Categories
ತೀರ್ಥಹಳ್ಳಿ ಶಿಕ್ಷಣ

ರಾಷ್ಟ್ರೀಯ ವಸತಿ ಶಾಲೆ, ಕೋಣಂದೂರು

ರಾಷ್ಟ್ರೀಯ ವಸತಿ ಶಾಲೆ, ಕೋಣಂದೂರು
– ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಶಿವಮೊಗ್ಗದ ಅಂಗ ಸಂಸ್ಥೆಯಾದ, ರಾಷ್ಟ್ರೀಯ ವಸತಿ ಶಾಲೆ ಕೋಣಂದೂರು, ತೀರ್ಥಹಳ್ಳಿ ತಾಲ್ಲೂಕು – 577422
– LKGಯಿಂದ ಹತ್ತನೇ ತರಗತಿ(ICSE), ಪಿ.ಯು.ಸಿ ವಿಜ್ಞಾನ ವಿಭಾಗ

NAMMUR EXPRESS NEWS:
ಪ್ರವೇಶ ಆರಂಭವಾಗಿದೆ…!
ನಿಮ್ಮ ಮಕ್ಕಳ ಗುಣಮಟ್ಟದ ಶಿಕ್ಷಣಕ್ಕೆ
ನಿಮ್ಮ ಮುಂದಿದೆ ಉತ್ತಮ ಆಯ್ಕೆ
ರಾಷ್ಟ್ರೀಯ ಶಿಕ್ಷಣ ಸಮಿತಿ (ರಿ), ಶಿವಮೊಗ್ಗ, ಇದರ ಅಂಗಸಂಸ್ಥೆಯಾದ ಕೇಂದ್ರೀಯ ಪಠ್ಯಕ್ರಮದ ರಾಷ್ಟ್ರೀಯ ವಸತಿ ಶಾಲೆ, ತೀರ್ಥಹಳ್ಳಿ ತಾಲೂಕಿನ ಕೋಣಂದೂರಿನಲ್ಲಿ ಕಳೆದ 24 ವರ್ಷಗಳಿಂದ ICSE ಶಿಕ್ಷಣಕ್ಕೆ ಹೆಸರಾದ ಸಂಸ್ಥೆಯಾಗಿದೆ. LKGಯಿಂದ ಹತ್ತನೇ ತರಗತಿವರೆಗೆ ICSEಗೆ ಹಾಗೂ ಪಿ.ಯು.ಸಿ ವಿಜ್ಞಾನ ವಿಭಾಗದ ಶಿಕ್ಷಣಕ್ಕೆ ಅವಕಾಶವಿದೆ. ಗುಣಮಟ್ಟದ ಶಿಕ್ಷಣಕ್ಕೆ ಒತ್ತುಕೊಟ್ಟು ಶಿಕ್ಷಣ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಸಂಸ್ಥೆಯಾದ ರಾಷ್ಟ್ರೀಯ ವಸತಿ ಶಾಲೆಗೆ 2024-25ನೇ ಶೈಕ್ಷಣಿಕ ಸಾಲಿಗೆ ಇದೀಗ ಪ್ರವೇಶಾತಿ ಪ್ರಾರಂಭಗೊಂಡಿದೆ…!

ಶಿವಮೊಗ್ಗ ಜಿಲ್ಲೆಯ ಮೊದಲ ICSE ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಮಲೆನಾಡ ಮಡಿಲಲ್ಲಿ ಮನಸೆಳೆಯುವ ಶಾಂತ ಶೈಕ್ಷಣಿಕ ವಾತಾವರಣ ಇಲ್ಲಿದೆ. ನುರಿತ ಶಿಕ್ಷಕ ವರ್ಗದಿಂದ ಇಂಗ್ಲೀಷ್ ಮಾಧ್ಯಮದಲ್ಲಿ ICSE ಪಠ್ಯಕ್ರಮ ಬೋಧನೆ ಜೊತೆಗೆ ವಿಶಾಲವಾದ ಕ್ರೀಡಾಂಗಣ ಹಾಗೂ ಸುವ್ಯವಸ್ಥಿತ ಲ್ಯಾಬ್ ಗಳು, ನಿಯಮಿತ ಸಂಗೀತ, ನೃತ್ಯ, ಕರಾಟೆ ತರಗತಿಗಳು,ಬಾಲಕಿಯರು ಮತ್ತು ಬಾಲಕರ ಪ್ರತ್ಯೇಕ ವಸತಿ ನಿಲಯ, ಪೌಷ್ಟಿಕ ಸಮತೋಲಿತ ಆಹಾರ, ನಿಯಮಿತ ಯೋಗ ಹಾಗೂ ಧ್ಯಾನ ತರಬೇತಿ,ವಸತಿ ನಿಲಯದ ವಿದ್ಯಾರ್ಥಿಗಳಿಗೆ ಸಂಜೆ ವೇಳೆ ವಿಶೇಷ ತರಗತಿಗಳು.

ಅವಶ್ಯಕ ಪುಸ್ತಕಗಳನ್ನು ಹೊಂದಿದ ವ್ಯವಸ್ಥಿತವಾದ ಗ್ರಂಥಾಲಯಗಳು ಹಾಗೂ ದಿನ ಪತ್ರಿಕೆಗಳ ಲಭ್ಯತೆ ಮಕ್ಕಳ ಶಿಕ್ಷಣಕ್ಕೆ ಪೂರಕವಾಗಿದೆ. ಪಿ.ಯು.ಸಿ(ವಿಜ್ಞಾನ ವಿಭಾಗ) ತರಗತಿಗಳಿಗೆ CET/NEET /JEE ತರಬೇತಿ, ಶಾಲಾ ಬಸ್ ವ್ಯವಸ್ಥೆ, ಆಧುನಿಕ ಶಿಕ್ಷಣ ಕ್ಷೇತ್ರಕ್ಕೆ ಬೇಕಾದ ಎಲ್ಲಾ ಸೌಲಭ್ಯ, ಉತ್ತಮ ಬೋಧಕರ ತಂಡ ಇಲ್ಲಿದೆ. ಪ್ರತಿ ವರ್ಷವೂ ಅತ್ಯುತ್ತಮ ಫಲಿತಾಂಶದ ಮೂಲಕ ಮಲೆನಾಡಿನಲ್ಲಿ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದೆ.

* Best education Planning
* Student friendly Atmosphere
* Experienced faculty
* Wide play Ground
* Spacious class Rooms
* Smart class facilities
* Library and lab facilities

ಪ್ರವೇಶ ಆರಂಭವಾಗಿದೆ…!

ನಿಮ್ಮ ಮಕ್ಕಳ ಗುಣಮಟ್ಟದ ಶಿಕ್ಷಣಕ್ಕೆ ನಮ್ಮನ್ನು ಸಂಪರ್ಕಿಸಿ

ಮಾಹಿತಿಗಾಗಿ

ದೂರವಾಣಿ : 8277661188, 7899984343, 08181-295655, 08181-295679

ಮೇಲ್ :nrskonandur@rediffmail.com, nrs.konandur@gmail.com

ವೆಬ್ ಸೈಟ್ :http://www.nrskonandur.in

Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ಇಂದು ವಿಶ್ವ ಮಾತೃ ಭಾಷಾ ದಿನ

ತೀರ್ಥಹಳ್ಳಿಯಲ್ಲಿ ಇಂದು ವಿಶ್ವ ಮಾತೃ ಭಾಷಾ ದಿನ
– ಸರ್ಕಾರಿ ಪ್ರೌಢಶಾಲೆ ರಾಮಕೃಷ್ಣಪುರದಲ್ಲಿ ಕಾರ್ಯಕ್ರಮ
– ತೀರ್ಥಹಳ್ಳಿ ಕಸಾಪ ಆಯೋಜನೆ: ಸರ್ವರಿಗೂ ಸ್ವಾಗತ

NAMMUR EXPRESS NEWS
ತೀರ್ಥಹಳ್ಳಿ: ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ತೀರ್ಥಹಳ್ಳಿ ಹಾಗೂ ಸರ್ಕಾರಿ ಪ್ರೌಢಶಾಲೆ ರಾಮಕೃಷ್ಣಪುರ ತೀರ್ಥಹಳ್ಳಿ ಸಹಯೋಗದಲ್ಲಿ ವಿಶ್ವ ಮಾತೃ ಭಾಷಾ ದಿನಾಚರಣೆಯನ್ನು ತೀರ್ಥಹಳ್ಳಿಯ ಸರ್ಕಾರಿ ಪ್ರೌಢಶಾಲೆ ರಾಮಕೃಷ್ಣಪುರದಲ್ಲಿ ದಿನಾಂಕ: 21-02-2024 ನೇ ಬುಧುವಾರ ಮಧ್ಯಾಹ್ನ 2:30ಕ್ಕೆ ನಡೆಸಲಾಗುವುದು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಟಿ ಕೆ ರಮೇಶ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದು, ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸದಸ್ಯರಾದ ಬಿ ಎಂ ನಾಗರಾಜ ಪರ್ವತಪುರ ಅವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಿದ್ದಾರೆ.

ಹೊಸನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಶ್ರೀಪತಿ ಹಳಗುಂದ ಅವರು ಉಪನ್ಯಾಸ ನೀಡಲಿದ್ದಾರೆ. ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾದ ಗಿರೀಶ್ ಬಿ ಎಂ ಹಾಗೂ ಸದಸ್ಯರಾದ ನಾಗಭೂಷಣ ಕಾಸರವಳ್ಳಿ ಇವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಕಾರ್ಯಕ್ರಮ ಕನ್ನಡ ಸಾಹಿತ್ಯ ಪರಿಷತ್ ಆಗುಂಬೆ ಹೋಬಳಿ ಘಟಕದ ಅಧ್ಯಕ್ಷರಾದ ಏನ್ ಜಿ ವೆಂಕಟೇಶ್, ಸರ್ಕಾರಿ ಪ್ರೌಢಶಾಲೆ ರಾಮಕೃಷ್ಣಪುರ ಮುಖ್ಯ ಶಿಕ್ಷಕರಾದ ಎಚ್ ಪಿ ರವೀಂದ್ರ, ಹಿರಿಯ ಶಿಕ್ಷಕರಾದ ಎನ್ ಎಲ್ ರಾಮಕೃಷ್ಣ, ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ಕೊಡಿಗೆಬೈಲ್ ಪೂರ್ಣೇಶ್ ಇದರ ಉಪಸ್ಥಿತಿಯಲ್ಲಿ ನಡೆಯಲಿದೆ.

ತಮಗೆಲ್ಲರಿಗೂ ಆದರದ ಸ್ವಾಗತ

– ಶ್ರೀ ಹಾಲಿಗೆ ನಾಗರಾಜ್, ಕೋಶಾಧ್ಯಕ್ಷರು ತಾಕಸಾಪ ತೀರ್ಥಹಳ್ಳಿ
– ಶ್ರೀ ಗಾಯಿತ್ರಿ ಶೇಷಗಿರಿ ಮತ್ತು ಸೌಳಿ ನಾಗರಾಜ್ ಗೌರವ ಕಾರ್ಯದರ್ಶಿಗಳು
– ಕಾರ್ಯಕಾರಿ ಸಮಿತಿ ಸದಸ್ಯರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ತೀರ್ಥಹಳ್ಳಿ ಮತ್ತು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ, ಸಹ ಶಿಕ್ಷಕರು, ಸಿಬ್ಬಂದಿ ವರ್ಗ ಮತ್ತು ಹಿರಿಯ ವಿದ್ಯಾರ್ಥಿಗಳು, ಸರ್ಕಾರಿ ಪ್ರೌಢಶಾಲೆ ರಾಮಕೃಷ್ಣಪುರ

Categories
ಬೆಂಗಳೂರು ರಾಜ್ಯ

ಬೆಂಗಳೂರಲ್ಲಿ ರಾಜ್ಯಮಟ್ಟದ ಉದ್ಯೋಗ ಮೇಳ

ಬೆಂಗಳೂರಲ್ಲಿ ರಾಜ್ಯಮಟ್ಟದ ಉದ್ಯೋಗ ಮೇಳ
– ಫೆ.26,27ರಂದು ಉದ್ಯೋಗ ಮೇಳ:ನೋಂದಣಿಗೆ ಸೂಚನೆ
– ರಾಜ್ಯದ ಉದ್ಯೋಗ ಆಕಾಂಕ್ಷಿಗಳಿಗೆ ಅವಕಾಶ

NAMMUR EXPRESS NEWS
ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ (ಕೆ.ಎಸ್.ಡಿ.ಸಿ) ಬೆಂಗಳೂರು, ಇದರ ವತಿಯಿಂದ ಉದ್ಯೋಗಾಂಕ್ಷಿಗಳಿಗೆ ಉದ್ಯೋಗಾವಕಾಶವನ್ನು ನೀಡುವ ಸಲುವಾಗಿ ಫೆ.26 ಮತ್ತು 27 ರಂದು ರಾಜ್ಯ ಮಟ್ಟದ ಯುವ ಯುವ ಸಮ್ಮೇಳನ ಬೃಹತ್ ಉದ್ಯೋಗ ಮೇಳ-2024 ರಂದು ನಡೆಯಲಿದೆ. ಅರಮನೆ ಮೈದಾನದಲ್ಲಿ ನಡೆಯುತ್ತಿದೆ.

ಉದ್ಯೋಗ ಹೊಂದುವ ಇಚ್ಛೆ ಇರುವ ಅಭ್ಯರ್ಥಿಗಳು ಏನು ಮಾಡಬೇಕು?

https://skillconnect. kaushalkar.com/ ಲಿಂಕ್‌ನಲ್ಲಿ ನೋಂದಣಿ ಮಾಡಿಕೊಳ್ಳುವ ಮೂಲಕ ಉದ್ಯೋಗ ಮೇಳದ ಸದುಪಯೋಗ ಪಡೆದುಕೊಳ್ಳಬೇಕು.

ಹೆಚ್ಚಿನ ಮಾಹಿತಿಗಾಗಿ ಮತ್ತು ಉಚಿತವಾಗಿ ನೋಂದಣಿ ಮಾಡಿಕೊಳ್ಳಲು ನಂ:201, ಬಿ ಬ್ಲಾಕ್, ಮೊದಲ ಮಹಡಿ, ರಜತಾದ್ರಿ, ಮಣಿಪಾಲದ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳು ಕಛೇರಿಯನ್ನು ಸಂಪರ್ಕಿಸಲು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Categories
ಬೆಂಗಳೂರು ರಾಜ್ಯ

ಈರುಳ್ಳಿ ಈಗ ಕಣ್ಣೀರು ತರಿಸುತ್ತೆ!

ಈರುಳ್ಳಿ ಈಗ ಕಣ್ಣೀರು ತರಿಸುತ್ತೆ!
– ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ದಿಢೀ‌ರ್ ಏರಿಕೆ
– ಬೆಳ್ಳುಳ್ಳಿ ಬಳಿಕ ಈರುಳ್ಳಿ ಏರಿಕೆ: ಜನರ ಜೇಬಿಗೆ ಕತ್ತರಿ!

NAMMUR EXPRESS NEWS
ಬೆಂಗಳೂರು: ಮಾರುಕಟ್ಟೆಯಲ್ಲಿ ಈರುಳ್ಳಿ ಧಾರಣೆ ಏಕಾಏಕಿ ಏರಿಕೆಯಾಗಿದ್ದು, ಗ್ರಾಹಕರಿಗೆ ಭರ್ಜರಿ ಶಾಕ್ ನೀಡಿದೆ. ಪ್ರಮುಖ ಆಹಾರ ಬೆಳೆ ಈರುಳ್ಳಿ ದಿನ ನಿತ್ಯ ಬಳಸಲೇಬೇಕಾದ ಆಹಾರ ಆಗಿದೆ. ಹೀಗಾಗಿ ಜನರ ಜೇಬಿಗೆ ಕತ್ತರಿ ಬೀಳಲಿದೆ. ಕೇಂದ್ರ ಸರ್ಕಾರ ಈರುಳ್ಳಿ ರಫ್ತು ನಿಷೇಧ ಹಿಂದಕ್ಕೆ ಪಡೆದ ಬೆನ್ನಿಗೇ ಈ ಬೆಳವಣಿಗೆ ನಡೆದಿದೆ. ದೇಶದ ಅತೀ ದೊಡ್ಡ ಈರುಳ್ಳಿ ಮಾರುಕಟ್ಟೆ ಲಾಸಲ್ ಗಾಂವ್‌ ಕೃಷಿ ಉತ್ಪಾದನಾ ಮಾರುಕಟ್ಟೆಯಲ್ಲಿ ಈರುಳ್ಳಿ ರಖಂ ಮಾರಾಟ ಬೆಲೆ ಶೇ.40ರಷ್ಟು ಏರಿಕೆ ದಾಖಲಿಸಿದೆ. ಈರುಳ್ಳಿ ಈಗ ಪ್ರತೀ ಕ್ವಿಂಟಾಲ್ ಬೆಲೆ 1,280 ರೂ.ಗಳಿಂದ 1,400 ರೂ.ಗೆ ಏರಿಕೆ ಕಂಡಿದ್ದು, ಕನಿಷ್ಠ ಬೆಲೆ 1 ಸಾವಿರ ರೂ. ಹಾಗೂ ಗರಿಷ್ಠ ಬೆಲೆ ಕ್ವಿಂಟಾಲ್‌ಗೆ 2,100 ರೂ.ಹೆಚ್ಚಳವಾಗಿದೆ. ಬೆಳ್ಳುಳ್ಳಿ ದರ ಏರಿಕೆಯಾಗಿದ್ದ ಬೆನ್ನಲ್ಲೇ ಇದೀಗ ಈರುಳ್ಳಿ ಬೆಲೆಯು ಏರಿಕೆಯಾಗಿರುವುದು ಗ್ರಾಹಕರಿಗೆ ಆತಂಕ ಉಂಟುಮಾಡಿದೆ.

Categories
ಉಡುಪಿ ಕರಾವಳಿ

ಕರಾವಳಿಯ ಬೆಡಗಿ ವಿಶ್ವ ಸುಂದರಿ ಸ್ಪರ್ಧೆಗೆ!

ಕರಾವಳಿಯ ಬೆಡಗಿ ವಿಶ್ವ ಸುಂದರಿ ಸ್ಪರ್ಧೆಗೆ!
– ಭಾರತ ಪ್ರತಿನಿಧಿಸಲಿದ್ದಾರೆ 21 ವರ್ಷದ ಕನ್ನಡತಿ ಸಿನಿ ಶೆಟ್ಟಿ
– 28 ವರ್ಷಗಳ ಬಳಿಕ ಭಾರತದಲ್ಲಿ ಆಯೋಜನೆ
– ಈವರೆಗೆ ಭಾರತದ 6 ಮಂದಿಗೆ ವಿಶ್ವ ಸುಂದರಿ ಕಿರೀಟ

NAMMUR EXPRESS NEWS
ಬೆಂಗಳೂರು: 71ನೇ ಆವೃತ್ತಿಯ ವಿಶ್ವ ಸುಂದರಿ ಸ್ಪರ್ಧೆ ಈ ಬಾರಿ ಭಾರತದಲ್ಲಿ ಮಾರ್ಚ್ ತಿಂಗಳಲ್ಲಿ ಮುಂಬೈನಲ್ಲಿ ನಡೆಯಲಿದೆ. ಈ ಸ್ಪರ್ಧೆಯಲ್ಲಿ ಭಾರತವನ್ನು ಕನ್ನಡತಿ ಸಿನಿ ಶೆಟ್ಟಿ (21) ಪ್ರತಿನಿಧಿಸುತ್ತಿದ್ದಾರೆ. 30 ದಶಕಗಳ ಬಳಿಕ ವಿಶ್ವ ಸುಂದರಿ ಸ್ಪರ್ಧೆಯನ್ನು ಭಾರತದಲ್ಲಿ ಆಯೋಜಿಸಲಾಗಿದೆ. 28 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಮೊದಲ ಬಾರಿಗೆ ಈ ಸ್ಪರ್ಧೆ ನಡೆದಿತ್ತು. ಈ ವರ್ಷ ಮಿಸ್ ವರ್ಲ್ಡ್ ಟ್ರ್ಯಾಂಡ್ ಫಿನಾಲೆ ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ನನ್ ಸೆಂಟರ್‌ನಲ್ಲಿ ಮಾರ್ಚ್ 9 ರಂದು ನಡೆಯಲಿದೆ. ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತವನ್ನು ಕನ್ನಡತಿ ಸಿನಿ ಶೆಟ್ಟಿ (21) ಪ್ರತಿನಿಧಿಸುತ್ತಿದ್ದಾರೆ. ಭಾರತ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಐಟಿಡಿಸಿ) ಮಂಗಳವಾರ 71 ವಿಶ್ವ ಸುಂದರಿ ಕಾರ್ಯಕ್ರಮದ ಉದ್ಘಾಟನೆಯನ್ನು ಗುರುತಿಸಲು ನವದೆಹಲಿಯ ದಿ ಆಶಿಕ್‌ನಲ್ಲಿ ‘ದಿ ಓಪನಿಂಗ್ ಸೆರಮನಿ’ ಮತ್ತು ‘ಇಂಡಿಯಾ ವೆಲ್ಕಮ್ಸ್ ದಿ ವರ್ಲ್ಡ್ ಗಾಲಾ’ ಅನ್ನು ಆಯೋಜಿಸಲಿದೆ. ಫ್ಯಾಷನ್ ಡಿಸೈನರ್ ಅರ್ಚನಾ ಕೊಚ್ಚರ್ ಅವರು 71 ನೇ ವಿಶ್ವ ಸುಂದರಿ ಸ್ಪರ್ಧೆಯ ಅಧಿಕೃತ ಫ್ಯಾಷನ್ ಡಿಸೈನರ್ ಆಗಿದ್ದಾರೆ.

ಉಡುಪಿ ಮೂಲದ ಸಿನಿ ಶೆಟ್ಟಿ!

ಕರ್ನಾಟಕದ ಉಡುಪಿ ಮೂಲದ ಸಿನಿ ಶೆಟ್ಟಿ ಈ ಹಿಂದೆ ಮುಂಬೈನಲ್ಲಿ ನಡೆದ ‘ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್-2022’ ‘ಮಿಸ್ ಇಂಡಿಯಾ’ ಕಿರೀಟ ಮುಡಿಗೇರಿಸಿಕೊಂಡಿದ್ದರು. ಸಿನಿ ಶೆಟ್ಟಿ ಅಕೌಂಟಿಂಗ್ ಮತ್ತು ಫೈನಾನ್ಸ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ್ದಾರೆ. ಭರತನಾಟ್ಯ ನೃತ್ಯದಲ್ಲೂ ತರಬೇತಿ ಪಡೆದಿದ್ದಾರೆ. ಪ್ರಸ್ತುತ ಅವರು ಮಾರ್ಕೆಟಿಂಗ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ.

ಭಾರತ 6 ಮಂದಿ ಗೆದ್ದಿದ್ದಾರೆ!

ಭಾರತದ ಆರು ಮಹಿಳೆಯರು ವಿಶ್ವ ಸುಂದರಿ ಕಿರೀಟವನ್ನು ಗೆದ್ದಿದ್ದಾರೆ. ರೀಟಾ ಫರಿಯಾ 1966 ರಲ್ಲಿ ಮೊದಲ ಬಾರಿಗೆ ಪ್ರತಿಷ್ಠಿತ ವಿಶ್ವ ಸುಂದರಿ ಪ್ರಶಸ್ತಿಯನ್ನು ಭಾರತಕ್ಕೆ ತಂದರು. 1994 ರಲ್ಲಿ ಐಶ್ವರ್ಯಾ ರೈ, 1997 ರಲ್ಲಿ ಡಯಾನಾ ಹೇಡನ್, 1999 ರಲ್ಲಿ ಯುಕ್ತಾ ಮುಖಿ ವಿಶ್ವ ಸುಂದರಿ ಕಿರೀಟವನ್ನು ಪಡೆದರು. 2006ರಲ್ಲಿ ಪ್ರಿಯಾಂಕಾ ಚೋಪ್ರಾ ಮತ್ತು 2017ರಲ್ಲಿ ಮಾನುಷಿ ಚಿಲ್ಲರ್ ಈ ಸಾಧನೆ ಮಾಡಿದವರಲ್ಲಿ ಪ್ರಮುಖರಾಗಿದ್ದಾರೆ.

Categories
ಅಡಿಕೆ-ದರ ಶಿವಮೊಗ್ಗ

ಅಡಿಕೆ ದರ 20-02-2024

ಅಡಿಕೆ ದರ
(20-02-2024)
ಸರಕು 51100 81696
ಬೆಟ್ಟೆ 35069 52599
ರಾಶಿ 26006 48099
ಗೊರಬಲು 11568 35006

Categories
ಶಿಕ್ಷಣ ಶಿವಮೊಗ್ಗ

ಪೇಸ್ ಪಿ ಯು ಕಾಲೇಜು ಶಿವಮೊಗ್ಗ – ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನೆಗಳು

ಪೇಸ್ ಪಿ ಯು ಕಾಲೇಜು ಶಿವಮೊಗ್ಗ
– ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನೆಗಳು
– ಜೆ ಇ ಇ ಮೈನ್ಸ್ 2024

NAMMUR EXPRESS NEWS
ಆರ್ಯ ವಿಶು ಕುಮಾರ್ 99.1 ಶೇಕಡಾ, ಕಿರಣ್ ಎಸ್ ಕೆ 98 ಶೇಕಡಾ, ಪಣಿರಾಜ್ ಪಿ 97.2 ಶೇಕಡಾ, ಸ್ಕಂದ ವಸಿಷ್ಟ 97.1 ಶೇಕಡಾ, ಪ್ರೀತ ಎಸ್ ರೇವಣಕರ್ 97.1 ಶೇಕಡಾ, ಪ್ರೇರಣಾ ಬಿ 96.1 ಶೇಕಡಾ, ಅಪೇಕ್ಷಾ ಎ ಸಿ 95.7 ಶೇಕಡಾ, ಯಶಸ್ವಿ ಎನ್ 95.5 ಶೇಕಡಾ, ಕ್ರಿಸ್ಟನ್ ರೊಡ್ರಿಗಸ್ 94.7, ಚೇತನ್ ಎ ಪಿ 94.6, ಐ ಜಿ ಚಿರಾಗ್ 94.6, ಶಶಾಂಕ್ ಆರ್ 94.3, ಕುಂದನ್ ಆಗರ್ವಾಲ್ 93.6, ಅಮಿತ್ ಗೌಡ 93.5, ಪ್ರಮೋದ್ ಸತೀಶ್ 93.5, ಎಸ್ ಧ್ರುವ ಬಾಲಾಜಿ 93.3, ಶಬನುಂ ಬಾನು 93.2, ಸುಮಿತ್ ಬಿಳಗಿ 93.1, ಅಭಿನಂದನ್ ಎಲ್ 92.8, ಎಂ. ಡಿ ಸಲೀಂ ಮರ್ಚೆಂಟ್ 92.8, ಮೌಲ್ಯ ಜಿ 92.6, ಆಕಾಶ್ ಎಂ ಪಿ 91.9, ಇಶಾನ್ ಎಸ್ ಕೆ 91.8, ಸೋನಿಯಾ ವಿ 91.3, ಶೀಬಾ ಫಿರ್ದೋಸ್ 91.9, ಪ್ರಜ್ವಲ್ ಎ.ಯು 91.

Categories
ಶಿಕ್ಷಣ ಶಿವಮೊಗ್ಗ

ದಿ ಟೀಮ್ ಅಕಾಡೆಮಿ

ದಿ ಟೀಮ್ ಅಕಾಡೆಮಿ
ದಿ ಟೀಮ್ ಪಿ ಯು ಕಾಲೇಜು JEE ಮೈನ್ಸ್ ಅತ್ಯುತ್ತಮ ಫಲಿತಾಂಶ

NAMMUR EXPRESS NEWS:
JEE ಮೈನ್ಸ್ ನಲ್ಲಿ ದಿ ಟೀಮ್ ಅಕಾಡೆಮಿ ದಿ ಟೀಮ್ ಪಿ ಯು ಕಾಲೇಜ್ ಮೊದಲ ಭಾರಿ ಅಗ್ರಸ್ಥಾನ ಪಡೆದಿದ್ದಾರೆ. ವಿಷಯವಾರು ಅತ್ಯಧಿಕ ಶೇಕಡಾವಾರು ಭೌತಶಾಸ್ತ್ರ,ರಸಾಯನಶಾಸ್ತ್ರ, ಗಣಿತ 99.31 / 99.84 / 99.19

ಪಕ್ಕಿರೇಶ್ .ಟಿ 99.16 ಶೇಕಡಾ, ಲಿಂಗರಾಜ್ ಆರ್.ಎಮ್ 98.90 ಶೇಕಡಾ, ರಜತ್ ಟಿ. ಬಿ 97.94 ಶೇಕಡಾ, ವಿರೇಶ್ ಪಾಟೀಲ್ ಶೇ.97.83, ತೇಜಸ್ ಟಿ 97.52 ಶೇ, ಚರಣದೇವ್ ಎಂ.ಆರ್ 97.16 ಶೇಕಡಾ, ರುತು ಡಿ ರಾವ್ 97.11 ಶೇಕಡಾ, ಸಂದೇಶ್ ಎಮ್. ಎಚ್ 97.07 ಶೇ

ಜೆಇಇ ಮೇನ್ಸ್-2024
ಅರ್ಹ ವಿದ್ಯಾರ್ಥಿಗಳು ಅತ್ಯುತ್ತಮ ಫಲಿತಾಂಶಗಳು ಪಡೆದ್ದಿದ್ದಾರೆ.

ದಾವಣಗೆರೆ : 9035006723, 9035006724, 9035109411, 9900565795, 9538546758

ಶಿವಮೊಗ್ಗ : 9035006726, 9035006727, 9902303441, 9963505593, 9591319279

Categories
ಮಂಗಳೂರು ಶಿಕ್ಷಣ

ಶಾರದಾ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಮೇಲುಗೈ

ಶಾರದಾ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಮೇಲುಗೈ

NAMMUR EXPRESS NEWS
ಮಂಗಳೂರು: ರಾಷ್ಟ್ರಮಟ್ಟದ ಜೆಇಇ ಮೈನ್ಸ್ ಪರೀಕ್ಷೆಯಲ್ಲಿ ಶಾರದಾ ಪದವಿ ಪೂರ್ವ ಕಾಲೇಜಿನ 40ಕ್ಕೂ ಅಧಿಕ ವಿದ್ಯಾರ್ಥಿಗಳು ಜೆಇಇ ಅಡ್ವಾನ್ಸ್‌ಗೆ ಅರ್ಹತೆ ಪಡೆದಿದ್ದಾರೆ.

ಕೆ ತೇಜಸ್ವಿ ನಾರಾಯಣ್ – 99.61, ತುಷಾರ್ ಪಿ- 96.08, ಶಮಂತ್ ಜಿ ರೈಕರ್ -92.80, ಆದಿತ್ಯ ಎ ರಾವ್ – 91. 75, ಸುಶೀಮ್ ಕದ್ರಿ-91.54, ಧ್ವನೀಷ್ ಶೆಟ್ಟಿ-90.53, ತುಷಾರ್ ಮಯ್ಯ – 90.24, ಕನಿಷ್ ಕೆ ಎನ್ – 90, ಕೃಷ್ಣಪ್ರಿಯ – 90, ನಿತಿನ್ ಪಂಕಜ್, ಅನಿರುದ್ಧ್ ಎಂ ಎಸ್, ಶ್ರೇಯಸ್ ಸುವರ್ಣ, ಆಶಿಕ್ ಶೆಟ್ಟಿಗಾರ್, ಉತ್ತಮ ಪರ್ಸೆಂಟಲ್ ಗಳಿಸಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ, ಪ್ರಾಂಶುಪಾಲರು ಉಪ ಪ್ರಾಂಶುಪಾಲರು ಹಾಗೂ ಶಿಕ್ಷಕರು ಅಭಿನಂದನೆ ಸಲ್ಲಿಸಿದ್ದಾರೆ.

Categories
ತೀರ್ಥಹಳ್ಳಿ

ಬೆಜ್ಜವಳ್ಳಿ ಗ್ರಾಮ ಪಂಚಾಯತಿಯಲ್ಲಿ ಸಂವಿಧಾನ ಜಾಗೃತಿಜಾಥ..!

ಬೆಜ್ಜವಳ್ಳಿ ಗ್ರಾಮ ಪಂಚಾಯತಿಯಲ್ಲಿ ಸಂವಿಧಾನ ಜಾಗೃತಿಜಾಥ..!
– ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ
– ಸಂಭ್ರಮದ ಸ್ವಾಗತದ ಜೊತೆಗೆ ಗ್ರಾಮಸ್ಥರ ಸಹಯೋಗ

NAMMUR EXPRESS NEWS
ತೀರ್ಥಹಳ್ಳಿ: ಭಾರತ ಸಂವಿಧಾನ ಜಾರಿಗೆ ಬಂದ 75 ವರ್ಷ ನಿಮಿತ್ತ ಬೆಜ್ಜವಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಸೋಮವಾರ ಸಂವಿಧಾನ ಜಾಗೃತಿ ಜಾಥಾವನ್ನು ಅದ್ದೂರಿಯಾಗಿ ಸ್ವಾಗತ ಮಾಡಲಾಯಿತು. ಕಾರ್ಯಕ್ರಮದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಮತ್ತು ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪ ನಮನವನ್ನ ಸಲ್ಲಿಸಿ ಜ್ಯೋತಿ ಬೆಳಗುವುದರೊಂದಿಗೆ ಅಧ್ಯಕ್ಷರಾದ ಶ್ರೀ ಪ್ರಶಾಂತ್ ಡಿ.ಎಸ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಉಪಾಧ್ಯಕ್ಷರಾದ ಶ್ರೀ ಸುಬ್ರಹ್ಮಣ್ಯ ಶೆಟ್ಟಿ ಬಿ.ಎಸ್,‌ ಸದಸ್ಯರುಗಳಾದ ಹೆಚ್.ಎಸ್.ಉಮೇಶ್, ಶ್ರೀ ಮಹೇಶ್ ಮೇಲಿನ ಕೊಪ್ಪ, ನೇತ್ರಾವತಿ, ಆಶಾ, ಮಮತಾ, ಗೀತಾ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಆಶಾಲತಾ, ‌‌ಪಂಚಾಯತಿ ಅಭಿವೃದ್ಧಿ ಅಧಿಕಾರಿ ಗಂಗಾಧರ ನಾಯ್ಕ ವೈ.ಎಲ್, ಶಿಕ್ಷಣ ಸಂಯೋಜಕಿ ಶ್ರೀಮತಿ ಜ್ಯೋತಿ, ಉಪತಹಸೀಲ್ದಾರ್ ಶಿವಪ್ರಸಾದ್ ಹಾಗೂ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಿರಿಯ ಹಾಗೂ ಹಿರಿಯ ಪ್ರೌಢಶಾಲಾ ಮಕ್ಕಳು‌‌, ಶಾಲಾ‌ ಶಿಕ್ಷಕರ ವೃಂದ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ವಿವಿಧ ಸ್ವಸಹಾಯ ಸಂಘದವರು, ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗದವರು ಪುಷ್ಪ ಅರ್ಪಣೆ ಮಾಡುವುದರ ಮೂಲಕ ಬರಮಾಡಿಕೊಂಡು ‌‌, ಬೈಕ್ ರ್‍ಯಾಲಿ, ಮಕ್ಕಳ‌ ಜಾಥಾ ಮೂಲಕ ಗ್ರಾಮ ಪಂಚಾಯತಿ ಆವರಣಕ್ಕೆ ಅದ್ಧೂರಿಯಾಗಿ ಮೆರವಣಿಗೆ ಮೂಲಕ ಸ್ವಾಗತ ಮಾಡಲಾಯಿತು. ನಂತರ ವೇದಿಕೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.

ಕಾರ್ಯಕ್ರಮದ ಉದ್ಘಾಟನೆಯನ್ನು ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಹಾಗೂ ಸದಸ್ಯರು, ವಿವಿಧ ಇಲಾಖಾ ಅಧಿಕಾರಿಗಳು ಮಾಡಿದರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಶಾಂತ್ ಡಿ.ಎಸ್ ವಹಿಸಿದ್ದರು, ಮಾಳೂರು ಪ.ಪೂ.ಕಾ.ಉಪನ್ಯಾಸಕರಾದ ಚಂದ್ರಶೇಖರ್ ರವರು ಸಂವಿಧಾನ ಕುರಿತು ಉಪನ್ಯಾಸವನ್ನು ನೀಡಿದರು. ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಮೇಲಿನ ಕೊಪ್ಪ ಗ್ರಾ.ಪಂ. ಸದಸ್ಯರಾದ ಮಹೇಶ್ ಸಂವಿಧಾನ ಕುರಿತು ಮಕ್ಕಳಿಗೆ ಮಾಹಿತಿ ನೀಡಿದರು. ವಿವಿಧ ಶಾಲಾ ಶಿಕ್ಷಕರು ಭಾಗವಹಿಸಿದ್ದರು, ಸಂವಿಧಾನ ಕುರಿತು ಪ್ರಬಂಧ ಸ್ಪರ್ಧೆ ಮತ್ತು ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ಗೆದ್ದವರಿಗೆ ಬಹುಮಾನ ವಿತರಣೆ ಮಾಡಲಾಯಿತು. ಪಂಚಾಯತಿ ಎಲ್ಲಾ ಸದಸ್ಯರು, ಶಾಲಾ ಸಿಬ್ಬಂದಿ, ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರು, ಗ್ರಾಮಸ್ಥರು ಉಪಸ್ಥಿತರಿದ್ದರು.