Categories
ಹಾಸನ

ರೈಲ್ವೆ ಹಳಿ ಮೇಲೆ ಉರುಳಿದ ಬಂಡೆಗಳು!

ರೈಲ್ವೆ ಹಳಿ ಮೇಲೆ ಉರುಳಿದ ಬಂಡೆಗಳು!
– ಹಾಸನ-ಮಂಗಳೂರು ರೈಲು ಮಾರ್ಗದಲ್ಲಿ ಮತ್ತೆ ಭೂಕುಸಿತ
– ರೈಲು ಸಂಚಾರ ಸ್ಥಗಿತ: ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ
– ಮತ್ತೆ ಮತ್ತೆ ಘಟನೆ: ಪ್ರಕೃತಿಯ ಎಚ್ಚರಿಕೆ ಕರೆಗಂಟೆ

NAMMUR EXPRESS NEWS
ಸಕಲೇಶಪುರ: ರೈಲ್ವೆ ಹಳಿ ಮೇಲೆ ಮತ್ತೆ ಭಾರಿ ಪ್ರಮಾಣದಲ್ಲಿ ಮಣ್ಣು ಕುಸಿತವಾಗಿದ್ದು ಮರಗಳ ಸಮೇತವಾಗಿ ರೈಲ್ವೆ ಹಳಿ ಮೇಲೆ ಮಣ್ಣು ಕುಸಿದಿರುವ ಘಟನೆ ತಾಲೂಕಿನ ಬಾಳ್ಳುಪೇಟೆ ಸಮೀಪ ಕಿಲೋಮೀಟರ್ ಸಂಖ್ಯೆ 42/43 ರ ಮಧ್ಯೆ ನಡೆದಿದ್ದು ಇದರಿಂದ ಹಾಸನ- ಮಂಗಳೂರು ಮಾರ್ಗದ ರೈಲುಗಳ ಸಂಚಾರ
ಸ್ಥಗಿತವಾಗಿದೆ.
ಶುಕ್ರವಾರ (ಆಗಸ್ಟ್ 9) ಮಧ್ಯರಾತ್ರಿ ಈ ಘಟನೆ ನಡೆದಿದ್ದು ಹಾಸನದಿಂದ ಮಂಗಳೂರಿಗೆ, ಮಂಗಳೂರಿನಿಂದ ಹಾಸನಕ್ಕೆ ತೆರಳುತ್ತಿದ್ದ ರೈಲುಗಳ ಸಂಚಾರ ಸ್ಥಗಿತವಾಗಿದೆ.
ಸಕಲೇಶಪುರ, ಯಡಕುಮಾರಿ, ಶಿರವಾಗಿಲು, ಆಲೂರು ಸೇರಿ ಆರು ಕಡೆ ಆರು ರೈಲುಗಳು ನಿಂತಿವೆ. ದಿಢೀ‌ರ್ ರೈಲುಗಳು ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರು ಪರದಾಡುವಂತಾಗಿದೆ. ರೈಲುಗಳಲ್ಲಿ ಸಾವಿರಾರು ಪ್ರಯಾಣಿಕರು ಇದ್ದು ಪರ್ಯಾಯ ವಾಹನ ವ್ಯವಸ್ಥೆ ಮಾಡಲಾಯಿತು.ಮಣ್ಣು ತೆರವು ಕಾರ್ಯಾಚರಣೆ ಇದೀಗ ಆರಂಭಿಸಲಾಗಿದೆ.
ಕಳೆದ ರಾತ್ರಿ ಮಂಗಳೂರಿನತ್ತ ಪ್ರಯಾಣಿಸುತ್ತಿದ್ದ ರೈಲು ಪ್ರಯಾಣಿಕರು ದೊಡ್ಡ ದುರಂತದಿಂದ ಪಾರಾಗಿದ್ದಾರೆ., ಹಳಿಗಳ ಮೇಲೆ ಬಿದ್ದ ದೊಡ್ಡ ದೊಡ್ಡ ಬಂಡೆ ಕಲ್ಲುಗಳ ತೆರವುಗೊಳಿಸಿದ್ದಾರೆ. ರೈಲ್ವೇ ಇಲಾಖೆಯ ಈ ಕೆಲಸದಲ್ಲಿ ಸತತವಾಗಿ ನಿರಂತರ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಕಾರ್ಮಿಕರಿಗೆ , ಸಿಬ್ಬಂದಿಗಳಿಗೆ ಅಧಿಕಾರಿಗಳಿಗೆ , ತೆರೆಮರೆಯಲ್ಲಿ ಸಹಾಯ ಮಾಡಿದವರಿಗೆ ಪ್ರಯಾಣಿಕರು ಧನ್ಯವಾದ ಅರ್ಪಿಸಿದ್ದಾರೆ.

Categories
ತೀರ್ಥಹಳ್ಳಿ

ಅರಣ್ಯ ಒತ್ತುವರಿ ಇನ್ನು ಸಲೀಸಲ್ಲ: ಒತ್ತುವರಿ ಖಚಿತ!

ಅರಣ್ಯ ಒತ್ತುವರಿ ಇನ್ನು ಸಲೀಸಲ್ಲ: ಒತ್ತುವರಿ ಖಚಿತ!
– ತೀರ್ಥಹಳ್ಳಿ ಭಾರತಿಪುರ ಬಳಿ ರೆಸಾರ್ಟ್ ಒತ್ತುವರಿ ಜಾಗ ತೆರವು
– ಆಗುಂಬೆ, ಆಯನೂರು, ಮೇಗರವಳ್ಳಿ, ಕುರುವಳ್ಳಿ ಭಾಗದಲ್ಲೂ ತೆರವು
– ಗ್ರಾಮ ಮಟ್ಟದಲ್ಲಿ ಅಕ್ರಮ ತೆರವು ಶುರು?

NAMMUR EXPRESS NEWS
ತೀರ್ಥಹಳ್ಳಿ: ಅಕ್ರಮ ಒತ್ತುವರಿ ತೆರವು ಮುಂದಾಗಿರುವ ಅರಣ್ಯ ಇಲಾಖೆ ಅಧಿಕಾರಿಗಳು ತೀರ್ಥಹಳ್ಳಿ ತಾಲೂಕಿನ ಭಾರತೀಪುರದ ತುಂಗಾ ನದಿ ದಡದಲ್ಲಿರುವ ವಿಹಂಗಮ ಹಾಲಿಡೇ ರೆಸಾರ್ಟ್ ಎಂಬ ಖಾಸಗಿ ರೆಸಾರ್ಟ್ ಸೇರಿದ ಅಂದಾಜು 2.20 ಎಕರೆ ಅಕ್ರಮ ಒತ್ತುವರಿಯನ್ನು ತೆರವುಗೊಳಿಸಿದ್ದಾರೆ. ಇದಲ್ಲದೆ ಹತ್ತಾರು ರೆಸಾರ್ಟ್ ಹಾಗೂ ಹೋಂ ಸ್ಟೇಗಳಿಗೆ ನೋಟಿಸ್ ನೀಡಲಾಗಿದೆ.
ಭಾರತೀಪುರ ಕಿರು ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಕಲ್ಲುಕಂಬ ತಂತಿ ಬೇಲಿ ನಿರ್ಮಿಸಿ ಅಡಿಕೆ ಕಾಫಿ ಇನ್ನಿತರೆ ಬೆಳೆ ಬೆಳೆದಿದ್ದು, ಅಲ್ಲದೆ ಮನೆ ಮತ್ತು ಇತರೆ ಕಟ್ಟಡಗಳನ್ನು ನಿರ್ಮಿಸಿ ಕಾನೂನು ಬಾಹಿರ ಒತ್ತುವರಿ ಮಾಡಿಕೊಂಡಿದ್ದರು. ಡಿಸಿಎಫ್‌ಒ ನೇತೃತ್ವದಲ್ಲಿ ವಿಹಂಗಮ ಹಾಲಿಡೇ ರೆಸಾರ್ಟ್ ಪ್ರದೇಶದ ಅಂದಾಜು 2.20 ಎಕರೆ ಅಕ್ರಮ ಒತ್ತುವರಿಯನ್ನು ಅರಣ್ಯ ಇಲಾಖೆ ತೆರವುಗೊಳಿಸಿದೆ.

ಆಗುಂಬೆ ವಲಯದಲ್ಲಿ ಒತ್ತುವರಿ ತೆರವು ಶುರುವಾಗಿದೆ

ಆಗುಂಬೆ ವಲಯಾರಣ್ಯ ವ್ಯಾಪ್ತಿಯ ಆಲಗೇರಿ, ಬಿದರಗೋಡು ಗ್ರಾಮದಲ್ಲಿ ಒಟ್ಟು 2 ಪ್ರಕರಣದ 13.24 ಎಕರೆ, ಮಂಡಗದ್ದೆ ವಲಯಾರಣ್ಯ ವ್ಯಾಪ್ತಿಯ ಕುಡುವಳ್ಳಿ ಗ್ರಾಮದ 6 ಎಕರೆ, ತೀರ್ಥಹಳ್ಳಿ ವಲಯಾರಣ್ಯ ವ್ಯಾಪ್ತಿಯ ಭಾರತೀಪುರ, ಮೇಲಿನಕುರುವಳ್ಳಿ ಗ್ರಾಮದ 3 ಸ್ಥಳದಲ್ಲಿ ಒಟ್ಟು 7.20 ಎಕರೆ, ಆಯನೂರು ವಲಯಾರಣ್ಯ ವ್ಯಾಪ್ತಿಯ ಗುಂಡಿಚಟ್ನಳ್ಳಿ ಗ್ರಾಮದ 2 ಎಕರೆ ಒತ್ತುವರಿಯನ್ನು ಅರಣ್ಯ ಇಲಾಖೆ ತೆರವುಗೊಳಿಸಿದೆ.

Categories
ಬೆಂಗಳೂರು

ಮಲೇಷ್ಯಾದಲ್ಲಿ ಕಿಮ್ಮನೆಗೆ ಪ್ರತಿಷ್ಠಿತ ಅವಾರ್ಡ್!

ಮಲೇಷ್ಯಾದಲ್ಲಿ ಕಿಮ್ಮನೆಗೆ ಪ್ರತಿಷ್ಠಿತ ಅವಾರ್ಡ್!
– ಮಲೇಷ್ಯಾ-ಇಂಡಿಯಾ ಇಂಟರ್ನ್ಯಾಷನಲ್ ಐಕಾನಿಕ್ ಅವಾರ್ಡ್
– ಇನ್ನಷ್ಟು ಜನ ಸೇವೆಗೆ ಪ್ರೇರಣೆ ನೀಡಿದೆ: ಕಿಮ್ಮನೆ ರತ್ನಾಕರ್

NAMMUR EXPRESS NEWS
ಬೆಂಗಳೂರು: ಕರ್ನಾಟಕದ ಪ್ರತಿಷ್ಠಿತ ಸುದ್ದಿ ವಾಹಿನಿ ಏಷ್ಯಾನೆಟ್ ಸುವರ್ಣನ್ಯೂಸ್ ಹಾಗೂ ದಿನಪತ್ರಿಕೆ ಕನ್ನಡಪ್ರಭ ಸಂಸ್ಥೆಯ ಪ್ರಾಯೋಜಕತ್ವದಲ್ಲಿ 2024-25 ಸಾಲಿನ ಕರುನಾಡಿನ ಸಾಧಕರಿಗೆ “ಮಲೇಷ್ಯಾ-ಇಂಡಿಯಾ ಇಂಟರ್ನ್ಯಾಷನಲ್ ಐಕಾನಿಕ್ ಅವಾರ್ಡ್ 2024 ಮಾಜಿ ಸಚಿವ, ಮಾಜಿ ಶಾಸಕರು ಆದ ಕಿಮ್ಮನೆ ರತ್ನಾಕರ್ ಅವರಿಗೆ ಲಭಿಸಿದ್ದು ಮಲೇಷಿಯಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶುಕ್ರವಾರ ಪ್ರದಾನ ಮಾಡಲಾಯಿತು.
ಕಿಮ್ಮನೆ ರತ್ನಾಕರ್ ಅವರು ನಾಡಿನ ರಾಜಕೀಯ ಕ್ಷೇತ್ರದಲ್ಲಿನ ನಿಮ್ಮ ಸಾಧನೆಯನ್ನು ಗುರುತಿಸಿ “ಮಲೇಷ್ಯಾ-ಇಂಡಿಯಾ ಇಂಟರ್ನ್ಯಾಷನಲ್ ಐಕಾನಿಕ್ ಅವಾರ್ಡ್ 2024” ಪುರಸ್ಕಾರ ನೀಡಿ ಗೌರವಿಸಲಾಯಿತು.
ಕಿಮ್ಮನೆ ರತ್ನಾಕರ್ ರಾಜ್ಯ ಕಂಡ ಅಪರೂಪದ ರಾಜಕೀಯ ನಾಯಕರು. ತೀರ್ಥಹಳ್ಳಿ ಕ್ಷೇತ್ರದ ಶಾಸಕರಾಗಿ, ಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸಿದವರು. ತಮ್ಮ ಸೇವೆ, ಪ್ರಾಮಾಣಿಕ ವ್ಯಕ್ತಿತ್ವ ಇಂದಿನ ರಾಜಕಾರಣಿಗಳಿಗೆ ಮಾದರಿ. ಈಗ ಈ ಹಿಂದೆ ಅವರಿಗೆ ವಿವಿಧ ಮಾಧ್ಯಮ ಸಂಸ್ಥೆಗಳ ಪ್ರಶಸ್ತಿ ಲಭಿಸಿದ್ದವು. ಇದೀಗ ನಾಡಿನ ಹೆಮ್ಮೆಯ ಮಾಧ್ಯಮ ಸಂಸ್ಥೆ ಏಷ್ಯಾನೆಟ್ ಸುವರ್ಣನ್ಯೂಸ್ ಹಾಗೂ ದಿನಪತ್ರಿಕೆ ಕನ್ನಡಪ್ರಭ ತನ್ನ ಪ್ರಶಸ್ತಿ ನೀಡಿ ಗೌರವಿಸಿದೆ.
ನಮ್ಮೂರ್ ಎಕ್ಸ್ ಪ್ರೆಸ್ ಜತೆ ಮಾತನಾಡಿದ ಕಿಮ್ಮನೆ ರತ್ನಾಕರ್, ಪ್ರಶಸ್ತಿ ನನ್ನ ಜವಾಬ್ದಾರಿ ಹೆಚ್ಚಿಸಿದೆ. ಇನ್ನಷ್ಟು ಜನ ಸೇವೆಗೆ ಪ್ರೇರಣೆ ನೀಡಿದೆ ಎಂದಿದ್ದಾರೆ.

Categories
ಶಿವಮೊಗ್ಗ

ಅರಣ್ಯ ಒತ್ತುವರಿ ತೆರವು ಶುರು!

ಅರಣ್ಯ ಒತ್ತುವರಿ ತೆರವು ಶುರು!
– ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯಲ್ಲಿ ನೋಟಿಸ್
– ಒತ್ತುವರಿ ಬಡಾವಣೆ, ತೋಟ, ಹೋಂ ಸ್ಟೇ, ರೆಸಾರ್ಟ್ ಖುಲ್ಲಾ?

NAMMUR EXPRESS NEWS
ಶಿವಮೊಗ್ಗ/ಚಿಕ್ಕಮಗಳೂರು: ರಾಜ್ಯದಲ್ಲಿ ಅಕ್ರಮವಾಗಿ ಅರಣ್ಯ ಒತ್ತುವರಿ ಮಾಡಿದವರಿಗೆ ಇದೀಗ ಸಂಕಷ್ಟ ಎದುರಾಗಿದೆ. ಒತ್ತುವರಿ ಕಾರಣದಿಂದ ಪ್ರಕೃತಿ ವಿಕೋಪ ಎಂದ ಸರ್ಕಾರ ಇದೀಗ ಅಕ್ರಮ ಒತ್ತುವರಿ ವಿರುದ್ಧ ಸಮರ ಸಾರಿದೆ.
ಚಿಕ್ಕಮಗಳೂರು ಜಿಲ್ಲೆ ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಈಗಾಗಲೇ ನೂರಾರು ಎಕರೆ ಅರಣ್ಯ ಭೂಮಿ ಒತ್ತುವರಿ ತೆರವು ಮಾಡಲಾಗಿದೆ. ಇನ್ನು ಅನೇಕರಿಗೆ ನೋಟೀಸ್ ನೀಡಲಾಗಿದೆ.
ಪಶ್ಚಿಮ ಘಟ್ಟದ ಎಲ್ಲ ಗಿರಿ ಪ್ರದೇಶಗಳಲ್ಲಿ ಅನಧಿಕೃತವಾಗಿ ಮತ್ತು ಅರಣ್ಯ ಪ್ರದೇಶ ಒತ್ತುವರಿ ಮಾಡಿ ನಿರ್ಮಿಸಲಾಗಿರುವ ಬಡಾವಣೆ, ತೋಟ, ಹೋಂ ಸ್ಟೇ ಮತ್ತು ರೆಸಾರ್ಟ್ ಗಳ ವಿರುದ್ಧ ಕ್ರಮ ಕೈಗೊಳ್ಳಲು, ಮತ್ತು ಅರಣ್ಯ ಒತ್ತುವರಿಯನ್ನು ತಕ್ಷಣದಿಂದಲೇ ತೆರವುಗೊಳಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ.
ತೀರ್ಥಹಳ್ಳಿ, ಕೊಪ್ಪ, ಶೃಂಗೇರಿ, ಚಿಕ್ಕಮಗಳೂರು ಭಾಗದಲ್ಲಿ ಕಾರ್ಯಾಚರಣೆ ಶುರುವಾಗಿದೆ.

Categories
ಶಿವಮೊಗ್ಗ

ಶಿವಮೊಗ್ಗ ಜಿಲ್ಲಾ ಒಕ್ಕಲಿಗರ ಸಂಘಕ್ಕೆ ಆ.11ಕ್ಕೆ ಚುನಾವಣೆ

ಶಿವಮೊಗ್ಗ ಜಿಲ್ಲಾ ಒಕ್ಕಲಿಗರ ಸಂಘಕ್ಕೆ ಆ.11ಕ್ಕೆ ಚುನಾವಣೆ
– ಅನೇಕ ಅಭ್ಯರ್ಥಿಗಳ ಸ್ಪರ್ಧೆ: ಮಾಜಿ ಅಧ್ಯಕ್ಷರ ಸ್ಪರ್ಧೆ
– ಬಂಡೆ ವೆಂಕಟೇಶ್, ತಾಯಿಮನೆ ಸುದರ್ಶನ್ ಗೆಲ್ಲುವ ವಿಶ್ವಾಸ

NAMMUR EXPRESS NEWS
ತೀರ್ಥಹಳ್ಳಿ: ಶಿವಮೊಗ್ಗ ಜಿಲ್ಲಾ ಒಕ್ಕಲಿಗರ ಸಂಘಕ್ಕೆ ಆ.11ಕ್ಕೆ ಚುನಾವಣೆ ನಡೆಯಲಿದೆ.
ಶಿವಮೊಗ್ಗ ಜಿಲ್ಲಾ ಒಕ್ಕಲಿಗರ ಸಂಘದ ಕಾರ್ಯಕಾರಿ ಸಮಿತಿ ಚುನಾವಣೆಯಲ್ಲಿ ನಿರ್ದೇಶಕ ಸ್ಥಾನಕ್ಕೆ ಅನೇಕ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದಾರೆ.
* ಕಡಿದಾಳ್ ಗೋಪಾಲ್
ಮೊ . 9845537070
* ಹೆಚ್.ಬಿ.ಆದಿಮೂರ್ತಿ
ಮೊ. 9480829593
* ಬಿ.ಎ.ರಮೇಶ್ ಹೆಗ್ಡೆ
ಮಾಜಿ ನಗರಸಭಾ ಅಧ್ಯಕ್ಷರು ಹಾಗೂ ಮಹಾನಗರ ಪಾಲಿಕೆ ಸದಸ್ಯರು, ಶಿವಮೊಗ್ಗ
ಮೊ . 9448257999
* ಉಂಬಳೇಬೈಲು ಮೋಹನ್
ಮೊ. 9980584569
* ಅಶಿತ್ ಬಿ.ಎಸ್‌.
ಕೋಂ. ಬಳಗಟ್ಟೆ ಶ್ಯಾಮಯ್ಯ
ಮೊ. 9448105166
* ಎಂ.ಎ.ರಮೇಶ್ ಹೆಗ್ಡೆ
ಮೊ . 9900213777
* ಎನ್.ಹೆಚ್.ನಾಗರಾಜ್‌ ನೀರುಳ್ಳಿ
ಮೊ . 9449783101
* ಕೆ.ಪಿ.ಪುಟ್ಟಸ್ವಾಮಿ (ಕೀಗಡಿ)
ಮೊ . 9449230384
* ಎಂ.ಬಿ.ಲಕ್ಷ್ಮಣಗೌಡ
ಮೊ . 9686444623
* ಕೆ.ವಿ.ಸುಂದರೇಶ್ ಲಕ್ಕಿನಕೊಪ್ಪ
ಮೊ. 9113576614
* ಚೇತನ್ ಕೆ.
ಮೊ. 9845344563
* ಯು.ಡಿ.ವೆಂಕಟೇಶ್ (ಬಂಡೆ)
ಮೊ. 9448238540
* ಕೆ.ವಿ.ವಿಷ್ಣುಮೂರ್ತಿ
ಮೊ . 9448024917
* ಹೆಚ್.ಎನ್.ಸುಧಾಕರ
ನಿವೃತ್ತ ಪ್ರಾಧ್ಯಾಪಕರು, ಡಿ.ವಿ.ಎಸ್.
ಮೊ. 9449390818
* ರಮೇಶ್ ಬಿ. ನಾಯಕ್
ಮೊ . 9448135408
* ಎಸ್.ಎಂ.ರಮೇಶ್
ಮೊ. 9880567108
* ದೇವೇಂದ್ರ ಎಸ್.ಎಂ.
ಮೊ . 9845972673
* ಸುದರ್ಶನ್ ಹೆಚ್.ಪಿ. (ತಾಯಿಮನೆ)
ಮೊ . 9483473482
* ಜಿ.ಡಿ.ಸುಮಿತ್ರ ಕೇಶವಮೂರ್ತಿ
ಮೊ. 9448912789
* ಬಿ.ಭಾರತಿ ರಾಮಕೃಷ್ಣ
ಮೊ. 9448739042
* ಕೆ.ಎಸ್.ಪ್ರತಿಮ ಡಾಕಪ್ಪ
ಮೊ. 9448024926
ಸ್ಪರ್ಧೆ ಮಾಡಿದ್ದಾರೆ.

ವಿಶೇಷ ಸೂಚನೆ : ಒಬ್ಬರು 18 ಸಾಮಾನ್ಯ 3 ಮಹಿಳಾ ಮೀಸಲು ಸೇರಿ 21 ಮತಗಳನ್ನು ಚಲಾಯಿಸಬಹುದು. “ಮತದಾನಕ್ಕೆ ಸಂಘದ ಗುರುತಿನ ಚೀಟಿ ಕಡ್ಡಾಯ.”
ನಿಮ್ಮೆಲ್ಲರನ್ನೂ ಸಮಯದ ಅಭಾವದಿಂದ ಖುದ್ದಾಗಿ ಭೇಟಿ ಮಾಡಲು ಸಾಧ್ಯವಾಗದಿದ್ದಲ್ಲಿ ಈ ಪತ್ರವನ್ನೇ ನಮ್ಮ ವೈಯುಕ್ತಿಕ ಭೇಟಿ ಎಂದು ಪರಿಗಣಿಸಿ, ತಮ್ಮ ಅಮೂಲ್ಯವಾದ ಮತಗಳನ್ನು ನೀಡುವುದರ ಮೂಲಕ ಆಯ್ಕೆ ಮಾಡಿ ಸಂಘ ಹಾಗೂ ಸಮಾಜದ ಶ್ರೇಯೋಭಿವೃದ್ಧಿಗೆ ಶ್ರಮಿಸಲು ಅವಕಾಶ ಕಲ್ಪಿಸಿಕೊಡಬೇಕಾಗಿ ತಮ್ಮಲ್ಲಿ ವಿನಯ ಪೂರ್ವಕವಾಗಿ ವಿನಂತಿಸಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

Categories
ತೀರ್ಥಹಳ್ಳಿ

ತೀರ್ಥಹಳ್ಳಿ: ರಸ್ತೆ ಅವ್ಯವಸ್ಥೆ ಕೇಳೋರು ಯಾರು?

ತೀರ್ಥಹಳ್ಳಿ: ರಸ್ತೆ ಅವ್ಯವಸ್ಥೆ ಕೇಳೋರು ಯಾರು?
– ಮಹಿಷಿ-ಹೆದ್ದೂರು ಸಂಪರ್ಕ ರಸ್ತೆ ಕೆಸರುಮಯ
– ಕಳಪೆ ರಸ್ತೆ ಮಾಡಿ ಹಲವೆಡೆ ರಸ್ತೆ ಕುಸಿತ
– ಜನ ನಾಯಕರು, ಅಧಿಕಾರಿಗಳ ಜಾಣ ಕುರುಡು!

NAMMUR EXPRESS NEWS
ನಾವಿಂದು ಸಾಧಾರಣ ರಸ್ತೆಗಳಿಂದ ಶುರುವಾಗಿ, ಹೆದ್ದಾರಿ, ರಾಷ್ಟ್ರೀಯ ಹೆದ್ದಾರಿ, ದ್ವಿಪಥ, ಚತುಷ್ಪಥ ಹೀಗೆ ಹಲವು ವಿಭಾಗಗಳಾಗಿ ವಿಂಗಡಿಸುವಷ್ಟು ಮುಂದೆ ಬಂದಿದ್ದೇವೆ, ಆದರೂ ಸಹ ಹಳ್ಳಿಗಳ ರಸ್ತೆ ದುರಸ್ತಿ ಬಗೆಗೆ ಆಸಕ್ತಿ ವಹಿಸದಿರುವುದು ದುಃಖದ ಸಂಗತಿ. ಇಂದು ಎಷ್ಟೋ ಹಳ್ಳಿಗಳಲ್ಲಿ ಜನ ಸರಿಯಾದ ರಸ್ತೆ ಸಂಪರ್ಕವಿಲ್ಲದೆ ಬದುಕುತ್ತಿದ್ದಾರೆ. ಮಳೆಗಾಲದಲ್ಲಿ ಈ ರಸ್ತೆಗಳು ಇನ್ನಷ್ಟು ಹದಗೆಟ್ಟಿರುತ್ತವೆ. ಹೊಂಡ ಬಿದ್ದ ರಸ್ತೆಗಳು ಮಳೆಗಾಲದಲ್ಲಿ ನೀರು ತುಂಬಿ ನಿಂತಿರುತ್ತವೆ, ವಾಹನ ಚಾಲಕರಿಗಷ್ಟೇ ಅಲ್ಲದೆ, ಪಾದಚಾರಿಗಳಿಗೂ ಸಹ ಓಡಾಡಲು ಕಷ್ಟವಾಗುತ್ತದೆ.
ಹೌದು. ತೀರ್ಥಹಳ್ಳಿ ತಾಲೂಕಿನ ಹಲವೆಡೆ ರಸ್ತೆ ಅವ್ಯವಸ್ಥೆ ಇದೀಗ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಇದಕ್ಕೆ ಒಂದು ಉದಾಹರಣೆ ಮಹಿಷಿ ಮತ್ತು ಹೆದ್ದೂರು ಸಂಪರ್ಕ ರಸ್ತೆ. ಕೋಟಿ ಕೋಟಿ ವೆಚ್ಚ ಮಾಡಿ ಹೊಸ ಸೇತುವೆ ಮಾಡಿದರೂ ರಸ್ತೆ ಮಾಡಿಲ್ಲ. ಇದರಿಂದ ಪ್ರತಿ ದಿನ ಸಾವಿರಾರು ಜನರಿಗೆ ತೊಂದರೆಯಾಗಿದೆ.

ಹಳ್ಳಿ ಹಳ್ಳಿಯಲ್ಲೂ ರಸ್ತೆ ಸಮಸ್ಯೆ

ಮಳೆಗಾಲದಲ್ಲಿ ಜಾರುವ ರಸ್ತೆಗಳು ಇನ್ನಷ್ಟು ಸಮಸ್ಯೆಗೆ ಎಡೆಮಾಡುತ್ತವೆ. ಹಳೆಯ ಡಾಂಬರು ರಸ್ತೆ ಕಿತ್ತು ಹೋಗಿ ಅದಕ್ಕೆ ಬಳಸಿದ ಜಲ್ಲಿಕಲ್ಲುಗಳು ರಸ್ತೆಯಲ್ಲಿ ಕಾಯುತ್ತ ಕುಳಿತ ಯಮನಂತೆ ಭಾಸವಾಗುತ್ತದೆ. ಇನ್ನು ಸರ್ಕಾರದಿಂದ ಬರುವ ಆದಾಯ ಕಡಿಮೆ ಆಗಿ ಎಷ್ಟೋ ರಸ್ತೆ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ, ಅದು ಮುಂದು ವರೆಯುವುದರೊಳಗಾಗಿ ಮೊದಲ ಅರ್ಧ ಹಾಳಾಗಿರುತ್ತದೆ ಇದು ಹಳ್ಳಿ ರಸ್ತೆಗಳ ಸಮಸ್ಯೆ. ಇನ್ನು ಸಣ್ಣ ಮಟ್ಟದ ವಾಹನ ಓಡಾಟದ ಪ್ರದೇಶಗಳಲ್ಲಿ ಮಳೆಗಾಲದಲ್ಲಿ ಮರ ಮುರಿದು ಬಿದ್ದು ಆ ಸಮಸ್ಯೆ ಬಗೆಹರಿಸಲು ಹೆಚ್ಚು ಸಮಯ ತೆಗೆದು ಕೊಳ್ಳುತ್ತವೆ. ಆಗ ಪರ್ಯಾಯ ರಸ್ತೆ ಹುಡುಕಿಕೊಳ್ಳುವ ಸಮಸ್ಯೆ ಪ್ರಯಾಣಿಕರಿಗೆ ಬಂದೊದಗುತ್ತದೆ. ಆದರೆ ನಗರಪ್ರದೇಶಗಳಲ್ಲಿ ಪಾದಚಾರಿಗಳು ರಸ್ತೆ ಮೇಲೆ ನಡೆಯಲು ಭಯಪಡುವ ಸಂದರ್ಭ ಬಂದೊದಗಿದೆ.

Categories
Uncategorized

ಭೀಕರ ವಿಮಾನ ದುರಂತಕ್ಕೆ 70 ಮಂದಿ ಬಲಿ!

ಭೀಕರ ವಿಮಾನ ದುರಂತಕ್ಕೆ 70 ಮಂದಿ ಬಲಿ!
– ಭೂಮಿಗೆ ಅಪ್ಪಳಿಸುತ್ತಲೇ ವಿಮಾನಕ್ಕೆ ಬೆಂಕಿ
– ಬ್ರೆಜಿಲ್‌ನಲ್ಲಿ ಭೀಕರ ವಿಮಾನ ದುರಂತ

NAMMUR EXPRESS NEWS
ಬ್ರೆಸಿಲಿಯಾ: ಬ್ರೆಜಿಲ್‌ನಲ್ಲಿ ಭೀಕರ ವಿಮಾನ ದುರಂತ ಸಂಭವಿಸಿದೆ. 62 ಪ್ರಯಾಣಿಕರು ಸೇರಿ ಒಟ್ಟು 70 ಜನರಿದ್ದ ವಿಮಾನವು ಬ್ರೆಜಿಲ್‌ನ ಸಾವೋ ಪೌಲೋದಲ್ಲಿ ಪತನಗೊಂಡಿದ್ದು , ಭೂಮಿಗೆ ಅಪ್ಪಳಿಸುತ್ತಲೇ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡಿದೆ. ಪತನಗೊಂಡ ಕೆಲವೇ ಸೆಕೆಂಡ್‌ಗಳಲ್ಲಿ ಭೀಕರವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಸುತ್ತಲೂ ಹೊಗೆ ಆವರಿಸಿದೆ. ಇದರಿಂದಾಗಿ ವಿಮಾನದಲ್ಲಿದ್ದ ಎಲ್ಲ 70 ಜನರೂ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ ಎಂಬುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಕಾಸ್ಕಾವೆಲ್‌ನಿಂದ ಗುವಾರುಲ್ಹೋಸ್‌ ಏರ್‌ಪೋರ್ಟ್‌ಗೆ ತೆರಳುತ್ತಿದ್ದ ವೇಳೆ ಸಾವೋ ಪೌಲೋ ರಾಜ್ಯದ ವಿನ್ಹೇಡೋ ಎಂಬ ಪ್ರದೇಶದಲ್ಲಿ ವಿಮಾನವು ಪತನಗೊಂಡಿದೆ. ಅದೃಷ್ಟವಶಾತ್‌, ವಿಮಾನವು ಜನವಸತಿ ಪ್ರದೇಶದಲ್ಲಿ ಪತನಗೊಂಡಿಲ್ಲ. ಆದರೂ, ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರು ಪತನಗೊಂಡ ಬಳಿಕ ಹೊತ್ತಿಕೊಂಡ ಬೆಂಕಿಯಲ್ಲಿ ಸುಟ್ಟು ಕರಕಲಾಗಿದ್ದಾರೆ ಎಂಬುದಾಗಿ ಮಾಹಿತಿ ಲಭ್ಯವಾಗಿದೆ. ಬ್ರೆಜಿಲ್‌ನಲ್ಲಿಯೇ ಇದು ಇತ್ತೀಚೆಗೆ ಸಂಭವಿಸಿದ ಭೀಕರ ವಿಮಾನ ದುರಂತ ಎಂದು ತಿಳಿದುಬಂದಿದೆ. ವಿಮಾನದಲ್ಲಿ 62 ಪ್ರಯಾಣಿಕರು ಹಾಗೂ 8 ವಿಮಾನದ ಸಿಬ್ಬಂದಿ ಇದ್ದರು. ವಿಮಾನ ಹಾರಾಟ ನಡೆಸುತ್ತಿರುವಾಗಲೇ ನಿಯಂತ್ರಣ ತಪ್ಪಿದೆ. ಅದು ಬೀಳುವ ಮುನ್ನ ಬೆಂಕಿ ಕಾಣಿಸಿಕೊಂಡಿರಲಿಲ್ಲ. ಭೂಮಿಗೆ ಅಪ್ಪಳಿಸಿದ ರಭಸಕ್ಕೆ ಕೆಲವೇ ಕ್ಷಣಗಳಲ್ಲಿ ಬೆಂಕಿ ಹೊತ್ತಿಕೊಂಡಿದೆ. ಸ್ಥಳಕ್ಕೆ ಭದ್ರತಾ ಸಿಬ್ಬಂದಿ, ಅಗ್ನಿಶಾಮಕ ಸಿಬ್ಬಂದಿ ಆಗಮಿಸುವ ವೇಳೆಗೆ ಎಲ್ಲ ಪ್ರಯಾಣಿಕರು ಮೃತಪಟ್ಟಿದ್ದರು ಎನ್ನಲಾಗಿದೆ. ವಿಮಾನ ಪತನವಾಗುವ ಭೀಕರ ವಿಡಿಯೊಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ವಿಮಾನದ ಅವಶೇಷಗಳಿಂದ ಶವಗಳನ್ನು ಹೊರತೆಗೆಯಲಾಗುತ್ತಿದೆ. ಮೃತಪಟ್ಟವರ ಗುರುತು ಪತ್ತೆ ಹಚ್ಚಲಾಗುತ್ತಿದೆ. ಅಗ್ನಿಶಾಮಕ ಸಿಬ್ಬಂದಿಯು ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ. ಶವಗಳನ್ನು ಸಾಗಿಸಲು ಆಂಬುಲೆನ್ಸ್‌ ವ್ಯವಸ್ಥೆ ಮಾಡಲಾಗಿದೆ ಎಂಬುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಇದುವರೆಗೆ, ವಿಮಾನ ಪತನಕ್ಕೆ ನಿಖರ ಕಾರಣ ಏನು ಎಂಬುದು ಗೊತ್ತಾಗಿಲ್ಲ. ಆದಾಗ್ಯೂ, ಪ್ರಕರಣವನ್ನು ಸರ್ಕಾರವು ತನಿಖೆಗೆ ಆದೇಶಿಸಿದೆ.

Categories
ಚಿಕ್ಕಮಗಳೂರು

ಶೃಂಗೇರಿ: ಕೃಷಿಕನ ಮೇಲೆ ಕರಡಿ ದಾಳಿ!

ಶೃಂಗೇರಿ: ಕೃಷಿಕನ ಮೇಲೆ ಕರಡಿ ದಾಳಿ!
– ತೋಟದಲ್ಲಿ ಔಷಧಿ ಹೊಡೆಯುವಾಗ ಘಟನೆ
– ಕಾಡಿನೊಳಗೆ ಕರಡಿ ಕಣ್ಮರೆ: ಜನರಲ್ಲಿ ಆತಂಕ

NAMMUR EXPRESS NEWS
ಶೃಂಗೇರಿ: ಕೃಷಿಕನ ಮೇಲೆ ಕರಡಿ ದಾಳಿ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಮರ್ಕಲ್ ಗ್ರಾಮ ಪಂಚಾಯಿತಿಯ ಮಾಗೋಡಿನಲ್ಲಿ ನಡೆದಿದೆ. ಸುರೇಂದ್ರ ಕರಡಿ ದಾಳಿಗೊಳಗಾದ ಕೃಷಿಕ. ಮಧ್ಯಾಹ್ನ ತೋಟದಲ್ಲಿ ಕಾಳುಮೆಣಸಿನ ಬೋರ್ಡೋ ದ್ರಾವಣ ಸಿಂಪಡಿಸುತ್ತಿದ್ದಾಗ ಕರಡಿ ಏಕಾಏಕಿ ದಾಳಿ ಮಾಡಿದೆ. ಕರಡಿಯ ದಿಢೀ‌ರ್ ದಾಳಿಯಿಂದ ಕೆಳಕ್ಕೆ ಬಿದ್ದ ಕೃಷಿಕ ಸುರೇಂದ್ರ ಅವರನ್ನು ಕಚ್ಚಿದ್ದು, ಕೂಗಿಕೊಂಡಾಗ ಮನೆಯಲ್ಲಿದ್ದ ನಾಯಿಗಳು ಕರಡಿಯನ್ನು ಅಟ್ಟಿಸಿಕೊಂಡು ಹೋಗಿದ್ದು, ಕಾಡಿನೊಳಗೆ ಕರಡಿ ಕಣ್ಮರೆಯಾಗಿದೆ.
ಕರಡಿ ದಾಳಿಯಿಂದ ಸುರೇಂದ್ರ ಅವರ ಕೈ ಕಾಲು ಹಾಗೂ ಎದೆ ಭಾಗಕ್ಕೆ ಗಾಯವಾಗಿದ್ದು, ಕೂಡಲೇ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.

Categories
ಉಡುಪಿ

ಹೆಬ್ರಿ ಬಸ್ ನಿಲ್ದಾಣದ ಬಳಿ ಎಟಿಎಂ ಇಲ್ಲ!

ಹೆಬ್ರಿ ಬಸ್ ನಿಲ್ದಾಣದ ಬಳಿ ಎಟಿಎಂ ಇಲ್ಲ!
– ಕೆಲಸಕ್ಕಾಗಿ ಬರುವ ಜನರು, ಪ್ರಯಾಣಿಕರ ಪರದಾಟ
– ಇಂಡಿಯಾ ಒನ್ ಅಥವಾ ಯಾವುದೇ ಎಟಿಎಂ ಅಳವಡಿಸಲು ಪಟ್ಟು

ವರದಿ: ರಕ್ಷಿತ್ ಕುಮಾರ ಶೆಟ್ಟಿ
ಹೆಬ್ರಿ: ಹೆಬ್ರಿ ಕರಾವಳಿ ಮತ್ತು ಮಲೆನಾಡು ಸಂಪರ್ಕದ ಊರು. ಆದರೆ ಇಲ್ಲಿ ಸಮರ್ಪಕ ಸೌಲಭ್ಯ ಇಲ್ಲದೆ ನಲುಗುತ್ತಿದೆ. ಅದರಲ್ಲಿ ಎಟಿಎಂ ಕೂಡ ಒಂದು..!
ಹೆಬ್ರಿ ಮುಖ್ಯ ಬಸ್ ನಿಲ್ದಾಣ ಬಳಿ ಯಾವುದೇ ಬ್ಯಾಂಕ್ ಎಟಿಎಂ ಇಲ್ಲ. ಇದರಿಂದ ಹೆಬ್ರಿ ತಾಲೂಕು ಜನ ಸೇರಿದಂತೆ ಇಲ್ಲಿಗೆ ಬರುವ ಪ್ರಯಾಣಿಕರು ಪರದಾಟ ನಡೆಸುವಂತಾಗಿದೆ.
ಹೆಬ್ರಿ ಗ್ರಾಮಗಳಿಗೆ ಬೇರೆ ಬೇರೆ ಗ್ರಾಮಗಳಿಂದ ಬಸ್ಸುಗಳಿಂದ ಬಂದು ಇಳಿದು ಹಣದ ಅಗತ್ಯತೆಗೆ ೨೦೦-೩೦೦ ಮೀಟರ್ ಹೊಗಬೇಕಾಗುತ್ತದೆ. ಬಸ್ಸು ನಿಲ್ದಾಣ ಹತ್ತಿರ ಇಂಡಿಯಾ ಒನ್ ಅಥವಾ ಯಾವುದೇ ಬ್ಯಾಂಕಿನ ಎಟಿಎಂ ಇದ್ದರೆ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ.
ಹೆಬ್ರಿ ತಾಲೂಕು ಕಛೇರಿ ಇದ್ದರಿಂದ ಬೇರೆ ಬೇರೆ ಗ್ರಾಮಗಳಿಂದ ಜನರು ತಮ್ಮ ಕೆಲಸಕ್ಕಾಗಿ ಬರುತ್ತಾರೆ. ಹೆಬ್ರಿ ಬಸ್ಸು ನಿಲ್ದಾಣಕ್ಕೆ ಬೇರೆ ಬೇರೆ ಗ್ರಾಮಗಳಿಗೆ ಬರುತ್ತಾರೆ. ಇಂಡಿಯಾ ಒನ್ ಎಟಿಮ್ ವಿಶೇಷತೆ ಎಂದರೆ ಬೇರೆ ಯಾವುದೇ ಬ್ಯಾಂಕಿನ ಡೆಬಿಟ್ ಕಾರ್ಡು ಉಪಯೋಗಿಸಿದರೆ ಯಾವುದೇ ರೀತಿಯ ಚಾರ್ಜುಗಳು ಇರುವುದಿಲ್ಲ. ಹೀಗಾಗಿ ಜನ ಈ ಬಗ್ಗೆ ಒತ್ತಾಯಿಸಿದ್ದಾರೆ.
ಹೆಬ್ರಿ ಗ್ರಾಮದಲ್ಲಿ ಖಾಸಗಿ ಶಾಲೆ , ಕಾಲೇಜು, ಸರಕಾರಿ ಶಾಲೆ ಕಾಲೇಜುಗಳಿವೆ, ಬ್ಯಾಂಕು, ತಾಲೂಕು ಕಛೇರಿ ಕೆಲಸಗಳಿಗಾಗಿ ಹಣಕ್ಕಾಗಿ ಅಲೆದಾಟ ಮಾಡಬೇಕಾಗುತ್ತದೆ. ಈಗ ಹೆಚ್ಚಿನ ಕಡೆಯಲ್ಲಿ ಕೆಲವು ಖಾಸಗಿ ಬ್ಯಾಂಕುಗಳಲ್ಲಿ ಹಣ ಬೇಕಾದರೆ ಡೆಬಿಟ್ ಕಾರ್ಡು, ಮತ್ತು ಚೆಕ್ ಮೂಲಕ ಹಣ ಡ್ರಾ ಮಾಡಬೇಕಾಗುತ್ತದೆ. ಆದ್ದರಿಂದ ಹೆಬ್ರಿ ಬಸ್ಸು ನಿಲ್ಲಾಣದಲ್ಲಿ ಇಂಡಿಯಾ ಒನ್ ಎಟಿಎಮ್ ಇದ್ದರೆ ಜನರಿಗೆ ಸಹಾಯ ಆಗುತ್ತದೆ ಎಂಬ ಅಗ್ರಹ ವ್ಯಕ್ತವಾಗಿದೆ.

Categories
ಶಿವಮೊಗ್ಗ

ಇಬ್ಬರು ಮಕ್ಕಳನ್ನು ಬಾವಿಗೆ ತಳ್ಳಿ ಮಹಿಳೆ ಆತ್ಮಹತ್ಯೆ!

ಇಬ್ಬರು ಮಕ್ಕಳನ್ನು ಬಾವಿಗೆ ತಳ್ಳಿ ಮಹಿಳೆ ಆತ್ಮಹತ್ಯೆ!
– ಹೊಸನಗರ ತಾಲೂಕು ಚಂಪಕಾಪುರದಲ್ಲಿ ಘಟನೆ

– ದೇಶದಲ್ಲಿ ಜಲಕಂಟಕ, ಅಗ್ನಿ ಕಂಟಕ, ವಾಯು ಕಂಟಕ ಜಾಸ್ತಿ: ಭವಿಷ್ಯ

– ಮದುವೆಗೆ ಒಪ್ಪದ ಕಾರಣ ಪ್ರೇಮಿಗಳ ಆತ್ಮಹತ್ಯೆ!

ಇಬ್ಬರು ಮಕ್ಕಳನ್ನು ಬಾವಿಗೆ ತಳ್ಳಿ ತಾನು ಹಾರಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೊಸನಗರ ತಾಲೂಕು ಮತ್ತಿಕೈ ಗ್ರಾಮ ವ್ಯಾಪ್ತಿಯ ಚಂಪಕಾಪುರದಲ್ಲಿ ಹೃದಯ ವಿದ್ರಾವಕ ಘಟನೆ ಸಂಭವಿಸಿದೆ.
ರಾಜೇಶ್‌ ಎಂಬುವವರ ಪತ್ನಿ ವಾಣಿ (32), ಮಕ್ಕಳಾದ ಸಮರ್ಥ (12), ಸಂಪದ (6) ಮೃತರು. ಗುರುವಾರ ರಾತ್ರಿ ವಾಣಿ ತನ್ನ ಇಬ್ಬರು ಮಕ್ಕಳನ್ನು ಬಾವಿಗೆ ತಳ್ಳಿ ತಾನು ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಬಾವಿಯಿಂದ ಮೃತದೇಹವನ್ನು ಮೇಲೆತ್ತಲಾಗಿದೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ನಗರ ಠಾಣೆ ಪಿಎಸ್‌ಐ ರಮೇಶ್‌ ಘಟನೆ ಸ್ಥಳಕ್ಕೆ ಭೇಟಿ ನೀಡಿದ್ದರು.

ಶ್ರಾವಣ ಮಾಸದ ಬಗ್ಗೆ ಸ್ಫೋಟಕ ಭವಿಷ್ಯ ನುಡಿದ ಕೋಡಿ ಮಠದ ಶ್ರೀ

ಚಿಕ್ಕಬಳ್ಳಾಪುರ: ದೇಶದಲ್ಲಿ ಜಲಕಂಟಕ, ಅಗ್ನಿ ಕಂಟಕ, ವಾಯು ಕಂಟಕಗಳು ಹೆಚ್ಚಾಗಲಿವೆ ಎಂದು ಕೋಡಿ ಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಕೋಡಿ ಮಠದ ಶ್ರೀಗಳು, ಶ್ರಾವಣ ಮಾಸದಲ್ಲಿ ದೇಶದಲ್ಲಿ ಅವಘಡಗಳು ಸಂಭವಿಸಲಿವೆ ಎಂದು ಆಘಾತಕಾರಿ ಭವಿಷ್ಯ ನುಡಿದಿದ್ದಾರೆ.
ಗುರುಗಳು ಶಿಷ್ಯರಾಗುತ್ತಾರೆ, ಶಿಷ್ಯರು ಗುರುಗಳಾಗುತ್ತಾರೆ. ಹೆಣ್ಣುಮಕ್ಕಳ ಪ್ರಾಬಲ್ಯ ಹೆಚ್ಚಾಗಲಿದೆ. ರಾಜ್ಯದಲ್ಲಿ ಅತಿವೃಷ್ಟಿಯಾಗುವ ಸಾಧ್ಯತೆ ಇದೆ. ಕೋಧಿನಾಮ ಸಂವತ್ಸರ ಆರಂಭವಾಗಿದ್ದು, ದೇಶದಲ್ಲಿ ಜಲ, ಅಗ್ನಿ, ವಾಯು ಕಂಟಕಗಳು ಹೆಚ್ಚಾಗಲಿವೆ ಎಂದು ತಿಳಿಸಿದ್ದಾರೆ.

ಪ್ರೇಮಿಗಳ ಆತ್ಮಹತ್ಯೆ!

ಬಾಗಲಕೋಟೆ: ಮದುವೆಗೆ ಪೋಷಕರು ವಿರೋಧಿಸಿದಕ್ಕೆ ಪ್ರೇಮಿಗಳಿಬ್ಬರು ನೇಣಿಗೆ ಶರಣಾಗಿದ್ದಾರೆ. ಬಾಗಲಕೋಟೆಯ ರಬಕವಿ-ಬನಹಟ್ಟಿ ತಾಲೂಕಿನ ನಂದಗಾಂವ ಗ್ರಾಮದಲ್ಲಿ ಘಟನೆ ನಡೆದಿದೆ.
ಸಚಿನ್ ದಳವಾಯಿ, ಪ್ರಿಯಾ ಮಡಿವಾಳರ ಮೃತ ಪ್ರೇಮಿಗಳು. ಇವರಿಬ್ಬರು ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ ಮನೆಯಲ್ಲಿ ಇವರಿಬ್ಬರ ಮದುವೆಗೆ ವಿರೋಧ ವ್ಯಕ್ತವಾಗಿತ್ತು. ಇದರಿಂದ ಮನನೊಂದು ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.