Categories
ಚಿಕ್ಕಮಗಳೂರು ಮಲ್ನಾಡ್

ಎನ್.ಆ‌ರ್ ಪುರದಲ್ಲಿ ಗಾಂಜಾ ಮಾರಾಟ: ಅರೆಸ್ಟ್!

ಎನ್.ಆ‌ರ್ ಪುರದಲ್ಲಿ ಗಾಂಜಾ ಮಾರಾಟ: ಅರೆಸ್ಟ್!
– ಮೂವರ ಆರೋಪಿಗಳ ಬಂಧನ: ಮತ್ತಷ್ಟು ತನಿಖೆ
– ಭದ್ರಾವತಿ: ಗೋವಿನ ಕಬಾಬ್ ಮಾರಾಟ ಅಂಗಡಿ ಮೇಲೆ ದೂರು
-ಶಿವಮೊಗ್ಗ: ಬ್ಲಾಕ್ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ವಿರುದ್ಧ ದೂರು

NAMMUR EXPRESS NEWS
ಚಿಕ್ಕಮಗಳೂರು: ನರಸಿಂಹರಾಜಪುರ ತಾಲೂಕಿನ ಸೌತಿಕೆರೆ ಸಮೀಪದ ಸರ್ಕಲ್ ನಲ್ಲಿ ನಿಂತು ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಪೊಲೀಸರು ಮೂರು ಜನರನ್ನು ಬಂಧಿಸಿದ್ದಾರೆ. ಗುರುವಾರ ಸಂಜೆ 7 ಗಂಟೆ ಸುಮಾರಿಗೆ ಪೊಲೀಸರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಪೊಲೀಸರು ಸೌತಿಕೆರೆ ಸಮೀಪದ ಸರ್ಕಲ್ ಗೆ ಹೋದಾಗ ಬಿಳಿ ಕಾರು, 1 ಬೈಕ್ ನಿಲ್ಲಿಸಿಕೊಂಡು 3 ಜನರು ನಿಂತಿದ್ದು ಪೊಲೀಸರನ್ನು ಕಂಡು ಪರಾರಿಯಾಗುವ ಯತ್ನ ನಡೆಸಿದರು. ತಕ್ಷಣ ಪೊಲೀಸರು 3 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಗಾಂಜಾ ಮಾರಾಟಕ್ಕೆ ಬಂದಿದ್ದರು ಎಂಬುದು ಸಾಬೀತಾಗಿದೆ . ಪ್ರಮುಖ ಆರೋಪಿ ಬೆಳ್ಳೂರಿನ ನಿಕ್ಷೇಪಗೌಡ ಎಂಬುವರ ಜೇಬಿನಲ್ಲಿ 75 ಗ್ರಾಂ ಗಾಂಜ ಪತ್ತೆಯಾಗಿದೆ.

ಇನ್ನಿಬ್ಬರು ಆರೋಪಿಗಳನ್ನು ಕಳಸದ ಅರುಣ,ನರಸಿಂಹರಾಜಪುರ ಪಟ್ಟಣದ ಹರ್ಷದ್‌ ಅಯೂಬ್ ಎಂದು ಗುರುತಿಸಲಾಗಿದೆ. ಪ್ರಮುಖ ಆರೋಪಿ ನಿಕ್ಷೇಪಗೌಡ ಈ ಹಿಂದೆ ಉಡುಪಿಯಲ್ಲಿ 20 ಕೆಜಿ ಗಾಂಜಾ ಮಾರಾಟದ ಕೇಸಿನಲ್ಲಿ ಪ್ರಕರಣ ದಾಖಲಾಗಿತ್ತು ಎಂದು ಪೊಲೀಸರ ವಿಚಾರಣೆಯಿಂದ ತಿಳಿದು ಬಂದಿದೆ. ಇನ್ನಿಬ್ಬರು ಆರೋಪಿಗಳು ಗಾಂಜಾ ಖರೀದಿಗೆ ಬಂದಿದ್ದರು ಎನ್ನಲಾಗಿದೆ. ಭದ್ರಾವತಿ ಕಡೆಯಿಂದ ಆರೋಪಿಗೆ ಗಾಂಜಾ ಬಂದಿದೆ ಎಂದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ. 3 ಜನ ಆರೋಪಿಗಳನ್ನು ಪೊಲೀಸರು ಶುಕ್ರವಾರ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ. ಗಾಂಜಾ ಮಾರಾಟದ ಕೇಸನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ತೀವ್ರ ತನಿಖೆ ಪ್ರಾರಂಭಿಸಿದ್ದಾರೆ.

ಗೋವಿನ ಕಬಾಬ್ ಮಾರಾಟ ಅಂಗಡಿ ಮೇಲೆ ದೂರು

ಭದ್ರಾವತಿ: ಭದ್ರಾವತಿಯಲ್ಲಿ ಗೋವು ಮಾಂಸದಿಂದ ತಯಾರಿಸಿದ ಗೋ ಕಬಾಬ್ ಮಾರಾಟ ಅಂಗಡಿಯ ಮೇಲೆ ಹಿಂದೂ ಸಂಘಟನೆ ಭದ್ರಾವತಿ ಹಳೇ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ಗೋಮಾಂಸ ನಿಷೇಧ ಕಾಯ್ಧೆ ಜಾರಿಯಲ್ಲಿದ್ದರೂ ಭದ್ರಾವತಿಯಲ್ಲಿ ಯಥೇಚ್ಛವಾಗಿ ಗೋಮಾಂಸ ಮಾರಾಟ ಮತ್ತು ಕಬಾಬ್ ಮಾರಾಟ ಮಳಿಗೆಗಳು ಪತ್ತೆಯಾಗುತ್ತಿದೆ ಎಂದು ಹಿಂದೂ ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆ. ತರೀಕೆರೆ ರಸ್ತೆಯಲ್ಲಿರುವ ಸಾದತ್ ದರ್ಗಾ‌ಬಳಿ ಗೋಮಾಂಸದಿಂದ ತಯಾರಿಸುವ ಕಬಾಬ್ ನ್ನ ಓರ್ವ ವ್ಯಕ್ತಿ ಮಾರಾಟ ಮಾಡುತ್ತಿದ್ದಾನೆ ಎಂಬ ಖಚಿತ ಮಾಹಿತಿ ಲಭ್ಯವಾದ ಹಿನ್ನಲೆಯಲ್ಲಿ ಹಿಂದೂ ಜಾಗರಣೆ ವೇದಿಕೆಯ ದೇವರಾಜ್ ಅವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ನಂತರ ಸ್ನೇಹಿತರಿಗೆ ಕಾಬಾಬ್ ಖರೀದಿಸಿ ಠಾಣೆಗೆ ತರುವಂತೆ ಸೂಚಿಸಿದ್ದಾರೆ. ಸ್ನೇಹಿತರಿಬ್ಬರು ಭದ್ರಾವತಿ ಹಳೇ ನಗರ ಪೊಲೀಸ್ ಠಾಣೆಗೆ ಸಾದತ್ ದರ್ಗಾ ಬಳಿ ಕಬಾಬ್ ಮಾರಾಟ ಮಾಡುತ್ತಿದ್ದವನಿಂದ ಕಬಾಬ್ ಸಮೇತ ಹೋಗಿ ಅಂಗಡಿಯ ವಿರುದ್ಧ ದೂರು ದಾಖಲಿಸಿದ್ದಾರೆ.

ಬ್ಲಾಕ್ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ವಿರುದ್ಧ ದೂರು

ಶಿವಮೊಗ್ಗ: ಕಾಂಗ್ರೆಸ್ ನ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ವಿರುದ್ಧ ದಾಖಲಿಸಿರುವ ವಂಚನೆ ಪ್ರಕರಣ ವಾಪಾಸ್ ಪಡೆಯದಿದ್ದರೆ ಸುಳ್ಳು ಕೇಸಿನಲ್ಲಿ ಸಿಕ್ಕಿಸುವುದಾಗಿ ಬೆದರಿಸಿದ 27 ನೇ ವಾರ್ಡ್ ನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ವಿರುದ್ಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಶಿವಮೊಗ್ಗದ ಚಂದ್ರಶೇಖರ್ ಎಂಬುವರಿಗೆ ಚಿಕ್ಕಮಗಳೂರಿನಲ್ಲಿ ಕೈಗಾರಿಕಾ ಪ್ರದೇಶದಲ್ಲಿ ಜಾಗಕೊಡಿಸುವುದಾಗಿ ನಂಬಿಸಿ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಅನಿತಾ ಕುಮಾರಿ 31½ ಲಕ್ಷ ರೂ ವಂಚಿಸಿದ್ದಾರೆ ಎಂದು ಆರೋಪಿಸಿ ಶಿವಮೊಗ್ಗದ ಡಿವೈಎಸ್ಪಿ ಕಚೇರಿಗೆ ದೂರು ನೀಡಿದ್ದರು.

ಈ ವಿಚಾರದಲ್ಲಿ ಡಿವೈಎಸ್ಪಿ ಕಚೇರಿಯಿಂದ ಅಧ್ಯಕ್ಷೆಗೆ ವಿಚಾರಣೆಗೆ ಬರುವಂತೆ ಕರೆ ಬಂದಿದೆ. ಚಂದ್ರಶೇಖರ್ ಅವರ ಮನೆಯ ಬಳಿಯಿರುವ 27 ನೇ ವಾರ್ಡ್ ನ ಮಹಿಳಾ ಕಾಂಗ್ರೆಸ್ ನ ಬ್ಲಾಕ್ ಅಧ್ಯಕ್ಷೆ ಸುವರ್ಣ ನಾಗರಾಜ್ ಕರೆ ಮಾಡಿ ಅವ್ಯಾಚ್ಯ ಶಬ್ದಗಳಿಂದ‌ ಬೈದಿದ್ದಾರೆ. ನಮ್ಮ ಅಧ್ಯಕ್ಷೆಯ ಮೇಲಿನ ಪ್ರರಣ ವಾಪಾಸ್ ಪಡೆಯಿರಿ ಇಲ್ಲವಾದಲ್ಲಿ ಪರಿಣಾಮ ನೆಟ್ಟಗಿರಲ್ಲ. ಸುಳ್ಳು ಕೇಸ್ ದಾಖಲಿಸುವುದಾಗಿ ಬೆದರಿಸಿರುವ ವಾಯ್ಸ್ ಮೆಸೇಜ್ ಕಳುಹಿಸಿದ್ದಾರೆ ಎಂದು ಎಫ್ಐಆರ್ ನಲ್ಲಿ ದಾಖಲಿಸಿದ್ದಾರೆ. ಈ ಪ್ರಕರಣವನ್ನ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Categories
ಕರಾವಳಿ ಮಂಗಳೂರು

ಕರಾವಳಿಗೆ 2ನೇ ವಂದೇ ಭಾರತ್ ರೈಲು!

ಕರಾವಳಿಗೆ 2ನೇ ವಂದೇ ಭಾರತ್ ರೈಲು!
– ಮಾ.12ರಂದು ಪ್ರಧಾನಿ ಮೋದಿ ಚಾಲನೆ
– ವಾರದ 6 ದಿನವೂ ರೈಲು ಸಂಚಾರ

NAMMUR EXPRESS NEWS
ಮಂಗಳೂರು -ತಿರುವನಂತಪುರಂ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿಗೆ ಮಾ.12ರಂದು ಬೆಳಗ್ಗೆ 8 ಗಂಟೆಗೆ ಮಂಗಳೂರು ಕೇಂದ್ರ ನಿಲ್ದಾಣದಲ್ಲಿ ಪ್ರಧಾನಿ ಮೋದಿ ಅವರು ವಿಡಿಯೋ ಕಾನ್ಪೆರೆನ್ಸ್‌ ಮೂಲಕ ಚಾಲನೆ ನೀಡಲಿದ್ದಾರೆ. ಸಂಸದ ನಳಿನ್‌ ಕುಮಾರ್‌ ಕಟೀಲು ಮನವಿ ಮೇರೆಗೆ ಈ ರೈಲು ಅನ್ನು ಕಾಸರಗೋಡಿನಿಂದ ಮಂಗಳೂರಿನವರೆಗೆ ವಿಸ್ತರಿಸಲಾಗಿದೆ. ಅದರಂತೆ 20632/20631 ರೈಲು ಮಂಗಳೂರು-ತಿರುವನಂತಪುರ ನಡುವೆ ಸಂಚರಿಸಲಿದ್ದು, ಮಂಗಳೂರಿನಿಂದ ಬೆಳಗ್ಗೆ 6.15ಕ್ಕೆ ಹೊರಟು ಮಧ್ಯಾಹ್ನ 3.05ಕ್ಕೆ ತಿರುವನಂತಪುರ ತಲುಪುತ್ತದೆ. ವಾಪಾಸ್‌ ತಿರುವನಂತಪುರದಿಂದ ಸಂಜೆ 4.05ಕ್ಕೆ ಹೊರಟು ರಾತ್ರಿ 12.40ಕ್ಕೆ ಮಂಗಳೂರು ತಲುಪಲಿದೆ. ಬುಧವಾರ ಹೊರತುಪಡಿಸಿ ವಾರದ 6 ದಿನವೂ ರೈಲು ಸಂಚರಿಸಲಿದೆ. ಈ ವಂದೇ ಭಾರತ್‌ ರೈಲು ರೈಲು ಕಾಸರಗೋಡು, ಕಣ್ಣೂರು, ಕೋಝಿಕ್ಕೋಡ್ ಮೇನ್, ತಿರೂರ್, ಶೊರ್ನೂರು, ತ್ರಿಶೂರ್, ಎರ್ನಾಕುಲಂ, ಆಲಪ್ಪುಳ ಮತ್ತು ಕೊಲ್ಲಂನಲ್ಲಿ ನಿಲುಗಡೆ ನೀಡಲಿದೆ. ಈ ರೈಲಿನ ಈ ರೈಲುಗಳ ಪ್ರಾಥಮಿಕ ನಿರ್ವಹಣೆಯು ಮಂಗಳೂರಿನಲ್ಲಿ ನಡೆಯಲಿದೆ.

ತಿರುವನಂತಪುರನಿಂದ ಕಾಸರಗೋಡುವರೆಗೆ ಈ ರೈಲು ಮೊದಲು ಓಡಾಟಕ್ಕೆ ಅನುಮೋದನೆ ನೀಡಲಾಗಿತ್ತು. ಆದರೆ, ನಳಿನ್‌ ಕುಮಾರ್‌ ಅವರು ರೈಲ್ವೆ ಸಚಿವ ಅಶ್ವಿನ್‌ ವೈಷ್ಣವ್‌ ಅವರನ್ನು ಭೇಟಿಯಾಗಿ ಮಂಗಳೂರಿಗೆ ವಿಸ್ತರಿಸುವಂತೆ ಮನವಿ ಸಲ್ಲಿಸಿದ್ದರು. ಏಕೆಂದರೆ, ದಿನನಿತ್ಯ ಮಂಗಳೂರಿನಿಂದ ನೂರಾರು ಮಂದಿ ಕಾಸರಗೋಡು ಮಾರ್ಗವಾಗಿ ಕೇರಳಕ್ಕೆ ಸಂಚರಿಸುತ್ತಿದ್ದಾರೆ. ಹೀಗಾಗಿ, ಈ ರೈಲು ಮಂಗಳೂರಿಗೆ ವಿಸ್ತರಣೆಗೊಂಡರೆ ಕರಾವಳಿ ಜನರಿಗೂ ಹೆಚ್ಚಿನ ಅನುಕೂಲವಾಗಲಿದೆ ಎಂದು ರೈಲ್ವೆ ಸಚಿವರಿಗೆ ಮನವರಿಕೆ ಮಾಡಿದ್ದರು. ಮಂಗಳೂರಿನಿಂದ ಮೊದಲ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಗೋವಾಕ್ಕೆ ಸಂಚಾರ ನಡೆಸುತ್ತಿದೆ. ಮಂಗಳೂರು-ಮಡಂಗಾವ್‌ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿಗೆ ಕಳೆದ ವರ್ಷದ ಡಿಸೆಂಬರ್‌ 30ರಂದು ಚಾಲನೆ ನೀಡಲಾಗಿದೆ.

Categories
ಕರಾವಳಿ ರಾಜ್ಯ ಹವಾಮಾನ ಸುದ್ದಿ

ಅಯ್ಯೋ ಹೆಚ್ಚಾಯ್ತು ಬಿಸಿಲು: ಕರಾವಳಿಯಲ್ಲಿ ಅಲರ್ಟ್!

ಅಯ್ಯೋ ಹೆಚ್ಚಾಯ್ತು ಬಿಸಿಲು: ಕರಾವಳಿಯಲ್ಲಿ ಅಲರ್ಟ್!
– ಕರಾವಳಿಯಲ್ಲಿ ಬಿಸಿ ಗಾಳಿ: ಜನತೆಗೆ ಎಚ್ಚರಿಕೆ
– ದಕ್ಷಿಣ ಕನ್ನಡ, ಉಡುಪಿ ಸೇರಿ ರಾಜ್ಯದ ಹಲವೆಡೆ ಹೆಚ್ಚಿದ ಶಕೆ
– ಅನಾರೋಗ್ಯ ಸಾಧ್ಯತೆ: ಏನೇನು ಮಾಡಬಾರದು…?

NAMMUR EXPRESS NEWS
ಕರಾವಳಿ ಸೇರಿದಂತೆ ನಾಡಿನ ಹಲವೆಡೆ ಬಿಸಿಗಾಳಿ ಬೀಸುತ್ತಿದೆ. ಇದರಿಂದ ಉಂಟಾಗುವ ಹತ್ತು ಹಲವು ಸಮಸ್ಯೆ ತೊಂದರೆಗಳನ್ನು ತಪ್ಪಿಸಿಕೊಳ್ಳಲು ಜಿಲ್ಲಾಡಳಿತ ಸಾರ್ವಜನಿಕರಿಗೆ ಕೆಲವು ಸೂಚನೆಗಳನ್ನು ನೀಡಿದೆ. ನೀಡಿದ ನಿಯಮಗಳನ್ನು ಸಾಧ್ಯವಿದ್ದಷ್ಟು ಪಾಲಿಸಿ ಬಿಸಿ ಗಾಳಿಯ ಸಮಸ್ಯೆಯಿಂದ ಪಾರಾಗುವಂತೆ ತಿಳಿಸಲಾಗಿದೆ.

ಯಾವ ಯಾವ ನಿಯಮ ಪಾಲನೆ ಕಡ್ಡಾಯ?

ಸಾಧ್ಯವಿದ್ದಷ್ಟು ತಂಪಾದ ಸ್ಥಳಗಳಲ್ಲಿ ಉಳಿಯಲು ಪ್ರಯತ್ನಿಸಬೇಕು. ನೇರ ಸೂರ್ಯನ ಬೆಳಕು ಅಥವಾ ಬಿಸಿಗಾಳಿ ಮೈಗೆ ಸೋಕದಂತೆ ನೋಡಿಕೊಳ್ಳಬೇಕು. ಬಿಸಿಲಿಗೆ ಹೋಗುವಾಗ ಕೊಡ/ಛತ್ರಿ ಬಳಸಬೇಕು. ತೆಳುವಾದ ಸಡಿಲವಾದ ಹತ್ತಿಯ ಉಡುಪುಗಳನ್ನು ಧರಿಸಬೇಕು. ಅದರಲ್ಲೂ ಬಿಳಿ ಬಣ್ಣದ ಬಟ್ಟೆಗಳು ದೇಹಕ್ಕೆ ಒಳ್ಳೆಯದು. ಹತ್ತಿಯ ಟೋಪಿ ಅಥವಾ ಟರ್ಬನ್/ಕೂಲಿಂಗ್ ಗ್ಲಾಸ್ ಧರಿಸಿದರೆ ಉತ್ತಮ. ಬೆಳಿಗ್ಗೆ 11ರಿಂದ ಸಂಜೆ 4ರವರೆಗೆ ಹೊರಾಂಗಣ ದೈಹಿಕ ಚಟುವಟಿಕೆಯನ್ನು ಕಡಿಮೆ ಮಾಡಲು ಪ್ರಯತ್ನಿನ ಬೇಕು. ಸಾಕಷ್ಟು ನೀರು ಕುಡಿಯಬೇಕು. ಮಜ್ಜಿಗೆ ಮತ್ತು ಗೂಕೋಸ್ ನೀರನ್ನು (ಓಆ‌ರ್.ಎಸ್) ಉಪಯೋಗಿಸಬೇಕು.ಕೊಠಡಿಯ ತಾಪಮಾನವನ್ನು ಕಡಿಮೆ ಮಾಡಲು ಸೂಕ್ತಕ್ರಮಗಳನ್ನು ತೆಗೆದುಕೊಳ್ಳ ಬೇಕು. (ಕಿಟಕಿ, ನೆರಳಿನ ವ್ಯವಸ್ಥೆ, ಫ್ಯಾನ್, ಗಾಳಿ-ಬೆಳಕು ಸಂಚರಿಸಲು ಸರಿಯಾದ ವ್ಯವಸ್ಥೆ ಇತ್ಯಾದಿ).

ಹೀಟ್ ಸ್ಟೋಕ್ ಲಕ್ಷಣಗಳನ್ನು ಹೊಂದಿರುವ ವ್ಯಕ್ತಿಯನ್ನು ತಂಪಾದ ಜಾಗಕ್ಕೆ ಸ್ಥಳಾಂತರಿಸಬೇಕು.ಶಾಖದ ಹೊಡೆತದಿಂದ ಬಳಲುತ್ತಿರುವ ವ್ಯಕ್ತಿಯು ಕನಿಷ್ಟ ಬಟ್ಟೆಯನ್ನು ಹೊಂದಿರುವಂತೆ ನೋಡಿಕೊಳ್ಳ ಬೇಕು. ಹೀಟ್ ವೇವ್ ಸ್ಟೋಕ್ ನಿಂದ ಬಳಲುತ್ತಿರುವ ವ್ಯಕ್ತಿಗೆ ತಣ್ಣೀರಿನಿಂದ ಸ್ಪಾಂಜ್ ಮಾಡಬೇಕು, ಐಸ್ ಪ್ಯಾಕ್‌ಗಳನ್ನು ಉಪಯೋಗಿಸಬೇಕು. ಶಾಖದ ಹೊಡೆತದಿಂದ ಬಳಲುತ್ತಿರುವ ವ್ಯಕ್ತಿಯನ್ನು ಐನ್ ಬ್ಲಾಕ್ಸ್‌ಗಳ ನಡುವೆ ಇಡಬೇಕು. ಹೀಟ್‌ವೇವ್ ಸ್ಟೋಕ್‌ಗೆ ಒಳಗಾದ ವ್ಯಕ್ತಿಗೆ ಯಾವುದೇ ಸುಧಾರಣೆ ಕಂಡುಬರದಿದ್ದರೆ, ಅವರನ್ನು ತಕ್ಷಣ ಕೂಲಿಂಗ್ ವ್ಯವಸ್ಥೆ ಯೊಂದಿಗೆ ಆಸ್ಪತ್ರೆಗೆ ಸ್ಥಳಾಂತರಿಸ ಬೇಕು. ಬೇಸಿಗೆಯಲ್ಲಿ ಹೊರಗಿನಿಂದ ಬಂದ ತಕ್ಷಣ ನೀರು/ಒಆರ್‌ಎಸ್/ಮಜ್ಜಿಗೆ ಯಂತಹ ಪಾನೀಯ ಕುಡಿಯಬಹುದು.

ಏನು ಮಾಡಬಾರದು?

ಬೇಸಿಗೆ ಕಾಲದಲ್ಲಿ ಕಪ್ಪು ಮತ್ತು ಸಿಂಥೆಟಿಕ್, ದಪ್ಪ ಬಟ್ಟೆಗಳನ್ನು ಬಳಕೆ ಮಾಡುವುದು. ಛತ್ರಿ, ಟೋಪಿ ಇಲ್ಲದೇ ಬಿಸಿಲಿನಲ್ಲಿ ಓಡಾಡುವುದು.ಸೂರ್ಯನ ಬಿಸಿಲಿನಲ್ಲಿ ಶ್ರಮದಾಯಕ ದೈಹಿಕ ಚಟುವಟಿಕೆಗೆ ಮಾಡುವುದು. ಕಾರ್ಬೊನೇಟೆಡ್ ಪಾನೀಯಗಳು / ಮಾಂಸ / ಮದ್ಯ / ಚಹಾ / ಶಾಪಿ ಇತ್ಯಾದಿ ಬಳಸುವುದು, ಗಾಳಿ ಬಿಸಿಯಾಗಿರುವ ಕೋಣೆಯಲ್ಲಿ ಇರುವುದು.
ಶಾಖದ ಹೊಡೆತದಿಂದ ಬಳಲುತ್ತಿರುವ ವ್ಯಕ್ತಿಯನ್ನು ತಂಪಾದ ಸ್ಥಳಕ್ಕೆ ಸ್ಥಳಾಂತರಿಸುವಲ್ಲಿ ವಿಳಂಬ ಮಾಡುವುದು. ಹೀಟ್ ಸ್ಟೋಕ್‌ನಿಂದ ಬಳಲುತ್ತಿರುವ ವ್ಯಕ್ತಿ ದಪ್ಪ ಬಟ್ಟೆಯನ್ನು ಧರಿಸಿರುವುದು.
ಇಂಥ ವ್ಯಕ್ತಿಗೆ ಬಿಸಿನೀರಿನಿಂದ ಸ್ಪಾಂಜ್ ಮಾಡುವುದು, ಬಿಸಿಗಾಳಿಗೆ ಒಡ್ಡುವುದು.
ಬೆಳಗ್ಗೆ 11ರಿಂದ ಸಂಜೆ 4ರವರೆಗೆ ಮನರಂಜನೆ/ಪ್ರವಾಸ/ಪಿಕ್ನಿಕ್ ಇತ್ಯಾದಿ ಚಟುವಟಿಕೆ ಮಾಡುವುದು.
ಹೊರಗಿನಿಂದ ಬಂದ ತಕ್ಷಣ ಟೀ/ಕಾಫಿ/ ಕಾರ್ಬೋನೇಟೆಡ್ ಪಾನೀಯಗಳನ್ನು ಕುಡಿಯುವುದು

Categories
ಬೆಂಗಳೂರು ಹವಾಮಾನ ಸುದ್ದಿ

ಹವಾಮಾನ ವರದಿ..!

ಹವಾಮಾನ ವರದಿ..!
– ಬೆಂಗಳೂರಲ್ಲಿಂದು ಮೋಡ ಕವಿದ ವಾತಾವರಣ.!
– ಉತ್ತರ ಕರ್ನಾಟಕ ಹಾಗೂ ಮಲೆನಾಡಿನಲ್ಲಿ ಬಿಸಿಲ ತಾಪ
– ಕರಾವಳಿಯಲ್ಲೂ ಗರಿಷ್ಠ ತಪಮಾನ

NAMMUR EXPRESS NEWS
ಬೆಂಗಳೂರು: ರಾಜ್ಯಾದ್ಯಂತ ಇನ್ನೊಂದು ವಾರವೂ ಒಣ ಹವೆ ಇರುವ ಸಾಧ್ಯತೆ ಇದೆ. ಈ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ. ಒಳನಾಡಿನ ಒಂದೆರಡು ಕಡೆಗಳಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2-3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಲ್ಲಿ ಗರಿಷ್ಠ ತಾಪಮಾನವು 38-40 ಡಿ.ಸೆ ತಲುಪುವ ಸಾಧ್ಯತೆ ಇದೆ ಎಚ್ಚರಿಕೆ ನೀಡಲಾಗಿದೆ. ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ ಗರಿಷ್ಠ ತಾಪಮಾನವು 35-36 ಡಿ.ಸೆ ವರೆಗೆ ತಲುಪಲಿದೆ. ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನದಲ್ಲೂ ಬಿಸಿಲ ವಾತಾವರಣ ಇರಲಿದೆ.

ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದ‌ರ್, ಧಾರವಾಡ, ಗದಗ ಹಾಗೂ ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿಯ ಒಂದೆರಡು ಕಡೆಗಳಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2-3 ಡಿ.ಸೆ ಹೆಚ್ಚಾಗುವ ಸಾಧ್ಯತೆ ಇದೆ. ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ದಾವಣಗೆರೆ ಹಾಗೂ ವಿಜಯನಗರ, ಚಾಮರಾಜನಗರ, ತುಮಕೂರು, ಚಿತ್ರದುರ್ಗದ ಒಂದೆರಡು ಕಡೆಗಳಲ್ಲಿ ಗರಿಷ್ಠ ತಾಪಮಾನ 2 ಡಿ.ಸೆ ಏರಿಕೆ ಆಗಲಿದೆ. ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿರುತ್ತದೆ. ಗರಿಷ್ಠ ಉಷ್ಣಾಂಶ 35 ಮತ್ತು ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ.

Categories
ತೀರ್ಥಹಳ್ಳಿ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ
– ಯಕ್ಷಗಾನ ಪ್ರಿಯರಿಗೆ ಅದ್ಬುತ ಮನೋರಂಜನೆ
– ಹಿರಣ್ಯಾಕ್ಷ ಪ್ರಸಂಗದ ವಿಷ್ಣುವಿನ ವರಾಹ ರೂಪದ ರಂಗ ಪ್ರವೇಶ

NAMMUR EXPRESS NEWS
ತೀರ್ಥಹಳ್ಳಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿ ಇವರು ಇಲ್ಲಿನ ಪಟ್ಟಣ ಪಂಚಾಯತ್ ಅಂಗಳದಲ್ಲಿ ಹಿರಣ್ಯಾಕ್ಷ ಪ್ರಸಂಗದ ವಿಷ್ಣುವಿನ ವರಾಹ ರೂಪ ದ ಅದ್ಬುತ ರಂಗ ಪ್ರವೇಶ ನಡೆಸಿಕೊಟ್ಟರು. ಈ ಯಕ್ಷಗಾನ ಕಾರ್ಯಕ್ರಮದಲ್ಲಿ ಹೆಚ್ಚು ಜನ ಭಾಗವಹಿಸಿದ್ದರು. ಇದು ಯಕ್ಷಗಾನ ಪ್ರಿಯರಿಗೆ ಅದ್ಭುತ ಮನೋರಂಜನೆ ಎಂದೇ ಹೇಳಬಹುದಾಗಿದೆ. ಯಕ್ಷಗಾನ ಮಹಾಶಿವರಾತ್ರಿಯ‌ಂದೇ ನಡೆದಿದ್ದು ಶಿವರಾತ್ರಿಯ ಜಾಗರಣೆ ಮಾಡುವವರಿಗೆ ಸಂತಸ ನೀಡಿತ್ತು. ಶ್ರೀಯುತ ಪ್ರದೀಪ್ ಹಾಗೂ ದೀಪ ದಂಪತಿಗಳು (ಅಡುಗೆ ಕಂಟ್ರಾಕ್ಟರ್, ತೀರ್ಥಹಳ್ಳಿ) ಈ ಯಕ್ಷಗಾನ ಆಯೋಜನೆ ಮಾಡಿದ್ದರು.

ಚಳಿಗಾಲದ ಮುಕ್ತಾಯ ಬೇಸಿಗೆಯ ಆರಂಭದಲ್ಲಿ ಶುರುವಾಗುವ ಯಕ್ಷಗಾನ ಈಗ ಮಲೆನಾಡ ತುಂಬ ಸಾಮಾನ್ಯವಾಗಿ ನಡೆಯುತ್ತಲೇ ಇರುತ್ತವೆ. ಯಕ್ಷಗಾನ ವಿಶೇಷ ಕಲೆಯಾಗಿದ್ದು ಘಟ್ಟದ ಮೇಲೂ ಕೆಳಗೂ ಈ ಕಲೆಗೆ ಸಮಾನ ಬೇಡಿಕೆ ಮತ್ತು ಗೌರವವಿದೆ. ಇತ್ತೀಚಿನ ದಿನಗಳಲ್ಲಿ ಈ ಯಕ್ಷಗಾನವನ್ನು ಅಥವಾ ನಾಟಕಗಳನ್ನ ನೋಡುವವರ ಸಂಖ್ಯೆ ಕಡಿಮೆಯಾಗಿದ್ದರೂ ಯಕ್ಷಗಾನ ಬಯಲಾಟಗಳನ್ನು ಆಡಿಸುವವರ ಸಂಖ್ಯೆ ಕಡಿಮೆಯಾಗಿಲ್ಲ. ಹಿಂದಿನ ಕಾಲದ ಅತ್ಯಂತ ಗೌರವಯುತ, ಧಾರ್ಮಿಕ ಕಲೆ ಇದಾಗಿದ್ದು ಧಾರ್ಮಿಕ ಕತೆಗಳೊಂದಿಗೆ ಮನೋರಂಜನೆಯ ಮಹಾಪೂರವೇ ಆಗಿದೆ. ರಾತ್ರಿಯಿಂದ ಬೆಳಗಿನ ಜಾವದವರೆಗು ನಡೆಯುತ್ತಿದ್ದ ಯಕ್ಷಗಾನ ಈಗ ಮುಸ್ಸಂಜೆ ವೇಳೆಗೆ ಶುರುವಾಗಿ ಮಧ್ಯ ರಾತ್ರಿಗೆಲ್ಲ ಮುಕ್ತಾಯವಾಗುತ್ತಿದೆ.

Categories
ತೀರ್ಥಹಳ್ಳಿ

ತೀರ್ಥಹಳ್ಳಿ ಯುವಕ ಮಂಗಳೂರಿನಲ್ಲಿ ಆತ್ಮಹತ್ಯೆ

ತೀರ್ಥಹಳ್ಳಿ ಯುವಕ ಮಂಗಳೂರಿನಲ್ಲಿ ಆತ್ಮಹತ್ಯೆ
– ಸುದ್ದಿಯಲ್ಲಿ ಬಂದ ಮಾಹಿತಿ ತಪ್ಪಾಗಿದೆ

NAMMUR EXPRESS NEWS
ಮಂಗಳೂರು: ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಮೂಲದ ಯುವಕನೊಬ್ಬ ಮಂಗಳೂರಿನ ಕೆ.ಎಸ್. ರಾವ್ ರಸ್ತೆಯಲ್ಲಿರುವ ಖಾಸಗಿ ಲಾಡ್ಜ್ ಒಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಬಗ್ಗೆ ತಪ್ಪಾಗಿ ಮಾಹಿತಿ ಪ್ರಕಟವಾಗಿದೆ. ಆದರೆ ಕೆಲವು ಮಾಹಿತಿ ಪ್ರಕಾರ ತಪ್ಪು ಸುದ್ದಿ ಪ್ರಕಟವಾಗಿದ್ದು, ಆತನ ಸಾವಿಗೆ ಇನ್ನು ಕಾರಣ ತಿಳಿದು ಬಂದಿಲ್ಲ ಎಂದು ಪೋಷಕರು ತಿಳಿಸಿದ್ದಾರೆ.

Categories
ಕೃಷಿ ರಾಜ್ಯ ರಾಷ್ಟ್ರೀಯ ವಾರ್ತೆ

ಅಡಿಕೆ ಬೆಳೆಗಾರರಿಗೆ ಶಾಕಿಂಗ್ ನ್ಯೂಸ್!

ಅಡಿಕೆ ಬೆಳೆಗಾರರಿಗೆ ಶಾಕಿಂಗ್ ನ್ಯೂಸ್!
– ಶ್ರೀಲಂಕಾದಿಂದಲೂ 5 ಲಕ್ಷ ಟನ್‌ ಅಡಿಕೆ ಆಮದು ಒಪ್ಪಂದ
– ಎರಡು ಕಂಪನಿಗಳು ಒಪ್ಪಂದಕ್ಕೆ ಸಹಿ: ಭಾರೀ ಚರ್ಚೆ ಶುರು

NAMMUR EXPRESS NEWS
ನವ ದೆಹಲಿ: ಭಾರತವು ಶ್ರೀಲಂಕಾದಿಂದ 5 ಲಕ್ಷ ಟನ್ ಅಡಿಕೆ ಆಮದು ಮಾಡಿಕೊಳ್ಳಲು ಎರಡು ಕಂಪನಿಗಳು ಒಪ್ಪಂದಕ್ಕೆ ಸಹಿ ಹಾಕಿದೆ. ಒಟ್ಟು ಆಮದು ಪ್ರಮಾಣವು ವರ್ಷಕ್ಕೆ ಸುಮಾರು 500,000 ಟನ್‌ಗಳಷ್ಟಿರುತ್ತದೆ. ಭಾರತವು ಇಂಡೋನೇಷ್ಯಾ, ಬಾಂಗ್ಲಾದೇಶ ಮತ್ತು ಶ್ರೀಲಂಕಾದಿಂದ ಅಡಿಕೆಯನ್ನು ಆಮದು ಮಾಡಿಕೊಳ್ಳುತ್ತದೆ. ಯುಕೆ ಮೂಲದ ಕಂಪನಿ SRAM ಮತ್ತು MRAM ಗ್ರೂಪ್ ಶುಕ್ರವಾರ ಶ್ರೀಲಂಕಾದಿಂದ 500,000 ಟನ್ ಅಡಿಕೆಯನ್ನು ಆಮದು ಮಾಡಿಕೊಳ್ಳುವ ಒಪ್ಪಂದಕ್ಕೆ ಸಹಿ ಹಾಕುವುದಾಗಿ ಘೋಷಿಸಿವೆ. ವ್ಯಾಪಾರ-ಮುಕ್ತ ವಲಯಗಳಲ್ಲಿ ತಿಂಗಳಿಗೆ ಕನಿಷ್ಠ 25,000 ಟನ್‌ಗಳ ಸಂಸ್ಕರಣಾ ಸಾಮರ್ಥ್ಯದೊಂದಿಗೆ ಹೊಂದಿದೆ ಎಂದು ಯುಕೆ ಮೂಲದ ಗುಂಪು ಹೇಳಿಕೆಯಲ್ಲಿ ತಿಳಿಸಿದೆ.

ಒಟ್ಟು ಆಮದು ಪ್ರಮಾಣವು ವರ್ಷಕ್ಕೆ ಸುಮಾರು 500,000 ಟನ್‌ಗಳಷ್ಟಿರುತ್ತದೆ. ಭಾರತವು ಇಂಡೋನೇಷ್ಯಾ, ಬಾಂಗ್ಲಾದೇಶ ಮತ್ತು ಶ್ರೀಲಂಕಾದಿಂದ ಅಡಿಕೆಯನ್ನು ಆಮದು ಮಾಡಿಕೊಳ್ಳುತ್ತದೆ. ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು, ಸರ್ಕಾರವು ಅಡಿಕೆ ಆಮದನ್ನು ನಿಷೇಧಿತ ವರ್ಗದ ಅಡಿಯಲ್ಲಿ ನಿಗದಿ ಮಾಡಿತ್ತು. ವ್ಯಾಪಾರದ ಮಹಾನಿರ್ದೇಶನಾಲಯ (ಡಿಜಿಎಫ್‌ಟಿ) ಪ್ರಕಾರ ಪ್ರತಿ ಕೆಜಿಗೆ 351 ರೂ.ಗಿಂತ ಕಡಿಮೆ ಇರುವ ಅಡಿಕೆ ಆಮದು ಮಾಡಿಕೊಳ್ಳಲು ಅವಕಾಶವಿಲ್ಲ.

ವಾಣಿಜ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, 2023 ರ ಏಪ್ರಿಲ್-ಡಿಸೆಂಬರ್‌ನಲ್ಲಿ ಅಡಿಕೆ ಆಮದು ಸುಮಾರು 92 ಪ್ರತಿಶತದಷ್ಟು ಕುಸಿದಿದೆ. ಶ್ರೀಲಂಕಾದಿಂದ ಉತ್ತಮ ಗುಣಮಟ್ಟದ ಅಡಿಕೆಯನ್ನು ಆಮದು ಮಾಡುವ ಮೂಲಕ, ಭಾರತದ ಗ್ರಾಹಕರಿಗೆ ಪ್ರೀಮಿಯಂ ಉತ್ಪನ್ನಗಳನ್ನು ತಲುಪಿಸುವ ಉದ್ದೇಶವನ್ನು ಈ ಪಾಲುದಾರಿಕೆ ಸಂಸ್ಥೆಗಳು ಉದ್ದೇಶವನ್ನು ಹೊಂದಿದೆ.

Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ಪ್ರಪ್ರಥಮ ಬಾರಿಗೆ ಮಹಿಳಾ ಕಬಡ್ಡಿ ಲೀಗ್..!

ತೀರ್ಥಹಳ್ಳಿಯಲ್ಲಿ ಪ್ರಪ್ರಥಮ ಬಾರಿಗೆ ಮಹಿಳಾ ಕಬಡ್ಡಿ ಲೀಗ್..!
– ಇಂದು ಮಧ್ಯಾಹ್ನದಿಂದ ರಾತ್ರಿವರೆಗೆ ಕಬಡ್ಡಿ ಪಂದ್ಯಾವಳಿ
– ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ

NAMMUR EXPRESS NEWS
ತೀರ್ಥಹಳ್ಳಿ : ಮಲೆನಾಡ ಮಹಿಳಾ ಟ್ರಸ್ಟ್ (ರಿ) ತೀರ್ಥಹಳ್ಳಿ ಇವರ ವತಿಯಿಂದ ತೀರ್ಥಹಳ್ಳಿಯಲ್ಲಿ ಪ್ರಪ್ರಥಮ ಬಾರಿಗೆ ರಾಜ್ಯ ಮಟ್ಟದ ಅಹ್ವಾನಿತ ತಂಡಗಳ ಹೊನಲು ಬೆಳಕಿನ ಲೀಗ್ ಮಾದರಿಯ ಮಹಿಳೆಯರ ಕಬಡ್ಡಿ ಪಂದ್ಯಾವಳಿಯ ದಿನಾಂಕ: 09-03-2024 ರ ಶನಿವಾರ ತೀರ್ಥಹಳ್ಳಿಯ ಸಾಂಸ್ಕೃತಿಕ ಮಂದಿರದ ಆವರಣದಲ್ಲಿ ನಡೆಯಲಿದ್ದು, ಅಂತಿಮ ಸಿದ್ಧತೆ ನಡೆದಿದೆ.

ತೀರ್ಥಹಳ್ಳಿಯಲ್ಲಿ ಪ್ರಪ್ರಥಮ ಬಾರಿಗೆ ಮಹಿಳಾ ಕಬಡ್ಡಿಲೀಗ್..!

ಮಾ.9ರಂದು ಶನಿವಾರ ತೀರ್ಥಹಳ್ಳಿಯ ಸಾಂಸ್ಕೃತಿಕ ಮಂದಿರದ ಆವರಣದಲ್ಲಿ ನಡೆಸಲಾಗುವುದು. ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ನಡೆಯಲಿದೆ. ಕಬಡ್ಡಿ ಪಂದ್ಯಾವಳಿಯಲ್ಲಿ ವಿಜೇತ ತಂಡಗಳು ಪ್ರಥಮ ಬಹುಮಾನ 35,000, ದ್ವಿತೀಯ ಬಹುಮಾನ 25,000, ತೃತೀಯ ಬಹುಮಾನ 15,000 ಹಾಗೂ ಚತುರ್ಥ ಬಹುಮಾನ 10,000 ಪಡೆದುಕೊಳ್ಳಲಿದೆ.

ಪಂದ್ಯಾವಳಿಯ ಉದ್ಘಾಟನೆಯು ದಿನಾಂಕ: 09-03-2024 ರ ಶನಿವಾರ ಮಧ್ಯಾಹ್ನ 3:30ಕ್ಕೆ ಮಲೆನಾಡು ಮಹಿಳಾ ಟ್ರಸ್ಟ್ ಅಧ್ಯಕ್ಷರಾದ ನಯನ ಜಯಪ್ರಕಾಶ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಮಾಜಿ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಶಬನಂ, ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷರಾದ ಸಂದೇಶ್ ಜವಳಿ,ಪ ಪಂ ಮಾಜಿ ಅಧ್ಯಕ್ಷರಾದ ಸೊಪ್ಪುಗುಡ್ಡೆ ರಾಘವೇಂದ್ರ, ಸ್ಥಾಯಿ ಸಮಿತಿ ಅಧ್ಯಕ್ಷರಾದ ರತ್ನಾಕರ್ ಶೆಟ್ಟಿ,ಪ ಪಂ ಸದಸ್ಯರಾದ ಮಂಜುಳಾ ನಾಗೇಂದ್ರ, ಪ ಪಂ ಸದಸ್ಯರಾದ ಜ್ಯೋತಿ ಮೋಹನ್, ತಿಪ್ಪೇಸ್ವಾಮಿ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಸಿಂಚನ, ಸಾಧನ ಎಸ್, ದೀಕ್ಷಿತ ಹೆಚ್ಎನ್, ನಾಗಶ್ರೀ ಕೆ ಆಗಮಿಸಲಿದ್ದಾರೆ.

ವಿನಯ್ ಗುರೂಜಿ ಆಗಮನ

ಸಂಜೆ 6:30ಕ್ಕೆ ಮಲೆನಾಡು ಸಾಧಕರಿಗೆ ಸನ್ಮಾನ ಸಮಾರಂಭವು ನಯನಾ ಜಯಪ್ರಕಾಶ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಅವಧೂತ ಶ್ರೀ ವಿನಯ್ ಗುರೂಜಿಯವರ ಅಮೃತ ಹಸ್ತದಿಂದ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ವಿಶೇಷ ಆಹ್ವಾನಿತರಾಗಿ ಅನಿವಾಸಿ ಭಾರತೀಯ ಕೋಶದ ಉಪಾಧ್ಯಕ್ಷರಾದ ಡಾ. ಆರತಿ ಕೃಷ್ಣ, ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಬೇಳೂರು ಗೋಪಾಲಕೃಷ್ಣ, ಕಾಂಗ್ರೆಸ್ ಮುಖಂಡರಾದ ಶ್ರೀಕಾಂತ್ ಆಗಮಿಸಲಿದ್ದಾರೆ. ಶಾಸಕ ಆರಗ ಜ್ಞಾನೇಂದ್ರ, ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಆರ್ ಎಂ ಮಂಜುನಾಥ್ ಗೌಡ, ಒಕ್ಕಲಿಗರ ಸಂಘದ ನಿರ್ದೇಶಕರಾದ ಎಸ್ ಕೆ ಧರ್ಮೇಶ್, ಪ ಪಂ ಅಧ್ಯಕ್ಷರಾದ ಗೀತಾ ರಮೇಶ್, ಪ ಪಂ ಉಪಾಧ್ಯಕ್ಷರಾದ ರಹಮತ್ತುಲ್ಲಾ ಅಸಾದಿ, ಜಿಲ್ಲಾ ಯುವ ಒಕ್ಕೂಟ ಅಧ್ಯಕ್ಷರಾದ ಮಾಸ್ತಿಕಟ್ಟೆ ಸುಬ್ರಮಣ್ಯ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಿ ಗಣಪತಿ, ಪ ಪಂ ಸದಸ್ಯರಾದ ಜೈಪ್ರಕಾಶ್ ಶೆಟ್ಟಿ, ಮೇಲಿನ ಕುರುವಳ್ಳಿ ಗ್ರಾ ಪಂ ಅಧ್ಯಕ್ಷರಾದ ಯುಡಿ ವೆಂಕಟೇಶ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

ರಾತ್ರಿ 10.30 ಕ್ಕೆ ಸಮಾರೋಪ ಸಮಾರಂಭವು ನಡೆಯಲಿದ್ದು, ವಿಶೇಷ ಆಹ್ವಾನಿತರಾಗಿ ಹಿರಿಯ ಕ್ರೀಡಾಪಟು ಯೋಗೇಶ್ ಭಗತ್, ಕೃಷ್ಣಮೂರ್ತಿ ಭಟ್, ಜಯರಾಮ್ ಶೆಟ್ಟಿ, ಎಲ್ ಡಿ ನಾಗರಾಜ್ ಆಗಮಿಸಲಿದ್ದಾರೆ. ಉದ್ಯಮಿ ಅಶೋಕ್ ಶೆಟ್ಟಿ, ಸುರಭಿ ಕಿಶೋರ್, ಎನ್ ಎಸ್ ಯು ಐ ಅಧ್ಯಕ್ಷರಾದ ಸುಜಿತ್ ಸಾಲಿಯಾನ್, ಮಹಿಳಾ ಮುಖಂಡರಾದ ಡಾಕಮ್ಮ, ಯೂಥ್ ಕಾಂಗ್ರೆಸ್ ಅಧ್ಯಕ್ಷರಾದ ಅಮರನಾಥ್ ಶೆಟ್ಟಿ, ಕಾಂಗ್ರೆಸ್ ವಕ್ತಾರ ರಾದ ಆದರ್ಶ ಹುಂಚದಕಟ್ಟೆ, ಅಳಬಾಗಿಲು ಅರ್ಪಿತ್, ತೀರ್ಥಹಳ್ಳಿ ಅಜ್ಗರ್, ಸೆಲ್ ಟೆಕ್ ಮೊಬೈಲ್ ಹಲೀಂ, ಗುತ್ತಿಗೆದಾರರಾದ ಸಲೀಂ, ರವಿ ಕಡ್ತುರು, ತೀರ್ಥಹಳ್ಳಿ ಇಲಿಯಾಸ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 8073170053, 9110438570, 7411476020, 8618496122 ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ನಡೆಯಲಿದೆ.

 

Categories
ಕರಾವಳಿ ರಾಜ್ಯ

ಶಿವರಾತ್ರಿಯಂದೇ ಶಿವೈಕ್ಯಳಾದ ಧರ್ಮಸ್ಥಳದ ಎಲ್ಲರ ಅಚ್ಚುಮೆಚ್ಚಿನ ಆನೆ ಲತಾ!

ಶಿವರಾತ್ರಿಯಂದೇ ಶಿವೈಕ್ಯಳಾದ ಧರ್ಮಸ್ಥಳದ ಎಲ್ಲರ ಅಚ್ಚುಮೆಚ್ಚಿನ ಆನೆ ಲತಾ!
– 50 ವರ್ಷಗಳಿಂದ ಶ್ರೀ ಮಂಜುನಾಥನಿಗೆ ಸೇವೆ

NAMMUR EXPRESS NEWS
ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಕ್ಷೇತ್ರದಲ್ಲಿ ಕಳೆದ 50 ವರ್ಷಗಳಿಂದ ಶ್ರೀ ಮಂಜುನಾಥನಿಗೆ ಸೇವೆ ಸಲ್ಲಿಸುತ್ತಿದ್ದ ಲತಾ ಎಂಬ ಹೆಸರಿನ ಆನೆ ಶುಕ್ರವಾರ ನಿಧನ ಹೊಂದಿದೆ. ಶಿವರಾತ್ರಿಯ ಪವಿತ್ರ ದಿನದಂದೇ ಆನೆ ಲತಾ ಶಿವನ ಪಾದದಲ್ಲಿ ಐಕ್ಯಳಾಗಿದ್ದಾಳೆ. 60 ವರ್ಷ ಪ್ರಾಯದ ಲತಾ ಆನೆ ಹೃದಯಾಘಾತದಿಂದ ನಿಧನಾಗಿದ್ದಾಳೆ. ಈಕೆಯ ಮೊಮ್ಮಗಳು ಶಿವಾನಿ ಮರಿಯಾನೆ ಬಳಿಕ ಈಕೆಯೂ ಪ್ರಸಿದ್ದಿಗೆ ಬಂದಿದ್ದಳು.

ಧರ್ಮಸ್ಥಳ ಕ್ಷೇತ್ರದಲ್ಲಿ ಜರಗುವ ಮಂಜನಾಥನ ರಥೋತ್ಸವ, ಲಕ್ಷದೀಪೋತ್ಸವ, ಶಿವರಾತ್ರಿ ಉತ್ಸವಗಳಲ್ಲಿ ಧಾರ್ಮಿಕ ಕಾರ್ಯಗಳಲ್ಲಿ ಲತಾ ಎಂದಿಗೂ ಮುಂಚೂಣಿಯಲ್ಲಿರುತ್ತಿದ್ದಳು. ಧರ್ಮಸ್ಥಳ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆಯವರಿಗೆ ಲತಾ ಆನೆ ಅಚ್ಚುಮೆಚ್ಚಿನವಳಾಗಿದ್ದಳು. ಲತಾ ಆನೆಯನ್ನು ಕಳೆದುಕೊಂಡಿರುವ ಮೊಮ್ಮಗಳು ಶಿವಾನಿ ಹಾಗೂ ಮಗಳು ಲಕ್ಷ್ಮಿ ಆನೆ ಇಬ್ಬರು ಮಂಕಾಗಿದ್ದಾರೆ. ಆನೆ ಸಾವಿನ ಸುದ್ದಿ ತಿಳಿದು ಸುತ್ತಮುತ್ತಲ ಭಕ್ತರು ದೇವಸ್ಥಾನದ బಳಿ ಆಗಮಿಸುತ್ತಿದ್ದಾರೆ.

Categories
ಬೆಂಗಳೂರು ರಾಜ್ಯ

ಮಹಿಳಾ ದಿನದಂದು ಮಹಿಳೆಯರಿಗೆ ಭರ್ಜರಿ ಕೊಡುಗೆ..!

ಮಹಿಳಾ ದಿನದಂದು ಮಹಿಳೆಯರಿಗೆ ಭರ್ಜರಿ ಕೊಡುಗೆ..!
– ಎಲ್​ಪಿಜಿ ಸಿಲಿಂಡರ್ ಬೆಲೆ ಇಳಿಕೆ.!
– 2025 ರವರೆಗೆ ಎಲ್ ಪಿಜಿ ಸಬ್ಸಿಡಿ 300 ರೂ. ಗೆ ಹೆಚ್ಚಳ

NAMMUR EXPRESS NEWS
ಬೆಂಗಳೂರು: ಮಹಿಳಾ ದಿನಾಚರಣೆಯ ದಿನದಂದೇ ಕೇಂದ್ರ ಸರಕಾರ ಮಹಿಳೆಯರಿಗೆ ಗುಡ್‌ನ್ಯೂಸ್ ಕೊಟ್ಟಿದೆ. 2024 ರ ಲೋಕಸಭೆ ಚುನಾವಣೆಗೆ ಮುನ್ನ ಉಜ್ವಲ ಯೋಜನೆಯಡಿ ಬಡ ಮಹಿಳೆಯರಿಗೆ ಪ್ರತಿ ಎಲ್‌ಪಿಜಿ ಸಿಲಿಂಡ‌ರ್ ಸಬ್ಸಿಡಿಗೆ 300 ರೂಪಾಯಿಗಳನ್ನು ಮುಂದಿನ ಹಣಕಾಸು ವರ್ಷಕ್ಕೆ ಏಪ್ರಿಲ್ 1 ರಿಂದ ವಿಸ್ತರಿಸುವುದಾಗಿ ಸರ್ಕಾರ ಗುರುವಾರ ಘೋಷಿಸಿದೆ.
ಕಳೆದ ವರ್ಷ ಅಕ್ಟೋಬರ್‌ನಲ್ಲಿ ಸರ್ಕಾರವು ಪ್ರತಿ ವರ್ಷಕ್ಕೆ 14.2 ಕೆಜಿ ಸಿಲಿಂಡರ್‌ಗೆ 12 ರೀಫಿಲ್ ಗಳಿಗೆ ಸಿಲಿಂಡರ್‌ಗೆ 200 ರೂ.ಘೋಷಣೆ ಮಾಡಿತ್ತು. ಇದೀಗ ಸಬ್ಸಿಡಿ ಮೊತ್ತವನ್ನು 300 ರೂ.ಕ್ಕೆ ಹೆಚ್ಚಳ ಮಾಡಿ ಮಾರ್ಚ್ 31ಕ್ಕೆ ಕೊನೆಗೊಳ್ಳಲಿದೆ. ಆದರೆ ಈ ಯೋಜನೆಯನ್ನು ಇನ್ನೂ ಎರಡು ವರ್ಷಗಳ ಅವಧಿಗೆ ವಿಸ್ತರಣೆ ಮಾಡಿದೆ.5 ರವರೆಗೆ 300 ರೂಪಾಯಿ LPG ಸಬ್ಸಿಡಿಯನ್ನು ವಿಸ್ತರಿಸಿದೆ.

ಕೇಂದ್ರ ಸರಕಾರದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ) ಈಗ ಈ ಸಬ್ಸಿಡಿಯನ್ನು 2024- 25ರವರೆಗೆ ವಿಸ್ತರಿಸಲು ನಿರ್ಧರಿಸಿದೆ ಎಂದು ಕೇಂದ್ರ ಸಚಿವ ಪಿಯೂಷ್‌ ಗೋಯಲ್ ಇಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ಈ ಯೋಜನೆಯ ವಿಸ್ತರಣೆಯಿಂದಾಗಿ ಸುಮಾರು 10 ಕೋಟಿ ಕುಟುಂಬಗಳಿಗೆ ಅನುಕೂಲವಾಗಲಿದೆ. ಅಲ್ಲದೇ ಸರಕಾರಕ್ಕೆ ಸುಮಾರು 12,000 ಕೋಟಿ ರೂ. ಹೆಚ್ಚುವರಿ ಹೊರೆಯಾಗಲಿದೆ.

ಲೋಕಸಭೆ ಚುನಾವಣೆ 2024 ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ನಡೆಯಲಿದೆ. ಗ್ರಾಮೀಣ ಮತ್ತು ವಂಚಿತ ಬಡ ಕುಟುಂಬಗಳಿಗೆ ಶುದ್ಧವಾದ ಅಡುಗೆ ಇಂಧನವಾದ ದ್ರವೀಕೃತ ಪೆಟ್ರೋಲಿಯಂ ಗ್ಯಾಸ್ ಲಭ್ಯವಾಗುವಂತೆ ಮಾಡಲು, ಬಡ ಕುಟುಂಬಗಳ ವಯಸ್ಕ ಮಹಿಳೆಯರಿಗೆ ಠೇವಣಿ-ಮುಕ್ತ ಎಲ್ ಪಿಜಿ ಸಂಪರ್ಕಗಳನ್ನು ಒದಗಿಸಲು ಸರ್ಕಾರವು ಮೇ 2016 ರಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಜಾರಿಗೆ ತಂದಿತ್ತು. ಈಗಾಗಲೇ ಮಹಿಳೆಯರಿಗೆ ಉಚಿತವಾಗಿ ಗ್ಯಾಸ್‌ ಸಂಪರ್ಕವನ್ನು ನೀಡಲಾಗಿದ್ದು, ಇದೀಗ ಸಬ್ಸಿಡಿ ಮೊತ್ತವನ್ನು ನೀಡಲಾಗುತ್ತಿದೆ.

ಮಧ್ಯಪ್ರದೇಶ ಮತ್ತು ರಾಜಸ್ಥಾನ ಸೇರಿದಂತೆ ಐದು ರಾಜ್ಯಗಳ ವಿಧಾನಸಭಾ ಚುನಾವಣೆಗೆ ಮುನ್ನ, ಸರ್ಕಾರವು ಆಗಸ್ಟ್ ಅಂತ್ಯದಲ್ಲಿ ಅಡುಗೆ ಅನಿಲ ಬೆಲೆಯನ್ನು ಪ್ರತಿ ಸಿಲಿಂಡರ್‌ಗೆ 200 ರೂ. ಇದಾದ ಬಳಿಕ ಎಲ್ ಪಿಜಿ ಸಿಲಿಂಡರ್ ದರ 903 ರೂ.ಗೆ ಇಳಿಯಲಿದೆ. ಉಜ್ವಲ ಫಲಾನುಭವಿಗಳಿಗೆ ಸಿಲಿಂಡರ್‌ಗೆ 300 ರೂ.ಗಳ ಸಬ್ಸಿಡಿಯನ್ನು ಪರಿಗಣಿಸಿ ಬೆಲೆ 603 ರೂ.ಗಳಾಗಿದ್ದು, ಸಬ್ಸಿಡಿ ಮೊತ್ತ ನೇರವಾಗಿ ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ವರ್ಗಾವಣೆ ಆಗಲಿದೆ.