Categories
ಬೆಂಗಳೂರು

ತರುಣ್‌- ಸೋನಲ್ ಮದುವೆಯಲ್ಲಿ ಮನಗೆದ್ದ ಸನ್ನಿಧಿ ಕೆಟರರ್..!

ತರುಣ್‌- ಸೋನಲ್ ಮದುವೆಯಲ್ಲಿ ಮನಗೆದ್ದ ಸನ್ನಿಧಿ ಕೆಟರರ್..!
– ತೀರ್ಥಹಳ್ಳಿ ಮೂಲದವರ ಅಡುಗೆಯ ಸ್ವಾಧಕ್ಕೆ ಅತಿಥಿಗಳ ಮೆಚ್ಚುಗೆ
– ಸುಭಾಷ್ ಜೆ ಎಸ್, ಸಂತೋಷ್ ಶೆಟ್ಟಿ ಮಾಲೀಕತ್ವದ ಸಂಸ್ಥೆ
– 450 ಅಡುಗೆ ಸಿಬ್ಬಂದಿಯಿಂದ ಸಸ್ಯಾಹಾರಿ ಭೋಜನ ತಯಾರಿ
– ರಾಜ್ಯ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಸಂಸ್ಥೆಗೆ ಅಭಿನಂದನೆಗಳು

NAMMUR EXPRESS NEWS
ಬೆಂಗಳೂರು: ಖ್ಯಾತ ನಿರ್ದೇಶಕ ತರುಣ್ ಸುಧೀರ್
ಹಾಗೂ ಸೋನಲ್ ಮದುವೆ ಬೆಂಗಳೂರಿನಲ್ಲಿ ಭಾನುವಾರ ಅದ್ದೂರಿಯಾಗಿ ನಡೆದಿದ್ದು ಈ ಮದುವೆಯಲ್ಲಿ ಮಲೆನಾಡಿನ ತೀರ್ಥಹಳ್ಳಿ ಮೂಲದ ಸನ್ನಿಧಿ ಕೆಟರರ್ ಸಂಸ್ಥೆ ತನ್ನ ಅಡುಗೆ ಸೇವೆ ನೀಡಿತು.
ತರುಣ್ ಸೋನಲ್ ಮದುವೆಗೆ ಶುದ್ಧ ಸಸ್ಯಾಹಾರಿ ಅಡುಗೆಯನ್ನು
ಬೆಂಗಳೂರಿನ ಸನ್ನಿದಿ ಕೇಟರರ್ಸ್ ಸಂಸ್ಥೆ ಮಾಡಿದ್ದು ಎಲ್ಲಾ ಸಿನಿಮಾ ನಟ ನಟಿಯರು ಸೇರಿ ಅತಿಥಿಗಳ ಮೆಚ್ಚುಗೆಗೆ ಪಾತ್ರವಾಯಿತು.
ತೀರ್ಥಹಳ್ಳಿ ತಾಲೂಕು ಗುಡ್ಡೆಕೊಪ್ಪ ಸುಭಾಷ್ ಜೆ ಎಸ್ ಹಾಗೂ ಸಂತೋಷ್ ಶೆಟ್ಟಿ ಮಾಲೀಕತ್ವದ ಈ ಸಂಸ್ಥೆ ಅಚ್ಚುಕಟ್ಟಿನ ಆಯೋಜನೆ ಮಾಡಿತ್ತು.

ವಿಶೇಷ ಸೇವೆ ಜತೆಗೆ ಭೂರಿ ಭೋಜನ!

ಮದುವೆಗೆ ಸುಮಾರು 450 ಬಾಣಸಿಗರಿಂದ ಅಡುಗೆ ತಯಾರಿಸಿದ್ದರು. ಅದರಲ್ಲಿ 85 ಜನ ಮಹಿಳಾ ಸ್ವಾಗತಕಾರರು, ಜೊತೆಗೆ 50 ಜನ ಹೋಟೆಲ್ ಸೇವಾ ಸಿಬ್ಬಂದಿ ಹುಡುಗರು ಇದ್ದರು. 4 ಕಡೆ ವಿಶಾಲವಾದ ಅಡುಗೆ ಮನೆಯಲ್ಲಿ ಅಡುಗೆ ಸಿದ್ದಗೊಂಡಿದ್ದು ಜೊತೆಗೆ 5 ಸಾಮಾನ್ಯ ಕೌಂಟರ್, ವಿ.ಐ.ಪಿ 3 ಕೌಂಟರ್ ಇದ್ದವು. ಹಿಂದಿನ ದಿನದ ರಿಸೆಪ್ಟನ್ ಗೆ 180 ತರಹದ ಖಾದ್ಯಗಳು ಹಾಗೂ ಮುಹೂರ್ತಕ್ಕೆ 60 ತರಹದ ಖಾದ್ಯಗಳಿದ್ದವು, ರಾತ್ರಿ ಸುಮಾರು 6 ಸಾವಿರದಿಂದ 7 ಸಾವಿರ ಜನಕ್ಕೆ ಅಡುಗೆ ಮಾಡಲಾಗಿದ್ದು, ಮದುವೆ ದಿನ ಮದ್ಯಾಹ್ನ ಸುಮಾರು 3 ಸಾವಿರ ಜನರಿಗೆ ಅಡುಗೆ ಮಾಡಲಾಗಿತ್ತು. ಅತ್ಯುತ್ತಮ ಶುಚಿ ರುಚಿ ವಿಭಿನ್ನತೆ ಅಡುಗೆ ಸೇವೆ ನೀಡಿದ ಸಂಸ್ಥೆ ಮಾಲೀಕರಾದ ಸುಭಾಷ್ ಜೆ ಎಸ್ ಹಾಗೂ ಸಂತೋಷ್ ಶೆಟ್ಟಿ ಅವರಿಗೆ ತರುಣ್ ಸುಧೀರ್ ಹಾಗೂ ಸೋನಲ್ ವೇದಿಕೆ ಮೇಲೆ ಕರೆದು ಗೌರವಿಸಿದರು.

Categories
ಕರಾವಳಿ

ಕುಡ್ಲಂಗಿಪ್ಪ ಕುಂದಾಪ್ರದವರ ಸಂಭ್ರಮ!

ಕುಡ್ಲಂಗಿಪ್ಪ ಕುಂದಾಪ್ರದವರ ಸಂಭ್ರಮ!
– ಗ್ರಾಮೀಣ ಕ್ರೀಡಾಕೂಟ: ಸಾಂಸ್ಕೃತಿಕ ಕಾರ್ಯಕ್ರಮದ ಝಲಕ್
– ಮಂಗಳೂರಿನಲ್ಲಿ ಕುಂದಾಪುರ ಕನ್ನಡಿಗರ ಸಮ್ಮಿಲನ

NAMMUR EXPRESS NEWS
ಮಂಗಳೂರು: ಹಗ್ಗಜಗ್ಗಾಟ ಸೇರಿದಂತೆ
ಗ್ರಾಮೀಣ ಕ್ರೀಡೆಗಳಲ್ಲಿ ಜಿದ್ದಾಜಿದ್ದಿಯ ಹೋರಾಟದ ರೋಮಾಂಚನ, ವೇದಿ ಕೆಯಲ್ಲಿ ಸಾಂಸ್ಕೃತಿಕ ಕಾರ್ಯ ಕ್ರಮಗಳ ಖುಷಿ, ಹೆಂಗ್ಸ್ ಪಂಚೇತಿ ಮತ್ತಿತರ ಹಾಸ್ಯಭರಿತ ಗೋಷ್ಠಿಗಳ ಕಚಗುಳಿ, ಎಲ್ಲೆಲ್ಲೂ ಕುಂದಾಪ್ರ ಕನ್ನಡದ ರಸಗವಳ…
ಕುಡಂಗಿಪ್ಪ ಕುಂದಾಪ್ರದವ್ (ಮಂಗಳೂರಿನಲ್ಲಿರುವ ಕುಂದಾಪುರ ದವರು) ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯ ಅಂಗವಾಗಿ ನಗರದ ರಾಮಕೃಷ್ಣ ವಿದ್ಯಾಸಂಸ್ಥೆಯ ಮೈದಾನ ದಲ್ಲಿ ಭಾನುವಾರ ಆಯೋಜಿಸಿದ್ದ ಕುಂದಾಪ್ರ ಕನ್ನಡ ಹಬ್ಬದಲ್ಲಿ ಒಂದು ಪ್ರದೇಶದ ವಿಶಿಷ್ಟ ಭಾಷೆ, ಸಂಸ್ಕೃತಿಯನ್ನು ಅನಾವರಣಗೊಳಿಸಿತು.
ಇದ್ ಭಾಷಿ ಅಲ್ಲ, ಬದ್ ಎಂಬ ಘೋಷವಾಕ್ಯದಡಿ ಇಡೀ ದಿನ ನಡೆದ ಕಾರ್ಯಕ್ರಮದಲ್ಲಿ ಗ್ರಾಮೀಣ ಕ್ರೀಡೆ, ಕುಂದಾಪುರದ ಆಹಾರ ಇತ್ಯಾದಿ ಇತ್ತು. -ಆಸಾಡಿ ಒಡ್ರಂಗ್ ಒಂದಿನ ಒಟ್ಟಾಪ’ ಎಂದು ಹೇಳುತ್ತಲೇ ಒಟ್ಟುಗೂಡಿದ ಕುಂದಾಪುರದವರು ಮಳಿ ಅಂದ್ರೆ, ಒಗಿ ಎತ್ತಲೇ ಎಂದು ಹೇಳಿದ್ದರಿಂದಲೋ ಏನೋ ಮಳೆ ಬಿಡುವು ಕೊಟ್ಟಿತ್ತು. ಮೈದಾನದಲ್ಲಿ ಆಟೋಟ ಮುಗಿದ ನಂತರ ಒಳಗೆ ಸಾಂಸ್ಕೃತಿಕ-ಹಾಸ್ಯ ವೈಭವ ಇತ್ತು. ‘ಹೆಂಗ್ಸ್ ಪಂಚೇತಿ’ಗಾಗಿಕುಂದಾಪ್ರ ಕನ್ನಡ ಹಬ್ಬದಲ್ಲಿ ಮುದ ನೀಡಿದ ಗ್ರಾಮೀಣ ಕ್ರೀಡೆಕಟ್ಟೆ ಮೇಲೆ ಕುಳಿತ ಮೂವರು ಪುರುಷರು ಮಾತುಕತೆಯ ಮೂಲಕ ನಗೆಗಡಲು ಉಕ್ಕಿಸಿದರು.
ಬೆಳಿಗ್ಗೆ ಹೆಸ್ ಬಾಯ್, ಉದ್ದಿನ ಇಡ್ಲಿ, ಉದ್ದಿನ ವಡಿ ಚಟ್ಟಿ ಚಿಕ್ಕು ಶೀರಾ ಮತ್ತು ಚಹಾ ಸೇವಿಸಿ ಆರಂಭಿಸಿದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡವರು ಮಧ್ಯಾಹ್ನ ಕೊಚ್ಚಕ್ಕಿ ಗಂಜಿ, ಉಪ್ಪಿನ್ನುಡಿ, ಮಾವಿನಕಾಯಿ ಚಟ್ಟಿ, ಕೋಳಿ ತಾಳ್, ಸುವರ್ಣಗಡ್ಡೆ ಸುಕ್ಕ ಇತ್ಯಾದಿ ಸವಿದರು. ಬಯ್ಯಾಪತಿಗೆ (ಸಂಜೆ) ಸುಕ್ಕಿನುಂಡೆ, ಚಟ್ಟಂಬಡೆ, ಚಹಾ, ಕಾಫಿ ಇತ್ತು. ರಾತ್ರಿಯೂ ಭರ್ಜರಿ ಊಟ ಇತ್ತು. ಕೋಳಿ ಗಸಿ, ಹಾಗಲ್ಕಾಯಿ, ಅಮ್ಮಿಕಾಯಿ ಗೊಜ್ಜು ವಿಶೇಷವಾಗಿತ್ತು.
ಕೋರ ಕಮಿಟಿ ಸದಸ್ಯರು
G. K ಶೆಟ್ಟಿ. ಮಮತಾ ಜಿ ಐತಾಳ್.ಆದರ್ಶ್ ಶೆಟ್ಟಿ ಗಿಳಿ ಯಾರು.
ವಿವೇಕ್.ಮಾಲಾ ಸಂತೋಷ್ ಶೆಟ್ಟಿ.Dr ಅಣ್ಣಯ್ಯ ಕುಲಾಲ್.C.A SS ನಾಯಕ್.C. A ಶಾಂತರಾಮ್ ಶೆಟ್ಟಿ.
ದಯಾನಂದ ಶೆಟ್ಟಿ.ಸಂತೋಷ್ ಶೆಟ್ಟಿ ಐರೋಡಿ.ಸಂತೋಷ್ ಶೆಟ್ಟಿ.
ಸಂತೋಷ್ ಶೆಟ್ಟಿ. ಬಾಲಕೃಷ್ಣ ಶೆಟ್ಟಿ ಕೆಂಚನೂರು.ಬಾಲಕೃಷ್ಣ ಶೆಟ್ಟಿ ಸಿರಿಯಾರ್. ಅವಿನಾಶ್ ಶೆಟ್ಟಿ.ಮಹಾಬಲ ಕುಲಾಲ್. ಅಶ್ವತ್ಥಾಮ ಹೆಗಡೆ.
B ಶೇಖರ್ ಶೆಟ್ಟಿ. ಬಾಲಕೃಷ್ಣ ಶೆಟ್ಟಿ ಮೊಳಹಳ್ಳಿ.
ದೇವು ಆನೆಹಳ್ಳಿ. ಶರತ್ ಆಚಾರ್ಯ.Dr ಪ್ರಮೋದ್ ಹೆಗಡೆ.Dr ರವೀಶ್ ತುಂಗ.
Dr ಪ್ರತಿಭಾ ರೈ.Dr ವಸಂತ್ ಶೆಟ್ಟಿ. ಕರುಣಾಕರ್ ಬೆಳ್ಳೂರು.ನಾಗರಾಜ್.ನರಸಿಂಹ ಭಟ್.
ಲಿಖಿತಾ ಶೆಟ್ಟಿ. ಪಾಂಡುರಂಗ ಶೆಟ್ಟಿ.R J ಪ್ರಸನ್ನ.R. J ನಯನ.ಉತ್ಸವ ಶೆಟ್ಟಿ. ಮಹೇಶ್.ಗಾವಳ್ಳಿ ಸುರೇಶ್ ಶೆಟ್ಟಿ
ಸಂಘಟಕ ಗೋಪಾಲಕೃಷ್ಣ ಶೆಟ್ಟಿ ವಾಟ್ಸ್ ಆ್ಯಪ್ ಗುಂಪಿನ ಮೂಲಕ ಆರಂಭಗೊಂಡ ಮಂಗಳೂರಿನಲ್ಲಿರುವ ಕುಂದಾಪುರದವರ ಬಳಗ ವೈವಿಧ್ಯಮಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ವಿವಿಧ ಕಾರ್ಯಗಳಿಂದ ಕುಂದಾಪ್ರದಿಂದ ಬಂದಿರುವ ನಮಗೆ ತುಳುನಾಡು ಅನ್ನ ನೀಡುತ್ತಿದೆ’ ಎಂದರು.
‘ಗುಂಪಿನಲ್ಲಿರುವವರು 2019ರಲ್ಲಿ ಬೆಳ್ತಂಗಡಿ ತಾಲ್ಲೂಕಿನ ನೆರೆ ಪರಿಹಾರಕ್ಕೆ ₹6 ಲಕ್ಷ ಮೊತ್ತ ಮತ್ತು ವಸ್ತುಗಳನ್ನು ಸಂಗ್ರಹಿಸಿ ತಾಲ್ಲೂಕು ಆಡಳಿತಕ್ಕೆ ಹಸ್ತಾಂತರಿಸಿದೆ. ರಕ್ತದಾನದಲ್ಲೂ ಗುಂಪಿನವರು ಮುಂಪಕ್ತಿಯಲ್ಲಿದ್ದಾರೆ. ವಾಟ್ಸ್ ಆ್ಯಪ್ ಗುಂಪಿನಲ್ಲಿ 600 ಮಂದಿ
ಇದ್ದಾರೆ’ ಎಂದು ಅವರು ತಿಳಿಸಿದರು.

Categories
Uncategorized

ಒಲಿಂಪಿಕ್ಸಲ್ಲಿ ಅಮೇರಿಕಾ ಮತ್ತೆ ಚಾಂಪಿಯನ್!

ಒಲಿಂಪಿಕ್ಸಲ್ಲಿ ಅಮೇರಿಕಾ ಮತ್ತೆ ಚಾಂಪಿಯನ್!
– ಅಮೆರಿಕಕ್ಕೆ ಅಗ್ರಸ್ಥಾನ; ಚೀನಾಕ್ಕೆ ಎರಡನೇ ಸ್ಥಾನ
– ಜಪಾನ್ 3, ಆಸ್ಟ್ರೇಲಿಯಾ 4ನೇ ಸ್ಥಾನ, ಪಾಕ್ ಕೂಡ ಚಿನ್ನ ಗೆದ್ದಿತು!
– ಭಾರತಕ್ಕೆ 6 ಪದಕ: 71ನೇ ಸ್ಥಾನಕ್ಕೆ ತೃಪ್ತಿ

NAMMUR EXPRESS NEWS
ಪ್ಯಾರಿಸ್ ಒಲಂಪಿಕ್ಸ್ ಅಮೆರಿಕ 40 ಚಿನ್ನ, 44 ಬೆಳ್ಳಿ ಮತ್ತು 42 ಕಂಚಿನ ಪದಕಗಳು ಸೇರಿದಂತೆ 126 ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
ಮತ್ತೊಂದೆಡೆ, ಚೀನಾ 40 ಚಿನ್ನದ ಪದಕಗಳು ಸೇರಿದಂತೆ 91 ಪದಕಗಳೊಂದಿಗೆ ಕ್ರೀಡಾಕೂಟವನ್ನು ಕೊನೆಗೊಳಿಸಿತು. 2008ರಲ್ಲಿ ಬೀಜಿಂಗ್​​ನಲ್ಲಿ ನಡೆದಿದ್ದ ಒಲಿಂಪಿಕ್ಸ್​ನಲ್ಲಿ ಚೀನಾ 48 ಚಿನ್ನದ ಪದಕಗಳೊಂದಿಗೆ ಅಗ್ರಸ್ಥಾನ ಪಡೆದುಕೊಂಡಿತ್ತು. ಸ್ಪರ್ಧೆಗಳು ಭಾನುವಾರ ಸಂಜೆಯ ವೇಳೆಗೆ ಮುಕ್ತಾಯಗೊಂಡಿದ್ದು ಅಮೆರಿಕ ಅಮೆರಿಕ ಪದಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಸಾಂಪ್ರದಾಯಿಕ ಎದುರಾಳಿ ಚೀನಾವನ್ನು ಕೂದಲೆಳೆಯ ಅಂತರದಿಂದ ಹಿಂದಿಕ್ಕಿದೆ. ಯುನೈಟೆಡ್ ಸ್ಟೇಟ್ಸ್ ಮತ್ತು ಫ್ರಾನ್ಸ್ ನಡುವಿನ ಮಹಿಳಾ ಬ್ಯಾಸ್ಕೆಟ್​​ಬಾಲ್​ ಒಲಿಂಪಿಕ್ಸ್​ನ ಕೊನೇ ಸ್ಪರ್ಧೆಯಾಗಿತ್ತು. ಅಲ್ಲಿ ಅಮೆರಿಕ ಚಿನ್ನ ಗೆದ್ದುಕೊಂಡಿತ್ತು. ಅಲ್ಲಿ ತನಕ ಚೀನಾ 40 ಚಿನ್ನದೊಂದಿಗೆ ಮೊದಲ ಸ್ಥಾನದಲ್ಲಿತ್ತು.. ಅಮೆರಿಕ ಬಾಸ್ಕೆಟ್​ಬಾಲ್​ ಗೆಲ್ಲುವುದರೊಂದಿಗೆ ಅಮೆರಿಕ 40 ಚಿನ್ನ ಗೆದ್ದುಕೊಂಡಿತು. ಜತೆಗೆ ಪದಕ ಪಟ್ಟಿಯಲ್ಲಿ ಬೆಳ್ಳಿ ಹಾಗೂ ಕಂಚಿನ ಸಹಾಯದಿಂದ ಅಗ್ರಸ್ಥಾನಕ್ಕೆ ಏರಿತು. ಈ ಮೂಲಕ ಅಮೆರಿಕನ್ನರು ಸತತ ನಾಲ್ಕನೇ ಬಾರಿಗೆ ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಉಳಿಸಿಕೊಂಡಿತು.
ಡೈವಿಂಗ್, ಕಲಾತ್ಮಕ ಈಜು ಮತ್ತು ಟೇಬಲ್ ಟೆನಿಸ್ ಮತ್ತು ವೇಟ್ ಲಿಫ್ಟಿಂಗ್ ಸೇರಿದಂತೆ ಪೂಲ್ ಸ್ಪರ್ಧೆಗಳಲ್ಲಿ ಚೀನಾ ಪ್ರಾಬಲ್ಯ ಸಾಧಿಸಿದರೆ, ಯುಎಸ್ಎ ಟ್ರ್ಯಾಕ್ ಮತ್ತು ಫೀಲ್ಡ್ ಸ್ಪರ್ಧೆಗಳಲ್ಲಿ 14 ಚಿನ್ನದ ಪದಕಗಳು, 11 ಬೆಳ್ಳಿ ಪದಕಗಳು ಮತ್ತು 9 ಕಂಚಿನ ಪದಕಗಳನ್ನು ಗೆಲ್ಲುವ ಮೂಲಕ ತನ್ನ ಶಕ್ತಿ ಪ್ರದರ್ಶಿಸಿತು. ಇಲ್ಲಿ ಅಮೆರಿಕನ್ನರು ಎಂಟು ಚಿನ್ನದ ಪದಕಗಳು ಸೇರಿದಂತೆ ಒಟ್ಟು 28 ಪದಕಗಳನ್ನು ಗೆದ್ದರು.

ಭಾರತಕ್ಕೆ 71ನೇ ಸ್ಥಾನ

ಭಾರತ 5 ಕಂಚು, 1 ಬೆಳ್ಳಿ ಸೇರಿದಂತೆ ಒಟ್ಟು 6 ಪದಕಗಳೊಂದಿಗೆ 71ನೇ ಸ್ಥಾನದಲ್ಲಿದೆ. ಮಹಿಳೆಯರ 50 ಕೆ.ಜಿ ಕುಸ್ತಿಯ ಫೈನಲ್ ತಲುಪಿದ ವಿನೇಶ್ ಫೋಗಟ್ ತನ್ನ ಅನರ್ಹತೆಯನ್ನು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯದಲ್ಲಿ (ಸಿಎಎಸ್) ಪ್ರಶ್ನಿಸಿದ್ದರಿಂದ ಭಾರತಕ್ಕೆ ನಿರ್ಧಾರ ಪೂರಕವಾಗಿ ಬಂದರೆ ತನ್ನ ಪಟ್ಟಿಗೆ ಇನ್ನೂ ಒಂದು ಪದಕ ಸೇರಿಸಬಹುದು. ಫೈನಲ್ ಪಂದ್ಯದ ವೇಳೆ 100 ಗ್ರಾಂ ತೂಕ ಹೊಂದಿದ್ದಕ್ಕಾಗಿ ವಿನೇಶ್ ಅವರನ್ನು ಅನರ್ಹಗೊಳಿಸಲಾಗಿತ್ತು.
ಮನು ಬಾಕರ್ 2 ಕಂಚು, ನೀರಜ್ ಚೋಪ್ರಾ ಒಂದು ಬೆಳ್ಳಿ, ಸ್ವಪ್ನಲ್ ಕೌಶಲೆ ಹಾಗೂ ಸರಬ್ಜಿಟ್ ಸಿಂಗ್, ಅಮನ್ ಶೆರಾವತ್ ಒಂದು ಕಂಚು, ಹಾಕಿ ತಂಡ ಕಂಚು ಗೆದ್ದಿತು.

ಭಾರತಕ್ಕಿಂತ ಪಾಕ್ ಈ ಬಾರಿ ಮೇಲೆ!

ಪಾಕಿಸ್ತಾನ 44 ವರ್ಷಗಳ ಬಳಿಕ ಮೊದಲ ಬಾರಿಗೆ ಚಿನ್ನದ ಪದಕ ಗೆದ್ದು 62ನೇ ಸ್ಥಾನದಲ್ಲಿದೆ. ಪುರುಷರ ಜಾವೆಲಿನ್ ಫೈನಲ್​​ನಲ್ಲಿ ಅರ್ಷದ್ ನದೀಮ್ ಮೊದಲ ಸ್ಥಾನ ಪಡೆದರು.
ಜಪಾನ್ 20 ಚಿನ್ನ ಸೇರಿದಂತೆ 45 ಪದಕಗಳೊಂದಿಗೆ ಮೂರನೇ ಸ್ಥಾನ ಪಡೆಯಿತು. ಟೋಕಿಯೊ ಒಲಿಂಪಿಕ್ಸ್​ನಲ್ಲಿ ಜಪಾನ್ 27 ಚಿನ್ನದ ಪದಕಗಳೊಂದಿಗೆ ಮೂರನೇ ಸ್ಥಾನ ಪಡೆದಿತ್ತು.
ಗ್ರೇಟ್ ಬ್ರಿಟನ್ 14 ಚಿನ್ನದ ಪದಕಗಳೊಂದಿಗೆ ಏಳನೇ ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾ 18 ಚಿನ್ನದ ಪದಕಗಳನ್ನು ಗೆದ್ದು ಅಗ್ರ ನಾಲ್ಕು ಸ್ಥಾನಗಳನ್ನು ಗಳಿಸಿದೆ. ಆತಿಥೇಯ ಫ್ರಾನ್ಸ್ 16 ಚಿನ್ನದ ಪದಕಗಳೊಂದಿಗೆ ಅಗ್ರ 5ನೇ ಸ್ಥಾನ ಪಡೆದಿದೆ.

Categories
ಚಿಕ್ಕಮಗಳೂರು

ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮಾಡಿದ ನವಚೇತನ ಚಾರಿಟೆಬಲ್ ಟ್ರಸ್ಟ್

ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮಾಡಿದ ನವಚೇತನ ಚಾರಿಟೆಬಲ್ ಟ್ರಸ್ಟ್
– ಶೃಂಗೇರಿ ಸಹಾಯ ಹಸ್ತ ತಂಡ ಭಾಗಿ: ಮಂಜುನಾಥ್ ನಾಯಕತ್ವದಲ್ಲಿ ಸೇವೆ
– ಶೃಂಗೇರಿ, ಕೊಪ್ಪ ತಾಲೂಕಿನ ಹಲವು ಶಾಲೆಗಳಿಗೆ ವಿತರಣೆ

NAMMUR EXPRESS NEWS
ಜಗದ್ಗುರು ವಿದುಶೇಖರ ಭಾರತೀ ತೀರ್ಥ ಮಹಾಸ್ವಾಮಿಗಳ 32 ನೇ ವರ್ಧಂತಿ ಮಹೋತ್ಸದ ಶುಭ ಸಂದರ್ಭದಲ್ಲಿ ನವಚೇತನ ಚಾರಿಟೆಬಲ್ ರಾಮನಗರ ವತಿಯಿಂದ ಸರ್ಕಾರಿ ಶಾಲೆಯ 1 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ನೋಟ್‌ಬುಕ್ ವಿತರಣೆ ಮಾಡಲಾಯಿತು. ಟ್ರಸ್ಟ್‌ನ ಈ ಸೇವಾ ಕಾರ್ಯದಲ್ಲಿ ಶೃಂಗೇರಿ ಸಹಾಯ ಹಸ್ತ ತಂಡ ಭಾಗಿಯಾಗಿ ಸಹಕರಿಸಿತು. ಸರ್ಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳಲ್ಲಿ ಕಾರ್ಯಕ್ರಮ ನಡೆಸಿ ಅರವು ಮೂಡಿಸುತ್ತಿರುವ ನವ ಚೇತನ ಟ್ರಸ್ಟ್ ಕಳೆದ ಮೂರು ದಿನಗಳಿಂದ ಶೃಂಗೇರಿ ತಾಲೂಕಿನ ಹಲವು ಸರ್ಕಾರಿ ಶಾಲೆಗಳು ಸೇರಿದಂತೆ ಹರಿಹರಪುರ,ಭಂಡಿಗಢಿ ಭಾಗದ ಶಾಲೆಗಳಲ್ಲಿ ಟ್ರಸ್ಟ್‌ನ ಮುಖ್ಯಸ್ಥರಾದ ಮಂಜುನಾಥ್ ಮತ್ತವರ ತಂಡದ ವತಿಯಿಂದ ನೋಟ್ ಬುಕ್ ವಿತರಿಸಲಾಯಿತು. ಶೃಂಗೇರಿಯ ಸರ್ಕಾರಿ ಫ್ರೌಢಶಾಲೆ (ಗುಡ್ಡದ ಹಸ್ಕೂಲ್) ಹಾಗೂ ವೈಕುಂಠಪುರ ಫ್ರೌಢಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಟ್ರಸ್ಟ್‌ನ ಮುಖ್ಯಸ್ಥರಾದ ಮಂಜುನಾಥ್‌ರವರ ಜೊತೆಯಲ್ಲಿ ಪಕ್ಕದ ರಾಜ್ಯ ತಮಿಳುನಾಡಿನ ಪದ್ಮಶ್ರೀ ಪುರಸ್ಕೃತರಾದ ಶ್ರೀ ವಿ.ಕೆ ಮುನಿಸ್ವಾಮಿಯವರು ಹಾಜರಿದ್ದರು. ಶಾಲೆಯ ಪರವಾಗಿ ಮುನಿಸ್ವಾಮಿಯವರನ್ನು ಸನ್ಮಾನಿಸಲಾಯಿತು.ವಿದ್ಯಾರ್ಥಿಗಳಿಗೆ ಹಿತವಚನವನ್ನು ಹೇಳಿದ ಇಬ್ಬರೂ ಶೃಂಗೇರಿ ಸಹಾಯ ಹಸ್ತ ತಂಡದ ಕಾರ್ಯವನ್ನು ಪ್ರಶಂಸಿಸಿದರು. ಶೃಂಗೇರಿ ಸಹಾಯ ಹಸ್ತ ತಂಡದ ಸಚಿನ್‌ ಗುಬ್ಬಗೋಡು ತಂಡ ಹೇಗೆ ಕಾರ್ಯನಿರ್ವಹಿಸಿ ಬಡಕುಟಂಬಗಳಿಗೆ ನೆರವಾಗುತ್ತಿದೆ ಎಂದು ತಿಳಿಸಿದರು.
ತಂಡದ ಪ್ರಮುಖರಾದ ಪ್ರಶಾಂತ್,ಪ್ರವೀಣ್,ಸಚಿನ್ ಗುಬ್ಬಗೋಡು,ನಾಗೇಂದ್ರ, ರೇವಂತ್ ನಾಯ್ಕ್,ಜೋಯಲ್,ಸುಜಾತ ಶೆಟ್ಟಿ,ಪ್ರವೀಣ್,ಅರುಣ್,ಕಿರಣ್ ಆನೆಗುಂದ ಮುಂತಾದವರು ಉಪಸ್ಥಿತರಿದ್ದರು.

Categories
ಜ್ಯೋತಿಷ್ಯ

ಈ ದಿನದ ರಾಶಿ ಭವಿಷ್ಯ ಹೇಗಿದೆ?

ಈ ದಿನದ ರಾಶಿ ಭವಿಷ್ಯ ಹೇಗಿದೆ?
– ಶಿವ ಕೃಪೆಯಿಂದ ಯಾವ ರಾಶಿಯವರಿಗೆ ಲಾಭ? ಯಾವ ರಾಶಿಯವರಿಗೆ ನಷ್ಟ?

NAMMUR EXPRESS NEWS
ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು?

** ಮೇಷ ರಾಶಿ :
ಇಂದು ಅತ್ಯಂತ ಶುಭ ದಿನವಾಗಿರುತ್ತದೆ. ಸಾಮಾಜಿಕ ಸ್ಥಾನಮಾನ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ನಿಮ್ಮ ಕೆಲಸದಲ್ಲಿ ಉತ್ತಮ ಫಲಿತಾಂಶಗಳನ್ನು ನೀವು ಪಡೆಯುತ್ತೀರಿ. ಆದರೂ, ನೀವು ಕೆಲಸದ ನಿಮಿತ್ತ ಇದ್ದಕ್ಕಿದ್ದಂತೆ ಪ್ರಯಾಣಿಸಬೇಕಾಗಬಹುದು. ಪಾಲುದಾರಿಕೆ ವ್ಯವಹಾರದಲ್ಲಿ ಯಾರನ್ನೂ ಕುರುಡಾಗಿ ನಂಬಬೇಡಿ. ವಿಶೇಷ ಸ್ನೇಹಿತರ ಸಹಾಯದಿಂದ, ನೀವು ಹಣಕಾಸಿನ ಮುಗ್ಗಟ್ಟುಗಳಿಂದ ಪರಿಹಾರವನ್ನು ಪಡೆಯುತ್ತೀರಿ.

** ವೃಷಭ ರಾಶಿ :
ಜನರು ಇಂದು ಯಶಸ್ಸನ್ನು ಸಾಧಿಸಲು ಹೆಚ್ಚು ಶ್ರಮಿಸಬೇಕಾಗುತ್ತದೆ. ಕೆಲಸದ ಜವಾಬ್ದಾರಿಗಳು ಹೆಚ್ಚಾಗುತ್ತವೆ. ಬಹುಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ಯಶಸ್ವಿಯಾಗುತ್ತವೆ. ಸಂವಾದದ ಮೂಲಕ ಕುಟುಂಬದಲ್ಲಿ ಉದ್ಭವಿಸುವ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಿ.

** ಮಿಥುನ ರಾಶಿ
ಇಂದು ನಿಮಗೆ ಮಿಶ್ರ ಫಲಿತಾಂಶಗಳನ್ನು ನೀಡಲಿದೆ. ಪಾಲುದಾರರೊಂದಿಗೆ ಭಿನ್ನಾಭಿಪ್ರಾಯದ ಲಕ್ಷಣಗಳಿವೆ. ಕಚೇರಿಯಲ್ಲಿ ಕೆಲಸದ ಜವಾಬ್ದಾರಿಗಳು ಹೆಚ್ಚಾಗುತ್ತವೆ. ವ್ಯಾಪಾರದಲ್ಲಿ ಹಣಕಾಸಿನ ನಷ್ಟ ಉಂಟಾಗಬಹುದು, ಆದ್ದರಿಂದ ಬಹಳ ಯೋಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ. ಇಂದು ಸಾಲ ನೀಡುವುದನ್ನು ತಪ್ಪಿಸಿ. ಇದರಿಂದ ನೀವು ತೊಂದರೆಗಳನ್ನು ಎದುರಿಸಬಹುದು.

** ಕರ್ಕಾಟಕ ರಾಶಿ :
ಹಣಕಾಸಿನ ವಿಚಾರದಲ್ಲಿ ಬಹಳ ಜಾಗರೂಕರಾಗಿರಿ. ಪಾಲುದಾರಿಕೆ ವ್ಯವಹಾರದಲ್ಲಿ ಆರ್ಥಿಕ ನಷ್ಟ ಉಂಟಾಗಬಹುದು. ವೃತ್ತಿಪರ ಜೀವನದಲ್ಲಿ ಹೊಸ ಸವಾಲುಗಳನ್ನು ಆತ್ಮವಿಶ್ವಾಸದಿಂದ ಎದುರಿಸಿ. ಕೆಲವರು ಕೆಲಸದ ನಿಮಿತ್ತ ಪ್ರಯಾಣ ಮಾಡಬೇಕಾಗಬಹುದು. ಇಂದು, ಯಾವುದೇ ಅಪರಿಚಿತರಿಗೆ ಸಾಲ ನೀಡುವುದನ್ನು ತಪ್ಪಿಸಿ. ಕುಟುಂಬದೊಂದಿಗೆ ಸಮಯ ಕಳೆಯಿರಿ.

** ಸಿಂಹ ರಾಶಿ :
ಕೌಟುಂಬಿಕ ಜೀವನದಲ್ಲಿ ನೆಮ್ಮದಿ ಇರುತ್ತದೆ. ಸಂಬಂಧಗಳಲ್ಲಿನ ತಪ್ಪು ತಿಳುವಳಿಕೆ ದೂರವಾಗಲಿದೆ. ಉದ್ಯೋಗದಲ್ಲಿ ನೀವು ಹೆಚ್ಚುವರಿ ಜವಾಬ್ದಾರಿಗಳನ್ನು ಪಡೆಯುತ್ತೀರಿ. ಕಾನೂನು ವಿಷಯಗಳಲ್ಲಿ ಜಯ ದೊರೆಯಲಿದೆ. ಹಳೆಯ ಹೂಡಿಕೆಗಳಿಂದ ಆರ್ಥಿಕ ಲಾಭವಿದೆ. ಇಂದು ಹೊಸ ಆಸ್ತಿ ಅಥವಾ ವಾಹನವನ್ನು ಖರೀದಿಸಲು ಯೋಜಿಸಬಹುದು.

** ಕನ್ಯಾ ರಾಶಿ :
ಇಂದು ನಿಮಗೆ ಶುಭ ದಿನವಾಗಿರುತ್ತದೆ. ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಬಹುದು. ನಿಮ್ಮ ವೃತ್ತಿಯಲ್ಲಿ ಹೊಸ ಸಾಧನೆಗಳನ್ನು ಮಾಡುವಿರಿ. ಉದ್ಯೋಗದಲ್ಲಿ ಜನರು ನಿಮ್ಮ ಕೆಲಸವನ್ನು ಹೊಗಳುತ್ತಾರೆ. ನೀವು ಕೆಲಸದ ಹೆಚ್ಚುವರಿ ಜವಾಬ್ದಾರಿಯನ್ನು ಪಡೆಯಬಹುದು. ಇಂದು ನಿಮ್ಮ ಆರೋಗ್ಯದ ಬಗ್ಗೆ ಸ್ವಲ್ಪವೂ ನಿರ್ಲಕ್ಷ್ಯ ಮಾಡಬೇಡಿ.

** ತುಲಾ ರಾಶಿ :
ಇಂದು ನಿಮ್ಮ ಜೀವನದಲ್ಲಿ ಹಲವು ಸವಾಲುಗಳು ಎದುರಾಗಲಿವೆ. ಆದರೆ, ವ್ಯವಹಾರದಲ್ಲಿ ಬೆಳವಣಿಗೆಗೆ ಹೊಸ ಅವಕಾಶಗಳಿವೆ. ಹೊಸ ಹೂಡಿಕೆ ಆಯ್ಕೆಗಳ ಮೇಲೆ ನಿಗಾ ಇರಿಸಿ. ಯಾವುದೋ ಅಜ್ಞಾತ ಭಯದಿಂದ ಮನಸ್ಸು ತೊಂದರೆಗೊಳಗಾಗುತ್ತದೆ. ನಿಮ್ಮ ಮಾನಸಿಕ ಆರೋಗ್ಯಕ್ಕೆ ಗಮನ ಕೊಡಿ. ಕೆಲಸದಿಂದ ಹೆಚ್ಚು ಒತ್ತಡವನ್ನು ತೆಗೆದುಕೊಳ್ಳಬೇಡಿ.

** ವೃಶ್ಚಿಕ ರಾಶಿ :
ಕೆಲಸದ ಸ್ಥಳದಲ್ಲಿ ನಡೆಯುವ ರಾಜಕೀಯದಿಂದ ದೂರವಿರಿ. ನಿಮ್ಮ ಕಾರ್ಯಕ್ಷಮತೆಯ ಮೇಲೆ ಕೇಂದ್ರೀಕರಿಸಿ. ಮಕ್ಕಳ ಕಡೆಯಿಂದ ಒಳ್ಳೆಯ ಸುದ್ದಿಯನ್ನು ಪಡೆಯಬಹುದು. ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿವೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಿ. ಇಂದು ಕೆಲಸದಿಂದ ಹೆಚ್ಚು ಒತ್ತಡವನ್ನು ತೆಗೆದುಕೊಳ್ಳಬೇಡಿ.

** ಧನಸ್ಸು ರಾಶಿ :
ವೃತ್ತಿಪರ ಜೀವನದಲ್ಲಿ ಒತ್ತಡ ಸ್ವಲ್ಪ ಹೆಚ್ಚಾಗಬಹುದು. ನಿಮ್ಮ ಕೆಲಸದ ಮೇಲೆ ಕೇಂದ್ರೀಕರಿಸಿ. ಆಫೀಸ್ ಗಾಸಿಪ್‌ಗಳಿಂದ ದೂರವಿರಿ. ಹೊಸ ಯೋಜನೆಯನ್ನು ಪ್ರಾರಂಭಿಸಲು ಹಿಂಜರಿಯಬೇಡಿ. ಯೋಚಿಸದೆ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ಸಂವಾದದ ಮೂಲಕ ಕೌಟುಂಬಿಕ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಿ. ಇಂದು ನಿಮ್ಮ ಕೆಲಸದಲ್ಲಿ ಅಡಚಣೆ ಉಂಟಾಗಬಹುದು.

** ಮಕರ ರಾಶಿ :
ಈ ದಿನ ಜೀವನದಲ್ಲಿ ಹಲವು ಮಹತ್ವದ ಬದಲಾವಣೆಗಳು ಆಗಬಹುದು. ಸಾಮಾಜಿಕ ಸ್ಥಾನಮಾನ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ಹಠಾತ್ ಪ್ರವಾಸದ ಸಾಧ್ಯತೆ ಇರುತ್ತದೆ. ಬಹಳ ದಿನಗಳಿಂದ ಬಾಕಿ ಉಳಿದಿರುವ ಹಣ ವಾಪಸ್ ಬರಲಿದೆ. ಹಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದಗಳಿಂದ ನೀವು ಪರಿಹಾರವನ್ನು ಪಡೆಯುತ್ತೀರಿ.

** ಕುಂಭ ರಾಶಿ :
ಇಂದು ನಿಮ್ಮ ಜೀವನದಲ್ಲಿ ಹಲವು ಏರಿಳಿತಗಳು ಎದುರಾಗಬಹುದು. ಮನಸ್ಸಿನಲ್ಲಿ ತಾಶೆಯ ಭಾವನೆ ಮೂಡಬಹುದು. ಅಜ್ಞಾತ ಭಯದಿಂದ ಮನಸ್ಸು ತೊಂದರೆಗೊಳಗಾಗಬಹುದು. ಇಂದು ಹಣದ ವ್ಯವಹಾರಗಳನ್ನು ತಪ್ಪಿಸಿ. ಸಂಬಂಧಗಳಲ್ಲಿ ಅಂತರ ಹೆಚ್ಚಾಗಲಿದೆ. ನಿಮ್ಮ ಸಂಗಾತಿಯೊಂದಿಗೆ ಅನಗತ್ಯ ವಾದಗಳನ್ನು ತಪ್ಪಿಸಿ. ಮನೆಯಲ್ಲಿ ಶುಭ ಕಾರ್ಯಗಳನ್ನು ಆಯೋಜಿಸಬಹುದು.

** ಮೀನ ರಾಶಿ :
ಇಂದು ಕೆಲಸದ ನಿಮಿತ್ತ ವಿದೇಶ ಪ್ರಯಾಣ ಮಾಡುವ ಸಂಭವವಿದೆ. ಕುಟುಂಬ ಜೀವನವು ಸಂತೋಷದಿಂದ ಕೂಡಿರುತ್ತದೆ, ಆದರೆ ನಿಮ್ಮ ಸಂಗಾತಿಯೊಂದಿಗೆ ತೊಂದರೆಗೆ ಸಿಲುಕಬೇಡಿ. ನಿಮ್ಮ ಸಂಗಾತಿಯೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯಿರಿ. ಇಂದು ಹಣಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ಬಹಳ ಬುದ್ಧಿವಂತಿಕೆಯಿಂದ ತೆಗೆದುಕೊಳ್ಳಿ.

Categories
ಚಿಕ್ಕಮಗಳೂರು

ಮಾನವೀಯತೆಗೆ ಸಾಕ್ಷಿಯಾದ ಶೃಂಗೇರಿ ಸಹಾಯ ಹಸ್ತ ತಂಡ!

ಮಾನವೀಯತೆಗೆ ಸಾಕ್ಷಿಯಾದ ಶೃಂಗೇರಿ ಸಹಾಯ ಹಸ್ತ ತಂಡ!
– ವಾಟ್ಸಪ್ ಗ್ರೂಪ್ ಮೂಲಕ ಕಷ್ಟದಲ್ಲಿರುವವರಿಗೆ ಸ್ಪಂದನೆ
– ಪ್ರತಿ ತಿಂಗಳ ತಮ್ಮ ಉಳಿತಾಯದಲ್ಲಿ 200/-ರೂ.ಉಳಿಸಿ ಸೇವೆ

NAMMUR EXPRESS NEWS
ಶೃಂಗೇರಿ: ಆರೋಗ್ಯ ಸಮಸ್ಯೆಯಿಂದ ಕಷ್ಟದಲ್ಲಿರುವ ಬಡ ಕುಟುಂಬಗಳಿಗೆ ಕೈಲಾದ ಸಹಾಯ ಮಾಡುವ ನಿಟ್ಟಿನಲ್ಲಿ 20-30 ಜನ ಸಮಾನ ಮನಸ್ಕರು ಸೇರಿ ಶುರುಮಾಡಿದ ವಾಟ್ಸ್ ಆಪ್ ತಂಡ ಶೃಂಗೇರಿ ಸಹಾಯ ಹಸ್ತ ತಂಡ ಈಗ ಮಾನವೀಯ ಮುಖಕ್ಕೆ ಸಾಕ್ಷಿಯಾಗಿದೆ.
ತಂಡದಲ್ಲಿರುವ ಪ್ರತಿ ತಿಂಗಳ ತಮ್ಮ ಉಳಿತಾಯದಲ್ಲಿ 200/-ರೂ.ಗಳನ್ನು ಒಂದು ಅಕೌಂಟ್‌ಗೆ ಒಗ್ಗೂಡಿಸಿ ಹಣ ಒಟ್ಟುಗೂಡಿಸಲಾಗುತ್ತದೆ.
ತುರ್ತು ಚಿಕಿತ್ಸೆ, ಅರೋಗ್ಯ ಕಾರಣಕ್ಕಾಗಿ ಆರ್ಥಿಕ ಸಹಾಯಕ್ಕೆ ಮನವಿ ಬಂದ ಶೃಂಗೇರಿ ತಾಲೂಕಿನ ಅರ್ಹ ಬಡ ಕುಟುಂಬಕ್ಕೆ ಕೈಲಾದಷ್ಟು ಧನ ಸಹಾಯ ಮಾಡುವ ಈ ತಂಡ ಈಗ ಮತ್ತಷ್ಟು ಜನರಿಗೆ ಸಹಕಾರ ಮಾಡುವ ನಿರೀಕ್ಷೆಯಲ್ಲಿದ್ದಾರೆ.
ಫೆಬ್ರವರಿಯಿಂದ ಈ ತಂಡ ತನ್ನ ಕಾರ್ಯ ಶುರು ಮಾಡಿದ್ದು ಇಲ್ಲಿಯವರೆಗೆ 7-8 ಅಶಕ್ತ ಕುಟುಂಬಗಳ ಆರೋಗ್ಯ ಸಮಸ್ಯೆಗೆ ನೆರವಾಗಿ ಸಹಕರಿಸಿದೆ. ಇಂದು ಈ ತಂಡಡವನ್ನು ಬೆಂಬಲಿಸಿ ಸಹಾಯ ಮಾಡಿ 300 ಕ್ಕೂ ಅಧಿಕ ಸದಸ್ಯರು ಸೇರಿದ್ದು ಒಂದೊಳ್ಳೆ ಕಾರ್ಯದಲ್ಲಿ ಕೈಜೋಡಿಸಿದ್ದಾರೆ.
ಮಾನವೀಯತೆಯ ಕೆಲಸಕ್ಕೆ ಜತೆಯಾಗುವವರು ಗ್ರೂಪ್ ಅಡ್ಮಿನ್ ಸಚಿನ್ ಅವರನ್ನು ಸಂಪರ್ಕಿಸಬಹುದು.
9663856628

Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ಸಂಭ್ರಮದ ನಾಗರ ಪಂಚಮಿ!

ತೀರ್ಥಹಳ್ಳಿಯಲ್ಲಿ ಸಂಭ್ರಮದ ನಾಗರ ಪಂಚಮಿ!
– ರಾಮೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ
– ಅನ್ನದಾನ ಸಮಿತಿಯಿಂದ 600 ಮಂದಿಗೆ ಊಟ
– ನಂಟೂರು, ಆರಗ, ರಾಮನ ಸರ, ಹಡ್ಸೆ ಸೇರಿ ಹಲವೆಡೆ ಪೂಜೆ

NAMMUR EXPRESS NEWS
ತೀರ್ಥಹಳ್ಳಿ: ನಾಗರ ಪಂಚಮಿಯಂದು ತೀರ್ಥಹಳ್ಳಿ ತಾಲೂಕಿನ ಪಟ್ಟಣದ ರಾಮೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಿತು. ಅಲ್ಲಿನ ನಾಗರ ಕಲ್ಲಿಗೆ ಪೂಜೆ ನಡೆಯಿತು. ಸಾವಿರಾರು ಭಕ್ತರು ಭಾಗವಹಿಸಿದ್ದರು.
ಎಲ್ಲಾ ಕಡೆ ನಾಗರ ಕಲ್ಲಿಗೆ ಪೂಜೆ ಪುನಸ್ಕಾರಗಳು ನಡೆದವು. ಇನ್ನು ತೀರ್ಥಹಳ್ಳಿ ತಾಲೂಕಿನ ಪ್ರಸಿದ್ಧ ದೇವಾಲಯಗಳಾದ ನಂಟೂರು, ಆರಗ ಅಗ್ರಹಾರ, ಹಡ್ಸೆ, ರಾಮನ ಸರ ಸೇರಿ ಬಹುತೇಕ ನಾಗ ದೇವಾಲಯಗಳಲ್ಲಿ ಪೂಜೆ ನಡೆಯಿತು.

600ಕ್ಕೂ ಹೆಚ್ಚು ಮಂದಿಗೆ ಅನ್ನದಾನ ಸೇವ

ಶ್ರೀ ರಾಮೇಶ್ವರ ದೇವರ ನಿತ್ಯ ಅನ್ನ ಸಂತರ್ಪಣಾ ಮತ್ತು ಧಾರ್ಮಿಕ ಸೇವಾ ಸಮಿತಿಯು ನಾಗರ ಪಂಚಮಿಯಂದು ದಾನಿಗಳ ಸಹಾಯದಿಂದ 600ಕ್ಕೂ ಹೆಚ್ಚು ಮಂದಿಗೆ ಅನ್ನದಾನ ಮಾಡಿತು. ಕಷ್ಟದ ನಡುವೆ ಸೇವೆ ಮಾಡುತ್ತಿರುವ ಸೇವಾಕರ್ತರಿಗೆ ಇನ್ನಷ್ಟು ದಾನಿಗಳ ಸಹಕಾರ ಅಗತ್ಯವಿದೆ.

Categories
ಕರಾವಳಿ

ವಿದ್ಯಾರ್ಥಿನಿ ಮೇಲೆ ಬೀದಿ ನಾಯಿಗಳ ಗ್ಯಾಂಗ್ ಅಟ್ಯಾಕ್!

ವಿದ್ಯಾರ್ಥಿನಿ ಮೇಲೆ ಬೀದಿ ನಾಯಿಗಳ ಗ್ಯಾಂಗ್ ಅಟ್ಯಾಕ್!
– ಉಡುಪಿ ಭಾಗದಲ್ಲಿ ಹೆಚ್ಚಾದ ಬೀದಿ ನಾಯಿಗಳ ಕಾಟ

– ಕುಕ್ಕೆ ಲಡ್ಡು ಪ್ರಸಾದದಲ್ಲಿ ರಬ್ಬರ್ ಬ್ಯಾಂಡ್ ಪತ್ತೆ!
– ಮಂಗಳೂರಲ್ಲಿ ಲವ್ ಜಿಹಾದ್!?: ಮತಾಂತರಗೊಳಿಸಿ ವಿವಾಹ
– ಕುಂದಾಪುರ: ನಿಂತ ಬಸ್ಸಿಗೆ ಲಾರಿ ಡಿಕ್ಕಿ: ಹಲವರಿಗೆ ಗಾಯ
– ಕಾರ್ಕಳ: ಓವ‌ರ್ ಟೇಕ್ ಭರದಲ್ಲಿ ಕಾರು ಪಲ್ಟಿ!
– ಬ್ರಹ್ಮಾವರ: ಕಪ್ಪೆ ಚಿಪ್ಪು ತೆಗೆಯಲು ಹೋದ ವ್ಯಕ್ತಿ ಹೊಳೆ ಪಾಲು!

NAMMUR EXPRESS NEWS
ಉಡುಪಿ: ಶಾಲಾ ವಿದ್ಯಾರ್ಥಿನಿಯ ಮೇಲೆ ಬೀದಿ ನಾಯಿಗಳು ದಾಳಿ ಮಾಡಿದ ಭಯಾನಕ ಘಟನೆ ಉಡುಪಿಯ ಹೂಡೆ ಪರಿಸರದಲ್ಲಿ ನಡೆದಿದೆ.ಬೆಳಿಗ್ಗೆ ಶಾಲೆಗೆ ಹೋಗುತ್ತಿದ್ದ ವಿದ್ಯಾರ್ಥಿನಿಯ ಮೇಲೆ ನಾಯಿಗಳು ದಾಳಿ ಮಾಡಿವೆ. ಕೈಯಲ್ಲಿ ಕೊಡೆ ಹಿಡಿದು ನಿಂತಿದ್ದ ವಿದ್ಯಾರ್ಥಿನಿಯತ್ತ ಬೀದಿ ನಾಯಿಗಳು ಒಮ್ಮೇಲೆ ನುಗ್ಗಿ ಬಂದಿವೆ.
ನಾಲೈದು ನಾಯಿಗಳು ಒಮ್ಮೆಲೇ ದಾಳಿ ಮಾಡಿದ್ದರಿಂದ ವಿದ್ಯಾರ್ಥಿನಿ ಬೊಬ್ಬೆ ಹಾಕಿದ್ದಾಳೆ. ಬಳಿಕ ಕೈಯಲ್ಲಿದ್ದ ಕೊಡೆಯನ್ನು ಬೀಸಿ, ನಾಯಿಗಳಿಂದ ರಕ್ಷಿಸಿಕೊಂಡು ಬಚಾವಾಗಿದ್ದಾಳೆ.ವಿದ್ಯಾರ್ಥಿನಿಯ ಮೇಲೆ ನಡೆದ ನಾಯಿ ದಾಳಿಯ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಹೂಡೆ ಪರಿಸರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ನಾಯಿಗಳ ಕಾಟದಿಂದ ಸ್ಥಳೀಯರು ಬೇಸತ್ತು ಹೋಗಿದ್ದಾರೆ. ಬೀದಿ ನಾಯಿಗಳ ಕಾಟದಿಂದ ಮುಕ್ತಿ ನೀಡುವಂತೆ ಹಲವು ದಿನಗಳಿಂದ ಮನವಿ ಮಾಡುತ್ತಿದ್ದಾರೆ.

ಕುಕ್ಕೆ ಲಡ್ಡು ಪ್ರಸಾದದಲ್ಲಿ ರಬ್ಬರ್ ಬ್ಯಾಂಡ್ ಪತ್ತೆ!

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಲಡ್ಡು ಪ್ರಸಾದ ಸೇವೆಗೆ ದೊರೆತ ಲಡ್ಡಿನಲ್ಲಿ ರಬ್ಬರ್ ಬ್ಯಾಂಡ್ ದೊರೆತಿರುವುದಾಗಿ ವರದಿಯಾಗಿದೆ.
ಚೊಕ್ಕಾಡಿ ಬಳಿಯ ಪದವುನ ವ್ಯಕ್ತಿಯೊಬ್ಬರು ಆ.9 ರಂದು ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ತೆರಳಿದ್ದು ಲಡ್ಡು ಪ್ರಸಾದ ಸೇವೆಯನ್ನು ಮಾಡಿಸಿದ್ದರು. ಇದಕ್ಕೆ ಪ್ರತಿಯಾಗಿ ದೊರೆತ ಲಡ್ಡನ್ನು ಮನೆಗೆ ಬಂದು ಹಂಚಿದಾಗ ಲಡ್ಡು ಒಂದರಲ್ಲಿ ರಬ್ಬರ್ ಬ್ಯಾಂಡ್ ಇರುವುದು ತಿಳಿಯಿತು. ಈ ಮಾಹಿತಿಯನ್ನು ಮಾಧ್ಯಮದೊಂದಿಗೆ ಹಂಚಿಕೊಂಡಿದ್ದಾರೆ

ಬ್ರಹ್ಮಾವರ: ಕಪ್ಪೆ ಚಿಪ್ಪು ತೆಗೆಯಲು ಹೋದ ವ್ಯಕ್ತಿ ಹೊಳೆ ಪಾಲು!

ಉಡುಪಿ: ಹೊಳೆಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋಗಿ ಕಾಲು ಜಾರಿ ನೀರಿಗೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಬ್ರಹ್ಮಾವರ ತಾಲೂಕಿನ ಸಾಸ್ತಾನದ ಕೋಡಿ ಗ್ರಾಮದಲ್ಲಿ ನಡೆದಿದೆ.ಮೃತರನ್ನು ಸಾಸ್ತಾನ ಯಕ್ಷಿಮಠ ನಿವಾಸಿ ರಾಜು ಮರಕಾಲ (66) ಎಂದು ಗುರುತಿಸಲಾಗಿದೆ.
ರಾಜು ಅವರು ಸಂಜೆ ಹೊಳೆಯಲ್ಲಿ ಕಪ್ಪೆ ಚಿಪ್ಪು ತೆಗೆಯಲೆಂದು ಹೋಗಿದ್ದರು. ಈ ವೇಳೆ ಅವರು ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ಕಾಣೆಯಾಗಿದ್ದರು. ಶನಿವಾರ ಬೆಳಿಗ್ಗೆ ಸಾಸ್ತಾನ ಕೋಡಿ ಹೊಳೆಯಲ್ಲಿ ಅವರ ಶವ ಪತ್ತೆಯಾಗಿದೆ. ಮಾಹಿತಿ ತಿಳಿದು ತಕ್ಷಣ ಸ್ಥಳಕ್ಕೆ ಆಗಮಿಸಿದ ಕೋಟ ಪೊಲೀಸರು ಕಾರ್ಯಾಚರಣೆ ನಡೆಸಿ ದೋಣಿಯಲ್ಲಿ ಶವವನ್ನು ದಡಕ್ಕೆ ತಂದಿದ್ದಾರೆ.ಈ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

– ಮಂಗಳೂರಲ್ಲಿ ಲವ್ ಜಿಹಾದ್!?: ಮತಾಂತರಗೊಳಿಸಿ ವಿವಾಹ

ಮಂಗಳೂರು : ಮಂಗಳೂರಿನಲ್ಲಿ ಸಂಚಲನ ಮೂಡಿಸಿದ್ದ ಲವ್ ಜಿಹಾದ್ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಕೇರಳದ ನಟೋರಿಯಸ್ ಕ್ರಿಮಿನಲ್ ಇದೀಗ ಹಿಂದೂ ವಿದ್ಯಾರ್ಥಿನಿಯನ್ನು ಮತಾಂತರಗೊಳಿಸಿ ವಿವಾಹವಾದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಕೇರಳದ ಕಾಸರಗೋಡಿನ ವಿದ್ಯಾನಗರ ನಿವಾಸಿ ವಿಸ್ಮಯಾಳನ್ನು ಅಶ್ವಕ್ ಎಂಬ ನಟೋರಿಯಸ್ ಕ್ರಿಮಿನಲ್‌ ಪ್ರೀತಿಯ ಬಲೆಗೆ ಬೀಳಿಸಿದ್ದ. ಕೇವಲ ಎರಡೇ ತಿಂಗಳಲ್ಲಿ ಆತ ಪ್ರೀತಿಯ ಖೆಡ್ಡಾಕ್ಕೆ ಬೀಳಿಸಿದ್ದ ಎಂದು ಆರೋಪಿಸಲಾಗಿದೆ.
ಮಂಗಳೂರಿನ ಉಳ್ಳಾಲದ ಅತ್ತೆ ಮನೆಯಲ್ಲಿದ್ದುಕೊಂಡು ಬಿಸಿಎ ಶಿಕ್ಷಣ ಪಡೆಯುತ್ತಿದ್ದ ವಿಸ್ಮಯಾಳನ್ನು ಜೂ.6ರಂದು ಅಲ್ಲಿಂದಲೇ ಕರೆದುಕೊಂಡು ಹೋಗಿದ್ದ ಅಶ್ವಕ್‌. ಬಳಿಕ ವಿದ್ಯಾನಗರ ಠಾಣೆ ಪೊಲೀಸರು ಆಕೆಯನ್ನು ಪತ್ತೆಹಚ್ಚಿ ಮಂಗಳೂರಿನ ಕೌನ್ಸಿಲಿಂಗ್‌ ಕೇಂದ್ರದಲ್ಲಿರಿಸಿದ್ದರು. ಆದರೆ ಅಷ್ಟಕ್ ನೊಂದಿಗೆ ತೆರಳುವುದಾಗಿ ಹೇಳಿದ್ದಳು. ವಿಸ್ಮಯಳನ್ನು ಮತಾಂತರ ನಡೆಸಿರುವುದಾಗಿ ಆಕೆಯ ತಂದೆ ಆರೋಪಿಸಿದ್ದರು.
ಬಳಿಕ ಮಂಗಳೂರಿನ ವಿಎಚ್‌ಪಿ ನಾಯಕರನ್ನು ಭೇಟಿಯಾಗಿ ವಿಸ್ಮಯಾ ತಂದೆ ಮಗಳನ್ನು ಉಳಿಸಿಕೊಡಿ ಎಂದು ಕಣ್ಣೀರು ಹಾಕಿದ್ದರು. ಕೊನೆಗೂ ಆಕೆ ತಂದೆಯ ಕೈಗೆ ಸಿಗದೇ ಅಶ್ವಕ್‌ನನ್ನು ವಿಸ್ಮಯಾ ಮುಸ್ಲಿಂ ಪದ್ಧತಿ ಪ್ರಕಾರ ವಿವಾಹವಾಗಿದ್ದಾಳೆ. ಈತ ಕೇರಳ ಹೈಕೋರ್ಟ್‌ಗೆ ಹೆಬಿಯಾಸ್ ಕಾರ್ಪಸ್ ಅರ್ಜಿ ಹಾಕಿದ್ದ. ಇದೀಗ ಕೇರಳ ಹೈಕೋರ್ಟ್ ಆದೇಶದಂತೆ ವಿಸ್ಮಯಾಳನ್ನು ಮದುವೆಯಾಗಿದ್ದಾನೆ.ಇದೀಗ ಆಕೆ ಮದುವೆಯಾಗಿರುವ ಫೋಟೊವನ್ನು ಫೇಸ್‌ಬುಕ್‌ಗೆ ಅಪ್ಲೋಡ್ ಮಾಡಿರುವ ವಿಶ್ವಹಿಂದೂ ಪರಿಷತ್‌ ಮುಖಂಡ ಶರಣ್ ಪಂಪ್ ವೆಲ್ ಅವರು, ‘ಕ್ಷಮಿಸಿ ವಿನೋದ್‌ರವರೇ, ನಿಮ್ಮ ಮಗಳನ್ನು ಉಳಿಸಲು ನಮ್ಮಿಂದ ಸಾಧ್ಯವಾಗಿಲ್ಲ’ ವಿಸ್ಮಯಾಳ ತಂದೆಯ ಬಳಿ ಕ್ಷಮೆ ಕೋರಿದ್ದಾರೆ.

ಕುಂದಾಪುರ: ನಿಂತ ಬಸ್ಸಿಗೆ ಲಾರಿ ಡಿಕ್ಕಿ: ಹಲವರಿಗೆ ಗಾಯ

ಕುಂದಾಪುರ: ಪ್ರಯಾಣಿಕರನ್ನು ಇಳಿಸಲು ನಿಂತಿದ್ದ ಖಾಸಗಿ ಬಸ್ಸಿಗೆ ಹಿಂದಿನಿಂದ ಲಾರಿಯೊಂದು ಡಿಕ್ಕಿ ಹೊಡೆದು ವಿದ್ಯಾರ್ಥಿಗಳು ಸಹಿತ ಹಲವರು ಗಾಯಗೊಂಡ ಘಟನೆ ಶನಿವಾರ ಬೆಳಿಗ್ಗೆ ರಾಷ್ಟ್ರೀಯ ಹೆದ್ದಾರಿ 66 ರ ತಲ್ಲೂರು ಪ್ರವಾಸಿ ಹೋಟೆಲ್ ಬಳಿ ನಡೆದಿದೆ.
ಭಟ್ಕಳದಿಂದ ಕುಂದಾಪುರಕ್ಕೆ ಬರುತ್ತಿದ್ದ ಖಾಸಗಿ ಬಸ್ ತಲ್ಲೂರು ಪ್ರವಾಸಿ ಸಮೀಪ ಪ್ರಯಾಣಿಕರನ್ನು ಇಳಿಸಲು ಒಮ್ಮೆಲೆ ನಿಲ್ಲಿಸಿದ ಸಂದರ್ಭ ಬಸ್ಸಿನ ಹಿಂದೆ ಬರುತ್ತಿದ್ದ ಎಲ್ ಪಿ ಲಾರಿಯು ಬಸ್ಸಿನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ.
ಈ ಅಪಘಾತದಿಂದಾಗಿ ಬಸ್ಸಿನಲ್ಲಿದ್ದ ಹಲವು ಪ್ರಯಾಣಿಕರು, ವಿದ್ಯಾರ್ಥಿಗಳು ಗಂಭೀರ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ತಕ್ಷಣ ಸ್ಥಳೀಯರು ಕುಂದಾಪುರ ಆಸ್ಪತ್ರೆಗೆ ಸಾಗಿಸಲಾಗಿದೆ.

ಕಾರ್ಕಳ: ಓವ‌ರ್ ಟೇಕ್ ಭರದಲ್ಲಿ ಕಾರು ಪಲ್ಟಿ!

ಕಾರ್ಕಳ : ಕಾರ್ಕಳ- ಹೆಬ್ರಿ ನಡುವೆ ಹಾದು ಹೋಗಿರುವ ರಾಜ್ಯ ಹೆದ್ದಾರಿ ಮುನಿಯಾಲು ಎಂಬಲ್ಲಿ ಓವ‌ರ್ ಟೇಕ್ ಭರದಲ್ಲಿ ಕಾರೊಂದು ರಸ್ತೆ ವಿಭಜಕದಿ ಮೇಲೆ ಪಲ್ಟಿ ಹೊಡೆದಿದೆ.
ಕಾರ್ಕಳ ಕಡೆಯಿಂದ ಹೆಬ್ರಿಗೆ ಹೋಗುವ ರಾಜ್ಯ ಹೆದ್ದಾರಿ ಮುನಿಯಾಲಿನ ಚತುಷ್ಪಥ ರಸ್ತೆಯಲ್ಲಿ ಈ ಘಟನೆ ಸಂಭವಿಸಿದೆ.
ಯುವಕರ ಕೂಡಿಕೊಂಡು ಹೋಗುತ್ತಿದ್ದ ಎರಡು ಕಾರುಗಳ ನಡುವೆ ಓವರ್ ಟೇಕ್ ನಡೆದಿದ್ದು, ಇನ್ನೊಂದು ಕಾರಿನ ಚಾಲಕ ಹಿಂಬದಿಯಿಂದ ಬರುತ್ತಿದ್ದ ಕಾರಿಗೆ ಸೈಡ್ ನೀಡದೇ ಇದ್ದುದು ಘಟನೆಗೆ ಕಾರಣವೆನ್ನಲಾಗಿದೆ.
ಮುನ್ನುಗ್ಗುವ ಭರದಲ್ಲಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಕಾರು ಪಲ್ಟಿ ಹೊಡೆದಿದ್ದು, ಕಾರಿನೊಳಗಿದ್ದವರಿಗೆ ಸಣ್ಣಪುಟ್ಟ ರೀತಿಯಲ್ಲಿ ಗಾಯವಾಗಿದೆ.ಅತೀ ವೇಗ ಹಾಗೂ ನಿರ್ಲಕ್ಷ್ಯ ರೀತಿಯಲ್ಲಿ ವಾಹನ ಚಲಾಯಿಸಿ ಘಟನೆಗೆ ಕಾರಣವಾಗಿರುವ ಎರಡು ಕಾರುಗಳ ಬಗ್ಗೆ ಮಾಹಿತಿಯನ್ನು ಪೊಲೀಸರು ಕಲೆಹಾಕಿದ್ದಾರೆ.

Categories
ಚಿತ್ರದುರ್ಗ

ಹೊಸದುರ್ಗದಲ್ಲಿ ಅತೀ ದೊಡ್ಡ ದೇಗುಲ ಉದ್ಘಾಟನೆ

ಹೊಸದುರ್ಗದಲ್ಲಿ ಅತೀ ದೊಡ್ಡ ದೇಗುಲ ಉದ್ಘಾಟನೆ
– ಶನೇಶ್ವರ ಸ್ವಾಮಿಯ ನೂತನ ದೇವಾಲಯ ಉದ್ಘಾಟನೆ, ಕಳಸಾರೋಹಣ
– ಸಾವಿರಾರು ಭಕ್ತರ ಆಗಮನ: ಸ್ವಾಮೀಜಿಗಳ ಸಮಾಗಮ

NAMMUR EXPRESS NEWS
ಹೊಸದುರ್ಗ: ರಾಜ್ಯದಲ್ಲಿ ಅತಿ ದೊಡ್ಡ ಮೂರನೇ ದೇವಾಲಯ ಶನೇಶ್ವರ ಸ್ವಾಮಿಯ ನೂತನ ದೇವಾಲಯ ಉದ್ಘಾಟನೆ ಹಾಗೂ ಕಳಸಾರೋಹಣ ಕಾರ್ಯಕ್ರಮಕ್ಕೆ ಸಾವಿರಾರು ಮಂದಿ ಭಾಗವಹಿಸಿ , ಸಂಸ್ಕಾರಯುತ ಕಾರ್ಯಗಳನ್ನು ಮಾಡಿದರು‌. ಹೆಚ್ಚಾಗಿ ಯುವ ಜನತೆ ಈ ಕಾರ್ಯದಲ್ಲಿ ಭಾಗಿಯಾಗಿದ್ದಾರೆಂದು ಬೆಂಗಳೂರಿನ ಮಹರ್ಷಿ ಮಂದಿರ ನವರತ್ನ ಅಗ್ರಹಾರದ ಆನಂದ್ ಗುರೂಜಿ ಸಂತಸ ವ್ಯಕ್ತಪಡಿಸಿದರು.
ನಗರದ ಎಪಿಎಂಸಿ ಮುಂಭಾಗ ನಿರ್ಮಿಸಿರುವ ನೂತನ ಶನೇಶ್ವರ ಸ್ವಾಮಿ ದೇವಾಲಯದ ಪ್ರಾರಂಭೋತ್ಸವದ ಧಾರ್ಮಿಕ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.


ಮುಂದಿನ ದಿನಗಳಲ್ಲಿ ಶನೇಶ್ವರ ಸ್ವಾಮಿಗೆ ಭಕ್ತರ ಸಂಖ್ಯೆ ಹೆಚ್ಚಾಗಲಿದೆ, ಆ ಶಕ್ತಿ ಗರ್ಭಗುಡಿಯಲ್ಲಿದೆ. ತಾಲ್ಲೂಕಿನ ಬೆಲಗೂರು ಅನ್ನದಾಸೋಹಕ್ಕೆ ಪ್ರಖ್ಯಾತಿ ಪಡೆದಿದೆ. ಬಿಂದು ಮಾಧವ ಶರ್ಮ ಸ್ವಾಮೀಜಿ ಅವರ ಪ್ರೀತಿಗೆ ಪ್ರತಿಯೊಬ್ಬರು ತಲೆ ಬಾಗಲೇಬೇಕು. ನನಗೆ ಪ್ರಥಮವಾಗಿ ಬೆಳ್ಳಿ ಕಿರೀಟ ಧಾರಣೆ ಮಾಡಿದ್ದು ಅವರೇ, ಎಂದು ನೆನಪು ಮಾಡಿಕೊಂಡರು.
151 ಕುಂಭಮೇಳ, ವಿವಿಧ ಕಲಾತಂಡಗಳೊಂದಿಗೆ ಆನಂದ ಗುರೂಜಿ ಅವರಿಗೆ ಸ್ವಾಗತ ಕೋರಲಾಯಿತು. ಬಸವೇಶ್ವರ ವೃತ್ತದಿಂದ ಆರಂಭವಾದ ಮೆರವಣಿಗೆ ಶನೇಶ್ವರ ಸ್ವಾಮಿ ದೇವಾಲಯದವರೆಗೂ ಸಾಗಿತು. ಶನೇಶ್ವರ ಸ್ವಾಮಿ, ನವಗ್ರಹ, ಈಶ್ವರ, ಪಾರ್ವತಿ, ಗಣೇಶ ವಿಗ್ರಹಗಳ ಮೂರ್ತಿ ಪ್ರತಿಷ್ಠಾಪನೆ ನೇರವೇರಿತು. ನಂತರ ಹುಣಸಘಟ್ಟದ ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ ಕಳಸ ಪ್ರತಿಷ್ಠಾಪನೆ ನೇರವೇರಿಸಿದರು. ಎಡೆಯೂರಿನ ರೇಣುಕಾ ಶಿವಾಚಾರ್ಯ ಸ್ವಾಮೀಜಿ, ಹುಣಸಘಟ್ಟದ ಹಾಲುಸ್ವಾಮಿ ಮಠದ ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಬೆಲಗೂರಿನ ಮಾರುತಿ ಪೀಠದ ವಿಜಯ ಮಾರುತಿ ಶರ್ಮಾ ಸ್ವಾಮೀಜಿ, ತಾವರೆಕೆರೆ ಶಿಲಾಮಠದ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ನಂದೀಪುರದ ಹಿರೇಮಠ ನಂದೀಶ್ವರ ಶಿವಾಚಾರ್ಯ ಸ್ವಾಮೀಜಿ, ಕೆ. ಬಿದರೆಯ ದೊಡ್ಡಮಠದ ಪ್ರಭುಕುಮಾರ ಶಿವಾಚಾರ್ಯ ಸ್ವಾಮೀಜಿ, ಹಣ್ಣೆಯ ಶ್ರೀಶೈಲ ಶಾಖಾಮಠದ ಅಭಿನವ ಮರುಳಸಿದ್ದ ಪಂಡಿತಾರಾಧ್ಯ ಸ್ವಾಮೀಜಿ, ಚಿತ್ರದುರ್ಗದ ಗೋವಿಂದ ಸ್ವಾಮೀಜಿ, ವಿಸ್ಮಯ ಟ್ರಸ್ಟ್ ಅಧ್ಯಕ್ಷ ಅನಂತ್ ಜೀ, ಗುರು ಶನೇಶ್ವರ ಸ್ವಾಮಿ ಭಕ್ತ ಮಂಡಳಿಯ ಅಧ್ಯಕ್ಷ ಸಿ. ಪ್ರಕಾಶ್, ಕಾರ್ಯದರ್ಶಿ ರಾಜಣ್ಣ, ಖಜಾಂಚಿ ಡಿ.ಟಿ. ಶಿವಲಿಂಗಪ್ಪ, ಉಪಾಧ್ಯಕ್ಷ ಸುಬ್ರಮಣ್ಯ ಶೆಟ್ರು, ಪದಾಧಿಕಾರಿಗಳಾದ ಕುಮಾರಸ್ವಾಮಿ, ಹೆಚ್. ಎನ್ ಮಂಜುನಾಥ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಮಂಜುನಾಥ್, ಕಾರೇಹಳ್ಳಿ ಜಯಣ್ಣ, ನಾಯಿಗೆರೆ ಚಂದ್ರಶೇಖರ್, ಸತೀಶ್, ಅನಂತ್ ಜೀ, ವಸಂತ್ ಕುಮಾರ್, ಶೈಲಜಾ, ಪಾರ್ವತಮ್ಮ ಹಾಲಪ್ಪ, ಅನಿತಾ ರಾಜೇಶ್, ವೃಷಭೇಂದ್ರ ಮೂರ್ತಿ, ಸುಬ್ಬಭೋವಿ, ನವೀನ್ ಕುಮಾರ್, ಆಗ್ರೋ ಶಿವಣ್ಣ, ದೀಪಿಕಾ ಸತೀಶ್, ಮಂಜುಳಾ, ಎಸ್.ಕೆ. ಮಂಜುನಾಥ್, ಹೆಬ್ಬಳ್ಳಿ ಮಲ್ಲಿಕಾರ್ಜುನ್, ರವಿಕುಮಾರ್, ಪ್ರದೀಪ್ ಸೇರಿದಂತೆ ಟ್ರಸ್ಟ್ ನ ಸದಸ್ಯರು, ಗಣ್ಯರು ಹಾಗೂ ಸಾರ್ವಜನಿಕರಿದ್ದರು.

ಹೊಸದುರ್ಗದಲ್ಲಿ ಆಯೋಜಿಸಿದ್ದ ಶನೇಶ್ವರ ಸ್ವಾಮಿ ದೇವಾಲಯದ ಪ್ರಾರಂಭೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ಮಠಾಧೀಶರು.

Categories
ತೀರ್ಥಹಳ್ಳಿ

ಒತ್ತುವರಿ ತೆರವು ವಿರುದ್ಧ ಸಿಡಿದೆದ್ದ ರೈತ ಸಂಘಟನೆಗಳು!

ಒತ್ತುವರಿ ತೆರವು ವಿರುದ್ಧ ಸಿಡಿದೆದ್ದ ರೈತ ಸಂಘಟನೆಗಳು!
– ಮಲೆನಾಡ ನೈಸರ್ಗಿಕ ಕೃಷಿ ವಿರುದ್ಧ ಸರ್ಕಾರದ ನಿಲುವು
– ಮಳೆ ಹಾನಿ ಅವೈಜ್ಞಾನಿಕ ಪರಿಹಾರ ವಿರುದ್ದ ಆಕ್ರೋಶ
– ಮಲೆನಾಡಲ್ಲಿ ಜೋರಾಗಲಿದೆ ರೈತ ಹೋರಾಟ?!

NAMMUR EXPRESS NEWS
ತೀರ್ಥಹಳ್ಳಿ: ಒತ್ತುವರಿ ತೆರವು, ಮಳೆ ಹಾನಿ ಅವೈಜ್ಞಾನಿಕ ಪರಿಹಾರ ಸೇರಿ ಸರ್ಕಾರಗಳ ಧೋರಣೆ ವಿರುದ್ಧ ಇದೀಗ ರೈತರು ಹೋರಾಟಕ್ಕೆ ಮುಂದಾಗಿದ್ದಾರೆ.
‘ಸಮಾನ ಮನಸ್ಕರು’ ಹಾಗೂ ತೀರ್ಥಹಳ್ಳಿ ತಾಲ್ಲೂಕಿನ ಎಲ್ಲಾ ರಾಜಕೀಯ ಪಕ್ಷಗಳ ಮುಂದಾಳುಗಳು, ಕರ್ನಾಟಕ ರಾಜ್ಯ ರೈತ ಸಂಘ: ತೀರ್ಥಹಳ್ಳಿ, ಕರ್ನಾಟಕ ರಕ್ಷಣಾ ವೇದಿಕೆ, ದಲಿತ ಸಂಘರ್ಷ ಸಮಿತಿ, ಮಲೆನಾಡು ಸಂಘರ್ಷ ಕ್ರಿಯಾ ಸಮಿತಿ, ತೀರ್ಥಹಳ್ಳಿ ಇವರ ಸಮಾಲೋಚನಾ ಸಭೆ ತೀರ್ಥಹಳ್ಳಿ ಮಯೂರ ಹೋಟೆಲ್ ಸಭಾಂಗಣ.ದಲ್ಲಿ ಶುಕ್ರವಾರ ನಡೆಯಿತು.
ಮಳೆಗಾಲ ಕೇಡುಗಾಲ ತಂದಿದೆ. ಮಳೆಗಾಲ ಇನ್ನೂ ಎರಡು ತಿಂಗಳು ಇರುವುದಾದರು ಈಗಾಗಲೇ ದಾಖಲೆ ಮೀರಿ ಮಳೆ ಸುರಿದು ಭತ್ತ, ಬಾಳೆ, ಅಡಿಕೆ, ಕಾಳುಮೆಣಸು ಮುಂತಾದ ಬೆಳೆಗಳು ನಾಶವಾಗುತ್ತಿವೆ. ಇವುಗಳಿಗೆ ಪರಿಹಾರ ಒದಗಿಸಲು ಸರ್ಕಾರದ ಮೇಲೆ ರೈತರು ಒತ್ತಾಯ ಹೇರಬೇಕು. ಹಲವು ಕಡೆ ಭೂಕುಸಿತ ಸಂಭವಿಸುತ್ತಿದ್ದು ಇದಕ್ಕೆ ವೈಜ್ಞಾನಿಕ ಕಾರಣಗಳನ್ನು ಹೇಳುವ ಬದಲು ದುರುಳರು ಮಲೆನಾಡಿನ ರೈತರ ಕಡೆಗೆ ಕೈ ತೋರಿಸಿ ಜೀವನೋಪಾಯಕ್ಕೆ ಒತ್ತುವರಿ ಕೃಷಿ ಮಾಡಿರುವುದನ್ನು ಸರ್ಕಾರ ತೆರವು ಕಾರ್ಯಾಚರಣೆಗೆ ಮುಂದಾಗಿದೆ. ಇದನ್ನು ವಿರೋಧಿಸಬೇಕು. ಹಾಗೂ ತೆರವು ಕಾರ್ಯಾಚರಣೆಯನ್ನು ಈ ಕೂಡಲೇ ನಿಲ್ಲಿಸಬೇಕು. ಪರಸ್ಪರ ರಾಜಕೀಯ ಟೀಕೆ, ವೈಯಕ್ತಿಕ ದೂಷಣೆ ಮಾಡಬಾರದು. ಒತ್ತುವರಿ ತೆರವು ನಿಲ್ಲಿಸಲು ಒಗ್ಗಟ್ಟಾಗಿ ಹೋರಾಡಬೇಕು ಎಂದು ನಿರ್ಧಾರ ಮಾಡಲಾಯಿತು.
ರೈತ ಸಂಘದ ಅಧ್ಯಕ್ಷರಾದ ಕೋಡ್ಲು ವೆಂಕಟೇಶ್ ಮತ್ತು ಪ್ರಧಾನ ಕಾರ್ಯದರ್ಶಿ ಹೊರಬೈಲು ರಾಮಕೃಷ್ಣ ಸೇರಿ ಹತ್ತಾರು ಸಂಘಟನೆಗಳ ಪ್ರಮುಖರು ಹಾಜರಿದ್ದರು.
ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಣ್ಣ ರೈತರ ವಿರುದ್ಧ ಸರ್ಕಾರ ಕ್ರಮ ಕೈಗೊಂಡರೆ ದೊಡ್ಡ ಹೋರಾಟಕ್ಕೆ ರೈತ ಸಂಘಟನೆಗಳು ಸಿದ್ಧತೆ ನಡೆಸಿವೆ.