Categories
ಜಾತಕ

ಈ ದಿನದ ರಾಶಿ ಭವಿಷ್ಯ ಹೇಗಿದೆ?

ಈ ದಿನದ ರಾಶಿ ಭವಿಷ್ಯ ಹೇಗಿದೆ?

– ಯಾವ ರಾಶಿಯವರಿಗೆ ಅದೃಷ್ಟ ಒಲಿದು ಬರುತ್ತೆ
– ಯಾವ ರಾಶಿಯವರಿಗೆ ಲಾಭ? ಯಾವ ರಾಶಿಯವರಿಗೆ ನಷ್ಟ?

NAMMUR EXPRESS NEWS
2024 ಜೂನ್ 26ರ ಬುಧವಾರ ದಿನವಾದ ಇಂದು ನಿಮ್ಮ ದಿನವು ಹೇಗಿರಲಿದೆ..? ಇಂದು ಯಾವ ರಾಶಿಯವರಿಗೆ ಶುಭ.? ಯಾವ ರಾಶಿಯವರು ಅಶುಭ..?

** ಮೇಷ ರಾಶಿ :
ಕೌಟುಂಬಿಕ ವಿಚಾರಗಳಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ. ಪಿತೃ ವರ್ಗದಿಂದ ಶುಭ ವಾರ್ತೆ ದೊರೆಯುತ್ತದೆ, ಹೊಸ ವಾಹನ ಯೋಗವಿದೆ. ಕೈಗೊಂಡ ಕಾರ್ಯಗಳು ಯಶಸ್ವಿಯಾಗುತ್ತವೆ. ಭೋಜನ ಮನೋರಂಜನಾ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೀರಿ. ಉದ್ಯೋಗದಲ್ಲಿನ ಅಡೆತಡೆಗಳನ್ನು ನಿವಾರಿಸಲಾಗುತ್ತದೆ. ವ್ಯಾಪಾರಗಳು ಲಾಭದಾಯಕವಾಗಿರುತ್ತವೆ.

** ವೃಷಭ ರಾಶಿ :
ಬಂಧು ಮಿತ್ರರೊಂದಿಗೆ ನಿರೀಕ್ಷಿತ ವಿವಾದಗಳು ಉಂಟಾಗುತ್ತದೆ. ದೂರ ಪ್ರಯಾಣದ ಸೂಚನೆಗಳಿವೆ. ಕೌಟುಂಬಿಕ ವಾತಾವರಣ ಗೊಂದಲಮಯವಾಗಿರುತ್ತದೆ . ಕೈಗೆತ್ತಿಕೊಂಡ ಕೆಲಸಗಳಲ್ಲಿ ಖರ್ಚು ಮತ್ತು ಶ್ರಮ ಹೆಚ್ಚಾಗುತ್ತದೆ. ವ್ಯರ್ಥ ಖರ್ಚುಗಳ ಬಗ್ಗೆ ಜಾಗರೂಕರಾಗಿರಿ. ವೃತ್ತಿಪರ ವ್ಯವಹಾರದಲ್ಲಿ ಅಲ್ಪ ಲಾಭವನ್ನು ಪಡೆಯಲಾಗುತ್ತದೆ. ಉದ್ಯೋಗಿಗಳಿಗೆ ಕೆಲಸದ ಒತ್ತಡ ಹೆಚ್ಚಾಗುತ್ತದೆ.

** ಮಿಥುನ ರಾಶಿ :
ಆಪ್ತ ಮಿತ್ರರೊಂದಿಗೆ ವಿವಾದ ಉಂಟಾಗುತ್ತದೆ. ಪ್ರಮುಖ ವಿಷಯಗಳಲ್ಲಿ ಸ್ಥಿರವಾದ ಆಲೋಚನೆಗಳನ್ನು ಹೊಂದಲು ಸಾಧ್ಯವಾಗುವುದಿಲ್ಲ. ದೂರ ಪ್ರಯಾಣವನ್ನು ಮುಂದೂಡುವುದು ಉತ್ತಮ. ಕುಟುಂಬ ಸದಸ್ಯರಿಂದ ಸಹಾಯ ದೊರೆಯುತ್ತದೆ. ವ್ಯಾಪಾರ ಉದ್ಯೋಗಗಳು ನಿರಾಶಾದಾಯಕವಾಗಿರುತ್ತವೆ. ನಿರುದ್ಯೋಗ ಪ್ರಯತ್ನಗಳು ವಿಫಲವಾಗುತ್ತವೆ.

** ಕಟಕ ರಾಶಿ :
ಮಕ್ಕಳಿಗೆ ಹೊಸ ಶೈಕ್ಷಣಿಕ ಅವಕಾಶಗಳು ಸಿಗುತ್ತವೆ. ಪ್ರಮುಖ ವ್ಯಕ್ತಿಗಳ ಪರಿಚಯಗಳು ಹೆಚ್ಚಾಗುತ್ತದೆ. ಕೈಗೆತ್ತಿಕೊಂಡ ಕೆಲಸದಲ್ಲಿ ಪ್ರಯತ್ನ ಕಾರ್ಯ ಸಿದ್ಧಿ ದೊರೆಯುತ್ತದೆ. ವೃತ್ತಿಪರ ವ್ಯವಹಾರಗಳಲ್ಲಿ ಆಲೋಚನೆಳು ಕೂಡಿ ಬರುತ್ತವೆ. ದೈವಿಕ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ. ವ್ಯಾಪಾರ ವಿಸ್ತರಣೆಯ ಪ್ರಯತ್ನಗಳು ಫಲ ನೀಡುತ್ತವೆ. ಉದ್ಯೋಗಿಗಳಿಗೆ ಬಡ್ತಿ ಹೆಚ್ಚಾಗುತ್ತದೆ.

** ಸಿಂಹ ರಾಶಿ :
ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ವೃತ್ತಿಪರ ಉದ್ಯೋಗಗಳಲ್ಲಿ ಹೊಸ ಪ್ರೋತ್ಸಾಹವನ್ನು ಪಡೆಯುತ್ತೀರಿ. ನಿರುದ್ಯೋಗಿಗಳಿಗೆ ಹೊಸ ಉದ್ಯೋಗಾವಕಾಶಗಳು ದೊರೆಯುತ್ತವೆ. ಭೂಮಿ ಮಾರಾಟದಲ್ಲಿ ಲಾಭ ದೊರೆಯುತ್ತದೆ. ಕೈಗೊಂಡ ಕಾರ್ಯಗಳು ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ. ದೂರದ ಸಂಬಂಧಿಕರಿಂದ ಶುಭ ಸುದ್ದಿ ದೊರೆಯುತ್ತದೆ.

** ಕನ್ಯಾ ರಾಶಿ :
ಆರ್ಥಿಕ ಪರಿಸ್ಥಿತಿ ತುಂಬಾ ಕಳಪೆಯಾಗಿರುತ್ತದೆ. ಆಧ್ಯಾತ್ಮಿಕ ಚಿಂತನೆ ಹೆಚ್ಚಾಗುತ್ತದೆ. ಕೈಗೆತ್ತಿಕೊಂಡ ಕೆಲಸಗಳು ಮಂದಗತಿಯಲ್ಲಿ ಸಾಗುತ್ತವೆ. ದೂರ ಪ್ರಯಾಣವನ್ನು ಮುಂದೂಡಲಾಗುತ್ತದೆ . ವ್ಯಾಪಾರದಲ್ಲಿ ಅನಿರೀಕ್ಷಿತ ಸಮಸ್ಯೆಗಳು ಉದ್ಭವಿಸುತ್ತವೆ. ವೃತ್ತಿಪರ ಉದ್ಯೋಗಗಳಲ್ಲಿ ಅಧಿಕಾರಿಗಳೊಂದಿಗೆ ವಿವಾದಗಳಿಂದ ದೂರವಿರುವುದು ಉತ್ತಮ.

** ತುಲಾ ರಾಶಿ :
ನಿರುದ್ಯೋಗ ಪ್ರಯತ್ನಗಳು ಮಂದಗತಿಯಲ್ಲಿ ಸಾಗುತ್ತವೆ. ಕೈಗೆತ್ತಿಕೊಂಡ ಕೆಲಸಗಳಲ್ಲಿ ಶ್ರಮ ಶೀಲತೆ ಹೆಚ್ಚಾಗುತ್ತದೆ. ಹೊಸ ಸಾಲದ ಪ್ರಯತ್ನಗಳು ನಡೆಯುತ್ತವೆ. ಸಹೋದರರು ಸ್ಥಿರಾಸ್ತಿ ವಿವಾದಗಳಿರುತ್ತವೆ. ವ್ಯವಹಾರದಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ. ಉದ್ಯೋಗದ ವಾತಾವರಣವು ಸ್ವಲ್ಪ ಒತ್ತಡದಿಂದ ಕೂಡಿರುತ್ತದೆ. ಹಠಾತ್ ಪ್ರಯಾಣದ ಸೂಚನೆಗಳಿವೆ.

** ವೃಶ್ಚಿಕ ರಾಶಿ :
ಮನೆಯಲ್ಲಿ ಭೋಜನ ಮನರಂಜನಾ ಕಾರ್ಯಕ್ರಮಗಳನ್ನು ನಿರ್ವಹಿಸುತ್ತೀರಿ . ಕೈಗೆತ್ತಿಕೊಂಡ ಕೆಲಸಗಳು ಸಕಾಲದಲ್ಲಿ ಪೂರ್ಣಗೊಳ್ಳುತ್ತವೆ. ಬಾಲ್ಯದ ಗೆಳೆಯರ ಆಗಮನ ಸಂತಸ ತರುತ್ತದೆ. ಸ್ಥಿರಾಸ್ತಿ ಖರೀದಿ ಪ್ರಯತ್ನಗಳು ಕೂಡಿ ಬರುತ್ತವೆ. ಉದ್ಯೋಗಿಗಳಿಗೆ ಹೊಸ ಅವಕಾಶಗಳು ಸಿಗುತ್ತವೆ. ವ್ಯಾಪಾರದಲ್ಲಿ ನಿರೀಕ್ಷಿತ ಲಾಭ ದೊರೆಯುತ್ತದೆ.

** ಧನುಸ್ಸು ರಾಶಿ :
ಆರ್ಥಿಕ ಪರಿಸ್ಥಿತಿ ಮತ್ತಷ್ಟು ಸುಧಾರಿಸುತ್ತದೆ. ಸ್ನೇಹಿತರೊಂದಿಗೆ ಸಾಮರಸ್ಯದಿಂದ ವರ್ತಿಸುತ್ತೀರಿ. ಮನೆಯಲ್ಲಿ ಮಕ್ಕಳ ವಿವಾಹ ಪ್ರಯತ್ನಗಳು ನಡೆಯುತ್ತವೆ. ಬಂಧುಗಳೊಂದಿಗೆ ಭೋಜನ ಮತ್ತು ಮನರಂಜನಾ ಚಟುವಟಿಕೆಗಳಲ್ಲಿ ಭಾಗವಹಿಸುತ್ತೀರಿ. ವ್ಯಾಪಾರ ಉದ್ಯೋಗಗಳಲ್ಲಿ ಹೆಚ್ಚಿನ ಪ್ರಗತಿ ಕಂಡುಬರುತ್ತದೆ. ದೈವಿಕ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ. ಆಧ್ಯಾತ್ಮಿಕ ಚಿಂತನೆ ಹೆಚ್ಚಾಗುತ್ತದೆ.

** ಮಕರ ರಾಶಿ :
ಕೈಗೆತ್ತಿಕೊಂಡ ಕಾರ್ಯಗಳು ಸಕಾಲದಲ್ಲಿ ಪೂರ್ಣಗೊಳ್ಳುತ್ತವೆ. ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ಆಪ್ತ ಸ್ನೇಹಿತರೊಂದಿಗೆ ಭಿನ್ನಭಿಪ್ರಾಯಗಳು ಉಂಟಾಗುತ್ತವೆ. ಕೌಟುಂಬಿಕ ವಾತಾವರಣ ಉದ್ವಿಗ್ನವಾಗಿರುತ್ತದೆ. ವೃತ್ತಿಪರ ಉದ್ಯೋಗಗಳಲ್ಲಿ ಸಹೋದ್ಯೋಗಿಗಳೊಂದಿಗೆ ಅನಿರೀಕ್ಷಿತ ವಿವಾದಗಳು ಉಂಟಾಗುತ್ತವೆ. ಆರ್ಥಿಕ ಏರಿಳಿತಗಳು ಉಂಟಾಗುತ್ತವೆ.

** ಕುಂಭ ರಾಶಿ :
ಮನೆಯಲ್ಲಿ ಶುಭ ಕಾರ್ಯಗಳನ್ನು ನಿರ್ವಹಿಸುತ್ತೀರಿ. ಸ್ಥಿರ ಆಸ್ತಿಗಳನ್ನು ಖರೀದಿಸುವ ಪ್ರಯತ್ನಗಳನ್ನು ವೇಗಗೊಳಿಸುತ್ತೀರಿ. ಕೈಗೊಂಡ ಕಾರ್ಯಗಳಲ್ಲಿ ಯಶಸ್ಸು ಸಿಗುತ್ತದೆ. ಸಹೋದರರೊಂದಿಗೆ ಸಾಮರಸ್ಯದಿಂದ ವರ್ತಿಸುತ್ತೀರಿ. ಮನೆಯ ವಾತಾವರಣ ಶಾಂತವಾಗಿರುತ್ತದೆ. ವೃತ್ತಿಪರ ವ್ಯವಹಾರಗಳಲ್ಲಿ ನಿರೀಕ್ಷಿತ ಬದಲಾವಣೆಗಳು ಕಂಡುಬರುತ್ತವೆ. ಭೋಜನ ಮನರಂಜನಾ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೀರಿ.

** ಮೀನ ರಾಶಿ :
ದೈವಿಕ ಸೇವಾ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ. ಬಂಧು ಮಿತ್ರರೊಂದಿಗೆ ವಿವಾದ ಉಂಟಾಗುತ್ತದೆ. ಕೌಟುಂಬಿಕ ವಾತಾವರಣ ಅಸ್ತವ್ಯಸ್ತವಾಗಿರುತ್ತದೆ. ದೂರ ಪ್ರಯಾಣದ ಸೂಚನೆಗಳಿವೆ. ಕೆಲವು ಸಂದರ್ಭಗಳಲ್ಲಿ ಯೋಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಉತ್ತಮ. ವ್ಯಾಪಾರಗಳು ಉತ್ತಮವಾಗಿ ನಡೆಯುವುದಿಲ್ಲ. ಔದ್ಯೋಗಿಕ ಕೆಲಸಗಳಲ್ಲಿ ಕೆಲವರ ವರ್ತನೆ ಕಿರಿಕಿರಿ ಉಂಟು ಮಾಡುತ್ತದೆ.

Categories
ಚಿಕ್ಕಮಗಳೂರು

ಕಾಫಿನಾಡಲ್ಲಿ ಬಿಜೆಪಿ ಕಾರ್ಯಕರ್ತರು ಅರೆಸ್ಟ್!

ಕಾಫಿನಾಡಲ್ಲಿ ಬಿಜೆಪಿ ಕಾರ್ಯಕರ್ತರು ಅರೆಸ್ಟ್!

– ಕಾಂಗ್ರೆಸ್‌ ಕಚೇರಿಗೆ ಮುತ್ತಿಗೆ ಹಾಕಿ ಪೋಸ್ಟರ್ ಅಂಟಿಸಲು ಯತ್ನಿಸಿದ ಬಿಜೆಪಿ ಕಾರ್ಯಕರ್ತರ ಬಂಧನ
– ತುರ್ತು ಪರಿಸ್ಥಿತಿ ಹೇರಿದ ದಿನ ಎಂದು ಬಿಜೆಪಿ ಯುವ ಮೋರ್ಚಾದಿಂದ ಕಾಂಗ್ರೆಸ್‌ ಕಚೇರಿಗೆ ಮುತ್ತಿಗೆ ಹಾಕಲು ಯತ್ನ

NAMMUR EXPRESS NEWS
ದೇಶಕ್ಕೆ ತುರ್ತು ಪರಿಸ್ಥಿತಿ ಹೇರಿದ ಕರಾಳ ದಿನ ಖಂಡಿಸಿ 50 ವರ್ಷಗಳಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಚೇರಿಗೆ ಪೋಸ್ಟ‌ರ್ ಅಂಟಿಸಲು ಮುಂದಾದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.

ಕೈ ಕಚೇರಿಯತ್ತ ತೆರಳಲು ಮುಂದಾದ ವೇಳೆ ಅರೆಸ್ಟ್ ಮಾಡಿದ ಪೊಲೀಸರ ವಿರುದ್ಧವೇ ಕೇಸರಿ ಪಡೆ ಘೋಷಣೆ ಕೂಗಿದೆ. ಇಂದಿರಾಗಾಂಧಿ ತುರ್ತು ಪರಿಸ್ಥಿತಿ ಹೇರಿದ ದಿನ ಹಿನ್ನೆಲೆ ಬಿಜೆಪಿ ಯುವ ಮೋರ್ಚಾದಿಂದ ಕಾಂಗ್ರೆಸ್‌ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಲಾಯಿತು. ಕೈ ಕಚೇರಿಗೆ ಕರಪತ್ರ ಅಂಟಿಸಲು ಬಿಜೆಪಿ ಪಕ್ಷದ 20 ಕ್ಕೂ ಹೆಚ್ಚು ಯುವ ಮೋರ್ಚಾ ಕಾರ್ಯಕರ್ತರು ತೆರಳಿದಾಗ ರಸ್ತೆಯಲ್ಲೇ ಪೊಲೀಸರು ತಡೆದರು ಈ ವೇಳೆ ಪೊಲೀಸರ ವಿರುದ್ಧವೇ ಘೋಷಣೆ ಕೂಗಿದರು.

ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಕಲ್ಮರುಡಪ್ಪ ನೇತೃತ್ವದಲ್ಲಿ ಹೋರಾಟ ಹಮ್ಮಿಕೊಳ್ಳಲಾಗಿತ್ತು ಪೊಲೀಸರ ಸರ್ಪಗಾವಲಿನಲ್ಲೂ ಕರಪತ್ರ ಅಂಟಿಸಲು ಯತ್ನಿಸಲಾಯಿತು. ಬೆಳಗ್ಗೆ ಚಿಕ್ಕಮಗಳೂರು ನಗರದ ಅಲ್ಲಲ್ಲಿ ಕರಪತ್ರ ಅಂಟಿಸಿದ್ದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕ್ಷಮೆ ಕೇಳಬೇಕು ಎಂದು ಕರಪತ್ರ ಅಂಟಿಸಿದ್ದ ಬಿಜೆಪಿ ಯುವಮೋರ್ಚಾ ರನ್ನು ಪೊಲೀಸರು ಹುಡುಕುತ್ತಿದ್ದರು. ಸ್ವಾರ್ಥಕ್ಕಾಗಿ ಕಾಂಗ್ರೆಸ್ ಪಕ್ಷವು ಸಂವಿಧಾನ ದುರ್ಬಳಕೆ ಮಾಡಿಕೊಂಡಿದೆ ಎಂದು ಬಿಜೆಪಿ ಮುಖಂಡರು ಕಿಡಿಕಾರಿದ್ದರು. ತುರ್ತು ಪರಿಸ್ಥಿತಿ ಹೇರಿದ್ದ ಇಂದಿರಾಗಾಂಧಿ ವಿರುದ್ಧವೂ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದ್ದರು. ಚಿಕ್ಕಮಗಳೂರು ನಗರದ ಐ.ಜಿ ರಸ್ತೆಯಲ್ಲಿರುವ ಕಾಂಗ್ರೆಸ್‌ ಕಚೇರಿ ಸಮೀಪಕ್ಕೆ ಹೋಗುವ ಮುನ್ನವೇ ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಗಿದೆ.

Categories
ಕರಾವಳಿ

ಕರಾವಳಿ ಟಾಪ್ ನ್ಯೂಸ್

ಕರಾವಳಿ ಟಾಪ್ ನ್ಯೂಸ್

– ಹಾಲಿಗೆ ಬೆಲೆ ಏರಿಕೆ: ಶಾಸಕ ವೇದವ್ಯಾಸ ಕಾಮತ್ ಆಕ್ರೋಶ
– ಕಾಸರಗೋಡು: ಮಗುಚಿ ಬಿದ್ದ ಹಿಟಾಚಿ ಅಡಿಗೆ ಸಿಲುಕಿ ಯುವಕ ಮೃತ್ಯು
– ಉಡುಪಿ: ಗ್ಯಾಂಗ್‌ವಾರ್‌ ಮಾಡಿದ್ದ ಆರೋಪಿಗಳು ಜೈಲಿನಲ್ಲಿಯೂ ದಾಂಧಲೆ

NAMMUR EXPRESS NEWS
ಮಂಗಳೂರು: ರಾಜ್ಯದಲ್ಲಿ ಅಗತ್ಯ ವಸ್ತುಗಳ ದರ ಏರಿಕೆಯ ಬಿಸಿಯಿಂದ ಜನಸಾಮಾನ್ಯರು ಕಂಗಾಲಾಗುತ್ತಿದ್ದರೂ ಕಾಂಗ್ರೆಸ್ ಸರ್ಕಾರ ಮಾತ್ರ ತನ್ನ ಪಾಡಿಗೆ ತಾನು ಜನರನ್ನು ದೋಚುವುದರಲ್ಲಿ ನಿರತವಾಗಿದ್ದು ಅದರ ಮುಂದುವರಿದ ಭಾಗವಾಗಿ ಸರ್ಕಾರ ಈಗ ಹಾಲಿಗೆ ಏಕಾಏಕಿ 2 ರೂ ಏರಿಸಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಅವರು ಆಕ್ರೋಶ ವ್ಯಕ್ತಪಡಿಸಿದರು.

ಕಣ್ಣಿಗೆ ಕಂಡದ್ದೆಲ್ಲದರ ಬೆಲೆ ಏರಿಸುವುದರಲ್ಲಿ ಹಠಕ್ಕೆ ಬಿದ್ದಿರುವಂತೆ ವರ್ತಿಸುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಅತ್ತ ರೈತರ ಬದುಕಿಗೂ ಉಪಕಾರಿಯಾಗಿಲ್ಲ, ಬಡವರ ಬದುಕಿಗೂ ನೆಮ್ಮದಿಯಿಲ್ಲ. ಒಂದೆಡೆ ಹಾಲು ಉತ್ಪಾದಕರಿಗೆ ಬಾಕಿ ಉಳಿಸಿರುವ ಸಬ್ಸಿಡಿ ಹಣ ನೀಡದೆ ಸತಾಯಿಸುವುದು, ಇನ್ನೊಂದೆಡೆ ಗ್ರಾಹಕರಿಗೆ ಹಾಲಿನ ಬೆಲೆಯೇರಿಕೆ ಬಿಸಿ ಮುಟ್ಟಿಸುವುದು. ಇದು ರೈತ ವಿರೋಧಿ ಸರ್ಕಾರವೂ ಹೌದು. ಬಡ ಜನರ ವಿರೋಧಿ ಸರ್ಕಾರವೂ ಹೌದು. ಮಾನ್ಯ ಮುಖ್ಯಮಂತ್ರಿಗಳಂತೂ ರಾಜ್ಯದ ಜನತೆಗೆ ಉತ್ತರಿಸಲಾಗದೇ, ಹಾಲಿನ ದರ ಏರಿಕೆಯ ಬಗ್ಗೆ ನನಗೆ ಗೊತ್ತೇ ಇಲ್ಲ ಎಂದು ಮಾಧ್ಯಮಗಳಲ್ಲಿ ನುಣುಚಿಕೊಳ್ಳಲು ಯತ್ನಿಸಿದ್ದಂತೂ ಅತ್ಯಂತ ಹಾಸ್ಯಾಸ್ಪದ. ಕೊನೆಪಕ್ಷ ಇನ್ನಾದರೂ ಈ ಕೃತಕ ಬೆಲೆ ಏರಿಕೆಗೆ ನಿಯಂತ್ರಣ ಹೇರಿ ಜನಸಾಮಾನ್ಯರು ನೆಮ್ಮದಿಯಿಂದ ಇರಲು ಬಿಡಿ ಎಂದು ಆಗ್ರಹಿಸಿದರು

ಉಡುಪಿ: ಗ್ಯಾಂಗ್‌ವಾರ್‌ ಮಾಡಿದ್ದ ಆರೋಪಿಗಳು ಜೈಲಿನಲ್ಲಿಯೂ ದಾಂಧಲೆ

ಉಡುಪಿಯ ನಡುರಸ್ತೆಯಲ್ಲಿ ಸಿನಿಮೀಯ ಶೈಲಿಯಲ್ಲಿ ಗ್ಯಾಂಗ್‌ವಾರ್‌ ನಡೆಸಿದ್ದ ಪಾತಕಿಗಳ ತಂಡವೊಂದು ಇತ್ತೀಚೆಗೆ ಜೈಲುಪಾಲಾಗಿದ್ದು, ಇದೀಗ ಜೈಲಿನಲ್ಲಿಯೂ ದಾಂಧಲೆ ಎಬ್ಬಿಸಿ ಅಲ್ಲಿನ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ.
ಗ್ಯಾಂಗ್‌ವಾರ್‌ ಆರೋಪದಡಿ ನಡುರಸ್ತೆಯಲ್ಲಿ ಇನ್ನೊಂದು ಗುಂಪಿನ ತಂಡದವರ ಮೇಲೆ ಕಾರು ಚಲಾಯಿಸಲು ಹಾಗೂ ತಲವಾರಿನಿಂದ ಹಲ್ಲೆಗೆ ಯತ್ನಿಸಿ ಜೈಲುಪಾಲಾಗಿರುವ ಮುಹಮ್ಮದ್‌ ಆಶಿಕ್‌ ಹಾಗೂ ಮಹಮ್ಮದ್‌ ಸಕ್ಲೇನ್‌, ಪಿಜನ್‌ ಕಾಲ್‌ ಸಿಸ್ಟಮ್‌ ಕರೆ ಮಾಡಲು ತಡವಾಯಿತೆಂದು ಹೇಳಿ ಕರ್ತವ್ಯದಲ್ಲಿದ್ದ ಜೈಲರ್‌ ಎಸ್‌ಎ. ಶಿರೋಳ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕುವ ಮೂಲಕ ಅವರ ವಿರುದ್ಧ ಜೋರಾಗಿ ಕೂಗಾಡಿದ್ದಾರೆ.

ನಂತರ ಸಕ್ಲೇನ್‌, ಅಡುಗೆ ಕೋಣೆಯಲ್ಲಿರುವ ಸೌಟು & ಮರದ ಕುರ್ಚಿಯಿಂದ ಸಿಬ್ಬಂದಿಗೆ ಹಲ್ಲೆಗೆ ಪ್ರಯತ್ನಿಸಿದ್ದಾನೆ. ಅಷ್ಟೇಅಲ್ಲ ಅಧೀಕ್ಷಕರ ಕಚೇರಿಯಿಂದ ಕರೆದುಕೊಂಡು ಹೋಗುವಾಗ ಸಿಬ್ಬಂದಿಯೊಂದಿಗೆ ಮತ್ತೆ ಗಲಾಟೆ ಆರಂಭಿಸಿ ಸಿಬ್ಬಂದಿಯನ್ನು ತಳ್ಳಿ ಕೊಠಡಿಯಲ್ಲಿದ್ದ ಬೆಂಕಿ ನಂದಿಸುವ ಯಂತ್ರವನ್ನು ತೆಗೆಯಲು ಪ್ರಯತ್ನಿಸಿದ್ದಾರೆ.
ಈ ನಡುವೆ ಕರ್ತವ್ಯದಲ್ಲಿದ್ದ ಜಿಲ್ಲಾ ಕಾರಾಗೃಹ ಅಧೀಕ್ಷಕ ಸಿದ್ದರಾಜು ಬಿ. ಪಾಟೀಲ್‌ ಹಾಗೂ ಸಿಬ್ಬಂದಿಗೆ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದಾಗಿ ದೂರಲಾಗಿದೆ. ಅದರಂತೆ ಹಿರಿಯಡ್ಕ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಹಿನ್ನಲೆಯಲ್ಲಿ ಆರೋಪಿಗಳನ್ನು ಬೇರೆ ಸೆಂಟ್ರಲ್‌ ಜೈಲಿಗೆ ಸ್ಥಳಾಂತರ ಮಾಡುವಂತೆ ಜೈಲು ಅಧೀಕ್ಷಕರು ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು ಅದರಂತೆ ಕೋರ್ಟ್‌ ಕೂಡ ಬೇರೆ ಸೆಂಟ್ರಲ್‌ ಜೈಲಿಗೆ ಸ್ಥಳಾಂತರಿಸುವುದಕ್ಕೆ ಅನುಮತಿಯನ್ನು ನೀಡಿದೆ.

ಮಗುಚಿ ಬಿದ್ದ ಹಿಟಾಚಿ ಅಡಿಗೆ ಸಿಲುಕಿ ಯುವಕ ಮೃತ್ಯು

ಕಾಸರಗೋಡು: ಹಿಟಾಚಿ ಯಂತ್ರ ಮಗುಚಿ ಬಿದ್ದು ಯುವಕನೋರ್ವ ಮೃತಪಟ್ಟ ದಾರುಣ ಘಟನೆ ಜೂ .೨೫ ರ ಮಂಗಳವಾರ ಬೆಳಿಗ್ಗೆ ಬೇಡಡ್ಕ ಠಾಣಾ ವ್ಯಾಪ್ತಿಯ ಬಂದಡ್ಕದಲ್ಲಿ ನಡೆದಿದೆ.

ಮೃತ ಯುವಕನನ್ನು ಬಂದಡ್ಕದ ಪ್ರೀತಂ ಲಾಲ್ ಚಂದ್ (22) ಎಂದು ಗುರುತಿಸಲಾಗಿದೆ. ಈತ ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಮಿನಿ ಚಂದ್ರನ್ ರವರ ಪುತ್ರ ಅವರಿಗೆ ಸೇರಿದ ಜೆಸಿಬಿ ಯಂತ್ರ ತೊಳೆಯುತ್ತಿದ್ದಾಗ ಈ ದುರಂತ ಸಂಭವಿಸಿದೆ

ಬಂದಡ್ಕ ಪಡುಪ್ಪುನಲ್ಲಿರುವ ಸಂಬಂಧಿಕರ ಮನೆಯಲ್ಲಿ ಈ ಘಟನೆ ನಡೆದಿದ್ದು, ಮನೆಯಂಗಳದಲ್ಲಿ ನಿಲ್ಲಿಸಿದ್ದ ಹಿಟಾಚಿ ತೊಳೆಯುತ್ತಿದ್ದಾಗ ಮಗುಚಿ ಬಿದ್ದಿದ್ದು, ಅದರಡಿ ಸಿಲುಕಿದ್ದ ಲಾಲ್ ಅವರನ್ನು ತಕ್ಷಣ ರಕ್ಷಿಸಿ ಆಸ್ಪತ್ರೆಗೆ ಸಾಗಿಸಿದರೂ ಜೀವ ಉಳಿಸಲಾಗಲಿಲ್ಲ. ಇವರ ಸಹೋದರ ಗೌತಮ್ ಲಾಲ್ ರವರ ಜೆಸಿಬಿ ಯಂತ್ರದಲ್ಲಿ ಸಹಾಯಕರಾಗಿ
ಕೆಲಸ ನಿರ್ವಹಿಸುತ್ತಿದ್ದರು. ಬೇಡಡ್ಕ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ

Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ಭಾನುಪ್ರಕಾಶ್ ಅವರಿಗೆ ನುಡಿನಮನ

ತೀರ್ಥಹಳ್ಳಿಯಲ್ಲಿ ಭಾನುಪ್ರಕಾಶ್ ಅವರಿಗೆ ನುಡಿನಮನ

– ಭಾನುಪ್ರಕಾಶ್ ಸೇವೆ ನೆನೆದ ಶಾಸಕ ಆರಗ ಜ್ಞಾನೇಂದ್ರ
– ನಾನು ಈ ಸ್ಥಾನದಲ್ಲಿರಲು ಬಾನು ಅವರ ಕೊಡುಗೆ ಇದೆ: ಆರಗ

NAMMUR EXPRESS NEWS NEWS
ತೀರ್ಥಹಳ್ಳಿ : ಇತ್ತೀಚಿಗೆ ನಿಧನರಾದ ಬಿಜೆಪಿ ಪಕ್ಷದ ಮಾಜಿ ವಿಧಾನ ಪರಿಷತ್ ಸದಸ್ಯ, ಹಿರಿಯ ಬಿಜೆಪಿ ನಾಯಕ ಭಾನುಪ್ರಕಾಶ್ ಅವರಿಗೆ ಭಾವಪೂರ್ವ ಶ್ರದ್ಧಾಂಜಲಿ ಹಾಗೂ ನುಡಿ ನಮನ ಕಾರ್ಯಕ್ರಮ ತೀರ್ಥಹಳ್ಳಿಯ ಬಂಟರ ಭವನದಲ್ಲಿ ನೆರವೇರಿಸಲಾಯಿತು.

ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಶಾಸಕ ಆರಗ ಜ್ಞಾನೇಂದ್ರ ನಾನು ಕಾಲೇಜಿಗೆ ಶಿವಮೊಗ್ಗಕ್ಕೆ ಹೋದಾಗಿನಿಂದಲೂ ಭಾನು ಪ್ರಕಾಶ್ ಅವರು ನನಗೆ ಪರಿಚಯ. ನನಗಿಂತ ಎರಡು ಮೂರು ವರ್ಷ ಕಿರಿಯರು. ಸಂಘದ ಶಾಖೆಗೆ ನಾವು ಒಟ್ಟಿಗೆ ಹೋದವರು. ಈಗಲೂ ಕೂಡ ಭಾನು ನನ್ನ ಜೊತೆ ಇಲ್ಲ ಎಂದು ನನಗೆ ಒಪ್ಪಿಕೊಳ್ಳಲು ಆಗುತ್ತಿಲ್ಲ. ಭಾನು ಇಲ್ಲ ಎಂದು ಮಾನಸಿಕವಾಗಿ ಒಪ್ಪಿಕೊಳ್ಳಲು ನನಗೆ ಆಗುತ್ತಿಲ್ಲ ಎಂದರು. ನಾವು ಒಟ್ಟಿಗೆ ಹೋಗಿ ಕಾರ್ಯಕರ್ತರನ್ನು ಭೇಟಿ ಮಾಡುವುದು ಅವರ ಜೊತೆ ಮಾತನಾಡುವುದು, ಸಂಘಟನೆ ಬಗ್ಗೆ ಹೇಳುವುದು ಮಾಡುತ್ತಿದ್ದೆವು. ಅವರ ಊರೇ ಸಂಸ್ಕಾರವಂತರ ಊರು. ನಾನು ಇಂದು ಈ ಸ್ಥಾನದಲ್ಲಿ ಇರಲು ಭಾನು ಅವರ ತುಂಬಾ ಕೊಡುಗೆ ಇದೆ ಎಂದರು.

ಬಿಜೆಪಿ ಮಂಡಲದ ಅಧ್ಯಕ್ಷ ಹೆದ್ದೂರು ನವೀನ್ ಅವರು ಭಾನುಪ್ರಕಾಶ್ ಅವರು ಆಸ್ಪತ್ರೆ ಸೇರಿದಾಗ ನನಗೆ ಬಹಳ ದುಃಖವಾಯಿತು. ನಾವು ಚಿಕ್ಕವರು ಎಂದು ಯಾವುದೇ ತಾರತಮ್ಯವಿಲ್ಲದೆ ಅಷ್ಟು ಸಲಿಗೆಯಿಂದ ಪ್ರೀತಿಯಿಂದ ಭಾನುಪ್ರಕಾಶ್ ಅವರು ನಮ್ಮನ್ನು ಮಾತನಾಡಿಸುತ್ತಿದ್ದರು. ಶ್ರದ್ಧಾಂಜಲಿ ಸಭೆ ನಮ್ಮ ಸಂಸ್ಕೃತಿಯ ಒಂದು ಭಾಗವಾಗಿದೆ ಎಂದರು.
ಭಾರತಿಪುರ ದಿನೇಶ್ ಮಾತನಾಡಿ, ಭಾನುಪ್ರಕಾಶ್ ಹಾಗೂ ನನ್ನ ಸಂಬಂಧ 1977 ರಿಂದ ಇದೆ. ಭಾನುಪ್ರಕಾಶ್ ಅವರು ಜಿಲ್ಲಾಧ್ಯಕ್ಷರಾಗಿ, ಪ್ರಾಂತ್ಯದ ಉಪಾಧ್ಯಕ್ಷರಾಗಿ ಸಂಘಟನೆ ಏನೇನು ಅಪೇಕ್ಷೆ ಪಟ್ಟಿದೆ ಎಲ್ಲಾ ಕೆಲಸಗಳನ್ನು ಅತ್ಯಂತ ನಿಷ್ಠೆಯಿಂದ ಪ್ರಾಮಾಣಿಕವಾಗಿ ಪ್ರಭಾವಶಾಲಿಯಾಗಿ ನಿರ್ವಹಿಸಿದಂತ ವ್ಯಕ್ತಿ ಅವರು ಎಂದರು.
ಕುಕ್ಕೆ ಪ್ರಶಾಂತ್ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಬಿಜೆಪಿಯ ಹಿರಿಯ ನಾಯಕರು, ಯುವ ನಾಯಕರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Categories
ಚಿತ್ರದುರ್ಗ ದಾವಣಗೆರೆ

ನಕ್ಷತ್ರ ಆಮೆಗಳ ಕಳ್ಳತನ ಗ್ಯಾಂಗ್ ಅರೆಸ್ಟ್!

ನಕ್ಷತ್ರ ಆಮೆಗಳ ಕಳ್ಳತನ ಗ್ಯಾಂಗ್ ಅರೆಸ್ಟ್!

– ನಕ್ಷತ್ರ ಆಮೆ ಕಳ್ಳತನ ಮಾಡುತ್ತಿದ್ದ ನಾಲ್ಕು ಜನರ ಬಂಧನ
– 32 ನಕ್ಷತ್ರ ಆಮೆಗಳು ವಶ: ಹೊಸದುರ್ಗದಲ್ಲಿ ಘಟನೆ

NAMMUR EXPRESS NEWS
ಹೊಸದುರ್ಗ: ಅಳಿವಿನ ಅಂಚಿನಲ್ಲಿರುವ ಅಪರೂಪದ ಜೀವಿ ನಕ್ಷತ್ರ ಆಮೆಗಳ ಕಳ್ಳತನ ಪ್ರಕರಣ ಹೊಸದುರ್ಗ ತಾಲೂಕು ಶ್ರೀರಾಂಪುರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.

ಹೊಸದುರ್ಗ ತಾಲೂಕು ಮತ್ತೋಡು ಹೋಬಳಿಯ ಕಂಚೀನಗರ ಸಮೀಪದ ಕುದುರೆ ಕಣಿವೆ ಗುಡ್ಡಗಾಡು ಪ್ರದೇಶದಲ್ಲಿ ನಕ್ಷತ್ರ ಆಮೆಗಳನ್ನು ಹಿಡಿಯುತ್ತಿದ್ದ ತಂಡದ ಮೇಲೆ ಶ್ರೀರಾಂಪುರ ಪೊಲೀಸರು ದಾಳಿ ನಡೆಸಿ, ಚೀಲದಲ್ಲಿ ತುಂಬಿಕೊಂಡಿದ್ದ 32 ನಕ್ಷತ್ರ ಆಮೆಗಳನ್ನು ವಶಪಡಿಸಿಕೊಂಡಿದ್ದಾರೆ.

ಶ್ರೀರಾಂಪುರ ಸಮೀಪದ ಕಂಚಿ ನಗರ ಗ್ರಾಮದ ಹೊರ ವಲಯದಲ್ಲಿ ಶನಿವಾರ ವಾಹನವನ್ನು ನಿಲ್ಲಿಸಿಕೊಂಡು ಅನುಮಾನಸ್ಪದವಾಗಿ ಓಡಾಡುತ್ತಿದ್ದ ಅಪರಿಚಿತರನ್ನು ಗಮನಿಸಿದ ಸ್ಥಳಿಯರು ಶ್ರೀರಾಂಪುರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಖಚಿತ ಮಾಹಿತಿ ಮೇರೆಗೆ ದಾಳಿ ನೆಡೆಸಿದ ಶ್ರೀರಾಂಪುರ ಪೊಲೀಸರು ನಕ್ಷತ್ರ ಆಮೆಗಳನ್ನು ಬೇಟೆಯಾಡುತ್ತಿದ್ದವರನ್ನು ಪತ್ತೆ ಹಚ್ಚಿದ್ದಾರೆ.

ಬೇಟೆಗಾರರಿಂದ 32 ನಕ್ಷತ್ರ ಆಮೆಗಳನ್ನು ವಶಪಡಿಸಿಕೊಂಡು ಚಿಕ್ಕಬಳ್ಳಾಪುರ ಮೂಲದ 3 ಜನ ಹಾಗೂ ಕೋಲಾರ ಮೂಲದ ಒಬ್ಬ ಒಟ್ಟು ನಾಲ್ಕು ಜನರನ್ನು ಬಂಧಿಸಲಾಗಿದೆ. ಘಟನೆ ಸಂಬಂಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ವಲಯ ಅರಣ್ಯಧಿಕಾರಿ ಸುನಿಲ್‌ಕುಮಾ‌ರ್ ಪ್ರತಿಕ್ರಿಯಿಸಿ, ಮಾರಿಕಣಿವೆ ಹಾಗೂ ಲಕ್ಕಿಹಳ್ಳಿ ಅರಣ್ಯ ಪ್ರದೇಶಗಳ ವ್ಯಾಪ್ತಿಯಲ್ಲಿ ನಕ್ಷತ್ರ ಆಮೆಗಳಿದ್ದು ಅಳಿವಿನ ಅಂಚಿನಲ್ಲಿವೆ. ಇವುಗಳನ್ನು ವಿಷ್ಣುವಿನ ವಾಹನಗಳು ಎಂಬ ನಂಬಿಕೆ ನಮ್ಮ ಜನರಲ್ಲಿದ್ದು ಅವುಗಳನ್ನು ಮನೆಯಲ್ಲಿ ಪೂಜಿಸಿದರೆ ಒಳ್ಳೆಯದಾಗುವುದೆಂಬ ನಂಬಿಕೆ ಇರುವುದರಿಂದ ಇವುಗಳಿಗೆ ಹೆಚ್ಚಿನ ಬೇಡಿಕೆ ಇದೆ ಹಾಗಾಗಿ. ಇವುಗಳನ್ನು ಹಿಡಿದು ಮಾರಾಟ ಮಾಡಲಾಗುತ್ತದೆ. ಇವುಗಳನ್ನು ಸಂರಕ್ಷಿಸುವುದು ಎಲ್ಲರ ಹೊಣೆಯಾಗಿದೆ ಎಂದು ಹೇಳಿದ್ದಾರೆ.

Categories
ತೀರ್ಥಹಳ್ಳಿ ಶಿಕ್ಷಣ

ತೀರ್ಥಹಳ್ಳಿ: ಪ್ರಾಂಶುಪಾಲರು, ಮುಖ್ಯೋಪಾಧ್ಯಾಯರಿಗೆ ಗೌರವ ಅಭಿನಂದನಾ ಸಮಾರಂಭ..!

ತೀರ್ಥಹಳ್ಳಿ: ಪ್ರಾಂಶುಪಾಲರು, ಮುಖ್ಯೋಪಾಧ್ಯಾಯರಿಗೆ ಗೌರವ ಅಭಿನಂದನಾ ಸಮಾರಂಭ..!

– ತಾಲೂಕಿನ 43 ಶಾಲೆಗಳಲ್ಲಿ 39 ಶಾಲೆಗಳಿಗೆ ಎ ಗ್ರೇಡ್: ಅಭಿನಂದನೆ
– ತೀರ್ಥಹಳ್ಳಿ ಶಿಕ್ಷಣ ಸಾಧನೆ ಬಗ್ಗೆ ಸಂತೋಷ ವ್ಯಕ್ತಪಡಿಸಿದ ಆರಗ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಜೂನ್ 24ರ ಸೋಮವಾರ ತಾಲೂಕು ಪಂಚಾಯಿತಿ ನೂತನ ಸಭಾಂಗಣದಲ್ಲಿ ಕಳೆದ ಪರೀಕ್ಷೆಗಳಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ತಂದುಕೊಟ್ಟ ಪಿಯುಸಿ ಮತ್ತು ಪ್ರೌಢಶಾಲೆಗಳ ಪ್ರಾಂಶುಪಾಲರು ಮತ್ತು ಮುಖ್ಯೋಪಾಧ್ಯಾಯರಿಗೆ ಕ್ಷೇತ್ರದ ಶಾಸಕರಾದ ಆರಗ ಜ್ಞಾನೇಂದ್ರ ಅವರಿಂದ ಅಭಿನಂದನಾ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಆರಗ ಜ್ಞಾನೇಂದ್ರ ಅವರು ಈ ತಾಲೂಕಿನಲ್ಲಿ ಫಲಿತಾಂಶ ಬರುವಾಗ ನಾನು ಶಿವಮೊಗ್ಗದಲ್ಲಿದ್ದೆ, ಬಹಳ ಜನ ನನಗೆ ಅಭಿನಂದನೆ ಹೇಳಿದರು. ಏನ್ರೀ ನಿಮ್ಮ ತಾಲೂಕು ಇಷ್ಟು ಒಳ್ಳೆ ರಿಸಲ್ಟ್ ಕೊಟ್ಟಿದೆ ಎಂದು ಹೇಳಿದರು. ನಾನು ಅದಕ್ಕೆ ಹೇಳಿದೆ ನಮ್ಮ ತಾಲೂಕಿನ ಎಲ್ಲ ಶಿಕ್ಷಕರ ಪ್ರಯತ್ನದಿಂದ ಈ ರಿಸಲ್ಟ್ ಬಂದಿದೆ ಎಂದು ಹೇಳಿದೆ. 43 ಶಾಲೆಗಳಲ್ಲಿ 39 ಶಾಲೆಗಳಿಗೆ ಎ ಗ್ರೇಡ್ ಬಂದಿದೆ ಇದು ಹೆಮ್ಮೆ ಪಡುವ ವಿಷಯ ಎಂದು ಸಂತೋಷ ವ್ಯಕ್ತಪಡಿಸಿದರು.

ಶಿವಮೊಗ್ಗ ಜಿಲ್ಲೆಗೆ ತೀರ್ಥಹಳ್ಳಿ ನಂಬರ್ 1

ಕ್ಷೇತ್ರ ಶಿಕ್ಷಣಾಧಿಕಾರಿ ವೈ ಗಣೇಶ್ ಮಾತನಾಡಿ, ನಮ್ಮ ತಾಲೂಕು ಈ ವರ್ಷದ ಶೈಕ್ಷಣಿಕ ಸಾಲಿನಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದು, 97.85% ಫಲಿತಾಂಶವನ್ನು ತಾಲೂಕು ಪಡೆದಿದೆ. ಈ ಫಲಿತಾಂಶದಿಂದ ತಾಲೂಕಿಗೆ ಹೆಮ್ಮೆಯನ್ನು ತಂದಿರುವಂತಹ ಎಲ್ಲಾ ಶಿಕ್ಷಕರಿಗೂ ಅಭಿನಂದನೆ ತಿಳಿಸಿದರು.

ತಾಲೂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೈಲಾ ಮಾತನಾಡಿ ಭಾರತೀಯ ಪರಂಪರೆಯಲ್ಲಿ ಶಿಕ್ಷಕರನ್ನು ಉನ್ನತ ಸ್ಥಾನಕ್ಕಿರಿಸಿ ಅವರನ್ನು ಗುರು ಎಂದು ಕರೆಯಲಾಗುತ್ತದೆ, ಅಂತಹ ಗುರುಗಳನ್ನು ಗೌರವಿಸಲು ಈ ಒಂದು ಕಾರ್ಯಕ್ರಮವನ್ನು ಆಯೋಜಿಸಿರುವಂತಹ ನಮ್ಮ ಹೆಮ್ಮೆಯ ಶಾಸಕ ಜ್ಞಾನೇಂದ್ರ ಅವರಿಗೆ ಧನ್ಯವಾದಗಳು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಸಕ ಅರಗ ಜ್ಞಾನೇಂದ್ರ, ತಹಶೀಲ್ದಾರ್ ಜಕ್ಕಣ್ಣ ಗೌಡರ್, ತಾಲೂಕು ಪಂಚಾಯಿತಿಯ ಕಾರ್ಯನಿರ್ವಣಾಧಿಕಾರಿ ಶೈಲಾ, ಕ್ಷೇತ್ರ ಶಿಕ್ಷಣಾಧಿಕಾರಿ ವೈ ಗಣೇಶ್, ಪ್ರಾಂಶುಪಾಲರಾದ ಸುಧಾ ಹಾಗೂ ಗಣೇಶ್, ಗಿರಿರಾಜ್, ಸಂದೇಶ್ ಜವಳಿ, ಸೊಪ್ಪುಗುಡ್ಡೆ ರಾಘವೇಂದ್ರ, ನಾಗರಾಜ್ ಶೆಟ್ಟಿ ಹಾಗೂ ಪ್ರಾಂಶುಪಾಲರು ಮತ್ತು ಮುಖ್ಯೋಪಾಧ್ಯರು ಉಪಸ್ಥಿತರಿದ್ದರು.

Categories
ಶಿವಮೊಗ್ಗ

ಟಾಪ್ 5 ನ್ಯೂಸ್ ಶಿವಮೊಗ್ಗ

ಟಾಪ್ 5 ನ್ಯೂಸ್ ಶಿವಮೊಗ್ಗ

ಶಿವಮೊಗ್ಗ : ವಿದ್ಯುತ್ ಶಾಕ್ ಗೆ ಕಾರ್ಮಿಕರು ಗಂಭೀರ ಗಾಯ
– ಶಿವಮೊಗ್ಗ : ಟೀ ಕುಡಿಯಲು ಹೋದ ಗ್ಯಾಪ್ ನಲ್ಲಿ 10 ಎಮ್ಮೆಗಳು ಕಾಣೆ
– ಶಿವಮೊಗ್ಗ : ಅನೈತಿಕ ಸಂಬಂಧದಿಂದ ಪತಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ ಪತ್ನಿ
– ಶಿವಮೊಗ್ಗ : ರೌಡಿಶೀಟರ್‌ಗೆ ಮಾರಕಾಸ್ತ್ರ ದಿಂದ ಹಲ್ಲೆ ಗಂಭೀರ
– ಶಿವಮೊಗ್ಗ: ಬಾಂಗ್ಲಾ ಯುವಕನ ಮಾಹಿತಿ ನೀಡಲು ಮನವಿ

NAMMUR EXPRESS NEWS
ಶಿವಮೊಗ್ಗ: ಕಟ್ಟಡದಲ್ಲಿ ಶೀಟ್ ಹಾಕಲು ಸಾರ್ವೆ ಹಾಕುವಾಗ ವಿದ್ಯುತ್ ಲೈನ್ ತಗುಲಿ ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಒಬ್ಬರು ಖಾಸಗಿ ಆಸ್ಪತ್ರೆಗೆ ದಾಖಲಾದರೆ ಇನ್ನೊಬ್ಬರು ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಕಾಶೀಪುರದದಲ್ಲಿ ನೂತನ ಕಟ್ಟಡ ನಿರ್ಮಾಣದ ವೇಳೆ ಶೀಟು ಹಾಕಲು ಮುಂದಾಗಿದ್ದ ಗಣೇಶ್ (26) ಮತ್ತು ರಾಜು (32) ಯುವಕರು ಸಾರ್ವೆ ಹಾಕುವಾಗ ಹೈಟೆನ್ಷನ್ ವಯರ್ ತಗುಲಿದೆ.

ಗಣೇಶ್ ಮತ್ತು ರಾಜುವಿಗೆ ಗಂಭೀರ ಗಾಯಗಳಾಗಿವೆ. ಗಣೇಶ್ ಗೆ ತಲೆಗೆ ಹೊಡೆದಿದೆ. ರಾಜುವಿಗೆ ಎಡಗೈಗೆ ಹೊಡೆದಿದೆ. ರಾಜು ಮೆಗ್ಗಾನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ. ಗಣೇಶ್ ಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಣೇಶ್ ಗೆ ಮದುವೆಯಾಗಿದ್ದು ಒಂದೂವರೆ ವರ್ಷದ ಮಗುವಿದೆ.‌ ರಾಜೂ ಚಳೂರಿನ ದೋಡ್ಡೇರಿ ಹುಡುಗನಾಗಿದ್ದಾನೆ. ಕಟ್ಟಡ ಮಾಲೀಕರು ಮತ್ತು ಮೇಸ್ತ್ರಿ ವಿರುದ್ಧ ಕುಟುಂಬ ಆಕ್ರೋಶ ವ್ಯಕ್ತಪಡಿಸಿದೆ. ಕಾರ್ಮಿಕ ಇಲಾಖೆ ಕಾರ್ಮಿಕರ ಸುರಕ್ಷತೆ ಬಗ್ಗೆ ಒತ್ತು ನೀಡುವಂತೆ ಕುಟುಂಬ ಆಗ್ರಹಿಸಿದೆ.

– ಶಿವಮೊಗ್ಗ : ಟೀ ಕುಡಿಯಲು ಹೋದ ಗ್ಯಾಪ್ ನಲ್ಲಿ 10 ಎಮ್ಮೆಗಳು ಕಾಣೆ

ಶಿವಮೊಗ್ಗ: ಟೀ ಕುಡಿಯಲು ಹೋದ ಗ್ಯಾಪ್ ನಲ್ಲಿ 10 ಎಮ್ಮೆಗಳು ಕಾಣೆಯಾಗಿವೆ. ಎಮ್ಮೆಗಳನ್ನ ಕದ್ದುಕೊಂಡು ಹೋಗಿದ್ದು ಇವುಗಳನ್ನ ಹುಡುಕಿಕೊಡಿ ಎಂದು ಮಾಲೀಕರು ತುಂಗ ನಗರ ಪೊಲೀಸ್ ಠಾಣೆಗೆ ದೂರು ನಿಡಿದ್ದಾರೆ. ವಡ್ಡಿನಕೊಪ್ಪದ ಶಿವರಾಜ್ ಎಂಬುವರು ತಮ್ಮ ಎಮ್ಮೆಗಳನ್ನ ಹೊಡೆದುಕೊಂಡು ಸೂಳೆಬೈಲಿನ ಸಂತೋಷ್ ಪೆಟ್ರೋಲ್ ಬಂಕ್ ಹಿಂಭಾಗದಲ್ಲಿ 22 ಎಮ್ಮೆಗಳನ್ನ ಮೇಯಿಸಲು ಬಿಟ್ಟು ಚಹ ಕುಡಿಯಲು ಅಂಗಡಿಗೆ ಹೋಗಿದ್ದಾರೆ. ಚಹ ಕುಡಿಯಲು ಹೋದ ವೇಳೆಯೂ ಸಂಜೆಯಾದ ಕಾರಣ ಚಹಕುಡಿದು ವಾಪಾಸ್ ಬಂದಾಗ 22 ಎಮ್ಮೆಗಳು ಮೇಯುತ್ತಿದ್ದ ಜಾಗದಲ್ಲಿ ಇರಲಿಲ್ಲ. ಎಮ್ಮೆಗಳು ಮನೆಗೆ‌ ಹೋಗಿರಬೇಕೆಂದು ಶಿವರಾಜ್ ಮನೆಗೆ ಹೋಗಿದ್ದಾರೆ. ಮನೆಗೂ ಬಾರದಿದ್ದಾಗ ಶಿವರಾಜ್ ಗಾಬರಿಗೊಂಡಿದ್ದಾರೆ. ಎಮ್ಮೆಗಳಾಗಲಿ ಹಸುಗಳಾಗಲಿ ತಾವಿದ್ದ ಹಟ್ಟಿಗೆ ಬಂದೇ ಬರುತ್ತವೆ ಎಂಬುದು ಶಿವರಾಜ್ ಗೆ ಗೊತ್ತಿದ್ದರೂ. ಯಾರಾದರು ಕದ್ದುಕೊಂಡು ಹೋದರೆ ಅವುಗಳು ಬರುವುದು ಹೇಗೆ‌ ಎಂಬ ಚಿಂತೆಗೆ ಜಾರಿದ್ದಾರೆ. ಆದರೆ ಮಧ್ಯರಾತ್ರಿಯ 12 ವೇಳೆಗೆ ನಿಗೂಢವಾಗಿ 12 ಎಮ್ಮೆಗಳು ಹಟ್ಟಿಗೆ ವಾಪಾಸಾಗಿವೆ.
ಉಳಿದ 10 ಎಮ್ಮೆಗಳು ಮಿಸ್ಸಿಂಗ್ ಆಗಿವೆ. ಈ ನಿಗೂಡತೆಯ ಬಗ್ಗೆ ಎಫ್ಐಆರ್ ನಲ್ಲಿ ಎಲ್ಲೂ ವಿವರಣೆಗಳಿಲ್ಲ. ವಾಪಾಸ್ ಬಾರದ 10 ಎಮ್ಮೆಗಳನ್ನ ಹುಡುಕಿಕೊಡಿ ಎಂದು ಶಿವರಾಜ್ ತುಂಗನಗರ ಠಾಣೆಗೆ ದೂರು ನೀಡಿದ್ದಾರೆ. ಘಟನೆ ನಡೆದಿದ್ದು ಜೂ.15 ರಂದು ದೂರು ದಾಖಲಾಗಿದ್ದು, ಎಲ್ಲಡೆ ಹುಡುಕಿದರೂ ಎಮ್ಮೆಗಳು ಪತ್ತೆಯಾಗದ ಕಾರಣ ನಿನ್ನೆ ಶಿವರಾಜ್ ತಡವಾಗಿ ದೂರು ನೀಡಿದ್ದಾರೆ.

– ಶಿವಮೊಗ್ಗ : ಅನೈತಿಕ ಸಂಬಂಧದಿಂದ ಪತಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ ಪತ್ನಿ

ಶಿವಮೊಗ್ಗ: ತನ್ನ ಪತಿಯನ್ನೆ ಮಹಿಳೆಯೊಬ್ಬರು ವಿಷಕೊಟ್ಟು ಉಸಿರುಗಟ್ಟಿಸಿ ಹತ್ಯೆ ಮಾಡಿದ ಘಟನೆ ಬಗ್ಗೆ ನೆರೆಯ ಜಿಲ್ಲೆ ಚಿಕ್ಕಮಗಳೂರು ಸಖರಾಯಪಟ್ಟಣದಲ್ಲಿ ವರದಿಯಾಗಿದೆ. ಕೃತ್ಯಕ್ಕೆ ಅನೈತಿಕ ಸಂಬಂಧ ಕಾರಣ ಎನ್ನಲಾಗಿದೆ. ಇಲ್ಲಿನ ಗ್ರಾಮವೊಂದರ ನಿವಾಸಿಯ ಪತ್ನಿ ಶೃತಿ ಎಂಬಾತೆ ಇನ್ನೊಬ್ಬನ ಜೊತೆ ಅಕ್ರಮ ಸಂಬಂಧ ಹೊಂದಿದ್ದರು. ಈ ವಿಚಾರ ಪತಿಗೂ ಸಹ ಗೊತ್ತಾಗಿತ್ತು. ಇದರ ನಡುವೆ ಕಳೆದ ಜೂನ್ 16 ರಂದು ರಾತ್ರಿ ಶೃತಿ ಮತ್ತು ಕಿರಣ್ ಕುಮಾರ್ ಇಬ್ಬರು, ಶೃತಿಯ ಪತಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ ಎಂದು ಹೇಳಿದ್ದಾರೆ. ಆ ಬಳಿಕ ಕಾರಿನಲ್ಲಿ ಶಿವಮೊಗ್ಗ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಹೀಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಕುತ್ತಿಗೆ ಬಿಗಿದು ಬಾಯಿ, ಮೂಗು ಮುಚ್ಚಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಅಲ್ಲಿಂದ ಊರಿಗೆ ಬಂದು ಶೃತಿ ತಮ್ಮ ಪತಿ ಹೊಟ್ಟೆ ನೋವಿನಿಂದ ಸಾವನ್ನಪ್ಪಿದ್ದಾನೆಂದು ತಿಳಿಸಿ ಊರಿನವರನ್ನು ನಂಬಿಸಿದ್ದರು. ಬಳಿಕ ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ಪೊಲೀಸರು ತನಿಖೆ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ.

– ಶಿವಮೊಗ್ಗ : ರೌಡಿಶೀಟರ್‌ಗೆ ಮಾರಕಾಸ್ತ್ರ ದಿಂದ ಹಲ್ಲೆ ಗಂಭೀರ

ಶಿವಮೊಗ್ಗ: ನಗರದ ಎಂಆ‌ರ್ ಎಸ್ ಸರ್ಕಲ್ ಸಮೀಪ ರೌಡಿಶೀಟರ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿರುವ ಘಟನೆ ಸಂಭವಿಸಿದೆ. ಕಾರ್ತಿಕ್ ಅಲಿಯಾಸ್ ಕತ್ತೆ ಕಾರ್ತಿಕ್ ಹಲ್ಲೆಗೊಳಗಾದ ವ್ಯಕ್ತಿ. ಈತನನ್ನು ಮನೆಯಿಂದ ಕರೆಯಿಸಿಕೊಂಡು ಹಲ್ಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಹೊಸಮನೆ ನಿವಾಸಿಯಾಗಿರುವ ಕಾರ್ತಿಕ್‌ಗೆ ರಾತ್ರಿ ಕರೆ ಮಾಡಿದ ಕೆಲವರು ಬರುವಂತೆ ತಿಳಿಸಿದ್ದರು. ಆ ಬಳಿಕ ಈತನನ್ನು ಕರೆದುಕೊಂಡು ಹೋದ ಕೆಲವರು ವಿದ್ಯಾನಗರದ ಎಂಆರ್ ಎಸ್ ಬಳಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಹಲ್ಲೆಗೊಳಗಾದ ಕಾರ್ತಿಕ್ ಪುನಃ ತನ್ನ ಮನೆಗೆ ಹೋಗಿದ್ದಾನೆ. ಅಲ್ಲಿಂದ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದುಕೊಂಡು ಆತನಿಗೆ ಚಿಕಿತ್ಸೆ ಕೊಡಿಸಲಾಗಿದೆ. ಹಲ್ಲೆಗೆ ಕಾರಣ ಸ್ಪಷ್ಟವಾಗಿಲ್ಲ. ಕಾರ್ತಿಕ್ ಕೆಲವರ ಹೆಸರುಗಳನ್ನು ಹೇಳಿದ್ದು, ಅದರಂತೆ ಪ್ರಕರಣ ದಾಖಲಾಗಿದೆ. ಕೋಟೆ ಪೊಲೀಸ್ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

– ಶಿವಮೊಗ್ಗ: ಬಾಂಗ್ಲಾ ಯುವಕನ ಮಾಹಿತಿ ನೀಡಲು ಮನವಿ

ಶಿವಮೊಗ್ಗ: ಬಾಂಗ್ಲಾದೇಶದ ಯುವಕ ಮಹಮ್ಮದ್ ರುಮಾನ್ ಹುಸೇನ್ ಬಿನ್ ಮಹಮ್ಮದ್ ಸಿರಾಜುಲ್ಲಾ ಇಸ್ಲಾಂ, (25), ಈತನು ಭದ್ರಾವತಿ ರೈಲ್ವೆ ಸ್ಟೇಷನ್ ಮಾರ್ಕೆಟ್ ಹತ್ತಿರ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದದ್ದಾಗ ಪೊಲೀಸ್ ತನಿಖೆ ವೇಳೆ ತನ್ನಲ್ಲಿ ಯಾವುದೇ ಪಾಸ್‌ಪೋರ್ಟ, ವೀಸಾ ಅಥವಾ ಅಧಿಕೃತ ದಾಖಲೆಗಳು ಇಲ್ಲ ವೆಂದು ಹಿಂದಿ ಭಾಷೆಯಲ್ಲಿ ತಿಳಿಸಿದ್ದಾನೆ. ಈತನ ವಿರುದ್ಧ ಪ್ರಕರಣ ದಾಖಲಾಗಿ ತನಿಖೆ ಕೈಗೊಂಡು ನ್ಯಾಯಲಯಕ್ಕೆ ದೋಷ ‘ರೋಪಣೆ ಪಟ್ಟಿ ಸಲ್ಲಿಸಿದ್ದು ವಿಚಾರಣೆ ನಡೆಯುತ್ತಿದೆ. ಆರೋಪಿಯು ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದಾನೆ. ನ್ಯಾಯಾಲಯವು ಈ ಆರೋಪಿತನ ಪತ್ತೆ ಮತ್ತು ಸ್ಥಿರಾಸ್ಥಿಯ ಮಾಹಿತಿ ಬಗ್ಗೆ ಪ್ರೊಕ್ತಮೇಶನ್ ಹೊರಡಿಸಿದ್ದು, ಈ ವ್ಯಕ್ತಿಯು ಎಲ್ಲಿಯಾದರೂ ಕಂಡು ಬಂದಲ್ಲಿ ಭದ್ರಾವತಿ ಹಳೆನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.

Categories
ಮಂಗಳೂರು

ಕುಮಾರಸ್ವಾಮಿಗೆ ಡಿಕೆಶಿ ಟಾಂಗ್!

ಕುಮಾರಸ್ವಾಮಿಗೆ ಡಿಕೆಶಿ ಟಾಂಗ್!

– ಕುಮಾರಸ್ವಾಮಿ ಅವರಿಗಿಂತ ಮೊದಲು ಚನ್ನಪಟ್ಟಣ ನೋಡಿದ್ದೇನೆ: ಡಿ.ಕೆ.ಶಿವಕುಮಾರ್
– ಜನರನ್ನು ದೇವರು ಎಂದ ಡಿಸಿಎಂ

NAMMUR EXPRESS NEWS
ಮಂಗಳೂರು: ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರು ಚನ್ನಪಟ್ಟಣ ನೋಡುವುದಕ್ಕೂ ಮೊದಲೇ ನಾನು ನೋಡಿದ್ದೇನೆ. ಅವರು ತಡವಾಗಿ ರಾಜಕೀಯಕ್ಕೆ ಬಂದವರು. ಅವರಿಗಿಂತ 10 ವರ್ಷ ಮೊದಲೇ ನನಗೆ ಚನ್ನಪಟ್ಟಣ ಗೊತ್ತು. ನಾನು ಅದೇ ಜಿಲ್ಲೆಯವನು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಬೆಂಗಳೂರಿಂದ ಕುಕ್ಕೆ ಸುಬ್ರಹ್ಯಣ್ಯಕ್ಕೆ ಹೋಗಲು ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಶಿವಕುಮಾರ್‌ಗೆ, ಚನ್ನಪಟ್ಟಣಕ್ಕೆ ನೀವು ಏನೂ ಮಾಡಿಲ್ಲ ಎನ್ನುವ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, ‘ಚನ್ನಪಟ್ಟಣಕ್ಕೆ ನಾನು ಏನು ಮಾಡಿದ್ದೇನೆ, ಏನು ಮಾಡಿಲ್ಲ ಎಂದು ಎಚ್.ಡಿ. ಕುಮಾರಸ್ವಾಮಿಯವರಿಗೇನು ಗೊತ್ತು? ನಾನು 1985ರಲ್ಲೇ ಅವರ ತಂದೆ ವಿರುದ್ಧ ಚುನಾವಣೆಗೆ ನಿಂತವನು. ಕುಮಾರಸ್ವಾಮಿ ಅವರು 1995ರ ಬಳಿಕ ಲೋಕಸಭಾ ಚುನಾವಣೆಗೆ ನಿಂತವರು. ದೊಡ್ಡವರು ಅಧಿಕಾರ ಅನುಭವಿಸಿದರೂ ಚನ್ನಪಟ್ಟಣದಲ್ಲಿ ಏನೂ ಅಭಿವೃದ್ಧಿ ಆಗಿಲ್ಲ ಎಂಬ ಭಾವನೆ ಅಲ್ಲಿನ ಜನರಲ್ಲಿದೆ. ಅಲ್ಲಿನ ಜನರಿಗೆ ಅಳಿಲು ಸೇವೆ ಮಾಡೋಣ. ಹಿಂದೆ ಮಂತ್ರಿಯಾಗಿದ್ದಾಗ ಸೇವೆ ಮಾಡಿದ್ದೇನೆ. ಈಗ ಉತ್ತಮ ಸಮಯ ಒದಗಿ ಬಂದಿದೆ. ಸಣ್ಣ ಸಹಾಯ ಮಾಡೋಣ ಎಂದು ಕಾರ್ಯಪ್ರವೃತ್ತನಾಗಿದ್ದೇನೆ ಎಂದು ಹೇಳಿದರು.
ಚನ್ನಪಟ್ಟಣ ಉಪಚುನಾವಣೆಯಲ್ಲಿ ಸ್ಪರ್ಧಿಸಲು ನನ್ನ ತಮ್ಮ ಡಿ.ಕೆ. ಸುರೇಶ್ ಗೆ ಆಸಕ್ತಿಯಿಲ್ಲ. ಜನರು ಸುರೇಶ್‌ಗೆ ವಿಶ್ರಾಂತಿ ತೆಗೆದುಕೊಳ್ಳುವುದಕ್ಕೆ ಹೇಳಿದ್ದಾರೆ. ಆದರೆ ಅವರಿಗೆ ಪಕ್ಷದ ಕೆಲಸ ಮಾಡಬೇಕೆಂಬ ಆಸೆಯಿದೆ. ನಮ್ಮನ್ನು ನಂಬಿ ಚನ್ನಪಟ್ಟಣದ ಜನ 85ಸಾವಿರ ಮತಕೊಟ್ಟಿದ್ದಾರೆ. ನಮ್ಮನ್ನು ನಂಬಿದ ಜನರ ಕೈ ಬಿಡುವುದಕ್ಕೆ ಆಗುವುದಿಲ್ಲ. ದೇವರಂತ ಜನ ರಾಜ್ಯದಲ್ಲಿ ನಮಗೆ 136 ಸ್ಥಾನ ಗೆಲ್ಲಿಸಿ ಅಧಿಕಾರ ಕೊಟ್ಟಿದ್ದಾರೆ. ಅದನ್ನು ಜನರ ಅಭಿವೃದ್ಧಿಗೆ ವಿನಿಯೋಗಿಸಬೇಕಿದೆ ಎಂದರು.

ಹೆಚ್ಚುವರಿ ಡಿಸಿಎಂ ಸ್ಥಾನಗಳ ಬೇಡಿಕೆ ಬಗ್ಗೆ ಮಾತನಾಡಿ, ನೀವು ದಿನವೂ ಈ ಬಗ್ಗೆ ಸುದ್ದಿ ಮಾಡುತ್ತಿದ್ದೀರಿ. ಇದರಿಂದ ಖುಷಿ ಆಗುವವರಿಗೆ ಆಗಲಿ. ಖುಷಿಪಡುವವರಿಗೆ ಬೇಡ ಎಂದು ಹೇಳಲು ಆಗುತ್ತದೆಯೇ? ಯಾರು ಏನು ಬೇಕಾದರೂ ಬೇಡಿಕೆ ಇಡಲಿ. ಪಕ್ಷವು ಯಾರಿಗೆ ಏನು ಉತ್ತರ ಕೊಡಬೇಕೋ ಕೊಡುತ್ತದೆ’ ಎಂದರು.
ತಮ್ಮ ಮೇಲಿನ ದ್ವೇಷದ ಕಾರಣಕ್ಕೆ ಬಳ್ಳಾರಿ ಜಿಲ್ಲೆಯಲ್ಲಿ ಗಣಿಗಾರಿಕೆಗೆ ರಾಜ್ಯ ಸರ್ಕಾರ ಅನುಮತಿ ನೀಡುತ್ತಿಲ್ಲ ಎಂಬ ಕುಮಾರಸ್ವಾಮಿಯವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಡಿಕೆಶಿ, ‘ಮೈನಿಂಗ್ ಬಗ್ಗೆ ಹೆಚ್ಡಿಕೆ ಅವರಿಗೆ ತಿಳುವಳಿಕೆ ಇದೆಯೋ ಇಲ್ಲವೋ ಗೊತ್ತಿಲ್ಲ. ನನಗಂತೂ ಆ ಬಗ್ಗೆ ಏನೂ ಗೊತ್ತಿಲ್ಲ ಎಂದರು.

ನಾವು ಹಿಂದೂಗಳು… ಕುಟುಂಬ ಸಮೇತ ಪೂಜೆ

ನಾವು ಹಿಂದೂ ಧರ್ಮದವರು. ನಮ್ಮ ರಾಜ್ಯದಲ್ಲಿ ಎಲ್ಲಾ ಸಂಸ್ಕೃತಿಯನ್ನು ಒಟ್ಟಿಗೆ ತೆಗೆದುಕೊಂಡು ಹೋಗುವವರು. ಬಹಳ ದಿನದಿಂದ ಸುಬ್ರಹ್ಮಣ್ಯಕ್ಕೆ ಹೋಗಬೇಕೆಂಬ ಆಸೆಯಿತ್ತು. ಆದ ಕಾರಣ ಕುಟುಂಬ ಸಮೇತ ಹೋಗುತ್ತಿದ್ದೇನೆ. ಅವರವರ ನಂಬಿಕೆ ಪ್ರಕಾರ ಅವರು ಪ್ರಾರ್ಥಿಸುತ್ತಾರೆ ಎಂದು ಕುಕ್ಕೆ ಭೇಟಿಗೆ ಪ್ರತಿಕ್ರಿಯಿಸಿದ್ದಾರೆ.

Categories
ಮೈಸೂರು ಹಾಸನ

ಮೈಸೂರು-ಹಾಸನ: ಟಾಪ್ 4 ನ್ಯೂಸ್..!

ಮೈಸೂರು-ಹಾಸನ: ಟಾಪ್ 4 ನ್ಯೂಸ್..!

– ಹಾಸನ: ಮದುವೆಯಾಗುವುದಾಗಿ ನಂಬಿಸಿ ಮೋಸ; ಕಾನ್‌ಸ್ಟೆಬಲ್‌ ವಿರುದ್ಧ ದೂರು
– ಕೊಡಗು: ವಿದ್ಯುತ್‌ ಸ್ಪರ್ಶಿಸಿ ಮತ್ತೊಂದು ಕಾಡಾನೆ ಸಾವು
– ಮೈಸೂರು: ಸೆರೆಸಿಕ್ಕ ಚಿರತೆ ಜತೆ ಸೆಲ್ಪಿ ತೆಗೆದುಕೊಳ್ಳುವಾಗ ದಾಳಿ!
– ಮಂಗಳಮುಖಿಯರ ಕಿರುಕುಳ: ಆತ್ಮಹತ್ಯೆಗೆ ಶರಣಾದ ಬಾಲಕ!

NAMMUR EXPRESS NEWS
ಹಾಸನ: ಹಾಸನ ಮೂಲದ ಯುವತಿಯೊಬ್ಬರು ಪೊಲೀಸ್‌ ಕಾನ್‌ಸ್ಟೆಬಲ್ ಮೇಲೆ ವಂಚನೆ ಕೇಸ್ ದಾಖಲಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಮುಂಡಗೊಡ ಪೊಲೀಸ್ ಠಾಣೆಯಲ್ಲಿ ಪೊಲೀಸ್‌ ಠಾಣೆ ಕಾನ್‌ಸ್ಟೆಬಲ್ ಗಿರೀಶ್ ಎಸ್ ಎಮ್ ವಿರುದ್ಧ ಸುಚಿತ್ರಾ ಎಂಬ ಯುವತಿ ಕೇಸ್ ದಾಖಲಿಸಿದ್ದಾರೆ. ಹಾಸನ ಜಿಲ್ಲಾ ಚೆನ್ನರಾಯಪಟ್ಟಣ ಮೂಲದ ಸುಚಿತ್ರಾ ಎಂಬ ಯುವತಿಗೆ ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ ಯುವತಿಯಿಂದ ಕಾನ್‌ಸ್ಟೆಬಲ್ ಗಿರೀಶ್ 20 ಲಕ್ಷ ಪಡೆದಿದ್ದ. ಹಣ ಪಡೆದ ಬಳಿಕ ಮದುವೆ ಮಾಡಿಕೊಳ್ಳಲು ಆಗುವುದಿಲ್ಲ ಎಂದು ಮೋಸ ಮಾಡಿದ್ದ. ಸುಚಿತ್ರಾಳಿಂದ ಪಡೆದ ಹಣ ಕೂಡ ಹಿಂತಿರುಗಿಸಲು ನಿರಾಕರಿಸಿದ್ದ. ಈ ವಿಚಾರವಾಗಿ ಕೆಲ ತಿಂಗಳ ಹಿಂದೆ ಉತ್ತರ ಕನ್ನಡ ಎಸ್ ಪಿ ಗೆ ದೂರು ನೀಡಿದ್ದಳು. ಬಳಿಕ ಪೊಲೀಸ್ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಹಣ ಹಿಂತಿರುಗಿಸುವುದಾಗಿ ಗಿರೀಶ್ ಒಪ್ಪಿದ್ದ. ಆದರೆ ಇದುವರೆಗೂ ಯುವತಿಗೆ ಹಣ ಹಿಂತಿರುಗಿಸಿಲ್ಲ. ಹೀಗಾಗಿ ಸೋಮವಾರ ರಾತ್ರಿ ಮುಂಡಗೊಡ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ವಿದ್ಯುತ್‌ ಸ್ಪರ್ಶಿಸಿ ಮತ್ತೊಂದು ಕಾಡಾನೆ ಸಾವು!

ಕೊಡಗು: ವಿದ್ಯುತ್‌ ಸ್ಪರ್ಶಿಸಿ ಮತ್ತೊಂದು ಕಾಡಾನೆ ಮೃತಪಟ್ಟಿದೆ. ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಅರುವತ್ತೊಕ್ಕಲು ಗ್ರಾಮದಲ್ಲಿ ಘಟನೆ ನಡೆದಿದ್ದು, ಈಶ್ವರ ರಾವ್ ತೋಟದಲ್ಲಿ ಆನೆ ಕಳೇಬರ ಪತ್ತೆಯಾಗಿದೆ. ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ಸ್ಪರ್ಶದಿಂದ ಕಾಡಾನೆ ಮೃತಪಟ್ಟಿದೆ ಎಂದು ಶಂಕಿಸಲಾಗಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ರು. ಜಿಲ್ಲೆಯಲ್ಲಿ ವಾರದಲ್ಲಿ 3 ಕಾಡಾನೆಗಳು ಮೃತಪಟ್ಟಿವೆ.

ಸೆರೆಸಿಕ್ಕ ಚಿರತೆ ಜತೆ ಸೆಲ್ಪಿ ತೆಗೆದುಕೊಳ್ಳುವಾಗ ದಾಳಿ!

ಮೈಸೂರು: ಸೆರೆಸಿಕ್ಕ ಚಿರತೆ ಜತೆ ಸೆಲ್ಪಿ ತೆಗೆದುಕೊಳ್ಳಲು ಹೋಗಿ ಅವಾಂತರ ಮಾಡಿಕೊಂಡಿದ್ದಾನೆ. ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಯಲಹಳ್ಳಿಯಲ್ಲಿ ಘಟನೆ ನಡೆದಿದ್ದು, ಗ್ರಾಮಕ್ಕೆ ಎಂಟ್ರಿಕೊಟ್ಟಿದ್ದ ಚಿರತೆಯನ್ನ ಸೆರೆಹಿಡಿಯಲಾಗಿತ್ತು. ಆಗ ಸೆಲ್ಪಿ ತೆಗೆದುಕೊಳ್ಳುತ್ತಿದ್ದ ಯುವಕ ಜಯಶಂಕರ್‌ನನ್ನು ಚಿರತೆ ಪರಚಿದೆ. ಗಾಯಾಳು ಜಯಶಂಕರ್‌ಗೆ ಮೈಸೂರಿನ ಕೆ.ಆ‌ರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.

ಮಂಗಳಮುಖಿಯರ ಕಿರುಕುಳದಿಂದp ಆತ್ಮಹತ್ಯೆಗೆ ಶರಣಾದ ಬಾಲಕ!

ಮೈಸೂರು : ಮಂಗಳಮುಖಿಯರು ಗುಂಪಾಗಿ ಬಂದು ಕಿರುಕುಳ ನೀಡಿದ್ದಾರೆಂದು ಬೇಸತ್ತ ಬಾಲಕನೊಬ್ಬ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಹೆದ್ದೂರು ಗ್ರಾಮದಲ್ಲಿ ನಡೆದಿದೆ. ಹೌದು ಮೃತ ಬಾಲಕನನ್ನು ರಾಹುಲ್ ಮೌರ್ಯ(17) ಎಂದು ಗುರುತಿಸಲಾಗಿದೆ. ಕಳೆದ ನಾಲ್ಕು ತಿಂಗಳಿನಿಂದ ರಾಹುಲ್ ಮೌರ್ಯ ನಾಪತ್ತೆಯಾಗಿದ್ದನು.ಇತ್ತೀಚಿಗೆ ಮನೆಗೆ ವಾಪಾಸ್ ಬಂದಿದ್ದ. ಈ ವೇಳೆ ಜೂನ್ 23ರಂದು ಕೆಲವು ಮಂಗಳಮುಖಿಯರಿಂದ ರಾಹುಲ್ ಮೌರ್ಯ ಕುಟುಂಬಸ್ಥರ ಜೊತೆ ಜಗಳವೂ ಉಂಟಾಗಿತ್ತು. ನೀವು ನಿಮ್ಮ ಹುಡುಗನನ್ನು ನಮ್ಮೊಂದಿಗೆ ಕಳಿಸಿಕೊಡಿ ಎಂದು ಗಲಾಟೆ ಮಾಡಿದ್ದರು. ಜೊತೆಗೆ, ನಿಮ್ಮ ಮಗನೇ ನಮ್ಮ ಹುಡುಗಿಯನ್ನು ಕರೆದೊಯ್ದಿದ್ದಾನೆಂದು ಆರೋಪಿಸಿ ಮಂಗಳಮುಖಿಯರು ಊರಿನಲ್ಲಿ ಬಂದು ಜೋರಾಗಿ ಗಲಾಟೆಯನ್ನೂ ಮಾಡಿದ್ದರು.ಮಂಗಳಮುಖಿಯರು ಮನೆಯ ಬಳಿ ಗಲಾಟೆ ಮಾಡಿದ ದಿನ ಜಮೀನಿನಲ್ಲಿರುವ ಶೆಡ್‌ ನಲ್ಲಿ ರಾಹುಲ್ ಮೌರ್ಯ ಆತ್ಮಹತ್ಯೆಗೆ ಶರಣಾಗಿದ್ದಾನೆ.

Categories
Uncategorized

ಬೆಳ್ಳಗಿರೋದೆಲ್ಲ ಹಾಲಲ್ಲ…ಹುಷಾರ್..!

ಬೆಳ್ಳಗಿರೋದೆಲ್ಲ ಹಾಲಲ್ಲ…ಹುಷಾರ್..!

– ಕಲಬೆರಕೆ ಮಾಫಿಯಾ: ಖಾದ್ಯ ತೈಲದಲ್ಲೂ ವಿಷ..!
– ತಿನ್ನೋದೆಲ್ಲವೂ ವಿಷ ಇದ್ದಂತೆ.. ಜೋಪಾನ ಜೋಪಾನ
– ಕ್ಯಾನ್ಸರ್, ಹೃದಯ ರೋಗ ಸೇರಿ ರೋಗಗಳು ಹೆಚ್ಚಳ

NAMMUR EXPRESS NEWS
ನಿತ್ಯ ಸೇವಿಸುವ ಆಹಾರ ಪದಾರ್ಥಗಳಲ್ಲಿ ಬಳಸುವ ಅಡುಗೆ ಎಣ್ಣೆಗೇ ವಿಷ ಬೆರೆಸಲಾಗುತ್ತಿದೆ. ರಕ್ಕಸ ರೂಪದಲ್ಲಿ ಬೆಳೆದಿರುವ ಕಲಬೆರಕೆ ಜಾಲವು ಅಧಿಕ ಲಾಭದಾಸೆಗೆ ಜನರ ಆರೋಗ್ಯದೊಂದಿಗೆ ಚೆಲ್ಲಾಟವಾಡುತ್ತಿದ್ದು, ಅಪಾಯಕಾರಿಯಾಗಿ ಪರಿಣಮಿಸಿದೆ.

ಅತಿಯಾದ ಎಣ್ಣೆ ಹಾಗೂ ಕೆಮಿಕಲ್ ಹಾಗೂ ಅತಿಯಾಗಿ ಮಸಾಲೆ ಬೆಳೆಸುವ ಪದಾರ್ಥಗಳು ದೇಹಕ್ಕೆ ಒಳ್ಳೆಯದಲ್ಲ ಇದರಿಂದ ಕಾಯಿಲೆಗಳು ಉಲ್ಬಳಿಸುತ್ತಿವೆ. ದೊಡ್ಡ ಮಿಲ್, ಕಾರ್ಖಾನೆಗಳಲ್ಲಿ, ಸಣ್ಣಪುಟ್ಟ ಘಟಕಗಳಲ್ಲಿ ಪ್ಯಾಕ್ ಆಗಿ ಮಾರುಕಟ್ಟೆಗೆ ಬರುವ ಹಾಗೂ ಮಾರುಕಟ್ಟೆಯಲ್ಲಿ ಚಿಲ್ಲರೆಯಾಗಿ ಸಿಗುವ ಅಡುಗೆ ಎಣ್ಣೆಯು ಶೇ 50ರಿಂದ 80ರಷ್ಟು ಕಲಬೆರಕೆಯಿಂದ ಕೂಡಿರುವ ಬಗ್ಗೆ ವಿಜ್ಞಾನಿಗಳು, ಆಹಾರ ತಜ್ಞರು ಹಾಗೂ ವೈದ್ಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ವಿವಿಧ ರಾಜ್ಯಗಳಲ್ಲಿ ನಡೆಸಿರುವ ಪರೀಕ್ಷೆಯೂ ಅದನ್ನು ದೃಢಪಡಿಸಿದೆ. ಧಾರಾಳವಾಗಿ ಹಾಗೂ ಕಡಿಮೆ ಬೆಲೆಗೆ ಸಿಗುವ ಪೆಟ್ರೋಲಿಯಂ ಉಪ ಉತ್ಪನ್ನ ಮಿನರಲ್ ಆಯಿಲ್’ ಅನ್ನು ಅಡುಗೆ ಎಣ್ಣೆಗೆ ಬೆರೆಸುವ ಜಾಲ ಸಕ್ರಿಯವಾಗಿದ್ದು, ಹಲವು ರಾಜ್ಯಗಳಲ್ಲಿ ಹರಡಿಕೊಂಡಿದೆ.

ದೊಡ್ಡ ದೊಡ್ಡ ಕಂಪನಿಗಳು, ವರ್ತಕರು, ರಾಜಕೀಯ ಮುಖಂಡರು, ಅಧಿಕಾರಿಗಳು ಈ ಜಾಲದೊಂದಿಗೆ ಕೈಜೋಡಿಸಿದ್ದಾರೆ. ಹೃದಯ ಹಾಗೂ ಇತರ ಅಂಗಾಂಗಳನ್ನು ಹಾನಿಗೊಳಿಸುತ್ತಿರುವ, ರಾಸಾಯನಿಕಗಳಿಂದ ಶುದ್ದೀಕರಿಸಿದ (ರಿಫೈನ್ಸ್) ಅಡುಗೆ ಎಣ್ಣೆಯೇ ಆರೋಗ್ಯಕ್ಕೆ ಉತ್ತಮ ಎಂದು ಬಿಂಬಿಸಲಾಗುತ್ತಿದೆ. ಬಾಟಲಿ, ಪೊಟ್ಟಣಗಳ ಮೇಲೆ ಶೇ.100ರಷ್ಟು ಪ್ಯೂರ್ ಎಡಿಬಲ್ ಆಯಿಲ್ ಎಂದೇ ಲೇಬಲ್ ಹಾಕಿಕೊಂಡು ಗ್ರಾಹಕರ ದಾರಿ ತಪ್ಪಿಸಲಾಗುತ್ತಿದೆ. ಹೆಸರಾಂತ ಬ್ರಾಂಡ್‌ಗಳ ಒಂದು ಲೀಟರ್ ಅಡುಗೆ ಎಣ್ಣೆ ಪೊಟ್ಟಣಕ್ಕೆ ₹150ರವರೆಗೆ ಇದ್ದರೆ, ಇನ್ನು ಕೆಲವುಗಳ ದರ ಲೀಟರ್‌ಗೆ ₹ 80 ಇದೆ. ಸ್ಪರ್ಧೆ ಜೋರಾದಂತೆ ಕಲಬೆರಕೆಯೂ ಹೆಚ್ಚಾಗುತ್ತಿದೆ.

ಕಲಬೆರಕೆ ಎಣ್ಣೆಯು ಸ್ಥಳೀಯವಾಗಿ ಪೂರೈಕೆ ಆಗುವುದಲ್ಲದೇ, ತಮಿಳು ನಾಡು, ಕೇರಳ, ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರ ರಾಜ್ಯಗಳಿಂದ ರಾಜ್ಯಕ್ಕೆ ಸರಬರಾಜಾಗುತ್ತಿದೆ. ತೆಂಗು, ಶೇಂಗಾ, ಸೂರ್ಯಕಾಂತಿ ಬೆಳೆಯುವ ಪ್ರದೇಶಗಳಲ್ಲಿ ಮಿಶ್ರಣ ದಂಧೆ ಹೆಚ್ಚಿದೆ. ಡ್ರಮ್‌ಗಳಲ್ಲಿ ಎಣ್ಣೆ ತಂದು ಅದನ್ನು ಸ್ಥಳೀಯವಾಗಿ ಕ್ಯಾನ್ ಹಾಗೂ ಟಿನ್‌ಗೆ ತುಂಬಿಸುವಾಗಲೂ ಮಿಶ್ರಣ ದಂಧೆ ನಡೆಯುತ್ತಿದೆ.

ಆಹಾರ ಸಂಬಂಧಪಟ್ಟ ಅನೇಕ ಪ್ರಾಡಕ್ಟ್ ಈಗ ಮಾರುಕಟ್ಟೆಗಳಲ್ಲಿ ಸಿಗುತ್ತಿವೆ. ಆದರೆ ಯಾವುದು ಕಳಪೆ ಯಾವುದು ಒಳ್ಳೆಯದು ಎಂಬುದನ್ನು ಗುರುತಿಸಬೇಕಾದ ಆಹಾರ ಇಲಾಖೆ ಲಂಚಾವತಾರಕ್ಕೆ ತಲೆ ಬಾಗಿದೆ.