Categories
ಬೆಂಗಳೂರು

ಮದ್ಯೆ ಪ್ರಿಯರಿಗೆ ಬೆಲೆ ಏರಿಕೆ ಶಾಕ್…!

ಮದ್ಯೆ ಪ್ರಿಯರಿಗೆ ಬೆಲೆ ಏರಿಕೆ ಶಾಕ್…!
– ಹೊಸ ವರ್ಷಕ್ಕೆ ಮದ್ಯ ಪ್ರಿಯರಿಗೆ ಕಹಿ ಸುದ್ದಿ
– ಮದ್ಯದ ಬೆಲೆಯಲ್ಲಿ ಭಾರೀ ಏರಿಕೆ: ಎಷ್ಟೆಷ್ಟು?

NAMMUR EXPRESS NEWS
ಬೆಂಗಳೂರು: ಹೊಸ ವರ್ಷದ ಸಮೀಪಿಸುತಿದ್ದಂತೆ ಮದ್ಯಪ್ರಿಯರಿಗೆ ಶಾಕ್ ಎದುರಾಗಿದೆ. ಜನವರಿಯಿಂದ ಮದ್ಯದ ಬೆಲೆ ಭಾರೀ ಏರಿಕೆಯಾಗಲಿದೆ. ವರ್ಷದ ಆರಂಭದಲ್ಲೇ ಸರ್ಕಾರ ಆರ್ಥಿಕ ಮೂಲವಾದ ಅಬಕಾರಿ ಸುಂಕದ ದರವನ್ನು ಶೇ.20ರಷ್ಟು ಹೆಚ್ಚಳ ಮಾಡಿತ್ತು. ಈಗ ಹೊಸ ವರ್ಷದ ಪಾರ್ಟಿ ಜೋಷ್ ಅಲ್ಲಿದ್ದವರಿಗೆ ಮತ್ತೆ ಮದ್ಯದ ಕಂಪನಿಗಳು ಶಾಕ್ ನೀಡಿವೆ. ಜನವರಿ 1ರಿಂದ ಮದ್ಯ ದರ ಏರಿಕೆಗೆ ಸೂಚನೆ ನೀಡಲಾಗಿದೆ. ರಾಜ್ಯದ ಕೆಳ ವರ್ಗದ ಜನ ಅತೀ ಹೆಚ್ಚು ಸೇವಿಸುವ ಮದ್ಯದ ದರ ಏರಿಕೆಗೆ ಚಿಂತನೆ ನಡೆದಿದೆ. ಜನವರಿ 1ರಿಂದ ದರ ಏರಿಕೆ ಮಾಡುವಂತೆ ಬಾರ್ ಮಾಲೀಕರಿಗೆ ಕಂಪನಿಗಳಿಂದ ಸೂಚನೆ ನೀಡಿದೆ. ಕಂಪನಿಗಳ ಉತ್ಪಾದನಾ ವೆಚ್ಚ, ಸರಕು ಸಾಗಣೆ ವೆಚ್ಚಗಳು ಹೆಚ್ಚಾಗಿರುವ ಕಾರಣ ದರ ಏರಿಕೆ  ಅಗತ್ಯವಾಗಿದ್ದು, ಈ ಕಾರಣ ಗ್ರಾಹಕರ ಮೇಲೆ ಹೊರೆ ಹಾಕಲೇಬೇಕಾದ ಹಿನ್ನೆಲೆ ದರ ಏರಿಕೆಗೆ ಕಂಪನಿಗಳು ನಿರ್ಧಾರ ಮಾಡಿವೆ.

Categories
ಕರಾವಳಿ

ಹೆಬ್ಬಾವು, ಕಾಳಿಂಗ ಸರ್ಪ ಕಾಳಗ!

ಹೆಬ್ಬಾವು, ಕಾಳಿಂಗ ಸರ್ಪ ಕಾಳಗ!
– ಹೆಬ್ಬಾವನ್ನೇ ನುಂಗಲೆತ್ನಿಸಿದ ಕಾಳಿಂಗ ಸರ್ಪ.!
– ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿಯ ಇಂದಬೆಟ್ಟಿನಲ್ಲಿ ಘಟನೆ

NAMMUR EXPRESS NEWS
ದಕ್ಷಿಣ ಕನ್ನಡ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಗ್ರಾಮದಲ್ಲಿ ಹೆಬ್ಬಾವು ಮತ್ತು ಕಾಳಿಂಗ ಸರ್ಪದ ನಡುವೆ ನಡೆದ ಕಾದಾಟದಲ್ಲಿ ಕಾಳಿಂಗ ಸರ್ಪ ಹೆಬ್ಬಾವನ್ನೇ ನುಂಗಲು ಯತ್ನಿಸಿದ ಘಟನೆ ನಡೆದಿದೆ. ಹೆಬ್ಬಾವು 8 ಅಡಿ ಇದ್ದರೆ, ಕಾಳಿಂಗ 16 ಅಡಿ ಇತ್ತು. ಇವುಗಳ ಕಾದಾಟ ಗಮನಿಸಿದ ಮನೆಯವರು ಹಾವು ಹಿಡಿಯುವುದರಲ್ಲಿ ಪ್ರಸಿದ್ಧಿ ಪಡೆದ ಸ್ನೇಕ್ ಅಶೋಕ್ ಅವರನ್ನು ಕರೆ ಮಾಡಿ ಸ್ಥಳಕ್ಕೆ ಬರುವಂತೆ ತಿಳಿಸಿದರು. ಅಶೋಕ್ ಕಾಳಿಂಗದ ಹಿಡಿತದಿಂದ ಹೆಬ್ಬಾವನ್ನು ಬಿಡಿಸಿದರು. ಇನ್ನು ಕಾಳಿಂಗ ಓಡಲು ಶುರು ಮಾಡಿದಾಗ ಹಿಡಿದುಕೊಂಡರು. ಅದನ್ನು ಗೋಣಿಚೀಲಕ್ಕೆ ತುಂಬಿಸಿ ಕಾಡಿಗೆ ಬಿಟ್ಟರು.

Categories
ತೀರ್ಥಹಳ್ಳಿ

ಒಕ್ಕಲಿಗ ಸಂಘದಲ್ಲಿ ಗದ್ದುಗೆಗಾಗಿ ಗುದ್ದಾಟ!

ಒಕ್ಕಲಿಗ ಸಂಘದಲ್ಲಿ ಗದ್ದುಗೆಗಾಗಿ ಗುದ್ದಾಟ!
– ಸಂಘದ ಪ್ರಭಾವಿ ವ್ಯಕ್ತಿಗಳಿಂದಲೇ ತೇಜೋವಧೆ: ಸುಜಿನಿ ಗೌಡ
– ಮಾಧ್ಯಮದವರ ಮುಂದೆ ಆರೋಪ: ಒಕ್ಕಲಿಗ ಸಂಘದಲ್ಲಿ ಆಗಿದ್ದೇನು..?

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಒಕ್ಕಲಿಗರ ಸಂಘದ ಗದ್ದುಗೆ ಗುದ್ದಾಟ ಈಗ ಭಾರೀ ಸದ್ದು ಮಾಡುತ್ತಿದೆ. ಸಂಘದ ಪ್ರಭಾವಿ ವ್ಯಕ್ತಿಗಳಿಂದಲೇ ತೇಜೋವಧೆಯಾಗುತ್ತಿದೆ ಎಂದು ಅಧ್ಯಕ್ಷರಾಗಿದ್ದ ಸುಜಿನಿ ಗೌಡ ಮಾಧ್ಯಮಗಳ ಮುಂದೆ ಆರೋಪಿಸಿದ್ದಾರೆ.

ಏನಿದು ಹೇಳಿಕೆ..?

ಶಿಕ್ಷಣ ಸಂಸ್ಥೆಯ ಮೂಲಕ ಒಕ್ಕಲಿಗ ಸಂಘದ ಅಧ್ಯಕ್ಷರಾಗಿದ್ದೆ. ಒಕ್ಕಲಿಗ ಸಂಘಕ್ಕೆ ಅಲ್ಪ ಕಾಲದಲ್ಲಿ ನನ್ನ ಕೈಲಾದ ಕೆಲಸ ಮಾಡಿದ್ದೇನೆ. ನೂತನ ಸಮುದಾಯ ಭವನ ಹಾಗೂ ಶಿಕ್ಷಣ ಸಂಸ್ಥೆಗೆ ಒಳ್ಳೆಯ ಕೆಲಸ ಮಾಡಿದ್ದೇನೆ. 13-3-23 ರಿಂದ 13-12-23ರ ವರೆಗೆ 8 ತಿಂಗಳ ಕಾಲದಲ್ಲಿ 4 ತಿಂಗಳುಗಳ ಕಾಲ ಕೆಲಸ ಮಾಡಿದ್ದೇನೆ. ಉಳಿದ 4 ತಿಂಗಳಲ್ಲಿ ಪ್ರಭಾಕರ್ ಸೇರಿ ಹಲವರು ಅಧಿಕಾರ ಹಸ್ತಾಂತರ ಮಾಡಿ ಕೊಟ್ಟಿಲ್ಲ ಎಂದು ಒಕ್ಕಲಿಗ ಸಂಘದ ಅಧ್ಯಕ್ಷರಾಗಿದ್ದ ಸುಜನಿ ಗೌಡ ಆರೋಪಿಸಿದ್ದಾರೆ. ಒಕ್ಕಲಿಗ ಸಂಘದಲ್ಲಿ ಅಧ್ಯಕ್ಷರಾಗಿ ಕೆಲಸ ಮಾಡಲು ಅಧಿಕಾರ ಹಸ್ತಾಂತರ ಮಾಡಬೇಕಿತ್ತು. ಆದರೆ ರಾಜಕೀಯಯದ ಉದ್ದೇಶದಿಂದ ಅಧಿಕಾರ ಹಸ್ತಾಂತರ ಮಾಡಿ ಕೊಟ್ಟಿರಲಿಲ್ಲ.

ಆ ವಿಚಾರದಲ್ಲಿ ನಾಲ್ಕು ಮೀಟಿಂಗ್ ಮಾಡಿದ್ದರೂ 1 ಮೀಟಿಂಗ್ ಗೆ ಮಾತ್ರ ಅವರು ಬಂದಿದ್ದರು ಎಂದು ಆರೋಪಿಸಿದರು. ಇನ್ನು ನಾಲ್ಕು ತಿಂಗಳಲ್ಲಿ ಒಕ್ಕಲಿಗ ಸಂಘಕ್ಕೆ ಕಲ್ಯಾಣ ಮಂದಿರಕ್ಕೆ 28 ಲಕ್ಷ, ವಿದ್ಯಾರ್ಥಿ ನಿಲಯಕ್ಕೆ 61 ಸಾವಿರ, ಸಹ್ಯಾದ್ರಿ ಶಾಲೆಗೆ 26 ಲಕ್ಷದ 40 ಸಾವಿರ, ಕುಶಾವತಿ ಹೈಸ್ಕೂಲ್ 5 ಲಕ್ಷ, ಕೇಂದ್ರೀಯ ಶಾಲೆ ಬೆಟ್ಟಮಕ್ಕಿ 3 ಲಕ್ಷ ಸೇರಿದಂತೆ ಒಟ್ಟು 1 ಕೋಟಿ 20 ಲಕ್ಷ 42 ಸಾವಿರ ರೂ ಹಣವನ್ನು ನೀಡಲಾಗಿದೆ. ಇಲ್ಲಿಯವರೆಗೆ ಸಂಘಕ್ಕಾಗಿ ದುಡಿದಿದ್ದೇನೆ. ನನ್ನ ಅವಧಿಯಲ್ಲಿ ಆದಷ್ಟು ಸಂಘದ ಅಭಿವೃದ್ಧಿಪಡಿಸಲು ಕೆಲಸ ಮಾಡಿದ್ದೇನೆ, ಸಂಘದ ಹಣವಾಗಲಿ ಅಥವಾ ಸಂಘಕ್ಕಾಗಲಿ ಮೋಸ ಮಾಡಿಲ್ಲ ಎಂದರು. ನಾಲ್ಕು ತಿಂಗಳಲ್ಲಿ ಸಾಕಷ್ಟು ನೋವು ತಿಂದಿದ್ದೇನೆ.

ನೂತನ ಅಧ್ಯಕ್ಷರು ಎಂದು ಪತ್ರಿಕೆಗಳಲ್ಲಿ ಬಂದಿದೆ. ಅದಕ್ಕೆ ನಮ್ಮ ಸಮ್ಮತಿ ಇಲ್ಲ. ಅವರು ವಾಮಮಾರ್ಗದಲ್ಲಿ ಅಧಿಕಾರ ಹಿಡಿದಿದ್ದಾರೆ. ಹೆಣ್ಣು ಮಗಳು ಅಧಿಕಾರ ಹಿಡಿದ್ದಾರೆ ಎಂಬ ಕಾರಣಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಪ್ರಭಾಕರ್ ಅವರು ದಬ್ಬಾಳಿಕೆ ಮಾಡುತ್ತಿದ್ದಾರೆ. ಇವರು 23 ವರ್ಷ ಸಂಘದಲ್ಲಿ ಸೇವೆ ಸಲ್ಲಿಸಿದವರು ನಮಗೆ ಇವರು ಮಾರ್ಗದರ್ಶಕರಾಗಿರಬೇಕಿತ್ತು. ಆದರೆ ನನ್ನ ತೇಜುವದೇ ಮಾಡಿದ್ದಾರೆ. ಈಗಾಗಲೇ ಪೊಲೀಸರಿಗೂ ದೂರು ನೀಡಲಾಗಿದೆ ಎಂದರು. ಹಾಗೂ ಮುಂದಿನ ದಿನದಲ್ಲಿ ಕಾನೂನು ಹೋರಾಟವನ್ನು ಮುಂದುವರಿಸುತ್ತೇನೆ ಎಂದರು. ಈ ಸಂದರ್ಭದಲ್ಲಿ ಒಕ್ಕಲಿಗರ ಸಂಘದ ನಿರ್ದೇಶಕರಾದ ಶೈಲಾ, ಸುನೀಲ್, ಶಶಿಧ‌ರ್ ಸೇರಿ ಹಲವರು ಉಪಸ್ಥಿತರಿದ್ದರು.

Categories
ತೀರ್ಥಹಳ್ಳಿ

ಬಡ ಕುಟುಂಬಕ್ಕೆ ಪ್ರಭಾವಿಗಳಿಂದ ಅನ್ಯಾಯ!

ಬಡ ಕುಟುಂಬಕ್ಕೆ ಪ್ರಭಾವಿಗಳಿಂದ ಅನ್ಯಾಯ!
– ತೋಟಕ್ಕೆ ಹೋಗಲು ಜಾಗ ಬಿಡದೆ ಫಸಲು ತೋಟದಲ್ಲೇ ಹಾಳು
– ನೊಂದವರಿಗೆ ನ್ಯಾಯ ಸಿಗದಿದ್ದರೆ ಜ.14ರ ಬಳಿಕ ನಿರ್ಧಾರ
– ಕಾಂಗ್ರೆಸ್ ಯುವ ನಾಯಕ, ಕಾರ್ಮಿಕ ಘಟಕದ ತಾಲೂಕು ಅಧ್ಯಕ್ಷ ವಿನಾಯಕ ತುಪ್ಪದಮನೆ ಹೇಳಿಕೆ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕು ಬೆಜ್ಜವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೇಲಿನಕೊಪ್ಪದಲ್ಲಿ ನಾಯಿದವಳ್ಳಿ ಗ್ರಾಮದಲ್ಲಿ ಸಣ್ಣ ರೈತರೊಬ್ಬರ ಜಮೀನಿಗೆ ಹೋಗುವ ದಾರಿಯನ್ನು ಬಂದ್ ಮಾಡಿ, ಅವರಿಗೆ ತೊಂದರೆ ಕೊಡಲಾಗುತ್ತಿದೆ. ಖಾತೆ ಹೊಂದಿದ್ದ ತೋಟಕ್ಕೆ ಸರ್ಕಾರಿ ಜಾಗದಲ್ಲಿ ಹೋಗಲು ಜಾಗ ಬಿಡದ ಕಾರಣ ಎರಡು ವರ್ಷದಿಂದ ಫಸಲು ತೋಟದಲ್ಲೇ ಹಾಳಾಗಿದೆ. ನಾನೊಬ್ಬ ಜನಪ್ರತಿನಿಧಿಯಾಗಿ ನ್ಯಾಯಕೊಡಿಸಲು ಸಾಧ್ಯ ಆಗುತ್ತಿಲ್ಲ. ಈ ಬಗ್ಗೆ ನಮ್ಮ ಪಕ್ಷದ ಉನ್ನತ ನಾಯಕರಿಗೆ ಮಾಹಿತಿ ನೀಡಿ ಸಮಸ್ಯೆ ಬಗೆಹರಿಸಲು ಮನವಿ ಮಾಡಿದ್ದೇನೆ. ಆದರೂ ಪ್ರಯೋಜನ ಆಗಿಲ್ಲ. ಈ ಪ್ರಕರಣದಲ್ಲಿ ನೊಂದವರಿಗೆ ನ್ಯಾಯ ಕೊಡಿಸುವಲ್ಲಿ ನಾಯಕರು ವಿಫಲರಾಗಿದ್ದಾರೆ.ಸ್ವಂತ ಖಾತೆ ಜಮೀನಿಗೆ ಹೋಗುವ ರಸ್ತೆಯನ್ನು ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡ ಕೆಲವು ಪ್ರಭಾವಿಗಳು ಹಾಗೂ ಬಲಾಡ್ಯರು, ರಾಜಕೀಯ ಹಾಗೂ ಇತರೆ ಪ್ರಭಾವವನ್ನು ಬೀರಿ ತೊಂದರೆ ಕೊಡಲಾಗುತ್ತಿದೆ.

ಈಗಾಗಲೇ ಒಂದು ವರ್ಷದಿಂದ ಅಡಿಕೆ ಕೊನೆ ಆ ತೋಟದಿಂದ ತೆಗೆಯಲಾಗದೆ ಇದ್ದು, ಈ ವರ್ಷ ಕೂಡ ಅಡಿಕೆ ಫಸಲು ತೋಟದಲ್ಲೇ ಕೊಳೆಯುತ್ತಿದೆ. ಇದರಿಂದಾಗಿ ಇಡಿ ಕುಟುಂಬಕ್ಕೆ ತೊಂದರೆಯಾಗಿದೆ. ಸರ್ಕಾರವೇ ಜಮೀನಿಗೆ ಹೋಗಲು ದಾರಿ ಮಾಡಿಕೊಡುವ ಯೋಜನೆ ಜಾರಿಗೆ ತಂದಿದೆ. ಆದರೆ ಇಲ್ಲಿ ಸರ್ಕಾರದ ನಿಯಮಕ್ಕೂ ಬೆಲೆ ಇಲ್ಲದಂತಾಗಿದೆ. ಕರೋನಾ ಅವಧಿಯಲ್ಲಿ ಮನೆ ಯಜಮಾನ ವಿದ್ಯುತ್ ಶಾಕ್ ನಿಂದ ಸಾವನ್ನು ಕಂಡಿದ್ದರು. ಇದರಿಂದ ಹೊರ ಬಾರದ ಕುಟುಂಬಕ್ಕೆಇದೀಗ ಮತ್ತಷ್ಟು ಸಂಕಷ್ಟದಲ್ಲಿದೆ. ತೊಂದರೆಗೊಳಗಾಗುತ್ತಿರುವ ಕುಟುಂಬ ಎಲ್ಲಾ ಕಚೇರಿ, ಜನಪ್ರತಿನಿದಿಗಳ ಮನೆಗೆ ಸುತ್ತಿ ಸುಸ್ತಾಗಿದ್ದಾರೆ. ಈ ಬಗ್ಗೆ ಎಲ್ಲಾ ಅಧಿಕಾರಿಗಳಿಗೂ ಮನವಿಯನ್ನು ನೀಡಲಾಗಿದೆ.ಜೊತೆಗೆ ನಾಯಕರಿಗೂ ಕೂಡ ಮನವಿಯನ್ನು ನೀಡಲಾಗಿದೆ. ನಾನೊಬ್ಬ ಜನಪ್ರತಿನಿಧಿಯಾಗಿ ನೊಂದ ಕುಟುಂಬಕ್ಕೆ ನ್ಯಾಯ ಕೊಡಿಸಲು ಪ್ರಯತ್ನಿಸಿದ್ದೇನೆ. ಆದರೆ ವಿಚಾರದಲ್ಲಿ ನ್ಯಾಯ ಸಿಗುತ್ತಿಲ್ಲ.

ಕಣ್ಣಿಗೆ ಕಾಣುವಂತಹ ನ್ಯಾಯವನ್ನು ಕೂಡ ನ್ಯಾಯಾಲಯದ ಮುಖಾಂತರವೇ ಪಡೆದುಕೊಳ್ಳುವುದಾದರೆ ಯಾವುದೇ ಹುದ್ದೆ ಅಥವಾ ಅಧಿಕಾರ ಇದ್ದರೆ ಏನು ಪ್ರಯೋಜನ?, ಕ್ಷೇತ್ರದ ನಾಯಕರಾದ ಕಿಮ್ಮನೆ ರತ್ನಾಕರ್, ಡಾ. ಆರ್. ಎಂ. ಮಂಜುನಾಥ ಗೌಡ ಅವರು ಈ ಬಗ್ಗೆ ಗಮನಿಸಿ ನ್ಯಾಯ ಕೊಡಿಸುವ ನಂಬಿಕೆಯಲ್ಲಿದ್ದೇನೆ. ಜನವರಿ 14ರ ಒಳಗೆ ಈ ಬಗ್ಗೆ ನ್ಯಾಯ ಸಿಗದಿದ್ದಲ್ಲಿ ನಾನು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡುವ ಬಗ್ಗೆಯೂ ಯೋಚಿಸಿದ್ದೇನೆ. ಬಡ ರೈತನಿಗೆ ತನ್ನ ಖಾತೆ ಜಮೀನಿಗೆ ಹೋಗಲು ಸರ್ಕಾರಿ ಜಮೀನಿನ ನಡುವೆ ಅವಕಾಶವಿಲ್ಲವಾಗಿದೆ. ಇದನ್ನು ಕೆಲವರು ಪ್ರಭಾವಿಗಳು ಒತ್ತುವರಿ ಮಾಡಿಕೊಂಡು ಅದನ್ನು ಲಪಟಾಯಿಸುವ ಉದ್ದೇಶದಿಂದ ಈ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ನ್ಯಾಯ ಸಿಗದ ಪಕ್ಷದಲ್ಲಿ ನಾನು ಮಾನಸಿಕವಾಗಿ ನೊಂದು, ಪಕ್ಷದ ಪ್ರಾಥಮಿಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದೇನೆ.

ಅಲ್ಲದೆ ನಾನು ಮತ್ತು ನನ್ನ ಪತ್ನಿಯ ಗ್ರಾಮ ಪಂಚಾಯತ್ ಸದಸ್ಯ ಸ್ಥಾನದಲ್ಲಿ ಪಕ್ಷದ ಪ್ರಾತಿನಿಧ್ಯಕ್ಕೂ ನಾನು ರಾಜೀನಾಮೆ ಸಲ್ಲಿಸುತ್ತಿದ್ದೇವೆ. ನಾನು ಮತ್ತು ನನ್ನ ಪತ್ನಿ ಕಳೆದ ಕಳೆದ ಅನೇಕ ವರ್ಷಗಳಿಂದ ಯಾವುದೇ ಜಾತಿ ಧರ್ಮ ನೋಡದೆ ಎಲ್ಲರಿಗೂ ಸಹಾಯದ ಮನೋಭಾವವನ್ನು ಹೊಂದಿರುತ್ತೇವೆ, ಆದರೆ ನಮಗೆ ನ್ಯಾಯ ಸಿಗದಿದ್ದಲ್ಲಿ ಮುಂದಿನ ದಿನದಲ್ಲಿ ಸಾಮಾನ್ಯ ಜನರಿಗೆ ಹೇಗೆ ನ್ಯಾಯ ಸಿಗುತ್ತದೆ ಎಂಬುದು ಯಕ್ಷಪ್ರಶ್ನೆಯಾಗಿದೆ. ಪ್ರಾಮಾಣಿಕ ಕಾರ್ಯಕರ್ತನಾಗಿ ನನ್ನ ಸೇವೆ ಸಲ್ಲಿಸಿದ್ದು ನನ್ನ ನಿರೀಕ್ಷೆ ಹುಸಿಯಾಗಿದೆ. ಬಡ ಕುಟುಂಬಕ್ಕೆ ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿದ್ದು ಸಮಸ್ಯೆ ಮಾಡುತ್ತಿರುವ ಬಗ್ಗೆ ಮುಂದಿನ ದಿನಗಳಲ್ಲಿ ಮಾಧ್ಯಮಗಳ ಮುಂದೆ ಬಹಿರಂಗಪಡಿಸಲಿದ್ದು ಇದರ ಹಿಂದೆ ಯಾರಿದ್ದಾರೆ ಎಂಬ ವಿಷಯವು ಕೂಡ ಬಹಿರಂಗವಾಗಲಿದೆ ಎಂದು ಕಾಂಗ್ರೆಸ್ ಕಾರ್ಮಿಕರ ಘಟಕದ ತಾಲೂಕು ಅಧ್ಯಕ್ಷ ಹಾಗೂ ಹೊದಲ ಗ್ರಾಮ ಪಂಚಾಯತ್ ಸದಸ್ಯ ತುಪ್ಪದ ಮನೆ ವಿನಾಯಕ್ ಪತ್ರಿಕಾ ಹೇಳಿಕೆ ನೀಡಿದ್ದಾರೆ

Categories
ಆರೋಗ್ಯ ಬೆಂಗಳೂರು

ಭಾರತಿ ವಿಷ್ಣುವರ್ಧನ್ ಆರೋಗ್ಯದಲ್ಲಿ ಏರುಪೇರು!

ಭಾರತಿ ವಿಷ್ಣುವರ್ಧನ್ ಆರೋಗ್ಯದಲ್ಲಿ ಏರುಪೇರು!
– ಊಟ ಮಾಡದೇ ಹಾಸಿಗೆ ಹಿಡಿದ ಖ್ಯಾತ ನಟಿ
– ಲೀಲಾವತಿ ನಿಧನ ಬಳಿಕ ಮತ್ತೊಂದು ಶಾಕಿಂಗ್ ಸುದ್ದಿ

NAMMUR EXPRESS NEWS
ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಅವರ ಆರೋಗ್ಯದಲ್ಲಿ ಏರುಪೇರಾಗಿದೆ ಎಂಬ ಸುದ್ದಿ ಬಂದಿದ್ದು, ಭಾರತಿ ವಿಷ್ಣುವರ್ಧನ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ನಟ ಅನಿರುದ್ಧ ಜಟ್ಕರ್ ಮಾಹಿತಿ ನೀಡಿದ್ದಾರೆ. ಕನ್ನಡ ಚಿತ್ರರಂಗದ ಖ್ಯಾತ ನಟ ವಿಷ್ಣುವರ್ಧನ್ ಅವರ ಪತ್ನಿ ಹಾಗೂ ಹಿರಿಯ ನಟಿ ಭಾರತಿ ಆರೋಗ್ಯ ವಿಷಯ ಸ್ಯಾಂಡಲ್‌ವುಡ್‌ನಲ್ಲಿ ಆತಂಕ ಉಂಟು ಮಾಡಿದೆ. ಅವರ ಆರೋಗ್ಯದಲ್ಲಿ ಏರುಪೇರಾಗಿರುವ ಬಗ್ಗೆ ಅಳಿಯ ಅನಿರುದ್ಧ್ ಮಾಹಿತಿ ನೀಡಿದ್ದಾರೆ. ಸುದ್ದಿ ಕೇಳಿ ಚಿತ್ರರಂಗ ಮತ್ತು ಕನ್ನಡಿಗರು ಆತಂಕಕ್ಕೆ ಒಳಗಾಗಿದ್ದಾರೆ. ಹಿರಿಯ ನಟಿ ಲೀಲಾವತಿ ಅವರು ನಮ್ಮನ್ನಗಲಿ ಇನ್ನು ನಾಲ್ಕು ದಿನಗಳು ಆಗಿಲ್ಲ. ಇಂತಹ ಸಮಯದಲ್ಲೇ ಮತ್ತೊಬ್ಬ ಹಿರಿಯ ನಟಿಯ ಅನಾರೋಗ್ಯ ಸುದ್ದಿ ಈಗ ಆತಂಕಕ್ಕೆ ತಳ್ಳಿದೆ.

ಹಿಂದಿ, ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಭಾರತಿ ವಿಷ್ಣುವರ್ಧನ್ ಅವರು ಮಂಡಿ ನೋವಿನಿಂದ ಹಾಸಿಗೆ ಹಿಡಿದಿದ್ದಾರೆ ಎಂದು ಅನಿರುದ್ದ್ ಮಾಹಿತಿ ನೀಡಿದ್ದಾರೆ. ಅಮ್ಮನ ಆರೋಗ್ಯ ಸರಿಯಿಲ್ಲ. ಅನಾರೋಗ್ಯ ಕಾಡುತ್ತಿದೆ. ಸರಿಯಾಗಿ ಊಟ ಮಾಡಲು ಆಗುತ್ತಿಲ್ಲ. ತುಂಬಾ ನಿಶಕ್ತರಾಗಿದ್ದಾರೆ ಎಂದು ತಿಳಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ನಟಿ ಭಾರತಿ ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಕಳೆದ ಎರಡು ತಿಂಗಳಿಂದ ಹೊರಗಡೆ ಎಲ್ಲೂ ಹೋಗದೆ ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದಾರೆ. ಕನ್ನಡಿಗರ ಹಾರೈಕೆಯಿಂದ ಬೇಗ ಗುಣ ಮುಖರಾಗುತ್ತಾರೆ ಎನ್ನುವ ನಂಬಿಕೆ ನಮಗಿದೆ ಎಂದು ಅನಿರುದ್ಧ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Categories
ಕರಾವಳಿ

ಕರಾವಳಿ ನ್ಯೂಸ್

ಕಾಪುವಿನ ಸಮಾಜ ಸೇವಕ ಕುಟುಂಬ ಆತ್ಮಹತ್ಯೆ!
– ಲೀಲಾಧರ ಶೆಟ್ಟಿ, ಪತ್ನಿ ವಸುಂಧರಾ ಶೆಟ್ಟಿ ಆತ್ಮಹತ್ಯೆ
– ಆತ್ಮಹತ್ಯೆಗೆ ಇನ್ನೂ ಕಾರಣ ತಿಳಿದು ಬಂದಿಲ್ಲ
– ಕುಂದಾಪುರ: ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

NAMMUR EXPRESS NEWS
ರಂಗಕರ್ಮಿ, ಸಮಾಜ ಸೇವಕ ಕಾಪು ಲೀಲಾಧರ ಶೆಟ್ಟಿ (68) ಹಾಗೂ ಅವರ ಪತ್ನಿ ವಸುಂಧರಾ ಶೆಟ್ಟಿ (59) ಆತ್ಮಹತ್ಯೆ ಶರಣಾದ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಸರಳ ಸಜ್ಜನ ವ್ಯಕ್ತಿತ್ವದ ಲೀಲಾಧರ ಶೆಟ್ಟಿ ಒಮ್ಮೆ ಕಾಪು ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದರು. ಅತ್ಯುತ್ತಮ ನಾಟಕ ತಂಡ ಹೊಂದಿದ್ದರು. ಬಂಟರ ಸಂಘದಲ್ಲೂ ಸಕ್ರಿಯರಾಗಿದ್ದರು. ಲೀಲಾಧರ ಶೆಟ್ಟಿಯವರು ಜಿಲ್ಲಾ ಕಬಡ್ಡಿ ಸಂಸ್ಥೆಯ ಉಪಾಧ್ಯಕ್ಷರು ಹಾಗೂ ಅತ್ಯಂತ ಸಮಾಜಮುಖಿ ಕಾರ್ಯ ನಿರ್ವಹಿಸಿದ ಸಮಾಜಸೇವಕರೂ ಆಗಿದ್ದರು.

ವಿಶೇಷವಾಗಿ ರಂಗಕರ್ಮಿಯು ಆಗಿ ಕಳೆದ ಹಲವಾರು ವರ್ಷಗಳಿಂದ “ರಂಗಿತರಂಗ” ನಾಟಕ ತಂಡವನ್ನು ಮುನ್ನಡೆಸಿ ನಾಟಕ ನಿರ್ದೇಶನ, ನಟರಾಗಿ ಕೂಡಾ ಜನಾನುರಾಯಿಯಾಗಿದ್ದರು. ಇವರ ಅಂತಿಮ ದರ್ಶನ ಬುಧವಾರ ಸಂಜೆ ನಾಲ್ಕು ಗಂಟೆಗೆ ಕಾಪು ಮಜೂರು ಕರಂದಾಡಿ ಶಾಲೆಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.

ಕುಂದಾಪುರ: ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

ಕುಂದಾಪುರ: ಬಸವ ವಸತಿ ಯೋಜನೆಗೆ ಸಂಬಂಧಿಸಿದಂತೆ ಲಂಚ ಸ್ವೀಕರಿಸುತ್ತಿದ್ದ ಆರೋಪದಡಿ ಬೇಳೂರು ಪಂಚಾಯತ್ ಅಭಿವೃದ್ಧಿ ಅಧಿಕಾರಿಯನ್ನು ಲೋಕಾಯುಕ್ತ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಪಿಡಿಓ ಜಯಂತ್ ಬಂಧಿತ ಆರೋಪಿ. ಬಸವ ವಸತಿ ಯೋಜನೆಯಲ್ಲಿ ಮನೆ ನಿರ್ಮಾಣಕ್ಕೆ ಫಲಾನುಭವಿಗಳಿಗೆ ಒಟ್ಟು 4 ಕಂತಿನಲ್ಲಿ 1.20 ಲಕ್ಷ ರೂ. ಹಣ ಬಿಡುಗಡೆಯಾಗಿದೆ. ಬಿಡುಗಡೆಯಾದ ಈ ಹಣದಲ್ಲಿ ಅರ್ಧಾಂಶ ಹಣ ಮಂಜೂರು ಮಾಡಿಸಲು 10 ಸಾವಿರ ಹಣ ಖರ್ಚಾಗಿದೆ.

ಆ ಹಣವನ್ನು ಮರಳಿ ನೀಡುವಂತೆ ಆರೋಪಿ ಲಂಚ ಬೇಡಿಕೆಯನ್ನು ಇಟ್ಟಿದ್ದನು. ಇನ್ನು ಆ ಬಳಿಕ ಆರೋಪಿ ಲಂಚ ಬೇಡಿಕೆ ಇಟ್ಟ ಬಗ್ಗೆ ಠಾಣೆಯಲ್ಲಿ ದೂರು ದಾಖಲಾಗಿದ್ದು, ಅದರಂತೆ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಆರೋಪಿಯು ತೆಕ್ಕಟ್ಟೆ ಜಂಕ್ಷನ್‌ನಲ್ಲಿ ದೂರುದಾರರಿಂದ 10 ಸಾವಿರ ಲಂಚ ಸ್ವೀಕರಿಸುತ್ತಿದ್ದ ವೇಳೆ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ

Categories
ಬೆಂಗಳೂರು

ಸಹ್ಯಾದ್ರಿ ಸಂಘದಿಂದ ಅಗಲಿದ ಗಣ್ಯರಿಗೆ ನಮನ

ಸಹ್ಯಾದ್ರಿ ಸಂಘದಿಂದ ಅಗಲಿದ ಗಣ್ಯರಿಗೆ ನಮನ
– ಡಿ.16ರಂದು ಬಿ. ಎಸ್.ವಿಶ್ವನಾಥ್, ಡಿಬಿಸಿ ನುಡಿ ನಮನ
– ಬೆಂಗಳೂರಲ್ಲಿ ಕಾರ್ಯಕ್ರಮ: ಸಮಸ್ತ ಜನತೆಗೆ ಆಹ್ವಾನ

NAMMUR EXPRESS NEWS
ಬೆಂಗಳೂರು: ಮಲೆನಾಡಿಗರ ಸಾಂಸ್ಕೃತಿಕ ಸಂಘಟನೆ ಸಹ್ಯಾದ್ರಿ ಸಂಘದಿಂದ ಇತ್ತೀಚಿಗೆ ಅಗಲಿದ ಮಲೆನಾಡಿನ ಸಾಧಕರಾದ ಸಹಕಾರಿ ನಾಯಕ ಡಾ. ಬಿ. ಎಸ್ ವಿಶ್ವನಾಥ್ ಹಾಗೂ ರಾಜಕೀಯ ನಾಯಕ ಡಿ. ಬಿ. ಚಂದ್ರೆಗೌಡ ಅವರಿಗೆ ನುಡಿ ನಮನ ಕಾರ್ಯಕ್ರಮ ಡಿ.16ರಂದು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ. ಬೆಂಗಳೂರಿನ ಕೊಂಡಜ್ಜಿ ಬಸಪ್ಪ ಸಭಾಂಗಣ, ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್, ಅರಮನೆ ರಸ್ತೆಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಸಹ್ಯಾದ್ರಿ ಸಂಘದ ಸಮಸ್ತ ಜನತೆಗೆ ಆಹ್ವಾನ ನೀಡಿದೆ. ಖ್ಯಾತ ಅಂತರಾಷ್ಟ್ರೀಯ ಸಹಕಾರಿ ತಜ್ಞ ದಿವಂಗತ ಶ್ರೀ ಬಿ. ಎಸ್ ವಿಶ್ವನಾಥನ್, ರಾಷ್ಟ್ರ ಕಂಡ ಖ್ಯಾತ ಸಂಸದೀಯ ಪಟು ಶ್ರೀ ಡಿ. ಬಿ. ಚಂದ್ರೇಗೌಡ ಅವರಿಗೆ ನುಡಿ ನಮನ ಕಾರ್ಯಕ್ರಮ ನಡೆಯಲಿದೆ. ಡಿ.16ರ ಸಂಜೆ 5.30 ರಿಂದ ಕಾರ್ಯಕ್ರಮ ಶುರುವಾಗಲಿದೆ.

ಕಾನೂನು ಸಚಿವ ಹೆಚ್.ಕೆ. ಪಾಟೀಲ್, ಮಾಜಿ ಸಚಿವ ಪಿ ಜಿ ಆರ್ ಸಿಂಧ್ಯಾ, ಮುಖ್ಯ ಆಯುಕ್ತರು ಭಾರತ್ ಸೈಟ್ಸ್ ಅಂಡ್ ಗೈಡ್ಸ್ ಹಾಗೂ ಮಾಜಿ ಸಭಾಪತಿಗಳು, ವಿಧಾನಪರಿಷತ್ ಅಧ್ಯಕ್ಷರು ಚಿತ್ರಕಲಾ ಪರಿಷತ್ ಮತ್ತು ಅಧ್ಯಕ್ಷರಾದ ಡಾ.ಬಿ.ಎಲ್.ಶಂಕರ್, ಮಾಜಿ ಸಚಿವರಾದ ಲೀಲಾದೇವಿ ಆರ್ ಪ್ರಸಾದ್ ಭಾಗವಹಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಮಾಜಿ ಗೃಹ ಸಚಿವ, ತೀರ್ಥಹಳ್ಳಿ ಶಾಸಕರಾದ ಆರಗ ಜ್ಞಾನೇಂದ್ರ, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಭಾಗವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಜಿ. ಎ. ಪುರುಷೋತ್ತಮಗೌಡ ವಿಶೇಷ ಕಾರ್ಯದರ್ಶಿಗಳು(ನಿ), ಕರ್ನಾಟಕ ವಿಧಾನ ಪರಿಷತ್, ಗೌರವಾಧ್ಯಕ್ಷರು, ಸಹ್ಯಾದ್ರಿ ಸಂಘ ಇವರು ವಹಿಸಲಿದ್ದಾರೆ. ಡಿ.ಬಿ.ಚಂದ್ರೇಗೌಡ ಮತ್ತು ಬಿ.ಎಸ್.ವಿಶ್ವನಾಥನ್ ಕುಟುಂಬದವರು ಉಪಸ್ಥಿತರಿರಲಿದ್ದಾರೆ. ಸಮಸ್ತರನ್ನು ಸಹ್ಯಾದ್ರಿ ಸಂಘದ ಅಧ್ಯಕ್ಷರಾದ ಡಿ. ಸಿ ಶ್ರೀಧರ್, ಕಾರ್ಯದರ್ಶಿಹೆಚ್.ಸಿ. ಜಯಪ್ರಕಾಶ್ ಉಪಾಧ್ಯಕ್ಷರುಗಳು ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರುಗಳು ಆಹ್ವಾನಿಸಿದ್ದಾರೆ.

Categories
Quotes

ಲೈಫ್ ಬ್ಯೂಟಿಫುಲ್ – Motivational quotes APJ Abdul kalam

You cannot change your future. But you can change your habits. And surely your habits will change your future.

-APJ Abdul kalam

ನೀವು ನಿಮ್ಮ ಭವಿಷ್ಯವನ್ನು ಬದಲಾಯಿಸಿಕೊಳ್ಳುವುದು ಸಾಧ್ಯವಿಲ್ಲ. ಆದರೆ ನಿಮ್ಮ ಹವ್ಯಾಸಗಳನ್ನು ಬದಲಾಯಿಸಿಕೊಳ್ಳಬಹುದು. ಈ ಹವ್ಯಾಸಗಳು ಖಂಡಿತವಾಗಿಯೂ ನಿಮ್ಮ ಭವಿಷ್ಯ ಬದಲಾಯಿಸುತ್ತವೆ.

ಹೌದು. ನಮ್ಮ ಬದುಕಿನ ಪದ್ಧತಿಯೇ ಒಂದು ಹವ್ಯಾಸ. ಈ ಪದ್ಧತಿಗಳು ಸರಿಯಾಗಿದ್ದಲ್ಲಿ ಭವಿಷ್ಯವೂ ಸರಿಯಾಗಿರುತ್ತದೆ.‌ ಉತ್ತಮ ಹವ್ಯಾಸಗಳು ಆರೋಗ್ಯಕರ ಜೀವನಕ್ಕೆ ಅವಶ್ಯಕ. ಅವೇ ನಿಮ್ಮನ್ನು ಗೆಲ್ಲಿಸುತ್ತವೆ. ಒಳ್ಳೆಯ ಹವ್ಯಾಸ, ಒಳ್ಳೆಯವರ ಸಹವಾಸ ಒಳ್ಳೆಯದನ್ನೇ ಮಾಡುತ್ತದೆ.

Categories
ರಾಜ್ಯ

ಕುಡುಕರಿಗೆ ಕುಡುಕರು ಎನ್ನುವಂತಿಲ್ಲ!

ಕುಡುಕರಿಗೆ ಕುಡುಕರು ಎನ್ನುವಂತಿಲ್ಲ!
– ಕುಡುಕ ಪದ ತೆಗೆದು ಮದ್ಯಪ್ರಿಯ ಎನ್ನಬೇಕು..!
– ಆಧಾ‌ರ್ ಲಿಂಕ್ ಮಾಡಿ ಮದ್ಯಪ್ರಿಯರಿಗೆ ಸೌಲಭ್ಯ ಕಲ್ಪಿಸಬೇಕು
– ಮದ್ಯಪ್ರಿಯರ ಸಂಘದಿಂದ ಸರ್ಕಾರಕ್ಕೆ ಮನವಿ.. ಏನೇನು ಗೊತ್ತಾ..?

NAMMUR EXPRESS NEWS
ಅರಸೀಕೆರೆ: ಕುಡುಕರಿಗೆ ಕುಡುಕರು ಎನ್ನುವಂತಿಲ್ಲ!. ಕುಡುಕ ಪದ ತೆಗೆದು ಮದ್ಯಪ್ರಿಯ ಎನ್ನಬೇಕು.ಆಧಾ‌ರ್ ಲಿಂಕ್ ಮಾಡಿ ಮದ್ಯಪ್ರಿಯರಿಗೆ ಸೌಲಭ್ಯ ಕಲ್ಪಿಸಬೇಕು. ಇನ್ನು 20 ಬೇಡಿಕೆ ಇಟ್ಟು ಮದ್ಯಪ್ರಿಯರ ಸಂಘದಿಂದ ಸರ್ಕಾರಕ್ಕೆ ಮನವಿ ಮಾಡಲಾಗಿದೆ.

ಹಾಗಾದ್ರೆ ಮನವಿ ಏನೇನು ಗೊತ್ತಾ..?

ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ 20 ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮದ್ಯಪಾನ ಪ್ರಿಯರ ಹೋರಾಟ ಸಂಘದ ವತಿಯಿಂದ ಬೆಳಗಾವಿ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಮದ್ಯಪಾನ ಪ್ರಿಯರ ಘಟಕದ ಅಧ್ಯಕ್ಷ ಕ್ಯಾತನಹಳ್ಳಿ ಕೆ.ಎಸ್.ಶಿವಾನಂದಪ್ಪ ತಿಳಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಅಬಕಾರಿ ಸಚಿವ ತಿಮ್ಮಾಪುರ ಅವರನ್ನು ಭೇಟಿ ಮಾಡಿ ಸಂಘದ ವತಿಯಿಂದ ಮನವಿ ಸಲ್ಲಿಸಲಾಗಿತ್ತು. ಇಲ್ಲಿಯವರೆಗೆ ಯಾವುದೇ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸರ್ಕಾರ ಗಮನ ಹರಿಸಿಲ್ಲ. ಸಮಸ್ಯೆ ಬಗ್ಗೆ ಗಮನ ಹರಿಸುವಂತೆ ಒತ್ತಾಯಿಸಲು ಡಿ.3ರಂದು ಬೆಳಗಾವಿಗೆ ತೆರಳಲಿದ್ದು, ಡಿ.14ರಂದು ಪ್ರತಿಭಟನೆ ನಡೆಸಲಾಗುವುದು. ಸಂಬಂಧಿಸಿದ ಸಚಿವರು, ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗುವುದು ಎಂದರು.

ಮದ್ಯಪಾನ ಪ್ರಿಯರ ಕಲ್ಯಾಣ ನಿಧಿ ಸ್ಥಾಪಿಸಬೇಕು. ಮಕ್ಕಳಿಗೆ ಮಾಸಾಶನ ಅನಾರೋಗ್ಯಕ್ಕೆ ತುತ್ತಾದಲ್ಲಿ ವೈದ್ಯಕೀಯ ಸೌಲಭ್ಯ, ನಿಗಮ ಮಂಡಳಿ ಸ್ಥಾಪನೆ ಮಾಡುವುದು, ವಸತಿ ಇಲ್ಲದವರಿಗೆ ವಸತಿ ಸೌಲಭ್ಯ, ಮೃತಪಟ್ಟರೆ 10 ಲಕ್ಷರೂ. ವಿಮಾ ಸೌಲಭ್ಯ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಲಾಗುವುದು ಎಂದು ರಾಜ್ಯ ಘಟಕದ ಖಜಾಂಚಿ ಮಧು ಹೇಳಿದರು, ಸರ್ಕಾರ ‘ಕುಡುಕ’ ಎಂಬ ಪದವನ್ನು ತೆಗೆಯಬೇಕು. ಮದ್ಯಪಾನ ಪ್ರಿಯರು ಮದ್ಯವನ್ನು ಖರೀದಿಸುವ ಸಂದರ್ಭದಲ್ಲಿ ಆಧಾರ್ ಕಾರ್ಡ್ ಲಿಂಕ್ ಮಾಡಿ, ಅವರಿಗೆ ಸೌಲಭ್ಯಗಳನ್ನು ಕೊಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಸಂಘದ ಸದಸ್ಯ ಹರಳಕಟ್ಟೆ ರೇಣುಕಪ್ಪ ಆಗ್ರಹಿಸಿದರು.

Categories
ಉಡುಪಿ

ಇನ್ನು ಮುಂದೆ ಮೆಡಿಕಲ್ಲಲ್ಲಿ ಸಿಸಿಟಿವಿ ಕಡ್ಡಾಯ?!

ಇನ್ನು ಮುಂದೆ ಮೆಡಿಕಲ್ಲಲ್ಲಿ ಸಿಸಿಟಿವಿ ಕಡ್ಡಾಯ?!
– ಎರಡು ವಾರದ ಕಾಲಾವಕಾಶ ನೀಡಿದ ಆಡಳಿತ
– ಗ್ರಾಹಕರ ಹಿತದೃಷ್ಟಿಯಿಂದ ನಿಯಮ ಜಾರಿ

NAMMUR EXPRESS NEWS
ಉಡುಪಿ : ಸಾರ್ವಜನಿಕರ ಹಿತವನ್ನು ಕಾಪಾಡುವ ದೃಷ್ಟಿಯಿಂದ ಉಡುಪಿ ಜಿಲ್ಲೆಯಲ್ಲಿ ಔಷಧಿಗಳನ್ನು ಮಾರಾಟ ಮಾಡುವ ಎಲ್ಲಾ ವೈದ್ಯಕೀಯ ಹಾಗೂ ಫಾರ್ಮಸಿ ಅಂಗಡಿಗಳಲ್ಲಿ ಕಡ್ಡಾಯವಾಗಿ ಸಿ.ಸಿ ಟಿವಿ ಅಳವಡಿಸುವಂತೆ ಜಿಲ್ಲಾಧಿಕಾರಿ ಡಾ.ಕೆ ವಿದ್ಯಾಕುಮಾರಿ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ. ಸಿ.ಸಿ.ಟಿವಿ ಕ್ಯಾಮೆರಾವನ್ನು ಅಳವಡಿಸಲು ಎಲ್ಲಾ ವೈದ್ಯಕೀಯ/ಫಾರ್ಮಸಿ ಶಾಪ್ ಗಳ ಮಾಲೀಕರಿಗೆ ಎರಡು ವಾರಗಳ ಕಾಲಾವಕಾಶ ನೀಡಲಾಗಿದ್ದು, ಜಿಲ್ಲಾ ಔಷಧ ನಿಯಂತ್ರಕರು ಸದರಿ ಅಂಗಡಿಗಳಲ್ಲಿ ಸಿ.ಸಿ ಟಿವಿ ಅಳವಡಿಸಿರುವ ಕುರಿತು ತಪಾಸಣೆ ನಡೆಸಬೇಕು. ಈ ಆದೇಶವನ್ನು ಉಲ್ಲಂಘಿಸುವ ಮೆಡಿಕಲ್/ಫಾರ್ಮಸಿ ಅಂಗಡಿ ಮಾಲೀಕರ ವಿರುದ್ದ ಕಾನೂನು ಪ್ರಕಾರ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ. ಈ ನಿಯಮ ಎಲ್ಲಾ ಜಿಲ್ಲೆಗಳಿಗೂ ಅನ್ವಯ ಆಗುವ ಸಾಧ್ಯತೆಗಳಿವೆ.