Categories
ತೀರ್ಥಹಳ್ಳಿ

ದಾನಸಾಲೆಯಲ್ಲಿ ಜ.31ರಿಂದ ಫೆ.2ರ ತನಕ ಲೆದರ್ ಬಾಲ್ ಕ್ರಿಕೆಟ್!

ದಾನಸಾಲೆಯಲ್ಲಿ ಜ.31ರಿಂದ ಫೆ.2ರ ತನಕ ಲೆದರ್ ಬಾಲ್ ಕ್ರಿಕೆಟ್!
– ನ್ಯಾಷನಲ್ ಸ್ಪೋರ್ಟ್ಸ್ ಕ್ಲಬ್ ತೀರ್ಥಹಳ್ಳಿ, ಪ್ಲೇಯಿಂಗ್ XI ಫ್ರೆಂಡ್ಸ್ ತೀರ್ಥಹಳ್ಳಿಯ ಆಯೋಜನೆ
– ಮತ್ತೊಂದು ಸುದ್ದಿ: ಜೆಸಿಐ ಕೋಣಂದೂರಲ್ಲಿ ಓರಿಯೆಂಟೇಷನ್ ತರಬೇತಿ

NAMMUR EXPRESS NEWS
ತೀರ್ಥಹಳ್ಳಿ: ನ್ಯಾಷನಲ್ ಸ್ಪೋರ್ಟ್ಸ್ ಕ್ಲಬ್ ತೀರ್ಥಹಳ್ಳಿ ಆಯೋಜನೆಯ ಪ್ಲೇಯಿಂಗ್ XI ಫ್ರೆಂಡ್ಸ್ ತೀರ್ಥಹಳ್ಳಿ ಸಹಯೋಗದಲ್ಲಿ ಲೆದರ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದಾನಸಾಲೆ ಕ್ರೀಡಾಂಗಣದಲ್ಲಿ ನಡೆಯಲಿದೆ. 16 ವರ್ಷ ವಯೋಮಿತಿಯ ಮಕ್ಕಳ ಮೂರು ದಿನಗಳ ಕ್ರೀಡಾಕೂಟ ಜನವರಿ 31 ರಿಂದ ಫೆಬ್ರವರಿ 2 ರ ತನಕಅದ್ದೂರಿಯಾಗಿ ನಡೆಯಲಿದ್ದು ಸಮಸ್ತ ಕ್ರೀಡಾ ಪ್ರೇಮಿಗಳಿಗೆ ಕ್ರಿಕೇಟ್ ಹಬ್ಬ ನಡೆಯಲಿದೆ. ಮುಂದಿನ ಭವಿಷ್ಯದ ಕ್ರಿಕೆಟ್ ಆಡುವ ಮಕ್ಕಳಿಗೆ ನೋಡುವ ಪ್ರೇಕ್ಷಕರಿಗೆ ಮನೋರಂಜನೆಯ ಹಬ್ಬಕ್ಕೆ ಈ ಪಂದ್ಯಾಟ ಸಾಕ್ಷಿಯಾಗಲಿದೆ.

ಜೆಸಿಐ ಕೋಣಂದೂರಲ್ಲಿ ಓರಿಯೆಂಟೇಷನ್ ತರಬೇತಿ

ಕೋಣಂದೂರು: ಕೋಣಂದೂರು ಘಟಕದಲ್ಲಿ ಓರಿಯೆಂಟೇಷನ್ ತರಬೇತಿ ಜೆಸಿ ವಸಂತ್ ಕುಮಾರ್ ಅವರಿಂದ ನಡೆಸಲಾಯಿತು; ವಲಯ ಉಪಾಧ್ಯಕ್ಷರಾದ ಜೆಸಿ ಮಧುಸೂಧನ್ ನಾವಡ ಅವರು ಉಪಸ್ಥಿತರಿದ್ದು ನೂತನ ಸದಸ್ಯರಿಗೆ ಜೆಸಿಐ ಸಂಸ್ಥೆಗೆ ಜೆಸಿಐ ಪಿನ್ ನೀಡಿ ಸ್ವಾಗತಿಸಿದರು, ಮುಖ್ಯ ಅತಿಥಿಗಳಾಗಿ ಜೆಸಿ ರಾಜೇಶ್ ಕೀಳಂಬಿ ಅವರು ಸದಸ್ಯರನ್ನು ಇನ್ನಷ್ಟು ಪರಣಾಮಕಾರಿಯಾಗಿ ಜೆಸಿಐ ಸಂಸ್ಥೆಯಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಿದರು; ತೀರ್ಥಹಳ್ಳಿ ಘಟಕದ ಅಧ್ಯಕ್ಷರು ಮತ್ತು ಹಿರಿಯ ಸದಸ್ಯರು ಈ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು, ವಲಯ ನಿರ್ದೇಶಕರಾದ ಜೆ.ಎಫ್.ಎಸ್ ಸುದರ್ಶನ್ ಸರ್, ಜೆಸಿ ಹರೀಶ್ ಸರ್ಜಾ ಹಾಗು ನೂತನವಾಗಿ ರಾಷ್ಟ್ರೀಯ ಸಂಯೋಜಕರಾಗಿ ಆಯ್ಕೆಯಾದ ಜೆಸಿ ಅಭಿಜಿತ್ ಹಿರಿಯ ಅವರು ಉಪಸ್ಥಿತರಿದ್ದರು.

Categories
ತೀರ್ಥಹಳ್ಳಿ

ತೀರ್ಥಹಳ್ಳಿ ಅಭಿವೃದ್ಧಿಗೆ ಅಸಾದಿ ಹತ್ತು ಹಲವು ಕನಸು!

ತೀರ್ಥಹಳ್ಳಿ ಅಭಿವೃದ್ಧಿಗೆ ಅಸಾದಿ ಹತ್ತು ಹಲವು ಕನಸು!
– ಪಕ್ಷ ರಾಜಕಾರಣ ಚುನಾವಣೆ ವಿಚಾರದಲ್ಲಿ ಮಾತ್ರ
– ಸಂವಾದ ಕಾರ್ಯಕ್ರಮದಲ್ಲಿ ತೀರ್ಥಹಳ್ಳಿ ಅಭಿವೃದ್ಧಿ ಮಾಹಿತಿ

NAMMUR EXPRESS NEWS
ತೀರ್ಥಹಳ್ಳಿ: ಎಲ್ಲರನ್ನೂ ಜೊತೆಗೂಡಿ ಕೆಲಸ ಮಾಡುವ ಪ್ರಯತ್ನ ನನ್ನದು, ಅಭಿವೃದ್ಧಿ ವಿಚಾರದಲ್ಲಿ ಪಕ್ಷ ರಾಜಕಾರಣ ಮಾಡಲ್ಲ…ಚುನಾವಣೆ ವಿಚಾರದಲ್ಲಿ ಮಾತ್ರ! ಅದನ್ನು ಹೊರತುಪಡಿಸಿ ನಾವೆಲ್ಲಾ ಸದಸ್ಯರು ಒಟ್ಟುಗೂಡಿ ಜನರಿಗೆ ತೊಂದರೆಯಾಗದ ರೀತಿಯಲ್ಲಿ ಅಭಿವೃದ್ಧಿ ಪರವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ಪಟ್ಟಣ ಪಂಚಾಯತ್ ಅಧ್ಯಕ್ಷ ರಹಮತುಲ್ಲಾ ಅಸಾದಿ ಹೇಳಿದ್ದಾರೆ. ತೀರ್ಥಹಳ್ಳಿ ಪ್ರವಾಸಿ ಮಂದಿರದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಟ್ಟಣದಲ್ಲಿ ಆಗುತ್ತಿರುವ ಪ್ರಗತಿ, ಕೊಡುಗೆ, ಅಭಿವೃದ್ಧಿ ಹಾಗೂ ಕಾಮಗಾರಿಯ ಬಗ್ಗೆ ಮಾಹಿತಿ ನೀಡಿದರು. ಪಟ್ಟಣ ಪಂಚಾಯತ್ ನನಗೆ ಜವಾಬ್ದಾರಿ ನೀಡಿ 5 ತಿಂಗಳು ಮುಗಿದಿದೆ, ಕೆಲವೊಂದು ಕಾಮಗಾರಿ, ಯೋಜನೆಗಳನ್ನು ಅನುಷ್ಠಾನಕ್ಕೆ ತರಬೇಕಾದರೆ ಎಲ್ಲರ ಸಹಕಾರ ಮುಖ್ಯ. ತೀರ್ಥಹಳ್ಳಿಯಲ್ಲೇ ಸಾಕಷ್ಟು ಜನ ಹೆಸರು ಮಾಡಿದ್ದಾರೆ ಅಂತಹ ಮುಖ್ಯ ವ್ಯಕ್ತಿಗಳನ್ನು ಸೇರಿಸುವ, ಹೆಸರುಮಾಡಿ ಪ್ರಸಿದ್ಧಿ ಪಡೆದಿರುವ ಸುಮಾರು 14 ವೈದ್ಯರನ್ನು ಕರೆಸಿ ಆರೋಗ್ಯ ಸಂಬಂಧಪಟ್ಟ ಆರೋಗ್ಯ ಶಿಬಿರ ನಡೆಸುವಂತದ್ದು, ಹೀಗೆ ಸಾಕಷ್ಟು ಕಾರ್ಯಗಳನ್ನು ಮಾಡಿದ್ದೇವೆ.ವಿಶೇಷವಾಗಿ ಹೊಸತನದ ರಸ್ತೆ, ಕುಡಿಯುವ ನೀರು ಇದೆಲ್ಲಾ ಜನರಿಗೆ ಬಹುಮುಖ್ಯ ಎಂದರು.

ತುಂಗಾ ನೀರು ಕಲುಷಿತ: ಶುದ್ದೀಕರಣ ಘಟಕ ಸ್ಥಾಪನೆ

ಕೊಳಚೆ ನೀರಿನಿಂದ ತುಂಗಾನದಿ ಕಲುಷಿತವಾಗುತ್ತಿದೆ. ತಡೆಗಟ್ಟಲು ಪಟ್ಟಣದ ನಾಲ್ಕು ಕಡೆಗಳಲ್ಲಿ ಶುದ್ದೀಕರಣ ಘಟಕ ಸ್ಥಾಪನೆ ಮಾಡಲಾಗಿದೆ. ಕಸ, ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಯಂತ್ರಗಳ ಮೂಲಕ ಗೊಬ್ಬರ ತಯಾರಿಸಲು ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಲಾಗಿದೆ. ಈಗಾಗಲೇ ರಾಜ್ಯದಲ್ಲಿ ಯಶಸ್ವಿಯಾಗಿರುವ ಘಟಕಗಳನ್ನು ಕಂಡು ಇಲ್ಲಿ ಅದನ್ನು ಅಳವಡಿಸಿಕೊಳ್ಳಲು ಆಲೋಚನೆಯಾಗಿದೆ ಎಂದರು. ಬೀಡಾಡಿ ದನಗಳ ಸಮಸ್ಯೆ ನಿವಾರಿಸಲು ಪಟ್ಟಣದ ಸುತ್ತಮುತ್ತ ಇರುವ ಗೋಮಾಳ ಜಾಗ ಗುರುತಿಸಿ ಗೋಶಾಲೆ ನಿರ್ಮಾಣಕ್ಕೆ ಪ್ರಸ್ತಾಪನೆ ಮಾಡಿದರು. ಪಟ್ಟಣದ ಸರ್ವತೋಮುಖ ಅಭಿವೃದ್ಧಿಗೆ ನಾವೆಲ್ಲರೂ ಸೇರಿ ಕೆಲಸ ಮಾಡೋಣ ಎಂದು ಅವರು ಮನವಿ ಮಾಡಿದರು. ಪತ್ರಕರ್ತರ ಸಂಘದ ಅಧ್ಯಕ್ಷರಾದ ಮೋಹನ್ ಮುನ್ನೂರು, ಪತ್ರಕರ್ತ ಸಂಘದ ಮುರುಘರಾಜ್ ಕೋಣಂದೂರು, ಸಂತೋಷ್ ಸೇರಿ ಸದಸ್ಯರು ಇದ್ದರು.

ತೀರ್ಥಹಳ್ಳಿ ಪಟ್ಟಣ ಕಾರ್ಮಿಕರಿಗೆ ಸಮವಸ್ತ್ರ ಭಾಗ್ಯ!

ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ಪೌರಕಾರ್ಮಿಕರಿಗೆ ನೀರು ಸರಬರಾಜು ಸಿಬ್ಬಂದಿ ಹಾಗೂ ಟ್ರಾಕ್ಟರ್ ಡ್ರೈವರ್ ಗಳಿಗೆ ಪಟ್ಟಣ ಪಂಚಾಯಿತಿ ವತಿಯಿಂದ ಸಮವಸ್ತ್ರ ಮತ್ತು ಗುರುತಿನ ಚೀಟಿ ಐಡೆಂಟಿಟಿ ಕಾರ್ಡನ್ನು ಗಣರಾಜ್ಯೋತ್ಸವ ಸಂದರ್ಭದಲ್ಲಿ ವಿತರಿಸಲಾಯಿತು.. ಈ ಸಂದರ್ಭದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರಾದಂತಹ ಗಣಪತಿ ಪಟ್ಟಣ ಪಂಚಾಯಿತಿ ಸದಸ್ಯರು ಶೆಟ್ಟಿ ಪ್ರಕಾಶ್ ಶೆಟ್ಟಿ ಜ್ಯೋತಿ ಮೋಹನ್ ರತ್ನಾಕರ್ ಶೆಟ್ಟಿ ಮುಖ್ಯ ಅಧಿಕಾರಿಗಳಾದಂತಹ ಡಿ ನಾಗರಾಜ್ ಪಟ್ಟಣ ಪಂಚಾಯತಿ ಸಿಬ್ಬಂದಿ ವರ್ಗ ಸಮ್ಮುಖದಲ್ಲಿ ಸಮವಸ್ತ್ರ ವಿತರಿಸಲಾಗಿದೆ.

Categories
ಅಡಿಕೆ-ದರ

ಇಂದಿನ ಅಡಿಕೆ ದರ ಎಷ್ಟಿದೆ?

ಇಂದಿನ ಅಡಿಕೆ ದರ ಎಷ್ಟಿದೆ?
– ಅಡಿಕೆ ದರ ಏರಿಕೆಯೋ? ಇಳಿಕೆಯೋ?

NAMMUR EXPRESS NEWS

ಸರಕು
55099-86999

ಬೆಟ್ಟೆ
46899-54600-56899

ರಾಶಿ
43089-49850-51299

ಗೊರಬಲು
18100-24800-27800

Categories
ಮಲ್ನಾಡ್

ಟಾಪ್ 5 ನ್ಯೂಸ್ ಮಲ್ನಾಡ್

ಟಾಪ್ 5 ನ್ಯೂಸ್ ಮಲ್ನಾಡ್
– ಮತ್ತೋರ್ವ ನಕ್ಸಲ್ ಸರ್ಕಾರದ ಮುಂದೆ ಶರಣು!?
– ಹೊಸನಗರ : ಅತಿಯಾದ ರಕ್ತಸ್ರಾವ: ಗರ್ಭಿಣಿ ಸಾವು
– ಶಿವಮೊಗ್ಗ : ಕೊಟ್ಟಿಗೆಯಲ್ಲಿ ಕಟ್ಟಿದ ಕರು ಮೇಲೆ‌ ಚಿರತೆ ದಾಳಿ
– ಶಿವಮೊಗ್ಗ : ಫೈನಾನ್ಸ್ ಕಿರುಕುಳ: ಆಟೋ ಚಾಲಕ ಆತ್ಮಹತ್ಯೆ ಯತ್ನ
– ಶಿವಮೊಗ್ಗ : ಸಕ್ರಬೈಲಿನಲ್ಲಿ ಆನೆಯೊಂದು ಮಾವುತನನ್ನ ಕೆಡವಿದ ಪರಿಣಾಮ ತಲೆ ಹಾಗೂ ಕೈಗೆ ಅತಿಯಾದ ಹೊಡೆತ

NAMMUR EXPRESS NEWS
ಚಿಕ್ಕಮಗಳೂರು:
ಜಿಲ್ಲೆಯ ಕಾಡಿನ ತಂಡದಿಂದ ಬೇರ್ಪಟ್ಟು ತಪ್ಪಿಸಿಕೊಂಡಿದ್ದ ಮತ್ತೋರ್ವ ನಕ್ಸಲ್ ಶರಣಾಗತಿಗೆ ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ. ಆತ ಶಾಂತಿಗಾಗಿ ನಾಗರಿಕ ವೇದಿಕೆ ಸದಸ್ಯರನ್ನು ಆತ ಸಂಪರ್ಕಿಸಿದ್ದಾನೆ ಎಂದು ಅರ್ಹ ಮೂಲಗಳು ತಿಳಿಸಿವೆ. ಶೃಂಗೇರಿ ತಾಲೂಕಿನ ಕಿಗ್ಗಾ ಸಮೀಪದ ನಕ್ಸಲ್ ರವೀಂದ್ರ ಶರಣಾಗತಿಗೆ ಮುಂದಾಗಿರುವ ನಕ್ಸಲ್‌ ಆರೋಪಿ. ಶಾಂತಿಗಾಗಿ ನಾಗರಿಕ ವೇದಿಕೆ ಸದಸ್ಯರನ್ನು ರವೀಂದ್ರ ಸಂಪರ್ಕಿಸಿದ್ದು, ಇನ್ನೊಂದು ವಾರದಲ್ಲಿ ಶರಣಾಗತಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಜನವರಿ 8ರಂದು ಆರು ಮಂದಿ ನಕ್ಸಲರು ಮುಖ್ಯಮಂತ್ರಿ ಸಮ್ಮುಖದಲ್ಲಿ ಬೆಂಗಳೂರಿನಲ್ಲಿ ಶರಣಾಗಿದ್ದರು. ಈ ಮಧ್ಯೆ ನಕ್ಸಲ್ ರವೀಂದ್ರ ಕೇರಳ ಅಥವಾ ತಮಿಳುನಾಡಿಗೆ ಪರಾರಿಯಾಗಿರುವ ವದಂತಿ ಹಬ್ಬಿತ್ತು. ಈಗ ಸುಳ್ಳಾಗಿದ್ದು, ಮುಂದಿನ ವಾರ ಸರ್ಕಾರದ ಮುಂದೆ ಶರಣಾಗುವ ಸಂಭವವಿದೆ.

– ಹೊಸನಗರ : ಅತಿಯಾದ ರಕ್ತಸ್ರಾವದಿಂದ ಒಂದುವರೆ ತಿಂಗಳ ಗರ್ಭಿಣಿ ಸಾವು

ಹೊಸನಗರ : ಒಂದುವರೆ ತಿಂಗಳು ಗರ್ಭಿಣಿಗೆ
ಗರ್ಭಪಾತವಾಗಿ ಅತಿಯಾದ ರಕ್ತಸ್ರಾವವಾಗಿ ಮೃತಪಟ್ಟಿರುವ ಘಟನೆ ವರದಿಯಾಗಿದೆ. ಗರ್ಭಿಣಿಯರಿಗೂ ಸೂಕ್ತ ಚಿಕಿತ್ಸೆ ಇಲ್ಲವೆಂಬದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಹೊಸನಗರ ತಾಲೂಕಿನ ದುಬಾರತಟ್ಟಿ ಗ್ರಾಮದಲ್ಲಿ ಶಿಕ್ಷಕಿಯಾಗಿದ್ದ ಅಶ್ವಿನಿ ಕೆ.ಆರ್ ಎಂಬುವರು ಒಂದುವರೆ ವರ್ಷದ ಹಿಂದೆ ಪ್ರಕಾಶ್ ಎಂಬುವರ ಜೊತೆಗೆ ಮದುವೆ ಮಾಡಿಕೊಡಲಾಗಿತ್ತು. ನಗರದ ಅಮೃತಾನಂದ ಮಯಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡಿಕೊಂಡಿದ್ದರು. ಪ್ರಕಾಶರವರು ಕೋಳಿ ಅಂಗಡಿ ನಡೆಸಿಕೊಂಡಿದ್ದರು. ಜ.24 ರಂದು ಅಶ್ವಿನಿಯು ಗರ್ಭಿಣಿಯಾಗಿರುವುದು ತವರು ಮನೆಗೆ ತಿಳಿಸಿದ್ದರು. ಆದರೆ ಜ.26 ರಂದು ರಕ್ತಸ್ರಾವವಾಗಿದ್ದರಿಂದ ಸಾಗರದ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದರು. ಮತ್ತೆ ಸಂಜೆ ರಕ್ತಸ್ರಾವ ಹೆಚ್ಚಾದ ಪರಿಣಾಮ ಅವರನ್ನ ಸಾಗರದಿಂದ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಕರೆತರಲಾಗಿತ್ತು. ಖಾಸಗಿ ಆಸ್ಪತ್ರೆಗೆ ಕರೆತರುವಾಗಲೆ ಶಿಕ್ಷಕಿ ಸಾವನ್ನಪ್ಪಿದ್ದಾಳೆ. ಇತ್ತೀಚೆಗೆ ಬಾಣಂತಿ ಸಾವು ಸಂಚಲನ ಮೂಡಿಸಿತ್ತು. ಈಗ ಗರ್ಭಿಣಿಯರನ್ನೂ ಉಳಿಸಿಕೊಳ್ಳಲು ಸಾಧ್ಯವಾಗದಂತಾಗಿದೆ.

– ಶಿವಮೊಗ್ಗ : ಕೊಟ್ಟಿಗೆಯಲ್ಲಿ ಕಟ್ಟಿದ ಕರು ಮೇಲೆ‌ ಚಿರತೆ ದಾಳಿ

ಶಿವಮೊಗ್ಗ : ಕೊಟ್ಟಿಗೆಯಲ್ಲಿ ಕಟ್ಟಿದ ಕರು ಮೇಲೆ‌ ಚಿರತೆ ದಾಳಿ ಮಾಡಿ ಗಾಯಗೊಳಿಸಿರುವ ಘಟನೆ ತಮ್ಮಡಿಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಚಿಲುಮೆಜಡ್ಡಿನ ರುಕ್ಮಿಣಮ್ಮನವರ ಮನೆಯಲ್ಲಿ ನಡೆದಿದೆ. ಕೊಟ್ಟಿಗೆಯಲ್ಲಿ‌ ಕಟ್ಟಿದ್ದ ಕರುವಿನ ಮೇಲೆ‌ ಏಕಾಏಕಿ ದಾಳಿ‌ ನಡೆಸಿದ್ದು, ಕರು ಅರಚಿಕೊಂಡಾಗ ಎದ್ದು ಲೈಟ್ ಹಾಕಿದಾಗ ಚಿರತೆ ಕರು ಬಿಟ್ಟು ಪರಾರಿಯಾಗಿದೆ. ಇದರಿಂದಾಗಿ ಕರುವಿನ ಮುಖಕ್ಕೆ ತೀವ್ರ ಗಾಯವಾಗಿದೆ. ಕರುವಿಗೆ ಚಿಕಿತ್ಸೆ ನೀಡಲಾಗಿದೆ. ಎರಡು ವಾರದ ಹಿಂದೆ ಪಕ್ಕದ ಊರು‌ ಗುಬ್ಬಿಗದಲ್ಲಿ‌ ಚಿರತೆ ನಾಯಿಯನ್ನು ಹೊತ್ತುಕೊಂಡು ಹೋಗಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ನಿರಂತರವಾಗಿ ನಾಯಿಗಳನ್ನು ಹೊತ್ತೊಯ್ಯುತ್ತಿರುವ ಚಿರತೆ ಇದೀಗ ಕೊಟ್ಟಿಗೆ ಒಳಗೆ ದಾಳಿ ನಡೆಸಿ ಹಸುಗಳನ್ನು ಹೊತ್ತೊಯ್ಯಲು ಆರಂಭಿಸಿರುವುದು ಗ್ರಾಮಸ್ಥರಲ್ಲಿ ಆತಂಕಕ್ಕೆ ಕಾರಣವಾಗಿದೆ.

– ಶಿವಮೊಗ್ಗ : ಫೈನಾನ್ಸ್ ಗಳ ಕಿರುಕುಳಕ್ಕೆ ಆಟೋ ಚಾಲಕ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ದಾಖಲು

ಶಿವಮೊಗ್ಗ : ಫೈನಾನ್ಸ್ ಗಳ ಕಿರುಕುಳಕ್ಕೆ ಆಟೋ ಚಾಲಕ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.‌ ಬಜಾಜ್ ಮತ್ತು ಟಿವಿಎಸ್ ಫೈನಾನ್ಸ್ ನಿಂದ ಸಾಲ ಪಡೆದ ಆಟೋ ಚಾಲಕ ವಿದ್ಯಾನಗರದ ರೈಲ್ವೆ ಗೇಟ್ ಬಳಿ ವಿಷ ಸೇವಿಸಿ ಮಲಗಿದ್ದವರು. ಅವರನ್ನ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಜಾಜ್ ನಲ್ಲಿ 1.40 ಸಾಲ ಪಡೆದಿದ್ದರು. ಇದಕ್ಕೆ ತಿಂಗಳು 8.031 ಕಂತು ಕಟ್ಟುತ್ತಿರುವುದಾಗಿ.‌ ಒಂದು ವರ್ಷ ತೀರಿಸಿರುವುದಾಗಿ ವಿಷ ಸೇವಿಸಿದ ಚಾಲಕ ವಿವರಿಸಿದ್ದಾರೆ ಮತ್ತು ಟಿವಿಎಸ್ ಫೈನಾನ್ಸ್ ನಲ್ಲಿ 1.55 ಲಕ್ಷ ಸಾಲ ಮಾಡಿದ್ದು. 25 ಕಂತು ಹಣ ತುಂಬಿದ್ದಾರೆ. ಆದರೂ ಫೈನಾನ್ಸ್ ನವರು ಸೋಮವಾರ ಏಳು ಗಂಟೆಗೆ ಬಂದು ಮನೆ ಕದತಟ್ಟುತ್ತಾರೆ ಎಂದು ಆಟೋ ಚಾಲಕ ಆರೋಪಿಸಿದ್ದಾರೆ. ಈ ತಿಂಗಳು ಕಟ್ಟಿಲ್ಲ.‌ ಹಾಗಾಗಿ ಮನೆಗೆ ಬಂದು ತೊಂದರೆ ಕೊಡುತ್ತಿದ್ದಾರೆ ಎಂದಿದ್ದಾರೆ. ಪುರಲೆ ನಿವಾಸಿ ನಾಗೇಶ (35) ಆಟೋ ಡ್ರೈವರ್ ಆಗಿದ್ದರು. ಚಾಲಕರಿಗೆ ಎರಡು ಹೆಣ್ಣುಮಕ್ಕಳಿದ್ದಾರೆ. ನಿನ್ನೆ ಸಂಜೆ ಟಾರ್ಚರ್ ತಡೆಯಲಾಗದೆ ಚಿಕ್ಕಲ್ ಫ್ಲೈಓವರ್ ಕೆಳಗೆ ವಿಷ ಸೇವಿಸಿ ಮಲಗಿದ್ದ ನಾಗೇಶ್ ರನ್ನ ಮೆಗ್ಗಾನ್ ಗೆ ದಾಖಲಿಸಲಾಗಿದೆ. ಹೆಂಡತಿ ಹೆರಿಗೆ ವೇಳೆ ನಾಗೇಶ್ ಸಾಲ ಮಾಡಿದ್ದರು. ಎರಡೂ ಫೈನಾನ್ಸ್ ಗೆ ಒಟ್ಟು 27 ಕಂತು ತುಂಬಿದ್ದರು. ಈ ತಿಂಗಳು ಸಾಲ ಕಟ್ಟಲು ಸಾಧ್ಯವಾಗಿಲ್ಲ. ಮನೆಗೆ ಯಾವ ಸಮಯದಲ್ಲಿ ಫೈನಾನ್ಸ್ ಅವರು ಕದತಟ್ಟುತ್ತಾರೋ ಗೊತ್ತಿಲ್ಲ ಎಂಬ ಭಯಕ್ಕೆ ನಾಗೇಶ್ ಹೆದರಿ ವಿಷ ಸೇವಿಸಿದ್ದಾರೆ.

– ಶಿವಮೊಗ್ಗ : ಸಕ್ರೆ ಬೈಲಿನಲ್ಲಿ ಆನೆಯೊಂದು ಮಾವುತನನ್ನ ಕೆಡವಿದ ಪರಿಣಾಮ ತಲೆ ಹಾಗೂ ಕೈ ಗೆ ಅತಿಯಾದ ಹೊಡೆತ

ಶಿವಮೊಗ್ಗ : ಸಕ್ರೆ ಬೈಲಿನಲ್ಲಿ ಆನೆಯೊಂದು ಮಾವುತನನ್ನ ಕೆಡವಿದೆ. ಮಾವುತ ಮೊಹಮದ್ ಗೌಸ್ ಗೆ ತಲೆಗೆ ಹೊಡೆತಬಿದ್ದಿದ್ದು ಎರಡು ಮೂರು ಸ್ಟಿಚ್ ಹಾಕಲಾಗಿದೆ. ಎಡ ಕೈ ಮುರಿದಿದೆ. ಆನೆ ಬಿಡಾರದಲ್ಲಿ ಆನೆಯೊಂದು ಮದವೇರಿದ ಕಾರಣ ಮಾವುತನನ್ನ ಕೆಡವಿದೆ ಎನ್ನಲಾಗಿದೆ. ಆದರೆ ಅರಣ್ಯ ಅಧಿಕಾರಿಗಳು ಈ ಆನೆಗೆ ಮದವೇರಿರುವುದು ಅಲ್ಲೆಗಳೆದಿದ್ದು ಮಾವುತ ಮೇಲಿಂದ ಬಿದ್ದಿರುವುದರಿಂದ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಸಕ್ರೆಬೈಲಿನಲ್ಲಿ ಖಾಯಂ ಕೆಲಸ ಮಾಡುತ್ತಿದ್ದ ಗೌಸ್(38) 21 ವರ್ಷದಿಂದ ಮಾವುತರಾಗಿ ಕೆಲಸ ಮಾಡಿಕೊಂಡು ಬಂದಿದ್ದಾರೆ. ಆಲೆ 14 ವರ್ಷದ ಆನೆಯಾಗಿದ್ದು. ಆಲೆಯನ್ನ ನದಿಗೆ ಕರೆದೊಯ್ಯುವಾಗ ಮಾವುತ ನನ್ನ ಕೆಡವಿದೆ ಎಂದು ಹೇಳಲಾಗುತ್ತಿದೆ. ಆಲೆ ಆನೆ ನೇತ್ರಾವತಿಯ ಮರಿಯಾಗಿದೆ. ಆಲೆಯನ್ನ ನೀರಿಗೆ ಕರೆದೊಯ್ಯುವಾಗ ಸಾರ್ವಜನಿಕರೂ ಇದ್ದರು. ಆದರೆ ಸಾರ್ವಜನಿಕರಿಗೆ ಪೆಟ್ಟಾಗಿರುವ ಬಗ್ಗೆ ಮಾಹಿತಿ ಇಲ್ಲ. 15 ದಿನಗಳ ಹಿಂದೆ ಆಲೆಗೆ ಮದ ಬಂದಿದೆ ಎನ್ನಲಾಗಿದೆ. ಆಲೆಗೆ ಮದ ಬಂದಿದ್ದರೂ ಕ್ಯಾಂಪ್ ಗೆ ಕರೆತಂದಿರುವ ಬಗ್ಗೆ ಚರ್ಚೆಗೆ ಗ್ರಾಸವಾಗಿದೆ.

Categories
ರಾಜ್ಯ

ಟಾಪ್ 3 ನ್ಯೂಸ್

ಟಾಪ್ 3 ನ್ಯೂಸ್
– ವಿವಾಹೇತರ ಸಂಬಂಧ ಬೆಸೆಯುವಲ್ಲಿ ಬೆಂಗಳೂರು ನಂ.1
– ಮಧ್ಯವಯಸ್ಕ ಮಹಿಳೆಯರಿಂದ ಹೆಚ್ಚು ಬಳಕೆ
– ರಾಜ್ಯದಲ್ಲಿ ತೀವ್ರ ಚಳಿ ನಡುವೆ ಮತ್ತೆ ಮಳೆ
– ಫೆ.1 ರಿಂದ ರಾಜ್ಯದಲ್ಲಿ ಮಳೆಯಾಗುವ ಸಾಧ್ಯತೆ
– 4 ತಿಂಗಳಿಂದ ಅನ್ನಭಾಗ್ಯ ಯೋಜನೆಯ 5 ಕೆಜಿ ಅಕ್ಕಿ ಹಣ ಜಮೆಯಾಗಿಲ್ಲ

NAMMUR EXPRESS NEWS
ವಿವಾಹೇತರ ಪ್ರೇಮ, ದೈಹಿಕ ಸಂಬಂಧಗಳು ವೈವಾಹಿಕ ಜೀವನ ಹಾಳು ಮಾಡುತ್ತಿರುವ ಹೊತ್ತಿನಲ್ಲೇ, ವಿವಾಹೇತರ ಸಂಬಂಧ ಬೆಸೆಯುವ ‘ಗ್ಲೀಡನ್’ ಆ್ಯಪ್‌ನಲ್ಲಿ 30 ಲಕ್ಷಕ್ಕೂ ಹೆಚ್ಚು ಭಾರತೀಯರು ನೊಂದಾಯಿಸಿಕೊಂಡಿದ್ದಾರೆ. ಈ ಪೈಕಿ ಬೆಂಗಳೂರು ಶೇ.20ರಷ್ಟು ಬಳಕೆದಾರರೊಂದಿಗೆ ನಂ.1 ಸ್ಥಾನದಲ್ಲಿದೆ ಎಂದು ವರದಿಯೊಂದು ಹೇಳಿದೆ. ಗ್ಲೀಡನ್ ಬಿಡುಗಡೆ ಮಾಡಿರುವ ವರದಿ ಅನ್ವಯ, 2024ರಲ್ಲಿ ಶೇ.270ರಷ್ಟು ಜನ ಹೊಸದಾಗಿ ಆ್ಯಪ್‌ನಲ್ಲಿ ಹೆಸರು ನೊಂದಾಯಿಸಿಕೊಂಡಿದ್ದಾರೆ. ಈ ಪೈಕಿ ಶೇ.128 ಹೊಸ ಮಹಿಳೆಯರು. ಒಟ್ಟು ಬಳಕೆದಾರರ ಪೈಕಿ ಶೇ.40ರಷ್ಟು 30 ರಿಂದ 45 ವಯಸ್ಸಿನ ವಿವಾಹಿತ ಸ್ತ್ರೀಯರೇ ಇದ್ದಾರೆ. ಮುಂಬೈನಲ್ಲಿ ಶೇ.19, ಕೋಲ್ಕತಾದಲ್ಲಿ ಶೇ.18, ದೆಹಲಿಯಲ್ಲಿ ಶೇ.15ರಷ್ಟು ಗ್ಲೀಡನ್ ಬಳಕೆದಾರರಿದ್ದಾರೆ. ಈ ಬೆಳವಣಿಗೆಯನ್ನು ಗ್ಲೀಡನ್‌ನ ಭಾರತದ ವ್ಯವಸ್ಥಾಪಕ ಸಿಬಿಲ್‌ ಶಿಡ್ಡೆಲ್, ಸಾಮಾಜಿಕ ವ್ಯವಸ್ಥೆಯಲ್ಲಾಗುತ್ತಿರುವ ಬದಲಾವಣೆ ಎಂದು ಬಣ್ಣಿಸಿದ್ದಾರೆ. ಅತ್ತ ಗ್ಲೀಡನ್ ಮುಂದಿನ ದಿನಗಳಲ್ಲಿ 5 ದಶಲಕ್ಷ ಬಳಕೆದಾರರನ್ನು ಹೊಂದುವ ಗುರಿ ಇಟ್ಟುಕೊಂಡಿದೆ

ರಾಜ್ಯದಲ್ಲಿ ತೀವ್ರ ಚಳಿ ನಡುವೆ ಮತ್ತೆ ಮಳೆ
– ಫೆ.1 ರಿಂದ ರಾಜ್ಯದಲ್ಲಿ ಮಳೆಯಾಗುವ ಸಾಧ್ಯತೆ

ಬೆಂಗಳೂರು: ಫೆ.1 ರಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮತ್ತೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಫೆ.1 ರಿಂದ 2 ದಿನಗಳ ಕಾಲ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ತುಮಕೂರು, ಶಿವಮೊಗ್ಗ, ರಾಮನಗರ, ಮೈಸೂರು, ಮಂಡ್ಯ, ಕೋಲಾರ, ಹಾಸನ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಗದಗ, ಧಾರವಾಡ, ಬಾಗಲಕೋಟೆ , ದಕ್ಷಿಣ ಕನ್ನಡ, ಉಡುಪಿಯಲ್ಲಿ ಮಳೆಯಾಗಲಿದೆ. ರಾಜ್ಯದಲ್ಲಿ ತೀವ್ರ ಚಳಿ ಉಂಟಾಗಿದ್ದು, ಇದರ ನಡುವೆ ಹವಾಮಾನ ಇಲಾಖೆ ಭಾರಿ ಮಳೆ ಮುನ್ಸೂಚನೆ ನೀಡಿದೆ.

– 4 ತಿಂಗಳಿಂದ ಅನ್ನಭಾಗ್ಯ ಯೋಜನೆಯ 5 ಕೆಜಿ ಅಕ್ಕಿ ಹಣ ಜಮೆಯಾಗಿಲ್ಲ

ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ‘ಅನ್ನಭಾಗ್ಯ’ದಡಿ ಅಕ್ಕಿ ಬದಲಾಗಿ ನೀಡುತ್ತಿರುವ ಹಣ ಕಳೆದ 4 ತಿಂಗಳಿಂದ ಫಲಾನುಭವಿಗಳ ಖಾತೆಗೆ ಜಮೆಯಾಗಿಲ್ಲ. ಈಗಾಗಲೇ ಸಾಕಷ್ಟು ಬಾರಿ ಈ ಸಮಸ್ಯೆ ಎದುರಾದರೂ, ಪರಿಹರಿಸುವ ನಿಟ್ಟಿನಲ್ಲಿ ಯಾವೊಬ್ಬರೂ ಕ್ರಮ ವಹಿಸಿಲ್ಲ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ 4 ತಾಲೂಕಿನಲ್ಲಿ ಒಟ್ಟು 2.30 ಲಕ್ಷ ಬಿಪಿಎಲ್‌ ಪಡಿತರ ಚೀಟಿದಾರರು ಇದ್ದಾರೆ. ಇದರಲ್ಲಿ ಬ್ಯಾಂಕ್‌ ಖಾತೆ, ಕೆವೈಸಿ ಸೇರಿದಂತೆ ಇನ್ನಿತರೆ ಕಾರಣಗಳಿಂದ ಕೆಲ ಕುಟುಂಬಗಳಿಗೆ ಅನ್ನಭಾಗ್ಯದ ಹಣ ಪಡೆಯಲು ಸಾಧ್ಯವಾಗಿಲ್ಲ. ಇನ್ನುಳಿದಂತೆ ಆದ್ಯತಾ ಪಡಿತರ ಚೀಟಿ ಹೊಂದಿರುವವರಿಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ ಅನ್ವಯ 5 ಕೆ.ಜಿ. ಅಕ್ಕಿಯೊಂದಿಗೆ ರಾಜ್ಯ ಸರ್ಕಾರ ಹೆಚ್ಚುವರಿಯಾಗಿ 5 ಕೆ.ಜಿ. ಅಕ್ಕಿ ನೀಡಲು ಕ್ರಮವಹಿಸಿತ್ತು. ಆದರೆ ಅಕ್ಕಿ ಕೊರತೆ ಕಾರಣದಿಂದ 5 ಕೆ.ಜಿ ಅಕ್ಕಿ ಬದಲು ಪ್ರತಿ ಕೆ.ಜಿಗೆ 34ರೂ.ರಂತೆ ಪಡಿತರ ಚೀಟಿಯಲ್ಲಿರುವ ಕುಟುಂಬದ ಮುಖ್ಯಸ್ಥರ ಖಾತೆಗೆ ಹಣ ಜಮೆ ಮಾಡಲು ಮುಂದಾಗಿತ್ತು. ಆದರೆ ಈ ಡಿಬಿಟಿ ಮೂಲಕ ಖಾತೆ ಜಮೆ ಮಾಡುವ ಕಾರ್ಯ ಸಮರ್ಪಕವಾಗಿ ಪ್ರತಿ ತಿಂಗಳು ಆಗದೆ ಫಲಾನುಭವಿಗಳು ಪ್ರತಿ ತಿಂಗಳು ಕಾಯುವ ಪರಿಸ್ಥಿತಿ ಆಗಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಸರ್ಕಾರ ಕ್ರಮ ವಹಿಸಬೇಕು.

Categories
ರಾಜ್ಯ

ಕಿರುಕುಳ ನೀಡಿದರೆ ಮೈಕ್ರೋ ಫೈನಾನ್ಸ್ ವಿರುದ್ದ ಕ್ರಿಮಿನಲ್ ಕೇಸ್‌?!

ಕಿರುಕುಳ ನೀಡಿದರೆ ಮೈಕ್ರೋ ಫೈನಾನ್ಸ್ ವಿರುದ್ದ ಕ್ರಿಮಿನಲ್ ಕೇಸ್‌?!
– ಎಸ್‌ಪಿಗಳಿಗೆ ರಾಜ್ಯ ಸರಕಾರ ಸೂಚನೆ: ಏನಿದು ಆರ್ಡರ್?
– ರಾಜ್ಯದಲ್ಲಿ ಮತ್ತೆ ಮೂವರು ನೇಣಿಗೆ ಶರಣು

NAMMUR EXPRESS NEWS
ಬೆಂಗಳೂರು: ರಾಜ್ಯ ಸರಕಾರ ಮೈಕ್ರೋ ಫೈನಾನ್ಸ್ ಕಿರುಕುಳ ನೀಡುವುದು ಕಂಡು ಬಂದರೆ ಕ್ರಿಮಿನಲ್ ಪ್ರಕರಣ ದಾಖಲಿಸಿ ಎಂದ ಜಿಲ್ಲಾಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದೆ.
ಸಿಎಂ ನೇತೃತ್ವದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳು 59 ಸಾವಿರ ಕೋಟಿ ಸಾಲ ನೀಡಿದೆ. ಇವರು ಆರ್‌ಬಿಐ ಗೈಡ್ರೈನ್ಸ್ ಉಲ್ಲಂಘಿಸಿ ಸಾಲ ನೀಡುತ್ತಿದ್ದು, ಸಾಲ ಪಡೆದವರ ಆರ್ಥಿಕ ಸಾಮರ್ಥ್ಯವನ್ನು ಕಡೆಗಣಿಸಲಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು. ಒಬ್ಬ ವ್ಯಕ್ತಿಗೆ ಎರಡು ಲಕ್ಷಕ್ಕಿಂತ ಜಾಸ್ತಿ ಸಾಲ ನೀಡಬಾರದು ಎಂದು ಆರ್‌ಬಿಐ ಗೈಡ್‌ಲೈನ್ಸ್. ಆದರೆ ಐದರಿಂದ ಆರು ಲಕ್ಷ ರೂ ಸಾಲ ನೀಡಲಾಗುತ್ತಿದ್ದು, ಯಾರೂ ನಿಯಮ ಪಾಲನೆ ಮಾಡುತ್ತಿಲ್ಲ. ಹೀಗಾಗಿ ಬಡವರನ್ನು ಸಾಲದ ಸುಳಿಗೆ ಸಿಲುಕಿಸುತ್ತಿದೆ. ಸಾಲ ಮರುಪಾವತಿ ಮಾಡದೇ ಹೋದರೆ ಮೈಕ್ರೋಫೈನಾನ್ಸ್ ಕಂಪನಿಗಳ ಅಸ್ತಿತ್ವಕ್ಕೆ ಕೂಡಾ ತೊಂದರೆ ಉಂಟಾಗಲಿದೆ. ಸಾಲ ವಸೂಲಾತಿಗೆ ಕೂಡಾ ಆರ್‌ಬಿಐ ನಿಗದಿ ಮಾಡಿರುವ ಮಾದರಿ ಕಾರ್ಯಚಾರಣೆ ಪಾಲನೆ ಮಾಡಲು ಸೂಚನೆ ನೀಡಿದರು. ಕೇಂದ್ರ ಸರಕಾರ ಈ ಕುರಿತು ಮೈಕ್ರೋ ಫೈನಾನ್ಸ್ ಕಂಪನಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಅಧಿಕಾರ ನೀಡಿಲ್ಲ. ಆದರೆ ರಾಜ್ಯ ಸರಕಾರ ತನ್ನ ಅಧಿಕಾರದ ಮಿತಿಯಲ್ಲಿ ಬೇರೆ ಬೇರೆ ಕಾನೂನುಗಳ ಮೂಲಕ ಮೈಕ್ರೋ ಫೈನಾನ್ಸ್‌ಗಳ ಅಕ್ರಮಗಳಿಗೆ ಕಡಿವಾಣ ಹಾಕಲಿದೆ. ಇದನ್ನು ಹೀಗೆ ಬಿಟ್ಟರೆ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಅನಾಹುತ ಸಂಭವಿಸುವ ಸಾಧ್ಯತೆ ಇದೆ. ಈ ಕಾರಣದಿಂದ ಈ ಘಟನೆಗಳಿಗೆ ರಾಜ್ಯ ಮಧ್ಯ ಪ್ರವೇಶಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದು ಹೇಳಿದರು.

ಮೈಕ್ರೋಫೈನಾನ್ಸ್ ಕಿರುಕುಳಕ್ಕೆ ಮತ್ತೆ ಮೂವರು ಆತ್ಮಹತ್ಯೆ

ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಮತ್ತೆ ಮೂವರು ಬಲಿಯಾಗಿದ್ದಾರೆ. ಸಾಲಕ್ಕೆ ಹೆದರಿ ಮೈಸೂ ರು ಜಿಲ್ಲೆ ನಂಜನಗೂಡು ತಾಲೂಕಿನ ಅಂಬಳೆ ಗ್ರಾಮದಜಯಶೀಲ (53) ಹಾಗೂಮಲ್ಕುಂಡಿ ಗ್ರಾಮದ ಕೃಷ್ಣಮೂರ್ತಿ (32) ಎಂಬುವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದೇ ವೇಳೆ, ರಾಣೆಬೆನ್ನೂರು ತಾಲೂಕು ತುಮ್ಮಿನಕಟ್ಟೆಯ ಸರ್ಕಾರಿ ಶಾಲಾ ಶಿಕ್ಷಕಿ ಪುಷಲತಾ (46) ಎಂಬುವರು ಹೊನ್ನಾಳಿ ಸಮೀಪ ತುಂಗಭದ್ರಾ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಜಯಶೀಲ ಅವರು ಐಐಎಫ್‌ಎಲ್, ಫೈವ್ ಸ್ಟಾರ್‌ಮೈಕ್ರೋ ಫೈನಾನ್ಸ್‌ಗಳಲ್ಲಿ ಮನೆ ಕಟ್ಟಲು, ವ್ಯವಸಾಯ ಹಾಗೂ ಹಸು ಸಾಕಾಣಿಕೆಗಾಗಿ 5 ಲಕ್ಷ ರು. ಸಾಲ ಪಡೆದಿದ್ದರು. ಪ್ರತಿ ತಿಂಗಳು 20 ಸಾವಿರಕ್ಕೂ ಹೆಚ್ಚು ಇಎಂಐ ಕಟ್ಟಬೇಕಾಗಿತ್ತು. ಸಾಲ ಮಾಡಿ ತೆಗೆದುಕೊಂಡಿದ್ದ ಹಸು ಕೂಡ ಇತ್ತೀಚೆಗೆ ಮೃತಪಟ್ಟಿದ್ದ ಹಿನ್ನೆಲೆಯಲ್ಲಿ ಜೀವನ ನಿರ್ವಹಣೆ ಮಾಡಲು ಸಾಧ್ಯವಾಗದ ಪರಿಸ್ಥಿತಿಗೆ ತಲುಪಿದ್ದರು.

Categories
ರಾಜ್ಯ

ಕಳ್ಳರಿದ್ದಾರೆ ಹುಷಾರ್…!

ಕಳ್ಳರಿದ್ದಾರೆ ಹುಷಾರ್…!
– ಜನರಿಗೆ ಪೊಲೀಸ್ ಇಲಾಖೆ 20 ಸೂಚನೆಗಳು
– ಕಳ್ಳತನ, ದರೋಡೆ, ವಂಚನೆ ಆಗದಿರಲು ಇಷ್ಟು ಪಾಲನೆ ಮಾಡಿ
– ರಾಜ್ಯದಲ್ಲಿ ಹೆಚ್ಚಿದ ಅಪರಾಧ: ನೀವೂ ಏನ್ ಮಾಡಬೇಕು?

NAMMUR EXPRESS NEWS
ರಾಜ್ಯದಲ್ಲಿ ಇತ್ತೀಚಿಗೆ ಅಪರಾಧ ಪ್ರಕರಣ ಹೆಚ್ಚುತ್ತಿರುವ ಬೆನ್ನಲ್ಲೇ ಪೊಲೀಸ್ ಇಲಾಖೆ ಜನರಿಗೆ ಒಂದಷ್ಟು ಸೂಚನೆ ಪಾಲಿಸುವಂತೆ ಮನವಿ ಮಾಡಿದೆ.

1. ಮನೆಯಲ್ಲಿ ನಗದು, ಹಣ-ಬೆಲೆ ಬಾಳುವ ವಸ್ತುಗಳನ್ನು ಮನೆಯಲ್ಲಿ ಇಡದೆ ಬ್ಯಾಂಕ್ ಲಾಕರ್ ಗಳಲ್ಲಿ ಇಡುವುದು.
2. ರಾತ್ರಿ ವೇಳೆಯಲ್ಲಿ ಯಾರಾದರೂ ಬಾಗಿಲು ತಟ್ಟಿದರೆ ಕೂಡಲೇ ಬಾಗಿಲು ತೆರೆಯದೆ ಕಿಟಕಿಯಿಂದ ನೋಡಿ ಪರಿಚಯವಿದ್ದರೆ ಮಾತ್ರ ಬಾಗಿಲು ತೆರೆಯುವುದು.
3. ಅನುಮಾನಾಸ್ಪದವಾಗಿ ತಿರುಗಾಡುತ್ತಿರುವ ವಾಹನಗಳ ನಂಬರುಗಳನ್ನು ಬರೆದಿಟ್ಟುಕೊಳ್ಳುವುದು. ಈ ಬಗ್ಗೆ ಪೊಲೀಸ್ ಠಾಣೆಗೆ ಮಾಹಿತಿ ನೀಡುವುದು.
4. ಹೊಸಬರು ಅಥವಾ ಅನುಮಾನಾಸ್ಪದ ವ್ಯಕ್ತಿಗಳು ಸುತ್ತಾಡುವುದು ಕಂಡುಬಂದರೆ ಕೂಡಲೇ ಪೊಲೀಸ್ ಠಾಣೆಗೆ ಮಾಹಿತಿ ನೀಡುವುದು.
5. ಸಿಸಿಟಿವಿ ಮತ್ತು ಡೋರ್ ಅಲಾರಾಂ ಅಳವಡಿಸಿಕೊಳ್ಳುವುದು.
6. ಮನೆಗಳಿಗೆ ಡೋ‌ರ್ ಲಾಕ್‌ಗಳನ್ನು ಅಳವಡಿಸುವುದು.
7. ಸಾರ್ವಜನಿಕ ಸಭೆ ಅಥವಾ ಸಮಾರಂಭಗಳಲ್ಲಿ ಮಹಿಳೆಯರು ಚಿನ್ನಾಭರಣಗಳನ್ನು ಅತಿಯಾಗಿ ಪ್ರದರ್ಶನ ಮಾಡದೆ ಜಾಗೃತಿಯಿಂದ ಇರುವುದು.
8. ಚಿಕ್ಕಮಕ್ಕಳ ಮೇಲೆ ಬೆಲೆ ಬಾಳುವ ವಡವೆ ವಸ್ತುಗಳನ್ನು ಧರಿಸಿ ಶಾಲೆ ಅಥವಾ ಸಮಾರಂಭಗಳಿಗೆ ಕಳುಹಿಸಬಾರದು.
9. ಮನೆಯಲ್ಲಿ ಕಳ್ಳರಿಗೆ ಸಿಗುವ ರೀತಿಯಲ್ಲಿ ಕಿಟಕಿಯ ಪಕ್ಕ ಬೆಲೆ ಬಾಳುವ ವಸ್ತುಗಳನ್ನು ಇಡಬಾರದು.
10. ಗ್ರಾಮಗಳಲ್ಲಿ ಜ್ಯೋತಿಷ್ಯ ಹೇಳುವ ನೆಪದಲ್ಲಿ ಬಂದು ಮೋಸ ಮಾಡುವವರ ಬಗ್ಗೆ ಪೊಲೀಸ್ ಠಾಣೆಗೆ ಮಾಹಿತಿ ನೀಡುವುದು.
11. ಚಿನ್ನಾಭರಣಗಳನ್ನು ಅಪರಿಚಿತ ವ್ಯಕ್ತಿಗಳಿಂದ ಪಾಲಿಷ್ ಮಾಡಿಸಬಾರದು.
12. ತಮ್ಮ ವಾಹನ ನಿಲ್ಲಿಸುವಾಗ ವಾಹನಗಳಿಗೆ ಲಾಕ್ ಮಾಡುವುದು.
13. ಬಸ್ಸುಗಳಲ್ಲಿ ಪ್ರಯಾಣ ಮಾಡುವಾಗ ತಾವು ಧರಿಸಿರುವ ಒಡವೆ ಮತ್ತು ತಮ್ಮಲಿರುವ ಹಣದ ಬಗ್ಗೆ ಜಾಗರೂಕರಾಗಿರುವುದು.
14. ಮನೆ ಕೆಲಸಕ್ಕೆ ಬರುವವರ ವಿಳಾಸ ಮತ್ತು ಭಾವಚಿತ್ರ ಮತ್ತು ಮೊಬೈಲ್ ನಂಬರನ್ನು ಪಡೆಯುವುದು.
15. ಒಂಟಿ ಮನೆಯಲ್ಲಿರುವವರು ನೆಂಟರ ಮನೆಗೆ ಹೋಗುವಾಗ ಬೀಗ ಹಾಕಿ ಠಾಣೆಗೆ ತಿಳಿಸಿ ಹಾಗೂ ಫೋನ್ ನಂಬ‌ರ್ ಕೊಟ್ಟು ಹೋಗುವುದು ಅಗತ್ಯವಿದ್ದಲ್ಲಿ ಅಲರಮ್ ಅಳವಡಿಸಿಕೊಳ್ಳುವುದು.
16. ತಮ್ಮ ಎ.ಟಿ.ಎಂ. ಕಾರ್ಡ್ ನಂಬರ್ ಮತ್ತು ಪಿನ್ ನಂಬರನ್ನು ಯಾರಿಗೂ ಕೊಡಬಾರದು.
17. ರಾತ್ರಿ ವೇಳೆಯಲ್ಲಿ ಮನೆಯನ್ನು ಬಿಟ್ಟು ಹೋಗುವುದಾದರೆ ಯಾರನ್ನಾದರು ಮನೆಯಲ್ಲಿ ಉಳಿಯುವಂತೆ ಮಾಡುವುದು.
18. ಓ.ಟಿ.ಪಿ ನಂಬರ್ ಮತ್ತು ಬ್ಯಾಂಕ್ ಅಕೌಂಟ್ ಮಾಹಿತಿಯನ್ನು ಯಾರಿಗೂ ಶೇರ್ ಮಾಡಬಾರದು.
19. ಅನುಮಾನಸ್ಪದ ಎ.ಪಿ.ಕೆ ಫೈಲ್ ಗಳನ್ನು ಮತ್ತು ಇತರೆ ಲಿಂಕ್ ಗಳನ್ನು ಕ್ಲಿಕ್ ಮಾಡಬಾರದು.
20. ಯಾವುದೇ ತುರ್ತು ಸಹಾಯಕ್ಕಾಗಿ ಪೊಲೀಸ್ ಸಹಾಯವಾಣಿ 112 ನಂಬರ್ ಗೆ ಕರೆ ಮಾಡುವುದು.

Categories
ಶಿವಮೊಗ್ಗ

ಶಿವಮೊಗ್ಗ ಫಲಪುಷ್ಪ ಪ್ರದರ್ಶನ ಸೂಪರ್..!

ಶಿವಮೊಗ್ಗ ಫಲಪುಷ್ಪ ಪ್ರದರ್ಶನ ಸೂಪರ್..!
– ಹೂವಿನಲ್ಲಿ ಅರಳಿದ ರಾಷ್ಟ್ರಕವಿ ಕುವೆಂಪುರವರ ಮನೆ
– 4.28 ಲಕ್ಷಕ್ಕೂ ಹೆಚ್ಚು ಹೂವುಗಳ ಬಳಕೆ
– 3 ದಿನ ಸಾವಿರಾರು ಮಂದಿ ಭೇಟಿ: ಇಲಾಖೆ ಉತ್ತಮ ಆಯೋಜನೆ

NAMMUR EXPRESS NEWS
ಶಿವಮೊಗ್ಗ: ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್, ಶಿವಮೊಗ್ಗ ತೋಟಗಾರಿಕೆ ಇಲಾಖೆ, ಜಿಲ್ಲಾ ಉದ್ಯಾನ ಕಲಾ ಸಂಘ, ಶಿವಮೊಗ್ಗ ಹಾಗೂ ನಬಾರ್ಡ್ ಪ್ರಾಯೋಜಕತ್ವದಲ್ಲಿ ಮಲೆನಾಡ ಕರಕುಶಲ ಉತ್ಸವ ಮತ್ತು ಪುಷ್ಪಸಿರಿ 62ನೇ ಫಲಪುಷ್ಪ ಪ್ರದರ್ಶನ ಜ. 24 ರಿಂದ ಜ. 26ರವರೆಗೆ ಪ್ರಭು ಉದ್ಯಾನವನ (ಫ್ರೀಡಂ ಪಾರ್ಕ್), ಶಿವಮೊಗ್ಗದಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಆಯೋಜಿಸಿರುವ ಮೂರು ದಿನಗಳ ಫಲಪುಷ್ಪ ಪ್ರದರ್ಶನ ಅದ್ದೂರಿಯಾಗಿ ಜರುಗಿತು. ವರ್ಣಮಯ ಲೋಕವನ್ನೆ ತೆರದಿಟ್ಟಿರುವ ಫಲಪುಷ್ಪಗಳು, ಹೂವಿನಲ್ಲಿ ಅರಳಿದ ರಾಷ್ಟ್ರಕವಿ ಕುವೆಂಪುರವರ ಕವಿಶೈಲ, ಪುರಾಣ ಪ್ರಸಿದ್ದ ಚಂದ್ರಗುತ್ತಿ ರೇಣುಕಾಂಬೆ ದೇಗುಲ. ಉದ್ದ ಗರಿಬಿಚ್ಚಿ ನರ್ತಿಸುತ್ತಿರುವ ನವಿಲು, ನೋಡುಗರ ಕಣ್ಣನ ಸೆಳೆಯುವ ರಂಗುರಂಗಿನ ಮತ್ತ್ವಗಳು. ಹೌದು, ಶಿವಮೊಗ್ಗ ನಗರದ ಅಲ್ಲಮಪ್ರಭು ಮೈದಾನದಲ್ಲಿ ತೋಟಗಾರಿಕಾ ಇಲಾಖೆ ಕೃಷಿ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನ ಹಾಗೂ ಮಲೆನಾಡ ಕರಕುಶಲ ಉತ್ಸವ ದಲ್ಲಿ ಕಂಡು ಬರುತ್ತಿರುವ ದೃಶ್ಯಾವಳಿಗಳಿವು. ತೋಟಗಾರಿಕಾ ಇಲಾಖೆ ಕೃಷಿ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಜ. 24 ರಿಂದ ಮೂರು ದಿನಗಳ ಕಾಲ ನಡೆಯಿತು. ಫಲಪುಷ್ಪ ಪ್ರದರ್ಶನದಲ್ಲಿ ಆರಂಭದಲ್ಲಿಯೇ ಮೇಳದ ಸ್ವಾಗತ ಕಮಾನು ಸ್ವಾಗತಿಸಿದರೆ, ಶಿವಮೊಗ್ಗವನ್ನು ಬಿಂಬಿಸುವ ಆಂಗ್ಲ ಭಾಷೆಯ ಎಸ್‌ಎಂಜಿ ಸೇವಂತಿಗೆ ಹೂವಿನಲ್ಲಿ ಕಣ್ಣುಕುಕ್ಕುತ್ತಿತ್ತು. ಕೆಂಪು ಗುಲಾಬಿಯಲ್ಲಿ ಮಾಡಿರುವ ಐ ಲವ್ ಶಿವಮೊಗ್ಗ’ ಎಂಬ ಹೃದಯಾಕೃತಿಯ ಕಲಾಕೃತಿ ಎಲ್ಲರನ್ನು ತನ್ನತ್ತ ಸೆಳೆಯುತ್ತಿತ್ತು. ಈ ಬಾರಿ ಗುಲಾಬಿ, ಸೇವಂತಿಗೆ, ಆರ್ಕಿಡ್, ಕಾರ್ನೇಷನ್, ಲಿಲ್ಲೀಸ್, ಪೊಲೀಯೇಜ್ ಮುಂತಾದ ಬಗೆಗಳ 4.80 ಲಕ್ಷ ಹೂವುಗಳನ್ನು ಬಳಸಿ ಕುಪ್ಪಳಿ ಕವಿಶೈಲದ 28 ಅಡಿ ಎತ್ತರದ ಕಲಾಕೃತಿ ಹಾಗೂ ಚಂದ್ರಗುತ್ತಿ ರೇಣುಕಾಂಬೆ ದೇವಾಲಯದ 14 ಅಡಿ ಎತ್ತರದ ಕಲಾಕೃತಿ ನಿರ್ಮಿಸಲಾಗಿದೆ. 45 ಕ್ಕೂ ಹೆಚ್ಚು ಬೊನ್ಸಾಯ್ ಗಿಡಗಳ ಪ್ರದರ್ಶನ ಕೂಡ ನಡೆದಿದೆ.
ಮೂರು ದಿನ ನೂರಾರು ಜನರು ಕಾರ್ಯಕ್ರಮಕ್ಕೆ ಭೇಟಿ ನೀಡಿದ್ದು, ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳಿಯಲ್ಲಿರುವ ಕವಿಮನೆ, ಕವಿ ಕುವೆಂಪು ಅವರ ಮನೆ, ಸೊರಬ ತಾಲ್ಲೂಕಿನ ಚಂದ್ರಗುತ್ತಿಯ ರೇಣುಕಾಂಬ ದೇವಸ್ಥಾನದ ಪ್ರತಿಕೃತಿಗಳ ಪ್ರದರ್ಶನ ವಿಶೇಷ ಆಕರ್ಷಣೀಯವಾಗಿತ್ತು. ಈ ಅನೇಕ ಸಂದರ್ಶಕರು ಈ ಪ್ರತಿಕೃತಿಯೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದು, ತೋಟಗಾರಿಕೆ ಇಲಾಖೆ ಹಾಗೂ ಜಿಲ್ಲಾ ಉದ್ಯಾನ ಕಲಾ ಸಂಘ ಜಂಟಿಯಾಗಿ ಪ್ರದರ್ಶನ ನಡೆಯಿತು. ಜೊತೆಗೆ, ಮಲೆನಾಡು ಭಾಗದ ಕಲಾಕೃತಿಗಳ ಪ್ರದರ್ಶನ, ಕರಕುಶಲ ಉತ್ಸವ ಸಾರಸ್ ಮೇಳ ಚಾಲನೆಗೊಂಡಿದೆ. ಅನೇಕ ಕಲಾವಿದರು ತಮ್ಮ ಪ್ರದರ್ಶಿಸುವ ಮಳಿಗೆಗಳನ್ನು ಹಾಕಿದ್ದರ. ಜ್ಯಾಮಿತೀಯ ಮಾದರಿಗಳನ್ನು ಚಿತ್ರಿಸುವ ಸಾಂಪ್ರದಾಯಿಕ ಕಲಾ ಪ್ರಕಾರವಾದ ಹಸೆ ಚಿತ್ತಾರದ ಕಲಾವಿದರನ್ನು ಹೊಂದಿದ್ದು, ಶಿವಮೊಗ್ಗ ಶಾಸಕ ಎಸ್.ಎನ್.ಚನ್ನಬಸಪ್ಪ ಅವರು ಪ್ರದರ್ಶನವನ್ನು ಉದ್ಘಾಟಿಸಿ, ಪುಷ್ಪ-ಫಲ ಪ್ರದರ್ಶನ ಹಾಗೂ ವಸ್ತುಪ್ರದರ್ಶನದ ವ್ಯವಸ್ಥೆಯನ್ನು ಶ್ಲಾಘಿಸಿದ್ದರು. ಪ್ರದರ್ಶನದಲ್ಲಿ 4.28 ಲಕ್ಷಕ್ಕೂ ಹೆಚ್ಚು ಹೂವುಗಳನ್ನು ಬಳಸಲಾಗಿದೆ. ಪ್ರದರ್ಶನವು ಸ್ಥಳೀಯ ಕರಕುಶಲ ಕಲಾವಿದರಿಗೆ ವೇದಿಕೆಯನ್ನು ಒದಗಿಸಲಾಗಿತ್ತು.

Categories
ಚಿಕ್ಕಮಗಳೂರು

ಶೃಂಗೇರಿ ಜೆಸಿಐನಿಂದ ಫ್ರೀಡಂ ಫೆಸ್ಟ್!

ಶೃಂಗೇರಿ ಜೆಸಿಐನಿಂದ ಫ್ರೀಡಂ ಫೆಸ್ಟ್!
* ಗಣರಾಜ್ಯೋತ್ಸವದ ಪ್ರಯುಕ್ತ ತಾಲೂಕಿನಾದ್ಯಂತ ಕಾರ್ಯಕ್ರಮ
* ಶಾಲಾ ವಿದ್ಯಾರ್ಥಿಗಳಲ್ಲಿ ದೇಶ ಪ್ರೇಮ ಬೆಳೆಸುವ ಉದ್ದೇಶ

NAMMUR EXPRESS NEWS
ಶೃಂಗೇರಿ: 76 ನೇ ಗಣರಾಜ್ಯೋತ್ಸವದ ಪ್ರಯುಕ್ತ ತಾಲೂಕಿನ ಜೆ.ಸಿ.ಐ ಘಟಕದ ವತಿಯಿಂದ ಶಾಲಾ ಮಕ್ಕಳಲ್ಲಿ ದೇಶ ಪ್ರೇಮ ಬೆಳೆಸುವ ಉದ್ದೇಶದಿಂದ “ಫ್ರೀಡಂ ಫೆಸ್ಟ್” ಎಂಬ ಕಾರ್ಯಕ್ರಮವನ್ನು ಶಾಲೆಗಳಲ್ಲಿ ಆಯೋಜಿಸಿದ್ದು ಮಾದರಿ ಕಾರ್ಯಕ್ರಮವಾಗಿ ಹೊರ ಹೊಮ್ಮಿತು. ಜನವರಿ 22 ರಿಂದ 26ರವರೆಗೆ ನಡೆದ ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳಿಗಾಗಿ ಚಿತ್ರಕಲೆ,ಮಾದರಿ ತಯಾರಿಕೆ,ದೇಶ ಭಕ್ತಿ ಗೀತೆ ಗಾಯನ,ಕ್ರಾಫ್ಟ್‌ಗಳ ತಯಾರಿ ಮುಂತಾದ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಶೃಂಗೇರಿ ತಾಲೂಕು ಅಧ್ಯಕ್ಷರಾದ ಜೆ.ಸಿ.ಐ ಅಶೋಕ್‌ರವರ ನೇತೃತ್ವದಲ್ಲಿ ತಾಲೂಕಿನ ಗಂಡಘಟ್ಟ,ಮೆಣಸೆ,ಸರ್ಕಾರಿ ಪದವಿ ಪೂರ್ವ ಕಾಲೇಜು ಶೃಂಗೇರಿ( ಗುಡ್ಡದ ಹೈಸ್ಕೂಲ್), ಹೊಳೆಕೊಪ್ಪ,ಬೇಗಾರ್,ವಿದ್ಯಾರಣ್ಯಪುರ,ಬಿಜಿಎಸ್ ಶಿಕ್ಷಣ ಸಂಸ್ಥೆ,ಶೃಂಗೇರಿ ಸೇರಿದಂತೆ ಹಲವು ಶಾಲೆಗಳಲ್ಲಿ ಕಾರ್ಯಕ್ರಮ ನಡೆಸಲಾಯಿತು. ವಿದ್ಯಾರ್ಥಿಗಳಿಂದ ಆಕರ್ಷಕವಾದ ಮಾದರಿಗಳು,ಚಿತ್ರ‌ಗಳು,ಕ್ರಾಫ್ಟ್‌ಗಳು ಸೇರಿದಂತೆ ಸುಮಧುರ ದೇಶ ಭಕ್ತಿಗೀತೆಗಳು ಮೂಡಿಬಂದವು. ಎಲ್ಲಾ ಕಾರ್ಯಕ್ರಮದಲ್ಲಿ ತಾಲೂಕಿನ ಜೆ.ಸಿ.ಐ ಘಟಕದ ಎಲ್ಲಾ ಪದಾಧಿಕಾರಿಗಳು ಭಾಗವಹಿಸಿದ್ದರು.

Categories
ಚಿಕ್ಕಮಗಳೂರು

ಮಣ್ಣು ಮಾಫಿಯಾ,ಅರಣ್ಯಾಧಿಕಾರಿಗಳ ಮಿಂಚಿನ ಕಾರ್ಯಾಚರಣೆ..!!?

ಮಣ್ಣು ಮಾಫಿಯಾ,ಅರಣ್ಯಾಧಿಕಾರಿಗಳ ಮಿಂಚಿನ ಕಾರ್ಯಾಚರಣೆ..!!?
– 3 ಲಾರಿ 1ಹಿಟಾಚಿ ವಶಪಡಿಸಿಕೊಂಡ ಅಧಿಕಾರಿಗಳು
– ಎಗ್ಗಿಲ್ಲದೇ ಸಾಗಿದೆ ಮಣ್ಣು ಮಾಫಿಯಾ

NAMMUR EXPRESS NEWS
ಶೃಂಗೇರಿ: ತಾಲೂಕನಲ್ಲಿ ಮರಳು ಮಾಫಿಯ ಬೆನ್ನಲ್ಲೇ ಮಣ್ಣು ಮಾಫಿಯಾದ ವಿರುದ್ಧ ಅರಣ್ಯಾಧಿಕಾರಿಗಳ ಬಿರುಸಿನ ಕಾರ್ಯಾಚರಣೆ ನಡೆದಿದ್ದು ಶೃಂಗೇರಿಯ ಅರಣ್ಯ ಇಲಾಖೆ ಅಧಿಕಾರಿಗಳಿಂದ 3 ಲಾರಿ ಸೇರಿದಂತೆ 1 ಟಾಟಾ ಹಿಟಾಚಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಶೃಂಗೇರಿ ತಾಲೂಕಿನ ಮೆಣಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕನ್ಯಾಕುಮಾರಿ ದೇವಸ್ಥಾನ ಸಮೀಪವಿರುವ ಇಡುವಳಿ ಸರ್ವೆ ನಂಬರ್ 100, ಸರ್ಕಾರಿ ಸರ್ವೆ ನಂಬರ್ 118 ರಲ್ಲಿ ಮೆಣಸೆ ಸೆಕ್ಷನ್ 4, ಬ್ಲಾಕ್ 3 ರಲ್ಲಿ ಖಾಸಗಿಯವರು ತಮ್ಮ ಖಾಸಗಿ ಲೇಔಟ್ ಜಾಗಕ್ಕೆ ಮಣ್ಣನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಸಂದರ್ಭದಲ್ಲಿ 3 ಲಾರಿ ಹಾಗೂ1 ಟಾಟಾ ಹಿಟಾಚಿಯನ್ನು ಶೃಂಗೇರಿ RFO ಮಧುಕರ್ ನೇತೃತ್ವದಲ್ಲಿ DRF ಕಸಬಾ ಶಾಖೆ ಶಂಕರ್ ಪತ್ತಾರ್, ಕೆ ಕೆ ನಂದನ್, ಸುಬ್ರಹ್ಮಣ್ಯ ಹೆಚ್ ಎಂ ರವರ ತಂಡ ವಾಹನಗಳನ್ನ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದು ತನಿಖೆಯನ್ನು ಕೈಗೊಂಡಿದ್ದಾರೆ.ಶೃಂಗೇರಿಯಲ್ಲಿ ಮರಳು ಮಾಫಿಯ ಬೆನ್ನಲ್ಲೇ ಮಣ್ಣು ಮಾಫಿಯಾ ಎಗ್ಗಿಲ್ಲದೇ ಸಾಗಿದ್ದು ಇದರ ವಿರುದ್ಧ ಅಧಿಕಾರಿಗಳು ಬಿರುಸಿನ ಕಾರ್ಯಾಚರಣೆ ನಡೆಸಿದ್ದಾರೆ.