು ಸಿದ್ಧತೆ ನಡೆಸಲಾಗಿದೆ
ಕಂಬಳ ಕರೆಯ ಪಕ್ಕದಲ್ಲಿರುವ ವಿಶಾಲ ಜಾಗದಲ್ಲಿ ಆಹಾರ ಮೇಳಕ್ಕೆ ಅವಕಾಶ ಕಲ್ಪಿಸಲಾಗಿದೆ. ಕರಾವಳಿಯ ಆಹಾರ ಪದ್ದತಿಯ ಅನಾವರಣ ನಡೆಯಲಿದೆ. ಪ್ರಮುಖವಾಗಿ ಸೇರಿದಂತೆ ಸುಮಾರು 150ಕ್ಕೂ ಹೆಚ್ಚು ಆಹಾರ ಮಳಿಗೆಗಳು ಇಲ್ಲಿವೆ.

ಕರಾವಳಿ ಪ್ರತಿಕೃತಿ ನಿರ್ಮಾಣ!

ಮೈದಾನದಲ್ಲಿ ತುಳುನಾಡು ಮತ್ತು ಕರಾವಳಿಯನ್ನು ಪ್ರತಿನಿಧಿಸುವ ಹಲವು ಪ್ರತಿಕೃತಿಗಳನ್ನು ಸ್ಥಾಪಿಸಲಾಗಿದೆ. ಯಕ್ಷಗಾನದ ವೇಷಧಾರಿ, ಯಕ್ಷಗಾನದ ಬೃಹತ್ ಕಿರೀಟ, ಬತ್ತದ ಕಣಜ, ಸಿರಿ ತುಪ್ಪೆ, ಕಂಬಳ ಕೋಣಗಳು, ಎತ್ತಿನಗಾಡಿ, ಗೋಮಟೇಶ್ವರ ಪ್ರತಿಮೆ, ಕೋಟಿ  ಚೆನ್ನಯರ ಮೂರ್ತಿಗಳನ್ನು ಇಲ್ಲಿ ಇರಿಸಲಾಗಿದೆ.
ತುಳುನಾಡ ಮೂಲ ನಂಬಿಕೆಯಾದ  ನಾಗಾರಾಧನೆಯ ನಾಗಬನ, ದೈವಾರಾಧನೆಯ ದೈವದ ಮನೆಯ ಮಾದರಿಯನ್ನು ಮಾಡಿ ಬೆಂಗಳೂರಿಗರಿಗೆ ತುಳುನಾಡ ಸಂಸ್ಕೃತಿಯ ಪರಿಚಯ ಮಾಡುವ ಪ್ರಯತ್ನ ನಡೆಯುತ್ತಿದೆ. ಕಂಬಳ ಆರಂಭಕ್ಕೆ ಒಂದು ದಿನ ಮೊದಲೇ ಬಂದಿರುವ ಜನರು ಇದರ ಬಳಿ ಫೋಟೋ, ಸೆಲ್ಫಿ ಪಡೆಯುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿತ್ತು.

Categories
ಕರಾವಳಿ

ಕರಾವಳಿ ಟಾಪ್ ನ್ಯೂಸ್

ಮಹಿಳೆಯ ಮೊಬೈಲ್ ಕದ್ದು ಹಣ ಡ್ರಾ!
– ಬೆಳ್ತಂಗಡಿಯಲ್ಲಿ ನಡೆದ ಘಟನೆ: ಏನಿದು ಕೇಸ್?
– ಮಂಗಳೂರು: ಲೋಕಾಯುಕ್ತ ಪೊಲೀಸ್ ಬಲೆಗೆ ವಿಎ
ಬೆಳ್ತಂಗಡಿ : ಇನೋವಾ ಕಾರು ಕಳ್ಳತನ ಮಾಡಿದ ನಾಲ್ವರ ಬಂಧನ

NAMMUR EXPRESS NEWS
ಬೆಳ್ತಂಗಡಿ: ಮಹಿಳೆಯೊಬ್ಬರ ಮೊಬೈಲ್ ಫೋನ್ ಕದ್ದಾತ, ಫೋನ್ ಪೇ ಮೂಲಕ ಹಣ ಕದ್ದ ಘಟನೆ ನಡೆದಿದೆ. ಅದೇ ಮೊಬೈಲ್ ನ ಫೋನ್ ಪೇ ಮೂಲಕ ಹಣ ಲಪಟಾಯಿಸಿದ ಘಟನೆ ನ.9ರಂದು ನಡೆದಿದೆ. ಕುವೆಟ್ಟು ಗ್ರಾಮದ ಅಭಿದಾಬಾನುರವರು ನ.9ರಂದು ಬೆಳಿಗ್ಗೆ ಮನೆಯಲ್ಲಿ ಇರದಿದ್ದ ವೇಳೆ, ಅವರ ಪರಿಚಯಸ್ಥರಾದ ಸಿದ್ದಿಕ್ ಎಂಬಾತ ಅಂದಾಜು ರೂ.8000 ಮೌಲ್ಯದ ಮೊಬೈಲನ್ನು ಕದ್ದು ಬಳಿಕ ಸದ್ರಿ ಮೊಬೈಲ್‌ನಲ್ಲಿ ಪೋನ್ ಪೇ ಮುಖಾಂತರ ಅವರ ಖಾತೆಯಲ್ಲಿದ್ದ ರೂ 64.000/- ಹಣದ ಪೈಕಿ, ರೂ 34.000/- ರೂ ಹಣವನ್ನು ಜಾಪ‌ರ್ ಎಂಬಾತನಿಗೂ, ರೂ 25.000/- ಹಣವನ್ನು ಮಹಮ್ಮದ್ ಎಂಬಾತನಿಗೂ ಹಾಗೂ ರೂ 2000/- ಹಣವನ್ನು ಸಿರಾಜ್ ಎಂಬಾತನಿಗೂ ವರ್ಗಾವಣೆ ಮಾಡಿದ್ದಾನೆ. ಆರೋಪಿಗಳು ಅಭಿದಾಬಾನು ಅವರ ಗಂಡನ ಸ್ನೇಹಿತರಾಗಿರುವುದರಿಂದ ಮೊಬೈಲ್ ಮತ್ತು ಹಣವನ್ನು ವಾಪಸು ನೀಡಬಹುದೆಂದು ಕಾದಿದ್ದು, ಈವರೆಗೆ ವಾಪಾಸ್ ನೀಡದಿರುವ ಹಿನ್ನೆಲೆಯಲ್ಲಿ ನ.23ರಂದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಲೋಕಾಯುಕ್ತ ಪೊಲೀಸ್ ಬಲೆಗೆ ಬಿದ್ದ ಅಧಿಕಾರಿ!

ಮರಣ ದೃಢೀಕರಣಕ್ಕಾಗಿ ಲಂಚದ ಪಡೆಯುತ್ತಿದ್ದ ಮಂಗಳೂರು ತಾಲೂಕಿನ ಚೇಳ್ಯಾರು ಗ್ರಾಮದ ವಿಎ ಲೋಕಾಯುಕ್ತ ಪೊಲೀಸರಿಗೆ ಶುಕ್ರವಾರ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಮರಣ ದೃಢೀಕರಣ ಪತ್ರಕ್ಕಾಗಿ ದೂರುದಾರರಿಂದ 13,000 ರೂ. ಲಂಚ ಪಡೆದ ಆರೋಪದಲ್ಲಿ ಚೇಳ್ಯಾರು ಗ್ರಾಮ ಆಡಳಿತ ಅಧಿಕಾರಿ ವಿಜಿತ್ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿ, ಲಂಚದ ಹಣ ವಶಪಡಿಸಿಕೊಂಡಿ ದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವುದಾಗಿ ಲೋಕಾಯುಕ್ತ ಎಸ್ಪಿ ಸಿ.ಎ. ಸೈಮನ್ ತಿಳಿಸಿದ್ದಾರೆ.

ಇನೋವಾ ಕಾರು ಕಳ್ಳತನ ಮಾಡಿದ ನಾಲ್ವರ ಬಂಧನ

ಬೆಳ್ತಂಗಡಿ: ಕಕ್ಕಿಂಜೆಯ ಮನೆಯ ಶೆಡ್ ನಲ್ಲಿ ನಿಲ್ಲಿಸಿದ್ದ ಇನೋವಾ ಕಾರನ್ನು ಕಳ್ಳತನ ಮಾಡಿದ ಪ್ರಕರಣವನ್ನು ಧರ್ಮಸ್ಥಳ ಪೊಲೀಸರು ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.ಬಂಧಿತರನ್ನು ಅಜಯ್ ಶೆಟ್ಟಿ ,ಸೂರಜ್ ಶೆಟ್ಟಿ , ಮಂಜುನಾಥ ಪೂಜಾರಿ , ಕಿಶೋರ್. ಟಿ ಎಂದು ಗುರುತಿಸಲಾಗಿದೆ. ಬೆಳ್ತಂಗಡಿ ತಾಲೂಕು ಚಾರ್ಮಾಡಿ ಗ್ರಾಮದ ಕಕ್ಕಿಂಜೆ ಎಂಬಲ್ಲಿ ನ.9ರಂದು ರಾತ್ರಿ 10 ಗಂಟೆ ಸಮಯಕ್ಕೆ ಇಸಾಕ್ ಎಂಬವರ ಅಕ್ಕನ ಮಗ ನೌಫಲ್ ಎಂಬವರು ತಮ್ಮ ಶೆಡ್ಡಿನಲ್ಲಿ ನಿಲ್ಲಿಸಿದ್ದ ಇನ್ನೋವಾ ಕಾರನ್ನು ನೌಫಾಲ್ ನ ಗೆಳೆಯ ಸೈಪುದ್ದಿನ್ ಎಂಬಾತನ ಗೆಳೆಯರಾದ ಸೂರಜ್ ಶೆಟ್ಟಿ ಮತ್ತು ಅಜಯ್ ಶೆಟ್ಟಿಯವರು ಬಾಡಿಗೆಗೆ ನೀಡುವಂತೆ ಕೇಳಿದಾಗ ನೀಡದೇ ಇದ್ದುದ್ದರಿಂದ ಸದ್ರಿ ಕಾರನ್ನು ಸೂರಜ್ ಶೆಟ್ಟಿ ಮತ್ತು ಅಜಯ್ ಶೆಟ್ಟಿ ಕಳವು ಮಾಡಿ ತೆಗೆದುಕೊಂಡು ಹೋಗಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಲಾಗಿತ್ತು.

ಈ ಬಗ್ಗೆ ತನಿಖೆ ಕೈಗೊಂಡ ತಂಡ ಧರ್ಮಸ್ಥಳ ಎಸ್ ಐ ಅನಿಲ್ ಕುಮಾರ್ ನೇತೃತ್ವದ ತಂಡ ಕಳ್ಳತನವಾದ ಇನೋವಾ ಕಾರು ಸಮೇತ ಪ್ರಕರಣದ ನಾಲ್ಕು ಜನ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳನ್ನು ಇದೀಗ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಅವರಿಗೆ ಮುಂದಿನ 14 ದಿನಗಳವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.