Categories
ಕರಾವಳಿ ಕಾರ್ಕಳ ಶಿಕ್ಷಣ

ಸಿದ್ದಾಪುರ ಚೇತನ ಕಾಲೇಜಿನಲ್ಲಿ ಪ್ರೇರಣಾ ಶಿಬಿರ ಯಶಸ್ವಿ!

ಸಿದ್ದಾಪುರ ಚೇತನ ಕಾಲೇಜಿನಲ್ಲಿ ಪ್ರೇರಣಾ ಶಿಬಿರ ಯಶಸ್ವಿ!
– ಕ್ರಿಯೇಟಿವ್ ಪಿಯು ಕಾಲೇಜು ಕಾರ್ಕಳದಿಂದ ಆಯೋಜನೆ
– ಎಸ್‌ಎಸ್‌ಎಲ್‌ಸಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗಾಗಿ ಶಿಬಿರ
– ಉತ್ಸಾಹದಿಂದ ಶಿಬಿರದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು

NAMMUR EXPRESS NEWS
ಸಿದ್ದಾಪುರ: ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಾರ್ಯಾಲಯ, ಶಿರಸಿ ಶೈಕ್ಷಣಿಕ ಜಿಲ್ಲೆ, ಶಿರಸಿ ಹಾಗೂ ಕ್ರಿಯೇಟಿವ್ ಪದವಿಪೂರ್ವ ಕಾಲೇಜು ಕಾರ್ಕಳ ಇವರ ಸಂಯುಕ್ತ ಆಶ್ರಯದಲ್ಲಿ ಎಸ್ ಎಸ್ ಎಲ್ ಸಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗಾಗಿ ಸಿದ್ದಾಪುರ ಚೇತನ ಕಾಲೇಜಿನಲ್ಲಿ ಪ್ರೇರಣಾ ಶಿಬಿರವನ್ನು ಆಯೋಜಿಸಲಾಗಿದ್ದು ಎಲ್ಲಾ ವಿದ್ಯಾರ್ಥಿಗಳು ಉತ್ಸಾಹದಿಂದ ಶಿಬಿರದಲ್ಲಿ ಪಾಲ್ಗೊಂಡಿದ್ದರು. ಪ್ರೇರಣಾ ಶಿಬಿರದ ಉದ್ಘಾಟನಾ ಸಮಾರಂಭವನ್ನು ಸಿದ್ದಾಪುರದ ಪ್ರತಿಭಾನ್ವಿತ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗಾಗಿ ಚೇತನ ಕಾಲೇಜಿನಲ್ಲಿ ಆಯೋಜಿಸಿದ 3 ದಿನದ ಶಿಬಿರಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಯಿತು. ಹಾಗೂ ಶಿರಸಿ ಶೈಕ್ಷಣಿಕ ಜಿಲ್ಲೆ ಉಪ ನಿರ್ದೇಶಕರಾದ ಪಿ ಬಸವರಾಜ್ ಶಿಬಿರದ ಉದ್ಘಾಟನೆಯನ್ನು ನೆರವೇರಿಸಿದರು.

ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನ ಹಿಂದಿ ಭಾಷಾ ಮುಖ್ಯಸ್ಥರಾದ ವಿನಾಯಕ ಜೋಗ್ ಹಾಗೂ ಸಿದ್ದಾಪುರ ಶಿಕ್ಷಣ ಪ್ರಸಾರಕ ಸಮಿತಿ ಉಪಾಧ್ಯಕ್ಷರಾದ ಶಶಿಭೂಷಣ ಹೆಗಡೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಉದ್ಘಾಟನೆ ಮಾಡಿದರು. ಮಾ.7ರಂದು ನಿವೃತ್ತ ಶಿಕ್ಷಣಾಧಿಕಾರಿಗಳಾದ ಜೆಐ ನಾಯಕ್ ಅವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭವು ನಡೆದಿದ್ದು, ಮುಖ್ಯ ಅತಿಥಿಗಳಾಗಿ ಕಾರ್ಕಳ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕರಾದ ಗಣಪತಿ ಕೆ.ಎಸ್ ಆಗಮಿಸಿದ್ದು ಶಾಲಾ ಶಿಕ್ಷಣ ಇಲಾಖೆ ಮತ್ತು ಕ್ಷೇತ್ರ ಶಿಕ್ಷಣ ಶಿಕ್ಷಣಾಧಿಕಾರಿ ಕಚೇರಿ ವತಿಯಿಂದ ಕಳೆದ ಐದಾರು ವರ್ಷದಿಂದ ನಿರಂತರವಾಗಿ ಉತ್ತರ ಕನ್ನಡ ಜಿಲ್ಲೆ ಶಿರಸಿ ಶಿಕ್ಷಣ ಜಿಲ್ಲೆಯಲ್ಲಿ ಪ್ರೇರಣಾ ಶಿಬಿರಗಳಿಗೆ ಸಹಕಾರ ನೀಡುತ್ತಿರುವ ಕಾರಣ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಸುಮಾರು 5 ವರ್ಷಗಳಿಂದ ಶಿಬಿರಗಳಿಗೆ ವಿಶೇಷ ಸಹಕಾರ ಮತ್ತು ಮಾರ್ಗದರ್ಶನ ಮಾಡಿಕೊಂಡು ಬರುತ್ತಿದ್ದು, ಇಡೀ ರಾಜ್ಯದಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ ಎಸ್ ಎಸ್ ಎಲ್ ಸಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗಾಗಿ ಈ ಶಿಬಿರ ಆಯೋಜನೆ ಮಾಡಲಾಗಿತ್ತು. ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಂ ಹೆಚ್ ನಾಯಕ್ ಅವರ ನೇತೃತ್ವಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕನ್ನಡ ಮಾಧ್ಯಮ ಮತ್ತು ಇಂಗ್ಲಿಷ್ ಮಾಧ್ಯಮದ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಕ್ಲಾಸ್ ತೆಗೆದುಕೊಳ್ಳಲಾಯಿತು.

Categories
ಬೆಂಗಳೂರು ರಾಜ್ಯ ರಾಷ್ಟ್ರೀಯ ವಾರ್ತೆ

ರಾಜ್ಯಸಭೆಗೆ ಇನ್ಫೋಸಿಸ್ ಸುಧಾಮೂರ್ತಿ!

ರಾಜ್ಯಸಭೆಗೆ ಇನ್ಫೋಸಿಸ್ ಸುಧಾಮೂರ್ತಿ!
– ನಾಮ ನಿರ್ದೇಶನ: ಪ್ರಧಾನಿ ಮೋದಿ ಘೋಷಣೆ
– ಸಾಧಕ ಕನ್ನಡತಿಗೆ ಒಲಿದ ಮಹತ್ವದ ಹುದ್ದೆ

NAMMUR EXPRESS NEWS
ಬೆಂಗಳೂರು: ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಲಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಜ್ಯಸಭೆ ಸ್ಥಾನಕ್ಕೆ ಸುಧಾಮೂರ್ತಿ ಅವರ ಹೆಸರನ್ನು ನಾಮನಿರ್ದೇಶನ ಮಾಡಿದ್ದಾರೆ. ಶುಕ್ರವಾರ ಮಹಿಳಾ ದಿನಾಚರಣೆಯಂದು ಈ ಘೋಷಣೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ರಾಜ್ಯಸಭೆಯಲ್ಲಿನ ಸುಧಾಮೂರ್ತಿ ಅವರ ಹಾಜರಿಯು, ನಮ್ಮ ದೇಶದ ಭವಿಷ್ಯವನ್ನು ರೂಪಿಸುವಲ್ಲಿನ ಮಹಿಳೆಯರ ಬಲ ಹಾಗೂ ಸಾಮರ್ಥ್ಯಕ್ಕೆ ಉದಾಹರಣೆಯಾಗಿ, ನಮ್ಮ ‘ನಾರಿ ಶಕ್ತಿ’ ಘೋಷಣೆಗೆ ಶಕ್ತಿಶಾಲಿ ಪುರಾವೆಯಾಗಲಿದೆ.

ಫಲಪ್ರದ ಸಂಸದೀಯ ಅಧಿಕಾರಕ್ಕಾಗಿ ಅವರಿಗೆ ಶುಭ ಹಾರೈಸುತ್ತೇನೆ” ಎಂದು ಎಕ್ಸ್ ಸಾಮಾಜಿಕ ಜಾಲತಾಣ ಖಾತೆಯಲ್ಲಿ ತಿಳಿಸಿದ್ದಾರೆ. ಭಾರತದ ರಾಷ್ಟ್ರಪತಿ ಅವರು ಸುಧಾಮೂರ್ತಿ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿರುವುದು ನನಗೆ ಆನಂದ ಉಂಟುಮಾಡಿದೆ. ಸಮಾಜ ಸೇವೆ, ಲೋಕೋಪಕಾರ ಹಾಗೂ ಶಿಕ್ಷಣ ಸೇರಿದಂತೆ ವಿಭಿನ್ನ ಕ್ಷೇತ್ರಗಳಲ್ಲಿನ ಸುಧಾ ಮೂರ್ತಿ ಅವರ ಕೊಡುಗೆ ಅಪಾರ ಹಾಗೂ ಸ್ಫೂರ್ತಿದಾಯಕ ಎಂದು ಮೋದಿ ಹೇಳಿದ್ದಾರೆ.

Categories
ಅಪರಾಧ ತೀರ್ಥಹಳ್ಳಿ

ತೀರ್ಥಹಳ್ಳಿ ಠಾಣೆಯಲ್ಲಿ 25ಕ್ಕೂ ಹೆಚ್ಚು ಮಂದಿ ವಿರುದ್ಧ ಕೇಸ್!

ತೀರ್ಥಹಳ್ಳಿ ಠಾಣೆಯಲ್ಲಿ 25ಕ್ಕೂ ಹೆಚ್ಚು ಮಂದಿ ವಿರುದ್ಧ ಕೇಸ್!
– ಕೊಲೆಗೆ ಯತ್ನ, ಮಾರಕಾಸ್ತ್ರದಿಂದ ಹಲ್ಲೆ ಆರೋಪ
– ಇಬ್ಬರು ಗಾಯಾಳುಗಳು ಆಸ್ಪತ್ರೆಗೆ ದಾಖಲು

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣದಲ್ಲಿ ಬುಧವಾರ ಸುಮಾರಿಗೆ ನಡೆದ ನೈತಿಕ ಪೊಲೀಸ್ ಗಿರಿಯಂತಹ ಘಟನೆಯೊಂದರ ಸಂಬಂಧ ಸುಮಾರು 25 ಮಂದಿ ವಿರುದ್ಧ ಕೇಸ್ ದಾಖಲಾಗಿದೆ. ತೀರ್ಥಹಳ್ಳಿ ಕುರುವಳ್ಳಿಯ ಪುತ್ತಿಗೆ ಮಠದ ರಸ್ತೆಯಲ್ಲಿ ಅಶೋಕ ಲೈಲಾಂಡ್‌ ಗಾಡಿಯೊಂದನ್ನ ಅಡ್ಡಗಟ್ಟಿ ಅದರಲ್ಲಿದ್ದ ಇಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿತ್ತು. ದನಗಳನ್ನು ಅಕ್ರಮವಾಗಿ ಸಾಗಿಸ್ತಿದ್ದರು ಎಂಬ ಆರೋಪದ ಅಡಿಯಲ್ಲಿ ಗಾಡಿಯನ್ನು ಅಡ್ಡಗಟ್ಟಿ ಅದರಲ್ಲಿದ್ದವರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ದೂರಲಾಗಿದೆ.

ತೀವ್ರ ಹಲ್ಲೆಗೊಳಗಾದ ಶಿವಮೊಗ್ಗದ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಇನ್ನೊಬ್ಬರಿಗೂ ಗಂಭೀರ ಗಾಯಗಳಾಗಿವೆ. ಇಬ್ಬರು ಗಾಯಾಳುಗಳ ಪೈಕಿ ಓರ್ವರ ಹೇಳಿಕೆ ಆಧರಿಸಿ 25 ಕ್ಕೂ ಹೆಚ್ಚು ಮಂದಿ ವಿರುದ್ಧ ತೀರ್ಥಹಳ್ಳಿ ಪೊಲೀಸ್ ಸ್ಟೇಷನ್‌ನಲ್ಲಿ ಸಾಲುದ್ದ ಸೆಕ್ಷನ್‌ಗಳ ಅಡಿಯಲ್ಲಿ ಕೇಸ್ ದಾಖಲಾಗಿದೆ.

Categories
ರಾಜ್ಯ ರಾಷ್ಟ್ರೀಯ ವಾರ್ತೆ

ರೀಲ್ಸ್‌ ಮಾಡಿದವರಿಗೆ ಮೋದಿ ಭೇಟಿ ಅವಕಾಶ!

ರೀಲ್ಸ್‌ ಮಾಡಿದವರಿಗೆ ಮೋದಿ ಭೇಟಿ ಅವಕಾಶ!
– ಬಿಜೆಪಿಯ ಹೊಸ ಕ್ಯಾಂಪೇನ್‌: ಯಾರು ಭಾಗಿಯಾಗಬಹುದು?
– ಕೇಂದ್ರದ ಯೋಜನೆ, ಅಭಿವೃದ್ಧಿ ಬಗ್ಗೆ ರೀಲ್ಸ್
– ಒಂದು ತಿಂಗಳ ಕಾಲ ನಡೆಯುವ ಸ್ಪರ್ಧೆ

NAMMUR EXPRESS NEWS
ಬೆಂಗಳೂರು: ಲೋಕಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳಲ್ಲಿ ದಿನಾಂಕ ಘೋಷಣೆಯಾಗಲಿದೆ. ಇದರ ನಡುವೆ ಎಲ್ಲಾ ರಾಜಕೀಯ ಪಕ್ಷಗಳೂ ಅಭ್ಯರ್ಥಿಗಳ ಆಯ್ಕೆಯಲ್ಲಿ ತೊಡಗಿವೆ. ಬಿಜೆಪಿ ಈಗಾಗಲೇ ತಮ್ಮ ಮೊದಲ ಪಟ್ಟಿ ಬಿಡುಗಡೆ ಮಾಡಲಾಗಿದ್ದು, 195 ಕ್ಷೇತ್ರಗಳಿಗೆ ಟಿಕೆಟ್ ಹಂಚಿಕೆ ಮಾಡಲಾಗಿದೆ. ಇನ್ನು ಕರ್ನಾಟಕದಲ್ಲಿ ಬಿಜೆಪಿ ವಿನೂತನ ಪ್ರಚಾರಕ್ಕೆ ಮುಂದಾಗಿದೆ. ಮೋದಿ ಸರ್ಕಾರದ ಸಾಧನೆಗಳ ಬಗ್ಗೆ ಜನರಿಂದಲೇ ಹೇಳಿಸಿ, ಆ ಮೂಲಕ ಪ್ರಚಾರ ಗಿಟ್ಟಿಸಿಕೊಳ್ಳಲು ಮುಂದಾಗಿದೆ. ಅದಕ್ಕಾಗಿ ಸೋಷಿಯಲ್‌ ಮೀಡಿಯಾ ರೀಲ್ಸ್ ನಿರ್ಮಾಣ ಸ್ಪರ್ಧೆ ಏರ್ಪಡಿಸಿದೆ.

ರೀಲ್ಸ್ ಮಾಡಿ, ಮೋದಿ ಭೇಟಿಯಾಗಿ

ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾ ತುಂಬಾ ಪ್ರಭಾವಿ ಮಾಧ್ಯಮವಾಗಿದೆ. ಸೋಷಿಯಲ್ ಮೀಡಿಯಾ ಮೂಲಕ ಬಹುಬೇಗ ಪ್ರಚಾರ ನಡೆಯಬಹುದಾಗಿದೆ. ಇದನ್ನು ಅರಿತ ಬಿಜೆಪಿ ರೀಲ್ಸ್ ಕಂಪೀಟಿಷನ್ ಶುರು ಮಾಡಿದೆ. ಹೊಸ ಮತದಾರರು ಹಾಗೂ ಯುವ ಸಮುದಾಯವನ್ನು ಬಿಜೆಪಿಯತ್ತ ಸೆಳೆಯೋದಕ್ಕೆ ಬಿಜೆಪಿ ಈ ಪ್ಲಾನ್ ಮಾಡಿದೆ. ನಮೋ ಯುವ ಭಾರತ ಫೆಲೋಶಿಫ್‌ ಕಾರ್ಯಕ್ರಮದಡಿ ಈ ರೀಲ್ಸ್ ಕಾಂಪಿಟಿಷನ್ ಏರ್ಪಡಿಸಲಾಗಿದ್ದು, ಹೆಚ್ಚು ಲೈಕ್ಸ್ ಪಡೆಯುವ 10 ರೀಲ್ಸ್ ಮಾಡಿದವರಿಗೆ ಮೋದಿ ಭೇಟಿ ಮಾಡಿಸುವ ಅವಕಾಶವನ್ನು ಒದಗಿಸಿಕೊಡಲಾಗುತ್ತಿದೆ.

ಕೇಂದ್ರದ ಯೋಜನೆ, ಅಭಿವೃದ್ಧಿ ಬಗ್ಗೆ ರೀಲ್ಸ್ ಮಾಡಬೇಕು

ಈ ರೀಲ್ಸ್ ಸ್ಪರ್ಧೆಯಲ್ಲಿ ಭಾಗವಹಿಸುವವರು ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಗಳು, ಯೋಜನೆಗಳು, ಕಾರ್ಯಕ್ರಮಗಳು ಹಾಗೂ ಅಭಿವೃದ್ಧಿ ಕಾರ್ಯಗಳ ಬಗ್ಗೆ ರೀಲ್ಸ್ ಮಾಡಬೇಕು. ಬಿಜೆಪಿಗೆ ಯಾಕೆ ಮತ ನೀಡಬೇಕು ಎಂಬುದರ ಕುರಿತು ಸರಿಯಾದ ಮಾಹಿತಿ ನೀಡಬೇಕು ಹಾಗೆ ಮಾಡಿದ ರೀಲ್ಸ್ ಅನ್ನು ಬಿಜೆಪಿ ಯುವ ಮೋರ್ಚಾ ತನ್ನ ಸೋಷಿಯಲ್ ಮೀಡಿಯಾ ಪೇಜ್‌ಗಳಲ್ಲಿ ಹಂಚಿಕೊಳ್ಳಲಿದೆ. ಅಷ್ಟೇ ಅಲ್ಲದೇ ಅತ್ಯುತ್ತಮವಾಗಿರುವ ಮೂರು ರೀಲ್‌ಗಳನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಇತರ ನಾಯಕರು ತಮ್ಮ ಸೋಷಿಯಲ್‌ ಮೀಡಿಯಾ ಪೇಜ್‌ಗಳಲ್ಲಿ ಹಂಚಿಕೊಳ್ಳಲಿದ್ದಾರೆ.

ಒಂದು ತಿಂಗಳ ಕಾಲ ನಡೆಯುವ ಸ್ಪರ್ಧೆ

ಒಂದು ತಿಂಗಳ ಕಾಲ ಈ ಸ್ಪರ್ಧೆ ನಡೆಯಲಿದೆ. 90 ಸೆಕೆಂಡ್‌ಗಳ ರೀಲ್ಸ್ ಮಾಡಬೇಕಾಗಿದ್ದು, ಮಹಿಳೆ, ಯುವಜನತೆ, ಅನ್ನದಾತ ಮತ್ತು ಬಡವ ಎಂಬ 4 ವಿಭಾಗಗಳಲ್ಲಿ ಕೇಂದ್ರ ಸರ್ಕಾರದ ಕೊಡುಗೆ ಬಗ್ಗೆ ರೀಲ್ಸ್ ಮಾಡಬಹುದು. ಬಿಜೆಪಿ ಯುವ ಮೋರ್ಚಾ ಈ ಕಾಂಪಿಟಿಷನ್ ಇಟ್ಟಿದ್ದು, ಮೋದಿ ಕರ್ನಾಟಕಕ್ಕೆ ಬಂದಾಗ ಅತ್ಯುತ್ತಮ ರೀಲ್ಸ್ ಮಾಡಿದ ಹತ್ತು ಮಂದಿಯನ್ನು ಮೋದಿ ಭೇಟಿ ಮಾಡಿಸುವುದಾಗಿ ತಿಳಿಸಲಾಗಿದೆ.

Categories
ಬೆಂಗಳೂರು ರಾಜ್ಯ ಶಿಕ್ಷಣ

ಎಸ್ಸೆಸ್ಸೆಲ್ಸಿ ಪರೀಕ್ಷೆ: ಹೊಸ ರೂಲ್ಸ್..!

ಎಸ್ಸೆಸ್ಸೆಲ್ಸಿ ಪರೀಕ್ಷೆ: ಹೊಸ ರೂಲ್ಸ್..!
– ದ್ವಾರದ ಕಡೆ ಮುಖ ಮಾಡುವುದು ನಿರ್ಬಂಧ
– ಪರೀಕ್ಷಾ ಕೊಠಡಿಗಳಿಗೆ ಕಡ್ಡಾಯವಾಗಿ ಸಿಸಿಟೀವಿ ಅಳವಡಿಕೆ

NAMMUR EXPRESS NEWS
ಬೆಂಗಳೂರು: ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಶುರುವಾಗಿದೆ. ಮಾ.25ರಿಂದ ಆರಂಭವಾಗುವ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಪರೀಕ್ಷಾ ಕೊಠಡಿಗಳಲ್ಲಿ ಪ್ರವೇಶ ದ್ವಾರಕ್ಕೆ ವಿರುದ್ಧವಾಗಿ ಮುಖ ಮಾಡಿ ಕುಳಿತು ಪರೀಕ್ಷೆ ಬರೆಯುವಂತೆ ಆಸನದ ವ್ಯವಸ್ಥೆ ಮಾಡಬೇಕೆಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸೂಚಿಸಿದೆ. ಹೀಗೆ ಮಾಡಿದಾಗ ಅಕ್ರಮ ಎಸಗಿದರೆ ದ್ವಾರದಲ್ಲೇ ಕಾಣುತ್ತದೆ. ಆದ್ದರಿಂದ ಈ ಕ್ರಮ ಜರುಗಿಸಲಾಗಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ಪರೀಕ್ಷಾ ಸಿಬ್ಬಂದಿ ವರ್ಗದವರು ನಿರ್ವಹಿಸಬೇಕಾದ ಮಾರ್ಗಸೂಚಿಗಳನ್ನು ಪ್ರಕಟಿಸಿರುವ ಮಂಡಳಿಯು, ಸಾಮಾನ್ಯ ವಾಗಿ ತರಗತಿ ಕೊಠಡಿಗಳಲ್ಲಿ ವಿದ್ಯಾರ್ಥಿಗಳು ಪ್ರವೇಶ ದ್ವಾರದ ಕಡೆಗೆ ಮುಖ ಮಾಡಿಕೊಂಡು ಕುಳಿತುಕೊಳ್ಳುತ್ತಾರೆ.

ಇದನ್ನು ತಪ್ಪಿಸಲು ಪ್ರವೇಶ ದ್ವಾರಕ್ಕೆ ವಿರುದ್ಧವಾಗಿ ಮುಖ ಮಾಡಿ ಕುಳಿತುಕೊಳ್ಳುವಂತೆ ಆಸನದ ವ್ಯವಸ್ಥೆ ಮಾಡಬೇಕು. ಯಾವುದೇ ಕೇಂದ್ರದಲ್ಲೂ ವಿದ್ಯಾರ್ಥಿಗಳು ಬಯಲಿನಲ್ಲಿ ಕುಳಿತು ಪರೀಕ್ಷೆ ಬರೆಯದಂತೆ ಆಯಾ ಜಿಲ್ಲಾ ಉಪನಿರ್ದೇಶಕರು ಮುಂಜಾಗ್ರತಾ ಕ್ರಮ ವಹಿಸಬೇಕು ಸೂಚಿಸಿದೆ. ಉಳಿದಂತೆ ಪರೀಕ್ಷೆಯ ಪಾವಿತ್ರ್ಯತೆ ಕಾಪಾಡುವುದು ಆಯಾ ಜಿಲ್ಲಾ ಉಪ ನಿರ್ದೇಶಕರುಗಳ ಜವಾಬ್ದಾರಿ. ಮಾರ್ಗಾಧಿಕಾರಿಗಳಿಂದ ಪ್ರಶ್ನೆಪತ್ರಿಕೆಗಳನ್ನು ಸ್ವೀಕರಿಸಿ ಅಲ್ವೇರಾದಲ್ಲಿಟ್ಟುಕೊಳ್ಳುವ, ಪರೀಕ್ಷಾ ಕೊಠಡಿಗಳಿಗೆ ಕಡ್ಡಾಯವಾಗಿ ಸಿಸಿಟೀವಿ ಅಳವಡಿಸಬೇಕು ಎಂದು ಸೂಚಿಸಿದೆ.

Categories
ಅಪರಾಧ ಮಂಗಳೂರು

ಮೈದಾನದಲ್ಲಿ ಹೂತಿಟ್ಟ 2.5 ಕೋಟಿ ಮೌಲ್ಯದ ಚಿನ್ನ ಪತ್ತೆ.!

ಮೈದಾನದಲ್ಲಿ ಹೂತಿಟ್ಟ 2.5 ಕೋಟಿ ಮೌಲ್ಯದ ಚಿನ್ನ ಪತ್ತೆ.!
– ಕುಡಿದ ಅಮಲಲ್ಲಿ ಬ್ಯಾಂಕ್ ದರೋಡೆ: ಹಣ, ಚಿನ್ನ ಹೂತಿಟ್ಟರು
– ಕರಾವಳಿ ಕೇರಳ ಗಡಿಯಲ್ಲಿ ನಡೆದಿದ್ದ ಪ್ರಕರಣ

NAMMUR EXPRESS NEWS
ಮಂಗಳೂರು: ಅಡ್ಯನಡ್ಕ ಕರ್ಣಾಟಕ ಬ್ಯಾಂಕ್ ಕಳ್ಳತನ ಪ್ರಕರಣವಾಗಿ ತಿಂಗಳಾಗುತ್ತ ಬಂದಿದ್ದು, ಪೊಲೀಸರು ತನಿಖೆಯಲ್ಲಿ ಪ್ರಗತಿಯನ್ನು ಸಾಧಿಸಿ ಪ್ರಮುಖ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಈ ನಡುವೆ ದರೋಡೆಕೋರರು ದರೋಡೆಗೈದ ಕೋಟ್ಯಾಂತರ ರೂ. ಮೌಲ್ಯದ ಚಿನ್ನಾಭರಣವೂ ಕೊನೆಗೂ ಪತ್ತೆಯಾಗಿದೆ. ಈ ಕಳ್ಳತನ ಪ್ರಕರಣದಲ್ಲಿ ಕಾಸರಗೋಡು ಕಡೆಯ ಮೂವರು ಕಳ್ಳರ ಜತೆಗೆ ಬಾಯಾರು ಗ್ರಾಮದ ಪೈವಳಿಕೆ ಗಾಳಿಯಡ್ಕದ ವ್ಯಕ್ತಿಯೊಬ್ಬ ಭಾಗಿಯಾಗಿದ್ದ. ಬಾಯಾರು ನಿವಾಸಿ ಊರಿನಲ್ಲಿ ಭಾರೀ ಸಾಮಾಗ್ರಿ ಖರೀದಿಗೆ ತಯಾರಾಗಿದ್ದ. ಈ ನಡುವೆ ಆತ ತನ್ನೂರಿನಿಂದ ಅಡ್ಯನಡ್ಕಕ್ಕೆ ಆಗಮಿಸಿ ಮದ್ಯ ಸೇವನೆ ಮಾಡಿ ನಶೆಯಲ್ಲಿ ಬ್ಯಾಂಕ್‌ಗೆ ನುಗ್ಗಿ ಹಣ ಕಳವು ಮಾಡಿರುವ ಬಗ್ಗೆ, ಯಾರ್ಯಾರು ಏನು ಮಾಡಿದರು ಎಂಬ ಬಗ್ಗೆ ಹೇಳಿಕೊಂಡಿದ್ದಾನೆ ಎನ್ನಲಾಗಿದೆ. ಇದನ್ನು ಪೊಲೀಸರಿಗೆ ಸ್ಥಳೀಯರು ತಿಳಿಸಿದ ಹಿನ್ನೆಲೆಯಲ್ಲಿ ಈತ ಸಿಕ್ಕಿಬಿದಿದ್ದಾನೆ.

ಕೆಲವು ವರ್ಷಗಳಿಂದ ವೆಲ್ಡರ್‌ ಆಗಿ ಕೆಲಸ ನಿರ್ವಹಿಸುತ್ತಿದ್ದ ಈತ ಕಳ್ಳರ ಜತೆಗೆ ಸೇರಿಕೊಂಡಿದ್ದಾನೆ ಎಂಬುದು ಪೊಲೀಸ್ ತನಿಖೆಯಲ್ಲೂ ಬಹಿರಂಗಗೊಂಡಿತ್ತು. ಈ ತಂಡವೂ ಕಳ್ಳತನಗೈದ ನಗದು ಮತ್ತು ಚಿನ್ನಾಭರಣಗಳನ್ನು ಕೇರಳದ ಪೊಸಡಿ ಗುಂಪೆ ಗುಡ್ಡದ ತಪ್ಪಲಿನ ಸಜಂಕಿಲ ಸಮೀಪ ನಿರ್ಜನ ಪ್ರದೇಶದಲ್ಲಿರುವ ಆಟದ ಮೈದಾನವೊಂದರಲ್ಲಿ ಹೂತಿಟ್ಟಿದ್ದರೆನ್ನಲಾಗಿತ್ತು.

ಇದೀಗ ಸಜಂಕಿಲ ಎಂಬಲ್ಲಿ ಹೂತಿಟ್ಟಿದ್ದ ಏಳು ಕೆ.ಜಿ ಚಿನ್ನಾಭರಣ ಪತ್ತೆಯಾಗಿದೆ. ಖಚಿತ ಮಾಹಿತಿ ಮೇರೆಗೆ ಕೇರಳಕ್ಕೆ ಆಗಮಿಸಿದ ಕರ್ನಾಟಕ ಪೊಲೀಸರು ಮೈದಾನದಲ್ಲಿ ಕಳೆದೆರಡು ದಿನದಿಂದ ಶೋಧ ಕಾರ್ಯ ನಡೆಸುತ್ತಿದ್ದು, ಕೊನೆಗೂ ಕಳ್ಳರು ಮೈದಾನದಲ್ಲಿ ಹೂತಿಟ್ಟ ಚಿನ್ನ ಪತ್ತೆಯಾಗಿದೆ. ಕಳೆದ ತಿಂಗಳು 7ರಂದು ನಡೆದಿದ್ದ ಬ್ಯಾಂಕ್ ದರೋಡೆ ಪ್ರಕರಣದಲ್ಲಿ ವಿಶೇಷ ಪೊಲೀಸ್ ತಂಡವು ಕಾಸರಗೋಡಿನ ನಾಲ್ವರನ್ನು ಬಾಯಾರಿನ ಒಬ್ಬ ಸೇರಿದಂತೆ ನಾಲ್ವರನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಂಡಿತ್ತು. ಬ್ಯಾಂಕ್ ದರೋಡೆ ಮಾಡಿದ್ದ ಕಳ್ಳರು 16 ಲಕ್ಷ ಮೌಲ್ಯದ ನಗದು ಹಾಗೂ 2.5 ಕೋಟಿ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ್ದರು ಎಂದು ಅಂದಾಜಿಸಲಾಗಿತ್ತು.

Categories
ಮಲ್ನಾಡ್

ಶೃಂಗೇರಿ ಅಪ್ರಾಪ್ತ ಬಾಲಕಿ ರೇಪ್ ಕೇಸ್ ಅಂತ್ಯ!

ಶೃಂಗೇರಿ ಅಪ್ರಾಪ್ತ ಬಾಲಕಿ ರೇಪ್ ಕೇಸ್ ಅಂತ್ಯ!
– 53 ಮಂದಿ ಆರೋಪಿಗಳ ಪೈಕಿ 49 ಮಂದಿ ನಿರ್ದೋಷಿ
– ನಾಲ್ವರಿಗೆ ಜೈಲೇ ಗತಿ: ಮಾ.11ಕ್ಕೆ ಶಿಕ್ಷೆ ಪ್ರಕಟ!
– ಚಿಕ್ಕಮ್ಮ ಹೆಸರಲ್ಲಿ ತಾಯಿಯೇ ಅತ್ಯಾಚಾರಕ್ಕೆ ಕಿಂಗ್ ಪಿನ್!

NAMMUR EXPRESS NEWS
ಶೃಂಗೇರಿ: ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಗ್ರಾಮವೊಂದರಲ್ಲಿ ಕಳೆದ 3 ವರ್ಷದ ಹಿಂದೆ ನಡೆದ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ ಇದೀಗ ಅಂತ್ಯವಾಗಿದೆ. ಇಡೀ ರಾಜ್ಯದಲ್ಲೇ ಅತೀ ಹೆಚ್ಚು ಮಂದಿ ಆರೋಪಿಗಳು ಜೈಲಿಗೆ ಹೋದ ಘಟನೆ ಗಮನ ಸೆಳೆದಿತ್ತು.
ಅತ್ಯಾಚಾರ ಪ್ರಕರಣದ ಆರೋಪದಡಿ 53 ಜನರನ್ನು ಬಂಧಿಸಿದ್ದರು. ಇದೀಗ 49 ಜನ ಆರೋಪಿಗಳು ನಿರ್ದೋಷಿಗಳು ಎಂದು ತೀರ್ಮಾನಿಸಿ ಖುಲಾಸೆಗೊಳಿಸಿದ್ದು, ಇನ್ನುಳಿದ ನಾಲ್ವರು ಆರೋಪಿಗಳೆಂದು ಸಾಭೀತಾಗಿದೆ.

ಸಂತ್ರಸ್ತ ಬಾಲಕಿ ತಾಯಿಯೇ ಕಿಂಗ್ ಪಿನ್!

ಸಂತ್ರಸ್ತ ಬಾಲಕಿಯ ತಾಯಿ ಗೀತಾ ಸೇರಿದಂತೆ ಅಭಿ, ಗಿರೀಶ್, ಶರಣ್ ಅಪರಾಧಿಗಳೆಂದು ಸಾಭೀತಾಗಿದ್ದು, ಮಾರ್ಚ್ 11 ರಂದು ನ್ಯಾಯಾಲಯ ಶಿಕ್ಷೆ ಪ್ರಕಟಿಸಲಿದೆ. ಇನ್ನುಳಿದ 49 ಜನರಿಗೆ ನಿರ್ದೋಷಿಗಳು ಎಂದು ತೀರ್ಮಾನಿಸಿ ಖುಲಾಸೆಗೊಳಿಸಿದೆ.

ಎಸ್. ಎಸ್. ಎಲ್. ಸಿ ವಿದ್ಯಾರ್ಥಿನಿ ಮೇಲೆ ರೇಪ್!

ಶೃಂಗೇರಿಯಲ್ಲಿ ವಾಸವಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಜನವರಿ 30.2021ರಂದು ಎಫ್.ಐ.ಆರ್ ದಾಖಲಾಗಿತ್ತು. 15 ವರ್ಷದ ಬಾಲಕಿ ಮೇಲೆ ಸ್ಮಾಲ್ ಅಭಿ ಮತ್ತು ಆತನ ಸ್ನೇಹಿತರು ಸೇರಿದಂತೆ ಹಲವು ಮಂದಿ ನಿರಂತರ ಅತ್ಯಾಚಾರ ನಡೆಸಿ ಲೈಂಗಿಕ ದೌರ್ಜನ್ಯವೆಸಗಿದ್ದರು. ಈ ಹಿನ್ನಲೆ ಹೆಚ್ಚುವರಿ ಎಸ್ಪಿ ಎಸ್. ಶ್ರುತಿ ನೇತೃತ್ವದ ತಂಡ ಪ್ರಕರಣದ ತನಿಖೆ ನಡೆಸಿ 53 ಜನರನ್ನು ಬಂಧಿಸಿದ್ದರು.

ಚಿಕ್ಕಮ್ಮ ಎಂದಿದ್ದ ತಾಯಿಗೂ ಜೈಲು!

ತಾಯಿಯಿಂದಲೇ ಅತ್ಯಾಚಾರಕ್ಕೆ ಕುಮ್ಮಕ್ಕು ಸಿಕ್ಕಿದೆ. ಬಂಧನವಾದಾಗ ಆರೋಪಿ ಬಾಲಕಿಯ ಚಿಕ್ಕಮ್ಮ ಎಂದು ಹೇಳಿ ಕೊಂಡಿದ್ದಳು. ಆದರೆ, ಪೊಲೀಸರ ತನಿಖೆಯಲ್ಲಿ ಚಿಕ್ಕಮ್ಮ ಅಲ್ಲ ತಾಯಿ ಅನ್ನೋದು ಬೆಳಕಿಗೆ ಬಂದಿತ್ತು. ಈ ಪ್ರಕರಣದ ಬಗ್ಗೆ ರಾಜ್ಯಾದ್ಯಂತ ಭಾರೀ ಚರ್ಚೆ ನಡೆದಿತ್ತು. ಇದೀಗ ಪೋಕ್ಸೋ ಕೇಸ್ ನಲ್ಲಿದ್ದ 49 ಜನ ಆರೋಪಿಗಳಿಗೆ ನಿರ್ದೋಷಿಗಳು ಎಂದು ತೀರ್ಮಾನಿಸಿ ಖುಲಾಸೆಗೊಳಿಸಿದ್ದು, ಇನ್ನುಳಿದ ಸಂತ್ರಸ್ತ ಬಾಲಕಿಯ ತಾಯಿ ಸೇರಿದಂತೆ ನಾಲ್ವರ ಮೇಲೆ ಆರೋಪ ಸಾಭೀತಾಗಿದೆ.

Categories
ಅಡಿಕೆ-ದರ

ಅಡಿಕೆ ದರ 07-03-2024

ಅಡಿಕೆ ದರ
07-03-2024
ಸರಕು 48800 81040
ಬೆಟ್ಟೆ 43700 54259
ರಾಶಿ 23009 48500
ಗೊರಬಲು 16539 34259
Nammur Express

Categories
ತೀರ್ಥಹಳ್ಳಿ ಮಲ್ನಾಡ್

ತೀರ್ಥಹಳ್ಳಿ ಸೇರಿ ಮಲೆನಾಡಲ್ಲಿ ಶಿವರಾತ್ರಿ ರಂಗು!

ತೀರ್ಥಹಳ್ಳಿ ಸೇರಿ ಮಲೆನಾಡಲ್ಲಿ ಶಿವರಾತ್ರಿ ರಂಗು!
– ಎಲ್ಲೆಲ್ಲೂ ರಂಗೇರಿದ ಸಡಗರ ಸಂಭ್ರಮ
– ಅಖಂಡ ಭಜನಾ ಕಾರ್ಯಕ್ರಮ: ಸಾಂಸ್ಕೃತಿಕ ಕಾರ್ಯಕ್ರಮ
– ರಿಪ್ಪನ್ ಪೇಟೆಯ ಗುಳಿಗುಳಿ ಶಂಕರೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ

NAMMUR EXPRESS NEWS
ತೀರ್ಥಹಳ್ಳಿ/ರಿಪ್ಪನ್ ಪೇಟೆ : ನಾಡಿನೆಲ್ಲೆಡೆ ಮಹಾ ಶಿವರಾತ್ರಿಯನ್ನು ಸಡಗರ, ಸಂಭ್ರಮದಿಂದ ಆಚರಿಸಲು ಸಿದ್ಧತೆ ನಡೆದಿದೆ. ವಿಶೇಷವಾಗಿ ಶಿವ ದೇವಾಲಯಗಳನ್ನು ಬಣ್ಣದ ದೀಪಗಳಿಂದ, ತಳಿರು ತೋರಣಗಳಿಂದ ಅಲಂಕರಿಸಲಾಗಿದೆ. ತೀರ್ಥಹಳ್ಳಿ ಪ್ರಸಿದ್ಧ ರಾಮೇಶ್ವರ ದೇವಸ್ಥಾನದಲ್ಲಿ ಮುಂಜಾನೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಪ್ರಾರಂಭವಾಗಲಿದೆ ಪಂಚಾಮೃತ ಅಭಿಷೇಕ, ಶತ ರುದ್ರಾಭಿಷೇಕ ಸಹಸ್ರ ನಾರಿಕೇಳ ಅಭಿಷೇಕ, ಹೋಮ, ಹಾಗೂ ನಾಳೆ ಸಂಜೆಯಿಂದ ಅಖಂಡ ಭಜನಾ ಕಾರ್ಯಕ್ರಮ ಇರಲಿದೆ.

ಇನ್ನು ಬಾಳೆಬೈಲಿನ ಸಿದ್ದೇಶ್ವರ ಗುಡ್ಡದ ಮೇಲೆ ನೆಲೆ ನಿಂತಿರುವ ಸಿದ್ದೇಶ್ವರ ಸ್ವಾಮಿಗೆ ಬೆಳಗ್ಗೆ ಪಂಚಾಮೃತ ಅಭಿಷೇಕ, ರುದ್ರಭಿಷೇಕ, ವಿಶೇಷ ಅಲಂಕಾರ, ಮಹಾಮಂಗಳಾರತಿ ನಡೆಯಲಿದೆ ಎಂದು ಸಮಿತಿ ಯವರು ತಿಳಿಸಿದ್ದಾರೆ. ಕುರುವಳ್ಳಿಯ ಪುತ್ತಿಗೆ ಮಠದ ಪಕ್ಕದಲ್ಲಿ ಇರುವ ಗೌರಿ ಶಂಕರ ದೇವಸ್ಥಾನದಲ್ಲಿ 108 ನಾರಿಕೇಳ ಅಭಿಷೇಕ, ಕ್ಷೀರಾಭಿಷೇಕ, ಪಂಚಾಮೃತ ಅಭಿಷೇಕ, ಸಹಸ್ರ ಬಿಲ್ವ ಅರ್ಚನೆ, ಮಾಘ ತೀರ್ಥ ಸ್ನಾನ, ಶ್ರೀ ರುದ್ರ ಪಾರಾಯಣ, ಅಖಂಡ ಶಿವಪಂಚಾಕ್ಷರಿ ಜಪ, ಸಾಮೂಹಿಕ ಭಜನೆ, ಮಕ್ಕಳಿಂದ ನೃತ್ಯ ಸೇರಿ ವಿಶೇಷ ಕಾರ್ಯಕ್ರಮ ನಡೆಯಲಿದೆ.

ಕಿತ್ತನಗದ್ದೆ ಸಾಂಬಾಸದಾಶಿವ ಮತ್ತು ಮಹಿಷಿಮರ್ದಿನಿ ದೇವಸ್ಥಾನದಲ್ಲಿ ರುದ್ರಾಭಿಷೇಕ, ಏಕದಶ ರುದ್ರಾಭಿಷೇಕ, ಜಾಗರಣೆ ಅಂಗವಾಗಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ ತೀರ್ಥಹಳ್ಳಿ ತಾಲೂಕು ಮಂಜುನಾಥೇಶ್ವರ ಭಜನಾ ಪರಿಷತ್‌ ಸಹಕಾರದೊಂದಿಗೆ ಅಖಂಡ ಭಜನೆ, ಚಂಡಿಕಾಯಾಗ ಸೇರಿ ವಿವಿಧ ಕಾರ್ಯಕ್ರಮ ನಡೆಯಲಿದೆ.

ಗುಳಿಗುಳಿ ಶಂಕರೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ

ರಿಪ್ಪನ್‌ಪೇಟೆ : ಬೆಳ್ಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಗುಳಿಗುಳಿ ಶಂಕರದ ಶಂಕರೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಅಂಗವಾಗಿ ವಿಶೇಷ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ. ಮಾರ್ಚ್ 8ರಂದು ದೇವರ ಸನ್ನಿಧಿಯಲ್ಲಿ ಶಿವಮೊಗ್ಗದ ಹಂದಲಸೆ ರಾಘವೇಂದ್ರ ಭಟ್ಟರ ಪೌರೋಹಿತ್ಯದಲ್ಲಿ ನಿತ್ಯ ಪೂಜೆ ಸಹಿತ, ರುದ್ರಾಭಿಷೇಕ, ಕುಂಭಾಭಿಷೇಕ, ಮಹಾ ಹೋಮ ಪೂರ್ಣಾಹುತಿ ಹಾಗೂ ತೀರ್ಥ ಪ್ರಸಾದ ವಿನಿಯೋಗ ಲಘು ಫಲಹಾರವನ್ನು ಏರ್ಪಡಿಸಲಾಗಿದೆ.

ಅದೇ ದಿನ ಸಂಜೆ ಶಾಂತಪುರದ ಕೃಷ್ಣಮೂರ್ತಿ ಭಟ್ ಇವರ ನೇತೃತ್ವದಲ್ಲಿ ಸಾಮೂಹಿಕ ರುದ್ರ ಹೋಮ ಏರ್ಪಡಿಸಲಾಗಿದೆ. ನಂತರ ಬೆಂಗಳೂರಿನ ಕೆ.ಆ‌ರ್.ಪುರಂನ ವಾಗ್ಗೇವಿ ನೃತ್ಯಲಯದ ದೀಪ್ತಿ ತಂಡದ ಭರತನಾಟ್ಯ ಹಾಗೂ ರಾತ್ರಿ ಹತ್ತಕ್ಕೆ ಉತ್ತರ ಕನ್ನಡ ಜಿಲ್ಲೆಯ ಹಿತ್ತಲಗದ್ದೆ ಕಿಲಾರ ಮಹಾ ಗಣಪತಿ ಯಕ್ಷಗಾನ ಮಂಡಳಿ ಇವರಿಂದ ದಕ್ಷ ಯಜ್ಞ ಕೃಷ್ಣ ಲೀಲೆ ಸುಂದರ ಪೌರಾಣಿಕ ಯಕ್ಷಗಾನ ಏರ್ಪಡಿಸಲಾಗಿದೆ. ಮಾರ್ಚ್ 9ರ ಬೆಳಿಗ್ಗೆ ಶ್ರೀ ದೇವರ ಸನ್ನಿಧಿಯಲ್ಲಿ ನಾಗಭೂಷಣ್ ಭಟ್ ಹಾಗೂ ಶ್ರೀಕಾಂತ್ ಭಟ್ ನೇತೃತ್ವದಲ್ಲಿ ಸಾಮೂಹಿಕ ಸತ್ಯನಾರಾಯಣ ವ್ರತ, ತೀರ್ಥ ಪ್ರಸಾದ ವಿನಿಯೋಗ ಹಾಗೂ ಸಾಮೂಹಿಕ ಅನ್ನಸಂತರ್ಪಣೆ ಜರುಗಲಿದೆ ಎಂದು ತಿಳಿಸಲಾಗಿದೆ.

Categories
ತೀರ್ಥಹಳ್ಳಿ

ಹುಣಸವಳ್ಳಿಯಲ್ಲಿ ನಾಳೆಯಿಂದ ಕ್ರಿಕೆಟ್ ಟೂರ್ನಿ!

ಹುಣಸವಳ್ಳಿಯಲ್ಲಿ ನಾಳೆಯಿಂದ ಕ್ರಿಕೆಟ್ ಟೂರ್ನಿ!
– ಜಲವಿನಾಯಕ ಟ್ರೋಫಿ 2024: ಸರ್ವರಿಗೂ ಸ್ವಾಗತ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕು ಹುಣಸವಳ್ಳಿಯಲ್ಲಿ ಮಾ.8ರಿಂದ 10ರವರೆಗೆ ಕ್ರಿಕೆಟ್ ಟೂರ್ನಿ ನಡೆಯಲಿದೆ. ಜಲವಿನಾಯಕ ಟ್ರೋಫಿ 2024ಕ್ಕೆ ಸರ್ವರನ್ನು ಸ್ವಾಗತ ಮಾಡಲಾಗಿದೆ. ಹುಣಸವಳ್ಳಿ ( ಬಿಳಿಗೆರೆ ) ಕ್ರೀಡಾಂಗಣದಲ್ಲಿ ಪಂದ್ಯಾಟ ನಡೆಯಲಿದೆ. ಟೆನಿಸ್ ಬಾಲ್ ಲೀಗ್ ಮಾದರಿಯ ಪಂದ್ಯಾವಳಿ ಮುತ್ತೂರು ಹೋಬಳಿಯ ಆಟಗಾರರಿಗೆ ಮಾತ್ರ ಅವಕಾಶ ಇದೆ.