Categories
ತೀರ್ಥಹಳ್ಳಿ

ತೀರ್ಥಹಳ್ಳಿ: ವಾಹನ ನಿಲುಗಡೆ ವ್ಯವಸ್ಥೆಗಾಗಿ ಪಟ್ಟು!

ತೀರ್ಥಹಳ್ಳಿ: ವಾಹನ ನಿಲುಗಡೆ ವ್ಯವಸ್ಥೆಗಾಗಿ ಪಟ್ಟು!
– ಯುವ ಕಾಂಗ್ರೆಸ್ ವತಿಯಿಂದ ಪೊಲೀಸ್ ಇಲಾಖೆಗೆ ಮನವಿ
– ಸಾರ್ವಜನಿಕರಿಗೆ ತೊಂದರೆ ಆಗಬಾರದು ಎಂದು ಅಗ್ರಹ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣದ ರಸ್ತೆ ಅಗಲೀಕರಣ ನಂತರ ಸೂಕ್ತ ವಾಹನ ನಿಲುಗಡೆ ವ್ಯವಸ್ಥೆಯಿಲ್ಲ. ನಾಮಫಲಕಗಳು ಹೆಸರಿಗೆ ಮಾತ್ರ ಇದ್ದಂತಿದೆ. ವಾಹನಗಳ ಮಾಲೀಕರು ನಿಯಮಾನುಸಾರ ನಿಲುಗಡೆ ಮಾಡದೇ ಇರುವುದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದ್ದು ಈ ವಿಚಾರವಾಗಿ ಸೂಕ್ತ ಕ್ರಮ ಕೈಗೊಂಡು ವಾಹನ ನಿಲುಗಡೆ ವ್ಯವಸ್ಥೆಯನ್ನು ಸರಿಪಡಿಸಿಕೊಡಬೇಕೆಂದು ಯುವ ಕಾಂಗ್ರೆಸ್ ವತಿಯಿಂದ ಪೊಲೀಸ್ ಇಲಾಖೆಗೆ ಮನವಿ ಮಾಡಲಾಗಿದೆ. ಪೊಲೀಸ್ ಉಪ ಅಧೀಕ್ಷಕರಾದ ಗಜಾನನ ವಾಮನ ಸುತಾರ ಅವರಿಗೆ ತೀರ್ಥಹಳ್ಳಿ ಯುವ ಕಾಂಗ್ರೆಸ್ ಅಧ್ಯಕ್ಷರಾದ ಅಮರನಾಥ್ ಶೆಟ್ಟಿ ಅವರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಗೀತಾ ರಮೇಶ್, ಉಪಾಧ್ಯಕ್ಷರಾದ ಅಸಾದಿ ಅವರಿಗೆ ಮನವಿ ಮಾಡಲಾಯಿತು.

ಎಸ್ ಟಿ ಘಟಕದ ಅಧ್ಯಕ್ಷರಾದ ಸುಬ್ರಮಣ್ಯ ವಿಠ್ಠಲನಗರ , ಎನ್.ಎಸ್. ಯು. ಐ ಅಧ್ಯಕ್ಷರಾದ ಸುಜಿತ್ ಸಾಲಿಯಾನ್ , ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಶ್ವಲ್ ಗೌಡ , ಪಟ್ಟಣ ಪಂಚಾಯತ್ ಸದಸ್ಯ ನಮೃತ್ , ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ಆಸೀಫ್ ಸೀಬಿನಕೆರೆ , ಸಾಮಾಜಿಕ ಜಾಲತಾಣ ಅಧ್ಯಕ್ಷರಾದ ಶ್ರೇಯಸ್ ಸೀಬಿನಕೆರೆ , ಪದ್ಮನಾಭ್ ( ಬಿಟ್ಟೆ ) , ಧನು ಮಿಲಕೇರಿ , ಅವಿನಾಶ್ ಬೆಟ್ಟಮಕ್ಕಿ ಉಪಸ್ಥಿತರಿದ್ದರು.

Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ರಾಜ್ಯೋತ್ಸವ ಸಂಭ್ರಮ ಶುರು!

ತೀರ್ಥಹಳ್ಳಿಯಲ್ಲಿ ರಾಜ್ಯೋತ್ಸವ ಸಂಭ್ರಮ ಶುರು!
– ಅಂಗಡಿ ಅಂಗಡಿಗೆ ಕನ್ನಡ ಭಾವುಟ ವಿತರಿಸಿದ ಕರವೇ ಕಾರ್ಯಕರ್ತರು
– ನ.25 ಕ್ಕೆ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ರಾಜ್ಯೋತ್ಸವ: ಸಾಂಸ್ಕೃತಿಕ ಕಾರ್ಯಕ್ರಮ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಕನ್ನಡ ರಕ್ಷಣಾ ವೇದಿಕೆ ತೀರ್ಥಹಳ್ಳಿ ವತಿಯಿಂದ ಕನ್ನಡ ರಾಜ್ಯೋತ್ಸವವನ್ನು ನ.25ರ ಶನಿವಾರ ಸಂಜೆ 5:30ಕ್ಕೆ ತೀರ್ಥಹಳ್ಳಿಯ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಆಯೋಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪಟ್ಟಣದ ಎಲ್ಲಾ ಅಂಗಡಿ, ಕಚೇರಿಗಳಲ್ಲಿ ಕನ್ನಡ ಭಾವುಟ ರಾರಾಜಿಸಬೇಕು ಎಂಬ ಉದ್ದೇಶದಿಂದ ಕರವೇ ಪ್ರಮುಖರು ತೀರ್ಥಹಳ್ಳಿ ಪಟ್ಟಣದಲ್ಲಿ ಗುರುವಾರ ಕನ್ನಡ ಭಾವುಟವನ್ನು ಅಂಗಡಿ ಅಂಗಡಿಗಳಿಗೆ ಹಂಚಿದರು.
ಕರವೇ ರಾಜ್ಯ ಸಂಘಟನಾ ಕಾರ್ಯದರ್ಶಿ ಪಟೇಲ್ ವೆಂಕಟೇಶ್ ಹೆಗ್ಡೆ, ಕರವೇ ಅಧ್ಯಕ್ಷರಾದ ಸುರೇಂದ್ರ ಯಡೂರು, ಪ್ರಮುಖರಾದ ಮಲ್ಲಕ್ಕಿ ರಾಘವೇಂದ್ರ, ಬಿಳಿಗಿರಿ ವಿಜಯ್, ಜ್ಯೋತಿ ದಿಲೀಪ್, ಶ್ರೀಕಾಂತ್, ಕಟ್ಟೆ ಕರಣ್, ಸುರೇಶ್ ಟೈಲರ್, ಗಣೇಶ್ ಕೌದಳ್ಳಿ, ಅಂಬರೀಷ್ ಬಸವಾನಿ, ಡಾಕಮ್ಮ, ವಿಜಯ ಸೇರಿದಂತೆ 30ಕ್ಕೂ ಹೆಚ್ಚು ಕಾರ್ಯಕರ್ತರು ಕನ್ನಡ ಸೇವೆಗೆ ಕೆಲಸ ಮಾಡುತ್ತಿದ್ದಾರೆ.

ಕನ್ನಡ ಸಾಧಕ ಮಕ್ಕಳಿಗೆ ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮ

ಕಾರ್ಯಕ್ರಮದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ 125 ಕ್ಕೆ 125 ಅಂಕ ಗಳಿಸಿದ ತಾಲೂಕಿನ ವಿದ್ಯಾರ್ಥಿಗಳಿಗೆ ಗೌರವ ಪುರಸ್ಕಾರ ಇರುತ್ತದೆ. ಹಾಗೂ ತೀರ್ಥಹಳ್ಳಿಯ ಡ್ಯಾನ್ಸ್ ಪ್ಯಾಲೇಸ್ ಅಕಾಡೆಮಿ ಇವರಿಂದ ಡ್ಯಾನ್ಸ್ ಕಾರ್ಯಕ್ರಮ ನಂತರ ಶ್ರೀ ದುರ್ಗಾ ಕಲಾತಂಡ ಹಾರಾಡಿ ಬ್ರಹ್ಮಾವರ ಇವರಿಂದ ಒಂದಲ್ಲ ಒಂದು ಸಮಸ್ಯೆ ಎನ್ನುವ ಕುಂದ ಕನ್ನಡದ ಹಾಸ್ಯಮಯ ನಗೆ ನಾಟಕ ನಡೆಯಲಿದೆ.

Categories
ತೀರ್ಥಹಳ್ಳಿ

ಚಿಕಿತ್ಸೆ ಹಣಕ್ಕಾಗಿ ಏಕ ವ್ಯಕ್ತಿ ನಾಟಕ ಪ್ರದರ್ಶನ!

ಚಿಕಿತ್ಸೆ ಹಣಕ್ಕಾಗಿ ಏಕ ವ್ಯಕ್ತಿ ನಾಟಕ ಪ್ರದರ್ಶನ!
– ತೀರ್ಥಹಳ್ಳಿಯ ಹೆಮ್ಮೆಯ ಕ್ರೀಡಾಪಟು ಅಭಿಷೇಕ್ ಚಿಕಿತ್ಸಾ ವೆಚ್ಚ ಭರಿಸುವ ಸಲುವಾಗಿ ನಾಟಕ ಪ್ರದರ್ಶನ
– ಶೃತಿ ಆದರ್ಶ ಅಭಿನಯದ ಏಕವ್ಯಕ್ತಿ ರಂಗ ಪ್ರಯೋಗ
– ಕೈಲಾದಷ್ಟು ಹಣ ನೀಡಿ ಮಾನವೀಯತೆ ಮೆರೆದ ಜನ 

NAMMUR EXPRESS NEWS
ತೀರ್ಥಹಳ್ಳಿ : ತೀರ್ಥಹಳ್ಳಿಯ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಬುಧವಾರ ಸಂಜೆ 6:30ಕ್ಕೆ ರಂಗ ಸಿಂಗಾರ ತೀರ್ಥಹಳ್ಳಿ ಅರ್ಪಿಸಿದ ಹೊಂಗಿರಣ ಶಿವಮೊಗ್ಗ ಪ್ರಸ್ತುತಿಯ ಶ್ರುತಿ ಆದರ್ಶ ಅಭಿನಯದ ಏಕವ್ಯಕ್ತಿ ನಾಟಕವನ್ನು ಪ್ರದರ್ಶಿಸಲಾಯಿತು.

ಅಭಿಗಾಗಿ ನಾವು ನೀವು :

ತೀರ್ಥಹಳ್ಳಿಯ ಹೆಮ್ಮೆಯ ಕ್ರೀಡಾಪಟುವಾದ ಅಭಿಷೇಕ್ ಜಾದವ್ ಅವರ ಚಿಕಿತ್ಸಾ ವೆಚ್ಚವನ್ನು ಬರಿಸುವ ಸಹಾಯಾರ್ಥವಾಗಿ ಸರಿ ಸುಮಾರು 70 ನಿಮಿಷ ಏಕವ್ಯಕ್ತಿ ರಂಗ ಪ್ರಯೋಗ ನಿರಾಕರಣೆಯನ್ನು ಪ್ರದರ್ಶನ ಮಾಡಲಾಯಿತು.
ಯುವ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಆದರ್ಶ ಹುಂಚದಕಟ್ಟೆ ಅವರ ಪತ್ನಿ ಶೃತಿ ಆದರ್ಶ ಅವರ ತಂಡದವರು ಅತ್ಯಂತ ಯಶಸ್ವಿಯಾಗಿ ಕಾರ್ಯಕ್ರಮ ನಡೆಸಿಕೊಟ್ಟಿದ್ದು ಹಲವು ಗಣ್ಯರು ವೇದಿಕೆಯಲ್ಲಿ ತಂಡದ ಬಗ್ಗೆ ಗೌರವ ವ್ಯಕ್ತಪಡಿಸಿದರು. ಪ್ರದರ್ಶನ ತೀರ್ಥಹಳ್ಳಿಯ ಪ್ರೇಕ್ಷಕರ ಜನ ಮನೆಗೆದ್ದಿದ್ದು ಪ್ರೇಕ್ಷಕರು ತಮ್ಮ ಕೈಯಲ್ಲಿ ಆದಷ್ಟು ಹಣವನ್ನು ಅಭಿಷೇಕ್ ಜಾದವ್ ಅವರ ಚಿಕಿತ್ಸೆಯ ಸಲುವಾಗಿ ನೀಡಿ ಮಾನವೀಯತೆ ಮೆರೆದರು. ಕಾರ್ಯಕ್ರಮದಲ್ಲಿ ಪಕ್ಷಾಭೇದ ಮರೆತು ಎಲ್ಲಾ ಪಕ್ಷದ ರಾಜಕಾರಣಿಗಳು, ಡಿವೈಎಸ್ಪಿ ಗಜಾನನ ವಾಮನಸುತಾರ ಪಾಪಂ ಅಧ್ಯಕ್ಷೇ ಗೀತಾ ರಮೇಶ್, ಪಪಂ ಸದಸ್ಯರು ಮತ್ತು ಶಾಲಾ ಕಾಲೇಜಿನ ಶಿಕ್ಷಕ, ಶಿಕ್ಷಕಿಯರು ಮತ್ತು ವಿದ್ಯಾರ್ಥಿಗಳು, ಯುವ ಪ್ರಮುಖರು ಸೇರಿದಂತೆ ಪ್ರಮುಖರು ಮತ್ತು ಕಲಾ ಪ್ರೇಮಿಗಳು ಇದ್ದರು.

Categories
ಮಾಹಿತಿ

ಪಡಿತರ ಚೀಟಿದಾರರೇ, ಇನ್ಮುಂದೆ ಪ್ರಿಂಟೆಡ್ ಬಿಲ್ ಕಡ್ಡಾಯ!

ಪಡಿತರ ಚೀಟಿದಾರರೇ, ಇನ್ಮುಂದೆ ಪ್ರಿಂಟೆಡ್ ಬಿಲ್ ಕಡ್ಡಾಯ!
– ಡಿಸೆಂಬರ್ 31 ರವರೆಗೆ ತಿದ್ದುಪಡಿಗೆ ಅವಕಾಶ
– ಏನೇನು ದಾಖಲೆ ಬೇಕು…?, ಏನಿದು ಹೊಸ ನಿಯಮ?

NAMMUR EXPRESS NEWS
ಕೇಂದ್ರ ಸರ್ಕಾರ ಪ್ರತಿಯೊಬ್ಬರಿಗೂ ಇನ್ನು ಮುಂದೆ ನ್ಯಾಯಬೆಲೆ ಅಂಗಡಿಯಲ್ಲಿ ಪ್ರಿಂಟೆಡ್ ಬಿಲ್ ಕೊಡಬೇಕು ಎಂದು ಘೋಷಣೆ ಮಾಡಿದೆ. ಇದುವರೆಗೆ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಪಡೆದ ಬಳಿಕ ಕೈಯಲ್ಲಿ ಬಿಲ್ ಬರೆದು ಕೊಡಲಾಗುತ್ತಿತ್ತು, ಇದೀಗ ಪ್ರಿಂಟೆಡ್ ಬಿಲ್ ಕೊಡಲು ಸೂಚನೆ ನೀಡಿದೆ.

ಇದರಲ್ಲಿ ಯಾವ ಪಡಿತರ ಎಷ್ಟು..? ಎಂಬ ಮಾಹಿತಿ ಇರುತ್ತದೆ. ಪಡಿತರ ಸದಸ್ಯರು ಹಾಗೂ ಕೇಂದ್ರ ಸರ್ಕಾರದ ಅನುದಾನ ಹಾಗೂ ರಾಜ್ಯ ಸರ್ಕಾರದ ಅನುದಾನದ ವಿವರ ಇದರಲ್ಲಿ ಕಾಣಬಹುದು. ಸದ್ಯ ಪಡಿತರ ಚೀಟಿದಾರರಿಗೆ 5 ಕೆಜಿ ಅಕ್ಕಿ ನೀಡಲಾಗುತ್ತಿದ್ದು, ಉಳಿದ 5 ಕೆಜಿ ಅಕ್ಕಿ ಬದಲು ಹಣ ನೀಡಲಾಗುತ್ತಿದೆ.

ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ ಅಡಿ ಕೇಂದ್ರ ಸರ್ಕಾರ ಅಕ್ಕಿ ಕೊಡುತ್ತಿರುವುದರಿಂದ ಈ ಯೋಜನೆಯ ಬಗ್ಗೆ ಜನರಿಗೆ ತಿಳಿಸುವ ಉದ್ದೇಶದಿಂದ ರಶೀದಿ ನೀಡುವುದನ್ನು ಕಡ್ಡಾಯ ಮಾಡಲಾಗಿದೆ. ಯೋಜನೆಯ ಹೆಸರು, ಜಿಲ್ಲೆ, ತಾಲೂಕು, ಫಲಾನುಭವಿಯ ಹೆಸರು, ಒಟ್ಟು ಸದಸ್ಯರ ಸಂಖ್ಯೆ, ಹಂಚಿಕೆಯ ದಿನಾಂಕ, ಆಹಾರ ಧಾನ್ಯದ ವಿವರ ಹಾಗೂ ಇದಕ್ಕೆ ತಗಲುವ ವೆಚ್ಚ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಾಯಧನ ಎಷ್ಟು ಎಂಬುದು ಸೇರಿದಂತೆ ಹಲವು ಮಾಹಿತಿ ಮುದ್ರಿತ ರಶೀದಿಯಲ್ಲಿರಲಿದೆ.
ಇನ್ನೂ, ಮುಖ್ಯದ ವಿಚಾರ ಅಂದರೆ ಆಧಾರ್ ಕಾರ್ಡ್ ಅನ್ನು ಪಡಿತರ ಚೀಟಿಗೆ ಲಿಂಕ್ ಮಾಡಲು ಕೇಂದ್ರ ಸರ್ಕಾರವು ಡಿಸೆಂಬರ್ 31 ರವರೆಗೆಅವಕಾಶ ನೀಡಿದೆ. ಈ ಮೂಲಕ ಅನರ್ಹ ವ್ಯಕ್ತಿಗಳು ಅನೇಕ ಪಡಿತರ ಚೀಟಿಗಳನ್ನು ಪಡೆಯುವ ಸಂದರ್ಭಗಳನ್ನು ತಡೆಯಲು ಸರ್ಕಾರಕ್ಕೆ ಸಾಧ್ಯವಾಗುತ್ತದೆ. ಅರ್ಹವ್ಯಕ್ತಿಗಳು ಮಾತ್ರ ಸಬ್ಸಿಡಿ ಇಂಧನ / ಆಹಾರ ಧಾನ್ಯಗಳನ್ನು ಪಡೆಯುತ್ತಾರೆ ಎಂದು ಇದು ಖಚಿತಪಡಿಸುತ್ತದೆ.

Categories
ಮಂಗಳೂರು

ಲಾಡ್ಜ್ ರೂಂಗೆ ಬೆಂಕಿ: ಯುವಕ ಸಜೀವ ದಹನ!

ಲಾಡ್ಜ್ ರೂಂಗೆ ಬೆಂಕಿ: ಯುವಕ ಸಜೀವ ದಹನ!
– ಮಂಗಳೂರಿನ ಲಾಡ್ಜ್ ಅಲ್ಲಿ ನಡೆದ ದುರಂತ
– ಏನಿದು ಘಟನೆ..? ಹೇಗಾಯ್ತು…?

NAMMUR EXPRESS NEWS
ಮಂಗಳೂರು: ಮಂಗಳೂರು ನಗರದ ಕಂಕನಾಡಿಯಲ್ಲಿ ಲಾಡ್ಜ್ ರೂಂನ ಬೆಡ್ ಗೆ ಬೆಂಕಿ ತಗುಲಿ ಯುವಕನೊಬ್ಬ ಜೀವಂತ ದಹನವಾದ ಘಟನೆ ನಡೆದಿದೆ. ಬೆಂದೂರ್ ವೆಲ್ ನಿವಾಸಿ ಯಶ್ ರಾಜ್ ಸುವರ್ಣ (43) ಮೃತಪಟ್ಟವರು. ಮಂಗಳೂರಿನ ಕಂಕನಾಡಿಯ ರೆಸಿಡೆನ್ಸಿ ಗೇಟ್ ಲಾಡ್ಜ್ ನಲ್ಲಿ ಬುಧವಾರ ರಾತ್ರಿ ಈ ಘಟನೆ ನಡೆದಿದೆ. ಲಾಡ್ಜ್ ರೂಂ ನಲ್ಲಿ ಬೆಡ್ ಮೇಲೆ ಮಲಗಿದ್ದ ಬೆಂದೂರ್ ವೆಲ್ ನಿವಾಸಿ ಯಶ್ ರಾಜ್ ಸುವರ್ಣ (43) ಜೀವಂತ ದಹನವಾಗಿ ಸಾವನ್ನಪ್ಪಿದ್ದಾರೆ.
ಯಶ್ ರಾಜ್ ಸುವರ್ಣ ನವೆಂಬರ್ 15 ರಿಂದ ಹೋಟೆಲ್ನಲ್ಲಿ ವಾಸವಿದ್ದರು. ಬುಧವಾರ ರಾತ್ರಿ ಊಟ ಮುಗಿಸಿ ರೂಂ ಗೆ ಹೋಗಿದ್ದರು. ರಾತ್ರಿ 12 ಗಂಟೆ ಹೊತ್ತಿಗೆ ರೂಂ ನಿಂದ ಹೊಗೆ ಕಾಣಿಸಿಕೊಂಡಿದೆ. ಬಳಿಕ ಅಗ್ನಿಶಾಮಕ ದಳದಿಂದ ಬೆಂಕಿ ನಂದಿಸುವ ಕಾರ್ಯ ನಡೆಯಿತು. ಈ ವೇಳೆ ಯಶ್ ರಾಜ್ ಸುವರ್ಣ ಬೆಂಕಿ ತಗುಲಿ ಸಾವನ್ನಪ್ಪಿದ್ದಾರೆ. ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಲಾಡ್ಜ್, ಹೋಟೆಲ್ ಸುರಕ್ಷತೆ ಬಗ್ಗೆ ಸರ್ಕಾರ ಗಮನಿಸಲಿ!

ರಾಜ್ಯದ ಹೋಟೆಲ್, ಲಾಡ್ಜ್ ಅಲ್ಲಿ ಗ್ರಾಹಕರ ಸುರಕ್ಷತೆ ಬಗ್ಗೆ ಸರ್ಕಾರ ಗಮನವಹಿಸಬೇಕಿದೆ. ಇಲ್ಲವಾದಲ್ಲಿ ಇಂತಹ ದುರಂತಗಳು ಮಾಮೂಲಿಯಾಗಲಿವೆ.

Categories
ಮಂಗಳೂರು

ಉಗ್ರರ ದಾಳಿಗೆ ಕರಾವಳಿ ಯೋಧ ಹುತಾತ್ಮ

ಉಗ್ರರ ದಾಳಿಗೆ ಕರಾವಳಿ ಯೋಧ ಹುತಾತ್ಮ
– ಮಂಗಳೂರಿನ ವೀರ ಪುತ್ರ ಪ್ರಾಂಜಲ್ ಹುತಾತ್ಮ
– ಜಮ್ಮು- ಕಾಶ್ಮೀರದ ರಚೌರಿ ಆಲ್ಲಿ ನಡೆದ ಉಗ್ರರ ದಾಳಿ
– ಹುತಾತ್ಮರಾದ 5 ಮಂದಿ ವೀರ ಯೋಧರು

NAMMUR EXPRESS NEWS
ಮಂಗಳೂರು: ಜಮ್ಮು- ಕಾಶ್ಮೀರದ ರಚೌರಿ ಜಿಲ್ಲೆಯಲ್ಲಿ ಭಾರತೀಯ ಸೇನಾಪಡೆ ಹಾಗೂ ಉಗ್ರರ ನಡುವೆ ಬುಧವಾರ ನಡೆದ ಗುಂಡಿನ ಚಕಮಕಿಯಲ್ಲಿ ಕರ್ನಾಟಕದ ಅವಿಭಜಿತ ದಕ್ಷಿಣ ಕನ್ನಡ ಮೂಲದ ಕ್ಯಾಪ್ಟನ್ ಎಂ.ವಿ.ಪ್ರಾಂಜಲ್ ಸೇರಿ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ. ಇಂಜಿನಿಯರ್ ಆದರೂ ಸಹ ದೇಶ ಸೇವೆಗೆ ಎಂದು ಹೋದ ಪ್ರಾಂಜಲ್ 28ರ ಹರೆಯದ 63ನೇ ರಾಷ್ಟ್ರೀಯ ರೈಫಲ್ಸ್ ಕ್ಯಾಪ್ಟನ್ ಎಂ.ವಿ. ಪ್ರಾಂಜಲ್ ಮಂಗಳೂರಿನಲ್ಲಿಯೇ ಹುಟ್ಟಿ ಬಾಲ್ಯ ಕಳೆದು ಬಳಿಕ ಭಾರತೀಯ ಸೇನಾಪಡೆಯನ್ನು ಸೇರಿ ಕರ್ತವ್ಯ ನಿರ್ವಹಿಸುತ್ತಿದ್ದರು. ಪ್ರಾಂಜಲ್ ಮಂಗಳೂರಿನ ಎಂಆರ್ ಪಿಎಲ್ ನಿವೃತ್ತ ಎಂಡಿ ವೆಂಕಟೇಶ್ ಹಾಗೂ ಅನುರಾಧ ದಂಪತಿಯ ಏಕೈಕ ಪುತ್ರ.

ಎಂಆರ್ ಪಿಎಲ್ ಡೆಲ್ಲಿ ಸ್ಕೂಲ್ ನಲ್ಲಿ ಎಲ್ ಕೆ ಜಿ ಯಿಂದ 10ನೇ ತರಗತಿಯವರೆಗೆ ವಿದ್ಯಾಭ್ಯಾಸ ಪಡೆದು ಇವರು ನಗರದ ಖಾಸಗಿ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಪಡೆದಿದ್ದರು. ಬಳಿಕ ಮಧ್ಯಪ್ರದೇಶದ ಮಿಲಿಟರಿ ಕಾಲೇಜ್ ಆಫ್ ಟೆಲಿಕಮ್ಯುನಿಕೇಷನ್ ನಲ್ಲಿ ಇಂಜಿನಿಯರಿಂಗ್ ಶಿಕ್ಷಣ ಪಡೆದು ಸೇನೆಗೆ ಸೇರಿದ್ದರು.

ಉಗ್ರರ ವಿರುದ್ಧ ಕಾರ್ಯಾಚರಣೆ ವೇಳೆ ನಡೆದ ದುರಂತ:

ಬುಧವಾರ ಬೆಳಗ್ಗೆ ಜಮ್ಮು- ಕಾಶ್ಮೀರದ ರಜೇರಿಯಲ್ಲಿ ನಡೆದ ಭಾರತೀಯ ಸೇನೆ ಹಾಗೂ ಉಗ್ರರ ನಡುವೆ ನಡೆದ ಎನ್ ಕೌಂಟರ್ ನಲ್ಲಿ ಪ್ರಾಂಜಲ್ ಹುತಾತ್ಮರಾಗಿದ್ದಾರೆ. ಪ್ರಾಂಜಲ್ ರೊಂದಿಗೆ ಪಿಎಆ‌ರ್ ಎ ಕ್ಯಾಪ್ಟನ್ ಶುಭಂ, ಮತ್ತು ಹವಾಲ್ದಾರ್ ಮಜೀದ್ ಮೃತರಾಗಿದ್ದಾರೆ. ಐದರಿಂದ ಆರು ಮಂದಿಯ ಉಗ್ರರ ಗುಂಪು ದಾಳಿ ಮಾಡಿತ್ತು. ಈ ಉಗ್ರರ ಬೇಟೆಗೆ ಭಾರತೀಯ ಸೇನೆ ಕಾರ್ಯಾಚರಣೆಗೆ ಇಳಿದಿತ್ತು. ಪ್ರಾಂಜಲ್ ಸಾವಿನ ಹಿನ್ನಲೆ ಎಂಆರ್ ಪಿ ಎಲ್ ಡೆಲ್ಲಿ ಶಾಲೆಗೆ ಗುರುವಾರ ರಜೆ ಘೋಷಿಸಲಾಗಿದೆ.

ಎಂ.ವಿ.ಪ್ರಾಂಜಲ್ ಅವರ ತಂದೆ ವೆಂಕಟೇಶ್ ಅವರು ಅವಿಭಜಿತ ದಕ್ಷಿಣ ಕನ್ನಡದವರು, ಮೇ.31ರಂದು ಎಂಆರ್ ಪಿಎಲ್ ನ ಎಂಡಿ ಪದವಿಯಿಂದ ನಿವೃತ್ತರಾಗಿದ್ದರು. ಇವರ ನಿವೃತ್ತಿ ಸಮಾರಂಭಕ್ಕೆ ಪ್ರಾಂಜಲ್ ಆಗಮಿಸಿದ್ದರು. ಸದ್ಯ ವೆಂಕಟೇಶ್ ಅವರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಎರಡು ವರ್ಷಗಳ ಹಿಂದೆಯಷ್ಟೇ ವಿವಾಹವಾಗಿದ್ದ ಪ್ರಾಂಜಲ್ ಅವರ ಪತ್ನಿ ಚೆನ್ನೈ ಐಐಟಿಯಲ್ಲಿ ಎಂಟೆಕ್ ಮಾಡುತ್ತಿದ್ದಾರೆ

Categories
ಶಿವಮೊಗ್ಗ

ಬ್ರಾಹ್ಮಣ ವಿದ್ಯಾರ್ಥಿನಿಗೆ ಮೊಟ್ಟೆ ತಿನ್ನಲು ಒತ್ತಾಯ: ಇದೀಗ ವಿವಾದ!

ಬ್ರಾಹ್ಮಣ ವಿದ್ಯಾರ್ಥಿನಿಗೆ ಮೊಟ್ಟೆ ತಿನ್ನಲು ಒತ್ತಾಯ: ಇದೀಗ ವಿವಾದ!
– ಗರ್ತಿಕೆರೆ ಕೆಪಿಎಸ್ ಶಾಲೆ ಶಿಕ್ಷಕರ ಮೇಲೆ ಗಂಭೀರ ಆರೋಪ: ಏನಿದು ವಿವಾದ?

NAMMUR EXPRESS NEWS
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಅಮೃತ ಗ್ರಾಮದ ಕೆಪಿಎಸ್ ಪ್ರಾಥಮಿಕ ಶಾಲೆಯಲ್ಲಿ ಬ್ರಾಹ್ಮಣ ವಿದ್ಯಾರ್ಥಿನಿಗೆ ಶಿಕ್ಷಕರೊಬ್ಬರು ಮೊಟ್ಟೆ ತಿನ್ನಲು ಒತ್ತಾಯ ಮಾಡುತಿದ್ದಾರೆ ಎಂದು ಪೋಷಕರು ಆರೋಪಿಸುತ್ತಿದ್ದಾರೆ ಎನ್ನಲಾಗಿದೆ. ಈ ವಿವಾದ ಈಗ ಭಾರೀ ಸದ್ದು ಮಾಡುತ್ತಿದೆ. ಕೆಪಿಎಸ್‌ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕರೊಬ್ಬರು ಶಾಲೆಯ ಬ್ರಾಹ್ಮಣ ವಿದ್ಯಾರ್ಥಿನಿಯೊಬ್ಬರಿಗೆ ಮಂಗಳವಾರ ಒತ್ತಾಯ ಪೂರ್ವಕವಾಗಿ ಮೊಟ್ಟೆ ತಿನ್ನಿಸಿದ್ದು ಇದರಿಂದ ವಿದ್ಯಾರ್ಥಿನಿಯ ಆರೋಗ್ಯದಲ್ಲಿ ಏರುಪೇರಾಗಿದ್ದು ಇದರಿಂದ ನಮ್ಮ ಧಾರ್ಮಿಕ ಆಚರಣೆಗೆ ಧಕ್ಕೆಯಾಗಿರುತ್ತದೆ ಎಂದು ಪೋಷಕರಾದ ಶ್ರೀಕಾಂತ್ ಆರೋಪಿಸಿದ್ದಾರೆ. ಇಂತಹ ಘಟನೆಗಳು ಮಕ್ಕಳ ಗಂಭೀರ ಪರಿಣಾಮ ಬೀರುತ್ತದೆ ಕೂಡಲೇ ಒತ್ತಾಯ ಪೂರ್ವಕವಾಗಿ ಮೊಟ್ಟೆ ತಿನ್ನಲು ಒತ್ತಾಯಿಸಿದ ಮುಖ್ಯ ಶಿಕ್ಷಕ ಹಾಗೂ ಸಹ ಶಿಕ್ಷಕರ ವಿರುದ್ದ ಕ್ರಮ ಕೈಗೊಳ್ಳುವಂತೆ ಶಾಸಕರು, ಜಿಲ್ಲಾ ಉಪ ನಿರ್ದೇಶಕರು ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ, ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿದ್ದೇವೆ ಎಂದು ಪೋಷಕರಾದ ಶ್ರೀಕಾಂತ್ ಹೇಳಿದ್ದಾರೆ.

Categories
ಉಡುಪಿ

ಉಡುಪಿ ಭೀಕರ ಹತ್ಯೆ: ಕೊಲೆಗೆ ಸೋಷಿಯಲ್ ಮೀಡಿಯಾ ಬಳಸಿದ್ದ!

ಉಡುಪಿ ಭೀಕರ ಹತ್ಯೆ: ಕೊಲೆಗೆ ಸೋಷಿಯಲ್ ಮೀಡಿಯಾ ಬಳಸಿದ್ದ!
– ಸ್ನ್ಯಾಪ್ ಚಾಟ್ ಲೋಕೇಶನ್ ಆಧರಿಸಿ ಬಂದಿದ್ದ ಹಂತಕ
– ಪೊಲೀಸ್ ವಿಚಾರಣೆ ವೇಳೆ ಹಲವು ರಹಸ್ಯ ಬಯಲು

NAMMUR EXPRESS NEWS
ಉಡುಪಿ: ಉಡುಪಿಯ ನೇಜಾರಿನಲ್ಲಿ ನಡೆದ ತಾಯಿ, ಮೂರು ಮಕ್ಕಳ ಬರ್ಬರ ಹತ್ಯೆ ಹಂತಕ ಪ್ರವೀಣ್ ಚೌಗುಲೆಯ ವಿಚಾರಣೆ ನಡೆಯುತ್ತಿದೆ. ಈ ವೇಳೆ ಆತ ಅನೇಕ ಸಂಗತಿಗಳನ್ನು ಬಾಯಿ ಬಿಟ್ಟಿದ್ದಾನೆ. ಅಚ್ಚರಿ ಅಂದರೆ ಆತ ಕೊಲೆ ಮಾಡುವ ದಿನ ಮನೆಯನ್ನು ಸೋಶಿಯಲ್ ಮೀಡಿಯಾ ಮೂಲಕ ಟ್ರ್ಯಾಕ್ ಮಾಡಿದ್ದಾನೆ. ಅಲ್ಲದೆ ಹಂತಕ ಪ್ರವೀಣ್ ತಾನು ಮಾಡಿದ ಕೊಲೆಯ ಯಾವುದೇ ಸುಳಿವು ಸಿಗದಂತೆ ಕೇವಲ ಎರಡು ದಿನದಲ್ಲಿ ಮಾಸ್ಟರ್ ಪ್ಲಾನ್ ಮಾಡಿಕೊಂಡಿದ್ದಾಗಿ ಪೊಲೀಸ್ ತನಿಖೆ ವೇಳೆ ಬಾಯ್ಬಿಟ್ಟಿದ್ದಾನೆ.

ಮನೆ ಹುಡುಕಲು ಸ್ನ್ಯಾಪ್ ಚಾಟ್ ಲೋಕೇಶನ್ ಬಳಕೆ!

ಪ್ರವೀಣ್ ಚೌಗುಲೆ ಮನೆಯ ದಾರಿಯನ್ನು ಆಯ್ನಾಝ್ ಸ್ನ್ಯಾಪ್ ಚಾಟ್ ನಲ್ಲಿ ಲೋಕೇಶನ್ ಹಾಕುವ ಮೂಲಕ ನೇಜಾರಿನ ಮನೆ ತಲುಪಿದ್ದ ಎನ್ನುವುದು ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ. ಸ್ನ್ಯಾಪ್ ಚಾಟ್ ಅನ್ನೋದು ಮಲ್ಟಿಮೀಡಿಯಾ ಇನ್‌ಸ್ಟೆಂಟ್ ಮೆಸೇಜಿಂಗ್ ಅಪ್ಲಿಕೇಶನ್. ಇದರಲ್ಲಿ ತಮ್ಮ ಗೆಳೆಯರಿಗೆ ಫೋಟೋ ಸಂದೇಶವನ್ನು ಅಲ್ಪ ಸಮಯಕ್ಕೆ ಕಳುಹಿಸಬಹುದು. ಇಬ್ಬರಲ್ಲೂ ಈ ಅಪ್ಲಿಕೇಶನ್ ಇದ್ದರೆ ರಿಕ್ವೆಸ್ಟ್ ಕಳುಹಿಸಿ ಫ್ರೆಂಡ್ಸ್ ಮಾಡಿಕೊಳ್ಳಬಹುದು. ಇದರಲ್ಲಿರುವ ಲೋಕೇಶನ್ ಗೆ ಹೋದರೆ ತಮ್ಮ ಗೆಳೆಯರು ಯಾವ ಸ್ಥಳದಲ್ಲಿದ್ದಾರೆ ಎಂದು ಕೂಡ ನೋಡಬಹುದು. ತನ್ನ ಲೊಕೇಶನ್ ಗೆಳೆಯರಿಗೆ ತೋರದಂತೆ ಹೈಡ್ ಕೂಡ ಮಾಡಲೂಬಹುದು.

ಕೃತ್ಯಕ್ಕೆ ಒಂದು ವಾರ ಮೊದಲು ಆಯ್ನಾಝ್ ಮನೆಯಲ್ಲಿ ನಡೆದ ಹುಟ್ಟುಹಬ್ಬ ಆಚರಣೆಯಲ್ಲಿ ಆತ ಆಕೆಗೆ ಉಂಗುರ ತೊಡಿಸಿದ್ದ. ಪ್ರವೀಣ್ ಚೌಗಲೆ ಸ್ಥಳಕ್ಕೆ ಬಂದಿದ್ದ’ ಎಂಬುದೆಲ್ಲ ಸುಳ್ಳು ಸುದ್ದಿ ಎಂಬುದು ಸ್ಪಷ್ಟವಾಗಿದೆ. ಪ್ರವೀಣ್ ಇದೇ ಮೊದಲ ಬಾರಿಗೆ ನೇಜಾರಿಗೆ ಬಂದು ಈ ಕೃತ್ಯ ಎಸಗಿದ್ದನು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕೊಲೆ ಮಾಡಲು ಮಾಸ್ಟರ್ ಪ್ಲಾನ್!

ಏರ್ ಇಂಡಿಯಾ ಏಕ್ಸ್ಪ್ರೆಸ್‌ನಲ್ಲಿ ಕೆಲಸ ಮಾಡುತ್ತಿದ್ದ ಆಯ್ನಾಝಳನ್ನು ಹಚ್ಚಿಕೊಂಡಿದ್ದ. ಅದೇ ಕಂಪೆನಿಯ ಸಿಬ್ಬಂದಿ ಪ್ರವೀಣ್ ಆಕೆಗೆ ವಿವಿಧ ರೀತಿಯ ಕಿರುಕುಳ ನೀಡುತ್ತಿದ್ದನು. ಪದೇಪದೇ ಕರೆ ಮಾಡಿ ಮಾತನಾಡಲು ಒತ್ತಾಯಿಸುತ್ತಿದ್ದ ಎಂದು ತಿಳಿದುಬಂದಿದೆ. ಇದೇ ಕಾರಣಕ್ಕೆ ಆಕೆ ಆತನ ಮೊಬೈಲ್ ನಂಬರನ್ನು ಬ್ಲಾಕ್ ಮಾಡಿದ್ದಳು. ಕೊಲೆಗೆ ಮುನ್ನಾ ದಿನ ನ.11ರಂದು ಶನಿವಾರ ಆಯ್ನಾಝ್ ಅಬುಧಾಬಿಯಿಂದ ಕರ್ತವ್ಯ ಮುಗಿಸಿ ಮಂಗಳೂರಿಗೆ ಬಂದಿದ್ದು, ಆಕೆ ಅಬುಧಾಬಿಯಿಂದ ಬರುವಾಗ ತಮ್ಮನಿಗೆ ಮತ್ತು ಮನೆ ಕೆಲಸದಾಕೆಯ ಮಗನಿಗೆ ತಂದ ವಸ್ತುಗಳನ್ನು ಕೊಡಲು ಶನಿವಾರ ಸಂಜೆ ನೇಜಾರಿನ ಮನೆಗೆ ಬಂದಿದ್ದಳು. ಆಕೆಗೆ ಮರುದಿನ ಭಾನುವಾರ ರಾತ್ರಿ 8 ಗಂಟೆಗೆ ದುಬೈ ಹೋಗಲು ಇದ್ದುದರಿಂದ ಮನೆಯಿಂದ ಬೆಳಗ್ಗೆ 11ಗಂಟೆಗೆ ಮಂಗಳೂರಿಗೆ ಹೊರಡಬೇಕಿತ್ತು.

ಇದೆನ್ನೆಲ್ಲ ಅರಿತಿದ್ದ ಪ್ರವೀಣ್ ಭಾನುವಾರ ಬೆಳಗ್ಗೆ ಆಕೆ ಹೊರಡುವ ಮೊದಲು ಆಕೆಯನ್ನು ಹತ್ಯೆ ಮಾಡಲು ಯೋಜನೆ ರೂಪಿಸಿದ್ದನು ಎಂದು ತಿಳಿದುಬಂದಿದೆ. ರಿಕ್ಷಾ ಚಾಲಕನಿಗೆ ತೃಪ್ತಿ ಲೇಔಟ್ ಬೋರ್ಡ್ ನೋಡುತ್ತಿದ್ದಂತೆ ನಿಲ್ಲಿಸಲು ಹೇಳಿದ್ದ: ಮೊದಲ ಬಾರಿಗೆ ನೇಜಾರಿಗೆ ಬರುತ್ತಿದ್ದ ಆರೋಪಿ ಪ್ರವೀಣ್, ಆಕೆಯ ಮನೆ ಗೊತ್ತಿಲ್ಲದಿದ್ದರೂ ಸ್ವಾಪ್ ಚಾಟ್ ಆಪ್ ಮೂಲಕ ದಾರಿ ಕಂಡುಕೊಂಡಿದ್ದನು. ಆಪ್ ಸೂಚಿಸಿದ ಮಾರ್ಗದಲ್ಲೇ ಬಂದು ಆತ, ಐನಾಝ್ ಮನೆ ತಲುಪಿದ್ದಾನೆ.

ಎಂ. ಜಿ ಹೆಕ್ಟರ್ ಕಾರು ಟೋಲ್ ಬಳಿ ನಿಲ್ಲಿಸಿದ್ದ!

ಸಂತೆಕಟ್ಟೆಯಿಂದ ನೇಜಾರಿನ ತೃಪ್ತಿ ಲೇಔಟ್‌ಗೆ ಪ್ರವೀಣ್ ರಿಕ್ಷಾದಲ್ಲಿ ಹೋಗಿದ್ದು, ಈ ವೇಳೆ ಚಾಲಕ ದಾರಿ ತಪ್ಪಿ ಮುಂದೆ ಹೋಗಿದ್ದನು. ಆಗ ಪ್ರವೀಣ್, ಸ್ಟಾಪ್‌ಚಾಟ್ ನೋಡಿಯೇ ಆಕೆಯ ಮನೆ ದಾರಿಯನ್ನು ರಿಕ್ಷಾ ಚಾಲಕನಿಗೆ ತೋರಿಸಿದ್ದನು. ಒಂದು ವೇಳೆ ಆತ ಈ ಹಿಂದೆ ಮನೆಗೆ ಬಂದಿದ್ದರೆ ಅಥವಾ ಮನೆಯ ದಾರಿ ಗೊತ್ತಿದ್ದರೆ ರಿಕ್ಷಾ ಚಾಲಕನನ್ನು ದಾರಿ ತಪ್ಪಿ ಮುಂದೆ ಹೋಗಲು ಅವಕಾಶ ನೀಡುತ್ತಿರಲಿಲ್ಲ. ಆಕೆ ಮನೆಯಲ್ಲೇ ಇದ್ದುದರಿಂದ ಸ್ಟಾಪ್‌ಚಾಟ್ ಸರಿಯಾಗಿಯೇ ಆಕೆಯ ಮನೆ ಇರುವ ಸ್ಥಳವನ್ನು ತೋರಿಸಿದೆ ಮತ್ತು ಮನೆ ಎದುರೇ ರಿಕ್ಷಾ ಚಾಲಕ ಪ್ರವೀಣ್ ನನ್ನು ಬಿಟ್ಟು ವಾಪಸ್ ಹೋಗಿದ್ದಾರೆ.

ನಂತರ ಕೊಲೆಗೈದು ಅನ್ಯರ ಬೈಕ್ ಸಹಾಯದಿಂದ ಸಂತೆಕಟ್ಟೆ, ಕರಾವಳಿ ಬೈಪಾಸ್ ಮಾರ್ಗವಾಗಿ ಹೆಜಮಾಡಿ ಟೋಲ್‌ಗೇಟ್ ತಲುಪಿದ್ದ. ಅಲ್ಲಿ ಆತ ಮೊದಲೇ ತಂದು ನಿಲ್ಲಿಸಿದ್ದ ಎಂಜಿ ಹೆಕ್ಟರ್ ಕಾರಿನ ಮೂಲಕ ಬಪ್ಪನಾಡು ಬಳಿಯ ಪಾಳುಬಿದ್ದ ಕಟ್ಟಡದಲ್ಲಿ ಆತ ರಕ್ತಸಿಕ್ತ ಬಟ್ಟೆಯನ್ನು ಸುಟ್ಟು ಹಾಕಿದ್ದಾನೆ. ಪೊಲೀಸರ ಮಹಜರು ಪ್ರಕ್ರಿಯೆ ವೇಳೆ ಆತ ಇದನ್ನು ತಿಳಿಸಿದ್ದು, ಬಟ್ಟೆಯ ಕುರುಹುಗಳು ಪೊಲೀಸರಿಗೆ ಲಭ್ಯವಾಗಿದೆ ಎನ್ನಲಾಗಿದೆ. ಬಳಿಕ ಆತ ಅಲ್ಲಿಂದ ನೇರವಾಗಿ ಮಂಗಳೂರಿನತ್ತ ತೆರಳಿದ್ದಾಗಿ ವಿಚಾರಣೆ ವೇಳೆ ತಿಳಿಸಿದ್ದಾನೆ.

ಡ್ರಗ್ಸ್ ಸೇವಿಸಿದ್ದನೇ ಕೊಲೆಗಾರ!?

ದೈಹಿಕವಾಗಿಯೂ ಸದೃಢನಾಗಿದ್ದ ಆರೋಪಿ ಪ್ರವೀಣ್ ಕುಸ್ತಿಪಟುವಾಗಿದ್ದ. ಎದುರಾಳಿಯನ್ನು ಕೆಡವಿ ಹಾಕುವುದು ಆತ ತಿಳಿದುಕೊಂಡಿದ್ದ. ಹೀಗಾಗಿ ಅತ್ಯಂತ ಕಡಿಮೆ ಅವಧಿಯಲ್ಲಿ ಚಾಕುವಿನಿಂದ 4 ಮಂದಿಯನ್ನು ಒಬ್ಬನೇ ಕೊಲ್ಲಲು ಸಾಧ್ಯವಾಗಿತ್ತು. ಕೊಲೆ ನಡೆಸಿದ ದಿನ ಮಾದಕದ್ರವ್ಯ ಏನಾದರೂ ಸೇವಿಸಿದ್ದನೇ ಎಂಬ ಬಗ್ಗೆ ಖಚಿತಪಡಿಸಿಕೊಳ್ಳಲು ಫಾರೆನ್ಸಿಕ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಲಾಗಿದ್ದು, ವರದಿ ಇನ್ನಷ್ಟೇ ಪೊಲೀಸರ ಕೈಸೇರಬೇಕಿದೆ.

Categories
ರಾಜ್ಯ

ಟಾಪ್ ನ್ಯೂಸ್

– ನಿಶ್ಚಿತಾರ್ಥದ ಉಂಗುರ ಕಳೆದು ಹೋಗಿದ್ದಕ್ಕೆ ಆತ್ಮಹತ್ಯೆ!
– ಉಳ್ಳಾಲ : ಗ್ಯಾರೇಜಲ್ಲಿ ಆತ್ಮಹತ್ಯೆ ಮಾಡಿಕೊಂಡ ಮೆಕ್ಯಾನಿಕ್
– ಪಡುಬಿದ್ರಿ: ಕೋಳಿಯಂಕಕ್ಕೆ ದಾಳಿ ಮಾಡಿದ ಪೊಲೀಸರು!
– ಕಾಸರಗೋಡು: ಆವರಣ ಗೋಡೆ ಕುಸಿದು ಇಬ್ಬರು ಸಾವು
– ಮೂಡುಬಿದ್ರೆ : ಅಕ್ರಮವಾಗಿ ಗೋ ಸಾಗಾಟ: ಇಬ್ಬರ ಬಂಧನ

NAMMUR EXPRESS NEWS
ತುಮಕೂರು: ನಿಶ್ಚಿತಾರ್ಥದ ವೇಳೆ ಹುಡುಗಿ ಕೈಬೆರಳಿಗೆ ಹಾಕಿದ್ದ ಉಂಗುರ ಕಳೆದು ಹೋಗಿದ್ದಕ್ಕೆ ಮನನೊಂದ ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ತುಮಕೂರು ನಗರದ ದೇವರಾಯಪಟ್ಟಣದಲ್ಲಿ ನಡೆದಿದೆ. ಮೃತ ಯುವಕ ಕಮಲೇಶ್ (36) ಮೃತ ಯುವಕ. ನಿಶ್ಚಿತಾರ್ಥದ ವೇಳೆ ಹುಡುಗಿ ಕೈಬೆರಳಿಗೆ ಉಂಗುರ ಹಾಕಿದ್ದಳು. ಆದರೆ ಆ ಉಂಗುರ ಕಳೆದು ಹೋಗಿದ್ದಕ್ಕೆ ಮನನೊಂದ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ. ಸ್ನಾನ ಮಾಡುವ ವೇಳೆ ಉಂಗುರ ಕಳೆದು ಹೋಗಿದೆ. ಈ ವಿಚಾರ ಮನೆಯವರಿಗೆ ಹೇಳಲು ಹೆದರಿ, ವಿಷ ಸೇವನೆ ಮಾಡಿದ್ದಾನೆ ಎನ್ನಲಾಗಿದೆ.

ಗ್ಯಾರೇಜಲ್ಲಿ ಆತ್ಮಹತ್ಯೆ ಮಾಡಿಕೊಂಡ ಮೆಕ್ಯಾನಿಕ್

ಗ್ಯಾರೇಜ್ ಆಲ್ಲಿ ಆತ್ಮಹತ್ಯೆ ಮಾಡಿಕೊಂಡು ಮೆಕ್ಯಾನಿಕ್ ಮೃತಪಟ್ಟ ಘಟನೆ ಉಳ್ಳಾಲ ಕಂಕನಾಡಿಯ ಕಾಂಚನ ಶೋ ರೂಮ್‌ ವೊಂದರಲ್ಲಿ ನಡೆದಿದೆ ಮೆಕ್ಯಾನಿಕ್ ಆಗಿ ಕೆಲಸ ನಿರ್ವಹಿಸುತ್ತಿರುವ ಮುಡಿಪು ಗರಡಿಪಳ್ಳ ನಿವಾಸಿ ಕಿಶೋರ್ (25) ಆತ್ಮಹತ್ಯೆ ಮಾಡಿಕೊಂಡವರು.ಜಯ ಎಂಬವರಿಗೆ ಸೇರಿದ ಮುಡಿಪುವಿನ ಕಾರಿನ ಗ್ಯಾರೇಜ್ ಒಳಗಡೆ ಕಬ್ಬಿಣದ ರಾಡಿಗೆ ನೇಣು ಹಾಕಿಕೊಂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ನ.20ರಂದು ಕೆಲಸಕ್ಕೆ ಹೋದವರು ತಡರಾತ್ರಿಯಾದರೂ ಮನೆಗೆ ವಾಪಸ್ಸಾಗದೇ ಇರುವುದನ್ನು ಗಮನಿಸಿ ಮನೆಯ ಸುತ್ತ, ಸಂಬಂಧಿಕರ ಮನೆಗಳಲ್ಲಿ ಹುಡುಕಾಡಿ ಬಳಿಕ ನಿತ್ಯ ಕಿಶೋರ್ ಕೆಲಸದಿಂದ ವಾಪಸ್ಸಾಗಿ ಕುಳಿತುಕೊಳ್ಳುವ ಗ್ಯಾರೇಜ್ ಸಮೀಪ ಹುಡುಕಾಡಿದಾಗ ಬೈಕ್ ಪತ್ತೆಯಾಗಿದ್ದು, ಒಳಗೆ ಗಮನಿದಾಗ ನೇಣುಹಾಕಿರುವುದು ಗಮನಕ್ಕೆ ಬಂದಿದ್ದೆ ಕಿಶೋ‌ರ್ ಕೆಲಸ ಮಾಡುತ್ತಿದ್ದ ಷೋ ರೂಮಿನ ಸೂಪರ್ ವೈಸರ್ ಆರು ತಿಂಗಳ ಹಿಂದಷ್ಟೇ ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಆಪ್ತಸ್ನೇಹಿತರಾಗಿದ್ದ ಕಿಶೋರ್ ಇದೇ ಘಟನೆಯಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

ಕೋಳಿಯಂಕ ಮೂವರು ವಶಕ್ಕೆ!

ಪಡುಬಿದ್ರಿ: ತೆಂಕ ಎರ್ಮಾಳು ಎಂಬುವರು ಅಕ್ರಮವಾಗಿ ನಡೆಸುತ್ತಿದ್ದ ಕೋಳಿಯಂಕಕ್ಕೆ ದಾಳಿ ಮಾಡಿದ ಪೊಲೀಸರು ಮೂವರು ಸಹಿತ ಏಳು ಕೋಳಿಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರು ಪಣಿಯೂರು ನಿವಾಸಿಗಳಾದ ಸುರೇಶ್, ಸುಕೇಶ್ ಹಾಗೂ ಕಾಪು ನಿವಾಸಿ ನಾಗೇಶ್. ಬಹಳಷ್ಟು ಮಂದಿ ಪೊಲೀಸ್ ದಾಳಿ ವಾಸನೆ ಬರುತ್ತಿದ್ದಂತೆ ಪಲಾಯನ ಮಾಡಿದ್ದು ಅವರ ಗುರುತು ಪತ್ತೆಯಾಗಿದೆ ಅವರನ್ನು ಶೀಘ್ರವಾಗಿ ವಶಕ್ಕೆ ಪಡೆಯಲಾಗುವುದು ಎಂಬುದಾಗಿ ಪಡುಬಿದ್ರಿ ಪೊಲೀಸರು ತಿಳಿಸಿದ್ದಾರೆ.

ಗೋಡೆ ಕುಸಿದು ಇಬ್ಬರು ಕಾರ್ಮಿಕರ ಸಾವು!

ಕಾಸರಗೋಡು: ಪೈಪ್‌ಲೈನ್‌ಗಾಗಿ ಅಗೆಯುವ ವೇಳೆ ಗೋಡೆ ಕುಸಿದು ಕಲ್ಲಿನ ಕೆಳಗೆ ಸಿಲುಕಿ ಇಬ್ಬರು ಮೃತಪಟ್ಟಿದ್ದಾರೆ.
ಕಲ್ಲಿನ ಕೆಳಗೆ ಸಿಲುಕಿದ್ದ ಇಬ್ಬರನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ಮೃತಪಟ್ಟಿದ್ದಾರೆ.
ಮೃತರನ್ನು ಕರ್ನಾಟಕ ಮೂಲದ ಲಕ್ಷ್ಮಪ್ಪ (43) ಮತ್ತು ಬಿಎಂ ಬಸಯ್ಯ (40) ಎಂದು ಗುರುತಿಸಲಾಗಿದೆ. ಕಾಸರಗೋಡು ಮಾರ್ಕೆಟ್ ರಸ್ತೆಯಲ್ಲಿ ಮಂಗಳವಾರ ಸಂಜೆ 4 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.

ಅಕ್ರಮವಾಗಿ ಗೋ ಸಾಗಾಟ , ಇಬ್ಬರ ಬಂಧನ

ಮೂಡುಬಿದಿರೆ: ಗೋವುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿ ಎರಡು ಹಸು ಹಾಗೂ ಎರಡು ಕರುಗಳನ್ನು ರಕ್ಷಿಸಿದ ಘಟನೆ ಮೂಡುಬಿದಿರೆ ಮೂಡುಕೊಣಾಜೆ ಗ್ರಾಮದ ಕುಕ್ಕುದಕಟ್ಟೆಯಲ್ಲಿ ಮಂಗಳವಾರ ನಡೆದಿದೆ ಪೊಲೀಸ್ ಇನ್ಸೆಕ್ಟರ್ ಸಂದೇಶ್ ಕುಮಾರ್ ನೇತೃತ್ವದ ತಂಡವು ಗಸ್ತಿನಲ್ಲಿದ್ದಾಗ ಪಡುಕೊಣಾಜೆಯಲ್ಲಿ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ಪಿಕಪ್ ವಾಹನವನ್ನು ತಡೆದು ನಿಲ್ಲಿಸಿದ್ದಾರೆ. ಈ ವೇಳೆ ಪಿಕಪ್ ವಾಹನದಲ್ಲಿ ಎರಡು ಹಸು ಮತ್ತು ಎರಡು ಕರು ಪತ್ತೆಯಾಗಿವೆ.ಗೋವುಗಳು ಹಾಗೂ ಕರುಗಳನ್ನು ಸಾಗಾಟ ಮಾಡುತ್ತಿದ್ದ ಪಿಕಪ್ ವಾಹನ ಚಾಲಕ ವೇಣೂರಿನ ನಡ್ತಿಕಲ್ಲು ನಿವಾಸಿ ಹೈದ‌ರ್ ಹಾಗೂ ಪಣಪಿಲದ ಶೈಲೇಶ್ ಮಡಿವಾಳನನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಆರೋಪಿಗಳನ್ನು ಮೂಡುಬಿದಿರೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇನ್ನು ಆರೋಪಿಗಳು ಸಾಗಿಸುತ್ತಿದ್ದ ಹಸುಗಳನ್ನು ಬಜಪೆ ಗೋಶಾಲೆಗೆ ಹಸ್ತಾಂತರ ಮಾಡಲಾಗಿದೆ.

Categories
ರಾಷ್ಟ್ರೀಯ ವಾರ್ತೆ

ಭಾರತದಲ್ಲಿ ವಿಶ್ವದ ಮೊದಲ 3ಡಿ ಮುದ್ರಿತ ದೇಗುಲ!

ಭಾರತದಲ್ಲಿ ವಿಶ್ವದ ಮೊದಲ 3ಡಿ ಮುದ್ರಿತ ದೇಗುಲ!
– ತೆಲಂಗಾಣದಲ್ಲಿದೆ ನ.24ರಿಂದ ದರುಶನಕ್ಕೆ ಮುಕ್ತ
– ಮಾನವನ ಭಕ್ತಿಗೆ ವಿಸ್ಮಯ-ಸ್ಫೂರ್ತಿದಾಯಕ ಸಾಕ್ಷಿ

NAMMUR EXPRESS NEWS
ತೆಲಂಗಾಣದಲ್ಲಿ ತಲೆಯೆತ್ತಿರುವ ವಿಶ್ವದ ಮೊದಲ 3ಡಿ ಮುದ್ರಿತ ದೇವಾಲಯ ಉದ್ಘಾಟನೆಗೊಂಡಿದೆ. ವಾಸ್ತುಶಿಲ್ಪದ ಸೌಂದರ್ಯ ಮತ್ತು ತಾಂತ್ರಿಕ ಜ್ಞಾನದೊಂದಿಗೆ ಅಸಾಧಾರಣ ರೀತಿಯಲ್ಲಿ ನಿರ್ಮಿಸಲಾದ ಆಧ್ಯಾತ್ಮಿಕ ಅದ್ಭುತವೇ ಸಿದ್ದಿಪೇಟೆಯಲ್ಲಿನ ಶ್ರೀಪಾದ ಕಾರ್ಯ ಸಿದ್ದೇಶ್ವರ ಸ್ವಾಮಿ ದೇವಸ್ಥಾನ. ಸಿಂಪ್ಲಿಫೋರ್ಜ್ ಕ್ರಿಯೇಷನ್ಸ್‌ ಸಹಯೋಗದಲ್ಲಿ ಅಪ್ಪುಜಾ ಇನ್ಸಾಟೆಕ್ ಅವರಿಂದ ಈ ವಿನೂತನ ದೇವಾಲಯವನ್ನು ನಿರ್ಮಿಸಲಾಗಿದ್ದು, ಸಿದ್ದಿಪೇಟೆಯ ಹೃದಯಭಾಗದಲ್ಲಿರುವ ಬೂರುಗಪಲ್ಲಿ ಮತ್ತು ವಾಯಪುರಿ ಎಂದು ಕರೆಯಲ್ಪಡುವ ಈ ದೇವಾಲಯವು ಸಾಂಸ್ಕೃತಿಕ ಪರಂಪರೆಗೆ ಸಾಕ್ಷಿಯಾಗಿದೆ.

ಈ ಭವ್ಯವಾದ ರಚನೆಯು 35.5 ಅಡಿ ಎತ್ತರ ಮತ್ತು 4,000 ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ. ಇದು ಮಾನವನ ಭಕ್ತಿಗೆ ಒಂದು ವಿಸ್ಮಯ-ಸ್ಫೂರ್ತಿದಾಯಕ ಸಾಕ್ಷಿಯಾಗಿದೆ. ಪ್ರತಿಷ್ಠಾಪನೆ ಪೂರ್ಣಗೊಂಡ ನಂತರ ನವೆಂಬರ್ 24 ರಿಂದ ಮೂರ್ತಿಗಳು ಸಾರ್ವಜನಿಕರ ದರ್ಶನಕ್ಕೆ ಮುಕ್ತವಾಗಲಿದೆ. ಸಂಪೂರ್ಣ 3 ಡಿ ಪ್ರಿಂಟಿಂಗ್ ಅಲ್ಲಿ ದೇಗುಲ ನಿರ್ಮಾಣ ಮಾಡಲಾಗಿದೆ.