Categories
ಬೆಂಗಳೂರು ರಾಜ್ಯ

ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ!

ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ!
– ಬೋರ್ಡ್‌ ನಲ್ಲಿ ಕನ್ನಡ ಭಾಷೆ ಇಲ್ಲದಿದ್ದಲ್ಲಿ ದೂರು!
– ಕನ್ನಡ ಕಣ್ಗಾವಲು ಎಂಬ ಆ್ಯಪ್ ತಯಾರಿಕೆ!
– ಶಿವರಾಜ ತಂಗಡಗಿ ಮಾಹಿತಿ!

NAMMUR EXPRESS NEWS
ಬೆಂಗಳೂರು: ಕನ್ನಡ ಭಾಷೆಯ ಬಳಕೆಗಾಗಿ, ಕನ್ನಡ ಭಾಷೆಯ ಉಳಿವಿಗಾಗಿ ಕನ್ನಡ ಕಡ್ಡಾಯ ಹೋರಾಟಗಳು ನಡೆಯುತ್ತಿದ್ದು ಇದೀಗ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಕಡ್ಡಾಯವಾಗಿದೆ. ಒಂದು ವೇಳೆ ಸರ್ಕಾರಿ ಕಚೇರಿ ಸೇರಿದಂತೆ ಅಂಗಡಿ ಮುಂಗಟ್ಟಗಳ ಫಲಕದಲ್ಲಿ ಕನ್ನಡ ಬಳಕೆ ಇಲ್ಲವಾದದ್ದು ಕಂಡು ಬಂದರೆ ಜನರು ದೂರು ನೀಡಬಹುದಾಗಿದೆ. ಇಂದು ವಿಧಾನಸಭೆಯಲ್ಲಿ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ (ತಿದ್ದುಪಡಿ) ವಿಧೇಯಕ -2024ವನ್ನು ಅಂಗೀಕರಿಸಲಾಯಿತು. ಕನ್ನಡ ಭಾಷೆಯ ಬಳಕೆ ಕುರಿತು ಯಾವುದೇ ವ್ಯಕ್ತಿ ದೂರು ನೀಡಲು ‘ಕನ್ನಡ ಕಣ್ಗಾವಲು’ ಎಂಬ ಆಪ್ ಅನ್ನು ರೂಪಿಸಲಾಗುತ್ತಿದೆ. ಇಲ್ಲಿಗೆ ಬರುವ ದೂರುಗಳನ್ನು ಸಂಬಂಧಪಟ್ಟ ಸಮಿತಿಗಳಿಗೆ ಕಳುಹಿಸಲಾಗುವುದು.

ಆ ದೂರುಗಳ ಬಗ್ಗೆ ಶೀಘ್ರವೇ ಕ್ರಮವಹಿಸುವಂತೆ ವ್ಯವಸ್ಥೆ ರೂಪಿಸಲಾಗುತ್ತಿದೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು. ಕರ್ನಾಟಕ ವಿಧಾನ ಸಭೆಯು ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ (ತಿದ್ದುಪಡಿ) ವಿಧೇಯಕ -2024 ವನ್ನು ಇಂದು ಅಂಗೀಕರಿಸಿತು. ಅದರಂತೆ ಇನ್ನು ಮುಂದೆ ರಾಜ್ಯ ಸರ್ಕಾರದ ಇಲಾಖೆಗಳು, ಉದ್ಯಮಗಳು, ಸ್ವಾಯತ್ತ ಸಂಸ್ಥೆಗಳು, ಸಹಕಾರ ಮತ್ತು ಸಾರ್ವಜನಿಕ ಉದ್ಯಮಗಳು, ಬ್ಯಾಂಕುಗಳು, ಇತರ ಹಣಕಾಸು ಸಂಸ್ಥೆಗಳು, ಖಾಸಗಿ ಕೈಗಾರಿಕೆಗಳು ಮತ್ತು ವಿಶ್ವವಿದ್ಯಾಲಯಗಳ ಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆಯನ್ನು ಬಳಸಬೇಕು ಎಂಬ ನಿಯಮ ಕಡ್ಡಾಯವಾಗಿದೆ. ಈ ವಿಧೇಯಕದ ಸೂಚನೆಯಂತೆ, ನಾಮಫಲಕಗಳ ಒಟ್ಟಾರೆ ವಿಸ್ತೀರ್ಣದಲ್ಲಿ ಕನ್ನಡ ಭಾಷೆಯನ್ನು ಮೇಲ್ಬಾಗದಲ್ಲಿ ಶೇ.60 ರಷ್ಟು ಪ್ರದರ್ಶಿಸುವುದು ಕಡ್ಡಾಯ ಮಾಡಲಾಗಿದೆ. ಶೇ.40 ರಷ್ಟು ಇತರ ಭಾಷೆಯನ್ನು ಕೆಳಭಾಗದಲ್ಲಿ ಬಳಸಬಹುದಾಗಿದೆ.

Categories
ಬೆಂಗಳೂರು ರಾಜ್ಯ

ರೈತರ ಖಾತೆಗೆ 6 ಸಾವಿರ ರೂ..!

ರೈತರ ಖಾತೆಗೆ 6 ಸಾವಿರ ರೂ..!
– ಪಿಎಂ ಕಿಸಾನ್ ಸಮ್ಮಾನ್ ಯೋಜನೆ ನೋಂದಣಿ ವಿಶೇಷ ಅಭಿಯಾನ

NAMMUR EXPRESS NEWS
ಭಾರತ ಸರ್ಕಾರವು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ರಾಜ್ಯದಲ್ಲಿ ಜಾರಿಗೊಳಿಸಿದ್ದು, ಯೋಜನೆಯ ಮಾರ್ಗಸೂಚಿಯಂತೆ ಭೂ ಒಡೆತನ ಹೊಂದಿರುವ ಪ್ರತಿ ಅರ್ಹ ರೈತರ ಕುಟುಂಬಕ್ಕೆ ಕೇಂದ್ರ ಸರ್ಕಾರದಿಂದ ಒಂದು ವರ್ಷಕ್ಕೆ 6000 ರೂ. ಪ್ರತಿ 4 ತಿಂಗಳಿಗೊಮ್ಮೆ 3 ಕಂತುಗಳಲ್ಲಿ ನೀಡಲಾಗುತ್ತಿದೆ. ಸಾಗುವಳಿ ಭೂಮಿ ಹೊಂದಿರುವ ಎಲ್ಲಾ ಅರ್ಹ ರೈತರನ್ನು ಈ ಯೋಜನೆಯ ವ್ಯಾಪ್ತಿಗೆ ತರಲು ಫೆ. 12 ರಿಂದ 21 ರವರೆಗೆ 10 ದಿನಗಳ ರಾಷ್ಟ್ರವ್ಯಾಪಿ ವಿಶೇಷ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.

ಅರ್ಹ ರೈತರ ನೋಂದಣಿಯೊಂದಿಗೆ ಈಗಾಗಲೇ ನೋಂದಣಿಯಾಗಿರುವ ರೈತರ ಬಾಕಿಯಿರುವ ಇ-ಕೆವೈಸಿ ಮಾಡಿಸಲು ಮತ್ತು ರೈತರ ಬ್ಯಾಂಕ್ ಖಾತೆಗೆ ಆಧಾ‌ರ್ ಜೋಡಣೆ ಮಾಡಿಸಿಕೊಳ್ಳುವ ಮೂಲಕ ರೈತರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದು. ರೈತರು ತಮ್ಮ ಆಧಾ‌ರ್ ಕಾರ್ಡ್ ಹಾಗೂ ಮೊಬೈಲ್‌ನೊಂದಿಗೆ ಹತ್ತಿರದ ಸಾಮಾನ್ಯ ಸೇವಾ ಕೇಂದ್ರ ಅಥವಾ ಗ್ರಾಮ ಒನ್ ಕೇಂದ್ರಗಳಿಗೆ ಭೇಟಿ ನೀಡಿ ಅಥವಾ ಕೇಂದ್ರ ಸರ್ಕಾರವು ಬಿಡುಗಡೆಗೊಳಿಸಿರುವ ಪಿಎಂಕಿಸಾನ್ ಇ-ಕೆವೈಸಿ ಫೇಸ್ ರೆಗ್ನನೇಷನ್ ಆಪ್ ಮೂಲಕ ಇ-ಕೆವೈಸಿ ಮಾಡಿಸುವಂತೆ ಶಿವಮೊಗ್ಗ ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

Categories
ಮಲ್ನಾಡ್ ರಾಜ್ಯ

ಸಿದ್ದರಾಮಯ್ಯ ಬಜೆಟ್‌ನಲ್ಲಿ ಮಲೆನಾಡಿಗೆ ಏನೇನು?

ಸಿದ್ದರಾಮಯ್ಯ ಬಜೆಟ್‌ನಲ್ಲಿ ಮಲೆನಾಡಿಗೆ ಏನೇನು?
– ಆಹಾರ ಪಾರ್ಕ್, ರಸ್ತೆ, ತಾರಾಲಯ, ರೈಲ್ವೆ ಮೇಲಸೇತುವೆ
– ಶೃಂಗೇರಿಗೆ 100 ಬೆಡ್ ಆಸ್ಪತ್ರೆ, ಕಾಫಿ ಪಾರ್ಕ್, ಚಿಕ್ಕಮಗಳೂರಿಗೆ ತಾರಾಲಯ

NAMMUR EXPRESS NEWS
ಶಿವಮೊಗ್ಗ: ಲೋಕಸಭಾ ಚುನಾವಣೆಗೂ ಮುನ್ನ ರಾಜ್ಯ ಕಾಂಗ್ರೆಸ್‌ ಸರ್ಕಾರದ ಆಯ- ವ್ಯಯ ಮಂಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮಲೆನಾಡಿಗೆ ಹಲವು ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ.ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ವಿವಿಧ ಕ್ಷೇತ್ರಗಳ ಅಭಿವೃದ್ಧಿಗೆ ಕೆಲವೊಂದು ಘೋಷಣೆ ಮಾಡಿರುವ ಸಿದ್ದರಾಮಯ್ಯ ಅನುದಾನವನ್ನೂ ಸಹ ಮೀಸಲಿಡುವುದಾಗಿ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಫುಡ್ ಪಾರ್ಕ್ :

ಶಿವಮೊಗ್ಗದ ಸೋಗಾನ ವಿಮಾನ ನಿಲ್ದಾಣದ ಬಳಿಯಲ್ಲಿ ಆಹಾರ ಪಾರ್ಕ್‌ ನಿರ್ಮಾಣ.

ಸಾರ್ವಜನಿಕ ಆರೋಗ್ಯ ಪ್ರಯೋಗಾಲಯ :

ಮುಂದಿನ 4 ವರ್ಷಗಳಲ್ಲಿ ಪ್ರತಿ ಜಿಲ್ಲಾ ಆಸ್ಪತ್ರೆಯಲ್ಲಿ ಸಂಯೋಜಿತ ಮತ್ತು ಸಾರ್ವಜನಿಕ ಆರೋಗ್ಯ ಪ್ರಯೋಗಾಲಯವನ್ನು ಸ್ಥಾಪಿಸುವ ಮೂಲಕ ಸಾರ್ವಜನಿಕರಿಗೆ ಕೈಗೆಟಕುವ ದರದಲ್ಲಿ ಉತ್ತಮ ಪ್ರಯೋಗಾಲಯ ಸೇವೆಗಳನ್ನು ಒದಗಿಸಲು ಕ್ರಮ.

ರೈಲ್ವೆ ಮೇಲ್ಸೇತುವೆ :

ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿರುವ ಬೊಮ್ಮನಕಟ್ಟೆ ರೈಲ್ವೆ ಲೆವೆಲ್ ಕ್ರಾಸಿಂಗ್‌’ನಲ್ಲಿ ಮೇಲ್ಸೇತುವೆ ನಿರ್ಮಾಣ.

ತಾರಾಲಯ :

ಶಿವಮೊಗ್ಗದಲ್ಲಿ ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ವಿಜ್ಞಾನ ಕೇಂದ್ರ/ ತಾರಾಲಯಗಳನ್ನು ಹೊಸದಾಗಿ ಸ್ಥಾಪಿಸಲಾಗುವುದು. ಶಿವಮೊಗ್ಗ, ರಾಯಚೂರು, ಚಿಕ್ಕಮಗಳೂರು, ಯಾದಗಿರಿ ಮತ್ತು ಮೈಸೂರಿನಲ್ಲಿ ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ವಿಜ್ಞಾನ ಕೇಂದ್ರ/ ತಾರಾಲಯಗಳನ್ನು ಹೊಸದಾಗಿ ಸ್ಥಾಪನೆ.

ಹೈ-ಸೆಕ್ಯೂರಿಟಿ ಕಾರಾಗೃಹ :

ಜಿಲ್ಲೆಯಲ್ಲಿ 100 ಕೋಟಿ ರೂ.ಗಳ ವೆಚ್ಚದಲ್ಲಿ ಹೊಸ ಹೈ-ಸೆಕ್ಯೂರಿಟಿ ಕಾರಾಗೃಹವನ್ನು ನಿರ್ಮಾಣ.

ಹೈಟೆಕ್ ಮೀನು ಮಾರುಕಟ್ಟೆ :

ಭದ್ರಾವತಿಯಲ್ಲಿ ಅತ್ಯಾಧುನಿಕ ಹೈಟೆಕ್‌ ಮೀನು ಮಾರುಕಟ್ಟೆ ನಿರ್ಮಾಣ ಶಿವಮೊಗ್ಗ ಜಿಲ್ಲೆಯಲ್ಲಿ 100 ಕೋಟಿ ರೂ.ಗಳ ವೆಚ್ಚದಲ್ಲಿ ಹೊಸ ಹೈ-ಸೆಕ್ಯೂರಿಟಿ ಕಾರಾಗೃಹ ನಿರ್ಮಾ. ಶಿವಮೊಗ್ಗ, ರಾಯಚೂರು, ಚಿಕ್ಕಮಗಳೂರು, ಯಾದಗಿರಿ ಮತ್ತು ಮೈಸೂರಿನಲ್ಲಿ ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ವಿಜ್ಞಾನ ಕೇಂದ್ರ/ತಾರಾಲಯಗಳನ್ನು ಹೊಸದಾಗಿ ಸ್ಥಾಪನೆ. ಮೈಸೂರಿನ ಕುಕ್ಕರಹಳ್ಳಿ ಬಳಿ ಹಾಗೂ ಕೆ.ಆ‌ರ್.ಎಸ್. ರಸ್ತೆ, ಶಿವಮೊಗ್ಗ-ಬೊಮ್ಮನಕಟ್ಟೆ ರಸ್ತೆ, ಗದಗ ಜಿಲ್ಲೆಯ ರೋಣದ ಮಲ್ಲಾಪುರ, ಚನ್ನಪಟ್ಟಣ-ಬೈರಾಪಟ್ಟಣ ಮಾರ್ಗ ಮತ್ತು ಚಿಕ್ಕಬಳ್ಳಾಪುರ ಸೇರಿದಂತೆ ಒಟ್ಟು 6 ರೈಲ್ವೆ ಮೇಲು ಹಾಗೂ ಕೆಳಸೇತುವೆಗಳ ನಿರ್ಮಾಣವನ್ನು 350 ಕೋಟಿ ರೂ. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಗೆ 100 ಬೆಡ್ ಆಸ್ಪತ್ರೆ, ಚಿಕ್ಕಮಗಳೂರಿಗೆ ಕಾಫಿ ಪಾರ್ಕ್, ಚಿಕ್ಕಮಗಳೂರಿಗೆ ತಾರಾಲಯ ಘೋಷಣೆ ಮಾಡಲಾಗಿದೆ.

Categories
ಅಡಿಕೆ-ದರ

ಇಂದಿನ ಅಡಿಕೆ ಧಾರಣೆ

ಇಂದಿನ ಅಡಿಕೆ ಧಾರಣೆ

ಅಡಿಕೆ ದರ
(16-02-2024)
ಸರಕು 56369 83496
ಬೆಟ್ಟೆ 40209 54399
ರಾಶಿ 30366 48299
ಗೊರಬಲು 17009 35809
Nammur Express

Categories
ಹೊಸನಗರ

ಮಾದರಿಯಾಯಿತು ಯಡೂರು ಸರ್ಕಾರಿ ಆಸ್ಪತ್ರೆ!

ಮಾದರಿಯಾಯಿತು ಯಡೂರು ಸರ್ಕಾರಿ ಆಸ್ಪತ್ರೆ!
– ಮೂಲಭೂತ ಸೌಕರ್ಯವನ್ನು ಒದಗಿಸಿಕೊಟ್ಟ ಯುವಕರು
– ಮಾದರಿ ಆಸ್ಪತ್ರೆಯಾಗುವತ್ತ ಹೊಸ ಹೆಜ್ಜೆ

NAMMUR EXPRESS NEWS
ಹೊಸನಗರ : ಹೊಸನಗರ ತಾಲೂಕಿನ ಯಡೂರು ಸರ್ಕಾರಿ ಪ್ರಾಥಮಿಕ ಆಸ್ಪತ್ರೆ ಇದೀಗ ಸ್ಥಳೀಯ ದಾನಿಗಳು, ಯುವಕರು, ಸಿಬ್ಬಂದಿ ಸಹಕಾರದಿಂದ ಅನೇಕ ಸೌಲಭ್ಯಗಳನ್ನು ಕಂಡುಕೊಂಡು ಮತ್ತಷ್ಟು ಸೇವೆಗೆ ನಿಂತಿದೆ. ಈ ಆಸ್ಪತ್ರೆಯಲ್ಲಿ ಆಂಬುಲೆನ್ಸ್ ಸೇವೆಯನ್ನು ಮಾಡಲಾಗಿದ್ದು ಮೂಲಭೂತ ಸೌಕರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಲಾಗಿದೆ. ಇಸಿಜಿ ಯಂತ್ರ ಕೆಟ್ಟ ನಿಂತಿದ್ದು ಇದೀಗ ರಿಪೇರಿ ಮಾಡಲಾಗಿದೆ. ಜೊತೆಗೆ ಆಸ್ಪತ್ರೆಗೆ ಬರುವ ಹೊರರೋಗಿಗಳಿಗೆ ಬೇಕಾದ ಸಕಲ ಸೌಲಭ್ಯಗಳನ್ನ ಕೂಡ ಇಲ್ಲಿ ಮಾಡಲಾಗಿದೆ.

ಉಳುಕೊಪ್ಪ ಪುನೀತ್ ಮತ್ತು ಚರಣ್ (ಎಫ್ ಡಿ ಎ) ಎಂಬುವವರು ಇಸಿಜಿ ಯಂತ್ರವನ್ನು ರಿಪೇರಿ ಮಾಡಿ ಕೊಟ್ಟಿದ್ದು, ಕೆಲವೊಂದಿಷ್ಟು ಸಾಮಗ್ರಿಗಳನ್ನು ಹಾಕಿದ್ದಾರೆ. ಪ್ರಮುಖ ದಾನಿಗಳಾದ ಮಹೇಶ್ ಬಂಕರ ಬೀಡು , ಅಮಿತ್ ಈಶ್ವರಪ್ಪ ಸತೀಶ್ ಅವರು ದಾನವನ್ನು ನೀಡಿ ಸಹಕರಿಸಿದ್ದಾರೆ. ಯಡೂರಿನ ಕೆಲವು ಉತ್ಸಾಹಿ ಹುಡುಗರು ಸೇರಿ ಈ ಕೆಲಸವನ್ನು ಮಾಡಿದ್ದಾರೆ. ಇದರಿಂದ ಸಾರ್ವಜನಿಕ ಮೆಚ್ಚುಗೆ ವ್ಯಕ್ತವಾಗಿದೆ. ಚರಣ್, ಚಂದನ್, ಮಂಜುಶ್ರೀ ಗೌಡ, ಪ್ರಸಾದ್ ಶೆಟ್ಟಿ, ಪುನೀತ್, ನಂದನ್ ಚೇತನ್, ವಿನಯ್ ಯಡೂರು, ಸುಮಂತ ಶೆಟ್ಟಿ ಅನೇಕ ಯುವಕರು ಈ ಕೆಲಸ ಮಾಡಿದ್ದಾರೆ. ಡಾ. ಪವನ್, ಡಾ. ಮಿನಿ ಸಿಸ್ಟರ್ ಸಿಬ್ಬಂದಿ ವರ್ಗದ ಕೆಲಸ ಈಗ ಜನಸ್ಪಂದನೆ ವ್ಯಕ್ತವಾಗಿದೆ. ಅವರು ಆಸ್ಪತ್ರೆಯಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿದ್ದು ಇವರು ಕೂಡ ಇದೀಗ ಉತ್ತಮ ಕೆಲಸಕ್ಕೆ ಕೈಜೋಡಿಸಿದ್ದಾರೆ.

ಸರ್ಕಾರಿ ಅನುದಾನದ ಕಾಯಿದೆ ಸ್ಥಳೀಯವಾಗಿ ಆಸ್ಪತ್ರೆಯನ್ನ ಅಭಿವೃದ್ಧಿ ಮಾಡುವ ಈ ಯೋಜನೆಗೆ ಯುವ ಸಂಘಟಕ ಪ್ರೇಮ್ ಯಡೂರು ಸಾರಥ್ಯವನ್ನ ವಹಿಸಿಕೊಂಡಿದ್ದಾರೆ. ತುರ್ತು ಚಿಕಿತ್ಸೆಗೆ ಬೇಕಾದ ಅನೇಕ ಅವಶ್ಯಕ ವಸ್ತುಗಳನ್ನ ದಾನಿಗಳ ಸಹಾಯದಿಂದ ಇಲ್ಲಿ ಆಯೋಜಿಸಿ ಕೊಟ್ಟಿದ್ದಾರೆ. ಆಟೋ ಕಾಕ್ ಮಿಷನ್, ಇಸಿಜಿ ರಿಪೇರಿ, ಆಸ್ಪತ್ರೆಗೆ ಬೇಕಾದ ಹೊಸ ಬೆರ್ಶೀಟ್, ಬಿಪಿ ಚೆಕಿಂಗ್ ಮಿಷನ್, ಸ್ಟ್ಯಾಂಡ್ ಗಳು, ತುರ್ತು ಚಿಕಿತ್ಸೆಗೆ ಬೇಕಾದಂತ ಸಾಮಾಗ್ರಿಗಳನ್ನು ಒದಗಿಸಲಾಗಿದೆ. ಇನ್ನು ಅನೇಕ ದಾನಿಗಳು ಹಾಗೂ ಯುವಕರು ಸೇರಿಕೊಂಡು ಇನ್ನಷ್ಟು ಅಭಿವೃದ್ಧಿ ಕೆಲಸವನ್ನ ಮಾಡಲು ಮುಂದಾಗಿದ್ದಾರೆ.

ಬಾಲಕನ ತುರ್ತು ಚಿಕಿತ್ಸೆಗೆ ಸಹಕಾರಿ

ಇತ್ತೀಚಿಗೆ ಸ್ಥಳೀಯ ಬಾಲಕನೊಬ್ಬನ ತುರ್ತು ಚಿಕಿತ್ಸೆಗೆ ಈ ಆಸ್ಪತ್ರೆಯಲ್ಲಿ ಎಲ್ಲಾ ಅವಶ್ಯ ಸಾಮಗ್ರಿ ಇದ್ದ ಕಾರಣ ಅನುಕೂಲ ಆಗಿದೆ. ಆದ್ದರಿಂದ ಪ್ರತಿ ಊರಲ್ಲೂ ಇಂತಹ ಆಸ್ಪತ್ರೆಗಳನ್ನು ಸರ್ಕಾರದ ಅನುದಾನಕ್ಕಾಗಿ ಕಾಯದೆ ಸ್ಥಳೀಯರೇ ಸೇರಿ ಅಭಿವೃದ್ಧಿಪಡಿಸುವ ಚಿಂತನೆ ಇದೀಗ ಮಾದರಿಯಾಗಿದೆ.

Categories
ತೀರ್ಥಹಳ್ಳಿ

ಸೀಬಿನಕೆರೆ ಸರ್ಕಾರಿ ಶಾಲೆಗೆ ಮತ್ತಷ್ಟು ಅಭಿವೃದ್ಧಿ ಭಾಗ್ಯ!

ಸೀಬಿನಕೆರೆ ಸರ್ಕಾರಿ ಶಾಲೆಗೆ ಮತ್ತಷ್ಟು ಅಭಿವೃದ್ಧಿ ಭಾಗ್ಯ!
– ಶಾಲಾ ನೂತನ ಕೊಠಡಿಗಳ ಉದ್ಘಾಟನೆ, ಮಕ್ಕಳ ಸಂಸ್ಕೃತಿಕ ಕಲರವ 2023-24
– ಫೆ.17ರ ಸಂಜೆ ಕಾರ್ಯಕ್ರಮ: ಸರ್ವರಿಗೂ ಸ್ವಾಗತ

NAMMUR EXPRESS NEWS
ತೀರ್ಥಹಳ್ಳಿ: ಜಿಲ್ಲಾ ಪಂಚಾಯತ್ ಶಿವಮೊಗ್ಗ, ತಾಲೂಕು ಪಂಚಾಯತ್ ತೀರ್ಥಹಳ್ಳಿ, ಶಾಲಾ ಶಿಕ್ಷಣ ಇಲಾಖೆ ತೀರ್ಥಹಳ್ಳಿ ಹಾಗೂ ಪಟ್ಟಣ ಪಂಚಾಯತಿ ತೀರ್ಥಹಳ್ಳಿ ವತಿಯಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆ ಈ ಸೀಬಿನಕೆರೆಯಲ್ಲಿ ಶಾಲಾ ನೂತನ ಕೊಠಡಿಗಳ ಉದ್ಘಾಟನೆ ಮತ್ತು ಮಕ್ಕಳ ಸಾಂಸ್ಕೃತಿಕ ಕಲರವ ಫೆ.17ರ ಶನಿವಾರ ಸಂಜೆ 4:30ಕ್ಕೆ ಶಾಲೆಯ ಆವರಣದಲ್ಲಿ ನಡೆಸಲಾಗುವುದು. ಶಾಲೆ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರಾದ ಎಸ್ ಮಧು ಬಂಗಾರಪ್ಪ ಹಾಗೂ ಯೋಜನೆ ಮತ್ತು ಸಾಂಖ್ಯಕ ಇಲಾಖೆ ಸಚಿವರಾದ ಡಿ ಸುಧಾಕರ್ ಉಪಸ್ಥಿತಿಯಲ್ಲಿ ನಡೆಯಲಿದ್ದು, ಶಾಸಕರಾದ ಆರಗ ಜ್ಞಾನೇಂದ್ರ ಅವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಿದ್ದಾರೆ. ಕಾರ್ಯಕ್ರಮವು ಎಸ್ ಡಿ ಎಂ ಸಿ ಅಧ್ಯಕ್ಷರಾದ ರಾಜೇಶ್ ಟಿ ಎನ್ ರವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಸಂಸದರಾದ ಬಿ ವೈ ರಾಘವೇಂದ್ರ, ಶಾಸಕರು ಎಸ್ ಎಲ್ ಭೋಜೇಗೌಡ, ಎಸ್ ರುದ್ರೇಗೌಡರು, ಭಾರತೀ ಶೆಟ್ಟಿ, ಡಿಎಸ್ ಅರುಣ್, ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಸಂಗಮೇಶ್, ರಾಜ್ಯ ಅರಣ್ಯ ಕೈಗಾರಿಕಾ ನಿಗಮ ಅಧ್ಯಕ್ಷರಾದ ಗೋಪಾಲಕೃಷ್ಣ ಬೇಳೂರು, ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಗೀತಾ ರಮೇಶ್, ಉಪಾಧ್ಯಕ್ಷರಾದ ರೆಹಮತ್ತುಲ್ಲಾ ಅಸಾದಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಿ ಗಣಪತಿ, ಸದಸ್ಯರಾದ ನಮ್ರತ್, ರತ್ನಾಕರ್ ಶೆಟ್ಟಿ, ಸುಶೀಲಾ ಶೆಟ್ಟಿ, ಉಪನಿರ್ದೇಶಕರಾದ ಪರಮೇಶ್ವರಪ್ಪ ಸಿ ಆರ್, ಬಸವರಾಜಪ್ಪ ಬಿ ಆರ್, ಕ್ಷೇತ್ರ ಶಿಕ್ಷಣಾಧಿಕಾರಿ ಗಣೇಶ್ ವೈ, ಕ್ಷೇತ್ರ ಸಮನ್ವಯಾಧಿಕಾರಿ ಗಣೇಶ್ ಇ ಬಿ, ಪ್ರಧಾನಮಂತ್ರಿ ಪೊಷಣ್ ಸಹಾಯ ನಿರ್ದೇಶಕರು ಪ್ರವೀಣ್, ಶಿಕ್ಷಣ ಸಂಯೋಜಕರು ಮಂಜುನಾಥ್ ಎಂಜಿ, ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ರಾಮದಾಸ್ ಪ್ರಭು, ತಾ. ಪ್ರಾ. ಶಾ. ಶಿ ಸಂಘದ ಅಧ್ಯಕ್ಷರಾದ ಜಯಂತಿ ನಾಗೇಶ್, ಸಿ ಆರ್ ಪಿ ಪವಿತ್ರ ಎಚ್ ಕೆ, ಮುಖ್ಯ ಶಿಕ್ಷಕರಾದ ಸಾವಿತ್ರಿ ಎಂ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಸರ್ವರಿಗೂ ಆದರದ ಸುಸ್ವಾಗತ

– ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಹಿರಿಯ ವಿದ್ಯಾರ್ಥಿಗಳ ಸಂಘ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸೀಬಿನಕೆರೆ

– ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು ಎಸ್ ಡಿ ಎಂ ಸಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಿಬಿನಕೆರೆ ಮತ್ತು ಪೋಷಕ ವೃಂದದವರು

– ಮುಖ್ಯೋಪಾಧ್ಯಾಯರು ಸಹ ಶಿಕ್ಷಕರು, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿ ವೃಂದ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಿಬಿನಕೆರೆ

Categories
ಬೆಂಗಳೂರು ರಾಜ್ಯ

ಅಂಗನವಾಡಿ ಕಾರ್ಯಕರ್ತೆಯರಿಗೆ ಉಚಿತ ಸ್ಮಾರ್ಟ್ ಫೋನ್

ಅಂಗನವಾಡಿ ಕಾರ್ಯಕರ್ತೆಯರಿಗೆ ಉಚಿತ ಸ್ಮಾರ್ಟ್ ಫೋನ್
– 90 ಕೋಟಿ ರೂ. ವೆಚ್ಚದಲ್ಲಿ 75,938 ಸ್ಮಾರ್ಟ್ ಫೋನ್ ವಿತರಣೆ
– 100 ಕೋಟಿ ವೆಚ್ಚದಲ್ಲಿ 1,000 ಅಂಗನವಾಡಿ ಕಟ್ಟಡ ನಿರ್ಮಾಣ

NAMMUR EXPRESS NEWS
ಬೆಂಗಳೂರು: ರಾಜ್ಯದ ಅಂಗನವಾಡಿ ಕಾರ್ಯಕರ್ತೆಯರಿಗೆ 90 ಕೋಟಿ ರೂ. ವೆಚ್ಚದಲ್ಲಿ 75,938 ಸ್ಮಾರ್ಟ್ ಫೋನ್ ವಿತರಣೆ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದರು. 2024-25ನೇ ಸಾಲಿನ ರಾಜ್ಯ ಬಜೆಟ್ ಮಂಡನೆ ಮಾಡಿದ ಅವರು, 100 ಕೋಟಿ ವೆಚ್ಚದಲ್ಲಿ 1,000 ಅಂಗನವಾಡಿ ಕಟ್ಟಡ ನಿರ್ಮಾಣ ಮಾಡಲಾಗುವುದು. ಅಂಗನವಾಡಿ ಕಾರ್ಯಕರ್ತೆಯರಿಗೆ ಗ್ರ್ಯಾಚುಟಿ ಸೌಲಭ್ಯಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದರು.

ಮಕ್ಕಳ ಪ್ರಾರಂಭಿಕ ಶಿಕ್ಷಣ ಮತ್ತು ಆರೈಕೆಯಲ್ಲಿ ಸಾಮರ್ಥ್ಯ ಅಭಿವೃದ್ಧಿಗೆ 20,000 ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ತರಬೇತಿ ಕಾರ್ಯಾಗಾರಗಳನ್ನು ಆಯೋಜಿಸಲು 10 ಕೋಟಿ ರೂ. ಗಳನ್ನು ಒದಗಿಸಲಾಗುವುದು ಎಂದು ತಿಳಿಸಿದರು. ರಾಜ್ಯದಲ್ಲಿ ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 1,000 ಅಂಗನವಾಡಿಗಳಿಗೆ ಸ್ವಂತ ಕಟ್ಟಡಗಳನ್ನು 200 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗುವುದು ಎಂದು ಸಿಎಂ ಘೋಷಣೆ ಮಾಡಿದರು. 2024-25ನೇ ಸಾಲಿನಲ್ಲಿ ಮಹಿಳಾ ಉದ್ದೇಶಿತ ಯೋಜನೆಗಳಿಗೆ 86,423 ಕೋಟಿ ರೂ.ಗಳನ್ನು ಒದಗಿಸಲಾಗುವುದು. ಮಕ್ಕಳ ಉದ್ದೇಶಿತ ಯೋಜನೆಗಳಿಗೆ 2024-25ನೇ ಸಾಲಿನಲ್ಲಿ 54,617 ಕೋಟಿ ರೂ.ಗಳನ್ನು ಒದಗಿಸಲಾಗುವುದು ಎಂದು ಅವರು ತಿಳಿಸಿದರು.

Categories
ಬೆಂಗಳೂರು ರಾಜ್ಯ

ಕರ್ನಾಟಕ ಬಜೆಟ್ ಅಲ್ಲಿ ಶಾಲೆ, ಕಾಲೇಜಿಗೆ ಕೋಟಿ ಕೋಟಿ ಹಣ!

ಕರ್ನಾಟಕ ಬಜೆಟ್ ಅಲ್ಲಿ ಶಾಲೆ, ಕಾಲೇಜಿಗೆ ಕೋಟಿ ಕೋಟಿ ಹಣ!
– ಶಾಲಾ- ಪಿಯು ಕಾಲೇಜುಗಳಿಗೆ 850 ಕೋಟಿ ರೂ.
– 2000 ಶಾಲೆಗಳಲ್ಲಿ ಇಂಗ್ಲೀಷ್ ಮೀಡಿಯಂ ಆರಂಭ

NAMMUR EXPRESS NEWS
ಬೆಂಗಳೂರು: ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳು, ಪದವಿ ಪೂರ್ವ ಕಾಲೇಜುಗಳ ಮೂಲ ಸೌಕರ್ಯಗಳ ಅಭಿವೃದ್ಧಿಗೆ 850 ಕೋಟಿ ರೂ. ಅನುದಾನ ನೀಡಲಾಗಿದೆ. ಜೊತೆಗೆ, 2,000 ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ದ್ವಿಭಾಷಾ ಮಾಧ್ಯಮ (ಕನ್ನಡ ಮತ್ತು ಇಂಗ್ಲೀಷ್) ಶಾಲೆಗಳಾಗಿ ಪರಿವರ್ತಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ರಾಜ್ಯದ ಸರ್ಕಾರಿ ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ಮೂಲಭೂತ ಸೌಕರ್ಯಗಳನ್ನು ನೀಡಲು ನಮ್ಮ ಸರ್ಕಾರ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದು, 2023-24ನೇ ಸಾಲಿನಲ್ಲಿ 600 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿರುತ್ತದೆ. 2024-25ನೇ ಸಾಲಿನಲ್ಲಿ ಶಾಲಾ/ ಕಾಲೇಜುಗಳ ಕೊಠಡಿ ನಿರ್ಮಾಣ, ದುರಸ್ತಿ, ಶೌಚಾಲಯ ನಿರ್ಮಾಣದಂತಹ ಕಾಮಗಾರಿಗಳನ್ನು 850 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುವುದು. ಸರ್ಕಾರಿ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣ ಮತ್ತು ಅಗತ್ಯ ಮೂಲಸೌಕರ್ಯ ಒದಗಿಸಲು ನಮ್ಮ ಸರ್ಕಾರ ವಿಶೇಷ ಆಸಕ್ತಿ ವಹಿಸಿದೆ. ಸರ್ಕಾರಿ ಶಾಲೆಯ ಮಕ್ಕಳು ಸ್ಪರ್ಧಾತ್ಮಕ

ಜಗತ್ತಿನಲ್ಲಿ ಯಶಸ್ವಿಯಾಗಲು ಸರ್ಕಾರ ಕೆಳಕಂಡ ಉಪಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ:

– ಪೂರ್ವ ಪ್ರಾಥಮಿಕ ಹಂತದಿಂದ ಪದವಿ ಪೂರ್ವ ತರಗತಿಗಳವರೆಗಿನ ಶಿಕ್ಷಣವನ್ನು ಒಂದೇ ಸೂರಿನಡಿ ನೀಡುವ ಉದ್ದೇಶದಿಂದ ಆಯ್ದ ಶಾಲೆಗಳನ್ನು ಸಿ.ಎಸ್.ಆರ್. ಅನುದಾನದಡಿ ಕರ್ನಾಟಕ ಪಬ್ಲಿಕ್ ಶಾಲೆಗಳನ್ನಾಗಿ ಅಭಿವೃದ್ಧಿಪಡಿಸಲಾಗುವುದು.
– 3 ರಿಂದ 5 ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಗಣಿತ ವಿಷಯದಲ್ಲಿ ಆಸಕ್ತಿ ಮೂಡಿಸಿ ಸಾಮರ್ಥ್ಯ ಹೆಚ್ಚಿಸಲು J-PAL ಸಂಸ್ಥೆಯ ಸಹಯೋಗದಲ್ಲಿ ಗಣಿತ-ಗಣಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು.
– ಕಲಿಕೆಯಲ್ಲಿ ಹಿಂದುಳಿದ 6 ಮತ್ತು 7 ನೇ ತರಗತಿ ವಿದ್ಯಾರ್ಥಿಗಳಿಗೆ ಕಲಿಕಾ ಸಾಮರ್ಥ್ಯ ಸುಧಾರಿಸಲು 10 ಕೋಟಿ ರೂ. ಅನುದಾನದಲ್ಲಿ ಮರು ಸಿಂಚನ ಕಾರ್ಯಕ್ರಮ ಜಾರಿಗೊಳಿಸಲಾಗುವುದು.
– ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿರುವ ಸರ್ಕಾರಿ ಪ್ರೌಢ ಶಾಲೆಗಳಲ್ಲಿ ವಿಜ್ಞಾನ ಪ್ರಯೋಗಾಲಯ, ಕಂಪ್ಯೂಟರ್ ಲ್ಯಾಬ್, ಇಂಟರ್‌ನೆಟ್ ಸೌಲಭ್ಯಗಳನ್ನು ಎರಡು ವರ್ಷಗಳ ಪ್ಯಾಕೇಜ್ ಅಡಿಯಲ್ಲಿ ಒದಗಿಸಲು 50 ಕೋಟಿ ರೂ. ಮೀಸಲಿಡಲಾಗುವುದು.
– 2,000 ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ದ್ವಿಭಾಷಾ ಮಾಧ್ಯಮ (ಕನ್ನಡ ಮತ್ತು ಇಂಗ್ಲೀಷ್) ಶಾಲೆಗಳಾಗಿ ಪರಿವರ್ತಿಸಲಾಗುವುದು.
ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ಸಾಮಾಜಿಕ ಸಾಮರಸ್ಯ, ವೈಜ್ಞಾನಿಕ ಮನೋಭಾವ ಮತ್ತು ಸಹಬಾಳ್ವೆಯ ವಿದ್ಯಾ- ಕೇಂದ್ರಗಳನ್ನಾಗಿ ರೂಪಿಸಲು ನಾವು ಮನುಜರು ಎಂಬ ಹೆಸರಿನಲ್ಲಿ ಎಲ್ಲಾ ಶಾಲಾ-ಕಾಲೇಜುಗಳಲ್ಲಿ ವಾರಕ್ಕೆ ಎರಡು ಗಂಟೆಗಳ ವಿಚಾರ-ವಿಮರ್ಶೆ ಮತ್ತು ಸಂವಾದ ಚಟುವಟಿಕೆಗಳನ್ನು ಒಳಗೊಂಡ ತರಗತಿಗಳನ್ನು ನಡೆಸಲಾಗುವುದು. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಸಹಯೋಗದೊಂದಿಗೆ ಸರ್ಕಾರಿ ಪ್ರೌಢ ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳನ್ನು ಪ್ರಾರಂಭಿಸಲಾಗುವುದು.

Categories
ತೀರ್ಥಹಳ್ಳಿ

ಅರೇಹಳ್ಳಿ ಗ್ರಾಪಂನಲ್ಲಿ ಸಂವಿಧಾನ ಜಾಥಾ ಸಂಭ್ರಮ!

ಅರೇಹಳ್ಳಿ ಗ್ರಾಪಂನಲ್ಲಿ ಸಂವಿಧಾನ ಜಾಥಾ ಸಂಭ್ರಮ!
– ಸಂವಿಧಾನ ಜಾಗೃತಿ ಜಾಥಾ ವಾಹನ ಸ್ವಾಗತ
– ಜನರಿಗೆ ಸಂವಿಧಾನ ಜಾಗೃತಿ: ಗಣ್ಯರ ಮಾತು

NAMMUR EXPRESS NEWS
ತೀರ್ಥಹಳ್ಳಿ: ಭಾರತದ ಸಂವಿಧಾನ ಅಳವಡಿಸಿಕೊಂಡು 75 ವರ್ಷಗಳ ವಿಶೇಷ ಸಂಭ್ರಮಾಚರಣೆ ಪ್ರಯುಕ್ತ ಶಿವಮೊಗ್ಗ ಜಿಲ್ಲಾದಾದ್ಯಂತ ಹಮ್ಮಿಕೊಂಡಿರುವಂತಹ ಸಂವಿಧಾನ ಜಾಗೃತಿ ಜಾಥಾ ವಾಹನವನ್ನು ಗುರುವಾರ ಬೆಳಿಗ್ಗೆ ಅರೇಹಳ್ಳಿ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯ ಪೂರ್ಣ ಕುಂಭದೊಂದಿಗೆ ಸ್ವಾಗತವನ್ನು ಕೋರಲಾಯಿತು. ಸಂವಿಧಾನ ಜಾಗೃತಿ ವಾಹನವನ್ನು ಸಾರ್ವಜನಿಕರ ಬೈಕ್ ರ್ಯಾಲಿ ಹಾಗೂ ಶಾಲಾ ಮಕ್ಕಳ ತ್ರಿವರ್ಣ ಧ್ವಜ, ಬಲೂನುಗಳಿಂದ ಜಾಥಾದ ಮೂಲಕ ಅರೆಹಳ್ಳಿ ಗ್ರಾಮ ಪಂಚಾಯಿತಿ ಕಚೇರಿಯ ವೇದಿಕೆಗೆ ಆಹ್ವಾನ ಮಾಡಲಾಯಿತು. ಸಂವಿಧಾನ ಜಾಥಾ ಕಾರ್ಯಕ್ರಮವನ್ನು ಅರೆಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸವಿತಾ ಸುರೇಂದ್ರ ರವರ ಉದ್ಘಾಟನೆ ಚಾಲನೆಯನ್ನು ನೀಡಿದರು.

ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ನಾಡಗೀತೆ ಮತ್ತು ರಾಷ್ಟ್ರಗೀತೆ ಹೇಳಿದರು, ಸಂಜೀವಿನ ಮಹಿಳಾ ಒಕ್ಕೂಟ ಕಾರ್ಯಕರ್ತರು ಪ್ರಾರ್ಥನೆಯನ್ನು ಹೇಳಿದರು, ವಿಶ್ವ ತೀರ್ಥ ಶಾಲಾ ಮುಖ್ಯೋಪಾಧ್ಯಾಯರಾದ ಸುರೇಶ್ ಪ್ರಸ್ತಾವಿಕ ಮಾತನಾಡಿ, ಸಂವಿಧಾನ ಮತ್ತು ಸಂವಿಧಾನ ಅರಿವು ಜಾಥಾದ ಮಹತ್ವದ ಉದ್ದೇಶ ತಿಳಿಸಿದರು. ಹೊರಣೆಬೈಲು ಶಾಲಾ ಮುಖೋಪಾಧ್ಯರಾದ ಅನ್ವರ್ ಅವರು ಸಂವಿಧಾನದ ಪೀಠಿಕೆಯನ್ನು ಸರ್ವರಿಗೂ ಪ್ರಮಾಣವಚನ ಬೋಧಿಸಿದರು. ಅರೇಹಳ್ಳಿ ಶಾಲಾ ಮುಖ್ಯೋಪಾಧ್ಯಾಯರಾದ ನಾಗರಾಜ್, ಅಂಬೇಡ್ಕರ್ ಅವರ ರಚಿತವಾದ ಸಂವಿಧಾನದ ಕುರಿತು ಅದರ ಧ್ಯೇಯೋದ್ದೇಶಗಳ ಕುರಿತು ಸಭೆಗೆ ವಿವರವಾದ ಮಾಹಿತಿ ನೀಡಿದರು.

ಸಭೆಯಲ್ಲಿ ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕರಾದ ಗಿರಿರಾಜ್ ಹಾಗೂ ಸಮಾಜ ಕಲ್ಯಾಣ ಇಲಾಖೆ ವ್ಯವಸ್ಥಾಪಕರಾದ ಸತೀಶ್ ಭಾಗವಹಿಸಿದ್ದರು, ಸಭೆಯಲ್ಲಿ ಆಶಾ ಕಾರ್ಯಕರ್ತರು ಮತ್ತು ಅಂಗನವಾಡಿ ಕಾರ್ಯಕರ್ತರು ಮಹಿಳಾ ಸ್ವಸ್ಥಾಯ ಒಕ್ಕೂಟದ ಅಧ್ಯಕ್ಷರು ಮತ್ತು ಕಾರ್ಯಕರ್ತರು, ಶಾಲಾ ಮಕ್ಕಳು, ಸಾರ್ವಜನಿಕರು ಶಾಲಾ ಮುಖ್ಯೋಪಾಧ್ಯಯರು ಮತ್ತು ಸಹ ಶಿಕ್ಷಕರು ಭಾಗವಹಿಸಿದ್ದರು. ಸಹಶಿಕ್ಷಕಿಯಾದ ವಿಜಯಲಕ್ಷ್ಮಿ ಕಡ್ತೂರು ಅವರು ಪೂರ್ತಿ ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು. ಪಿಡಿಒ ಯುವರಾಜ್ ಕುಮಾರ್ ಅವರು ಸರ್ವರಿಗೂ ವಂದನಾರ್ಪಣೆ ಹೇಳಿ, ಕಾರ್ಯಕ್ರಮ ಮುಕ್ತಾಯ ಮಾಡಿದರು.

Categories
ತೀರ್ಥಹಳ್ಳಿ

ಬಿದರಗೋಡಿನಲ್ಲಿ ನೂತನವಾಗಿ ಶ್ರೀ ರಾಮ ವರ್ತಕರ ಸೌಹಾರ್ದ ಸಹಕಾರ ಪ್ರಾರಂಭ

ಬಿದರಗೋಡಿನಲ್ಲಿ ನೂತನವಾಗಿ ಶ್ರೀ ರಾಮ ವರ್ತಕರ ಸೌಹಾರ್ದ ಸಹಕಾರ ಪ್ರಾರಂಭ
– ಈ ಸಹಕಾರ ಸಂಘಕ್ಕೆ ನಿರ್ದೇಶಕರ ಆಯ್ಕೆ

NAMMUR EXPRESS NEWS
ತೀರ್ಥಹಳ್ಳಿ ತಾಲೂಕು ಬಿದರಗೋಡಿನಲ್ಲಿ ನೂತನವಾಗಿ ಪ್ರಾರಂಭಿಸಿದ ಶ್ರೀ ರಾಮ ವರ್ತಕರ ಸೌಹಾರ್ದ ಸಹಕಾರ ಸಂಘಕ್ಕೆ ನಿರ್ದೇಶಕರಾಗಿ ಆಯ್ಕೆಯಾದ ಎಲ್ಲರಿಗೂ ಹಾರ್ದಿಕ ಶುಭಾಶಯಗಳು.
ಕೇಶವಮೂರ್ತಿ ಟಿ.ಎಸ್ – ಅಧ್ಯಕ್ಷರು
ರಾಘವೇಂದ್ರ ಕಾಮತ್ ಬಿ.ಎ – ಉಪಾಧ್ಯಕ್ಷರು
ಪ್ರವೀಣ್ ಬಿ.ಎಸ್ – ನಿರ್ದೇಶಕರು
ಪ್ರಕಾಶ್ ಕೆ.ಆರ್ – ನಿರ್ದೇಶಕರು
ವಿಶ್ವನಾಥ ನಾಯಕ್ – ನಿರ್ದೇಶಕರು
ವೆಂಕಟೇಶ್ ಎಂ ಬಿ – ನಿರ್ದೇಶಕರು
ವಿಶ್ವನಾಥ್ ಕೆ.ಎಸ್ – ನಿರ್ದೇಶಕರು
ಸುನಿಲ್ ಕಾಮತ್ – ನಿರ್ದೇಶಕರು
ಮಂಜುನಾಥ ಕೆ.ಜಿ – ನಿರ್ದೇಶಕರು
ಲಕ್ಷ್ಮಿ – ನಿರ್ದೇಶಕರು
ಸುರೇಖಾ ಎಂ.ಎಂ – ನಿರ್ದೇಶಕರು
ಸರಸ್ವತಿ – ನಿರ್ದೇಶಕರು

ಶುಭಾಶಯ ಕೋರುವವರು
ಬಿದರಗೋಡು- ಬೇಗಾರು ಗ್ರಾಮಸ್ಥರು