Categories
ಜ್ಯೋತಿಷ್ಯ

ಇಂದು ಶ್ರಾವಣ ಶನಿವಾರದ ರಾಶಿ ಭವಿಷ್ಯ ಹೇಗಿದೆ?

ಇಂದು ಶ್ರಾವಣ ಶನಿವಾರದ ರಾಶಿ ಭವಿಷ್ಯ ಹೇಗಿದೆ?
– ಶನಿ ದೇವನ ಕೃಪೆಯಿಂದ ಯಾವ ರಾಶಿಯವರಿಗೆ ಲಾಭ? ಯಾವ ರಾಶಿಯವರಿಗೆ ನಷ್ಟ?

NAMMUR EXPRESS NEWS
ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು?

** ಮೇಷ ರಾಶಿ :
ಮನೆಗೆ ಅತಿಥಿಗಳ ಆಗಮನದಿಂದಾಗಿ ನಿಮ್ಮ ಸಂತೋಷ ಹೆಚ್ಚಾಗುವುದು. ಇದರಿಂದಾಗಿ ನಿಮಗೆ ಲಾಭ ಹೆಚ್ಚಾಗಬಹುದು. ವ್ಯಾಪಾರ ಮಾಡುವವರು ಈ ದಿನ ತಮ್ಮ ಪಾಲದಾರರೊಂದಿಗೆ ಎಚ್ಚರಿಕೆಯಿಂದ ಇರಬೇಕು. ಇಲ್ಲದಿದ್ದರೆ ನಷ್ಟ ಉಂಟಾಗುವ ಸಾಧ್ಯತೆ ಇದೆ. ಇಂದು ನೀವು ನಿಮ್ಮ ತಾಯಿಗೆ ಉಡುಗೊರೆಯನ್ನು ಖರೀದಿಸುವಿರಿ.

** ವೃಷಭ ರಾಶಿ :
ಈ ದಿನ ಸಮಸ್ಯೆಗಳನ್ನು ಎದುರಿಸಬಹುದು. ಆದರೆ ಈ ಎಲ್ಲಾ ಸಮಸ್ಯೆಗಳ ನಡುವೆ ನಿಮ್ಮ ಸಂಬಂಧ ಉತ್ತಮವಾಗಿರುವುದು. ಸಂಜೆ ವೇಳೆಗೆ ನಿಮ್ಮ ಎಲ್ಲಾ ಸಮಸ್ಯೆಗಳನ್ನು ಮಾತುಕತೆಯ ಮೂಲಕ ಬಗೆಹರಿಸುವಿರಿ. ನಿಮ್ಮ ಆರ್ಥಿಕ ಸ್ಥಿತಿ ಈ ದಿನ ಉತ್ತಮವಾಗಿರುವುದು. ಇಂದು ನಿಮ್ಮ ಸ್ನೇಹಿತರ ನಮ್ಮ ಸಹಾಯಕ್ಕೆ ಮುಂದೆ ಬರುವರು. ಈ ದಿನ ನೀವು ನಿಮ್ಮ ಆದಾಯ ಮತ್ತು ಖರ್ಚಿನ ಬಗ್ಗೆ ಎಚ್ಚರ ವಹಿಸಬೇಕು.

** ಮಿಥುನ ರಾಶಿ
ಇಂದು ತಮ್ಮ ಗೌರವ ಖ್ಯಾತಿಯನ್ನು ಗಮನದಲ್ಲಿ ಇಟ್ಟುಕೊಂಡು ಕೆಲಸ ಮಾಡಬೇಕಾಗುತ್ತದೆ. ಯಾವುದೇ ತಪ್ಪು ಕೆಲಸಗಳನ್ನು ಮಾಡುವುದರಿಂದ ದೂರವಿರಿ, ಇಲ್ಲದಿದ್ದರೆ ನಷ್ಟ ಉಂಟಾಗುವ ಸಾಧ್ಯತೆ ಇದೆ. ನೀವು ಯಾವುದಾದರೂ ಬ್ಯಾಂಕ್ ಅಥವಾ ಯಾವುದಾದರೂ ವ್ಯಕ್ತಿಯಿಂದ ಸಾಲ ಪಡೆದರೆ ಇಂದು ನಿಮಗೆ ಅದರಿಂದ ಮುಕ್ತಿ ದೊರಕುವುದು ಮತ್ತು ನಿಮ್ಮ ಹಣ ವೃದ್ದಿಯಾಗುವುದು.

** ಕರ್ಕಾಟಕ ರಾಶಿ :
ದೊಡ್ಡ ವ್ಯಕ್ತಿಯ ಸಹಾಯದಿಂದ ಕಳೆದು ಹೋದ ಹಣವು ವಾಪಸ್ಸು ಪಡೆಯುವ ಯೋಗವಿದೆ ಮತ್ತು ನಿಮ್ಮ ಸರಕಾರಿ ಕೆಲಸಗಳೆಲ್ಲವೂ ಪೂರ್ಣವಾಗುವುದು. ರಾಜಕೀಯದವರೊಂದಿಗೆ ನಿಮ್ಮ ಸಂಬಂಧ ಈ ದಿನ ಉತ್ತಮವಾಗಿರುವುದು. ಇದರಿಂದ ನೀವು ಹೆಚ್ಚಿನ ಲಾಭವನ್ನು ಪಡೆಯುವಿರಿ. ಆದರೆ ನೀವು ನಿಮ್ಮ ಪರಿಶ್ರಮವನ್ನು ಕಡಿಮೆ ಮಾಡಬಾರದು.

** ಸಿಂಹ ರಾಶಿ :
ತಮ್ಮ ವ್ಯಾಪಾರದಲ್ಲಿ ಹೊಸ ಯೋಜನೆಗಳಿಗಾಗಿ ಕೆಲಸ ಮಾಡುವ ಅವಕಾಶ ಲಭಿಸುವುದು. ನೀವು ಪಾಲುದಾರಿಕೆಯಲ್ಲಿ ಕೆಲಸ ಮಾಡುತ್ತಿದ್ದರೆ, ಭವಿಷ್ಯದಲ್ಲಿ ಉತ್ತಮ ಲಾಭ ಪಡೆಯುವ ಯೋಗವಿದೆ. ಇಂದು ನಿಮಗೆ ಉತ್ತಮವಾದ ಅವಕಾಶಗಳು ಲಭಿಸುವುದು. ಇದರಿಂದಾಗಿ ನಿಮ್ಮ ಹಣ ವೃದ್ದಿಯಾಗುವುದು. ಆದರೆ ನಿಮ್ಮ ತಾಯಿಯ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಿ.

** ಕನ್ಯಾ ರಾಶಿ :
ಸುತ್ತಲು ಸಂತೋಷ ಮಯವಾದ ವಾತಾವರಣ ಇರುವುದು. ಇದರಿಂದಾಗಿ ನಿಮ್ಮ ಮನಸ್ಸು ಸಂತಸದಿಂದಿರುವುದು. ಹಾಗಾಗಿ ನಿಮ್ಮ ಮುಖ ಸುಂದರವಾಗಿ ಕಾಣುವುದು. ಇದರಿಂದ ನೀವು ಹೆಚ್ಚಿನ ಲಾಭವನ್ನು ಪಡೆಯುವಿರಿ. ಈ ದಿನ ನಿಮ್ಮ ಅಪೂರ್ಣ ಕೆಲಸಗಳೆಲ್ಲವೂ ಪೂರ್ಣಗೊಳ್ಳುವುದು ಮತ್ತು ನೀವು ಹೆಚ್ಚಿನ ಧನ ಲಾಭವನ್ನು ಪಡೆಯುವ ಯೋಗವಿದೆ. ನಿಮ್ಮ ಮನೆಯಲ್ಲಿ ಯಾವುದಾದರೂ ಸಮಸ್ಯೆ ಇದ್ದರೆ, ಅವೆಲ್ಲವೂ ಈ ದಿನ ದೂರವಾಗುವುದು.

** ತುಲಾ ರಾಶಿ :
ವಿದ್ಯಾರ್ಥಿಗಳಿಗೆ ಇಂದು ಉನ್ನತ ಶಿಕ್ಷಣಕ್ಕಾಗಿ ಉತ್ತಮ ಅವಕಾಶ ಲಭಿಸುವುದು. ಇಂದು ನೀವು ಯಾವುದೇ ಮಹತ್ವಪೂರ್ಣ ನಿರ್ಧಾರವನ್ನು ತೆಗೆದುಕೊಳ್ಳುವುದಾದರೆ, ಸರಿಯಾಗಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ. ಇಲ್ಲದಿದ್ದರೆ ಭವಿಷ್ಯದಲ್ಲಿ ನಷ್ಟ ಉಂಟಾಗುವ ಸಾಧ್ಯತೆ ಇದೆ. ನಿಮ್ಮ ನಾಯಕತ್ವದ ಗುಣ ಈ ದಿನ ಹೆಚ್ಚಾಗುವುದು ಮತ್ತು ವ್ಯಾಪಾರದಲ್ಲಿನ ಎಲ್ಲಾ ಸಮಸ್ಯೆಗಳು ಈ ದಿನ ದೂರವಾಗುವುದು.

** ವೃಶ್ಚಿಕ ರಾಶಿ :
ವಿದ್ಯಾರ್ಥಿಗಳು ಇಂದು ಹೆಚ್ಚು ಏಕಾಗೃತೆಯಿಂದ ಪರೀಕ್ಷೆಗೆ ತಯಾರಿ ನಡೆಸಬೇಕು. ಈ ದಿನ ನಿಮ್ಮ ಸಹೋದರರಿಗೆ ಶಾರೀರಿಕ ಸಮಸ್ಯೆ ಎದುರಾಗಬಹುದು. ಈ ದಿನ ಮನೆಯಲ್ಲಿ ಒತ್ತಡದ ವಾತಾವರಣ ಇರುವುದು. ಆದರೆ ನಿಮಗೆ ನಿಮ್ಮ ಮಾತಿನ ಬಗ್ಗೆ ನಿಯಂತ್ರಣ ಇರಲಿ. ತಂದೆಯ ಸಲಹೆಯಿಂದ ನಿಮ್ಮ ಮನೆಯಲ್ಲಿನ ಸಮಸ್ಯೆಗಳು ಸಂಜೆ ವೇಳೆಗೆ ದೂರವಾಗುವುದು.

** ಧನಸ್ಸು ರಾಶಿ :
ತಮ್ಮ ಎಲ್ಲಾ ಜವಾಬ್ದಾರಿಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸುವರು ಮತ್ತು ನಿಮಗೆ ಈ ದಿನ ವಿವಾಹ ಯೋಗವು ಇದೆ. ಕೆಲಸ ಮಾಡುವ ಈ ರಾಶಿಯವರು ಇಂದು ಎಲ್ಲರ ಪ್ರಶಂಸೆಗೆ ಪಾತ್ರರಾಗುವರು. ಆದರೆ ನಿಮ್ಮ ಮಾತಿನಲ್ಲಿ ಸೌಮ್ಯತೆ ಇರಲಿ. ನೀವು ಯಾರಿಂದಲಾದರೂ ಸಾಲ ಪಡೆದಿದ್ದರೆ, ಇಂದು ಅದನ್ನು ಹಿಂತಿರುಗಿಸುವ ಸಾಧ್ಯತೆ ಇದೆ. ಮನೆಯ ಅಂದವನ್ನು ಹೆಚ್ಚಿಸಲು ಈ ದಿನ ನೀವು ಖರೀದಿ ಮಾಡುವಿರಿ.

** ಮಕರ ರಾಶಿ :
ವ್ಯಾಪಾರದಲ್ಲಿ ಯಶಸ್ಸು ಗಳಿಸಲು ಕಠಿಣ ಪರಿಶ್ರಮ ಪಡಬೇಕಾಗುತ್ತದೆ ಹಾಗೂ ಹೊಸ ಯೋಜನೆಗಳನ್ನು ರೂಪಿಸುವುದರಿಂದ ಸಹ ಯಶಸ್ಸು ಗಳಿಸುವಿರಿ. ಗಂಡನ ಮನೆಯ ಯಾವುದಾದರೂ ವ್ಯಕ್ತಿಗೆ ಹಣವನ್ನು ನೀಡಬೇಕಾದರೆ ಈ ದಿನ ಎಚ್ಚರಿಕೆಯಿಂದ ನೀಡಿ, ಇಲ್ಲದಿದ್ದರೆ ನಿಮ್ಮ ಸಂಬಂಧ ಹಾಳಾಗಬಹುದು. ಈ ರಾಶಿಗೆ ಸೇರಿದ ವಿದ್ಯಾರ್ಥಿಗಳು ನಾಳೆ ಹೊಸ ಕೋರ್ಸ್ ಗೆ ಸೇರಬಹುದು.

** ಕುಂಭ ರಾಶಿ :
ಗೌರವ, ಖ್ಯಾತಿ ಹೆಚ್ಚಾಗುವುದು ಮತ್ತು ನಿಮ್ಮ ಸಂಬಂಧ ಬಲಗೊಳ್ಳುವುದು. ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವ ಅವಕಾಶ ಲಭಿಸುವುದು, ಇದರಿಂದಾಗಿ ನೀವು ಯಶಸ್ಸು ಗಳಿಸುವಿರಿ ಮತ್ತು ಹೊಸ ವ್ಯಾಪಾರವನ್ನು ಶುರು ಮಾಡಲು ಈ ದಿನ ಉತ್ತಮವಾಗಿದೆ. ಇಂದು ಸಂಜೆ ನೀವು ದೇವರ ದರ್ಶನಕ್ಕೆ ದೇವಾಲಯಕ್ಕೆ ತೆರಳಬಹುದು. ನೀವು ವಾಹನವನ್ನು ಖರೀದಿಸಬೇಕೆಂದಿದ್ದರೆ, ಈ ಸಮಯ ನಿಮಗೆ ಅನುಕೂಲಕರವಾಗಿರಲಿದೆ.

** ಮೀನ ರಾಶಿ :
ತಮ್ಮ ಕಳೆದು ಹೋದ ಹಣವನ್ನು ವಾಪಸ್ಸು ಪಡೆಯಬಹುದು. ಇದರಿಂದಾಗಿ ನಿಮ್ಮ ಮನಸ್ಸು ಸಂತೋಷದಿಂದಿರುವುದು. ಹೊಸ ವ್ಯಾಪಾರವನ್ನು ಶುರು ಮಾಡಲು ಈ ದಿನ ಉತ್ತಮ ದಿನವಾಗಿದೆ. ಆದರೆ ಇಂದು ನಿಮ್ಮ ತಂದೆಯ ಆರೋಗ್ಯದ ಬಗ್ಗೆ ಹೆಚ್ಚಿನ ಗಮನಹರಿಸಿ ಮತ್ತು ವೈದ್ಯರ ಸಲಹೆ ಪಡೆಯಿರಿ.

Categories
Uncategorized

ಭಾರತಕ್ಕೆ ಬಂತು ಮತ್ತೊಂದು ಕಂಚು!

ಭಾರತಕ್ಕೆ ಬಂತು ಮತ್ತೊಂದು ಕಂಚು!
– ಕುಸ್ತಿಪಟು ಅಮನ್ ಸೆಹ್ರಾವತ್ ಕುಸ್ತಿಯಲ್ಲಿ ಕಂಚಿನ ಪದಕ ಗೆಲುವು
– ಭಾರತಕ್ಕೆ 6ನೇ ಪದಕ ತಂದುಕೊಟ್ಟ ಅಮನ್

NAMMUR EXPRESS NEWS
ಹಾಕಿ ಮತ್ತು ಜಾವಲಿನ್ ಥ್ರೋ ಅಲ್ಲಿ ಕಂಚು ಹಾಗೂ ಬೆಳ್ಳಿ ಪದಕ ಪಡೆದಿದ್ದ ಭಾರತ ಶುಕ್ರವಾರ ಮಧ್ಯ ರಾತ್ರಿ ಮತ್ತೊಂದು ಕಂಚು ಪದಕ ಗೆದ್ದಿದೆ.
ಕುಸ್ತಿಪಟು ಅಮನ್ ಸೆಹ್ರಾವತ್ ಕುಸ್ತಿಯಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಭಾರತಕ್ಕೆ 6ನೇ ಪದಕ ತಂದಿದ್ದಾರೆ. 21 ವರ್ಷದ ಅಮನ್ ಸೆಹ್ರಾವತ್ 13-5 ಅಂತರದಲ್ಲಿ ಡೇರಿಯನ್ ಕ್ರೂಜ್ ಅವರನ್ನು ಸೋಲಿಸುವ ಮೂಲಕ ಕಂಚಿನ ಪದಕ ಗೆದ್ದುಕೊಂಡಿದ್ದಾರೆ.
ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಪದಕ ಗೆದ್ದುಕೊಟ್ಟ ಎಂಟನೇ ಕುಸ್ತಿಪಟು ಎನ್ನುವ ಹೆಗ್ಗಳಿಕೆ ಅಮನ್ ಸೆಹ್ರಾವತ್ ಅವರ ಪಾಲಾಗಿದೆ. ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಐದನೇ ಭಾರತೀಯ ಕುಸ್ತಿಪಟು ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಶುಕ್ರವಾರ ನಡೆದ ಪುರುಷರ 57 ಕೆ.ಜಿ. ಫ್ರೀಸ್ಟೈಲ್‌ ಕುಸ್ತಿ ಪಂದ್ಯದಲ್ಲಿ ಅಮನ್ ಸೆಹ್ರಾವತ್ ಪದಕ ಗೆದ್ದರು.
ಭಾರತ ಪದಕ ಪಟ್ಟಿಯಲ್ಲಿ 66ನೇ ಸ್ಥಾನದಲ್ಲಿದೆ.

Categories
ಉಡುಪಿ ಮಂಗಳೂರು

ಕರಾವಳಿಯಾದ್ಯಂತ ನಾಗರಪಂಚಮಿ ಸಂಭ್ರಮ!

ಕರಾವಳಿಯಾದ್ಯಂತ ನಾಗರಪಂಚಮಿ ಸಂಭ್ರಮ!
– ನಾಗ ಬನಗಳಿಗೆ ತೆರಳಿ ನಾಗದೇವರಿಗೆ ಪೂಜೆ ಸಲ್ಲಿಕೆ
– ಕುಕ್ಕೆ ಸೇರಿ ದೇಗುಲಗಳಲ್ಲಿ ಕೂಡ ವಿಶೇಷ ಪೂಜೆ
– ಶ್ರದ್ದಾ ಭಕ್ತಿಯಿಂದ ನಾಗರ ಪಂಚಮಿ ಆಚರಣೆ

NAMMUR EXPRESS NEWS

ಉಡುಪಿ/ಮಂಗಳೂರು: ಕರಾವಳಿಯಾದ್ಯಂತ ನಾಗರಪಂಚಮಿ ಸಂಭ್ರಮ ಮನೆ ಮಾಡಿದೆ.
ಜನ ಮುಂಜಾನೆಯಿಂದಲೇ ನಾಗ ಬನಗಳಿಗೆ ತೆರಳಿ ನಾಗದೇವರಿಗೆ ಪೂಜೆ ಸಲ್ಲಿಕೆ ಮಾಡಿದ್ದಾರೆ. ಕುಕ್ಕೆ ಸುಬ್ರಮಣ್ಯ ಸೇರಿ ದೇಗುಲಗಳಲ್ಲಿ ಕೂಡ ವಿಶೇಷ ಪೂಜೆ ನಡೆಯಿತು. ಎಲ್ಲೆಡೆ ಶ್ರದ್ದಾ ಭಕ್ತಿಯಿಂದ ನಾಗರ ಪಂಚಮಿ ಆಚರಣೆ ನಡೆಯಿತು.

ಕುಡುಪುವಿನಲ್ಲಿ ಸಾವಿರಾರು ಜನ

ಮಂಗಳೂರಿನ ಕುಡುಪುವಿನ ಅನಂತ ಪದ್ಮನಾಭ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಿತು. ಸಾವಿರಾರು ಜನ ಭಕ್ತರು ಪೂಜೆಯಲ್ಲಿ ಭಾಗಿಯಾದ್ರು. ಸುಮಾರು 3 ಲೋಡ್ನಷ್ಟು ಎಳೆನೀರು ಅಭಿಷೇಕ ಮಾಡಲಾಯಿತು.

ಕಾಪುವಿನಲ್ಲಿ ನಿಜ ಹಾವಿಗೆ ಪೂಜೆ

ಕಾಪುವಿನ ಮಜೂರು ನಿವಾಸಿ ಗೋವರ್ಧನ್ ರಾವ್ ರವರು ಮಾತ್ರ ಪ್ರತಿ ವರ್ಷದಂತೆ ಈ ವರ್ಷವೂ ದಿಟ ನಾಗನಿಗೆ ಅಭಿಷೇಕ ನೆರವೇರಿಸಿದ್ದಾರೆ. ಗಾಯಗೊಂಡ ನಾಗರ ಹಾವನ್ನು ರಕ್ಷಿಸಿ, ಚಿಕಿತ್ಸೆ ನೀಡುವ ಕಾರ್ಯ ಮಾಡುತ್ತಿರುವ ಗೋವರ್ಧನ್ ರಾವ್ ಅವರು ನಾಗರಪಂಚಮಿ ಹಿನ್ನಲೆಯಲ್ಲಿ ಮನೆಯಲ್ಲಿರುವ ನಾಲ್ಕು ನಾಗರಹಾವಿಗೆ ಪೂಜೆ ಸಲ್ಲಿಸಿದ್ದಾರೆ.

Categories
ಚಿಕ್ಕಮಗಳೂರು

ಮೈಸೂರು ಚಲೋದಲ್ಲಿ ಚಿಕ್ಕಮಗಳೂರು ನಾಯಕರ ಹವಾ!

ಮೈಸೂರು ಚಲೋದಲ್ಲಿ ಚಿಕ್ಕಮಗಳೂರು ನಾಯಕರ ಹವಾ!
– ಜೀವರಾಜ್, ಸಿ.ಟಿ ರವಿ ಸೇರಿ ಅನೇಕ ಪ್ರಮುಖರ ನಾಯಕತ್ವ
– ಸಾವಿರಾರು ಪ್ರಮುಖ ಕಾರ್ಯಕರ್ತರು, ಮುಖಂಡರು ಹಾಜರ್

NAMMUR EXPRESS NEWS
ಚಿಕ್ಕಮಗಳೂರು: ಕಾಂಗ್ರೇಸ್ ಸರ್ಕಾರದ ವಿರುದ್ಧ ರಾಜ್ಯ ಬಿಜೆಪಿ ಹಮ್ಮಿಕೊಂಡಿರುವ ಮೈಸೂರು ಚಲೋ ಪಾದಯಾತ್ರೆಯಲ್ಲಿ ಚಿಕ್ಕಮಗಳೂರು ಜಿಲ್ಲೆ ಎಲ್ಲಾ ತಾಲೂಕಿನ ಬಿಜೆಪಿ ವಿವಿಧ ಪದಾಧಿಕಾರಿಗಳು, ಕಾರ್ಯರ್ತರು ಪಾಲ್ಗೊಂಡಿದ್ದಾರೆ.
ಇನ್ನು ಕೇವಲ ಒಂದು ದಿನದಲ್ಲಿ ಮೈಸೂರು ಚಲೋ ಪಾದಯಾತ್ರೆ ಯಲ್ಲಿ ಜಿಲ್ಲೆಯ ಹಲವು ನಾಯಕರು ಭಾಗಿಯಾಗಲಿದ್ದಾರೆ. ಕೊನೆ ದಿನದ ಪಾದಯಾತ್ರೆ ಹಾಗೂ ಸಮಾರೋಪಕ್ಕೆ ವೇದಿಕೆ ಸಜ್ಜುಗೊಂಡಿದ್ದು
ಪಾದಯಾತ್ರೆಯಲ್ಲಿ ಕಾರ್ಯಕರ್ತರಿಗೆ ಡಿ.ಎನ್ ಜೀವರಾಜ್,ಸಿ.ಟಿ ರವಿ,ದೀಪಕ್ ದೊಡ್ಡಯ್ಯ,ಸುರೇಶ್,ಬೆಳ್ಳಿ ಪ್ರಕಾಶ್ ಸೇರಿದಂತೆ ಜಿಲ್ಲಾ ಅಧ್ಯಕ್ಷರು, ತಾಲೂಕು ಅಧ್ಯಕ್ಷರು, ಪ್ರಮುಖ ನಾಯಕರು ಸಾಥ್ ನೀಡಿದ್ದಾರೆ.

Categories
ಶಿವಮೊಗ್ಗ

ಸಾಕು ಬೆಕ್ಕು ಕಚ್ಚಿ ಮಹಿಳೆ ಸಾವು!

ಸಾಕು ಬೆಕ್ಕು ಕಚ್ಚಿ ಮಹಿಳೆ ಸಾವು!
– ನಮ್ಮದೇ ಬೆಕ್ಕು ಕಚ್ಚಿತೆಂದು ನಿರ್ಲಕ್ಷ್ಯ ಒಳ್ಳೆಯದಲ್ಲ!
– ನಾಗರಾಜನ ಮುಂದೆ ಕೇಕ್ ಕಟ್ ಮಾಡಿ ಯುವಕರ ಹುಚ್ಚಾಟ: ನಾಗರ ಪಂಚಮಿ ದಿನ ವೈರಲ್

NAMMUR EXPRESS NEWS
ಶಿವಮೊಗ್ಗ: ಸಾಕು ಬೆಕ್ಕೇ ಮಹಿಳೆಯೊಬ್ಬರ ಪ್ರಾಣ ಹೋಗಲು ಕಾರಣವಾಗಿದೆ. ಶಿವಮೊಗ್ಗದ ಶಿಕಾರಿಪುರದ ತರಲಘಟದಲ್ಲಿ ಮಹಿಳೆಯೊಬ್ಬರಿಗೆ ಸಾಕು ಬೆಕ್ಕು ಕಚ್ಚಿದ ಪರಿಣಾಮ ಆಕೆ ಸಾವನ್ನಪ್ಪಿದ್ದಾರೆ. 50 ವರ್ಷ ವಯಸ್ಸಿನ ಗಂಗೀಬಾಯಿ ಮೃತ ಮಹಿಳೆ.
ಬೆಕ್ಕು ಎರಡು ತಿಂಗಳ ಹಿಂದೆ ಕಚ್ಚಿತ್ತು. ಬೆಕ್ಕು ಕಚ್ಚಿದ್ದರಿಂದ ಮಹಿಳೆಗೆ ರೇಬಿಸ್ ಕಾಯಿಲೆ ತಗುಲಿದೆ. ಇನ್ನೊಬ್ಬ ವ್ಯಕ್ತಿಗೂ ಇದೇ ಬೆಕ್ಕು ಕಚ್ಚಿತ್ತು. ಬೆಕ್ಕು ಕಚ್ಚಿದ್ದರಿಂದ ಮಹಿಳೆ 5 ಇಂಜೆಕ್ಷನ್ ಪಡೆಯಬೇಕಿತ್ತು. ಆದರೆ ಒಂದು ಇಂಜೆಕ್ಷನ್ ಪಡೆದ ಬಳಿಕ ಹುಷಾರಾಗಿದ್ದೇನೆಂದು ಉಳಿದ ಇಂಜೆಕ್ಷನ್ ಪಡೆಯಲು ನಿರ್ಲಕ್ಷಿಸಿದ್ದರು.
ಆರೋಗ್ಯವಾಗಿದ್ದುದರಿಂದ ಮಹಿಳೆ ನಾಟಿ ಕೆಲಸಕ್ಕೆ ಹೋಗಿದ್ದರು. ನೀರಿಗಿಳಿದು ಕೃಷಿ ಕೆಲಸದಲ್ಲಿ ತೊಡಗಿದ್ದುದರಿಂದ, ರೇಬಿಸ್ ಕಾಯಿಲೆ ತೀವ್ರಗೊಂಡಿದೆ. ಚಿಕಿತ್ಸೆ ಫಲಿಸದೆ ಮಹಿಳೆ ಸಾವನ್ನಪ್ಪಿದ್ದಾರೆ. ಬೆಕ್ಕು ಕಚ್ಚಿದರೂ ರೇಬಿಸ್ ಹರಡುವ ಸಾಧ್ಯತೆಯಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ತಿಳಿಸಿದ್ದಾರೆ.

ನಾಗರಾಜನ ಮುಂದೆ ಕೇಕ್ ಕಟ್ ಮಾಡಿ ಯುವಕರ ಹುಚ್ಚಾಟ

ನಾಗರಾಜನ ಮುಂದೆ ಕೇಕ್ ಇಟ್ಟು ನಗುತಾ ನಗುತಾ ಬಾಳು ನೀನು ನೂರು ವರುಷ… ಎಂಬ ಹಾಡನ್ನು ಹಾಡುತ್ತಾ ನಾಗರ ಪಂಚಮಿಯಂದು ಹುಚ್ಚಾಟ ಮೆರೆದಿದ್ದಾರೆ. ಈ ವಿಡಿಯೋ ಇದೀಗ ಭಾರೀ ವೈರಲ್ ಆಗುತ್ತಿದ್ದು, ಯುವಕರ ಈ ದುರ್ವರ್ತನೆಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಆದರೆ ಎಲ್ಲಿಯ ವಿಡಿಯೋ ಎಂಬುದು ತಿಳಿದಿಲ್ಲ.

Categories
ಉಡುಪಿ

ಉಡುಪಿಯ ಕಾಪುವಿನಲ್ಲಿ ನಾಗರ ಹಾವಿಗೆ ಪೂಜೆ!

ಉಡುಪಿಯ ಕಾಪುವಿನಲ್ಲಿ ನಾಗರ ಹಾವಿಗೆ ಪೂಜೆ!
– ಕಾಪುವಿನ ಮಜೂರು ಮಲ್ಲಾರಿನ ನಿವಾಸಿ ಗೋವರ್ಧನ್ ಭಟ್ ನಿವಾಸದಲ್ಲಿ ಪೂಜೆ
– 1000ಕ್ಕೂ ಅಧಿಕ ಹಾವುಗಳ ಆರೈಕೆ ಮಾಡುತ್ತಿರುವ

NAMMUR EXPRESS NEWS
ಉಡುಪಿ: ನಾಗರ ಪಂಚಮಿಯಂದು ಕರಾವಳಿಯಲ್ಲಿ ನಾಗನ ಕಲ್ಲಿಗೆ ಹಾಲೆರೆದು ಪೂಜಿಸಲಾಗುತ್ತದೆ. ಕೆಲವು ಕಡೆಗಳಲ್ಲಿ ನಾಗನ ಹುತ್ತಕ್ಕೆ ಹಾಲೆರೆದು ನಾಗರಪಂಚಮಿಯನ್ನು ಆಚರಿಸುತ್ತಾರೆ ಆದರೆ ಇಲ್ಲಿ ಜೀವಂತ ಹಾವಿಗೆ ತನು ಎರೆಯುವುದರ ಮೂಲಕ ನಾಗರಪಂಚಮಿಯನ್ನು ಆಚರಣೆ ಮಾಡಲಾಗಿದೆ.
ಕಾಪುವಿನ ಮಜೂರು ಮಲ್ಲಾರಿನ ನಿವಾಸಿ ಗೋವರ್ಧನ್ ಭಟ್ ಅವರು ಹಾವುಗಳ ರಕ್ಷಣೆ ಮಾಡುತ್ತಾರೆ. ಕಾಪು ಪರಿಸರದಲ್ಲಿ ಚಿರಪರಿಚಿತರು. ಈ ಪರಿಸರದಲ್ಲಿ ಎಲ್ಲೆ ಹಾವುಗಳೂ ಸಂಕಷ್ಟದಲ್ಲಿದ್ದರೆ ಗೋವರ್ಧನ್ ನೆರವಿಗೆ ಧಾವಿಸುತ್ತಾರೆ. ಗಾಯಗೊಂಡ ಹಾವುಗಳನ್ನು ಆರೈಕೆ ಮಾಡಿ ಗುಣಮುಖಗೊಂಡ ನಂತರ ಕಾಡಿಗೆ ಬಿಡುವ ಮೂಲಕ ಹಲವು ಬಾರಿ ಉರಗ ಪ್ರೇಮ ಮೆರೆದಿದ್ದಾರೆ.
1000ಕ್ಕೂ ಅಧಿಕ ಹಾವುಗಳ ಆರೈಕೆ ಮಾಡಿದ್ದಾರೆ. ತನ್ನ ಆರೈಕೆಯಲ್ಲಿ ಇರುವ ಹಾವುಗಳಿಗೆ ತನು ಏರೆಯುವ ಮೂಲಕ ನಾಗರ ಪಂಚಮಿಯನ್ನು ಆಚರಿಸುತ್ತಾರೆ.
ಎಲ್ಲಾ ಕಡೆ ನಾಗರ ಕಲ್ಲಿಗೆ ಪೂಜೆ ಪುನಸ್ಕಾರಗಳು ನಡೆಯುತ್ತದೆ. ಆದ್ರೆ ಪಂಚಮಿಯಂದು ನಮ್ಮ ಮನೆಯಲ್ಲಿ ನಮ್ಮ ಮನೆಯವರು ಒಟ್ಟಾಗಿ ಜೀವಂತನಾಗನಿಗೆ ಪೂಜೆ ಮಾಡುವುದು ನಮ್ಮೆಲ್ಲರ ಭಾಗ್ಯ ಎನ್ನುತ್ತಾರೆ ಗೋರ್ವಧನ್ ಭಟ್.

Categories
ತೀರ್ಥಹಳ್ಳಿ ಶಿವಮೊಗ್ಗ

ಶಿವಮೊಗ್ಗ: ದೊಡ್ಡದಾವನಂದಿ ಗ್ರಾಮದ ಕೆರೆಯಲ್ಲಿ ಯುವಕನ ಶವ ಪತ್ತೆ

ಟಾಪ್ 4 ನ್ಯೂಸ್ ಮಲ್ನಾಡ್

ಶಿವಮೊಗ್ಗ: ದೊಡ್ಡದಾವನಂದಿ ಗ್ರಾಮದ ಕೆರೆಯಲ್ಲಿ ಯುವಕನ ಶವ ಪತ್ತೆ
– ಮೂಡಿಗೆರೆ: ಕಬ್ಬಿಣದ ಏಣಿ ಕೊಂಡೊಯ್ಯುವಾಗ ವಿದ್ಯುತ್ ತಂತಿ ಸ್ಪರ್ಶ, ವ್ಯಕ್ತಿ ಸ್ಥಳದಲ್ಲೇ ಸಾವು
– ಸಾಗರ: ಬೈಕ್ ಹಾಗೂ ಟಿಪ್ಪರ್ ಲಾರಿ ನಡುವೆ ಅಪಘಾತ
– ಶಿವಮೊಗ್ಗ: ಶ್ರೀಗಂಧದ ತುಂಡು ಸಾಗಾಟ ಮೂವರು ಸೆರೆ

NAMMUR EXPRESS NEWS
ಶಿವಮೊಗ್ಗ : ತಾಲೂಕಿನ ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯ ದೊಡ್ಡದಾವನಂದಿ ಗ್ರಾಮದ ಕೆರೆಯಲ್ಲಿ ಯುವಕ ನೋರ್ವನ ಶವವೊಂದು ಪತ್ತೆಯಾಗಿದ್ದು ಆತನನ್ನು ಸ್ಥಳೀಯ ನಿವಾಸಿ ನಿತಿನ್ ಎಂದು ಗುರುತಿಸಲಾಗಿದೆ. ಅಂಗವಿಕಲನಾಗಿದ್ದ ನಿತಿನ್ (29) ತುದಿಗಾಲಿನಲ್ಲಿ ನಡೆಯುತ್ತಿದ್ದ. ಗ್ರಾಮದ ಬಸ್ ನಿಲ್ದಾಣದಲ್ಲಿ ಚಹದಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದನು. ಇವರ ತಾಯಿ ಕೃಷಿ ಕೂಲಿ ಕೆಲಸ ಮಾಡಿಕೊಂಡಿದ್ದರು. ಗ್ರಾಮದಲ್ಲಿನ ಕೆರೆಯಲ್ಲಿ ಅಂಗಾತ ಬಿದ್ದು ಎರಡು ಕಾಲು ಗಳು ಕೆರೆಯಹೊರಭಾಗದಲ್ಲಿ ಬಿದ್ದು ಸಾವನ್ನಪ್ಪಿದ್ದನು. ನಿತಿನ್ ಮತ್ತು ಅವರ ತಾಯಿ ಇಬ್ಬರೇ ಇದ್ದು ಕೆರೆಯಲ್ಲಿ ಆಯತಪ್ಪಿ ಅಥವಾ ಕಾಲು ಜಾರಿ ಬಿದ್ದಿರುವ ಶಂಕೆ ವ್ಯಕ್ತವಾಗಿದೆ ಸಂಜೆ ಅಂಗಡಿ ಕಡೆ ಬಂದ ತಾಯಿಗೆ ಶೌಚಕ್ಕೆ ಹೋಗಿ ಬರುವುದಾಗಿ ಹೇಳಿ ಆಕೆಗೆ ಮನೆಗೆ ತೆರಳಲು ಸೂಚಿಸಿದ್ದನು. ಆದರೆ ಮನೆಗೆ ಎಷ್ಟು ಹೊತ್ತು ಕಳೆದರೂ ಮನೆಗೆ ಬಾರದ ನಿತಿನ್‌ನನ್ನು ಹುಡುಕಿಕೊಂಡು ಹೋದಾಗ ಶವ ಕಂಡುಬಂದಿದೆ.

– ಮೂಡಿಗೆರೆ: ಕಬ್ಬಿಣದ ಏಣಿ ಕೊಂಡೊಯ್ಯುವಾಗ ವಿದ್ಯುತ್ ತಂತಿ ಸ್ಪರ್ಶ, ವ್ಯಕ್ತಿ ಸ್ಥಳದಲ್ಲೇ ಸಾವು

ಮೂಡಿಗೆರೆ: ಕಬ್ಬಿಣದ ಏಣಿಯನ್ನ ಕೊಂಡೊಯ್ಯುವಾಗ ವಿದ್ಯುತ್ ತಂತಿ ತಗುಲಿ ವ್ಯಕ್ತಿಯೊಬ್ಬ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಗದ್ಗಲ್ ಗ್ರಾಮದ ಬಳಿ ನಡೆದಿದೆ. ಪ್ರಸನ್ನ ಸಾಲ್ಡನ್ (48) ಮೃತ ದುರ್ದೈವಿ. ಮೃತ ಪ್ರಸನ್ನ ಮನೆಯಲ್ಲಿ ಬೇರೆ ಕೆಲಸದ ನಿಮಿತ್ತ ಕಾಫಿ ತೋಟದಿಂದ ಕಬ್ಬಿಣದ ಏಣಿಯನ್ನ ಮನೆಗೆ ತಂದಿದ್ದರು. ಕೆಲಸವಾದ ಬಳಿಕ ಕಾಫಿ ತೋಟಕ್ಕೆ ಇಡಲು ಗಬ್ಗಲ್ ಗ್ರಾಮದ ಶಾಲೆ ಪಕ್ಕ ಎತ್ತರದ ಪ್ರದೇಶದಲ್ಲಿ ಏಣಿಯನ್ನ ಹೊತ್ತುಕೊಂಡು ಹೋಗುವಾಗ ವಿದ್ಯುತ್ ತಂತಿಗೆ ತಗುಲಿ ಸ್ಥಳದಲ್ಲಿ ಕೊನೆಯುಸಿರೆಳೆದಿದ್ದಾರೆ. ಸ್ಥಳಕ್ಕೆ ಮೆಸ್ಕಾಂ ಸಿಬ್ಬಂದಿಗಳು ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

– ಸಾಗರ: ಬೈಕ್ ಹಾಗೂ ಟಿಪ್ಪರ್ ಲಾರಿ ನಡುವೆ ಅಪಘಾತ

ಸಾಗರ : ತಾಲೂಕಿನ ಆವಿನಹಳ್ಳಿ ಸಮೀಪ ಬೈಕ್ ಹಾಗೂ ಟಿಪ್ಪರ್ ಲಾರಿ ನಡುವೆ ಅಪಘಾತ ಸಂಭವಿಸಿದೆ. ಅಪಘಾತದ ರಭಸಕ್ಕೆ ಬೈಕ್ ಸವಾರ ಸಚಿನ್ ( 18 ) ಶಿವಮೊಗ್ಗದ ಮೆಗಾನ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಸಚಿನ್ ಮೂಲತಃ ಪಡುಬೀಡು ಗ್ರಾಮದ ಯುವಕನಾಗಿದ್ದಾರೆ. ಸಾಗರದ ಎಲ್ ಬಿ ಕಾಲೇಜಿನಲ್ಲಿ ಪದವಿ ಕೋರ್ಸ್ ಗೆ ಅಡ್ಮಿಶನ್ ಸಹ ಪಡೆದಿದ್ದನು, ಇಂದು ದ್ವೀಪದಿಂದ ಸಾಗರಕ್ಕೆ ಹಾಸ್ಟೆಲ್ ಗಾಗಿ ಅರ್ಜಿ ಸಲ್ಲಿಸಲು ಸಾಗುತ್ತಿದ್ದ ವೇಳೆ ಈ ಅಪಘಾತ ನಡೆದಿದೆ. ಬೈಕ್ ನಲ್ಲಿದ್ದ ಮತ್ತೊಬ್ಬ ಸವಾರ ಸುಮಂತ್ ನನ್ನು ಕೋಟೇಶ್ವರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಇದೀಗ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

– ಶಿವಮೊಗ್ಗ: ಶ್ರೀಗಂಧದ ತುಂಡು ಸಾಗಾಟ ಮೂವರು ಸೆರೆ

ಶಿವಮೊಗ್ಗ : ನಗರದ ಉಂಬ್ಳೆ ಬೈಲು ರಸ್ತೆಯಲ್ಲಿರುವ ದರ್ಗಾದ ಹತ್ತಿರ ಮೂವರು ಕಾರಿನಲ್ಲಿ ಶ್ರೀಗಂಧದ ತುಂಡುಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ತುಂಗಾನಗರ ಪೊಲೀಸರು ಅವರನ್ನು ಬಂಧಿಸಿ ಗಂಧದ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿತರಾದ ಜೆಪಿ ನಗರದ ಇಮಾದ್ ಖಾನ್ (42), ಆರ್ ಎಂ ಎಲ್ ನಗರದ ಸಿದ್ದಿಕ್ ಬಾಷಾ ಅಲಿಯಾಸ್ ಸಿದ್ದು (30) ಇಂದಿರಾನಗರದ ಫೈರೋಜ್ ಖಾನ್ ಅಲಿಯಾಸ್ ಗಿಡ್ಡು (34) ಇವರನ್ನು ದಸ್ತಗಿರಿ ಮಾಡಿ, ಆರೋಪಿತರಿಂದ ಅಂದಾಜು ಮೌಲ್ಯ 58,000 ರೂ. ಗಳ 14.5 ಕೆ.ಜಿ ತೂಕದ ಶ್ರೀ ಗಂಧದ ತುಂಡುಗಳು ಮತ್ತು ಕೃತ್ಯಕ್ಕೆ ಬಳಸಿದ ಆಲ್ಟೊ ಕಾರನ್ನು ಪಡಿಸಿಕೊಳ್ಳಲಾಗಿದೆ. ವಶ ತುಂಗಾನಗರ ಸಿಪಿಐ ಮಂಜುನಾಥ್, ಎಸ್ ಐ ಶಿವಪ್ರಸಾದ್ ಮತ್ತು ಸಿದ್ದಪ್ಪ ಸಿಬ್ಬಂದಿಗಳಾದ ಹೆಚ್.ಸಿ ಕಿರಣ್ ಮೋರೆ, ಅರುಣ್ ಕುಮಾರ್, ಪಿಸಿ ಹರೀಶ್ ನಾಯ್ಕ, ನಾಗಪ್ಪ, ಲಂಕೇಶ್, ಹರೀಶ್, ಜಯಪ್ಪ ಮತ್ತು ರಮೇಶ್ ಅವರಿದ್ದ ತಂಡ ಕಾರ್ಯಾಚರಣೆ ನಡೆಸಿದೆ.

Categories
ಹಬ್ಬಗಳು

ಮುಂಜಾನೆಯಿಂದ ನಾಗರ ಪೂಜೆ!

ಮುಂಜಾನೆಯಿಂದ ನಾಗರ ಪೂಜೆ!
– ನಾಗ ದೇವಾಲಯ, ನಾಗರಕಟ್ಟೆಯಲ್ಲಿ ಪೂಜೆ
– ಹೂವು, ಹಣ್ಣು ಹಾಕಿ ವಿಶೇಷ ಪ್ರಾರ್ಥನೆ

NAMMUR EXPRESS NEWS
ಶ್ರಾವಣ ಮಾಸದ ನಾಗರ ಪಂಚಮಿ ಹಬ್ಬವನ್ನು ಅತ್ಯಂತ ಸಂಭ್ರಮ ಸಡಗರದಿಂದ ಎಲ್ಲೆಡೆಯೂ ಆಚರಿಸಲಾಗುತ್ತಿದೆ. ಶ್ರಾವಣ ಮಾಸದ ಶುಕ್ಲ ಪಕ್ಷದ ಐದನೇ ದಿನದಂದು ಬರುವ ಈ ಹಬ್ಬದ ದಿನ ನಾಗ ದೇವರನ್ನು ಪೂಜಿಸಿ ಉಪವಾಸ ಮಾಡುವ ಸಂಪ್ರದಾಯವಿದೆ. ನಾಗ ದೇವರನ್ನು ಪೂಜಿಸುವುದರಿಂದ ವ ಎಲ್ಲಾ ತೊಂದರೆಗಳು ದೂರವಾಗುತ್ತವೆ ಎನ್ನುವ ನಂಬಿಕೆಯಿದೆ ಭಕ್ತಿ ಪೂರ್ವಕವಾಗಿ ಪೂಜಿಸಲಾಗುತ್ತಿದೆ. ಹಾಗಾಗಿ ನಾಗ ದೇವಾಲಯ, ನಾಗರ ಕಟ್ಟೆಗಳಲ್ಲಿ ನಾಗನಿಗೆ ಹಾಲು ಎರೆದು ವಿಶೇಷ ಪೂಜೆ ಮಾಡಲಾಗುತ್ತಿದೆ.

ಮುಂಜಾನೆ ಎದ್ದು ಶುದ್ಧರಾಗಿ ಹೊಸ ಬಟ್ಟೆಯನ್ನು ಧರಿಸಿ, ನಾಗರ ಕ್ಲಲುಗಳಿಗೆ ಹಾಲೆರೆದು, ಅರಿಶಿನ,ಕುಂಕುಮ, ಕೇದಿಗೆ ಹೂವು, ನಾಗರಿಗೆ ಪ್ರಿಯವಾದ ಭೋಗವನ್ನು ಅರ್ಪಿಸಿ, ದೂಫ ದೀಪ ಬೆಳಗಿ ಪ್ರದಕ್ಷಿಣೆಯನ್ನು ಹಾಕಲಾಗುತ್ತಿದೆ.
ಎಂಟು ಹಾವುಗಳನ್ನು ಈ ಹಬ್ಬದ ಪ್ರಮುಖ ದೇವರುಗಳೆಂದು ಪರಿಣಿಸಲಾಗುತ್ತದೆ. ಈ ದಿನ ಅನಂತ, ವಾಸುಕಿ, ಪದ್ಮ, ಮಹಾಪದ್ಮ, ತಕ್ಷಕ, ಕುಳಿರ, ಕಾರ್ಕೋಟಕ ಮತ್ತು ಶಂಖ ಎಂಬ ಎಂಟು ಸರ್ಪಗಳನ್ನು ಪೂಜಿಸಲಾಗುತ್ತದೆ.
ಚತುರ್ಥಿಯ ದಿನ ಒಂದು ಹೊತ್ತಿನ ಊಟ ಮಾಡಿ ಪಂಚಮಿ ದಿನ ಉಪವಾಸ ಮಾಡಿ ಸಂಜೆ ಒಂದು ಹೊತ್ತಿನ ಊಟ ಮಾಡುವ ಆಚರಣೆ ಕೆಲವೆಡೆ ಕಾಣಬಹುದಾಗಿದೆ.
ಮರದ ಪೀಠ ಅಥವಾ ಮಣೆಯ ಮೇಲೆ ಮಣ್ಣಿನ ಮೂರ್ತಿ ಅಥವಾ ಹಾವಿನ ವಿಗ್ರಹವನ್ನು ಇಟ್ಟು ಪೂಜೆಯನ್ನು ಮಾಡಲಾಗುತ್ತದೆ.

ನಂತರ ನಾಗ ದೇವರಿಗೆ ಅರಿಶಿನ, ಕುಂಕುಮ, ಅಕ್ಕಿ ಮತ್ತು ಹೂವುಗಳನ್ನು ಅರ್ಪಿಸಿ ಪೂಜಿಸಲಾಗುತ್ತದೆ.
ನಂತರ ಹಸಿ ಹಾಲು, ತುಪ್ಪ ಮತ್ತು ಸಕ್ಕರೆಯನ್ನು ಬೆರೆಸಿ ಪೀಠದ ಮೇಲೆ ಪ್ರತಿಷ್ಠಾಪಿಸಲಾದ ನಾಗ ದೇವರಿಗೆ ಅರ್ಪಿಸಿ
ಪೂಜೆಯ ನಂತರ ನಾಗದೇವರಿಗೆ ಆರತಿಯನ್ನು ಮಾಡಲಾಗುತ್ತದೆ.
ಈ ದಿನ ಹಾವಾಡಿಗರಿಗೆ ಸ್ವಲ್ಪ ದಕ್ಷಿಣೆಯನ್ನು ನೀಡಿ ಹಾವಿಗೆ ಹಾಲೆರೆಯುವ ಪದ್ಧತಿ ಪ್ರಸ್ತುತದವರೆಗೂ ಕಾಣಬಹುದಾಗಿದ್ದು
ಇಂದು ನಾಗರ ಪಂಚಮಿ ಕಥೆಯನ್ನು ಕೇಳಬೇಕೂ ಅಥವಾ ಓದಬೇಕು ಎನ್ನುವುದು ವಾಡಿಕೆ.
ಈ ದಿನ ಹಾವಿಗೆ ಹಾಲಿನಿಂದ ಅಭಿಷೇಕವನ್ನು ಮಾಡಿದರೆ ಶಾಶ್ವತ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯೊಂದಿಗೆ ಸಕಲ ಸಿದ್ದತೆಯ ಮೂಲಕ ಅಚ್ಚುಕಟ್ಟಾಗಿ ಈ ಹಬ್ಬವನ್ನೂ ಅಚರಿಸುವ ಪರಿಯನ್ನು ಕಾಣಬಹುದಾಗಿದೆ.

Categories
ಬೆಂಗಳೂರು

ಸ್ವಾತಂತ್ರ್ಯ ದಿನಾಚರಣೆಗೆ ಎಲ್ಲೆಡೆ ಸಜ್ಜು!

ಸ್ವಾತಂತ್ರ್ಯ ದಿನಾಚರಣೆಗೆ ಎಲ್ಲೆಡೆ ಸಜ್ಜು!
– ಭಾರತದ ಹೆಮ್ಮೆಯ ದಿನಕ್ಕೆ ಹಲವು ವಿಶೇಷ
– ರಾಜಧಾನಿ ಸಸ್ಯಕಾಶಿ ಲಾಲ್ ಬಾಗ್ ನಲ್ಲಿ‌ ಫ್ಲವರ್ ಶೋ ಶುರು

NAMMUR EXPRESS NEWS
ಬೆಂಗಳೂರು: ದೇಶದ ಸ್ವಾತಂತ್ರ್ಯ ಸಂಭ್ರಮಕ್ಕೆ ದಿನಗಣನೆ ಆರಂಭವಾಗಿದೆ. ಎಲ್ಲೆಡೆ ಸ್ವಾತಂತ್ರ್ಯ ಹಬ್ಬಕ್ಕೆ ಸಿದ್ಧತೆ ನಡೆದಿದೆ. ಇದೀಗ ದೇಶದಲ್ಲಿ ಮೂರನೇ ಬಾರಿ ಅಧಿಕಾರಕ್ಕೆ ಬಂದ ಮೋದಿ ನೇತೃತ್ವದಲ್ಲಿ ಸ್ವಾತಂತ್ರ್ಯ ಹಬ್ಬಕ್ಕೆ ಭಾರೀ ಸಿದ್ಧತೆ ನಡೆದಿದೆ.
ಇನ್ನು ಹಳ್ಳಿ ಹಳ್ಳಿಯಲ್ಲೂ ಸರ್ಕಾರಿ ಕಚೇರಿ, ಶಾಲಾ ಕಾಲೇಜುಗಳಲ್ಲಿ ಆಚರಣೆಗೆ ಸಿದ್ಧತೆ ನಡೆದಿದೆ

ಸಸ್ಯಕಾಶಿ ಲಾಲ್ ಬಾಗ್ ನಲ್ಲಿ‌ ಫ್ಲವರ್ ಶೋ ಶುರು

ಸಸ್ಯಕಾಶಿ ಲಾಲ್ ಬಾಗ್ ನಲ್ಲಿ‌ ಫ್ಲವರ್ ಶೋ ಆರಂಭವಾಗುತ್ತಿದ್ದು, ಆಗಸ್ಟ್​ 19ರ ವರೆಗೆ ಫ್ಲವರ್ ಶೋ ಇರಲಿದೆ. 216ನೇ ಫಲಪುಷ್ಪ ಪ್ರದರ್ಶನಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು. ತೋಟಗಾರಿಕೆ ಇಲಾಖೆ ವತಿಯಿಂದ ಈ ಬಾರಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ವಿಷಯಾಧಾರಿತವಾಗಿ ಫ್ಲವರ್​ಶೋ ಪ್ರದರ್ಶನ ಆಯೋಜನೆ ಮಾಡಲಾಗಿದೆ. ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಇಂದು ಲಾಲ್​ಬಾಗ್​ನ ಗಾಜಿನಮನೆಯಲ್ಲಿ ಫ್ಲವರ್​ಶೋಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಮೊಮ್ಮಗ ಯಶವಂತ್ ಅಂಬೇಡ್ಕರ್ ಅವರು ಕೂಡ ಭಾಗಿಯಾಗಿದ್ದಾರೆ. ಈ ವರ್ಷ ಸಂವಿಧಾನ ಶಿಲ್ಪಿ ಡಾ ಬಿ.ಆರ್. ಅಂಬೇಡ್ಕರ್ ಅವರ ಕಾನ್ಸೆಪ್ಟ್ ನಲ್ಲಿ ಫ್ಲವರ್ ಶೋ ಮೂಡಿಬಂದಿದ್ದು, ಆಗಸ್ಟ್ 19ರವರೆಗೂ ನಲ್ಲಿ ಫ್ಲವರ್ ಶೋ ಇರಲಿದೆ. ಸಂಸತ್, ಭೀಮ ಸ್ಮಾರಕ, ಅಂಬೇಡ್ಕರ್ ಅವರು ಹುಟ್ಟಿದ ಜಾಗ, ಅವರು ಹುಟ್ಟಿ ಬೆಳೆದು ಬಂದಂತಹ ಹಾದಿ ಹೇಗಿತ್ತು ಎನ್ನುವುದು ಪ್ಲವರ್ ಶೋ ನ ಪ್ರಮುಖ ಆಕರ್ಷಣೆಗಳಾಗಿವೆ.‌ ಪ್ಲವರ್ ಶೋ‌ನಲ್ಲಿ 200 ಕ್ಕು ಹೆಚ್ಚು ಬಗೆಯ ಹೂಗಳು ಒಂದೇ ಸ್ಥಳದಲ್ಲಿ ಜನರನ್ನ ಮೋಡಿ ಮಾಡುತ್ತಿದ್ದು, ಒಟ್ಟು 35 ಲಕ್ಷ ಹೂಗಳನ್ನ ಪ್ಲವರ್ ಶೋಗೆ ಬಳಕೆ ಮಾಡಿಕೊಳ್ಳಲಾಗಿದೆ. 200 ಪ್ರಭೇದದ ಸುಮಾರು 30-32 ಲಕ್ಷ ಹೂಗಳನ್ನು ಪ್ರದರ್ಶನದಲ್ಲಿ ಬಳಕೆ ಮಾಡಕೊಳ್ಳಲಾಗಿದೆ. ಸುಮಾರು 8 ಲಕ್ಷ ಹೂಗಳು ಹೊರ ರಾಜ್ಯಗಳಿಂದ ಬಂದಿವೆ. ಈ 12 ದಿನಗಳ ಈ ಪ್ರದರ್ಶನಕ್ಕೆ 2.80 ಕೋಟಿ ರೂ. ವ್ಯಯಿಸಲಾಗುತ್ತಿದೆ.‌ ಅಂದಹಾಗೇ ಕಳೆದ ಪ್ಲವರ್ ಶೋ ನಲ್ಲಿ ಕಳೆದ ಬಾರಿ 60-70 ಲಕ್ಷ ರೂ. ಆದಾಯ ಹರಿದು ಬಂದಿತ್ತು. ಈ ವರ್ಷ ಅದಕ್ಕಿಂತ ಹೆಚ್ಚು ಆದಾಯ ಬರುವ ಸಾಧ್ಯತೆ ಇದೆ.‌ ಹೀಗಾಗಿ ಪ್ರದರ್ಶನಕ್ಕೆ ಬರುವ ಜನರ ಅನುಕೂಲಕ್ಕಾಗಿ ಆನ್‌ಲೈನ್‌ ಟಿಕೆಟ್‌ ವ್ಯವಸ್ಥೆ ಮಾಡಲಾಗಿದೆ. ವಯಸ್ಕರಿಗೆ 100 ರೂ, ಮಕ್ಕಳಿಗೆ 30 ರೂ.ಪ್ರವೇಶ ಶುಲ್ಕ ನಿಗದಿಪಡಿಸಿದ್ದು, ಶಾಲಾ ಮಕ್ಕಳಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ತುರ್ತು ಚಿಕಿತ್ಸೆಗಾಗಿ 6 ಆಂಬ್ಯುಲೆಸ್ಸ್‌ ಸೇವೆ ಒದಗಿಸಲಾಗಿದೆ. ಡೆಂಗ್ಯು ಆತಂಕದಿಂದ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿದ್ದು, ಪ್ಲಾಸ್ಟಿಕ್‌ ಬಳಕೆ ಸಂಪೂರ್ಣ ನಿಷೇಧಿಸಲಾಗಿದೆ.

Categories
ಬೆಂಗಳೂರು

ನೀರಜ್ ಚೋಪ್ರಾಗೆ ಬೆಳ್ಳಿ, ಹಾಕಿಯಲ್ಲಿ ಕಂಚು ಸಂಭ್ರಮ!

ನೀರಜ್ ಚೋಪ್ರಾಗೆ ಬೆಳ್ಳಿ, ಹಾಕಿಯಲ್ಲಿ ಕಂಚು ಸಂಭ್ರಮ!
– ಭಾರತದ ಚಿನ್ನದ ಪದಕದ ಆಸೆ ಈಡೇರಲಿಲ್ಲ
– ಭಾರತಕ್ಕೆ ಐದನೇ ಪದಕ ತಂದುಕೊಟ್ಟ ಚೋಪ್ರಾ

NAMMUR EXPRESS NEWS
ಬೆಂಗಳೂರು: ಪ್ಯಾರಿಸ್‌ ಒಲಿಂಪಿಕ್ಸ್‌ನ ಭಾರತದ ಸ್ಟಾರ್ ಜಾವೆಲಿನ್
ಎಸೆತದಲ್ಲಿ ನೀರಜ್ ಚೋಪ್ರಾ ಬೆಳ್ಳಿ ಪದಕ ಗೆದ್ದಿದ್ದಾರೆ. ಪ್ರತಿಸ್ಪರ್ಧಿ ಹಾಗೂ ನೆರೆಯ ಪಾಕಿಸ್ತಾನದ ಅರ್ಷದ್ ನದೀಮ್ ಒಲಿಂಪಿಕ್ಸ್ ದಾಖಲೆಯ 92.97 ಮೀಟ‌ರ್ ಎಸೆಯುವ ಮೂಲಕ ಬಂಗಾರ ಗೆದ್ದರು. ಹೀಗಾಗಿ ನೀರಜ್ ಚೋಪ್ರಾ ಅವರಿಗೆ ಬೆಳ್ಳಿಯ ಪದಕ ಲಭಿಸಿತು. ಅವರು 89.45 ದೂರ ಎಸೆಯುವ ಮೂಲಕ ಭಾರತಕ್ಕೊಂದು ಪದಕವನ್ನು ತಂದುಕೊಟ್ಟರು. ಇದು ಭಾರತದ ಪಾಲಿಗೆ ಹಾಲಿ ಆವೃತ್ತಿಯ ಒಲಿಂಪಿಕ್ಸ್‌ನಲ್ಲಿ ಐದನೇ ಪದಕ. ನೀರಜ್ ತಂದ ಬೆಳ್ಳಿಯೇ ಅದರಲ್ಲಿ ಗರಿಷ್ಠ ಪದಕವಾಗಿದೆ. ಆದಾಗ್ಯೂ ನೀರಜ್ ಚಿನ್ನ ಗೆಲ್ಲುತ್ತಾರೆಂಬ ಭಾರತದ ಕೋಟ್ಯಂತರ ಕ್ರೀಡಾಭಿಮಾನಿಗಳ ನಿರೀಕ್ಷೆ ಹುಸಿಯಾಯಿತು.
ನೀರಜ್ ಚೋಪ್ರಾ ಅವರ ಮೊದಲ ಎಸೆತವೇ ಪೌಲ್. ನಂತರದ ಎಸೆತದಲ್ಲಿ 89.45 ಮೀಟ‌ರ್ ದೂರ ಎಸೆದರು. ಅಲ್ಲದೆ ಆ ಬಳಿಕದ ನಾಲ್ಕು ಎಸೆತಗಳು ಪೌಲ್ ಆದವು. ತಮ್ಮ ಎಸೆತಗಳು ನಿರೀಕ್ಷೆಯಷ್ಟು ದೂರ ಹೋಗದ ಕಾರಣ ನಂತರದ ಮೂರು ಬಾರಿ ಅವರು ಅಂತಿಮ ಲೈನ್ ಮೆಟ್ಟಿ ಸ್ವತಃ ಪೌಲ್ ಮಾಡಿದರು. ಅರ್ಷದ್ 92. ಮೀಟರ್‌ಗಿಂತಲೂ ದೂರ ಎಸೆದ ತಕ್ಷಣವೇ ಒತ್ತಡಕ್ಕೆ ಬಿದ್ದ ನೀರಜ್‌ಗೆ ಚೇತರಿಸಿಕೊಳ್ಳುವುದಕ್ಕೆ ಸಾಧ್ಯವಾಗಲಿಲ್ಲ. ಆದರೆ, ಅರ್ಷದ್ ತಮ್ಮ ಕೊನೇ ಎಸೆತವನ್ನೂ 91. 79 ಮೀಟ‌ರ್ ದೂರ ಎಸೆದರು. ಅಂದ ಹಾಗೆ ಪಾಕಿಸ್ತಾನಕ್ಕೆ 32 ವರ್ಷಗಳ ಬಳಿಕ ಒಲಿಂಪಿಕ್ಸ್‌ನಲ್ಲಿ ಪದಕವೊಂದು ದೊರಕಿತು.
2021ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಗೆದ್ದ ಚಿನ್ನದ ಪದಕ ಉಳಿಸಿಕೊಳ್ಳುವುಕ್ಕೆ 26 ವರ್ಷದ ನೀರಜ್‌ಗೆ ಸಾಧ್ಯವಾಗಲಿಲ್ಲ. ಒಲಿಂಪಿಕ್ಸ್‌ನಲ್ಲಿ ಮತ್ತೊಂದು ಚಿನ್ನ ಗೆಲ್ಲುವ ಅವಕಾಶ ಅವರಿಗೆ ತಪ್ಪಿತು. ಮಂಗಳವಾರ ನಡೆದ ಅರ್ಹತಾ ಸ್ಪರ್ಧೆಯಲ್ಲಿ ನೀರಜ್ 89.34 ಮೀಟ‌ರ್ ಎಸೆಯುವ ಮೂಲಕ ನೇರವಾಗಿ ಅರ್ಹತೆ ಪಡೆದಿದ್ದರು. ಆಗಸ್ಟ್ 7, 2021ರಂದು, ನೀರಜ್ ಚೋಪ್ರಾ ಒಲಿಂಪಿಕ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದರು. ಫೈನಲ್‌ನಲ್ಲಿ ಅವರ ಎರಡನೇ ಎಸೆತವು 87.58 ಮೀಟರ್ ದೂರ ಹೋಗಿತ್ತು. ಅದರ ಮೂಲಕ ಅವರು ಚಿನ್ನ ಗೆದ್ದಿದ್ದರು.

ಭಾರತ ಹಾಕಿ ತಂಡ ಸ್ಪೇನ್ ದೇಶದ ವಿರುದ್ಧ ಗೆಲುವು

ಭಾರತ ಒಲಂಪಿಕ್ಸ್ ಅಲ್ಲಿ ಮತ್ತೊಂದು ಪದಕ ಗೆದ್ದಿದೆ. ಹಾಕಿಯಲ್ಲಿ ಕಂಚಿನ ಪದಕ ಗೆದ್ದಿದೆ.
ಸ್ಪೇನ್‌ನನ್ನು 2-1 ಗೋಲುಗಳಿಂದ ಮಣಿಸಿದ ಭಾರತ ತಂಡವು ಕಂಚಿನ ಪದಕ ಗೆದ್ದಿದೆ. 2020ರ ಟೋಕಿಯೋ ಒಲಿಂಪಿಕ್ಸ್‌ನಲ್ಲೂ ಭಾರತ ಪುರುಷರ ಹಾಕಿ ತಂಡ ಕಂಚು ಗೆದ್ದಿತ್ತು. ಕಂಚಿನ ಹೋರಾಟದಲ್ಲಿ ಸ್ಪೇನ್‌ ವಿರುದ್ಧ 2-1 ಅಂತರ ಗೋಲುಗಳ ಜಯ ದಾಖಲಿಸಿದೆ. ಭಾರತದ ಪರ ತನ್ನ ಅಂತಿಮ ಪಂದ್ಯವನ್ನು ಆಡಿದ ಅನುಭವಿ ಗೋಲ್‌ಕೀಪರ್ ಪಿ.ಆರ್.ಶ್ರೀಜೇಶ್ ಉತ್ತಮ ಪ್ರದರ್ಶನ ತೋರಿದರು.
1968 ಮತ್ತು 1972 ರಲ್ಲಿ ಭಾರತವು ಕೊನೆಯ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಹಾಕಿ ಪದಕಗಳನ್ನು ಗೆದ್ದಿತ್ತು. ಅದಾದ 52 ವರ್ಷಗಳ ಬಳಿಕ ಈಗ ಮತ್ತೊಮ್ಮೆ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದು ಇತಿಹಾಸ ಬರೆದಿದೆ.