Categories
ಬೆಂಗಳೂರು ರಾಜ್ಯ

ನಕಲಿ ಡಾಕ್ಟರೇಟ್ ಪಡೆದವರ ವಿರುದ್ಧ ಈಗ ಕೇಸ್!?

ನಕಲಿ ಡಾಕ್ಟರೇಟ್ ಪಡೆದವರ ವಿರುದ್ಧ ಈಗ ಕೇಸ್!?
– ಕೆಲವು ವಿವಿಗಳಿಂದ ನಕಲಿ ಡಾಕ್ಟ್ರೇಟ್ ಮಾರಾಟ
– ಅರ್ಹರಲ್ಲದವರಿಗೂ ಪದವಿ: ಸದನದಲ್ಲಿ ಭಾರೀ ಚರ್ಚೆ!
– ಮನೆ, ಕಟ್ಟಡ ಕಟ್ಟುವಾಗ ಈ ಲೈಸೆನ್ಸ್ ಬೇಕು!
– 10ಕ್ಕಿಂತ ಹೆಚ್ಚು ಕಾರ್ಮಿಕರನ್ನು ಹೊಂದಿರುವ ಕಟ್ಟಡ ನಿರ್ಮಾಣ ಮಾಲೀಕರಿಗೆ ಪ್ರಮಾಣ ಪತ್ರ ಕಡ್ಡಾಯ

NAMMUR EXPRESS NEWS
ಬೆಂಗಳೂರು: ವಿಶ್ವವಿದ್ಯಾನಿಲಯಗಳಿಂದ ನೀಡುವ ನಕಲಿ ಗೌರವ ಡಾಕ್ಟರೇಟ್ ಪದವಿಗಳನ್ನು ಪಡೆಯುವುದರ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿದ್ದಾರೆ. ಪ್ರಶ್ನೋತ್ತರ ಅವಧಿಯಲ್ಲಿ ಸದಸ್ಯ ಮಂಜುನಾಥ್ ಭಂಡಾರಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಇತ್ತೀಚೆಗೆ ವಿಶ್ವವಿದ್ಯಾನಿಲಯಗಳಲ್ಲಿ ವ್ಯಾಪಕವಾಗಿ ನಕಲಿ ಡಾಕ್ಟರೇಟ್ ಪದವಿಗಳನ್ನು ನೀಡುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಇದನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ ಎಂದು ತಿಳಿಸಿದರು.

ನಕಲಿ ಗೌರವ ಡಾಕ್ಟರೇಟ್ ಕೊಡುವ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರ ಎಂದು ಮಂಜುನಾಥ್ ಕೇಳಿದ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಸಚಿವರು, ಡಾಕ್ಟರೇಟ್ ಪದವಿ ಪಡೆದವರು ಡಾಕ್ಟರ್ ಎಂದು ಹಾಕೊಳ್ಳಬಹುದಾ ಎಂಬುದರ ಬಗ್ಗೆ ಸುಪ್ರಿಂಕೋರ್ಟ್ ತೀರ್ಪು ಬರಲಿದೆ. ಉನ್ನತ ಶಿಕ್ಷಣ ಪರಿಷತ್ ಸಭೆ ಕರೆದು, ನಕಲಿ ಗೌರವ ಡಾಕ್ಟರೇಟ್ ಪಡೆಯವ ಪ್ರಕರಣಗಳಿಗೆ ಕಡಿವಾಣ ಹಾಕುತ್ತೇವೆ ಎಂದು ಆಶ್ವಾಸನೆ ನೀಡಿದರು.ಜೊತೆಗೆ ಖಾಸಗಿ ವಿಶ್ವವಿದ್ಯಾನಿಲಯಗಳ ಮುಖ್ಯಸ್ಥರ ಕರೆದು ಚರ್ಚೆ ಮಾಡುತ್ತೇವೆ. ಇಂತಹ ಪ್ರಕರಣಗಳು ಮರುಕಳಿಸಂತೆ ಸರ್ಕಾರ ಸೂಕ್ತ ಕ್ರಮ ಜರುಗಿಸಲಿದೆ ಎಂದು ಆಶ್ವಾಸನೆ ನೀಡಿದರು.

 10 ಕಿಂತ ಹೆಚು. ಕಾರ್ಮಿಕರನ್ನು ಹೊಂದಿರುವ ಕಟ್ಟಡ ನಿರ್ಮಾಣ ಮಾಲೀಕರಿಗೆ ಪ್ರಮಾಣ ಪತ್ರ ಕಡ್ಡಾಯ

ಉಡುಪಿ: ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ (ಉದ್ಯೋಗದ ಕ್ರಮೀಕರಣ ಮತ್ತು ಸೇವಾ ಷರತ್ತುಗಳು) ಕಾಯ್ದೆ 1996 ಮತ್ತು ಕರ್ನಾಟಕ ನಿಯಮಗಳು 2006 ರಡಿ 10 ಕ್ಕಿಂತ ಹೆಚ್ಚಿನ ಕಾರ್ಮಿಕರನ್ನು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಲ್ಲಿ ಕಡ್ಡಾಯವಾಗಿ ಕಟ್ಟಡ ಮಾಲೀಕರು, ನಿಯೋಜಕರು ಹಾಗೂ ಗುತ್ತಿಗೆದಾರರು ಕಟ್ಟಡ ನಿರ್ಮಾಣ ಕಾಮಗಾರಿ ಸಂಸ್ಥೆಯನ್ನಾಗಿ ನೋಂದಾಯಿಸಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ನಿಗದಿತ ಶುಲ್ಕವನ್ನು ಭರಿಸಿ, ನೋಂದಣಿ ಪ್ರಮಾಣ ಪತ್ರವನ್ನು ಕಾರ್ಮಿಕ ಇಲಾಖೆಯಿಂದ ಪಡೆಯುವುದು ಕಡ್ಡಾಯವಾಗಿರುತ್ತದೆ.

ವ್ಯಾಸ್ತವ್ಯದ ಕಟ್ಟಡ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದಂತೆ ರೂ.10 ಲಕ್ಷ ನಿರ್ಮಾಣ ವೆಚ್ಚ ಮೀರಿದ ಕಟ್ಟಡ ಮತ್ತು ಯಾವುದೇ ವಾಣಿಜ್ಯ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಕೈಗೊಳ್ಳುವ ಕಟ್ಟಡದ ಮಾಲೀಕರು ಕಟ್ಟಡ ನಿರ್ಮಾಣ ಕಾರ್ಯ ಪೂರ್ಣಗೊಂಡ ಬಳಿಕ ಸ್ಥಳೀಯ ಸಂಸ್ಥೆಯ ಪರವಾನಗಿ ಪ್ರಾಧಿಕಾರ ಕಛೇರಿಗಳಿಂದ occupancy certificate ಅನ್ನು ಕಟ್ಟಡದ ನಿರ್ಮಾಣ ಮಾಲೀಕರು ಪಡೆಯುವ ಪೂರ್ವದಲ್ಲಿ ಕಾರ್ಮಿಕ ಅಧಿಕಾರಿ ಹಾಗೂ ಸುಂಕ ಮೌಲ್ಯಮಾಪನಾಧಿಕಾರಿಗಳಿಗೆ ಕಟ್ಟಡದ ಮಾಲೀಕರು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಸುಂಕ ಕಾಯ್ದೆಯನ್ವಯ ನಮೂನೆ-1 ಹಾಗೂ ನಮೂನೆ-4 ರಲ್ಲಿ ಭರ್ತಿ ಮಾಡಿದ ಮಾಹಿತಿ ಹಾಗೂ ಅಗತ್ಯ ದಾಖಲಾತಿಯನ್ನು ಸಲ್ಲಿಸಿ, ಸುಂಕ ಮೌಲ್ಯಮಾಪನ ಆದೇಶ ಮಾಡಿಸಿಕೊಂಡು ಸುಂಕದ ಪೂರ್ಣ ಮೊತ್ತ ಪಾವತಿ ಮಾಡಿರುವ ಬಗ್ಗೆ ದೃಢಪತ್ರವನ್ನು ಪಡೆದು ಸ್ಥಳೀಯ ಸಂಸ್ಥೆಯ ಪರವಾನಗಿ ಪ್ರಾಧಿಕಾರ ಕಚೇರಿಗಳಿಂದ occupancy certificate ಅನ್ನು ಪಡೆದುಕೊಳ್ಳುವಂತೆ ಅಪರ ಜಿಲ್ಲಾಧಿಕಾರಿಗಳ ಕಛೇರಿ ಪ್ರಕಟಣೆ ತಿಳಿಸಿದೆ.

Categories
ತೀರ್ಥಹಳ್ಳಿ

ಅಸಲು ಪಾವತಿಸಿದರೆ ಬಡ್ಡಿಮನ್ನಾ: ಫೆ.29 ಗಡುವು

ಅಸಲು ಪಾವತಿಸಿದರೆ ಬಡ್ಡಿಮನ್ನಾ: ಫೆ.29 ಗಡುವು
– ಸಹಕಾರ ಸಂಘಗಳ ಮೂಲಕ ಸಾಲ ಪಡೆದು ಸುಸ್ಥಿದಾರರಾಗಿರುವ ರೈತರಿಗೆ ಅವಕಾಶ
– ರೈತರಿಗೆ ವಿಜಯದೇವ್ ಮಾಹಿತಿ

NAMMUR EXPRESS NEWS
ತೀರ್ಥಹಳ್ಳಿ: ಸಹಕಾರ ಸಂಘಗಳ ಮೂಲಕ ಸಾಲ ಪಡೆದು ಸುಸ್ಥಿದಾರರಾಗಿರುವ ರೈತರು, ಮಧ್ಯಮಾವಧಿ ಮತ್ತು ದೀರ್ಘಾವಧಿ ಕೃಷಿ ಸಂಬಂಧಿತ ಸಾಲಗಳ ಅಸಲು ಪಾವತಿಸಿದರೆ ಬಡ್ಡಿ ಮನ್ನಾ ಮಾಡುವ ವಿಶೇಷ ಯೋಜನೆ ಸರ್ಕಾರ ಜಾರಿಗೆ ತಂದಿದ್ದು, ರೈತರು ಇಂತಹ ಉಪಯುಕ್ತ ಯೋಜನೆಯ ಸದುಪಯೋಗ ಪಡಿಸಿಕೊಳ್ಳುವಂತೆ ತೀರ್ಥಹಳ್ಳಿ ಭೂ ಅಭಿವೃದ್ಧಿ ಬ್ಯಾಂಕಿನ ಅಧ್ಯಕ್ಷರು, ರಾಜ್ಯ ಭೂ ಬ್ಯಾಂಕಿನ ನಿರ್ದೇಶಕರು, ಶಿವಮೊಗ್ಗ ಡಿಸಿಸಿ ಬ್ಯಾಂಕಿನ ನಿರ್ದೇಶಕರು ಆದ ಬಸವಾನಿ ವಿಜಯ್ ದೇವ್ ಮನವಿ ಮಾಡಿದ್ದಾರೆ. ಪ್ರಾಥಮಿಕ ಕೃಷಿ ಅಭಿವೃದ್ಧಿ ಬ್ಯಾಂಕುಗಳು, ಜಿಲ್ಲಾ ಬ್ಯಾಂಕ್ ಗಳಲ್ಲಿ ಸುಸ್ತಿಯಾಗಿರುವ ಮಧ್ಯಮಾವಧಿ ಮತ್ತು ದೀರ್ಘಾವಧಿ ಕೃಷಿ ಸಾಲಗಳಿಗೆ ಮಾತ್ರ ಈ ಯೋಜನೆ ಅನ್ವಯವಾಗಲಿದ್ದು, ಕ್ರೆಡಿಟ್ ಸೊಸೈಟಿ ಮತ್ತು ಮಾರ್ಕೆಟಿಂಗ್ ಸೊಸೈಟಿ ಗಳಿಗೆ ಅನ್ವಯವಾಗುವುದಿಲ್ಲ.

ಇದನ್ನು ಮನಗಾಣ ಬೇಕೆಂದು ವಿನಂತಿಸಿದ್ದಾರೆ.2023 ಡಿಸೆಂಬರ್ 31ಕ್ಕೆ ಸುಸ್ತಿದಾರರಾಗಿರುವವರು ಅಸಲು ಕಟ್ಟಿದರೆ ಬಡ್ಡಿಮನ್ನದ ಈ ಯೋಜನೆ ಸದುಪಯೋಗಪಡಿಸಿಕೊಳ್ಳಬಹುದು. ಇದು ಸರ್ಕಾರದ ಕೊನೆಯ ಅವಕಾಶವಾಗಿದ್ದು, ಸುಸ್ತಿದಾರರಾಗಿರುವ ರೈತರು ಈ ಅವಕಾಶವನ್ನು ಕಳೆದುಕೊಳ್ಳಬಾರದೆಂದು ಅವರು ಮನವಿ ಮಾಡಿದ್ದಾರೆ. ಈಗಾಗಲೇ ಅನೇಕ ಬಾರಿ ಈ ಯೋಜನೆ ಕುರಿತು ಮಾಹಿತಿ ನೀಡಿದ್ದು, ಸಾಕಷ್ಟು ರೈತರು ಇದರ ಸದುಪಯೋಗಪಡಿಸಿಕೊಂಡಿದ್ದಾರೆ. ಈಗಾಗಲೇ ಸಹಕಾರಿ ಬ್ಯಾಂಕುಗಳಲ್ಲಿ ಅಸಲಿಗಿಂತಲೂ ಬಡ್ಡಿಯೇ ಹೆಚ್ಚಾಗಿದ್ದು, ಈ ಸಂಕಷ್ಟದಿಂದ ರೈತರನ್ನು ಪಾರು ಮಾಡುವುದೇ ಯೋಜನೆಯ ಉದ್ದೇಶವಾಗಿದೆ ಎಂದಿದ್ದಾರೆ.

Categories
ಕರಾವಳಿ ಬೆಂಗಳೂರು

ಸೌಜನ್ಯ ಮೇಲಿನ ಅತ್ಯಾಚಾರ, ಕೊಲೆ: ಮತ್ತೆ ಕೇಸ್ ಚುರುಕು!

ಸೌಜನ್ಯ ಮೇಲಿನ ಅತ್ಯಾಚಾರ, ಕೊಲೆ: ಮತ್ತೆ ಕೇಸ್ ಚುರುಕು!
– ರಾಜ್ಯ ಸರ್ಕಾರ, ಸಿಬಿಐಗೆ ಹೈಕೋರ್ಟ್ ನೋಟಿಸ್
– ತಂದೆ ಸಲ್ಲಿಸಿದ್ದ ಅರ್ಜಿ ಈಗ ಮತ್ತೆ ಸಂಚಲನ

NAMMUR EXPRESS NEWS
ಬೆಂಗಳೂರು: ಬೆಳ್ತಂಗಡಿ ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಮರು ತನಿಖೆ ನಡೆಸಬೇಕು ಎಂದು ಕೋರಿ ಸಲ್ಲಿಸಿರುವ ಅರ್ಜಿಯ ಸಂಬಂಧ ಸಿಬಿಐ ಮತ್ತು ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ. ಪ್ರಕರಣದ ಮರು ತನಿಖೆ ಕೋರಿ ಮೃತ ವಿದ್ಯಾರ್ಥಿನಿಯ ತಂದೆ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ಏಕಸದಸ್ಯ ಪೀಠ, ರಾಜ್ಯ ಗೃಹ ಇಲಾಖೆ ಕಾರ್ಯದರ್ಶಿ, ರಾಜ್ಯ ಪೊಲೀಸ್ ಮಹಾ ನಿರ್ದೇಶಕರು, ಸಿಐಡಿ ಎಡಿಜಿಪಿ, ಅಪರಾಧ ಮತ್ತು ತಾಂತ್ರಿಕ ಸೇವೆಗಳ ವಿಭಾಗದ ಎಡಿಜಿಪಿ, ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ, ಸಿಐಡಿ ಉಪ ಪೊಲೀಸ್ ವರಿಷ್ಠಾಧಿಕಾರಿ, ಬೆಳ್ತಂಗಡಿ ಪೊಲೀಸ್ ಠಾಣಾಧಿಕಾರಿ ಮತ್ತು ಸಿಬಿಐಗೆ ನೋಟಿಸ್ ಜಾರಿಗೊಳಿಸಿತು. ಅಲ್ಲದೆ, ಪ್ರಕರಣದ ಆರೋಪಿ ಸಂತೋಷ್ ರಾವ್ ಅವರನ್ನು ಖುಲಾಸೆಗೊಳಿಸಿ ವಿಶೇಷ ನ್ಯಾಯಾಲಯ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಸಿಬಿಐ ಕ್ರಿಮಿನಲ್ ಮೇಲ್ಮನವಿ ಅರ್ಜಿ ಸಲ್ಲಿಸಿದೆ.

ಈ ಅರ್ಜಿ ವಿಭಾಗೀಯ ಪೀಠದಲ್ಲಿ ವಿಚಾರಣಾ ಹಂತದಲ್ಲಿದ್ದು, ಅದರೊಂದಿಗೆ ಪಟ್ಟಿ ಮಾಡುವಂತೆ ಸೂಚನೆ ನೀಡಿ ವಿಚಾರಣೆಯನ್ನು ಮುಂದೂಡಿತು. 2012ರ ಅ.9ರಂದು ವಿದ್ಯಾರ್ಥಿನಿ ಸೌಜನ್ಯಳನ್ನು ಅಪಹರಿಸಿ ಅತ್ಯಾಚಾರವೆಸಗಿ ಹತ್ಯೆ ಮಾಡಲಾಗಿತ್ತು. ಪ್ರಕರಣದ ಆರೋಪಿ ಎಂದು ಬೆಳ್ತಂಗಡಿ ಠಾಣಾ ಪೊಲೀಸರು ಸಂತೋಷ್ ರಾವ್ ಎಂಬಾತನನ್ನು ಬಂಧಿಸಿದ್ದರು. ಆರಂಭದಲ್ಲಿ ಸಿಐಡಿ ಈ ಕುರಿತು ತನಿಖೆ ನಡೆಸಿ ಬಳಿಕ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿತ್ತು. ಸಿಬಿಐ ತನಿಖೆ ನಡೆಸಿ ಆರೋಪಿ ಸಂತೋಷ್ ರಾವ್ ವಿರುದ್ಧ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಆದರೆ, ಸಾಕ್ಷಿಗಳ ಕೊರತೆ ಹಿನ್ನೆಲೆಯಲ್ಲಿ ನ್ಯಾಯಾಲಯ ಆರೋಪಿಯನ್ನು ಖುಲಾಸೆಗೊಳಿಸಿತ್ತು.

Categories
ತೀರ್ಥಹಳ್ಳಿ

ಮೇಲಿನ ಕುರುವಳ್ಳಿ ಶಾಲೆಗೆ ಹೊಸ ಕಳೆ..!

ಮೇಲಿನ ಕುರುವಳ್ಳಿ ಶಾಲೆಗೆ ಹೊಸ ಕಳೆ..!
– ಶಾಲಾ ನೂತನ ವಿವೇಕ ಕೊಠಡಿ, ಮುಖ ಮಂಟಪ ಉದ್ಘಾಟನೆ
– ಚಿಣ್ಣರ ಚಿಲಿಪಿಲಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸಿದ್ಧತೆ
– ಫೆ. 24ರ ಸಂಜೆ 4:30ಕ್ಕೆ ಕಾರ್ಯಕ್ರಮ: ಸರ್ವರಿಗೂ ಸ್ವಾಗತ

NAMMUR EXPRESS NEWS
ತೀರ್ಥಹಳ್ಳಿ: ಜಿಲ್ಲಾ ಪಂಚಾಯತ್ ಶಿವಮೊಗ್ಗ, ತಾಲೂಕು ಪಂಚಾಯತ್ ತೀರ್ಥಹಳ್ಳಿ, ಶಾಲಾ ಶಿಕ್ಷಣ ಇಲಾಖೆ ತೀರ್ಥಹಳ್ಳಿ, ಗ್ರಾಮ ಪಂಚಾಯಿತಿ ಮೇಲಿನ ಕುರುವಳ್ಳಿ, ಸಮೂಹ ಸಂಪನ್ಮೂಲ ಕೇಂದ್ರ ಮೇಲಿನ ಕುರುವಳ್ಳಿ ಸಹಯೋಗದಲ್ಲಿ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಮೇಲಿನ ಕುರುವಳ್ಳಿಯಲ್ಲಿ ಶಾಲಾ ನೂತನ ವಿವೇಕ ಕೊಠಡಿ ಹಾಗೂ ಮುಖ ಮಂಟಪ ಉದ್ಘಾಟನೆ, ಅಭಿನಂದನಾ ಮತ್ತು ಚಿಣ್ಣರ ಚಿಲಿಪಿಲಿ ಸಾಂಸ್ಕೃತಿಕ ಕಾರ್ಯಕ್ರಮವು 24-02-2024 ರ ಶನಿವಾರ ಸಂಜೆ 4:30ಕ್ಕೆ ಮೇಲಿನ ಕುರುವಳ್ಳಿ ಶಾಲಾ ಆವರಣದಲ್ಲಿ ನಡೆಯಲಿದೆ. ಶಾಲೆಯ ಮುಖ್ಯ ಶಿಕ್ಷಕರಾದ ಹೆಚ್ ವಿ ಮಂಜುನಾಥ್ ಅವರು ಮಾತನಾಡಿ,ಸರ್ಕಾರದ ವಿದ್ಯಾರ್ಥಿ ಕೇಂದ್ರದಿಂದ ಅನೇಕ ಯೋಜನೆಯಿಂದ ಇಂದು ಶಿಕ್ಷಣ ಕ್ಷೇತ್ರದಲ್ಲಿ ಗಮನಾರ್ಹವಾದ ಬದಲಾವಣೆಯನ್ನು ಕಾಣಬಹುದು. ಎಸ್ ಡಿ ಎಂ ಸಿ ಅಧ್ಯಕ್ಷರಾದ ಸುರೇಶ್ ಅವರು ಈ ಶಾಲೆಯನ್ನು ಭೌತಿಕವಾಗಿ ಒಂದು ಮಾದರಿ ಶಾಲೆಯನ್ನಾಗಿಸಬೇಕು, ಇಲ್ಲಿ ಓದಿರುವಂತಹ ವಿದ್ಯಾರ್ಥಿಗಳು ಸಮಾಜದಲ್ಲಿ ಗುರುತಿಸುವಂತಹ ಆಗಬೇಕು ಎಂಬುದು ಅವರ ಕನಸಾಗಿತ್ತು.

ಶಾಲೆಯ ಕನಸಿನ ಸಹಕಾರಕ್ಕಾಗಿ ಶ್ರಮ ವಹಿಸಿ ಅದರಲ್ಲಿ ಯಶಸ್ವಿಯಾಗಿದ್ದಾರೆ ಎಂದರು. ನಾಡಿನ ಭವ್ಯ ಇತಿಹಾಸ ಮತ್ತು ಐತಿಹಾಸಿಕ ಮತ್ತು ಪರಂಪರೆಯನ್ನು ಬಿಂಬಿಸುವಂತಹ ಗೋಡೆ ಬರಹವನ್ನು ಬರೆಸಿ ಸುಂದರಗೊಳಿಸಿ ಕೊಟ್ಟಿದ್ದಾರೆ. ಇಡೀ ಶಾಲೆಗೆ ಸುಣ್ಣಬಣ್ಣ ಮಾಡಿಸಿಕೊಟ್ಟಿದ್ದಾರೆ, ಇಂಟರ್ಲಾಕ್ ಹಾಕಿಸಿದ್ದಾರೆ, ಮುಖ ಮಂಟಪವನ್ನು ಮಾಡಿಸಿ ಶಾಲೆಯ ಸೌಂದರ್ಯ ಹೆಚ್ಚಿಸಿದ್ದಾರೆ, ಅವರ ಸ್ವಂತ ದುಡಿಮೆಯಿಂದ ಶಾಲೆಗೆ ರಂಗಮಂದಿರಕ್ಕೆ ಸಹಕರಿಸಿದ್ದಾರೆ. ಮಹಾನ್ ವ್ಯಕ್ತಿಗಳ ವಿಗ್ರಹಗಳನ್ನು ಶಾಲೆಯಲ್ಲಿ ಸ್ಥಾಪಿಸಿದ್ದಾರೆ. ಈ ರೀತಿಯ ಕ್ರಿಯಾಶೀಲ ಅಧ್ಯಕ್ಷರು ಸರ್ಕಾರಿ ಶಾಲೆಯಲ್ಲಿ ಇದ್ದರೆ ಯಾವ ರೀತಿ ಭೌತಿಕ ಹಾಗೂ ಶೈಕ್ಷಣಿಕವಾಗಿ ಅಭಿವೃದ್ಧಿ ಮಾಡಬಹುದು ಎನ್ನುವುದಕ್ಕೆ ಮಾದರಿಯಾಗುತ್ತಾರೆ ಎಂದರು. ಎಸ್ ಡಿ ಎಂ ಸಿ ಅಧ್ಯಕ್ಷರಾದ ಸುರೇಶ್ ಶೇಟ್ ಅವರು ಮಾತನಾಡಿ ನಾನು ಇದೇ ಶಾಲೆಯಲ್ಲಿ ಓದಿದ್ದು. ನಾನು ಓದಿದ ಶಾಲೆಗೆ ಏನಾದರೂ ಅಭಿವೃದ್ಧಿ ಕಾರ್ಯ ಮಾಡಬೇಕೆಂದು ನನ್ನ ಸ್ನೇಹಿತರ ಸಹಾಯದೊಂದಿಗೆ ಶಾಲೆಯನ್ನು ಅಭಿವೃದ್ಧಿ ಮಾಡಲು ಸಹಕರಿಸಿದ್ದೇವೆ. ಈ ಕಾರ್ಯಕ್ರಮವನ್ನು ಮಾಡಲು ನಮಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರು ಹೆಚ್ಚಿನ ಸಹಕಾರವನ್ನು ನೀಡಿದ್ದಾರೆ ಎಂದರು.

ಶಿಕ್ಷಕಿ ವೀಣಾ ಅವರು ಮಾತನಾಡಿ, ನಮ್ಮ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾಗಿ ಹಿರಿಯ ವಿದ್ಯಾರ್ಥಿಯಾಗಿ ಪೋಷಕರಾಗಿ ಸುರೇಶ್ ಶೇಟ್ ಅವರು ಕಾರ್ಯ ನಿರ್ವಹಿಸಿದ್ದಾರೆ. ಶಾಲೆಯ ಅಭಿವೃದ್ಧಿಗೆ ಕಾರಣಕರ್ತರಾಗಿದ್ದಾರೆ ಎಂದರು. ಶಾಲಾ ನೂತನ ವಿವೇಕ ಕೊಠಡಿ ಹಾಗೂ ಮುಖ ಮಂಟಪ ಉದ್ಘಾಟನೆ ಅಭಿನಂದನ ಮತ್ತು ಚಿಣ್ಣರ ಚಿಲಿಪಿಲಿ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರಾದ ಎಸ್ ಮಧು ಬಂಗಾರಪ್ಪ ಹಾಗೂ ಯೋಜನೆ ಮತ್ತು ಸಾಂಕೀಕ ಇಲಾಖೆ ಸಚಿವರಾದ ಡಿ ಸುಧಾಕರ್ ಅವರು ನಡೆಸಿಕೊಡಲಿದ್ದಾರೆ. ಶಾಸಕ ಆರಗ ಜ್ಞಾನೇಂದ್ರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಸಂಸದ ಬಿ ವೈ ರಾಘವೇಂದ್ರ,ಶಾಸಕರಾದ ಬಿ ಕೆ ಸಂಗಮೇಶ್, ಗೋಪಾಲಕೃಷ್ಣ ಬೇಳೂರು, ಎಸ್ ಎಲ್ ಭೋಜೇಗೌಡ, ಎಸ್ ರುದ್ರೇಗೌಡರು, ಭಾರತೀ ಶೆಟ್ಟಿ, ಡಿಎಸ್ ಅರುಣ್ ರವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

ವಿಶೇಷ ಆಹ್ವಾನಿತರಾಗಿ ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ , ಡಿಸಿಸಿ ಬ್ಯಾಂಕ್ ಅಧ್ಯಕ್ಷರು ಡಾ. ಆರ್‌ಎಂ ಮಂಜುನಾಥ್ ಗೌಡ್ರು, ಆರಕ್ಷಕ ಉಪಾದಿಕ್ಷಕರು ಗಜಾನನ ವಾಮನ ಸುತಾರ, ಪಂ ರಾ ಇ ಉ ವಿಭಾಗ ಕಾರ್ಯನಿರ್ವಾಹಕ ಅಭಿಯಂತರರು ಅಣ್ಣಪ್ಪ ಹೆಚ್ಎ, ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯೋಜನಾಧಿಕಾರಿ ಮಾಲತಿ ದಿನೇಶ್ ಆಗಮಿಸಲಿದ್ದಾರೆ. ಶಾಲಾ ಅಭಿವೃದ್ಧಿಗೆ ದೇಣಿಗೆ ನೀಡಿದ ದಾನಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮಕ್ಕೆ ಆಗಮಿಸುವಂತೆ ಶಾಲಾ ಶಿಕ್ಷಕ ವೃಂದ ಮತ್ತು ಅಭಿವೃದ್ಧಿ ಸಮಿತಿ ಸರ್ವರನ್ನು ಸ್ವಾಗತಿಸಿದೆ. ಪತ್ರಿಕಾಗೋಷ್ಠಿಯಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ಮಂಜುನಾಥ್ ಹೆಚ್ ವಿ, ಶಿಕ್ಷಕರಾದ ವೀಣಾ, ಎಸ್ ಡಿ ಎಂ ಸಿ ಅಧ್ಯಕ್ಷರಾದ ಸುರೇಶ್ ಶೇಟ್, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಬಂಡೆ ವೆಂಕಟೇಶ್, ಗ್ರಾಮ ಪಂಚಾಯತಿ ಸದಸ್ಯ ಗೋಪಾಲ್ ಪೂಜಾರಿ ಹಾಗೂ ಎಸ್ ಡಿ ಎಂ ಸಿ ಉಪಾಧ್ಯಕ್ಷರು,ಸದಸ್ಯರು ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Categories
ತೀರ್ಥಹಳ್ಳಿ ಶಿಕ್ಷಣ

ಜೆ.ಇ.ಇ. ಮೇನ್ಸ್ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿದ ವಾಗ್ದೇವಿ ಪಿಯು ವಿದ್ಯಾರ್ಥಿಗಳು

ಜೆ.ಇ.ಇ. ಮೇನ್ಸ್ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿದ ವಾಗ್ದೇವಿ ಪಿಯು ವಿದ್ಯಾರ್ಥಿಗಳು

NAMMUR EXPRESS NEWS
2023-24 ನೆಯ ಸಾಲಿನ ಜೆ.ಇ.ಇ. ಮೇನ್ಸ್ ಪರೀಕ್ಷೆಯ ‘ಫೇಸ್ 1’ ಫಲಿತಾಂಶವು ಪ್ರಕಟಗೊಂಡಿದ್ದು, ಅದರಲ್ಲಿ ವಾಗ್ದೇವಿ ಪಿಯು ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಅತ್ಯುತ್ತಮ ಪರ್ಸಂಟೈಲ್ ಪಡೆಯುವುದರ ಮೂಲಕ ಉತ್ತಮ ಸಾಧನೆಯನ್ನು ಮಾಡಿರುತ್ತಾರೆ.
ವಿವರ ಕೆಳಗಿನಂತಿದೆ.
1. ಹರ್ಷ ಎಂ. ಆರ್. -97.74
2. ಸುಚಿಂತ್ ಎಸ್. – 93.87
3. ಜೀಶನ್ ಡಿಸಿಲ್ವ – 92.02
4. ಶ್ರೀವತ್ಸ . ಆರ್. – 82.98
5. ಶರಣ್ಯಾ ಎನ್.‌ ಎಸ್. – 81.33
ಇವರಿಗೆ ವಾಗ್ದೇವಿ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು, ಸದಸ್ಯರು, ಉಪನ್ಯಾಸಕರು ಹಾಗೂ ಪೋಷಕ ವೃಂದ ಅಭಿನಂದಿಸಿರುತ್ತಾರೆ.

Categories
ತೀರ್ಥಹಳ್ಳಿ

ತೂದುರು ಗ್ರಾಮ ಪಂಚಾಯಿತಿಯಲ್ಲಿ ಸಂವಿಧಾನ ಜಾಗೃತಿ ಕಾರ್ಯಕ್ರಮ.!

ತೂದುರು ಗ್ರಾಮ ಪಂಚಾಯಿತಿಯಲ್ಲಿ ಸಂವಿಧಾನ ಜಾಗೃತಿ ಕಾರ್ಯಕ್ರಮ.!
– ಬೈಕ್ ರ್‍ಯಾಲಿ ಹಾಗೂ ಶಾಲಾ ಮಕ್ಕಳ ವೇಷ ಭೂಷಣ ಮುಖಾಂತರ ಅದ್ದೂರಿ ಸ್ವಾಗತ

NAMMUR EXPRESS NEWS
ತೀರ್ಥಹಳ್ಳಿ : ಭಾರತ ಸಂವಿಧಾನ ಜಾರಿಗೆ ಬಂದ 75 ವರ್ಷದ ನಿಮಿತ್ತ ದಿನಾಂಕ : 19-02-2024 ರ ಸೋಮವಾರ ಸಂವಿಧಾನ ಜಾಗೃತಿ ಜಾಥ ತೂದುರು ಗ್ರಾಮ ಪಂಚಾಯಿತಿಗೆ ಆಗಮಿಸಿದ್ದು, ಜಾಗೃತಿ ಜಾಥ ವಾಹನವನ್ನು ಗ್ರಾಮ ಪಂಚಾಯತಿಯಿಂದ ಬೈಕ್ ರ್‍ಯಾಲಿ ಹಾಗೂ ಬ್ಯಾಂಡ್ ಸೆಟ್ ಮುಖಾಂತರ ಶಾಲಾ ಮಕ್ಕಳ ವೇಷ ಭೂಷಣ ಹಾಗೂ ಬಲೂನ್ ಒಳಗೊಂಡಂತೆ ಸರ್ಕಾರಿ ಪ್ರೌಢಶಾಲೆ ಆವರಣದವರೆಗೆ ಜಾಥದೊಂದಿಗೆ ಅದ್ದೂರಿಯಾಗಿ ಸ್ವಾಗತಿಸಲಾಯಿತು. ಕಾರ್ಯಕ್ರಮದ ಪ್ರಯುಕ್ತ ವೇದಿಕೆ ಕಾರ್ಯಕ್ರಮದಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಸಲ್ಲಿಸಿ, ಜ್ಯೋತಿ ಬೆಳಗುವುದರೊಂದಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಎನ್ ಶಶಿಕಲಾ ದೇವರಾಜ್, ಉಪಾಧ್ಯಕ್ಷರಾದ ಶ್ರೀ ಎಂ.ಡಿ ಅರವಿಂದ್ ಅವರು ಕಾರ್ಯಕ್ರಮ ಉದ್ಘಾಟಿಸಿದರು.

ಸಂವಿಧಾನದ ಕಾರ್ಯಕ್ರಮದಲ್ಲಿ ಸರ್ವರನ್ನು ಸ್ವಾಗತಿಸಿದರು ಮತ್ತು ಸಂವಿಧಾನ ಪೂರ್ವ ಪೀಠಿಕೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಪಂಚಾಯತಿಯ ಸದಸ್ಯರಾದ ಶ್ರೀ ಆರ್ ಏನ್ ಭುಜಂಗ ಅವರು ಸಂವಿಧಾನದ ಕುರಿತು ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಕುರಿತು ಪ್ರಾಸ್ತವಿಕ ನುಡಿಗಳನ್ನಾಡಿದರು. ತೀರ್ಥಹಳ್ಳಿ ತಾಲೂಕು ಸಮಾಜ ಕಲ್ಯಾಣ ಅಧಿಕಾರಿಯಾದ ಆಶಾಲತಾ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದು ಭಾಷಣ ಮಾಡಿದರು. ತೂದುರು ಸರ್ಕಾರಿ ಪ್ರೌಢ ಶಾಲಾ ಶಿಕ್ಷಕರು ಸಂವಿಧಾನದ ಬಗ್ಗೆ ಉಪನ್ಯಾಸ ನೀಡಿದರು. ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರಾದ ಶ್ರೀ ಮಧುರಾಜ್ ಹಾಗೂ ಶರತ್ ಕುಮಾರ್ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ತುದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀಮತಿ ಭಾಗ್ಯ, ಕು ಅಶ್ವಿನಿ, ಶ್ರೀಮತಿ ನೂತನ, ಶ್ರೀಮತಿ ಮಿತ್ರ ಹಾಗೂ ರಾಜೇಶ್ ಗ್ರಾಮ ಪಂಚಾಯಿತಿ ಸದಸ್ಯರು, ಶ್ರೀ ಮುಡುಬ ರಾಘವೇಂದ್ರ ಕಾಂಗ್ರೆಸ್ ಮುಖಂಡರು, ಶ್ರೀ ರತ್ನಾಕರ್ ಗೌಡ್ರು ಗ್ರಾಮದ ಮುಖಂಡರು, ಶ್ರೀ ಜಲೀಲ್ ಎಸ್.ಡಿ.ಎಂ. ಸಿ ಅಧ್ಯಕ್ಷರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ತೂದೂರು, ಶ್ರೀ ಕವಿರಾಜ ಎಸ್‌.ಡಿ.ಎಂ.ಸಿ ಅಧ್ಯಕ್ಷರು ಸರ್ಕಾರಿ ಪ್ರೌಢಶಾಲೆ ತೂದೂರು, ಎಲ್ಲಾ ಶಾಲೆಯ ಮುಖ್ಯೋಪಾಧ್ಯಾಯರು, ಸಹ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತರು, ಸ್ವ ಸಹಾಯ ಸಂಘದ ಸದಸ್ಯರು, ಪದಾಧಿಕಾರಿಗಳು, ಮಹಿಳಾ ಸಂಘದ ಸದಸ್ಯರುಗಳು, ಪದಾಧಿಕಾರಿಗಳು, ಗ್ರಾಮಸ್ಥರು ಗ್ರಾಮ ಪಂಚಾಯಿತಿ ಪಿ.ಡಿ.ಓ, ಕಾರ್ಯದರ್ಶಿ ಹಾಗೂ ಗ್ರಾಮ ಪಂಚಾಯಿತಿಯ ಸಿಬ್ಬಂದಿ ವರ್ಗ ಉಪಸ್ಥಿತಿಯಲ್ಲಿದ್ದರು.

Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ಡಿಕೆ ಶಿವಕುಮಾರ್ ಕಪ್ ಸೀಸನ್ – 02

ತೀರ್ಥಹಳ್ಳಿಯಲ್ಲಿ ಡಿಕೆ ಶಿವಕುಮಾರ್ ಕಪ್ ಸೀಸನ್ – 02
– ರಾಷ್ಟ್ರೀಯ ಮಟ್ಟದ ಹೊನಲು ಬೆಳಕಿನ ಟೆನ್ನಿಸ್ ಬಾಲ್ ಕ್ರಿಕೇಟ್ ಪಂದ್ಯಾವಳಿ
– ಫೆ.23,24,25ರಂದು ತೀರ್ಥಹಳ್ಳಿ ಸಾರ್ವಜನಿಕ ಕ್ರೀಡಾಂಗಣದಲ್ಲಿ ಆಯೋಜನೆ

NAMMUR EXPRESS NEWS
ತೀರ್ಥಹಳ್ಳಿ : ತೀರ್ಥಹಳ್ಳಿ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್, ದೇಶಕ್ಕಾಗಿ ನಾವು ಸಂಘಟನೆ ತೀರ್ಥಹಳ್ಳಿ, ಸ್ನೇಹಜೀವಿ ಗೆಳೆಯರ ಬಳಗ ತೀರ್ಥಹಳ್ಳಿ ಇವರ ಜಂಟಿ ಸಹಯೋಗದಲ್ಲಿ ಫೆಬ್ರವರಿ 23,24, 25 ರಂದು ರಾಷ್ಟ್ರೀಯ ಮಟ್ಟದ ಹೊನಲು ಬೆಳಕಿನ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ರಾಜ್ಯದ ಉಪ ಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಹೆಸರಿನಲ್ಲಿ ಡಿಕೆ ಶಿವಕುಮಾರ್ ಕಪ್ ಸೀಸನ್ 2 ಚಾಂಪಿಯನ್ಸ್ ಟ್ರೋಫಿ – 2024 ತೀರ್ಥಹಳ್ಳಿಯ ಸಾರ್ವಜನಿಕ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ. ತೀರ್ಥಹಳ್ಳಿಯ ಇತಿಹಾಸದಲ್ಲಿ 2022 ರಲ್ಲಿ ಈ ಕಪ್ ಆಯೋಜನೆ ಮಾಡಿದ್ದು ಅತ್ಯಂತ ಯಶಸ್ವಿಯಾಗಿ ನಡೆದಿತ್ತು, ಈಗ ಎರಡನೇ ಸೀಸನ್ ನಡೆಯುತ್ತಿದೆ. ರಾಷ್ಟ್ರದ್ಯಾಂತ ತಂಡಗಳು ಭಾಗವಹಿಸುತ್ತಿದೆ. ಕರ್ನಾಟಕದ ಅತ್ಯುತ್ತಮ ಟೆನ್ನಿಸ್ ಬಾಲ್ ಕ್ರಿಕೆಟ್ ಆಡುವಂತಹ ತಂಡಗಳಾದ ಜಯ ಕರ್ನಾಟಕ, ಫ್ರೆಂಡ್ಸ್ ಕ್ರಿಕೆಟರ್ಸ್, ಜಾನ್ಸನ್ ಕುಂದಾಪುರ, ನ್ಯಾಶ್ ಕ್ರಿಕೆಟರ್ಸ್ ಬೆಂಗಳೂರು ಹೀಗೆ ದಾವಣಗೆರೆ, ಚಿತ್ರದುರ್ಗ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಿಂದ ಭಾಗವಹಿಸುತ್ತಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಅತ್ಯುತ್ತಮ ತಂಡಗಳು ಭಾಗವಹಿಸುತ್ತಿದ್ದಾರೆ. ಇಡೀ ತೀರ್ಥಹಳ್ಳಿ ತಾಲೂಕಿಗೆ ಮೂರು ದಿನಗಳ ಕ್ರೀಡಾಹಬ್ಬ ನಡೆಯಲಿದೆ. ಮುಖ್ಯ ಆಯೋಜಕರಾಗಿ ಅಶ್ವಲ್ ಗೌಡ, ಪೂರ್ಣೇಶ್ ಕಳಕೆರೆ, ಮದನ್ ಶೆಟ್ಟಿ, ಶ್ರೇಯಸ್ ಸಿಬಿನಕೆರೆ, ಆಸಿಫ್ ತೀರ್ಥಹಳ್ಳಿ, ಧ್ರುವ ಶಿವಮೊಗ್ಗ, ಪದ್ಮನಾಭ ಇವರೆಲ್ಲ ಸೇರಿ ತೀರ್ಥಹಳ್ಳಿ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್, ದೇಶಕ್ಕಾಗಿ ನಾವು ಸಂಘಟನೆ ತೀರ್ಥಹಳ್ಳಿ, ಸ್ನೇಹಜೀವಿ ಗೆಳೆಯರ ಬಳಗ ತೀರ್ಥಹಳ್ಳಿ ಇವರ ಸಹಯೋಗದಲ್ಲಿ ಆಯೋಜನೆ ಮಾಡಿದ್ದಾರೆ. ಹಾಗೂ ಈ ಕಾರ್ಯಕ್ರಮಕ್ಕೆ ಸಂಪೂರ್ಣ ಮಾರ್ಗದರ್ಶನವನ್ನು ಯುವ ಕಾಂಗ್ರೆಸ್ ರಾಷ್ಟ್ರೀಯ ವಕ್ತರರಾದ ಆದರ್ಶ ಹಂಚಿದಕಟ್ಟೆ ಅವರು ನೀಡಿದ್ದು ಕಿಮ್ಮನೆ ರತ್ನಾಕರ್, ಮಂಜುನಾಥ್ ಗೌಡರು ಹಾಗೂ ಪಕ್ಷದ ಎಲ್ಲಾ ಮುಂಚೂಣಿ ಘಟಕದ ಅಧ್ಯಕ್ಷರು, ಪಕ್ಷದ ಮುಖಂಡರು ಈ ಕಾರ್ಯಕ್ರಮದ ಯಶಸ್ವಿಗೆ ಸಹಕಾರ ನೀಡಿರುತ್ತಾರೆ. ಇಡೀ ತೀರ್ಥಹಳ್ಳಿಯ ಜನತೆ ಆಗಮಿಸಿ ಪಂದ್ಯಾವಳಿಯನ್ನು ವೀಕ್ಷಿಸಿ, ಬೆಂಬಲಿಸಿ ಪಂದ್ಯಾವಳಿಯನ್ನು ಯಶಸ್ವಿಗೊಳಿಸಿಕೊಡಬೇಕಾಗಿ ಆಯೋಜಕರು ಮನವಿ ಮಾಡಿದ್ದಾರೆ.

Categories
ಉಡುಪಿ ರಾಜ್ಯ ಶಿವಮೊಗ್ಗ

ಟಾಪ್ ನ್ಯೂಸ್ ಕರ್ನಾಟಕ

ಪತ್ನಿಯ ಜೊತೆ ಮಾತನಾಡಿದಕ್ಕೆ ಯುವಕನ ಮೇಲೆ ಅಟ್ಯಾಕ್!
– ಶಿವಮೊಗ್ಗ ಜಿಲ್ಲೆ ಸಾಗರದಲ್ಲಿ ಘಟನೆ
– ಉಡುಪಿ: ಗ್ರಾಹಕರ ವೇಷದಲ್ಲಿ ಬಂದು ಚಿನ್ನಾಭರಣ ಎಗರಿಸಿ ಪರಾರಿಯಾದ ಬುರ್ಖಾಧಾರಿ ಮಹಿಳೆಯರು
– ಚಿಕ್ಕಮಗಳೂರು: ಕೆಮ್ಮಣ್ಣುಗುಂಡಿ ಬಳಿ ಕಾಡ್ಗಿಚ್ಚು: 5 ಎಕರೆ ಹುಲ್ಲುಗಾವಲು ಭಸ್ಮ

NAMMUR EXPRESS NEWS
ಶಿವಮೊಗ್ಗ: ನನ್ನ ಹೆಂಡ್ತಿ ಜತೆ ನಿಂಗೇನೋ ಕೆಲಸ ಎಂದು ಕೇಳಿ ವ್ಯಕ್ತಿಯೊಬ್ಬ ಇಬ್ಬರು ಯುವಕರ ಮೇಲೆ ದಾಳಿ ಮಾಡಿದ್ದಾನೆ. ಕತ್ತಿ ಮತ್ತು ರಾಡ್‌ನಿಂದ ಮೊದಲು ಯುವಕನ ಕಾರಿನ ಮೇಲೆ ದಾಳಿ ಮಾಡಿದ ವ್ಯಕ್ತಿ, ಯುವಕ ಮನೆಯಿಂದ ಹೊರಬರುತ್ತಿದ್ದಂತೆಯೇ ಆತನ ಮೇಲೂ ಎರಗಿದ್ದಾನೆ. ಈ ಘಟನೆ ನಡೆದಿರುವುದು ಶಿವಮೊಗ್ಗ ಜಿಲ್ಲೆಯ ಸಾಗರದ ಬೆಳಲಮಕ್ಕಿಯಲ್ಲಿ ನಡೆದಿದೆ. ರವಿ ಕುಮಾರ್‌ ಎಂಬಾತ ಪತ್ನಿ ಜತೆ ಒಂದು ಮನೆಯಲ್ಲಿ ವಾಸವಾಗಿದ್ದ. ಅಲ್ಲೇ ಪಕ್ಕದ ಮನೆಯಲ್ಲಿ ನವೀನ್‌ ಎಂಬಾತ ವಾಸವಾಗಿದ್ದ. ನವೀನ್‌ ತನ್ನ ಪತ್ನಿ ಜತೆ ಮಾತನಾಡುತ್ತಿರುವುದು ರವಿ ಕುಮಾರ್‌ ಗಮನಕ್ಕೆ ಬಂದಿತ್ತು. ಈ ವಿಚಾರದಲ್ಲಿ ಮನೆಯಲ್ಲೂ ಮಾತು, ಚಕಮಕಿ ನಡೆದಿತ್ತು.

ಈ ನಡುವೆ ರವಿ ಕುಮಾರ್‌ ಸಿಟ್ಟಿನಿಂದ ನವೀನ್‌ ಕುಮಾರ್‌ ಮನೆಯ ಬಳಿ ಹೋಗಿದ್ದಾನೆ. ಮೊದಲು ಮನೆಯ ಹೊರಗಿದ್ದ ಕಾರಿನ ಮೇಲೆ ಅಟ್ಯಾಕ್‌ ಮಾಡಿದ್ದಾನೆ. ಕತ್ತಿ ಹಾಗೂ ರಾಡ್‌ನಿಂದ ನವೀನ್ ಕಾರಿಗೆ ಹಾನಿ ಮಾಡಿದ್ದಾರೆ. ಕಾರಿನ ಗಾಜು ಒಡೆಯುತ್ತಿರುವುದನ್ನು ತಿಳಿದ ನವೀನ್‌ ಮನೆಯಿಂದ ಹೊರಗೆ ಬರುತ್ತಿದ್ದಂತೆಯೇ ರವಿ ಕುಮಾರ್‌ ಆತನ ಮೇಲೆ ನೇರ ದಾಳಿ ಮಾಡಿದ. ರವಿ ಕುಮಾರ್‌ ದಾಳಿ ಮಾಡುತ್ತಿರುವುದನ್ನು ನೋಡಿ ನವೀನ್‌ನ ಸ್ನೇಹಿತ ಧರೇಶ್‌ ಅಲ್ಲಿಗೆ ಓಡಿ ಬಂದ. ಆಗ ರವಿ ಕುಮಾರ್‌ ಆತನ ಮೇಲೂ ದಾಳಿ ಮಾಡಿದ್ದಾನೆ. ಘಟನೆಯಲ್ಲಿ ನವೀನ್ ಹಾಗೂ ಧರೇಶ್ ಗೆ ಗಾಯಗಳಾಗಿವೆ. ನವೀನ್‌ಗೆ ಸ್ವಲ್ಪ ಹೆಚ್ಚೇ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಇನ್ನೊಬ್ಬ ಗಾಯಾಳು ಧರೇಶ್‌ಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಕರಣ ಸಂಬಂಧ ರವಿ ಕುಮಾರ್ ವಶಕ್ಕೆ ಪಡೆದ ಪೊಲೀಸರು ಸಾಗರ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕೆಮ್ಮಣ್ಣುಗುಂಡಿ ಬಳಿ ಕಾಡ್ಗಿಚ್ಚು: 5 ಎಕರೆ ಹುಲ್ಲುಗಾವಲು ಭಸ್ಮ

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕು ಕೆಮ್ಮಣ್ಣುಗುಂಡಿ ಪ್ರವಾಸಿ ತಾಣದಲ್ಲಿನ ಪರ್ವತ ಪ್ರದೇಶದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿದೆ. ಬೆಂಕಿಗೆ ಕಿಡಿಗೇಡಿಗಳು ಕಾರಣ ಎನ್ನಲಾಗುತ್ತಿದೆ. ಕಾಡ್ಗಿಚ್ಚಿಗೆ ಶೋಲಾರಣ್ಯ ಗುಡ್ಡದಲ್ಲಿ ನೂರಾರು ಎಕರೆ ಪ್ರದೇಶ ನಾಶವಾಗಿದೆ. ಕಾಡ್ಗಿಚ್ಚಿನಿಂದ ಅಪಾರ ಪ್ರಮಾಣದ ಸಸ್ಯ ಸಂಪತ್ತು ನಾಶವಾಗಿದ್ದು, ಬೆಂಕಿ ನಂದಿಸಲು ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸ ಪಟ್ಟರು. ಈ ಬಾರಿ ಬಿಸಿಲಿನ ತೀವ್ರತೆ ಹೆಚ್ಚಾಗಿರುವುದರಿಂದ ಕಾಡಿಚ್ಚು ಕಂಡು ಬರುವ ಪ್ರದೇಶಗಳಲ್ಲಿ ಅರಣ್ಯ ಇಲಾಖೆ ಕಟ್ಟೆಚ್ಚರ ವಹಿಸಿದ್ದು, ಅರಣ್ಯ ಪ್ರದೇಶದತ್ತ ತೆರಳುವ ಪ್ರವಾಸಿಗರಲ್ಲಿ ಈ ಸಂಬಂಧ ಜಾಗೃತಿ ಮೂಡಿಸಲು ಕ್ರಮಕೈಗೊಂಡಿದೆ.

ಗ್ರಾಹಕರ ವೇಷದಲ್ಲಿ ಬಂದು ಚಿನ್ನಾಭರಣ ಎಗರಿಸಿ ಪರಾರಿಯಾದ ಬುರ್ಖಾಧಾರಿ ಮಹಿಳೆಯರು

ಉಡುಪಿ: ಗ್ರಾಹಕರ ವೇಷದಲ್ಲಿ ಜ್ಯುವೆಲ್ಲರಿಯೊಂದಕ್ಕೆ ಬಂದಿರುವ ಮೂವರು ಬುರ್ಖಾಧಾರಿ ಮಹಿಳೆಯರು ನಕಲಿ ಚಿನ್ನಾಭರಣವನ್ನು ಇಟ್ಟು ಲಕ್ಷಾಂತರ ರೂಪಾಯಿ ಮೌಲ್ಯದ ಅಸಲಿ ಚಿನ್ನಾಭರಣ ಎಗರಿಸಿ ಪರಾರಿಯಾಗಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ಉಡುಪಿ ಕನಕದಾಸ ರಸ್ತೆಯಲ್ಲಿನ ನಿತ್ಯಾನಂದ ಎಂಬವರ ಮಾರುತಿ ಜುವೆಲ್ಲರಿಗೆ ಅಂದಾಜು 35ರಿಂದ 45ವರ್ಷ ಪ್ರಾಯದ ಮೂವರು ಬುರ್ಖಧಾರಿ ಮಹಿಳೆಯರು ಫೆ.18ರಂದು ಗ್ರಾಹಕರಂತೆ ಬಂದಿದ್ದಾರೆ. ಇವರು 15.800 ಗ್ರಾಂ ತೂಕದ ಒಂದು ಚೈನ್‌ ಹಾಗೂ 10.150 ಗ್ರಾಂ ತೂಕದ ಬ್ರಾಸ್ಟೈಟ್ ಖರೀದಿಸಿದ್ದಾರೆ.

ಅದಕ್ಕೆ ಬದಲಾಗಿ ಮಹಿಳೆಯರು ತಮ್ಮ ಬಳಿಯಿದ್ದ ಹಳೆಯ 31.490 ಗ್ರಾಂ ತೂಕದ ಒಂದು ನೆಕ್ಸಸ್ ಮತ್ತು 10.940 ಗ್ರಾಂ ತೂಕದ ಬೆಂಡೋಲೆಗೆ ಹಾಕುವ ಜುಮುಕಿ ನೀಡಿದ್ದಾರೆನ್ನಲಾಗಿದೆ. ಇದರಲ್ಲಿ 48,771 ರೂ. ಉಳಿಕೆ ಹಣದೊಂದಿಗೆ 19,000 ರೂ. ಹಣವನ್ನು ನಗದಾಗಿ ಪಡೆದುಕೊಂಡು ಅಂಗಡಿಯಿಂದ ಹೋಗಿದ್ದಾರೆ ಎಂದು ತಿಳಿದು ಬಂದಿದೆ. ವ್ಯವಹಾರದ ಸಂದರ್ಭ ಚೌಕಾಸಿ ಮಾಡಿದ ಮಹಿಳೆಯರು ನಿತ್ಯಾನಂದರ ಗಮನವನ್ನು ಬೇರೆಡೆಗೆ ಸೆಳೆದು, ಪರೀಕ್ಷಿಸಲು ನೀಡಿದ್ದ ಅಸಲಿ ಚಿನ್ನದ ಬದಲಿಗೆ ನಕಲಿ ಚಿನ್ನಾಭರಣಗಳನ್ನು ನೀಡಿ 1,98,923ರೂ. ಮೌಲ್ಯದ ಅಸಲಿ ಚಿನ್ನಾಭರಣಗಳನ್ನು ತೆಗೆದುಕೊಂಡು ಹೋಗಿದ್ದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Categories
ತೀರ್ಥಹಳ್ಳಿ

ಬಿ.ಎಸ್.ಎನ್.ಎಲ್ ಟವರ್ ನಿರ್ಮಾಣ ಆದ್ರೂ ನೆಟ್ವರ್ಕ್ ಕೊಡಲಿಲ್ಲ!

ಬಿ.ಎಸ್.ಎನ್.ಎಲ್ ಟವರ್ ನಿರ್ಮಾಣ ಆದ್ರೂ ನೆಟ್ವರ್ಕ್ ಕೊಡಲಿಲ್ಲ!
– ಜನರು, ವಿದ್ಯಾರ್ಥಿಗಳ ಪರದಾಟ: ತೀರ್ಥಹಳ್ಳಿ ತಾಲೂಕಿನ ಶೇಡ್ಗಾರ್ ಅಲ್ಲಿ ಘಟನೆ
– ತಕ್ಷಣ ಟವರ್ ಸೇವೆ ಶುರು ಮಾಡುವಂತೆ ಜನರ ಪಟ್ಟು!

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ಶೇಡ್ಗಾರ್ ಗ್ರಾಮದಲ್ಲಿ ಬಿಎಸ್ ಎನ್ ಎಲ್ ನೂತನ ಟವರ್ ನಿರ್ಮಾಣಗೊಂಡಿದ್ದರೂ ಇದೀಗ ಸಾರ್ವಜನಿಕ ಸೇವೆಗೆ ಲಭ್ಯವಾಗಿಲ್ಲ. ಇದರಿಂದ ಈ ಭಾಗದ ವಿದ್ಯಾರ್ಥಿಗಳು, ಜನತೆಗೆ ತೀವ್ರ ತೊಂದರೆ ಆಗುತ್ತಿದೆ. ಕೂಡಲೇ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಅಗ್ರಹಿಸಿದ್ದಾರೆ. ಹೊಸದಾಗಿ ಬಿಎಸ್ ಎನ್ ಎಲ್ ಟವರ್ ನಿರ್ಮಾಣ ಆದ್ರೂ ಕೂಡ ನೆಟವರ್ಕ್ ಇಲ್ಲದೆ ಇರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಇಲ್ಲಿನ ಮೊಬೈಲ್‌ ಟವರ್‌ನಿಂದ ಬಿಎಸ್‌ಎನ್‌ಎಲ್ ನೆಟವರ್ಕ್ ನಂಬಿರುವ ಗ್ರಾಮಸ್ಥರು ನೆಟವರ್ಕ್ ಇಲ್ಲದಿರುವುದರಿಂದ ತುಂಬಾ ತೊಂದರೆ ಅನುಭವಿಸುಬೇಕಾಗುತ್ತಿದೆ. ಸಮಸ್ಯೆ ಬಗೆಹರಿಸಲು ಟವರ್ ಹಾಕಿಸಿದರು ಕೂಡ ಏನೂ ಪ್ರಯೋಜನ ಇಲ್ಲ.

ಎಲ್ಲಾ ಕಾಮಗಾರಿ ಮುಗಿದರೂ ಕನೆಕ್ಷನ್ ಕೊಟ್ಟಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಈಗ ನ್ಯಾಯ ಬೆಲೆ ಅಂಗಡಿಯ ಪಡಿತರ ವಿತರಣೆಯಲ್ಲಿ ಒಟಿಪಿ ವ್ಯವಸ್ಥೆ ಇರುವುದರಿಂದ ನೆಟ್‌ವರ್ಕ್ ಸಮಸ್ಯೆಯಿಂದ ಇಲ್ಲಿನ ಜನರಿಗೆ ಸರಿಯಾದ ಸಮಯದಲ್ಲಿ ವಿತರಿಸುವ ಕಾರ್ಯ ಸಾಧ್ಯವಾಗುತ್ತಿಲ್ಲ. ಆಕಸ್ಮಾತ್ ಏನಾದರೂ ಘಟನೆಯಾದರೆ ಇಲ್ಲವೇ ರೋಗಿಗಳಿಗೆ ತುರ್ತು ಪರಿಸ್ಥಿತಿಯಲ್ಲಿ ಅಂಬ್ಯುಲೆನ್ಸ್ ಕಾಲ್ ಮಾಡಲು ಸಹ ನೆಟ್ವರ್ಕ್‌ ಸಿಗುವುದಿಲ್ಲ. ಈ ಹಿನ್ನೆಲೆಯಲ್ಲಿ ಕೂಡಲೇ ನೆಟ್ ವರ್ಕ್ ಸರಿಪಡಿಸಬೇಕು ಎಂದು ಅಗ್ರಹಿಸಿದ್ದಾರೆ. ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ಸಾವಿರಾರು ಮಂದಿ ಇದರಿಂದ ತೊಂದರೆಗೆ ಒಳಗಾಗಿದ್ದಾರೆ. ಹೀಗಾಗಿ ಸ್ಥಳೀಯರು ತಕ್ಷಣ ಸೇವೆ ನೀಡುವಂತೆ ಪ್ರತಿಭಟನೆಗೆ ಮುಂದಾಗಿದ್ದಾರೆ.

Categories
ಬೆಂಗಳೂರು ರಾಜ್ಯ

ಬಗ‌ರ್ ಹುಕುಂ ರೈತರಿಗೆ ಮತ್ತೊಂದು ಅವಕಾಶ!

ಬಗ‌ರ್ ಹುಕುಂ ರೈತರಿಗೆ ಮತ್ತೊಂದು ಅವಕಾಶ!
– ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್
– ಅನರ್ಹಗೊಂಡ ಅರ್ಜಿ ಪುನ‌ರ್ ಪರಿಶೀಲನೆ
– ಏನಿದು ಹೊಸ ಆದೇಶ..? ಯಾರಿಗೆ ಅವಕಾಶ..?

NAMMUR EXPRESS NEWS
ಬೆಂಗಳೂರು: ಬಗರ್ ಹುಕುಂ ಸಾಗುವಳಿದಾರರಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್ ಸಿಕ್ಕಿದ್ದು, ಅನರ್ಹಗೊಂಡ ಅರ್ಜಿ ಪುನರ್ ಪರಿಶೀಲನೆ ಮಾಡಲು ಸರ್ಕಾರ ನಿರ್ಧರಿಸಿದೆ. ಸರ್ಕಾರಿ ಜಮೀನುಗಳಲ್ಲಿನ ಅನಧಿಕೃತಸಾಗುವಳಿಯನ್ನು ಸಕ್ರಮಗೊಳಿಸುವ ಯೋಜನೆಯಡಿಯಲ್ಲಿ ‘ಬಗರ್ ಹುಕುಂ’ ತಿರಸ್ಕೃತಗೊಂಡಿರುವ ಅರ್ಜಿಗಳನ್ನು ಪುನರ್ ಪರಿಶೀಲಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ತಿರಸ್ಕೃತ ಅಥವಾ ಅನರ್ಹಗೊಂಡ ಬಗರ್ ಹುಕುಂ ಅರ್ಜಿಗಳಲ್ಲಿ ತಪ್ಪಾಗಿದ್ದರೆ, ನಿಯಮ ಮೀರಿ ಅನರ್ಹಗೊಂಡಿದ್ದರೆ ಮತ್ತೊಮ್ಮೆ ಪುನರ್ ಪರಿಶೀಲನೆಗೆ ಸೂಚಿಸಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ. ಈ ಮೂಲಕ ಮಲೆನಾಡು, ಕರಾವಳಿ ಸೇರಿ ರಾಜ್ಯದ ಲಕ್ಷ ಲಕ್ಷ ರೈತರಿಗೆ ಈ ಆದೇಶ ಸ್ಪಷ್ಟವಾದರೆ ಅನುಕೂಲ ಆಗಲಿದೆ.