Categories
ತೀರ್ಥಹಳ್ಳಿ

ಯುಗಾದಿ ಹಬ್ಬಕ್ಕೆ ತೀರ್ಥಹಳ್ಳಿ ಅಂಗಡಿಗಳಲ್ಲಿ ಹೊಸ ಭರವಸೆ!

ಯುಗಾದಿ ಹಬ್ಬಕ್ಕೆ ತೀರ್ಥಹಳ್ಳಿ ಅಂಗಡಿಗಳಲ್ಲಿ ಹೊಸ ಭರವಸೆ!
– ಬಟ್ಟೆ, ಚಿನ್ನದಂಗಡಿಗಳಲ್ಲಿ ಭರ್ಜರಿ ಆಫರ್.!
– ಹಬ್ಬದ ಸಂಭ್ರಮ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ

NAMMUR EXPRESS NEWS
ತೀರ್ಥಹಳ್ಳಿ : ಎಲ್ಲೆಡೆ ಯುಗಾದಿ ಹಬ್ಬಕ್ಕೆ ಈಗಾಗಲೇ ಸಿದ್ಧತೆಗಳು ನಡೆಯುತ್ತಿದ್ದು, ಅಂಗಡಿಗಳಲ್ಲಿ ಖರೀದಿಯು ಜೋರಾಗಿದೆ. ಅದರಲ್ಲೂ ಬಹುತೇಕ ಎಲ್ಲಾ ದೇವಸ್ಥಾನಗಳಲ್ಲೂ ವಿಶೇಷ ಪೂಜೆಗೆ ಸಿದ್ಧತೆಗಳು ಕೂಡ ನಡೆಯುತ್ತಲೇ ಇದೆ.
ಯುಗಾದಿ ಹಬ್ಬ ಸಂಭ್ರಮಾಚರಣೆ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ. ಹೌದು, ದಿನದಿಂದ ದಿನಕ್ಕೆ ಬೇಸಿಗೆಯ ಬಿಸಿಲಿನ ತಾಪಮಾನ ಹೆಚ್ಚಾಳವಾಗಿರುವ ಕಾರಣ ಮಾರುಕಟ್ಟೆಗಳಲ್ಲಿ ಹೂವುಗಳ ಪೂರೈಕೆ ಕಡಿಮೆಯಾಗಿದ್ದು, ಹೂವುಗಳ ಬೆಲೆ ದುಬಾರಿಯಾಗಿದೆ. ಗ್ರಾಹಕರು ಹೂಗಳ ಬೆಲೆ ಕೇಳಿ ಶಾಕ್ ಆಗುತ್ತಿದ್ದಾರೆ. 2 ಕೆಜಿ ಹೂವು ತೆಗೆದುಕೊಳ್ಳೋವರು. ಒಂದು ಕೆಜಿ ತೆಗೆದುಕೊಳ್ಳುತ್ತಿದ್ದಾರೆ. ಹಣ್ಣುಗಳ ಬೆಲೆ ಕೂಡ ಏರಿಕೆಯಾಗಿದೆ.

ಬಟ್ಟೆ, ಚಿನ್ನ, ವಾಹನ, ಇಲೆಕ್ಟ್ರಾನಿಕ್ ವಸ್ತುಗಳ ಮೇಳ

ತೀರ್ಥಹಳ್ಳಿಯ ಸುತ್ತಮುತ್ತ ಯುಗಾದಿ ಹಬ್ಬದ ಅಂಗವಾಗಿ ಬಟ್ಟೆ, ಚಿನ್ನ, ವಾಹನ, ಇಲೆಕ್ಟ್ರಾನಿಕ್ ವಸ್ತುಗಳ ಮೇಲೆ ಆಫರ್ ಘೋಷಿಸಿ ಗ್ರಾಹಕರನ್ನು ಸೆಳೆಯಲಾಗುತ್ತಿದೆ. ಎಲ್ಲೆಡೆ ಖರೀದಿ ಕೂಡ ಜೋರಾಗಿದೆ. ಒಂದು ಕಡೆ ಯುಗಾದಿಯ ಸಂಭ್ರಮವಾದರೆ ಇನ್ನೊಂದು ಕಡೆ ಅನೇಕ ವಸ್ತುಗಳನ್ನ ಖರೀದಿಸುವ ಸಂತೋಷ ಇನ್ನೊಂದು ಕಡೆಯಾಗಿದೆ. ಯುಗಾದಿ ಹಬ್ಬದ ಸಂಭ್ರಮ ಎಲ್ಲರೂ ಅನೇಕ ವಸ್ತುಗಳನ್ನು ಕೊಳ್ಳುವ ಮೂಲಕ ಸಂಭ್ರಮಿಸುತ್ತಿದ್ದಾರೆ.
ತೀರ್ಥಹಳ್ಳಿ ಗಾಯತ್ರಿ, ನ್ಯಾಷನಲ್ ಜ್ಯುವೆಲ್ಲರಿ ಸೇರಿ ಚಿನ್ನದಂಗಡಿಗಳು ವಿಶೇಷ ಆಫರ್ ಘೋಷಣೆ ಮಾಡಿವೆ.

Categories
ತೀರ್ಥಹಳ್ಳಿ

ಹುಲಿಮಂಡೆ ಜ್ಞಾನದರ್ಶಿನಿ ಆಂಗ್ಲ ಮಾಧ್ಯಮ ಶಾಲೆಗೆ ಶಿಕ್ಷಕರು ಬೇಕಾಗಿದ್ದಾರೆ!

ಹುಲಿಮಂಡೆ ಜ್ಞಾನದರ್ಶಿನಿ ಆಂಗ್ಲ ಮಾಧ್ಯಮ ಶಾಲೆಗೆ ಶಿಕ್ಷಕರು ಬೇಕಾಗಿದ್ದಾರೆ!

– ಇಂಗ್ಲೀಷಿನಲ್ಲಿ ಅತ್ಯುತ್ತಮ ಸಂವಹನ ಕೌಶಲ್ಯ ಹೊಂದಿರುವವರಿಗೆ ಆದ್ಯತೆ

NAMMUR EXPRESS NEWS
ಹುಲಿಮಂಡೆ ಜ್ಞಾನದರ್ಶಿನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಉತ್ತಮ ಶೈಕ್ಷಣಿಕ ಹಿನ್ನೆಲೆಯನ್ನು ಹೊಂದಿರುವ ಹಾಗೂ ಶಿಕ್ಷಣದಲ್ಲಿ ಉತ್ಸಾಹಿ, ಮತ್ತು ಕ್ರಿಯಾತ್ಮಕ ಭೋದಕರನ್ನು ಹುಡುಕುತ್ತಿದ್ದೇವೆ.
ಉನ್ನತ ಮತ್ತು ಪ್ರಾಥಮಿಕ ವಿದ್ಯಾರ್ಥಿಗಳಿಗೆ ಇಂಗ್ಲೀಷ್, ಹಿಂದಿ, ಸಮಾಜ ವಿಜ್ಞಾನ ವಿಷಯಗಳಿಗೆ ಭೋದನೆ ಮಾಡಲು ಅಭ್ಯರ್ಥಿಗಳು ಬೇಕಾಗಿದ್ದಾರೆ..

– ಅಭ್ಯರ್ಥಿಗಳಲ್ಲಿ ಇರಬೇಕಾದ ಅರ್ಹತೆಗಳು ಯಾವುವು?
– ಇಂಗ್ಲೀಷಿನಲ್ಲಿ ಅತ್ಯುತ್ತಮ ಸಂವಹನ ಕೌಶಲ್ಯವಿರಬೇಕು.
– ಅನುಭವ, ವಿದ್ಯಾರ್ಹತೆಯ ಆಧಾರದ ಮೇಲೆ ವೇತನ ನೀಡಲಾಗುವುದು.
ನಿಮ್ಮ ಸಿವಿಯನ್ನು ಇಂದೇ ಮೇಲ್ ಮಾಡಿ jnanadarshinischool@gmail.com ಯಾವುದೇ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ (ವಾಟ್ಸಪ್) 9844326889. ಇಂದೇ ಅರ್ಜಿ ಸಲ್ಲಿಸಬಹುದು

Categories
ಕರಾವಳಿ

ಕರಾವಳಿಯಾದ್ಯಂತ ರಂಜಾನ್ ಹಬ್ಬಕ್ಕೆ ಭರದ ಸಿದ್ಧತೆ!

ಕರಾವಳಿಯಾದ್ಯಂತ ರಂಜಾನ್ ಹಬ್ಬಕ್ಕೆ ಭರದ ಸಿದ್ಧತೆ!

– ಮಂಗಳೂರು ಪೇಟೆಯೆಲ್ಲೆಡೆ ರಂಜಾನ್ ಶಾಪಿಂಗ್‌!
– ಮನೆಯಲ್ಲಿಯೂ ಹಬ್ಬದ ಗಮ್ಮತ್ ಜೋರೋ ಜೋರು!

NAMMUR EXPRESS NEWS
ಕರಾವಳಿಯಾದ್ಯಂತ ಮುಸ್ಲಿಂ ಬಾಂಧವರ ಪವಿತ್ರ ರಂಜಾನ್ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದೆ. ಎಲ್ಲೆಡೆ ರಂಜಾನ್ ಹಬ್ಬ ಆಚರಿಸಲು ಈಗಾಗಲೇ ಸಿದ್ಧತೆ ಆರಂಭವಾಗಿದೆ.
ರಂಜಾನ್ ಹಬ್ಬ ಆಚರಣೆಗೆ ಇನ್ನು ಎರಡ್ಮೂರು ದಿನ ಬಾಕಿ ಇದೆ. ಕರಾವಳಿ ನಗರದಲ್ಲಿ ಹಬ್ಬದ ಸಿದ್ಧತೆ ಭರದಿಂದ ಸಾಗಿದೆ. ಖರೀದಿ ಭರಾಟೆಯೂ ಜೋರಾಗಿದೆ. ಅಲ್ಲದೆ, ಅಂಗಡಿಗಳಲ್ಲಿ ರಂಜಾನ್ ಹಬ್ಬದ ರಿಯಾಯ್ತಿ ದರವೂ ನೀಡಲಾಗುತ್ತಿದೆ.
ಮಂಗಳೂರು ಪೇಟೆಯೆಲ್ಲೆಡೆ ರಂಜಾನ್ ಶಾಪಿಂಗ್‌ಗಾಗಿ ಕೆಲ ಅಂಗಡಿಗಳು ತಲೆ ಎತ್ತಿವೆ. ಮಹಿಳೆಯರು ಬಟ್ಟೆ, ಸೌಂದರ್ಯ ವರ್ಧಕ, ಮೆಹೆಂದಿ, ಬಳೆ, ವಿಧವಿಧವಾದ ಕಿವಿಯೋಲೆ, ಮುತ್ತುಗಳಿಂದ ಮಾಡಿರುವ ಬಳೆ ಇನ್ನಿತರ ವಸ್ತುಗಳನ್ನು ಖರೀದಿಸಿ ಹಬ್ಬಕ್ಕೆ ತಯಾರಾಗುತ್ತಿದ್ದಾರೆ.
ಕೆಲ ಅಂಗಡಿಗಳಲ್ಲಿ ಹಬ್ಬದ ಖರೀದಿಗಾಗಿ ಮುಸ್ಲಿಮರು ಕುಟುಂಬ ಸಮೇತ ಬಂದು ಸಂಭ್ರಮಿಸುತ್ತಿದ್ದಾರೆ. ಪುರುಷರು ಹಬ್ಬಕ್ಕಾಗಿ ಹೊಸಬಟ್ಟೆ, ಟೋಪಿ, ಕರವಸ್ತ್ರ, ಸುಗಂಧ ದ್ರವ್ಯ, ಖರೀದಿಯಲ್ಲಿ ಬ್ಯುಸಿ ಆಗಿದ್ದಾರೆ.
ಬಟ್ಟೆ ಅಂಗಡಿಗಳಲ್ಲಿ ಚಿಣ್ಣರು, ಮಹಿಳೆಯರು ಬಟ್ಟೆ ಖರೀದಿಸುವ ದೃಶ್ಯ ಎಲ್ಲೆಡೆ ಕಂಡು ಬರುತ್ತಿದೆ.
ಹಬ್ಬಕ್ಕಾಗಿ ವಿಶೇಷ ಬಣ್ಣದ ಬಟ್ಟೆಗಳು ಮಾರುಕಟ್ಟೆಗೆ ಬಂದಿದ್ದು, ಮಕ್ಕಳಿಗೆ ವಿಶೇಷ ವಿನ್ಯಾಸದ ಫ್ರಾಕ್ ಮತ್ತು ಬಟ್ಟೆಗಳ ಮೇಳದ ಸ್ಟಾಲ್ ಅಲ್ಲಲ್ಲಿ ಕಂಗೊಳಿಸುತ್ತಿದೆ.

– ಮನೆಯಲ್ಲಿಯೂ ಹಬ್ಬದ ಗಮ್ಮತ್ ಜೋರೋ ಜೋರು!

ರಂಜಾನ್ ಮಾಸ, ದೇಹ ಮತ್ತು ಮನಸ್ಸಿನಲ್ಲಿ ತುಂಬಿದ ಮಾಲಿನ್ಯವನ್ನು ತಿಂಗಳುಗಳ ಕಾಲ ಉಪವಾಸ ಮಾಡಿ ಶುದ್ಧೀಕರಿಸುವ ಧಾರ್ಮಿಕ ಕ್ರಿಯೆಯಾಗಿದೆ.
ಮಂಗಳೂರಿನಲ್ಲಂತೂ ಪುರುಷರು ಮತ್ತು ಮಹಿಳೆಯರೆಲ್ಲರೂ ಎಷ್ಟೇ ಕಷ್ಟವೆನಿಸಿದರೂ ಕುಟುಂಬದವರೆಲ್ಲಾ ಸೇರಿ ಸಂತಸದಿಂದಲೇ ಆಚರಿಸುವ ದೊಡ್ಡ ಹಬ್ಬವಾಗಿದೆ.
ವರ್ಷದಲ್ಲಿ ಒಂದು ತಿಂಗಳುಗಳ ಕಾಲ ಉಪವಾಸ ಆಚರಣೆ ಮಾಡಿದರೆ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ ಎಂಬುವುದು ಅವರ ನಂಬಿಕೆ.
ಹಬ್ಬದ ದಿನದಂದು ಕರಾವಳಿಯಾದ್ಯಂತ ಮನೆಯಲ್ಲಿ ಸುರಕುಂಮಾ ಸೇವನೆ ಮಾಡುತ್ತಾರೆ. ಮಾಂಸಾಹಾರ, ಸಸ್ಯಹಾರದ ವಿಶೇಷ ಖಾದ್ಯ, ಹಣ್ಣು ಹಂಪಲು ಸಿದ್ಧಪಡಿಸಿ ಗೆಳೆಯರಿಗೆ, ಆಪ್ತರನ್ನು ಮನೆಗೆ ಕರೆದು ಅತಿಥ್ಯ ನೀಡುವ ಮೂಲಕ ಮುಸ್ಲಿಂ ಸಮುದಾಯದವರು ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

Categories
ಕ್ರಿಕೆಟ್ ಕ್ರೀಡಾ ಸುದ್ದಿ

ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್ !!

ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್ !!

ಐಪಿಎಲ್ 2025

* ಚೆನ್ನೈ ಮೇಲೆ ರಾಯಲ್ ಆಗಿ ಸವಾರಿ ಮಾಡಿದ ಆರ್‌ಸಿಬಿ
* 17 ವರ್ಷದ ಬಳಿಕ ಚೆನ್ನೈನಲ್ಲಿ ಸಿಎಸ್‌ಕೆ ವಿರುದ್ಧ ಜಯ
* ಕೊಹ್ಲಿಯಿಂದ ಮತ್ತೊಂದು ದಾಖಲೆ

NAMMUR EXPRESS SPORTS NEWS
ಚೆನ್ನೈ: ಚೆನ್ನೈ‌ನ ಚೆಪಾಕ್ ಅಂಗಳದಲ್ಲಿ ನಡೆದ ಐಪಿಎಲ್ ಸೀಸನ್ 18 ರ ಹೈವೋಲ್ಟೇಜ್ ಪಂದ್ಯದಲ್ಲಿ ಆರ್‌ಸಿಬಿ ಗೆಲುವಿನ ನಗೆ ಬೀರಿದೆ. ಶುಕ್ರವಾರ ಚೆನ್ನೈ ಸೂಪರ್ ಕಿಂಗ್ ವಿರುದ್ಧ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಆರ್‌ಸಿಬಿ 50 ರನ್ ಗೆಲುವು ಸಾಧಿಸಿದೆ. ಇದರೊಂದಿಗೆ ಈ ಬಾರಿ ಟೂರ್ನಿಯಲ್ಲಿ ಸತತ 2ನೇ ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಮಾತ್ರವಲ್ಲದೇ, ತನ್ನ ನೆಟ್ ರನ್‌ರೇಟ್ ಅನ್ನೂ ಕಾಪಾಡಿಕೊಂಡಿದೆ.

17 ವರ್ಷಗಳ ಬಳಿಕೆ ಚೆನ್ನೈ‌ನಲ್ಲಿ ಸಿಎಸ್‌ಕೆ ವಿರುದ್ಧ ಗೆದ್ದ ಆರ್‌ಸಿಬಿ !!
ಆರ್‌ಸಿಬಿ ಚೆಪಾಕ್ ಕ್ರೀಡಾಂಗಣದಲ್ಲಿ ಸಿಎಸ್‌ಕೆ ವಿರುದ್ದ ಇದಕ್ಕೂ ಮುನ್ನ ಗೆದ್ದಿದ್ದು 2008ರಲ್ಲಿ. ಆ ಬಳಿಕ ಕೇವಲ ಸೋಲುಗಳನ್ನೇ ಕಂಡು ನಿರಾಸೆ ಅನುಭವಿಸಿದ್ದ ತಂಡವು ಈ ಬಾರಿ ಸಂಘಟಿತ ಪ್ರದರ್ಶನ ತೋರಿ ಜಯದ ನಗೆ ಬೀರಿದೆ.

ಚೆಪಾಕ್ ಪಿಚ್‌ನಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಬೇಕಾದ ಅನಿವಾರ್ಯತೆ ಸಿಲುಕಿದರೂ, ಅದನ್ನು ಚಾಲೆಂಜ್‌ ಆಗಿ ಸ್ವೀಕರಿಸಿದ ಆರ್‌ಸಿಬಿ, ಪಾಟೀದಾರ್, ಸಾಲ್ಟ್, ಡೇವಿಡ್, ಪಡಿಕ್ಕಲ್ ಹಾಗೂ ಜಿತೇಶ್‌ರ ಸ್ಪೋಟಕ ಆಟದ ನೆರವಿನಿಂದ 20 ಓವರಲ್ಲಿ 7 ವಿಕೆಟ್ ನಷ್ಟಕ್ಕೆ 196 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು.
175 ರನ್‌ಗಿಂತ ಹೆಚ್ಚಿನ ಮೊತ್ತ ಈ ಪಿಚ್‌ನಲ್ಲಿ ಸುರಕ್ಷಿತ ಎಂದು ಪಿಚ್ ರಿಪೋರ್ಟ್ ವೇಳೆ ಹೇಳಲಾಗಿತ್ತು.
ಪವರ್-ಪ್ಲೇನಲ್ಲೇ ಜೋಶ್ ಹೇಜಲ್‌ವುಡ್ ಹಾಗೂ ಭುವನೇಶ್ವರ್ ಕುಮಾರ್, ಚೆನ್ನೈ ತಂಡದ ಬೆವರಿಳಿಸಿದರು. ಅಲ್ಲಿಂದಾಚೆಗೆ ಸಿಎಸ್‌ಕೆಗೆ ಚೇತರಿಸಿಕೊಳ್ಳಲು ಕಷ್ಟವಾಯಿತು.
ಯಶ್ ದಯಾಳ್ ಒಂದೇ ಓವರಲ್ಲಿ ಆತಿಥೇಯ ತಂಡಕ್ಕೆಡಬಲ್‌ ಆಘಾತ ನೀಡಿದರು. ತಂಡ ಸಂಕಷ್ಟದಲ್ಲಿದರೂ ಎಂ.ಎಸ್.ಧೋನಿ 9ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಕ್ರೀಸ್‌ಗೆ ಬಂದು ಅಚ್ಚರಿ ಮೂಡಿಸಿದರು. 16 ಎಸೆತದಲ್ಲಿ 30 ರನ್ ಸಿಡಿಸಿದ ಧೋನಿ ಗೆಲುವಿನ ಅಂತರ ಕಡಿಮೆ ಮಾಡುವಲ್ಲಿ ನೆರವಾದರು.
ಇದಕ್ಕೂಮುನ್ನ ಬ್ಯಾಟ್ ಮಾಡಿದ ಆರ್‌ಸಿಬಿಗೆ ಫಿಲ್ ಸಾಲ್ಟ್ ಉತ್ತಮ ಆರಂಭ ಒದಗಿಸಿದರು.16 ಎಸೆತದಲ್ಲಿ 32 ರನ್ ಬಾರಿಸಿ ಧೋನಿಯ ಮಾಂತ್ರಿಕ ಸ್ಟಂಪ್‌ಗೆ ಬಲಿಯಾದರು. ಕೊಹ್ಲಿ 31 ರನ್ 30 ಎಸೆತ, ಪಡಿಕ್ಕಲ್ 14 ಎಸೆತದಲ್ಲಿ 27, ರಜತ್ 32 ಎಸೆತದಲ್ಲಿ 51, ಜಿತೇಶ್ 6 ಎಸೆತದಲ್ಲಿ 12, ಡೇವಿಡ್ 8 ಎಸೆತದಲ್ಲಿ 22* ಸಿಡಿಸಿ ಆರ್‌ಸಿಬಿ ದೊಡ್ಡ ಮೊತ್ತ ದಾಖಲಿಸಲು ನೆರವಾದರು.

ಕೊಹ್ಲಿಯಿಂದ ಮತ್ತೊಂದು ದಾಖಲೆ !!
ರನ್ ಮಷಿನ್ ವಿರಾಟ್ ಕೊಹ್ಲಿ ಐಪಿಎಲ್ 2025ರಲ್ಲಿ ಮತ್ತೊಂದು ಸಾಧನೆ ಮಾಡಿದ್ದಾರೆ. ಸಾಂಪ್ರದಾಯಿಕ ಎದುರಾಳಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗರಿಷ್ಠ ರನ್ ಸಿಡಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದಾರೆ.
ವಿರಾಟ್ ಐಪಿಎಲ್‌ನಲ್ಲಿ ಒಟ್ಟು 4 ತಂಡಗಳ ವಿರುದ್ಧ ತಲಾ 1000ಕ್ಕೂ ಹೆಚ್ಚು ರನ್ ಕಲೆಹಾಕಿದ್ದಾರೆ. ಈ ಸಾಧನೆ ಮಾಡಿದ ಮೊದಲ ಆಟಗಾರ ಎಂಬ ದಾಖಲೆ ಮಾಡಿದ್ದಾರೆ, ಚೆನ್ನೈ ವಿರುದ್ಧ 1084 ರನ್ ಬಾರಿಸಿರುವ ಕೊಹ್ಲಿ, ಡೆಲ್ಲಿ ವಿರುದ್ಧ 1057, ಪಂಜಾಬ್ ವಿರುದ್ಧ 1030 ಹಾಗೂ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ 1021 ರನ್ ಬಾರಿಸಿದ್ದಾರೆ.

ಇಂದು ಮುಂಬೈ ಹಾಗೂ ಗುಜರಾತ್ ನಡುವೆ ಪಂದ್ಯ
ಇಂದು ಅಹಮದಾಬಾದ್ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಆರಂಭಿಕ ಪಂದ್ಯದಲ್ಲಿ ಸೋತಿದ್ದು, ಜಯದ ಹಾದಿಗೆ ಮರಳಲು ಇಂದು ಮುಂಬೈ ಇಂಡಿಯನ್ಸ್ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಸೆಣಸಾಡಲಿವೆ.

Categories
ಕರಾವಳಿ

ಬಂಟ್ವಾಳ: 29ರಿಂದ ಮಾರ್ಚ್ 30ರವರೆಗೆ ಬಬ್ಬರ್ಯಬೈಲು ಅದ್ದೂರಿ ನೇಮೋತ್ಸವ!

ಬಂಟ್ವಾಳ: 29ರಿಂದ ಮಾರ್ಚ್ 30ರವರೆಗೆ ಬಬ್ಬರ್ಯಬೈಲು ಅದ್ದೂರಿ ನೇಮೋತ್ಸವ!

– ಶ್ರೀ ಅಣ್ಣಪ್ಪ ಪಂಜುರ್ಲಿ ದೈವದ ನೇಮ ಹಾಗೂ ಗುಳಿಗ ದೈವದ ಕೋಲ!
– ಕೊರಗಜ್ಜ ದೈವದ ಕೋಲ ಬಲಿ ಆಯೋಜನೆ: ಸರ್ವರಿಗೂ ಸ್ವಾಗತ!

NAMMUR EXPRESS NEWS
ಬಂಟ್ವಾಳ: ಬಬ್ಬರ್ಯ ಮತ್ತು ಪರಿವಾರ ದೈವಗಳ ದೈವಸ್ಥಾನ ಬಬ್ಬರ್ಯಬೈಲು ಕೊಯಿಲ ಇಲ್ಲಿ ಮಾರ್ಚ್ 29ರಿಂದ ಮಾರ್ಚ್ 30ರವರೆಗೆ ಬಬ್ಬರ್ಯಬೈಲು ನೇಮೋತ್ಸವ ಅದ್ದೂರಿಯಾಗಿ ಜರುಗಲಿದೆ.
ಮಾ. 29ನೇ ಶನಿವಾರದಂದು ಬಬ್ಬರ್ಯ ದೈವದ ನೇಮೋತ್ಸವ, ರಾತ್ರಿ 2 ಗಂಟೆಯಿಂದ ಶ್ರೀ ಅಣ್ಣಪ್ಪ ಪಂಜುರ್ಲಿ ದೈವದ ನೇಮ ಹಾಗೂ ಗುಳಿಗ ದೈವದ ಕೋಲ ಆಯೋಜಿಸಲಾಗಿದೆ.
ಮಾ. 30ನೇ ಆದಿತ್ಯವಾರ ರಾತ್ರಿ ಗಂಟೆ 8.00ರಿಂದ ಕೊರಗಜ್ಜ ದೈವದ ಕೋಲ ಬಲಿ ನೆರವೇರಲಿದೆ.
ಈ ಎಲ್ಲಾ ಕಾರ್ಯಕ್ರಮಕ್ಕೆ ಬಬ್ಬರ್ಯಬೈಲು ಸೇವಾ ಸಮಿತಿ ಕೊಯಿಲ ಅಧ್ಯಕ್ಷರು ಮತ್ತು ಸರ್ವಸದಸ್ಯರು, ಸರ್ವರಿಗೂ ಈ ಮೂಲಕ ಸ್ವಾಗತವನ್ನು ಕೋರಿದ್ದಾರೆ.

Categories
ತೀರ್ಥಹಳ್ಳಿ

ಸಹ್ಯಾದ್ರಿ ಸೊಸೈಟಿ ನಿರ್ದೇಶಕ ಪ್ರದೀಪ್ ಕವಡೆಕಟ್ಟೆ ಇನ್ನಿಲ್ಲ!

ಸಹ್ಯಾದ್ರಿ ಸೊಸೈಟಿ ನಿರ್ದೇಶಕ ಪ್ರದೀಪ್ ಕವಡೆಕಟ್ಟೆ ಇನ್ನಿಲ್ಲ!
– ಕವಡೆಕಟ್ಟೆಯಲ್ಲಿ ಶನಿವಾರ ಮಧ್ಯಾಹ್ನ 3 ಕ್ಕೆ ಅಂತ್ಯಕ್ರಿಯೆ
– ಜಾಂಡಿಸ್ ರೋಗಕ್ಕೆ ಬಲಿಯಾದ ಜನಪರ ನಾಯಕ

NAMMUR EXPRESS NEWS
ತೀರ್ಥಹಳ್ಳಿ/ ಕೊಪ್ಪ: ಸಹಕಾರಿ ನಾಯಕ ಪ್ರದೀಪ್ ಗೌಡ ಕವಡೆಕಟ್ಟೆ ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ . ಅವರ ಅಂತ್ಯಕ್ರಿಯ ಶನಿವಾರ ಮಧ್ಯಾಹ್ನ 3 ಗಂಟೆಗೆ ಕವಡೆಕಟ್ಟೆಯಲ್ಲಿ ನಡೆಯಲಿದೆ.
ಪ್ರದೀಪ್ (56) ತೀರ್ಥಹಳ್ಳಿ ಪ್ರತಿಷ್ಠಿತ ಸಹ್ಯಾದ್ರಿ ಸಂಸ್ಥೆಯ ನಿರ್ದೇಶಕರಾಗಿದ್ದು ಹಾಗು ಬಂಡಿಗಡಿ ಗ್ರಾಮ ಪಂಚಾಯ್ತಿಯ ಮಾಜಿ ಉಪಾಧ್ಯಕರಾಗಿ, ಹಾಗು ಹಲವು ಸಂಘ ಸಂಸ್ಥೆಗಳಲ್ಲಿ ಸಾರ್ವಜನಿಕ ಜೀವನದಲ್ಲಿ ಸೇವೆ ಸಲ್ಲಿಸಿದ್ದರು . ಪ್ರಗತಿಪರ ಕೃಷಿಕರಾಗಿ ಕೊಡುಗೈ ದಾನಿಗಳಾಗಿದ್ದ ಅವರು ಕುಟುಂಬ ಸೇರಿ ಅಪಾರ ಬಂಧು ಮಿತ್ರರನ್ನು ಆಗಲಿದ್ದಾರೆ. ಸಹಕಾರಿ ನಾಯಕ ವಿಜಯದೇವ್ ಸೇರಿದಂತೆ ಅಪಾರ ಬಂಧು ಬಳಗ, ಸ್ನೇಹಿತರು ಕಂಬನಿ ಮಿಡಿದಿದ್ದಾರೆ.

ಜನನ: 21-11-1969 ಮರಣ: 29-3-2025

ಭಾವಪೂರ್ಣ ಶ್ರದ್ಧಾಂಜಲಿ

Categories
ಜ್ಯೋತಿಷ್ಯ

ಈ ದಿನದ ರಾಶಿ ಭವಿಷ್ಯ ಹೇಗಿದೆ?

ಈ ದಿನದ ರಾಶಿ ಭವಿಷ್ಯ ಹೇಗಿದೆ?
– ಶನಿ ದೇವರ ಕೃಪೆಯಿಂದ ಯಾವ ರಾಶಿಯವರಿಗೆ ಶುಭ ? ಯಾವ ರಾಶಿಯವರಿಗೆ ಅಶುಭ?

NAMMUR EXPRESS NEWS
ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು?

** ಮೇಷ ರಾಶಿ :
ಮೇಷ ರಾಶಿಯವರಿಗೆ ಇಂದು ಒಳ್ಳೆಯ ದಿನವಾಗಲಿದೆ. ಉದ್ಯೋಗದಲ್ಲಿ ಬಡ್ತಿ ಸಿಗುವ ಸಾಧ್ಯತೆಗಳಿವೆ, ಆದರೆ ಕಚೇರಿಯಲ್ಲಿ ಕೆಲಸದ ಒತ್ತಡದಿಂದ ಆತ್ಮವಿಶ್ವಾಸದ ಕೊರತೆ ಇರುತ್ತದೆ. ಮನಸ್ಸು ಕೂಡ ತೊಂದರೆಗೊಳಗಾಗಬಹುದು. ನಿಮ್ಮ ಶೈಕ್ಷಣಿಕ ಕೆಲಸದ ಬಗ್ಗೆ ಜಾಗರೂಕರಾಗಿರಿ. ತೊಂದರೆಗಳು ಉಂಟಾಗಬಹುದು. ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಲು ಬಯಸುವ ವಿದ್ಯಾರ್ಥಿಗಳಿಗೆ ಇಂದು ಒಳ್ಳೆಯ ಸುದ್ದಿ ಸಿಗಬಹುದು.

** ವೃಷಭ ರಾಶಿ :
ವೃಷಭ ರಾಶಿಚಕ್ರದ ಜನರು ಇಂದು ತಾಳ್ಮೆಯಿಂದ ವರ್ತಿಸಬೇಕು. ಪ್ರಮುಖ ಕೆಲಸಗಳನ್ನು ಮುಂದೂಡಬೇಕು. ಆತ್ಮವಿಶ್ವಾಸದ ಕೊರತೆ ಇರುತ್ತದೆ. ಮನಸ್ಸು ಕೂಡ ತೊಂದರೆಗೊಳಗಾಗಬಹುದು. ಆರ್ಥಿಕ ಪರಿಸ್ಥಿತಿ ಸಾಮಾನ್ಯವಾಗಿಯೇ ಇರುತ್ತದೆ. ಕುಟುಂಬದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಬಹುದು. ನಿಮ್ಮ ತಂದೆಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

** ಮಿಥುನ ರಾಶಿ :
ಮಿಥುನ ರಾಶಿಚಕ್ರದ ಜನರು ಇಂದು ಚಿಂತಿತರಾಗುತ್ತಾರೆ. ನಿಮ್ಮ ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಆದರೆ ನಿಮ್ಮ ಕೆಲಸದಲ್ಲಿ ಅಧಿಕಾರಿಗಳಿಂದ ಬೆಂಬಲ ಸಿಗುತ್ತದೆ, ಆದರೆ ಕೆಲಸದ ಪ್ರದೇಶದಲ್ಲಿ ಬದಲಾವಣೆಯಾಗಿರಬಹುದು. ಹೆಚ್ಚು ಕಠಿಣ ಪರಿಶ್ರಮ ಪಡಬೇಕಾಗುತ್ತದೆ. ನಿಮ್ಮ ತಂದೆಯ ಬೆಂಬಲ ನಿಮಗೆ ಸಿಗುತ್ತದೆ. ಹಿರಿಯರಿಂದ ನಿಮಗೆ ಹಣ ಸಿಗಬಹುದು. ಈ ದಿನದ ಅಂತ್ಯದಲ್ಲಿ ಸಂತೋಷ, ಸಮೃದ್ಧಿ ಇರುತ್ತದೆ.

** ಕರ್ಕಾಟಕ ರಾಶಿ :
ಕಟಕ ರಾಶಿಯ ಜನರು ಇಂದು ಆರ್ಥಿಕವಾಗಿ ಜಾಗರೂಕರಾಗಿರಬೇಕು. ಆತ್ಮವಿಶ್ವಾಸದ ಕೊರತೆ ಇರುತ್ತದೆ. ಸ್ವಯಂ ನಿಯಂತ್ರಣದಲ್ಲಿರಿ. ಅತಿಯಾದ ಕೋಪವನ್ನು ತಪ್ಪಿಸಿ. ಉದ್ಯೋಗ ಕ್ಷೇತ್ರದಲ್ಲಿ ಬದಲಾವಣೆ ಆಗಬಹುದು. ಹೆಚ್ಚು ಕಠಿಣ ಪರಿಶ್ರಮ ಇರುತ್ತದೆ. ನಿಮ್ಮ ಆರೋಗ್ಯದ ಬಗ್ಗೆ ಗಮನ ಕೊಡಿ. ಇಂದು ನೀವು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಸುವರ್ಣಾವಕಾಶವನ್ನು ಪಡೆಯುತ್ತೀರಿ.

** ಸಿಂಹ ರಾಶಿ :
ಸಿಂಹ ರಾಶಿಚಕ್ರದ ಜನರಿಗೆ ಇಂದು ಕೆಲವು ಒಳ್ಳೆಯ ಸುದ್ದಿಗಳು ಸಿಗಬಹುದು. ಮನಸ್ಸಿನಲ್ಲಿ ಏರಿಳಿತಗಳು ಇರಬಹುದು. ಕುಟುಂಬದಲ್ಲಿ ಧಾರ್ಮಿಕ ಕಾರ್ಯಗಳು ನಡೆಯಬಹುದು. ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿ ನೆಲೆಸಲಿದೆ. ವ್ಯವಹಾರದಲ್ಲಿ ಬದಲಾವಣೆಗಳ ಸಾಧ್ಯತೆ ಇದೆ. ಅಜ್ಞಾತ ಭಯದಿಂದ ಕೆಲವರು ತೊಂದರೆಗೊಳಗಾಗುತ್ತಾರೆ.

** ಕನ್ಯಾ ರಾಶಿ :
ಕನ್ಯಾ ರಾಶಿಚಕ್ರದ ಜನರು ಇಂದು ಮಾನಸಿಕವಾಗಿ ಚಂಚಲರಾಗಬಹುದು. ಮನಸ್ಸಿನಲ್ಲಿ ನಿರಾಶೆ ಮತ್ತು ಅತೃಪ್ತಿ ಇರುತ್ತದೆ. ಮನೆ ಮತ್ತು ಕುಟುಂಬದಲ್ಲಿ ಧಾರ್ಮಿಕ ಕಾರ್ಯಗಳು ನಡೆಯಬಹುದು. ಕುಟುಂಬದಲ್ಲಿ ಗೌರವ ಹೆಚ್ಚಾಗುತ್ತದೆ. ವ್ಯವಹಾರದಲ್ಲಿ ಬದಲಾವಣೆಗಳ ಸಾಧ್ಯತೆ ಇದೆ. ಲಾಭಗಳಿಸುವ ಅವಕಾಶಗಳು ದೊರೆಯಲಿವೆ. ಇಂದು ಕುಟುಂಬ ಸದಸ್ಯರೊಂದಿಗೆ ನಿಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಹಿಂಜರಿಯಬೇಡಿ

** ತುಲಾ ರಾಶಿ :
ತುಲಾ ರಾಶಿಚಕ್ರದ ಜನರು ಇಂದು ಚಿಂತಿತರಾಗುತ್ತಾರೆ. ಆತ್ಮವಿಶ್ವಾಸ ಕಡಿಮೆಯಾಗುವ ಸಾಧ್ಯತೆ ಇದೆ. ಆರ್ಥಿಕವಾಗಿ ಪರಿಸ್ಥಿತಿ ಉತ್ತಮವಾಗಿರುತ್ತದೆ. ಶೈಕ್ಷಣಿಕ ಮತ್ತು ಬೌದ್ಧಿಕ ಕಾರ್ಯಗಳಲ್ಲಿ ನಿಮಗೆ ಗೌರವ ಸಿಗಬಹುದು. ಕುಟುಂಬ ಜೀವನವು ಸಂತೋಷದಿಂದ ಕೂಡಿರುತ್ತದೆ. ನಿಮ್ಮ ಜೀವನ ಸಂಗಾತಿಯ ಸಹವಾಸ ನಿಮಗೆ ಸಿಗುತ್ತದೆ. ನಿಮ್ಮ ವೃತ್ತಿ ಜೀವನದಲ್ಲಿ ಯಶಸ್ಸನ್ನು ಸಾಧಿಸಲು ನಿರಂತರವಾಗಿ ಪ್ರಯತ್ನಿಸುತ್ತಿರಿ.

** ವೃಶ್ಚಿಕ ರಾಶಿ :
ವೃಶ್ಚಿಕ ರಾಶಿಯ ಜನರು ಇಂದು ಆತ್ಮವಿಶ್ವಾಸದಿಂದ ತುಂಬಿರಬಹುದು. ಉದ್ಯೋಗದಲ್ಲಿ ಬಡ್ತಿಗೆ ಅವಕಾಶಗಳು ಸಿಗಲಿವೆ. ಗೌರವ ಹೆಚ್ಚಾಗುತ್ತದೆ. ಅಧಿಕಾರಿಗಳಿಂದ ನಿಮಗೆ ಬೆಂಬಲ ಸಿಗುತ್ತದೆ. ಸ್ನೇಹಿತರ ಸಹಾಯದಿಂದ ವ್ಯಾಪಾರ ಲಾಭ ಪಡೆಯುವಿರಿ. ವ್ಯವಹಾರದ ಪರಿಸ್ಥಿತಿ ಬಲವಾಗಿರುತ್ತದೆ. ಇಂದು ನೀವು ಶೈಕ್ಷಣಿಕ ಕೆಲಸದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ.

** ಧನಸ್ಸು ರಾಶಿ :
ಧನು ರಾಶಿಯ ಜನರು ಇಂದು ಪ್ರಭಾವಿ ವ್ಯಕ್ತಿಯನ್ನು ಭೇಟಿಯಾಗಬಹುದು. ಭೂಮಿ, ಕಟ್ಟಡ ಮತ್ತು ವಾಹನ ಖರೀದಿ ಸಾಧ್ಯ. ಸ್ನೇಹಿತರ ಸಹಾಯದಿಂದ ವ್ಯವಹಾರವನ್ನು ಪ್ರಾರಂಭಿಸಬಹುದು. ಆದಾಯ ಹೆಚ್ಚಾಗಲಿದೆ. ನಿಮ್ಮ ಕುಟುಂಬದಿಂದ ನಿಮಗೆ ಬೆಂಬಲ ಸಿಗುತ್ತದೆ. ಆದರೆ ಉತ್ತಮ ಆದಾಯದಿಂದಾಗಿ ಒತ್ತಡದಿಂದ ಮುಕ್ತರಾಗುತ್ತೀರಿ ಮತ್ತು ಮನೆಯಲ್ಲಿ ಹಿರಿಯ ಸದಸ್ಯರೊಂದಿಗೆ ಯಾವುದೇ ಶುಭ ಕಾರ್ಯಕ್ರದ ಬಗ್ಗೆ ಚರ್ಚಿಸಬಹುದು.

** ಮಕರ ರಾಶಿ :
ಮಕರ ರಾಶಿಯವರು ಇಂದು ಅನಗತ್ಯ ಕೋಪವನ್ನು ತಪ್ಪಿಸಬೇಕು. ಆತ್ಮವಿಶ್ವಾಸವೂ ಹೇರಳವಾಗಿರುತ್ತದೆ. ವ್ಯವಹಾರವು ಸುಧಾರಿಸುತ್ತದೆ. ಲಾಭ ಗಳಿಸುವ ಅವಕಾಶಗಳು ದೊರೆಯಲಿವೆ. ನಿಮ್ಮ ಪೋಷಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ನಿಮ್ಮ ಕೆಲಸದಲ್ಲಿ ಅಧಿಕಾರಿಗಳಿಂದ ಬೆಂಬಲ ಸಿಗುತ್ತದೆ, ಆದರೆ ಕೆಲಸದ ಕ್ಷೇತ್ರದಲ್ಲಿ ಬದಲಾವಣೆಯ ಸಾಧ್ಯತೆಗಳೂ ಇವೆ.

** ಕುಂಭ ರಾಶಿ :
ಇಂದು ನೀವು ಕೆಲಸದಲ್ಲಿ ಬಡ್ತಿ ಪಡೆಯಬಹುದು. ಅನಗತ್ಯ ಕೋಪ ಮತ್ತು ವಾದಗಳನ್ನು ತಪ್ಪಿಸಿ. ಇಂದು ದೂರದ ಸ್ಥಳಕ್ಕೆ ಹೋಗುವ ಸಾಧ್ಯತೆ ಇದೆ. ನಿಮ್ಮ ಪೋಷಕರಿಂದ ನಿಮಗೆ ಬೆಂಬಲ ಸಿಗುತ್ತದೆ. ಇಂದು ನಿಮ್ಮ ಮನಸ್ಸಿನಲ್ಲಿ ಏರಿಳಿತಗಳು ಇದ್ದೇ ಇರುತ್ತವೆ. ನಿಮ್ಮ ಸಂಗಾತಿಯೊಂದಿಗಿನ ಸಂಬಂಧದಲ್ಲಿ ಸಾಮರಸ್ಯವನ್ನು ಕಾಪಾಡಿಕೊಳ್ಳಬೇಕು. ನಿಮ್ಮ ಆರೋಗ್ಯದ ಬಗ್ಗೆ ನೀವು ಸಂಪೂರ್ಣ ಗಮನ ಹರಿಸಬೇಕು.

** ಮೀನ ರಾಶಿ :
ಇಂದು ಮಾತಿನ ಪ್ರಭಾವದಿಂದಾಗಿ ಬಾಕಿ ಇರುವ ಕೆಲಸಗಳು ಪೂರ್ಣಗೊಳ್ಳುತ್ತವೆ. ಸ್ನೇಹಿತರ ಸಹಾಯದಿಂದ ವ್ಯವಹಾರವು ಬೆಳೆಯುತ್ತದೆ. ನಿಮ್ಮ ಕುಟುಂಬದೊಂದಿಗೆ ಯಾವುದಾದರೂ ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡಬೇಕೆಂದು ನೀವು ಭಾವಿಸಬಹುದು. ನಿಮಗೆ ಸ್ನೇಹಿತರಿಂದ ಬೆಂಬಲ ಸಿಗುತ್ತದೆ. ಗೌರವ ಹೆಚ್ಚಾಗುತ್ತದೆ. ಇಂದು, ವೃತ್ತಿ ಸಂಬಂಧಿತ ನಿರ್ಧಾರಗಳನ್ನು ಬಹಳ ಚಿಂತನಶೀಲವಾಗಿ ತೆಗೆದುಕೊಳ್ಳಿ.

Categories
ಚಿಕ್ಕಮಗಳೂರು

ಚಿಕ್ಕಮಗಳೂರು ಟಾಪ್ ನ್ಯೂಸ್ !!

ಚಿಕ್ಕಮಗಳೂರು ಟಾಪ್ ನ್ಯೂಸ್ !!

* ಪ್ರವಾಸಿಗನ ನಿಯಂತ್ರಣ ತಪ್ಪಿ 100 ಅಡಿ ಕಂದಕಕ್ಕೆ ಉರುಳಿದ ಕಾರು
* ಅಂತರ್ ಧರ್ಮೀಯ ವಿವಾಹ ಪ್ರಕರಣ ವ್ಯಕ್ತಿಗೆ ಜೀವಬೆದರಿಕೆ
* ವರದಕ್ಷಿಣೆ ಕಿರುಕುಳ ಮಹಿಳೆ ಆತ್ಮಹತ್ಯೆಗೆ ಶರಣು

NAMMUR EXPRESS NEWS
* ಪ್ರವಾಸಿಗನ ನಿಯಂತ್ರಣ ತಪ್ಪಿ 100 ಅಡಿ ಕಂದಕಕ್ಕೆ ಉರುಳಿದ ಕಾರು
ಮೂಡಿಗೆರೆ: ಚಾಲಕನ ನಿಯಂತ್ರಣ ತಪ್ಪಿ ಪ್ರವಾಸಿಗರ ಕಾರೊಂದು ಸುಮಾರು 100 ಅಡಿ ಆಳದ ಕಂದಕಕ್ಕೆ ಬಿದ್ದಿರುವ ಘಟನೆ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ನಡೆದಿದೆ.
ಕಾರು‌ 100 ಆಳದ ಪ್ರಪಾತಕ್ಕೆ ಬಿದ್ದರೂ ಕಾರಿನಲ್ಲಿದ್ದ ಐವರು ಪವಾಡ ಸದೃಶ್ಯ ಪಾರಾಗಿದ್ದಾರೆ. ಆರು ಜನರ ಕುಟುಂಬ ಶಿವಮೊಗ್ಗದಿಂದ ಧರ್ಮಸ್ಥಳಕ್ಕೆ ಧಾರ್ಮಿಕ ಪ್ರವಾಸ ಹೊರಟಿದ್ದರು. ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯ ಆರಂಭದಲ್ಲೇ ಮಲಯ ಮಾರುತ ಬಳಿ ಕಾರು, ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಉರುಳಿದೆ. ಕಾರಿನಲ್ಲಿದ್ದ ಶಂಕರ್, ಸೀತಮ್ಮ, ಭಾನುಪ್ರಿಯಾ, ಆರಾಧ್ಯ, ಹರೀಶ್, ಶ್ರೇಯಸ್ ಸೇರಿ ಎಲ್ಲರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಕಾರಿನಲ್ಲಿದ್ದ 2 ವರ್ಷದ ಮಗುವಿಗೆ ಗಂಭೀರ ಗಾಯವಾಗಿದ್ದು ಚಿಕಿತ್ಸೆಗಾಗಿ ಮಗುವನ್ನು ಶಿವಮೊಗ್ಗದ ಆಸ್ಪತ್ರೆಗೆ ರವಾನಿಸಲಾಗಿದೆ.

* ಅಂತರ್ ಧರ್ಮೀಯ ವಿವಾಹ ಪ್ರಕರಣ ವ್ಯಕ್ತಿಗೆ ಜೀವಬೆದರಿಕೆ
ಚಿಕ್ಕಮಗಳೂರು: ಅಂತರ್ ಧರ್ಮೀಯ ವಿವಾಹವನ್ನು ಬೆಂಬಲಿಸಿದ ವ್ಯಕ್ತಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ಪೊಲೀಸರು ಬಜರಂಗ ದಳದ ನಾಯಕರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಸವನಹಳ್ಳಿ ಪೊಲೀಸರು ಬಜರಂಗ ದಳ ಜಿಲ್ಲಾ ಮಟ್ಟದ ನಾಯಕರಾದ ಶ್ಯಾಮ್ ಮತ್ತು ಸಾಗರ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 353(1)(ಸಿ) ಮತ್ತು 353(2) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಗೋಬಿ ಚಾಟ್ ಅಂಗಡಿಯ ಮಾಲೀಕ ಮಹೇಶ್ ಸಲ್ಲಿಸಿದ ದೂರಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ.
ಪೋಲೀಸರ ಪ್ರಕಾರ ಮಹೇಶ್ ಚಿಕ್ಕಮಗಳೂರು ನಗರದಲ್ಲಿ ಗೋಬಿ ಮಂಚೂರಿ ಅಂಗಡಿಯನ್ನು ಇಟ್ಟುಕೊಂಡಿದ್ದಾರೆ. ಮುಸ್ಲಿಂ ಸಮುದಾಯಕ್ಕೆ ಸೇರಿದ ಅವರ ಕೆಲಸಗಾರನೊಬ್ಬ ಹಿಂದೂ ಯುವತಿಯನ್ನು ಪ್ರೀತಿಸುತ್ತಿದ್ದ. ಈ ಬಗ್ಗೆ ತಿಳಿದ ಮಹೇಶ್, ನಾಲ್ಕು ದಿನಗಳ ಹಿಂದಷ್ಟೇ ಚಿಕ್ಕಮಗಳೂರು ನಗರದ ಸಬ್-ರಿಜಿಸ್ಟ್ರಾರ್ ಕಚೇರಿಯಲ್ಲಿ ಅವರ ವಿವಾಹಕ್ಕೆ ಸಹಾಯ ಮಾಡಿ,ಅವರ ಮದುವೆಗೆ ಸಾಕ್ಷಿಯಾಗಿ ಸಹಿ ಹಾಕಿದ್ದರು.

ಈ ಘಟನೆ ಬೆಳಕಿಗೆ ಬಂದ ನಂತರ, ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿ ಮಹೇಶ್ ಅವರು ‘ಲವ್ ಜಿಹಾದ್’ ಅನ್ನು ಬೆಂಬಲಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಮಹೇಶ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನವನ್ನು ಆರಂಭಿಸಿ, ಅವರನ್ನು ದೇಶದ್ರೋಹಿ ಎಂದು ಕರೆದಿದ್ದಾರೆ ಎನ್ನಲಾಗಿದೆ.

* ವರದಕ್ಷಿಣೆ ಕಿರುಕುಳ ಮಹಿಳೆ ಆತ್ಮಹತ್ಯೆಗೆ ಶರಣು

ಬಾಳೆಹೊನ್ನೂರು: ಗಂಡನ ಮನೆಯವರ ವರದಕ್ಷಿಣೆ
ಕಿರುಕುಳಕ್ಕೆ ಗೃಹಿಣಿಯೊಬ್ಬರು ಬಲಿಯಾಗಿರುವ ಘಟನೆ ಎನ್.ಆ‌ರ್.ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ನಡೆದಿದೆ.
ಮಮತಾ ಮೃತ ದುರ್ದೈವಿ. 4 ವರ್ಷದ ಹಿಂದೆ ಮದುವೆಯಾದ್ದ ಮಮತಾಗೆ ಮದುವೆ ವೇಳೆ 110 ಗ್ರಾಂ ಚಿನ್ನ ನೀಡಿ ಪೋಷಕರು ಮದುವೆ ಮಾಡಿಸಿ ಕೊಟ್ಟಿದ್ದರು. ಮದುವೆಯ ಬಳಿಕ ಹೆಚ್ಚಿನ ಹಣ ಕೊಡುವಂತೆ ಗಂಡನ ಮನೆಯವರು ಮಮತಾಳಿಗೆ ಮಾನಸಿಕ-ದೈಹಿಕ ಕಿರುಕುಳ ನೀಡ್ತಿದಾರೆ ಎನ್ನಲಾಗಿದೆ, ಹಿಂಸೆ ತಾಳಲಾರದೆ ಮಮತಾ ಗಂಡನ ಮನೆ ಬಿಟ್ಟು ತವರು ಮನೆಗೆ ಬಂದಿದ್ದರು ಎನ್ನಲಾಗಿದೆ ಈ ನಡುವೆ ಕುಟುಂಬದ ಹಿರಿಯರ ಸಮ್ಮುಖದಲ್ಲಿ ರಾಜಿ ಪಂಚಾಯತಿ ಮೂಲಕ ಮತ್ತೆ ಗಂಡನ ಮನೆ ಸೇರಿದ್ದರು.
ಕಳೆದ ವರ್ಷ ತೋಟದ ನಿರ್ವಹಣೆಗೆಂದು ಮಮತಾ ಪತಿ ಅವಿನಾಶ್‌ ಮಮತಾ ಪೋಷಕರಿಂದ 50 ಸಾವಿರ ಪಡೆದುಕೊಂಡಿದ್ದ ಇದಾದ ಬಳಿಕ ಜನವರಿ 25ರಂದು ಮಮತಾಗೆ ಪಿಡ್ಸ್ ಬಂದಿದೆ ಎಂದು ಗಂಡ ಅವಿನಾಶ್‌ ಆಸ್ಪತ್ರೆಗೆ ಸೇರಿಸಿದ್ದ ಆದರೆ ಅವಿನಾಶ್ ಚಿಕ್ಕಪ್ಪ ಮಮತಾ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆಂದು ಮಮತಾ ಪೋಷಕರಲ್ಲಿ ಹೇಳಿಕೆ ನೀಡಿದ್ದಾರೆ. ಎರಡು ತಿಂಗಳಿಂದ ಫಾದ‌ರ್ ಮುಲ್ಲರ್, ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದ ಗಂಡನ ಮನೆಯವರು ಆಕೆ ಹುಷಾರಾಗುವ ಮುನ್ನವೇ ಮನೆಗೆ ಕರೆದುಕೊಂಡು ಬಂದಿದ್ದು ಇದಾದ ಕೆಲ ದಿನದಲ್ಲೇ ಮಮತಾ ಕೊನೆಯುಸಿರು ಎಳೆದಿದ್ದಾರೆ.

Categories
ಉಡುಪಿ

ಅಜೆಕಾರು: ಎಸ್​ಎಸ್​ಎಲ್​ಸಿಯಲ್ಲಿ ಫೇಲ್, ಮನನೊಂದ ವಿದ್ಯಾರ್ಥಿ ಆತ್ಮಹತ್ಯೆ!

ಕರಾವಳಿ ಟಾಪ್ ನ್ಯೂಸ್

ಅಜೆಕಾರು: ಎಸ್​ಎಸ್​ಎಲ್​ಸಿಯಲ್ಲಿ ಫೇಲ್, ಮನನೊಂದ ವಿದ್ಯಾರ್ಥಿ ಆತ್ಮಹತ್ಯೆ!

– ಉಡುಪಿ: ವಿದ್ಯಾರ್ಥಿನಿಯ ಅಪಹರಿಸಿ ಮದುವೆಯಾಗಲು ಯತ್ನ: ಲವ್ ಜಿಹಾದ್!
– ಉಡುಪಿ: ಗಂಡನಿಂದಲೇ ದೈಹಿಕ ಹಲ್ಲೆ, ಪ್ರತಿನಿತ್ಯ ಕಿರುಕುಳ!

NAMMUR EXPPRESS NEWS
ಅಜೆಕಾರು: ಹತ್ತನೇ ತರಗತಿಯಲ್ಲಿ ಕೆಲವು ವಿಷಯಗಳಲ್ಲಿ ಅನುತ್ತೀರ್ಣಗೊಂಡಿದ್ದು, ನಂತರ ಟ್ಯೂಶನ್‌ ಪಡೆದು ಎಸ್​ಎಸ್​ಎಲ್​ಸಿ ಸಪ್ಲಿಮೆಂಟರಿ ಪರೀಕ್ಷೆ ಬರೆದಿದ್ದರೂ ಅನುತ್ತೀರ್ಣಗೊಂಡ ಕಾರಣ ಜೀವನದಲ್ಲಿ ಜಿಗುಪ್ಸೆಗೊಂಡು ವಿದ್ಯಾರ್ಥಿ ತೇಜಸ್‌ (17 ವರ್ಷ) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಜೆಕಾರಿನಲ್ಲಿ ನಡೆದಿದೆ.
ಎಸ್​ಎಸ್​ಎಲ್​ಸಿ ಪರೀಕ್ಷೆ ಮತ್ತು ಸಪ್ಲಿಮೆಂಟರಿ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡಿದ್ದಕ್ಕೆ ಜಿಗುಪ್ಸೆಗೊಂಡ ವಿದ್ಯಾರ್ಥಿ ತೇಜಸ್‌ ಮನೆಯಿಂದ ಸ್ವಲ್ಪ ದೂರದಲ್ಲಿರುವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುರುವಾರ (ಮಾ.27) ನಡೆದಿದೆ.
ಈ ಘಟನೆ ಬಗ್ಗೆ ತಂದೆ ರಮೇಶ ಮಂಜರಬೆಟ್ಟು ಅವರು ನೀಡಿದ ದೂರಿನ ಮೇರೆಗೆ ಅಜೆಕಾರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

– ಉಡುಪಿ: ವಿದ್ಯಾರ್ಥಿಯ ಅಪಹರಿಸಿ ಮದುವೆಯಾಗಲು ಯತ್ನ: ಲವ್ ಜಿಹಾದ್!

ಉಡುಪಿ: ಉಡುಪಿ ಪೊಲೀಸ್ ಠಾಣೆಯಲ್ಲಿ ಯುವತಿಯ ತಂದೆ ಒಬ್ಬರು ಅನ್ಯಕೋಮಿನ ಯುವಕನೊಬ್ಬ ತನ್ನ ಮಗಳನ್ನು ಅಪಹರಿಸಿ ಮದುವೆಯಾಗಲು ಯತ್ನಿಸಿದ್ದಾನೆ ಎಂದು ಆರೋಪಿಸಿ ದೂರದಾಕಲಿಸಿದ್ದಾರೆ. ಈ ಬೆನ್ನಲ್ಲೇ ಲವ್ ಜಿಹಾದ್ ಆರೋಪ ಕೇಳಿ ಬಂದಿದೆ.
ಗಾಡ್ವಿನ್ ದೇವದಾಸ್ ಎಂಬವರು ದೂರು ದಾಖಲಿಸಿದ್ದು
ಉಡುಪಿಯ ಕರಂಬಳ್ಳಿ ನಿವಾಸಿ ಮೊಹಮ್ಮದ್
ಅಕ್ರಮ್ ಎಂಬವನು ನನ್ನ ಮಗಳನ್ನು ಅಪಹರಿಸಿದ್ದಾನೆ. ಹಿಂದೆ ಅಕ್ರಮ್ ಮೊಹಮ್ಮದ್ ವಿರುದ್ಧ ಲೈಂಗಿಕ ಕಿರುಕುಳ ದೂರು ನೀಡಿದ್ದರು. ಈ ಸೇಡು ತೀರಿಸಿಕೊಳ್ಳಲು ಅಕ್ರಮ್ ಮೊಹಮ್ಮದ್ ನನ್ನ ಮಗಳನ್ನು ಅಪಹರಿಸಿ, ಬೆದರಿಸಿ ವಿವಾಹ ನೊಂದಣಿಗೆ ಸಹಿ ಹಾಕಿಸಿದ್ದಾನೆ ಎಂದು ದೂರು ನೀಡಿದ್ದಾರೆ.
ಇಷ್ಟೇ ಅಲ್ಲದೆ ಅಪ್ರಾಪ್ತೆಯಾಗಿದ್ದಾಗಲೇ ನಮ್ಮ
ಮಗಳಿಗೆ ಅಕ್ರಂ ಕಿರುಕುಳ ನೀಡಿದ್ದನು. ಐದು ವರ್ಷದ ಹಿಂದೆ ಪೋಕ್ಸೋ ಕೇಸು ದಾಖಲು ಮಾಡಿದ್ದೆವು. ಲೈಂಗಿಕ ಕಿರುಕುಳ ನೀಡಿಲ್ಲ ಎಂಬ ಕಾರಣಕ್ಕೆ ಕೇಸು ವಜಾಗೊಂಡಿತ್ತು. ಇದೀಗ, ಸೇಡು ತೀರಿಸಲು ಅಪಹರಿಸಿದ್ದಾನೆ” ಎಂದು ಪೋಷಕರಾದ ಮೇರುಸ್ ಪುಷ್ಪಲತಾ ಮತ್ತು ಗಾಡ್ವಿನ್ ದೇವದಾಸ್ ಆರೋಪಿಸಿದ್ದಾರೆ.

ಉಡುಪಿ: ಗಂಡನಿಂದಲೇ ದೈಹಿಕ ಹಲ್ಲೆ, ಪ್ರತಿನಿತ್ಯ ಕಿರುಕುಳ!

ಉಡುಪಿ: ಮದುವೆಯಾದ ನಂತರ ದೈಹಿಕ ಹಲ್ಲೆ ನಡೆಸಿ, ಪದೇ, ಪದೇ ಕಿರುಕುಳ ನೀಡಿದ್ದ ಆರೋಪದ ಮೇಲೆ ಅಲಿಯಾ ಪಟ್ಟು ಪವಿನ್‌ ಎಂಬಾಕೆ ಪತಿ ಪರ್ವೆಜ್‌ ವಿರುದ್ಧ ಉಡುಪಿ ಮಹಿಳಾ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮಂಗಳೂರು ಕೃಷ್ಣಾಪುರದ ಅಲಿಯಾ ಪಟ್ಟು ಪವಿನ್‌ (24) 2021ರ ಜನವರಿ 25ರಂದು ಕುಂದಾಪುರದ ಹಂಗಳೂರಿನ ಪರ್ವೇಝ್‌ ಎಂಬಾತನನ್ನು ಮುಸ್ಲಿಂ ಸಂಪ್ರದಾಯದಂತೆ ವಿವಾಹವಾಗಿದ್ದರು.
ಮದುವೆಯಾದ 3ನೇ ದಿನಕ್ಕೆ ಪತಿ ಪರ್ವೇಜ್‌ ಪತ್ನಿಗೆ ಹೊಡೆದು ಹಿಂಸೆ ಕೊಟ್ಟಿದ್ದ. ಅಲ್ಲದೇ ಪರ್ವೇಜ್‌ ತಂದೆ ಅಬ್ದುಲ್ಲ ಮತ್ತು ತಾಯಿ ಜುಬೈದಾ ಕೂಡಾ ಹೊಡೆದು ಹಿಂಸೆ ಕೊಟ್ಟಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಗಂಡ ಹಾಗೂ ಮನೆಯವರು ನಿರಂತರ ಕಿರುಕುಳ ನೀಡುತ್ತಿರುವುದರಿಂದ ಬೇಸತ್ತ ಪತ್ನಿ ಪವಿನ್‌ ಮಂಗಳೂರು ಮಹಿಳಾ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಈ ದೂರು ಉಡುಪಿ ಮಹಿಳಾ ಠಾಣೆಗೆ ವರ್ಗಾವಣೆಗೊಂಡಿದ್ದು, ಪ್ರಕರಣ ದಾಖಲಾಗಿದೆ.

Categories
ಮಂಗಳೂರು

ಮಂಗಳೂರು: 100% ರಿಸಲ್ಟ್‌ ಆಸೆಗೆ ಮಕ್ಕಳ ಜೀವನದಲ್ಲಿ ಶಿಕ್ಷಕರ ಚೆಲ್ಲಾಟ!

ಮಂಗಳೂರು: 100% ರಿಸಲ್ಟ್‌ ಆಸೆಗೆ ಮಕ್ಕಳ ಜೀವನದಲ್ಲಿ ಶಿಕ್ಷಕರ ಚೆಲ್ಲಾಟ!

– ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಬಿಡದೆ 100% ರಿಸಲ್ಟ್ ಪಡೆಯುವ ದುರುದ್ದೇಶ?
– ಹಾಲ್ ಟಿಕೆಟ್ ಕೊಟ್ಟಿಲ್ಲ, ಪರೀಕ್ಷೆಗೂ ಬಿಟ್ಟಿಲ್ಲ!

NAMMUR EXPRESS NEWS
ಮಂಗಳೂರು: ಕರ್ನಾಟಕದಾದ್ಯಂತ ಎಸ್​ಎಸ್​ಎಲ್​ಸಿ (SSLC) ಪರೀಕ್ಷೆ ನಡೆಯುತ್ತಿದೆ. ಆದರೆ 100 ಪರ್ಸೆಂಟ್‌ ರಿಸಲ್ಟ್‌ ಆಸೆಗೆ ದಕ್ಷಿಣ ಕನ್ನಡ ಜಿಲ್ಲೆಯ ಸರ್ಕಾರಿ ಶಾಲೆಯೊಂದು ಎಡವಟ್ಟು ಮಾಡಿಕೊಂಡಿದೆ.
ಇಬ್ಬರು ಎಸ್​ಎಸ್​ಎಲ್​ಸಿ ವಿದ್ಯಾರ್ಥಿನಿಯರನ್ನು (Students) ಪರೀಕ್ಷೆಗೆ ಕೂರಿಸದೇ ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟವಾಡಿದೆ. ಕಲಿಕೆಯಲ್ಲಿ ಹಿಂದುಳಿದಿದ್ದಾರೆ ಎಂಬ ಕಾರಣ ನೀಡಿ ಇಬ್ಬರು ವಿದ್ಯಾರ್ಥಿನಿಯರಿಗೆ SSLC ಪರೀಕ್ಷೆ ಬರೆಯಲು ಅವಕಾಶವೇ ಕೊಟ್ಟಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪದ್ಮುಂಜ ಸರ್ಕಾರಿ ಪ್ರೌಢ ಶಾಲೆಯೊಂದು, ಮಕ್ಕಳ ಭವಿಷ್ಯದ ಜತೆ ಚೆಲ್ಲಾಟವಾಡಿದೆ. ಕಲಿಕೆಯಲ್ಲಿ ಹಿಂದುಳಿದಿದ್ದಾರೆ ಎಂಬ ಕಾರಣ ನೀಡಿ ಇಬ್ಬರು ವಿದ್ಯಾರ್ಥಿನಿಯರಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಿಲ್ಲ.

ಪೋಷಕರ ಆಕ್ರೋಶ!

ಮುಖ್ಯ ಶಿಕ್ಷಕರು 100 ಪರ್ಸೆಂಟ್ ಫಲಿತಾಂಶ ದಾಖಲಿಸಬೇಕೆಂಬ ದುರುದ್ದೇಶದಿಂದಲೇ ಓದೋದರಲ್ಲಿ ಹಿಂದುಳಿದ ಇಬ್ಬರು ವಿದ್ಯಾರ್ಥಿನಿಯರಿಗೆ ಹಾಲ್ ಟಿಕೆಟ್ ಕೊಟ್ಟಿಲ್ಲ. ಹೀಗಾಗಿ ನಮ್ಮ ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.
ಇತ್ತ ವಿದ್ಯಾರ್ಥಿನಿಯರು ಕ್ಷೇತ್ರ ಶಿಕ್ಷಣಾಧಿಕಾರಿಗಳು, ಡಿಡಿಪಿಐ, ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ರಾಜ್ಯ ಎಸ್​ಡಿಎಂಸಿ ಸಮನ್ವಯ ವೇದಿಕೆಗೆ ಪತ್ರ ಬರೆದು ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. ಇದರ ಬೆನ್ನಲ್ಲೇ ನಿನ್ನೆ ಶಾಲೆಗೆ ಭೇಟಿ ನೀಡಿದ್ದ ಬಿಇಓ ಹಾಲ್ ಟಿಕೆಟ್ ಕೊಡಿಸಿದ್ದು, ಉಳಿದ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟಿದ್ದಾರೆ. ಅಲ್ಲದೆ ಈ ಬಗ್ಗೆ ತನಿಖೆ ನಡೆಸುವುದಾಗಿ ಬಿಇಒ ಹೇಳಿದ್ದಾರೆ. ಅದೇನೆ ಇರಲಿ ಮಕ್ಕಳ ಭವಿಷ್ಯದ ಜತೆ ಹೀಗೆ ಚೆಲ್ಲಾಟ ಆಡುವವರಿಗೆ ಬಿಸಿ ಮುಟ್ಟಿಸಬೇಕಿದೆ.