Categories
ಉಡುಪಿ

ಬಿಸಿಲಿನ ಹೊಡೆತದ ನಡುವೆ ಕರಾವಳಿಯಲ್ಲಿ ಡೆಂಗಿ ಪ್ರಕರಣ ಹೆಚ್ಚಳ!

ಬಿಸಿಲಿನ ಹೊಡೆತದ ನಡುವೆ ಕರಾವಳಿಯಲ್ಲಿ ಡೆಂಗಿ ಪ್ರಕರಣ ಹೆಚ್ಚಳ!
– ಉಡುಪಿ ಜಿಲ್ಲೆಯಲ್ಲಿ ಹೆಚ್ಚಾದ ಬಿಸಿಲಿಗೆ ಜನ ಜೀವನ ಅಸ್ತವ್ಯಸ್ತ
– ಡೇಂಗಿ, ಬಿಸಿಲು: ಮುಂಜಾಗ್ರತೆ ವಹಿಸೋದು ಹೇಗೆ?

NAMMUR EXPRESS NEWS
ಉಡುಪಿ: ಅತಿಯಾದ ಉಷ್ಣತೆ ಮತ್ತು ಬಿಸಿಗಾಳಿಗೆ ಸಾರ್ವಜನಿಕರು ಕಂಗೆಟ್ಟಿದ್ದು ಮನೆಯಿಂದ ಹೊರಗೆ ಬರಲು ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಳಿಗ್ಗೆ 10 ಗಂಟೆಯ ಹೊತ್ತಿಗೆಲ್ಲ ಬಿಸಿಲು ನೆತ್ತಿ ಸುಡುತ್ತಿದೆ. ಅತಿಯಾದ ನಿರ್ಜಲೀಕರಣ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯೂ ಹೆಚ್ಚುತ್ತಿದೆ. ಬಿಸಿಲಿನ ಧಗೆಯಿಂದ ರಕ್ಷಣೆ ಪಡೆದುಕೊಳ್ಳಲು ಹಾಗೂ ಆರೋಗ್ಯ ಕಾಪಾಡಿಕೊಳ್ಳಲು ಸಾರ್ವಜನಿಕರಿಗೆ ಜಿಲ್ಲಾಡಳಿತ ಸಲಹೆ ಸೂಚನೆಗಳನ್ನು ನೀಡಿದೆ. ಆಗಾಗ ನೀರು ಕುಡಿಯುತ್ತಿರಬೇಕು, ಪುನರ್ಜಲೀಕರಣ ದ್ರಾವಣ ಬಳಸಬೇಕು, ಎಳನೀರು ಅಥವಾ ಮನೆಯಲ್ಲಿ ಸಿದ್ಧಪಡಿಸಿದ ನಿಂಬೆ ಶರಬತ್ತು, ಹಣ್ಣಿನ ರಸ, ಮಜ್ಜಿಗೆ ಲಸ್ಸಿ ಸೇವಿಸುವ ಮೂಲಕ ದೇಹ ನಿರ್ಜಲೀಕರಣಗೊಳ್ಳದಂತೆ ರಕ್ಷಣೆ ಮಾಡಿಕೊಳ್ಳಬಹುದು.

ಹೆಚ್ಚು ನೀರಿನ ಅಂಶ ಹೊಂದಿರುವ ಕಲ್ಲಂಗಡಿ, ಕರ್ಬೂಜದಂಥ ಹಣ್ಣು ಸೇವನೆ ಸೂಕ್ತ ಎಂದು ತಿಳಿಸಿದೆ. ಬಿಸಿಲಿನಿಂದ ರಕ್ಷಣೆ ಪಡೆಯಲು ತಿಳಿಬಣ್ಣದ ಸಡಿಲವಾದ ಹತ್ತಿ ಬಟ್ಟೆ ಧರಿಸಬೇಕು, ಗಾಳಿಯಾಡುವ ಪಾದರಕ್ಷೆ ಧರಿಸುವುದು ಉತ್ತಮ. ಬಿಸಿಲಿನಲ್ಲಿ ಹೊರಹೋಗುವಾಗ ಛತ್ರಿ, ಟೋಪಿ, ಟವೆಲ್, ತಂಪು ಕನ್ನಡಕ ಬಳಸುವುದು ಉಪಯುಕ್ತ. ಬೆಳಿಗ್ಗೆ 11 ಗಂಟೆಯ ಒಳಗೆ ಹಾಗೂ ಸಂಜೆ 4 ಗಂಟೆಯ ನಂತರ ಹೊರಾಂಗಣ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಸೂಕ್ತ. ಮಧ್ಯಾಹ್ನ ಬಿಸಿಲಿನಲ್ಲಿ ಓಡಾಡುವುದನ್ನು ತಪ್ಪಿಸಬೇಕು. ಸಾಧ್ಯವಾದಷ್ಟು ಗಾಳಿ ಬೀಸುವ, ತಣ್ಣಗಿರುವ ಹಾಗೂ ನೆರಳಿನ ಪ್ರದೇಶದಲ್ಲಿ ಇರಬೇಕು ಎಂದು ಸಲಹೆ ನೀಡಿದೆ. ನವಜಾತ ಶಿಶುಗಳು ಮತ್ತು ಮಕ್ಕಳು, ಗರ್ಭಿಣಿಯರು, ಹಿರಿಯ ನಾಗರಿಕರು, ಹೃದ್ರೋಗ ಹಾಗೂ ರಕ್ತದೊತ್ತಡದಂತಹ ಆರೋಗ್ಯ ಸಮಸ್ಯೆ ಇರುವವರು ಮತ್ತು ಹೊರಗೆ ಕೆಲಸ ಮಾಡುವವರಿಗೆ ಅತಿಯಾದ ಉಷ್ಣತೆ ಹೆಚ್ಚು ಅಪಾಯಕಾರಿಯಾಗಿರುವ ಹಿನ್ನೆಲೆಯಲ್ಲಿ ಸುರಕ್ಷತೆಗೆ ಹೆಚ್ಚಿನ ಗಮನ ಹರಿಸಬೇಕು.

ಚಿಕ್ಕಮಕ್ಕಳನ್ನು ಪ್ರವಾಸಕ್ಕೆ ಕರೆದೊಯ್ಯುವುದು ಸೂಕ್ತವಲ್ಲ. ಸಾಕುಪ್ರಾಣಿಗಳನ್ನು ಬಿಸಿಲಿನಲ್ಲಿ ನಿಲ್ಲಿಸಿದ ವಾಹನಗಳ ಒಳಗೆ ಬಿಡಬಾರದು. ಮದ್ಯ, ಕಾಫಿ, ಟೀ, ಕಾರ್ಬೋನೇಟೆಡ್ ಪಾನೀಯಗಳಿಂದ ಸಾಧ್ಯವಾದಷ್ಟು ದೂರವಿರಬೇಕು ಎಂದು ತಿಳಿಸಿದೆ. ಬಾಯಿ ಒಣಗುವುದು, ವಿಪರೀತ ಸುಸ್ತು, ತಲೆಸುತ್ತು, ಪ್ರಜ್ಞೆ ತಪ್ಪುವುದು, ಏರುಗತಿಯ ಉಸಿರಾಟ ಮತ್ತು ಹೃದಯ ಬಡಿತ ಹೆಚ್ಚುವಿಕೆ, ವಾಕರಿಕೆ ಅಥವಾ ವಾಂತಿಯಾಗುವ ಲಕ್ಷಣಗಳಿದ್ದಲ್ಲಿ ಚಿಕಿತ್ಸೆ ಪಡೆದುಕೊಳ್ಳಬೇಕು. ತುರ್ತು ಸಂದರ್ಭ ಇದ್ದರೆ 108ಕ್ಕೆ ಕರೆ ಮಾಡಿ ಸೇವೆ ಪಡೆದುಕೊಳ್ಳಬಹುದು. ಅಗತ್ಯ ಮಾಹಿತಿಗಳಿಗೆ 102 ಸಹಾಯವಾಣಿಯನ್ನು ಸಂಪರ್ಕಿಸಬಹುದು ಎಂದು ಜಿಲ್ಲಾಡಳಿತ ತಿಳಿಸಿದೆ.

ಹೈರಾಣಾಗಿಸಿದ ಡೆಂಗಿ!

ಬಿಸಿಲಿನ ಬೇಗೆ ಒಂದೆಡೆಯಾದರೆ ಡೆಂಗಿ ಕಿರಿಕಿರಿ ಕೂಡ ಜನರನ್ನು ಹೈರಾಣಾಗಿದೆ. ಜಿಲ್ಲೆಯಲ್ಲಿ ಡೆಂಗಿ ಜ್ವರ ವ್ಯಾಪಕವಾಗಿ ಹರಡುತ್ತಿದ್ದು ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ಆರೋಗ್ಯ ಇಲಾಖೆ ಮುನ್ಸೂಚನೆ ನೀಡಿದೆ. ಜ್ವರ ಕಾಣಿಸಿಕೊಂಡಲ್ಲಿ ಕೂಡಲೇ ಹತ್ತಿರದ ಆರೋಗ್ಯ ಕೇಂದ್ರಕ್ಕೆ ಭೇಟಿನೀಡಬೇಕು. ಡೆಂಗಿಯಿಂದ ದೂರವಿರಲು ಮನೆಯ ಒಳಾಂಗಣ ಮತ್ತು ಹೊರಾಂಗಣವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ನೀರು ಶೇಖರಿಸಿಡುವ ತೊಟ್ಟಿ, ಡ್ರಂ, ಬ್ಯಾರಲ್‌ಗಳನ್ನು ವಾರಕ್ಕೊಮ್ಮೆ ಖಾಲಿ ಮಾಡಿ, ಒಣಗಿಸಿ ಮತ್ತೆ ಭರ್ತಿ ಮಾಡಿ ಮುಚ್ಚಿಡಬೇಕು. ಟೈರ್‌, ಟ್ಯೂಬ್, ತೆಂಗು ಮತ್ತು ಎಳನೀರಿನ ಚಿಪ್ಪು, ಅನುಪಯುಕ್ತ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ವಿಲೇವಾರಿ ಮಾಡಬೇಕು ಎಂದು ತಿಳಿಸಲಾಗಿದೆ.

ಫ್ರಿಜ್, ಕೂಲರ್, ಹೂವಿನ ಕುಂಡಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಸ್ವಯಂ ರಕ್ಷಣಾ ವಿಧಾನ ಅನುಸರಿಸುವ ಮೂಲಕ ಸಾರ್ವಜನಿಕರು ಡೆಂಗಿ ಬಾರದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ವಿದ್ಯಾಕುಮಾರಿ ತಿಳಿಸಿದ್ದಾರೆ. ಧಗೆಯಿಂದ ರಕ್ಷಣೆ, ಆರೋಗ್ಯ ಕಾಪಾಡಿಕೊಳ್ಳಲು ಜಿಲ್ಲಾಡಳಿತ ಸಲಹೆ ತುರ್ತು ಸಂದರ್ಭ ಇದ್ದರೆ 108ಕ್ಕೆ ಕರೆ ಮಾಡಲು ಸಲಹೆ ಅಗತ್ಯ ಮಾಹಿತಿಗೆ 102 ಸಹಾಯವಾಣಿ ಸಂಪರ್ಕಿಸಲು ಸೂಚನೆ

Categories
ಮಲ್ನಾಡ್

ಟಾಪ್ ನ್ಯೂಸ್ ಮಲ್ನಾಡ್

ಟಾಪ್ ನ್ಯೂಸ್ ಮಲ್ನಾಡ್
ಹೊಸನಗರದಲ್ಲಿ ಕಾಡಾನೆ ದಾಳಿಗೆ ರೈತ ಬಲಿ!
– ಮನೆ ಪಕ್ಕವೇ ಬಂದು ತುಳಿದು ಸಾಯಿಸಿದ ಕಾಡಾನೆ
ತೀರ್ಥಹಳ್ಳಿ: ಅಪಘಾತಕ್ಕೆ ಇಬ್ಬರು ಸಾವು
– ಇಕೋ ಇನ್ನೋವಾ ಡಿಕ್ಕಿ: ಆಸ್ಪತ್ರೆಗೆ ಸಾಗಿಸುವಾಗ ಇನ್ನೊಬ್ಬ ಸಾವು
ಸೊರಬ: ಪೋಸ್ಟ್ ಆಫೀಸ್ ಕಳ್ಳತನಕ್ಕೆ ಯತ್ನ!
– ಸಿಸಿಟಿವಿ ಒಡೆದು ಕಳ್ಳತನಕ್ಕೆ ಪ್ಲಾನ್: ಒಂದೇ ವರ್ಷದಲ್ಲಿ ಮೂರು ಬಾರಿ ಕಳ್ಳತನಕ್ಕೆ ಯತ್ನ!

NAMMUR EXPRESS NEWS
ಹೊಸನಗರ: ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಅರಸಾಳು ಗ್ರಾಪಂ ವ್ಯಾಪ್ತಿಯ ಬಸವಾಪುರ ಗ್ರಾಮದಲ್ಲಿ ಕಾಡಾನೆ ದಾಳಿಗೆ ವ್ಯಕ್ತಿಯೊಬ್ಬರು ಬಲಿಯಾದ ಘಟನೆ ನಡೆದಿದೆ. ಬಸವಾಪುರ ಗ್ರಾಮದ ತಿಮ್ಮಪ್ಪ (58) ಮೃತ ವ್ಯಕ್ತಿಯಾಗಿದ್ದಾರೆ. ಶುಕ್ರವಾರ ಬೆಳಗ್ಗೆ ತಮ್ಮ ಮನೆ ಸಮೀಪದ ಕಾಡಿಗೆ ದರಗು ತರಲು ಹೋದ ವೇಳೆ ಈ ಘಟನೆ ನಡೆದಿದೆ. ಪತ್ನಿ ಮತ್ತು ಮಕ್ಕಳು ಈ ಸಂಧರ್ಭದಲ್ಲಿ ಆನೆ ದಾಳಿಯಿಂದ ಪಾರಾಗಿದ್ದಾರೆ ಎನ್ನಲಾಗಿದೆ. ಇಲ್ಲೇ ಕಳೆದ ಎರಡು ತಿಂಗಳ ಹಿಂದೆ ಆನೆಗಳು ಕಬ್ಬು ಫಸಲು ಹಾಳು ಮಾಡಿದ್ದವು. ಒಂದು ಆನೆ ಇತ್ತು ಎನ್ನಲಾಗಿದೆ. ರಿಪ್ಪನ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಇನ್ನೋವಾ-ಇಕೋ ಕಾರು ನಡುವೆ ಅಪಘಾತಕ್ಕೆ ಮತ್ತೊಂದು ಸಾವು!

ಇನ್ನೋವಾ ಮತ್ತು ಇಕೋ ಕಾರುಗಳ ನಡುವೆ ಡಿಕ್ಕಿ ಹೊಡೆದು ಓರ್ವ ಮಹಿಳೆ ಸ್ಥಳದಲ್ಲೇ ಸಾವನ್ನು ಕಂಡಿದ್ದು, ಇಬ್ಬರು ಗಂಭೀರ ಗಾಯಗೊಂಡ ಘಟನೆ ಬುಧವಾರ ತೀರ್ಥಹಳ್ಳಿ ತಾಲೂಕು ಕುಡುಮಲ್ಲಿಗೆಯಲ್ಲಿ ನಡೆದಿದ್ದು ಇನ್ನೋರ್ವ ಕೂಡ ಆಸ್ಪತ್ರೆ ಸಾಗಿಸುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ. ಮೃತರು ಅಕ್ಕಿ ಆಲೂರು ರಾಣಿಬೆನ್ನೂರು ಮೂಲದ ಸಂಶದ್ ಭಾನು (50) ಮತ್ತು ಅವರ ಪುತ್ರ. ಮೂವರು ಗಾಯಗೊಂಡಿದ್ದು ಮಣಿಪಾಲ ಆಸ್ಪತ್ರೆಗೆ ಸಾಗಿಸಲಾಗಿದೆ. ಕುಡುಮಲ್ಲಿಗೆ ಮಿಲ್ ಬಳಿ ಘಟನೆ ನಡೆದಿದ್ದು, ಘಟನೆಯಲ್ಲಿ ಕಾರು 3 ಪಲ್ಟಿಯಾಗಿ ಸಾವನ್ನು ಕಂಡಿದ್ದಾರೆ ಎಂದು ಹೇಳಲಾಗಿದೆ. ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೊರಬ: ಪೋಸ್ಟ್ ಆಫೀಸ್ ಕಳ್ಳತನಕ್ಕೆ ಯತ್ನ!

ಸೊರಬ: ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ತವರೂರಾದ ಸೊರಬ ಪಟ್ಟಣದ ಬಸ್ ಸ್ಟ್ಯಾಂಡ್ ಬಳಿಯಿರುವ ಪೋಸ್ಟ್ ಆಫೀಸ್ ನಲ್ಲಿ ಬುಧವಾರ ಬೆಳಗ್ಗಿನ ಜಾವದಲ್ಲಿ ಕಳ್ಳತನಕ್ಕೆ ಯತ್ನಿಸಲು ಬಂದಿದ್ದ ಕಳ್ಳರು ಅಲ್ಲಿರುವ ಸಿಸಿ ಕ್ಯಾಮೆರಾ ಧ್ವಂಸ ಗೊಳಿಸಿ ಹಾಗು ಮುಂಭಾಗದ ಗೇಟ್ ಗೆ ಹಾಕಲಾಗಿದ್ದ ಬೀಗ ಮುರಿದು ಕಳ್ಳತನ ನಡೆಸಲು ಯತ್ನಿಸಿ ವಿಫಲರಾಗಿದ್ದಾರೆ ಎಂದು ತಿಳಿದು ಬಂದಿದೆ. ಸ್ಥಳೀಯರು ಹೇಳುವ ಪ್ರಕಾರ ಈ ಒಂದೇ ವರ್ಷದಲ್ಲಿ ಇದು ಮೂರು ಬಾರಿ ಈ ರೀತಿಯ ಯತ್ನ ನಡೆದಿದೆ ಎಂದು ಹೇಳಲಾಗುತ್ತಿದೆ. ಸೊರಬ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣವನ್ನು ಕೈಗೆತ್ತಿಕೊಂಡು ತನಿಖೆ ನಡೆಸುತ್ತಿದ್ದಾರೆ.

Categories
ಬೆಂಗಳೂರು ರಾಜ್ಯ

ಬಿಸಿಲು ಸುಡುತ್ತೆ..ಅರೋಗ್ಯ ಕೆಡುತ್ತೆ ಹುಷಾರ್!

ಬಿಸಿಲು ಸುಡುತ್ತೆ..ಅರೋಗ್ಯ ಕೆಡುತ್ತೆ ಹುಷಾರ್!
– ಕರ್ನಾಟಕದಲ್ಲಿ ಅತೀ ಹೆಚ್ಚು ಬಿಸಿಲು ದಾಖಲೆ
– ಹೀಗೆ ಆದ್ರೆ ಬದುಕು ಬಲು ಕಷ್ಟ
– ಬೆಂಗಳೂರು, ಮಲೆನಾಡು, ಕರಾವಳಿಯಲ್ಲೂ ಬಿಸಿಲಿನ ದಾಖಲೆ

NAMMUR EXPRESS NEWS
ಬೆಂಗಳೂರು: ರಾಜ್ಯದಲ್ಲಿ ಅತಿ ಹೆಚ್ಚು ಉಷ್ಣಾಂಶ ದಾಖಲಾಗಿದ್ದು ದಿನೇ ದಿನೇ ಬಿಸಿಲಿನ ತೀವ್ರತೆ ಹೆಚ್ಚಾಗುತ್ತಿದೆ. ಹವಾಮಾನ ಇಲಾಖೆ ಸಾರ್ವಜನಿಕರು ಅಗತ್ಯ ಮುಂಜಾಗ್ರತೆ ಕ್ರಮ ವಹಿಸಬೇಕು ಎಂದು ರೆಡ್ ಅಲರ್ಟ್ ಘೋಷಣೆ ಮಾಡಿದೆ. ಮೇ 1ರ ಬುಧವಾರ ನಾಲ್ಕು ಜಿಲ್ಲೆಗಳಲ್ಲಿ ಗರಿಷ್ಠ ಉಷ್ಣಾಂಶದ ಪ್ರಮಾಣ 45 ಡಿಗ್ರಿ ಸೆಲ್ಸಿಯಸ್‌ ಅನ್ನು ದಾಟಿದೆ. ಮೊದಲ ಬಾರಿಗೆ ಈಗಾಗಲೇ ಕಲಬುರಗಿ, ರಾಯಚೂರು, ಬಾಗಲಕೋಟೆ, ವಿಜಯಪುರ, ಕೊಪ್ಪಳ ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿ ಉಷ್ಣಾಂಶದ ಪ್ರಮಾಣ ಮೂರು ತಿಂಗಳಿನಿಂದ ಏರಿಕೆಯಾಗುತ್ತಲೇ ಇದೆ. 44 ಡಿಗ್ರಿ ಸೆಲ್ಸಿಯಸ್‌ ಆಸುಪಾಸಿನಲ್ಲಿದ್ದ ಉಷ್ಣಾಂಶದ ಪ್ರಮಾಣ ಈಗ ಅದನ್ನೂ ದಾಟಿದೆ. ಮುಂದಿನ 5 ದಿನಗಳವರೆಗೆ ಶಾಖದ ಅಲೆ ಹೆಚ್ಚಳವಾಗುತ್ತಿದ್ದು, ಸಾರ್ವಜನಿಕರು ಅಗತ್ಯ ಮುಂಜಾಗ್ರತೆ ಕ್ರಮ ವಹಿಸಬೇಕು ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ರಾಜ್ಯದ ಬೆಳಗಾವಿ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ, ಕೊಪ್ಪಳ ಜಿಲ್ಲೆಗಳಲ್ಲಿ ತೀವ್ರ ಶಾಖದ ಅಲೆಯು ಚಾಲ್ತಿಯಲ್ಲಿರುವ ಸಾಧ್ಯತೆಯಿದ್ದು, ಗರಿಷ್ಠ ತಾಪಮಾನದ ಪರಿಸ್ಥಿತಿಗಳು ಮುಂದಿನ 5 ದಿನಗಳವರೆಗೆ ರಾಜ್ಯದಾದ್ಯಂತ ಮುಂದುವರಿಯುವ ಸಾಧ್ಯತೆಯಿದೆ ಎಂದು ಭಾರತ ಹವಮಾನ ಇಲಾಖೆಯು ಹೇಳಿದೆ. ಬೆಂಗಳೂರಿನಲ್ಲಿ ಏಪ್ರಿಲ್‌ ತಿಂಗಳಲ್ಲಿ ಗರಿಷ್ಠ ಉಷ್ಣಾಂಶದ ಪ್ರಮಾಣ 38.5 ಡಿಗ್ರಿ ಸೆಲ್ಸಿಯಸ್‌ ದಾಟಿತ್ತು. ಇದು ಎಂಟು ವರ್ಷ ನಂತರದ ಅತ್ಯಧಿಕ ಉಷ್ಣಾಂಶ 2016 ರಲ್ಲಿ ಉಷ್ಣಾಂಶ ಪ್ರಮಾಣ 39.2 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿತ್ತು. ಅದನ್ನೇ ಅಧಿಕ ಎಂದುಕೊಳ್ಳಲಾಗಿತ್ತು. ಈಗ ಮೇ ನಲ್ಲಿ ಇದು 40 ಡಿಗ್ರಿ ಸೆಲ್ಸಿಯಸ್‌ ಅನ್ನು ತಲುಪಿದೆ.

ಎಲ್ಲೆಲ್ಲಿ ಅತೀ ಹೆಚ್ಚು ಬಿಸಿಲು?!

ಬಾಗಲಕೋಟೆ, ಬಳ್ಳಾರಿ, ಬೆಳಗಾವಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬೀದರ್‌, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಕ್ಷಿಣ ಕನ್ನಡ, ದಾವಣಗೆರೆ, ಗದಗ, ಹಾಸನ, ಹಾವೇರಿ, ಕಲಬುರ್ಗಿ, ಕೋಲಾರ, ಮಂಡ್ಯ, ಮೈಸೂರು, ರಾಯಚೂರು, ಶಿವಮೊಗ್ಗ, ವಿಜಯಪುರ, ತುಮಕೂರು, ಉಡುಪಿ, ಉತ್ತರ ಕನ್ನಡ, ಯಾದಗಿರಿ ಜಿಲ್ಲೆಯ ಬಹುತೇಕ ಕಡೆ 40 ಡಿಗ್ರಿ ಸೆಲ್ಸಿಯಸ್‌ಗೂ ಅಧಿಕ ತಾಪಮಾನ ದಾಖಲಾಗಿದೆ.

ಮಲೆನಾಡು, ಕರಾವಳಿಯಲ್ಲೂ ಗರಿಷ್ಠ ತಾಪಮಾನ

ಹಸಿರು ನಾಡು ಮಲೆನಾಡು ಹಾಗೂ ಕಡಲ ನಾಡು ಕರಾವಳಿಯಲ್ಲೂ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ಹತ್ತಿರ ಬರುತ್ತಿರುವುದು ಈಗ ಆತಂಕಕ್ಕೆ ಕಾರಣವಾಗಿದೆ.

Categories
ಕರಾವಳಿ

ಟಾಪ್ ನ್ಯೂಸ್ ಕರಾವಳಿ

ಟಾಪ್ ನ್ಯೂಸ್ ಕರಾವಳಿ
ಕರಾವಳಿಯಲ್ಲಿ ಏನೇನಾಗಿದೆ… ಇಲ್ಲಿದೆ ನ್ಯೂಸ್!
– ಸುಳ್ಯ: ಹೋಟೆಲಿಗೆ ಡಿಕ್ಕಿ ಹೊಡೆದ ಕಾರು!
– ಬೈಂದೂರು: ಅಪಘಾತಕ್ಕೆ ಓರ್ವ ಬಲಿ
– ಅಜೆಕಾರು: ಟೆರೇಸಿನಿಂದ ಬಿದ್ದ ಮುಖ್ಯ ಶಿಕ್ಷಕ ಸಾವು
– ಬಂಟ್ವಾಳ: ರಸ್ತೆಗೆ ಅಡ್ಡ ಬಂದ ನಾಯಿ ಬೈಕ್ ಸ್ಕಿಡ್ ಆಗಿ ಸವಾರರಿಬ್ಬರಿಗೆ ಗಾಯ
– ಬಂಟ್ವಾಳ: ಕೂಲಿ ಕೇಳಿದ್ದಕ್ಕೆ ಕಾರ್ಮಿಕಗೆ ಜಾತಿನಿಂದನೆಗೈದು ಹಲ್ಲೆ
– ಮಂಗಳೂರು: ನೇತ್ರಾವತಿ ಸೇತುವೆ ಮೇಲೆ ಟಿಪ್ಪರ್-ಸ್ಕೂಟರ್ ಅಪಘಾತ

NAMMUR EXPRESS NEWS
ಸುಳ್ಯ: ಪುತ್ತೂರಿನಿಂದ ಮಡಿಕೇರಿ ಕಡೆಗೆ ತೆರಳುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಹೋಟೆಲ್‌ವೊಂದಕ್ಕೆ ಡಿಕ್ಕಿ ಹೊಡೆದು ಕಾರಿನಲ್ಲಿದ್ದ ದಂಪತಿಗೆ ಗಂಭೀರ ಗಾಯಗೊಂಡು, ಸುಳ್ಯದ ಆಸ್ಪತ್ರೆಗೆ ದಾಖಲಾದ ಘಟನೆ ದ‌.ಕ. ಸಂಪಾಜೆ ಎಂಬಲ್ಲಿ ಮೇ.3ರ ಶುಕ್ರವಾರ ಬೆಳಿಗ್ಗೆ ಸಂಭವಿಸಿದೆ. ವಿಟ್ಲದ ಅಡ್ಯನಡ್ಕದ ದಂಪತಿಗಳು ಕಾರಿನಲ್ಲಿ ಮಡಿಕೇರಿ ಕಡೆಗೆ ಹೋಗುತ್ತಿದ್ದ ವೇಳೆ ಸಂಪಾಜೆಯ ಹೈವೆ ಹೋಟೆಲ್ ಬಳಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಹೋಟೆಲಿನ ಮುಂಭಾಗದ ಗೋಡೆಗೆ ಢಿಕ್ಕಿ ಹೊಡೆದಿದೆ. ಈ ಪರಿಣಾಮ ಕಾರು ಚಾಲಕ ಹಾಗೂ ಮುಂಭಾಗದಲ್ಲಿ ಕುಳಿತಿದ್ದ ಅವರ ಪತ್ನಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಸ್ಥಳೀಯರು ಸೇರಿ ಅಂಬ್ಯುಲೆನ್ಸ್ ಮೂಲಕ ಸುಳ್ಯದ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

– ಟೆರೇಸಿನಿಂದ ಬಿದ್ದ ಮುಖ್ಯ ಶಿಕ್ಷಕ ಸಾವು

ಅಜೆಕಾರು: ತೀವ್ರ ಸೆಖೆಯ ಹಿನ್ನೆಲೆಯಲ್ಲಿ ಮನೆಯ ಟೆರೇಸಿನಲ್ಲಿ ಮಲಗಿದ್ದ ಎಣ್ಣೆಹೊಳೆ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಕೆಳಗೆ ಬಿದ್ದು ಮೃತಪಟ್ಟ ಘಟನೆ ಸಂಭವಿಸಿದೆ. ಅಜೆಕಾರು ಬೊಂಡುಕುಮೇರಿ ಆಶ್ರಯ ನಗರ ನಿವಾಸಿ ಸುಂದರ್‌ ನಾಯ್ಕ (55) ಮೃತ ಶಿಕ್ಷಕ. ಅವರು ಮೇ 1ರಂದು ರಾತ್ರಿ ಸುಮಾರು 10.30ರ ವೇಳೆಗೆ ಟೆರೇಸಿನಲ್ಲಿ ಮಲಗಿದ್ದರು. ಬೆಳಗ್ಗೆ 6.30ರ ವೇಳೆಗೆ ಮನೆಯವರು ನೋಡುವಾಗ ಕೆಳಗೆ ಬಿದ್ದು ಮೃತಪಟ್ಟಿರುವುದು ಗಮನಕ್ಕೆ ಬಂದಿದೆ. ಗಾಢಾ ನಿದ್ರೆಯಲ್ಲಿ ಆಯ ತಪ್ಪಿ ಕೆಳಗೆ ಬಿದ್ದಿರಬಹುದು ಎಂದು ಶಂಕಿಸಲಾಗಿದೆ. ಮೃತರು ಪತ್ನಿ, ಪುತ್ರಿಯರನ್ನು ಅಗಲಿದ್ದಾರೆ

– ಬೈಂದೂರು: ಅಪಘಾತಕ್ಕೆ ಓರ್ವ ಬಲಿ

ಬೈಂದೂರು: ಬೈಂದೂರು ಸಮೀಪ ಬೊಲೇರೊ
ವಾಹನ ರಸ್ತೆಯ ಡಿವೈಡರ್‌ಗೆ ಢಿಕ್ಕಿ ಹೊಡೆದ ಪರಿಣಾಮ ಓರ್ವ ಸಾವಿಗೀಡಾಗಿದ್ದು, ಇತರ ಐವರು ಗಾಯಗೊಂಡಿದ್ದು ಓರ್ವ ಸಾವನ್ನಪ್ಪಿದ ಘಟನೆ ಕಿರಿಮಂಜೇಶ್ವರ ರಾ.ಹೆದ್ದಾರಿಯಲ್ಲಿ ನಡೆದಿದೆ . ರಾಮಣ್ಣ ಮೃತಪಟ್ಟ ವ್ಯಕ್ತಿ. ಬಾಗಲಕೋಟೆ ಜಿಲ್ಲೆಯ ಹನಮಂತ ಹಾಗೂ ಮನೆಯವರು ಉಡುಪಿಯಿಂದ ಬೊಲೇರೋ ವಾಹನದಲ್ಲಿ ಅವರ ಮಾವನ ಮಗನ ಮದುವೆಯ ಹಿನ್ನೆಲೆಯಲ್ಲಿ ಬಾದಾಮಿಗೆ ಹೋಗಿ ಬೆಳಗ್ಗಿನ ಜಾವ 4.30ರ ವೇಳೆ ಕಿರಿಮಂಜೇಶ್ವರ ತಲುಪಿದಾಗ ಅಪಘಾತ ನಡೆದಿದೆ. ಡಿವೈಡರ್‌ಗೆ ಢಿಕ್ಕಿಯಾಗಿ ವಾಹನ 50 ಅಡಿ ದೂರ ಸಾಗಿ ವಿದ್ಯುತ್‌ ಕಂಬಕ್ಕೆ ಢಿಕ್ಕಿಯಾಗಿ ನಿಂತಿತು. ರಾಮಣ್ಣ ಅವರ ತಲೆಗೆ ಗಂಭೀರ ಗಾಯವಾಗಿದ್ದು, ಕೂಡಲೇ ಕುಂದಾಪುರ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ಪರೀಕ್ಷಿಸಿ ಮೃತರಾಗಿರುವುದಾಗಿ ತಿಳಿಸಿದರು. ಚಾಲಕ ನಿರಂಜನ,ಶಿವಕ್ಕ ರೇಷ್ಮಾ ಕಾವ್ಯ ಪ್ರಜ್ವಲ್ ಗಾಯಗೊಂಡವರು.ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

– ಬಂಟ್ವಾಳ: ರಸ್ತೆಗೆ ಅಡ್ಡ ಬಂದ ನಾಯಿ ಬೈಕ್ ಸ್ಕಿಡ್ ಆಗಿ ಸವಾರರಿಬ್ಬರಿಗೆ ಗಾಯ

ಬಂಟ್ವಾಳ : ನಾಯಿ ಅಡ್ಡ ಬಂದ ಪರಿಣಾಮ ಬೈಕ್ ಸ್ಕಿಡ್ ಆಗಿ ಬಿದ್ದು ಸವಾರರಿಬ್ಬರು ಗಾಯಗೊಂಡ ಘಟನೆ ಪುಣಚ ಗ್ರಾಮದ ಅಜ್ಜಿನಡ್ಕ ಎಂಬಲ್ಲಿ ಸಂಭವಿಸಿದೆ. ಗಾಯಾಳು ಬೈಕ್ ಸವಾರರನ್ನು ಮುಸ್ತಫಾ ಹಾಗೂ ಆತನ ಸಂಬಂಧಿ ಸಂಶುದ್ದೀನ್ ಎಂದು ಹೆಸರಿಸಲಾಗಿದೆ. ಮುಸ್ತಾಫ್ ಅವರು ಸಂಶುದ್ದೀನ್ ಅವರನ್ನು ಹಿಂಬದಿ ಸವಾರನಾಗಿ ಕುಳ್ಳಿರಿಸಿಕೊಂಡು ಹೋಗುತ್ತಿರುವ ವೇಳೆ ಪುಣಚ ಗ್ರಾಮದ ಅಜ್ಜಿನಡ್ಕ ಎಂಬಲ್ಲಿ ನಾಯಿಯೊಂದು ರಸ್ತೆಗೆ ಅಡ್ಡ ಬಂದು ಚಾಲಕನ ನಿಯಂತ್ರಣ ಮೀರಿದ ಬೈಕ್ ಸ್ಕಿಡ್ ಆಗಿ ರಸ್ತೆಗೆ ಬಿದ್ದು ಈ ಅಪಘಾತ ಸಂಭವಿಸಿದೆ. ಅಪಘಾತದಿಂದ ಬೈಕ್‌ ಸವಾರ ಮುಸ್ತಫಾಗೆ ತರಚಿದ ಗಾಯಗಳಾಗಿದ್ದು, ತೀವ್ರ ಗಾಯಗೊಂಡ ಸಹಸವಾರ ಸಂಶುದ್ದೀನ್ ಅವರನ್ನು ಮಂಗಳೂರು ಹೈಲ್ಯಾಂಡ್‌ ಆಸ್ಪತ್ರೆಗೆ ಸಾಗಿಸಲಾಗಿದೆ.

– ಬಂಟ್ವಾಳ: ಕೂಲಿ ಕೇಳಿದಕ್ಕೆ ಹಲ್ಲೆ?

ಬಂಟ್ವಾಳ: ಮರಳು ಲೋಡ್ ಮಾಡಿದ ಬಗ್ಗೆ ಕೂಲಿ ಹಣ ಕೇಳಿದ್ದಕ್ಕೆ ಇಬ್ಬರು ಸೇರಿ ಕಾರ್ಮಿಕಗೆ ಜಾತಿ ನಿಂದನೆಗೈದು ಹಲ್ಲೆ ನಡೆಸಿದ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆಗೊಳಗಾದ ಕೂಲಿ ಕಾರ್ಮಿಕನನ್ನು ನಾವೂರು ನಿವಾಸಿ ಧನಂಜಯ (24) ಎಂದು ಹೆಸರಿಸಲಾಗಿದ್ದು, ಆರೋಪಿಗಳನ್ನು ನಿಸಾರ್ ಹಾಗೂ ಸುನಿಲ್‌ ಎಂದು ಹೆಸರಿಸಲಾಗಿದೆ. ಧನಂಜಯ ಅವರು ಕೂಲಿ ಕಾರ್ಮಿಕನಾಗಿದ್ದು, ಎ 27 ರಂದು ಆರೋಪಿ ನಿಸಾರ್ ಸೂಚಿಸಿದಂತೆ ಮರಳು ಲೋಡು ಕೆಲಸ ಮಾಡಿದ್ದು, ಸದ್ರಿ ಕೆಲಸದ ಬಗ್ಗೆ ನಿಸಾರ್ ಕೂಲಿ ಹಣ ನೀಡದಿದ್ದು, ಈ ಬಗ್ಗೆ ಎ 30 ರಂದು ರಾತ್ರಿ ಕರೆ ಮಾಡಿ ಕೂಲಿ ನಿಸಾರನಲ್ಲಿ ಹಣವನ್ನು ಕೇಳಿರುತ್ತಾರೆ.

ಈ ವೇಳೆ ಆರೋಪಿ ಧನಂಜಯ ಅವರನ್ನುದ್ದೇಶಿಸಿ ಅವ್ಯಾಚವಾಗಿ ಬೈದಿರುತ್ತಾನೆ. ಮುಂದುವರಿದಂತೆ ಮೇ 1 ರಂದು ಮದ್ಯಾಹ್ನ ಧನಂಜಯ ಅವರು ನಾವೂರು ಶಾಲೆಯ ಬಳಿ ನಿಂತಿದ್ದಾಗ ಮತ್ತೋರ್ವ ಆರೋಪಿ ಸುನೀಲ್ ಎಂಬಾತ ಬಂದು ಆರೋಪಿತ ನಿಸಾರ್ ಬಳಿ ಕೂಲಿ ಹಣವನ್ನು ಕೇಳಿರುವ ಬಗ್ಗೆ ತಕರಾರು ತೆಗೆದು ಧನಂಜಯ ಅವರಿಗೆ ಹಲ್ಲೆ ನಡೆಸಿ ಹೋಗಿರುತ್ತಾನೆ. ನಂತರ ಸ್ವಲ್ಪ ಸಮಯದ ಬಳಿಕ ಧನಂಜಯ ಅವರು ನಾವೂರು ಆಸ್ಪತ್ರೆಯ ಬಸ್‌ ತಂಗುದಾಣದ ಬಳಿಯಿದ್ದಾಗ ಆರೋಪಿಗಳಾದ ಸುನೀಲ್ ಹಾಗೂ ನಿಸಾರ್ ಇಬ್ಬರೂ ಬಂದು ಅವ್ಯಾಚವಾಗಿ ಬೈದು, ಜಾತಿ ನಿಂದನೆ ಮಾಡಿರುವುದಲ್ಲದೆ ಜೀವ ಬೆದರಿಕೆ ಒಡ್ಡಿ ಹೋಗಿರುತ್ತಾರೆ ಎಂಬುದಾಗಿ ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

– ಪಾಣೆಮಂಗಳೂರು: ನೇತ್ರಾವತಿ ಸೇತುವೆ ಮೇಲೆ ಟಿಪ್ಪರ್-ಸ್ಕೂಟರ್ ಅಪಘಾತ

ಪಾಣೆಮಂಗಳೂರು : ಹೊಸ ನೇತ್ರಾವತಿ ಸೇತುವೆಯ ಮೇಲೆ ಟಿಪ್ಪರ್ ಲಾರಿ ಹಾಗೂ ಸ್ಕೂಟರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಸ್ಕೂಟ‌ರ್ ಸವಾರ ದಾರುಣವಾಗಿ ಮೃತಪಟ್ಟ ಘಟನೆ ಗುರುವಾರ ಸಂಭವಿಸಿದೆ. ಮೃತ ಸ್ಕೂಟರ್ ಸವಾರನನ್ನು ನರಿಕೊಂಬು ಗ್ರಾಮದ ಪೊಯಿತಾಜೆ ನಿವಾಸಿ ಸುಬ್ಬು ಭಂಡಾರಿ (68) ಎಂದು ಹೆಸರಿಸಲಾಗಿದೆ. ಭಂಡಾರಿ ಅವರು ಸ್ಕೂಟರಿನಲ್ಲಿ ಬರುತ್ತಿದ್ದ ವೇಳೆ ನೇತ್ರಾವತಿ ಸೇತುವೆ ಮೇಲೆ ಬದ್ರುಲ್ ಮುನೀರ್ ಎಂಬವರು ಚಲಾಯಿಸಿಕೊಂಡು ಬಂದ ಟಿಪ್ಪರ್ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.

ಅಪಘಾತದಿಂದ ಗಂಭೀರ ಗಾಯಗೊಂಡಿದ್ದ ಸುಬ್ಬ ಭಂಡಾರಿ ಅವರನ್ನು ತಕ್ಷಣ ಬಿ ಸಿ ರೋಡಿನ ಸೋಮಯಾಜಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಅಪಘಾತದಿಂದ ಹೆದ್ದಾರಿಯಲ್ಲಿ ಕೆಲ ಕಾಲ ಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಬಳಿಕ ಸ್ಥಳಕ್ಕಾಗಮಿಸಿದ ಬಂಟ್ವಾಳ ಸಂಚಾರಿ ಪೊಲೀಸರು ಸುಗಮ ಸಂಚಾರಕ್ಕೆ ಕ್ರಮ ಕೈಗೊಂಡರು. ಮೃತರ ಸಂಬಂಧಿ ರಂಜಿತ್ ಕುಮಾ‌ರ್ ಎಂಬವರು ನೀಡಿದ ದೂರಿನಂತೆ ಈ ಬಗ್ಗೆ ಬಂಟ್ವಾಳ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Categories
ಜಾತಕ

ನಿಮ್ಮ ರಾಶಿ ಭವಿಷ್ಯ ಹೇಗಿದೆ?

ನಿಮ್ಮ ರಾಶಿ ಭವಿಷ್ಯ ಹೇಗಿದೆ?
– ಯಾವ ರಾಶಿಯವರಿಗೆ ಒಳಿತು? ಯಾವ ರಾಶಿಗೆ ಕೆಡುಕು?
– ಎಲ್ಲಾ ರಾಶಿಗಳ ಫಲಾನುಫಲ ಹೇಗಿದೆ?

NAMMUR EXPRESS NEWS
2024 ಮೇ 03ರ ಶುಕ್ರವಾರ ದಿನವಾದ ಇಂದು ನಿಮ್ಮ ದಿನವು ಹೇಗಿರಲಿದೆ..? ಇಂದು ಯಾವ ರಾಶಿಯವರಿಗೆ ಶುಭ.? ಯಾವ ರಾಶಿಯವರು ಅಶುಭ..?

** ಮೇಷ :
ಆರ್ಥಿಕ ಪರಿಸ್ಥಿತಿಗಳು ಉತ್ತಮವಾಗಿರುತ್ತವೆ ಮತ್ತು ಹೊಸ ವಸ್ತು ವಾಹನಗಳನ್ನು ಖರೀದಿಸುತ್ತೀರಿ. ಹೊಸ ಯೋಜನೆಗಳನ್ನು ಒಳಾಂಗಣ ಮತ್ತು ಹೊರಾಂಗಣದಲ್ಲಿ ಕಾರ್ಯಗತಗೊಳಿಸಲಾಗುತ್ತದೆ ಮತ್ತು ಕೈಗೊಂಡ ಕೆಲಸದಲ್ಲಿ ಯಶಸ್ಸು ದೊರೆಯುತ್ತದೆ. ಬಂಧುಗಳಿಂದ ಆಹ್ವಾನಗಳು ಬರುತ್ತವೆ. ವೃತ್ತಿ ವ್ಯವಹಾರದಲ್ಲಿ ನಿರೀಕ್ಷಿತ ಪ್ರಗತಿ ಉಂಟಾಗುತ್ತದೆ. ಉದ್ಯೋಗದ ವಾತಾವರಣವು ಉತ್ಸಾಹದಾಯಕವಾಗಿರುತ್ತದೆ.

** ವೃಷಭ ರಾಶಿ :
ಪ್ರಮುಖ ವಿಷಯಗಳಲ್ಲಿ ಆತುರದ ನಿರ್ಧಾರ ತೆಗೆದುಕೊಳ್ಳುವುದು ಒಳ್ಳೆಯದಲ್ಲ. ಬಂಧುಮಿತ್ರರೊಡನೆ ವಿವಾದ ಉಂಟಾಗುತ್ತದೆ. ಹಠಾತ್ ಪ್ರಯಾಣ ಸೂಚನೆಗಳಿವೆ. ಕೈಗೊಂಡ ಕಾರ್ಯಗಳು ನಿಧಾನವಾಗಿ ಸಾಗುತ್ತವೆ. ಆಧ್ಯಾತ್ಮಿಕ ಚಿಂತನೆ ಹೆಚ್ಚಾಗುತ್ತದೆ. ವೃತ್ತಿಪರ ವ್ಯವಹಾರಗಳು ಕೂಡಿ ಬರುತ್ತವೆ. ಉದ್ಯೋಗದಲ್ಲಿ ಅಧಿಕಾರಿಗಳೊಂದಿಗೆ ಸಮಸ್ಯೆಗಳಿರುತ್ತವೆ.

** ಮಿಥುನ ರಾಶಿ :
ಆತ್ಮೀಯರಿಂದ ಶುಭ ಸುದ್ದಿ ದೊರೆಯುತ್ತದೆ. ದೂರದ ಬಂಧುಗಳ ಭೇಟಿ ಸಂತಸ ತರುತ್ತದೆ. ಕೈಗೊಂಡ ಕಾರ್ಯಗಳಲ್ಲಿ ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಫಲ ದೊರೆಯುತ್ತದೆ ಮತ್ತು ಹೊಸ ವ್ಯಕ್ತಿಗಳೊಂದಿಗೆ ಪರಿಚಯಗಳು ಉತ್ಸಾಹದಯಕವಾಗಿರುತ್ತವೆ. ಮನೆಯ ಹೊರಗೆ ಹೊಸ ಪ್ರೋತ್ಸಾಹ ದೊರೆಯುತ್ತದೆ. ವೃತ್ತಿ ವ್ಯವಹಾರದಲ್ಲಿ ಲಾಭ ದೊರೆಯುತ್ತದೆ. ಉದ್ಯೋಗಿಗಳಿಗೆ ವಿವಾದಗಳು ಬಗೆಹರಿಯುತ್ತವೆ.

** ಕಟಕ ರಾಶಿ :
ರಾಜಕೀಯ ಸಭೆ ಸಮಾರಂಭಗಳಲ್ಲಿ ಭಾಗವಹಿಸುತ್ತೀರಿ. ಹಳೆ ಸಾಲಗಳನ್ನು ವಸೂಲಿ ಮಾಡಲಾಗುತ್ತದೆ. ಕುಟುಂಬ ಸದಸ್ಯರಿಂದ ಶುಭ ಸುದ್ದಿ ದೊರೆಯುತ್ತದೆ. ಹೊಸ ಉದ್ಯೋಗಾವಕಾಶಗಳು ಬರುತ್ತವೆ. ವೃತ್ತಿಪರ ವ್ಯಾಪಾರಗಳಲ್ಲಿ, ಕಠಿಣ ಪರಿಶ್ರಮದಿಂದ ಫಲಿತಾಂಶವನ್ನು ಪಡೆಯುತ್ತೀರಿ. ಉದ್ಯೋಗದಲ್ಲಿ ನಿಮ್ಮ ಕಾರ್ಯಶೈಲಿಯಿಂದ ಎಲ್ಲರನ್ನೂ ಮೆಚ್ಚಿಸುತ್ತೀರಿ.

** ಸಿಂಹ ರಾಶಿ :
ದೂರ ಪ್ರಯಾಣವನ್ನು ಮುಂದೂಡುವುದು ಉತ್ತಮ. ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ಬಂಧುಗಳೊಂದಿಗೆ ವಾದ ವಿವಾದಗಳು ಉಂಟಾಗುತ್ತವೆ. ಸಹೋದರರಿಂದ ಆರ್ಥಿಕ ಸಮಸ್ಯೆಗಳಿರುತ್ತವೆ. ವೃತ್ತಿಪರ ಉದ್ಯೋಗಗಳಲ್ಲಿ ಗೊಂದಲಮಯ ಪರಿಸ್ಥಿತಿಗಳಿರುತ್ತವೆ. ವ್ಯಾಪಾರ-ವ್ಯವಹಾರಗಳು ಸುಗಮವಾಗಿ ಸಾಗುತ್ತವೆ.

** ಕನ್ಯಾ ರಾಶಿ :
ಪ್ರಮುಖ ವ್ಯವಹಾರಗಳಲ್ಲಿ ಪರಿಸ್ಥಿತಿಗಳು ಅನುಕೂಲಕರವಾಗಿರುವುದಿಲ್ಲ. ಶ್ರಮ ಮತ್ತು ಖರ್ಚುಗಳಿಂದ ಕೆಲಸ ಪೂರ್ಣಗೊಳ್ಳುವುದಿಲ್ಲ. ಬಂಧುಗಳೊಂದಿಗೆ ಭಿನ್ನಭಿಪ್ರಾಯಗಳು ಉಂಟಾಗುತ್ತವೆ. ಹಣದ ವಿಷಯದಲ್ಲಿ ಯೋಚಿಸುವುದರಲ್ಲಿ ಸ್ಥಿರತೆ ಇರುವುದಿಲ್ಲ. ವ್ಯಾಪಾರ ಉದ್ಯೋಗಗಳಲ್ಲಿ ಅನಿರೀಕ್ಷಿತ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ನಿರುದ್ಯೋಗ ಪ್ರಯತ್ನಗಳು ವ್ಯರ್ಥವಾಗುತ್ತವೆ.

** ತುಲಾ ರಾಶಿ :
ಮನೆಯಲ್ಲಿ ಸಂತಸದ ವಾತಾವರಣ ಇರುತ್ತದೆ. ಸಂಗಾತಿಯೊಂದಿಗೆ ದೈವಿಕ ದರ್ಶನವನ್ನು ಪಡೆಯುತ್ತೀರಿ. ವೃತ್ತಿಪರ ಉದ್ಯೋಗಗಳಲ್ಲಿ ನಿಮ್ಮ ಕಠಿಣ ಪರಿಶ್ರಮಕ್ಕೆ ಫಲ ದೊರೆಯುತ್ತದೆ. ಸ್ಥಿರಾಸ್ತಿ ವಿವಾದಗಳು ಬಗೆಹರಿಯುತ್ತವೆ. ಹೊಸ ಕಾರ್ಯಕ್ರಮಗಳನ್ನು ಪ್ರಾರಂಭಿಸಿ ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲಾಗುತ್ತದೆ. ವ್ಯಾಪಾರಗಳಲ್ಲಿ ಕಿರಿಕಿರಿಗಳನ್ನು ನಿವಾರಿಸಿ ಮುನ್ನಡೆಯುತ್ತೀರಿ.

** ವೃಶ್ಚಿಕ ರಾಶಿ :
ಕೈಗೆತ್ತಿಕೊಂಡ ಕೆಲಸದಲ್ಲಿ ಯಶಸ್ಸು ದೊರೆಯುತ್ತದೆ. ಹಠಾತ್ ಆರ್ಥಿಕ ಲಾಭದ ಸೂಚನೆಗಳಿವೆ. ಹಳೆಯ ವಿಷಯಗಳು ನೆನಪಾಗುತ್ತವೆ. ಪ್ರಮುಖ ವ್ಯವಹಾರಗಳಲ್ಲಿ ಸ್ನೇಹಿತರು ಸಹಾಯ ಮಾಡುತ್ತಾರೆ. ಪ್ರಯಾಣದ ಸಮಯದಲ್ಲಿ ಹೊಸ ಪರಿಚಯವಾಗುತ್ತದೆ. ವ್ಯಾಪಾರ ಉದ್ಯೋಗಗಳಲ್ಲಿ ನಿಮ್ಮ ನಿರೀಕ್ಷೆಗಳು ನಿಜವಾಗುತ್ತವೆ.

** ಧನುಸ್ಸು ರಾಶಿ :
ದೈವಿಕ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ. ಕುಟುಂಬ ಸದಸ್ಯರೊಂದಿಗೆ ವಿವಾದ ಉಂಟಾಗುತ್ತದೆ. ಪ್ರಯಾಣವನ್ನು ಮುಂದೂಡುವುದು ಉತ್ತಮ. ಕೈಗೆತ್ತಿಕೊಂಡ ಕೆಲಸಗಳಲ್ಲಿ ವಿಳಂಬ ಉಂಟಾಗುತ್ತದೆ. ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ವ್ಯಾಪಾರ ಉದ್ಯೋಗಗಳು ನಿಧಾನವಾಗಿ ಸಾಗುತ್ತವೆ. ಹಣಕಾಸಿನ ತೊಂದರೆಗಳು ಉಂಟಾಗುತ್ತದೆ.

** ಮಕರ ರಾಶಿ :
ಆಧ್ಯಾತ್ಮಿಕ ಚಿಂತನೆ ಹೆಚ್ಚಾಗುತ್ತದೆ. ವ್ಯಾಪಾರ ಉದ್ಯೋಗಗಳು ಮಂದಗತಿಯಲ್ಲಿ ಸಾಗುತ್ತವೆ. ನಿರುದ್ಯೋಗ ಪ್ರಯತ್ನಗಳು ಫಲಿಸುವುದಿಲ್ಲ. ಕೈಗೊಂಡ ಕಾರ್ಯಗಳಲ್ಲಿ ಸ್ಥಿರವಾಗಿ ಯೋಚಿಸಲು ಸಾಧ್ಯವಾಗುವುದಿಲ್ಲ. ಮನೆಯ ಹೊರಗೆ ಜವಾಬ್ದಾರಿಗಳು ಹೆಚ್ಚಾಗುತ್ತವೆ. ಆರ್ಥಿಕ ಏರಿಳಿತಗಳು ಉಂಟಾಗುತ್ತವೆ. ಪ್ರಯಾಣದಲ್ಲಿ ವಾಹನ ತೊಂದರೆಗಳಿರುತ್ತವೆ.

** ಕುಂಭ ರಾಶಿ :
ಪ್ರಮುಖ ವಿಷಯಗಳಲ್ಲಿ ಹೊಸ ಒಪ್ಪಂದಗಳನ್ನು ಮಾಡಿಕೊಳ್ಳಲಾಗುತ್ತದೆ. ಕುಟುಂಬದ ಸದಸ್ಯರೊಂದಿಗೆ ಸ್ನೇಹದಿಂದ ವರ್ತಿಸಿ, ನಿಮ್ಮ ಮಾತಿಗೆ ಬೆಲೆ ಹೆಚ್ಚಿಸಿಕೊಳ್ಳುತ್ತೀರಿ. ಕೈಗೊಂಡ ಕಾರ್ಯಗಳಲ್ಲಿ ಯಶಸ್ಸು ದೊರೆಯುತ್ತದೆ. ವ್ಯಾಪಾರದಲ್ಲಿ ಹೊಸ ನಿರ್ಧಾರಗಳನ್ನು ತೆಗೆದುಕೊಂಡು ಲಾಭವನ್ನು ಪಡೆಯುತ್ತೀರಿ. ಮಕ್ಕಳ ಉದ್ಯೋಗ ಪ್ರಯತ್ನಗಳು ಸಕಾರಾತ್ಮಕವಾಗಿರುತ್ತವೆ.

** ಮೀನ ರಾಶಿ :
ದೂರ ಪ್ರಯಾಣದ ಸೂಚನೆಗಳಿವೆ. ಅಧಿಕ ಪ್ರಯತ್ನದಿಂದ ಸ್ವಲ್ಪ ಫಲಿತಾಂಶವನ್ನು ಪಡೆಯುತ್ತೀರಿ. ಬಾಲ್ಯದ ಗೆಳೆಯರೊಂದಿಗೆ ವಿವಾದಗಳು ಉಂಟಾಗುತ್ತವೆ. ಪ್ರಮುಖ ಕಾರ್ಯಗಳನ್ನು ಮುಂದೂಡುವುದು ಉತ್ತಮ. ಮತ್ತು ಆರೋಗ್ಯದ ಬಗ್ಗೆ ಜಾಗರೂಕರಾಗಿ. ವ್ಯಾಪಾರ ಉದ್ಯೋಗಗಳಲ್ಲಿನ ಕಿರಿಕಿರಿಗಳು ದೂರವಾಗುತ್ತವೆ.

Categories
ತೀರ್ಥಹಳ್ಳಿ

ಡಾನ್ಸ್, ಜಾತಿ ಹೆಸರಲ್ಲಿ ಚುನಾವಣೆ ಮಾಡ್ಬೇಡಿ!

ಡಾನ್ಸ್, ಜಾತಿ ಹೆಸರಲ್ಲಿ ಚುನಾವಣೆ ಮಾಡ್ಬೇಡಿ!
– ಈಡಿಗರ ಹೆಸ್ರಲ್ಲಿ ಚುನಾವಣೆ ಬೇಡ: ಕುಮಾರ್ ಬಂಗಾರಪ್ಪ
– ವೈ ರಾಘವೇಂದ್ರ ಪರ ಮತಯಾಚನೆ ಮಾಡಿದ ಕುಮಾರ್

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ದೇವಂಗಿ ಅಂಕಿನಕಟ್ಟೆಯಲ್ಲಿ ಗುರುವಾರ ಕುಮಾರ್ ಬಂಗಾರಪ್ಪರವರು ಆಗಮಿಸಿದ್ದು, ಶಿವಮೊಗ್ಗ ಲೋಕಸಭಾ ಅಭ್ಯರ್ಥಿ ಬಿ ವೈ ರಾಘವೇಂದ್ರ ಪರ ಮತಯಾಚನೆ ಮಾಡಿದರು. ಕುಮಾರ್ ಬಂಗಾರಪ್ಪ ಅವರು ಮಾತನಾಡಿ ಚುನಾವಣೆ ಎನ್ನುವುದು ಮಕ್ಕಳ ಆಟ ಅಲ್ಲ. ಚುನಾವಣೆ ಎನ್ನುವುದು ದ್ವೇಷ ಮಾಡುವುದು ಕೂಡ ಅಲ್ಲ ಎಂದರು. ಇದು ಜಾತಿಯ ಚುನಾವಣೆ ಅಲ್ಲ, ಜಾತೀಯ ಚುನಾವಣೆ ಮಾಡಬೇಕೆಂದರೆ ಅವರವರ ಸಂಘದಲ್ಲಿ ಅವರವರು ಚುನಾವಣೆ ಮಾಡಿಕೊಳ್ಳುತ್ತಾರೆ. ಆದರೆ ಇಲ್ಲಿ ಬಂದು ಘರ್ಷಣೆಗಳನ್ನು ಹಾಕಿ ವ್ಯವಸ್ಥಿತವಾಗಿರುವಂತಹ ಸಮಾಜವನ್ನು ಭಾವನಾತ್ಮಕವಾಗಿ ಒಡೆಯುವುದು ಹಾಗೂ ಹಣ ಹೆಂಡ ಹಾಗೂ ಅಧಿಕಾರದ ದುರುಪಯೋಗ ಮಾಡಿಕೊಂಡು ದವಲತ್ತಿನ ಮೇಲೆ ಮಾಡುವಂತ ಚುನಾವಣೆ ಅಲ್ಲ.

ಅದಕ್ಕೆ ಮಿತಿಯನ್ನು ಹಾಕಬೇಕು ಮತ್ತು ಅಭಿವೃದ್ಧಿಯನ್ನು ಮುಂದೆ ತೆಗೆದ ಕೊಂಡು ಹೋಗುವಂತಾಗಬೇಕು ಎಂದರೆ ರಾಘವೇಂದ್ರ ಅವರಿಗೆ ಮತ ಹಾಕಿ ಗೆಲ್ಲಿಸಬೇಕು ಎಂದರು. ಡಾನ್ಸ್ ಮಾಡಿ ಚುನಾವಣೆ ಮಾಡಲು ಸಾಧ್ಯ ಇಲ್ಲ. ಕಲೆಯೇ ಬೇರೆ ಚುನಾವಣೆಯೇ ಬೇರೆ ಎಂದು ತೀರ್ಥಹಳ್ಳಿ ತಾಲೂಕಲ್ಲಿ ಬಿಜೆಪಿ ಪರ ಕುಮಾರ್ ಬಂಗಾರಪ್ಪ ಪ್ರಚಾರ ಮಾಡಿದರು.

Categories
ರಾಜಕೀಯ ರಾಜ್ಯ ಶಿವಮೊಗ್ಗ

ಅಧಿಕಾರಕ್ಕೆ ಬಂದ ಕ್ಷಣವೇ ಮಹಿಳೆಯರ ಅಕೌಂಟಿಗೆ 1 ಲಕ್ಷ!

ಅಧಿಕಾರಕ್ಕೆ ಬಂದ ಕ್ಷಣವೇ ಮಹಿಳೆಯರ ಅಕೌಂಟಿಗೆ 1 ಲಕ್ಷ!
– ದೇಶದ ರೈತರ ಸಾಲ ಮನ್ನಾ ಮಾಡ್ತೇವೆ: ರಾಹುಲ್ ಗಾಂಧಿ
– ಶಿವಮೊಗ್ಗದಲ್ಲಿ ಕಾಂಗ್ರೆಸ್ ರಣ ಕಹಳೆ

NAMMUR EXPRESS NEWS
ಶಿವಮೊಗ್ಗ : ಮಹಾಲಕ್ಷ್ಮಿ ಯೋಜನೆಯಡಿ ಪ್ರತಿ ಮಹಿಳೆಗೆ ವರ್ಷಕ್ಕೆ ಒಂದು ಲಕ್ಷ ರೂ. ಕೊಡುವ ನ್ಯಾಯ ಯೋಜನೆ ಅದು. ನಾವು ಅಧಿಕಾರಕ್ಕೆ ಬಂದ ತಕ್ಷಣವೇ ಒಂದು ಲಕ್ಷ ರೂಪಾಯಿಯನ್ನು ಪಟಪಟನೇ ಅವರ ಖಾತೆಗಳಿಗೆ ಜಮಾ ಮಾಡುತ್ತೇವೆ ಎಂದು ಎಐಸಿಸಿ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ. ಶಿವಮೊಗ್ಗ ನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಸಂವಿಧಾನ ಉಳಿಸುವುದಕ್ಕಾಗಿಯೇ ಈ ಚುನಾವಣೆಯಲ್ಲಿ ಗೆಲ್ಲಬೇಕಾಗಿದೆ. ಗ್ಯಾರಂಟಿ ಯೋಜನೆಗಳು ಇದಕ್ಕೆ ಸಹಕಾರಿಯಾಗಲಿವೆ ಎಂದರು.

ಯುವನಿಧಿ ಯೋಜನೆ ಮೂಲಕ ರಾಜ್ಯ ಸರ್ಕಾರದ ಜೊತೆಗೆ ಕೇಂದ್ರ ಸರ್ಕಾರದಿಂದ ಪ್ರತಿ ವರ್ಷಕ್ಕೆ ಒಂದು ಲಕ್ಷ ರೂ, ನೀಡಿ ಅವರಿಗೆ ತರಬೇತಿ ಕೊಟ್ಟು ಕೇಂದ್ರದಲ್ಲಿ ಖಾಲಿ ಇರುವ 30 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದರು. ಕಾಂಗ್ರೆಸ್ ಪಕ್ಷ ಸಂವಿಧಾನವನ್ನು ಉಳಿಸುವ ಕೆಲಸ ಮಾಡಿದೆ. ಈ ಬಿಜೆಪಿ ಸಂವಿಧಾನವನ್ನೇ ತಿರುಚಲು ಪ್ರಯತ್ನಿಸಿದೆ. ಬಿಜೆಪಿಯವರು ಸಂವಿಧಾನದಲ್ಲಿರುವ ಮೀಸಲಾತಿಯನ್ನೇ ತೆಗೆದು ಹಾಕಲು ಹೊರಟಿದ್ದಾರೆ. ಅಂಬೇಡ್ಕ‌ರ್ ರಚಿಸಿದ ಶ್ರೇಷ್ಟ ಗ್ರಂಥ ಸಂವಿಧಾನ. ಸಮಾನತೆ ಅಲ್ಲಿದೆ. ನಾವು ಸಮಾನತೆ ಕೇಳಿದರೆ ನಮ್ಮನ್ನು ಅವರು ನಕ್ಸಲ್ ಪಟ್ಟಕ್ಕೆ ಹೋಲಿಸುತ್ತಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಸಂವಿಧಾನಕ್ಕೆ ಅವಮಾನ ಮಾಡಿದ್ದಾರೆ. ಅವರು ಕೂಡ ದೇಶದ ಕ್ಷಮೆ ಕೇಳಬೇಕು ಎಂದರು.

ಪ್ರಧಾನಿ ಮೋದಿ ಅವರಿಗೆ ಭಯ ಶುರುವಾಗಿದೆ. ಏಕೆಂದರೆ ಅವರ ಜೊತೆಗಿರುವ 27 ಜನ ಶ್ರೀಮಂತರಿಗೆ ಈ ಹಣ ಹೋಗುವುದಿಲ್ಲ ಎಂದು. ಬಿಜೆಪಿಯವರ ಹಾಗೆ ನಾವು ಸುಳ್ಳು ಹೇಳುವುದಿಲ್ಲ. ಮೋದಿ ಅವರು ಕೆಲವೇ ಕೆಲವು ವ್ಯಕ್ತಿಗಳ ಸಾಲ ಮನ್ನಾ ಮಾಡಿದ್ದಾರೆ. ಆದರೆ ನಾವು ಅಧಿಕಾರಕ್ಕೆ ಬಂದರೆ ದೇಶದ ರೈತರ ಸಾಲ ಮನ್ನಾ ಮಾಡುತ್ತೇವೆ ಎಂದರು. ದೇಶದಲ್ಲಿ ಇಂದು ವಿಶ್ವವಿದ್ಯಾಲಯಗಳು ಸೇರಿ ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣ ಮಾಡಲಾಗುತ್ತಿದೆ. ಆದರೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಎಲ್ಲಾ ಸಾರ್ವಜನಿಕ ಉದ್ದಿಮೆಗಳನ್ನು ಸರ್ಕಾರದಲ್ಲಿಯೇ ಉಳಿಸಿಕೊಳ್ಳಲಾಗುವುದು ಎಂದರು.

Categories
ಶಿಕ್ಷಣ

ಮೇ 8ಕ್ಕೆ ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟ!

ಮೇ 8ಕ್ಕೆ ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟ!
– ಪರೀಕ್ಷಾ ಮಂಡಳಿಯಿಂದ ದಿನಾಂಕ ಪ್ರಕಟ
– ಈ ಸಲದಿಂದ 3 ಬಾರಿ ಪರೀಕ್ಷೆ ಬರೆಯಲು ಅವಕಾಶ

NAMMUR EXPRESS NEWS
ರಾಜ್ಯದ್ಯಂತ ಲಕ್ಷಾಂತರ ವಿದ್ಯಾರ್ಥಿಗಳು ಕಾತುರದಿಂದ ಕಾಯುತ್ತಿರುವ ಎಸ್ಸೆಸ್ಸೆಲ್ಸಿ 2024ರ ಪರೀಕ್ಷೆ 1ರ ಫಲಿತಾಂಶ ಪ್ರಕಟಣೆಗೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಕಡೆಗೂ ಮುಹೂರ್ತ ಫಿಕ್ಸ್ ಮಾಡಿದೆ. ಕಳೆದ ಮಾರ್ಚ್ 25ರಿಂದ ಏಪ್ರಿಲ್ 6ರ ವರೆಗೆ ನಡೆದ 2023-24ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ-1ರ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪ್ರಕ್ರಿಯೆ ಸಂಪೂರ್ಣಗೊಂಡಿದ್ದು, ಫಲಿತಾಂಶದ ಕ್ರೋಢೀಕರಣದ ಕಾರ್ಯ ಅಂತಿಮ ಹಂತದಲ್ಲಿದೆ. ಇದೇ ಮೇ 8ರಂದು ಎಸ್ಸೆಸ್ಸೆಲ್ಸಿ ರಿಸಲ್ಟ್ ಪ್ರಕಟವಾಗಲಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಮೂಲಗಳು ತಿಳಿಸಿವೆ.

ಮೇ 10ನೇ ತಾರೀಖಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಲಿದೆ ಎಂಬ ಮಾಹಿತಿ ಇತ್ತು. ಆದರೀಗ ಮೇ 8ನೇ ತಾರೀಖಿಗೆ ಬಹುತೇಕ ಫಲಿತಾಂಶ ಪ್ರಕಟಣೆಗೆ ಸಿದ್ಧತೆ ನಡೆದಿದೆ. ಕಂಪ್ಯೂಟರ್ ಕೆಲಸದಲ್ಲಿ ವಿಳಂಬವಾದರೆ ಮಾತ್ರ ಫಲಿತಾಂಶ ಪ್ರಕಟಿಸುವ ದಿನಾಂಕ ಬದಲಾಗುವ ಸಾಧ್ಯತೆ ಇದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 4.41 ಲಕ್ಷ ವಿದ್ಯಾರ್ಥಿಗಳು ಹಾಗೂ 4.28 ಲಕ್ಷ ವಿದ್ಯಾರ್ಥಿನಿಯರು ಸೇರಿ ಒಟ್ಟು 8.69 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದರು. ಈ ಪೈಕಿ ಸಾಮಾನ್ಯ ವಿದ್ಯಾರ್ಥಿಗಳ ಜೊತೆಯಲ್ಲಿ 18,225 ಖಾಸಗಿ ವಿದ್ಯಾರ್ಥಿಗಳು ಮತ್ತು 41,375 ರೀ ಎಕ್ಸಾಮ್ ಬರೆದಿದ್ದ ವಿದ್ಯಾರ್ಥಿಗಳು ಕೂಡ ಸೇರಿದ್ದಾರೆ.

– ಮೂರು ಪರೀಕ್ಷೆ ಬರೆಯಲು ಅವಕಾಶ

ಪ್ರಸಕ್ತ ಸಾಲಿನಲ್ಲಿ ವಿದ್ಯಾರ್ಥಿಗಳಿಗೆ ಬರೋಬ್ಬರಿ ಮೂರು ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. ಹಾಗಂತ ಮೂರೂ ಪರೀಕ್ಷೆ ಬರೆಯುವುದು ಎಲ್ಲ ವಿದ್ಯಾರ್ಥಿಗಳಿಗೂ ಕಡ್ಡಾಯವಲ್ಲ. 1ನೇ ವಾರ್ಷಿಕ ಪರೀಕ್ಷೆಯಲ್ಲಿ ಬಂದ ಫಲಿತಾಂಶದಲ್ಲಿ ಸಮಾಧಾನವಿದ್ದರೆ 2ನೇ ಪರೀಕ್ಷೆ ಬರೆಯುವ ಅಗತ್ಯವಿಲ್ಲ. ಮೂರೂ ಪರೀಕ್ಷೆ ಬರೆದವರು ಹೆಚ್ಚು ಅಂಕಗಳು ಯಾವ ಪರೀಕ್ಷೆಯಲ್ಲಿ ಬಂದಿರುತ್ತದೋ ಆ ಫಲಿತಾಂಶವನ್ನು ಉಳಿಸಿಕೊಳ್ಳಬಹುದು.

1ನೇ ಪರೀಕ್ಷೆಯ ಫಲಿತಾಂಶ ಸಮಾಧಾನ ತರದಿದ್ದರೆ ಅಥವಾ ಕಡಿಮೆ ಅಂಕಗಳು ಬಂದಿದ್ದರೆ ಎರಡನೇ ಪರೀಕ್ಷೆ ಬರೆಯಬಹುದು. 2ನೇ ಪರೀಕ್ಷೆಯ ಫಲಿತಾಂಶದಲ್ಲೂ ಸಮಾಧಾನ ಇಲ್ಲದಿದ್ದರೆ 3ನೇ ಪರೀಕ್ಷೆ ಬರೆಯಬಹುದು. ಈ ರೀತಿ ಮೂರೂ ಪರೀಕ್ಷೆ ಬರೆದರೂ ಮೂರರಲ್ಲಿ ಯಾವ ಫಲಿತಾಂಶವನ್ನು ಬೇಕಾದರೂ ಅಂತಿವಾಗಿ ಉಳಿಸಿಕೊಳ್ಳಬಹುದು. ಈತನಕ ವಾರ್ಷಿಕ ಪರೀಕ್ಷೆಯಲ್ಲಿ ಪಡೆದ ಫಲಿತಾಂಶದಲ್ಲಿ ಸಮಾಧಾನವಾಗದಿದ್ದರೆ ವಿದ್ಯಾರ್ಥಿ ಅದನ್ನು ತಿರಸ್ಕರಿಸಿ ಪೂರಕ ಪರೀಕ್ಷೆ ಬರೆಯಲು ಅವಕಾಶವಿತ್ತು. ಹಾಗೊಂದು ವೇಳೆ ಪೂರಕ ಪರೀಕ್ಷೆಯಲ್ಲಿ ಇನ್ನೂ ಕಳಪೆ ಫಲಿತಾಂಶ ಬಂದರೆ ಅಥವಾ ಫೇಲಾದರೆ ಹಿಂದಿನ ವಾರ್ಷಿಕ ಪರೀಕ್ಷೆಯ ಫಲಿತಾಂಶ ಉಳಿಸಿಕೊಳ್ಳಲು ಸಾಧ್ಯವಿರಲಿಲ್ಲ. ಈಗ ಮೂರರಲ್ಲಿ ಯಾವ ಫಲಿತಾಂಶವನ್ನು ಬೇಕಾದರೂ ಉಳಿಸಿಕೊಳ್ಳಬಹುದು.

– ಫಲಿತಾಂಶ ನೋಡುವುದು ಹೇಗೆ?

ಕರ್ನಾಟಕ ಶಾಲೆ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ವೆಬ್‌ಸೈಟ್‌ನಲ್ಲಿ ಫಲಿತಾಂಶ ನಿರೀಕ್ಷೆಯಲ್ಲಿರುವ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ನೋಡಬಹುದು. kseab.karnataka.gov.in ಗೆ ಭೇಟಿ ಪರೀಕ್ಷಾ ಪ್ರವೇಶ ಪತ್ರದಲ್ಲಿ ನೀಡಿರುವ ರಿಜಿಸ್ಟರ್ ನಂಬರ್ (ನೋಂದಣಿ ಸಂಖ್ಯೆ) ಮೂಲಕ ಫಲಿತಾಂಶ ನೋಡಬಹುದು. 10ನೇ ತರಗತಿಯ ಬೋರ್ಡ್ ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿಗಳು ತಮ್ಮ ಫಲಿತಾಂಶಗಳನ್ನು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಪರಿಶೀಲಿಸಬಹುದಾಗಿದೆ.

SSLC ಫಲಿತಾಂಶ 2024 ಲಿಂಕ್

■ https://kseab.karnataka.gov.in
■ https://karresults.nic.in

Categories
ತೀರ್ಥಹಳ್ಳಿ ಮಲ್ನಾಡ್

ಗಾಂಜಾ ಮೇಲೆ ಪೊಲೀಸ್ ಅಲರ್ಟ್..!

ಗಾಂಜಾ ಮೇಲೆ ಪೊಲೀಸ್ ಅಲರ್ಟ್..!
– ಕೆಲವೆಡೆ ಗಾಂಜಾ ನಶೆ: ದಾರಿ ತಪ್ಪುತಿದ್ದಾರಾ ಯುವ ಜನತೆ
– ಮಲೆನಾಡು, ತೀರ್ಥಹಳ್ಳಿ ತಾಲೂಕಿನ ಹಲವೆಡೆ ಗಾಂಜಾ ಸೇವನೆ ಪ್ರಕರಣಗಳು ಪತ್ತೆ!

NAMMUR EXPRESS NEWS
ತೀರ್ಥಹಳ್ಳಿ/ಮಲೆನಾಡು: ಇಡೀ ರಾಜ್ಯಾದ್ಯಂತ ಇದೀಗ ಡ್ರಗ್ಸ್‌ ಘಮಲು ಆವರಿಸುತ್ತಿದೆ. ಆದರೆ ಮಲೆನಾಡಿನ ದಟ್ಟಕಾಡುಗಳಲ್ಲಿ ಕಳೆದ ಎರಡು ದಶಕದಿಂದ ದಂಧೆಯಾಗಿ ವಿಸ್ತರಿಸುತ್ತಿರುವ ಗಾಂಜಾ ಘಮಲನ್ನು ಮಾತ್ರ ಇನ್ನೂ ಸಂಪೂರ್ಣವಾಗಿ ನಿಯಂತ್ರಿಸಲು ಸಾಧ್ಯವಾಗಿಲ್ಲ. ಇತ್ತೀಚಿನ ದಿನಗಳಲ್ಲಿ ಮಾದಕ ವಸ್ತುಗಳ ಮಾರಾಟ ಜಾಲ ತೀರ್ಥಹಳ್ಳಿಯಲ್ಲಿ ಹೆಚ್ಚಾಗಿದೆ . ಅದರಲ್ಲೂ ಗಾಂಜಾ ಮಾರಾಟ ಎಗ್ಗಿಲ್ಲದೇ ಸಾಗಿದ್ದು , ಯುವ ಸಮೂಹ ಗಾಂಜಾ ಸೇದಿ ಅರೆಪ್ರಜ್ಞಾ ಸ್ಥಿತಿಗೆ ತಲುಪಿ, ಮನಬಂದಂತೆ ವರ್ತಿಸೋದು ಕಾಮನ್ ಆಗಿದೆ. ಮಾದಕ ವಸ್ತುಗಳ ಅಕ್ರಮ ಮಾರಾಟ ಜಾಲ ಇದೆ ಎಂಬ ಆರೋಪ ಬಹಳ ದಿನದಿಂದ ಕೇಳಿಬಂದಿತ್ತು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿದ್ದರೂ ಕೂಡ ಗಾಂಜಾ ಹಾವಳಿ ಕಡಿಮೆಯಾಗಿಲ್ಲ. ಆದರೂ ತೀರ್ಥಹಳ್ಳಿ ತಾಲೂಕಿನ ಹಲವೆಡೆ ಗಾಂಜಾ ಸೇವನೆಯ ಪ್ರಕರಣಗಳು ಪತ್ತೆಯಾಗುತ್ತಿದೆ.

ಪೊಲೀಸ್ ಇಲಾಖೆ ಖಡಕ್ ಕ್ರಮ

ಇತ್ತೀಚೆಗೆ ತೀರ್ಥಹಳ್ಳಿಯ ಡಿ ವೈ ಎಸ್ ಪಿ ಗಜಾನನ ವಾಮನಸುತಾರ ನೇತೃತ್ವದಲ್ಲಿ ಪೊಲೀಸ್ ಇಲಾಖೆಯ ಎಲ್ಲಾ ಅಧಿಕಾರಿಗಳು, ಸಿಬ್ಬಂದಿಗಳು ಅನೇಕ ಕಡೆ ದಾಳಿ ಮಾಡಿ ಗಾಂಜಾವನ್ನು ಪತ್ತೆ ಮಾಡಿದ್ದಾರೆ. ಜೊತೆಗೆ ಗಾಂಜಾ ಸೇವನೆ ಮಾಡುತ್ತಿದ್ದವರನ್ನು ಅರೆಸ್ಟ್ ಮಾಡಿ ಕಾನೂನು ಕ್ರಮ ಕೈಗೊಂಡಿದ್ದಾರೆ. ಆದರೂ ಕೂಡ ಗಾಂಜಾ ನಶೆ ಕಡಿಮೆಯಾಗಿಲ್ಲ.

ಯುವಕರೇ ಗಾಂಜಾ ದಂಧೆ ಟಾರ್ಗೆಟ್!

ತೀರ್ಥಹಳ್ಳಿ ತಾಲೂಕು ಗಾಂಜಾದ ನಶೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಸ್ಥಳೀಯರು ಮಾಹಿತಿ ನೀಡುತ್ತಿದ್ದಾರೆ. ಇತ್ತೀಚೆಗಷ್ಟೇ ಗಾಂಜಾ ಸಾಗಿಸುವವರು ಹಾಗೂ ಗಾಂಜಾ ಸೇವನೆ ಮಾಡುತ್ತಿದ್ದ ಆರೋಪಿಗಳನ್ನು ಅರೆಸ್ಟ್ ಮಾಡಿದ ಘಟನೆಗಳು ಎಲ್ಲೆಡೆ ವರದಿಯಾಗುತ್ತಿದೆ. ಅನೇಕ ಕಾಲೇಜುಗಳ ಬಳಿ ಇದರ ಮಾರಾಟ ನಡೆಯುತ್ತಿದೆ. ಆಗಾಗ್ಗೆ ನಡೆದ ದಾಳಿಯಲ್ಲಿ ಆರೋಪಿಗಳು ಸಿಕ್ಕಿ ಬೀಳುತ್ತಲೂ ಇದ್ದಾರೆ. ಇತ್ತೀಚೆಗೆ ಯುವಕರು ಹೆಚ್ಚು ಹೆಚ್ಚು ಇದರ ದಾಸರಾಗುತ್ತಿದ್ದಾರೆ ಎನ್ನಲಾಗುತ್ತಿದ್ದು, ಪೋಷಕರು ಆತಂಕದಲ್ಲಿದ್ದಾರೆ.

Categories
ತೀರ್ಥಹಳ್ಳಿ

ಚುನಾವಣೆಗೆ ಹರಿಯಲಿದಿಯಾ ಹಣದ ಹೊಳೆ?

ಚುನಾವಣೆಗೆ ಹರಿಯಲಿದಿಯಾ ಹಣದ ಹೊಳೆ?
– ಹಣದ ಹರಿವು ತಡೆಯಲು ತಪಾಸಣೆ ರೂಪದಲ್ಲಿ ಬ್ರೇಕ್
– ಎಲ್ಲೆಡೆ ಚೆಕ್ ಪೋಸ್ಟ್ ನಿಯೋಜನೆ: ಆದ್ರೂ ಓಡಾಡುತ್ತೆ!

NAMMUR EXPRESS NEWS
ತೀರ್ಥಹಳ್ಳಿ: ರಾಜ್ಯದಲ್ಲಿ ಎರಡನೇ ಹಂತದ ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಈ ನಡುವೆ ರಾಜ್ಯದಲ್ಲಿ 14 ಕ್ಷೇತ್ರಗಳಲ್ಲಿ ಚುನಾವಣೆ ಬಾಕಿ ಇದೆ. ಚುನಾವಣಾ ಆಯೋಗದ ಅಧಿಸೂಚನೆಯಿಂದ ಭಾರೀ ಪ್ರಮಾಣದ ನಗದನ್ನು ವಶಪಡಿಸಿಕೊಳ್ಳಲಾಗಿದೆ. ಆದರೆ ಕಳೆದ ಏಪ್ರಿಲ್ 26ರಂದು ನಡೆದ ಚುನಾವಣೆಯಲ್ಲಿ ಅತಿ ಹೆಚ್ಚು ಹಣ ಮತ್ತು ಮಧ್ಯ ಕಡಿಮೆಯಾಗಿದ್ದು ಕಂಡು ಬಂದಿತು. ಆದರೆ ಈ ಎರಡನೇ ಹಂತದ ಮತದಾನದ ವೇಳೆ ಅನೇಕ ಕಡೆ ದುಡ್ಡು ಮತ್ತು ಮದ್ಯದ ಹೊಳೆ ಹರಿಯಲಿದೆಯಾ? ಎಂಬ ಪ್ರಶ್ನೆ ಇದೀಗ ಜನರಲ್ಲಿ ಮೂಡಿದೆ.

ಈ ಬಾರಿ ಯಾವುದೇ ಆಮಿಷಗಳು ಮತ್ತು ಒತ್ತಡಗಳಿಲ್ಲದೆ ಶಾಂತಿಯುತವಾಗಿ ಚುನಾವಣೆ ನಡೆಸಲು ಚುನಾವಣಾ ಆಯೋಗ ವಿಸ್ತೃತ ವ್ಯವಸ್ಥೆಗಳನ್ನು ಮಾಡುತ್ತಿದೆ. ಇದರ ಭಾಗವಾಗಿ ಎಲ್ಲೆಡೆ ಚೆಕ್ ಪೋಸ್ಟ್ ಗಳನ್ನು ನಿಯೋಜಿಸಲಾಗಿದೆ. ಹೆಚ್ಚು ನಗದು ಸಾಗಾಟ ಮಾಡುವುದು ಕಂಡುಬಂದಲ್ಲಿ ನಗದನ್ನು ವಶಪಡಿಸಿಕೊಳ್ಳಲಾಗಿದೆ. ಈಗಾಗಲೇ ರಾಜ್ಯದಲ್ಲಿ ಮೊದಲ ಹಂತದ ಚುನಾವಣೆ ಮುಗಿದಿದೆ. ಮೇ 7ರಂದು ಎರಡನೇ ಹಂತದ ಮತದಾನ ನಡೆಯಲಿದೆ. ಆದರೆ ಎರಡೂ ರಾಜ್ಯಗಳಲ್ಲಿ ಹಣದ ಹರಿವು ತಡೆಯಲು ತಪಾಸಣೆ ರೂಪದಲ್ಲಿ ಬ್ರೇಕ್ ಹಾಕಲಾಗಿದೆ. ಆದ್ರೂ ಕುರುಡು ಕಾಂಚಾಣ ಕುಣಿಯುವ ಸಾಧ್ಯತೆ ಇದೆ.