Categories
ತೀರ್ಥಹಳ್ಳಿ

ಹಿಂದೂಗಳ ಮೇಲೆ ದೌರ್ಜನ್ಯಕ್ಕೆ ಹೋರಾಟದ ಕಿಚ್ಚು!

ಹಿಂದೂಗಳ ಮೇಲೆ ದೌರ್ಜನ್ಯಕ್ಕೆ ಹೋರಾಟದ ಕಿಚ್ಚು!
– ತೀರ್ಥಹಳ್ಳಿಯಲ್ಲಿ ಹಿಂದೂ ಕಾರ್ಯಕರ್ತರ ಮೌನ ಮೆರವಣಿಗೆ
– ಹಿಂದೂ ಹಿತರಕ್ಷಣಾ ಸಮಿತಿ ವತಿಯಿಂದ ಪ್ರತಿಭಟನೆ

NAMMUR EXPRESS NEWS
ತೀರ್ಥಹಳ್ಳಿ: ಬಾಂಗ್ಲಾದೇಶದ ಆಮಾಯಕ ಹಿಂದುಗಳ ಕೊಲೆ ಅತ್ಯಾಚಾರ ಹಾಗೂ ಹಿಂದು ಮಂದಿರಗಳನ್ನು ಹಾಳು ಮಾಡುವುದನ್ನು ತಡೆಯುವ ಬಗ್ಗೆ ಹಿಂದೂ ಕಾರ್ಯಕರ್ತರ ಮೌನ ಮೆರವಣಿಗೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಹಿಂದೂ ಹಿತರಕ್ಷಣಾ ಸಮಿತಿ ವತಿಯಿಂದ ತೀರ್ಥಹಳ್ಳಿ ಪಟ್ಟಣದಲ್ಲಿ ಮೌನ ಮೆರವಣಿಗೆ ನಡೆಸಲಾಯಿತು.
ಮೆರವಣಿಗೆ ನಡೆಸಿದ ಬಳಿಕ ತಾಲೂಕ್ ಆಫೀಸ್ ಆವರಣದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಆರಗ ಜ್ಞಾನೇಂದ್ರ,ಬಾಂಗ್ಲಾದೇಶದ ಹಿಂದುಗಳ ಮೇಲೆ ನಡೆಯುವಂತ ಹತ್ಯೆ ಮತ್ತು ದೌರ್ಜನ್ಯದ ವಿರುದ್ಧ ನಮ್ಮ ಭಾರತ ಸರ್ಕಾರ ಕ್ರಮ ಕೈಗೊಳ್ಳುವಂತಾಗಬೇಕು. ನಮ್ಮಲ್ಲಿ ಸೆಕ್ಯುಲರ್ ಗಳು ಯಾರು ಇದರ ವಿರುದ್ಧ ದನಿಯ ಎತ್ತುವುದಿಲ್ಲ, ಮತ್ತು 70ರ ದಶಕದಲ್ಲಿ ಪಾಕಿಸ್ತಾನ ಬಾಂಗ್ಲಾದೇಶಕ್ಕೆ ಮಿಲಿಟರಿನ ನುಗ್ಗಿಸಿ ರಕ್ತಪಾತ ಮಾಡಿದ್ದು ಆ ಸಮಯದಲ್ಲಿ ಭಾರತ ಮಧ್ಯ ಪ್ರವೇಶಿಸಿ ಗಲಭೆಯನ್ನು ನಿ್ಲಿಸಿದ್ದು, ಆದರೆ ಬಾಂಗ್ಲಾ ಆ ಕೃತಜ್ಞತೆಯನ್ನು ಇಟ್ಟಿಲ್ಲ. ಅಲ್ಲಿ ಹಿಂದುಗಳ ವಿರುದ್ಧ ದೌರ್ಜನ್ಯ ನಡೆಯುತ್ತಿದೆ. ಆದರೆ ಇದನ್ನು ಭಾರತ ಎಂದು ಸಹಿಸುವುದಿಲ್ಲ ಎಂದರು. ತಾಲೂಕು ದಂಡಾಧಿಕಾರಿ ಜಕ್ಕಣ್ಣ ಗೌಡರ್ ಅವರಿಗೆ ಮನವಿಪತ್ರ ರಾಷ್ಟ್ರಪತಿ ಅವರಿಗೆ ನೀಡಲಾಯಿತು.
ವಾಸುದೇವ್ ಜೆ.ಆ‌ರ್. ಜಿಲ್ಲಾ ಅಧ್ಯಕ್ಷರು ವಿಶ್ವ ಹಿಂದು ಪರಿಷತ್,, ಭಾರತಿಪುರ ದಿನೇಶ್,ಮತ್ತು ವಾಸುದೇವ್ ಜೆ,,ಆರ್, ಜಿಲ್ಲಾಧ್ಯಕ್ಷರು ವಿಶ್ವ ಹಿಂದೂ ಪರಿಷತ್ ಹಾಗೂ ಹಿಂದೂ ಕಾರ್ಯಕರ್ತರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

Categories
ಮಾಹಿತಿ ಸುದ್ದಿ

ಅಡಿಕೆ ದರ ಎಷ್ಟಿದೆ?

ಅಡಿಕೆ ದರ ಎಷ್ಟಿದೆ?
– ಸರಕು ಎಷ್ಟು? ಬೆಟ್ಟೆ ಎಷ್ಟು?

NAMMUR EXPRESS NEWS

ಸರಕು – 55300 -87896

ಬೆಟ್ಟೆ – 47699-54700-55500

ರಾಶಿ – 40169-48500-49899

ಗೊರಬಲು – 27109-33900-34000

Categories
ಕರಾವಳಿ

ಉಡುಪಿ ವೈದ್ಯರೊಬ್ಬರಿಗೆ 1.33 ಕೋಟಿ ವಂಚನೆ: ದೂರು ದಾಖಲು

ಕರಾವಳಿ ಟಾಪ್ ನ್ಯೂಸ್

ಉಡುಪಿ ವೈದ್ಯರೊಬ್ಬರಿಗೆ 1.33 ಕೋಟಿ ವಂಚನೆ: ದೂರು ದಾಖಲು
– ಕಸ್ಟಮ್ಸ್ ಅಧಿಕಾರಿಗಳ ಹೆಸರಲ್ಲಿ ವಂಚನೆ: ದುಡ್ಡು ಕಳೆದುಕೊಂಡಿದ್ದು ಹೇಗೆ?
– ಮೂಡುಬಿದರೆ: ಕಡಂದಲೆ ಶಾಂಭವಿ ನದಿಯಲ್ಲಿ ದನದ ತಲೆಗಳು ಪತ್ತೆ!
– ಮಂಗಳೂರು: ಅಬುಧಾಬಿಯಲ್ಲಿ ಕಟ್ಟಡದಿಂದ ಬಿದ್ದು ಮೃತ್ಯು
– ಕಡಬ: ರಸ್ತೆ ದಾಟಲು ನಿಂತಿದ್ದ ವ್ಯಕ್ತಿಗೆ ಸ್ಕೂಟ‌ರ್ ಡಿಕ್ಕಿ: ವ್ಯಕ್ತಿ ಸಾವು

NAMMUR EXPRESS NEWS
ಉಡುಪಿ: ಮುಂಬೈಯ ಕಸ್ಟಮ್ ಅಧಿಕಾರಿಗಳ ಹೆಸರಿನಲ್ಲಿ ವೈದ್ಯರೊಬ್ಬರಿಗೆ ಕೋಟ್ಯಂತರ ರೂ. ಪಂಗನಾಮ ಹಾಕಿರುವ ಘಟನೆ ಉಡುಪಿಯಲ್ಲಿ ನಡೆದಿದೆ.
ಉಡುಪಿಯ ವೈದ್ಯರಾಗಿರುವ ಡಾ.ಅರುಣ್ ಕುಮಾರ್ (53) ಹಣ ಕಳೆದುಕೊಂಡ ವ್ಯಕ್ತಿ. ಈ ಬಗ್ಗೆ ಉಡುಪಿ ಸೆನ್ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜು.29ರಂದು ಡಾ. ಅರುಣ್ ಅವರಿಗೆ ಅಪರಿಚಿತರು ಕಸ್ಟಮ್ಸ್‌ನಿಂದ ಕರೆ ಮಾಡಿ, ನಿಮ್ಮ ಆಧಾರ್ ನಂಬ್ರ ಬಳಸಿ ಬುಕ್ ಆಗಿರುವ ಕೊರಿಯರ್‌ನಲ್ಲಿ 5 ಪಸ್‌ಪೋರ್ಟ್, 5 ಎಟಿಎಂ ಕಾರ್ಡ್, 200ಗ್ರಾಂ ಎಂಡಿಎಂಎ ಹಾಗೂ 5000 ಯುಎಸ್ ಡಾಲರ್ ಇದ್ದು, ಕೋರಿಯರ್ ಮುಂಬಯಿ ಕಸ್ಟಮ್ಸ್‌ರವರ ವಶದಲ್ಲಿ ಇರುವುದಾಗಿ ತಿಳಿಸಿದರು.ಬಳಿಕ ಪೊಲೀಸ್ ಅಧಿಕಾರಿ ಎಂದು ನಂಬಿಸಿ ಅರುಣ್ ಕುಮಾರ್‌ಗೆ ಕರೆ ಮಾಡಿ, ನಿಮ್ಮ ಆಧಾರ್ ಕಾರ್ಡ್ ದುರ್ಬಳಕೆಯ ಬಗ್ಗೆ ದೂರನ್ನು ಸ್ವೀಕರಿಸಲಾಗಿದೆ ಎಂದು ತಿಳಿಸಿದರು. ನಿಮ್ಮ ಆಧಾರ್ ಕಾರ್ಡ್‌ನ್ನು ಭಯೋತ್ಪಾದಕರು ಸಿಮ್ ಖರೀದಿಸಲು ಬಳಸಿದ್ದು, ಈ ದೂರಿಗೆ ಸಂಬಂಧಿಸಿ ನಿಮ್ಮನ್ನು ವರ್ಚುವಲ್ ಆರೆಸ್ಟ್ ಮಾಡುವುದಾಗಿ ತಿಳಿಸಿದ್ದರು.
ಜು.29ರಿಂದ ಆ.9ರ ತನಕ ಅವರ ಮನೆಯ ರೂಮ್ ಒಂದರಲ್ಲಿ
ಇರುವಂತೆ ಹಾಗೂ ಬೇರೆಯವರೊಂದಿಗೆ ಸಂಪರ್ಕಿಸದಂತೆ ಸೂಚಿಸಿದ್ದರು. ಈ ಪ್ರಕರಣವನ್ನು ಸರಿಪಡಿಸಲು ಅಪರಿಚಿತರು
ಸೂಚಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಹಣ ಪಾವತಿಸುವಂತೆ
ತಿಳಿಸಿದ್ದು ಅದರಂತೆ ಅರುಣ್ ಕುಮಾರ್, ಖಾತೆಯಿಂದ 1,33,81,000
ರೂ. ಹಣವನ್ನು ವರ್ಗಾಯಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ದಕ್ಷಿಣ ಕನ್ನಡದ ಯುವಕ ಅಬುಧಾಬಿಯಲ್ಲಿ ಕಟ್ಟಡದಿಂದ ಬಿದ್ದು ಮೃತ್ಯು

ಮಂಗಳೂರು: ಕೊಣಾಜೆ ಗ್ರಾಮದ ನಡುಪದವಿನ ಯುವಕನೋರ್ವ ಅಬುಧಾಬಿಯಲ್ಲಿ ಕಟ್ಟಡದಿಂದ ಬಿದ್ದು ಮೃತಪಟ್ಟಿರುವ ಘಟನೆ ಬುಧವಾರ ನಡೆದಿದೆ.
ಮೃತಪಟ್ಟ ಯುವಕನನ್ನು ಉಮ್ಮರ್ ಎಂಬವರ ಪುತ್ರ ನೌಫಲ್(25) ಎಂದು ಗುರುತಿಸಲಾಗಿದೆ.ಅಬುಧಾಬಿಯಲ್ಲಿ ಎ.ಸಿ ಮೆಕ್ಯಾನಿಕ್ ಆಗಿ ಕೆಲಸಮಾಡುತ್ತಿದ್ದ ನೌಫಲ್ ಕಟ್ಟಡವೊಂದರಲ್ಲಿ ಕೆಲಸ ಮಾಡುವಾಗ ಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಕಡಂದಲೆ ಶಾಂಭವಿ ನದಿಯಲ್ಲಿ ದನದ ತಲೆಗಳು ಪತ್ತೆ!

ಮೂಡುಬಿದಿರೆ: ತಾಲೂಕಿನ ಕಡಂದಲೆ ಶಾಂಭವೀ ನದಿಯಲ್ಲಿ ತೇಲುತ್ತಿದ್ದ ದನದ ತಲೆಗಳನ್ನು ಸ್ಥಳೀಯರು ಬುಧವಾರ ಬೆಳಿಗ್ಗೆ ಪತ್ತೆ ಮಾಡಿದ್ದಾರೆ.ದನವನ್ನು ಕೊಂದು ಮಾಸ ಮಾಡಿದ ನಂತರ ಅದರ ತಲೆಗಳನ್ನು ಮತ್ತು ಕರುಳನ್ನು ನದಿಗೆ ತಂದು ಹಾಕಲಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.ಈ ಪರಿಸರದಲ್ಲಿ ಅಕ್ರಮ ಕಸಾಯಿ ಖಾನೆ ಇದೆಯೇ ಎಂಬ ಪ್ರಶ್ನೆ ಈಗ ಸ್ಥಳೀಯರಲ್ಲಿ ಆತಂಕಕ್ೆ ಕಾರಣವಾಗಿದೆ
ನಿನ್ನೆ ದನ ಹಾಗೂ ಕರುವನ್ನು ಹತ್ಯೆ ಮಾಡಿ ಬಳಿಕ ಅದರ ತಲೆಗಳನ್ನು ಈ ನದಿಗೆ ಹಾಕಲಾಗಿದೆ. ಈ ಪರಿಸರದಲ್ಲಿ ಅಶಾಂತಿ ಕದಡುವ ನಿಟ್ಟಿನಲ್ಲಿ ಈ ಕೃತ್ಯ ಎಸಗಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ.

ಕಡಬ: ರಸ್ತೆ ದಾಟಲು ನಿಂತಿದ್ದ ವ್ಯಕ್ತಿಗೆ ಸ್ಕೂಟ‌ರ್ ಡಿಕ್ಕಿ: ವ್ಯಕ್ತಿ ಸಾವು

ಕಡಬ: ಕಡಬ ತಾಲೂಕಿನ ಕೋಡಿಂಬಾಳದಲ್ಲಿ ರಸ್ತೆದಾಟಲು ನಿಂತಿದ್ದ ವೃದ್ಧರೊಬ್ಬರಿಗೆ ಸ್ಕೂಟರ್ ಡಿಕ್ಕಿಯಾಗಿ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ವರದಿಯಾಗಿದೆ.
ಕೋಡಿಂಬಾಳದ ಹುಕ್ರ (75) ಮೃತ ವ್ಯಕ್ತಿ.ಕೋಡಿಂಬಾಳ ಗ್ರಾಮದ ಶಾಮಿಯಾನ ಅಂಗಡಿಯೊಂದರ ಬಳಿ ಮುಹಮ್ಮದ್ ನೌಫಾಲ್ ಎಂಬವರು ಚಲಾಯಿಸುತ್ತಿದ್ದ ಸ್ಕೂಟರ್ ರಸ್ತೆಯ ಬದಿಯಲ್ಲಿ ರಸ್ತೆ ದಾಟಲು ನಿಂತಿದ್ದ ಕೋಡಿಂಬಾಳದ ಹುಕ್ರ ಎಂಬವರಿಗೆ ಡಿಕ್ಕಿ ಹೊಡೆದಿದ್ದು ಈ ವೇಳೆ ಹುಕ್ರ ಅವರು ಗಂಭೀರವಾಗಿ ಗಾಯಗೊಂಡಿದ್ದು ಸ್ಥಳದಲ್ಲಿದ್ದವರು ಕಡಬ ಸರ್ಕಾರಿ ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ಕೊಡಿಸಿ. ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಿಸಿದ್ದರು.ಗಾಯಾಳು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಈ ಕುರಿತು ಕಡಬ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Categories
ಮಲ್ನಾಡ್

ಒತ್ತುವರಿ ತೆರವು: ಆ.17ರಂದು ಶೃಂಗೇರಿ ಕ್ಷೇತ್ರ ಬಂದ್‌?!

ಒತ್ತುವರಿ ತೆರವು: ಆ.17ರಂದು ಶೃಂಗೇರಿ ಕ್ಷೇತ್ರ ಬಂದ್‌?!
– ಒತ್ತುವರಿ ತೆರವು ವಿರುದ್ದ 17ರಂದು ಬೃಹತ್ ಪ್ರತಿಭಟನೆ
– ಮಲೆನಾಡು ರೈತ ಹಿತರಕ್ಷಣಾ ವೇದಿಕೆ ಕರೆ: ಬಿಜೆಪಿ, ಜೆಡಿಎಸ್, ಸಂಘಟನೆಗಳ ಸಾಥ್
– ಕೊಪ್ಪದ ಮುಖ್ಯ ಬೀದಿಯಲ್ಲಿ ಪ್ರತಿಭಟನೆ

NAMMUR EXPRESS NEWS
ಕೊಪ್ಪ: ಮಲೆನಾಡನ್ನು ಕಾಡುತ್ತಿರುವ ಒತ್ತುವರಿ ಸಮಸ್ಯೆ, ಸೆಕ್ಷನ್ 4, ಡೀಮ್ಸ್ ಮತ್ತು ಸೊಪ್ಪಿನಬೆಟ್ಟ ಸಮಸ್ಯೆ, ಕಸ್ತೂರಿ ರಂಗನ್ ವರದಿ, ಪರಿಸರ ಸೂಕ್ಷ್ಮ ವಲಯ ಸೇರಿದಂತೆ ವಿವಿಧ ವಿಷಯಗಳನ್ನು ಮುಂದಿಟ್ಟುಕೊಂಡು ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿ ವತಿಯಿಂದ ಶೃಂಗೇರಿ ಕ್ಷೇತ್ರ ಬಂದ್‌ಗೆ ಆ.17ರ ಶನಿವಾರದಂದು ಕರೆ ನೀಡಲಾಗಿದೆ ಎಂದು ಸಮಿತಿಯ ಅಧ್ಯಕ್ಷ ನಾಗೇಶ್ ಎಂ.ಎನ್ ತಿಳಿಸಿದ್ದಾರೆ.
ಅನಾದಿ ಕಾಲದಿಂದ ಮಲೆನಾಡಲ್ಲಿ ಕಾಡನ್ನು ಪೋಷಿಸಿಕೊಂಡು ಬದುಕು ಕಟ್ಟಿಕೊಂಡು ಬರುತ್ತಿದ್ದ ಜನರಿಗೆ ಸರ್ಕಾರಗಳು ತರುತ್ತಿರುವ ಕಾಯ್ದೆಗಳು ಮುಳುವಾಗುತ್ತಿದೆ. ಈ ಕಾರಣಗಳಿಂದ ಶೃಂಗೇರಿ ವಿಧಾನ ಸಭಾ ಕ್ಷೇತ್ರದ ಕೊಪ್ಪ, ಎನ್.ಆರ್.ಪುರ, ಶೃಂಗೇರಿ, ಜಯಪುರ, ಬಾಳೆಹೊನ್ನೂರು ಭಾಗದಲ್ಲಿ ಸ್ವಯಂ ಪ್ರೇರಿತವಾಗಿ ಬಂದ್ ಮಾಡಲಾಗುತ್ತದೆ. ವರ್ತಕರು, ಬಸ್‌ ಮಾಲೀಕರು, ಆಟೋ ಮಾಲೀಕರು, ವಿವಿಧ ಸಂಘ ಸಂಸ್ಥೆಗಳು ಬಂದ್‌ ಬೆಂಬಲವನ್ನು ಸೂಚಿಸಿದ್ದಾರೆ ಎಂದು ತಿಳಿಸಿದರು.
ಆ.17ರ ಶನಿವಾರ ಕೊಪ್ಪದ ಮುಖ್ಯ ಬೀದಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಗುತ್ತದೆ. ನಂತರದಲ್ಲಿ ಕೊಪ್ಪದ ಮುಖ್ಯ ಬಸ್ ನಿಲ್ದಾಣದಲ್ಲಿ ಸಭೆ ನಡೆಸಿ ಹಕ್ಕೊತ್ತಾಯವನ್ನು ಮಾಡಲಾಗುತ್ತದೆ. ಕ್ಷೇತ್ರದ ವಿವಿಧ ಭಾಗದಿಂದ ಸಾವಿರಾರು ಸಂಖ್ಯೆಯಲ್ಲಿ ರೈತರು, ಸಾರ್ವಜನಿಕರು ಪಕ್ಷಾತೀತವಾಗಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.


ಅರಣ್ಯ ಮತ್ತು ಕಂದಾಯ ಭೂಮಿಯ ಬಗ್ಗೆ ಇಲಾಖೆಯಲ್ಲಿಯೇ ಗೊಂದಲವಿರುವ ಹೊತ್ತಲ್ಲಿ ಜಿ.ಪಿ.ಎಸ್ ಮೂಲಕ ಜಂಟಿ ಸರ್ವೆಗೆ ಮುಂದಾಗಿದ್ದಾರೆ. ಜಿ.ಪಿ.ಎಸ್ ಸರ್ವೆಯಲ್ಲಿಯೂ ಸಹ ಓವರ್‌ಲ್ಯಾಪ್ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ಇಲಾಖೆಯ ಸರ್ವೆಗಳು ಚೈನ್ ಮೂಲಕ ಗಡಿ ಗುರುತು ಮಾಡುವುದರ ಮೂಲಕ ಸರ್ವೆ ಕಾರ್ಯ ನಡೆಸಬೇಕು ಎಂದು ಒತ್ತಾಯಿಸಿದರು. ಮೀಸಲು ಅರಣ್ಯ, ಡೀಮ್ಸ್ ಫಾರೆಸ್ಟ್, ಸೊಪ್ಪಿನ ಬೆಟ್ಟ, ಒತ್ತುವರಿ, ಕಸ್ತೂರಿ ರಂಗನ್ ವರದಿ, ಪರಿಸರ ಸೂಕ್ಷ್ಮ ಪ್ರದೇಶ, ಹುಲಿ ಯೋಜನೆ ಹಾಗೂ ಇತರ ಮಲೆನಾಡ ನಿವಾಸಿಗಳ ವಿರುದ್ಧ ಸರ್ಕಾರ ಕಾನೂನು, ಕಾಯ್ದೆಗಳನ್ನು ರೂಪಿಸಿಕೊಂಡು ಒಕ್ಕಲೆಬ್ಬಿಸುವ ಹುನ್ನಾರ ಮಾಡುತ್ತಿದೆ. ಇದರ ವಿರುದ್ಧ ಕೊಪ್ಪದಿಂದ ವಿಧಾನಸೌಧಕ್ಕೆ ಮುಟ್ಟುವಂತಹ ಕೂಗು ಹಾಕಲಿದ್ದೇವೆ ಎಂದರು.

ಶೃಂಗೇರಿ, ಎನ್. ಆರ್. ಪುರ, ಖಾ0ಡ್ಯ ಹೋಬಳಿಯಲ್ಲಿ ಬಂದ್

ರೈತ ಪರವಾದ ಈ ಹೋರಾಟಕ್ಕೆ ಬಹುತೇಕ ಸಂಘಟನೆಗಳು ಕೈ ಜೋಡಿಸಿವೆ. ಬಿಜೆಪಿ, ಜೆಡಿಎಸ್ ಪಕ್ಷ ಕೂಡ ಬೆಂಬಲ ನೀಡಿದೆ.

Categories
ಬೆಂಗಳೂರು

ಸೌಮ್ಯ ರೆಡ್ಡಿಗೆ ಕಾಂಗ್ರೆಸ್ ಮಹಿಳಾ ಅಧ್ಯಕ್ಷರ ಹುದ್ದೆ

ಸೌಮ್ಯ ರೆಡ್ಡಿಗೆ ಕಾಂಗ್ರೆಸ್ ಮಹಿಳಾ ಅಧ್ಯಕ್ಷರ ಹುದ್ದೆ
– ಕೇವಲ 16 ಮತಗಳ ಅಂತರದಿಂದ ಸೋತಿದ್ದ ರೆಡ್ಡಿ

ಬಿಜೆಪಿ ಒಳಗೆ ಮುಸುಕಿನ ಗುದ್ದಾಟ!
– ಹೈಕಮಾಂಡ್ ಮೌನ: ಗುಪ್ತ ಗುಪ್ತ ಸಭೆ

ಜೆಡಿಎಸ್ ಬಲವರ್ಧನೆಗೆ ಕುಮಾರಣ್ಣ ಪ್ಲಾನ್
– ಜಿಲ್ಲಾವಾರು ಪಕ್ಷ ಸಂಘಟನೆಗೆ ಯೋಜನೆ

NAMMUR EXPRESS NEWS
ಬೆಂಗಳೂರು: ಕರ್ನಾಟಕ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾಗಿ ಮಾಜಿ ಶಾಸಕಿ ಸೌಮ್ಯಾ ರೆಡ್ಡಿ ನೇಮಕವಾಗಿದ್ದಾರೆ. ಕರ್ನಾಟಕ ಸೇರಿ ಮೂರು ರಾಜ್ಯಗಳ ಮಹಿಳಾ ಕಾಂಗ್ರೆಸ್‌ ಘಟಕಗಳಿಗೆ ನೂತನ ಅಧ್ಯಕ್ಷರನ್ನು ನೇಮಕ ಮಾಡಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಆದೇಶ ಹೊರಡಿಸಿದ್ದಾರೆ.
ಕರ್ನಾಟಕ ಮಹಿಳಾ ಕಾಂಗ್ರೆಸ್‌ಗೆ ಸೌಮ್ಯಾ ರೆಡ್ಡಿ, ಚಂಡೀಗಢಕ್ಕೆ ನಂದಿತಾ ಹೂಡ, ಅರುಣಾಚಲ ಪ್ರದೇಶ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆಯಾಗಿ ಚುಕು ನಾಚಿ ನೇಮಕವಾಗಿದ್ದಾರೆ.
ಸೌಮ್ಯಾ ರೆಡ್ಡಿ ಅವರು 2018ರ ವಿಧಾನಸಭೆ ಚುನಾವಣೆಯಲ್ಲಿ ಜಯನಗರ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದರು. 2023ರ ಚುನಾವಣೆಯಲ್ಲಿ ಕೇವಲ 16 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಸಿ.ಕೆ. ರಾಮಮೂರ್ತಿ ಎದುರು ಸೋತಿದ್ದರು. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ವಿರುದ್ಧ ಕೈ ಅಭ್ಯರ್ಥಿ ಸೌಮ್ಯಾ ರೆಡ್ಡಿ ಸೋಲು ಕಂಡಿದ್ದರು.

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಎರಡು ತಂಡವಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ರಮೇಶ್ ಜಾರಕಿಹೊಳಿ, ಬಸನಗೌಡ ಪಾಟೀಲ ಯತ್ನಾಳ್‌ ನೇತೃತ್ವದ ತಂಡ ಕೂಡಲಸಂಗಮದಿಂದ ಬಳ್ಳಾರಿವರೆಗೆ ಪಾದಯಾತ್ರೆ ನಡೆಸಲು ತೀರ್ಮಾನಿಸಿ ವರಿಷ್ಠರ ಅನುಮತಿ ಪಡೆಯಲು ಯೋಚಿಸಿದ್ದಾರೆ. ಮೈಸೂರು ಚಲೋ ಪಾದಯಾತ್ರೆಯಿಂದ ಅಂತರ ಕಾಯ್ದುಕೊಂಡವರು (ಪ್ರತಾಪಸಿಂಹ ಹೊರತುಪಡಿಸಿ) ಈ ನಿರ್ಧಾರ ತೆಗೆದು ಕೊಂಡ ತಂಡದಲ್ಲಿದ್ದು, ರಾಜ್ಯ ನಾಯಕತ್ವಕ್ಕೆ ಅದರಲ್ಲೂ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರಗೆ ಸೆಡ್ಡು ಹೊಡೆಯುವ ಪ್ಲಾನ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಪಕ್ಷ ಜೆಡಿಎಸ್ ಜತೆ ರಾಜ್ಯ ಸರ್ಕಾರದ ವಿರುದ್ಧ ಬೆಂಗಳೂರಿನಿಂದ ಮೈಸೂರಿನವರೆಗೆ ಯಶಸ್ವಿಯಾಗಿ ಪಾದಯಾತ್ರೆ ನಡೆಸಿದ್ದ ರಾಜ್ಯ ಬಿಜೆಪಿಯಲ್ಲೀಗ ಭಿನ್ನಮತದ ತಣ್ಣಗಿನ ಉರಿ ಹೊತ್ತಿ ಹೊಗೆಯಾಡಲಾರಂಭಿಸಿದೆ. ಇದೇ ಉರಿಯಲ್ಲಿ ಕೆಲವರು ವರಿಷ್ಠರ ಒಂದು ಗುಂಪಿನ ಬೆಂಬಲದಿಂದ ತಮ್ಮ ಬೇಳೆ ಬೇಯಿಸಿಕೊಳ್ಳಲು ಮುಂದಾಗಿದ್ದರೂ ಹೈಕಮಾಂಡ್ ಇನ್ನು ಮೌನದಲ್ಲಿದೆ.

ಜೆಡಿಎಸ್ ಬಲವರ್ಧನೆಗೆ ಕುಮಾರಣ್ಣ ಪ್ಲಾನ್

ಜೆಡಿಎಸ್ ಪಕ್ಷದ ಜಿಲ್ಲಾವಾರು ಪಕ್ಷ ಸಂಘಟನೆಗೆ ಯೋಜನೆ ರೂಪಿಸುತ್ತಿದೆ. ಕೇಂದ್ರ ಸಚಿವ ಹಾಗೂ ಜೆಡಿಎಸ್ ವರಿಷ್ಟ ಕುಮಾರಸ್ವಾಮಿ ಈಗಾಗಲೇ ನಾಯಕರ ಜತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಗುರಿಯಾಗಿರಿಸಿ ಹಾಗೂ ಪ್ರಜ್ವಲ್ ಕೇಸ್ ಕಾರಣ ಕಳೆಗುಂದಿದ ಜೆಡಿಎಸ್ ಇಮೇಜ್ ಬದಲಾವಣೆ ಮಾಡಲು ಈಗ ಪ್ಲಾನ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

Categories
ಮಲ್ನಾಡ್

ಮಧ್ಯ ರಾತ್ರಿ ನಿದ್ದೆಕೆಡಿಸಿದ ಮಳೆ, ಗುಡುಗು!

ಮಧ್ಯ ರಾತ್ರಿ ನಿದ್ದೆಕೆಡಿಸಿದ ಮಳೆ, ಗುಡುಗು!
– ಮಲೆನಾಡು ಭಾಗದಲ್ಲಿ ವಿಚಿತ್ರ ಮಳೆ, ಗುಡುಗು
– ಒಂದು ವಾರದಿಂದ ಕಾಣೆಯಾಗಿದ್ದ ಮಳೆ
– ತುಂಗಾ ಸೇರಿ ನದಿ, ಹಳ್ಳಗಳ ನೀರು ಮಾಯ!

NAMMUR EXPRESS NEWS
ಮಲೆನಾಡು: ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಬಹುತೇಕ ಕಡೆಗಳಲ್ಲಿ ತಡರಾತ್ರಿ ಭರ್ಜರಿ ಮಳೆ ಸುರಿದಿದೆ. ಕೆಲವೆಡೆ ವಿಪರೀತ ಗಾಳಿಯೊಂದಿಗೆ ಮಳೆಯಾದರೆ, ಇನ್ನೂ ಕೆಲವೆಡೆ ಭಾರೀ ಗುಡುಗು ಸಮೇತ ಧಾರಾಕಾರವಾಗಿ ಮಳೆಯಾಗಿದೆ.
ಮಧ್ಯರಾತ್ರಿ ಗುಡುಗು ಸಿಡಿಲಿನ ಅಬ್ಬರಕ್ಕೆ ಜನ ಭಯಭೀತರಾಗಿದ್ದು ಹಲವೆಡೆ ಕಂಡು ಬಂದಿದೆ. ಮಳೆಯ ಸದ್ದಿಗೆ ರಾತ್ರಿ 2 ಗಂಟೆಗೆ ಎಚ್ಚೆತ್ತ ಜನ ಆತಂಕಗೊಂಡಿದ್ದರು.

ಒಂದು ವಾರದಿಂದ ಕಾಣೆಯಾಗಿದ್ದ ಮಳೆ!

ಮಲೆನಾಡು ಭಾಗದಲ್ಲಿ ಒಂದು ವಾರದಿಂದ ಮಳೆ ಮರೆಯಾಗಿ ಬಿಸಿಲು ಹೆಚ್ಚಾಗಿತ್ತು. ಆ ಕಾರಣ ಜನ ಜೀವನ ಸಹಜ ಸ್ಥಿತಿಗೆ ಬಂದಿತ್ತು. ಆದರೆ ಮಂಗಳವಾರ ರಾತ್ರಿ ಭಾರೀ ಗುಡುಗು ಮಳೆ ಅಚ್ಚರಿ ತಂದಿದೆ.

ನದಿ, ಹಳ್ಳಗಳ ನೀರು ಮಾಯ!

ಶೃಂಗೇರಿ, ತೀರ್ಥಹಳ್ಳಿ ಭಾಗದಲ್ಲಿ ತುಂಗಾ ನದಿ ಒಂದೇ ವಾರದಲ್ಲಿ ನೀರು ಸಂಪೂರ್ಣ ಬತ್ತಿದೆ. ತುಂಬಿ ಭೋರ್ಗರೆಯುತ್ತಿದ್ದ ತುಂಗಾ ನದಿ ನೀರು ಕಾಲು ಪ್ರಮಾಣಕ್ಕೆ ಇಳಿದಿದೆ. ಪ್ರಕೃತಿಯ ಈ ವಿಚಿತ್ರಗಳು ಜನರನ್ನು ಭಯಕ್ಕೆ ತಳ್ಳಿದೆ.

Categories
ಜ್ಯೋತಿಷ್ಯ

ಈ ದಿನದ ರಾಶಿ ಭವಿಷ್ಯ ಹೇಗಿದೆ?

ಈ ದಿನದ ರಾಶಿ ಭವಿಷ್ಯ ಹೇಗಿದೆ?
– ಗಣೇಶನ ಕೃಪೆಯಿಂದ ಈ ರಾಶಿಯವರ ಕಾರ್ಯಗಳೆಲ್ಲವೂ ಸಿದ್ಧಿ..!

NAMMUR EXPRESS NEWS
ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು?

** ಮೇಷ ರಾಶಿ :
ಖ್ಯಾತಿ ಹೆಚ್ಚಾಗುವುದರೊಂದಿಗೆ ನೀವು ಯಶಸ್ಸು ಪಡೆಯುವಿರಿ. ಪ್ರೀತಿಯಲ್ಲಿರುವ ಈ ರಾಶಿಯವರಿಗೆ ಇಂದು ತಮ್ಮ ಸಂಗಾತಿಯೊಂದಿಗೆ ದೂರ ಪ್ರಯಾಣಿಸುವ ಅವಕಾಶ ಲಭಿಸುವುದು. ಇಂದು ಮಕ್ಕಳಿಂದ ನಿಮ್ಮ ಒತ್ತಡ ಹೆಚ್ಚಾಗುವ ಸಾಧ್ಯತೆ ಇದೆ. ನಿಮ್ಮ ತಂದೆಯ ಬೆಂಬಲದಿಂದಾಗಿ ಸಂಜೆಯ ವೇಳೆಗೆ ನಿಮ್ಮ ಕಷ್ಟಗಳೆಲ್ಲವ ದೂರವಾಗುವುದು. ವೈವಾಹಿಕ ಜೀವನದಲ್ಲಿ ಸಂತೋಷ ಹೆಚ್ಚಾಗುವುದು.

** ವೃಷಭ ರಾಶಿ :
ಇಂದು ಗೌರವಕ್ಕೆ ಪಾತ್ರರಾಗುವರು. ಈ ದಿನ ನಿಮ್ಮ ಗಮನವು ಕೆಲಸದ ಸ್ಥಳದಲ್ಲಿ ಯಾವುದಾದರೂ ಹೊಸ ಯೋಜನೆಯ ಮೇಲೆ ಕೇಂದ್ರೀತವಾಗಿರುವುದು. ಇಂದು ನೀವು ನಿಮ್ಮ ಪ್ರೀತಿ ಪಾತ್ರರೊಂದಿಗೆ ದೇವಸ್ಥಾನಕ್ಕೆ ಭೇಟಿ ನೀಡುವ ಅವಕಾಶ ಲಭಿಸುವುದು. ಇದರಿಂದಾಗಿ ನಿಮ್ಮ ಮನಸ್ಸು ಶಾಂತವಾಗಿರುವುದು. ಇಂದು ನಿಮ್ಮ ಮನೆಯ ಸದಸ್ಯರ ಅಗತ್ಯಗಳನ್ನು ಪೂರೈಸುವಲ್ಲಿ ನೀವು ಹಣವನ್ನು ಖರ್ಚು ಮಾಡುವಿರಿ. ಈ ದಿನ ಸಂಗಾತಿಯ ಸಂಪೂರ್ಣ ಬೆಂಬಲವನ್ನು ಪಡೆಯುವಿರಿ.

** ಮಿಥುನ ರಾಶಿ
ತಮ್ಮ ಕೆಲಸದ ಸ್ಥಳದಲ್ಲಿ ಉನ್ನತಾಧಿಕಾರಿಗಳ ಸಂಪೂರ್ಣ ಬೆಂಬಲವನ್ನು ಪಡೆಯುವವರು ಮತ್ತು ಸಹೋದ್ಯೋಗಿಗಳು ನಿಮ್ಮ ಸಲಹೆಯನ್ನು ಪಡೆಯದರೊಂದಿಗೆ ಕೆಲಸವನ್ನು ಮಾಡುವರು. ಇದರಿಂದಾಗಿ ನಿಮ್ಮ ಮನಸ್ಸು ಸಂತೋಷವಾಗಿರುವುದು. ಇಂದು ನಿರ್ಧಾರವನ್ನು ತೆಗೆದುಕೊಳ್ಳಬೇಕೆಂದಿರುವವರು ಸರಿಯಾಗಿ ಯೋಚಿಸಿದ ನಂತರ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ.

** ಕರ್ಕಾಟಕ ರಾಶಿ :
ಕೆಲಸದ ಸ್ಥಳದಲ್ಲಿ ಸಕಾರಾತ್ಮಕ ವಾತಾವರಣ ಇರುವುದು. ನಿಮ್ಮ ಒಡಹುಟ್ಟಿದವರೊಂದಿಗೆ ಈ ದಿನ ಉತ್ತಮವಾದ ಸಮಯವನ್ನು ಕಳೆಯುವಿರಿ. ಪ್ರೀತಿಯಲ್ಲಿರುವ ಈ ರಾಶಿಯವರು ಇಂದು ಉತ್ಸಾಹದಿಂದಿರುವರು. ಸಂಜೆ ಶುಭ ಕಾರ್ಯದಲ್ಲಿ ಭಾಗವಹಿಸುವ ಅವಕಾಶ ಲಭಿಸುವುದು. ನಾಳೆ ನೀವು ನಿಮ್ಮ ಮನೆಯ ಅಪೂರ್ಣ ಕೆಲಸಗಳನ್ನೆಲ್ಲ ಪೂರ್ಣಗೊಳಿಸುವಿರಿ ಮತ್ತು ಕೆಲವು ಖರೀದಿಯನ್ನು ಸಹ ಮಾಡುವಿರಿ.

** ಸಿಂಹ ರಾಶಿ :
ಕೆಲಸದ ಸ್ಥಳದಲ್ಲಿ ಶತ್ರುಗಳು ಸಿಂಹ ರಾಶಿಯವರ ಶುಭ ಚಿಂತಕರಂತೆ ಕಂಡರೂ, ನಿಮ್ಮ ಹಿಂದೆ ಮೋಸ ಮಾಡುವರು. ಈ ದಿನ ನೀವು ಕಾರ್ಯನಿರತರಾಗಿರುವಿರಿ. ಈ ಕಾರ್ಯನಿರತತೆಯ ನಡುವೆ ನೀವು ನಿಮ್ಮ ಸಂಗಾತಿಯೊಂದಿಗೆ ಉತ್ತಮ ಸಮಯವನ್ನು ಕಳೆಯುವಿರಿ. ಇದರಿಂದಾಗಿ ನಿಮ್ಮ ಸಂಗಾತಿ ಸಂತೋಷದಿಂದಿರುವರು. ವಿದ್ಯಾರ್ಥಿಗಳು ಈ ದಿನ ಅಶುಭ ಸುದ್ದಿಯನ್ನು ಪಡೆಯುವರು.

** ಕನ್ಯಾ ರಾಶಿ :
ವ್ಯಾಪಾರದಲ್ಲಿ ತಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲವನ್ನು ಪಡೆಯುವುದಿಲ್ಲ. ಆದರೆ ಈ ಸಮಯದಲ್ಲಿ ನೀವು ನಿಮ್ಮ ಮಾತು ಮತ್ತು ವ್ಯವಹಾರ ಎರಡರಲ್ಲಿಯೂ ಸಂಯಮ ಮತ್ತು ಎಚ್ಚರಿಕೆಯಿಂದ ಇರುವುದು ಉತ್ತಮ. ವ್ಯಾಪಾರಕ್ಕೆ ಸಂಬಂಧಿಸಿದಂತೆ ನೀವು ಲಾಭ ಪಡೆಯಬೇಕಾದ ಸಂದರ್ಭದಲ್ಲಿ ಯಾವುದಾದರೂ ಅಡಚಣೆ ಉಂಟಾಗಬಹುದು.

** ತುಲಾ ರಾಶಿ :
ಜನರು ಕೆಲಸದ ಸ್ಥಳದಲ್ಲಿ ಯಾವುದಾದರೂ ವಿವಾದಕ್ಕೆ ಒಳಗಾಗಿದ್ದರೆ, ಇಂದು ಅದರಿಂದ ಪರಿಹಾರವನ್ನು ಪಡೆಯುವಿರಿ. ಕೆಲಸಕ್ಕೆ ಸಂಬಂಧಿಸಿದಂತೆ ನೀವು ಹೊಸ ಯೋಜನೆಗಳಿಗಾಗಿ ಕೆಲಸ ಮಾಡುವ ಅವಕಾಶ ಲಭಿಸುವುದು. ಇದರಿಂದಾಗಿ ಭವಿಷ್ಯದಲ್ಲಿ ನಿಮಗೆ ಹೆಚ್ಚಿನ ಲಾಭವಾಗುವುದು. ಆಸ್ತಿ ಮತ್ತು ಸಂಪತ್ತಿಗೆ ಸಂಬಂಧಿಸಿದಂತೆ ಅಗತ್ಯ ಕಾಗದಗಳಿಂದಾಗಿ ನೀವು ಚಿಂತೆಗೆ ಒಳಗಾಗಬಹುದು. ಹಾಗಾಗಿ ಎಚ್ಚರದಿಂದಿರಿ.

** ವೃಶ್ಚಿಕ ರಾಶಿ :
ಮನೆಯ ಸದಸ್ಯರು ಅವರ ಕೆಲಸದ ಬಗ್ಗೆ ಕೋಪಕ್ಕೆ ಒಳಗಾಗುವವರು. ಆದರೆ ನೀವು ನಿಮ್ಮ ಕೆಲಸವನ್ನು ಪೂರ್ಣಗೊಳಿಸಲು ಈ ಸಮಯವನ್ನು ಸದುಪಯೋಗಪಡಿಸಿಕೊಳ್ಳುವುದು ಉತ್ತಮ. ಈ ದಿನ ಧಾರ್ಮಿಕ ಕೆಲಸಗಳಲ್ಲಿ ಆಸಕ್ತಿ ಹೆಚ್ಚಾಗುವುದು. ಇದರಿಂದಾಗಿ ನೀವು ಹೆಚ್ಚಿನ ಸಮಯವನ್ನು ಪೂಜೆ ಮಾಡುವುದರಲ್ಲಿ ಕಳೆಯುವಿರಿ.

** ಧನಸ್ಸು ರಾಶಿ :
ಆರೋಗ್ಯದಲ್ಲಿ ಸಮಸ್ಯೆ ಇದ್ದರೆ, ಇಂದು ಅದು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಹಾಗಾಗಿ ಕೂಡಲೇ ವೈದ್ಯರ ಬಳಿ ತೆರಳಿ. ನೀವು ಕೆಲಸ ಮಾಡುವ ಸಮಯದಲ್ಲಿ ಎಚ್ಚರದಿಂದಿರುವುದು ಮುಖ್ಯ. ಏಕೆಂದರೆ ಶತ್ರುಗಳು ನಿಮಗೆ ತೊಂದರೆಯನ್ನುಂಟು ಮಾಡುವ ಸಾಧ್ಯತೆ ಹೆಚ್ಚಿದೆ. ನೀವು ಬ್ಯಾಂಕ್ ಅಥವಾ ಯಾವುದಾದರೂ ವ್ಯಕ್ತಿಯಿಂದ ಸಾಲ ಪಡೆಯಬೇಕೆಂದಿದ್ದರೆ ಈ ದಿನ ಉತ್ತಮವಾಗಿರಲಿದೆ

** ಮಕರ ರಾಶಿ :
ಆರೋಗ್ಯದಲ್ಲಿ ಸಮಸ್ಯೆ ಇದ್ದರೆ, ಅದು ಈ ದಿನ ಪರಿಹಾರಗೊಳ್ಳುವುದು. ಇದರಿಂದ ಮನೆಯಲ್ಲಿ ಸಂತೋಷದ ವಾತಾವರಣ ರೂಪಗೊಳ್ಳುವುದು. ನೀವು ಪಾಲುದಾರಿಕೆಯಲ್ಲಿ ವ್ಯವಹಾರವನ್ನು ಮಾಡುತ್ತಿದ್ದರೆ, ಈ ದಿನ ಹೆಚ್ಚಿನ ಲಾಭವನ್ನು ಪಡೆಯುವಿರಿ. ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದಂತೆ ನಿಮಗೆ ಇಂದು ದೊಡ್ಡ ನಿರ್ಧಾರ ತೆಗೆದುಕೊಳ್ಳುವ ಅವಕಾಶ ಲಭಿಸುವುದು.

** ಕುಂಭ ರಾಶಿ :
ಇಂದು ಆರೋಗ್ಯ ಸಮಸ್ಯೆಗೆ ಒಳಗಾಗಬಹುದು. ಹಾಗಾಗಿ ಹೊರಗಿನ ಆಹಾರವನ್ನು ತಪ್ಪಿಸುವುದು ಉತ್ತಮ. ಇಲ್ಲದಿದ್ದರೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಕಾಡಬಹುದು. ಕೆಲಸದ ಸ್ಥಳದಲ್ಲಿ ಯಾವುದೇ ಕೆಲಸವನ್ನು ಅವಸರದಲ್ಲಿ ಮಾಡುವುದನ್ನು ತಪ್ಪಿಸಿ, ಇಲ್ಲದಿದ್ದರೆ ಕೆಲಸದಲ್ಲಿ ತಪ್ಪು ಆಗಬಹುದು. ಹಾಗಾಗಿ ಸರಿಯಾಗಿ ಯೋಚಿಸಿದ ನಂತರವೇ ಕೆಲಸವನ್ನು ಮಾಡಿ.

** ಮೀನ ರಾಶಿ :
ಜನರು ಇಂದು ವ್ಯವಹಾರಕ್ಕೆ ಸಂಬಂಧಿಸಿದಂತೆ ಯಾವುದೇ ಅಪಾಯವನ್ನು ತೆಗೆದುಕೊಳ್ಳುವುದಕ್ಕಾಗಿ ಈ ದಿನ ಉತ್ತಮವಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಒಡಹುಟ್ಟಿದವರ ಸಂಪೂರ್ಣ ಬೆಂಬಲವನ್ನು ಪಡೆಯುವಿರಿ. ಈ ದಿನ ನಿಮ್ಮ ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ. ನಿಮ್ಮ ಆದಾಯವೂ ಸಹ ಕಡಿಮೆ ಇರುವುದು. ಆದರೆ ನಿಮ್ಮ ಆರ್ಥಿಕ ಸ್ಥಿತಿ ಸಾಮಾನ್ಯವಾಗಿರುವುದು.

Categories
ಮಲ್ನಾಡ್

ಮದುವೆಗೆ ಹುಡುಗಿ ಹುಡುಕುವ. ನಕಲಿ ಗ್ಯಾಂಗ್ ಅರೆಸ್ಟ್!

ಮದುವೆಗೆ ಹುಡುಗಿ ಹುಡುಕುವ. ನಕಲಿ ಗ್ಯಾಂಗ್ ಅರೆಸ್ಟ್!
– ಮದುವೆ ಇಲ್ಲದಿದ್ರು ತೊಂದರೆ ಇಲ್ಲ… ಲಕ್ಷ ಲಕ್ಷ ಕಳೆದುಕೊಳ್ಳಬೇಡಿ

– ಶಿಕ್ಷಕಿಗೆ ಅಶ್ಲೀಲ ಮೆಸೇಜ್: ಶಿಕ್ಷಕನಿಗೆ ಧರ್ಮದೇಟು!
– ಅಂಗನವಾಡಿ ಬೆಲ್ಲದಲ್ಲಿ ಸತ್ತ ಇಲಿ ಪತ್ತೆ!
– ರಾಜ್ಯದಲ್ಲಿ 1 ವರ್ಷಕ್ಕೆ 68,450 ಹೆಚ್‌ಐವಿ ಕೇಸ್!

NAMMUR EXPRESS NEWS
ತುಮಕೂರು: ತುಮಕೂರು ಜಿಲ್ಲೆ ಗುಬ್ಬಿ ಪೊಲೀಸರ ಭರ್ಜರಿ ಕಾರ್ಯಾಚರಣೆಯಲ್ಲಿ ತುಮಕೂರು ಸೇರಿದಂತೆ ರಾಜ್ಯದ ಹಲವೆಡೆ ಹಲವರನ್ನು ಯಾಮಾರಿಸಿದ್ದ ತಂಡ ಅಂದರ್ ಆಗಿದೆ. 3 ವರ್ಷದಲ್ಲಿ ಐದು ಮದುವೆ ಮಾಡಿಕೊಂಡಿದ್ದ ಐನಾತಿ ಮದುಮಗಳು ಕೂಡ ಆರೆಸ್ಟ್ ಆಗಿದ್ದಾಳೆ.
ಮದುವೆಯಾಗಿ ವಂಚಿಸುವ ನಕಲಿ ಹೆಣ್ಣು ಹಾಗೂ ಗ್ಯಾಂಗ್‌ನ ಕಥೆ ಇದು.ಇಲ್ಲಿ ಎಂಟು ಜನ ಹುಡುಗಿ ಕಡೆಯವರು ಬರುತ್ತಾರೆ. ಹೆಣ್ಣು ತೋರಿಸುತ್ತಾರೆ. ಮದುವೆಯನ್ನೂ ಮಾಡಿಸುತ್ತಾರೆ. ಮದುವೆಯಾದ ನಾಲ್ಕೂ ದಿನಕ್ಕೆ ಮದುಮಗಳು ವರನ ಮನೆಯಲ್ಲಿದ್ದ ಹಣ, ಒಡವೆಯನ್ನೆಲ್ಲ ಎತ್ತಿಕೊಂಡು ಪರಾರಿಯಾಗ್ತಾಳೆ. ತುಮಕೂರಿನಲ್ಲಿ ಇಂಥ ದೋಖಾ ಮ್ಯಾರೇಜ್ ಕಂಪನಿ ಪತ್ತೆಯಾಗಿದೆ. ಮದುವೆ ವಯಸ್ಸು ಮೀರಿದ ಯುವಕರೇ ಈ ದೋಖಾ ಗ್ಯಾಂಗಿನ ಟಾರ್ಗೆಟ್ ಆಗಿದ್ದು ಮದುವೆ ಹೆಸರಲ್ಲಿ ವಂಚನೆ ಮಾಡುತ್ತಿದ್ದ ತಂಡವನ್ನು ಪೊಲೀಸರು ಜೈಲಿಗಟ್ಟಿದ್ದಾರೆ
ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಅತ್ತಿಗಟ್ಟೆ ಗ್ರಾಮದಲ್ಲಿ ಇಂಥದೊಂದು ವಂಚನೆಯ ಮದುವೆ ನಡೆದಿತ್ತು. ಗ್ರಾಮದ ಪಾಲಾಕ್ಷಯ್ಯ ಎಂಬವರು ತಮ್ಮ ಮಗ ದಯಾನಂದಮೂರ್ತಿಗೆ 37 ವರ್ಷ ದಾಟಿದರೂ ಹೆಣ್ಣು ಸಿಗದೇ ನೊಂದಿದ್ದರು. ಕುಷ್ಟಗಿ ಮೂಲದ ಬಸವರಾಜು ಎಂಬಾತನ ಮೂಲಕ ಹುಬ್ಬಳ್ಳಿಯ ಲಕ್ಷ್ಮಿ ಎಂಬಾಕೆಯ ಪರಿಚಯವಾಗಿತ್ತು. ಮದುವೆ ಪ್ರೋಕ‌ರ್ ಕೆಲಸ ಮಾಡುತ್ತಿದ್ದ ಲಕ್ಷ್ಮಿ ಬಳಿ ಮಗನಿಗೆ ಹೆಣ್ಣು ತೋರಿಸುವಂತೆ ಪಾಲಾಕ್ಷಯ್ಯ ಕೇಳಿಕೊಂಡಿದ್ದರು.
ಇವರ ಪರಿಸ್ಥಿತಿ ನೋಡಿ ಮೋಸ ಮಾಡುವ ತೀರ್ಮಾನ ಮಾಡಿದ ಲಕ್ಷ್ಮೀ, ಹುಬ್ಬಳ್ಳಿಯಲ್ಲಿ ಒಬ್ಬಳು ಒಳ್ಳೆ ಹುಡುಗಿ ಇದ್ದಾಳೆ. ಆಕೆಗೆ ತಂದೆ-ತಾಯಿ ಇಲ್ಲ. ನೀವೇ ಮದುವೆ ಮಾಡಿಕೊಳ್ಳಬೇಕೆಂದು ಸುಳ್ಳು ಹೇಳಿದ್ದಳು. ಕೋಮಲಾ ಎಂಬ ಹೆಸರಿನಲ್ಲಿ ಹುಡುಗಿಯ ಫೋಟೋ ಕಳುಹಿಸಿದ್ದಳು. ಬಳಿಕ ಹುಡುಗಿಯನ್ನು ಗಂಡಿನ ಮನೆಗೆ ಕರೆದುಕೊಂಡು ಬಂದಿದ್ದಳು. ಆಕೆಯ ಸಂಬಂಧಿಕರು ಎಂದು ಇನ್ನೂ ಐದಾರು ಜನರನ್ನು ಕರೆತಂದಿದ್ದಳು. ಕಳೆದ ವರ್ಷ ನವೆಂಬರ್ 11ರಂದು ಅತ್ತಿಗಟ್ಟೆಗೆ ಬಂದಿದ್ದ ನಕಲಿ ಕುಟುಂಬ ಅಂದೇ ಮದುವೆ ಮಾತುಕತೆ ನಡೆಸಿತ್ತು. ಮರುದಿನ ಮುಂಜಾನೆಯೇ ಮದುವೆಯನ್ನೂ ಮಾಡಿ ಮುಗಿಸಿದ್ದರು. ಮಗನಿಗೆ ಹೆಣ್ಣು ಸಿಗದೇ ಹೈರಾಣಾಗಿದ್ದ ದಯಾನಂದಮೂರ್ತಿ ಕುಟುಂಬ ದಿಢೀ‌ರ್ ಮದುವೆಗೆ ಒಪ್ಪಿಕೊಂಡು ಗ್ರಾಮದಲ್ಲಿ ಮದುವೆ ಮಾಡಿದ್ದರು. ಹೆಣ್ಣು ಸಿಕ್ಕ ಖುಷಿಯಲ್ಲಿ ಹಿಂದೆಮುಂದೆ ಯೋಚಿಸದೆ ಮದುವೆ ಮಾಡಿಸಿದ್ದರು. ಮದುವೆಗೆ ಸುಮಾರು 200ಕ್ಕೂ ಹೆಚ್ಚು ಜನ ಸೇರಿದ್ದು, ಹೆಣ್ಣಿಗೆ ಚಿನ್ನದ ಸರ, ತಾಳಿ, ಕಿವಿಗೆ ಓಲೆ ನೀಡಿದ್ದರು.ವಧುವಿಗೆ 25 ಗ್ರಾಂ ಚಿನ್ನಾಭರಣ ಹಾಕಲಾಗಿತ್ತು. ಹೆಣ್ಣುತೋರಿಸಿದ ಪ್ರೋಕ‌ರ್ ಲಕ್ಷ್ಮಿಗೆ 1.5 ಲಕ್ಷ ಹಣ ನೀಡಿದ್ದರು. ಹೆಣ್ಣಿನ ಕಡೆಯವರು ಅಂತ 8 ಜನರನ್ನು ಬ್ರೋಕರ್ ಲಕ್ಷ್ಮಿ
ಕರೆ ತಂದಿದ್ದಳು. ಮದುವೆ ಮುಗಿದ ಎರಡು ದಿನದ ನಂತರ ಸಂಪ್ರದಾಯದ ನೆಪ ಹೇಳಿ ಹಣ-ಚಿನ್ನದ ಒಡವೆ ಸಹಿತ ಮದುಮಗಳನ್ನ ಕರೆದುಕೊಂಡು ಹೋಗಿದ್ದರು. ವಾರ ಕಳೆದರೂ ಸೊಸೆ ವಾಪಸ್ ಬಂದಿರಲಿಲ್ಲ.ಆತಂಕಗೊಂಡ ಪಾಲಾಕ್ಷಯ್ಯ ಹುಬ್ಬಳ್ಳಿಗೆ ಹೋಗಿ ವಿಚಾರಿಸಿದಾಗ, ನಡೆದದ್ದು ನಕಲಿ ಮದುವೆ, ಬಂದವರು ದೋಖಾ ಗಿರಾಕಿಗಳು ಎಂಬ ಸತ್ಯ ಬಯಲಾಗಿದೆ. ವಾಪಸ್ ಗುಬ್ಬಿಗೆ ಬಂದ ಪಾಲಾಕ್ಷಯ್ಯ ಎಲ್ಲರ ವಿರುದ್ಧ ದೂರು ನೀಡಿದ್ದರು. ಸದ್ಯ ನಾಲ್ವರನ್ನೂ ಬಂಧಿಸಿ ಗುಬ್ಬಿ ಪೊಲೀಸರು ಜೈಲಿಗಟ್ಟಿದ್ದಾರೆ.

ಶಿಕ್ಷಕಿಗೆ ಅಶ್ಲೀಲ ಮೆಸೇಜ್: ಶಿಕ್ಷಕನಿಗೆ ಧರ್ಮದೇಟು!

ರಾಯಚೂರು: ಶಿಕ್ಷಕಿಗೆ ಅಶ್ಲೀಲ ಮೆಸೇಜ್ ಕಳುಹಿಸಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಕಾಮುಕ ಶಿಕ್ಷಕನನ್ನು ಸಾರ್ವಜನಿಕರು ಹಿಡಿದು ಧರ್ಮದೇಟು ನೀಡುರುವ ಘಟನೆ ರಾಯಚೂರು ಹೊರವಲಯದಲ್ಲಿ ನಡೆದಿದೆ.
ರಾಯಚೂರು ಹೊರವಲಯದಲ್ಲಿರುವ ಆದರ್ಶ ಸರ್ಕಾರಿ ಶಾಲೆಯ ಸಹ ಶಿಕ್ಷಕ ಮೊಹಬೂಬ್ ಅಲಿ ಎಂಬಾತ ಅದೇ ಶಾಲೆಯಲ್ಲಿ ಅತಿಥಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಮಹಿಳೆಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ.ಅಶ್ಲೀಲ ಮೆಸೇಜ್ ಕಳುಹಿಸಿ, ಮಂಚಕ್ಕೆ ಕರೆದಿದ್ದ. ಶಿಕ್ಷಕನ ಕಿರುಕುಳದ ಬಗ್ಗೆ ಶಿಕ್ಷಕಿ ಮನೆಯಲ್ಲಿ ತಿಳಿಸಿದ್ದರು.
ವಿಷಯ ಗೊತ್ತಾಗುತ್ತಿದ್ದಂತೆ ಶಿಕ್ಷಕಿ ಕುಟುಂಬದವರು ಹಾಗೂ ಸಂಬಂಧಿಕರು ಶಾಲೆ ಬಳಿ ಆಗಮಿಸಿ ಶಿಕ್ಷಕ ಮೆಹಬೂಬ ಅಲಿಯನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿ ಬುದ್ದಿ ಕಲಿಸಿದ್ದಾರೆ. ಮಾಡಿದ ತಪ್ಪಿಗೆ ಆರೋಪಿ ಶಿಕ್ಷಕಿ ಕಾಲಿಗೆ ಬಿದ್ದು ಕ್ಷಮೆ ಕೇಳಿದ್ದಾನೆ. ಅಲ್ಲದೇ ತಪ್ರೊಪ್ಪಿಗೆ ಪತ್ರ ಬರೆದು ಎಲ್ಲರ ಬಳಿ ಕ್ಷಮೆ ಕೋರಿದ್ದಾನೆ. ಸದ್ಯ ಶಿಕ್ಷಕ ತಪ್ರೊಪ್ಪಿಗೆ ಪತ್ರ ಬರೆದು ಕಾಲಿಗೆ ಬಿದ್ದು ಕ್ಷಮೆ ಕೇಳಿದ್ದರಿಂದ ಆತನ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿಲ್ಲ ಎಂದು ತಿಳಿದುಬಂದಿದೆ.

ಅಂಗನವಾಡಿ ಬೆಲ್ಲದಲ್ಲಿ ಸತ್ತ ಇಲಿ ಪತ್ತೆ!

ಗುಡಿಬಂಡೆ ತಾಲೂಕಿನ ಹಂಪಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗರುಡಾಚಾರ್ಲಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಇತ್ತೀಚೆಗೆ ವಿತರಿಸಲಾದ ಬೆಲ್ಲದ ಪೊಟ್ಟಣದಲ್ಲಿ ಸತ್ತ ಇಲಿ ಪತ್ತೆಯಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಗರ್ಭಿಣಿಯರು, ಬಾಣಂತಿಯರಿಗೆ ಅಂಗನವಾಡಿ ಕೇಂದ್ರದಲ್ಲಿ ಈ ಪೊಟ್ಟಣಗಳನ್ನು ವಿತರಿಸಲಾಗಿತ್ತು.
ಗರುಡಾಚಾರ್ಲಹಳ್ಳಿ ಗ್ರಾಮದ ನಿವಾಸಿ ರತ್ನಮ್ಮ ಎಂಬುವರಿಗೆ ನೀಡಿದ ಎರಡು ಬೆಲ್ಲದ ಪೊಟ್ಟಣಗಳ ಪೈಕಿ ಒಂದರಲ್ಲಿ ಈ ಸತ್ತ ಇಲಿ ಕಂಡುಬಂದಿವೆ. ಕೂಡಲೇ ಅವರು ಪೊಟ್ಟಣಗಳನ್ನು ಅಂಗನವಾಡಿ ಕಾರ್ಯಕರ್ತೆ ಗಮನಕ್ಕೆ ತಂದಿದ್ದಾರೆ.

ರಾಜ್ಯದಲ್ಲಿ 1 ವರ್ಷಕ್ಕೆ 68,450 ಹೆಚ್‌ಐವಿ ಕೇಸ್!

ಬೆಂಗಳೂರು: ರಾಜ್ಯದಲ್ಲಿ ಕಳೆದ ಒಂದು ವರ್ಷದ ಅವಧಿಯಲ್ಲಿ 68,450 ಹೆಚ್‌ಐವಿ ಪ್ರಕರಣ ವರದಿಯಾಗಿವೆ ಎಂದು ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಹೆಚ್‌ಐವಿ ಸೋಂಕಿನ ಬಗ್ಗೆ ಯುವಜನತೆ ಸೇರಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಆರೋಗ್ಯ ಇಲಾಖೆ ವತಿಯಿಂದ ಹಮ್ಮಿಕೊಂಡಿರುವ ಎರಡು ತಿಂಗಳ ಅಂತರಾಷ್ಟ್ರೀಯ ಯುವ ದಿನಾಚರಣೆ ಹಾಗೂ ಹೆಚ್‌ಐವಿ ತಡೆ ಪ್ರಚಾರಾಂದೋಲನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ದೇಶದಲ್ಲಿ ಹೆಚ್‌ಐವಿ ಸೋಂಕು ಹರಡುವಿಕೆ ಕಡಿಮೆಯಾಗಿದೆ. ಆದರೂ, 2023 -24ನೇ ಸಾಲಿನಲ್ಲಿ ರಾಜ್ಯದಲ್ಲಿ 68,450 ಕೇಸು ವರದಿಯಾಗಿದ್ದು, ದೇಶದಲ್ಲಿರುವ 24.44 ಲಕ್ಷ ಸೋಂಕಿತರ ಪೈಕಿ ಕರ್ನಾಟಕದಲ್ಲಿ 2.28 ಲಕ್ಷ ಸೋಂಕಿತರಿದ್ದಾರೆ. 1.91 ಲಕ್ಷ ಜನ ನಿಯಮಿತವಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

Categories
ಚಿತ್ರದುರ್ಗ

ಹೊಸದುರ್ಗದಲ್ಲಿ ವಾಲ್ಮೀಕಿ ನಾಯಕ ಸಮುದಾಯದ ಸಂಭ್ರಮ

ಹೊಸದುರ್ಗದಲ್ಲಿ ವಾಲ್ಮೀಕಿ ನಾಯಕ ಸಮುದಾಯದ ಸಂಭ್ರಮ
– ಪ್ರತಿಭಾ ಪುರಸ್ಕಾರ, ಶೈಕ್ಷಣಿಕ ವೃತ್ತಿ ಮಾರ್ಗದರ್ಶನ ಮತ್ತು ನಿವೃತ್ತ ನೌಕರರ ಸನ್ಮಾನ ಕಾರ್ಯಕ್ರಮ
– ಮದಕರಿ ಪ್ರತಿಮೆ ಲೋಕಾರ್ಪಣೆ ಶೀಘ್ರ: ಶಾಸಕ ಬಿ.ಜಿ. ಗೋವಿಂದಪ್ಪ ಮಾಹಿತಿ

NAMMUR EXPRESS NEWS
ಹೊಸದುರ್ಗ ಪಟ್ಟಣದ ಮದಕರಿ ವೃತ್ತದಲ್ಲಿ ರಾಜ ವೀರ ಮದಕರಿ ಮನಾಯಕರ ಪ್ರತಿಮೆ ಅನಾವರಣಕ್ಕೆ ಸಿದ್ಧತೆ ನಡೆಯುತ್ತಿದೆ ಎಂದು ಶಾಸಕ ಬಿ.ಜಿ. ಗೋವಿಂದಪ್ಪ ತಿಳಿಸಿದ್ದಾರೆ.
ವಾಲ್ಮೀಕಿ ನಾಯಕ ಸಮುದಾಯದ ವತಿಯಿಂದ ಪಟ್ಟಣದ ಬನಶಂಕರಿ ಬಡಾವಣೆಯಲ್ಲಿರುವ ವಾಲ್ಮೀಕಿ ಸಮುದಾಯ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ, ಶೈಕ್ಷಣಿಕ ವೃತ್ತಿ ಮಾರ್ಗದರ್ಶನ ಮತ್ತು ನಿವೃತ್ತ ನೌಕರರ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ವಿದ್ಯಾರ್ಥಿ ಜೀವನ ಬಹಳ ಮಹತ್ತರವಾದುದು. ಈ ಸಮಯದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ನಿಮ್ಮ ಮುಂದಿನ ಭವಿಷ್ಯ ನಿರ್ಧರಿಸುತ್ತದೆ. ‘ಯಾವುದೇ ದುಶ್ಚಟಗಳಿಗೆ ಬಲಿಯಾಗದೆ, ಅಧ್ಯಯನದಲ್ಲಿ ಒಡಗಬೇಕು. ಆಗ ಮಾತ್ರ ಜೀವನ ಸರಿಯಾದ ರೀತಿಯಲ್ಲಿ ಸಾಗಲು ಸಾಧ್ಯ’ ಎಂದು ಹೇಳಿದರು.
ಅಂಕಗಳಿಕೆ ಆಧಾರಿತ ಶಿಕ್ಷಣದಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯವಿಲ್ಲ. ಒಳ್ಳೆಯ ಸಂಸ್ಕಾರ, ಮೌಲ್ಯಯುತ ಶಿಕ್ಷಣ ದೊರೆತಾಗ ಸಮಾಜ ಪರಿವರ್ತನೆಯಾಗ- ಕಲು ಸಾಧ್ಯ. ಖಾಸಗಿ ಶಾಲೆಗಳಲ್ಲಿ ಓದಿದರೆ ಮಾತ್ರವೇ ಸರ್ಕಾರಿ ನೌಕರಿ ತೆಗೆದುಕೊ ಳ್ಳಬಹುದು ಎಂಬ ಅಭಿಪ್ರಾಯವನ್ನು ಪಾಲಕರು ಬಿಡಬೇಕು. ಉನ್ನತ ಹುದ್ದೆ- ಯಲ್ಲಿರುವ ಬಹಳಷ್ಟು ಅಧಿಕಾರಿಗಳು ಸರ್ಕಾರಿ ಶಾಲೆಗಳಲ್ಲಿ ಓದಿದವರಾದ್ದಾರೆ. ಕಷ್ಟ ಅಂತ ಕೈಕಟ್ಟಿ ಕುಳಿತರೆ ಸಮಸ್ಯೆ ಪರಿ- ಹಾರವಾಗುವುದಿಲ್ಲ. ಪರಿವರ್ತನೆಯ ಹಾದಿಯಲ್ಲಿ ಸಾಗಬೇಕು. ಸಾಧಕರಿಗೆ ಕಷ್ಟಕಾರ್ಪಣ್ಯಗಳು ಅಡ್ಡಿಯಾಗಲಾ- ರವು ಎಂದು ತಹಶೀಲ್ದಾರ್ ತಿರುಪತಿ ಪಾಟೀಲ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕೋಡಿಹಳ್ಳಿ ನಾಗೇಂದ್ರಪ್ಪ ಅವರಿಗೆ ಮರಣೋತ್ತರವಾಗಿ ವಾಲ್ಮೀಕಿ ಪ್ರಶಸ್ತಿ ನೀಡಲಾಯಿತು. ವಾಲ್ಮೀಕಿ ನಾಯಕ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಜಯಪ್ರಕಾಶ್, ಪ್ರಧಾನ ಕಾರ್ಯದರ್ಶಿ ಮೈಲಾರಪ್ಪ, ಕ್ಷೇತ್ರ ಸಮನ್ವಯಾಧಿಕಾರಿ ಶ್ರೀನಿವಾಸ್, ನಾಯಕ ಸಮುದಾಯದ ತಾಲ್ಲೂಕು ಘಟಕದ ಅಧ್ಯಕ್ಷ ರಂಗನಾಥ್, ಖಜಾಂಚಿ ಜಯಣ್ಣ, ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಯುವ ಘಟಕದ ಉಪಾಧ್ಯಕ್ಷ ತುಂಬಿನಕೆರೆ ಬಸವರಾಜ್‌, ತಾಲ್ಲೂಕು ಯುವಘಟಕದ
ಅಧ್ಯಕ್ಷ ಅರುಣ್ ಗಂಗಾಧರಪ್ಪ, ಸಹಾಯಕ ಸರ್ಕಾರಿ ಎಂಜಿನಿಯ‌ರ್ ರುದ್ರಮುನಿ, ಗ್ರೇಡ್-ಬಿ ತಹಶೀಲ್ದಾರ್ ಪಾಲಯ್ಯ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಶಾಂತಪ್ಪ, ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಶಿವಮೂರ್ತಿ, ವಕೀಲರಾದ ನರೇಂದ್ರ ಬಾಬು ಮತ್ತು ಬೆಸ್ಕಾಂ ಜೂನಿಯರ್ ಎಂಜಿನಿಯರ್ ಮಧು ಸೇರಿ ನೌಕರರ ಸಂಘದ ಪದಾಧಿಕಾರಿಗಳು, ನಾಯಕ ಸಮುದಾಯದ ಮುಖಂಡರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Categories
ಚಿಕ್ಕಮಗಳೂರು

ಶೃಂಗೇರಿಯಲ್ಲಿ ಭಾರತೀಯ ಮಾನವಹಕ್ಕುಗಳ ಸಂಸ್ಥೆ ಶುರು

ಶೃಂಗೇರಿಯಲ್ಲಿ ಭಾರತೀಯ ಮಾನವಹಕ್ಕುಗಳ ಸಂಸ್ಥೆ ಶುರು

ಶೃಂಗೇರಿಯಲ್ಲಿ ಭಾರತೀಯ ಮಾನವಹಕ್ಕುಗಳ ಸಂಸ್ಥೆ ಶುರು
– ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಲು ಸಂಘಟನೆ
– ಶೃಂಗೇರಿ ಪದಾಧಿಕಾರಿಗಳ ಅಧಿಕಾರ ಸ್ವೀಕಾರ

NAMMUR EXPRESS NEWS
ಶೃಂಗೇರಿ: ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನಲ್ಲಿ ಶೃಂಗೇರಿ ವಿಭಾಗದ ಭಾರತೀಯ ಮಾನವ ಹಕ್ಕುಗಳ ಸಂಸ್ಥೆ ಉದ್ಘಾಟನೆಗೊಂಡಿದೆ.
ತಾಲೂಕಿನಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಸಂಸ್ಥೆ ಉದ್ಘಾಟಿಸಿದ ರಾಜ್ಯಾಧ್ಯಕ್ಷರಾದ ನಾರಾಯಣ ಜಿ. ಈಳಿಗೇರ‌ರವರು ಶೃಂಗೇರಿ ಹಾಗೂ ರಾಜ್ಯದ ವಿವಿಧ ಜಿಲ್ಲೆಯ, ತಾಲೂಕಿನ ನೂತನ ಪದಾಧಿಕಾರಿಗಳಿಗೆ ಸಂಸ್ಥೆಯ ಗುರುತಿನ ಕಾರ್ಡ್,ಆದೇಶ ಪ್ರತಿಯನ್ನು ಹಸ್ತಾಂತರಿಸಿದರು. ಸಾಮಾಜದಲ್ಲಿ ವಿವಿಧ ಇಲಾಖೆಯಲ್ಲಿ ನಡೆಯುವ ಭ್ರಷ್ಟಾಚಾರದ ವಿರುದ್ಧ ಧ್ವನಿಎತ್ತಿ,ಸಾರ್ವಜನಿಕರ ಧ್ವನಿಯಾಗ ಮಾನವ ಹಕ್ಕಗಳ ರಕ್ಷಿಸುವ ಜವಾಬ್ದಾರಿ ಎಲ್ಲಾ ತಂಡದ ಸದಸ್ಯರ ಮೇಲಿದೆ. ಮಾನವ ಹಕ್ಕುಗಳ ಪರವಾಗಿ ಧೈರ್ಯವಾಗಿ ಧ್ವನಿ ಎತ್ತುವಂತೆ ಹಾಗೂ ಕಾನೂನು ಗೌರವಿಸಿ ಕಾನೂನಿನಡಿಯಲ್ಲಿ ಎಲ್ಲರೂ ನ್ಯಾಯಯುತವಾದ ಸಮಾಜ ನಿರ್ಮಾಣದ ಜವಾಬ್ದಾರಿ ನಿಭಾಯಿಸುವಂತೆ ಕರೆನೀಡಿದರು. ವೇದಿಕೆಯಲ್ಲಿದ್ದ ಪೋಲೀಸ್ ಉಪನಿರೀಕ್ಷಕರಾದ ಶ್ರೀಜಕ್ಕಣ್ಣನವರ್ ಮಾತನಾಡಿ ಇಂತಹ ಸಂಘ ಸಂಸ್ಥೆಗಳಿಂದ ಸಮಾಜದಲ್ಲಿ ಕಾನೂನಿನ ಬಗ್ಗೆ ಅರಿವು ಮೂಡುತ್ತದೆ,ಜನರಿಗೆ ಸಹಕಾರಿಯಾಗುತ್ತವೆ ಎಂದು ಕೆಲ ಕಾನೂನು ನಿಯಮಗಳನ್ನು ತಿಳಿಸಿದರು. ಸಂಸ್ಥೆಯ ರಾಜ್ಯ ಉಪಾಧ್ಯಕ್ಷರಾದ ಜೆ.ಗಿರಿಧರ್‌ರವರು ಸಂಸ್ಥೆಯ ಎಲ್ಲಾ ನೂತನ ಪದಾಧಿಕಾರಿಗಳಿಗೆ ಶುಭಾಶಯ ತಿಳಿಸಿ ಒಟ್ಟಾಗಿ ಮಾನವ ಹಕ್ಕುಗಳ ರಕ್ಷಣೆಗೆ ಹೋರಾಡಲು ಕರೆ ನೀಡಿದರು.
ಶೃಂಗೇರಿ ವಿಭಾಗದ ಪದಾಧಿಕಾರಿಗಳಾಗಿ ಮೋಹನ್ ಜಿ.ವಿ,ಸಚಿನ್ ಗುಬ್ಬಗೋಡು,ನವೀನ್,ಬಾಲಗಂಗಾಧರ್,ಗೋವಿಂದ,ಮಹೇಶ್,ವೇಣುಗೋಪಾಲ್ ಭಟ್ ಇವರುಗಳು ಅಧಿಕಾರ ಸ್ವೀಕರಿಸಿದರು.