Categories
ಬೆಂಗಳೂರು

ರಾಜ್ಯದಲ್ಲಿ ಸ್ವಾತಂತ್ರ್ಯ ಸಂಭ್ರಮ!

ರಾಜ್ಯದಲ್ಲಿ ಸ್ವಾತಂತ್ರ್ಯ ಸಂಭ್ರಮ!
– ಮಾಣೆಕ್ ಷಾ ಮೈದಾನದಲ್ಲಿ ಸಿಎಂ ಧ್ವಜಾರೋಹಣ
– ದೇಶಕ್ಕಾಗಿ ಜೀವತೆತ್ತ ಮಹನೀಯರ ಸ್ಮರಣೆ
– ರಾಜ್ಯದಲ್ಲಿ ಎಲ್ಲೆಡೆ ಜನರಿಂದ ಸ್ವಾತಂತ್ರ್ಯ ಹಬ್ಬ
– ದೇಶಕ್ಕಾಗಿ ಜೀವ ತೆತ್ತ ಮಹನೀಯರನ್ನು ನೆನೆದ ಸಿಎಂ

NAMMUR EXPRESS NEWS
ಬೆಂಗಳೂರು: ರಾಜ್ಯದಲ್ಲಿ ಸ್ವಾತಂತ್ರ್ಯ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ಹಳ್ಳಿ ಹಳ್ಳಿಯಲ್ಲೂ ತಿರಂಗಾ ಹಾರಿಸಲಾಗಿದೆ. ಜನ ದೇಶ ಭಕ್ತಿಯನ್ನು ಮೆರೆದಿದ್ದಾರೆ.
ಸರ್ಕಾರಿ ಕಚೇರಿಗಳು, ಶಾಲಾ ಕಾಲೇಜುಗಳು, ಖಾಸಗಿ ಸಂಸ್ಥೆಗಳು ಸೇರಿ ಆಟೋ, ಬಸ್, ಕಾರು ನಿಲ್ದಾಣಗಳಲ್ಲಿ ಸ್ವಾತಂತ್ರ್ಯ ಸಂಭ್ರಮ ಕಂಡು ಬಂತು.
ಸಿಎಂ ಧ್ವಜಾರೋಹಣ: ಬೆಂಗಳೂರಿನ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ 78ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಸಿಎಂ ಸಿದ್ದರಾಮಯ್ಯ ಧ್ವಜಾರೋಹಣ ನೆರವೇರಿಸಿ ಪರೀಡ್ ವೀಕ್ಷಿಸಿದರು.ಬಳಿಕ ಸಿಎಂ ಭಾಷಣ ಮಾಡಿ ಪ್ರಾಣದ ಹಂಗು ತೊರೆದು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನಿಯರನ್ನು ಸ್ಮರಿಸಿದರು. ದೃಷ್ಟರ ಆಟ ಬಹಳ ಕಾಲ ನಡೆಯುದಿಲ್ಲ ಎನ್ನುವುದನ್ನು ಜನರೇ ನಿರ್ಧಾರ ಮಾಡಿದದಾರೆ ಎಂದು ಹೇಳಿದರು.

ಅತಿ ಹೆಚ್ಚು ತೆರಿಗೆ ಪಾವತಿಸುವ ರಾಜ್ಯಗಳಲ್ಲಿ ಕರ್ನಾಟಕ 2ನೇ ಸ್ಥಾನ

ದೇಶದಲ್ಲಿಯೇ ಅತಿ ಹೆಚ್ಚು ತೆರಿಗೆ ಪಾವತಿಸುವ ರಾಜ್ಯಗಳಲ್ಲಿ ಕರ್ನಾಟಕ ಎರಡನೆಯ ಸ್ಥಾನದಲ್ಲಿದೆ. ಸುಮಾರು 4 ಲಕ್ಷ ಕೋಟಿಗೂ ಹೆಚ್ಚಿನ ತೆರಿಗೆ, ಸುಂಕ, ಮೇಲ್ತೆರಿಗೆಗಳನ್ನು ಕೇಂದ್ರಕ್ಕೆ ಪಾವತಿಸುತ್ತಿದೆ. ಅದರೆ ನಮಗೆ ವಾಪಸ್ಸು ಬರುತ್ತಿರುವುದು 50 ಸಾವಿರ ಕೋಟಿ ರೂ. ಮಾತ್ರ. ನಮಗೆ ನ್ಯಾಯಯುತವಾಗಿ ಬರಬೇಕಾದಷ್ಟು ಸಂಪನ್ಮೂಲಗಳು ಕೇಂದ್ರದಿಂದ ಮರಳಿ ಬಂದರೆ ರಾಜ್ಯವು ಅತ್ಯಂತ ಶ್ರೀಮಂತ ರಾಜ್ಯವಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು

ದೇಶಕ್ಕಾಗಿ ಜೀವ ತೆತ್ತ ಮಹನೀಯರನ್ನು ನೆನೆದ ಸಿಎಂ

ಬ್ರಿಟಿಷರು ಭಾರತದ ಸ್ಥಳೀಯ ಉತ್ಪಾದನಾ ವಿಧಾನಗಳ ಕೈ ಬೆರಳುಗಳನ್ನು ಕತ್ತರಿಸಿ ಹಾಕಿ ಮಾರುಕಟ್ಟೆಯ ಮೇಲೆ ಯಜಮಾನಿಕೆಯನ್ನು ಸಾಧಿಸಿದ್ದರು. ಇದರಿಂದಾಗಿ ದೇಶದ ಆರ್ಥಿಕತೆ ಪೂರ್ತಿ ಪಾತಾಳಕ್ಕೆ ಕುಸಿದಿತ್ತು. ಬ್ರಿಟಿಷರು ದೇಶದ ಜನರ ಮೇಲೆ ಸಾಲವನ್ನು, ಕೈಗಳಿಗೆ ನಿರುದ್ಯೋಗವನ್ನು, ಹೊಟ್ಟೆ ತುಂಬ ಹಸಿವನ್ನು ಬಳುವಳಿಯಾಗಿ ಕೊಟ್ಟು ಹೋಗಿದ್ದರು. ಇಂಥ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಚಿಂತನೆಗಳು ಮತ್ತು ಪಂಡಿತ್ ಜವಾಹರಲಾಲ್ ನೆಹರೂ ಅವರ ಕಾರ್ಯಯೋಜನೆಗಳು ದೇಶವನ್ನು ಪಾತಾಳದಿಂದ ಮೇಲೆತ್ತಲು ಸಾಧ್ಯ ಮಾಡಿದವು. ಇವರೆಲ್ಲರ ಕೊಡುಗೆಯಿಂದ ಭಾರತವು ಇಂದು ಜಗತ್ತಿನಲ್ಲಿ ಅತ್ಯಂತ ಪ್ರಬಲ ದೇಶವಾಗಿ ಬೆಳೆದಿದೆ’ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಎಲ್ಲ ಮಹನೀಯರು ತಮ್ಮ ಸರ್ವಸ್ವವನ್ನೂ ತ್ಯಾಗ ಮಾಡಿ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ್ದರು. ಅವರ ತ್ಯಾಗ ಬಲಿದಾನಗಳನ್ನು ದೇಶವು ಶ್ರದ್ಧಾಪೂರ್ವಕವಾಗಿ ಸ್ಮರಿಸಲೇಬೇಕು ಎಂದರು.

 

ಸರ್ಕಾರದ ಗ್ಯಾರಂಿ ಯೋಜನೆಗಳ ಪ್ರಸ್ತಾಪ

ʼʼಚುನಾವಣೆಯ ಸಂದರ್ಭದಲ್ಲಿ ನೀಡಿದ ಭರವಸೆಯಂತೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ರಾಜ್ಯದ ಸಮಸ್ತ ಜನರ ಬದುಕಿಗೆ ಒಂದು ಆರ್ಥಿಕ ಭದ್ರತೆ ಯನ್ನು ಒದಗಿಸುವ ಕೆಲಸ ನಮ್ಮ ಸರ್ಕಾರ ಮಾಡಿದೆ. ಈ ಯೋಜನೆ ಮುಂದುವರಿಯಲಿದೆ. ಹೆಚ್ಚುತ್ತಿರುವ ಆರ್ಥಿಕ ಅಸಮಾನತೆಯಿಂದಾಗಿ ಬಸವಳಿದು ಹೋಗಿರುವ ಜನರ ಬದುಕಿಗೆ ಈ ಯೋಜನೆಗಳು ನೆಮ್ಮದಿ ತಂದಿವೆ. ಈ ಯೋಜನೆಗಳ ಮೂಲಕ ಸಂಪತ್ತಿನ ಮರುಹಂಚಿಕೆಗೆ ಒತ್ತು ನೀಡುತ್ತಲೇ ರಾಜ್ಯದ ಆರ್ಥಿಕ ಬೆಳವಣಿಗೆಯನ್ನು ಸುಸ್ಥಿರವಾದ ರೀತಿಯಲ್ಲಿ ಹೆಚ್ಚಿಸಲು ಕೂಡಾ ಅಷ್ಟೇ ಬದ್ಧತೆಯಿಂದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ ಎಂದರು.

ಪ್ರವಾಹ ಪೀಡಿತರಿಗೆ ಪರಿಹಾರ

ʼಪ್ರವಾಹ ಪೀಡಿತ ಜಿಲ್ಲೆಗಳಿಗೆ ನಾನು ಸ್ವತಃ ಭೇಟಿ ನೀಡಿದ್ದೇನೆ. ನಮ್ಮ ಸಚಿವರೂ ಜಿಲ್ಲೆಗಳಲ್ಲಿದ್ದು ಪರಿಸ್ಥಿತಿಯನ್ನು ನಿಭಾಯಿಸಿದ್ದಾರೆ. ಜೀವಹಾನಿ, ಜಾನುವಾರುಗಳ ಸಾವು ಹಾಗೂ ಮನೆ ಹಾನಿಗಳಿಗೆ ತ್ವರಿತವಾಗಿ ಪರಿಹಾರ ಒದಗಿಸುವಂತೆ ಸೂಚಿಸಲಾಗಿದೆ. ಮನೆ ಕಳೆದುಕೊಂಡವರಿಗೆ 1.2 ಲಕ್ಷ ರೂ. ಪರಿಹಾರದೊಂದಿಗೆ ಮನೆ ಹಂಚಿಕೆ ಮಾಡಲು ಕ್ರಮ ವಹಿಸುತ್ತಿದ್ದೇವೆʼʼ ಎಂದು ಸಿಎಂ ತಿಳಿಸಿದರು.

Categories
ಕರಾವಳಿ

ಮೂಡುಬಿದಿರೆ ನ್ಯೂ ವೈಬ್ರೆಂಟ್ ಪಿಯು ಕಾಲೇಜಲ್ಲಿ ಉಪನ್ಯಾಸ

ಮೂಡುಬಿದಿರೆ ನ್ಯೂ ವೈಬ್ರೆಂಟ್ ಪಿಯು ಕಾಲೇಜಲ್ಲಿ ಉಪನ್ಯಾಸ
– ಮಕ್ಕಳಿಗೆ ಸ್ವಚ್ಛತೆ ಬಗ್ಗೆ ಡಾ.ವೃಂದಾ ಬೆಡೇಕರ್ ವಿಶೇಷ ಅರಿವು
– ವಿಭಿನ್ನ ಕಾರ್ಯಕ್ರಮ, ಉಪನ್ಯಾಸದ ಮೂಲಕ ವಿದ್ಯಾರ್ಥಿಗಳಿಗೆ ಜಾಗೃತಿ

NAMMUR EXPRESS NEWS
ಮೂಡುಬಿದಿರೆ: ಮೂಡುಬಿದಿರೆಯ ಕಲ್ಲಬೆಟ್ಟುವಿನಲ್ಲಿರುವ ನ್ಯೂ ವೈಬ್ರೆಂಟ್ ಪದವಿ ಪೂರ್ವ ಕಾಲೇಜಿನ ಮಹಿಳಾ ಕಲ್ಯಾಣ ಸಮಿತಿಯ ವತಿಯಿಂದ ಇತ್ತೀಚೆಗೆ ಕಾಲೇಜಿನ ವಿದ್ಯಾರ್ಥಿನಿಯರಿಗೆ “ಆರೋಗ್ಯ ಮತ್ತು ಶುಚಿತ್ವ” ಎಂಬ ವಿಷಯದ ಕುರಿತು ವಿ-ಪ್ರೇರಣಾ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಬೆಳ್ತಂಗಡಿಯ ಪ್ರಸನ್ನ ಕಾಲೇಜ್ ಆಫ್ ಆಯುರ್ವೇದ ಮತ್ತು ಹಾಸ್ಪಿಟಲ್ ಪ್ರಾಧ್ಯಾಪಕಿ ಡಾ. ವೃಂದಾ ಬೆಡೇಕರ್ ವಿದ್ಯಾರ್ಥಿನಿಯರನ್ನು ಉದ್ದೇಶಿಸಿ ಮಾತನಾಡುತ್ತಾ, ದೈನಂದಿನ ಬದುಕಿನಲ್ಲಿ ಸ್ವಚ್ಛತೆ ಅತ್ಯಗತ್ಯ. ವೈಯಕ್ತಿಕ ಸ್ವಚ್ಛತೆಯಿಂದ ಮಾತ್ರ ತಾವು ಉತ್ತಮ ಆರೋಗ್ಯವಂತರಾಗಿ ಬದುಕಲು ಸಾಧ್ಯ ಎಂದು ಹೇಳಿದರು.
ವಾತಾವರಣದಲ್ಲಿ ಉಷ್ಣತೆ ಕಡಿಮೆಯಾದಾಗ ಸೂಕ್ಷ್ಮಾಣು ಜೀವಿಗಳು ಬೆಳೆಯುತ್ತವೆ. ತಾವು ಈ ಸಂದರ್ಭದಲ್ಲಿ ವೈಯಕ್ತಿಕ ಸ್ವಚ್ಛತೆಯ ಕಡೆಗೆ ಗಮನಹರಿಸದಿದ್ದಾಗ ಆರೋಗ್ಯದಲ್ಲಿ ಏರುಪೇರುಗಳು ಉಂಟಾಗಿ ಬೇರೆ ಬೇರೆ ಕಾಯಿಲೆಗಳಿಗೆ ನೀವು ತುತ್ತಾಗಬಹುದು. ಆದ್ದರಿಂದ ಆದಷ್ಟು ನೀವು ಶುಚಿತ್ವವನ್ನು ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ತಮ್ಮ ಜೀವನದಲ್ಲಿ ಹದಿಹರೆಯದ ವಯಸ್ಸು ಬಹಳ ಅಮೂಲ್ಯವಾದದ್ದು. ಈ ವಯಸಿನಲ್ಲಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಪರಿವರ್ತನೆಯನ್ನು ಹೊಂದುವ ಹಂತವಾಗಿರುವುದರಿಂದ ತಾವೆಲ್ಲರೂ ಶುಚಿತ್ವದ ಕಡೆಗೆ ಹೆಚ್ಚಿನ ಗಮನವನ್ನು ವಹಿಸಿ ಮಾನಸಿಕ ಮತ್ತು ದೈಹಿಕವಾಗಿ ಆರೋಗ್ಯವಂತರಾಗಿರಲು ಪ್ರಯತ್ನಿಸಬೇಕು ಎಂದು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಟ್ರಿಸ್ಪಿ ಹಾಗೂ ಪ್ರಾಂಶುಪಾಲರಾದ ಡಾ.ಎಸ್.ಎನ್. ವೆಂಕಟೇಶ್ ನಾಯಕ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಟ್ರಸ್ಟಿಗಳಾದ ಸುಭಾಷ್ ಝಾ, ಚಂದ್ರಶೇಖರ ರಾಜೇ ಅರಸ್, ಯೋಗೇಶ್ ಬೆಡೇಕರ್, ಮೆಹಬೂಬ ಬಾಷಾ, ಶರತ್ ಗೋರೆ, ಉಪಪ್ರಾಂಶುಪಾಲೆ ಡಾ. ರಶ್ಮಿ ಅರಸ್, ಕಾಲೇಜು ಮಹಿಳಾ ಕಲ್ಯಾಣ ಸಮಿತಿಯ ಸಂಯೋಜಕಿ ಶಾಂಭವಿ ಗೋರೆ ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕಿ ಅಪರ್ಣ ಅತಿಥಿಗಳನ್ನು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಜೀವಶಾಸ್ತ್ರದ ಉಪನ್ಯಾಸಕಿ ರೂಪಶ್ರೀ ವಂದಿಸಿದರು.

Categories
Uncategorized

ಜೈ ಭಾರತ್…ವಿಕಸಿತ ಭಾರತವೇ ನಮ್ಮ ಹೆಜ್ಜೆ!

ಜೈ ಭಾರತ್…ವಿಕಸಿತ ಭಾರತವೇ ನಮ್ಮ ಹೆಜ್ಜೆ!
– ಕೆಂಪುಕೋಟೆಯಲ್ಲಿ ಮೊಳಗಿದ ಮೋದಿ ಭಾಷಣ
– ದೇಶದ ಮನೆ ಮನೆಯಲ್ಲಿ ಮೊಳಗಿದ ದೇಶ ಪ್ರೇಮ
– ಸತತ 11ನೇ ಭಾರಿಗೆ ಧ್ವಜಾರೋಹಣ ಮಾಡಿದ ಮೋದಿ

NAMMUR EXPRESS NEWS
ನವ ದೆಹಲಿ: 78ನೇ ಸ್ವಾತಂತ್ರೋತ್ಸವ ನಿಮಿತ್ತ ಪ್ರಧಾನಿ ಮೋದಿಯವರು ದೆಹಲಿಯ ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡಿದರು. ಕೆಂಪುಕೋಟೆಗೆ ಆಗಮಿಸಿದ ಪ್ರಧಾನಿ ಮೋದಿಗೆ ಮೂರು ಸೇನಾಪಡೆಗಳು ಗೌರವ ಸಲ್ಲಿಸಿದವು. ಇದಕ್ಕೂ ಮುನ್ನ ರಾಜ್ಘಾಟ್ಗೆ ತೆರಳಿ ಮೋದಿ ನಮನ ಸಲ್ಲಿಸಿದರು.
ಕೆಂಪುಕೋಟೆಯ ಮೇಲೆ ಹಾರಾಡಿದ ತ್ರಿವರ್ಣ ಧ್ವಜಕ್ಕೆ ಸೇನಾ ಹೆಲಿಕಾಪ್ಟರ್ನಿಂದ ಹೂಮಳೆಗೈದು ಗೌರವ ಸೂಚಿಸಲಾಯಿತು. ನರೇಂದ್ರ ಮೋದಿಯವರು ಸತತ 11ನೇ ಭಾರಿಗೆ ಸ್ವಾತಂತ್ರೋತ್ಸವ ಧ್ವಜಾರೋಹಣ ಮಾಡಿದ್ದು ಇದಕ್ಕೂ ಮುನ್ನ ಭಾರತೀಯರಿಗೆ ಸ್ವಾತಂತ್ರ್ಯ ದಿನದ ಶುಭಾಶಯವನ್ನ ತಮ್ಮ ಸೋಷಿಯಲ್ ಮೀಡಿಯಾ ಮೂಲಕ ತಿಳಿಸಿದ್ದರು. ಹಾಗೇ, ದೆಹಲಿ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ಪ್ರಧಾನಿ ಮೋದಿ ದೇಶವನ್ನ ಉದ್ದೇಶಿಸಿ ಮಾತನಾಡಿದರು.
ಮೊದಲು ಸ್ವಾತಂತ್ರ್ಯ ಹೋರಾಟಗಾರರನ್ನ ಸ್ಮರಿಸಿ, ಗೌರವ ಸಲ್ಲಿಸಿದ ಪ್ರಧಾನಿ ಮೋದಿ, ಭಾರತದ ಭವಿಷ್ಯ ಗುರಿಯ ಬಗ್ಗೆ ಮಾತನಾಡಿದರು. 2047ರ ಹೊತ್ತಿಗೆ ಭಾರತ ವಿಕಸಿತ ಭಾರತವಾಗಿ ಪರಿವರ್ತನೆ ಆಗುತ್ತದೆ ಎಂಬ ಬಲವಾದ ಆತ್ಮವಿಶ್ವಾಸ ತಮಗೆ ಇರುವುದಾಗಿ ತಿಳಿಸಿದರು. 40 ಕೋಟಿ ಭಾರತೀಯರು ಸೇರಿ ಗುಲಾಮಗಿರಿಯ ಸರಪಳಿಯನ್ನ ಮುರಿದು ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ ಎಂದಾದ ಮೇಲೆ, 140 ಕೋಟಿ ಭಾರತೀಯರಿಂದ ‘ವಿಕಸಿತ ಭಾರತ’ ನಿರ್ಮಾಣ ಮಾಡಲು ಸಾಧ್ಯವಿಲ್ಲವೇ? ಎಂದೂ ಅವರು ಪ್ರಶ್ನೆ ಮಾಡಿದರು.

ವಿಕಸಿತ ಭಾರತ ನಿರ್ಮಾಣ

ವಿಕಸಿತ ಭಾರತ ನಿರ್ಮಾಣ ಬರೀ ಒಂದು ವಾಕ್ಯವಲ್ಲ.. ಮಾತೂ ಅಲ್ಲ. ಇದು 140 ಕೋಟಿ ಜನರ ಕನಸು. ಅದರ ಸಾಕಾರಕ್ಕೆ ಜನರೇ ಮುಂದಾಗಿದ್ದಾರೆ. ವಿಕಸಿತ ಭಾರತ ಗುರಿಯನ್ನ ತಲುಪಲು ಉತ್ಸುಕರಾಗಿದ್ದಾರೆ. ಈಗಾಗಲೇ ಈ ಸಂಬಂಧ ಸರ್ಕಾರಕ್ಕೆ ಅನೇಕಾನೇಕರು ಸಲಹೆಗಳನ್ನ ಕೊಡುತ್ತಿದ್ದಾರೆ. ಆಡಳಿತದಲ್ಲಿ ಇನ್ನಷ್ಟು ಸಕಾರಾತ್ಮಕ ಬದಲಾವಣೆಗಳಾಗಬೇಕು, ಯಾವುದೇ ಅಪರಾಧಗಳು ನಡೆದಾಗ ತ್ವರಿತವಾಗಿ ನ್ಯಾಯ ತೀರ್ಮಾನ ಆಗಬೇಕು. ಪಾರಂಪರಿಕ ಅಥವಾ ಸಾಂಪ್ರದಾಯಿಕ ಔಷಧಿಗಳಿಗೆ ಪ್ರಚಾರ ಸಿಗಬೇಕು ಎಂಬಿತ್ಯಾದಿ ಸಲಹೆಗಳು ಹೆಚ್ಚಾಗಿ ಬಂದಿದ್ದು ಅವೆಲ್ಲವನ್ನೂ ಪರಿಗಣಿಸಲಾಗುವುದು ಎಂದು ಪ್ರಧಾನಿ ಮೋದಿ ಹೇಳಿದರು.

ಲೋಕಲ್ ಫಾರ್ ವೋಕಾಲ್

ದೇಶೀಯ, ಸ್ಥಳೀಯ ಉತ್ಪನ್ನಗಳಿಗೆ ಆದ್ಯತೆ-ಮನ್ನಣೆ ಸಿಗಬೇಕು ಎಂದ ಕಾರಣಕ್ಕೆ ನಾವು ಶುರು ಮಾಡಿದ Vocal for Local ಯಶಸ್ವಿಯಾಗಿದೆ. ನಾವು ವೋಕಲ್ ಫಾರ್ ಲೋಕಲ್ ಎಂಬ ಮಂತ್ರವನ್ನ ಕೊಟ್ಟೆವು. ಇಂದು ಈ ಉಪಕ್ರಮ ಇಡೀ ಆರ್ಥಿಕತೆಯ ಮಂತ್ರವಾಗಿ ಮಾರ್ಪಾಡಾಗಿದೆ. ಇದು ಖುಷಿಕೊಟ್ಟ ವಿಷಯ. ಪ್ರತಿ ಜಿಲ್ಲೆಯಲ್ಲೂ ಕೂಡ ವೋಕಲ್ ಫಾರ್ ಲೋಕಲ್ ಅನುಷ್ಠಾನಕ್ಕೆ ಬಂದಿದೆ. ಸ್ಥಳೀಯ ಉತ್ಪನ್ನಗಳಿಗೆ ಆದ್ಯತೆ ಸಿಗುತ್ತಿದೆ. ಒಂದು ಜಿಲ್ಲೆ-ಒಂದು ಉತ್ಪನ್ನ ಅನ್ನುವಂಥ ವಾತಾವರಣ ಸೃಷ್ಟಿಯಾಗಿದೆ ಎಂದೂ ಪ್ರಧಾನಿ ಹೇಳಿದ್ದಾರೆ.

ಪ್ರಾಕೃತಿಕ ವಿಕೋದ ಬಗ್ಗೆ ಆತಂಕ

ದೆಹಲಿಯ ಕೆಂಪುಕೋಟೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ ಪ್ರಾಕೃತಿಕ ವಿಕೋಪಗಳ ಭೀಕರತೆಯ ಬಗ್ಗೆ ಆತಂಕ ವ್ಯಕ್ತಪಡಿಸಿದರು. ಕಳೆದ ಕೆಲವು ವರ್ಷಗಳಿಂದ ಮತ್ತು ಈ ವರ್ಷ ನಾವು ಪ್ರಾಕೃತಿಕ ವಿಕೋಪದಿಂದ ಸಂಕಷ್ಟಕ್ಕೀಡಾಗಬೇಕಾಯಿತು. ಇದರ ಭೀಕರತೆಗೆ ಅನೇಕ ಜನರು ನಲುಗಿದ್ದಾರೆ. ನೂರಾರು ಜನ ಪ್ರಾಣ ಕಳೆದುಕೊಂಡಿದ್ದಾರೆ. ಇಡೀ ದೇಶಕ್ಕೆ ನಷ್ಟವಾಗಿದೆ ಎಂದು ಹೇಳಿದರು. ಹಾಗೇ, ಸಂತ್ರಸ್ತರಿಗೆ ಸಾಂತ್ವನ ತಿಳಿಸಿ ನಿಮ್ಮೊಂದಿಗೆ ನಾವು ನಿಲ್ಲುತ್ತೇವೆ ಎಂಬ ಭರವಸೆಯನ್ನೂ ಕೊಟ್ಟರು..

ಡಿಜಿಟಲೀಕರಣದಿಂದ ಬ್ಯಾಂಕಿಂಗ್ ಕ್ಷೇತ್ರಕ್ಕೆ ಹೊಸ ಬಲ

ನಾವು ಆಯ್ದುಕೊಂಡ ಸುಧಾರಣೆ ಹಾದಿಯು ಪ್ರಗತಿಯ ನೀಲನಕ್ಷೆಯಾಗಿದೆ. ಬಡವರು, ಮಧ್ಯಮ ವರ್ಗ, ವಂಚಿತರು ಎಲ್ಲರಿಗೂ ತಳಮಟ್ಟದ ಸುಧಾರಣೆ ತಂದಿದ್ದೇವೆ. ಯುವಜನರ ಅಕಾಂಕ್ಷೆಗಾಗಿ ಅವರ ಜೀವನದಲ್ಲಿ ಸುಧಾರಣೆ ತರುವ ಹಾದಿ ಅಯ್ಕೆ ಮಾಡಿದ್ದೇವೆ. ಪ್ರವಾಸೋದ್ಯಮ, ಶಿಕ್ಷಣ, ಆರೋಗ್ಯ, ಎಂಎಸ್ಎಂಇ, ಸಾರಿಗೆ, ಕೃಷಿ- ಹೀಗೆ ಪ್ರತಿ ವಲಯದಲ್ಲು ಹೊಸ ಆಧುನಿಕ ವ್ಯವಸ್ಥೆಯನ್ನು ಸೃಷ್ಟಿಸಲಾಗುತ್ತಿದೆ. ತಂತ್ರಜ್ಞಾನದ ಸಮಗ್ರತೆಯ ಅತ್ಯುತ್ತಮ ಅಂಶಗಳನ್ನು ನಾವು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಸಾಗಬೇಕಿದೆ. ಈ ಹಿಂದೆ ಜನರು ಮೂಲ ಸೌಲಭ್ಯಗಳಿಗಾಗಿ ಸರ್ಕಾರವನ್ನು ಅಂಗಲಾಚಬೇಕಿತ್ತು. ಈಗ ಅವು ಅವರ ಮನೆಬಾಗಿಲಿಗೆ ಬರುತ್ತಿವೆ ಎಂದು ತಿಳಿಸಿದರು.

ಭಾರತ ಅಭಿವೃದ್ಧಿಯ ಪರ್ವ

ಕೊರೊನಾ ಅವಧಿಯಲ್ಲಿ ಹೋರಾಡಿದ್ದನ್ನು ಮರೆಯಲು ಹೇಗೆ ಸಾಧ್ಯ? ಭಾರತ ಇಡೀ ಜಗತ್ತಿನಲ್ಲಿಯೇ ಅತ್ಯಂತ ವೇಗವಾಗಿ ಕೋಟಿಗಟ್ಟಲೆ ಜನರಿಗೆ ಲಸಿಕೆಗಳನ್ನು ನೀಡಿದೆ. ಭಯೋತ್ಪಾದಕರು ಬಂದು ನಮ್ಮ ಮೇಲೆ ದಾಳಿ ನಡೆಸುತ್ತಿದ್ದಂತಹ ದೇಶ ಇದು. ಭಾರತೀಯ ಸೇನೆ ಸರ್ಜಿಕಲ್ ಹಾಗೂ ಏರ್ ಸಟ್ರೈಕ್ ಮಾಡುವಷ್ಟು ಬೆಳೆದಿದೆ. ಬಾಹ್ಯಾಕಾಶ ಹಾಗೂ ಸೇನೆಯಲ್ಲಿ ಅಗಾಧ ಬದಲಾವಣೆ ತರಲಾಗಿದೆ. ಭಾರತೀಯ ಸೇನೆ ಉಗ್ರರ ತಾಣಗಳಿಗೆ ನುಗ್ಗಿ ಹೊಡೆಯುತ್ತೆ. ನಮಗೆ ದೇಶ ಮೊದಲು ಇದು ನಮ್ಮ ಸಂಕಲ್ಪ. ಭಾರತದ ಶಕ್ತಿ ಏನೆಂದು ಇಡೀ ಜಗತ್ತಿಗೆ ಗೊತ್ತಿದೆ. ಸಶಸ್ತ್ರ ಪಡೆಗಳು ಸರ್ಜಿಕಲ್ ದಾಳಿಗಳನ್ನು ನಡೆಸಿದಾಗ, ವಾಯುದಾಳಿಗಳನ್ನು ಮಾಡಿದಾಗ ಯುವಜನರು ಹೆಮ್ಮೆಪಟ್ಟಿದ್ದರು. ಇದಕ್ಕಾಗಿಯೇ ದೇಶದ 140 ಕೋಟಿ ಜನತೆ ಹೆಮ್ಮೆಯಿಂದ ಇದ್ದಾರೆ ಎಂದು ಪ್ರಧಾನಿ ಮೋದಿ ದೇಶವನ್ನು ಉದ್ದೇಶಿಸಿ ಮಾತನಾಡಿದ್ದಾರೆ .

Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ಸ್ವಾತಂತ್ರ್ಯ ಸಂಭ್ರಮ: ಬೆಳಕಿನ ರಂಗು!

ತೀರ್ಥಹಳ್ಳಿಯಲ್ಲಿ ಸ್ವಾತಂತ್ರ್ಯ ಸಂಭ್ರಮ: ಬೆಳಕಿನ ರಂಗು!
– ಸರ್ಕಾರಿ ಕಚೇರಿಗಳಿಗೆ ವಿದ್ಯುತ್ ಅಲಂಕಾರ
– ಎಲ್ಲೆಡೆ ಹಬ್ಬದ ವಾತಾವರಣ: ಜನರಿಂದ ಜೈ ಹೋ

NAMMUR EXPRESS NEWS
ತೀರ್ಥಹಳ್ಳಿ: 78ನೇ ವರ್ಷದ ಸ್ವಾತಂತ್ರ್ಯ ಸಂಭ್ರಮ ತೀರ್ಥಹಳ್ಳಿಯಲ್ಲಿ ಸಂಭ್ರಮದಿಂದ ನಡೆಯುತ್ತಿದೆ. ಎಲ್ಲಾ ಸರ್ಕಾರಿ ಕಚೇರಿ, ಶಾಲೆ, ಮನೆ ಮನೆಗಳಲ್ಲಿ ಆಚರಣೆ ಆಗುತ್ತಿದೆ.
ತೀರ್ಥಹಳ್ಳಿಯಲ್ಲಿ ಸರ್ಕಾರಿ ಕಚೇರಿಗಳು ವಿದ್ಯುತ್ ದೀಪದಿಂದ ಅಲಂಕರಿಸಿದ್ದು ಗಮನ ಸೆಳೆದಿದೆ.
ತೀರ್ಥಹಳ್ಳಿಯಲ್ಲಿರುವ ಗ್ರಾಮೀಣಾಭಿವೃದ್ಧಿ ಕಟ್ಟಡ ಕೇಸರಿ, ಬಿಳಿ, ಹಸಿರಿನ ಸಂಗಮದಿಂದ ಕಾಣಿಸಿಕೊಂಡಿರುವ ದೃಶ್ಯ ಎಲ್ಲರ ಗಮನವನ್ನು ಸೆಳೆಯುತ್ತಿದೆ.
ಜನ ಕಟ್ಟಡದ ಮುಂದೆ ನಿಂತು ಸೆಲ್ಸಿ, ಫೋಟೋಗಳನ್ನು ತೆಗೆದುಕೊಳ್ಳುತ್ತಿರುವ ದೃಶ್ಯ ಕೂಡ ಕಂಡು ಬಂತು.ಇನ್ನು
ಲೋಕೋಪಯೋಗಿ ಇಲಾಖೆ ಟ್ಟಡ, ಜಿಲ್ಲಾ ಪಂಚಾಯತ್ ಕಟ್ಟಡ, ಮೆಸ್ಕಾಂ ಕಟ್ಟಡ, ಕೊಪ್ಪ ಸರ್ಕಲ್, ಕುವೆಂಪು ಪ್ರತಿಮೆಗೆ ವಿದ್ಯುತ್ ಅಲಂಕಾರ ಮಾಡಲಾಗಿದೆ. ಎಲ್ಲಾ ಕಡೆ ಸ್ವಾತಂತ್ರ್ಯ ಸಂಭ್ರಮ ಕಂಡು ಬರುತ್ತಿದೆ.

Categories
ತೀರ್ಥಹಳ್ಳಿ

ತೀರ್ಥಹಳ್ಳಿ : ಆ.19 ತೀರ್ಥಹಳ್ಳಿಯಲ್ಲಿ ಬೃಹತ್ ಪ್ರತಿಭಟನೆ

ಟಾಪ್ 4 ನ್ಯೂಸ್ ಮಲ್ನಾಡ್

ತೀರ್ಥಹಳ್ಳಿ : ಆ.19 ತೀರ್ಥಹಳ್ಳಿಯಲ್ಲಿ ಬೃಹತ್ ಪ್ರತಿಭಟನೆ
– ಶಿವಮೊಗ್ಗ : ಹೋಮ್ ಗಾರ್ಡ ರೈಲಿಗೆ ಬಿದ್ದು ಆತ್ಮಹತ್ಯೆ
– ಸಾಗರ: ಕುಡಿದು ವಾಹನ ಚಾಲನೆ, 24 ಸಾವಿರ ರೂ. ದಂಡ
– ಶಿವಮೊಗ್ಗ : ಜಿಂಕೆ ಶಿಕಾರಿ ಐವರು ಸೆರೆ

NAMMUR EXPRESS NEWS
ತೀರ್ಥಹಳ್ಳಿ: ಈಗಾಗಲೇ ಅರಣ್ಯ ಒತ್ತುವರಿ ತೆರವು ಬಗ್ಗೆ ನಾವೆಲ್ಲರೂ ಸಭೆ ನಡೆಸಿದ್ದೇವೆ. ಅದೊಂದು ಅವೈಜ್ಞಾನಿಕ ಒತ್ತುವರಿ ತೆರವು ಪ್ರಕ್ರಿಯೆ ಆಗಿದೆ. ಈ ಕಾರಣಕ್ಕೆ ಆಗಸ್ಟ್ 19 ಕ್ಕೆ ಬೃಹತ್ ಪ್ರತಿಭಟನೆ ನಡೆಸಲಿದ್ದೇವೆ ಎಂದು ರೈತ ಸಂಘದ ಮುಖಂಡರಾದ ಕಂಬಳಿಗೆರೆ ರಾಜೇಂದ್ರ ತಿಳಿಸಿದರು. ಅವೈಜ್ಞಾನಿಕ ಒತ್ತುವರಿ ತೆರವು ಖಂಡಿಸಿ 19 ರಂದು ಪಕ್ಷಾತೀತವಾಗಿ ಪ್ರತಿಭಟನೆ ನಡೆಯಲಿದೆ. ಈ ಪ್ರತಿಭಟನೆಗೆ ರೈತ ಸಂಘ, ಸಮಾನ ಮನಸ್ಕರು, ಕರ್ನಾಟಕ ರಕ್ಷಣಾ ವೇದಿಕೆ, ದಲಿತ ಸಂಘರ್ಷ ಸಮಿತಿ ಸೇರಿ ಹಲವು ಸಂಘಟನೆಗಳು ಭಾಗಿಯಾಗಲಿವೆ ಎಂದರು. ತೀರ್ಥಹಳ್ಳಿಯ ವಿಚಾರಗಳನ್ನು ರಾಜ್ಯದ ಪ್ರತಿಯೊಬ್ಬರು ಗಮನವಿಟ್ಟು ನೋಡುತ್ತಾರೆ. ಹಗಾಗಿ ಈ ಪ್ರತಿಭಟನೆ ಮಹತ್ವದ್ದಾಗಿದೆ. ಇಲ್ಲಿ ಯಾರು ಬೇರೆ ಕಡೆಯಿಂದ ಬಂದು ವಲಸೆ ಸಾಗುವಳಿ ಮಾಡಿದವರಲ್ಲ, ಇಲ್ಲಿ ಇದ್ದಂತಹವರೇ ಸಾಗುವಳಿ ಮಾಡಿ ಬೆಳೆ ಬೆಳೆದವರು. ಅಂತವರ ಭೂಮಿಯನ್ನು ತೆರವು ಮಾಡುವುದು ಸರಿಯಲ್ಲ. ಅರಣ್ಯ ಇಲಾಖೆಯವರೇ ಒತ್ತುವರಿ ಮಾಡುತ್ತಾರೆ. ಇಲ್ಲಿನ ಜನರಿಗೆ ರಸ್ತೆ, ಮನೆ, ಕುಡಿಯಲು ನೀರಿನ ವ್ಯವಸ್ಥೆ, ಅದಕ್ಕೂ ಮೀರಿ ಮತದಾನದ ಹಕ್ಕು ಕೊಡುತ್ತಾರೆ. ಇದೆಲ್ಲಾ ಆದ ಮೇಲೆ ಕಟ್ಟಿಕೊಂಡ ಮನೆ ಒತ್ತುವರಿ ಜಾಗ ಎಂದು ಹೇಳುತ್ತಾರೆ. ಇದರಲ್ಲಿ ನ್ಯಾಯ ಎಲ್ಲಿದೆ? ಎಂದು ಪ್ರಶ್ನೆ ಮಾಡಿದರು.

– ಶಿವಮೊಗ್ಗ : ಹೋಮ್ ಗಾರ್ಡ ರೈಲಿಗೆ ಬಿದ್ದು ಆತ್ಮಹತ್ಯೆ

ಶಿವಮೊಗ್ಗ : ನಗರದ ಮಲವಗೊಪ್ಪದ ಬಳಿ ರೈಲ್ವೆ ಹಳಿ ಮೇಲೆ ಪುರಷರೊಬ್ಬರ ಮೃತದೇಹ ಪತ್ತೆಯಾಗಿದೆ. ಇವರನ್ನು ಹೋಮ್ ಗಾರ್ಡ್ ಡ್ಯೂಟಿ ಮಾಡುವ ಮಂಜುನಾಥ್ ಎಂದು ಗುರುತಿಸಲಾಗಿದೆ. ಮೇಲ್ನೋಟಕ್ಕೆ ಇವರು ರೈಲಿಗೆ ಸಿಲುಕಿ ಸಾವನ್ನಪ್ಪಿದ್ದು, ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಶಿವಮೊಗ್ಗ ರೈಲ್ವೆ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದೆ.

– ಸಾಗರ: ಕುಡಿದು ವಾಹನ ಚಾಲನೆ, 24 ಸಾವಿರ ರೂ. ದಂಡ

ಸಾಗರ : ಜೋಗ ಜಲಪಾತ ನೋಡಲು ಸಾವಿರಾರು ಮಂದಿ ಬರುತ್ತಿದ್ದು, ಈ ನಡುವೆ ಮದ್ಯಪಾನಿಗಳ ಹಾವಳಿ ಹೆಚ್ಚಾಗುತ್ತಿದೆ. ಇದಕ್ಕೆ ಪೂರಕ ಎಂಬಂತೆ ಜೋಗ ಜಲಪಾತ ನೋಡಲು ಆಗಮಿಸಿದ್ದ ಮೂವರು ಕುಡಿದು ವಾಹನ ಚಾಲನೆ ಮಾಡಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಕಾರ್ಗಲ್ ಠಾಣೆ ಪೊಲೀಸರು ಮೊಕದ್ದಮೆ ದಾಖಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಮೂವರಿಗೆ ತಲಾ 8000 ರೂ. ಗಳಂತೆ ಒಟ್ಟು 24,000 ರೂ. ದಂಡ ವಿಧಿಸಿ. ಆದೇಶಿಸಿದೆ.

– ಶಿವಮೊಗ್ಗ : ಜಿಂಕೆ ಶಿಕಾರಿ ಐವರು ಸೆರೆ

ಶಿವಮೊಗ್ಗ : ಖಾಸಗಿ ಎಸ್ಟೇಟ್ ಒಂದರಲ್ಲಿ ಜಿಂಕೆಯನ್ನು ಶಿಕಾರಿ ಮಾಡಿ ಕಾರಿನಲ್ಲಿ ಸಾಗಿಸುತ್ತಿದ್ದ ತಂಡವನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಬಂಧಿಸಿದ್ದಾರೆ. ಭದ್ರಾ ವನ್ಯಜೀವಿ ವಿಭಾಗದ ಅಧಿಕಾರಿಗಳು ಈ ಕಾರ್ಯಾ ಚರಣೆಯನ್ನು ನಡೆಸಿದ್ದಾರೆ. ಹಬ್ಬೆ ಅರಣ್ಯ ವಲಯದ ಲಿಮಿಟ್‌ನಲ್ಲಿ ಬರುವ ಚಿಕ್ಕಮಗಳೂರು ತಾಲ್ಲೂಕು ಕೋಡಿ ಗ್ರಾಮದಲ್ಲಿ ಆಗಸ್ಟ್ 10 ರಂದು ಚುಕ್ಕಿ ಜಿಂಕೆ ಯನ್ನು ಬೇಟೆಯಾಡಲಾಗಿತ್ತು. ಈ ಬಳಿಕ ಅದನ್ನು ಕಾರಿನಲ್ಲಿ ಸಾಗಿಸಲು ಆರೋಪಿಗಳು ಯತ್ನಿಸುತ್ತಿದ್ದಾಗ ಭದ್ರಾ ವನ್ಯಜೀವಿ ವಿಭಾಗದ ಬೇಟೆ ತಡೆ ಶಿಬಿರದ ಸಿಬ್ಬಂದಿಗಳು ಅಡ್ಡಗಟ್ಟಿ ವಶಪಡಿಸಿಕೊಂಡಿದ್ದಾರೆ. ನಂತರ ವಾಹನವನ್ನು ಪರಿಶೀಲನೆ ನಡೆಸಿದಾಗ ಅದರಲ್ಲಿ ಸಿಂಗಲ್ ಬ್ಯಾರೆಲ್ ಗನ್ ಹಾಗು ಜಿಂಕೆಯ ಅವಶೇಷ ಇರುವುದು ಗೊತ್ತಾಗಿದೆ. ತಕ್ಷಣವೇ ವಾಹನದಲ್ಲಿದ್ದ ಐವರನ್ನು ಅರೆಸ್ಟ್ ಮಾಡಿದ್ದಾರೆ. ಐವರನ್ನು ಭಾನುವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Categories
ಚಿತ್ರದುರ್ಗ

ಶಾಲಾ ಮಕ್ಕಳಿಗೆ ಸಮವಸ್ತ್ರ ನೀಡಿದ ಸದ್ಗುರು ಆಯುರ್ವೇದ ಸಂಸ್ಥೆ

ಶಾಲಾ ಮಕ್ಕಳಿಗೆ ಸಮವಸ್ತ್ರ ನೀಡಿದ ಸದ್ಗುರು ಆಯುರ್ವೇದ ಸಂಸ್ಥೆ

– ಹೊಸದುರ್ಗ ತಾಲ್ಲೂಕಿನ ಹಾಗಲಕೆರೆ ಶಾಲಾ ಮಕ್ಕಳಿಗೆ ಸಮವಸ್ತ್ರ 

– ಸೇವೆ ಮಾಡುವ ಮನೋಭಾವ ಬೆಳೆಸಿಕೊಳ್ಳೋಣ: ಡಿ.ಎಸ್. ಪ್ರದೀಪ್

NAMMUR EXPRESS NEWS 

ಹೊಸದುರ್ಗ: ಹೊಸದುರ್ಗ ತಾಲ್ಲೂಕಿನ ಮತ್ತೋಡು ಹೋಬಳಿಯ ಹಾಗಲಕೆರೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಮಕ್ಕಳಿಗೆ ಸದ್ಗುರು ಆಯುರ್ವೇದ ಸಂಸ್ಥೆ ವತಿಯಿಂದ ಬುಧವಾರ ಉಚಿತವಾಗಿ ಸಮವಸ್ತ್ರವನ್ನು ಕೊಡುಗೆಯಾಗಿ ನೀಡಲಾಯಿತು.

ಇದೇ ಸಂದರ್ಭದಲ್ಲಿ ಸದ್ಗುರು ಆಯುರ್ವೇದ ಸಂಸ್ಥೆಯ ಮಾಲೀಕ ಡಿ.ಎಸ್. ಪ್ರದೀಪ್ ಮಾತನಾಡಿ, ಸೇವೆ ಮಾಡುವ ಕೈಗಳು, ಮಾತನಾಡುವ ತುಟಿಗಳು ಶ್ರೇಷ್ಠ. ಸೇವೆ ಮಾಡುವ ಮನೋಭಾವನೆಯನ್ನು ಭಾರತೀಯರಾದ ನಾವು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕು. ಅಂಬೇಡ್ಕರ್, ಗಾಂಧೀಜಿ ಇನ್ನಿತರ ಮಹಾತ್ಮರು ಹೇಳಿದಂತೆ ಆಧುನಿಕ ಜತ್ತಿನಲ್ಲಿ ಪ್ರಗತಿ ಕಾಣಲು ಶಿಕ್ಷಣವೇ ದೊಡ್ಡ ಅಸ್ತ್ರ. ನಾವು ಓದುವ ರಾಮಾಯಣ, ಮಹಾಭಾರತ ಹಾಗೂ ಇತರ ಗ್ರಂಥಗಳು ನಮ್ಮಲ್ಲಿ ಸಂಸ್ಕಾರ ಬೆಳೆಸಬೇಕು. ಆಗ ಓದಿದ್ದಕ್ಕೂ ಸಾರ್ಥಕವಾಗುತ್ತದೆ ಎಂಬುದನ್ನು ಮನವರಿಕೆ ಮಾಡಿದರು.

ಕೆಲವು ಗ್ರಾಮಗಳಲ್ಲಿ ತಮ್ಮ ಮಕ್ಕಳು ವಿದ್ಯಾಭ್ಯಾಸ ಮಾಡುವ ಗ್ರಾಮದ ಶಾಲೆಯ ಅಭಿವೃದ್ಧಿಯ ಕಡೆಗೆ ಗಮನ ನೀಡದೆ ಇರುವುದು ಬೇಸರ ತರಿಸಿದೆ. ದೇವಾಲಯಗಳು, ಮಂದಿರಗಳು ನಮಗೆ ಮನಸ್ಸಿಗೆ ನೆಮ್ಮದಿ ನೀಡಿದರೆ, ಶಾಲೆಗಳು ಮಕ್ಕಳಲ್ಲಿ ಜ್ಞಾನವನ್ನು ಬೆಳೆಸುತ್ತವೆ. ಧಾರ್ಮಿಕ ಕಾರ್ಯಗಳಿಗೆ ಮಹತ್ವ ನೀಡಿದಂತೆ, ಶೈಕ್ಷಣಿಕ ಕಾರ್ಯಗಳಿಗೆ ಕೈ ಜೋಡಿಸಿ ಎಂದು ಪೋಷಕರಲ್ಲಿ ಮನವಿ ಮಾಡಿದರು.

ಆಧುನಿಕ ಜಗತ್ತಿನಲ್ಲಿ ಶಿಕ್ಷಣದಿಂದ ಪರಿವರ್ತನೆ ಸಾಧ್ಯ. ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯೆ ಇಲ್ಲವಾದರೆ, ಬದುಕು ಬಹಳ ಕಷ್ಟಕರವಾಗುತ್ತದೆ. ಪೋಷಕರು ಹೆಚ್ಚಿನದಾಗಿ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಿ. ನಿಮ್ಮ ಶಾಲೆಗೆ ಬೇಕಾದಂತಹ ಮೂಲಭೂತ ಸೌಕರ್ಯಗಳನ್ನು ನಮ್ಮ ಸದ್ಗುರು ಆಯುರ್ವೇದ ಸಂಸ್ಥೆ ನೀಡಲು ಸಿದ್ಧವಿದೆ ಎಂದು ಭರವಸೆ ನೀಡಿದರು.

ಈ ವೇಳೆ ಗ್ರಾಮದ ಮುಖಂಡರಾದ ರಂಗನಾಥ್, ಮಹಾಲಿಂಗಪ್ಪ, ಎಸ್.ಡಿ.ಎಂ.ಸಿ ಉಪಾಧ್ಯಕ್ಷರಾದ ಗುರುಸಿದ್ದಯ್ಯ ಮತ್ತು ಮುಖ್ಯ ಶಿಕ್ಷಕರಾದ ರಂಗನಾಥ್ ಸೇರಿದಂತೆ ಸದಸ್ಯರು, ಶಾಲಾ ಶಿಕ್ಷಕರು, ಸಿಬ್ಬಂದಿಗಳು ಮತ್ತು ಗ್ರಾಮಸ್ಥರಿದ್ದರು.

Categories
ಮಾಹಿತಿ ಸುದ್ದಿ

ಜಯ ಹೇ ಭಾರತ ಮಾತೆ..!

ಜಯ ಹೇ ಭಾರತ ಮಾತೆ..!

– 78ನೇ ಸ್ವಾತಂತ್ರ್ಯ ಹಬ್ಬಕ್ಕೆ ದೇಶ ಸಜ್ಜು
– ದೇಶ ಪ್ರೇಮದ ದಿನವನ್ನು ಆಚರಿಸೋಣ

NAMMUR EXPRESS NEWS
ಭಾರತವು ಆಗಸ್ಟ್ 15ರ 78ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲು ಸಜ್ಜಾಗುತ್ತಿದೆ.
ಸ್ವಾತಂತ್ರ್ಯ ದಿನಾಚರಣೆಯ ರಂಗು ಎಲ್ಲೆಡೆಯೂ ಬೀರಿ, ಸಡಗರ ಸಂಭ್ರಮದಿಂದ ಆಚರಣೆಯ ತಯಾರಿ ಜರುಗುತ್ತಿದೆ.
78ನೇ ಸ್ವಾತಂತ್ರ್ಯ ದಿನಾಚರಣೆಯ ಈ ಸಂದರ್ಭದಲ್ಲಿ ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ ಸ್ವಾತಂತ್ರ್ಯ ಸಂಗ್ರಾಮದ ಅಂದಿನ ಚಿತ್ರಣ ನಮ್ಮ ಮುಂದೆ ಬರುತ್ತದೆ .ದೇಶವನ್ನು ಪ್ರೀತಿಸುತ್ತಿದ್ದ ಜನರು ,ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸಾವಿರಾರು ಜನರ ಹೆಸರು ,ತ್ಯಾಗ ,ದೇಶಭಕ್ತಿ ,ದೇಶಪ್ರೇಮ ನಮ್ಮ ಕಣ್ಣ ಮುಂದೆ ಹಾದು ಹೋಗುತ್ತದೆ.
ನಮ್ಮ ದೇಶದ ಸಾರ್ವಭೌಮತೆಯನ್ನು ಎತ್ತಿ ಹಿಡಿಯುವುದೇ ಸ್ವಾತಂತ್ರ್ಯವಾಗಿದ್ದು ,ಈ ಸ್ವಾತಂತ್ರ್ಯ ದಿನಾಚರಣೆ ಕೇವಲ ಒಂದು ದಿನದ ಆಚರಣೆಗೆ ಸೀಮಿತವಾಗದೆ ಬ್ರಿಟಿಷರ ಆಳ್ವಿಕೆಯಿಂದ ಹೊರ ಬಂದು ಪೂರ್ಣ ಸ್ವರಾಜ್ಯ ದೇಶವನ್ನು ನಿರ್ಮಿಸಿದ ಲಕ್ಷಾಂತರ ಹೋರಾಟಗಾರರ ಶ್ರಮ, ಬಲಿದಾನದ ಮಹತ್ವವನ್ನು ಪ್ರತಿಕ್ಣ, ಪ್ರತಿದಿನವೂ ಭಾರತದ ಪ್ರಜೆಗಳಾದ ನಾವು ಸ್ಮರಿಸುವಂತಾಗಬೇಕು.

ದೇಶ ನನಗೇನು ಮಾಡಿದೆ ಎನ್ನುವುದಕ್ಕಿಂತ ನಾನು ದೇಶಕ್ಕಾಗಿ ಏನು ಮಾಡಿದ್ದೇನೆ ಎಂದು ಅರಿತು ದೇಶಕ್ಕಾಗಿ ಏನನ್ನಾದರೂ ಮಾಡುವಂತಹ ಮನೋಭಾವ ನಮ್ಮಲ್ಲಿ ಮೂಡಬೇಕು, ಅಂದಾಗಲೇ ಭಾರತೀಯ ಪ್ರಜೆಯಾಗಿ ಸಾರ್ಥಕತೆ ಕಾಣಲು ಸಾಧ್ಯವಾಗುತ್ತದೆ.
ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಗೆ ಸಕಲ ಸಿದ್ಧತೆ ನಡೆಯುತ್ತಿದ್ದು ‘ವಿಕಸಿತ ಭಾರತ’ ಎಂಬ ವಿಷಯವನ್ನ ಹೊಂದಿದೆ. ನವದೆಹಲಿಯ ಕೆಂಪುಕೋಟೆಯಲ್ಲಿ ನಡೆಯುವ ಸ್ವಾತಂತ್ರ್ಯ ದಿನಾಚರಣೆಗೆ ಕರ್ನಾಟಕದಿಂದ 56 ಗಣ್ಯರನ್ನು ಆಹ್ವಾನಿಸಲಾಗಿದೆ. ಸ್ವಾತಂತ್ರ್ಯ ದಿನದ ಆಚರಣೆಯ ಬಳಿಕ ರಾಷ್ಟ್ರಪತಿಗಳು ಆಯೋಜಿಸಿರುವ ಚಹಾ ಕೂಟದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಸರ್ಕಾರವು ಹರ್ ಘರ್ ತಿರಂಗಾ ಅಭಿಯಾನದ ಮೂಲಕ ಸಾರ್ವಜನಿಕ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸುತ್ತಿದೆ. ನಾಗರಿಕರು ತಮ್ಮ ಮನೆ ಮತ್ತು ವ್ಯವಹಾರ ಸ್ಥಳಗಳಲ್ಲಿ ಹೆಮ್ಮೆಯಿಂದ ರಾಷ್ಟ್ರಧ್ವಜವನ್ನು ಪ್ರದರ್ಶಿಸಲು ಕರೆ ನೀಡಿದೆ.
ಶಾಲಾ ಕಾಲೇಜು ಗಳಲ್ಲಿ ,ಕಚೇರಿಗಳಲ್ಲಿ, ಮಾಲ್ಗಳಲ್ಲಿ ಜನರು ಸ್ವಾತಂತ್ರೋತ್ಸವ ಆಚರಿಸಲು ಸಿದ್ದರಾಗಿದ್ದು,ಗಣ್ಯರಿಂದ ಧ್ವಜಾರೋಹಣವನ್ನು ಮಾಡಿ ಗೌರವ ಸಲ್ಲಿಸಲಾಗತ್ತೆ. ಮಕ್ಕಳಿಂದ ಭಾಷಣ , ನಾಟಕ, ನೃತ್ಯ ಹೀಗೇ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡುವ ಮೂಲಕ ಜೈ ಭಾರತ್ ಘೋಷಣೆ ಮೊಳಗಲಿದೆ.
ಸ್ವಾತಂತ್ರ್ಯ ದಿನಾಚರಣೆಯ ಸಂ್ರಮಕ್ಕೆ ಸಾಕ್ಷಿಯಾಗಲು ಇಂದೇ ಧ್ವಜಸ್ತಂಭ ಹಾಗೂ ಹಲವೆಡೆ ವಿದ್ಯುತ್ ದೀಪಾಲಂಕಾರವನ್ನು ಮಾಡಲಾಗುತ್ತಿದ್ದು, ಸಂಭ್ರಮ ಎಲ್ಲೆಡೆಯೂ ಮನೆಮಾಡಿದೆ.

Categories
ತೀರ್ಥಹಳ್ಳಿ

ಸ್ವಾತಂತ್ರ್ಯ ಸಂಭ್ರಮ: ನೃತ್ಯ ಹಾಗೂ ನೃತ್ಯ ರೂಪಕ ಸ್ಪರ್ಧೆ

ಸ್ವಾತಂತ್ರ್ಯ ಸಂಭ್ರಮ: ನೃತ್ಯ ಹಾಗೂ ನೃತ್ಯ ರೂಪಕ ಸ್ಪರ್ಧೆ
– ಕಾರ್ಗಿಲ್ ವಿಜಯೋತ್ಸವದ ರಜತ ಮಹೋತ್ಸವ ಕಾರ್ಯಕ್ರಮ
– ಪ್ರಾಥಮಿಕ / ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ನೃತ್ಯ ಹಾಗೂ ನೃತ್ಯ ರೂಪಕ ಸ್ಪರ್ಧೆ

NAMMUR EXPRESS NEWS
ರೋಟರಿ ಕ್ಲಬ್, ತೀರ್ಥಹಳ್ಳಿ ಇವರ ಸಹಯೋಗದಲ್ಲಿ ಆಟೋರಿಕ್ಷಾ ಚಾಲಕರ ಮತ್ತು ಮಾಲೀಕರ ಸಂಘ, ತೀರ್ಥಹಳ್ಳಿ, ನ್ಯಾಷನಲ್ ಗೋಲ್ಡ್ & ಡೈಮಂಡ್, ತೀರ್ಥಹಳ್ಳಿ ಗಾಯತ್ರಿ ಜ್ಯುವೆಲ್ಲರ್ಸ್, ತೀರ್ಥಹಳ್ಳಿ, ಮಲ್ನಾಡ್ ಕ್ಲಬ್‌, ತೀರ್ಥಹಳ್ಳಿ ಟಿ.ಎಸ್.ಟಿ ಹೈಪರ್ ಮಾರ್ಟ್, ತೀರ್ಥಹಳ್ಳಿ, ಸಪ್ತಸಿರಿ ಚಿಟ್ ಫಂಡ್ಸ್, ತೀರ್ಥಹಳ್ಳಿ, ಎಸ್.ಪಿ ಕೇಟರರ್ಸ್, ರಥಬೀದಿ, ತೀರ್ಥಹಳ್ಳಿ, ಬಳಗಟ್ಟೆ ಗ್ರೀನ್ಸ್ ನೇತೃತ್ವದಲ್ಲಿ 78 ನೇ ಸ್ವಾತಂತ್ರೋತ್ಸವದ ಅಂಗವಾಗಿ ತೀರ್ಥಹಳ್ಳಿ ಪಟ್ಟಣ ವ್ಯಾಪ್ತಿಯ ಪ್ರಾಥಮಿಕ / ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ನೃತ್ಯ ಹಾಗೂ ನೃತ್ಯ ರೂಪಕ ಸ್ಪರ್ಧೆ ಹಾಗೂ ಕಾರ್ಗಿಲ್ ವಿಜಯೋತ್ಸವದ ರಜತ ಮಹೋತ್ಸವ ಕಾರ್ಯಕ್ರಮ ದಿನಾಂಕ : 15.08.2024, ಸಮಯ: ಸಂಜೆ 5.30, ಸ್ಥಳ: ಗೋಪಾಲ ಗೌಡ ರಂಗಮಂದಿರ, ಸೊಪ್ಪುಗುಡ್ಡೆ, ತೀರ್ಥಹಳ್ಳಿ ಈ ಕಾರ್ಯಕ್ರಮ ನೆರವೇರಲಿದೆ.
ಕಾರ್ಯಕ್ರಮದ ಅಧ್ಯಕ್ಷತೆ: ಅನಿಲ್‌ ಕುಮಾರ್, ಅಧ್ಯಕ್ಷರು ರೋಟರಿ ಕ್ಲಬ್‌ ತೀರ್ಥಹಳ್ಳಿ, ಈ ಸಮಾರಂಭದ ಉದ್ಘಾಟನೆ: ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ತೀರ್ಥಹಳ್ಳಿ, ಮುಖ್ಯ ಅತಿಥಿಗಳು: ಶ್ರೀ ಆರಗ ಜ್ಞಾನೇಂದ್ರ, ಮಾಜಿ ಗೃಹ ಸಚಿವರು, ಶಾಸಕರು ತೀರ್ಥಹಳ್ಳಿ ವಿಧಾನ ಸಭಾ ಕ್ಷೇತ್ರ. ಉಪಸ್ಥಿತಿ: ಶ್ರೀ ನಾಗರಾಜ್ ಮುಖ್ಯಾಧಿಕಾರಿಗಳು ಪಟ್ಟಣ ಪಂಚಾಯತ್, ತೀರ್ಥಹಳ್ಳಿ, ಶ್ರೀ ಗಣೇಶ್ ಕ್ಷೇತ್ರ ಶಿಕ್ಷಣಾಧಿಕಾರಿಗಳು, ತೀರ್ಥಹಳ್ಳಿ ಶ್ರೀ ಗಜಾನನ ವಾಮನ ಸುತಾರ ಡಿ.ವೈ.ಎಸ್.ಪಿ. ತೀರ್ಥಹಳ್ಳಿ ಪೊಲೀಸ್, ಶ್ರೀ ಸೊಪ್ಪುಗುಡ್ಡೆ ರಾಘವೇಂದ್ರ ಅಧ್ಯಕ್ಷರು, ಆಟೋರಿಕ್ಷಾ ಚಾಲಕರು ಮತ್ತು ಮಾಲೀಕರ ಸಂಘ, ತೀರ್ಥಹಳ್ಳಿ
ಶ್ರೀ ಇಬ್ರಾಹಿಂ ಷರೀಫ್ ಮಾಲೀಕರು ನ್ಯಾಷನಲ್ ಗೋಲ್ಡ್ & ಡೈಮಂಡ್, ತೀರ್ಥಹಳ್ಳಿ, ಶ್ರೀ ಅನಂತ ಪದ್ಮನಾಭ ಆಚಾರ್ಯ ಮಾಲೀಕರು ಗಾಯತ್ರಿ ಜ್ಯುವೆಲ್ಲರ್ , ತೀರ್ಥಹಳ್ಳಿ.
ಶ್ರೀ ಪ್ರವೀಣ್ ಬಿಳುವೆ ಅಧ್ಯಕ್ಷರು ಮಲ್ನಾಡ್ ಕ್ಲಬ್‌, ತೀರ್ಥಹಳ್ಳಿ,
ಶ್ರೀ ಮಹಾಬಲೇಶ್ವರ ಹೆಗಡೆ ಅಧ್ಯಕ್ಷರು ತೀರ್ಥಹಳ್ಳಿ ತಾಲ್ಲೂಕು ಶಿಕ್ಷಕರ ಪತ್ತಿನ ಸಹಕಾರ ಸಂಘ, ಶ್ರೀ ಚಂದ್ರಶೇಖರ್.ಎನ್ ವ್ಯವಸ್ಥಾಪಕ ನಿರ್ದೇಶಕರು ಸಪ್ತಸಿರಿ ಚಿಟ್ ಫಂಡ್
ಶ್ರೀ ಪ್ರದೀಪ್ ಎಸ್. ಮಾಲೀಕರು ಎಸ್.ಪಿ ಕೇಟರರ್ಸ್
ಶ್ರೀ ಲ|| ಹರೀಶ್ ಮಾಲೀಕರು,ಬಳಗಟ್ಟೆ ಗ್ರೀನ್ಸ್ ಇನ್ನು ಅನೇಕ ಗಣ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ . ಕಾರ್ಗಿಲ್ ವಿಜಯೋತ್ಸವದ ರಜತ ಮಹೋತ್ಸವ ಕಾರ್ಯಕ್ರಮ ಕೂಡ ನೆರವೇರುತ್ತದೆ.

**ಸರ್ವರನ್ನು ಕಾರ್ಯಕ್ರಮಕ್ಕೆ ಸ್ವಾಗತಿಸುತ್ತಿರುವವರು
ಮನೋಜ್ ಆಚಾರ್ಯ
ಕಾರ್ಯಕ್ರಮ ನಿರ್ದೇಶಕರು
ರೋಟರಿ ಕ್ಲಬ್
ತೀರ್ಥಹಳ್ಳಿ*

Categories
ತೀರ್ಥಹಳ್ಳಿ

ತೀರ್ಥಹಳ್ಳಿ ಪ್ರಮುಖ ರಸ್ತೆಗಳೇ ಹೊಂಡ ಗುಂಡಿ.!

ತೀರ್ಥಹಳ್ಳಿ ಪ್ರಮುಖ ರಸ್ತೆಗಳೇ ಹೊಂಡ ಗುಂಡಿ.!
– ಸಾರ್ವಜನಿಕರ ಗೋಳು ಕೇಳೋರು ಯಾರು?
– ಸಂಬಂಧಪಟ್ಟ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿರುವರೆ.?

NAMMUR EXPRESS NEWS
ತೀರ್ಥಹಳ್ಳಿ : ತೀರ್ಥಹಳ್ಳಿ ಪಟ್ಟಣದ ಪ್ರಮುಖ ರಸ್ತೆಗಳಾದ ಸೀಬಿನಕೆರೆ, ಸೊಪ್ಪುಗುಡ್ಡೆ ರಸ್ತೆ, ಗಾಂಧಿನಗರ ಸೇರಿದಂತೆ ಹಲವೆಡೆ ರಸ್ತೆಗಳು ಹೊಂಡ ಗುಂಡಿ ಬಿದ್ದಿವೆ. ಇದರಿಂದ ವಾಹನ ಸವಾರರಿಗೆ ಪಟ್ಟಣದಲ್ಲಿ ಓಡಾಡಲು ತೊಂದರೆ ಉಂಟಾಗುತ್ತಿದೆ. ಆದರೂ ಕೂಡ ಸಂಬಂಧ ಪಟ್ಟ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ. ಅಪ್ಪಿ ತಪ್ಪಿ ವಾಹನ ಸವಾರರು ರಸ್ತೆಯಿಂದ ಕೆಳಗೆ ವಾಹನಗಳನ್ನು ಇಳಿಸಿದರೆ ಅದೊ ಗತಿ ಎಂಬಂತಾಗಿದೆ.
ಪಟ್ಟಣದ ಪ್ರಮುಖ ರಸ್ತೆಗಳಲ್ಲಿಯೇ ಹೊಂಡ ಗುಂಡಿಗಳು ಬಿದ್ದಿವೆ ಮಳೆಗಾಲದಲ್ಲಂತೂ ಈ ಭಾಗಗಳಲ್ಲಿ ಪಾದಚರಿಗಳಿಗೂ ಕೂಡ ಓಡಾಡುವುದು ಬಹಳ ಕಷ್ಟ. ಇದರಿಂದ ನಾಗರೀಕರು ರಸ್ತೆಯಲ್ಲಿ ಹಿಡಿ ಶಾಪ ಹಾಕುತ್ತಾ ಓಡಾಡುವಂತಹ ಸ್ಥಿತಿಗೆ ತಲುಪಿದೆ . ಪಟ್ಟಣ ಪಂಚಾಯತ್ ವಾರ್ಡ್ ಗಳ ರಸ್ತೆಗಳ ಸ್ಥಿತಿಯಂತೂ ಅದೋಗತಿ ಎಂಬಂತಾಗಿದೆ. ಹೊಂಡ ಮಯ ರಸ್ತೆಗಳಿಂದಾಗಿ ನಿತ್ಯ ಪಟ್ಟಣದಲ್ಲಿ ಓಡಾಡುವ ಸಾರ್ವಜನಿಕರು ಯಾತನೆ ಅನುಭವಿಸುತ್ತಿದ್ದಾರೆ. ಇನ್ನು ಲಾರಿಗಳಂತ ದೊಡ್ಡ ವಾಹನಗಳಂತೂ ಸಂಚರಿಸುವುದು ಹರಸಾಹಸವಾಗಿಬಿಟ್ಟಿದೆ. ಆದ್ದರಿಂದ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ರಸ್ತೆಗಳ ದುಸ್ಥಿತಿಯನ್ನು ಗಮನಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

Categories
ತೀರ್ಥಹಳ್ಳಿ

ತೀರ್ಥಹಳ್ಳಿಯ ಗಿರೀಶ್ ಅವರಿಗೆ ರಾಷ್ಟ್ರ ಪತಿಗಳ ಚಿನ್ನದ ಪದಕ

ತೀರ್ಥಹಳ್ಳಿಯ ಗಿರೀಶ್ ಅವರಿಗೆ ರಾಷ್ಟ್ರ ಪತಿಗಳ ಚಿನ್ನದ ಪದಕ
– ದೇಶದ ಅತ್ಯುತ್ತಮ ಗೌರವಕ್ಕೆ ಭಾಜನರಾದ ಚಂದಕಮಕ್ಕಿ ಗಿರೀಶ್

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಚಂದಕಮಕ್ಕಿ ಮೂಲದ ಡೆಪ್ಯೂಟಿ ಎಸ್ಪಿ ಗಿರೀಶ್ ಅವರಿಗೆ ರಾಷ್ಟ್ರ ಪತಿಗಳ ಚಿನ್ನದ ಪದಕ ಲಭಿಸಿದೆ.
ದೇಶದ ಅತ್ಯುತ್ತಮ ಗೌರವ ಆಗಿರುವ ರಾಷ್ಟ್ರಪತಿ ಚಿನ್ನದ ಪದಕ ಪಡೆದ ಅವರಿಗೆ ತೀರ್ಥಹಳ್ಳಿಯ ಅವರ ಸ್ನೇಹಿತರು ಶುಭಾಶಯ ಸಲ್ಲಿಸಿದ್ದಾರೆ.
ಕೃಷ್ಣಮೂರ್ತಿ ಮತ್ತು ನಾಗರತ್ನ ದಂಪತಿಗಳ ಪುತ್ರ. ತೀರ್ಥಹಳ್ಳಿ ತುಂಗಾ ಮಹಾವಿದ್ಯಾಲಯದಲ್ಲಿ ಡಿಗ್ರಿ ಅಧ್ಯಯನ ಮಾಡಿ ಬಳಿಕ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಇದೀಗ ಡಿಎಸ್ಪಿ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.