Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ಮಲ್ನಾಡೋತ್ಸವದಂದು ವನಸಿರಿ ಪೋಸ್ಟರ್ ಲಾಂಚ್

ತೀರ್ಥಹಳ್ಳಿಯಲ್ಲಿ ಮಲ್ನಾಡೋತ್ಸವದಂದು ವನಸಿರಿ ಪೋಸ್ಟರ್ ಲಾಂಚ್
– ಮಲೆನಾಡಿನ ಸುತ್ತಮುತ್ತ ಚಿತ್ರಣಗೊಂಡ ವನಸಿರಿ ಕಿರುಚಿತ್ರ
– ಶಾಂತವೇರಿ ಗೋಪಾಲ ಗೌಡ ರಂಗ ಮಂದಿರದಲ್ಲಿ ಅನೇಕ ಗಣ್ಯ ವ್ಯಕ್ತಿಗಳಿಂದ ಪೋಸ್ಟರ್ ಬಿಡುಗಡೆ

NAMMUR EXPRESS NEWS
ತೀರ್ಥಹಳ್ಳಿ : ನಮ್ಮೂರ್ ಎಕ್ಸ್ ಪ್ರೆಸ್ ಮಾಧ್ಯಮ ಸಂಸ್ಥೆಯ 10 ನೇ ವರ್ಷದ ದಶಮಾನೋತ್ಸವ ಸಂಭ್ರಮದ ಅಂಗವಾಗಿ ಹಮ್ಮಿಕೊಂಡಿರುವ ಮಲ್ನಾಡೋತ್ಸವ – 2025ರಲ್ಲಿ ವನಸಿರಿ ಎಂಬ ಕಿರು ಚಿತ್ರದ ಪೋಸ್ಟರ್ ಬಿಡುಗಡೆಗೊಂಡಿದೆ. ಮಲೆನಾಡಿನ ಸುತ್ತಮುತ್ತ ಚಿತ್ರಣಗೊಂಡ ವನಸಿರಿ ಕಿರುಚಿತ್ರ, ತೀರ್ಥಹಳ್ಳಿಯ ಸುತ್ತಮುತ್ತಲಿರುವಂತಹ ಅನೇಕ ವ್ಯಕ್ತಿಗಳು ಈ ಚಿತ್ರದಲ್ಲಿ ನಟನೆ ಮಾಡಿದ್ದಾರೆ.

ತೀರ್ಥಹಳ್ಳಿಯ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಅನೇಕ ಗಣ್ಯ ವ್ಯಕ್ತಿಗಳಿಂದ ವನಸಿರಿ ಕಿರು ಚಿತ್ರದ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಯಿತು, ಅದರಲ್ಲಿ ಕಡಿದಾಳ್ ದಯಾನಂದ್, ತಹಶೀಲ್ದಾರ್ ರಂಜಿತ್, ಮುಡುಬ ರಾಘವೇಂದ್ರ ಅನೇಕ ಗಣ್ಯ ವ್ಯಕ್ತಿಗಳಿಂದ ಈ ವನಸಿರಿ ಎಂಬ ಪೋಸ್ಟರ್ ಅನ್ನು ಮೇ 12ರಂದು ಬಿಡುಗಡೆ ಮಾಡಲಾಯಿತು. ವನಸಿರಿ ಕಿರು ಚಿತ್ರದ ನಿರ್ಮಾಪಕರು ಗಣೇಶ್ ಭಟ್ ಚಿಟ್ಟೆಬೈಲು, ನಿರ್ದೇಶನ ಮಂಜುನಾಥ್ ಶಿರುಪತಿ, ಮ್ಯಾಥ್ಯಾ ಸುರಾನಿ, ಕಥೆ – ಮಂಜುನಾಥ್ ಶಿರುಪತಿ, ಗಣೇಶ್ ಭಟ್ ಚಿಟ್ಟೆಬೈಲು, ಚಿತ್ರಕಥೆ- ಮ್ಯಾಥ್ಯಾ ಸುರಾನಿ, ಛಾಯಾ ಗ್ರಹಣ – ಸುರೇಶ್ ಬಾಳ ಗಾರು ಇವರು ಈ ಕಿರುಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

Categories
ತೀರ್ಥಹಳ್ಳಿ

ಮೇ.20ಕ್ಕೆ ತೀರ್ಥಹಳ್ಳಿಯಲ್ಲಿ ವಿಜಯ ಸಿಂದೂರ  ಶೋಭಾಯಾತ್ರೆ!

ಮೇ.20ಕ್ಕೆ ತೀರ್ಥಹಳ್ಳಿಯಲ್ಲಿ ವಿಜಯ ಸಿಂದೂರ  ಶೋಭಾಯಾತ್ರೆ!
– ದೇಶಪ್ರೇಮ ಮೆರೆಯೋಣ ಎಂದು ಶಾಸಕ ಆರಗ ಜ್ಞಾನೇಂದ್ರ ಕರೆ
– ವಿಜಯ ಸಿಂಧೂರ್ ವಿಜಯೋತ್ಸವವನ್ನು ತ್ರಿವರ್ಣ ಧ್ವಜ ಹಿಡಿದು ಯಾತ್ರೆಯಲ್ಲಿ ಭಾಗವಹಿಸುವಂತೆ ಸೂಚನೆ
NAMMUR EXPRESS NEWS
ಶಾಸಕ ಆರಗ  ಜ್ಞಾನೇಂದ್ರ, ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಯನ್ನು ಉದ್ದೇಶಿಸಿ ಮಾತನಾಡಿ,
ತೀರ್ಥಹಳ್ಳಿ: ತೀರ್ಥಹಳ್ಳಿಯ ಆಗುಂಬೆ ಬಸ್ ನಿಲ್ದಾಣದಿಂದ ಕುಶಾವತಿ ಪಾರ್ಕ್‌ವರೆಗೆ ಮೇ. 20 ಮಂಗಳವಾರದಂದು ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ನಾಗರಿಕ ವೇದಿಕೆ, ತೀರ್ಥಹಳ್ಳಿ ವಿಜಯ ಸಿಂದೂರ  ಶೋಭಾಯಾತ್ರೆಯನ್ನು ಆಯೋಜಿಸಲಾಗಿದೆ.
ಕುಶಾವತಿ ಪಾರ್ಕ್ ಆವರಣದಲ್ಲಿ ಬೃಹತ್ ಸಾರ್ವಜನಿಕ ಸಮಾರಂಭ ನಡೆಯಲಿದ್ದು, ನಮ್ಮ ಜಮ್ಮು ಕಾಶ್ಮೀರದ ಪಹಲ್ಗಾಮಿನಲ್ಲಿ ಪಾಕಿಸ್ತಾನ ಪ್ರೇರಿತ ಜಿಹಾದಿ ಭಯೋತ್ಪಾದಕರಿಂದ ಅಮಾಯಕ ಹಿಂದೂಗಳ ಹತ್ಯಾಕಾಂಡದ ನಂತರ ನಡೆದ ಭಾರತದ ಸೇನೆಯ ಅಪರೇಷನ್ ಸಿಂದೂರ ಕಾರ್ಯಾಚರಣೆಯು ಉಗ್ರಗಾಮಿಗಳ ಹೆಡೆಮುರಿ ಕಟ್ಟಿದ್ದಲ್ಲದೇ, ದುಷ್ಟ ಪಾಕಿಸ್ತಾನದ ಜಂಘಾಬಲವನ್ನೇ ಕುಸಿಯುವಂತೆ ಮಾಡಿದೆ.
ಭಾರತದ ಸೈನ್ಯವು ಕಳೆದ ಕೆಲವೇ ದಿನಗಳಲ್ಲಿ ಜೈಶ್-ಎ-ಮೊಹಮ್ಮದ್ ಮತ್ತು ಲಷ್ಕರ್-ಎ-ತೈಬಾ ನಂತಹ ಸಂಘಟನೆಗಳ 100ಕ್ಕೂ ಹೆಚ್ಚು ಜಾಗತಿಕವಾಗಿ ಬೇಕಾಗಿದ್ದ ಭಯೋತ್ಪಾದಕರನ್ನು ನಿರ್ಮೂಲನೆ ಮಾಡಿತು. ಪಾಕಿಸ್ಥಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಭೂಪ್ರದೇಶದೊಳಗಿನ 9 ಪ್ರಮುಖ ಭಯೋತ್ಪಾದಕ ಶಿಬಿರಗಳು ಮತ್ತು ಮುಖ್ಯ ಕಚೇರಿಗಳನ್ನು ಸಂಪೂರ್ಣವಾಗಿ ನಾಶಮಾಡಿತು. ನೂರ್ ಖಾನ್ (ಇಸ್ಲಾಮಾಬಾದ್), ರಫೀಕಿ, ಸರ್ಗೊಧಾ, ಸ್ಕಾರ್ಡು (ಎತ್ತರದ ಉಡಾವಣಾ ತಾಣ), ರಾವಲ್ಪಿಂಡಿ, ಸಿಯಾಲ್ನೋಟ್, ಜಾಕೋಬಾಬಾದ್ ಮತ್ತು ಚುನಿಯಾನ್ ನಂತಹ ಕಾರ್ಯತಂತ್ರ ರೂಪಿಸುವ ಸೈನಿಕ ನೆಲೆಗಳನ್ನು ಭಾರತ ಬೆಂಕಿಗೆ ಆಹುತಿ ನೀಡಿದೆ.
ನಮ್ಮ ಭಾರತೀಯ ಸದೃಢ ನಾಯಕತ್ವ ಮತ್ತು ಸೈನಿಕರ ದಿಟ್ಟ ಉತ್ತರದ ಪರಿಣಾಮ ಭಾರತದ ಶತ್ರುಗಳಿಗೆ ನಡುಕ, ಭಯೋತ್ಪಾದಕರಿಗೇ ಭಯ ಉಂಟಾಗಿದ್ದು, ಜಾಗತಿಕ ಮಟ್ಟದಲ್ಲಿಯೂ ಭಾರತದ ಸ್ಥಾನಮಾನ ಹೆಚ್ಚಿದೆ. ಭಾರತವು ವಿಶ್ವಕ್ಕೆ ಉಗ್ರತ್ವದ ನಿರ್ಮೂಲನೆಯ ಸ್ಪಷ್ಟ ಸಂದೇಶ ನೀಡಿದೆ. ಪ್ರತಿಕೂಲ ಸಮಯದಲ್ಲಿ ಧೃಡ ನಿರ್ಧಾರ ಕೈಗೊಂಡು ನಾಗರೀಕರ ರಕ್ಷಣೆಗೆ ಬದ್ಧವಾಗಿರುವ ಸೈನ್ಯವನ್ನು, ಕೇಂದ್ರ ಸರ್ಕಾರವನ್ನು ಸಮಾಜ ಗೌರವಿಸುತ್ತಿದೆ.
ಆಪರೇಷನ್ ಸಿಂದೂರ್ ಇದು ಕೇವಲ ಮಿಲಿಟರಿ ಯಶಸ್ಸಲ್ಲ. ಇದು ನಾಗರಿಕತೆಯ ಪ್ರತಿಕ್ರಿಯೆಯಾಗಿದೆ. ಅದು ಸಂಘರ್ಷವನ್ನು ಬಯಸುವುದಿಲ್ಲ, ಆದರೆ ಅದಕ್ಕೆ ಎಂದಿಗೂ ಹೆದರುವುದಿಲ್ಲ ಎಂಬ ಒಂದು ಹೊಸ ಭಾರತವು ಪುಟಿದೆದ್ದಿದೆ. ಇನ್ನು ಮುಂದೆ ಶೋಕಿಸದೆ ತನ್ನ ಪೂರ್ವಜರಂತೆ ಘರ್ಜಿಸುತ್ತಿದೆ. ಹಿಂದಿನ ನೋವುಗಳ ಕೆಂಡದಿಂದ, ದೇಶಭಕ್ತಿಯ, ದೇಶದ ಏಕಾತ್ಮತೆಯ, ಸಾರ್ವಭೌಮತೆಯ ಜ್ವಾಲೆಗಳು ಈಗ ಬೆಳಗುತ್ತಿವೆ. “ಭಾರತವು ಮತ್ತೆಂದೂ ಬಲಿಪಶುವಾಗುವುದಿಲ್ಲ” ಎಂದು ಒಂದೊಂದು ಕಿಡಿಗಳು ಹೇಳುತ್ತಿವೆ.
“ಭಾರತವು ಜಗತ್ತಿಗೆ ತನ್ನ ವಿರಾಟ್ ರೂಪವನ್ನು ತೋರಿಸಿದೆ. ಸಾಮರಸ್ಯದಿಂದ ಬದುಕಲು ಸಿದ್ಧರಿರುವ ಶಾಂತಿಯುತ ರಾಷ್ಟ್ರ, ಆದರೆ ಅದರ ಸಾರ್ವಭೌಮತ್ವವನ್ನು ಪ್ರಶ್ನಿಸಿದರೆ, ಅವರನ್ನು ಸುಟ್ಟು ಬೂದಿ ಮಾಡಲು ಸಂಪೂರ್ಣವಾಗಿ ಸಿದ್ಧವಾಗಿದೆ”.
ಭಾರತ ಮಾತೆಯ ಸಿಂದೂರ ಜಮ್ಮು ಕಾಶ್ಮೀರವನ್ನು ಮತ್ತೊಮ್ಮೆ ಅಖಂಡವಾಗಿ ಕಣ್ತುಂಬಿಕೊಳ್ಳುವ  ದಿನಗಳು ನಮ್ಮ ಮುಂದಿವೆ. ಈ ಸಂದರ್ಭದಲ್ಲಿ ಸಮಾಜಕ್ಕೆ ಇನ್ನಷ್ಟು ಆತ್ಮವಿಶ್ವಾಸ ಮತ್ತು ದೇಶಭಕ್ತಿಯನ್ನು ತುಂಬುವ, ಸೈನ್ಯಕ್ಕೆ ನಮ್ಮ ಕೃತಜ್ಞತೆ, ಬೆಂಬಲವನ್ನು ನೀಡುವ ಸಂದರ್ಭ ಇದಾಗಿದ್ದು, ಧಮನಿ ಧಮನಿಗಳಲ್ಲಿ ಅಡಗಿರುವ ಭಾರತದ ಭಕ್ತಿಯನ್ನು ಪ್ರಕಟಪಡಿಸುವ ಘಳಿಗೆ. ಸಾವಿರ ಸಾವಿರ ಸಂಖ್ಯೆಯಲ್ಲಿ ಸೇರಿ ಭಾರತದ ಈ ವಿಜಯ ತಿರಂಗಾ ಯಾತ್ರೆಯಲ್ಲಿ ಭಾಗವಹಿಸಬೇಕು.
ಪ್ರತಿ ಮನೆ ಮನೆಯಿಂದಲೂ ತ್ರಿವರ್ಣ ಧ್ವಜಗಳನ್ನು ಹಿಡಿದು ವಿಜಯ ತಿರಂಗಾ ಯಾತ್ರೆಯಲ್ಲಿ ಮನೆ ಮಂದಿಯೆಲ್ಲರೂ ಪಾಲ್ಗೊಳ್ಳಿ ಎಂದು ಈ ಮೂಲಕ ವಿನಂತಿಕೊಳ್ಳಲಾಗಿದೆ. ಈ ಸುದ್ದಿಗೋಷ್ಠಿಯಲ್ಲಿ ದೇವಂಗಿ ಮನುದೇವ್, ನಿವೃತ್ತ ಸೈನಿಕರಾದಂತಹ ಎಂಡಿ ಉಪೇಂದ್ರ, ವೀರಪ್ಪ ಟಿ ಪಿ, ಸಂತೋಷ್ ಎ ಕೆ, ಮೂರ್ತಿ ಜಿ ಎನ್, ಚಂದ್ರಶೇಖರ್ ಇವರು ಉಪಸ್ಥಿತರಿದ್ದರು. ಮೇ 20ರಂದು ನಾಗರಿಕ ವೇದಿಕೆಯ ಹೆಸರಿನಲ್ಲಿ ವಿಜಯ ಸಿಂಧೂರ್ ವಿಜಯೋತ್ಸವವನ್ನು ಎಲ್ಲರೂ ಸೇರಿ ಆಚರಿಸೋಣ  ದೇಶಪ್ರೇಮ ಮೆರೆಯೋಣ ಎಂದು ಶಾಸಕ ಆರಗ ಜ್ಞಾನೇಂದ್ರ ಕರೆ. ನೀಡಿದರು.

Categories
ಕರಾವಳಿ

ಉಡುಪಿ: ಮನೆಗೆ ನುಗ್ಗಿ ಮಗು ಕಳ್ಳತನಗೈಯ್ಯಲು ಸ್ಕೆಚ್ ಹಾಕಿದ ಬುರ್ಖಾಧಾರಿ ಮಹಿಳೆಯರು

ಕರಾವಳಿ ಟಾಪ್ ನ್ಯೂಸ್

ಉಡುಪಿ: ಮನೆಗೆ ನುಗ್ಗಿ ಮಗು ಕಳ್ಳತನಗೈಯ್ಯಲು ಸ್ಕೆಚ್ ಹಾಕಿದ ಬುರ್ಖಾಧಾರಿ ಮಹಿಳೆಯರು

– ಉಡುಪಿ: ರಸ್ತೆ ದಾಟುತ್ತಿದ್ದ ವ್ಯಕ್ತಿಯೊಬ್ಬರಿಗೆ ಕಾರು ಢಿಕ್ಕಿಯಾಗಿ ಮೃತ್ಯು!
– ಕಾರ್ಕಳ: ಮನೆಯೊಂದಕ್ಕೆ ಕಳ್ಳರು ನುಗ್ಗಿ ಚಿನ್ನಾಭರಣ ಕಳವು

NAMMUR EXPRESS NEWS
ಉಡುಪಿ: ಶೌಚಾಲಯಕ್ಕೆ ಹೋಗಬೇಕೆಂದು ಕೇಳಿ ಮನೆಯೊಳಗೆ ನುಗ್ಗಿದ ಅಪರಿಚಿತ ಬುರ್ಖಾಧಾರಿ ಮಹಿಳೆಯೊಬ್ಬರು ಮಗುವಿನ ಕಳ್ಳತನಕ್ಕೆ ಯತ್ನಿಸಿದ ಘಟನೆ ಉಡುಪಿಯ ಬೆಳಪು ಪಂಚಾಯತ್ ವ್ಯಾಪ್ತಿಯ ಜನತಾ ಕಾಲೋನಿಯಲ್ಲಿ ನಡೆದಿದೆ.
ಮಗುವಿನ ತಾಯಿಯ ಸಮಯ ಪ್ರಜ್ಞೆಯಿಂದ ದೊಡ್ಡ ದುರಂತವೊಂದು ತಪ್ಪಿದೆ. ತಾಯಿ ಮಗುವನ್ನು ಬಚಾವ್ ಮಾಡಲು ಓಡಿದಾಗ ಅವರಿಗೆ ಚೂರಿ ಇರಿದು ಮಹಿಳೆಯರು ಎಸ್ಕೇಪ್ ಆಗಿದ್ದಾರೆ. ಮೇ. 16 ಮಧ್ಯಾಹ್ನ ಈ ಘಟನೆ ನಡೆದಿದ್ದು ಉಡುಪಿಯ ಜನತೆ ಘಟನೆಯಿಂದ ಆತಂಕಕ್ಕೊಳಗಾಗಿದ್ದಾರೆ.
ಮೊಹಮ್ಮದ್ ಅಲಿ ಎಂಬವರ ಮನೆಗೆ ಬುರ್ಖಾಧಾರಿ ಮಹಿಳೆಯರು ಟಾಯ್ಲೆಟ್ ಗೆ ಹೋಗಬೇಕು ಎಂದು ಕೇಳಿ ಮನೆಯೊಳಗೆ ನುಗ್ಗಿ ತೊಟ್ಟಿಲಲ್ಲಿದ್ದ ಮಗುವನ್ನು ಎತ್ತಿಕೊಂಡು ಹೋಗಲು ಯತ್ನಿಸಿದ್ದಾರೆ.‌ ಆಗ ಮಗುವಿನ ತಾಯಿ ತಾಬುರಿಸ್ ತಡೆದು ಬೊಬ್ಬೆ ಇಟ್ಟಿದ್ದಾರೆ.
ಆಗ ಚೂರಿ ಇರಿದು ಮಹಿಳೆಯರು ಪರಾರಿಯಾಗಿದ್ದಾರೆ. ಅನುಮಾನಸ್ಪದ ರೀತಿಯಲ್ಲಿ ನಡೆದಾಡುವ ಈ ಮಹಿಳೆಯರು ಕಂಡುಬಂದಲ್ಲಿ ತಕ್ಷಣ ಶಿರ್ವ ಠಾಣೆ 9480805450ಗೆ ತಿಳಿಸಲು ಮನವಿ ಮಾಡಲಾಗಿದೆ.

– ಉಡುಪಿ: ರಸ್ತೆ ದಾಟುತ್ತಿದ್ದ ವ್ಯಕ್ತಿಯೊಬ್ಬರಿಗೆ ಕಾರು ಢಿಕ್ಕಿಯಾಗಿ ಮೃತ್ಯು!

ಉಡುಪಿ: ನಗರದ ಸಮೀಪ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟುತ್ತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಮೇ. 16 ರಾತ್ರಿ ವೇಳೆ ಕೊಡಂಕೂರು ಗಣೇಶ್ ಮಾರ್ಬಲ್ ಬಳಿ ರಾಷ್ಟೀಯ ಹೆದ್ದಾರಿ 66ರಲ್ಲಿ ಸಂಭವಿಸಿದೆ. ಮೃತರನ್ನು ರೋಯ್ ಡೈಲನ್ ಡಾಯಸ್ ಎಂದು ತಿಳಿಯಲಾಗಿದೆ.
ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಕಾರು, ರಸ್ತೆ ದಾಟುತ್ತಿದ್ದ ರೋಯ್‌ಗೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಅಪಘಾತ ಉಂಟು ಮಾಡಿದ ಕಾರಿನ ಚಾಲಕನು ಕಾರನ್ನು ಸ್ಥಳದಲ್ಲಿ ನಿಲ್ಲಿಸದೆ ಪರಾರಿಯಾಗಿದ್ದಾನೆ.
ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

– ಕಾರ್ಕಳ: ಮನೆಯೊಂದಕ್ಕೆ ಕಳ್ಳರು ನುಗ್ಗಿ ಚಿನ್ನಾಭರಣ ಕಳವು

ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳ ಸಮೀಪ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಚಿನ್ನಾಭರಣ ಕಳವು ಮಾಡಿರುವ ಘಟನೆ ಮುಂಡ್ಕೂರು ಗ್ರಾಮದ ದಡ್ಡು ಎಂಬಲ್ಲಿ ಸಂಭವಿಸಿದೆ.
ಶ್ರೀಮತಿ ಎಂಬವರ ಮನೆಯ ಕಿಟಿಕಿಯ ಮೂಲಕ ಮನೆಯ ಹಿಂದಿನ ಬಾಗಿಲಿನ ಚಿಲಕವನ್ನು ತೆರೆದು ಒಳಪ್ರವೇಶಿಸಿದ ಕಳ್ಳರು, ಕಪಾಟಿನಲ್ಲಿದ್ದ ಒಟ್ಟು 92 ಗ್ರಾಂ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಲಾಗಿದೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Categories
ಚಿಕ್ಕಮಗಳೂರು

ಕೆಡಿಪಿ ಸಭೆಯಲ್ಲಿ ಪತ್ರಕರ್ತರಿಗೆ ಅವಮಾನಿಸಿದ ಸಚಿವ ಕೆ.ಜೆ ಜಾರ್ಜ್

ಕೆಡಿಪಿ ಸಭೆಯಲ್ಲಿ ಪತ್ರಕರ್ತರಿಗೆ ಅವಮಾನಿಸಿದ ಸಚಿವ ಕೆ.ಜೆ ಜಾರ್ಜ್ 

* ಸಚಿವರ ಅವಹೇಳನಕಾರಿ ಹೇಳಿಕೆಗೆ ಪತ್ರಕರ್ತರ ಆಕ್ರೋಶ, ಸಭಾತ್ಯಾಗ
* ಸಚಿವರ ಸಮಜಾಯಿಷಿಯನ್ನು ತಿರಸ್ಕರಿಸಿದ ಪತ್ರಕರ್ತ ಸಮುದಾಯ

NAMMMUR EXPRESS NEWS
ಚಿಕ್ಕಮಗಳೂರು: ಜಿಲ್ಲಾ ಪಂಚಾಯ್ತಿಯ ಕೆಡಿಪಿ ಸಭೆಯಲ್ಲಿ ಸಚಿವ ಜಾರ್ಜ್‌ರವರ ವಿವಾದಾತ್ಮಕ ಹೇಳಿಕೆ ಪತ್ರಕರ್ತರ ಆಕ್ರೋಶಕ್ಕೆ ಕಾರಣವಾಗಿದೆ. ”ಸಭೆಯಲ್ಲಿ ಪತ್ರಕರ್ತರನ್ನು ನಿಗದಿತ ಸ್ಥಳದಲ್ಲಿ ಕೂರಿಸಲಾಗಿದ್ದು, ಅವರನ್ನು ‘ನಾವು ಕುರ್ಚಿ ಕೊಟ್ಟಿದ್ದೀವಿ ಅದೇ ಜಾಗದಲ್ಲೇ ನೀವು ಕೂರಬೇಕು, ಫೋಟೋ ತೆಗೆದುಕೊಂಡು ಹೋಗಬೇಕು. ಇಲ್ಲಂದ್ರೆ ಹೊರಗೆ ಕಳಿಸ್ತೀವಿ” ಎಂದು ಸಚಿವ ಜಾರ್ಜ್ ಪತ್ರಕರ್ತರ ಬಗ್ಗೆ ತೀರ ಹಗುರವಾಗಿ ಮಾತಾಡಿದ್ದಾರೆ.
ನೀವು ಎಲ್ಲವನ್ನೂ ಫೋಟೋ, ವಿಡಿಯೋ ತೆಗೆದರೆ ಹೇಗೆ? ಎನ್ನುತ್ತಾ ಮೀಟಿಂಗ್‌ನಿಂದ ಪತ್ರಕರ್ತರನ್ನು ಹೊರಗಿಡುವಂತೆ ಸೂಚಿಸಿದ್ದಾರೆ. ಘಟನೆಯ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಸಚಿವರ ಹೇಳಿಕೆಯಿಂದ ಕೆರಳಿದ ಪತ್ರಕರ್ತರು, ‘ಸರಿ ನಾವು ಹೊರಗಡೆ ಹೋಗ್ತೇವೆ. ಮುಂದೆ ನಿಮ್ಮ ಯಾವ ಕಾರ್ಯಕ್ರಮಕ್ಕೂ ಆಹ್ವಾನಿಸಬೇಡಿ. ಪತ್ರಕರ್ತರಿಲ್ಲದೇ ಕಾರ್ಯಕ್ರಮ ನಡೆಸಿ’ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಪತ್ರಕರ್ತರು ಸಭೆಯಿಂದ ಎದ್ದು ಹೊರನಡೆದರು.
ಪತ್ರಕರ್ತರು ಸಭೆಯಿಂದ ಹೊರನಡೆಯಲು ಮುಂದಾದ ಹಿನ್ನೆಲೆ ಸಚಿವ ಜಾರ್ಜ್ ಪತ್ರಕರ್ತರನ್ನ ಸಮಾಧಾನಪಡಿಸಿ “ನಾನು ಹೇಳಿದ್ದು ಅಪಾರ್ಥವಾಗಿದೆ, ತಪ್ಪಾಗಿ ಅರ್ಥೈಸಿಕೊಂಡಿದ್ದೀರಿ” ಎಂದು ಸಮಜಾಯಿಷಿ ನೀಡಲು ಯತ್ನಿಸಿದ್ದಾರೆ. ಆದರೆ, ಪತ್ರಕರ್ತರು ಈ ಸಮಜಾಯಿಷಿಗೆ ಒಪ್ಪದೇ ಸಭೆಯಿಂದ ಹೊರಗೆ ತೆರಳಿದ್ದಾರೆ.
ಚಿಕ್ಕಮಗಳೂರು ಕೆಡಿಪಿ ಸಭೆಯಲ್ಲಿ ಸಚಿವ ಜಾರ್ಜ್ ಪತ್ರಕರ್ತರ ಕುರಿತು ಅನುಚಿತವಾಗಿ ಮಾತನಾಡಿ, ನಿಗದಿತ ಜಾಗದಲ್ಲಿ ಕೂರಿ, ಫೋಟೋ ತೆಗೆದುಕೊಂಡು ಹೋಗಿ ಎಂದು ಲೂಸ್ ಟಾಕ್ ಮಾಡಿರುವುದು ಮತ್ತೊಮ್ಮೆ ಸಚಿವರ ಜವಾಬ್ದಾರಿಯಿಲ್ಲದ ವರ್ತನೆಯನ್ನು ಎತ್ತಿ ತೋರಿಸಿದೆ, ಸಚಿವರ ಇಂಥ ವರ್ತನೆಯನ್ನ ಪತ್ರಕರ್ತ ಸಮುದಾಯ ತೀವ್ರವಾಗಿ ಖಂಡಿಸಿದೆ.

Categories
ಮಲ್ನಾಡ್

ಸಾಗರ : ಕೋಣ ಹುಡುಕಿಕೊಂಡು ಹೋದ ವ್ಯಕ್ತಿ ಶವವಾಗಿ ಪತ್ತೆ..!

ಮಲ್ನಾಡ್ ಟಾಪ್ 3 ನ್ಯೂಸ್

ಸಾಗರ : ಕೋಣ ಹುಡುಕಿಕೊಂಡು ಹೋದ ವ್ಯಕ್ತಿ ಶವವಾಗಿ ಪತ್ತೆ..!
– ಹೊಸನಗರ : ವರಾಹಿ ಹಿನ್ನೀರಿಗೆ ಬಿದ್ದ ಜೋಳ ತುಂಬಿದ ಲಾರಿ..!!
– ಶಿರಾಳಕೊಪ್ಪ: ಬೈಕ್ ಕಳತನ ಆರೋಪಿ ಬಂಧನ..!!

NAMMUR EXPRESS NEWS
ಸಾಗರ : ತಾಲೂಕಿನ ಹುಲಿದೇವರ ಬನದ ಶರಾವತಿ ಹಿನ್ನೀರಿನಲ್ಲಿ ಕೊಳೆತ ಸ್ಥಿತಿಯಲ್ಲಿ ಶವವೊಂದು ಪತ್ತೆಯಾಗಿದೆ. ಪತ್ತೆಯಾದ ಮೃತದೇಹವನ್ನ ಸಿದ್ದಯ್ಯ (65) ಎಂದು ಗುರುತಿಸಲಾಗಿದೆ. ಮೂರು ದಿನಗಳ ಹಿಂದೆ ಪತ್ನಿ ಮಗಳ ಮನೆಗೆ ಹೋಗಿದ್ದು ಸಿದ್ದಯ್ಯ ತಾವು ಸಾಕಿದ ಕೋಣ ಹಟ್ಟಿಗೆ ಬಂದಿಲ್ಲವೆಂದು ಹುಡುಕಿಕೊಂಡು ಹೋಗಿದ್ದಾರೆ. ಹುಡುಕಿಕೊಂಡು ಹೋದ ಸಿದ್ದಯ್ಯ ಹುಲಿದೇವರ ಬನದ ಹಿನ್ನೀರಿನಲ್ಲಿ ಇಂದು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಸೇತೂರು ಗ್ರಾಮದ ನಿವಾಸಿ ಸಿದ್ದಯ್ಯನವರಿಗೆ ಮೂವರು ಮಕ್ಕಳಿದ್ದಾರೆ. ಒಂದು ಹೆಣ್ಣು ಎರಡು ಗಂಡು ಮಕ್ಕಳಿದ್ದಾರೆ. ಒಬ್ಬ ಬೆಂಗಳೂರಿನಲ್ಲಿದ್ದರೆ ಮತ್ತೋರ್ವ ದೇವಸ್ಥಾನದ ಪೂಜಾರಿಯಾಗಿದ್ದಾರೆ. ಪ್ರಕರಣ ಸಾಗರದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮೃತ ದೇಹವನ್ನ ಎಫ್ ಎಸ್ ಎಲ್ ಗೆ ಕಳುಹಿಸಲಾಗಿದೆ.ಅಚ್ಚರಿ ಎಂದರೆ ಕೋಣ ಹುಡುಕಿಕೊಂಡು ಹೋದ ವ್ಯಕ್ತಿ ಶವವಾಗಿ ಪತ್ತೆಯಾಗಿರುವ ಬಗ್ಗೆ ತನಿಖೆಯಾಗಬೇಕಿದೆ. ಇದೊಂದು ಅನುಮಾನಸ್ಪದ ಸಾವೆಂದು ಹೇಳಲಾಗುತ್ತಿದೆ.

– ಹೊಸನಗರ : ವರಾಹಿ ಹಿನ್ನೀರಿಗೆ ಬಿದ್ದ ಜೋಳ ತುಂಬಿದ ಲಾರಿ..!!

ಹೊಸನಗರ : ಜೋಳ ತುಂಬಿದ ಲಾರಿಯೊಂದು ಚಾಲಕನ ನಿದ್ರೆ ಮಂಪರಿನಲ್ಲಿದ್ದಾಗ ಹುಲಿಕಲ್ ನ ವರಾಹಿ ಹಿನ್ನೀರಿಗೆ ಬಿದ್ದಿದೆ. ಸಧ್ಯಕ್ಕೆ ಚಾಲಕ ಬಜಾವ್ ಆಗಿರುವುದಾಗಿ ತಿಳಿದು ಬಂದಿದೆ. ರಾತ್ರಿ ತೀರ್ಥಹಳ್ಳಿಯಿಂದ ಕುಂದಾಪುರಕ್ಕೆ ಜೋಳ ತುಂಬಿಸಿಕೊಂಡು ತೆರಳುತ್ತಿದ್ದ ವೇಳೆ ಲಾರಿ ಹುಲಿಕಲ್ ಘಾಟಿ ಬಳಿ ಚಾಲಕನ ನಿಯಂತ್ರಣ ತಪ್ಪಿ ವರಾಹಿ ನದಿಗೆ ಇಳಿಸಿದ್ದಾನೆ. ಸಧ್ಯಕ್ಕೆ ಚಾಲಕ ಇಬ್ರಾಹಿಂ ಪ್ರಾಣಾಪಾಯದಿಂದ ಬಜಾವ್ ಆಗಿದ್ದಾನೆ. ಲಾರಿ ಸಂಪೂರ್ಣ ನದಿಗೆ ಬಿದ್ದಿದೆ. ಪ್ರಕರಣ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

– ಶಿರಾಳಕೊಪ್ಪ: ಬೈಕ್ ಕಳತನ ಆರೋಪಿ ಬಂಧನ..!!

ಶಿರಾಳಕೊಪ್ಪ: ಬೈಕ್ ಕಳುವಿನ ಆರೋಪಿಯನ್ನ ಪೊಲೀಸರು ಬಂಧಿಸಿ, ಆತನಿಂದ ಕಳುವಾದ ಬೈಕ್ ನ್ನ ವಶಕ್ಕೆ ಪಡೆಯಲಾಗಿದೆ.
ಶಿರಾಳಕೊಪ್ಪ ಟೌನ್ ನ ಮಠದಗದ್ದೆ ವಾಸಿಯಾದ ಇನಾಯತ್ ವುಲ್ಲಾ, (38) ಫೆ.21 ರಂದು ತಮ್ಮ ಹಿರೋ ಸ್ಪ್ಲೆಂಡರ್ ಪ್ರೋ ಬೈಕನ್ನು ಶಿರಾಳಕೊಪ್ಪ ಟೌನ್ ಆನವಟ್ಟಿ ರಸ್ತೆಯ ಬದಿಯಲ್ಲಿ ನಿಲ್ಲಿಸಿ ಹೋಗಿದ್ದು ಬೈಕ್ ಕಳ್ಳತನವಾಗಿತ್ತು. ನೀಡಿದ ದೂರಿನ ಮೇರೆಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣದಲ್ಲಿ ಕಳುವಾದ ವಾಹನ ಹಾಗೂ ಆರೋಪಿತರ ಪತ್ತೆಗಾಗಿ ಎಸ್ಪಿ ಮಿಥುನ್ ಕುಮಾರ್ ಜಿ. ಕೆ. ಅಡಿಷನಲ್ ಎಸ್ಪಿ ಅನಿಲ್ ಕುಮಾರ್ ಭೂಮರಡ್ಡಿ ಮತ್ತು ಎ. ಜಿ. ಕಾರಿಯಪ್ಪ ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2 ಶಿವಮೊಗ್ಗ ಜಿಲ್ಲೆ ರವರ ಮಾರ್ಗದರ್ಶನದಲ್ಲಿ, ಕೇಶವ ಕೆ.ಇ ಪೊಲೀಸ್ ಉಪಾಧೀಕ್ಷಕರು ಶಿಕಾರಿಪುರ ಉಪ ವಿಭಾಗರವರ ಮೇಲ್ವಿಚಾರಣೆಯಲ್ಲಿ ಸಂತೋಷ್ ಪಾಟೀಲ್ ಸಿಪಿಐ ಶಿಕಾರಿಪುರ ಟೌನ್ ವೃತ್ತ ರವರ ನೇತೃತ್ವದಲ್ಲಿ ಪ್ರಶಾಂತ್ ಕುಮಾರ ಟಿ ಬಿ, ಪಿ.ಎಸ್.ಐ ಶಿರಾಳಕೊಪ್ಪ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ, ಸಿಬ್ಬಂಧಿಗಳಾದ ಸಿ.ಹೆಚ್.ಸಿ- ಸಂತೋಷಕುಮಾರ ಆರ್, ಸಿ.ಪಿ.ಸಿ- ರಾಕೇಶ್ ಜಿ ಮತ್ತು ಸಲ್ಮಾನ್ ಖಾನ್ ಹಾಜಿ ರವರುಗಳನ್ನೊ ಒಳಗೊಂಡ ತನಿಖಾ ತಂಡವನ್ನು ರಚಿಸಲಾಗಿರುತ್ತದೆ. ತನಿಖಾ ತಂಡವು ಪ್ರಕರಣದ ಆರೋಪಿತನಾದ ಅಬ್ದುಲ್ ಖಾಧರ್ @ ಸಮೀರ್, 20 ವರ್ಷ, ವಾಸ ಆಜಾದ ನಗರ ಆನವಟ್ಟಿ ಟೌನ್ ಈತನನ್ನು ದಸ್ತಗಿರಿ ಮಾಡಿ ಆರೋಪಿತನಿಂದ ಅಂದಾಜು ಮೌಲ್ಯ 30,000/- ರೂಗಳ ಹಿರೋ ಸ್ಪ್ಲೆಂಡರ್ ಪ್ರೋ ಬೈಕನ್ನು ಅಮಾನತ್ತು ಪಡಿಸಿಕೊಂಡಿರುತ್ತದೆ. ಸದರಿ ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆರವರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ.

Categories
ಬೆಂಗಳೂರು

ಇನ್ಮುಂದೆ ಬೆಂಗಳೂರು- ಮಂಗಳೂರು ನೋ ಟ್ರೈನ್?

ಇನ್ಮುಂದೆ ಬೆಂಗಳೂರು- ಮಂಗಳೂರು ನೋ ಟ್ರೈನ್?

– ರೈಲ್ವೇ ಪ್ರಯಾಣಿಕರಿಗೆ ಬೇಸರದ ಸಂಗತಿ!
– ನಾಲ್ಕು ತಿಂಗಳು ಕಾಮಗಾರಿಗಾಗಿ ಸಂಚಾರ ಮಾಡುತ್ತಿರುವ ರೈಲು ರದ್ದು

NAMMUR EXPRESS NEWS
ಬೆಂಗಳೂರು: ಬೆಂಗಳೂರು- ಮಂಗಳೂರು ಮಾರ್ಗದಲ್ಲಿ ಪ್ರಯಾಣಿಸುವ ರೈಲ್ವೇ ಪ್ರಯಾಣಿಕರಿಗೆ ಬೇಸರದ ಸುದ್ದಿಯೊಂದು ಕೇಳಿಬಂದಿದೆ. ಸಿಲಿಕಾನ್ ಸಿಟಿ ಯಶವಂತಪುರದಿಂದ ಮಂಗಳೂರು, ಕಾರವಾರ ನಡುವೆ ಸಂಚಾರ ಮಾಡುವ ಕೆಲವು ರೈಲುಗಳನ್ನು ರದ್ದುಗೊಳಿಸಲಾಗುತ್ತಿದೆ.
ಹಾಸನದ ಸಕಲೇಶಪುರ-ಸುಬ್ರಹ್ಮಣ್ಯ ಸಂಚಾರ ಮಾರ್ಗದಲ್ಲಿ ಕಾಮಗಾರಿ ನಡೆಯುವುದರಿಂದ ಈ ರೈಲು ಸಂಚಾರ ಸ್ಥಗಿತಗೊಂಡಿದೆ. ಜೂನ್ ಆರಂಭದಿಂದ ನವೆಂಬರ್ ನಾಲ್ಕು ತಿಂಗಳ ಕಾಲ ಕಾಮಗಾರಿ ನಡೆಯಲಿದೆ.
ಒಟ್ಟು ಆರು ತಿಂಗಳ ಕಾಲ ರೈಲು ಸಂಚಾರ ಇರುವುದಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಮೇ 31ರಿಂದ ನವೆಂಬರ್ ವರೆಗೆ ಪ್ರತೀ ಶನಿವಾರದಂದು ಬೆಂಗಳೂರಿನ ಯಶವಂತಪುರದಿಂದ ಮಂಗಳೂರು ಜಂಕ್ಷನ್ ಗೆ ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲು ಕೂಡ ರದ್ದಾಗಲಿದೆ.

Categories
ಕಾರ್ಕಳ

ಪರ್ಪಲೆ ಗಿರಿಯ ಹಸಿರು ಹೊರೆ ಕಾಣಿಕೆ ಮೆರವಣಿಗೆ!

ಪರ್ಪಲೆ ಗಿರಿಯ ಹಸಿರು ಹೊರೆ ಕಾಣಿಕೆ ಮೆರವಣಿಗೆ!

– ಇಂದು ಮಧ್ಯಾಹ್ನ 3 ಗಂಟೆಯಿಂದ ಮೆರವಣಿಗೆ
– ಹಸಿರು ಹೊರೆ ತುಂಬಿದ ವಾಹನಗಳು ಭಾಗಿಯಾಗಲಿದೆ: ಸರ್ವರಿಗೂ ಸ್ವಾಗತ 

NAMMUR EXPRESS NEWS
ಕಾರ್ಕಳ :ಮೇ 17ರಂದು ಶನಿವಾರ ಮಧ್ಯಾಹ್ನ 3 ಗಂಟೆಗೆ ನಡೆಯುವ ಕಾರ್ಕಳ ಪರ್ಪಲೆ ಗಿರಿಯ ಹಸಿರು ಹೊರೆ ಕಾಣಿಕೆ ಮೆರವಣಿಗೆಯಲ್ಲಿ ಕಲ್ಕುಡ, ಕಲ್ಲುರ್ಟಿ, ತೂಕತ್ತೇರಿ ದೈವಗಳ ಪಂಚ ಲೋಹದ ವಿಗ್ರಹಗಳು ಕೂಡಾ ಸಾಗಲಿದ್ದು ಕಾರ್ಕಳದ ವಿವಿಧ ಮಾರ್ಗಗಳಲ್ಲಿ ಸಂಚರಿಸಿ ಪರ್ಪಲೆ ಗಿರಿಯತ್ತ ಕೊಂಡೊಯ್ಯಲಾಗುವುದು ಎಂದು ಸಮಿತಿ ತಿಳಿಸಿದೆ.
ಸುಮಾರು 2 ಅಡಿ ಎತ್ತರದ ಪಂಚ ಲೋಹದ ಮೂರ್ತಿಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ.
ಮೇ 17 ಶನಿವಾರ ಮಧ್ಯಾಹ್ನ 3 ಗಂಟೆಗೆ ನಡೆಯುವ ಹಸಿರು ಹೊರೆ ಕಾಣಿಕೆ ಮೆರವಣಿಗೆಯಲ್ಲಿ ಬಹಳಷ್ಟು ಸಂಖ್ಯೆಯಲ್ಲಿ ಹಸಿರು ಹೊರೆ ತುಂಬಿದ ವಾಹನಗಳು ಪ್ರತಿ ಗ್ರಾಮದಿಂದ ಭಾಗವಹಿಸಲಿವೆ. ಮಾತ್ರವಲ್ಲದೆ ಬೃಹತ್ ವಾಹನ ಜಾಥಾ ದೊಂದಿಗೆ ಈ ಮೆರವಣಿಗೆ ಸಾಗಲಿರುವುದರಿಂದ ಬೈಕು, ರಿಕ್ಷಾ ಕಾರುಗಳೊಂದಿಗೆ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ವಾಹನ ಜಾಥಾದಲ್ಲಿ ಪಾಲ್ಗೊಳ್ಳಬೇಕಾಗಿ ಸಮಿತಿ ಕೋರಿದೆ.

Categories
ಅಡಿಕೆ-ದರ

ಗಗನಕ್ಕೇರಿದ್ದ ಅಡಿಕೆ ಬೆಲೆ ದಿಢೀರ್ ಕುಸಿತ..!!

ಗಗನಕ್ಕೇರಿದ್ದ ಅಡಿಕೆ ಬೆಲೆ ದಿಢೀರ್ ಕುಸಿತ..!!
– ಲಕ್ಷ ರೂ. ದಾಟುವ ಹೊತ್ತಲ್ಲೇ ಬೆಲೆ ಇಳಿಕೆ
– ಅತಿಯಾದ ಮಳೆ ಮತ್ತು ರೋಗಗಳಿಂದ ಇಳುವರಿ ಕುಸಿತ

NAMMUR EXPRESS NEWS
ಅಡಿಕೆಗೆ ಧಾರಣೆ ಕ್ವಿಂಟಲ್‌ಗೆ ಲಕ್ಷ ರೂ. ದಾಟಿ ದಾಖಲೆ ಬರೆಯಲಿದೆ ಎನ್ನುತ್ತಿರುವಾಗಲೇ ದಿಢೀರನೇ ಕುಸಿತ ಕಂಡು ಬೆಳೆಗಾರರಲ್ಲಿ ಆತಂಕ ಸೃಷ್ಟಿಸಿದೆ. ಚಿನ್ನದ ಮಾದರಿಯಲ್ಲಿ ಅಡಿಕೆ ಧಾರಣೆ ಕಳೆದ ತಿಂಗಳು ನಿರಂತರವಾಗಿ ಏರುಗತಿಯಲ್ಲಿ ಸಾಗಿದ್ದು ಲಕ್ಷ ರೂ. ದಾಟಿ ದಾಖಲೆ ಬರೆಯುವ ಹಂತದಲ್ಲಿತ್ತು. ಈಗ ಅಡಿಕೆ ವೆರೈಟಿಗಳಾದ ಸರಕು, ರಾಶಿ ಇಡಿ, ಬೆಟ್ಟೆ, ಗೊರಬಲುಗೆ ದಿಢೀರ್‌ 5ರಿಂದ 6 ಸಾವಿರ ರೂ. ಧಾರಣೆ ಕಡಿಮೆಯಾಗಿದೆ. ಮುಂದಿನ ದಿನಗಳಲ್ಲಿ ದರ ಇನ್ನೂ ಕುಸಿಯಲಿದೆ ಎಂಬ ಮಾತುಗಳು ವರ್ತಕ ವಲಯದಲ್ಲಿ ಕೇಳಿ ಬರುತ್ತಿವೆ.

10 ವರ್ಷಗಳ ಹಿಂದೆ ಸರಕು ಅಡಿಕೆ ಕ್ವಿಂಟಲ್‌ಗೆ 95,000 ರೂ., ರಾಶಿ ಇಡಿ ಅಡಿಕೆಗೆ 80,000 ರೂ. ದಾಟಿತ್ತು. ಇದೀಗ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷ ಹಾಗೂ ಅಮೆರಿಕದ ಸುಂಕ ಸಮರ ಅಡಿಕೆ ಧಾರಣೆ ಕುಸಿಯಲು ಕಾರಣ ಎನ್ನಲಾಗಿದೆ. ಕಳೆದ ಜನವರಿ ಕೊನೆಯಲ್ಲಿ ರಾಶಿ ಇಡಿ ಅಡಿಕೆಗೆ 57,000 ಸಾವಿರ ರೂ. ವರೆಗಿದ್ದ ದರ ಫೆಬ್ರವರಿಯಲ್ಲಿ53,000 ತಲುಪಿತ್ತು. ಆದರೆ, ಮಾರ್ಚ್ ಮೊದಲ ವಾರ ದರ ಇಳಿಕೆ ಕಂಡಿದ್ದು ತಿಂಗಳ ಕೊನೆಯಲ್ಲಿ ಏರಿಕೆಯಾಗಿತ್ತು. ಕಳೆದ ತಿಂಗಳು ಸರಕು ಅಡಿಕೆಗೆ 67,000ದಿಂದ 96,000 ರೂ.ವರೆಗೆ, ಬೆಟ್ಟೆ 53,000ರಿಂದ 63,000, ರಾಶಿ ಇಡಿ 55,000- 60,000 ರೂ. ಆಸುಪಾಸಿನಲ್ಲಿ ಧಾರಣೆ ನಡೆಯುತ್ತಿತ್ತು. ಪ್ರಸ್ತುತ ಸರಕು 60,129ರಿಂದ 98,896, ರಾಶಿ ಇಡಿ 49,000ದಿಂದ 57,000, ಬೆಟ್ಟೆ 51,554ರಿಂದ 58,700 ರೂ. ವರೆಗೆ ಮಾರಾಟವಾಗುತ್ತಿದೆ.

2023ರ ಜೂನ್‌, ಜುಲೈ ತಿಂಗಳಲ್ಲಿ ಅಡಿಕೆ ಧಾರಣೆ 55,000-57,000 ವರೆಗೆ ತಲುಪಿತ್ತು. 2024ರ ಮೇ ತಿಂಗಳಿನಲ್ಲಿ 55,000 ರೂ.ಗಳಿತ್ತು. ಆದರೆ, ಈ ವರ್ಷ ಏಪ್ರಿಲ್‌ ಮೊದಲ ವಾರದಲ್ಲಿಯೇ ಏರಿಕೆ ಕಂಡು ಮೇ ತಿಂಗಳಿನಲ್ಲಿ ಕುಸಿತ ಕಾಣುತ್ತಿದೆ.
ಮಲೆನಾಡು ಭಾಗದಲ್ಲಿಈಗ ಹಸ ಹಾಗೂ ಬೆಟ್ಟೆ ಅಡಿಕೆಯನ್ನು ತಯಾರಿಸುವವರು ಕಡಿಮೆಯಾಗುತ್ತಿದ್ದು ರಾಶಿ ಇಡಿ ಅಡಿಕೆ ಮಾಡುವವರ ಸಂಖ್ಯೆಯೇ ಜಾಸ್ತಿಯಾಗಿದೆ. ಕಾರ್ಮಿಕರ ಕೊರತೆ ಕಾರಣಕ್ಕೆ ಅಡಿಕೆಯನ್ನು ಹೋಳು ಮಾಡದೆ ಯಂತ್ರದ ಸಹಾಯದಿಂದ ಸಿಪ್ಪೆಯನ್ನು ಬೇರೆ ಮಾಡಿ ಇಡಿ ಅಡಿಕೆಯನ್ನು ಮಾತ್ರ ಬೇಯಿಸಲಾಗುತ್ತದೆ. ಹಸ ಅಡಿಕೆಗೆ ಧಾರಣೆ 90,000 ರೂ. ಆಸುಪಾಸಿನಲ್ಲಿದ್ದರೂ ಬೆಳೆಗಾರರು ಹಸ ವೆರೈಟಿ ಮಾಡದೆ ಒಳ್ಳೆಯ ಧಾರಣೆಯಿಂದ ವಂಚಿತರಾಗುತ್ತಿದ್ದಾರೆ.

ಕಳೆದ 2 ವರ್ಷದಿಂದ ಅಡಿಕೆ ಇಳುವರಿ ಕಡಿಮೆ ಆಗುತ್ತಿದೆ. ಅತಿಯಾದ ಮಳೆ ಹಾಗೂ ಎಲೆಚುಕ್ಕಿ, ಹಳದೆ ಎಲೆ ರೋಗದಿಂದ ಅರ್ಧದಷ್ಟು ಅಡಿಕೆ ಇಳುವರಿ ಕಡಿಮೆಯಾಗುತ್ತಿದೆ. ಆದರೆ, ರೈತರು ವರ್ಷದ ಬೆಳೆ ಹೋದರೂ ಪರವಾಗಿಲ್ಲ, ತೋಟ ಉಳಿದರೆ ಸಾಕು ಎನ್ನುವ ಸ್ಥಿತಿಯಲ್ಲಿದ್ದಾರೆ. ಈ ಬಾರಿಯ ಬೇಸಿಗೆಯಲ್ಲಿ ಅಡಿಕೆ ಮರಗಳಲ್ಲಿ ಹಿಂಗಾರ ನಳನಳಿಸುತ್ತಿದ್ದು, ಹರಳು ಉಳಿದರೆ ಉತ್ತಮ ಫಸಲು ಕೈಗೆ ಸಿಗುವ ಆಶಾಭಾವ ಮೂಡಿದೆ.

Categories
ಮಂಗಳೂರು

ಮಂಗಳೂರಲ್ಲಿ ಮತ್ತೊಮ್ಮೆ ರಕ್ತದೋಕುಳಿ!

ಮಂಗಳೂರಲ್ಲಿ ಮತ್ತೊಮ್ಮೆ ರಕ್ತದೋಕುಳಿ!

– ಅಕ್ಕರಂಗಡಿ ಬಳಿ ವ್ಯಕ್ತಿಯೋರ್ವನ ಮೇಲೆ ತಲ್ವಾರ್ ದಾಳಿ
– ವ್ಯಕ್ತಿ ಪ್ರಾಣಾಪಾಯದಿಂದ ಪಾರು

NAMMUR EXPRESS NEWS
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೊಮ್ಮೆ ರಕ್ತದೋಕುಳಿ ಹರಿದಿದೆ. ಸಿಎಂ ಸಿದ್ದರಾಮಯ್ಯ ಅವರು ಮಂಗಳೂರಿಗೆ ಬಂದಾಗಲೇ ದುಷ್ಕರ್ಮಿಗಳು ಬಂಟ್ವಾಳ ತಾಲೂಕಿನ ಅಕ್ಕರಂಗಡಿ ಬಳಿ ವ್ಯಕ್ತಿಯೋರ್ವನ ಮೇಲೆ ತಲ್ವಾರ್ ನಿಂದ ದಾಳಿ ಮಾಡಿದ್ದಾರೆ. ಸ್ಥಳೀಯ ನಿವಾಸಿ ಹಮೀದ್ ಹಲ್ಲೆಗೊಳಗಾದ ವ್ಯಕ್ತಿ.
ಈತನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.
ಅಕ್ಕರಂಗಡಿ ನಿವಾಸಿ ಪೈಂಟಿಂಗ್‌ ಕೆಲಸ ಮಾಡುತ್ತಿರುವ ಹಮೀದ್‌ ಯಾನೆ ಅಮ್ಮಿ ರಸ್ತೆ ಬದಿಯಲ್ಲಿ ನಿಂತ ಸಂದರ್ಭದಲ್ಲಿ ಎರಡು ಬೈಕ್‌ಗಳಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಈ ಕೃತ್ಯ ಮಾಡಿದ್ದಾರೆ. ಹಲ್ಲೆಗೆ ಕಾರಣ ತಿಳಿದು ಬಂದಿಲ್ಲ. ಪೊಲೀಸ್‌ ಮೂಲಗಳ ಪ್ರಕಾರ ಒಂದೇ ಕೋಮಿಗೆ ಸಂಬಂಧಿಸಿದ ವಿಚಾರದಿಂದ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ ಎಂದು ವರದಿಯಾಗಿದೆ. ಆದರೆ ಈ ಕುರಿತು ಯಾವುದೇ ವಿಚಾರ ಸ್ಪಷ್ಟಗೊಂಡಿಲ್ಲ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದೆ ಎನ್ನುವ ಸುದ್ದಿ ಹರಡಿದೆ. ಆದರೆ ಪೊಲೀಸರು ಇದನ್ನು ದೃಢಪಡಿಸಿಲ್ಲ. ಸದ್ಯಕ್ಕೆ ಹಮೀದ್‌ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿದೆ ಎಂದು ವರದಿಯಾಗಿದೆ.

Categories
ಚಿಕ್ಕಮಗಳೂರು

ಕಾಫಿನಾಡಿನಲ್ಲಿ ಬೃಹತ್ ತಿರಂಗಾ ಯಾತ್ರೆ

ಕಾಫಿನಾಡಿನಲ್ಲಿ ಬೃಹತ್ ತಿರಂಗಾ ಯಾತ್ರೆ
* 1000 ಅಡಿ ಉದ್ದದ ತಿರಂಗಾ ಹಿಡಿದು ಭಾಗಿಯಾದ 2000ಕ್ಕೂ ಅಧಿಕ ಮಂದಿ
* ಎಂ.ಎಲ್.ಸಿ ಸಿ‌.ಟಿ ರವಿ ಸೇರಿದಂತೆ ಹಲವು ನಾಯಕರು ಭಾಗಿ

NAMMMUR EXPRESS NEWS
ಚಿಕ್ಕಮಗಳೂರು: ಆಪರೇಷನ್ ಸಿಂಧೂರ, ಭಾರತೀಯ ಸೈನಿಕರಿಗೆ ಬೆಂಬಲಿಸಿ ಚಿಕ್ಕಮಗಳೂರು ನಗರದಲ್ಲಿ ಬೃಹತ್ ಬಾವುಟದೊಂದಿಗೆ ತಿರಂಗಾ ಯಾತ್ರೆ ನಡೆಸಲಾಯಿತು.
1000 ಅಡಿ ಉದ್ದದ ಬಾವುಟ ಹಿಡಿದು ಬೃಹತ್ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ಎಂಎಲ್‌ಸಿ ಸಿ.ಟಿ.ರವಿ ಡಿ.ಎನ್ ಜೀವರಾಜ್,ಎಂ.ಕೆ ಪ್ರಾಣೇಶ್,ದೀಪಕ್ ದೊಡ್ಡಯ್ಯ, ಜಿಲ್ಲಾ ಬಿಜೆಪಿ ಅಧ್ಯಕ್ಷ ದೇವರಾಜ್ ಶೆಟ್ಟಿ,ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್ ಸೇರಿದಂತೆ ಹಲವು ನಾಯಕರು ಬಾವುಟ ಹಿಡಿದು ಸಾರ್ವಜನಿಕರೊಂದಿಗೆ ರಸ್ತೆಯಲ್ಲಿ ಸಾಗಿದರು.
ಮೆರವಣಿಗೆಯು ಓಂಕಾರೇಶ್ವರ ದೇಗುಲದಿಂದ ಹೊರಟು ಎಂ.ಜಿ.ರಸ್ತೆ ಮೂಲಕ ಆಜಾದ್ ಪಾರ್ಕ್ ವೃತ್ತದವರೆಗೆ ಸಾಗೌತು, ಈ ತಿರಂಗಾ ಯಾತ್ರೆಯಲ್ಲಿ 2000ಕ್ಕೂ ಹೆಚ್ಚು ಜನಸಾಮಾನ್ಯರು ಭಾಗಿಯಾಗಿ ಬೆಂಬಲ ಸೂಚಿಸಿದರು.
ತಿರಂಗಾ ಯಾತ್ರೆಯ ಮೆರವಣಿಗೆಯಲ್ಲಿ ಮಾಜಿ ಸೈನಿಕರು ಭಾಗಿಯಾಗಿ, ರಾಷ್ಟ್ರಭಕ್ತಿ ಗೀತೆಗಳು,ಘೋಷಣೆಗಳ ಮೂಲಕ ಬೃಹತ್ ಮೆರವಣಿಗೆ ನಡೆಯಿತು.