Categories
ಬೆಂಗಳೂರು ರಾಜ್ಯ

ಕರ್ನಾಟಕ ಬಜೆಟ್ 2024..!

ಕರ್ನಾಟಕ ಬಜೆಟ್ 2024..!
– ಪ್ರವಾಸೋದ್ಯಮಕ್ಕೆ ಬಜೆಟ್‌ನಲ್ಲಿ ಸರ್ಕಾರ ಬಂಪ‌ರ್ ಕೊಡುಗೆ.!
– ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ 100 ಕೋಟಿ ಅನುದಾನ!
– ಮದ್ಯಪ್ರಿಯರಿಗೆ ಬಿಕ್ ಶಾಕ್ : ಸಮುದ್ರ ಆಂಬುಲೆನ್ಸ್ ಖರೀದಿ
– ಮೀನುಗಾರಿಕೆಗೆ 3000 ಕೋಟಿ ರೂಪಾಯಿ ಮೀಸಲು

NAMMUR EXPRESS NEWS
ಬೆಂಗಳೂರು: ಪ್ರವಾಸೋದ್ಯಮಕ್ಕೆ ಬಜೆಟ್‌ನಲ್ಲಿ ಕರ್ನಾಟಕ ಸರ್ಕಾರ ಬಂಪರ್ ಕೊಡುಗೆ ನೀಡಿದೆ. ಅಂಜನಾದ್ರಿ ಬೆಟ್ಟದಲ್ಲಿನ ಸುತ್ತಮುತ್ತಲಿನ ಪ್ರದೇಶ ಅಭಿವೃದ್ಧಿಗೆ ರಾಜ್ಯ ಸರ್ಕಾರ ನಿರ್ಧರಿಸಿದೆ. ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ 100 ಕೋಟಿ ಅನುದಾನವನ್ನು ರಾಜ್ಯ ಸರ್ಕಾರ ನೀಡಿದೆ. ಜೊತೆಗೆ ರಾಜ್ಯದ ಪ್ರವಾಸಿ ತಾಣಗಳಲ್ಲಿ 10 ಕೇಬಲ್ ಕಾರ್ ರೋಪ್ ವೇ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ. ಜೊತೆಗೆ ಹಲವು ಇಂಟ್ರಪ್ರೇಷನ್ ಸೆಂಟರ್ ತೆರೆಯಲಾಗುವುದು ಎಂದು ಬಜೆಟ್ ಮಂಡನೆ ವೇಳೆ ಸಿಎಂ ಸಿದ್ದರಾಮಯ್ಯ ಹೇಳಿದರು. ಸಿಎಂ ಸಿದ್ದರಾಮಯ್ಯ ಅವರು 2024-2025ನೇ ಸಾಲಿನ ಕರ್ನಾಟಕ ಬಜೆಟ್ ಮಂಡನೆ ಮಾಡುತ್ತಿದ್ದಾರೆ. ಈ ವೇಳೆ ರಾಜ್ಯ ಸರ್ಕಾರದಲ್ಲಿ ಪ್ರವಾಸೋದ್ಯಮಕ್ಕೆ ಬಂಪರ್ ಕೊಡುಗೆ ನೀಡಿರುವ ಬಗ್ಗೆ ಪ್ರಸ್ತಾಪಿಸಿದರು. ಕೊಪ್ಪಳ ಜಿಲ್ಲೆಯ ಆಂಜನಾದ್ರಿ ಬೆಟ್ಟ ಮತ್ತು ಸುತ್ತಮುತ್ತಲಿನ ಪ್ರದೇಶಗಳು ಪೌರಾಣಿಕ ಮತ್ತು ಐತಿಹಾಸಿಕ ಮಹತ್ವವನ್ನು ಹೊಂದಿದ್ದು ಇದರ ಅಭಿವೃದ್ಧಿಗೆ 100 ಕೋಟಿ ಅನುದಾನವನ್ನು ನೀಡಲಾಗುವುದು ಎಂದು ಹೇಳಿದರು.

ಮದ್ಯಪ್ರಿಯರಿಗೆ ಬಿಕ್ ಶಾಕ್:

ಸಿಎಂ ಸಿದ್ದರಾಮಯ್ಯ 15ನೇ ಬಾರಿ ಬಜೆಟ್ ಮಂಡನೆ ಮಾಡುತ್ತಿರುವರು. ಒಟ್ಟು 3,71, 383 ಕೋಟಿ ರೂ. ಮೊತ್ತದ ಬಜೆಟ್ ಇದಾಗಿದೆ. ಬಜೆಟ್ ಮಂಡನೆ ವೇಳೆ ಮದ್ಯದ ದರ ಮತ್ತೆ ಹೆಚ್ಚಿಸಲು ನಿರ್ಧಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.ಹೌದು.. ಬಿಯರ್ ಸೇರಿದಂತೆ ಎಲ್ಲಾ ಬ್ರಾಂಡ್‌ಗಳ ಬೆಲೆಯನ್ನು ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ. ಈ ಮೂಲಕ ರಾಜ್ಯ ಸರ್ಕಾರ ಮದ್ಯಪ್ರಿಯರಿಗೆ ಬಿಗ್ ಶಾಕ್ ಕೊಟ್ಟಿದೆ. ನಿರೀಕ್ಷೆಯಂತೆ ಈ ಸಲ ಮೀನುಗಾರಿಕೆ ಕ್ಷೇತ್ರಕ್ಕೂ ಆದ್ಯತೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 3,000 ಕೋಟಿ ರೂಪಾಯಿ ಅನುದಾನ ಘೋಷಿಸಿದ್ದಾರೆ.

7 ಕೋಟಿ ರೂಪಾಯಿ ಸಮುದ್ರ ಆಂಬುಲೆನ್ಸ್ ಖರೀದಿ:

ಸಮುದ್ರ ಮೀನುಗಾರಿಕೆಗೆ ಹೋಗುವ ಮೀನುಗಾರರು ಅಪಾಯಕ್ಕೆ ಸಿಲುಕಿದಾಗ ಅವರನ್ನು ರಕ್ಷಿಸಲು ವಿಶೇಷ “ಸಮುದ್ರ ಆಂಬುಲೆನ್ಸ್” ಖರೀದಿಸಲಾಗುವುದು. ತುರ್ತು ಸಂದರ್ಭದಲ್ಲಿ ಅವರ ರಕ್ಷಣೆಗೆ ಅತ್ಯಾಧುನಿಕ ಸಮುದ್ರ ಅಂಬುಲೆನ್ಸ್ ಅಗತ್ಯವನ್ನು ಮನಗಂಡು ಈ ಕ್ರಮ ತೆಗೆದುಕೊಂಡಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು. ಮೀನುಗಾರಿಕೆಗೆ ಸಂಬಂಧಿಸಿದ ಸಂಶೋಧನೆ ಅಗತ್ಯವಾಗಿದ್ದು, ಇದಕ್ಕಾಗಿ ಹೊನ್ನಾವರ ಅಥವಾ ಕಾಸರಗೋಡದಲ್ಲಿ ಮೀನುಗಾರಿಕೆ ಸಂಶೋಧನಾ ಕೇಂದ್ರ ಸ್ಥಾಪಿಸಲಾಗುತ್ತದೆ. ಹಾಗೆಯೇ, ಭದ್ರಾವತಿಯಲ್ಲಿ ಹೈಟೆಕ್‌ ಮೀನು ಮಾರುಕಟ್ಟೆ ಸ್ಥಾಪನೆಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದರು.

Categories
ಕರಾವಳಿ ಮಂಗಳೂರು

ಬಜೆಟ್ ನಲ್ಲಿ ಕರಾವಳಿಗೆ ಬಂಪರ್!

ಬಜೆಟ್ ನಲ್ಲಿ ಕರಾವಳಿಗೆ ಬಂಪರ್!
– 20 ಸಾವಿರ ಕೋಟಿ ಹೂಡಿಕೆಗೆ ರೆಡಿಯಾದ ಮುಖ್ಯಮಂತ್ರಿ ಸಿದ್ಧರಾಮಯ್ಯ
– ಬಂದರುಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ
– ಮೀನುಗಾರಿಕೆ, ಮೂಲ ಸೌಕರ್ಯ, ಪ್ರವಾಸೋದ್ಯಮಕ್ಕೆ ಒತ್ತು

NAMMUR EXPRESS NEWS
ಮಂಗಳೂರು: ಬಜೆಟ್‌ನಲ್ಲಿ ಬಂದರು ಮತ್ತು ಒಳನಾಡಿನ ಅಭಿವೃದ್ಧಿಗೆ ಸರ್ಕಾರ ಚಿತ್ತಹರಿಸಿದೆ. ರಾಜ್ಯದ 320 ಕಿ.ಮೀಟರ್ ಉದ್ದದ ಕರಾವಳಿ ತೀರಗಳ ಸಮರ್ಪಕ ಬಳಕೆಗೆ ಒತ್ತು ನೀಡಲು ಮಂದಾಗಿದೆ. ಬಂದರು ಮತ್ತು ರೈಲುಗಳು ವಿಮಾನ ಸಂಪರ್ಕವನ್ನ ಸುಗಮಗೊಳಿಸಲು ಯೋಜನೆ ಹಾಕಿಕೊಂಡಿದೆ. ಹೀಗಾಗಿ ಕೆಲವು ವರ್ಷಗಳಲ್ಲಿ ಅಂದಾಜು 20 ಸಾವಿರ ಕೋಟಿ ಹೂಡಿಕೆ ಮಾಡುವ ಗುರಿಯನ್ನು ಸಿದ್ದರಾಮಯ್ಯ ಸರ್ಕಾರ ಹೊಂದಿದೆ.2024-2025ನೇ ಸಾಲಿನ ಬಜೆಟ್‌ನಲ್ಲಿ ಸಮುದ್ರ ಸಾರಿಗೆ, ಸರಕು ಸಾಗಣೆ, ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಒತ್ತು ನೀಡಿದೆ. ರಾಜ್ಯದ ಜಲ ಸಾರಿಗೆ ಮೂಲಸೌಕರ್ಯಗಳ ಅಭಿವೃದ್ಧಿಗೆ ಹೂಡಿಕೆ ಮಾಡಲು ಮುಂದಾಗಿದೆ. ಖಾಸಗಿ ಹೂಡಿಕೆಗಳನ್ನ ಆಕರ್ಷಿಸಲು ಕರ್ನಾಟಕ ಜಲಸಾರಿಗೆ ಅಭಿವೃದ್ಧಿಗೆ ಸರ್ಕಾರ ಮುಂದಾಗಿದೆ.ಇನ್ನು ಸಾಗರ ಮಾಲಾ ಯೋಜನೆಯಡಿ ಕಡಲ ತೀರದ ವ್ಯಾಪಾರಕ್ಕೆ ಆದ್ಯತೆ ನೀಡಿದೆ. ಅಂದಾಜು 1,017 ಕೋಟಿ ವೆಚ್ಚದಲ್ಲಿ 26 ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತದೆ ಎಂದು ತಿಳಿಸಿದೆ.

ಇನ್ನೂ 1,145 ಕೋಟಿ ರೂಪಾಯಿ ಮೊತ್ತದ ಕಾಮಗಾರಿಗಳ ಯೋಜನಾ ವರದಿ ತಯಾರಿಸಿದೆ. 12 ಕಾಮಗಾರಿಗಳ ವರದಿಗಳನ್ನ ಕೇಂದ್ರದ ಅನುಮೋದನೆಗೆ ಸಲ್ಲಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕೇಣಿಯಲ್ಲಿ 30 MTPA ಸರ್ವಋುತು ಬಂದರು ನಿರ್ಮಾಣ ಮಾಡಲು ಸರ್ಕಾರ ಯೋಜನೆ ಹಾಕಿಕೊಂಡಿದೆ. 4,200 ಕೋಟಿ ವೆಚ್ಚದಲ್ಲಿ ಹೊಸ ಆಳಸಮುದ್ರ ಸರ್ವಋತು ಬಂದರು ನಿರ್ಮಿಸುವುದಾಗಿ ಹೇಳಿದೆ. ಇದಲ್ಲದೆ, ಉತ್ತರ ಕನ್ನಡ ಜಿಲ್ಲೆಯ ಪಾವಿನಕುರ್ವೆಯಲ್ಲಿ ಎರಡನೇ ಬೃಹತ್ ಬಂದರು ನಿರ್ಮಾಣ. ಪಿಪಿಪಿ ಮಾದರಿಯಲ್ಲಿ ಅಂದಾಜು 3,048 ಕೋಟಿ ವೆಚ್ಚದಲ್ಲಿ ಬಂದರು ಅಭಿವೃದ್ಧಿ ಮಾಡಲು ಚಿಂತಿಸಿದೆ. ಕಾರವಾರ, ಮಲ್ಪೆ ಹಳೇ ಮಂಗಳೂರು ಬಂದರುಗಳಲ್ಲಿ 4 ಬರ್ತ್ ಅಭಿವೃದ್ಧಿ ಮಾಡುವುದಾಗಿ ತಿಳಿಸಿದೆ. ಕಾರವಾರ, ಹಳೇ ಮಂಗಳೂರು ಸೇರಿ 11 ಕಿರು ಬಂದರುಗಳಲ್ಲಿ ಹೂಳೆತ್ತುವ ಕಾರ್ಯ ಮಾಡಲಿದೆ.

ಉತ್ತರಕನ್ನಡದ ಮಂಕಿಯಲ್ಲಿ ವಿವಿದೋದ್ದೇಶ ಬಂದರು ಅಭಿವೃದ್ಧಿ ಬಗ್ಗೆ ಚಿಂತಿಸಿದೆ. ಕಾರವಾರ ಬಂದರಿನಲ್ಲಿ ಬೆಂಕಿ ನಂದಿಸುವ ಉಪಕರಣಗಳ ಅಳವಡಿಕೆಗೆ ಕಾಮಗಾರಿ ಮಾಡುವುದಾಗಿ ಸರ್ಕಾರ ತಿಳಿಸಿದೆ. ಸಿದ್ದರಾಮಯ್ಯ ಅವರು ಮೀನುಗಾರಿಕೆ ಕ್ಷೇತ್ರಕ್ಕೆ ಬಜೆಟ್‌ನಲ್ಲಿ 3 ಸಾವಿರ ಕೋಟಿ ಯೋಜನೆ ಪ್ರಕಟಿಸಿದ್ದಾರೆ. ಮತ್ತ್ವ ಆಶಾಕಿರಣ ಯೋಜನೆಡಿ ಮೀನುಗಾರಿಕೆ ನಿಷೇಧದ ಅವಧಿಯಲ್ಲಿ ಕರಾವಳಿಯ ಮೀನುಗಾರ ನೀಡುತ್ತಿರುವ ಪರಿಹಾರ ಮೊತ್ತದ ರಾಜ್ಯದ ಪಾಲನ್ನು 1,500 ರೂ.ಗಳಿಂದ 3,000ರೂ.ಗಳಿಗೆ ಹೆಚ್ಚಿಸಲಾಗಿದೆ.

ಸಮುದ್ರ ಮೀನುಗಾರಿಕೆಗೆ ತೆರಳಿದಾಗ ಅಪಘಾತ ಅಥವಾ ಅನಾರೋಗ್ಯಕ್ಕೆ ಒಳಗಾಗುವ ಮೀನುಗಾರರನ್ನು ತ್ವರಿತವಾಗಿ ದಡಕ್ಕೆ ತರಲು ರಾಜ್ಯದಲ್ಲಿ ಪ್ರಪ್ರಥಮ ಸಮುದ್ರ ಅಂಬುಲೆನ್ಸ್ ಅನ್ನು 7 ಕೋಟಿ ರೂ. ವೆಚ್ಚದಲ್ಲಿ ಖರೀದಿಸಲಾಗುತ್ತದೆ.2024-5ನೇ ಸಾಲಿನಲ್ಲಿ 10,000 ಮೀನುಗಾರರಿಗೆ ರಾಜ್ಯ ಸರ್ಕಾರವು ವಸತಿ ವಸತಿಗಳಡಿಯಲ್ಲಿ ಮನೆಗಳನ್ನು ನಿರ್ಮಿಸಲು ಸಹಾಯಧನ ನೀಡಲಾಗುವುದು. ರಾಜ್ಯದಲ್ಲಿನ 16 ಮೀನು ಮರಿ ಉನ್ನತೀಕರಣವನ್ನು ನಬಾರ್ಡ್ ಉತ್ಪಾದನಾ ಕೇಂದ್ರಗಳ ಸಹಯೋಗದಲ್ಲಿ 20 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗುತ್ತದೆ. ಚಿತ್ರದುರ್ಗ, ಹೊಳಲ್ಕೆರೆ ಮತ್ತು ಹೊಸದುರ್ಗ ತಾಲೂಕುಗಳ ಗಣಿಬಾಧಿತ ಪ್ರದೇಶದಲ್ಲಿ ಮೀನುಗಾರಿಕೆ ನಡೆಸಲು 6 ಕೋಟಿ ರೂ. ವೆಚ್ಚ ಮಾಡಲಾಗುವುದು ಎಂದು, ಇನ್ನು ಹೊನ್ನಾವರ ಅಥವಾ ಕಾಸರಗೋಡದಲ್ಲಿ ಮೀನುಗಾರಿಕೆ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲಾಗಿದೆ

Categories
ಬೆಂಗಳೂರು ರಾಜ್ಯ

ಡಿ-ಬಾಸ್ ಗೆ ಹುಟ್ಟು ಹಬ್ಬದ ಸಂಭ್ರಮ

ಡಿ-ಬಾಸ್ ಗೆ ಹುಟ್ಟು ಹಬ್ಬದ ಸಂಭ್ರಮ
– ಮನೆಯ ಮುಂದೆ ಅಭಿಮಾನಿಗಳ ಸಾಗರ
– ದರ್ಶನ್ ಗೆ ಸಿಗ್ತು ಮಗನ ಅಪ್ಪುಗೆ
– ಅಭಿಮಾನಿಗಳ ಅಭಿಮಾನಕ್ಕೆ ದರ್ಶನ್ ಹರ್ಷ!

NAMMUR EXPRESS NEWS
ಬೆಂಗಳೂರು: ಒಂದು ಕಡೆ “ಕಾಟೇರ ಸೂಪರ್ ಹಿಟ್. ಮತ್ತೊಂದು ಕಡೆ ಬರ್ತಡೇ, ಇನ್ನೊಂದು ಕಡೆ ಅಭಿಮಾನಿಗಳ ಪಾಲಿನ ಡಿಬಾಸ್‌ ಚಿತ್ರರಂಗಕ್ಕೆ ಬಂದು 25 ವರ್ಷ… ಚಾಲೆಂಜಿಂಗ್‌ ಸ್ಟಾರ್ ದರ್ಶನ್ ಅಭಿಮಾನಿಗಳು ಸಂಭ್ರಮಿಸಲು ಇದಕ್ಕಿಂತ ಹೆಚ್ಚು ಕಾರಣ ಬೇಕಿಲ್ಲ ಆದರೆ, ಇಂದು “ಸೆಲೆಬ್ರೆಟಿಗಳ ಸಂಭ್ರಮಕ್ಕೆ ಮೂಲ ಕಾರಣ, ನಟ ದರ್ಶನ್ ಅವರ ಹುಟ್ಟುಹಬ್ಬ. ಅಭಿಮಾನಿಗಳನ್ನು ಸೆಲೆಬ್ರೆಟಿಗಳು ಎಂದು ಕರೆದು, ಅವರಿಗೆ ತಮ್ಮ ಜೀವನದಲ್ಲಿ ವಿಶೇಷ ಪ್ರಾಮುಖ್ಯತೆ ನೀಡುತ್ತಲೇ ಬರುತ್ತಿರುವ ನಟ ದರ್ಶನ್ ಇಂದು ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಲಿದ್ದಾರೆ.

ಆದರೆ, ಈ ಹಿಂದಿನಂತೆ ಕೇಕ್, ಹಾರ ಬದಲು ಅಭಿಮಾನಿಗಳು ಪ್ರೀತಿಯಿಂದ ನೀಡಿದ ದವಸ, ಧಾನ್ಯ, ಆಹಾರ ಪದಾರ್ಥಗಳನ್ನು ಅನಾಥಶ್ರಮ, ವೃದ್ಧಾಶ್ರಮಗಳಿಗೆ ತಲುಪಿಸುವುದಾಗಿ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಅಭಿಮಾನಿಗಳು ತಮ್ಮ ಪ್ರೀತಿಯ ಡಿ ಬಾಸ್ ಬರ್ತ್‌ಡೇ ಹಿನ್ನೆಲೆಯಲ್ಲಿ ಅಕ್ಕಿ, ಬೇಳೆಗಳನ್ನು ನೀಡುತ್ತಿದ್ದಾರೆ.ಸೋಲು-ಗೆಲುವು ಮತ್ತು ದರ್ಶನ್ ಒಲವು ಇವತ್ತು ದರ್ಶನ್ ಅವರಿಗೆ ಅಭಿಮಾನಿಗಳು ಇಷ್ಟೊಂದು ಪ್ರೀತಿ ತೋರಿ ಸಲು ಕಾರಣ ಅವರ ಪಾಲಿಸಿ ಕೊಂಡು ಬಂದ ಸಿದ್ಧಾಂತ. ಅದು ಸೋತಾಗ ಕುಗ್ಗದೇ, ಗೆದ್ದಾಗ ಹಿಗ್ಗದೇ ಸಮಚಿತ್ತವಾಗಿ ನಡೆದುಕೊಂಡು ಬಂದಿರುವುದು.

ದರ್ಶನ್ ತಮ್ಮ ಸಿನಿಮಾ ಕೆರಿಯರ್‌ನಲ್ಲಿ ಹಲವು ಸೂಪ‌ರ್ ಹಿಟ್‌ಗಳನ್ನು ನೋಡಿದ್ದಾರೆ. ಅದೇ ತರಹ ನಿರೀಕ್ಷಿತ ಮಟ್ಟ ತಲುಪದ ಸಿನಿಮಾಗಳು ಅವರ ಕೆರಿಯರ್‌ನಲ್ಲಿವೆ. ಆದರೆ, ದರ್ಶನ್ ಮಾತ್ರ ಸೋಲು-ಗೆಲುವನ್ನು ಖುಷಿ, ಬೇಸರವನ್ನು ಸಮಚಿತ್ತವಾಗಿ ತಗೊಂಡು, ತಮ್ಮ ಮೂಲವ್ಯಕ್ತಿತ್ವದೊಂದಿಗೆ ಸಾಗಿಬರುತ್ತಿ ರುವುದು ಅಭಿಮಾನಿಗಳ ಪ್ರೀತಿಗೆ ಮತ್ತೊಂದು ಕಾರಣ. ತಮ್ಮ 25 ವರ್ಷದ ಸಿನಿಮಾ ಕೆರಿಯರ್ ನಲ್ಲಿ ನಾಯಕ ನಟರಾಗಿ 56 ಸಿನಿಮಾಗಳನ್ನು ಪೂರೈಸಿರುವ ದರ್ಶನ್ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ಸದ್ಯ “ಡೆವಿಲ್ ಸಿನಿಮಾದ ಚಿತ್ರೀಕರಣಕ್ಕೆ ದರ್ಶನ್ ಸಿದ್ಧರಾಗಿದ್ದಾರೆ. ಮಿಲನಾ ಪ್ರಕಾಶ್ ನಿರ್ದೇಶನದಲ್ಲಿ “ಡೆವಿಲ್ ಚಿತ್ರ ತಯಾರಾಗುತ್ತಿದ್ದು, ದರ್ಶನ್ ಹಾಗೂ ಪ್ರಕಾಶ್ ಕಾಂಬಿನೇಶನ್‌ನಲ್ಲಿ ಬರುತ್ತಿರುವ ಎರಡನೇ ಚಿತ್ರವಿದು. ಈ ಹಿಂದೆ “ತಾರಕ್ ಚಿತ್ರ ಬಂದಿತ್ತು.

ಇತ್ತೀಚಿನ ವರ್ಷಗಳಲ್ಲಿ ದೊಡ್ಡ ಗೆಲುವಿಗಾಗಿ ಕನ್ನಡ ಚಿತ್ರರಂಗ ಎದುರು ನೋಡುತ್ತಿತ್ತು. ಅದರಲ್ಲೂ 2023ರಲ್ಲಿ ಹೇಳಿಕೊಳ್ಳುವಂತಹ ಹಿಟ್ ಸಿಕ್ಕಿರಲಿಲ್ಲ. ಇಂತಹ ಸಮಯದಲ್ಲಿ ವರ್ಷದ ಕೊನೆಗೆ ಬಂದ “ಕಾಟೇರ’ ಚಿತ್ರ ಸೂಪರ್ ಹಿಟ್ ಆಗಿ. ಇಡೀ ಚಿತ್ರರಂಗಕ್ಕೆ ಬೂಸ್ಟರ್ ಡೋಸ್ ಆಗಿದ್ದು ಸುಳ್ಳಲ್ಲ. ಕೇವಲ ಕನ್ನಡದಲ್ಲಷ್ಟೇ ಬಿಡುಗಡೆ ಯಾದ ಚಿತ್ರ. ತನ್ನ ಮುಂದೆ ಬಿಡುಗಡೆ ಯಾದ ಪರಭಾಷಾ ಚಿತ್ರಗಳನ್ನು ಲೆಕ್ಕಿಸದೇ ಭರ್ಜರಿ ಹವಾದೊಂದಿಗೆ ಮುಂದುವರೆಯಿತು. ಈ ಖುಷಿ ಇಡೀ ಚಿತ್ರರಂಗದ ಜೊತೆಗೆ ದರ್ಶನ್ ಅಭಿಮಾನಿಗಳಿಗಿದೆ. ಈ ಯಶಸ್ಸು ಕೂಡಾ ಈ ಬಾರಿಯ ದರ್ಶನ್ ಹುಟ್ಟುಹಬ್ಬಕ್ಕೆ ಹೆಚ್ಚಿನ ಮೆರುಗು ತಂದಿರೋದು ಸುಳ್ಳಲ್ಲ.

ಕನ್ನಡವೇ ಸತ್ಯ…

ಇತ್ತೀಚಿನ ವರ್ಷಗಳಲ್ಲಿ ಬೇರೆ ಬೇರೆ ನಟರು ಪ್ಯಾನ್ ಇಂಡಿಯಾ ಸಿನಿಮಾ ಮಾಡುತ್ತಿದ್ದಾರೆ. ಪರಭಾಷೆಯಲ್ಲೂ ಮಿಂಚುವ ಕನಸು ಕಾಣುತ್ತಿದ್ದಾರೆ. ಆದರೆ, ದರ್ಶನ್ ಮಾತ್ರ ತಮ್ಮ ಮೊದಲ ಆಯ್ಕೆ ಯಾವತ್ತಿದ್ದರೂ ಕನ್ನಡ ಭಾಷೆಗೆ ಮತ್ತು ನಾವು ಮಾಡಿರೋದು ಪ್ಯಾನ್ ಇಂಡಿಯಾ ಸಿನಿಮಾ ಅಲ್ಲ. ಕನ್ನಡ ಸಿನಿಮಾ ಎಂದು ಸ್ಪಷ್ಟವಾಗಿ ಹೇಳುತ್ತಲೇ ಬಂದಿದ್ದಾರೆ. ಈ ಮೂಲಕ ಕನ್ನಡ ಭಾಷೆ, ಕನ್ನಡ ಚಿತ್ರರಂಗ, ಕನ್ನಡ ನಿರ್ದೇಶಕ, ನಿರ್ಮಾಪಕರಿಗೆ ಮೊದಲ ಪ್ರಾಶಸ್ತ್ರ ಎಂದು ಸಾಬೀತು ಮಾಡಿದ್ದಾರೆ. ಜೊತೆಗೆ “ನನ್ನನ್ನು ನೀವು (ಕನ್ನಡಿಗರು) ತುಂಬಾ ಚೆನ್ನಾಗಿ ಇಟ್ಟಿದ್ದೀರಿ. ಲೂನಾದಲ್ಲಿ ಓಡಾಡುತ್ತಿದ್ದ ನನ್ನನ್ನು ಲ್ಯಾಂಬೋರ್ಗಿನಿಯಲ್ಲಿ ಓಡಾಡುವಂತೆ ಮಾಡಿದ್ದು ನೀವೇ’ ಎಂದು ಆಗಾಗ ಹೇಳುವ ಮೂಲಕ ದರ್ಶನ್ ಕನ್ನಡ ಚಿತ್ರರಂಗ ತನಗೆ ಎಲ್ಲವನ್ನು ಕೊಟ್ಟಿದೆ ಎಂದು ಹೇಳುತ್ತಾರೆ.

ಮನೆಯ ಮುಂದೆ ಜನಸಾಗರ, ದಚ್ಚು ಬರ್ತ್‌ಡೇಯನ್ನು ಮದ್ಯ ರಾತ್ರಿಯಿಂದ ಸಂಭ್ರಮಿಸಿದ ಅಭಿಮಾನಿಗಳುಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಬರ್ತ್‌ಡೇ ಪ್ರಯುಕ್ತ ಬೆಂಗಳೂರಿನ ರಾಜರಾಜೇಶ್ವರಿ ನಗರದ ಮನೆಯಲ್ಲಿ ರಾತ್ರಿಯಿಂದಲೇ ಅಭಿಮಾನಿಗಳ ಸಂಭ್ರಮಾಚರಣೆ ಮುಂದುವರಿದಿದೆ. ನೆಚ್ಚಿನ ನಟನನ್ನು ನೋಡಲೆಂದೇ ರಾಜ್ಯದ ಬೇರೆ ಬೇರೆ ಕಡೆಗಳಿಂದ ಸಾವಿರಾರು ಮಂದಿ ಫ್ಯಾನ್ಸ್‌ ಆಗಮಿಸಿದ್ದರು. ಎಲ್ಲರನ್ನೂ ಭೇಟಿಯಾಗಿ ಅವರ ಆಶೀರ್ವಾದ ಪಡೆದಿದ್ದಾರೆ ದರ್ಶನ್.‌ ಹ್ಯಾಪಿ ಬರ್ತ್‌ಡೇ ಪಪ್ಪಾ ಎಂದು ಅಪ್ಪ ದರ್ಶನ್‌ಗೆ ಸಿಕ್ತು ಮಗನ ಅಪ್ಪುಗೆ ,ಮಧ್ಯರಾತ್ರಿಯೇ ಹಬ್ಬ ಮಾಡಿದ ಡಿಬಾಸ್‌ ಫ್ಯಾನ್ಸ್‌ ಆರ್‌ಆರ್‌ ನಗರದ ಮನೆ ಬಳಿ ದರ್ಶನ್ ಮನೆಯ ಮುಂದೆ ಅಭಿಮಾನಿಗಳ ಜನಸಾಗರ ಅಭಿಮಾನಿಗಳ ಸಂಭ್ರಮ ಕಣ್ತುಂಬಿಕೊಂಡ ಅಭಿಷೇಕ್‌ ಅಂಬರೀಶ್‌, ಧನ್ವೀರ್‌ ಗೌಡ, ವಿನೋದ್‌ ಪ್ರಭಾಕರ್‌.

Categories
ಬೆಂಗಳೂರು ರಾಜ್ಯ

ಒಂದು ನಿಂಬೆಹಣ್ಣು ಬೆಲೆ 1.5 ಲಕ್ಷ!

ಒಂದು ನಿಂಬೆಹಣ್ಣು ಬೆಲೆ 1.5 ಲಕ್ಷ!
– ಬೆಲೆ ಕೇಳಿ ಶಾಕ್ ಆದ ನೆಟ್ಟಿಗರು..!
– 285 ವರ್ಷ ಹಳೆಯ ನಿಂಬು

NAMMUR EXPRESS NEWS
ಒಂದು ನಿಂಬೆಹಣ್ಣು ಅಬ್ಬಬ್ಬಾ ಅಂದ್ರೆ 5 ಅಥವಾ 6 ರೂಪಾಯಿಗೆ ಸಿಗುತ್ತದೆ. ಅದರಲ್ಲೂ ಬೇಸಿಗೆ ಬಂದರೆ ಕೊಂಚ ಬೆಲೆ ಹೆಚ್ಚಾಗುತ್ತದೆ. ಆದರೆ, ಇಲ್ಲೊಂದು ನಿಂಬೆಹಣ್ಣು ಭಾರಿ ಬೆಲೆಗೆ ಮಾರಾಟವಾಗುವ ಮೂಲಕ ದಾಖಲೆ ಬರೆದಿದೆ. ಹೌದು, ಈ ನಿಂಬೆಹಣ್ಣು ಬರೋಬ್ಬರಿ 1.5 ಲಕ್ಷಕ್ಕೆ ಹರಾಜಾಗಿದ್ದು, ಈ ಸುದ್ದಿ ಕೇಳಿ ನೆಟ್ಟಿಗರು ಶಾಕ್ ಆಗಿದ್ದಾರೆ. ಇಂಗ್ಲೆಂಡಿನ ಕುಟುಂಬವೊಂದಕ್ಕೆ ಮನೆಯನ್ನು ಸ್ವಚ್ಛಗೊಳಿಸುತ್ತಿದ್ದಾಗ 19ನೇ ಶತಮಾನದ ಬೀರುವೊಂದರಲ್ಲಿ 285 ವರ್ಷ ಹಳೆಯ ನಿಂಬೆಹಣ್ಣು ಸಿಕ್ಕಿದೆ. ಈ ಹಣ್ಣು ಇದೀಗ ಸುಮಾರು ರೂ.1.5 ಲಕ್ಷಕ್ಕೆ ಹರಾಜಾಗಿ ದಾಖಲೆ ಬರೆದಿದೆ.

ಆದ್ರೆ, ಈ ನಿಂಬೆಹಣ್ಣು ತಿನ್ನಲು ಯೋಗ್ಯವಾಗಿಲ್ಲ. ಬ್ರಿಟಿಷ್ ಮಾಧ್ಯಮ ವರದಿಗಳ ಪ್ರಕಾರ, ಕುಟುಂಬವೊಂದಕ್ಕೆ ಮನೆಯನ್ನು ಸ್ವಚ್ಛಗೊಳಿಸುವಾಗ 19ನೇ ಶತಮಾನದ ನಿಂಬೆಹಣ್ಣು ಸಿಕ್ಕಿದೆ. ಇದು 2 ಇಂಚಿನ ಕಂದುಬಣ್ಣದ ವಿಲ್ವೆಡ್ ತಳಿಯ ನಿಂಬೆ. ಸುಮಾರು 19ನೇ ಶತಮಾನದ್ದು ಅಂತ ತಿಳಿದಿದ್ದ ಕುಟುಂಬಕ್ಕೆ, ಅದು 285 ವರ್ಷ ಹಳೆಯದು ಎಂದು ತಿಳಿದು ಶಾಕ್ ಆಗಿದೆ. ಇದಲ್ಲದೆ, ನಿಂಬೆ ಮೇಲೆ ನವೆಂಬರ್ 4, 1739 ರಂದು ಮಿಸ್ ಇ ಬಾಕ್ಸರ್ ಅದನ್ನು ಉಡುಗೊರೆಯಾಗಿ ನೀಡಿದ್ದಾಗಿ ಬರೆಯಲಾಗಿದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಈ ನಿಂಬೆಯನ್ನು ಭಾರತದಿಂದ ಇಂಗ್ಲೆಂಡ್‌ಗೆ ತರಲಾಯಿತು ಎಂದು ನಂಬಲಾಗಿದೆ.

Categories
ಕಾರ್ಕಳ ರಾಜ್ಯ

ನಕ್ಸಲ್ ಮುಖಂಡೆ ಶ್ರೀಮತಿಯ ಎರಡು ದಿನಗಳ ಪೊಲೀಸ್ ಕಸ್ಟಡಿ ಅಂತ್ಯ

ನಕ್ಸಲ್ ಮುಖಂಡೆ ಶ್ರೀಮತಿಯ ಎರಡು ದಿನಗಳ ಪೊಲೀಸ್ ಕಸ್ಟಡಿ ಅಂತ್ಯ
– ನ್ಯಾಯಾಂಗ ಬಂಧನ ವಿಸ್ತರಿಸಿ ನ್ಯಾಯಾಲಯ ಆದೇಶ
ಕರಿಮಣಿ ತಂದ ಆಪತ್ತು
– ಹೆಂಡತಿಯ ರೀಲ್ಸ್ ಗೆ ಗಂಡ ನೇಣಿಗೆ ಶರಣು

NAMMUR EXPRESS NEWS
ಕಾರ್ಕಳ: ಈದು ಗ್ರಾಮದ ಗುಂಡಿ ಸದಾಶಿವ ಗೌಡನ ಹತ್ಯೆಯ ಪ್ರಮುಖ ಆರೋಪಿ ಇತ್ತೀಚೆಗಷ್ಟೇ ಕೇರಳ ಪೊಲೀಸರಿಂದ ಬಂಧಿತಳಾಗಿದ್ದ ಕುಖ್ಯಾತ ನಕ್ಸಲ್ ನಾಯಕಿ ಶ್ರೀಮತಿ(೨೮) ಎಂಬಾಕೆಯನ್ನು ಕಾರ್ಕಳ ಪೊಲೀಸರು ಬಾಡಿ ವಾರಂಟ್ ಪಡೆದು ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿ ಎರಡು ದಿನಗಳ ಪೊಲೀಸ್ ಕಸ್ಟಡಿ ಪಡೆದುಕೊಂಡು ತೀವ್ರ ವಿಚಾರಣೆ ನಡೆಸಿ ಗುರುವಾರ ಮತ್ತೆ ಬಿಗುಭದ್ರತೆಯಲ್ಲಿ ಕಾರ್ಕಳದ ಕೋರ್ಟಿಗೆ ಹಾಜರುಪಡಿಸಿದರು. ನ್ಯಾಯಾಯಲವು ಆಕೆಯ ನ್ಯಾಯಾಂಗ ಬಂಧನವನ್ನು ವಿಸ್ತರಿಸಿ ಕೇರಳ ಪೊಲೀಸರಿಗೆ ಆಕೆಯನ್ನು ಹಸ್ತಾಂತರಿಸಿ ಆದೇಶಿಸಿದೆ.

ಉಡುಪಿ, ಚಿಕ್ಕಮಗಳೂರು ಜಿಲ್ಲೆಯಲ್ಲಿ ನಕ್ಸಲ್‌ ಚಟುವಟಿಕೆಯಲ್ಲಿ ಸಕ್ರೀಯರಾಗಿದ್ದ ಶೃಂಗೇರಿ ದೇವಳಕೊಪ್ಪನಕ್ಸಲ್ ನಾಯಕಿ ಶ್ರೀಮತಿಯನ್ನು ಕಾರ್ಕಳ ಡಿವೈಎಸ್ಪಿ ಅರವಿಂದ ಕಲಗುಜ್ಜಿ ನೇತೃತ್ವದ ಪೊಲೀಸರ ತಂಡ ತೀವ್ರ ವಿಚಾರಣೆ ನಡೆಸಿತು.ಬಳಿಕ ಈಕೆಯನ್ನು ಘಟನಾ ಸ್ಥಳಕ್ಕೆ ಕರೆದೊಯ್ದು ಮಹಜರು ನಡೆಸಿ ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತುಕಳೆದ ೨೦೧೧ರ ನ.೧೯ರಂದು ಸದಾಶಿವ ಗೌಡ ಅವರನ್ನು ಪೊಲೀಸ್ ಮಾಹಿತಿದಾರ ಎಂಬ ಕಾರಣಕ್ಕಾಗಿ ಶ್ರೀಮತಿ ಮತ್ತು ಅವಳ ತಂಡವು ಅಪಹರಿಸಿ ಕಬ್ಬಿನಾಲೆಯಲ್ಲಿ ಮರಕ್ಕೆ ಕಟ್ಟಿಹಾಕಿ ಗುಂಡಿಕ್ಕಿ ಹತ್ಯೆಗೈದ ಆರೋಪದ ಮೇಲೆ ಶ್ರೀಮತಿ ವಿರುದ್ಧ ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಘಟನೆಯ ಬಳಿಕ ಆಕೆ ನಾಪತ್ತೆಯಾಗಿದ್ದಳು. ಇದೀಗ ಈ ಪ್ರಕರಣದ ನಡೆದು ಬರೋಬ್ಬರಿ ೧೩ ವರ್ಷಗಳ ಬಳಿಕ ಈಕೆಯ ವಿಚಾರಣೆ ನಡೆಸಲಾಗುತ್ತಿದ್ದು, ಯಾವ ಕಾರಣಕ್ಕಾಗಿ ಸದಾಶಿವ ಗೌಡ ಅವರನ್ನು ಹತ್ಯೆ ಮಾಡಲಾಗಿದೆ ಹಾಗೂ ಕೊಲೆ ಪ್ರಕರಣದಲ್ಲಿ ಯಾರೆಲ್ಲ ಭಾಗಿಯಾಗಿದ್ದರು ಎನ್ನುವ ಕುರಿತು ಪೊಲೀಸರು ವಿಚಾರಣೆ ವೇಳೆ ಮಾಹಿತಿ ಕಲೆ ಹಾಕಿದ್ದಾರೆ ಎನ್ನಲಾಗಿದೆ.

ನಕ್ಸಲ್ ಶ್ರೀಮತಿಯ ವಿರುದ್ಧದ ವಿಚಾರಣೆ ಪೂರ್ಣ:

ಡಿವೈಎಸ್ಪಿ ಅರವಿಂದ ಕಲಗುಜ್ಜಿ ಕೇರಳ ಪೊಲೀಸರಿಂದ ಬಂಧಿತಳಾಗಿದ್ದ ನಕ್ಸಲ್‌ ಶ್ರೀಮತಿಯ ವಿಚಾರಣೆ ಮುಗಿದೆ, ಆದರೆ ಈಕೆಯ ವಿರುದ್ದ ಚಿಕಮಗಳೂರು ಜಿಲ್ಲೆಯ ವಿವಿಧ ಠಾಣೆಗಳಲ್ಲಿ ದಾಖಲಾದ ಪ್ರಕರಣಗಳ ವಿಚಾರಣೆ ಬಾಕಿಯಿದ್ದು ಈ ಕುರಿತು ಪೊಲೀಸರು ಬಾಡಿ ವಾರೆಂಟ್ ಪಡೆದು ಪೊಲೀಸ್ ಕಸ್ಟಡಿಗೆ ಪಡೆಯುವ ಸಾಧ್ಯತೆಯಿದೆ ಎಂದು ತನಿಖಾಧಿಕಾರಿ ಅರವಿಂದ ಕಲಗುಜ್ಜಿ ಹೇಳಿದ್ದಾರೆ

ಪೊಲೀಸ್‌ ಠಾಣೆಗೆ ಬಿಗು ಭದ್ರತೆ:

ನಕ್ಸಲ್ ನಾಯಕಿ ಶ್ರೀಮತಿಯ ವಿಚಾರಣೆ ನಡೆಯುತ್ತಿದ್ದ ಹಿನ್ನಲೆಯಲ್ಲಿ ಕಾರ್ಕಳ ನಗರ ಠಾಣೆಗೆ ಬಿಗಿ ಭದ್ರತೆಯನ್ನು ಒದಗಿಸಲಾಗಿತ್ತು. ನಕ್ಸಲ್ ನಿಗ್ರಹ ದಳದ ಪೊಲೀಸರು ಸೇರಿದಂತೆ ಪೊಲೀಸ್ ಇಲಾಖೆ ಸಿಬ್ಬಂದಿಗಳು ಠಾಣೆಗೆ ಬರುವ ಪ್ರತಿಯೊಬ್ಬರನ್ನೂ ತಪಾಸಣೆ ಮಾಡಿ ಬಿಡುವ ದೃಶ್ಯ ಕಂಡುಬಗಿತು.

ಕರಿಮಣಿ ತಂದ ಆಪತ್ತು – ಹೆಂಡತಿಯ ರೀಲ್ಸ್ ಗೆ ಗಂಡ ನೇಣಿಗೆ ಶರಣು

ಇತ್ತೀಚೆಗೆ ಈ ರೀಲ್ಸ್ ಗಳ ಹುಚ್ಚು ವಿಪರೀತವಾಗಿ ಯುವತಿಯರು, ಮಹಿಳೆಯರು, ವಯಸ್ಸಾದವರು, ಮಕ್ಕಳು ಯಾವುದೇ ವಯಸ್ಸಿನ ಹಂಗಿಲ್ಲದೆ, ಯಾರೇನಾದಾರು ಅಂದುಕೊಂಡಾರು ಎಂಬ ಅಂಜಿಕೆಯೂ ಇಲ್ಲದೆ ಯಾವುದೋ ಹಾಡಿಗೆ ಕುಣಿಯಲು ಶುರುಮಾಡಿ ಬಿಡುತ್ತಾರೆ. ಯಾರೂ ಏನೂ ಅಂದುಕೊಳ್ಳುವುದೂ ಇಲ್ಲ. ಅದೊಂದು ಮನರಂಜನೆಯಾಗಿದೆ. ಆದರೆ ಕೆಲವು ಕಡೆ ಈ ವಿಷಯಗಳು ಮನರಂಜನೆಯ ಬದಲು ಸಾಕಷ್ಟು ಜಗಳ ಮನಸ್ತಾಪಗಳಿಗೆ ಕಾರಣವೂ ಆಗುತ್ತವೆ. ಚಾಮರಾಜನಗರ ಜಿಲ್ಲೆಯ ಮಹಿಳೆಯೊಬ್ಬಳು ಇತ್ತೀಚೆಗೆ ವೈರಲ್ ಆದ ‘ಕರಿಮಣಿ ಮಾಲಿಕ’ ಎಂಬ ಹಾಡಿಗೆ ರೀಲ್ಸ್ ಮಾಡಿದ್ದಾಳೆ. ಈ ಬಗ್ಗೆ ಗಂಡ ಹೆಂಡತಿಯರ ನಡುವೆ ಜಗಳವಾಗಿದೆ. ಜಗಳ ಜೋರಾಗಿ ಮನನೊಂದ ಆಕೆಯ ಗಂಡ ನೇಣಿಗೆ ಶರಣಾಗಿದ್ದಾನೆ. ರೀಲ್ಸ್ ಮಾಡುವ ಮೊದಲು ಮನೆ ಮಂದಿಯ ಬಗ್ಗೆ ಯೋಚಿಸುವುದೂ ಅಗತ್ಯವಾಗಿದೆ. ಈ ಘಟನೆಯನ್ನು ಒಂದು ನಿದರ್ಶನವನ್ನಾಗಿ ರೀಲ್ಸ್ ಮಾಡಿ ಜಾಲತಾಣಗಳಲ್ಲಿ ಹಾಕುವ ಮೊದಲು ಗಮನದಲ್ಲಿ ಇರಿಸಿಕೊಳ್ಳುವುದು ಕ್ಷೇಮ.‌

Categories
ಉದ್ಯೋಗ ಸುದ್ದಿ ರಾಷ್ಟ್ರೀಯ ವಾರ್ತೆ

ಉದ್ಯೋಗಕ್ಕೆ ಕಾಯುತ್ತಿರುವವರಿಗೆ ಗುಡ್ ನ್ಯೂಸ್!

ಉದ್ಯೋಗಕ್ಕೆ ಕಾಯುತ್ತಿರುವವರಿಗೆ ಗುಡ್ ನ್ಯೂಸ್!
– ಐಟಿ ಕಂಪನಿಗಳಲ್ಲಿ 40 ಸಾವಿರಕ್ಕೂ ಹೆಚ್ಚು ಉದ್ಯೋಗ
– ಸ್ಕಿಲ್ ಇದ್ದವರಿಗೆ ಕೆಲಸ ನೀಡುವ ಕಂಪನಿಗಳು
– ರಿಟೇಲ್, ಹೆಲ್ತ್ ಕೇರ್, ಲಾಜಿಸ್ಟಿಕ್ ಕ್ಷೇತ್ರದಲ್ಲಿ ಅವಕಾಶ

NAMMUR EXPRESS NEWS
ನವ ದೆಹಲಿ: ದೇಶದಲ್ಲಿ ಮತ್ತೊಮ್ಮೆ ಬೃಹತ್ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿ ಆಗಲಿದೆ. ಮುಂಚೂಣಿಯಲ್ಲಿರುವ ಐಟಿ ಕಂಪನಿಗಳು ಈ ವರ್ಷ 40 ಸಾವಿರಕ್ಕೂ ಹೆಚ್ಚು ಹೊಸ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲು ಯೋಜಿಸಿವೆ ಎಂದು ಟೀಮ್‌ಲೀಸ್‌ ಎಡ್‌ಟೆಕ್‌ನ ಕರಿಯರ್‌ ಔಟ್‌ಲುಕ್‌ ರಿಪೋರ್ಟ್‌ ವರದಿ ಮಾಡಿದೆ. ಕೃತಕ ಬುದ್ಧಿಮತ್ತೆ ಹಾಗೂ ಕ್ಷಿಪ್ರಗತಿಯಲ್ಲಿ ದತ್ತಾಂಶಗಳ ಪರಿಷ್ಕರಣೆಗೆ ಬೇಡಿಕೆ ಹೆಚ್ಚುತ್ತಿದೆ. ಇದು ಐಟಿ ಉದ್ಯಮದ ಬೆಳವಣಿಗೆಗೆ ಬಲ ನೀಡುತ್ತಿದೆ ಎಂದು ನೇಮಕಾತಿ ಸಂಸ್ಥೆ ಟೀಮ್‌ಲೀಸ್‌ ಡಿಜಿಟಲ್‌ ವಿಶ್ಲೇಷಣೆ ಮಾಡಿದೆ. ನಿರ್ಮಾಣ ಕಂಪನಿಗಳು ಇದೇ ಜನವರಿಯಿಂದ ಜೂನ್‌ ಅವಧಿಯಲ್ಲಿ15ರಿಂದ 30 ಪರ್ಸೆಂಟ್‌ಗೂ ಹೆಚ್ಚು ಪದವೀಧರನ್ನು ನೇಮಿಸಿಕೊಳ್ಳಬಹುದು ಎಂದು ಇದೇ ಸಂಸ್ಥೆ ಅಂದಾಜು ಮಾಡಿದೆ.‘‘ಹೊಸಬರು ಎಐ ವ್ಯವಸ್ಥೆಗಳೊಂದಿಗೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಿದ್ಧರಾಗಿರಬೇಕು.

ಅಂಥವರಿಗೆ ಅವಕಾಶಗಳು ಸೃಷ್ಟಿಯಾಗುತ್ತಿವೆ,’’ ಎಂದು ಟೀಮ್‌ಲೀಸ್‌ ಎಡ್‌ಟೆಕ್‌ನ ಸಿಒಒ ಜೈದೀಪ್‌ ಕೇವಲ್‌ರಮಾನಿ ಹೇಳಿದ್ದಾರೆ. ನೇಮಕಾತಿ ಪ್ರಕ್ರಿಯೆ ಆರಂಭವಾಗುವ ಲಕ್ಷಣಗಳು ಕಾಣಿಸುತ್ತಿದ್ದರೂ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಹಣಕಾಸು ವರ್ಷದಲ್ಲಿನೇಮಕಾತಿ ಪ್ರಮಾಣ ಕಡಿಮೆ ಇದೆ. ಜಾಗತಿಕ ಆರ್ಥಿಕತೆಯ ವೇಗ ಕುಂಠಿತಗೊಂಡಿದೆ. ಆದರೂ ನಮ್ಮ ಇತ್ತೀಚಿನ ಸಮೀಕ್ಷೆಯು ಭಾರತದ ಬೆಳವಣಿಗೆಯ ಕತೆಯಲ್ಲಿ ಉದ್ಯೋಗದಾತರ ವಿಶ್ವಾಸ ಹೆಚ್ಚಿದೆ. ಉದ್ಯೋಗಿಗಳನ್ನು ನೇಮಿಸಿಕೊಳ್ಳುವ ಸಕಾರಾತ್ಮಕ ಅಂಶಗಳು ಕಾಣಿಸುತ್ತಿವೆ,’’ ಎಂದು ಟೀಮ್‌ಲೀಸ್‌ ಸಿಇಒ ಶಂತನು ರೂಜ್‌ ಹೇಳಿದ್ದಾರೆ.

ಯಾರಿಗೆ ಇದೆ ಬೇಡಿಕೆ?

ಪ್ರಸ್ತುತ ಕ್ಯಾಲೆಂಡರ್‌ ವರ್ಷದ ಮೊದಲಾರ್ಧದಲ್ಲಿಕೆಮಿಕಲ್‌ ಎಂಜಿನಿಯರ್‌, ಲೀಗಲ್‌ ಅಸೋಸಿಯೇಟ್‌, ಆರ್ಕಿಟೆಕ್ಟ್, ಗ್ರಾಫಿಕ್‌ ಡಿಸೈನರ್‌, ಮೈಕ್ರೋಬಯಾಲಜಿಸ್ಟ್‌, ಫೈನಾನ್ಷಿಯಲ್‌ ಅನಾಲಿಸ್ಟ್‌, ಕ್ಲಿನಿಕಲ್‌ ಡೇಟಾ ಅನಾಲಿಸ್ಟ್‌, ಜೂನಿಯರ್‌ ಪ್ರಾಡಕ್ಟ್ ಅನಾಲಿಸ್ಟ್‌, ಕ್ಲೌಡ್‌ ಸಪೋರ್ಟ್‌ ಎಂಜಿನಿಯರ್‌, ಡಿಜಿಟಲ್‌ ಮಾರ್ಕೆಟಿಂಗ್‌ ಎಕ್ಸಿಕ್ಯೂಟಿವ್‌, ಸಾಫ್ಟ್‌ವೇರ್‌ ಡೆವಲಪರ್ಸ್, ಮೆಡಿಕಲ್‌ ಕೋಡರ್‌, ಕಂಟೆಂಟ್‌ ಕ್ರಿಯೇಟರ್‌, ನೆಟ್‌ವರ್ಕ್ ಎಂಜಿನಿಯರ್‌ ಮತ್ತು ಇ-ಕಾಮರ್ಸ್‌ ಎಕ್ಸಿಕ್ಯೂಟಿವ್‌ ಉದ್ಯೋಗಗಳಲ್ಲಿಹೊಸಬರಿಗೆ ಅವಕಾಶಗಳಿವೆ ಎಂದು ಟೀಮ್‌ಲೀಸ್‌ ವಿಶ್ಲೇಷಣೆ ಮಾಡಿದೆ. ರಿಟೇಲ್‌ ವಲಯ ಶೇ.46,ಹೆಲ್ತ್‌ ಕೇರ್‌ ವಲಯ ಶೇ.44, ಲಾಜಿಸ್ಟಿಕ್ಸ್‌ ವಲಯ ಶೇ.32 ಹೆಚ್ಚು ಉದ್ಯೋಗ ಸೃಷ್ಟಿ ಮಾಡಲಿದೆ.

Categories
ಬೆಂಗಳೂರು ರಾಜ್ಯ

ರಾಜ್ಯ ಸರ್ಕಾರದಿಂದ ಬೇಬಿ ಅಂಬುಲೆನ್ಸ್‌ ಆರಂಭ.!

ರಾಜ್ಯ ಸರ್ಕಾರದಿಂದ ಬೇಬಿ ಅಂಬುಲೆನ್ಸ್‌ ಆರಂಭ.!
– 8ಜಿ ನೇತ್ರ ಚಿಕಿತ್ಸಾ ಘಟಕಕ್ಕೆ ಚಾಲನೆ
– ಏನಿದರ ವಿಶೇಷತೆ 

NAMMUR EXPRESS NEWS
ಬೆಂಗಳೂರು: ನವಜಾತ ಶಿಶುಗಳಿಗೆ ತುರ್ತು ಆರೋಗ್ಯ ಸೇವೆ ಮತ್ತು ಶಿಶುಗಳ ಮರಣ ಪ್ರಮಾಣವನ್ನು ಏಕ ಅಂಕಿಗೆ ಇಳಿಸುವ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿ ಆರೋಗ್ಯ ಇಲಾಖೆ ನವಜಾತ ಶಿಶುಗಳ ಆಂಬ್ಯುಲೆನ್ಸ್‌ ಸೇವೆಯನ್ನು ಪ್ರಾರಂಭಿಸಿದೆ. ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್ ಬುಧವಾರ ನೂತನ 4 ನವಜಾತ ಆಂಬ್ಯುಲೆನ್ಸ್‌ ಸೇವೆಗಳಿಗೆ ಚಾಲನೆ ನೀಡಿದರು. ಅವಧಿಪೂರ್ವವಾಗಿ ಜನಿಸಿದ ಮಗು ಮತ್ತು ಗಂಭೀರ ಆರೋಗ್ಯ ಸಮಸ್ಯೆಗೆ ತುತ್ತಾಗಿರುವ ಶಿಶುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಸುರಕ್ಷಿತವಾಗಿ ಕರೆದೊಯ್ಯುವ ನಿಟ್ಟಿನಲ್ಲಿ ಈ ಅಂಬ್ಯುಲೆನ್ಸ್ ಗಳು ಸಹಕಾರಿಯಾಗಲಿವೆ. ಸುಧಾರಿತ ಜೀವ ರಕ್ಷಕ ಸೌಲಭ್ಯಗಳನ್ನು ಒಳಗೊಂಡ ವಾಹನದಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಸುರಕ್ಷಿತವಾಗಿ ಕರೆದೊಯ್ಯಬಹುದಾಗಿದೆ. ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಿಂದ ದೂರದ ಪ್ರದೇಶಗಳಲ್ಲಿ ಆರೋಗ್ಯ ಸಮಸ್ಯೆ ಇರುವ ಮತ್ತು ವಿಶೇಷ ಆರೈಕೆಯ ಅಗತ್ಯವಿರುವ ಶಿಶುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಸುರಕ್ಷಿತವಾಗಿ ಆಸ್ಪತ್ರೆಗಳಿಗೆ ಸಾಗಿಸುವಲ್ಲಿ ಅಂಬ್ಯುಲೆನ್ಸ್‌ ಗಳ ಸೇವೆ ಮುಖ್ಯ.

ನೂತನ ನವಜಾತ ಶಿಶು ಆಂಬ್ಯುಲೆನ್ಸ್‌ಗಳು ಸೇವೆಗೆ ಲಭ್ಯವಾಗುವುದರ ಮೂಲಕ ಆರೈಕೆಯಲ್ಲಿನ ಅಂತರವು ಕಡಿಮೆಯಾಗಲಿದೆ. ವೆಂಟಿಲೇಟರ್, ಮೇಲ್ವಿಚಾರಣೆ ವ್ಯವಸ್ಥೆಗಳು ಸೇರಿದಂತೆ ಸುಧಾರಿತ ಜೀವ ರಕ್ಷಕ ಸಾಧನಗಳನ್ನು ಈ ಆಂಬ್ಯುಲೆನ್ಸ್ ಗಳು ಒಳಗೊಂಡಿವೆ. ಗಂಭೀರ ಅನಾರೋಗ್ಯ ಸಮಸ್ಯೆ ಎದುರಿಸುತ್ತಿರುವ ನವಜಾತ ಶಿಶುಗಳನ್ನು ಆಂಬ್ಯುಲೆನ್ಸ್‌ನಲ್ಲಿ ಆರೈಕೆ ಮಾಡಲು ಪರಿಣತಿ ಹೊಂದಿರುವ ನರ್ಸ್‌ಗಳು ಲಭ್ಯವಿರುತ್ತಾರೆ. ರಾಜ್ಯದ ನಾಲ್ಕು ವಿಭಾಗಗಳ ಪ್ರಮುಖ ಆಸ್ಪತ್ರೆಗಳಿಗೆ ನವಜಾತಾ ಅಂಬ್ಯುಲೆನ್ಸ್ ಅನ್ನ ವಿತರಿಸಲಾಗುತ್ತಿದ್ದು, ಮುಂಬರುವ ದಿನಗಳಲ್ಲಿ ರಾಜ್ಯಾದ್ಯಂತ ನವಜಾತಾ ಅಂಬ್ಯುಲೆನ್ಸ್‌ ಸೇವೆ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಬೆಂಗಳೂರಿನ ವಾಣಿವಿಲಾಸ ಆಸ್ಪತ್ರೆ, ಮೈಸೂರಿನ ಚಲುವಾಂಬ ಆಸ್ಪತ್ರೆ, ರಾಯಚೂರಿನ ರಾಯಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆ, ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ನವಜಾತಾ ಅಂಬ್ಯುಲೆನ್ಸ್ ಗಳನ್ನ ನಿಗದಿಪಡಿಸಲಾಗಿದೆ. ಆರಂಭಿಕ ಹಂತದಲ್ಲೇ ಚಿಕಿತ್ಸೆ ನೀಡುವುದರಿಂದ ಗಂಭೀರ ಅನಾರೋಗ್ಯ ಸಮಸ್ಯೆ ಇರುವ ನವಜಾತ ಶಿಶುಗಳು ಬದುಕುಳಿಯುವ ಸಾಧ್ಯತೆಗಳು ಹೆಚ್ಚಾಗಲಿದೆ.

ವಿಶೇಷ ಆರೈಕೆ, ಸಮಯೋಚಿತ ಚಿಕಿತ್ಸೆ ನೀಡುವುದರಿಂದ ದೀರ್ಘಕಾಲದ ಆರೋಗ್ಯ ಸಮಸ್ಯೆಗಳು ಬಾರದಂತೆ ತಡೆಯಬಹುದು, ನವಜಾತ ಶಿಶುಗಳ ಆರೋಗ್ಯವನ್ನು ಸುಧಾರಿಸಬಹುದು. ಹೆಚ್ಚಿನ ಚಿಕಿತ್ಸೆಗಾಗಿ ಕರೆದೊಯ್ಯವ ಸಮಯದಲ್ಲಿ ತಮ್ಮ ಮಗು ತಜ್ಞರ ಆರೈಕೆಯನ್ನು ಪಡೆಯುತ್ತಿರುವುದರಿಂದ ಪೋಷಕರ ಭಯ, ಒತ್ತಡ ಕಡಿಮೆಯಾಗಲಿದೆ. 8ಜಿ ನೇತ್ರ ಚಿಕಿತ್ಸಾ ಘಟಕಕ್ಕೆ ಚಾಲನೆ : ರಾಷ್ಟ್ರೀಯ ಅಂಧತ್ವ ಮತ್ತು ದೃಷ್ಟಿಹೀನತೆಯ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ 8 ‘ಜಿಲ್ಲಾ ಸಂಚಾರಿ ನೇತ್ರ ಚಿಕಿತ್ಸಾ ಘಟಕ’ಕ್ಕೆ ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರಾದ ದಿನೇಶ್ ಗುಂಡೂರಾವ್ ಅವರು ಇಂದು ಆರೋಗ್ಯ ಸೌಧದಲ್ಲಿ ಚಾಲನೆ ನೀಡಿದರು.

ಆರೋಗ್ಯ ಸೇವೆಗಳು ಲಭ್ಯವಿಲ್ಲದ ಗ್ರಾಮೀಣ, ಗುಡ್ಡಗಾಡು ಪ್ರದೇಶಗಳಲ್ಲಿರುವ ಜನರಿಗೆ ಕಣ್ಣಿನ ಆರೈಕೆ ಸೇವೆಗಳನ್ನು ತಲುಪಿಸುವ ನಿಟ್ಟಿನಲ್ಲಿ ಜಿಲ್ಲಾ ಸಂಚಾರಿ ನೇತ್ರ ಚಿಕಿತ್ಸಾ ಘಟಕವು ನೆರವಾಗಲು,ಗ್ರಾಮೀಣ ಪ್ರದೇಶಗಳಿಗೆ ತೆರಳಿ ಸಾರ್ವಜನಿಕರ ಕಣ್ಣಿನ ಪ್ರಾಥಮಿಕ ತಪಾಸಣೆ ನಡೆಸಲು ಅಗತ್ಯವಾದ ಉಪಕರಣಗಳನ್ನು ಒಳಗೊಂಡಿರುವ ಈ ವಾಹನದಲ್ಲಿ ಓರ್ವ ನೇತ್ರ ತಜ್ಞರು, ಪ್ಯಾರಾ ಮೆಡಿಕಲ್ ನೇತ್ರ ಸಹಾಯಕ, ಬ್ಲಾಕ್ ಹೆಲ್ತ್ ಎಜುಕೇಶನ್ ಆಫೀಸರ್, ಸ್ಟಾಫ್ ನರ್ಸ್‌ ಇರಲಿದ್ದಾರೆ. ಪ್ರತಿ ವಾಹನವು 15 ರೋಗಿಗಳನ್ನು ಸಮೀಪದ ಆರೋಗ್ಯ ಕೇಂದ್ರಗಳಿಗೆ ಕರೆದೊಯ್ಯುವ ಸಾಮರ್ಥ್ಯವನ್ನು ಹೊಂದಿದೆ. ಸಂಚಾರಿ ನೇತ್ರ ಚಿಕಿತ್ಸಾ ಘಟಕದ ಕಾರ್ಯಚಾರಣೆಯ ಮೂಲಕ ಜಿಲ್ಲಾ ಆಸ್ಪತ್ರೆಗಳಲ್ಲಿ ಕಣ್ಣಿನ ಆರೈಕೆ ಸೇವಗಳನ್ನು ಹೆಚ್ಚಿಸುವುದು. ಕಣ್ಣಿನ ಪೊರೆ, ಡಯಾಬಿಟಿಕ್ ರೆಟಿನೋಪತಿ, ಗ್ಲುಕೋಮಾ, ಕಾರ್ನಿಯ ಅಸ್ಪಷ್ಟತೆ ಮುಂತಾದ ಸಮಸ್ಯೆಗಳ ತಪಾಸಣೆ ಮತ್ತು ಶಾಲೆಗಳಿಗೆ ತೆರಳಿ ವಿದ್ಯಾರ್ಥಿಗಳ, ಶಿಕ್ಷಕರ ಕಣ್ಣಿನ ತಪಾಸಣೆಗೆ ಈ ವಾಹನಗಳು ನೆರವಾಗಲಿವೆ.

Categories
ರಾಜ್ಯ

ಎಚ್ ಡಿ ದೇವೆಗೌಡ ಆರೋಗ್ಯದಲ್ಲಿ ಏರುಪೇರು!

ಎಚ್ ಡಿ ದೇವೆಗೌಡ ಆರೋಗ್ಯದಲ್ಲಿ ಏರುಪೇರು!
– ಬೆಂಗಳೂರು ಮಣಿಪಾಲ್ ಆಸ್ಪತ್ರೆಗೆ ದಾಖಲು
– ಉಸಿರಾಟದ ಸಮಸ್ಯೆ: ವೈದ್ಯರ ಚಿಕಿತ್ಸೆ

NAMMUR EXPRESS NEWS
ಬೆಂಗಳೂರು: ಅನಾರೋಗ್ಯದ ಕಾರಣ ಮಾಜಿ ಪಿಎಂ ಎಚ್. ಡಿ ದೇವೇಗೌಡ ನಗರದ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ವೈದ್ಯರು ಚಿಕಿತ್ಸೆ ಮುಂದುವರೆಸಿದ್ದಾರೆ.
ಗುರುವಾರ ಬೆಳಿಗ್ಗೆ ದೇವೇಗೌಡರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದು, ಕೂಡಲೇ ಅವರನ್ನು ಮಣಿಪಾಲ್ ಆಸ್ಪತ್ರೆಗೆ ಕರೆದುಕೊಂಡೊ ಹೋಗಲಾಗಿದೆ. ಅಲ್ಲಿನ ಶ್ವಾಸಕೋಶ ತಜ್ಞ ಡಾ.ಸತ್ಯನಾರಾಯಣ ಅವರು ಪರೀಕ್ಷೆ ನಡೆಸಿ, ಆಸ್ಪತ್ರೆಯಲ್ಲಿಯೇ ದಾಖಲಿಸಿಕೊಂಡು ನಿಗಾವಹಿಸಿದ್ದಾರೆ.

ಆತಂಕ ಪಡುವುದು ಬೇಡ :
ಸದ್ಯ ದೇವೇಗೌಡರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಆತಂಕ ಪಡುವ ಅಗತ್ಯ ಇಲ್ಲ ಎಂದು ಮಣಿಪಾಲ್ ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದಾರೆ. 90 ವರ್ಷದ ಎಚ್‌ಡಿ ದೇವೇಗೌಡ ಅವರು ಸಕ್ರಿಯ ರಾಜಕಾರಣದಲ್ಲಿದ್ದು ಸದ್ಯ ಅವರು ಲೋಕಸಭೆ ಚುನಾವಣೆಯ ಪ್ರಚಾರ, ಸಭೆಗಳನ್ನು ನಡೆಸುತ್ತಿದ್ದಾರೆ

Categories
ಶಿಕ್ಷಣ ಶಿವಮೊಗ್ಗ

ಮಂದಾರ ಜ್ಞಾನದಾಯಿನಿ ಪಿಯು ಕಾಲೇಜು, ಶಿವಮೊಗ್ಗ – ಪ್ರವೇಶ ಪ್ರಕ್ರಿಯೆ ಆರಂಭವಾಗಿದೆ

ಎಕ್ಸಲೆಂಟ್ ಎಜುಕೇಶನ್ ಅಕಾಡೆಮಿ(ರಿ) ತೀರ್ಥಹಳ್ಳಿ
ಆಡಳಿತದಲ್ಲಿ
– ಮಂದಾರ ಜ್ಞಾನದಾಯಿನಿ ಪಿಯು ಕಾಲೇಜು, ಶಿವಮೊಗ್ಗ
– ಪ್ರವೇಶ ಪ್ರಕ್ರಿಯೆ ಆರಂಭವಾಗಿದೆ

NAMMUR EXPRESS
ಕಾಲೇಜಿನ ವಿಶೇಷತೆ
ವಿಜ್ಞಾನ ವಿಭಾಗ
ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಜೀವಶಾಸ್ತ್ರ (PCMB)
ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಕಂಪ್ಯೂಟರ್ ಸೈನ್ಸ್(PCMCS)

ಕಾಮರ್ಸ್ ವಿಭಾಗ
ಇಬಿಎಸಿಎಸ್ (ಅರ್ಥಶಾಸ್ತ್ರ, ವ್ಯಾಪಾರ ಅಧ್ಯಯನ, ಅಕೌಂಟೆನ್ಸಿ, ಕಂಪ್ಯೂಟರ್ ಸೈನ್ಸ್)

We prepare

NEET : Medical aspirants
CET : Engineering, Agricultural, Veternery in Karnataka college
NDA : B.tech in National Defence academy
JEE Mains : Engineering in NITS-NATA / JEE – ARCH: Architecture aspirants
CA/ CS COACHING : Charted accountant / Company secretary

TRANSPORTATION FACILITY FOR DAY SCHOLARS

ನಮ್ಮ ಸಾಧನೆಯ ಮೈಲಿಗಲ್ಲು

•100% ಫಲಿತಾಂಶ ದ್ವಿತೀಯ ಪಿಯುಸಿ ಬೋರ್ಡ್
• 4th RANK ದ್ವಿತೀಯ ಪಿಯುಸಿ ಬೋರ್ಡ್
• 1520ನೇ RANK CET ( engineering)
• 5608ನೇ RANK JEE main
• NEET ಪರೀಕ್ಷೆಯಲ್ಲಿ 27 ವಿದ್ಯಾರ್ಥಿಗಳು ಅರ್ಹತೆ ಪಡೆದಿರುತ್ತಾರೆ
•293ನೇ RANK NATA (JEE)
• 48ನೇ RANK CEE(RIE)
• NDA ಗೆ ಇಬ್ಬರು ಅರ್ಹತೆ ಪಡೆದಿದ್ದಾರೆ

ನಮ್ಮಲ್ಲಿನ ಸೌಲಭ್ಯಗಳು

• ವಿದ್ಯಾರ್ಥಿ / ವಿದ್ಯಾರ್ಥಿನಿಗೆ ಪ್ರತ್ಯೇಕ ವಸತಿ ಸೌಲಭ್ಯ
• ನುರಿತ ಹಾಗೂ ಕಾಳಜಿ ವಹಿಸೋ ವಾರ್ಡನ್ ಗಳು
• ಗುಣಮಟ್ಟ ಹಾಗೂ ರುಚಿಯಾದ ಊಟದ ವ್ಯವಸ್ಥೆ
• ಹಾಸ್ಟೆಲ್ ವಿದ್ಯಾರ್ಥಿಗಳಿಗೆ ವಿಶೇಷ ಅಧ್ಯಯನ ಸಮಯ
• 24X7  ಆಸ್ಪತ್ರೆ ಸೌಲಭ್ಯ ಪ್ರತಿನಿತ್ಯ ವಿದ್ಯಾರ್ಥಿಗಳಿಗೆ ಚೆಕ್ ಅಪ್
• ನಿಧಾನ ಕಲಿಯುವ ವಿಧ್ಯಾರ್ಥಿಗಳಿಗೆ ವಿಶೇಷ ತರಗತಿಗಳು
• ಸಾಂಸ್ಕೃತಿಕ ಹಾಗೂ ಆಟೋಟಕ್ಕೆ ಹೆಚ್ಚಿನ ಆದ್ಯತೆ

ನಮ್ಮ ಪ್ರತಿಜ್ಞೆ

•ನುರಿತ ಉಪನ್ಯಾಸಕರುಗಳಿಂದ ತರಗತಿಗಳು
•ದಕ್ಷಿಣ ಕನ್ನಡ ಹಾಗೂ ಉಡುಪಿಯ ಅಧ್ಯಾಪಕರು
•60 ವಿದ್ಯಾರ್ಥಿಗಳ ಒಂದು ತಂಡ
•ವಾರಕ್ಕೊಮ್ಮೆ ವಿದ್ಯಾರ್ಥಿಗಳಿಗೆ ವಿಷಯವಾರು ಪರೀಕ್ಷೆಗಳು
•ವಿದ್ಯಾರ್ಥಿಗಳಿಗೆ ಕಲಿಕೆಗೆ ಉತ್ತಮವಾದ ವಾತಾವರಣ
•ಬೋಧನಾ ಅಧ್ಯಾಪಕರಿಂದ ವಿಸ್ತೃತ ಅಧ್ಯಯನ ಸಮಯವನ್ನು ಮೇಲ್ವಿಚಾರಣೆ ಮಾಡಲಾಗುತ್ತದೆ
•ನಿಯಮಿತ ಶಿಕ್ಷಕರ ಪರಸ್ಪರ ಕ್ರಿಯೆಯ ಅವಧಿಗಳು
•ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ದೋಷ ಮುಕ್ತ ಅಧ್ಯಯನ ಸಾಮಾಗ್ರಿ
•ಪರೀಕ್ಷೆ ಫಲಿತಾಂಶ ಪೋಸ್ಟ್ ಹಾಗೂ sms ಕಳುಹಿಸಲಾಗುತ್ತದೆ

ಪ್ರವೇಶಾತಿ ಪ್ರಕ್ರಿಯೆ ಆರಂಭವಾಗಿದೆ

•ಪದವಿ ಪೂರ್ವ (ಪಿಯುಸಿ)
•ಸೈನ್ಸ್ ಹಾಗೂ ಕಾಮರ್ಸ್
•ಶಾಲಾ ವಿಭಾಗ
•ಸ್ಟೇಟ್ ಬೋರ್ಡ್ (1ರಿಂದ 10)
•CBSE (1 ರಿಂದ 10)

INTEGRATED CET/NEET/JEE/NATA/IIT/NDA/ CA/CS COACHING
8618337112 / 8073322637 / 8618958137

ಮಂದಾರ ಜ್ಞಾನದಾಯಿನಿ ಪಿಯು ಕಾಲೇಜು ಅನುಪಿನ ಕಟ್ಟೆ ರಸ್ತೆ, ಗೋಪಿ ಶೆಟ್ಟಿಕೊಪ್ಪ, ಗೋಪಾಳ, ಶಿವಮೊಗ್ಗ – 577205

Categories
ಬೆಂಗಳೂರು

ಮಕ್ಕಳು ನಟಿಸಲು ಡಿಸಿ ಅನುಮತಿ ಕಡ್ಡಾಯ!

ಮಕ್ಕಳು ನಟಿಸಲು ಡಿಸಿ ಅನುಮತಿ ಕಡ್ಡಾಯ!
– ರಾಜ್ಯ ಸರ್ಕಾರ ಆದೇಶ: ಏನಿದು ಆದೇಶ
– ಸಿನಿಮಾ, ಸೀರಿಯಲ್ ನಟನೆ: ವಿಧ್ಯೆಗೆ ಗಮನ ಇಲ್ಲ..!

NAMMUR EXPRESS NEWS
ಬೆಂಗಳೂರು: ರಾಜ್ಯದಲ್ಲಿ ಚಲನಚಿತ್ರಗಳು, ಸೀರಿಯಲ್ ಗಳಲ್ಲಿ ಮಕ್ಕಳು ನಟಿಸುತ್ತಿರುವ ಸಂಖ್ಯೆ ಹೆಚ್ಚಾಗಿದೆ. ಇದರೊಟ್ಟಿಗೆ ಅವರ ವಿದ್ಯಾಭ್ಯಾಸವು ಕುಂಠಿತಗೊಳ್ಳುತ್ತಿದೆ. ಈ ಕಾರಣದಿಂದಾಗಿ ಇನ್ಮುಂದೆ ಮಕ್ಕಳು ಸೀರಿಯಲ್, ಸಿನಿಮಾಗಳಲ್ಲಿ ನಟಿಸೋದಕ್ಕೆ ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆಯುವುದು ಕಡ್ಡಾಯ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ಈ ಕುರಿತಂತೆ ರಾಜ್ಯ ಕಾರ್ಮಿಕ ಇಲಾಖೆಯಿಂದ ಆದೇಶ ಹೊರಡಿಸಲಾಗಿದ್ದು, ಮಕ್ಕಳನ್ನು ಧಾರವಾಹಿ, ಚಲನಚಿತ್ರಗಳಲ್ಲಿ ನಟಿಸಲು ಜಿಲ್ಲಾಧಿಕಾರಿಗಳ ಅನುಮತಿ ಪಡೆಯಬೇಕು. ಮಕ್ಕಳು ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆದ ನಂತ್ರವೇ ಸಿನಿಮಾ, ಸೀರಿಯಲ್ ಗಳಲ್ಲಿ ನಟಿಸಲು ಅವಕಾಶ ಎಂಬುದಾಗಿ ತಿಳಿಸಿದೆ. ಒಂದು ದಿನದಲ್ಲಿ 5 ಗಂಟೆಗೂ ಹೆಚ್ಚು ಕಾಲ ಮಕ್ಕಳನ್ನು ನಟಿಸೋದಕ್ಕೆ ಬಳಸಿಕೊಳ್ಳಬಾರದು. ತಿಂಗಳಲ್ಲಿ ಕೇವಲ 27 ದಿನಗಳು ಮಾತ್ರವೇ ಮಕ್ಕಳನ್ನು ಶೂಟಿಂಗ್ ನಲ್ಲಿ ಬಳಿಸಿಕೊಳ್ಳಬೇಕು ಎಂಬುದಾಗಿಯೂ ಷರತ್ತು ವಿಧಿಸಿದೆ.

ಮಕ್ಕಳ ಶಿಕ್ಷಣದ ದೃಷ್ಠಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಬಾಲ ನಟ, ನಟಿಯಾಗಿ ಸೀರಿಯಲ್ ನಲ್ಲಿ ಮಕ್ಕಳು ನಡಿಸೋದಕ್ಕೆ ನಿರ್ಮಾಪಕರು, ಆಯೋಜಕರು, ಆಯಾ ವ್ಯಾಪ್ತಿಯ ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆಯಬೇಕು ಎಂಬುದಾಗಿ ತಿಳಿಸಲಾಗಿದೆ. ಈ ಕುರಿತಂತೆ ರಾಜ್ಯ ಕಾರ್ಮಿಕ ಇಲಾಖೆಯಿಂದ ಆದೇಶ ಹೊರಡಿಸಲಾಗಿದ್ದು, ಮಕ್ಕಳನ್ನು ಧಾರವಾಹಿ, ಚಲನಚಿತ್ರಗಳಲ್ಲಿ ನಟಿಸಲು ಜಿಲ್ಲಾಧಿಕಾರಿಗಳ ಅನುಮತಿ ಪಡೆಯಬೇಕು. ಮಕ್ಕಳು ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆದ ನಂತ್ರವೇ ಸಿನಿಮಾ, ಸೀರಿಯಲ್ ಗಳಲ್ಲಿ ನಟಿಸಲು ಅವಕಾಶ ಎಂಬುದಾಗಿ ತಿಳಿಸಿದೆ.

ಒಂದು ದಿನದಲ್ಲಿ 5 ಗಂಟೆಗೂ ಹೆಚ್ಚು ಕಾಲ ಮಕ್ಕಳನ್ನು ನಟಿಸೋದಕ್ಕೆ ಬಳಸಿಕೊಳ್ಳಬಾರದು. ತಿಂಗಳಲ್ಲಿ ಕೇವಲ 27 ದಿನಗಳು ಮಾತ್ರವೇ ಮಕ್ಕಳನ್ನು ಶೂಟಿಂಗ್ ನಲ್ಲಿ ಬಳಿಸಿಕೊಳ್ಳಬೇಕು ಎಂಬುದಾಗಿಯೂ ಷರತ್ತು ವಿಧಿಸಿದೆ. ಮಕ್ಕಳ ಶಿಕ್ಷಣದ ದೃಷ್ಠಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಬಾಲ ನಟ, ನಟಿಯಾಗಿ ಸೀರಿಯಲ್ ನಲ್ಲಿ ಮಕ್ಕಳು ನಡಿಸೋದಕ್ಕೆ ನಿರ್ಮಾಪಕರು, ಆಯೋಜಕರು, ಆಯಾ ವ್ಯಾಪ್ತಿಯ ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆಯಬೇಕು ಎಂಬುದಾಗಿ ತಿಳಿಸಲಾಗಿದೆ. ಒಂದು ವೇಳೆ ಕಾರ್ಮಿಕ ಇಲಾಖೆಯ ಈ ಆದೇಶ ಪಾಲಿಸದೇ ಮಕ್ಕಳನ್ನು ಸೀರಿಯಲ್, ಸಿನಿಮಾಗಳಲ್ಲಿ ನಟಿಸಿಕೊಳ್ಳೋದಕ್ಕೆ ಆಯೋಜಕರು, ನಿರ್ಮಾಪಕರು ಬಳಿಸಿಕೊಂಡಿದ್ದೇ ಆದಲ್ಲಿ, ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳೋದಾಗಿ ಎಚ್ಚರಿಕೆ ನೀಡಿದೆ.