Categories
Uncategorized ತೀರ್ಥಹಳ್ಳಿ

ತೀರ್ಥಹಳ್ಳಿ ಸಹ್ಯಾದ್ರಿ ಪ್ರೌಢಶಾಲೆಗೆ ಶೇ 100% ಫಲಿತಾಂಶ

ತೀರ್ಥಹಳ್ಳಿ ಸಹ್ಯಾದ್ರಿ ಪ್ರೌಢಶಾಲೆಗೆ ಶೇ 100% ಫಲಿತಾಂಶ
– ಮತ್ತೊಮ್ಮೆ ಗುಣಾತ್ಮಕ ಫಲಿತಾಂಶದಲ್ಲಿ ತಾಲೂಕಿನಲ್ಲೇ ಮೇಲುಗೈ
– 10 ವಿದ್ಯಾರ್ಥಿಗಳು 600ಕ್ಕಿಂತ ಹೆಚ್ಚು ಅಂಕ ಗಳಿಕೆ

NAMMUR EXPRESS NEWS
ತೀರ್ಥಹಳ್ಳಿ: 2024-25 ನೇ ಶೈಕ್ಷಣಿಕ ಸಾಲಿನ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಪಟ್ಟಣದ ಹೃದಯ ಭಾಗದಲ್ಲಿರುವ ಪ್ರತಿಷ್ಠಿತ ವಿದ್ಯಾಸಂಸ್ಥೆಯಾಗಿರುವ ಸಹ್ಯಾದ್ರಿ ಶಿಕ್ಷಣ ಸಂಸ್ಥೆಯು ಪ್ರತಿ ವರ್ಷದಂತೆ ಈ ಬಾರಿಯು ರಾಜ್ಯಮಟ್ಟದ ರ‍್ಯಾಂಕ್‌ ಅನ್ನು ಪಡೆಯುವ ಮೂಲಕ ಶೇ 100% ಫಲಿತಾಂಶದೊಂದಿಗೆ ತೀರ್ಥಹಳ್ಳಿ ತಾಲ್ಲೂಕಿನಲ್ಲಿಯೇ ಗುಣಾತ್ಮಕ ಫಲಿತಾಂಶವನ್ನು ದಾಖಲಿಸಿದೆ.
ಪರೀಕ್ಷೆಗೆ ಹಾಜರಾದ 61 ವಿದ್ಯಾರ್ಥಿಗಳಲ್ಲಿ, ಅತ್ಯುನ್ನತ ಶ್ರೇಣಿ 10 (600 ಕ್ಕಿಂತ ಹೆಚ್ಚು ಅಂಕ), ಉನ್ನತ ಶ್ರೇಣಿ 24, ಉಳಿದ 27 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ಕು॥ ಕಲಶ್ 617/625 ಪಡೆಯುವ ಮೂಲಕ ರಾಜ್ಯಕ್ಕೆ 8 ನೇ ರ‍್ಯಾಂಕ್‌ ಪಡೆದು ಹೊರ ಹೊಮ್ಮಿರುತ್ತಾರೆ.
ರಾಜ್ಯ ಮಟ್ಟದ ರ‍್ಯಾಂಕ್‌ ಪಡೆಯುವುದರೊಂದಿಗೆ ಸಂಸ್ಥೆಗೆ ಶೇ 100 ಫಲಿತಾಂಶ ನೀಡುವುದರ ಮೂಲಕ ತಾಲ್ಲೂಕಿನ ಪ್ರೌಢಶಾಲೆಗಳಲ್ಲಿ ಗುಣಾತ್ಮಕ ಫಲಿತಾಂಶದಲ್ಲಿ ಮೇಲುಗೈ ಸಾಧಿಸಿದೆ.
ತೀರ್ಥಹಳ್ಳಿ ತಾಲ್ಲೂಕು ಹಾಗೂ ಶಿಕ್ಷಣ ಸಂಸ್ಥೆಗೆ ಮತ್ತು ಪೋಷಕರಿಗೆ ಕೀರ್ತಿ ತಂದಿರುವ ಈ ಸಾಧಕ ವಿದ್ಯಾರ್ಥಿಗಳನ್ನು ಸಹ್ಯಾದ್ರಿ ಶಿಕ್ಷಣ ಸಂಸ್ಥೆ ಅಧ್ಯಕ್ಷರು ಹಾಗೂ ನಿರ್ದೇಶಕರು, ಆಡಳಿತಾಧಿಕಾರಿಗಳು, ಪ್ರಾಂಶುಪಾಲರು, ಶಿಕ್ಷಕ ವೃಂದ ಮತ್ತು ಭೋಧಕೇತರ ವೃಂದದವರು ಹಾರ್ದಿಕವಾಗಿ ಅಭಿನಂದಿಸಿ ಶುಭ ಹಾರೈಸಿರುತ್ತಾರೆ.

Categories
ಶಿವಮೊಗ್ಗ

ತೀರ್ಥಹಳ್ಳಿ ಜಿಲ್ಲೆಗೆ ಫಸ್ಟ್….ಶಿಕಾರಿಪುರ ಲಾಸ್ಟ್!

– ಶಿವಮೊಗ್ಗದ ಮೂವರು ರಾಜ್ಯಕ್ಕೆ ಮೊದಲಿಗರು
– ರಾಜ್ಯ ದಲ್ಲೇ 4ನೇ ಸ್ಥಾನ ಪಡೆದ ಶಿವಮೊಗ್ಗ
– ತೀರ್ಥಹಳ್ಳಿಯಲ್ಲಿ ವಿದ್ಯಾರ್ಥಿಗಳು, ಪೋಷಕರ ಸಂಭ್ರಮ

NAMMUR EXPRESS NEWS
ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಲ್ಲಿ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ತೀರ್ಥಹಳ್ಳಿ ಮೊದಲ ಸ್ಥಾನ ಪಡೆದಿದ್ದು ಕೊನೆಯ ಸ್ಥಾನವನ್ನು ಶಿಕಾರಿಪುರ ಪಡೆದಿದೆ.
ತೀರ್ಥಹಳ್ಳಿ ಶೇ. 94.43, ಸಾಗರ ಶೇ. 90.21, ಹೊಸನಗರ ಶೇ. 89.60, ಸೊರಬ ಶೇ. 85.00, ಶಿವಮೊಗ್ಗ ಶೇ. 80.82, ಭದ್ರಾವತಿ 78.02, ಶಿಕಾರಿಪುರ ಶೇ.73.50 ಪಡೆದಿವೆ. ಒಟ್ಟು ಜಿಲ್ಲೆಯಲ್ಲಿ 21, 876 ಮಂದಿ ಪರೀಕ್ಷೆ ಬರೆದಿದ್ದು, 18,003 ಮಂದಿ ಪಾಸಾಗಿದ್ದಾರೆ. ಶೇ. 82.30 ಫಲಿತಾಂಶ ದಾಖಲಾಗಿದೆ.

ರಾಜ್ಯಕ್ಕೆ ಮೊದಲ ಸ್ಥಾನ ಪಡೆದ ಶಿವಮೊಗ್ಗ ವಿದ್ಯಾರ್ಥಿಗಳು!

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕಗಳನ್ನು ಪಡೆದು ಮೂವರು ವಿದ್ಯಾರ್ಥಿಗಳು ಅಮೋಘ ಸಾಧನೆ ಮಾಡಿ ಶಿವಮೊಗ್ಗ ಜಿಲ್ಲೆಯ ಕೀರ್ತಿ ಪತಾಕೆಯನ್ನು ಮತ್ತಷ್ಟು ಎತ್ತರಕ್ಕೆ ಹಾರಿಸಿದ್ದಾರೆ. ಶಿವಮೊಗ್ಗ ನಗರದ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆಯ ನಮನ.ಕೆ. ಶ್ರೀ ರಾಮೃಕೃಷ್ಣ ವಿದ್ಯಾಲಯದ ನಿತ್ಯಾ ಎಂ ಕುಲಕರ್ಣಿ, ಶ್ರೀ ಆದಿಚುಂಚನಗಿರಿ ಶಾಲೆಯ ಸಹಿಷ್ಣು.ಎನ್ ಇವರಿಗೆ ಹಾರ್ದಿಕ ಅಭಿನಂದನೆಗಳು.

ತೀರ್ಥಹಳ್ಳಿಯಲ್ಲಿ ವಿದ್ಯಾರ್ಥಿಗಳು, ಪೋಷಕರ ಸಂಭ್ರಮ

ತೀರ್ಥಹಳ್ಳಿ ಜಿಲ್ಲೆಗೆ ಮೊದಲ ಸ್ಥಾನ ಪಡೆದಿದ್ದು ರಾಜ್ಯಕ್ಕೆ ಅನೇಕ ಸ್ಥಾನ ಪಡೆದಿದೆ. ತೀರ್ಥಹಳ್ಳಿ ಶಿಕ್ಷಣ ಅಧಿಕಾರಿ ಗಣೇಶ ಅವರು ಸಂತಸ ವ್ಯಕ್ತಪಡಿಸಿ ಈ ಫಲಿತಾಂಶ ಬರಲು ಕಾರಣರಾದ ಎಲ್ಲಾ ವಿದ್ಯಾರ್ಥಿಗಳಿಗೂ, ಶಿಕ್ಷಕರಿಗೂ, ಶಾಲಾ ಆಡಳಿತ ಮಂಡಳಿಗೂ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಶೈಕ್ಷಣಿಕ ಸಾಧನೆಗೆ ಶಾಸಕರ ಅಭಿನಂದನೆ

ತೀರ್ಥಹಳ್ಳಿ ಜಿಲ್ಲೆಗೆ ಮೊದಲ ಸ್ಥಾನ ಪಡೆದಿದ್ದು, ಎಲ್ಲಾ ವಿದ್ಯಾರ್ಥಿಗಳಿಗೂ, ಶಿಕ್ಷಕರಿಗೂ, ಶಾಲಾ ಆಡಳಿತ ಮಂಡಳಿಗೂ ಶಾಸಕ ಜ್ಞಾನೇಂದ್ರ ಅಭಿನಂದನೆ ಸಲ್ಲಿಸಿದ್ದಾರೆ.

Categories
ತೀರ್ಥಹಳ್ಳಿ

ವಾಗ್ದೇವಿ ಆಂಗ್ಲ ಮಾಧ್ಯಮ ಶಾಲೆ ಟಾಪರ್

ವಾಗ್ದೇವಿ ಆಂಗ್ಲ ಮಾಧ್ಯಮ ಶಾಲೆ ಟಾಪರ್
– 11 ರ್‍ಯಾಂಕ್ ಗಳನ್ನು ನೀಡಿದ ವಾಗ್ದೇವಿ ಶಿಕ್ಷಣ ಸಂಸ್ಥೆ
– ವಾಗ್ದೇವಿಗೆ ನೂರಕ್ಕೆ ನೂರರಷ್ಟು ಫಲಿತಾಂಶ..!
– 35 ವಿದ್ಯಾರ್ಥಿಗಳು 600 ಅಂಕಕ್ಕಿಂತ ಅಧಿಕ ಅಂಕ ಗಳಿಕೆ

NAMMUR EXPRESS NEWS
ತೀರ್ಥಹಳ್ಳಿ : 2024 – 25 ನೇಯ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು ತೀರ್ಥಹಳ್ಳಿ ತಾಲೂಕಿನ
ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಒಂದಾದ ವಾಗ್ದೇವಿ ಆಂಗ್ಲಮಾಧ್ಯಮ ಪ್ರೌಢಶಾಲೆಯು ಈ ವರ್ಷ ರಾಜ್ಯಕ್ಕೆ ಒಟ್ಟು 11
ರ್‍ಯಾಂಕ್ ಗಳನ್ನು ನೀಡಿರುತ್ತದೆ. ಒಟ್ಟು 113 ವಿದ್ಯಾರ್ಥಿಗಳು ಪರೀಕ್ಷೆಯನ್ನು ತೆಗೆದುಕೊಂಡಿದ್ದು 35 ವಿದ್ಯಾರ್ಥಿಗಳು 600 ಅಂಕಕ್ಕಿಂತ ಅಧಿಕ ಅಂಕಗಳನ್ನು ಪಡೆದಿರುತ್ತಾರೆ. 84 ಅತ್ಯುನ್ನತ ಶ್ರೇಣಿಯನ್ನು, 29 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯನ್ನು ಪಡೆದು ಶಾಲೆಗೆ ತಾಲ್ಲೂಕಿಗೆ ಜಿಲ್ಲೆಗೆ ಹಾಗೂ ರಾಜ್ಯಕ್ಕೆ ಕೀರ್ತಿಯನ್ನು ತಂದಿದ್ದಾರೆ

ರ್‍ಯಾಂಕ್ ಪಡೆದ ವಿದ್ಯಾರ್ಥಿಗಳ ವಿವರ ಈ ಕೆಳಗಿನಂತಿದೆ

ಪ್ರೇಕ್ಷಾ ಎಂ ಪೂಜಾರಿ (623-3 rd Rank)
ತೇಜಸ್ ಎಂ ಶಣೈ (623-3 rd Rank)
ಶೀತಲ್ ಬಿ.ವಿ (622 – 4 th Rank)
ಕನ್ನಿಕಾ ಜಿ ಶೆಟ್ಟಿ (621 – 5 th Rank)
ನಿರೀಕ್ಷಾ ಪಿ ಆಚಾರ್ಯ (621 – 5 th Rank)
ಸಾನಿಕಾ ಎಂ ಹೆಗಡೆ ( 621 – 5 th Rank)
ತನು ಗೌಡ (620 – 6 th Rank)
ಸಂಪ್ರೀತ್ ಭೋಂಸ್ಲೆ (617 – 9 th Rank)
ಶ್ರೇಯಾ ಕೆ ಎಂ (617 – 9 th Rank)
ಸಾನ್ವಿ ಕೆ ಯು (616 – 10 th Rank )
ಶಮಂತ್ ವೈ ಎಂ (616 – 10 th Rank)

ವಿದ್ಯಾರ್ಥಿಗಳ ಈ ಸಾಧನೆಯನ್ನು ವಾಗ್ದೇವಿ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು, ಸದಸ್ಯರು, ಶಿಕ್ಷಕವೃಂದ ಮತ್ತು
ಪೋಷಕರು ಅಭಿನಂದಿಸಿರುತ್ತಾರೆ.

ಪಿಯುಸಿಯಲ್ಲಿ ಕೂಡ ಟಾಪರ್

ದ್ವಿತೀಯ ಪಿಯುಸಿಯಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಕೊಟ್ಟು 6 ಪ್ರಮುಖ ಸ್ಥಾನ ಪಡೆದಿದ್ದು, ತೀರ್ಥಹಳ್ಳಿ ವಾಗ್ದೇವಿ ಶಿಕ್ಷಣ ಸಂಸ್ಥೆ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕೂಡ ರಾಜ್ಯದಲ್ಲಿ ಸಾಧನೆ ಮಾಡಿದೆ.

Categories
ಮಂಗಳೂರು

ಮಂಗಳೂರು ಸಂಪೂರ್ಣ ಬಂದ್!

ಮಂಗಳೂರು ಸಂಪೂರ್ಣ ಬಂದ್!

– ಮಂಗಳೂರಲ್ಲಿ ಮತ್ತೆ ಕೋರೋನಾದ ವಾತಾವರಣ ಸೃಷ್ಟಿ?
– ಐದು ಬಸ್ಸುಗಳ ಮೇಲೆ ಕಲ್ಲು ತೂರಾಟ
– ಮೇ.5ರವರೆಗೆ ನಿಷೇಧಾಜ್ಞೆ ಜಾರಿ: ದ.ಕ ಜಿಲ್ಲಾಧಿಕಾರಿ ಆದೇಶ

NAMMUR EXPRESS NEWS
ಮಂಗಳೂರು: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಬಸ್ ಸಂಚಾರ ಮಾಡಿದ ಕಾರಣಕ್ಕೆ
ಐದು KSRTC ಬಸ್ಸಿಗೆ ಕಲ್ಲು ತೂರಾಟ ಮಾಡಿ ಬಸ್ ಸಂಪೂರ್ಣ ಹಾನಿಯಾಗಿದೆ. ನಗರದ ಯುನಿವರ್ಸಿಟಿ ಕಾಲೇಜು ಬಳಿ ಖಾಸಗಿ ಬಸ್ ಗಳ ಮೇಲೂ ಕಲ್ಲು ತೂರಾಟ ನಡೆದಿದೆ.
ಧರ್ಮಸ್ಥಳ, ಮಂಗಳೂರು ಬಸ್ ಗಳ ಹೆಚ್ಚಾಗಿ ಕಂಡುಬಂದಿದ್ದು, ವ್ಯಾಪಾರ ಅಂಗಡಿಗಳಿಂದ ಹಿಡಿದು ಕಂಪನಿಗಳು ಸಂಪೂರ್ಣ ಬಂದ್ ಆಗಿದೆ.
ಕೋರೋನಾ ಬಳಿಗೆ ಸಂಪೂರ್ಣ ಬಂದ್ ಆಗಿದ್ದು ಈ ರೀತಿಯ ವಾತಾವರಣ ಇದೇ ಮೊದಲು ಸೃಷ್ಟಿಯಾಗಿದ್ದು ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹಾಗೂ ಮಂಗಳೂರಿನ ಪ್ರತಿಷ್ಠಿತ ಕಂಪನಿಗಳಲ್ಲೂ ನೌಕರರಿಗೆ ರಜೆ ನೀಡಿದ್ದಾರೆ. ಇದೀಗ ಮಂಗಳೂರೇ ಬಂದ್ ಆಗಿದ್ದು, ಇದೀಗ ಬಸ್ ಸಂಚಾರ ಕೂಡಾ ಸ್ಥಗಿತಗೊಂಡಿದೆ.
ಇನ್ನು ದ.ಕ ಜಿಲ್ಲೆಯಲ್ಲಿ ಅಹಿತಕರ ಘಟನೆ ನಡೆಯದಂತೆ, ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಮೇ.5ರವರೆಗೆ ನಿಷೇಧಾಜ್ಞೆ ಜಾರಿ ಮಾಡಿ ದ.ಕ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

Categories
ಬೆಂಗಳೂರು

ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ; ದ.ಕ ಜಿಲ್ಲೆ ಪ್ರಥಮ, ಕಲಬುರಗಿ ಕೊನೆ ಸ್ಥಾನ!

ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ; ದ.ಕ ಜಿಲ್ಲೆ ಪ್ರಥಮ, ಕಲಬುರಗಿ ಕೊನೆ ಸ್ಥಾನ!

– ಈ ಬಾರಿಯೂ ಬಾಲಕಿಯರೇ ಮೇಲುಗೈ
– ವಿದ್ಯಾರ್ಥಿಗಳು ರಿಸಲ್ಟ್ ಪಡೆಯೋದು ಹೇಗೆ?
– ಇಲ್ಲಿದೆ ಸಂಪೂರ್ಣ ಮಾಹಿತಿ

NAMMUR EXPRESS NEWS
ಬೆಂಗಳೂರು: 2024-25 ನೇ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾಗಿದೆ. ಈ ಬಾರಿ ಶೇ.66.1 ರಷ್ಟು ಫಲಿತಾಂಶ ಬಂದಿದೆ. ಕಳೆದ ವರ್ಷಕ್ಕೆ 8% ಫಲಿತಾಂಶ ಹೆಚ್ಚಳವಾಗಿದ್ದು, ಬಾಲಕಿಯರೇ ಈ ಬಾರಿ ಮೇಲುಗೈ ಸಾಧಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಪಡೆದುಕೊಂಡಿದೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಈ ಬಾರಿ ಶೇ.66.14 ರಷ್ಟು ಫಲಿತಾಂಶ ಬಂದಿದೆ. 22 ವಿದ್ಯಾರ್ಥಿಗಳು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. 625 ಕ್ಕೆ 625 ಅಂಕಗಳನ್ನು ಇವರು ಪಡೆದಿದ್ದಾರೆ.
12:30ರಿಂದ karresults.nic.in ಫಲಿತಾಂಶ ವೀಕ್ಷಿಸಬಹುದಾಗಿದೆ.
ವಿದ್ಯಾರ್ಥಿಗಳು ಕರ್ನಾಟಕ SSLC ಪರೀಕ್ಷೆ-1ರ ಫಲಿತಾಂಶ ಈ ರೀತಿ ಚೆಕ್ ಮಾಡಿ
https://karresults.nic.in ಗೆ ಭೇಟಿ ನೀಡಿ.
ತೆರೆದ ವೆಬ್ ಪೇಜಿನಲ್ಲಿ ‘SSLC 2024-25 Exam-ination -1 Result Sheet’ ಎಂಬುವುದಕ್ಕೆ ಕ್ಲಿಕ್ ಮಾಡಿ. ವೆಬ್ ಪೇಜ್ ಓಪನ್ ಆಗುತ್ತದೆ.
ಇಲ್ಲಿ ರಿಜಿಸ್ಟರ್ ನಂಬರ್ ನಮೂದಿಸಿ. ‘View’ ಎಂದಿರುವಲ್ಲಿ ಕ್ಲಿಕ್ ಮಾಡಿ. ಫಲಿತಾಂಶ ಪ್ರದರ್ಶಿತವಾಗುತ್ತದೆ. ಡೌನ್ಲೋಡ್ ಮಾಡಿ ಪ್ರಿಂಟ್ ತೆಗೆದುಕೊಳ್ಳಿ

Categories
ಉಡುಪಿ

ಸುಹಾಸ್‌ ಶೆಟ್ಟಿ ಹತ್ಯೆ ಕೇಸ್‌ ಬೆನ್ನಲ್ಲೇ, ಮುಸ್ಲಿಂ ಯುವಕರ ಕೊಲೆಗೆ ಯತ್ನ!

ಸುಹಾಸ್‌ ಶೆಟ್ಟಿ ಹತ್ಯೆ ಕೇಸ್‌ ಬೆನ್ನಲ್ಲೇ, ಮುಸ್ಲಿಂ ಯುವಕರ ಕೊಲೆಗೆ ಯತ್ನ!

– ಕಣ್ಣೂರಿನಲ್ಲಿ ನೌಶಾದ್ ಎಂಬ ಯುವಕನಿಗೆ ಚೂರಿ ಇರಿತ: ಆಸ್ಪತ್ರೆಗೆ ದಾಖಲು!
– ಉಡುಪಿ: ಆಟೋ ಚಾಲಕ ಅಬೂಬ್ಬಕರ್ ಮೇಲೆ ದಾಳಿ

NAMMUR EXPRESS NEWS
ಕಣ್ಣೂರ್: ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್‌ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಇದರ ಮಧ್ಯೆ ಕಣ್ಣೂರ್ ನಲ್ಲಿ ನೌಶಾದ್ ಎಂಬ ಯುವಕನಿಗೆ ಚೂರಿ ಹಾಕಿದ ಘಟನೆ ನಡೆದಿದೆ ಯುವಕ ಯುನಿಟಿ ಆಸ್ಪತ್ರೆ ಯಲ್ಲಿದ್ದಾನೆ

– ಉಡುಪಿ: ಅಟೋ ಚಾಲಕ ಅಬೂಬ್ಬಕರ್ ಮೇಲೆ ಕೊಲೆಗೆ ಯತ್ನ!

ಉಡುಪಿ: ತಾಲೂಕಿನ ಆತ್ರಾಡಿಯಲ್ಲಿ ಮುಸ್ಲಿಂ ಯುವಕನ ಕೊಲೆಗೆ ಯತ್ನಿಸಿರುವಂತಹ ಘಟನೆ ನಡೆದಿದೆ. ಅಟೋ ಚಾಲಕ ಅಬೂಬ್ಬಕರ್ ಮೇಲೆ ದಾಳಿ ಮಾಡಲಾಗಿರುವ ಕುರಿತು ವರದಿಯಾಗಿದೆ.
ಆಟೋ ಅಡ್ಡಗಟ್ಟಿ ಚಾಲಕ ಅಬೂಬಕ್ಕರ್‌ ಕೊಲೆಗೆ ಯತ್ನ ಮಾಡಲಾಗಿದೆ. ಅಬೂಬಕ್ಕರನನ್ನು ಅಡ್ಡಗಟ್ಟಿ ಸುಶಾಂತ್‌, ಸಂದೇಶ್‌ ಪೂಜಾರಿ ಎಂಬುವವರು ಕೊಲೆಗೆ ಯತ್ನ ಮಾಡಿದ್ದಾರೆ ಎಂದು ವರದಿಯಾಗಿದೆ. ಹಿರಿಯಡ್ಕ ಪೊಲೀಸರು ಇಬ್ಬರನ್ನು ಬಂಧನ ಮಾಡಿದ್ದಾರೆ.
ಪೊಲೀಸರ ವಿಚಾರಣೆ ಸಂದರ್ಭ ಸುಹಾಸ್‌ ಶೆಟ್ಟಿ ಹತ್ಯೆಗೆ ಪ್ರತೀಕಾರವಾಗಿ ಕೃತ್ಯ ಎಸಗಿರುವುದಾಗಿ ಇಬ್ಬರು ತಪ್ಪೊಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಈ ಕುರಿತು ಹಿರಿಯಡ್ಕ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Categories
ಬೆಂಗಳೂರು

ಎಸ್​ಎಸ್​ಎಲ್​ಸಿ ಪರೀಕ್ಷೆ ಫಲಿತಾಂಶ ಪ್ರಕಟಕ್ಕೆ ಕ್ಷಣಗಣನೆ!

ಎಸ್​ಎಸ್​ಎಲ್​ಸಿ ಪರೀಕ್ಷೆ ಫಲಿತಾಂಶ ಪ್ರಕಟಕ್ಕೆ ಕ್ಷಣಗಣನೆ!

– ಬೆಳಗ್ಗೆ 11.30ಕ್ಕೆ ಸುದ್ದಿಗೋಷ್ಠಿಯಲ್ಲಿ ಫಲಿತಾಂಶ ಬಿಡುಗಡೆ
– ಮಧ್ಯಾಹ್ನ 12.30ರಿಂದ ವಿದ್ಯಾರ್ಥಿಗಳಿಗೆ ವೆಬ್‌ಸೈಟ್‌ನಲ್ಲಿ ಲಭ್ಯ
– ಆಲ್ ದಿ ಬೆಸ್ಟ್ ವಿದ್ಯಾರ್ಥಿಗಳೇ!

NAMMUR EXPRESS NEWS
ಬೆಂಗಳೂರು: 2024-25ನೇ ಸಾಲಿನ ಎಸ್​ಎಸ್​ಎಲ್​ಸಿ ಪರೀಕ್ಷೆ ಫಲಿತಾಂಶ ಇಂದು ಪ್ರಕಟಗೊಳ್ಳಲಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಲಿದ್ದಾರೆ. ಬೆಳಗ್ಗೆ 11.30ಕ್ಕೆ ಸುದ್ದಿಗೋಷ್ಠಿಯಲ್ಲಿ ಫಲಿತಾಂಶ ಬಿಡುಗಡೆ ಮಾಡಲಿದ್ದಾರೆ. ಮಧ್ಯಾಹ್ನ 12.30ರಿಂದ ವಿದ್ಯಾರ್ಥಿಗಳು ವೆಬ್‌ಸೈಟ್‌ನಲ್ಲಿ ಫಲಿತಾಂಶ ಪರಿಶೀಲಿಸಬಹುದು ಎಂದು ಮಂಡಳಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

– ಇಂದೇ ವಿದ್ಯಾರ್ಥಿಗಳ ಭವಿಷ್ಯ ನಿರ್ಧಾರ

ಮಾ.21 ರಿಂದ ಏ.4 ರವರೆಗೆ ರಾಜ್ಯಾದ್ಯಂತ 2,818 ಪರೀಕ್ಷಾ ಕೇಂದ್ರಗಳಲ್ಲಿ ಎಸ್​ಎಸ್​ಎಲ್​ಸಿ ಪರೀಕ್ಷೆ ನಡೆದಿತ್ತು. ರಾಜ್ಯದಲ್ಲಿ ಒಟ್ಟು 8.40 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಇಂದೇ ವಿದ್ಯಾರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.

50 ಲಕ್ಷಕ್ಕೂ ಹೆಚ್ಚು ಉತ್ತರ ಪತ್ರಿಕೆಗಳ ಮೌಲ್ಯಮಾಪನ

ಏ.11ರಿಂದ ರಾಜ್ಯಾದ್ಯಂತ ನೂರಾರು ಕೇಂದ್ರಗಳಲ್ಲಿ ಸುಮಾರು 75 ಸಾವಿರಕ್ಕೂ ಹೆಚ್ಚು ಮೌಲ್ಯಮಾಪಕರು 50 ಲಕ್ಷಕ್ಕೂ ಹೆಚ್ಚು ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆಸಿದ್ದರು. ಕಳೆದ ವಾರವೇ ಮೌಲ್ಯಮಾಪನ ಕಾರ್ಯ ಮುಕ್ತಾಯಗೊಂಡಿದ್ದು, ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು https://karresults.nic.in ವೆಬ್‌ಸೈಟ್‌ನಲ್ಲಿ ಚೆಕ್​ ಮಾಡಬಹುದು.

Categories
ಕ್ರಿಕೆಟ್ ಕ್ರೀಡಾ ಸುದ್ದಿ

ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್

ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್

ಐಪಿಎಲ್ -2025
* ಮುಂಬೈ ಹರಿಸಿದ ರನ್ ಮಳೆಯಲ್ಲಿ ಕೊಚ್ಚಿಹೋದ ರಾಜಸ್ಥಾನ್
* ಸತತ 6 ಜಯದೊಂದಿಗೆ ಮುಂಬೈ ಪಾಯಿಂಟ್ ಟೇಬಲ್ ಟಾಪರ್, ಪ್ಲೇ ಆಫ್‌ನಿಂದ ರಾಜಸ್ಥಾನ ಹೊರಕ್ಕೆ

NAMMMUR EXPRESS SPORTS NEWS
ಜೈಪುರ:ರಯಾನ್ ರಿಕೆಲ್ಟನ್, ರೋಹಿತ್‌ ಶರ್ಮಾ, ಸೂರ್ಯಕುಮಾರ್‌ ಯಾದವ್‌, ನಾಯಕ ಹಾರ್ದಿಕ್‌ ಪಾಂಡ್ಯ ಅವರ ರನ್‌ ಮಳೆಯ ಆಟದಿಂದ ರಾಜಸ್ಥಾನ ರಾಯಲ್ಸ್‌ ವಿರುದ್ಧ ಮುಂಬೈ ಇಂಡಿಯನ್ಸ್‌ 100 ರನ್‌ಗಳ ಭರ್ಜರಿ ಜಯ ಸಾಧಿಸಿದೆ.
ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಮುಂಬೈ ಕೇವಲ 2 ವಿಕೆಟ್‌ ನಷ್ಟಕ್ಕೆ 217 ರನ್‌ ಕಲೆಹಾಕಿತು. ಕಠಿಣ ಗುರಿನ್ನು ಬೆನ್ನಟ್ಟಿದ ರಾಜಸ್ಥಾನ 16.1 ಓವರ್‌ಗಳಲ್ಲಿ 117 ರನ್‌ ಗಳಿಸಿ ಆಲೌಟ್‌ ಆಯಿತು. ಸತತ 6 ಜಯದೊಂದಿಗೆ ಉತ್ತಮ ರನ್‌ ರೇಟ್‌ ಹೊಂದಿರುವ ಕಾರಣ ಮುಂಬೈ ಇಂಡಿಯನ್ಸ್‌ ಅಂಕಪಟ್ಟಿಯಲ್ಲಿ 14 ಅಂಕದೊಂದಿಗೆ ಮೊದಲ ಸ್ಥಾನಕ್ಕೆ ಏರಿದೆ, ಅಷ್ಟೇ ಅಂಕ ಪಡೆದಿರುವ ಆರ್‌ಸಿಬಿ ಎರಡನೇ ಸ್ಥಾನಕ್ಕೆ ಜಾರಿದೆ.
ರಾಜಸ್ಥಾನ್‌ ತಂಡವು ಆರಂಭಿಕ ಹಂತದಲ್ಲೇ ಆಘಾತ ಅನುಭವಿಸಿತು. ಗುಜರಾತ್‌ ವಿರುದ್ಧ ಆಡಿದ ಪಂದ್ಯದಲ್ಲಿ ಆರಂಭಿಕರಾದ ಯಶಸ್ವಿ ಜೆಸ್ವಾಲ್‌ ಹಾಗೂ ವೈಭವ್‌ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶಿಸಿದ್ದರು. ಅದೇ ಆಟದ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ಈ ಜೋಡಿ ನಿರಾಸೆ ಮೂಡಿಸಿತು. ಮೊದಲೇ ಓವರ್‌ನಲ್ಲೇ ದೀಪಕ್‌ ಚಹರ್‌ ಬೌಲಿಂಗ್‌ ದಾಳಿಗೆ ವೈಭವ್‌ ಸೂರ್ಯವಂಶಿ ಓಟಾಗಿ, ಪೆವಿಯನ್‌ನತ್ತ ಮುಖ ಮಾಡಿದರು. ಯಶಸ್ವಿ ಜೈಸ್ವಾಲ್‌ ಕೂಡಾ ಹೆಚ್ಚು ಹೊತ್ತು ಕ್ರೀಸ್‌ನಲ್ಲಿರದೇ ಬೋಲ್ಟ್‌ಗೆ ಕ್ಲೀನ್‌ ಬೋಲ್ಡ್‌ ಆದರು. ಅದಾಗಲೇ ರಾಜಸ್ಥಾನ ತಂಡ 2 ಓವರ್‌ಗೆ 18 ರನ್‌ನಷ್ಟಕ್ಕೆ 2 ವಿಕೆಟ್‌ ಕಳೆದುಕೊಂಡಿತ್ತು.
ಬಳಿಕ ಬಂದ ನಿತೀಶ್‌ ರಾಣಾ ಕೂಡ 11 ಎಸೆತಗಳಲ್ಲಿ 9 ರನ್‌ ಗಳಿಸಿ ಔಟಾದರು. ಮಧ್ಯಮ ಕ್ರಮಾಂಕದಲ್ಲಿ ಯಾರು ಕೂಡ ಉತ್ತಮ ಪ್ರದರ್ಶನ ನೀಡಲಿಲ್ಲ. 8 ಎಸೆತಗಳಲ್ಲಿ 16 ರನ್‌ ಬಾರಿಸಿದ್ದ ತಂಡದ ನಾಯಕ ರಿಯಾನ್‌ ಪರಾಗ್‌ರನ್ನು ಜಸ್ಪ್ರೀತ್‌ ಬುಮ್ರಾ ಪೆವಿಲಿಯನ್‌ಗೆ ಕಳುಹಿಸಿದರು. ಬಳಿಕ ಬಂದ ಜುರೇಲ್‌ 11 ಎಸೆತಕ್ಕೆ 11ರನ್‌ ಕಲೆಹಾಕಿದರೆ, ಹೆಟ್ಮೆಯರ್‌ ಶೂನ್ಯಕ್ಕೆ ಔಟಾದರು.
ಅಷ್ಟರಲ್ಲಾಗಲೇ 4 ಓವರ್‌ನಲ್ಲೇ ರಾಜಸ್ಥಾನ ತಂಡವು 5 ವಿಕೆಟ್‌ ಕಳೆದುಕೊಂಡಿತ್ತು. ಬಳಿಕ ಕ್ರೀಸ್‌ಗೆ ಬಂದ ಜೋಫ್ರಾ ಆರ್ಚರ್‌ 27 ಎಸೆತಗಳಲ್ಲಿ 30 ರನ್‌ ಬಾರಿಸಿ, ಮುಂಬೈ ಬೌಲರ್ಸ್‌ಗಳ ದಾಳಿಗೆ ಬಲಿಯಾದರು. ಬಳಿಕ ಬಂದ ಮಹೀಶ್‌ ತೀಕ್ಷಣ ಹಾಗೂ ಕುಮಾರ್‌ ಕಾರ್ತಿಕೇಯ ಒಂದಕ್ಕಿಗೆ ಮುಂಬೈ ಬೌಲರ್ಸ್‌ಗೆ ಶರಣಾದರು. ಮುಂಬೈ ಬೌಲರ್ಸ್‌ಗಳ ದಾಳಿಗೆ ರಾಜಸ್ಥನ ಧೂಳಿಪಟವಾಯ್ತು.
ಮುಂಬೈ ಪರ ಬೋಲ್ಟ್‌ ಹಾಗೂ ಕರಣ್‌ ಶರ್ಮಾ ತಲಾ 3 ವಿಕೆಟ್‌ ಪಡೆದರು. ಬುಮ್ರಾ 2 ವಿಕೆಟ್‌, ದೀಪಕ್‌ ಚಹರ್‌ ಹಾಗೂ ಹಾರ್ದಿಕ್‌ ಪಾಂಡ್ಯ ತಲಾ 1 ವಿಕೆಟ್‌ ಪಡೆದರು.
ಟಾಸ್‌ ಸೋತು ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡದ ಆರಂಭ ಉತ್ತಮವಾಗಿತ್ತು. ಆರಂಭಿಕರಾದ ರೋಹಿತ್ ಶರ್ಮಾ, ರಯಾನ್‌ ರಿಕಲ್ಟನ್‌ ಭರ್ಜರಿ ಜೊತೆಯಾಟವಾಡಿ ಈ ಜೋಡಿಯನ್ನು ಕಟ್ಟಿ ಹಾಕುವಲ್ಲಿ ಆರ್‌ಆರ್‌ ತಂಡದ ಬೌಲರ್‌ಗಳು ವಿಫಲರಾದರು.ಪವರ್ ಪ್ಲೇನಲ್ಲಿ ಇವರಿಬ್ಬರ ಜೊತೆಯಾಟವು ಸ್ಟೇಡಿಯಂನಲ್ಲಿ ಫ್ಯಾನ್ಸ್‌ ಹುಚ್ಚೆದ್ದು ಕುಣಿಯುವಂತೆ ಮಾಡಿತು. ಮುಂಬೈ ಇಂಡಿಯನ್ಸ್‌ ಮೊದಲ 6 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 58 ರನ್‌ ಸಿಡಿಸಿತು.ರಯಾನ್‌ ರಿಕಲ್ಟನ್‌ ತಮ್ಮ ಅಮೋಘ ಬ್ಯಾಟಿಂಗ್ ಪ್ರದರ್ಶನವನ್ನು ಮುಂದುವರಿಸಿದ್ದು, 9ನೇ ಓವರ್‌ನಲ್ಲಿ ಕುಮಾರ್‌ ಕಾರ್ತಿಕೇಯ ಎಸೆದ ಐದನೇ ಎಸೆತಕ್ಕೆ ಸಿಕ್ಸರ್ ಬಾರಿಸುವ ಮೂಲಕ, 29 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಸಂಭ್ರಮಿಸಿದರು. 71 ಎಸೆತಗಳಲ್ಲಿ 116 ರನ್‌ ಕಲೆ ಹಾಕಿದ ರೋಹಿತ್‌ ಹಾಗೂ ರಯಾನ್‌ ಜೊಡಿಯ ಓಟಕ್ಕೆ 11 ನೇ ಓವರ್‌ನಲ್ಲಿ ಮಹೀಶ್‌ ತೀಕ್ಷಣ್ ಬ್ರೇಕ್‌ ಹಾಕಿದರು. ರಯಾನ್‌ ರಿಕಲ್ಟನ್‌ 38 ಎಸೆತಗಳಲ್ಲಿ 61 ರನ್‌ (7 ಬೌಂಡರಿ, 3 ಸಿಕ್ಸರ್‌) ಸಿಡಿಸಿ ಓಟಾದರು.
ರಯಾನ್‌ ರಿಕಲ್ಟನ್‌ ತಮ್ಮ ಅಮೋಘ ಬ್ಯಾಟಿಂಗ್ ಪ್ರದರ್ಶನವನ್ನು ಮುಂದುವರೆಸಿ, 9ನೇ ಓವರ್‌ನಲ್ಲಿ ಕುಮಾರ್‌ ಕಾರ್ತಿಕೇಯ ಎಸೆದ ಐದನೇ ಎಸೆತಕ್ಕೆ ಸಿಕ್ಸರ್ ಬಾರಿಸುವ ಮೂಲಕ, 29 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಸಂಭ್ರಮಿಸಿದರು. 71 ಎಸೆತಗಳಲ್ಲಿ 116 ರನ್‌ ಕಲೆ ಹಾಕಿದ ರೋಹಿತ್‌ ಹಾಗೂ ರಯಾನ್‌ ಜೊಡಿಯ ಓಟಕ್ಕೆ 11 ನೇ ಓವರ್‌ನಲ್ಲಿ ಮಹೀಶ್‌ ತೀಕ್ಷಣ್ ಬ್ರೇಕ್‌ ಹಾಕಿದರು. ರಯಾನ್‌ ರಿಕಲ್ಟನ್‌ 38 ಎಸೆತಗಳಲ್ಲಿ 61 ರನ್‌ (7 ಬೌಂಡರಿ, 3 ಸಿಕ್ಸರ್‌) ಸಿಡಿಸಿ ಔಟಾದರು.
ಉತ್ತಮ ಫಾರ್ಮ್‌ನಲ್ಲಿದ್ದ ರೋಹಿತ್ ಶರ್ಮಾ ಮತ್ತೊಮ್ಮೆ ಅರ್ಧಶತಕ ಬಾರಿಸಿ ಮಿಂಚಿದರು. ಇವರು 36 ಎಸೆತಗಳಲ್ಲಿ 53 ರನ್‌ (9 ಬೌಂಡರಿ) ಬಾರಿಸಿ 12ನೇ ಓವರ್‌ನ 4ನೇ ಎಸೆತದಲ್ಲಿ ರಿಯಾನ್‌ ಪರಾಗ್‌ಗೆ ವಿಕಟ್‌ ಒಪ್ಪಿಸಿದರು. ಅದಾಗಲೇ ಮುಂಬೈ ತಂಡ 2 ವಿಕೆಟ್‌ ನಷ್ಟಕ್ಕೆ 123 ರನ್‌ ಕಲೆ ಹಾಕಿತ್ತು.
ರೋಹಿತ್ ಶರ್ಮಾ ಔಟ್ ಆಗುತ್ತಿದ್ದಂತೆ ಕ್ರೀಸ್‌ಗೆ ಬಂದ ಹಾರ್ದಿಕ್ ಪಾಂಡ್ಯ ಹಾಗೂ ಸೂರ್ಯಕುಮಾರ್ ಯಾದವ್ ಜೋಡಿ ತಮ್ಮ ಪವರ್‌ ಫುಲ್‌ ಹೊಡೆತಗಳಿಂದ ಎದುರಾಳಿ ಬೌಲರ್‌ಗಳನ್ನು ಬೆಂಡೆತ್ತಿತು. ಈ ಜೋಡಿ ಕಟ್ಟಿ ಹಾಕುವುದು ರಾಜಸ್ಥಾನ ತಂಡಕ್ಕೆ ದೊಡ್ಡ ಸವಾಲಾಯಿತು.
ಫಜಲ್‌ ಫರೂಕಿ ಅವರ 18ನೇ ಓವರ್ ಒಂದರಲ್ಲೇ 21 ರನ್‌ಗಳು ಹರಿದು ಬಂದಿದೆ. ಸೂರ್ಯಕುಮಾರ್ ಯಾದವ್ 23 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್ ಸಹಾಯದಿಂದ ಅಜೇಯ 48 ರನ್‌ ಸಿಡಿಸಿದರು. ಹಾರ್ದಿಕ್ ಪಾಂಡ್ಯ 23 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್‌ ಸೇರಿದಂತೆ ಅಜೇಯ 48 ರನ್‌ ಕಲೆ ಹಾಕಿದರು. ಮುಂಬೈ ಇಂಡಿಯನ್ಸ್ ತಂಡ 20 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 217 ರನ್‌ ಕಲೆಹಾಕಿತ್ತು. ರಾಜಸ್ಥಾನ್‌ ಬೌಲರ್ಸ್‌ಗಳಾದ ಮಹೀಶ್ ತೀಕ್ಷಣ್‌, ರಿಯಾನ್‌ ಪರಾಗ್‌ ತಲಾ ಒಂದು ವಿಕೆಟ್‌ ಕಬಳಿಸಿದರು.

* ಪಿಂಕ್‌ ಜೆರ್ಸಿ ಧರಿಸಿದ್ದ ರಾಜಸ್ಥಾನ್ ರಾಯಲ್ಸ್
ವಿಶೇಷವಾಗಿ ಗ್ರಾಮೀಣ ಮಹಿಳೆಯರ ಉನ್ನತಿಗಾಗಿ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ಈ ಕ್ರಮ ಕೈಗೊಂಡಿದೆ. ಮಹಿಳಾ ಸಬಲೀಕರಣದ ಕಡೆಗೆ ತಮ್ಮ ಬದ್ಧತೆಯನ್ನು ಪ್ರದರ್ಶಿಸಲು ಫ್ರಾಂಚೈಸಿ ಈ ಕ್ರಮ ತೆಗೆದುಕೊಂಡಿದೆ. ಮುಂಬೈ ವಿರುದ್ಧದ ಪಂದ್ಯಕ್ಕೆ ರಾಜಸ್ಥಾನ ತಂಡದ ಆಟಗಾರರು ಗುಲಾಬಿ ಬಣ್ಣದ ಜೆರ್ಸಿಗಳನ್ನು ಧರಿಸಿ ಮೈದಾನಕ್ಕೆ ಪ್ರವೇಶಿಸಿದರು.

Categories
ಮಂಗಳೂರು

ಮಂಗಳೂರು: ದುಷ್ಕರ್ಮಿಗಳ ದಾಳಿ.!

ಮಂಗಳೂರು: ದುಷ್ಕರ್ಮಿಗಳ ದಾಳಿ.!

– ಹಿಂದೂ ಕಾರ್ಯಕರ್ತ, ರೌಡಿ ಶೀಟ‌ರ್ ಸುಹಾಸ್‌ ಶೆಟ್ಟಿ ಬಜ್ಪೆ ಹತ್ಯೆ
– ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತರ ಉಗ್ರ ಪ್ರತಿಭಟನೆ
– ವಾಹನ ಸಂಚಾರಕ್ಕೆ ಸ್ಥಗಿತ, ಜನಸಾಮಾನ್ಯರಲ್ಲಿ ಆತಂಕ

NAMMUR EXPRESS NEWS
ಮಂಗಳೂರು: ಬಜ್ಪೆ ಸಮೀಪದ ಕಿನ್ನಿಪದವು ಬಳಿ ಅಪರಿಚಿತ ಗುಂಪೊಂದು ದಾಳಿ ನಡೆಸಿ ಹಿಂದೂ ಕಾರ್ಯಕರ್ತ ರೌಡಿ ಶೀಟರ್ ಸುಹಾಸ್ ಶೆಟ್ಟಿ ಬಜ್ಪೆ ಎಂಬಾತನ ಮೇಲೆ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ನಡೆದಿದೆ.
ಹಿಂದೂ ಸಂಘಟನೆಗಳಲ್ಲಿ ಪ್ರಭಲವಾಗಿ ಗುರುತಿಸಿಕೊಂಡಿದ್ದ ಸುಹಾಸ್ ಶೆಟ್ಟಿ ಹತ್ಯೆ ಇದೊಂದು ಪೂರ್ವ ನಿಯೋಜಿತ ದಾಳಿ ಎಂಬ ಅನುಮಾನ ವ್ಯಕ್ತವಾಗಿದ್ದು, ಹತ್ಯೆ ಆದ ಸುಹಾಸ್ ಶೆಟ್ಟಿ ಈ ಹಿಂದೆ 2022ರಲ್ಲಿ ಸುರತ್ಕಲ್ ನಲ್ಲಿ ನಡೆದ ಫಾಝಿಲ್ ಹತ್ಯೆಯ ಪ್ರಮುಖ ಆರೋಪಿಯಾಗಿದ್ದು ಒಂದು ವರ್ಷದ ಹಿಂದೆ ಬೇಲ್ ಪಡೆದು ಹೊರಬಂದಿದ್ದ ಎನ್ನಲಾಗಿದೆ. ಹೀಗಾಗಿ ಫಾಝಿಲ್ ಹತ್ಯೆಯ ಪ್ರತಿಕಾರವಾಗಿ ಈ ಹತ್ಯೆ ನಡೆದಿದೆ ಎಂದು ಅನುಮಾನ ವ್ಯಕ್ತವಾಗಿದ್ದು ತನಿಖೆಯಿಂದಷ್ಟೇ ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.
ಇದೊಂದು ಬರ್ಬರ ದಾಳಿಯಾಗಿದ್ದು ದುಷ್ಕರ್ಮಿಗಳು ಕೊಚ್ಚಿದ ರಭಸಕ್ಕೆ ಸುಹಾಸ್ ಶೆಟ್ಟಿ ತಲೆ, ಕೈ, ಕಾಲು, ದೇಹವೆಲ್ಲ ಗಾಯಗಳಾಗಿದ್ದು, ಘಟನೆ ನಡೆದ ಸ್ಥಳದಲ್ಲಿ ರಕ್ತದ ಹೊಳೆಯೇ ಹರಿದಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಗಾಯಾಳು ಸುಹಾಸ್‌ ಶೆಟ್ಟಿಯನ್ನು ಬಳಿಕ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ದಾರಿ ಮಧ್ಯೆಯೇ ಸುಹಾಸ್ ಮೃತಪಟ್ಟ ಬಗ್ಗೆ ವೈದ್ಯರು ಖಾತರಿ ಪಡಿಸಿದ್ದಾರೆ.
ಸುಹಾಸ್‌ ಶೆಟ್ಟಿ ಇನ್ನೋರ್ವ ಕಾರಿನಲ್ಲಿ ಬಜ್ಪೆಯ ಕಿನ್ನಿಪದವು ಬಳಿ ಬರುತ್ತಿದ್ದ ಸಂದರ್ಭ, ಮೀನಿನ ಪಿಕ್ ಅಪ್ ವಾಹನವೊಂದು ಕಾರಿಗೆ ಅಡ್ಡಗಟ್ಟಿ ಅಪಘಾತ ನಡೆಸಲೆತ್ನಿಸಿದ್ದು ಸುಹಾಸ್ ಶೆಟ್ಟಿ ಕಾರು ರಸ್ತೆ ಬದಿಯ ಸಲೂನ್ ಒಂದಕ್ಕೆ ನುಗ್ಗಿದೆ, ಸುಹಾಸ್ ಶೆಟ್ಟಿ ಹಾಗು ಸಹಚರರು ಕಾರಿನಿಂದ ಇಳಿಯುವಷ್ಟರಲ್ಲೇ ಸುಹಾಸ್‌ ಶೆಟ್ಟಿಯನ್ನು ಬೆನ್ನಟ್ಟಿ ಬಂದಿದ್ದ ಸ್ವಿಫ್ಟ್ ಕಾರಿನಲ್ಲಿದ್ದ ದುಷ್ಕರ್ಮಿಗಳ ತಂಡ ದಾಳಿ ನಡೆಸಿದ್ದು ಸುಹಾಸ್ ಶೆಟ್ಟಿಯನ್ನೇ ಗುರಿಯಾಗಿಸಿ ಹಲ್ಲೆ ನಡೆಸಿದೆ ಎನ್ನಲಾಗಿದೆ. ದಾಳಿ ವೇಳೆ ಸುಹಾಸ್‌ ಶೆಟ್ಟಿ ಜೊತೆಗಿದ್ದವರಿಗೂ ಸಣ್ಣ ಪುಟ್ಟ ಗಾಯಗಳಾಗಿದ್ದು ಅವರೆಲ್ಲರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸ್ ಕಮಿಷನ‌ರ್ ತಿಳಿಸಿದ್ದಾರೆ. ಘಟನೆಗೆ ಸಂಭಂದಿಸಿದಂತೆ ದುಷ್ಕರ್ಮಿಗಳ ಕೃತ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪೊಲೀಸ್ ಬಿಗಿ ಬಂದೋಬಸ್ತ್!

ಆಸ್ಪತ್ರೆ ಬಳಿ ಹಿಂದೂ ಕಾರ್ಯಕರ್ತರ ದಂಡು ಆಗಮಿಸಿದ್ದು ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಇನ್ನು ಸುಹಾಸ್‌ ಶೆಟ್ಟಿ ಮೃತದೇಹವಿರುವ ಖಾಸಗಿ ಆಸ್ಪತ್ರೆಗೆ ಈಗಾಗಲೇ ಬಿಜೆಪಿ ನಾಯಕರು ಆಗಮಿಸಿದ್ದು,ಶಾಸಕರಾದ ಡಾ. ಭರತ್ ಶೆಟ್ಟಿ, ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಹಾಗು ಮಾಜಿ ಸಂಸದ ನಳಿನ್ ಕುಮಾ‌ರ್ ಕಟೀಲ್‌ ಆಸ್ಪತ್ರೆಗೆ ದೌಡಾಯಿಸಿದ್ದಾರೆ.

* ಇಂದು ದಕ್ಷಿಣ ಕನ್ನಡ ಬಂದ್, ಮಂಗಳೂರಿನಲ್ಲಿ ನಿಷೇಧಾಜ್ಞೆ

ಮಂಗಳೂರು: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಖಂಡಿಸಿ ವಿಶ್ವ ಹಿಂದೂ ಪರಿಷತ್ ದಕ್ಷಿಣ ಕನ್ನಡ ಜಿಲ್ಲಾ ಬಂದ್ಗೆ ಕರೆ ನೀಡಿದೆ. ಮೇ. 2ರಂದು ಬೆಳಗ್ಗೆ 6ರಿಂದ ಸಂಜೆ 6 ಗಂಟೆವರೆಗೂ ದಕ್ಷಿಣ ಕನ್ನಡ ಜಿಲ್ಲೆ ಬಂದ್ಗೆ ಕರೆ ನೀಡಲಾಗಿದ್ದು ಹೋಟೆಲ್, ಅಂಗಡಿ ಮುಂಗಟ್ಟುಗಳು ಬಂದ್ ಆಗಿರಲಿವೆ. ಅದೇ ರೀತಿ, ಖಾಸಗಿ ಬಸ್ ಸಂಚಾರ ಕೂಡ ಸ್ಥಗಿತಗೊಳ್ಳಲಿದೆ. ಅಲ್ಲದೆ, ಮಂಗಳೂರಿನಿಂದ ಬಂಟ್ವಾಳದ ಕಾರಿಂಜದ ಪುಳಿಮಜಲು (ಸುಹಾಸ್ ಶೆಟ್ಟಿ ನಿವಾಸ) ತನಕ ಜಾಥಾ ಮೂಲಕ ಮೃತದೇಹದ ಸಾಗಾಟಕ್ಕೆ ಕಾರ್ಯಕರ್ತರು ಒತ್ತಾಯಿಸಿದ್ದಾರೆ.
ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶಿಸಲಾಗಿದೆ. ಬಿಎನ್ಎಸ್ ಕಲಂ 163 ಅಡಿಯಲ್ಲಿ ಮೇ 2 ರ ಮುಂಜಾನೆ 6 ಗಂಟೆಯಿಂದ ಮೇ 6 ರ ಮುಂಜಾನೆ 6 ಗಂಟೆ ವರೆಗೆ ನಿಷೇಧಾಜ್ಞೆ ಜಾರಿಯಲ್ಲಿರಲಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್‌ ಅಗರ್ವಾಲ್ ಆದೇಶದಲ್ಲಿ ತಿಳಿಸಿದ್ದಾರೆ. ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ಖಾಸಗಿ ಬಸ್ ಸಂಚಾರ ಸಂಪೂರ್ಣ ಸ್ತಬ್ಧ!

ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಾಸಗಿ ಬಸ್ ಸಂಚಾರ ಬಂದ್ ಆಗಿದೆ. ಬಸ್ ಓಡಿಸಿದರೆ ನಮಗೂ ತೊಂದರೆಯಾಗಬಹುದು. ಈಗಾಗಲೇ ಬಸ್ಗಳಿಗೆ ಕಲ್ಲು ತೂರಾಟ ಮಾಡಿದ್ದಾರೆ. ಇವತ್ತು ಇಡೀ ದಿನ ಬಸ್ ಬಂದ್ ಇರುತ್ತದೆ ಎಂದು ಖಾಸಗಿ ಬಸ್ ಚಾಲಕರು ತಿಳಿಸಿದ್ದಾರೆ. ಬಸ್ ಸಂಚಾರವಿಲ್ಲದೆ ಪ್ರಯಾಣಿಕರು ಪರದಾಡುವಂತಾಗಿದೆ.
ಸದ್ಯ ಕೆಎಸ್ಆರ್ಟಿಸಿ ಬಸ್ ಸಂಚಾರ ನಡೆಯುತ್ತಿದೆ. ಮತ್ತೊಂದೆಡೆ, ಅಂಗಡಿ ಮುಂಗಟ್ಟುಗಳು ಸಹ ಬಂದ್ ಆಗಿವೆ. ವ್ಯಾಪಾರ ವಹಿವಾಟು ಸಂಪೂರ್ಣ ಬಂದ್ ಆಗಿದೆ.

Categories
ಜ್ಯೋತಿಷ್ಯ

ಈ ದಿನದ ರಾಶಿ ಭವಿಷ್ಯ ಹೇಗಿದೆ?

ಈ ದಿನದ ರಾಶಿ ಭವಿಷ್ಯ ಹೇಗಿದೆ?
– ಲಕ್ಷ್ಮಿ ದೇವಿಯ ಕೃಪೆಯಿಂದ ಯಾವ ರಾಶಿಯವರಿಗೆ ಲಾಭ? ಯಾವ ರಾಶಿಯವರಿಗೆ ನಷ್ಟ?

NAMMUR EXPRESS NEWS
ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು?

** ಮೇಷ ರಾಶಿ :
ಮೇಷ ರಾಶಿಯವರಿಗೆ ಇಂದು ಆರ್ಥಿಕ ಸಮಸ್ಯೆಗಳಿಂದ ಮುಕ್ತಿ ಸಿಗಲಿದೆ. ಹೊಸ ವ್ಯವಹಾರವನ್ನು ಪ್ರಾರಂಭಿಸಲು ಇದು ಉತ್ತಮ ದಿನವಾಗಿದೆ. ಕಚೇರಿಯಲ್ಲಿ ತುಂಬಾ ಬಿಡುವಿಲ್ಲದ ಕೆಲಸವಿರುತ್ತದೆ. ಜೀವನದಲ್ಲಿ ಹೊಸ ವಿಷಯಗಳನ್ನು ಅನ್ವೇಷಿಸುವಿರಿ. ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿಯ ಸಾಧ್ಯತೆ ಇರುತ್ತದೆ. ನಿಮ್ಮ ಸಂಗಾತಿಯೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯಿರಿ. ಇಂದು ನೀವು ವಿಶೇಷ ವ್ಯಕ್ತಿಯ ಪ್ರೀತಿಯನ್ನು ಅನುಭವಿಸಬಹುದು.

** ವೃಷಭ ರಾಶಿ :
ವೃಷಭ ರಾಶಿಯವರಿಗೆ ಮನಸ್ಸು ಗೊಂದಲಮಯವಾಗಿರುತ್ತದೆ. ಅಜ್ಞಾತ ಭಯವು ನಿಮ್ಮನ್ನು ಕಾಡುತ್ತದೆ. ಹೂಡಿಕೆಯಿಂದ ಆರ್ಥಿಕ ನಷ್ಟದ ಲಕ್ಷಣಗಳಿವೆ. ಕೆಲಸದ ಸವಾಲುಗಳು ಹೆಚ್ಚಾಗುತ್ತವೆ. ಎಲ್ಲಾ ಕೆಲಸಗಳು ಮಧ್ಯಂತರವಾಗಿ ನಡೆಯುತ್ತವೆ. ಸಂಪತ್ತು ಮತ್ತು ಆಸ್ತಿಯಲ್ಲಿ ಹೆಚ್ಚಳದ ಸಾಧ್ಯತೆಗಳಿವೆ. ಪ್ರಯಾಣದ ಅವಕಾಶವಿರುತ್ತದೆ. ಇಂದು ನೀವು ಭೂಮಿ ಅಥವಾ ವಾಹನವನ್ನು ಖರೀದಿಸಲು ಯೋಜಿಸಬಹುದು.

** ಮಿಥುನ ರಾಶಿ :
ಇಂದು ಉದ್ಯಮಿಗಳಿಗೆ ಹೊಸ ಸ್ಥಳದಲ್ಲಿ ವ್ಯಾಪಾರವನ್ನು ಪ್ರಾರಂಭಿಸಲು ಅವಕಾಶ ಸಿಗಬಹುದು. ಇಂದು ಗ್ರಾಹಕರು ನಿಮ್ಮ ಕೆಲಸದಿಂದ ಸಂತೋಷವಾಗಿರುತ್ತಾರೆ. ಕುಟುಂಬದ ಸದಸ್ಯರೊಂದಿಗೆ ಯಾವುದೇ ಕುಟುಂಬ ಸಮಾರಂಭದಲ್ಲಿ ಭಾಗವಹಿಸಬಹುದು. ಹೊಸ ಆಸ್ತಿ ಖರೀದಿಗೆ ಇಂದು ಶುಭ ದಿನ. ಕೆಲವು ಜನರು ಹೊಸ ಸಾಧನಗಳು ಅಥವಾ ಗೃಹೋಪಯೋಗಿ ವಸ್ತುಗಳನ್ನು ಖರೀದಿಸಬಹುದು.

** ಕರ್ಕಾಟಕ ರಾಶಿ :
ಇಂದು ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಹೊಸ ಆದಾಯದ ಮೂಲಗಳಿಂದ ಆರ್ಥಿಕ ಲಾಭವಿದೆ. ಸಂಪತ್ತು ವೃದ್ಧಿಯಾಗಲಿದೆ. ಉದ್ಯೋಗ ಮತ್ತು ವ್ಯಾಪಾರಕ್ಕೆ ವಾತಾವರಣವು ಅನುಕೂಲಕರವಾಗಿರುತ್ತದೆ. ಹೊಸ ಕಾರ್ಯಗಳಿಗೆ ಜವಾಬ್ದಾರಿ ಸಿಗಲಿದೆ. ಇಂದು ನೀವು ಕುಟುಂಬದೊಂದಿಗೆ ಎಲ್ಲೋ ಪ್ರಯಾಣಿಸಲು ಯೋಜಿಸಬಹುದು. ಕೆಲವರು ಇಂದು ಆಸ್ತಿಯನ್ನು ಖರೀದಿಸಬಹುದು ಅಥವಾ ಮಾರಾಟ ಮಾಡಬಹುದು.

** ಸಿಂಹ ರಾಶಿ :
ಇಂದು ಸಿಂಹ ರಾಶಿಯವರಿಗೆ ವೃತ್ತಿ ಜೀವನದಲ್ಲಿ ಸವಾಲುಗಳು ಹೆಚ್ಚಾಗಲಿವೆ. ಹೊಸ ಕಾರ್ಯಗಳಿಗೆ ಜವಾಬ್ದಾರಿ ಸಿಗಲಿದೆ. ನೀವು ಕಚೇರಿಯಲ್ಲಿ ಹೆಚ್ಚು ಸಮಯ ಕಳೆಯಬೇಕಾಗಬಹುದು. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ಕುಟುಂಬದ ಸದಸ್ಯರ ವಿವಾಹವನ್ನು ನಿಶ್ಚಯಿಸಬಹುದು. ಇಂದು ದೂರದ ಪ್ರಯಾಣವನ್ನು ತಪ್ಪಿಸಿ. ನೀವು ಶೈಕ್ಷಣಿಕ ಕೆಲಸದಲ್ಲಿ ಗೊಂದಲವನ್ನು ಅನುಭವಿಸುವಿರಿ. ಮಕ್ಕಳು ಏಕಾಗ್ರತೆಯ ಕೊರತೆಯನ್ನು ಅನುಭವಿಸಬಹುದು.

** ಕನ್ಯಾ ರಾಶಿ :
ಕನ್ಯಾ ರಾಶಿಯವರು ಇಂದು ಹೊಸ ವಾಹನ ಅಥವಾ ಎಲೆಕ್ಟ್ರಾನಿಕ್ ಗ್ಯಾಜೆಟ್ ಖರೀದಿಸಲು ಯೋಜಿಸಬಹುದು. ತಮ್ಮ ಉದ್ಯೋಗಗಳನ್ನು ಬದಲಾಯಿಸಲು ಬಯಸುವ ಜನರು ಇಂದು ತಮ್ಮ ಉದ್ಯೋಗ ಪ್ರೊಫೈಲ್ ಅನ್ನು ನವೀಕರಿಸಬೇಕು. ನೀವು ಸಂದರ್ಶನಕ್ಕೆ ಕರೆ ಪಡೆಯಬಹುದು. ಇಂದು, ಕುಟುಂಬ ಸದಸ್ಯರ ಬೆಂಬಲದಿಂದ ಕೆಲಸದಲ್ಲಿನ ಅಡೆತಡೆಗಳು ನಿವಾರಣೆಯಾಗುತ್ತವೆ. ಮಾನಸಿಕ ಒತ್ತಡದಿಂದ ಮುಕ್ತಿ ಪಡೆಯುತ್ತೀರಿ. ಪ್ರೇಮ ಜೀವನದಲ್ಲಿ ಸಂತಸದ ವಾತಾವರಣ ಇರುತ್ತದೆ.

** ತುಲಾ ರಾಶಿ :
ಇಂದು ತುಲಾ ರಾಶಿಯವರಿಗೆ ಬಹುಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ಯಶಸ್ವಿಯಾಗುತ್ತವೆ. ನಿಮ್ಮ ಕೌಶಲ್ಯಗಳನ್ನು ಸುಧಾರಿಸಲು ಪ್ರಯತ್ನಿಸಿ. ಅತಿಥಿಗಳ ಆಗಮನದಿಂದ ಮನೆಯಲ್ಲಿ ಆಹ್ಲಾದಕರ ವಾತಾವರಣವಿರುತ್ತದೆ. ಇಂದು ನೀವು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ಭಾಗವಹಿಸುವಿರಿ. ಶಕ್ತಿ ಮತ್ತು ಆತ್ಮವಿಶ್ವಾಸ ಹೆಚ್ಚುತ್ತದೆ. ಕೆಲವರಿಗೆ ಹೊಸ ಆಸ್ತಿ ಖರೀದಿಗೆ ಆಫರ್‌ಗಳು ಬರಲಿವೆ. ಶೈಕ್ಷಣಿಕ ಕೆಲಸದಲ್ಲಿ ಉತ್ತಮ ಯಶಸ್ಸು ದೊರೆಯಲಿದೆ.

** ವೃಶ್ಚಿಕ ರಾಶಿ :
ಇಂದು ವೃಶ್ಚಿಕ ರಾಶಿಯ ಜನರು ಹಣಕಾಸಿನ ವಿಷಯಗಳಲ್ಲಿ ಅದೃಷ್ಟವಂತರು. ಆದರೆ ಇಂದು ಹೂಡಿಕೆ ನಿರ್ಧಾರಗಳನ್ನು ಬಹಳ ಬುದ್ಧಿವಂತಿಕೆಯಿಂದ ತೆಗೆದುಕೊಳ್ಳಿ. ಕಚೇರಿಯಲ್ಲಿ ಕೆಲವು ಕೆಲಸಗಳನ್ನು ಮತ್ತೆ ಮಾಡಬೇಕಾಗಬಹುದು. ಹೊಸ ಹೂಡಿಕೆ ಅವಕಾಶಗಳಿಂದ ಆರ್ಥಿಕ ಲಾಭ ಇರುತ್ತದೆ. ಮನೆಯಲ್ಲಿರುವ ಹಿರಿಯರು ಮಕ್ಕಳಿಗೆ ಹಣವನ್ನು ಹಂಚಬಹುದು. ಕೆಲವರಿಗೆ ಮನೆ ರಿಪೇರಿ ಆಗಬಹುದು. ನಿಮ್ಮ ದೈನಂದಿನ ದಿನಚರಿಯಿಂದ ವಿರಾಮ ತೆಗೆದುಕೊಳ್ಳಿ ಮತ್ತು ಸ್ವಯಂ-ಆರೈಕೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ.

** ಧನಸ್ಸು ರಾಶಿ :
ಇಂದು ಹಳೆಯ ಹೂಡಿಕೆಯಿಂದ ಉತ್ತಮ ಲಾಭವನ್ನು ಪಡೆಯುತ್ತೀರಿ. ನೀವು ಕಚೇರಿಯಲ್ಲಿ ಉನ್ನತ ಅಧಿಕಾರಿಗಳಿಂದ ಬೆಂಬಲವನ್ನು ಪಡೆಯುತ್ತೀರಿ. ಬಹುಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ಯಶಸ್ವಿಯಾಗುತ್ತವೆ. ವ್ಯಾಪಾರದಲ್ಲಿ ಲಾಭ ಇರುತ್ತದೆ. ಆದಾಯದಲ್ಲಿ ಹೊಸ ಮೂಲಗಳು ಸೃಷ್ಟಿಯಾಗಲಿವೆ. ಹಣ ಉಳಿತಾಯದತ್ತ ಗಮನ ಹರಿಸಿ. ಹೊಸ ಹಣಕಾಸು ಯೋಜನೆಯನ್ನು ಮಾಡಿ. ಇಂದು ನಿಮ್ಮ ಕುಟುಂಬದ ಜವಾಬ್ದಾರಿಗಳು ಹೆಚ್ಚಾಗುತ್ತವೆ.

** ಮಕರ ರಾಶಿ :
ಇಂದು ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಸಂಪತ್ತು ವೃದ್ಧಿಯಾಗಲಿದೆ. ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿವೆ. ನೀವು ಶೈಕ್ಷಣಿಕ ಕೆಲಸದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ಕೆಲವರು ಹೊಸ ಆಸ್ತಿಯನ್ನು ಖರೀದಿಸಲು ಯೋಜಿಸಬಹುದು. ಇಂದು ನೀವು ಭೂಮಿ ಮತ್ತು ಆಸ್ತಿಗೆ ಸಂಬಂಧಿಸಿದ ವಿವಾದಗಳಿಂದ ಪರಿಹಾರವನ್ನು ಪಡೆಯುತ್ತೀರಿ. ಸಂಬಂಧಗಳಲ್ಲಿ ಹೊಸ ರೋಚಕ ತಿರುವುಗಳಿರುತ್ತವೆ. ನಿಮ್ಮ ಸಂಗಾತಿಯೊಂದಿಗೆ ನೀವು ವಿಹಾರವನ್ನು ಯೋಜಿಸಬಹುದು.

** ಕುಂಭ ರಾಶಿ :
ಇಂದು ನಿಮಗೆ ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿವೆ. ವೃತ್ತಿ ಜೀವನದಲ್ಲಿ ಸಾಕಷ್ಟು ಪ್ರಗತಿ ಹೊಂದುವಿರಿ. ಆದರೆ ಮನಸ್ಸು ಆರೋಗ್ಯದ ಬಗ್ಗೆ ಚಿಂತಿಸುತ್ತಲೇ ಇರುತ್ತದೆ. ಕುಟುಂಬದೊಂದಿಗೆ ಮೋಜಿನ ಕ್ಷಣಗಳನ್ನು ಆನಂದಿಸುವಿರಿ. ಕೆಲವರು ಹೊಸ ಫ್ಲಾಟ್ ಅಥವಾ ಮನೆ ಖರೀದಿಸಲು ಯೋಜಿಸಬಹುದು. ಇಂದು ನೀವು ನಿಮ್ಮ ಪ್ರೀತಿಯನ್ನು ನಿಮ್ಮ ಮೋಹಕ್ಕೆ ವ್ಯಕ್ತಪಡಿಸಬಹುದು. ನೀವು ಸಕಾರಾತ್ಮಕ ಪ್ರತಿಕ್ರಿಯೆಯನ್ನು ಪಡೆಯುತ್ತೀರಿ.

** ಮೀನ ರಾಶಿ :
ಇಂದು ವೃತ್ತಿಪರ ಮತ್ತು ವೈಯಕ್ತಿಕ ಜೀವನದ ನಡುವೆ ಸಮತೋಲನವನ್ನು ಕಾಪಾಡಿಕೊಳ್ಳಿ. ತರಾತುರಿಯಲ್ಲಿ ದೊಡ್ಡ ಮೊತ್ತದ ಹಣವನ್ನು ಖರ್ಚು ಮಾಡಬೇಡಿ. ಇಂದು ಅದೃಷ್ಟವು ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ನಿಮ್ಮ ಕಡೆ ಇರುತ್ತದೆ. ಕೌಟುಂಬಿಕ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಒಂಟಿ ವ್ಯಕ್ತಿಗಳು ಹೊಸ ಜನರನ್ನು ಭೇಟಿಯಾಗುತ್ತಾರೆ. ಕೆಲವರು ಕುಟುಂಬದೊಂದಿಗೆ ವಿಹಾರಕ್ಕೆ ಯೋಜಿಸಬಹುದು. ಜೀವನದಲ್ಲಿ ಹೊಸ ವಿಷಯಗಳನ್ನು ಅನ್ವೇಷಿಸಿ.