Categories
ಹೆಲ್ತ್ ಎಕ್ಸ್ಪ್ರೆಸ್

ಆರೋಗ್ಯ ಎಕ್ಸ್ ಪ್ರೆಸ್! | ಮೊಸರನ್ನು ಪ್ರತಿದಿನ ಮುಖಕ್ಕೆ ಹಚ್ಚಿದರೆ ಏನಾಗುತ್ತದೆ??

ಆರೋಗ್ಯ ಎಕ್ಸ್ ಪ್ರೆಸ್!

ಮೊಸರನ್ನು ಪ್ರತಿದಿನ ಮುಖಕ್ಕೆ ಹಚ್ಚಿದರೆ ಏನಾಗುತ್ತದೆ??

NAMMUR EXPRESS NEWS
ಹೆಚ್ಚುತ್ತಿರುವ ಮಾಲಿನ್ಯವು ಮುಖದ ಬಣ್ಣವನ್ನು ಮಂದಗೊಳಿಸುತ್ತದೆ. ಅದೇ ಸಮಯದಲ್ಲಿ, ಕೆಟ್ಟ ಜೀವನಶೈಲಿ ಮತ್ತು ಕೆಟ್ಟ ಆಹಾರ ಪದ್ಧತಿಗಳು ನಮ್ಮ ಚರ್ಮದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಅಂತಹ ಪರಿಸ್ಥಿತಿಯಲ್ಲಿ ಚರ್ಮವು ಶುಷ್ಕವಾಗುತ್ತದೆ.
ಈ ರೀತಿಯ ಪರಿಸ್ಥಿತಿಯನ್ನು ತಡೆಗಟ್ಟಲು ಹೆಚ್ಚಿನ ಜನರು ಚರ್ಮದ ಮೃದುತ್ವವನ್ನು ಕಾಪಾಡಿಕೊಳ್ಳಲು ನಿಯಮಿತವಾಗಿ ಎಕ್ಸ್ಫೋಲಿಯೇಟಿಂಗ್, ಆಳವಾದ ಶುದ್ಧೀಕರಣ ಮತ್ತು ಮಾಯಿಶ್ಚರೈಸಿಂಗ್ ಮಾಡುತ್ತಾರೆ. ಚರ್ಮದ ಮಂದತೆ ಮತ್ತು ಶುಷ್ಕತೆಯನ್ನು ನಿವಾರಿಸಲು ಕೆಲವರು ಮೊಸರನ್ನು ಹಚ್ಚುತ್ತಾರೆ. ಮೊಸರು ಚರ್ಮಕ್ಕೆ ಒಳ್ಳೆಯದು. ಆದರೆ, ಇದನ್ನು ಪ್ರತಿದಿನ ಚರ್ಮದ ಮೇಲೆ ಹಾಕುವುದು ಸುರಕ್ಷಿತವೇ? ಎಂಬುದನ್ನು ತಿಳಿದುಕೊಳ್ಳಿ.

– ಪ್ರತಿದಿನ ಮೊಸರನ್ನು ಮುಖಕ್ಕೆ ಹಚ್ಚುವುದರಿಂದ ಆಗುವ ಪ್ರಯೋಜನಗಳು!

ಚರ್ಮದ ಎಕ್ಸ್ಫೋಲಿಯೇಟ್‍ ಮಾಡುತ್ತದೆ

ಮುಖಕ್ಕೆ ಮೊಸರು ಹಚ್ಚುವಾಗ ನಿಮ್ಮ ಕೈಗಳಿಂದ ಹಗುರವಾಗಿ ಮುಖಕ್ಕೆ ಮಸಾಜ್ ಮಾಡಬಹುದು. ಇದು ಚರ್ಮದಲ್ಲಿ ಸಂಗ್ರಹವಾದ ಕೊಳೆಯನ್ನು ತೆಗೆದುಹಾಕುತ್ತದೆ, ಚರ್ಮವನ್ನು ಆಳವಾಗಿ ಶುದ್ಧೀಕರಿಸುತ್ತದೆ ಮತ್ತು ಎಕ್ಸ್ಫೋಲಿಯೇಟಿಂಗ್ ಮಾಡುತ್ತದೆ. ಇದು ಚರ್ಮದ ಟೋನ್ ಅನ್ನು ಸುಧಾರಿಸುತ್ತದೆ ಮತ್ತು ಕಳೆದುಹೋದ ಮೈಬಣ್ಣವನ್ನು ಮರಳಿ ನೀಡುತ್ತದೆ.

ಚರ್ಮವು ತೇವಾಂಶದಿಂದ ಕೂಡಿರುತ್ತದೆ

ಪ್ರತಿದಿನ ಮೊಸರನ್ನು ಮುಖಕ್ಕೆ ಹಚ್ಚುವುದರಿಂದ ಚರ್ಮವು ತೇವಗೊಳ್ಳುತ್ತದೆ. ಇದು ಚರ್ಮದ ಮೃದುತ್ವವನ್ನು ಹೆಚ್ಚಿಸುತ್ತದೆ ಮತ್ತು ಚರ್ಮವನ್ನು ತೇವಗೊಳಿಸುತ್ತದೆ. ಹಿತವಾದ ಪರಿಣಾಮವನ್ನು ನೀಡುತ್ತದೆ. ಮೊಸರು ತಂಪಾದ ಗುಣವನ್ನು ಹೊಂದಿದೆ. ಆದ್ದರಿಂದ, ನೀವು ಇದನ್ನು ಪ್ರತಿದಿನ ನಿಮ್ಮ ಮುಖಕ್ಕೆ ಹಚ್ಚಿದಾಗ, ಚರ್ಮವು ಹಿತವಾದ ಪರಿಣಾಮವನ್ನು ಪಡೆಯುತ್ತದೆ. ಇದರಿಂದ ಚರ್ಮದಲ್ಲಿ ಕಿರಿಕಿರಿ ಇದ್ದರೆ, ಅದು ಹೋಗುತ್ತದೆ ಮತ್ತು ಅನೇಕ ರೀತಿಯ ಚರ್ಮದ ಸಮಸ್ಯೆಗಳನ್ನು ಸಹ ನಿವಾರಿಸುತ್ತದೆ.

ಪ್ರತಿದಿನ ಮುಖಕ್ಕೆ ಮೊಸರು ಹಚ್ಚುವುದರಿಂದ ಆಗುವ ಅನಾನುಕೂಲಗಳು:

ನೀವು ಸೂಕ್ಷ್ಮ ಚರ್ಮವನ್ನು ಹೊಂದಿದ್ದರೆ, ಪ್ರತಿದಿನ ಮೊಸರನ್ನು ಹಚ್ಚುವುದು ಸರಿಯಲ್ಲ. ಮೊಸರನ್ನು ಪ್ರತಿದಿನ ಹಚ್ಚುವುದರಿಂದ ಚರ್ಮದ ಕಿರಿಕಿರಿ ಉಂಟಾಗಬಹುದು. ಯಾರಿಗಾದರೂ ಮೊಸರಿನ ಅಲರ್ಜಿ ಇದ್ದರೆ, ಅವರು ಅದನ್ನು ಪ್ರತಿದಿನ ಮುಖಕ್ಕೆ ಹಚ್ಚಬಾರದು. ಇದು ದದ್ದುಗಳ ಅಪಾಯವನ್ನು ಹೆಚ್ಚಿಸುತ್ತದೆ. ನೀವು ಮೊಸರನ್ನು ಅತಿಯಾಗಿ ಬಳಸಿದರೆ, ಅದು ಚರ್ಮದ ಶುಷ್ಕತೆಗೆ ಕಾರಣವಾಗಬಹುದು. ಮೊಸರನ್ನು ಪ್ರತಿದಿನ ಅನುಚಿತ ರೀತಿಯಲ್ಲಿ ಹಚ್ಚಿದರೆ, ಅದರಿಂದ ಚರ್ಮದ ಟೋನ್‍ನಲ್ಲಿ ವ್ಯತ್ಯಾಸವಾಗುತ್ತದೆ.

Categories
ಜ್ಯೋತಿಷ್ಯ

ಈ ದಿನದ ರಾಶಿ ಭವಿಷ್ಯ ಹೇಗಿದೆ?

ಈ ದಿನದ ರಾಶಿ ಭವಿಷ್ಯ ಹೇಗಿದೆ?
– ಯಾವ ರಾಶಿಯವರಿಗೆ ಲಾಭ? ಯಾವ ರಾಶಿಯವರಿಗೆ ನಷ್ಟ?

NAMMUR EXPRESS NEWS
ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು?

** ಮೇಷ ರಾಶಿ :
ಇಂದು ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಾಗಲಿದೆ. ಕೆಲಸದ ಜವಾಬ್ದಾರಿಗಳು ಹೆಚ್ಚಾಗುತ್ತವೆ. ನಿಮ್ಮ ಜೀವನದಲ್ಲಿ ಕೆಲವು ಅಪಾಯಗಳು ಸಹ ಎದುರಾಗಬಹುದು. ಆದರೆ ಹೆದರಬೇಡಿ, ಪ್ರಗತಿಗೆ ಸಾಕಷ್ಟು ಅವಕಾಶಗಳಿವೆ. ನಿಮಗೆ ಇಂದು ಸಿಗುವ ಹೊಸ ಅವಕಾಶಗಳಿಂದ ಖಂಡಿತ ಯಶಸ್ಸು ಸಿಗಲಿದೆ. ಹಣಕಾಸಿನ ಪರಿಸ್ಥಿತಿಯು ಬಲವಾಗಿರುತ್ತದೆ. ಆದರೆ ಇಂದು, ನಿಮ್ಮ ಸಹೋದರ ಸಹೋದರಿಯರ ನಡುವೆ ಹಣದ ವಿವಾದಗಳು ಹೆಚ್ಚಾಗಬಹುದು.

** ವೃಷಭ ರಾಶಿ :
ಇಂದು ವೃಷಭ ರಾಶಿಯವರು ನಿಮ್ಮ ಪರಿಶ್ರಮದ ಫಲವನ್ನು ಪಡೆಯಬಹುದು. ಹೊಸ ಯೋಜನೆಗಳಲ್ಲಿ ಕೆಲಸ ಮಾಡಲು ಅವಕಾಶವಿರುತ್ತದೆ. ಜೀವನದಲ್ಲಿ ಹೊಸ ವಿಷಯಗಳನ್ನು ಕಲಿಯಲು ಹಿಂಜರಿಯಬೇಡಿ. ಕೆಲಸದ ಸ್ಥಳದಲ್ಲಿ ನಿಮ್ಮ ಸಹೋದ್ಯೋಗಿಗಳು ಮತ್ತು ಮೇಲಾಧಿಕಾರಿಗಳು ನಿಮ್ಮ ಕಠಿಣ ಪರಿಶ್ರಮ ಮತ್ತು ಬದ್ಧತೆಯನ್ನು ಮೆಚ್ಚಿ ಹೋಗಳಬಹುದು.

** ಮಿಥುನ ರಾಶಿ :
ಇಂದು ನಿಮಗೆ ಸಂತೋಷ, ಸಮೃದ್ಧಿ ಹೆಚ್ಚಳದ ಸಾಧ್ಯತೆಗಳಿವೆ. ನೀವು ಕೆಲಸದ ಸ್ಥಳದಲ್ಲಿ ನಿಮ್ಮ ಸಹೋದ್ಯೋಗಿಗಳ ಬೆಂಬಲವನ್ನು ಪಡೆಯಬಹುದು. ನಿಮ್ಮ ವೃತ್ತಿ ಜೀವನದಲ್ಲಿ ನೀವು ಅಪಾರ ಯಶಸ್ಸನ್ನು ಪಡೆಯಬಹುದು. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ನಿಮ್ಮ ಸಂಗಾತಿಯೊಂದಿಗೆ ಸಮಯ ಕಳೆಯಲು ನಿಮಗೆ ಅವಕಾಶ ಸಿಗಲಿದೆ. ಕೆಲಸದ ನಿಮಿತ್ತ ಪ್ರಯಾಣ ಮಾಡುವ ಸಾಧ್ಯತೆಗಳಿವೆ.

** ಕರ್ಕಾಟಕ ರಾಶಿ :
ಇಂದು ನೀವು ಶುಭ ಫಲಿತಾಂಶಗಳನ್ನು ಪಡೆಯುತ್ತೀರಿ. ನಿಮಗೆ ಭೌತಿಕ ಸೌಕರ್ಯಗಳು ಮತ್ತು ಸಂಪತ್ತು ಹೆಚ್ಚಾಗಬಹುದು. ವ್ಯಾಪಾರದಲ್ಲಿ ವಿಸ್ತರಣೆಯಾಗಲಿದೆ. ಕುಟುಂಬದ ಜವಾಬ್ದಾರಿಗಳು ಹೆಚ್ಚಾಗಲಿವೆ. ಕೌಟುಂಬಿಕ ಸಮಸ್ಯೆಗಳಿರುವ ಲಕ್ಷಣಗಳಿವೆ. ಮನೆಯಲ್ಲಿ ಅನಗತ್ಯ ವಾದ ವಿವಾದಗಳಿಂದ ದೂರವಿರಿ. ಆಧ್ಯಾತ್ಮದಲ್ಲಿ ಆಸಕ್ತಿ ಹೆಚ್ಚಾಗಬಹುದು. ಮನೆ ನಿರ್ವಹಣೆಗೆ ಹಣ ಖರ್ಚು ಮಾಡಬಹುದು. ಕೆಲಸದ ಸ್ಥಳದಲ್ಲಿ ನೀವು ಅಧಿಕಾರಿಗಳಿಂದ ಬೆಂಬಲವನ್ನು ಪಡೆಯುತ್ತೀರಿ.

** ಸಿಂಹ ರಾಶಿ :
ಇಂದು ನಿಮಗೆ ತುಂಬಾ ಶುಭ ದಿನವಾಗಲಿದೆ. ಶತ್ರುಗಳ ಮೇಲೆ ಜಯ ದೊರೆಯಲಿದೆ. ಕೆಲಸದಲ್ಲಿ ಬರುತ್ತಿದ್ದ ಅಡೆತಡೆಗಳು ನಿವಾರಣೆಯಾಗುತ್ತವೆ. ಬಹಳ ದಿನಗಳಿಂದ ನಿಮಗೆ ಬರಬೇಕಿದ್ದ ಹಣ ವಾಪಸ್ ಬರುತ್ತದೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ನೀವು ವೃತ್ತಿಪರ ಯಶಸ್ಸನ್ನು ಪಡೆಯುತ್ತೀರಿ. ಶೈಕ್ಷಣಿಕ ಕೆಲಸದಲ್ಲಿ ಅಡಚಣೆ ಉಂಟಾಗಬಹುದು.

** ಕನ್ಯಾ ರಾಶಿ :
ಇಂದು ನಿಮಗೆ ಸಾಮಾಜಿಕ ಸ್ಥಾನಮಾನ ಮತ್ತು ಪ್ರತಿಷ್ಠೆ ಹೆಚ್ಚಾಗಬಹುವುದು. ನೀವು ಐಷಾರಾಮಿ ಜೀವನವನ್ನು ಅನುಭವಿಸಲಿದ್ದೀರಿ. ವೃತ್ತಿ ಜೀವನದಲ್ಲಿ ಪ್ರಗತಿಗೆ ಹೊಸ ಅವಕಾಶಗಳು ದೊರೆಯಲಿವೆ. ಕೆಲಸದ ಸ್ಥಳದಲ್ಲಿ ಅನಗತ್ಯ ವಾದ ವಿವಾದಗಳಿಂದ ದೂರವಿರಿ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಆದಾಯದಲ್ಲಿ ಹೆಚ್ಚಳವಾಗುವ ಸಾಧ್ಯತೆ ಇರುತ್ತದೆ. ಇಂದು, ಹೊಸ ಆದಾಯದ ಮೂಲದಿಂದ ಧನ ಲಾಭವಿದೆ.

** ತುಲಾ ರಾಶಿ :
ಇಂದು ಮಾತಿನಲ್ಲಿ ಸೌಮ್ಯತೆ ಇರುತ್ತದೆ. ವೃತ್ತಿಯಲ್ಲಿ ಹೊಸ ಸಾಧನೆಗಳನ್ನು ಸಾಧಿಸುವಿರಿ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ತೋರುವಿರಿ. ಕೌಟುಂಬಿಕ ಜೀವನದಲ್ಲಿ ಸಂತಸದ ವಾತಾವರಣ ಇರುತ್ತದೆ. ಪೋಷಕರ ಆರೋಗ್ಯದ ಕಡೆ ಗಮನ ಕೊಡಿ. ಉದ್ಯೋಗ ಮತ್ತು ವ್ಯಾಪಾರಕ್ಕೆ ವಾತಾವರಣವು ಅನುಕೂಲಕರವಾಗಿರುತ್ತದೆ. ಇಂದು, ನೀವು ಹಳೆಯ ಸ್ನೇಹಿತರನ್ನು ಭೇಟಿ ಮಾಡಬಹುದು. ಉದ್ಯೋಗದಲ್ಲಿ ಸ್ಥಳ ಬದಲಾವಣೆಯಾಗುವ ಸಾಧ್ಯತೆಗಳಿವೆ. ಮಾನಸಿಕ ನೆಮ್ಮದಿ ಇರುತ್ತದೆ.

** ವೃಶ್ಚಿಕ ರಾಶಿ :
ಇಂದು ಕುಟುಂಬದಲ್ಲಿ ಸಂತಸದ ವಾತಾವರಣ ಇರುತ್ತದೆ. ಉದ್ಯೋಗ ಮತ್ತು ವ್ಯಾಪಾರಕ್ಕೆ ವಾತಾವರಣವು ಅನುಕೂಲಕರವಾಗಿರುತ್ತದೆ. ನಿಮ್ಮ ಕೆಲಸಗಳಿಂದ ಹಣಕಾಸಿನ ಲಾಭದ ಹೊಸ ಮೂಲಗಳು ಸೃಷ್ಟಿಯಾಗಬಹುದು. ನೀವು ಪಿತ್ರಾರ್ಜಿತ ಆಸ್ತಿ ಪಡೆಯಬಹುದು. ಸಂಪತ್ತು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಇಂದು, ಅಜ್ಞಾತ ಭಯದಿಂದ ಮನಸ್ಸು ತೊಂದರೆಗೊಳಗಾಗಬಹುದು.

** ಧನಸ್ಸು ರಾಶಿ :
ಇಂದು ನಿಮಗೆ ಹಣಕಾಸಿನ ಸಮಸ್ಯೆಗಳಿಂದ ಮುಕ್ತಿ ದೊರೆಯಬಹುದು. ಕೆಲಸದ ಸವಾಲುಗಳನ್ನು ಆತ್ಮವಿಶ್ವಾಸದಿಂದ ಸ್ವೀಕರಿಸುತ್ತೀರಿ. ನಿಮ್ಮ ಕಠಿಣ ಪರಿಶ್ರಮ ಮತ್ತು ಸಮರ್ಪಣೆ ಫಲಿತಾಂಶವನ್ನು ನೀಡುತ್ತದೆ. ಉದ್ಯೋಗ ಬದಲಾವಣೆಯ ಸೂಚನೆಗಳಿವೆ. ನಿಮ್ಮ ಭಾವನೆಗಳನ್ನು ನಿಯಂತ್ರಿಸಿ. ಆದಾಯ ಹೆಚ್ಚಳದ ಹೊಸ ಮೂಲಗಳು ಸೃಷ್ಟಿಯಾಗುತ್ತವೆ, ಆದರೆ ವೃತ್ತಿಜೀವನದಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಸಹ ಕಂಡುಬರುತ್ತವೆ.

** ಮಕರ ರಾಶಿ :
ಇಂದು ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿಗೆ ಹೊಸ ಅವಕಾಶಗಳಿವೆ. ಆದಾಯದ ಹೆಚ್ಚಳದ ಹೊಸ ಮೂಲಗಳು ಸೃಷ್ಟಿಯಾಗಬಹುದು, ಆದರೆ ಅತಿಯಾದ ಖರ್ಚುಗಳಿಂದ ಮನಸ್ಸು ತೊಂದರೆಗೊಳಗಾಗಬಹುದು. ಶೈಕ್ಷಣಿಕ ಕೆಲಸದಲ್ಲಿ ಅಡೆತಡೆಗಳು ಉಂಟಾಗಬಹುದು. ಕುಟುಂಬ ಸದಸ್ಯರಿಂದ ಬೆಂಬಲ ಸಿಗಲಿದೆ.

** ಕುಂಭ ರಾಶಿ :
ಇಂದು ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಹಳೆಯ ಸ್ನೇಹಿತರನ್ನು ಭೇಟಿ ಮಾಡುವಿರಿ. ಅತಿಥಿಗಳ ಆಗಮನದಿಂದ ಮನೆಯಲ್ಲಿ ಸಂತಸದ ವಾತಾವರಣವಿರುತ್ತದೆ. ವೃತ್ತಿ ಜೀವನದಲ್ಲಿ ಸಣ್ಣಪುಟ್ಟ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಕಚೇರಿ ರಾಜಕೀಯದಿಂದ ದೂರವಿರಿ ಮತ್ತು ಹೊಸ ಜವಾಬ್ದಾರಿಗಳನ್ನು ತೆಗೆದುಕೊಳ್ಳಲು ಹಿಂಜರಿಯಬೇಡಿ. ಈ ಹೊಸ ಜವಾಬ್ದಾರಿಗಳು ನಿಮ್ಮ ಉದ್ಯೋಗದಲ್ಲಿ ಬಡ್ತಿಯ ಅವಕಾಶಗಳನ್ನು ಹೆಚ್ಚಿಸುತ್ತದೆ.

** ಮೀನ ರಾಶಿ :
ಇಂದು ನೀವು ಕುಟುಂಬ ಸದಸ್ಯರ ಬೆಂಬಲವನ್ನು ಪಡೆಯುತ್ತೀರಿ. ಕೆಲಸದಲ್ಲಿ ನೀವು ಶುಭ ಫಲಿತಾಂಶಗಳನ್ನು ಪಡೆಯುತ್ತೀರಿ. ಕೆಲಸದ ಸ್ಥಳದಲ್ಲಿ ನೀವು ಉನ್ನತ ಅಧಿಕಾರಿಗಳಿಂದ ಬೆಂಬಲವನ್ನು ಪಡೆಯಬಹುದು. ಉದ್ಯೋಗದಲ್ಲಿ ಪ್ರಗತಿಗೆ ಸುವರ್ಣಾವಕಾಶಗಳು ದೊರೆಯಲಿವೆ. ಆದರೆ ಇಂದು, ನಿಮ್ಮ ಭಾವನೆಗಳಲ್ಲಿ ಏರುಪೇರಾಗಬಹುದು. ಭಾವನಾತ್ಮಕವಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ.

Categories
ಅಡಿಕೆ-ದರ

ಅಡಿಕೆ ದರ ಎಷ್ಟಿದೆ?

ಅಡಿಕೆ ದರ ಎಷ್ಟಿದೆ?
– ಬೆಟ್ಟೆ ಎಷ್ಟು? ರಾಶಿ ಎಷ್ಟು?

NAMMUR EXPRESS NEWS

ಸರಕು
61209-71900-85710

ಬೆಟ್ಟೆ
47069-56300-57299

ರಾಶಿ
47069-55400-57500

ಗೊರಬಲು
18469-27100-29130

Categories
ಬೆಂಗಳೂರು

ಚಂಡಮಾರುತ ಎಫೆಕ್ಟ್‌: ಮುಂದಿನ 3 ಗಂಟೆ ಈ ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ!

ಚಂಡಮಾರುತ ಎಫೆಕ್ಟ್‌: ಮುಂದಿನ 3 ಗಂಟೆ ಈ ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ!

– ಎಚ್ಚರಿಕೆಯಿಂದಿರಲು ಹವಾಮಾನ ಇಲಾಖೆಯಿಂದ ಸೂಚನೆ
– ಯಾವೆಲ್ಲಾ ಜಿಲ್ಲೆಗಳಿಗೆ ಭರ್ಜರಿ ಮಳೆ ಸಾಧ್ಯತೆ?

NAMMUR EXPRESS NEWS
ಬೆಂಗಳೂರು: ಬಿಸಿಲಿನಿಂದ ಹೈರಾಣಾಗಿದ್ದ ಜನರಿಗೆ ಕೊನೆಗೂ ವರುಣ ದೇವ ತಂಪೆರೆದಿದ್ದಾನೆ. ಬಿರು ಬಿಸಿಲು ಕಂಗೆಟ್ಟ ಜನರಿಗೆ ಮಳೆಯಾಗಿ ಸಂತಸ ಮೂಡಿಸಿದ್ದು, ಕೃಷಿ ಚಟುವಟಿಕೆ ಆರಂಭಿಸಿರುವ ರೈತರು ಖುಷಿಯಲ್ಲಿದ್ದಾರೆ. ಇತ್ತ ಕಳೆದು ಮೂರ್ನಾಲ್ಕು ದಿನದಿಂದ ಸುರಿದ ಭಾರೀ ಮಳೆಗೆ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರೀ ಅವಾಂತರ ಸೃಷ್ಟಿಯಾಗಿದೆ.
ನೂರಾರು ಮರಗಳು ಮಳೆ ಗಾಳಿಗೆ ಧರೆಗಪ್ಪಳಿಸಿದೆ.
ಕೆಲವು ಸಾವು ನೋವುಗಳು ವರದಿಯಾಗಿದೆ.
ಇನ್ನೂ ಹವಾಮಾನ ಇಲಾಖೆ ಮಾಹಿತಿ ಪ್ರಕಾರ, ಹಲವು ಜಿಲ್ಲೆಗಳಲ್ಲಿ ಮುಂದಿನ ಮೂರು ಗಂಟೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ನೀಡಿದೆ. ಚಿತ್ರದುರ್ಗ, ಬಳ್ಳಾರಿ, ವಿಜಯನಗರ, ಬೀದ‌ರ್, ರಾಯಚೂರು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಗುಲ್ಬರ್ಗ, ಯಾದಗಿರಿ ಸೇರಿ ಈ ಭಾಗದ ಜಿಲ್ಲೆಗಳಿಗೆ ಭರ್ಜರಿ ಮಳೆಯಾಗಲಿದೆ, ಎಚ್ಚರಿಕೆಯಿಂದಿರಲು ಹವಾಮಾನ ಇಲಾಖೆ ಸೂಚಿಸಿದೆ. ಬಂಗಾಳಕೊಲ್ಲಿಯಲ್ಲಿ ಶಕ್ತಿ ಚಂಡಮಾರುತ ರೂಪುಗೊಂಡಿದ್ದು ಮುಂಗಾರು ಆಗಮನಕ್ಕೂ ಮುನ್ನವೇ ಕರ್ನಾಟಕದಲ್ಲಿ ಮಳೆ ಚುರುಕು ಪಡೆದಿದೆ. ಕರ್ನಾಟಕದ ಕರಾವಳಿ ಹಾಗೂ ಉತ್ತರ ಒಳನಾಡಿನ ಸಾಕಷ್ಟು ಕಡೆಗಳಲ್ಲಿ ಇಂದು ಭಾರಿ ಮಳೆಯಾಗಲಿದೆ ಎಂದು ಘೋಷಿಸಲಾಗಿದೆ.

Categories
ಹೆಲ್ತ್ ಎಕ್ಸ್ಪ್ರೆಸ್

ಆರೋಗ್ಯ ಎಕ್ಸ್ ಪ್ರೆಸ್! | ಉಗುರುಗಳು ಆಗಾಗ ತುಂಡಾಗುತ್ತಿದ್ದರೆ ಅದು ಈ 5 ರೋಗದ ಲಕ್ಷಣ!

ಆರೋಗ್ಯ ಎಕ್ಸ್ ಪ್ರೆಸ್!

ಉಗುರುಗಳು ಆಗಾಗ ತುಂಡಾಗುತ್ತಿದ್ದರೆ ಅದು ಈ 5 ರೋಗದ ಲಕ್ಷಣ!

NAMMUR EXPRESS NEWS
ಸಾಮಾನ್ಯವಾಗಿ, ಉಗುರುಗಳು ದುರ್ಬಲಗೊಂಡು ಮುರಿಯಲು ಶುರುಮಾಡಿದಾಗ ಯಾರೂ ಅದರ ಬಗ್ಗೆ ವಿಶೇಷ ಗಮನ ಹರಿಸುವುದಿಲ್ಲ. ಸರಿಯಾದ ಕಾಳಜಿ ವಹಿಸದಿದ್ದರೆ ಮಾತ್ರ ಉಗುರುಗಳು ಮುರಿಯುತ್ತವೆ ಎಂದು ಹೆಚ್ಚಿನ ಜನರು ಭಾವಿಸುತ್ತಾರೆ. ಆದರೆ, ಇದು ನಿಜವಲ್ಲ. ದುರ್ಬಲ ಉಗುರುಗಳು ನಿಮ್ಮ ಕಳಪೆ ಆರೋಗ್ಯವನ್ನು ಸೂಚಿಸುತ್ತವೆ. ಆದ್ದರಿಂದ, ನಿಮ್ಮ ಉಗುರುಗಳು ದುರ್ಬಲವಾಗಿ ಆಗಾಗ ತುಂಡಾಗುತ್ತಿದ್ದರೆ ಅದು ಈ ರೋಗಗಳ ಲಕ್ಷಣ ಎಂದು ತಿಳಿದುಕೊಳ್ಳಿ.

ಥೈಯಾಯ್ಡ್

ಥೈಯಾಯ್ಡ್ ಎಂದಾಕ್ಷಣ ಕೂದಲು ದುರ್ಬಲವಾಗುವುದು ಮತ್ತು ತೂಕ ಹೆಚ್ಚಾಗುವುದು ಅಥವಾ ಕಡಿಮೆಯಾಗುವುದು ಎಂದುಕೊಳ್ಳುತ್ತಾರೆ. ಆದರೆ ಥೈರಾಯ್ಡ್ ಗ್ರಂಥಿಯಲ್ಲಿ ಸಮಸ್ಯೆ ಇದ್ದಾಗ, ಹಾರ್ಮೋನುಗಳ ಬದಲಾವಣೆಗಳು ಸಂಭವಿಸಲು ಶುರುವಾಗುತ್ತದೆ. ಇದು ಉಗರಗಳ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ. ತಜ್ಞರ ಪ್ರಕಾರ, ಹೈಪೋಥೈರಾಯ್ಡಿಸಮ್ ಅಥವಾ ಹೈಪರ್ ಥೈರಾಯ್ಡಿಸಮ್ ಎರಡೂ ಪರಿಸ್ಥಿತಿಗಳಲ್ಲಿ, ಉಗುರುಗಳ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಅವು ದುರ್ಬಲವಾಗುತ್ತವೆ ಮತ್ತು ಮುರಿಯಲು ಶುರುವಾಗುತ್ತವೆ.

ಪೌಷ್ಟಿಕಾಂಶದ ಕೊರತೆಗಳು

ದೇಹದಲ್ಲಿ ಪೋಷಕಾಂಶಗಳ ಕೊರತೆ ಉಂಟಾದಾಗ, ಅದರಿಂದ ಉಗುರುಗಳ ಮೇಲೆ ದುಷ್ಪರಿಣಾಮಗಳು ಬೀರುತ್ತವೆ. ಪೋಷಕಾಂಶಗಳ ಕೊರತೆಯಾದಾಗ ಮುಖ್ಯವಾಗಿ ಕಬ್ಬಿಣ, ಪ್ರೋಟೀನ್, ಬಯೋಟಿನ್ ಮತ್ತು ಬಿ-12 ಸಾಕಷ್ಟು ಸಿಗದೆ ಉಗುರುಗಳು ದುರ್ಬಲವಾಗುತ್ತವೆ. ಇದರಿಂದ ಉಗುರುಗಳಲ್ಲಿ ಬಿರುಕುಗಳು ಕಾಣಿಸಿಕೊಳ್ಳುತ್ತವೆ ಮತ್ತು ಅವು ಮುರಿಯಲು ಶುರುವಾಗುತ್ತವೆ. ದೇಹದಲ್ಲಿ ಪೋಷಕಾಂಶಗಳ ಕೊರತೆಯ ಸಂಭವಿಸಿದಾಗ, ರೋಗನಿರೋಧಕ ಶಕ್ತಿ ದುರ್ಬಲಗೊಳ್ಳುವುದು, ಕೂದಲು ಉದುರಲು ಶುರುವಾಗುತ್ತದೆ.

ಹೃದಯ ಸಮಸ್ಯೆಗಳು

ಹೃದಯ ಸಮಸ್ಯೆಗಳ ಎಂದಾಗ, ನಾವೆಲ್ಲರೂ ಆಯಾಸ, ದೌರ್ಬಲ್ಯ, ಉಸಿರಾಟದ ತೊಂದರೆ ಮತ್ತು ಅನಿಯಮಿತ ಹೃದಯ ಬಡಿತದಂತಹ ಕೆಲವು ಸಾಮಾನ್ಯ ಲಕ್ಷಣಗಳ ಬಗ್ಗೆ ಮಾತನಾಡುತ್ತೇವೆ. ಆದರೆ, ಹೃದಯಕ್ಕೆ ಸಂಬಂಧಿಸಿದ ಸಮಸ್ಯೆ ಇದ್ದರೆ, ಅದು ಉಗುರುಗಳ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ.
ತಜ್ಞರ ಪ್ರಕಾರ, ಹೃದಯ ಸಮಸ್ಯೆ ಇರುವವರ ಉಗುರುಗಳು ದುರ್ಬಲವಾಗಿ , ನಿರ್ಜೀವವಾಗಿ ಕಾಣುತ್ತವೆ. ಅಂತಹ ಜನರ ಉಗುರುಗಳು ಸಂಪೂರ್ಣವಾಗಿ ಹಳದಿ ಬಣ್ಣಕ್ಕೆ ತಿರುಗುತ್ತವೆ. ಏಕೆಂದರೆ ಹೃದಯ ಕಾಯಿಲೆಯಿಂದಾಗಿ ದೇಹದಲ್ಲಿ ರಕ್ತ ಪರಿಚಲನೆ ಸರಿಯಾಗಿ ನಡೆಯುವುದಿಲ್ಲ. ಇದರಿಂದಾಗಿ ಉಗುರುಗಳಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳು ಉಂಟಾಗುತ್ತದೆ.

ಮೂತ್ರಪಿಂಡ ಸಂಬಂಧಿತ ಕಾಯಿಲೆಗಳು

ಮೂತ್ರಪಿಂಡವು ನಮ್ಮ ದೇಹದ ಒಂದು ಪ್ರಮುಖ ಅಂಗವಾಗಿದೆ. ಮೂತ್ರಪಿಂಡಗಳು ಸರಿಯಾಗಿ ಕಾರ್ಯನಿರ್ವಹಿಸದಿದ್ದಾಗ, ದೇಹದ ತ್ಯಾಜ್ಯವನ್ನು ತೆಗೆದುಹಾಕಲು ಸಾಧ್ಯವಿಲ್ಲ. ನಮ್ಮ ದೇಹದಲ್ಲಿನ ವಿಷಗಳು ರಕ್ತಪ್ರವಾಹದಲ್ಲಿ ಸಂಗ್ರಹವಾಗಲು ಶುರುವಾಗುತ್ತವೆ. ಅದರ ಪರಿಣಾಮ ಉಗುರುಗಳ ಮೇಲೂ ಗೋಚರಿಸುತ್ತದೆ. ಉಗುರುಗಳು ದುರ್ಬಲವಾಗಿ ತುಂಡಾಗುತ್ತವೆ ಮತ್ತು ಅವುಗಳ ಬಣ್ಣವೂ ಬದಲಾಗುತ್ತದೆ.

ಲಿವರ್‍ ಸಮಸ್ಯೆಗಳು

ಯಾರಿಗಾದರೂ ಲಿವರ್‍ಗೆ ಸಂಬಂಧಿಸಿದ ಸಮಸ್ಯೆಗಳಿದ್ದರೆ, ಅವರ ಉಗುರುಗಳ ಬೆಳವಣಿಗೆಯ ಮೇಲೂ ಪರಿಣಾಮ ಬೀರುತ್ತದೆ. ಇಷ್ಟೇ ಅಲ್ಲ, ಲಿವರ್‍ನಲ್ಲಿ ಯಾವುದೇ ಸಮಸ್ಯೆ ಇದ್ದರೆ, ಅದರ ಲಕ್ಷಣಗಳು ಮೊದಲು ಉಗುರುಗಳ ಮೇಲೆ ಕಂಡುಬರುತ್ತವೆ ಎಂದು ತಜ್ಞರು ಹೇಳುತ್ತಾರೆ. ಉಗುರುಗಳ ವಿನ್ಯಾಸ ಬದಲಾದಂತೆ ಅವು ಬಣ್ಣ ಕಳೆದುಕೊಳ್ಳುತ್ತವೆ ಮತ್ತು ಉಗುರುಗಳು ಸಹ ದುರ್ಬಲವಾಗುತ್ತವೆ ಮತ್ತು ತುಂಡಾಗುತ್ತವೆ.

Categories
ಹಾಸನ

ಒಂಟಿ ಸಲಗ ಸಾವು ವಿದ್ಯುತ್ ಶಾಕ್‌ನಿಂದ ಮೃತಪಟ್ಟಿರುವ ಶಂಕೆ

ಒಂಟಿ ಸಲಗ ಸಾವು
ವಿದ್ಯುತ್ ಶಾಕ್‌ನಿಂದ ಮೃತಪಟ್ಟಿರುವ ಶಂಕೆ

ಸಕಲೇಶಪುರ: ದೈತ್ಯಾಕಾರದ ಸಲಗವೊಂದು ಅನುಮಾನಾಸ್ಪದವಾಗಿ
ಮೃತಪಟ್ಟಿರುವ ಘಟನೆ ತಾಲೂಕಿನ ಸುಳ್ಳಕ್ಕಿ-ಶಾಂತಪುರ ಗ್ರಾಮದ ಬಳಿ ನಡೆದಿದೆ.
ರಸ್ತೆಯಲ್ಲಿಯೇ ರಕ್ತದ ಮಡುವಿನಲ್ಲಿ ಬಿದ್ದು ಸಲಗ ಸಾವನ್ನಪ್ಪಿದ್ದು, ಇದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ವಿದ್ಯುತ್ ಕಂಬದಿಂದ ಕೇವಲ ಎರಡು ಅಡಿ ದೂರದಲ್ಲಿ ಸಲಗ ಸಾವನ್ನಪ್ಪಿದೆ.
ಸಲಗನ ಸಾವು ನಾನಾ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದ್ದು, ವಿದ್ಯುತ್ ಶಾಕ್, ಗುಂಡೇಟು ಅಥವಾ ವಾಹನ ಡಿಕ್ಕಿಯಿಂದ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ಬೆಳ್ಳಂಬೆಳಿಗ್ಗೆ ಎರಡೂ ದಂತಗಳಿರುವ ಕಾಡಾನೆ ಮೃತಪಟ್ಟಿರುವುದನ್ನು ನೋಡಲು ಜನರು ಮುಗಿಬಿದಿದ್ದರು.
ಯಾರದೋ ನಿರ್ಲಕ್ಷ್ಯಕ್ಕೆ ಅಂದಾಜು ೧೮-೨೦ ವರ್ಷದ ಒಂಟಿಸಲಗ ಸಾವನ್ನಪ್ಪಿದೆ. ಸ್ಥಳಕ್ಕೆ ಅರಣ್ಯ ಇಲಾಖೆ, ವಿದ್ಯುತ್ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತೋಟದಿಂದ ರಸ್ತೆಗೆ ದಾಟುವಾಗ ಸೊಂಡಿಲಿಗೆ ವಿದ್ಯುತ್ ತಂತಿ ತಗುಲಿ ನಂತರ ಸ್ಥಳದಲ್ಲೆ ಬಿದ್ದು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ಸ್ಥಳಕ್ಕೆ ಆರ್‌ಎಫ್‌ಒ ಹೇಮಂತ್ ಮತ್ತು ಅಧಿಕಾರಿಗಳು ಭೇಟಿ ನೀದ್ದರು. ಸಾವಿರ ಸುದ್ದಿ ಕೇಳಿ ಮಹಿಳೆಯರು, ಮಕ್ಕಳು ಆಗಮಿಸಿ ಪೂಜೆ ಸಲ್ಲಿಸಿದರು.

Categories
ಕ್ರಿಕೆಟ್ ಕ್ರೀಡಾ ಸುದ್ದಿ

ನಾಳೆಯಿಂದ ಪುನರಾರಂಭಗೊಳ್ಳಲಿದೆ ಐಪಿಎಲ್ -2025

ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್

ಐಪಿಎಲ್ – 2025
* ನಾಳೆಯಿಂದ ಪುನರಾರಂಭಗೊಳ್ಳಲಿದೆ ಐಪಿಎಲ್ -2025
* ಪ್ಲೇ ಆಫ್ ರೇಸ್‌ನಲ್ಲಿರೋ ಏಳು ತಂಡಗಳು

NAMMMUR EXPRESS SPORTS NEWS
ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯಿಂದಾಗಿ ಐಪಿಎಲ್ – 2025ರ ಪಂದ್ಯಗಳನ್ನು ಒಂದು ವಾರ ಸ್ಥಗಿತಗೊಳಿಸಲಾಗಿತ್ತು. ಇದೀಗ ಮೇ 17ರಿಂದ ಮತ್ತೆ ಐಪಿಎಲ್ ಆರಂಭವಾಗಲಿದ್ದು, ಎಲ್ಲಾ ತಂಡಗಳು ಸಿದ್ಧತೆ ಆರಂಭಿಸಿವೆ. ಈಮಧ್ಯೆ, ತವರಿಗೆ ಮರಳಿರುವ ಕೆಲವು ವಿದೇಶಿ ಆಟಗಾರರ ಅಲಭ್ಯತೆ ಕುರಿತು ಫ್ರಾಂಚೈಸಿಗಳಿಗೆ ಇದೀಗ ತಲೆನೋವು ಶುರುವಾಗಿದೆ.
2025ನೇ ಆವೃತ್ತಿಯಲ್ಲಿ ಟ್ರೋಫಿಯ ಕನಸು ಏಳು ತಂಡಗಳಿಗೆ ಇನ್ನೂ ಜೀವಂತವಾಗಿದೆ. ಇದೀಗ ಪ್ಲೇಆಫ್ ತಲುಪಲು ಯಾವ ತಂಡಗಳು ಎಷ್ಟೆಷ್ಟು ಅಂಕ ಗಳಿಸಿದೆ ಎನ್ನುವ ಕುರಿತು ಮಾಹಿತಿ ಇಲ್ಲಿದೆ. ಐಪಿಎಲ್ 2025 ಪ್ಲೇಆಫ್ ತಲುಪಲು 17 ಅಂಕಗಳನ್ನು ಗಳಿಸಬೇಕಿದೆ.

* ಗುಜರಾತ್ ಟೈಟಾನ್ಸ್ – 16 ಅಂಕಗಳು, NRR 0.793
* ಆರ್‌ಸಿಬಿ – 16 ಅಂಕಗಳು, NRR 0.482
* ಪಂಜಾಬ್ ಕಿಂಗ್ಸ್ – 15 ಅಂಕಗಳು, NRR 0.376
* ಮುಂಬೈ ಇಂಡಿಯನ್ಸ್ – 14 ಅಂಕಗಳು, NRR 1.156
* ಡೆಲ್ಲಿ ಕ್ಯಾಪಿಟಲ್ಸ್ – 13 ಅಂಕಗಳು, NRR 0.362
* ಕೋಲ್ಕತ್ತಾ ನೈಟ್ ರೈಡರ್ಸ್ – 11 ಅಂಕಗಳು, NRR 0.193
* ಲಕ್ನೋ ಸೂಪರ್ ಜೈಂಟ್ಸ್ – 10 ಅಂಕಗಳು, NRR -0.469

ಆರ್‌ಸಿಬಿ ತಂಡಕ್ಕೆ ಮರಳಿದ ಲಿವಿಂಗ್ ಸ್ಟೋನ್ ಮತ್ತು ರೊಮೊರಿಯೋ ಶೆಫರ್ಡ್ !

ನಾಳೆಯಿಂದ ಪುನರಾರಂಭಗೊಳ್ಳಲಿರುವ ಐಪಿಎಲ್ ಪಂದ್ಯದ ಮೊದಲ ಪಂದ್ಯ ಆರ್‌ಸಿಬಿ ಹಾಗೂ ಕೊಲ್ಕತ್ತಾ ತಂಡಗಳ ನಡುವೆ ನಡೆಯಲಿದ್ದು,ಈ ನಡುವೆ ಸ್ವದೇಶಕ್ಕೆ ಮರಳಿದ್ದ ರೊಮಾರಿಯೋ ಶೆಫರ್ಡ್ ಮತ್ತು ಲಿಯಾಮ್ ಲಿವಿಂಗ್ ಸ್ಟೋನ್ ಆರ್ ಸಿಬಿ ತಂಡ ಸೇರಿಕೊಳ್ಳಲಿದ್ದಾರೆ. ಇಡೀ ಐಪಿಎಲ್ ಟೂರ್ನಿಯಲ್ಲಿ ರೊಮಾರಿಯೋ ಶೆಫರ್ಡ್ ತಂಡದಲ್ಲಿರಲಿದ್ದಾರೆ. ಬಳಿಕ ಅವರ ರಾಷ್ಟ್ರೀಯ ತಂಡದ ಸೇವೆಗೆ ನಿಯೋಜನೆಯಾಗಲಿದ್ದಾರೆ ಎಂದು ಹೇಳಲಾಗಿದ್ದು, ಲಿವಿಂಗ್ ಸ್ಟೋನ್ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗದ ಕಾರಣ ಆರ್ ಸಿಬಿಯಲ್ಲಿ ಮುಂದುವರೆಯಲಿದ್ದಾರೆ ಎಂದು ಹೇಳಲಾಗಿದೆ.
ಉಳಿದಂತೆ ಜೇಕ್ ಫ್ರೇಸರ್-ಮೆಕ್‌ಗುರ್ಕ್ ಬದಲಿಗೆ ಮುಸ್ತಾಫಿಜುರ್ ರೆಹಮಾನ್ ಅವರನ್ನು ತಾತ್ಕಾಲಿಕ ಬದಲಿ ಆಟಗಾರ ಎಂದು ಪರಿಗಣಿಸಲಾಗಿದೆ ಎಂದು ಆರ್ ಸಿಬಿ ತಂಡದ ಮೂಲಗಳು ತಿಳಿಸಿವೆ.
ಈ ನಡುವೆ ಗಾಯಗೊಂಡು ಹೊರಗುಳಿದಿರುವ ದೇವದತ್ ಪಡಿಕ್ಕಲ್ ಬದಲಿಗೆ ಕನ್ನಡಿಗ ಮಯಾಂಕ್ ಅಗರ್ವಾಲ್ ಈಗಾಗಲೇ ತಂಡ ಸೇರಿಕೊಂಡಿದ್ದು, ನಾಯಕ ರಜತ್ ಪಾಟಿದಾರ್ ಗಾಯದ ಸಮಸ್ಯೆ ತಂಡಕ್ಕೆ ತಲೆನೋವಾಗಿದೆ.
ಮತ್ತೊಂದೆಡೆ ಹೇಜಲ್ ವುಡ್ ಬದಲಿಗೆ ಶ್ರೀಲಂಕಾದ ಬೇಬಿ ಮಲಿಂಗಾ ಎಂದೇ ಖ್ಯಾತಗಳಿಸಿರುವ ನುವಾನ್ ತುಷಾರ ಆರ್ ಸಿಬಿ ತಂಡ ಸೇರಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಇದಲ್ಲದೇ ನ್ಯೂಜಿಲೆಂಡ್ ಬೌಲರ್ ಮ್ಯಾಟ್ ಹೆನ್ರಿ ಮತ್ತು ಫಿಲ್ ಸಾಲ್ಟ್ ಕೂಡ ಆರ್ ಸಿಬಿ ಪರ ಆಡಲಿದ್ದಾರೆ ಎಂದು ಹೇಳಲಾಗಿದೆ.

Categories
ಕಾರ್ಕಳ

CSEET ಫಲಿತಾಂಶ: ರಾಜ್ಯದಲ್ಲೇ ಹೆಚ್ಚು ವಿದ್ಯಾರ್ಥಿಗಳು ಕ್ರಿಯೇಟಿವ್ ಕಾಲೇಜಿಂದ ಪಾಸ್!

CSEET ಫಲಿತಾಂಶ: ರಾಜ್ಯದಲ್ಲೇ ಹೆಚ್ಚು ವಿದ್ಯಾರ್ಥಿಗಳು ಕ್ರಿಯೇಟಿವ್ ಕಾಲೇಜಿಂದ ಪಾಸ್!
– ಕ್ರಿಯೇಟಿವ್‌ನ 52 ವಿದ್ಯಾರ್ಥಿಗಳಲ್ಲಿ 42 ವಿದ್ಯಾರ್ಥಿಗಳು ತೇರ್ಗಡೆ

NAMMUR EXPRESS NEWS
ಕಾರ್ಕಳ : ಇನ್ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರಿ ಆಫ್ ಇಂಡಿಯಾ(CSEET) ರವರು 03 ಮೇ, 2025 ರಲ್ಲಿ ನಡೆಸಿದ CSEET ಅರ್ಹತಾ ಪರೀಕ್ಷೆಯಲ್ಲಿ ಕಾರ್ಕಳದ ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಮಿಥುನಶ್ರೀ 164 ಮತ್ತು ಸುವರ್ಣ ಹರ್ಷಲ್ ವೈ 162 ಅಂಕಗಳೊಂದಿಗೆ ವಿಶಿಷ್ಟ ಸಾಧನೆಗೈದಿದ್ದಾರೆ.
ವಿದ್ಯಾರ್ಥಿಗಳಾದ ಹಾರಿಕ ಗೌಡ ಆರ್. ಬಿ.(153), ಇಯಾನ್ ಪೌಲ್(147), ಬಸವ ಪ್ರಸಾದ್ ಕಾಜಿ(142), ಪೂರ್ಣ ಭಟ್ ಕೆ.ಎಲ್(141), ಸೃಜನ್ ಎಸ್.ಭಟ್(140), ಲಿಖಿತ್ ರೆಡ್ಡಿ ಎಚ್.ಎಂ(140), ರಕ್ಷಿತಾ ಆರ್.ಕಾಮತ್(135), ರೇಷ್ಮಾ ಜಿ.ಕೆ.(135) ಅಭಿಷೇಕ್ ಉಮಾದಿ(131), ಕೀರ್ತಿ ಪೈ(129), ಶ್ರದ್ಧಾ ಪಿ.ಅಂಗಡಿ(125), ಎಚ್.ಎ ಅದನ್ ಬೆಳ್ಳಿಯಪ್ಪ(125), ಪ್ರಭವ್ ಜಿ. ಶೆಟ್ಟಿ(121), ಆರ್ಯ ಬಿ.ವಿ(120), ಅಪ್ಸರ್ ಪಾಹಿಮ್(120), ಧನ್ಯಶ್ರೀ ಶೆಟ್ಟಿ(119), ಸೌರವ್ ರವಿ ಶೇಟ್(116), ಪೃಥ್ವಿ ಜಾಜಿ(115), ಸಾತ್ವಿಕ್ ಯು.ಆರ್(114), ಕನಿಷ್ಕ ಸೇನ್ ಎಸ್(113), ಸಪಲಿಗ ಸ್ವಾತಿ ತಿಮ್ಮಪ್ಪ(111), ಶ್ರೀಕಾರ್ ದುಬೀರ(111), ವಜ್ರ ಗೌಡ(110), ಶ್ರೇಯಸ್ ವಿ.ರೆಡ್ಡಿ(110), ಅನನ್ಯ ರಾಜೇಶ್(109, ಬಿಪಿನ್ ಗೌಡ(108), ಎಸ್. ನಂದನ್(106), ವಿ.ಎಸ್. ವೈಭವ್(105), ಕೆ.ವೈ ದಿಲೀಪ್(103), ಆಡ್ಲಿನ್ ಥೋಮಸ್(102), ಮೆಲಿಶ ಶೈನಿ ಪೆರ್ನಾಂಡಿಸ್(102), ತೇಜಸ್ ದೀಪಕ್ ಭಟ್(101), ವೇದಿಕ ವಸಂತ್ ಶೆಟ್ಟಿ(100), ಪ್ರೀತಮ್.ಎಸ್(100), ಪೂರ್ಣೇಶ್(100), ಗೌತಮ್ ಗಾಯಕವಾಡ(100), ಪ್ರೀತಮ್ ಉದಯ್ ಹೆಗ್ಡೆ(100), ಪ್ರಥಮ್ ವಿ. ಶೆಟ್ಟಿ(100), ರವಿ ತೇಜಸ್ ಆರ್.ಗಳಗಲಿ(100), ಸುಹಾಶ್ ಡಿ.(100) ರವರು ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಮೂಲಕ ಮುಂದಿನ ಹಂತದ ಪರೀಕ್ಷೆಗೆ ಅರ್ಹತೆ ಪಡೆದಿದ್ದಾರೆ.
ಇನ್ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರಿ ಆಫ್ ಇಂಡಿಯಾ ನಡೆಸುವ ರಾಷ್ಟ್ರಮಟ್ಟದ ಅತೀ ಕಠಿಣವಾದ ಪರೀಕ್ಷೆ ಇದಾಗಿದ್ದು ಪರೀಕ್ಷೆ ಬರೆದ ಕ್ರಿಯೇಟಿವ್‌ನ 52 ವಿದ್ಯಾರ್ಥಿಗಳಲ್ಲಿ 42 ವಿದ್ಯಾರ್ಥಿಗಳು ಪಿಯುಸಿಯ ಮೊದಲ ಹಂತದಲ್ಲೇ ತೇರ್ಗಡೆ ಹೊಂದಿರುವುದು ವಿಶೇಷವಾಗಿದೆ. ಪ್ರತೀ ವರ್ಷವೂ ಸಂಸ್ಥೆಯ ಅತೀ ಹೆಚ್ಚು ವಿದ್ಯಾರ್ಥಿಗಳು ಸಿ.ಎ ಫೌಂಡೇಶನ್ ಹಾಗೂ CSEET ಯಲ್ಲಿ ತೇರ್ಗಡೆಯಾಗುತ್ತಿರುವುದು ಕ್ರಿಯೇಟಿವ್‌ನ ಗುಣಮಟ್ಟದ ಶಿಕ್ಷಣಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿ, CSEET ಸಂಯೋಜಕರಾದ ಜ್ಞಾನೇಶ್ ಕೋಟ್ಯಾನ್, ಬೋಧಕ – ಬೋಧಕೇತರ ವೃಂದದವರು ಅಭಿನಂದಿಸಿ, ಶುಭ ಹಾರೈಸಿದ್ದಾರೆ.

Categories
ತೀರ್ಥಹಳ್ಳಿ

ಮೇ.24ಕ್ಕೆ ತೀರ್ಥಹಳ್ಳಿಯಲ್ಲಿ “ಗಿರಗಿಟ್ಲೆ” ಪುಸ್ತಕ ಬಿಡುಗಡೆ

ಮೇ.24ಕ್ಕೆ ತೀರ್ಥಹಳ್ಳಿಯಲ್ಲಿ “ಗಿರಗಿಟ್ಲೆ” ಪುಸ್ತಕ ಬಿಡುಗಡೆ  
– ಪತ್ರಕರ್ತರು, ಸಾಹಿತಿಗಳೂ ಆದ ಶಿವಾನಂದ ಕರ್ಕಿ ಅವರ ಪುಸ್ತಕ
– ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಸರ್ವರಿಗೂ ಸ್ವಾಗತ

NAMMUR EXPRESS NEWS
ತೀರ್ಥಹಳ್ಳಿ: ಶಾಂತವೇರಿ ಗೋಪಾಲಗೌಡ ರಂಗಮಂದಿರ, ತೀರ್ಥಹಳ್ಳಿಯಲ್ಲಿ ಮೇ. 24ರ ಶನಿವಾರ ಸಂಜೆ 4.00ಕ್ಕೆ ಸರಿಯಾಗಿ ಧ್ವನಿ ಪ್ರಕಾಶನ, ತೀರ್ಥಹಳ್ಳಿ “ಗಿರಗಿಟ್ಲೆ” ಪುಸ್ತಕ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಕುವೆಂಪು ವಿಶ್ವವಿದ್ಯಾಲಯ ಶಂಕರಘಟ್ಟ ಇದರ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಇವರು ಪುಸ್ತಕ ಬಿಡುಗಡೆಯನ್ನು ಮಾಡಲಿದ್ದಾರೆ. ಕನ್ನಡ ಸಹಪ್ರಾಧ್ಯಾಪಕಿ, ಹೊಳೆಹೊನ್ನೂರು ಡಾ. ಭಾರತಿ ದೇವಿ ಪಿ. ಪುಸ್ತಕದ ಕುರಿತು ಮಾತನಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಹ್ಯಾದ್ರಿ ಸಮೂಹ ಸಂಸ್ಥೆ ತೀರ್ಥಹಳ್ಳಿ ಅಧ್ಯಕ್ಷರಾದ ಬಸವಾನಿ ವಿಜಯದೇವ್ ಅವರು ವಹಿಸಲಿದ್ದಾರೆ. ಹಾಗೂ ಮುಖ್ಯ ಅತಿಥಿಗಳಾಗಿ ತೀರ್ಥಹಳ್ಳಿ ಮಾಜಿ ಗೃಹಸಚಿವರು, ಶಾಸಕರಾದ ಆರಗ ಜ್ಞಾನೇಂದ್ರ,
ತೀರ್ಥಹಳ್ಳಿಯ ಮಾಜಿ ಶಿಕ್ಷಣ ಸಚಿವರು ಕಿಮ್ಮನೆ ರತ್ನಾಕರ್, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ತೀರ್ಥಹಳ್ಳಿಯ ಅಧ್ಯಕ್ಷರು ಟಿ.ಕೆ. ರಮೇಶ್ ಶೆಟ್ಟಿ, ಸಾಹಿತಿ, ಚಿಂತಕರು ನೆಂಪೆ ದೇವರಾಜ್, ಕೃತಿಯ ಲೇಖಕರು ಶಿವಾನಂದ ಕರ್ಕಿ ಭಾಗವಹಿಸಲಿದ್ದಾರೆ.

Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ಮೇ.20ಕ್ಕೆ ವಿಜಯ ಸಿಂದೂರ ಶೋಭಾಯಾತ್ರೆ!

ತೀರ್ಥಹಳ್ಳಿಯಲ್ಲಿ ಮೇ.20ಕ್ಕೆ ವಿಜಯ ಸಿಂದೂರ ಶೋಭಾಯಾತ್ರೆ! 
– ಕುಶಾವತಿ ಪಾರ್ಕ್ ಆವರಣದಲ್ಲಿ ಬೃಹತ್ ಸಾರ್ವಜನಿಕ ಸಮಾರಂಭ
– ಪ್ರತಿ ಮನೆಯಿಂದಲೂ ತ್ರಿವರ್ಣ ಧ್ವಜ ಹಿಡಿದು ಯಾತ್ರೆಯಲ್ಲಿ ಪಾಲ್ಗೊಳ್ಳಲು ಕರೆ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯ ಆಗುಂಬೆ ಬಸ್ ನಿಲ್ದಾಣದಿಂದ ಕುಶಾವತಿ ಪಾರ್ಕ್‌ವರೆಗೆ ಮೇ. 20 ಮಂಗಳವಾರದಂದು ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ನಾಗರಿಕ ವೇದಿಕೆ, ತೀರ್ಥಹಳ್ಳಿ ವಿಜಯ ಸಿಂದೂರ ಶೋಭಾಯಾತ್ರೆಯನ್ನು ಆಯೋಜಿಸಲಾಗಿದೆ.
ಕುಶಾವತಿ ಪಾರ್ಕ್ ಆವರಣದಲ್ಲಿ ಬೃಹತ್ ಸಾರ್ವಜನಿಕ ಸಮಾರಂಭ ನಡೆಯಲಿದ್ದು, ನಮ್ಮ ಜಮ್ಮು ಕಾಶ್ಮೀರದ ಪಹಲ್ಗಾಮಿನಲ್ಲಿ ಪಾಕಿಸ್ತಾನ ಪ್ರೇರಿತ ಜಿಹಾದಿ ಭಯೋತ್ಪಾದಕರಿಂದ ಅಮಾಯಕ ಹಿಂದೂಗಳ ಹತ್ಯಾಕಾಂಡದ ನಂತರ ನಡೆದ ಭಾರತದ ಸೇನೆಯ ಅಪರೇಷನ್ ಸಿಂದೂರ ಕಾರ್ಯಾಚರಣೆಯು ಉಗ್ರಗಾಮಿಗಳ ಹೆಡೆಮುರಿ ಕಟ್ಟಿದ್ದಲ್ಲದೇ, ದುಷ್ಟ ಪಾಕಿಸ್ತಾನದ ಜಂಘಾಬಲವನ್ನೇ ಕುಸಿಯುವಂತೆ ಮಾಡಿದೆ.
ಭಾರತದ ಸೈನ್ಯವು ಕಳೆದ ಕೆಲವೇ ದಿನಗಳಲ್ಲಿ ಜೈಶ್-ಎ-ಮೊಹಮ್ಮದ್ ಮತ್ತು ಲಷ್ಕರ್-ಎ-ತೈಬಾ ನಂತಹ ಸಂಘಟನೆಗಳ 100ಕ್ಕೂ ಹೆಚ್ಚು ಜಾಗತಿಕವಾಗಿ ಬೇಕಾಗಿದ್ದ ಭಯೋತ್ಪಾದಕರನ್ನು ನಿರ್ಮೂಲನೆ ಮಾಡಿತು. ಪಾಕಿಸ್ಥಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಭೂಪ್ರದೇಶದೊಳಗಿನ 9 ಪ್ರಮುಖ ಭಯೋತ್ಪಾದಕ ಶಿಬಿರಗಳು ಮತ್ತು ಮುಖ್ಯ ಕಚೇರಿಗಳನ್ನು ಸಂಪೂರ್ಣವಾಗಿ ನಾಶಮಾಡಿತು. ನೂರ್ ಖಾನ್ (ಇಸ್ಲಾಮಾಬಾದ್), ರಫೀಕಿ, ಸರ್ಗೊಧಾ, ಸ್ಕಾರ್ಡು (ಎತ್ತರದ ಉಡಾವಣಾ ತಾಣ), ರಾವಲ್ಪಿಂಡಿ, ಸಿಯಾಲ್ನೋಟ್, ಜಾಕೋಬಾಬಾದ್ ಮತ್ತು ಚುನಿಯಾನ್ ನಂತಹ ಕಾರ್ಯತಂತ್ರ ರೂಪಿಸುವ ಸೈನಿಕ ನೆಲೆಗಳನ್ನು ಭಾರತ ಬೆಂಕಿಗೆ ಆಹುತಿ ನೀಡಿದೆ.
ನಮ್ಮ ಭಾರತೀಯ ಸದೃಢ ನಾಯಕತ್ವ ಮತ್ತು ಸೈನಿಕರ ದಿಟ್ಟ ಉತ್ತರದ ಪರಿಣಾಮ ಭಾರತದ ಶತ್ರುಗಳಿಗೆ ನಡುಕ, ಭಯೋತ್ಪಾದಕರಿಗೇ ಭಯ ಉಂಟಾಗಿದ್ದು, ಜಾಗತಿಕ ಮಟ್ಟದಲ್ಲಿಯೂ ಭಾರತದ ಸ್ಥಾನಮಾನ ಹೆಚ್ಚಿದೆ. ಭಾರತವು ವಿಶ್ವಕ್ಕೆ ಉಗ್ರತ್ವದ ನಿರ್ಮೂಲನೆಯ ಸ್ಪಷ್ಟ ಸಂದೇಶ ನೀಡಿದೆ. ಪ್ರತಿಕೂಲ ಸಮಯದಲ್ಲಿ ಧೃಡ ನಿರ್ಧಾರ ಕೈಗೊಂಡು ನಾಗರೀಕರ ರಕ್ಷಣೆಗೆ ಬದ್ಧವಾಗಿರುವ ಸೈನ್ಯವನ್ನು, ಕೇಂದ್ರ ಸರ್ಕಾರವನ್ನು ಸಮಾಜ ಗೌರವಿಸುತ್ತಿದೆ.
ಆಪರೇಷನ್ ಸಿಂದೂರ್ ಇದು ಕೇವಲ ಮಿಲಿಟರಿ ಯಶಸ್ಸಲ್ಲ. ಇದು ನಾಗರಿಕತೆಯ ಪ್ರತಿಕ್ರಿಯೆಯಾಗಿದೆ. ಅದು ಸಂಘರ್ಷವನ್ನು ಬಯಸುವುದಿಲ್ಲ, ಆದರೆ ಅದಕ್ಕೆ ಎಂದಿಗೂ ಹೆದರುವುದಿಲ್ಲ ಎಂಬ ಒಂದು ಹೊಸ ಭಾರತವು ಪುಟಿದೆದ್ದಿದೆ. ಇನ್ನು ಮುಂದೆ ಶೋಕಿಸದೆ ತನ್ನ ಪೂರ್ವಜರಂತೆ ಘರ್ಜಿಸುತ್ತಿದೆ. ಹಿಂದಿನ ನೋವುಗಳ ಕೆಂಡದಿಂದ, ದೇಶಭಕ್ತಿಯ, ದೇಶದ ಏಕಾತ್ಮತೆಯ, ಸಾರ್ವಭೌಮತೆಯ ಜ್ವಾಲೆಗಳು ಈಗ ಬೆಳಗುತ್ತಿವೆ. “ಭಾರತವು ಮತ್ತೆಂದೂ ಬಲಿಪಶುವಾಗುವುದಿಲ್ಲ” ಎಂದು ಒಂದೊಂದು ಕಿಡಿಗಳು ಹೇಳುತ್ತಿವೆ.
“ಭಾರತವು ಜಗತ್ತಿಗೆ ತನ್ನ ವಿರಾಟ್ ರೂಪವನ್ನು ತೋರಿಸಿದೆ. ಸಾಮರಸ್ಯದಿಂದ ಬದುಕಲು ಸಿದ್ಧರಿರುವ ಶಾಂತಿಯುತ ರಾಷ್ಟ್ರ, ಆದರೆ ಅದರ ಸಾರ್ವಭೌಮತ್ವವನ್ನು ಪ್ರಶ್ನಿಸಿದರೆ, ಅವರನ್ನು ಸುಟ್ಟು ಬೂದಿ ಮಾಡಲು ಸಂಪೂರ್ಣವಾಗಿ ಸಿದ್ಧವಾಗಿದೆ”.
ಭಾರತ ಮಾತೆಯ ಸಿಂದೂರ ಜಮ್ಮು ಕಾಶ್ಮೀರವನ್ನು ಮತ್ತೊಮ್ಮೆ ಅಖಂಡವಾಗಿ ಕಣ್ತುಂಬಿಕೊಳ್ಳುವ ದಿನಗಳು ನಮ್ಮ ಮುಂದಿವೆ. ಈ ಸಂದರ್ಭದಲ್ಲಿ ಸಮಾಜಕ್ಕೆ ಇನ್ನಷ್ಟು ಆತ್ಮವಿಶ್ವಾಸ ಮತ್ತು ದೇಶಭಕ್ತಿಯನ್ನು ತುಂಬುವ, ಸೈನ್ಯಕ್ಕೆ ನಮ್ಮ ಕೃತಜ್ಞತೆ, ಬೆಂಬಲವನ್ನು ನೀಡುವ ಸಂದರ್ಭ ಇದಾಗಿದ್ದು, ಧಮನಿ ಧಮನಿಗಳಲ್ಲಿ ಅಡಗಿರುವ ಭಾರತದ ಭಕ್ತಿಯನ್ನು ಪ್ರಕಟಪಡಿಸುವ ಘಳಿಗೆ. ಸಾವಿರ ಸಾವಿರ ಸಂಖ್ಯೆಯಲ್ಲಿ ಸೇರಿ ಭಾರತದ ಈ ವಿಜಯ ತಿರಂಗಾ ಯಾತ್ರೆಯಲ್ಲಿ ಭಾಗವಹಿಸಬೇಕು.
ಪ್ರತಿ ಮನೆ ಮನೆಯಿಂದಲೂ ತ್ರಿವರ್ಣ ಧ್ವಜಗಳನ್ನು ಹಿಡಿದು ವಿಜಯ ತಿರಂಗಾ ಯಾತ್ರೆಯಲ್ಲಿ ಮನೆ ಮಂದಿಯೆಲ್ಲರೂ ಪಾಲ್ಗೊಳ್ಳಿ ಎಂದು ಈ ಮೂಲಕ ವಿನಂತಿಕೊಳ್ಳಲಾಗಿದೆ.