Categories
ತೀರ್ಥಹಳ್ಳಿ

ಮನೆಗೆ ನುಗ್ಗಿದ ಚಿರತೆ: ಹಾರೋಗೋಳಿಗೆ ವ್ಯಾಪ್ತಿಯಲ್ಲಿ ಚಿರತೆ ಪತ್ತೆ!

ಮನೆಗೆ ನುಗ್ಗಿದ ಚಿರತೆ: ಹಾರೋಗೋಳಿಗೆ ವ್ಯಾಪ್ತಿಯಲ್ಲಿ ಚಿರತೆ ಪತ್ತೆ! 
– ಜನ ಫೋನ್ ಮಾಡಿದ್ರೂ ಬಾರದ ಅರಣ್ಯ ಅಧಿಕಾರಿಗಳು
– ಚಿರತೆ ಕಾಡಿಗೆ ಪರಾರಿ: ಗ್ರಾಮಸ್ಥರಿಗೆ ಜೀವ ಭಯ
– ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಪ್ರಸನ್ನ ಅಂದಗೆರೆ ಆಕ್ರೋಶ

NAMMUR EXPRESS NEWS  
ತೀರ್ಥಹಳ್ಳಿ: ಹಾರೋಗೊಳಿಗೆ ಗ್ರಾಮ ಪಂಚಾಯ್ತಿಯ ಅಂದಗೆರೆ ಗ್ರಾಮದ ತುಂಬೆಸರದಲ್ಲಿ ಚಿರತೆ ಪತ್ತೆಯಾಗಿದೆ.
ಡoಕಣ್ಣ ಆಚಾರರ್ ಎಂಬುವರ ಮನೆಯಲ್ಲಿ ಬುಧವಾರ ರಾತ್ರಿ ಸುಮಾರು 1 ಗಂಟೆ ಸುಮಾರಿಗೆ ನಾಯಿ ಬೊಗಳಿದಾಗ ಎದ್ದು ಮನೆಯವರು ಹೊರ ಬಂದು ನಾಯಿಯನ್ನು ಚಿರತೆ ಹೊತ್ತು ಹೋಗಿದೆ. ಚಿರತೆ ಹಿಡಿಯಲು ಅರಣ್ಯ ಇಲಾಖೆಯವರಿಗೆ ಕಾಲ್ ಮಾಡಿ ಹೇಳಿದಾಗ ಇಲಾಖೆ ಅಧಿಕಾರಿಗಳು ಬೇಜವಾಬ್ದಾರಿತನ ತೋರಿ ಬೆಳಿಗ್ಗೆ ಬಂದಿದ್ದಾರೆ. ಚಿರತೆ ತಪ್ಪಿಸಿಕೊಂಡಿದ್ದು ಗ್ರಾಮಸ್ಥರು ಭಯಪಡುವಂತಾಗಿದೆ. ತಕ್ಷಣ ಚಿರತೆ ಹಿಡಿದು ದಟ್ಟ ಅರಣ್ಯಕ್ಕೆ ಬಿಡ್ಬೇಕು ಎಂದು ಹಾರೋಗೊಳಿಗೆ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರು ಆದ ಮಳೂರು ಪ್ರಸನ್ನ ಕಿಡಿಕಾರಿದ್ದಾರೆ. ಇದರಿಂದ ಗ್ರಾಮಸ್ಥರಿಗೆ ನಿದ್ದೆಗೆಡಿಸಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಆದಷ್ಟು ಬೇಗ ಚಿರತೆ ಹಿಡಿಯಬೇಕು ಎಂದು ಪಟ್ಟು ಹಿಡಿದಿದ್ದಾರೆ.

Categories
ತೀರ್ಥಹಳ್ಳಿ

ನಮ್ಮೂರ್ ಎಕ್ಸ್ ಪ್ರೆಸ್ ಮಲ್ನಾಡೋತ್ಸವ ಸೂಪರ್

ನಮ್ಮೂರ್ ಎಕ್ಸ್ ಪ್ರೆಸ್ ಮಲ್ನಾಡೋತ್ಸವ ಸೂಪರ್
– ಕೃಷಿ ಹಾಗೂ ಶೈಕ್ಷಣಿಕ ಸಮ್ಮೇಳನ, ಆಹಾರ ಮೇಳ, ಆರ್ಟ್ ಎಕ್ಸ್ಪೋ, – ಉದ್ಯೋಗ ಹಾಗೂ ಕೌಶಲ್ಯ ಮೇಳ, ಸ್ಟಾರ್ಟ್ ಅಪ್ ಹಾಗೂ ಮಹಿಳಾ ಉದ್ಯಮಿಗಳ ಸಮಾವೇಶ

NAMMUR EXPRESS NEWS
ರಾಜ್ಯದ ಪ್ರಸಿದ್ಧ ಮಾಧ್ಯಮ ಸಂಸ್ಥೆ ನಮ್ಮೂರ್ ಎಕ್ಸ್ ಪ್ರೆಸ್ ಸಂಸ್ಥೆಯ ದಶಮಾನೋತ್ಸವದ ಅಂಗವಾಗಿ ತೀರ್ಥಹಳ್ಳಿಯ ಶಾಂತವೇರಿ ಗೋಪಾಲಗೌಡ ರಂಗಮಂದಿರ ಸಂಸ್ಕೃತಿ ಮಂದಿರ ಆವರಣ ಹಾಗೂ ಗರ್ಲ್ಸ್ ಹೈ ಸ್ಕೂಲ್ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ
ಮಲೆನಾಡಿನ ಸಸಾಧಕರಿಗೆ, ಸೇವಕರಿಗೆ, ಪ್ರತಿಭಾವಂತರಿಗೆ ವೇದಿಕೆ ಸೃಷ್ಟಿ ಮಾಡಿತು.
ಕೃಷಿ ಹಾಗೂ ಶೈಕ್ಷಣಿಕ ಸಮ್ಮೇಳನ, ಆಹಾರ ಮೇಳ, ಆರ್ಟ್ ಎಕ್ಸ್ಪೋ, ಉದ್ಯೋಗ ಹಾಗೂ ಕೌಶಲ್ಯ ಮೇಳ, ಸ್ಟಾರ್ಟ್ ಅಪ್ ಹಾಗೂ ಮಹಿಳಾ ಉದ್ಯಮಿಗಳ ಸಮಾವೇಶ ಸೇರಿ ಅನೇಕ ಕಾರ್ಯಕ್ರಮಗಳು ಪ್ರತಿ ದಿನ 4 ವೇದಿಕೆಯಲ್ಲಿ ನಡೆದವು. ನೂರಾರು ಗಣ್ಯರು ಭಾಗಿಯಾದರು.

 

* ಕೃಷಿಮೇಳ :- 30ಕ್ಕೂ ಹೆಚ್ಚು ಕೃಷಿ ಮಳಿಗೆಗಳು ಭಾಗಿ

* ಆರೋಗ್ಯ ಮೇಳ :- ನಾರಾಯಣ ಹೃದಯಾಲಯ ಮತ್ತು ರೋಟರಿ ಬ್ಲಡ್ ಬ್ಯಾಂಕ್ ಸಹಯೋಗದಲ್ಲಿ 200ಕ್ಕೂ ಹೆಚ್ಚು ಮಂದಿಗೆ ತಪಾಸಣೆ ಮತ್ತು ರಕ್ತದಾನ

* 10 ಕ್ಕೂ ಹೆಚ್ಚು ಚಿತ್ರ ಕಲಾವಿದರಿಂದ ಆರ್ಟ್ ಎಕ್ಸ್ ಪೋ

* ಆಹಾರಮೇಳ :- 15ಕ್ಕೂ ಹೆಚ್ಚು ಮಳಿಗೆಗಳಿಂದ ಆಹಾರಮೇಳ

* ಕೃಷಿ ಸಮ್ಮೇಳನ ಸಂವಾದ:- ತಜ್ಞರಿಂದ ರೈತರಿಗೆ ಮಾಹಿತಿ, 200 ಕ್ಕೂ ಹೆಚ್ಚು ರೈತರು ಭಾಗಿ

* ಸುಮಾರು 15 ಮಂದಿ ರೈತ ಸಾಧಕರು ಹಾಗೂ ರೈತ ಸ್ಟಾರ್ಟ್ ಅಪ್ ಗೌರವ

* ಶಿಕ್ಷಣ ಸಮ್ಮೇಳನದಲ್ಲಿ ಶಿಕ್ಷಣದ ಬಗ್ಗೆ ಮಾಹಿತಿ, ಉದ್ಯೋಗ ಪಡೆಯುವ ಬಗ್ಗೆ ಕಾರ್ಯಗಾರ

* 50ಕ್ಕೂ ಹೆಚ್ಚು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

* ಉದ್ಯೋಗ ಮೇಳದಲ್ಲಿ 40ಕ್ಕೂ ಹೆಚ್ಚು ಕಂಪನಿಗಳು ಭಾಗಿ600 ಮಂದಿ ಉದ್ಯೋಗ ಆಕಾಂಕ್ಷಿಗಳು ಭಾಗಿ, 250 ಮಂದಿಗೆ ಉದ್ಯೋಗ ಸೃಷ್ಟಿ

* ಮಲೆನಾಡಿನ ಮಹಿಳಾ ಮತ್ತು ಸ್ಟಾರ್ಟ್ ಅಪ್ ಉದ್ಯಮಿಗಳ ಸಮ್ಮೇಳನ.

ಸುಮಾರು 50ಕ್ಕೂ ಹೆಚ್ಚು ಮಲೆನಾಡಿನ ಸ್ಟಾರ್ಟ್ ಅಪ್ ಹಾಗೂ ಮಹಿಳಾ ಉದ್ಯಮಿಗಳಿಗೆ ಗೌರವ ಸನ್ಮಾನ ಬೆಸ್ಟ್ ಮಲ್ನಾಡ್ ಸ್ಟಾರ್ಟ್ ಅಪ್ ಮತ್ತು ಮಹಿಳಾ ಉದ್ಯಮಿ ಅವಾರ್ಡ್
.

* ಮಲೆನಾಡಿನ ವಿವಿಧ ತಾಲೂಕಿನ ಸುಮಾರು 33 ಮಂದಿಗೆ ಮಲ್ನಾಡ್ ಐಕಾನ್ ಅವಾರ್ಡ್ 2024, ಮಲ್ನಾಡ್ ವಿಮೆನ್ ಅಚಿವರ್ ಅವಾರ್ಡ್ – 2024, ಮಲ್ನಾಡ್ ಬಿಸಿನೆಸ್ ಅಚಿವರ್ಸ್ ಅವಾರ್ಡ್ – 2024 ನೀಡಿ ಅವರು ಮಲೆನಾಡಿಗೆ ನೀಡಿದ ಕಾಣಿಕೆ, ಕೊಡುಗೆ, ಸೇವೆ, ಉದ್ಯೋಗ ಸೃಷ್ಟಿಗೆ ಗೌರವ

.
ನೃತ್ಯ, ಡ್ಯಾನ್ಸ್ ರಂಗು… ಕಾಮಿಡಿ ಶೋ.. ಕಾಮಿಡಿ ಶೋ

Categories
ಜ್ಯೋತಿಷ್ಯ

ಈ ದಿನದ ರಾಶಿ ಭವಿಷ್ಯ ಹೇಗಿದೆ?

ಈ ದಿನದ ರಾಶಿ ಭವಿಷ್ಯ ಹೇಗಿದೆ?
– ಮಹಾಲಕ್ಷ್ಮಿ ಕೃಪೆಯಿಂದ ಯಾವ ರಾಶಿಯವರಿಗೆ ಒಳಿತು? ಯಾವ ರಾಶಿಯವರಿಗೆ ಕೆಡಕು ?

NAMMUR EXPRESS NEWS
ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು?

** ಮೇಷ ರಾಶಿ :
ಮೇಷ ರಾಶಿಯವರಿಗೆ ಇಂದು ಸಮಸ್ಯೆಗಳಿಂದ ಕೂಡಿದ ದಿನವಾಗಿರಲಿದೆ. ಕುಟುಂಬದಲ್ಲಿ ಆಸ್ತಿಗಾಗಿ ಜಗಳಗಳು ಹೆಚ್ಚಾಗುತ್ತವೆ, ಇದರಿಂದಾಗಿ ಸಂಬಂಧಗಳಲ್ಲಿ ಬಿರುಕು ಉಂಟಾಗುವ ಸಾಧ್ಯತೆಯಿದೆ. ನಿಮ್ಮ ಜವಾಬ್ದಾರಿಯಲ್ಲಿ ವಿಶ್ರಾಂತಿ ಪಡೆಯಬೇಡಿ. ಉದ್ಯೋಗ ಬದಲಾಯಿಸಲು ಯೋಜಿಸುತ್ತಿರುವವರು ಸ್ವಲ್ಪ ಜಾಗರೂಕರಾಗಿರಬೇಕು.

** ವೃಷಭ ರಾಶಿ :
ವೃಷಭ ರಾಶಿಯವರಿಗೆ ಇಂದು ಏರಿಳಿತಗಳಿಂದ ಕೂಡಿದ ದಿನವಾಗಿರಲಿದೆ. ನೀವು ದೂರದ ಪ್ರಯಾಣಕ್ಕೆ ಹೋಗಬೇಕಾಗಬಹುದು. ನಿಮ್ಮ ಬಾಸ್ ನಿಮಗೆ ಜವಾಬ್ದಾರಿಗಳನ್ನು ಹೊರೆಸಬಹುದು, ಆದರೆ ಭಯಪಡುವ ಅಗತ್ಯವಿಲ್ಲ. ನಿಮ್ಮ ಭಾವನೆಗಳನ್ನು ಸಹೋದ್ಯೋಗಿಗೆ ವ್ಯಕ್ತಪಡಿಸಬಹುದು. ನಿಮ್ಮ ಹಳೆಯ ಸ್ನೇಹಿತನನ್ನು ನೀವು ಭೇಟಿಯಾಗುತ್ತೀರಿ, ಅವರ ವಿರುದ್ಧ ನೀವು ಯಾವುದೇ ದ್ವೇಷ ಇಟ್ಟುಕೊಳ್ಳದೆ ಪ್ರೀತಿಯಿಂದ ಕಾಲ ಕಳೆಯಿರಿ.

** ಮಿಥುನ ರಾಶಿ :
ಇಂದು ಮಿಥುನ ರಾಶಿಯ ಜನರು ತಮ್ಮ ಯೋಜಿತ ಕೆಲಸಗಳನ್ನು ಪೂರ್ಣಗೊಳಿಸುತ್ತಾರೆ. ಹೊಸ ಮನೆಯನ್ನು ಖರೀದಿಸುವ ಅವರ ಕನಸು ಈಡೇರುತ್ತವೆ. ನಿಮ್ಮ ಸಂಗಾತಿಯೊಂದಿಗೆ ಹೊರಗೆ ಹೋಗಲು ನೀವು ಯೋಜಿಸಬಹುದು. ಕುಟುಂಬದ ಜನರು ನಿಮ್ಮೊಂದಿಗೆ ಚೆನ್ನಾಗಿ ಹೊಂದಿಕೊಳ್ಳುತ್ತಾರೆ. ವ್ಯವಹಾರದಲ್ಲಿ ಪರಿಸ್ಥಿತಿ ಉತ್ತಮವಾಗಿರುತ್ತದೆ. ನಿಮ್ಮ ಆದಾಯವನ್ನು ಹೆಚ್ಚಿಸುವ ಮೂಲಗಳ ಬಗ್ಗೆ ನೀವು ಸಂಪೂರ್ಣ ಗಮನ ಹರಿಸುತ್ತೀರಿ.

** ಕರ್ಕಾಟಕ ರಾಶಿ :
ಕರ್ಕಾಟಕ ರಾಶಿಯ ಜನರಿಗೆ ಇಂದು ಮಿಶ್ರ ಫಲಿತಾಂಶಗಳ ದಿನವಾಗಿರುತ್ತದೆ. ನಿಮ್ಮ ಮನೆಗೆ ಹೊಸ ಅತಿಥಿ ಬರಬಹುದು. ನಿಮ್ಮ ಜೀವನ ಸಂಗಾತಿಯ ಆರೋಗ್ಯದ ಬಗ್ಗೆ ಸ್ವಲ್ಪ ಜಾಗರೂಕರಾಗಿರಿ. ನೀವು ಧಾರ್ಮಿಕ ಚಟುವಟಿಕೆಗಳಲ್ಲಿ ಹೆಚ್ಚು ಆಸಕ್ತಿ ಹೆಚ್ಚಾಗಬಹುದು. ನೀವು ವ್ಯವಹಾರದಲ್ಲಿ ಹೊಸ ಯೋಜನೆಯನ್ನು ಪ್ರಾರಂಭಿಸಬಹುದು. ತಂದೆ ನಿಮ್ಮೊಂದಿಗೆ ಕೆಲವು ಕೆಲಸದ ಬಗ್ಗೆ ಮಾತನಾಡಬಹುದು.

** ಸಿಂಹ ರಾಶಿ :
ಸಿಂಹ ರಾಶಿಯವರಿಗೆ ಆರೋಗ್ಯದ ದೃಷ್ಟಿಯಿಂದ ಇಂದು ದುರ್ಬಲ ದಿನವಾಗಲಿದೆ. ಹವಾಮಾನವು ನಿಮ್ಮ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ, ಆದ್ದರಿಂದ ತುಂಬಾ ತಣ್ಣನೆಯ ಆಹಾರವನ್ನು ಸೇವಿಸಬೇಡಿ. ನೀವು ವ್ಯಾಪಾರದಲ್ಲಿ ಯಾವುದೇ ದೊಡ್ಡ ಹೂಡಿಕೆ ಮಾಡುವುದನ್ನು ತಪ್ಪಿಸಬೇಕಾಗುತ್ತದೆ, ಇಲ್ಲದಿದ್ದರೆ ನೀವು ದೊಡ್ಡ ನಷ್ಟವನ್ನು ಅನುಭವಿಸಬಹುದು, ಅದು ನಿಮ್ಮ ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ.

** ಕನ್ಯಾ ರಾಶಿ :
ಕನ್ಯಾ ರಾಶಿಯವರಿಗೆ ಇಂದು ಒತ್ತಡದ ದಿನವಾಗಿರುತ್ತದೆ. ಆದರೆ ಕೆಲವು ಪೂರ್ವಜರ ಆಸ್ತಿಯನ್ನು ಪಡೆಯುವುದರಿಂದ ನೀವು ತುಂಬಾ ಸಂತೋಷಪಡುತ್ತೀರಿ. ನಿಮ್ಮ ಮಗುವಿನ ಶಿಕ್ಷಣದಲ್ಲಿ ನಡೆಯುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಇಂದು ನೀವು ಸಾಕಷ್ಟು ಪ್ರಯಾಣಿಸಬೇಕಾಗುತ್ತದೆ. ಇಂದು ವೃತ್ತಿಜೀವನದಲ್ಲಿ ಕೆಲವು ಉತ್ತಮ ಬೆಳವಣಿಗೆಯನ್ನು ನೋಡುತ್ತೀರಿ. ನಿಮ್ಮ ಸಹೋದ್ಯೋಗಿಗಳು ವಿಷಯಗಳನ್ನು ಹಾಳು ಮಾಡಲು ಪ್ರಯತ್ನಿಸುತ್ತಾರೆ.

** ತುಲಾ ರಾಶಿ :
ಇಂದು ದಿನವು ತುಲಾ ರಾಶಿಯವರಿಗೆ ಶಕ್ತಿಯುತವಾಗಿರಲಿದೆ. ನಿಮ್ಮ ಶಕ್ತಿಯನ್ನು ಸರಿಯಾದ ಕೆಲಸಗಳಲ್ಲಿ ಬಳಸಬೇಕು. ನಿಮ್ಮ ಕೆಲಸವನ್ನು ಯೋಜಿಸಿ ಮತ್ತು ಮುಂದುವರಿಯುವ ಮೂಲಕ ನೀವು ಉತ್ತಮ ಪ್ರಯೋಜನಗಳನ್ನು ಪಡೆಯುತ್ತೀರಿ ಮತ್ತು ನಿಮ್ಮ ಆರ್ಥಿಕ ಸ್ಥಿತಿಯು ಮೊದಲಿಗಿಂತ ಉತ್ತಮವಾಗಿರುತ್ತದೆ. ಸ್ನೇಹಿತರೊಂದಿಗೆ ಸ್ವಲ್ಪ ಸಮಯ ಮೋಜು ಮಾಡುತ್ತೀರಿ. ನಿಮ್ಮ ಮಕ್ಕಳ ಕಡೆಯಿಂದ ನೀವು ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳಬಹುದು.

** ವೃಶ್ಚಿಕ ರಾಶಿ :
ವೃಶ್ಚಿಕ ರಾಶಿಯವರಿಗೆ ಇಂದು ಹೊಸ ಸ್ಥಾನವನ್ನು ಪಡೆಯುವ ದಿನವಾಗಿರುತ್ತದೆ. ಕುಟುಂಬದಲ್ಲಿ ಕೆಲವು ಶುಭ ಕಾರ್ಯಕ್ರಮಗಳನ್ನು ಆಯೋಜಿಸಬಹುದು. ನಿಮ್ಮ ಸಂಗಾತಿಯೊಂದಿಗೆ ಎಲ್ಲೋ ಹೊರಗೆ ಹೋಗಲು ನೀವು ಯೋಜಿಸಬಹುದು, ಕೆಲವು ಕೆಲಸದ ಕಾರಣ ನೀವು ಇದ್ದಕ್ಕಿದ್ದಂತೆ ಪ್ರವಾಸಕ್ಕೆ ಹೋಗಬೇಕಾಗಬಹುದು. ಇಂದು ನಿಮ್ಮ ಕೆಲವು ವಿರೋಧಿಗಳು ನಿಮಗೆ ತೊಂದರೆ ಕೊಡಲು ಪ್ರಯತ್ನಿಸುತ್ತಾರೆ, ಇವರಿಂದ ನೀವು ನಿಮ್ಮನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸಬೇಕು

** ಧನಸ್ಸು ರಾಶಿ :
ಧನು ರಾಶಿಯವರಿಗೆ ಇಂದು ಯಾವುದೇ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸುವ ದಿನವಾಗಿದೆ. ಇಲ್ಲದಿದ್ದರೆ ದೊಡ್ಡ ನಷ್ಟವನ್ನು ಅನುಭವಿಸಬೇಕಾಗಬಹುದು. ಆಸ್ತಿ ವ್ಯವಹಾರದಲ್ಲಿ ಕೆಲಸ ಮಾಡುವ ಜನರ ಕೆಲವು ದೊಡ್ಡ ವ್ಯವಹಾರಗಳು ಅಂತಿಮಗೊಳ್ಳುತ್ತಲೇ ಇರುತ್ತವೆ. ನಿಮ್ಮ ಸಂಗಾತಿಯೊಂದಿಗೆ ಘರ್ಷಣೆಯ ಸಾಧ್ಯತೆಯಿದೆ, ಆದ್ದರಿಂದ ನೀವು ಏನನ್ನಾದರೂ ಹೇಳುವ ಮೊದಲು ಎಚ್ಚರಿಕೆಯಿಂದ ಯೋಚಿಸಬೇಕು.

** ಮಕರ ರಾಶಿ :
ಇಂದು ಮಕರ ರಾಶಿಯವರಿಗೆ ಒಳ್ಳೆಯ ದಿನವಾಗಲಿದೆ. ನಿಮ್ಮ ಕೆಲಸದಲ್ಲಿ ಯಾವುದೇ ಅಡೆತಡೆಗಳು ಇದ್ದಲ್ಲಿ, ಅವುಗಳನ್ನು ಸಹ ನಿವಾರಣೆಯಾಗುತ್ತದೆ. ನಿಮ್ಮ ಹೃದಯದಿಂದ ಜನರ ಬಗ್ಗೆ ನೀವು ಒಳ್ಳೆಯದನ್ನು ಯೋಚಿಸುತ್ತೀರಿ, ಆದರೆ ಜನರು ಅದನ್ನು ತಪ್ಪಾಗಿ ಭಾವಿಸಬಹುದು. ನೀವು ಯಾರೊಬ್ಬರ ವಿಷಯದಲ್ಲಿ ಅನಗತ್ಯವಾಗಿ ಮಾತನಾಡುವುದನ್ನು ತಪ್ಪಿಸಬೇಕಾಗುತ್ತದೆ. ಯಾವುದೇ ಕಾನೂನು ವಿಷಯವು ದೀರ್ಘಕಾಲದವರೆಗೆ ನಡೆಯುತ್ತಿದ್ದರೆ, ಅದನ್ನು ಪರಿಹರಿಸಬಹುದು.

** ಕುಂಭ ರಾಶಿ :
​ಕುಂಭ ರಾಶಿಯವರಿಗೆ ಇಂದು ಮಿಶ್ರ ದಿನವಾಗಲಿದೆ. ನಿಮ್ಮ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ನಿವಾರಿಸುವಲ್ಲಿ ನೀವು ಯಶಸ್ವಿಯಾಗುತ್ತೀರಿ, ಆದರೆ ಇಂದು ಕೆಲಸದ ಜೊತೆಗೆ ಆರೋಗ್ಯದ ಕಡೆಗೂ ಗಮನ ಹರಿಸಬೇಕು. ನಿಮ್ಮ ಸಂಬಂಧಿಕರಿಂದ ನೀವು ಹಣಕಾಸಿನ ಲಾಭವನ್ನು ಪಡೆಯುವ ಸಾಧ್ಯತೆಯಿದೆ. ನಿಮ್ಮ ತಾಯಿಯ ಆರೋಗ್ಯದ ಬಗ್ಗೆ ನೀವು ಚಿಂತೆ ಮಾಡಲಿದ್ದೀರಿ.

** ಮೀನ ರಾಶಿ :
ಮೀನ ರಾಶಿಯವರಿಗೆ ಇಂದಿನ ವಾತಾವರಣ ಹಿತಕರವಾಗಿರಲಿದೆ. ನಿಮ್ಮ ಯಾವುದೇ ಬಾಕಿ ಕೆಲಸ ಪೂರ್ಣಗೊಂಡರೆ ನಿಮ್ಮ ಸಂತೋಷಕ್ಕೆ ಮಿತಿಯೇ ಇರುವುದಿಲ್ಲ. ಹೊಸ ಮನೆಯ ಕನಸು ನನಸಾಗಲಿದೆ. ವ್ಯವಹಾರದಲ್ಲಿ ಕೆಲವು ಉತ್ತಮ ಲಾಭದ ಚಿಹ್ನೆಗಳನ್ನು ನೀವು ನೋಡುತ್ತೀರಿ. ನಿಮ್ಮ ಯೋಜನೆಗಳು ಕಾರ್ಯರೂಪಕ್ಕೆ ಬರುತ್ತವೆ. ನೀವು ಯಾವುದೇ ಬ್ಯಾಂಕ್, ವೈಯಕ್ತಿಕ ಸಂಸ್ಥೆ ಇತ್ಯಾದಿಗಳಿಂದ ಹಣವನ್ನು ಎರವಲು ಪಡೆಯಲು ಯೋಚಿಸುತ್ತಿದ್ದರೆ, ನೀವು ಅದನ್ನು ಸಹ ಸುಲಭವಾಗಿ ಪಡೆಯುತ್ತೀರಿ.

Categories
ತೀರ್ಥಹಳ್ಳಿ

ರಾಜ್ಯಕ್ಕೆ ಮಾದರಿ ಆಯ್ತು ನಮ್ಮೂರ್ ಎಕ್ಸ್ ಪ್ರೆಸ್ ಮಲ್ನಾಡೋತ್ಸವ!

ರಾಜ್ಯಕ್ಕೆ ಮಾದರಿ ಆಯ್ತು ನಮ್ಮೂರ್ ಎಕ್ಸ್ ಪ್ರೆಸ್ ಮಲ್ನಾಡೋತ್ಸವ!
– ಸುಮಾರು 6000 ಮಂದಿ ಭಾಗಿ… ನೂರಾರು ಕಲಾವಿದರಿಗೆ ಗೌರವ
– 300ಕ್ಕೂ ಹೆಚ್ಚು ಸಾಧಕರು ಒಂದೇ ವೇದಿಕೆಯಲ್ಲಿ ಗೌರವ
– ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಮನಸೋತ ಜನ: ಸೇವೆ ಕೆಲಸಕ್ಕೆ ಜನರ ಸಾಥ್

NAMMUR EXPRESS NEWS
ರಾಜ್ಯದ ಪ್ರಸಿದ್ಧ ಮಾಧ್ಯಮ ಸಂಸ್ಥೆ ನಮ್ಮೂರ್ ಎಕ್ಸ್ ಪ್ರೆಸ್ ಸಂಸ್ಥೆಯ ದಶಮಾನೋತ್ಸವದ ಅಂಗವಾಗಿ ತೀರ್ಥಹಳ್ಳಿಯ ಶಾಂತವೇರಿ ಗೋಪಾಲಗೌಡ ರಂಗಮಂದಿರ ಸಂಸ್ಕೃತಿ ಮಂದಿರ ಆವರಣ ಹಾಗೂ ಗರ್ಲ್ಸ್ ಹೈ ಸ್ಕೂಲ್ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಮಾರು ಆರರಿಂದ ಏಳು ಸಾವಿರ ಮಂದಿ ಮೂರು ದಿನಗಳ ಕಾಲ ಭಾಗಿಯಾದರು. ಈ ಕಾರ್ಯಕ್ರಮ ಮಲೆನಾಡು ಮಾತ್ರವಲ್ಲದೆ ರಾಜ್ಯಕ್ಕೆ ಮಾದರಿ ಕಾರ್ಯಕ್ರಮವಾಯಿತು.
ಮಲೆನಾಡಿನ ಖ್ಯಾತ ರಾಜಕೀಯ, ಧಾರ್ಮಿಕ, ಸಾಹಿತ್ಯ, ಕಲೆ, ಕೃಷಿ, ಶೈಕ್ಷಣಿಕ ಕ್ಷೇತ್ರದ ಗಣ್ಯರು ಭಾಗಿಯಾಗಿ ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ಕೃಷಿ ಹಾಗೂ ಶೈಕ್ಷಣಿಕ ಸಮ್ಮೇಳನ, ಆಹಾರ ಮೇಳ, ಆರ್ಟ್ ಎಕ್ಸ್ಪೋ, ಉದ್ಯೋಗ ಹಾಗೂ ಕೌಶಲ್ಯ ಮೇಳ, ಸ್ಟಾರ್ಟ್ ಅಪ್ ಹಾಗೂ ಮಹಿಳಾ ಉದ್ಯಮಿಗಳ ಸಮಾವೇಶ ಸೇರಿ ಅನೇಕ ಕಾರ್ಯಕ್ರಮಗಳು ಪ್ರತಿ ದಿನ 4 ವೇದಿಕೆಯಲ್ಲಿ ನಡೆದವು. ನೂರಾರು ಗಣ್ಯರು ಭಾಗಿಯಾದರು.

ಕಾರ್ಯಕ್ರಮದ ವಿಶೇಷತೆಗಳು

* ಕೃಷಿಮೇಳ :- 30ಕ್ಕೂ ಹೆಚ್ಚು ಕೃಷಿ ಮಳಿಗೆಗಳು ಭಾಗಿ
* ಆರೋಗ್ಯ ಮೇಳ :- ನಾರಾಯಣ ಹೃದಯಾಲಯ ಮತ್ತು ರೋಟರಿ ಬ್ಲಡ್ ಬ್ಯಾಂಕ್ ಸಹಯೋಗದಲ್ಲಿ 200ಕ್ಕೂ ಹೆಚ್ಚು ಮಂದಿಗೆ ತಪಾಸಣೆ ಮತ್ತು ರಕ್ತದಾನ
* 10 ಕ್ಕೂ ಹೆಚ್ಚು ಚಿತ್ರ ಕಲಾವಿದರಿಂದ ಆರ್ಟ್ ಎಕ್ಸ್ ಪೋ
* ಆಹಾರಮೇಳ :- 15ಕ್ಕೂ ಹೆಚ್ಚು ಮಳಿಗೆಗಳಿಂದ ಆಹಾರಮೇಳ
* ಕೃಷಿ ಸಮ್ಮೇಳನ ಸಂವಾದ:- ತಜ್ಞರಿಂದ ರೈತರಿಗೆ ಮಾಹಿತಿ, 200 ಕ್ಕೂ ಹೆಚ್ಚು ರೈತರು ಭಾಗಿ
* ಸುಮಾರು 15 ಮಂದಿ ರೈತ ಸಾಧಕರು ಹಾಗೂ ರೈತ ಸ್ಟಾರ್ಟ್ ಅಪ್ ಗೌರವ
* ಶಿಕ್ಷಣ ಸಮ್ಮೇಳನದಲ್ಲಿ ಶಿಕ್ಷಣದ ಬಗ್ಗೆ ಮಾಹಿತಿ, ಉದ್ಯೋಗ ಪಡೆಯುವ ಬಗ್ಗೆ ಕಾರ್ಯಗಾರ
* 50ಕ್ಕೂ ಹೆಚ್ಚು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
* ಉದ್ಯೋಗ ಮೇಳದಲ್ಲಿ 40ಕ್ಕೂ ಹೆಚ್ಚು ಕಂಪನಿಗಳು ಭಾಗಿ
* 600 ಮಂದಿ ಉದ್ಯೋಗ ಆಕಾಂಕ್ಷಿಗಳು ಭಾಗಿ, 250 ಮಂದಿಗೆ ಉದ್ಯೋಗ ಸೃಷ್ಟಿ
* ಮಲೆನಾಡಿನ ಮಹಿಳಾ ಮತ್ತು ಸ್ಟಾರ್ಟ್ ಅಪ್ ಉದ್ಯಮಿಗಳ ಸಮ್ಮೇಳನದಲ್ಲಿ ಸುಮಾರು 50ಕ್ಕೂ ಹೆಚ್ಚು ಮಲೆನಾಡಿನ ಸ್ಟಾರ್ಟ್ ಅಪ್ ಹಾಗೂ ಮಹಿಳಾ ಉದ್ಯಮಿಗಳಿಗೆ ಗೌರವಿಸಿ ಸನ್ಮಾನ ಮಾಡಲಾಯಿತು. ಈ ಮೂಲಕ ಮಲೆನಾಡಿಗೆ ಮಹಿಳಾ ಮತ್ತು ಸ್ಟಾರ್ಟ್ ಅಪ್ ಸೇವೆಯನ್ನು ನೀಡುವಂತೆ ಮನವಿ ಮಾಡಲಾಯಿತು.

* ಮಲೆನಾಡಿನ ವಿವಿಧ ತಾಲೂಕಿನ ಸುಮಾರು 33 ಮಂದಿಗೆ ಮಲ್ನಾಡ್ ಐಕಾನ್ ಅವಾರ್ಡ್ 2024, ಮಲ್ನಾಡ್ ವಿಮೆನ್ ಅಚಿವರ್ ಅವಾರ್ಡ್ – 2024, ಮಲ್ನಾಡ್ ಬಿಸಿನೆಸ್ ಅಚಿವರ್ಸ್ ಅವಾರ್ಡ್ – 2024 ನೀಡಿ ಅವರು ಮಲೆನಾಡಿಗೆ ನೀಡಿದ ಕಾಣಿಕೆ, ಕೊಡುಗೆ, ಸೇವೆ, ಉದ್ಯೋಗ ಸೃಷ್ಟಿಯನ್ನು ಗೌರವಿಸಲಾಯಿತು.

ನೃತ್ಯ ಸ್ಪರ್ಧೆ, ಡ್ಯಾನ್ಸ್ ಸ್ಪರ್ಧೆ ರಂಗು!

* ಮಲೆನಾಡಿನ ವಿವಿಧ ತಾಲೂಕಿನ ಪ್ರತಿಭಾವಂತರಿಗಾಗಿ ನೃತ್ಯ ಸ್ಪರ್ಧೆ, ಡ್ಯಾನ್ಸ್ ಸ್ಪರ್ಧೆ ಮಾಡಿದ್ದು 50ಕ್ಕೂ ಹೆಚ್ಚು ಕಲಾವಿದರು ಭಾಗಿಯಾದರು. ಮ್ಯೂಸಿಕ್ ನೈಟ್, ಡ್ಯಾನ್ಸ್ ಎಕ್ಸ್ಪ್ರೆಸ್, ಕಾಮಿಡಿ ಶೋಗಳ ಮೂಲಕ ಸಾವಿರಾರು ಜನರಿಗೆ ಮನೋರಂಜನೆ ನೀಡಲಾಗಿದ್ದು, ಮಲೆನಾಡಿನಲ್ಲಿ ಒಂದು ಅತ್ಯುತ್ತಮ ಕಾರ್ಯಕ್ರಮವಾಗಿ ಹೊರಹೊಮ್ಮಿತು.
ಸ್ಥಳೀಯ 50ಕ್ಕೂ ಹೆಚ್ಚು ಕಲಾವಿದರಿಗೆ ಸಂಗೀತ, ನೃತ್ಯ, ಕಾಮಿಡಿ ಸೇರಿದಂತೆ ವಿವಿಧ ಪ್ರಕಾರಗಳಲ್ಲಿ ಅವಕಾಶವನ್ನು ನೀಡಲಾಯಿತು.

ಮಲೆನಾಡಲ್ಲಿ ಇತಿಹಾಸ ಸೃಷ್ಟಿ

ಮೂರು ದಿನಗಳ ಕಾಲ ನಡೆದ ಈ ಅದ್ದೂರಿ ಕಾರ್ಯಕ್ರಮವು ಮಲೆನಾಡಿನಲ್ಲಿ ಒಂದು ಇತಿಹಾಸವನ್ನು ಸೃಷ್ಟಿಸಿದ್ದು ರಾಜ್ಯಮಟ್ಟದ ಕಾರ್ಯಕ್ರಮವಾಗಿ ಹೊರಹೊಮ್ಮಿತು. ಎಲ್ಲಾ ಕ್ಷೇತ್ರಗಳನ್ನು ಒಳಗೊಂಡಂತೆ ಮಾದರಿ ಕಾರ್ಯಕ್ರಮವಾಗಿದ್ದು ಭಾಗವಹಿಸಿದ ಎಲ್ಲಾ ಗಣ್ಯರು ಸಾಂಸ್ಕೃತಿಕ ಕ್ಷೇತ್ರದ ಕಲಾವಿದರು ಮೆಚ್ಚುಗೆ ವ್ಯಕ್ತಪಡಿಸಿದರು. ಮೂರು ದಿನಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ರಾಜಕೀಯ, ಧಾರ್ಮಿಕ, ಸಾಂಸ್ಕೃತಿಕ, ಕಲೆ, ಉದ್ಯಮ, ಸಹಕಾರಿ, ಕೃಷಿ, ಸಾಮಾಜಿಕ ಕ್ಷೇತ್ರದ ಗಣ್ಯರು ಸದಸ್ಯರು ಭಾಗಿಯಾದರು. ತೀರ್ಥಹಳ್ಳಿ ಸೇರಿದಂತೆ ಮಲೆನಾಡಿನ ಅನೇಕ ಸಂಘಟನೆಗಳು ಸಂಘ ಸಂಸ್ಥೆಗಳು, ಪದಾಧಿಕಾರಿಗಳು ಭಾಗಿಯಾಗಿದ್ದವು. ಸುಮಾರು 6000 ದಿಂದ 7000 ಜನ ಮೂರು ದಿನದ ಕಾರ್ಯಕ್ರಮದಲ್ಲಿ ಭಾಗಿಯಾದರು. ಕಾರ್ಯಕ್ರಮಕ್ಕೆ ಸಹಕರಿಸಿದ ಸರ್ವರಿಗೂ ಧನ್ಯವಾದಗಳು.

 

ನಮ್ಮೂರ್ ಎಕ್ಸ್ಪ್ರೆಸ್ ಮಲ್ನಾಡೋತ್ಸವದ ಎಲ್ಲಾ ಕಾರ್ಯಕ್ರಮಗಳು ನಮ್ಮೂರ್ ಎಕ್ಸ್ಪ್ರೆಸ್ ಫೇಸ್ಬುಕ್, ನಮ್ಮೂರ್ ಎಕ್ಸ್ಪ್ರೆಸ್ ಇನ್ಸ್ಟಾಗ್ರಾಮ್, ನಮ್ಮೂರ್ ಎಕ್ಸ್ ಪ್ರೆಸ್ ಯೂಟ್ಯೂಬ್ ನಲ್ಲಿ ಪ್ರಸಾರವಾಗಿದೆ. ಎಲ್ಲಾ ಮಾಹಿತಿಯನ್ನು ನಮ್ಮೂರ್ ಎಕ್ಸ್ಪ್ರೆಸ್ ವೆಬ್ಸೈಟ್ನಲ್ಲಿ ಕೂಡ ಮಲ್ನಾಡೋತ್ಸವ ಎಂಬ ವಿಭಾಗದಲ್ಲಿ ಪ್ರಕಟ ಮಾಡಲಾಗುತ್ತಿದೆ.

Categories
ಬೆಂಗಳೂರು

ಇನ್ನು ಮುಂದೆ ಸರ್ಕಾರದಿಂದಲೇ 108 ಆ್ಯಂಬುಲೆನ್ಸ್‌ ಗಳ ನಿರ್ವಹಣೆ

ಇನ್ನು ಮುಂದೆ ಸರ್ಕಾರದಿಂದಲೇ 108 ಆ್ಯಂಬುಲೆನ್ಸ್‌ ಗಳ ನಿರ್ವಹಣೆ
– 104 ಸಹಾಯವಾಣಿ ಸೇವೆ ಒದಗಿಸಲು ನಿರ್ಧಾರ
– 2-3 ತಿಂಗಳಲ್ಲಿ ಸರ್ಕಾರದಿಂದ ನಿರ್ವಹಣೆ ಶುರು

NAMMUR EXPRESS NEWS
ಬೆಂಗಳೂರು : ರಾಜ್ಯದಲ್ಲಿ ಆಂಬ್ಯುಲೆನ್ಸ್‌ ಸೇವೆಯನ್ನು ಖಾಸಗಿ ಹಿಡಿತದಿಂದ ತಪ್ಪಿಸಲು ಸರ್ಕಾರದಿಂದಲೇ 108 ಆಂಬ್ಯುಲೆನ್ಸ್‌ ಸೇವೆ ಹಾಗೂ 104 ಸಹಾಯವಾಣಿ ಸೇವೆ ಒದಗಿಸಲು ನಿರ್ಧರಿಸಲಾಗಿದೆ. ಚಾಮರಾಜನಗರದಲ್ಲಿ ಪ್ರಾಯೋಗಿಕ ಕಾರ್ಯಾಚರಣೆ ಯಶಸ್ವಿಯಾಗಿದ್ದು, ಸದ್ಯದಲ್ಲೇ ರಾಜ್ಯಾದ್ಯಂತ ವಿಸ್ತರಣೆ ಮಾಡಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್‌ ಹೇಳಿದ್ದಾರೆ.

ಈ ಮೊದಲು ಸಹ ಆಂಬ್ಯುಲೆನ್ಸ್‌ಗಳು ಸರ್ಕಾರದ್ದೇ ಆಗಿದ್ದವು. ಅವುಗಳ ನಿರ್ವಹಣೆ ಮಾತ್ರ ಖಾಸಗಿ ಸಂಸ್ಥೆಗಳಿಗೆ ವಹಿಸಲಾಗುತ್ತಿತ್ತು. ಗುತ್ತಿಗೆ ಅವಧಿ ಮುಗಿದಿದ್ದು, ಹಲವು ವರ್ಷಗಳಿಂದ ಮರು ಟೆಂಡರ್‌ಗೆ ಪ್ರಯತ್ನಿಸಿದರೂ ಹಲವು ಕಾರಣಗಳಿಗೆ ಆಗುತ್ತಿಲ್ಲ. ಹೀಗಾಗಿ ರಾಜ್ಯ ಸರ್ಕಾರದ (ಆರೋಗ್ಯ ಇಲಾಖೆ) ವತಿಯಿಂದಲೇ ಸಾಫ್ಟ್‌ವೇರ್‌ ವ್ಯವಸ್ಥೆ ಮಾಡಿಕೊಂಡು ನಾವೇ ಆಂಬ್ಯುಲೆನ್ಸ್‌ಗಳ ನಿರ್ವಹಣೆಗೆ ನಿರ್ಧರಿಸಿದ್ದೇವೆ. ಇದರಿಂದ ನೂರಾರು ಕೋಟಿ ರು. ಹಣವೂ ಉಳಿತಾಯವಾಗಲಿದೆ ಎಂದು ಹೇಳಿದರು. ಬೆಂಗಳೂರಿನಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, 108 ಅಂಬ್ಯುಲೆನ್ಸ್‌ಗಳನ್ನು ಇಲ್ಲಿಯವರೆಗೆ ಖಾಸಗಿ ಏಜನ್ಸಿಗಳು ನಿರ್ವಹಿಸುತ್ತಿದ್ದವು. ಈ ವ್ಯವಸ್ಥೆಯಲ್ಲಿ ಸಾಕಷ್ಟು ಸಮಸ್ಯೆಗಳಿದ್ದವು. ಆಂಬ್ಯುಲೆನ್ಸ್‌ ಸೇವೆ ಸಾರ್ವಜನಿಕರ ಆರೋಗ್ಯ ರಕ್ಷಣೆಯಲ್ಲಿ ಬಹು ಮುಖ್ಯವಾದದ್ದು. ಖಾಸಗಿ ಏಜೆನ್ಸಿಯಿಂದ ಇದರ ನಿರ್ವಹಣೆ ಸಮರ್ಪಕವಾಗಿ ನಡೆಯುತ್ತಿರಲಿಲ್ಲ. ಸರ್ಕಾರದಿಂದ ಏಜೆನ್ಸಿಗೆ ಹಣ ಪಾವತಿಯಾದರೂ ಆಂಬ್ಯುಲೆನ್ಸ್‌ ಸಿಬ್ಬಂದಿಗೆ ಸರಿಯಾದ ಸಮಯಕ್ಕೆ ವೇತನ ಪಾವತಿಯಾಗುತ್ತಿರಲಿಲ್ಲ. ಕೊನೆಗೆ ಸರ್ಕಾರ ಹಲವು ಬಾರಿ ಮಧ್ಯಪ್ರವೇಶಿಸಿ ಆಂಬ್ಯುಲೆನ್ಸ್‌ ಚಾಲಕರ ಸಮಸ್ಯೆ ಬಗೆಹರಿಸಬೇಕಾಗಿತ್ತು.‌ ಇದೀಗ ಸರ್ಕಾರವೇ ಆಂಬ್ಯುಲೆನ್ಸ್‌ ನಿರ್ವಹಣೆ ಮಾಡುವುದರಿಂದ ಇನ್ನು ಮುಂದೆ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

108 ಆಂಬ್ಯುಲೆನ್ಸ್‌ ಜತೆಗೆ ರಾಜ್ಯ ಸರ್ಕಾರದ ಆಂಬ್ಯುಲೆನ್ಸ್‌ಗಳನ್ನೂ ಇದೇ ಸೇವೆಗೆ ವಿಲೀನ ಮಾಡಿಕೊಳ್ಳಲಾಗುವುದು. ರಾಜ್ಯಮಟ್ಟದಲ್ಲಿ ಒಂದು ನಿಯಂತ್ರಣ ಕೊಠಡಿ ವ್ಯವಸ್ಥೆ ಮಾಡಿ ಜಿಲ್ಲಾಮಟ್ಟದಲ್ಲಿ ಒಂದು ನಿಯಂತ್ರಣ ಕೊಠಡಿ ಸ್ಥಾಪಿಸಲಾಗುವುದು. 2-3 ತಿಂಗಳಲ್ಲಿ ಎಲ್ಲಾ ಜಿಲ್ಲೆಗಳಲ್ಲೂ ಸಿದ್ಧತೆ ಪೂರ್ಣಗೊಳಿಸಿ ಚಾಲನೆ ನೀಡಲಾಗುವುದು ಎಂದು ದಿನೇಶ್ ಗುಂಡೂರಾವ್‌ ತಿಳಿಸಿದರು. 108 ಆಂಬ್ಯುಲೆನ್ಸ್‌ ಮಾಲಿಕತ್ವ ಸರ್ಕಾರದ ಬಳಿ ಇದೆ. ಆಂಬ್ಯುಲೆನ್ಸ್‌ ಡಿಸೇಲ್‌ನಿಂದ ಹಿಡಿದು ವಾಹನ ಚಾಲಕರ ವೇತನವನ್ನು ಕೂಡಾ ಸರ್ಕಾರವೇ ನೀಡುತ್ತಿತ್ತು. ಕೇವಲ ಒಂದು ಕಮಾಂಡ್ ಸೆಂಟರ್ ಮೂಲಕ ಖಾಸಗಿ ಏಜನ್ಸಿಯವರು ನಿರ್ವಹಣೆ ಮಾಡುತ್ತಿದ್ದರು. ಏಜೆನ್ಸಿ ಬದಲು ಆರೋಗ್ಯ ಇಲಾಖೆಯೇ ನಡೆಸಿದರೆ ಸರ್ಕಾರದ ಬೊಕ್ಕಸಕ್ಕೂ ನೂರಾರು ಕೋಟಿ ಹಣ ಉಳಿತಾಯವಾಗಲಿದೆ. ಅಲ್ಲದೆ ವ್ಯವಸ್ಥೆಯಲ್ಲೂ ಸುಧಾರಣೆ ತರಬಹುದು ಎಂಬ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.

Categories
ಕರಾವಳಿ

ಬಂಟ್ವಾಳದಲ್ಲಿ ದ್ವಿಚಕ್ರ ವಾಹನಕ್ಕೆ ಕಾರು ಢಿಕ್ಕಿ, ಸವಾರ ದಾರುಣ ಸಾವು

ಕರಾವಳಿ ಟಾಪ್ ನ್ಯೂಸ್

ಬಂಟ್ವಾಳದಲ್ಲಿ ದ್ವಿಚಕ್ರ ವಾಹನಕ್ಕೆ ಕಾರು ಢಿಕ್ಕಿ, ಸವಾರ ದಾರುಣ ಸಾವು

– ತೆಕ್ಕಟ್ಟೆ: ಒಂದೇ ಕುಟುಂಬದ ಮೂವರು ಆತ್ಮಹತ್ಯೆ, ತಾಯಿ ಗಂಭೀರ, ತಂದೆ-ಮಗ ಸಾವು!
– ಉಡುಪಿ: ಕುಡಿದ ಮತ್ತಿನಲ್ಲಿ ರಂಪಾಟ, ಮನೆಗೆ ಬೆಂಕಿಯಿಟ್ಟ ಭೂಪ

NAMMUR EXPRESS NEWS
ಬಂಟ್ವಾಳ: ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದ ವಿದ್ಯಾರ್ಥಿಯೋರ್ವನಿಗೆ ಕಾರು ಢಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ ಘಟನೆ ಬಂಟ್ವಾಳದಲ್ಲಿ ನಡೆದಿದೆ‌.
ಇಪ್ಪತ್ತೆರಡು ವರ್ಷದ ಮಂಚಿ ಕುಕ್ಕಾಜೆ ನಿವಾಸಿ ಲಿಖಿತ್ ಸಾವನ್ನಪ್ಪಿದ ಮೃತ ದುರ್ದೈವಿ. ಈತ ರಜೆಯಲ್ಲಿದ್ದ ಕಾರಣ ಸ್ಟೇಜ್ ಡೆಕೋರೇಷನ್ ಕೆಲಸಕ್ಕೆ ಹೋಗಿದ್ದು ಬಿಸಿರೋಡಿನಿಂದ ಮನೆ ಕಡೆಗೆ ಸಂಚರಿಸುತ್ತಿದ್ದ ವೇಳೆ ಪಾಣೆಮಂಗಳೂರು ಎಂಬಲ್ಲಿ ಅತೀ ವೇಗವಾಗಿ ಬಂದ ಕಾರು ಢಿಕ್ಕಿಯಾಗಿ ಈ ಘಟನೆ ನಡೆದಿದೆ.
ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಸ್ಪಂದಿಸದೆ ಸಾವನ್ನಪ್ಪಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

– ತೆಕ್ಕಟ್ಟೆ: ಒಂದೇ ಕುಟುಂಬದ ಮೂವರು ಆತ್ಮಹತ್ಯೆ, ತಾಯಿ ಗಂಭೀರ, ತಂದೆ-ಮಗ ಸಾವು!

ತೆಕ್ಕಟ್ಟೆ: ಸಾಲ ಬಾಧೆ ತಾಳಲಾರದೆ ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಯತ್ನಿಸಿದ್ದು, ತಂದೆ ಮಗ ಸಾವನ್ನಪ್ಪಿ, ತಾಯಿ ಗಂಭೀರವಾಗಿರುವ ಘಟನೆ ಬೆಳಿಗ್ಗೆ ನಡೆದಿದೆ.
ಮಗ ಆತ್ಮಹತ್ಯೆ ಮಾಡಿಕೊಳ್ಳಲು ಬಾವಿಗೆ ಹಾರಿರುವ ಬಗ್ಗೆ ತಿಳಿದು ತಂದೆಯೂ ಬಾವಿಗೆ ಹಾರಿದ್ದಾರೆ. ಆಗ ತಂದೆ ಮಗ ಸಾವನ್ನಪ್ಪಿದ್ದಾರೆ. ಗಂಡ ಮತ್ತು ಮಗ ಬಾವಿಗೆ ಹಾರಿರುವ ವಿಷಯ ತಿಳಿದ ತಾಯಿಯೂ ಬಾವಿಗೆ ಹಾರಿದ್ದು ಅವರ ಆಕ್ರಂದನ ಕೇಳಿ ಸ್ಥಳೀಯರು ರಕ್ಷಣೆಗೆ ಧಾವಿಸಿದ್ದಾರೆ.
ಮೃತರನ್ನು ತೆಕ್ಕಟ್ಟೆಯ ಕಂಚುಗರುಬೆಟ್ಟು ನಿವಾಸಿಗಳಾಗಿದ್ದು, ಅಂಕದ ಕಟ್ಟೆ ಪೆಟ್ರೋಲ್ ಬಂಕ್ ಉದ್ಯೋಗಿ ಮಾಧವ ದೇವಾಡಿಗ (56) ಮತ್ತು ಅವರ ಮಗ ಪ್ರಸಾದ್ ದೇವಾಡಿಗ (22) ಎಂದು ಗುರುತಿಸಲಾಗಿದೆ. ತಾಯಿ ತಾರ ದೇವಾಡಿಗ ಪರಿಸ್ಥಿತಿ ಗಂಭೀರವಾಗಿದೆ.
ಮನೆಯಲ್ಲಿ ಡೆತ್ ನೋಟ್ ಸಿಕ್ಕಿದ್ದು ಕುಟುಂಬಕ್ಕೆ ಸಾಲಭಾದೆ ಕಾಡುತ್ತಿದ್ದು, ಮರ್ಯಾದೆಗೆ ಅಂಜಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.

– ಉಡುಪಿ: ಕುಡಿದ ಮತ್ತಿನಲ್ಲಿ ರಂಪಾಟ, ಮನೆಗೆ ಬೆಂಕಿಯಿಟ್ಟ ಭೂಪ

ಉಡುಪಿ: ಮಧ್ಯ ಸೇವನೆಯಿಂದ ಅಮಲೇರಿದ ಕುಡುಕನೊಬ್ಬ, ತ‌ನ್ನದೆ ಮನೆಗೆ ಬೆಂಕಿ‌ ಹಚ್ಚಿದ ಘಟನೆಯು, ನಗರದ ಹೊರವಲಯದ ಚಿಟ್ಪಾಡಿಯಲ್ಲಿ ಸಂಭವಿಸಿದೆ
ಕುಡುಕನ ರಂಪಾಟ, ಉಗ್ರ ವರ್ತನೆ ಎದುರಿಸಲು ಅಸಹಾಯಕರಾದ ಮನೆಯವರು, ಸಮಾಜಸೇವಕ ನಿತ್ಯಾನಂದ‌ ಒಳಕಾಡುವರಲ್ಲಿ ನೆರವಿಗೆ ಬರುವಂತೆ ಹೇಳಿಕೊಂಡಿದ್ದಾರೆ.
ತಕ್ಷಣ ಸ್ಥಳಕ್ಕೆ ಬಂದ ಒಳಕಾಡುವರು ಅಗ್ನಿಶಾಮಕ ದಳದವರಿಗೆ ವಿಷಯ ಮುಟ್ಟಿಸಿದ್ದಾರೆ. ಘಟನಾ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸಿ ದೊಡ್ಡ ಪ್ರಮಾಣದಲ್ಲಿ ಆಗಬಹುದಾದ ಅಗ್ನಿದುರಂತವನ್ನು ತಪ್ಪಿಸಿದ್ದಾರೆ. ಬಳಿಕ ಒಳಕಾಡುವರು ಕುಡುಕನ‌‌ ಮನವೊಲಿಸಿ ಮಧ್ಯವರ್ಜನ‌ ಕೇಂದ್ರಕ್ಕೆ ದಾಖಲುಪಡಿಸಿದ್ದಾರೆ.

Categories
ರಾಷ್ಟ್ರೀಯ ವಾರ್ತೆ

ಭಾರತ-ಮಾಯನ್ಮಾರ್ ಗಡಿಯ ಬಳಿ 10 ಉಗ್ರರನ್ನು ಹೊಡೆದುರುಳಿಸಿದ ಸೇನೆ

ಭಾರತ-ಮಾಯನ್ಮಾರ್ ಗಡಿಯ ಬಳಿ 10 ಉಗ್ರರನ್ನು ಹೊಡೆದುರುಳಿಸಿದ ಸೇನೆ

* ಉಗ್ರರನ್ನು ಹುಡುಕಿ ಹುಡುಕಿ ಹೊಡೆಯುತ್ತಿರುವ ಭಾರತೀಯ ಸೇನೆ
* ಉಗ್ರರ ನೆಲೆಯಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶಕ್ಕೆ

NAMMUR EXPRESS NEWS
ಮಣಿಪುರ: ಭಾರತದೊಳಗೆ ನುಗ್ಗಿದ ಪಾಕ್ ಬೆಂಬಲಿತ ಉಗ್ರರನ್ನು ಕಾಶ್ಮೀರದ ಪುಲ್ವಾಮಾದಲ್ಲಿ ಭಾರತೀಯ ಸೇನೆಯಿಂದ ಬೇಟೆಯಾಡುತ್ತಿರುವ ಬೆನ್ನಲ್ಲಿಯೇ, ಮಾಯನ್ಮಾರ್ ಗಡಿಯಲ್ಲಿ ಕಾಣಸಿಕೊಂಡು ಉಪಟಳ ನೀಡುತ್ತಿದ್ದ 10 ಉಗ್ರರನ್ನು ಅಸ್ಸಾಂ ರೈಫಲ್ಸ್ ಪಡೆಯು ಮಣಿಪುರದಲ್ಲಿ ಹತ್ಯೆಗೈದಿದೆ.
ಮಣಿಪುರದ ಚಂದೇಲ್ ಜಿಲ್ಲೆಯಲ್ಲಿ ಬುಧವಾರ ಅಸ್ಸಾಂ ರೈಫಲ್ಸ್ ಮತ್ತು ಉಗ್ರಗಾಮಿಗಳ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಕನಿಷ್ಠ 10 ಉಗ್ರಗಾಮಿಗಳನ್ನು ಹತ್ಯೆ ಮಾಡಲಾಗಿದೆ. ಈ ಕಾರ್ಯಾಚರಣೆ ಇನ್ನೂ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾರತ-ಮಾಯನ್ಮಾರ್ ಗಡಿಯ ಬಳಿ ಇರುವ ನ್ಯೂ ಸಮತಲ್ ಗ್ರಾಮದ ಸಮೀಪ ಶಸ್ತ್ರಸಜ್ಜಿತ ಉಗ್ರರ ಇರುವಿಕೆ ಬಗ್ಗೆ ಗುಪ್ತಚರ ಮಾಹಿತಿ ಸಿಕ್ಕ ನಂತರ ಈ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಸೇನೆಯ ಪೂರ್ವ ಕಮಾಂಡ್ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ ನಲ್ಲಿ ತಿಳಿಸಿದೆ. ಅಸ್ಸಾಂ ರೈಫಲ್ಸ್ ತಂಡವು ತಕ್ಷಣವೇ ಸ್ಥಳಕ್ಕೆ ತಲುಪಿ ಕಾರ್ಯಾಚರಣೆ ನಡೆಸಿತು. ಭದ್ರತಾ ಪಡೆಗಳು ಇನ್ನೂ ಪ್ರದೇಶದಲ್ಲಿ ಶೋಧ ಕಾರ್ಯ ಮುಂದುವರೆಸಿವೆ.
* 10 ಉಗ್ರರ ಹತ್ಯೆ,ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶಕ್ಕೆ
ಮಣಿಪುರದ ಚಂದೇಲ್ ಜಿಲ್ಲೆಯಲ್ಲಿ ಶೋಧ ಕಾರ್ಯಾಚರಣೆಯ ಸಂದರ್ಭದಲ್ಲಿ ಶಂಕಿತ ಉಗ್ರಗಾಮಿಗಳು ಭದ್ರತಾ ಪಡೆಗಳ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದರು. ಪ್ರತಿಯಾಗಿ ಯೋಧರು ಕಾರ್ಯತಂತ್ರದಿಂದ ಕಾರ್ಯಾಚರಣೆ ನಡೆಸಿದ್ದು, 10 ಉಗ್ರಗಾಮಿಗಳನ್ನು ಹತ್ಯೆ ಮಾಡಲಾಗಿದೆ. ಕಾರ್ಯಾಚರಣೆಯ ಭಾಗವಾಗಿ ಭದ್ರತಾ ಪಡೆಗಳು ಪ್ರದೇಶವನ್ನು ಸುತ್ತುವರೆದಿದ್ದವು. ಆಗ ಅಡಗಿಕೊಂಡಿದ್ದ ಉಗ್ರರು ಗುಂಡಿನ ದಾಳಿ ನಡೆಸಿದರು, ಇದಕ್ಕೆ ತಕ್ಕ ಪ್ರತ್ಯುತ್ತರ ನೀಡಲಾಯಿತು. ಸೇನೆಯು ಈ ಕಾರ್ಯಾಚರಣೆಯನ್ನು ನಿಖರ ಮತ್ತು ಯೋಜಿತ ಎಂದು ಬಣ್ಣಿಸಿದೆ.
ಎನ್‌ಕೌಂಟರ್ ನಂತರ ಸ್ಥಳದಿಂದ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಇನ್ನೂ ಮುಂದುವರೆದಿದೆ.

Categories
ದೈವಿಕ ಮಾಹಿತಿ ಸುದ್ದಿ

ಸಾಲದ ಚಿಂತೆ ಬಿಡಿ! ಕೇವಲ 9 ದಿನದಲ್ಲಿ ಸಾಲದ ಸಮಸ್ಯೆಗೆ ಪರಿಹಾರ ಬೇಕೇ?

ಸಾಲದ ಚಿಂತೆ ಬಿಡಿ! ಕೇವಲ 9 ದಿನದಲ್ಲಿ ಸಾಲದ ಸಮಸ್ಯೆಗೆ ಪರಿಹಾರ ಬೇಕೇ?

NAMMUR EXPRESS NEWS
ಭೂಮಿಯ ಮೇಲೆ ಇರುವಂತಹ ಪ್ರತಿಯೊಬ್ಬರೂ ಕೂಡ ಎಲ್ಲಾ ಸನ್ನಿವೇಶದಲ್ಲಿಯೂ ಎಲ್ಲಾ ಪರಿಸ್ಥಿತಿಯಲ್ಲಿಯೂ ಕೂಡ ಒಂದೇ ರೀತಿಯಾಗಿ ಇರಲು ಸಾಧ್ಯವಿಲ್ಲ. ಹೌದು ಒಂದಲ್ಲ ಒಂದು ಸಮಯದಲ್ಲಿ ಸಾಲ ಮಾಡುವಂತಹ ಪರಿಸ್ಥಿತಿ ಬರುತ್ತದೆ ಆದರೆ ಕೆಲವೊಂದಷ್ಟು ಜನ ಪಡೆದಂತಹ ಸಾಲವನ್ನು ಮರಳಿ ತೀರಿಸುತ್ತಾರೆ.
ಇನ್ನು ಕೆಲವೊಂದಷ್ಟು ಜನ ಅವರು ಸ್ವಲ್ಪ ಹಣ ಪಡೆದಿದ್ದರೂ ಅದನ್ನು ಮರುಪಾವತಿಸಲು ಸಾಧ್ಯವಾಗುತ್ತಿರುವುದಿಲ್ಲ. ಯಾವುದಾದರೂ ಒಂದು ಕಾರಣದಿಂದ ಅವರು ಸಾಲವನ್ನು ತೀರಿಸಲು ಸಾಧ್ಯವಾಗದೆ ಸಾಲಕೊಟ್ಟವರ ಮುಂದೆ ತಲೆ ಎತ್ತಿ ನಡಿಯಲು ಭಯಪಡುವಂತಹ ಪರಿಸ್ಥಿತಿಯನ್ನು ಅವರು ಎದುರಿಸಬೇಕಾಗುತ್ತದೆ.
ಹಲವಾರು ರೀತಿಯ ಕಾರಣಗಳಿರಬಹುದು ಹಲವಾರು ಸಮಸ್ಯೆಗಳು ಇರಬಹುದು ಹಣ ಕೊಡಬೇಕು ಎಂದು ಕೊಂಡರು ಕೂಡ ಅವರಿಗೆ ಹಣವನ್ನು ಕೊಡಲು ಸಾಧ್ಯವಾಗುತ್ತಿರುವುದಿಲ್ಲ. ಹೀಗೆ ಹಲವಾರು ರೀತಿಯ ಸಮಸ್ಯೆ ಗಳನ್ನು ಅವರು ಅನುಭವಿಸುತ್ತಿರುತ್ತಾರೆ. ಆದರೆ ಕೆಲವೊಂದಷ್ಟು ತಂತ್ರಗಳನ್ನು ಮಾಡುವುದರ ಮೂಲಕ ನೀವು ಸಾಲಗಳನ್ನು ಮರುಪಾವತಿಸಲು ಸಾಧ್ಯವಾಗುತ್ತದೆ.

ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಸಹ ಗುಲಗಂಜಿಯ ಪರಿಚಯ ಇದೆ ಹೌದು ಇದರಲ್ಲಿ ಕೆಂಪು ಗುಲಗಂಜಿ ಹಾಗೂ ಹಸಿರು ಗುಲಗಂಜಿಯನ್ನು 5 ಅಥವಾ 10 ತೆಗೆದುಕೊಳ್ಳಬೇಕು. ಆನಂತರ ಇದರ ಜೊತೆ ಕವಡೆ ಅಥವಾ ಗೋಮತಿ ಚಕ್ರ ಇದನ್ನು ಸಹ ಗ್ರಂಥಿಗೆ ಅಂಗಡಿಯಲ್ಲಿ ತರಬೇಕು
ಈ ರೀತಿ ಹಸಿರು ಗುಲಗಂಜಿ ಕೆಂಪು ಗುಲಗಂಜಿ, ಕವಡೆ ಅಥವಾ ಗೋಮತಿ ಚಕ್ರ ಇಷ್ಟನ್ನು ಕೂಡ ಒಂದು ಮರದ ಬಾಕ್ಸ್ ನಲ್ಲಿ ಇಟ್ಟು ಅದಕ್ಕೆ ಅರಿಶಿನ ಕುಂಕುಮ ಇಟ್ಟು ಪೂಜೆ ಮಾಡಿ ಆನಂತರ ಆ ಒಂದು ಬಾಕ್ಸ್ ಅನ್ನು ಹಣ ಇಡುವ ಸ್ಥಳದಲ್ಲಿ ಇಡಬೇಕು.
ಈ ರೀತಿ ಮಾಡುವುದರಿಂದ ನಿಮ್ಮ ಬಳಿ ಹಣಕಾಸು ಯಥೇಚ್ಛವಾಗಿ ಶೇಖರಣೆಯಾಗುತ್ತದೆ ವ್ಯರ್ಥವಾಗಿ ಹಣಕಾಸು ಯಾವುದಕ್ಕೂ ಕೂಡ ಖರ್ಚಾಗುವುದಿಲ್ಲ. ಈ ರೀತಿ ಈ ವಿಧಾನ ಮಾಡುವುದರ ಮೂಲಕ ಹಣದ ಆಕರ್ಷಣೆ ಮಾಡು ವುದರ ಜೊತೆಗೆ ನೀವು ಬೇರೆಯವರಿಂದ ಪಡೆದಂತಹ ಸಾಲವನ್ನು ಸಹ ಯಾವುದೇ ತೊಂದರೆ ಇಲ್ಲದೆ ಮರು ಪಾವತಿಸಬಹುದು.
ಆದ್ದರಿಂದ ಈ ಒಂದು ತಂತ್ರವನ್ನು ಪ್ರತಿಯೊಬ್ಬರೂ ಕೂಡ ಮಾಡಿಕೊಳ್ಳುವುದು ತುಂಬಾ ಒಳ್ಳೆಯದು. ಕೆಲವೊಂದಷ್ಟು ತಂತ್ರಗಳಿಗೆ ಬಹಳ ವಿಶೇಷವಾದ ಶಕ್ತಿ ಇದ್ದು ಅಂತಹ ತಂತ್ರಗಳಲ್ಲಿ ಇದು ಕೂಡ ಒಂದಾಗಿದೆ.

ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564

Categories
ಕೊಪ್ಪ

ಕೊಪ್ಪದಲ್ಲಿನ ಕುಡಿಯುವ ನೀರು ಆರೋಗ್ಯಕ್ಕೆ ಅಪಾಯಕಾರಿ

ಕೊಪ್ಪದಲ್ಲಿನ ಕುಡಿಯುವ ನೀರು ಆರೋಗ್ಯಕ್ಕೆ ಅಪಾಯಕಾರಿ
* ಜಿಲ್ಲಾ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯದಿಂದ ಭಯಾನಕ ವರದಿ
* ವರದಿಯಿಂದ ಸಾರ್ವಜನಿಕರಲ್ಲಿ ಆತಂಕ, ಕೊಪ್ಪವನ್ನು ವೀರಭದ್ರನೇ ಕಾಪಾಡಬೇಕು

NAMMMUR EXPRESS NEWS
ಕೊಪ್ಪ: ನಗರದ ಎಲ್ಲೆಡೆ ದೊರೆಯುವ ಕುಡಿಯುವ ನೀರು ಆರೋಗ್ಯಕ್ಕೆ ಅಪಾಯಕಾರಿ ಎಂದು ಜಿಲ್ಲಾ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯದ ಭಯಾನಕ ವರದಿ ನೀಡಿದೆ. ಇದರಿಂದ ಕೊಪ್ಪದ ಸಾರ್ವಜನಿಕರು ನಲ್ಲಿಯಲ್ಲಿ ಬರುವ ಕುಡಿಯುವ ನೀರನ್ನು ಕುಡಿಯುವ ಮುನ್ನ ಯೋಚಿಸಬೇಕಿದೆ.
ಇತ್ತೀಚೆಗೆ ನಲ್ಲಿಯಲ್ಲಿ ನೀರು ಕಲ್ಮಶಗಳನ್ನು ಹೊತ್ತು ಬಂದಾಗ ಸಾರ್ವಜನಿಕರು ಗಾಬರಿಯಾಗಿ, ಕುಡಿಯುವ ನೀರನ್ನು ಪರೀಕ್ಷೆಗೆ ಒಳಪಡಿಸಲು ಒತ್ತಾಯಿಸಿದ್ದರು, ಈಗ ಅದರ ವರದಿ ಬಂದಿದೆ.
ಮತ್ತೊಮ್ಮೆ ಕೊಳಕು ನೀರನ್ನು ವಿತರಿಸುವಲ್ಲಿನ ಬೇಜವಬ್ದಾರಿ, ನಿರ್ಲಕ್ಷ, ನಿಷ್ಕ್ರಿಯತೆಯನ್ನು ಪಟ್ಟಣ ಪಂಚಾಯ್ತಿ ತೋರಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಈಗ ನೀರಿನಲ್ಲಿ ಅಪಾಯಕಾರಿ ಮಟ್ಟದಲ್ಲಿರುವ ಬ್ಯಾಕ್ಟೀರಿಯಗಳ ಕರ್ಮಕಾಂಡ ಬಯಲಾಗಿದೆ.
ಇನ್ನಾದರೂ ಕೊಪ್ಪದ ಮೂಲಭೂತ ಸೌಕರ್ಯಗಳ ವಿಷಯದಲ್ಲಿ ಗೌರವಾನ್ವಿತ ಪಂಚಾಯತಿ ಸದಸ್ಯರು ಮತ್ತು ಗೌರವಾನ್ವಿತ ಅಧಿಕಾರಿಗಳು ಏನಾದರು ಕ್ರಮ ಕೈಗೊಳ್ಳುತ್ತಾರಾ ಎಂದು ಕಾದುನೋಡಬೇಕಿದೆ.
ಈ ವರದಿಯಿಂದ ಆತಂಕಗೊಂಡ ಸಾರ್ವಜನಿಕರು ಕೊಪ್ಪವನ್ನು ಕ್ಷೇತ್ರ ದೇವರಾದ ವೀರಭದ್ರನೇ ಕಾಪಾಡಬೇಕು ಎಂದು ಪ್ರಾರ್ಥಿಸಿದ್ದಾರೆ.

Categories
ಹೆಲ್ತ್ ಎಕ್ಸ್ಪ್ರೆಸ್

ಆರೋಗ್ಯ ಎಕ್ಸ್ ಪ್ರೆಸ್! | ಅತಿಯಾಗಿ ಆವಕಾಡೊ ತಿನ್ನುವುದು ಆರೋಗ್ಯಕ್ಕೆ ಹಾನಿಕಾರಕ!

ಆರೋಗ್ಯ ಎಕ್ಸ್ ಪ್ರೆಸ್!

ಅತಿಯಾಗಿ ಆವಕಾಡೊ ತಿನ್ನುವುದು ಆರೋಗ್ಯಕ್ಕೆ ಹಾನಿಕಾರಕ!

NAMMUR EXPRESS NEWS
ಆವಕಾಡೊವನ್ನು ಸೂಪರ್‍ಫುಡ್‍ ಎಂದು ಪರಿಗಣಿಸಲಾಗಿದೆ. ಇದು ಆರೋಗ್ಯಕರ ಕೊಬ್ಬುಗಳು, ಫೈಬರ್, ಪೊಟ್ಯಾಸಿಯಮ್, ವಿಟಮಿನ್-ಇ ಮತ್ತು ಆಂಟಿ-ಆಕ್ಸಿಡೆಂಟ್‍ಗಳಿಂದ ಸಮೃದ್ಧವಾಗಿದೆ.
ಇದು ಚರ್ಮ, ಹೃದಯ ಮತ್ತು ಜೀರ್ಣಕ್ರಿಯೆಗೆ ತುಂಬಾ ಪ್ರಯೋಜನಕಾರಿಯಾಗಿದೆ. ಇದನ್ನು ವಿಶೇಷವಾಗಿ ಫಿಟ್ ನೆಸ್ ಮತ್ತು ತೂಕ ಇಳಿಸಿಕೊಳ್ಳಲು ಬಯಸುವವರು ತಮ್ಮ ಆಹಾರದಲ್ಲಿ ಸೇರಿಸಿಕೊಳ್ಳುತ್ತಾರೆ. ಆದರೆ ಇದನ್ನು ಅತಿಯಾಗಿ ತಿನ್ನುವುದು ಆರೋಗ್ಯಕ್ಕೆ ಹಾನಿಯನ್ನು ಉಂಟುಮಾಡಬಹುದಂತೆ.
ಅನೇಕ ಜನರು ಪ್ರತಿದಿನ ಒಂದಕ್ಕಿಂತ ಹೆಚ್ಚು ಆವಕಾಡೊಗಳನ್ನು ತಿನ್ನುತ್ತಾರೆ. ಮತ್ತು ಇದು ಅವರ ಆರೋಗ್ಯವನ್ನು ಸುಧಾರಿಸುತ್ತದೆ ಎಂದು ನಂಬುತ್ತಾರೆ. ಆದರೆ ವಾಸ್ತವದಲ್ಲಿ, ಇದು ಕೆಲವು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆಯಂತೆ.

ಜೀರ್ಣಕಾರಿ ಸಮಸ್ಯೆಯನ್ನು ಉಂಟುಮಾಡುತ್ತದೆ

ಆವಕಾಡೊದಲ್ಲಿ ಉತ್ತಮ ಪ್ರಮಾಣದ ಫೈಬರ್ ಇದೆ. ಆದರೆ ಅಗತ್ಯಕ್ಕಿಂತ ಹೆಚ್ಚಿನ ಫೈಬರ್ ತೆಗೆದುಕೊಂಡರೆ ಹೊಟ್ಟೆ ಉಬ್ಬರ, ಅನಿಲ, ಗ್ಯಾಸ್ಟ್ರಿಕ್ ಮತ್ತು ಅತಿಸಾರ ಈ ರೀತಿಯ ಸಮಸ್ಯೆಗಳು ಕಾಡಬಹುದು. ವಿಶೇಷವಾಗಿ ಜೀರ್ಣಾಂಗ ವ್ಯವಸ್ಥೆಯು ಈಗಾಗಲೇ ಸೂಕ್ಷ್ಮವಾಗಿರುವವರು ಇದನ್ನು ತಪ್ಪಿಸಿ. ಆದ್ದರಿಂದ, ಆವಕಾಡೊವನ್ನು ಸಮಪ್ರಮಾಣದಲ್ಲಿ ತಿನ್ನಿ.

ಆವಕಾಡೊದಲ್ಲಿ ಹೆಚ್ಚಿನ ಪ್ರಮಾಣದ ಪೊಟ್ಯಾಸಿಯಮ್ ಇದೆ

ಆವಕಾಡೊದಲ್ಲಿ ಪೊಟ್ಯಾಸಿಯಮ್ ಸಮೃದ್ಧವಾಗಿದೆ. ಇದು ಹೃದಯ ಮತ್ತು ಸ್ನಾಯುಗಳಿಗೆ ಪ್ರಯೋಜನಕಾರಿಯಾಗಿದೆ. ಆದರೆ ದೇಹದಲ್ಲಿ ಹೆಚ್ಚು ಪೊಟ್ಯಾಸಿಯಮ್ ತೆಗೆದುಕೊಳ್ಳುವುದು ಹೈಪರ್ಕಲೇಮಿಯಾ ಅಂದರೆ ಸ್ನಾಯು ದೌರ್ಬಲ್ಯ, ಆಯಾಸ ಮತ್ತು ಅನಿಯಮಿತ ಹೃದಯ ಬಡಿತ ಈ ರೀತಿಯ ಸಮಸ್ಯೆಗಳು ಕಾಡಬಹುದು. ಇದು ಕಿಡ್ನಿ ಸಮಸ್ಯೆ ಇರುವವರಿಗೆ ಬಹಳ ಅಪಾಯಕಾರಿಯಾಗಿದೆ.

ಆವಕಾಡೊ ಅಲರ್ಜಿಯ ಪ್ರತಿಕ್ರಿಯೆಗಳಿಗೆ ಕಾರಣವಾಗುತ್ತದೆ

ಕೆಲವು ಜನರು ಆವಕಾಡೊಗಳಿಂದ ಅಲರ್ಜಿ ಹೊಂದಿರಬಹುದು. ಲ್ಯಾಟೆಕ್ಸ್ ಅಲರ್ಜಿಯಿಂದ ಇದು ಸಂಭವಿಸುತ್ತದೆ. ಹೆಚ್ಚು ಆವಕಾಡೊ ತಿನ್ನುವುದರಿಂದ ತುರಿಕೆ, ಚರ್ಮದ ದದ್ದುಗಳು, ವಾಂತಿ ಮತ್ತು ಕಡಿಮೆ ಉಸಿರಾಡುವಿಕೆ ಸಮಸ್ಯೆಗಳನ್ನು ಉಂಟುಮಾಡಬಹುದು. ಅಂತಹ ಪರಿಸ್ಥಿತಿಯಲ್ಲಿ, ಆವಕಾಡೊವನ್ನು ಸಂಪೂರ್ಣವಾಗಿ ತಪ್ಪಿಸುವುದು ಉತ್ತಮ.

ಮೈಗ್ರೇನ್ ಪ್ರಚೋದಕ

ಆವಕಾಡೊದಲ್ಲಿ ಟೈರಮೈನ್ ಎಂಬ ಅಂಶವಿದೆ. ಇದು ಮೈಗ್ರೇನ್‍ನಿಂದ ಬಳಲುತ್ತಿರುವ ಜನರಿಗೆ ಪ್ರಚೋದಕವಾಗಿ ಕಾರ್ಯನಿರ್ವಹಿಸುತ್ತದೆ. ಇದು ತಲೆನೋವನ್ನು ಹೆಚ್ಚಿಸಬಹುದು. ನೀವು ಆವಕಾಡೊವನ್ನು ಅತಿಯಾಗಿ ಸೇವಿಸಿದರೆ, ನಿಮಗೆ ಹೆಚ್ಚು ವಾಂತಿಯಾಗುವ ಸಾಧ್ಯತೆ ಇದೆ.

ರಕ್ತವನ್ನು ತೆಳುವಾಗಿಸುತ್ತದೆ

ಆವಕಾಡೊದಲ್ಲಿ ವಿಟಮಿನ್-ಕೆ ಸಮೃದ್ಧವಾಗಿದೆ. ಹಾಗಾಗಿ ರಕ್ತ ತೆಳುಗೊಳಿಸುವ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದವರು ಹೆಚ್ಚು ಆವಕಾಡೊವನ್ನು ತಿಂದರೆ ಅದು ಈ ಔಷಧಿಗಳ ಪರಿಣಾಮವನ್ನು ಕಡಿಮೆ ಮಾಡಬಹುದು. ಇದರಿಂದ ರಕ್ತದ ದಪ್ಪವಾಗುತ್ತದೆ. ಮತ್ತು ಹೃದಯಾಘಾತದ ಅಪಾಯ ಕೂಡ ಸಂಭವಿಸಬಹುದು.