Categories
ಶಿವಮೊಗ್ಗ

ಟಾಪ್ 5 ನ್ಯೂಸ್ ಶಿವಮೊಗ್ಗ

ಟಾಪ್ 5 ನ್ಯೂಸ್ ಶಿವಮೊಗ್ಗ

ಕಲಬೆರಕೆ ಫುಡ್ ಮಾಫಿಯಾ..!
ಶಿವಮೊಗ್ಗ: ಹೋಟೆಲ್, ಫುಡ್ ಕೋರ್ಟ್ ಅಂಗಡಿಗಳಿಗೆ ನೋಟಿಸ್‌!

– ಭದ್ರಾವತಿ: ಬ್ರಿಡ್ಜ್ ಕೆಳಗೆ ಪತ್ತೆಯಾಯ್ತು ಗೋತ್ಯಾಜ್ಯ!
– ಶಿವಮೊಗ್ಗ: ನೇಣಿಗೆ ಶರಣಾದ ವೃದ್ಧ ಮಹಿಳೆ
– ಶಿಕಾರಿಪುರ: ಲೈಂಗಿಕ ದೌರ್ಜನ್ಯ: ಆರೋಪಿಗೆ ಜೀವಾವಧಿ ಶಿಕ್ಷೆ
– ಶಿವಮೊಗ್ಗ : ನವಜಾತ ಮಗು ಎಸೆದು ಹೋದ ತಾಯಿ: ಮಗು ಸಾವು

NAMMUR EXPRESS NEWS
ಶಿವಮೊಗ್ಗ: ಶಿವಮೊಗ್ಗ ನಗರದಲ್ಲಿನ ಕೆಲವು ಅಂಗಡಿಗಳಲ್ಲಿ ಗ್ರಾಹಕರಿಗೆ ನೀಡುವ ಆಹಾರದ ಬಗ್ಗೆ ಸಾರ್ವಜನಿಕರಿಂದ ಈಗೀಗ ಹೆಚ್ಚಾಗಿ ದೂರು ಗಳು ಬರುತ್ತಿರುವುದರ ನಡುವೆಯೇ ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಅಧಿಕಾರಿಗಳ ತಂಡವು ದಾಳಿ ನಡೆಸಿ ಅಲ್ಲಿನ ಅಂಗಡಿಗಳ ಆಹಾರದ ಗುಣಮಟ್ಟ ಪರಿಶೀಲನೆ ನಡೆಸಿದೆ.
ಅಧಿಕಾರಿಗಳು ದಾಳಿ ನಡೆಸಿದ ವೇಳೆ ಆಹಾರಕ್ಕೆ ಬೆರೆಸುವ ಕಲರ್ ಪ್ಯಾಕೆಟ್ ದೊರೆತಿದೆ. ಅಲ್ಲಿನ ಸಿಬ್ಬಂದಿಗಳ ಸ್ವಚ್ಛತೆ ಕಾಣದೆ ಇರುವುದು. ವೈದ್ಯಕೀಯ ತಪಾಸಣೆ ಇಲ್ಲದಿರುವುದು ಎಲ್ಲವೂ ಅಧಿಕಾರಿಗಳ ಗಮನಕ್ಕೆ ಬಂದಿತ್ತಲ್ಲದೆ, ಕಲಬೆರೆಕೆ ಪದಾರ್ಥ ತಯಾರಿಕೆ ಸಂಬಂಧ 15 ತಿನಿಸು ಅಂಗಡಿಗಳಿಗೆ ನೋಟೀಸ್ ನೀಡಿದ ಘಟನೆ ನೆಡೆದಿದೆ. ಆರೋಗ್ಯಕ್ಕೆ ಮಾರಕವಾಗುವ ಕಲಬೆರೆಕೆ ಬಣ್ಣವನ್ನು ಹಾಕಲಾಗುತ್ತಿದೆ ಎಂದು ಸಾರ್ವಜನಿಕರ ದೂರುಗಳ ಹಿನ್ನೆಲೆಯಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಅಧಿಕಾರಿಗಳ ತಂಡವು ಅಲ್ಲಿಗೆ ದಾಳಿ ನಡೆಸಿತ್ತು. ಸುಮಾರು 15 ಅಂಗಡಿಗಳಿಗೆ ನೋಟೀಸ್ ನೀಡಲಾಗಿದೆ.

– ಭದ್ರಾವತಿ: ಬ್ರಿಡ್ಜ್ ಕೆಳಗೆ ಪತ್ತೆಯಾಯ್ತು ಗೋತ್ಯಾಜ್ಯ!

ಭದ್ರಾವತಿ: ಭದ್ರಾವತಿಯ ಕಾಗೆ ಕೋಡಮಗ್ಗೆಯ ಬ್ರಿಡ್ಜ್ ಕೆಳಗೆ ರಾಶಿ ರಾಶಿ ಗೋತ್ಯಾಜ್ಯಗಳು ಪತ್ತೆಯಾಗಿದ್ದು ಈ ಕುರಿತು ಹಿಂದೂ ಸಂಘಟನೆಗಳು ಪೊಲೀಸರಿಗೆ ದೂರು ನೀಡಿದ್ದಾರೆ. ಕಾಗೆ ಕೋಡ್ ಮಗ್ಗೆ ದಾರಿಯಲ್ಲಿ ಇರುವ ಕಾಗೆಹಳ್ಳ ಬ್ರಿಡ್ಜ್ ನ ಬಳಿಯಲ್ಲಿ ಕೆಟ್ಟ ದುರ್ವಾಸನೆ ಬರುತ್ತಿದ್ದ ಪರಿಣಾಮ ಹಿಂದೂ ಸಂಘಟನೆ ಯುವಕರು ಹೋಗಿ ನೋಡಿದಾಗ ಗೋವಿನ ತಲೆಯ ಕೊಂಬು, ಮೂಳೆ ಮತ್ತು ಗೋವಿನ ಬೋಟಿ ಖಲಿಜಗಳು ಪತ್ತೆಯಾಗಿವೆ. ಸುಮಾರು10 ರಿಂದ 15ಕ್ಕಿಂತ ಹೆಚ್ಚು ಗೋವುಗಳನ್ನು ಹತ್ಯೆ ಮಾಡಿ ತಂದು ಹಾಕಿರುವ ಬಗ್ಗೆ ಅನುಮಾನ ವ್ಯಕ್ತಾಗಿದೆ. ಹತ್ತರಿಂದ ಹದಿನೈದು ಚೀಲಗಳು ಗೋವುಗಳ ಖಲಿಜಗಳು ತಂದು ನೀರಿನಲ್ಲಿ ಎಸೆದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ .
ಗೋವಿನ ಖನಿಜಗಳನ್ನು ತಂದು ವ್ಯವಸಾಯಕ್ಕೆ ಉಪಯೋಗಿಸುವ ನೀರಿನಲ್ಲಿ ಹಾಕಿರುವುದರಿಂದ ಪರಿಸರ ಮಾಲಿನ್ಯವಾಗಿರುವುದಾಗಿ ಹಿಂದೂ ಸಂಘಟನೆಗಳು ದೂರಿವೆ. ಈ ಮುಂಚೆ ಇದೇ ವಿಚಾರವಾಗಿ ಠಾಣೆಗೆ ದೂರು ನೀಡಿದರು ಗೋ ಹತ್ಯೆ ಮಾಡಿ ಗೋವುಗಳ ಖನಿಜವನ್ನು ತಂದು ನೀರಿಗೆ ಬಿಸಾಕುವ ಕೆಲಸ ಮುಂದುವರೆದಿರುವ ಬಗ್ಗೆ ಕಳವಳ ವ್ಯಕ್ತಪಡಿಸಲಾಗಿದೆ.

– ಶಿವಮೊಗ್ಗ : ನೇಣಿಗೆ ಶರಣಾದ ವೃದ್ಧ ಮಹಿಳೆ

ಶಿವಮೊಗ್ಗ : ರಾಮಣ್ಣ ಶ್ರೇಷ್ಠಿ ಪಾರ್ಕ್ ಬಳಿ ವಿಜಯ ಎಂಬ 65 ವರ್ಷದ ವೃದ್ದ ಮಹಿಳೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮನೆಯಲ್ಲೇ ನೇಣು
ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರಿಗೆ ಮೂವರು ಮಕ್ಕಳಿರುವುದಾಗಿ ತಿಳಿದು ಬಂದಿದೆ. ಸಂಜೆ ಮನೆಯಲ್ಲಿ ಮಹಡಿ ಮೇಲೆ ಹೋಗಲು ಇರುವ ಕಬ್ಬಿಣದ ಮೆಟ್ಟಿಲಿಗೆ ಸೀರೆ ಬಿಗಿದುಕೊಂಡು ಮಹಿಳೆ ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ. ಮೃತದೇಹವನ್ನ ಮರಣೋತ್ತರ ಕೇಂದ್ರಕ್ಕೆ ರವಾನಿಸಲಾಗಿದೆ.

ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಗೆ ಜೀವಾವಧಿ ಕಠಿಣ ಜೈಲು

ಶಿವಮೊಗ್ಗ :- ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ 23 ವರ್ಷದ ಶಿಕಾರಿಪುರ ತಾಲೂಕಿನ ಯುವಕನೊಬ್ಬನಿಗೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 50 ಸಾವಿರ ರೂ. ದಂಡ ಕಟ್ಟಲು ವಿಫಲವಾದರೆ 4 ತಿಂಗಳು ಸಾದಾ ಕಾರಾವಾಸ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ. ಬಾಲಕಿಗೆ ಪರಿಹಾರವಾಗಿ ದಂಡದ ಮೊತ್ತದಲ್ಲಿ 45 ಸಾವಿರ ರೂ. ಹಾಗೂ ಸರ್ಕಾರದ ವತಿಯಿಂದ 7 ಲಕ್ಷ ರೂ. ನೀಡುವಂತೆ ಆದೇಶಿಸಲಾಗಿದೆ. ಸರ್ಕಾರದ ಪರವಾಗಿ ಅಭಿಯೋಜಕ ಎಸ್.ಹರಿಪ್ರಸಾದ್ ವಾದ ಮಂಡಿಸಿದ್ದರು.

– ಶಿವಮೊಗ್ಗ : ನವಜಾತ ಮಗು ಬಿಟ್ಟು ತಾಯಿ ನಾಪತ್ತೆ, ಮಗು ಸಾವು

ಶಿವಮೊಗ್ಗ : ಜನಿಸಿದ ಮಗುವನ್ನು ಅಲ್ಲಿಯೇ ಬಿಟ್ಟು ತಾಯಿ ಪರಾರಿಯಾಗಿರುವುದು ಹಾಗೂ ಮಗು ಸಾವು ಕಂಡಿರುವ ದುರಂತದ ರಾ ಘಟನೆ ಶಿವಮೊಗ್ಗ ಜಿಲ್ಲೆಯ ಹೊನ್ನಾಳಿ ರಸ್ತೆಯ ಹೊಳಲೂರು ಮುಖ್ಯ ರಸ್ತೆಯಲ್ಲಿ ನಡೆದಿದೆ. ಹೊಳಲೂರಿನಿಂದ ಹೊಳೆಹೊಟ್ಟಿಗೆ ಹೋಗುವ ಮಾರ್ಗದಲ್ಲಿ ಇರುವಂತಹ ವೆಲ್ಡಿಂಗ್ ಶಾಪ್ ಎದುರು ಬಯಲಿನ ಜಾಗದಲ್ಲಿ ರಾತ್ರಿ ಮಗುವೊಂದಕ್ಕೆ ತಾಯಿ ಇಲ್ಲಿ ಜನ್ಮ ನೀಡಿದ್ದಾಳೆ. ಮಗುವನ್ನು ಅಲ್ಲಿಯೇ ಬಿಟ್ಟು ತಾಯಿ ಹಾಗೂ ಆಕೆಯ ಜೊತೆ ಬಂದವರು ನಾಪತ್ತೆಯಾಗಿದ್ದು, ಮಗು ಸಾವು ಕಂಡಿದೆ. ಇದು ಗಂಡು ಮಗುವಾಗಿದ್ದು 9 ತಿಂಗಳು ಮುಗಿಯುವ ಮುನ್ನವೇ ಜನಿಸಿದೆ ಎನ್ನಲಾಗಿದೆ. ಗುರುವಾರ ಬೆಳಿಗ್ಗೆ ಘಟನೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಶಿವಮೊಗ್ಗ ಗ್ರಾಮಾಂತರ ಪೊಲೀಸರು ಭೇಟಿ ನೀಡಿದ್ದು ಮಗುವಿನ ಅಂತ್ಯ ಸಂಸ್ಕಾರವನ್ನು ಮುಗಿಸಿದ್ದಾರೆ ಎನ್ನಲಾಗಿದೆ.

Categories
ಮಂಗಳೂರು

ಮಂಗಳೂರು ವಿವಿ ಯಕ್ಷಮಂಗಳ ಪ್ರಶಸ್ತಿ ಪ್ರಕಟ

ಮಂಗಳೂರು ವಿವಿ ಯಕ್ಷಮಂಗಳ ಪ್ರಶಸ್ತಿ ಪ್ರಕಟ

– ಶ್ರೀಧರ ಹಂದೆ, ಎಂ.ಕೆ. ರಮೇಶ್ ಆಚಾರ್ಯ ಅವರಿಗೆ ಯಕ್ಷಮಂಗಳ ಪ್ರಶಸ್ತಿ
– ಕಲ್ಚಾರ್ ಅವರ ಪೀಠಿಕಾ ಪ್ರಕರಣ ಗ್ರಂಥಕ್ಕೆ ಕೃತಿ ಪ್ರಶಸ್ತಿ

NAMMUR EXPRESS NEWS
ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಡಾ.ಪಿ. ದಯಾನಂದ ಪೈ ಮತ್ತು ಪಿ. ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ 2022-23ನೇ ಸಾಲಿನ ಯಕ್ಷಮಂಗಳ ಪ್ರಶಸ್ತಿ ಪ್ರಕಟಗೊಂಡಿದೆ.
ಯಕ್ಷಮಂಗಳ ಪ್ರಶಸ್ತಿಗೆ ಮಕ್ಕಳ ಮೇಳ ಸಾಲಿಗ್ರಾಮದ ಸಂಚಾಲಕರು ಹಾಗೂ ಹಿರಿಯ ಯಕ್ಷಗಾನ ಕಲಾವಿದ, ಸಂಘಟಕ ಶ್ರೀಧರ ಹಂದೆ ಮತ್ತು ತೆಂಕು-ಬಡಗುತಿಟ್ಟಿನ ಹಿರಿಯ ಸ್ತ್ರೀವೇಷ ಕಲಾವಿದ ಎಂ.ಕೆ. ರಮೇಶ್ ಆಚಾರ್ಯ ಅವರು ಆಯ್ಕೆಯಾಗಿದ್ದಾರೆ. ಯಕ್ಷಮಂಗಳ ಕೃತಿ ಪ್ರಶಸ್ತಿಗೆ ರಾಧಾಕೃಷ್ಣ ಕಲ್ಚಾರ್ ಅವರ ‘ಪೀಠಿಕಾ ಪ್ರಕರಣ’ ಕೃತಿಯು ಆಯ್ಕೆಯಾಗಿದೆ.
ಯಕ್ಷಮಂಗಳ ಪ್ರಶಸ್ತಿಯು 25,000 ನಗದು, ಪ್ರಶಸ್ತಿ ಪತ್ರ, ಸ್ಮರಣಿಕೆ ಮತ್ತು ಸನ್ಮಾನವನ್ನು ಒಳಗೊಂಡಿದೆ. ಯಕ್ಷಮಂಗಳ ಕೃತಿ ಪ್ರಶಸ್ತಿಯು 10,000 ನಗದು, ಪ್ರಶಸ್ತಿ, ಸ್ಮರಣಿಕೆಗಳನ್ನು ಒಳಗೊಂಡಿದೆ.

ಜಾನಪದ ವಿದ್ವಾಂಸರಾದ ಡಾ.ಕೆ.ಚಿನ್ನಪ್ಪ ಗೌಡ ಅವರ ನೇತೃತ್ವದಲ್ಲಿ ಪ್ರೊ. ಪಾದೆಕಲ್ಲು ವಿಷ್ಣುಭಟ್ , ಯಕ್ಷಗಾನ ಸಂಘಟಕರಾದ ಮುರಳಿ ಕಡೇಕಾರ್ ಹಾಗೂ ಕೇಂದ್ರದ ನಿರ್ದೇಶಕರಾದ ಡಾ. ಧನಂಜಯ ಕುಂಬ್ಳೆ ಅವರನ್ನು ಒಳಗೊಂಡಿರುವ ಆಯ್ಕೆ ಸಮಿತಿಯ‌ ಸಭೆಯಲ್ಲಿ ಈ ಹೆಸರು ಸರ್ವಾನುಮತದಿಂದ ಶಿಫಾರಸು ಮಾಡಲಾಯಿತು.
ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್.ಧರ್ಮ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಯಕ್ಷಮಂಗಳ ಪ್ರಶಸ್ತಿ ಪ್ರದಾನ‌ ಮಾಡಲಾಗುವುದು ಎಂದು ಮಂಗಳೂರು ವಿವಿ ಕುಲಸಚಿವ ರಾಜು ಮೊಗವೀರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Categories
ರಾಜ್ಯ

ಟಾಪ್ 3 ನ್ಯೂಸ್

ಟಾಪ್ 3 ನ್ಯೂಸ್

ಎಂಜಿನಿಯರಿಂಗ್ ಮಾಡುವ ಕನಸು ಈಗ ನನಸು!
– 8 ಸಾವಿರಕ್ಕೂ ಹೆಚ್ಚು ಎಂಜಿನಿಯರಿಂಗ್ ಸೀಟು ಹೆಚ್ಚಳ

ಸಾರಿಗೆ ನೌಕರರು ಮುಷ್ಕರ ಮಾಡುವಂತಿಲ್ಲ..!
– ಸರ್ಕಾರದಿಂದ ಮಹತ್ವದ ಆದೇಶ:

NAMMUR EXPRESS NEWS
ಬೆಂಗಳೂರು : ಎಂಜಿನಿಯರಿಂಗ್ ಮಾಡುವ ಕನಸು ಕಾಣುತ್ತಿರುವ ವಿದ್ಯಾರ್ಥಿಗಳಿಗೆ ಸಿಹಿಸುದ್ದಿ ಸಿಕ್ಕಿದ್ದು, ಈ ವರ್ಷ ಹೆಚ್ಚುವರಿಯಾಗಿ ಎಂಟು ಸಾವಿರಕ್ಕೂ ಹೆಚ್ಚು ಎಂಜಿನಿಯರಿಂಗ್ ಸೀಟುಗಳು ವಿದ್ಯಾರ್ಥಿಗಳಿಗೆ ಸಿಗಲಿವೆ. ಎಂಜಿನಿಯರಿಂಗ್‌ ಸೀಟುಗಳಿಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ ಇನ್ ಟೇಕ್ ಸಡಿಲಗೊಳಿಸಿದ ಪರಿಣಾಮ ಈ ವರ್ಷ ಎಂಟು ಸಾವಿರಕ್ಕೂ ಹೆಚ್ಚು ಸೀಟುಗಳು ಸಿಗಲಿವೆ. 2024-25ನೇ ಸಾಲಿನ ಎಂಜಿನಿಯರಿಂಗ್ ಪ್ರವೇಶಕ್ಕೆ ಎಲ್ಲ ಮಾದರಿಯ 245 ಎಂಜಿನಿಯರಿಂಗ್ ಕಾಲೇಜುಗಳಿಂದ 1,32,309 ಸೀಟುಗಳ ಇನ್ ಟೆಕ್ ಇದ್ದು, ಈ ಪೈಕಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ 62,930 ಸೀಟುಗಳ ಲಭ್ಯವಾಗಿದೆ. ಈ ವರ್ಷದ ಸೀಟುಗಳನ್ನು ಕಳೆದ ವರ್ಷಕ್ಕೆ ಹೋಲಿಸಿದರೆ ಒಟ್ಟು 7,758ಸೀಟುಗಳು ಹಾಗೂ ಕೆಇಎ ಪಾಲಿಗೆ 4,085 ಸೀಟುಗಲೂ ಲಭ್ಯವಾಗಿವೆ.

ಸಾರಿಗೆ ನೌಕರರು ಮುಷ್ಕರ ಮಾಡುವಂತಿಲ್ಲ..!
– ಸರ್ಕಾರದಿಂದ ಮಹತ್ವದ ಆದೇಶ: ಮುಷ್ಕರ ಹಾಗೂ ಪ್ರತಿಭಟನೆಗೆ ಬ್ರೇಕ್?

ಬೆಂಗಳೂರು : ಸಾರಿಗೆ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರು ಯಾವುದೇ ಕಾರಣಕ್ಕೂ ಮುಷ್ಕರ, ಪ್ರತಿಭಟನೆ, ಹರತಾಳ ಹಾಗೂ ಅಸಹಕಾರ ಚಳುವಳಿಗಳನ್ನು ಮಾಡುವಂತಿಲ್ಲ ಎಂದು ಸರ್ಕಾರ ಆದೇಶ ಹೊರಡಿಸಿದೆ. ಮುಂದಿನ ಆರು ತಿಂಗಳು ಯಾವುದೇ ಸಮಸ್ಯೆಗಳಿದ್ದರೂ ಸಹ ಅವರು ಪ್ರತಿಭಟನೆ ನಡೆಸುವಂತಿಲ್ಲ ಎಂದು ಸರ್ಕಾರ ಅಧಿಸೂಚನೆ ಹೊರಡಿಸಿದು, ಇದು ಸಾರಿಗೆ ಕಾರ್ಮಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಸಾರಿಗೆ ಇಲಾಖೆಯ ನೌಕರರು ಹತ್ತು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಈ ಹಿಂದೆಯೂ ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದರು. ಬಿಜೆಪಿ ಸರ್ಕಾರದ ಆಡಳಿತದಲ್ಲಿ ಸತತವಾಗಿ ಹತ್ತಾರು ದಿನ ಮುಷ್ಕರ ನಡೆಸಿದ್ದರು. ಆಗ ಸಾರಿಗೆ ಕಾರ್ಮಿಕರೊಡನೆ ಮಾತುಕತೆ ನಡೆಸಿದ್ದ ಕಾಂಗ್ರೆಸ್‌ ಪಕ್ಷವು ತಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿತ್ತು. ಸಧ್ಯಕ್ಕೆ ಶಕ್ತಿ ಯೋಜನೆಯಿಂದಾಗಿ ಸಾರಿಗೆ ಇಲಾಖೆಯ ಸಿಬ್ಬಂದಿಗಳ ಮೇಲೆ ಒತ್ತಡ ಹೆಚ್ಚುತ್ತಿದೆ. ಜೊತೆಗೆ, ಶಕ್ತಿ ಯೋಜನೆಗೆ ಹಣ ಹೊಂದಿಸುವ ಸಲುವಾಗಿ ಸಾರಿಗೆ ಇಲಾಖೆ ನೌಕರರ ಹಿತಾಸಕ್ತಿಯನ್ನೂ ಸಹ ಕಡೆಗಣಿಸುತ್ತಿರುವ ಆರೋಪ ಕೇಳಿಬಂದಿದೆ. ಈಗ ಮುಷ್ಕರ ಹಾಗೂ ಪ್ರತಿಭಟನೆ ನಡೆಸುವ ಅವಕಾಶಕ್ಕೂ ಸಹ ತಡೆಯೊಡ್ಡಿರುವುದು ಕಾರ್ಮಿಕರ ಆಕ್ರೋಶಕ್ಕೆ ಕಾರಣವಾಗಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಬಿಜೆಪಿಗೆ ನಂಟು!
– ಸೀಸ್ ಆದ ಹಣ ಕೊಟ್ಟಿದ್ದು ಬಿಜೆಪಿ ಮುಖಂಡ: ತನಿಖೆ ಶುರು

ಬೆಂಗಳೂರು: ನಟ ದರ್ಶನ್ ಮನೆಯಲ್ಲಿ 70 ರೂ. ವಶಪಡಿಸಿಕೊಂಡ ಹಣದಲ್ಲಿ 40 ಲಕ್ಷ ಹಣ ಕೊಟ್ಟದ್ದು ಮೋಹನ್ ರಾಜ್ ಎಂದು ಕಾಮಾಕ್ಷಿ ಪಾಳ್ಯ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ. ದರ್ಶನ್ ಗೆ ಹಣ ಕೊಟ್ಟಿರುವ ಮೋಹನ್ ರಾಜ್ ಶಾಸಕರೊಬ್ಬರ ಆಪ್ತರು ಎಂದು ತಿಳಿದು ಬಂದಿದೆ. ತನ್ನ ಹೆಸರು ಹೊರಗಡೆ ಬರುತ್ತಿದ್ದಂತೆ ಮೋಹನ್ ರಾಜ್ ಎಂಬುವವರು ಪೋನ್ ಸ್ವೀಚ್‌ ಆಫ್ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲ ಮೋಹನ್ ರಾಜ್ ಕೂಡ ಬಿಜೆಪಿ ಪಕ್ಷದೊಡನೆ ಗುರುತಿಸಿಕೊಂಡಿದ್ದಾರೆ.
ಆದರೆ ಈ ಬಗ್ಗೆ ತನಿಖೆ ನಡೆಸುತ್ತಿರುವ ಕಾಮಾಕ್ಷಿ ಪಾಳ್ಯ ಪೊಲೀಸರು, ಮೋಹನ್ ರಾಜ್ ಪೋನ್ ಸ್ವೀಚ್‌ ಆಫ್ ಆಗಿರುವುದರಿಂದ ಅವರ ಮನೆಗೇ ಹೋಗಿ ನೋಟಿಸ್‌ ನೀಡಲು ಮುಂದಾಗಿದ್ದಾರೆ. ವಿಚಾರಣೆ ವೇಳೆ ಬಂಧಿತರು ನೀಡಿದ ಮಾಹಿತಿ ಮೇರೆಗೆ ಮನೆಗೆ ಹೋಗಿ ನೋಟಿಸ್‌ ನೀಡಲು ಪೊಲೀಸರು ಮುಂದಾಗಿದ್ದಾರೆ. ದರ್ಶನ್ ಮನೆಯಲ್ಲಿ ವಶಪಡಿಸಿಕೊಂಡ 70 ಲಕ್ಷ ರೂ.ಗಳಲ್ಲಿ ಎಲ್ಲಿ ಎಲ್ಲಿ ಪಡೆದಿದ್ದರು ಎಂಬ ಮೂಲಗಳನ್ನು ಕೆದಕಿದಾಗ ತಿಳಿದು ಬಂದಿದೆ. ಹತ್ಯೆ ಪ್ರಕರಣದಲ್ಲಿ ಹೆಣ ಸಾಗಿಸಲು 5 ಲಕ್ಷ ರೂ., ರೇಣುಕಾಸ್ವಾಮಿಯನ್ನು ಕರೆ ತರಲು 10 ಲಕ್ಷ ಕೊಟ್ಟಿದ್ದ ಎಂದು ಪೊಲೀಸ್‌ ತನಿಖೆಯಿಂದ ತಿಳಿದು ಬಂದಿದೆ.

Categories
ಕರಾವಳಿ

ಓಲೆಗೆ ಹಾಕಿದ ಪೆಟ್ರೋಲ್ ಸುಟ್ಟು ಮಹಿಳೆ ಸಾವು!

ಓಲೆಗೆ ಹಾಕಿದ ಪೆಟ್ರೋಲ್ ಸುಟ್ಟು ಮಹಿಳೆ ಸಾವು!

– ಬೆಳ್ತಂಗಡಿ ಕೊಕ್ಕಡದಲ್ಲಿ ನಡೆದ ದುರಂತ
– ಬೆಂಕಿ ತಗುಲಿ ಗಾಯಗೊಂಡಿದ್ದ ನೇಪಾಳಿ ಮೂಲದ ಮಹಿಳೆ ಸಾವು

NAMMUR EXPRESS NEWS
ಕೊಕ್ಕಡ: ಆಕಸ್ಮಿಕವಾಗಿ ಬೆಂಕಿ ತಗುಲಿ ಸುಟ್ಟ ಗಾಯಕ್ಕೊಳಗಾಗಿದ್ದ ನೇಪಾಳಿ ಮೂಲದ ಮಹಿಳೆಯೋರ್ವರು ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಘಟನೆ ಬೆಳ್ತಂಗಡಿ ತಾಲೂಕಿನ ಕೊಕ್ಕಡದಲ್ಲಿ ನಡೆದಿದೆ.
ಮೂಲತ: ನೇಪಾಳಿಯಾಗಿದ್ದು ಕೊಕ್ಕಡ ಗ್ರಾಮದ ಮುಂಡೂರುಪಳಿಕೆ ಶಾಲೆಯ ಬಳಿ ವಾಸವಾಗಿದ್ದ ಚಕ್ರ ಬಹದ್ದೂರು ಮಲ್ಲ ಎಂಬವರ ಪತ್ನಿ ಬಸಂತಿದೇವಿ(44ವ.) ಮೃತಪಟ್ಟವರು. ಇವರು ಜೂ.11ರಂದು ಸಂಜೆ ಅಡುಗೆ ಮಾಡುವ ಸಲುವಾಗಿ ಸೌದೆ ಉರಿಸಲು ಮನೆಯಲ್ಲಿ ತೋಟದ ಕೆಲಸಕ್ಕೆ ತಂದಿಟ್ಟಿದ್ದ ಪೆಟ್ರೋಲ್ ಬಳಸಿದಾಗ ಆಕಸ್ಮಿಕವಾಗಿ ಒಮ್ಮೆಲೇ ಬೆಂಕಿಯು ಬಸಂತಿದೇವಿ ಧರಿಸಿದ್ದ ಬಟ್ಟೆಗೆ ತಗಲಿ ಮೈಯೆಲ್ಲ ತೀವ್ರ ತರದ ಸುಟ್ಟಗಾಯ ಉಂಟಾಗಿತ್ತು. ಅವರನ್ನು ಉಡುಪಿಯ ಆದರ್ಶ ಆಸ್ಪತ್ರೆಯ ತೀವ್ರ ನಿಗಾ ವಿಭಾಗದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಜೂ.18ರಂದು ಸಂಜೆ ಮೃತಪಟ್ಟಿದ್ದಾರೆ.
ಈ ಬಗ್ಗೆ ಚಕ್ರ ಬಹದ್ದೂರು ಅವರು ನೀಡಿರುವ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Categories
ರಾಜ್ಯ

ಮದ್ಯ ಪ್ರಿಯರಿಗೆ ಮೊದಲ ಬಾರಿ ಸಿಹಿ ಸುದ್ದಿ!

ಮದ್ಯ ಪ್ರಿಯರಿಗೆ ಮೊದಲ ಬಾರಿ ಸಿಹಿ ಸುದ್ದಿ!

– ಪ್ರೀಮಿಯಂ ಮದ್ಯ ಪ್ರಿಯರಿಗೆ ಬೆಲೆ ಇಳಿಕೆ ಕಿಕ್
– ಜುಲೈ 1ರಿಂದ ಮದ್ಯದ ದರದಲ್ಲಿ ಇಳಿಕೆ

NAMMUR EXPRESS NEWS
ಬೆಂಗಳೂರು: ಮದ್ಯ ಪ್ರಿಯರಿಗೆ ಕಿಕ್ ಏರಿಸುವ ಸುದ್ದಿಯನ್ನು ರಾಜ್ಯ ಸರಕಾರ ನೀಡಿದೆ. ಜುಲೈ 1ರಿಂದ ಮದ್ಯದ ದರಗಳನ್ನು ಸರ್ಕಾರ ಕಡಿಮೆ ಮಾಡುತ್ತಿದೆ. ಭಾರಿ ಬೆಲೆಯ ಪ್ರೀಮಿಯಂ ಬ್ರಾಂಡ್‌ಗಳು ಇಳಿಕೆಯಾಗಲಿವೆ.
ರಾಜ್ಯದಲ್ಲಿ ಸೆಮಿ ಪ್ರೀಮಿಯಂ, ಪ್ರೀಮಿಯಂ ಮದ್ಯದ ದರ ದುಬಾರಿಯಾಗಿತ್ತು. ಹೀಗಾಗಿ ನೆರೆಯ ರಾಜ್ಯಗಳಿಂದ ರಾಜ್ಯಕ್ಕೆ ಅಕ್ರಮವಾಗಿ ಮದ್ಯ ಪೂರೈಕೆಯಾಗುತ್ತಿರುವುದೂ ಕಂಡುಬರುತ್ತಿತ್ತು. ಅಷ್ಟೇ ಅಲ್ಲದೇ ಗಡಿ ಭಾಗದ ಜಿಲ್ಲೆಗಳ ಜನರು ನೆರೆಯ ರಾಜ್ಯಗಳಿಗೆ ಹೋಗಿ ಮದ್ಯ ಖರೀದಿಸುತ್ತಿದ್ದರು. ಹೀಗಾಗಿ ರಾಜ್ಯ ಸರ್ಕಾರಕ್ಕೆ ಅಬಕಾರಿ ತೆರಿಗೆ ನಷ್ಟವಾಗುತ್ತಿತ್ತು. ಇನ್ನೂ ಇತರ ರಾಜ್ಯಗಳ ಮದ್ಯದ ದರಗಳಿಗೆ ಸಮೀಪಿಸುವಂತೆ ರಾಜ್ಯದ ದರ ಪರಿಷ್ಕರಿಸುವುದಾಗಿ ಸಿಎಂ ಸಿದ್ದರಾಮಯ್ಯ ಫೆಬ್ರವರಿಯಲ್ಲಿ ಮಂಡಿಸಿದ್ದ ಬಜೆಟ್‌ನಲ್ಲಿ ಹೇಳಿದ್ದರು. ಈ ಘೋಷಣೆಯು ಇದೇ ಜುಲೈ 1 ರಿಂದ ಜಾರಿಯಾಗ್ತಿದೆ.

ಈಗ 750 ಎಂ.ಎಲ್. ಗಾತ್ರದ ಬಾಟಲಿಗೆ ₹2,000 ದರ ಇರುವ ಬ್ರಾಂಡ್‌ಗಳ ಮದ್ಯದ ದರವು ಜುಲೈ 1ರಿಂದ ₹1,700ರಿಂದ ₹1,800ಕ್ಕೆ ಇಳಿಕೆಯಾಗಲಿದೆ. ಪ್ರತಿ ಬಾಟಲಿಗೆ ₹5,000 ದರ ಇರುವ ಬ್ರಾಂಡ್ ಮದ್ಯಗಳ ದರ ₹3,700ಕ್ಕೆ ಇಳಿಯಲಿದೆ. ಪ್ರತಿ ಬಾಟಲಿಗೆ 7,100 ಇರುವ ಮದ್ಯದ ದರ 5,200ರ ಅಸುಪಾಸಿಗೆ ಕಡಿಮೆಯಾಗುವ ಸಾಧ್ಯತೆಯೂ ಇದೆ. ಅದರೆ ಎಷ್ಟು ಕಡಿಮೆಯಾಗಿದೆ ಅನ್ನೋದ್ರ ಖಚಿತ ಮಾಹಿತಿ ಜುಲೈ 1 ರ ಬಳಿಕವೇ ಗೊತ್ತಾಗಲಿದೆ. ಮದ್ಯ ಮಾರಾಟ ಹೆಚ್ಚಿಸಿ, ಅಬಕಾರಿ ತೆರಿಗೆ ಮೂಲದ ವರಮಾನವನ್ನು ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ದರ ಪರಿಷ್ಕರಣೆ ಮಾಡಲಾಗಿದೆ ಎಂದು ಹೇಳಲಾಗ್ತಿದೆ. ಮೊದಲ ಐದು ಸ್ಲಾಬ್‌ಗಳಲ್ಲಿ ಈಗ ಇರುವ ಹೆಚ್ಚುವರಿ ಅಬಕಾರಿ ತೆರಿಗೆ ವ್ಯತ್ಯಾಸವಾಗುತ್ತಿಲ್ಲ. ಆದರೆ, 6ರಿಂದ 16ನೇ ಸ್ಲಾಬ್‌ಗಳಲ್ಲಿ ಹೆಚ್ಚುವರಿ ಅಬಕಾರಿ ತೆರಿಗೆ ದರ ಗಣನೀಯವಾಗಿ ಇಳಿಕೆಯಾಗಲಿದೆ. ಈ ಬಗ್ಗೆ ಅಬಕಾರಿ ಇಲಾಖೆಯ ಉನ್ನತ ಮೂಲಗಳು ಮಾಹಿತಿ ನೀಡಿವೆ.

ಸೆಮಿ ಪ್ರೀಮಿಯಂ ಮತ್ತು ಪ್ರೀಮಿಯಂ ಸ್ಪ್ಯಾಬ್‌ಗಳ ಮದ್ಯದ ದರ ಸಾಕಷ್ಟು ದುಬಾರಿಯಾಗಿ ಇತ್ತು. ಈ ಹಿನ್ನೆಲೆಯಲ್ಲಿ ಕರಡು ಅಧಿಸೂಚನೆ ಪ್ರಕಟಿಸಿದ ಸರಕಾರ, ಜುಲೈ 1ರಿಂದ ಪರಿಷ್ಕೃತ ಮದ್ಯ ದರ ಅನ್ವಯಿಸಲಿದೆ ಎಂದು ಗೊತ್ತಾಗಿದೆ.

Categories
ಅಂತಾರಾಷ್ಟ್ರೀಯ ಸುದ್ದಿ

ಇಂದು ವಿಶ್ವ ಸಂಗೀತ ದಿನ: ಗಾಯಕರಿಗೆ ನಮ್ಮ ಗೌರವ

ಇಂದು ವಿಶ್ವ ಸಂಗೀತ ದಿನ: ಗಾಯಕರಿಗೆ ನಮ್ಮ ಗೌರವ

– ಶೃತಿ, ತಾಳ, ಲಯದೊಂದಿಗೆ ರಸದೌತಣ: ಜೀವನಕ್ಕೆ ಬೇಕು ಸಂಗೀತ
– ಸಂಗೀತ ಔಷಧವೂ ಹೌದು.. ಸಂಗೀತ ಕೇಳಿ, ಗಾಯಕರಿಗೆ ಸಿಗಲಿ ಅವಕಾಶ

NAMMUR EXPRESS NEWS
ಸಂಗೀತ ಕ್ಷೇತ್ರಕ್ಕೆ ದೊಡ್ಡ ಉಡುಗೊರೆಗಾಗಿರುವ ಸಂಗೀತಗಾರರು ಮತ್ತು ಗಾಯಕರನ್ನು ಗೌರವಿಸಲು ಪ್ರತಿವರ್ಷ ಜೂನ್ 21 ರಂದು ವಿಶ್ವ ಸಂಗೀತ ದಿನವನ್ನು ಆಚರಿಸಲಾಗುತ್ತದೆ. ಸಂಗೀತವಿಲ್ಲದ ಜಗತ್ತನ್ನು ಊಹಿಸಲೂ ಸಾಧ್ಯವಿಲ್ಲ. ಸಂಗೀತವನ್ನು ಇಷ್ಟಪಡದವರೇ ಇಲ್ಲ. ಈ ಕಲೆಯ ಶಕ್ತಿಯನ್ನು ಅರಿಯಲೇ ವಿಶ್ವ ಸಂಗೀತ ದಿನವನ್ನು ಆಚರಿಸಲಾಗುತ್ತದೆ.
ಫೆಟೆ ಡೆ ಲಾ ಮ್ಯೂಸಿಕ್ ಎಂದೂ ಕರೆಯಲ್ಪಡುವ ಇದನ್ನು ಯುವ ಮತ್ತು ವೃತ್ತಿಪರ ಸಂಗೀತಗಾರರಿಗೆ ತಮ್ಮ ಕಲೆ ಪ್ರದರ್ಶಿಸಲು ಪ್ರೇರೇಪಿಸುವುದಕ್ಕಾಗಿ ಆಚರಿಸಲಾಗುತ್ತದೆ. 120 ಕ್ಕೂ ಹೆಚ್ಚು ದೇಶಗಳು ವಿಶ್ವ ಸಂಗೀತ ದಿನವನ್ನು ಆಚರಿಸುತ್ತವೆ. ಮತ್ತು ಈ ವಿಶೇಷ ದಿನದಂದು ಸಂಗೀತ ಪ್ರಿಯರು ವಿಭಿನ್ನ ಸಂಗೀತ ಕಚೇರಿಗಳನ್ನು ಉದ್ಯಾನವನಗಳು, ಕ್ರೀಡಾಂಗಣಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಆಯೋಜಿಸಿ ಈ ದಿನವನ್ನು ಆಚರಿಸುತ್ತವೆ.

ಸಂಗೀತ ದಿನದ ಮಹತ್ವ!

ಎಲ್ಲಾ ಸಂಗೀತ ಪ್ರಿಯರಿಗೆ ಉಚಿತ ಸಂಗೀತ ಕೂಟವನ್ನು ಉಣ್ಣಬಡಿಸುವ ಮತ್ತು ಹವ್ಯಾಸಿ, ವೃತ್ತಿಪರ ಸಂಗೀತಗಾರರಿಗೆ ತಮ್ಮ ಪ್ರತಿಭೆಯನ್ನು ಜಗತ್ತಿಗೆ ಪ್ರದರ್ಶಿಸಲು ವೇದಿಕೆಯನ್ನು ಒದಗಿಸಲು ವಿಶ್ವ ಸಂಗೀತ ದಿನವನ್ನು ಆಚರಿಸಲಾಗುತ್ತದೆ. ಸಂಗೀತದ ಮಹತ್ವವನ್ನು ಮತ್ತು ಅದು ಮಾನವನ ಮನಸ್ಸು ಮತ್ತು ದೇಹಕ್ಕೆ ಹೇಗೆ ಪ್ರಯೋಜನಕಾರಿಯಾಗಿದೆ ಎಂಬುದನ್ನು ಈ ದಿನ ಎತ್ತಿ ತೋರಿಸಲಾಗುತ್ತದೆ. ಅನೇಕ ಅಧ್ಯಯನಗಳು ಮತ್ತು ತಜ್ಞರು ಹೇಳುವ ಪ್ರಕಾರ ಸಂಗೀತವು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಉತ್ತಮ ನಿದ್ರೆಯನ್ನು ನೀಡುತ್ತದೆ ಮತ್ತು ನಮ್ಮ ಮನಸ್ಸಿಗೆ ಶಾಂತಿ, ಉಲ್ಲಾಸ ನೀಡಿ ಮುಂದೆ ಸಾಗಲು ಸಹಾಯ ಮಾಡುತ್ತದೆ. ಇನ್ನು ಸಂಗೀತ ಚಿಕಿತ್ಸೆಯು ಮಾನಸಿಕ ಸಮಸ್ಯೆಗಳೊಂದಿಗೆ ಹೋರಾಡುವ ಜನರಿಗೆ ಅದ್ಭುತಗಳನ್ನು ಮಾಡಿದೆ. ಹಿತವಾದ ಸಂಗೀತ ಜನರಿಗೆ ಮೂಡ್ ಫ್ರೆಶ್ ಮಾಡುತ್ತೆ. ಇದರಿಂದ ತಮ್ಮ ಉದ್ಯೋಗಗಳತ್ತ ಗಮನ ಹರಿಸಲು ಮತ್ತು ಉತ್ತಮ ಪ್ರದರ್ಶನ ನೀಡಲು ಸಹಾಯಕವಾಗಿದೆ.
ಸಂಗೀತ ಒಂದು ಕಲೆ, ಸಂಗೀತ ಒಂದು ಔಷಧಿ, ಮನಸ್ಸಿಗೆ ನೆಮ್ಮದಿ ನೀಡುವ ಒಂದು ಅಸ್ತ್ರ.

ಎಲ್ಲಾ ಗಾಯಕರು, ಸಂಗೀತಕಾರರು, ಸಂಗೀತ ಬರೆಯುವವರಿಗೆ ಧನ್ಯವಾದಗಳು.

Categories
ಉಡುಪಿ

ಉಡುಪಿ ಶ್ರೀಕೃಷ್ಣನಿಗೆ ದಿನಕ್ಕೊಂದು ತಳಿಯ ಅಕ್ಕಿ ನೈವೇದ್ಯ ಸಂಕಲ್ಪ!

ಉಡುಪಿ ಶ್ರೀಕೃಷ್ಣನಿಗೆ ದಿನಕ್ಕೊಂದು ತಳಿಯ ಅಕ್ಕಿ ನೈವೇದ್ಯ ಸಂಕಲ್ಪ!

– ಕೃಷ್ಣನಿಗೆ ೩೪೦ ತಳಿಯ ಅಕ್ಕಿಯನ್ನು ನೀಡುತ್ತೆ ತೀರ್ಥಹಳ್ಳಿಯ ಕೃಷಿ ಪ್ರಯೋಗ ಪರಿವಾರ
– ಭತ್ತದ ಬೀಜ ತಳಿ ಸಂರಕ್ಷಣೆ ಕಾರ್ಯಕ್ಕೆ ಮಠದ ಮುನ್ನುಡಿ

NAMMUR EXPRESS NEWS
ಉಡುಪಿ: ಸೋದೆ ಮಠದ ಪರ್ಯಾಯದಲ್ಲಿ ಶ್ರೀಕೃಷ್ಣನಿಗೆ ದಿನಕ್ಕೊಂದು ತಳಿಯ ಅಕ್ಕಿಯ ನೈವೇದ್ಯ ಮಾಡುವ ಸಂಕಲ್ಪ ಮಾಡಿದೆ. ಇದಕ್ಕಾಗಿ ಒಂದು ವರ್ಷಕ್ಕೆ ಸುಮಾರು ೩೪೦ ತಳಿಯ ಅಕ್ಕಿಯ ಅಗತ್ಯವನ್ನು ಸಮುದಾಯದ ಮುಂದಿಟ್ಟಿದ್ದಾರೆ. ಅದಕ್ಕೆ ಈಗಾಗಲೇ ಸ್ಪಂದಿಸಿರುವ ತೀರ್ಥಹಳ್ಳಿಯ ಕೃಷಿ ಪ್ರಯೋಗ ಪರಿವಾರ ಕಳೆದ ವರ್ಷ ತೀರ್ಥಹಳ್ಳಿ ಹಾಗೂ ಉಡುಪಿಯಲ್ಲಿ ಬೊಗಸೆ ಭತ್ತದ ಬೀಜವನ್ನು ನೀಡುವ ಮೂಲಕ ತಳಿ ಸಂರಕ್ಷಣೆ ಕಾರ್ಯಕ್ಕೆ ಚಾಲನೆ ನೀಡಿದೆ.
ಈ ಬಾರಿ ಕೂಡಾ ಅದನ್ನು ವಿಸ್ತರಿಸುವ ಕಾರ್ಯಕ್ರಮದ ಭಾಗವಾಗಿ ಇನ್ನು ಹೆಚ್ಚಿನ ರೈತರಿಗೆ ಬೊಗಸೆ ಭತ್ತದ ಬೀಜವನ್ನು ನೀಡುವ ನಿಟ್ಟಿನಲ್ಲಿ ಜೂನ್ ೨೦ ರಂದು ಸಂಜೆ ೪ ಗಂಟೆಗೆ ಪೇಜಾವರ ಮಠದ ಶ್ರೀ ರಾಮ ವಿಠಲ ಸಭಾಭವನ , ಉಡುಪಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.

ಅದಮಾರು ಮಠದ ಕಿರಿಯ ಸ್ವಾಮೀಜಿ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಬೊಗಸೆ ಭತ್ತ ಬೀಜ ಪ್ರಧಾನ ಮಾಡಲಿದ್ದಾರೆ. ಭತ್ತದ ತಳಿ ಸಂರಕ್ಷಣೆ ಜೊತೆಗೆ ಶ್ರೀ ಕೃಷ್ಣ ನಿಗೆ ಶುದ್ದ ನೈವೇಧ್ಯ ಸಮರ್ಪಿಸುವ ಚಿಂತನೆಗೆ ಕೈ ಜೋಡಿಸಲು ಆಸಕ್ತರಿರುವ ಎಲ್ಲರೂ ಕೈ ಜೋಡಿಸಬಹುದು ಎದು ಭಾರತೀಯ ಕಿಸಾನ್ ಸಂಘಗಳ ಪ್ರಧಾನ ಕಾರ್ಯಾದರ್ಶಿ ಸತ್ಯನಾರಾಯಣ ಉಡುಪ ತಿಳಿಸಿದ್ದಾರೆ.

Categories
ಕರಾವಳಿ

ಟಾಪ್ ನ್ಯೂಸ್ ಕರಾವಳಿ

ಟಾಪ್ ನ್ಯೂಸ್ ಕರಾವಳಿ

ಬಸ್ ಕಂಡಕ್ಟರ್, ಡ್ರೈವರ್, ಪ್ರಯಾಣಿಕನ ಮಾನವೀಯತೆ!
– ಉಡುಪಿ: ಬಸ್ಸಲ್ಲಿ ಸಿಕ್ಕ ಚಿನ್ನದ ಸರ ವಾಪಾಸ್ ಕೊಟ್ಟ ಘಟನೆ

– ಸುಳ್ಯ: ಕಾಂಪೌಂಡ್‌ಗೆ ಡಿಕ್ಕಿ ಹೊಡೆದ ಕಾರು: ಮೂವರಿಗೆ ಗಾಯ
– ಬಂಟ್ವಾಳ: ಖಾಸಗಿ ಬಸ್ ಡಿಕ್ಕಿ ಪ್ರಯಾಣಿಕರು ಗಂಭೀರ
– ಬಂಟ್ವಾಳ :ಮೃತದೇಹ ನೇತ್ರಾವತಿ ನದಿಯಲ್ಲಿ ಪತ್ತೆ
– ಕೋಟ: ಹೆದ್ದಾರಿ ಬದಿಯಲ್ಲಿ ಅನಾಥವಾಗಿ ನಿಂತಿದ್ದ ಲಾರಿ ತೆರವು
– ಮಂಗಳೂರು: ಟೆಂಪೋ ಡಿಕ್ಕಿ ಹೊಡೆದು ಪಾದಚಾರಿ ಸಾವು

NAMMUR EXPRESS NEWS
ಉಡುಪಿ: ಕಳೆದ ಹೋದ ಚಿನ್ನದ ಸರವನ್ನು ವಾಪಾಸ್ ಕೊಟ್ಟು ಮಾನವೀಯತೆ ಮೆರೆದ ಬಸ್ ಚಾಲಕ ಹಾಗೂ ಕಂಡಕ್ಟರ್ ಒಳ್ಳೆತನಕ್ಕೆ ಈಗ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಜೂನ್ 20 ರಂದು ಬ್ರಹ್ಮಾವರದಿಂದ ಕುಂದಾಪುರಕ್ಕೆ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಬಸ್ಸಿನಲ್ಲಿದ್ದ ಚಿನ್ನದ ಸರವನ್ನು ಕಳೆದುಕೊಂಡಿದ್ದು, ಅದನ್ನು ಬಸ್ ಕಂಡಕ್ಟರ್ ಮತ್ತು ಚಾಲಕರು ಕಂಡು ಮಾಲೀಕರಿಗೆ ಒಪ್ಪಿಸಿದ್ದಾರೆ.
ಬಾಲಕಿ ತನ್ನ ಊರಿಗೆ ವಾಪಸ್ಸಾಗುತ್ತಿದ್ದ ವೇಳೆ ಬಸ್ಸಿನಲ್ಲಿ ತನ್ನ ಚಿನ್ನದ ಸರ ಕಳೆದುಕೊಂಡಿದ್ದಾಳೆ. ಪ್ರಯಾಣಿಕರೊಬ್ಬರಿಗೆ ಚಿನ್ನದ ಸರ ಪತ್ತೆಯಾಗಿದ್ದು, ಅದನ್ನು ಬಸ್ ಚಾಲಕನಿಗೆ ಹಸ್ತಾಂತರಿಸಿದ್ದು ಬಳಿಕ ಅದನ್ನು ಮಾಲೀಕರಿಗೆ ಹಿಂತಿರುಗಿಸಿದ್ದಾರೆ.
ಬಸ್ ಏಜೆಂಟ್ ಗಿರೀಶ್ ಕುಂದಾಪುರ ಮಾತನಾಡಿ, “ಬಾಲಕಿ ಆತಂಕಗೊಂಡಿದ್ದು ಕಂಡು ನಾವು ಆಕೆಯನ್ನು ಸಂಪರ್ಕಿಸಿ ಸಮಸ್ಯೆಯ ಬಗ್ಗೆ ಕೇಳಿದೆವು. ಆರಂಭದಲ್ಲಿ ತಡಬಡಾಯಿಸಿದರೂ ನಂತರ ತಾನು ಪ್ರಯಾಣಿಸಿದ ಬಸ್ಸಿನಲ್ಲಿ ಚಿನ್ನದ ಸರ ಕಳೆದುಕೊಂಡೆ ಎಂದು ಹೇಳಿದ್ದಾಳೆ. ನಾನು ಬಸ್ ಟಿಕೆಟ್ ತೋರಿಸಲು ಕೇಳಿದೆ, ಮತ್ತು ನಾನು ಆ ಬಸ್ಸಿನ ಏಜೆಂಟ್ ಆಗಿದ್ದರಿಂದ ನಾನು ಎಪಿಎಂನ ಬಸ್ ಚಾಲಕನನ್ನು ಸಂಪರ್ಕಿಸಿದೆ. ಮಧ್ಯಾಹ್ನ ಮತ್ತೆ ಬಸ್ ಅದೇ ಮಾರ್ಗವಾಗಿ ಬಂದಾಗ, ಹುಡುಗಿಯ ಸಂಬಂಧಿಕರು ಚಿನ್ನದ ಸರವನ್ನು ಸಂಗ್ರಹಿಸಿದರು.

ಸುಳ್ಯ: ಕಾಂಪೌಂಡ್‌ಗೆ ಡಿಕ್ಕಿ ಹೊಡೆದ ಕಾರು: ಮೂವರಿಗೆ ಗಾಯ

ಸುಳ್ಯ : ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಬದಿಯ ಕಾಂಪೌಂಡ್ ಗೆ ಡಿಕ್ಕಿ ಹೊಡೆದ ಪರಿಣಾಮ ಸಮೀಪದಲ್ಲಿದ್ದ ವಿದ್ಯುತ್ ಕಂಬ ಮುರಿದಿದ್ದು, ಕಾಂಪೌಂಡ್ ಮತ್ತು ವಿದ್ಯುತ್ ಕಂಬಕ್ಕೆ ಹಾನಿಯಾಗಿ ಕಾರಿನಲ್ಲಿ ಪ್ರಯಾಣಿಸುತಿದ್ದ ಮೂವರಿಗೆ ಸಣ್ಣ ಪುಟ್ಟ ಗಾಯಗಳಾದ ಘಟನೆ ಕನಕಮಜಲು ಗ್ರಾಮದ ಕೋಡಿ ತಿರುವಿನಲ್ಲಿ ಸಂಭವಿಸಿದೆ.
ಕುಂದಾಪುರದಿಂದ ಮಡಿಕೇರಿಗೆ ತೆರಳುತ್ತಿದ್ದು, ಕುಂದಾಪುರ ಮೂಲದ ಪ್ರಯಾಣಿಕರಿದ್ದ ಕಾರು ಕೋಡಿ ತಿರುವಿನಲ್ಲಿ ಮುಂಜಾನೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ರವಿಪ್ರಕಾಶ್ ಬುಡ್ಡೆಗುತ್ತು ಅವರ ಕಾಂಪೌಂಡ್ ಗೆ ಢಿಕ್ಕಿ ಹೊಡೆದಿದ್ದು, ಪರಿಣಾಮವಾಗಿ ಇದರ ಸಮೀಪವಿದ್ದ ವಿದ್ಯುತ್ ಕಂಬ ಮುರಿದು ರಸ್ತೆಗೆ ಬಿದ್ದ ಹಿನ್ನೆಲೆಯಲ್ಲಿ ಕೆಲಕಾಲ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು ಎನ್ನಲಾಗಿದೆ.
ಕಾರಿನಲ್ಲಿ ಚಾಲಕ ಸೇರಿದಂತೆ ಮೂವರು ಪ್ರಯಾಣಿಕರಿದ್ದು, ಅವರನ್ನು ಸ್ಥಳೀಯರಾದ ಸುಣ್ಣಮೂಲೆಯ ಹಸನ್ ಗೌಸಿಯ ಮತ್ತಿತರರು ಸೇರಿ ಸುಳ್ಯದ ಸರ್ಕಾರಿ ಆಸ್ಪತ್ರೆಯಲ್ಲಿ ಹಾಗೂ ಕೆವಿಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರೆಂದು ತಿಳಿದುಬಂದಿದೆ. ಮೆಸ್ಕಾಂ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ, ವಿದ್ಯುತ್‌ ಕಂಬ ದುರಸ್ತಿ ಪಡಿಸಿದರೆಂದು ತಿಳಿದುಬಂದಿದೆ.

– ಬಂಟ್ವಾಳ: ಖಾಸಗಿ ಬಸ್ ಗಳೆರಡು ಡಿಕ್ಕಿ ಪ್ರಯಾಣಿಕರಿಗೆ ಗಾಯ

ಬಂಟ್ವಾಳ: ಖಾಸಗಿ ಬಸ್ ಗಳೆರಡು ಡಿಕ್ಕಿಯಾಗಿ ಪ್ರಯಾಣಿಕರು ಅಲ್ಪಸ್ವಲ್ಪ ಗಾಯಗಳೊಂದಿಗೆ ಅಪಾಯವಿಲ್ಲದೆ ಪಾರಾದ ಘಟನೆ ತುಂಬೆ ತಿರುವಿನಲ್ಲಿ ನಡೆದಿದೆ. ಮಂಗಳೂರು ಕಡೆಯಿಂದ ಬರುತ್ತಿದ್ದ ಎರಡು ಖಾಸಗಿ ಬಸ್ ಗಳು ಪರಸ್ಪರ ಡಿಕ್ಕಿಯಾಗಿದೆ. ಮಂಗಳೂರಿನಿಂದ
ಉಪ್ಪಿನಂಗಡಿಗೆ ಹೋಗುವ ಅರಫಾ ಬಸ್ ಮಂಗಳೂರಿನಿಂದ
ಪುತ್ತೂರು ಕಡೆಗೆ ತೆರಳುತ್ತಿದ್ದ ಸೇಫ್ ವೇ ಬಸ್ ಗೆ
ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ತುಂಬೆ ಅಪಾಯಕಾರಿ ತಿರುವಿನಿಂದ ಸ್ವಲ್ಪ ದೂರದಲ್ಲಿ ಈ ಅಪಘಾತ ಸಂಭವಿಸಿದ್ದು, ಎರಡು ಬಸ್ ಗಳ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

– ಬಂಟ್ವಾಳ : ವ್ಯಕ್ತಿಯ ಮೃತದೇಹ ನೇತ್ರಾವತಿ ನದಿಯಲ್ಲಿ ಪತ್ತೆ

ಬಂಟ್ವಾಳ : ಬಕ್ರೀದ್ ದಿನ ಸಂಜೆಯಿಂದ ನಾಪತ್ತೆಯಾಗಿದ್ದ ವ್ಯಕ್ತಿಯೋರ್ವರ ಮೃತದೇಹ ಬಿ ಸಿ ರೋಡು ಸಮೀಪದ ತಲಪಾಡಿ-ಕೆಇಬಿ ಸಬ್ ಸ್ಟೇಷನ್ ಬಳಿ ನೇತ್ರಾವತಿ ನದಿಯಲ್ಲಿ ಪತ್ತೆಯಾಗಿದೆ. ಬಿ ಸಿ ರೋಡು ಸಮೀಪದ ಕೈಕಂಬ ನಿವಾಸಿ ಕರೀಂ (61) ಮೃತ ವ್ಯಕ್ತಿ. ಬಕ್ರೀದ್ ದಿನವಾದ ಸೋಮವಾರ ಸಂಜೆ ಮನೆಯಿಂದ ಹೊರಟ ಕರೀಂ ಅವರು ಬಳಿಕ ವಾಪಾಸು ಬಂದಿರಲಿಲ್ಲ. ಈ ಬಗ್ಗೆ ಮನೆ ಮಂದಿ ಸಹಿತ ಊರ ನಾಗರಿಕರು ಹುಡುಕಾಟ ನಡೆಸಿದ್ದರು. ಇವರ ಪತ್ತೆಗಾಗಿ ಸಾಮಾಜಿಕ ಜಾಲ ತಾಣಗಳಲ್ಲೂ ಭಾವಚಿತ್ರ ಸಹಿತ ವಿವರವಾದ ಮನವಿಯನ್ನೂ ಮಾಡಲಾಗಿತ್ತು. ಆದರೆ ಇವರ ಪತ್ತೆಯಾಗಿರಲಿಲ್ಲ. ನಂತರ ತಲಪಾಡಿ ನೇತ್ರಾವತಿ ನದಿಯಲ್ಲಿ ಮೃತದೇಹ ಪತ್ತೆಯಾಗಿದೆ. ಮಾನಸಿಕವಾಗಿ ಸ್ವಲ್ಪ ಖಿನ್ನತೆಯಿಂದ ಇದ್ದ ಇವರು ಅದೇ ಕಾರಣಕ್ಕಾಗಿ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ.

– ಕೋಟ: ಹೆದ್ದಾರಿ ಬದಿಯಲ್ಲಿ ಅನಾಥವಾಗಿ ನಿಂತಿದ್ದ ಲಾರಿ ತೆರವು

ಕೋಟ: ರಾಷ್ಟ್ರೀಯ ಹೆದ್ದಾರಿ 66 ರ ಕೋಟ ಪೆಟ್ರೋಲ್ ಬಂಕ್ ಬಳಿ ಸುಮಾರು ಎರಡು ತಿಂಗಳಿಂದ ಗುಜರಾತ್ ನೊಂದಾವಣಿಯ ಲಾರಿ ಯೊಂದು ಅನಾಥವಾಗಿ ನಿಂತಿದ್ದು. ಅದನ್ನು ಕೊನೆಗೂ ಕೋಟ ಆರಕ್ಷಕರ ಹಾಗೂ ಸ್ಥಳೀಯ ಜೀವನ್ ಮಿತ್ರ ತಂಡದ ಪರಿಶ್ರಮದಿಂದ ಅಲ್ಲಿಂದ ತೆರವುಗೊಳಿಸಲಾಯಿತು. ಎರಡು ತಿಂಗಳಿಂದ ಅಪಘಾತಕ್ಕೆ ಎಡೆ ಮಾಡಿಕೊಡುತ್ತಿದ್ದ ಲಾರಿ ತೆರವುಗೊಳಿಸಲು ರಾಷ್ಟ್ರೀಯ ಹೆದ್ದಾರಿ ನಿರ್ವಹಿಸುತ್ತಿರುವ ಟೋಲ್‌ನ ಪ್ರಸ್ತುತ ಕಂಪನಿ ಹಾಗೂ ಸಂಬಂಧಿಸಿದ ಇಲಾಖೆ ನಿರ್ಲಕ್ಷ್ಯ ವಹಿಸಿತ್ತು. ಇದೀಗ ಕೋಟದ ಜೀವನ್ ಮಿತ್ರ ಬಳಗ ಹಾಗೂ ಮಾಧ್ಯಮ ಕಳಕಳಿಗೆ ಕೋಟ ಠಾಣಾಧಿಕಾರಿ ತೇಜಸ್ವಿ ಸ್ಥಳ ಪರಿಶೀಲಿಸಿ ತೆರೆವು ಕಾರ್ಯಕ್ಕೆ ಮುಂದಾದರು. ಲಾರಿ ತೆರವು ಕಾರ್ಯದಲ್ಲಿ ಕೋಟ ಠಾಣಾಧಿಕಾರಿ ತೇಜಸ್ವಿ, ಸಿಬ್ಬಂದಿ ಪ್ರಸನ್ನ ಕುಮಾರ್, ಸಮಾಜ ಸೇವಕ ಕೋಟ ಜೀವನ್ ಮಿತ್ರ ನಾಗರಾಜ್ ಪುತ್ರನ್, ವಸಂತ ಸುವರ್ಣ, ಗೋಪಾಲ್, ಕಿಶನ್ ಭಟ್ ಇದ್ದರು.

– ಮಂಗಳೂರು: ಟೆಂಪೋ ಡಿಕ್ಕಿ ಹೊಡೆದು ಪಾದಚಾರಿ ಮೃತ್ಯು

ಮಂಗಳೂರು: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಟೆಂಪೋ ಢಿಕ್ಕಿ ಹೊಡೆದು ಮೃತಪಟ್ಟ ಘಟನೆ ಮಂಗಳೂರಿನ ಕುಚಿಕಾಡು ಎಂಬಲ್ಲಿ ನಡೆದಿದೆ. ರಾಮಕ್ಷತ್ರಿಯ ಸೇವಾ ಸಂಘದ ಅಧ್ಯಕ್ಷ ಬಿಕರ್ನಕಟ್ಟೆ ನಿವಾಸಿ ರಾಧಾಕೃಷ್ಣ ರಾವ್‌ (65) ಮೃತಪಟ್ಟರು. ಅವರು ಸಂಜೆ 5.45ರ ಸುಮಾರಿಗೆ ಕಲ್ಪನೆ ಕಡೆಯಿಂದ ಬಿಕರ್ನಕಟ್ಟೆ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಕುಚಿಕಾಡು ಎನ್ನುವಲ್ಲಿ ಟೆಂಪೋ ಢಿಕ್ಕಿ ಹೊಡೆದಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫ‌ಲಕಾರಿಯಾಗದೆ ಅವರು ರಾತ್ರಿ 7.45ರ ಸುಮಾರಿಗೆ ಮೃತಪಟ್ಟರು. ಮೆಸ್ಕಾಂ ಜೆಪ್ಪು ಶಾಖೆಯ ಕಿರಿಯ ಅಭಿಯಂತರರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಅವರು ಬಿಕರ್ನಕಟ್ಟೆಯ ಶ್ರೀ ಹರಿಹರ ಪಾಂಡುರಂಗ ವಿಠಲ ಭಜನ ಮಂದಿರದ ಅಧ್ಯಕ್ಷರಾಗಿದ್ದರು. ಹಲವಾರು ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದರು. ಅವರು ಪತ್ನಿ ನಿವೃತ್ತ ಶಿಕ್ಷಕಿ ಗೌರಿ ರಾಧಾಕೃಷ್ಣ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

 

Categories
ಮಂಗಳೂರು

ಮಂಗಳೂರು ವಿಮಾನ ನಿಲ್ದಾಣಕ್ಕೆ ಮತ್ತೆ ಬಾಂಬ್‌ ಬೆದರಿಕೆ!

ಮಂಗಳೂರು ವಿಮಾನ ನಿಲ್ದಾಣಕ್ಕೆ ಮತ್ತೆ ಬಾಂಬ್‌ ಬೆದರಿಕೆ!

– ಭದ್ರತಾ ಸಿಬ್ಬಂದಿಯಿಂದ ಬಜ್ಪೆ ಠಾಣೆಗೆ ದೂರು: ಏನಿದು ದೂರು?
– ಇ-ಮೇಲ್‌ ಸಂದೇಶದಲ್ಲಿ ಬಾಂಬ್ ಬೆದರಿಕೆ

NAMMUR EXPRESS NEWS
ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇದೀಗ ಮತ್ತೆ ಬಾಂಬ್‌ ಬೆದರಿಕೆ ಬಂದಿದೆ. ಜೂ.18ರ ಮಂಗಳವಾರ ಮಧ್ಯಾಹ್ನ 12.43ಕ್ಕೆ ವಿಮಾನ ನಿಲ್ದಾಣದ ಎರಡು ಇ-ಮೇಲ್‌ ಐಡಿಗಳಿಗೆ ಏರ್‌ಪೋರ್ಟ್‌ನಲ್ಲಿ ಬಾಂಬ್‌ ಇಟ್ಟಿದ್ದು ಕೆಲವೇ ಕ್ಷಣದಲ್ಲಿ ಅದು ಸ್ಫೋಟಗೊಳ್ಳಲಿದೆ ಎಂದು ಕಿಡಿಗೇಡಿಗಳು ಸಂದೇಶ ಕಳುಹಿಸಿದ್ದಾರೆ. ಈ ಬಗ್ಗೆ ಏರ್‌ಪೋರ್ಟ್‌ನ ಮುಖ್ಯ ಸೆಕ್ಯುರಿಟಿ ಅಧಿಕಾರಿಯಾದ ಮೋನಿಷ್‌ ಜೂ.19ರಂದು ಸಂಜೆ ಬಜ್ಪೆ ಠಾಣೆಗೆ ದೂರು ನೀಡಿದ್ದಾರೆ.
ಅಪರಿಚಿತ ವ್ಯಕ್ತಿ ವಿಮಾನ ನಿಲ್ದಾಣದ ಎರಡು ಇಮೇಲ್‌ ಐಡಿಗಳಿಗೆ exhumedyou888@gmail.com ಎಂಬ ಇಮೇಲ್‌ ವಿಳಾಸದಿಂದ ಬೆದರಿಕೆ ಸಂದೇಶ ಕಳುಹಿಸಿದ್ದಾರೆ. ವಿಮಾನ ನಿಲ್ದಾಣದ ಒಳಗೆ ಸ್ಫೋಟಕ ಸಾಮಗ್ರಿ ಅಡಗಿಸಿಟ್ಟಿದ್ದು ಕೆಲವೇ ಕ್ಷಣದಲ್ಲಿ ಸ್ಫೋಟ ಆಗಲಿದೆ. ನೀವೆಲ್ಲ ಸಾಯಲಿದ್ದೀರಿ. ಗ್ರೂಪ್‌ ಕೆಎನ್‌ಆರ್‌ ಇದರ ಹಿಂದಿದೆ. ಮೇ 1ರ ಡೆಲ್ಲಿ ಸ್ಕೂಲ್‌ ಅಟ್ಯಾಕ್‌ ಕೃತ್ಯದಲ್ಲೂ ಇದೇ ಗ್ರೂಪ್‌ ಇತ್ತು ಎಂದು ಬರೆಯಲಾಗಿದೆ.
ಈ ಸಂದೇಶವನ್ನು ಗಂಭೀರವಾಗಿ ಪರಿಗಣಿಸಿದ ಏರ್‌ಪೋರ್ಟ್‌ ಅಧಿಕಾರಿಗಳು ನಿಲ್ದಾಣದಲ್ಲಿ ಬಿಗಿ ತಪಾಸಣೆಯನ್ನು ನಡೆಸಿದ್ದಾರೆ.
ಇದೇ ಮಾದರಿಯ ಸಂದೇಶವನ್ನು ಒಂದೇ ದಿನ ದೇಶದ ಇತರೆ 41 ವಿಮಾನ ನಿಲ್ದಾಣಗಳಿಗೂ ರವಾನಿಸಲಾಗಿದ್ದು, ಇದೊಂದು ಹುಸಿ ಬಾಂಬ್‌ ಬೆದರಿಕೆ ಎನ್ನುವುದು ಗೊತ್ತಾಗಿದೆ. ಕಳೆದ ಮೇ ತಿಂಗಳಿನಲ್ಲಿಯೂ ಮಂಗಳೂರು ವಿಮಾನ ನಿಲ್ದಾಣಕ್ಕೆ ಇದೇ ರೀತಿಯಲ್ಲಿ ಬಾಂಬ್‌ ಬೆದರಿಕೆ ಕರೆ ಮಾಡಲಾಗಿತ್ತು. ಆಗ ಕೂಡ ದುಬೈನಿಂದ ಮಂಗಳೂರಿಗೆ ಬರುತ್ತಿದ್ದ ವಿಮಾನದಲ್ಲಿ ಬಾಂಬ್‌ ಇಡಲಾಗಿದ್ದು, ಎಲ್ಲರೂ ಸಾಯುತ್ತೀರಿ ಎಂಬುದಾಗಿ ಇ-ಮೇಲ್‌ ಸಂದೇಶ ಬಂದಿತ್ತು.

Categories
ಜಾತಕ

ಈ ದಿನದ ರಾಶಿ ಭವಿಷ್ಯ ಹೇಗಿದೆ?

ಈ ದಿನದ ರಾಶಿ ಭವಿಷ್ಯ ಹೇಗಿದೆ?
– ಯಾವ ರಾಶಿಯವರಿಗೆ ಒಳಿತು ? ಯಾವ ರಾಶಿಯವರಿಗೆ ಕೆಡುಕು?

NAMMUR EXPRESS NEWS
2024 ಜೂನ್ 21ರ ಶುಕ್ರವಾರ ದಿನವಾದ ಇಂದು ನಿಮ್ಮ ದಿನವು ಹೇಗಿರಲಿದೆ..? ಇಂದು ಯಾವ ರಾಶಿಯವರಿಗೆ ಶುಭ.? ಯಾವ ರಾಶಿಯವರು ಎಚ್ಚರಿಕೆ.?

** ಮೇಷ ರಾಶಿ :
ಪ್ರಯಾಣದಲ್ಲಿ ಹಠಾತ್ ಬದಲಾವಣೆಗಳು ಉಂಟಾಗುತ್ತವೆ. ಬಂಧು ಮಿತ್ರರೊಡನೆ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಇತರರೊಂದಿಗೆ ವಿವಾದಗಳಿಂದ ದೂರವಿರುವುದು ಉತ್ತಮ. ಪವಿತ್ರ ಸ್ಥಳಗಳಿಗೆ ಭೇಟಿನೀಡುತ್ತೀರಿ. ವ್ಯಾಪಾರದಲ್ಲಿ ಒತ್ತಡ ಹೆಚ್ಚಾಗುತ್ತದೆ. ಉದ್ಯೋಗಿಗಳಿಗೆ ಸ್ಥಾನಚಲನೆ ಸೂಚನೆಗಳಿವೆ.

**ವೃಷಭ ರಾಶಿ :
ಬಾಲ್ಯದ ಸ್ನೇಹಿತರೊಂದಿಗೆ ಸೌಹಾರ್ದತೆಯಿಂದ ವರ್ತಿಸುತ್ತೀರಿ. ಸಂಗಾತಿಯೊಂದಿಗೆ ಶುಭ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ. ಸ್ಥಿರಾಸ್ತಿ ವಿಷಯಗಳಲ್ಲಿ ಹೊಸ ಒಪ್ಪಂದಗಳು ಕೂಡಿ ಬರುತ್ತವೆ. ಆರಂಭಿಸಿದ ಹೊಸ ವ್ಯಾಪಾರಗಳು ಲಾಭವನ್ನು ಪಡೆಯುತ್ತವೆ. ಉದ್ಯೋಗಿಗಳಿಗೆ ಪ್ರೋತ್ಸಾಹಗಳು ದೊರೆಯುತ್ತವೆ.

** ಮಿಥುನ ರಾಶಿ :
ಆಸ್ತಿ ವಿವಾದಗಳು ದೂರವಾಗಿ, ಸಮಾಧಾನ ತರುತ್ತದೆ. ವಾಹನ ವ್ಯಾಪಾರಿಗಳಿಗೆ ಲಾಭ ದೊರೆಯುತ್ತದೆ. ಆಪ್ತ ಸ್ನೇಹಿತರು ನಿರ್ಣಾಯಕ ಸಮಯದಲ್ಲಿ ಸಹಾಯ ಮಾಡುತ್ತಾರೆ. ಕೌಟುಂಬಿಕ ವಾತಾವರಣ ಸಂತೋಷದಿಂದ ಕೂಡಿರುತ್ತದೆ. ಉದ್ಯೋಗಿಗಳ ಸ್ಥಾನಮಾನ ಹೆಚ್ಚಾಗುತ್ತದೆ. ಹಠಾತ್ ಆರ್ಥಿಕ ಲಾಭ ಉಂಟಾಗುತ್ತದೆ.

** ಕರ್ಕ ರಾಶಿ :
ಕೈಗೆತ್ತಿಕೊಂಡ ವ್ಯವಹಾರಗಳು ನಿರಾಶೆಗೊಳಿಸುತ್ತವೆ. ಪ್ರಯಾಣವನ್ನು ಮುಂದೂಡುವುದು ಉತ್ತಮ. ಕುಟುಂಬ ಸದಸ್ಯರ ಆರೋಗ್ಯ ಸಮಸ್ಯೆಗಳು ಬಾಧಿಸುತ್ತವೆ. ವೃತ್ತಿಪರ ವ್ಯವಹಾರಗಳು ಅಭಿವೃದ್ಧಿ ಹೊಂದುತ್ತವೆ. ಮನೆಯ ಹೊರಗೆ ಜಾಗ್ರತೆ ವಹಿಸಬೇಕು. ಉದ್ಯೋಗಗಳು ಸುಗಮವಾಗಿ ಸಾಗುತ್ತವೆ.

** ಸಿಂಹ ರಾಶಿ :
ಬಂಧುಗಳೊಂದಿಗೆ ವಿವಾದ ಉಂಟಾಗುತ್ತದೆ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸುವುದು ಒಳ್ಳೆಯದಲ್ಲ. ಹೊಸಸಾಲಗಳನ್ನು ಮಾಡಲಾಗುತ್ತದೆ. ದೂರ ಪ್ರಯಾಣದ ಸೂಚನೆಗಳಿವೆ. ವೃತ್ತಿಪರ ವ್ಯವಹಾರಗಳಿಗೆ ಗೊಂದಲಮಯ ಪರಿಸ್ಥಿತಿಗಳಿರುತ್ತವೆ. ಉದ್ಯೋಗದಲ್ಲಿ ಹೆಚ್ಚುವರಿ ಜವಾಬ್ದಾರಿಗಳಿಂದ ವಿಶ್ರಾಂತಿ ಇರುವುದಿಲ್ಲ.

** ಕನ್ಯಾ ರಾಶಿ :
ಕೈಗೆತ್ತಿಕೊಂಡ ಕಾರ್ಯಗಳು ನಿರಾಯಾಸವಾಗಿಪೂರ್ಣಗೊಳ್ಳುತ್ತವೆ. ಆಧ್ಯಾತ್ಮಿಕ ಸೇವಾ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ. ಉದ್ಯೋಗ ಪ್ರಯತ್ನಗಳು ಯಶಸ್ವಿಯಾಗುತ್ತವೆ. ಹೊಸ ಪರಿಚಯಗಳು ಹೆಚ್ಚಾಗುತ್ತವೆ. ಸ್ನೇಹಿತರಿಂದ ಧನ ಲಾಭ ದೊರೆಯುತ್ತದೆ. ವೃತ್ತಿಪರ ವ್ಯವಹಾರಗಳು ಲಾಭವನ್ನು ತರುತ್ತವೆ.

** ತುಲಾ ರಾಶಿ :
ಕುಟುಂಬದ ಹಿರಿಯರ ಸಹಕಾರದಿಂದ ಕೆಲವು ಕೆಲಸಗಳು ಪೂರ್ಣಗೊಳ್ಳುತ್ತವೆ. ದೀರ್ಘ ಪ್ರಯಾಣಗಳಿಂದ ದೈಹಿಕ ಶ್ರಮ ಹೆಚ್ಚಾಗುತ್ತದೆ. ಬಂಧುಗಳಿಂದ ಒತ್ತಡ ಹೆಚ್ಚಾಗುತ್ತದೆ. ವ್ಯಾಪಾರದಲ್ಲಿ ಲಾಭ ದೊರೆಯುವುದು ಕಷ್ಟವಾಗುತ್ತದೆ. ವೃತ್ತಿಪರ ಉದ್ಯೋಗಗಳಲ್ಲಿ ಶ್ರಮ ಹೆಚ್ಚಾಗಿ ಫಲಿತಾಂಶ ಕಡಿಮೆ ಇರುತ್ತದೆ.

** ವೃಶ್ಚಿಕ ರಾಶಿ :
ಹೊಸ ವಾಹನಗಳನ್ನು ಖರೀದಿಸುತ್ತೀರಿ. ಭೂಮಿ ಸಂಬಂಧಿತ ಮಾರಾಟದಲ್ಲಿ ನಿರೀಕ್ಷಿತ ಲಾಭ ದೊರೆಯುತ್ತದೆ. ದೇಶ-ವಿದೇಶಗಳಲ್ಲಿ ಜನಪ್ರಿಯತೆ ಹೆಚ್ಚಾಗುತ್ತದೆ. ಎಲ್ಲ ಕ್ಷೇತ್ರಗಳಿಗೂ ಉತ್ತಮ ಆದಾಯ ದೊರೆಯುತ್ತದೆ. ವ್ಯಾಪಾರಗಳಲ್ಲಿ ಹೂಡಿಕೆಗಳು ದೊರೆಯುತ್ತವೆ. ಉದ್ಯೋಗದಲ್ಲಿ ಬಡ್ತಿ ಹೆಚ್ಚಾಗುತ್ತದೆ.

** ಧನುಸ್ಸು ರಾಶಿ :
ಉದ್ಯೋಗಿಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳಿಂದ ಅನಿರೀಕ್ಷಿತ ಮಾತುಗಳನ್ನು ಕೇಳಬೇಕಾಗುತ್ತದೆ. ಸಹೋದರರೊಂದಿಗಿನ ವಿವಾದಗಳು ಹೆಚ್ಚಾಗುತ್ತವೆ. ವ್ಯಾಪಾರವು ನಿರಾಶಾದಾಯಕವಾಗಿರುತ್ತವೆ. ಪ್ರಯಾಣದಲ್ಲಿ ರಸ್ತೆ ತಡೆ ಉಂಟಾಗುತ್ತದೆ. ಆಧ್ಯಾತ್ಮಿಕ ಚಿಂತನೆ ಹೆಚ್ಚಾಗುತ್ತದೆ. ಹಣಕಾಸಿನ ವ್ಯವಹಾರಗಳು ನಿರಾಶಾದಾಯಕವಾಗಿರುತ್ತವೆ.

** ಮಕರ ರಾಶಿ :
ಬೆಲೆಬಾಳುವ ವಸ್ತುಗಳು ಮತ್ತು ವಾಹನಗಳನ್ನು ಖರೀದಿಸಲಾಗುತ್ತದೆ. ವ್ಯಾಪಾರದಲ್ಲಿ ಹೊಸ ಲಾಭ ಪಡೆಯುತ್ತೀರಿ. ಕೈಗೆತ್ತಿಕೊಂಡ ಕೆಲಸದಲ್ಲಿ ಅಪ್ರಯತ್ನ ಕಾರ್ಯ ಸಿದ್ಧತೆ ಇರುತ್ತದೆ. ಉದ್ಯೋಗದ ವಿಷಯದಲ್ಲಿ ಅನುಕೂಲಕರ ಬದಲಾವಣೆಗಳು ಕಂಡುಬರುತ್ತವೆ. ದೇವಸ್ಥಾನಕ್ಕೆ ಭೇಟಿ ನೀಡುತ್ತೀರಿ.

** ಕುಂಭ ರಾಶಿ :
ಆಪ್ತ ಸ್ನೇಹಿತರಿಂದ ಶುಭ ಕಾರ್ಯಕ್ಕೆ ಆಹ್ವಾನಗಳು ಬರುತ್ತವೆ. ಭೂ ವಿವಾದಗಳಿಂದ ಮುಕ್ತಿ ದೊರೆಯುತ್ತದೆ. ಹಠಾತ್ ಆರ್ಥಿಕ ಲಾಭ ದೊರೆಯುತ್ತದೆ. ಪ್ರಮುಖ ವಿಷಯಗಳಲ್ಲಿ ನಿರೀಕ್ಷೆಗಳು ನಿಜವಾಗುತ್ತವೆ. ವೃತ್ತಿಪರ ವ್ಯವಹಾರಗಳು ಅಭಿವೃದ್ಧಿ ಹೊಂದುತ್ತವೆ. ಉದ್ಯೋಗಿಗಳಿಗೆ ಸೂಕ್ತ ಮನ್ನಣೆ ದೊರೆಯುತ್ತದೆ.

** ಮೀನ ರಾಶಿ :
ಪ್ರಮುಖ ವಿಷಯಗಳು ನಿಧಾನವಾಗಿ ಪೂರ್ಣಗೊಳ್ಳುತ್ತವೆ. ಮಾಡದ ತಪ್ಪಿಗೆ ಆಪ್ತ ಸ್ನೇಹಿತರಿಂದ ಟೀಕೆಗಳನ್ನು ಎದುರಿಸಬೇಕಾಗುತ್ತದೆ. ಪ್ರಯಾಣಗಳು ಇದ್ದಕ್ಕಿದ್ದಂತೆ ಮುಂದೂಡಲ್ಪಡುತ್ತವೆ ಮತ್ತು ವ್ಯರ್ಥ ಖರ್ಚುಗಳು ಉಂಟಾಗುತ್ತವೆ. ಹೊಸ ವ್ಯವಹಾರಗಳು ನಿಧಾನವಾಗಿ ಸಾಗುತ್ತವೆ. ವೃತ್ತಿಪರ ಉದ್ಯೋಗಗಳಲ್ಲಿ ಕಿರಿಕಿರಿಗಳು ಹೆಚ್ಚಾಗುತ್ತವೆ.