ಟಾಪ್ 3 ನ್ಯೂಸ್: ತೀರ್ಥಹಳ್ಳಿ
ಡಾ. ಆರ್. ಎಂ. ಮಂಜುನಾಥ ಗೌಡರಿಗೆ ಪ್ರಶಸ್ತಿ: ಅಭಿನಂದನೆ
– ಡಿಸಿಸಿ ಬ್ಯಾಂಕ್ ಅಲ್ಲಿ ಅಭಿನಂದನೆ ಸಲ್ಲಿಸಿದ ನಿರ್ದೇಶಕರು, ಸಿಬ್ಬಂದಿ
– ದೇವಂಗಿಯಲ್ಲಿ ಸಂಭ್ರಮದ ಮಹಿಳಾ ದಿನಾಚರಣೆ
– ನೂತನ ಕಟ್ಟಡದಲ್ಲಿ ಕಾರ್ಯಕ್ರಮ: ಗ್ರಾಮಸ್ಥರ ಮೆಚ್ಚುಗೆ
– ಕಲ್ಲುಕೊಡಿಗೆಯಲ್ಲಿ ಯಕ್ಷಗಾನ: ಕಲಾವಿದರಿಗೆ ಸನ್ಮಾನ
NAMMUR EXPRESS NEWS
ಶಿವಮೊಗ್ಗ ಡಿ.ಸಿ.ಸಿ ಬ್ಯಾಂಕ್ ಹಾಗೂ ಸಹಕಾರ ಕ್ಷೇತ್ರಕ್ಕೆ ನೀಡಿದ ಕೊಡುಗೆ ಮತ್ತು ಪ್ರಗತಿಗೆ ಕಾರಣಕರ್ತರಾಗಿರುವ ಬ್ಯಾಂಕಿನ ಅಧ್ಯಕ್ಷರಾದ ಡಾ|| ಆರ್.ಎಂ. ಮಂಜುನಾಥ ಗೌಡ ಇವರ ಸೇವೆಯನ್ನು ಗುರುತಿಸಿ ಸುವರ್ಣ ಸುದ್ದಿವಾಹಿನಿ ಹಾಗೂ ಕನ್ನಡ ಪ್ರಭ ದಿನಪತ್ರಿಕೆ ಇವರು ಇತ್ತೀಚಿಗೆ ದುಬೈನಲ್ಲಿ ನಡೆದ ಸಮಾರಂಭದಲ್ಲಿ ಅಂತರಾಷ್ಟ್ರೀಯ ಐಕಾನ್ ಪ್ರಶಸ್ತಿಯನ್ನು ಪ್ರಧಾನ ಮಾಡಿದರು. ಈ ಸಂಬಂಧ ದಿನಾಂಕ: 27.03.2025 ರಂದು ನಡೆದ ಬ್ಯಾಂಕಿನ ಆಡಳಿತ ಮಂಡಳಿ ಸಭೆಯಲ್ಲಿ ಆಡಳಿತ ಮಂಡಳಿ ವತಿಯಿಂದ ಅಭಿನಂದಿಸಲಾಯಿತು.
ದೇವಂಗಿಯಲ್ಲಿ ಸಂಭ್ರಮದ ಮಹಿಳಾ ದಿನಾಚರಣೆ
ತೀರ್ಥಹಳ್ಳಿ: ಮಾರ್ಚ್ 24 ರಂದು ದೇವಂಗಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಐದು ಸ್ತ್ರೀ ಶಕ್ತಿ ಸಂಘಗಳಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಅತ್ಯಂತ ಅದ್ದೂರಿಯಾಗಿ ಆಚರಣೆ ಮಾಡಲಾಯಿತು. ಹಾಗೆಯೇ ಈ ಕಾರ್ಯಕ್ರಮದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ತಾಲೂಕಿಗೆ ಮಾದರಿ ಎಂಬಂತೆ ಈ ಸಂಘಗಳು ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೆ ಮಾದರಿಯಂತೆ ಸ್ತ್ರೀಶಕ್ತಿ ಹಾಗೂ ಗ್ರಾಮಸ್ಥರಿಂದ ಹಣವನ್ನು ಸಂಗ್ರಹಿಸಿ ಇಲ್ಲಿನ ಎಲ್ಲಾ ಸದಸ್ಯರು ಸೇರಿ ಶ್ರಮದಿಂದ ಸಂಘದ ಸಭೆ ನಡೆಸಲು ನೂತನ ಕಟ್ಟಡವನ್ನು ನಿರ್ಮಿಸಿದ್ದು.,ಇದಕ್ಕೆ ಸಹಕರಿಸಿದ ಸದಸ್ಯರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಕಟ್ಟಡ ನಿರ್ಮಾಣಕ್ಕೆ ಶ್ರಮಿಸಿದ ಶ್ರೀಮತಿ ಅನ್ನಪೂರ್ಣ ವಿಜಯ ದೇವಂಗಿ, ಶ್ರೀಮತಿ ಶಾರದಾ ವಿಠಲ ಶೆಟ್ಟಿ ಇಂಗ್ಲಾದಿ, ಶ್ರೀಮತಿ ಶೋಭಾ ದಯಾನಂದ್ ಮಳೂರು ಇವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಹಿರಿಯ ನಾಗರೀಕರಾದ ಶ್ರೀ ಕುಮಾರಿ ರವೀಂದ್ರ ನಾಯಕ್ ದೇವಂಗಿ ಹಿರಿಯ ನಾಗರೀಕ ವಿಭಾಗದಿಂದ ಸೇವೆಗಾಗಿ ಸನ್ಮಾನಿಸಲಾಯಿತು. ದೇವಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಮಸ್ತ ಗ್ರಾಮಸ್ಥರ ಸಹಕಾರದಿಂದ ಈಗಾಗಲೇ ಕಟ್ಟಡ ನಿರ್ಮಾಣಗೊಂಡಿದ್ದು, ಹತ್ತು ಹಲವು ಕಾರ್ಯಕ್ರಮಗಳು ಈ ನೂತನ ಕಟ್ಟಡದಲ್ಲಿ ನೆರವೇರುತ್ತಿದೆ. ಈ ಸಹಕಾರಕ್ಕೆ ಸಂಘದ ಸದಸ್ಯರು ಸರ್ವರನ್ನ ಅಭಿನಂದಿಸಿದ್ದಾರೆ.
ಕಲ್ಲುಕೊಡಿಗೆಯಲ್ಲಿ ಯಕ್ಷಗಾನ: ಕಲಾವಿದರಿಗೆ ಸನ್ಮಾನ
ದೇವಂಗಿ: ಶ್ರೀ ಗುತ್ಯಮ್ಮ ಪ್ರಸಾದಿತ ಯಕ್ಷಗಾನ ಮಂಡಳಿ, ಶ್ರೀ ಕ್ಷೇತ್ರ ಗುತ್ತಿಯಡಹಳ್ಳಿ, ಸೀತೂರು ಇವರಿಂದ ಯಕ್ಷಗಾನ ಪ್ರಸಂಗ ಅದ್ದೂರಿಯಾಗಿ ದೇವಂಗಿ ಗ್ರಾಮದ ಮುಸ್ಸಿನಕೊಪ್ಪ ಕಲ್ಲುಕೊಡಿಗೆಯಲ್ಲಿ ಇತ್ತೀಚಿಗೆ ನಡೆಯಿತು.
ಶ್ರೀ ಗುತ್ಯಮ್ಮ ಪ್ರಸಾದಿತ ಯಕ್ಷಗಾನ ಮಂಡಳಿ, ಶ್ರೀ ಕ್ಷೇತ್ರ ಗುತ್ತಿಯಡಹಳ್ಳಿ, ಸೀತೂರು ದಿನಾಂಕ 23-03-2025ನೇ ಭಾನುವಾರ ರಾತ್ರಿ ಗಂಟೆ 8-00 ರಿಂದ 1-00ರ ವರೆಗೆ ಮುಸ್ಸಿನಕೊಪ್ಪ-ಸಿಡಿಯಾ-ಕಲ್ಲುಕೊಡಿಗೆ ಶಾಲಾ ಮೈದಾನದಲ್ಲಿ ವಿದ್ಯುದ್ದೀಪಾಲಂಕೃತ ಭವ್ಯ ರಂಗಮಂಟಪದಲ್ಲಿ ಯಡಹಳ್ಳಿ ಮೇಳ ಗುತ್ಯಮ್ಮ ಇವರಿಂದ ನೂತನ ನಾಗಶ್ರೀ ಪ್ರಸಂಗವನ್ನು ಬಯಲಾಟವಾಗಿ ಆಡಿ ತೋರಿಸಲಾಯಿತು.
ಯಕ್ಷಗಾನದ ಸಭಾ ಕಾರ್ಯಕ್ರಮದಲ್ಲಿ ಸನ್ಮಾನವನ್ನು ಕೂಡ ಮಾಡಲಾಯಿತು. ಕಾಳಿಂಗ ನಾವುಡ ಅವರ ಒಡನಾಟ ಹೊಂದಿದ್ದ ಹಿರಿಯ ಭಾಗವತರಾದ ಹಿರಿಯಣ್ಣಾಚಾರ್ ಕಿಗ್ಗ, ಸತ್ಯನಾರಾಯಣ ಮೇಳಿಗೆ 25 ವರ್ಷದ ಯಕ್ಷಗಾನ ಸೇವೆ , ಕಿರಣ್ ಪೂಜಾರಿ ಮಲ್ಲೇಸರ 9 ವರ್ಷ ಮಂದಾರ್ತಿ ಮೇಳ, ರಮೇಶ್ ಆಚಾರ್ ಸೀತೂರು 15 ವರ್ಷದ ಪೆರಡೂರು ಮೇಳದ ಸೇವೆದಲ್ಲಿ ಸಲ್ಲಿಸಿದವರನ್ನ ವೇದಿಕೆ ಮೇಲೆ ಬೆಕ್ಕುನೂರು ಸಮಸ್ತ ಗ್ರಾಮಸ್ಥರು ಇವರಿಗೆ ಸನ್ಮಾನ ಮಾಡಲಾಯಿತು. ಇದೇ ವೇಳೆ ಸ್ಥಳೀಯ ಭಾಗವತರಾದ ನವನೀತ್ ರವರನ್ನು ಸನ್ಮಾನಿಸಲಾಯಿತು. ಬೆಕ್ಕನೂರು ಗ್ರಾಮಸ್ಥರು ಹಾಜರಿದ್ದರು.





