Categories
ಜ್ಯೋತಿಷ್ಯ

ಈ ದಿನದ ರಾಶಿ ಭವಿಷ್ಯ ಹೇಗಿದೆ?

ಈ ದಿನದ ರಾಶಿ ಭವಿಷ್ಯ ಹೇಗಿದೆ?
– ಮಹಾಲಕ್ಷ್ಮಿ ದೇವಿಯ ಕೃಪೆಯಿಂದ ಯಾವ ರಾಶಿಯವರಿಗೆ ಲಾಭ? ಯಾವ ರಾಶಿಯವರಿಗೆ ನಷ್ಟ?

NAMMUR EXPRESS NEWS
ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು?

** ಮೇಷ ರಾಶಿ :
ಇಂದು ಮೇಷ ರಾಶಿಯವರಿಗೆ ಶುಭ ದಿನ. ಹೊಸ ಆದಾಯದ ಮೂಲಗಳಿಂದ ನಿಮಗೆ ಆರ್ಥಿಕ ಲಾಭಗಳು ಸಿಗುತ್ತವೆ. ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ನಿಮಗೆ ಪರಿಹಾರ ಸಿಗುತ್ತದೆ. ಕಚೇರಿಯಲ್ಲಿ ನಿಮ್ಮ ಕೆಲಸಕ್ಕೆ ಮೆಚ್ಚುಗೆ ಸಿಗುತ್ತದೆ. ಕುಟುಂಬ ಸದಸ್ಯರೊಂದಿಗೆ ಕುಟುಂಬ ಸಮಾರಂಭದಲ್ಲಿ ಭಾಗವಹಿಸುತ್ತೀರಿ. ಮನೆಯಲ್ಲಿ ಸಂತೋಷದ ವಾತಾವರಣವಿರುತ್ತದೆ. ಆಸ್ತಿಗೆ ಸಂಬಂಧಿಸಿದ ವಿವಾದಗಳಿಂದ ನಿಮಗೆ ಪರಿಹಾರ ಸಿಗುತ್ತದೆ.

** ವೃಷಭ ರಾಶಿ :
​ಇಂದು ವೃಷಭ ರಾಶಿಯವರ ಜೀವನದಲ್ಲಿ ಅನೇಕ ದೊಡ್ಡ ಬದಲಾವಣೆಗಳು ಕಂಡುಬರುತ್ತವೆ. ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ವೃತ್ತಿಪರ ಜೀವನದಲ್ಲಿ ಯಶಸ್ಸು ಸಿಗಲಿದೆ. ಹಣದ ಕೊರತೆಯಿದ್ದರೆ ಇಂದು ನಿಮಗೆ ಪರಿಹಾರ ಸಿಗುತ್ತದೆ. ವೃತ್ತಿಜೀವನದಲ್ಲಿ ಅಪಾರ ಯಶಸ್ಸು ಸಿಗುತ್ತದೆ. ಕುಟುಂಬದಲ್ಲಿ ಅಪಾರ ಯಶಸ್ಸು ಸಿಗುತ್ತದೆ. ಕುಟುಂಬ ಜೀವನದಲ್ಲಿ ಸಂತೋಷದ ವಾತಾವರಣವಿರುತ್ತದೆ. ಕೆಲವರಿಗೆ ವಿದೇಶದಲ್ಲಿ ಕೆಲಸ ಮಾಡುವ ಅವಕಾಶ ಸಿಗಬಹುದು. ಹೊಸ ಆಸ್ತಿ ಅಥವಾ ವಾಹನ ಖರೀದಿಸುವ ಅವಕಾಶ ಸಿಗುತ್ತದೆ.

** ಮಿಥುನ ರಾಶಿ :
ಇಂದು ಮಿಥುನ ರಾಶಿಯವರಿಗೆ ಬಹಳಷ್ಟು ಆರ್ಥಿಕ ಲಾಭಗಳು ದೊರೆಯುತ್ತವೆ. ಹೊಸ ಆದಾಯದ ಮೂಲಗಳು ಸೃಷ್ಟಿಯಾಗುತ್ತವೆ. ಭೌತಿಕ ಸೌಕರ್ಯಗಳು ಹೆಚ್ಚಾಗುತ್ತವೆ. ಇಂದು ನಿಮ್ಮ ಜೀವನದಲ್ಲಿ ಸಂತೋಷ ಇರುತ್ತದೆ. ಕೆಲಸದ ಸವಾಲುಗಳು ದೂರವಾಗುತ್ತವೆ. ಪ್ರತಿಯೊಂದು ಕೆಲಸದಲ್ಲೂ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ಪ್ರೇಮ ಜೀವನದ ಸಮಸ್ಯೆಗಳನ್ನು ಬುದ್ಧಿವಂತಿಕೆಯಿಂದ ನಿಭಾಯಿಸಿ.

** ಕರ್ಕಾಟಕ ರಾಶಿ :
ಇಂದು ಶುಭ ದಿನವಾಗಿರುತ್ತದೆ. ಆರ್ಥಿಕ ಸ್ಥಿತಿ ಬಲವಾಗಿರುತ್ತದೆ. ಹಣದ ಒಳಹರಿವು ಹೆಚ್ಚಾಗುತ್ತದೆ. ಹೊಸ ಆಲೋಚನೆಗಳೊಂದಿಗೆ ಮಾಡಿದ ಕೆಲಸವು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ವೃತ್ತಿ ಪ್ರಗತಿಗೆ ಅನೇಕ ಸುವರ್ಣ ಅವಕಾಶಗಳು ಇರುತ್ತವೆ. ಶೈಕ್ಷಣಿಕ ಕೆಲಸದಲ್ಲಿ ನಿಮಗೆ ಉತ್ತಮ ಯಶಸ್ಸು ಸಿಗುತ್ತದೆ. ಹೊಸ ಮನೆ ಅಥವಾ ವಾಹನವನ್ನು ಖರೀದಿಸುವ ಅವಕಾಶಗಳಿವೆ. ಕುಟುಂಬ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ.

** ಸಿಂಹ ರಾಶಿ :
ಸಿಂಹ ರಾಶಿಯವರು ಹಣಕಾಸಿನ ವಿಷಯಗಳಲ್ಲಿ ಅದೃಷ್ಟಶಾಲಿಯಾಗಿರುತ್ತೀರಿ. ಉದ್ಯೋಗದಲ್ಲಿ ಹೊಸ ಯೋಜನೆಯ ಜವಾಬ್ದಾರಿಯನ್ನು ಪಡೆಯುತ್ತೀರಿ. ವೃತ್ತಿಜೀವನದಲ್ಲಿ ಅನುಕೂಲಕರ ವಾತಾವರಣವಿರುತ್ತದೆ. ಸ್ನೇಹಿತರ ಬೆಂಬಲದೊಂದಿಗೆ, ನೀವು ಹಣ ಗಳಿಸಲು ಅನೇಕ ಅವಕಾಶಗಳನ್ನು ಪಡೆಯುತ್ತೀರಿ. ಆದರೆ ಮನಸ್ಸು ಅಪರಿಚಿತ ಭಯಗಳ ಬಗ್ಗೆ ಚಿಂತಿತವಾಗಿರುತ್ತದೆ. ಪೋಷಕರ ಆರೋಗ್ಯದ ಬಗ್ಗೆ ಗಮನ ಕೊಡಿ. ಇಂದು ನೀವು ಕುಟುಂಬದೊಂದಿಗೆ ಪ್ರವಾಸವನ್ನು ಯೋಜಿಸಬಹುದು.

** ಕನ್ಯಾ ರಾಶಿ :
ಇಂದು ಕನ್ಯಾ ರಾಶಿಯವರ ವೃತ್ತಿಪರ ಜೀವನದಲ್ಲಿ ಕಾರ್ಯಕ್ಷಮತೆ ಅತ್ಯುತ್ತಮವಾಗಿರುತ್ತದೆ. ಕುಟುಂಬದಿಂದ ದೂರ ವಾಸಿಸುವವರು ಇಂದು ತಮ್ಮ ಸಂಬಂಧಿಕರನ್ನು ಭೇಟಿ ಮಾಡಲು ಹೋಗಬಹುದು. ಶೈಕ್ಷಣಿಕ ಕೆಲಸದಲ್ಲಿ ಉತ್ತಮ ಫಲಿತಾಂಶಗಳನ್ನು ಸಾಧಿಸಲಾಗುತ್ತದೆ. ಜೀವನದಲ್ಲಿ ಸಂತೋಷ ಮತ್ತು ಉತ್ಸಾಹದ ವಾತಾವರಣವಿರುತ್ತದೆ. ಮನಸ್ಸು ಸಂತೋಷವಾಗಿರುತ್ತದೆ. ಪ್ರೇಮ ಜೀವನದಲ್ಲಿ ನಿಮ್ಮ ಸಂಗಾತಿಯ ಭಾವನೆಗಳಿಗೆ ಬೆಲೆಕೊಡಿ.

** ತುಲಾ ರಾಶಿ :
ಇಂದು ನಿಮಗೆ ಬಹಳ ವಿಶೇಷವಾದ ದಿನವಾಗಿರುತ್ತದೆ. ನೀವು ಆರ್ಥಿಕ ವಿಷಯಗಳಲ್ಲಿ ಅದೃಷ್ಟಶಾಲಿಯಾಗಿರುತ್ತೀರಿ. ಆದಾಯ ಹೆಚ್ಚಾಗುತ್ತದೆ. ವೃತ್ತಿಪರ ಜೀವನದಲ್ಲಿ ದೊಡ್ಡ ಬದಲಾವಣೆಗಳು ಕಂಡುಬರುತ್ತವೆ. ಉದ್ಯೋಗಗಳನ್ನು ಬದಲಾಯಿಸಲು ಬಯಸುವವರಿಗೆ ಇಂದು ಸಂದರ್ಶನಕ್ಕೆ ಕರೆ ಬರಬಹುದು. ಮನೆಯಲ್ಲಿ ಒಡಹುಟ್ಟಿದವರ ಬೆಂಬಲದೊಂದಿಗೆ ಹಣ ಗಳಿಸಲು ನಿಮಗೆ ಹೊಸ ಅವಕಾಶಗಳು ಸಿಗುತ್ತವೆ.

** ವೃಶ್ಚಿಕ ರಾಶಿ :
ಇಂದು ಹಳೆಯ ಹೂಡಿಕೆಗಳು ಉತ್ತಮ ಲಾಭವನ್ನು ನೀಡುತ್ತವೆ. ಹಣಕಾಸಿನ ಲಾಭಕ್ಕಾಗಿ ಅನೇಕ ಅವಕಾಶಗಳಿವೆ. ಆರೋಗ್ಯ ಸಂಬಂಧಿತ ಸಮಸ್ಯೆಗಳಿಂದ ನೀವು ಪರಿಹಾರ ಪಡೆಯುತ್ತೀರಿ. ನೀವು ಕಚೇರಿ ಕೆಲಸವನ್ನು ಆತ್ಮವಿಶ್ವಾಸದಿಂದ ನಿರ್ವಹಿಸಲು ಸಾಧ್ಯವಾಗುತ್ತದೆ. ಮನೆಯಲ್ಲಿ ಶುಭ ಕಾರ್ಯಗಳನ್ನು ಆಯೋಜಿಸಬಹುದು. ಮನೆ ಖರೀದಿಗೆ ಅಗತ್ಯವಾದ ದಾಖಲೆಗಳನ್ನು ಬಹಳ ಎಚ್ಚರಿಕೆಯಿಂದ ಓದಿ. ಹಣಕಾಸಿನ ವಿಷಯಗಳಲ್ಲಿ ಅಸಡ್ಡೆ ಮಾಡಬೇಡಿ.

** ಧನಸ್ಸು ರಾಶಿ :
ಇಂದು ಹಣಕಾಸಿನ ವಿಷಯಗಳಲ್ಲಿ ಸ್ವಲ್ಪ ಜಾಗರೂಕರಾಗಿರಿ. ಅನಗತ್ಯ ಖರ್ಚುಗಳನ್ನು ನಿಯಂತ್ರಿಸಿ. ವೃತ್ತಿಪರ ಜೀವನದಲ್ಲಿ ಸವಾಲುಗಳು ಹೆಚ್ಚಾಗುತ್ತವೆ. ಆದರೆ ಕಠಿಣ ಪರಿಶ್ರಮ ಮತ್ತು ಸಮರ್ಪಣೆ ಕೂಡ ಫಲಿತಾಂಶಗಳನ್ನು ನೀಡುತ್ತದೆ. ಪ್ರತಿಯೊಂದು ಕೆಲಸಕ್ಕೂ ಉತ್ತಮ ಫಲಿತಾಂಶ ಸಿಗುತ್ತದೆ. ಮನೆಯಲ್ಲಿ ಶಾಂತಿ ಮತ್ತು ಸಂತೋಷ ಇರುತ್ತದೆ. ಮಾನಸಿಕ ಒತ್ತಡದಿಂದ ನಿಮಗೆ ಪರಿಹಾರ ಸಿಗುತ್ತದೆ. ಆದರೆ, ಸಂಬಂಧಗಳಲ್ಲಿ ಭಾವನೆಗಳ ಏರಿಳಿತಗಳು ಸಾಧ್ಯ.

** ಮಕರ ರಾಶಿ :
ಇಂದು ವೃತ್ತಿಪರ ಜೀವನದಲ್ಲಿ ಎಲ್ಲವೂ ಚೆನ್ನಾಗಿರುತ್ತದೆ. ನಿಮ್ಮ ಸಂಗಾತಿಯಿಂದ ನಿಮಗೆ ಬೆಂಬಲ ಸಿಗುತ್ತದೆ. ನೀವು ವೃತ್ತಿಜೀವನದಲ್ಲಿ ಅಪಾರ ಯಶಸ್ಸನ್ನು ಸಾಧಿಸುವಿರಿ. ಸಾಮಾಜಿಕ ಸ್ಥಾನಮಾನ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ಶೈಕ್ಷಣಿಕ ಕೆಲಸದಲ್ಲಿ ನೀವು ಹೊಸ ಸಾಧನೆಗಳನ್ನು ಸಾಧಿಸುವಿರಿ. ಕೆಲಸಕ್ಕೆ ಸಂಬಂಧಿಸಿದಂತೆ ಪ್ರಯಾಣಿಸುವ ಅವಕಾಶಗಳು ಇರುತ್ತವೆ. ಶೈಕ್ಷಣಿಕ ಕೆಲಸದಲ್ಲಿ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ.

** ಕುಂಭ ರಾಶಿ :
ಇಂದು ಹಣವನ್ನು ಬುದ್ಧಿವಂತಿಕೆಯಿಂದ ನಿರ್ವಹಿಸಿ. ಹೊಸ ಹೂಡಿಕೆ ಅವಕಾಶಗಳ ಮೇಲೆ ನಿಗಾ ಇರಿಸಿ. ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಅದೃಷ್ಟವು ನಿಮಗೆ ಅನುಕೂಲಕರವಾಗಿರುತ್ತದೆ. ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ನೀವು ಅಪಾರ ಯಶಸ್ಸನ್ನು ಸಾಧಿಸುವಿರಿ. ವಿದೇಶ ಪ್ರಯಾಣದ ಸಾಧ್ಯತೆಗಳು ಇರುತ್ತವೆ. ಕೆಲಸದ ಆಹ್ಲಾದಕರ ಫಲಿತಾಂಶಗಳನ್ನು ನೀವು ಪಡೆಯುತ್ತೀರಿ. ಹೊಸ ಆಸ್ತಿಯನ್ನು ಖರೀದಿಸಲು ಇಂದು ಉತ್ತಮ ದಿನ.

** ಮೀನ ರಾಶಿ :
ಇಂದು ನಿಮ್ಮ ವೃತ್ತಿಪರ ಜೀವನದಲ್ಲಿ ಎಲ್ಲವೂ ಚೆನ್ನಾಗಿರುತ್ತದೆ. ದೀರ್ಘ ಪ್ರಯಾಣದ ಸಾಧ್ಯತೆಗಳು ಇರುತ್ತವೆ. ಮನೆ ಮತ್ತು ಕುಟುಂಬದಲ್ಲಿ ಸಂತೋಷದ ವಾತಾವರಣವಿರುತ್ತದೆ. ನಿಮ್ಮ ಗುರಿಗಳನ್ನು ಸಾಧಿಸಲು ನೀವು ಪ್ರೇರೇಪಿತರಾಗಿ ಕಾಣುವಿರಿ. ಕಚೇರಿಯಲ್ಲಿ ಹಿರಿಯರಿಂದ ಬೆಂಬಲ ಪಡೆಯುತ್ತೀರಿ. ವೃತ್ತಿಜೀವನದಲ್ಲಿ ಪ್ರಗತಿಯ ಹಾದಿ ಸುಲಭವಾಗುತ್ತದೆ. ದೀರ್ಘಕಾಲದಿಂದ ಬಾಕಿ ಇರುವ ಹಣ ಹಿಂತಿರುಗುತ್ತದೆ. ವಿದೇಶದಲ್ಲಿ ಅಧ್ಯಯನ ಮಾಡಲು ಬಯಸುವ ವಿದ್ಯಾರ್ಥಿಗಳಿಗೆ ಒಳ್ಳೆಯ ಸುದ್ದಿ ಸಿಗುತ್ತದೆ.

Categories
ಕೊಪ್ಪ

ರಾಜ್ಯ ಪೌರ ನೌಕರರ ಸಂಘದಿಂದ ರಾಜ್ಯಾದ್ಯಂತ ಪ್ರತಿಭಟನೆ

ರಾಜ್ಯ ಪೌರ ನೌಕರರ ಸಂಘದಿಂದ ರಾಜ್ಯಾದ್ಯಂತ ಪ್ರತಿಭಟನೆ

* ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ
* ಎನ್.ಆರ್ ಪುರದಲ್ಲಿ ನಡೆದ ಮುಷ್ಕರಕ್ಕೆ ಡಿಎಸ್‌ಎಸ್ ನಿಂದ ಬೆಂಬಲ

NAMMMUR EXPRESS NEWS
ಎನ್.ಆರ್ ಪುರ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿ ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ವತಿಯಿಂದ ರಾಜ್ಯಾದ್ಯಂತ ಮುಷ್ಕರ ಹಮ್ಮಿಕೊಳ್ಳಲಾಗಿದೆ.
ದಲಿತ ಸಂಘರ್ಷ ಸಮಿತಿ ಕೃಷ್ಣಪ್ಪ ಬಣ ಇಂದು ಎನ್.ಆರ್ ಪುರ ತಾಲೂಕು ಪಟ್ಟಣ ಪಂಚಾಯಿತಿ ಕರ್ನಾಟಕ ರಾಜ್ಯ ಪೌರ ನೌಕರ ಸಂಘ ತಾಲೂಕಿನಲ್ಲಿ ಮುಷ್ಕರ ನಡೆಸಿದರು. ಈ ಮುಷ್ಕರವನ್ನು ಬೆಂಬಲಿಸಿ ತಾಲೂಕಿನ ಡಿಎಸ್ಎಸ್ ಸಂಘಟನೆ ಬೆಂಬಲ ಸೂಚಿಸಿ ಮುಷ್ಕರದಲ್ಲಿ ಸದಸ್ಯರೊಡನೆ ಭಾಗವಹಿಸಿತು. ಡಿಎಸ್ಎಸ್ ಜಿಲ್ಲಾ ಸಂಘಟಕ ಸಂಚಾಲಕರು ಡಿ .ರಾಮು ಹಾಗೂ ಡಿಎಸ್ಎಸ್ ಮಹಿಳಾ ಒಕ್ಕೂಟ ಸಂಘಟಕ ಸಂಚಾಲಕರು ಪವಿತ್ರ, ಚಲವಾದಿ ಮಹಾಸಭಾ ಪ್ರಧಾನ ಕಾರ್ಯದರ್ಶಿ ಮುಕುಂದ, ತಾಲೂಕು ಮಹಿಳಾ ಘಟಕ ಸಂಚಾಲಕ ವಿಜಯಕುಮಾರ್, ನಗರ ಘಟಕ ಅಧ್ಯಕ್ಷರಾದ ಪಿಕಪ್ ಚಂದ್ರು, ಮೆಣಸೂರು ಗ್ರಾಮ ಸಂಚಾಲಕರಾದ ಲಾರೆನ್ಸ್, ಸುಸರ್ವಾನಿ ಗ್ರಾಮ ಸಂಚಾಲಕ ತಂಗಪ್ಪನ್,ಪಟ್ಟಣ ಪಂಚಾಯ್ತಿ ಸ್ಥಾಯಿ ಸಮಿತಿ ಅಧ್ಯಕರಾದ ಪ್ರಶಾಂತ್ ಶೆಟ್ಟಿ ಹಾಗೂ ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಜುಬೇದ ಸೇರಿದಂತೆ ಎಲ್ಲಾ ಡಿಎಸ್ಎಸ್ ಮುಖಂಡರು ಈ ಮುಷ್ಕರಕ್ಕೆ ಬೆಂಬಲವನ್ನು ಸೂಚಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು.

* ಕರ್ನಾಟಕ ಪೌರ ನೌಕರರ ಸಂಘದ ಬೇಡಿಕೆಗಳೇನು ??
ಕರ್ನಾಟಕ ನಾಗರೀಕ ಸೇವಾ ನಿಯಮದ ಅಧಿನಿಯಮ 1978 ರನ್ನು ಕರ್ನಾಟಕ ಪೌರ ಸೇವಾ ನೌಕರರಿಗೆ ಅನ್ವಯಿಸುವುದು ಹಾಗೂ ಪಂಚಾಯತ್ ರಾಜ್ ಇಲಾಖೆ ನೌಕರರನ್ನು ರಾಜ್ಯ ಸರ್ಕಾರಿ ನೌಕರರೆಂದು ಪರಿಗಣಿಸುವುದು. ಮಾದರಿಯಲ್ಲಿ ರಾಜ್ಯದ ನಗರ ಸ್ಥಳೀಯ ಸಂಸ್ಥೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಿ ಜಿ.ಪಿ.ಎಫ್.ಕೆ.ಜಿ.ಐ.ಡಿ. ಜ್ಯೋತಿ ಸಂಜೀವಿನಿ ಸೇರಿದಂತೆ ಸರ್ಕಾರಿ ನೌಕರರು ಪಡೆಯುವ ಎಲ್ಲಾ ಸೌಲಭ್ಯಗಳನ್ನು ವಿಸ್ತರಿಸುವುದು. ಶಾಸನ ಸಭೆಯಲ್ಲಿ ಕಾಯ್ದು ಮತ್ತು ನಿಯಮಗಳಿಗೆ ತಿದ್ದುಪಡಿ ಮಾಡಿ ಯಥಾ ಒತ್ತಾಗಿ ಪೌರ ಸೇವಾ ನೌಕರರಿಗೆ ಜಾರಿ ಮಾಡಬೇಕು.
ಹೊರ ಗುತ್ತಿಗೆದಾರರ ಆಧಾರದ ಮೇಲೆ ನೀರು ಸರಬರಾಜು ಸಹಾಯಕರು, ವಾಹನ ಚಾಲಕರು, ಬೀದಿ ದೀಪ ಸಹಾಯಕರು, ಲೋಡರ್, ಪಾರ್ಕ್ಲಾಗಾರ್ಡ್, ಕಾವಲುಗಾರ, ಸ್ಯಾನಿಟರಿ ಸೂಪರ್ವೈಸರ್ ಸೇರಿದಂತೆ ವಿವಿಧ ವಿಭಾಗದಲ್ಲಿ ಹೊರಗುತ್ತಿಗೆ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ನೌಕರರನ್ನು ನೇಮಕಾತಿಗೆ ಒಳಪಡಿಸುವುದು.
ದಿನಗೂಲಿ ಕ್ಷೇಮಾಭಿವೃದ್ಧಿ ಸಮಾನ ಕೆಲಸಕ್ಕೆ ಸಮಾನ ವೇತನ ಟೈಮ್ ಸ್ಕೆಲ್ ನೌಕರರನ್ನು ಖಾಲಿ ಇರುವ ಹುದ್ದೆಗಳಿಗೆ ಸಕ್ರಮತಿ ವಿಲೀನ ಮಾಡುವುದು.
7ನೇ ವೇತನ ಹಾಗೂ 2023/ 24ನೇ ಸಾಲಿನ ನೇಮಕಾತಿಗೊಂಡ ಪೌರ ಕಾರ್ಮಿಕರು, ಲೋಡರ್, ಕ್ಲೀನರ್ ವೇತನವನ್ನು ಎಸ್‌. ಎಫ್. ಸಿ. ವೇತನ ಅನುದಾನದ ಅಡಿಯಲ್ಲಿ ವೇತನ ನೀಡುವುದು.
ನೇಮಕಾತಿಯ ಅಡಿ ಲ್ಯಾಬ್ ಟೆಕ್ನಿಷಿಯನ್, ಪ್ಲಂಬರ್ ಈ ಹುದ್ದೆಗಳಿಗೆ ಅವಕಾಶ ಕಲ್ಪಿಸಿದ್ದು ಈ ಹುದ್ದೆಗಳು ನಗರ ಸ್ಥಳೀಯ ಸಂಸ್ಥೆಗಳ ಕುಡಿಯುವ ನೀರಿನ ಗುಣಮಟ್ಟ ನಿರ್ವಹಣೆಗೆ ಅತ್ಯಂತ ಅವಶ್ಯಕವಾಗಿದ್ದು ಈ ಹುದ್ದೆಗಳಿಗೆ ಇದುವರೆಗೂ ನೇಮಕಾತಿ ಮಾಡದೆ ಇರುವುದರಿಂದ ನೀರಿನ ಗುಣಮಟ್ಟ ನಿರ್ವಹಣೆಯಲ್ಲಿ ಅನೇಕ ತೊಡಕು ಉಂಟಾಗುತ್ತಿದ್ದು ಈ ಹುದ್ದೆಗಳನ್ನು ನೇರ ನೇಮಕಾತಿ ಮಾಡಿ ಕೊಡಲು ಹೊರಗುತ್ತಿಗೆ ಮೇಲೆ ತೆಗೆದುಕೊಳ್ಳಲು ಅನುಮತಿ ನೀಡಬೇಕು.
ಇಂತಹ ಹಲವಾರು ಬೇಡಿಕೆಗಳನ್ನು ಇಟ್ಟುಕೊಂಡು ಇಡೀ ಕರ್ನಾಟಕ ರಾಜ್ಯಾದ್ಯಂತ ಪೌರಕಾರ್ಮಿಕರ ಮುಷ್ಕರ ನಡೆಯುತ್ತಿದೆ ಈ ಬೇಡಿಕೆಗಳನ್ನು ಈಡೇರಿಸದಿದ್ದರೆ ಈ ಮುಷ್ಕರ ಸತತವಾಗಿ ಮುಂದುವರೆಯುವುದು ಎಂದು ರಾಜ್ಯ ಸಮಿತಿಯು ತಿಳಿಸಿದೆ.

Categories
ಚಿಕ್ಕಮಗಳೂರು

ಪ್ರೀತಿಸಿ ಮದುವೆಯಾದ ಪತ್ನಿಯನ್ನೇ ಕೊಂದ ಪತಿ

ಪ್ರೀತಿಸಿ ಮದುವೆಯಾದ ಪತ್ನಿಯನ್ನೇ ಕೊಂದ ಪತಿ 

* ಪತ್ನಿ ಕೊಂದು ತಲೆಮರೆಸಿಕೊಂಡಿದ್ದ ಪತಿ ಮುಳ್ಳಯ್ಯನಗಿರಿಯಲ್ಲಿ ಬಂಧನ
* ದಂಪತಿಗಳ ಜಗಳಕ್ಕೆ ಎರಡೂವರೆ ವರ್ಷದ ಮಗು ಅನಾಥ

NAMMMUR EXPRESS NEWS
ಚಿಕ್ಕಮಗಳೂರು: ತಾಲೂಕಿನ ಕೈಮರ ಗ್ರಾಮದಲ್ಲಿ ಕೀರ್ತಿ (26) ಎಂಬ ಯುವತಿಯನ್ನು ಅವಿನಾಶ್ ಎನ್ನುವ ವ್ಯಕ್ತಿ ಸುಮಾರು 4 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದಾನೆ ಮತ್ತು ಇವರಿಬ್ಬರಿಗೆ ಎರಡೂವರೆ ವರ್ಷದ ಮಗುವಿದೆ. ಆದರೆ ಕಳೆದ ಕೆಲ ದಿನಗಳಿಂದ ದಂಪತಿ ನಡುವೆ ಜಗಳ ಬರಲು ಶುರುವಾಗಿದೆ. ಈ ಜಗಳ ವಿಕೋಪಕ್ಕೆ ಹೋಗಿ ಅವಿನಾಶ್ ತನ್ನ ಪತ್ನಿ ಕೀರ್ತಿಯನ್ನು ಚಾಕುವಿನಿಂದ ಇರಿದು ಕೊಂದು ಪರಾರಿಯಾಗಿದ್ದ ಈ ಸಂಬಂಧ ಕೀರ್ತಿಯ ಸಂಬಂಧಿಕರು ಅರೋಪಿಸಿ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

* ಆರೋಪಿ ಮುಳ್ಳಯ್ಯನಗಿರಿಯಲ್ಲಿ ಅರೆಸ್ಟ್ 
ಪತ್ನಿಯನ್ನ ಕೊಂದು ನಾಪತ್ತೆಯಾಗಿದ್ದ ಪತಿಯನ್ನು ಗ್ರಾಮಾಂತರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಅವಿನಾಶ್(32) ಬಂಧಿತ ಆರೋಪಿ. ಬುಧವಾರ ಬೆಳಗ್ಗೆ ಇವರಿಬ್ಬರ ಮಧ್ಯೆ ಜಗಳ ಏರ್ಪಟ್ಟು, ಪತ್ನಿ ಕೀರ್ತಿಯನ್ನ ಅವಿನಾಶ್ ಚಾಕುವಿನಿಂದ ಹತ್ತಕ್ಕೂ ಹೆಚ್ಚು ಬಾರಿ ಇರಿದಿದ್ದ.
ಪತಿಯಿಂದ ಚಾಕು ಇರಿತಕ್ಕೊಳಗಾದ ಕೀರ್ತಿ ರಕ್ತದ ಮಡುವಿನಲ್ಲೇ ಮನೆಯಿಂದ ಓಡಿ ಬಂದು ನಡು ರಸ್ತೆಯಲ್ಲಿ ಕೂಗಿಕೊಂಡು ಬಿದ್ದಿದ್ದಳು. ಕೂಡಲೇ ಆಕೆಯನ್ನು ಪೋಷಕರು ಹಾಗೂ ಸ್ಥಳೀಯರು ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ಮಾಡಿದ್ದರು. ಆದರೆ ಅವಿನಾಶ್, ಮನಸೋ ಇಚ್ಛೆ ಚಾಕುವಿನಿಂದ ಹಲ್ಲೆ ಮಾಡಿದ ಪರಿಣಾಮ ತೀವ್ರ ರಕ್ತಸ್ರಾವವಾಗಿ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಆಕೆ ಸಾವನ್ನಪ್ಪಿದ್ದಳು.ಕೀರ್ತಿಗೆ ಚಾಕುವಿನಿಂದ ಇರಿದ ಅವಿನಾಶ್, ಬಳಿಕ ಮುಳ್ಳಯ್ಯನಗಿರಿ ಕಾಡಿನಲ್ಲಿ ನಾಪತ್ತೆಯಾಗಿದ್ದ. ಆತನ ಬಂಧನಕ್ಕಾಗಿ ಚಿಕ್ಕಮಗಳೂರು ಎಸ್ಪಿ ವಿಕ್ರಂ ಆಮ್ಟೆ ಗ್ರಾಮಾಂತರ ಪೊಲೀಸ್ ಇನ್ಸ್ಪೆಕ್ಟರ್ ಸಚಿನ್ ಹಾಗೂ ಸಬ್ ಇನ್ಸ್ಪೆಕ್ಟರ್, ರಾಜೇಶ್ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಿದ್ದರು.
ಘಟನೆ ನಡೆದ ಏಳರಿಂದ ಎಂಟು ಗಂಟೆಗಳ ಕಾಲ ಮುಳ್ಳಯ್ಯನಗಿರಿ ಕಾಡಿನಲ್ಲಿ ಅವಿತು ಕೂತಿದ್ದ ಆರೋಪಿ ಅವಿನಾಶ್‌ನನ್ನ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Categories
ಕರಾವಳಿ

ಕಾರ್ಕಳ: 2 ದಿನದ ಹಸುಗೂಸನ್ನು 1 ಲಕ್ಷ ರೂಪಾಯಿಗೆ ಮಾರಾಟ ಮಾಡಿದ ಹೆತ್ತವರು!

ಕರಾವಳಿ ಟಾಪ್ ನ್ಯೂಸ್!

ಕಾರ್ಕಳ: 2 ದಿನದ ಹಸುಗೂಸನ್ನು 1 ಲಕ್ಷ ರೂಪಾಯಿಗೆ ಮಾರಾಟ ಮಾಡಿದ ಹೆತ್ತವರು!

* ಹೆಬ್ರಿ: ಉದ್ಯಮಿಯ ಮನೆಯಲ್ಲಿ ಲಕ್ಷಾಂತರ ರೂಪಾಯಿ ವಸ್ತುಗಳು ಕಳವು
* ಶಿರ್ವಾ: ಚಾಲಕನ ನಿರ್ಲಕ್ಷತನದಿಂದ ಅಪಘಾತ, ಸವಾರನಿಗೆ ಗಂಭೀರ ಗಾಯ

NAMMUR EXPRESS NEWS
ಕಾರ್ಕಳ: ಕೇವಲ ಒಂದು ಲಕ್ಷ ರೂಪಾಯಿ ಹಣದಾಸೆಗಾಗಿ 2 ದಿನದ ಹಸುಗೂಸನ್ನು ಚಿಕ್ಕಮಗಳೂರಿನ ಎನ್‌ಆರ್‌ಪುರದಿಂದ ಕಾರ್ಕಳದ ದಂಪತಿಗೆ ಮಾರಾಟ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.
ಈ ಪ್ರಕರಣದಲ್ಲಿ ಭಾಗಿಯಾದ ಮಗುವಿನ ಹೆತ್ತವರು, ಮಗುವನ್ನು ಪಡೆದವರು ಹಾಗೂ ಆರೋಗ್ಯ ಇಲಾಖೆಯ ನಿವೃತ್ತ ನರ್ಸ್ ಕುಸುಮಾ ಸೇರಿ ಐವರ ವಿರುದ್ಧ ಕೇಸ್ ದಾಖಲಾಗಿದೆ.
ಕಾರ್ಕಳದ ರಾಘವೇಂದ್ರ ಎಂಬವರಿಗೆ 2 ದಿನದ ಹೆಣ್ಣು ಮಗುವನ್ನು ಮಾರಾಟ ಮಾಡಲಾಗಿತ್ತು. ರಾಘವೇಂದ್ರ ಅವರಿಗೆ ಮಕ್ಕಳಿಲ್ಲದ ಹಿನ್ನಲೆಯಲ್ಲಿ ಮಗುವನ್ನು ಸಾಕುವ ಉದ್ದೇಶದಿಂದ ತನ್ನ ಹಿರಿಯ ಸಹೋದರಿ ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಕುಸುಮಾ ಅವರ ಸಹಾಯ ಪಡೆದಿದ್ದರು. ಎನ್‌ಆರ್‌ಪುರದ ದಂಪತಿಗೆ 1 ಲಕ್ಷ ಹಣ ನೀಡುವುದಾಗಿ ಮೊದಲೇ ಮಾತುಕತೆ ನಡೆದಿತ್ತು. ಇದಾದ ಬಳಿಕ ಮಗು ಜನಿಸಿದ ಕೇವಲ ಎರಡೇ ದಿನಕ್ಕೆ ದಂಪತಿಗೆ 5 ಸಾವಿರ ಮುಂಗಡ ಹಣ ಕೊಟ್ಟು ಮಗುವನ್ನು ಗುಟ್ಟಾಗಿ ತಂದು ರಾಘವೇಂದ್ರ ಅವರಿಗೆ ಒಪ್ಪಿಸಲಾಗಿತ್ತು.
ಆದರೆ ಆಶಾ ಕಾರ್ಯಕರ್ತೆ ದಂಪತಿ ಮನೆಗೆ ಭೇಟಿ ನೀಡಿದಾಗ ಮನೆಯಿಂದ ಮಗು ನಾಪತ್ತೆಯಾಗಿತ್ತು. ಈ ವಿಚಾರ ತಿಳಿದ ತಕ್ಷಣವೇ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹಾಗೂ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಮನೆಗೆ ಧಾವಿಸಿ ಪೋಷಕರನ್ನು ವಿಚಾರಿಸಿದಾಗ ಮಗು ಕಾರ್ಕಳಕ್ಕೆ ಮಾರಾಟ ಮಾಡಲಾದ ವಿಚಾರ ಬೆಳಕಿಗೆ ಬಂದಿದೆ.
ತಕ್ಷಣವೇ ಸಿಡಿಪಿಓ ಹಾಗೂ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಕಾರ್ಕಳಕ್ಕೆ ಬಂದು ರಾಘವೇಂದ್ರ ದಂಪತಿಗಳ ಬಳಿಯಿದ್ದ ಹೆಣ್ಣು ಮಗುವನ್ನು ವಶಕ್ಕೆ ಪಡೆದು ರಕ್ಷಿಸಿದ್ದಾರೆ. ಮಕ್ಕಳಿಲ್ಲ ದಂಪತಿ ಮಗು ಬೇಕೆನ್ನುವ ಸಹಜ ಆಸೆಯಿಂದ ಕಾನೂನಿನ ಜ್ಞಾನವಿಲ್ಲದೇ ನಿಯಮಬಾಹಿರವಾಗಿ ಮಗುವನ್ನು ತಂದು ಸಾಕಲು ಮುಂದಾಗಿದ್ದರು. ಆದರೆ ಕಾನೂನುಪ್ರಕಾರ ದತ್ತು ಪಡೆಯುವ ಅವಕಾಶವಿದ್ದರೂ ಇದನ್ನು ಪಾಲಿಸದ ಹಿನ್ನಲೆಯಲ್ಲಿ ಅಧಿಕಾರಿಗಳು ಮಾನವ ಕಳ್ಳ ಸಾಗಣೆಯ ಪ್ರಕಾರ ಪ್ರಕರಣ ದಾಖಲಿಸಿದ್ದಾರೆ.

* ಹೆಬ್ರಿ: ಉದ್ಯಮಿಯ ಮನೆಯಲ್ಲಿ ಲಕ್ಷಾಂತರ ರೂಪಾಯಿ ವಸ್ತುಗಳು ಕಳವು

ಹೆಬ್ರಿ: ಚಂದ್ರಶೇಖರ (56), ಕಳ್ತೂರು ಗ್ರಾಮ ಬ್ರಹ್ಮಾವರ ಇವರು ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ ಹೋಟೆಲ್‌ ಉದ್ಯಮಿಯಾಗಿದ್ದು, ಮನೆಯಲ್ಲಿ ಲಕ್ಷಾಂತರ ಮೌಲ್ಯದ ವಸ್ತುಗಳು ಜೊತೆಗೆ ನಗದು ಕಳ್ಳತನವಾಗಿರುವ ಘಟನೆ ನಡೆದಿದೆ.
ಊರಿನಲ್ಲಿ ಹೆಂಡತಿ ಹಾಗೂ ಮಗಳು ಮನೆಗೆ ಬೀಗ ಹಾಕಿ ಕಿತ್ತೂರಿಗೆ ಹೋಗಿದ್ದು ಮಗ ಹಾಗೂ ಮಾವ ಕಳ್ತೂರಿನ ಮನೆಗೆ ಹೋಗಿ ಮನೆ ಸ್ವಚ್ಚ ಮಾಡಿ ಹೋಗಿದ್ದಾರೆ.
ಹೆಂಡತಿ ಮಕ್ಕಳೊಂದಿಗೆ ಮನೆಗೆ ಬಂದಾಗ ಯಾರೋ ಕಳ್ಳರು ಅಡುಗೆ ಮನೆ ಗೋಡೆಯಲ್ಲಿ ವೆಂಟಿಲೇಟರ್‌ ಅಳವಡಿಸಲು ಮರದ ಹಲೆಗೆ ಹಾಕಿ ಬಿಟ್ಟಿದ್ದ ಕಂಡಿಯ ಮುಖಾಂತರ ಮನೆಯ ಒಳಗೆ ಪ್ರವೇಶಿಸಿ ಮನೆಯ ಮಲಗುವ ಕೊಣೆಯ ಮರದ ಕಪಾಟಿನ ಡ್ರಾವರ್‌ನ್ನು ಮೀಟಿ ತೆಗೆದು 60,000 ರೂಪಾಯಿ ಮೌಲ್ಯದ ಚಿನ್ನದ ಬಳೆಗಳು -2 ಉಂಗುರ -1 ಮತ್ತು ಚಿನ್ನದ ಪಾಟಿ 2 ನ್ನು ಹಾಗೂ ಇನ್ನೊಂದು ಡ್ರಾವರ್‌ನಿಂದ 20,000/- ನಗದು ಮತ್ತು ಒಂದು 5,000/- ರೂಪಾಯಿ ಮೌಲ್ಯದ ವಾಚ್‌ ಮತ್ತು ಹಾಗೂ ಬ್ಯಾಗ್‌ನಲ್ಲಿದ್ದ 4,000/- ಮೌಲ್ಯದ ಬೆಳ್ಳಿಯ ಕಾಲು ಚೈನ್‌ ಹಾಗೂ ನೇವಲ ಮತ್ತು ದೇವರ ಕೋಣೆಯಲ್ಲಿದ್ದ 32,000/- ರೂಪಾಯಿ ಮೌಲ್ಯದ ಬೆಳ್ಳಿಯ ಚೊಂಬು -1 ಬೆಳ್ಳಿಯ ದೊಡ್ಡ ದೀಪ -2 ಹಾಗೂ ಬೆಳ್ಳಿಯ ಸಣ್ಣ ದೀಪಗಳು -3 ನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ‌

* ಶಿರ್ವಾ: ಚಾಲಕನ ನಿರ್ಲಕ್ಷತನದಿಂದ ಅಪಘಾತ, ಸವಾರನಿಗೆ ಗಂಭೀರ ಗಾಯ

ಶಿರ್ವಾ: ಪ್ರಶಾಂತ್ (39),ಸೂಡಾ ಗ್ರಾಮ ಕಾರ್ಕಳದಲ್ಲಿ ಬೆಳಿಗ್ಗೆ ಮನೆಯಿಂದ ಶಿರ್ವಾ-ಕಟಪಾಡಿ-ಉಡುಪಿ ಮಾರ್ಗವಾಗಿ ಬ್ರಹ್ಮಾವರಕ್ಕೆ ಹೊರಟು ಹೋಗುತ್ತಿರುವಾಗ ಅಪಘಾತ ಸಂಭವಿಸಿ ಗಾಯವಾದ ಘಟನೆ ನಡೆದಿದೆ.
ಕಾಪು ತಾಲೂಕು, ಶಿರ್ವಾ ಗ್ರಾಮದ ಬಂಟಕಲ್ಲಿನಲ್ಲಿ ಕಟಪಾಡಿಯಿಂದ ಶಿರ್ವಾ ಕಡೆಗೆ ಗ್ಯಾಬ್ರಿಯಲ್‌ ಮೆಂಡೋನ್ಸಾ ರವರು ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಚಲಾಯಿಸಿ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಬಂದು ಚಲಾಯಿಸುತ್ತಿದ್ದ ಸ್ಕೂಟರ್‌ ಗೆ ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರ್‌ ಸಮೇತ ರಸ್ತೆಗೆ ಬಿದ್ದು ಸೊಂಟದ ಎಡಭಾಗ, ಕಾಲಿನಲ್ಲಿ ಒಳನೋವು, ಜಖಂ ಆಗಿದ್ದು, ಬಾಯಿ,ಬಲಕೆನ್ನೆ ಬಲಕೈಗೆ ತರಚಿದ ರಕ್ತಗಾಯವಾಗಿರುತ್ತದೆ.
ಸ್ಕೂಟರ್‌ ಕೂಡಾ ಜಖಂ ಆಗಿರುತ್ತದೆ. ನಂತರ ಚಿಕಿತ್ಸೆ ಬಗ್ಗೆ ಆದರ್ಶ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಶಿರ್ವಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Categories
ಮಂಗಳೂರು

ಕುಕ್ಕೆ ಸುಬ್ರಹ್ಮಣ್ಯ ಭಕ್ತರಿಗೆ ಗುಡ್‌ನ್ಯೂಸ್‌!

ಕುಕ್ಕೆ ಸುಬ್ರಹ್ಮಣ್ಯ ಭಕ್ತರಿಗೆ ಗುಡ್‌ನ್ಯೂಸ್‌!

* ದೇವಸ್ಥಾನದಿಂದಲೇ ಆರಂಭವಾಗಲಿದೆ ಬೆಳಗ್ಗಿನ ಉಪಹಾರ
* ಮೇ 30ರಂದೇ ಯೋಜನೆಗೆ ಚಾಲನೆ

NAMMUR EXPRESS NEWS
ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕಳೆದ ಹಲವಾರು ವರ್ಷಗಳಿಂದ ಭಕ್ತರಿಗೆ ಮಧ್ಯಾಹ್ನ ಮತ್ತು ರಾತ್ರಿ ಅನ್ನದಾಸೋಹ ಭೋಜನ ಪ್ರಸಾದದ ವ್ಯವಸ್ಥೆ ಜಾರಿಯಲ್ಲಿದ್ದು, ಶ್ರೀ ದೇಗುಲಕ್ಕೆ ಆಗಮಿಸುವ ಭಕ್ತರಿಗೆ ಬೆಳಗ್ಗಿನ ಉಪಹಾರ ಪ್ರಸಾದದ ವ್ಯವಸ್ಥೆ ಯೋಜನೆ ಮೇ. 30ರಿಂದ ವಿದ್ಯುಕ್ತವಾಗಿ ಆರಂಭವಾಗಲಿದೆ ಎಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್‌ ಇಂಜಾಡಿ ಹೇಳಿದರು.
ಅವರು ದೇಗುಲದ ಆಡಳಿತ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಮುಜರಾಯಿ ಸಚಿವರ ಸಲಹೆಯಂತೆ, ಇತ್ತೀಚೆಗೆ ಅಧಿಕಾರಿಗಳು ನಡೆಸಿದ ಸಭೆಯಲ್ಲಿ ಕುಕ್ಕೆಯಲ್ಲಿ ಭಕ್ತರಿಗೆ ಬೆಳಗ್ಗಿನ ಉಪಹಾರ ನೀಡುವ ಬಗ್ಗೆ ಚರ್ಚೆ ನಡೆಸಲಾಗಿತ್ತು. ಬೆಳಗ್ಗೆ ಆಗಮಿಸಿ, ಸೇವೆ ಸಲ್ಲಿಸಿ ತೆರಳುವ ಭಕ್ತರಿಗೆ ಬೆಳಗ್ಗಿನ ಉಪಹಾರ ನೀಡಲು ನಿರ್ಧರಿಸಲಾಗಿದ್ದು, ನಮ್ಮ ಹೊಸ ಆಡಳಿತ ಸಮಿತಿಯ ಪ್ರಥಮ ಸಭೆಯಲ್ಲಿ ಸಚಿವರ ಸಲಹೆಯಂತೆ ಯೋಜನೆಯನ್ನು ಜಾರಿಗೊಳಿಸಲು ತೀರ್ಮಾನಿಸಿದ್ದೇವೆ,” ಎಂದರು.
“ಮೇ 30ರಂದು ಯೋಜನೆಗೆ ಚಾಲನೆ ನೀಡಲಿದ್ದೇವೆ. ದೇಗುಲದ ಷಣ್ಮುಖ ಭೋಜನ ಶಾಲೆಯಲ್ಲಿ ಬೆಳಗ್ಗೆ 8 ಗಂಟೆಯಿಂದ 10ರವರೆಗೆ ಉಪಹಾರ ನೀಡುವ ಯೋಜನೆ ಇದಾಗಿದ್ದು, ದಿನದಲ್ಲಿ ಮೂರು-ನಾಲ್ಕು ಬಗೆಯ ಉಪಾಹಾರ (ತಿಂಡಿ), ಜತೆಗೆ ಕಷಾಯ ನೀಡುವ ಬಗ್ಗೆ ನಿರ್ಧರಿಸಲಾಗಿದೆ. ಈ ಯೋಜನೆಗೆ ಆರಂಭವಾಗಲಿದ್ದು, ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಭಕ್ತರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಹಾಗೂ ಮುಂದಿನ ದಿನಗಳಲ್ಲಿ ಯೋಜನೆಯಲ್ಲಿ ಇನ್ನಷ್ಟು ಬದಲಾವಣೆಗಳೊಂದಿಗೆ ಮುಂದುವರಿಯುವ ಬಗ್ಗೆಯೂ ಸಲಹೆಗಳನ್ನು ಸ್ವೀಕರಿಸಲಾಗುವುದು,” ಎಂದು ತಿಳಿಸಿದರು.

* ಮೂರು ಸಾವಿರ ಮಂದಿಗೆ ಭೋಜನ ಶಾಲೆ

ಕ್ಷೇತ್ರದ ಅಭಿವೃದ್ಧಿ ಯೋಜನೆಗಳಲ್ಲಿ ಒಂದಾದ ಏಕಕಾಲದಲ್ಲಿ ಮೂರು ಸಾವಿರ ಮಂದಿ ಕುಳಿತು ಭೋಜನ ಪ್ರಸಾದ ಸ್ವೀಕರಿಸುವ ನೂತನ ಭೋಜನ ಶಾಲೆಯ ಕಟ್ಟಡ ನಿರ್ಮಿಸುವ ಬಗ್ಗೆ ಈಗಾಗಲೇ ಮಾಸ್ಟರ್‌ ಪ್ಲಾನ್‌ನಲ್ಲಿ ಯೋಜನೆ, ನಕಾಶೆ ರೂಪಿಸಲಾಗಿದೆ. ಮುಂದಿನ 2-3 ವರ್ಷಗಳಲ್ಲಿ ನೂತನ ಕಟ್ಟಡ ಸಿದ್ದವಾಗಲಿದೆ ಎಂದರು.

Categories
ಚಿಕ್ಕಮಗಳೂರು

ಕಾರ್ಮಿಕ ಮಿತ್ರ ಬಳಗದಿಂದ ಕಾರ್ಮಿಕ ದಿನಾಚರಣೆ

ಕಾರ್ಮಿಕ ಮಿತ್ರ ಬಳಗದಿಂದ ಕಾರ್ಮಿಕ ದಿನಾಚರಣೆ

* ಪೌರ ಕಾರ್ಮಿಕರಿಗೆ ಸನ್ಮಾನ ಮತ್ತು ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್ ಬುಕ್ ವಿತರಣೆ
* ಶೃಂಗೇರಿ ಶ್ರೀಶಾರದಾ ಪೀಠದಿಂದ ರಗ್ ವಿತರಣೆ

NAMMMUR EXPRESS NEWS
ಶೃಂಗೇರಿ: ಕಾರ್ಮಿಕ ಮಿತ್ರ ಬಳಗ (ರಿ) ಶೃಂಗೇರಿ ಇವರ ವತಿಯಿಂದ ಶೃಂಗೇರಿಯ ಕನ್ನಡ ಭವನದಲ್ಲಿ ಕಾರ್ಮಿಕ ದಿನಾಚರಣೆ ಕಾರ್ಯಕ್ರಮವನ್ನು ಆಚರಿಸಲಾಯಿತು. ಕಾರ್ಮಿಕ ಬಳಗದ ತಾಲೂಕು ಅಧ್ಯಕ್ಷರಾದ ಶೂನ್ಯ ರಮೇಶ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೌರ ಕಾರ್ಮಿಕರಿಗೆ ಸನ್ಮಾನ, ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್ ಬುಕ್ ವಿತರಣೆ, ಕಾರ್ಮಿಕರಿಗೆ ಶೃಂಗೇರಿ ಶ್ರೀಶಾರದಾ ಪೀಠದಿಂದ ರಗ್ ವಿತರಣೆ,ಕಾರ್ಮಿಕರಿಗೆ ಗಿಡ‌ಗಳ ವಿತರಣೆ ಮತ್ತು ತಾಲೂಕಿನ ಗುತ್ತಿದಾರ ಭಾನು ಪ್ರಕಾಶ್‌ರವರಿಗೆ ಸನ್ಮಾನವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಅರಣ್ಯ ಹಕ್ಕು ಸಮಿತಿಯ ಮೇಲುಸ್ತುವಾರಿ ಸಮಿತಿ ಮಾಜಿ ಸದಸ್ಯರು ಮತ್ತು ರಾಜ್ಯ ಮೂಲ ಆದಿವಾಸಿ ವೇದಿಕೆಯ ರಾಜ್ಯ ಅಧ್ಯಕ್ಷರು ಹಾಗೂ ಚಿಕ್ಕಮಗಳೂರು ಜಿಲ್ಲಾ ಬುಡಕಟ್ಟು ಕೃಷಿಕರ ಸಂಘದ ಜಿಲ್ಲಾಧ್ಯಕ್ಷರಾದ ಕೆ.ಎನ್ ವಿಠ್ಠಲ್ ಮತ್ತು ಕಟ್ಟಡ ಮತ್ತು ಇತರೆ ನಿರ್ಮಾಣ ಮಂಡಳಿಯ ರಾಜ್ಯ ಸದಸ್ಯರಾದ ಬಸವರಾಜ ಕೌತಳ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು, ಕೊಪ್ಪ ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿಯಾದ ಎಲ್. ನಂದೀಶ್‌ರವರಿಂದ ಪೌರ ಕಾರ್ಮಿಕರಿಗೆ ಸನ್ಮಾನ ಮಾಡಲಾಯಿತು. ಶೃಂಗೇರಿ ವಲಯಾಧಿಕಾರಿ ಮಧುಕರ್ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಿಸಿದರು.
ಕಾರ್ಯಕ್ರಮವನ್ನು ಶೃಂಗೇರಿ ಪಟ್ಟಣ ಪಂಚಾಯ್ತಿ ಅಧ್ಯಕ್ಷರಾದ ಎಚ್.ಎಸ್ ವೇಣುಗೋಪಾಲ್ ಉದ್ಘಾಟಿಸಿದರು. ಶೃಂಗೇರಿ ಶ್ರೀಶಾರದಾ ಪೀಠದ ವತಿಯಿಂದ ನೀಡಲಾದ ರಗ್‌ಗಳನ್ನು ಶ್ರೀಮಠದ ಪ್ರತಿನಿಧಿಯಾದ ಸತೀಶ್ ಭಟ್ ಕಾರ್ಮಿಕರಿಗೆ ವಿತರಿಸಿದರು,ಕಾರ್ಯಕ್ರಮದಲ್ಲಿ ಶಿವ ಪ್ರಕಾಶ್ ಕನ್ಸ್ಟ್ರಕ್ಷನ್ಸ್ ಮಾಲೀಕರಾದ ಭಾನುಪ್ರಕಾಶ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಮಿಕರಿಗೆ ಸಮಸ್ಯೆಗಳಾದಲ್ಲಿ ಎಲ್ಲರೂ ಒಟ್ಟಾಗಿ ಬಗೆಹರೆಸುವ ಆಶಯ ವ್ಯಕ್ತಪಡಿಸಿದ ತಾಲೂಕು ಅಧ್ಯಕ್ಷ ಶೂನ್ಯ ರಮೇಶ್ ಕಾರ್ಯಕ್ರಮಕ್ಕೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದರು.

Categories
ತೀರ್ಥಹಳ್ಳಿ

ಕೋಣಂದೂರು ಆಸ್ಪತ್ರೆ ಉದ್ಘಾಟಿಸಿದ ಅರೋಗ್ಯ ಸಚಿವರು

ಕೋಣಂದೂರು ಆಸ್ಪತ್ರೆ ಉದ್ಘಾಟಿಸಿದ ಅರೋಗ್ಯ ಸಚಿವರು
– ₹9.8 ಕೋಟಿ ವೆಚ್ಚದಲ್ಲಿ ಸಮುದಾಯ ಆರೋಗ್ಯ ಕೇಂದ್ರ ನಿರ್ಮಾಣ
– ಎಲ್ಲಾ ಸೌಕರ್ಯ ಒದಗಿಸಲು ಬದ್ಧ ಎಂದ ದಿನೇಶ್ ಗುಂಡೂರಾವ್

NAMMUR EXPRESS NEWS
ಕೋಣಂದೂರು: ಬಹುದಿನಗಳ ನಿರೀಕ್ಷೆಯಾಗಿದ್ದ ನೂತನ ಸಮುದಾಯ ಆರೋಗ್ಯ ಕೇಂದ್ರ ಮೇ 28ರಂದು ಉದ್ಘಾಟನೆಗೊಂಡಿದೆ.
ಶಾಸಕ ಆರಗ ಜ್ಞಾನೇಂದ್ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟನೆ ಮಾಡಿದರು. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಶಾಸಕರಾದ ಬೇಳೂರು ಗೋಪಾಲಕೃಷ್ಣ, ಡಿ.ಎಚ್.ಒ. ನಟರಾಜ್, ಟಿ.ಎಚ್.ಒ. ಅನಿಕೇತ್, ಕೋಣಂದೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಮಂಜುನಾಥ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನ್ನಪೂರ್ಣ ವಾಸುದೇವ, ಉಪಾಧ್ಯಕ್ಷೆ ಸುಜಾತ ಚೂಡಾಮಣಿ, ಗ್ರಾಮ ಪಂಚಾಯಿತಿ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.

ಆಸ್ಪತ್ರೆಯಲ್ಲಿ ಏನೇನಿದೆ?

ಆರೋಗ್ಯ ಕೇಂದ್ರದ ಜಾಗದಲ್ಲಿ ₹9.8 ಕೋಟಿ ವೆಚ್ಚದಲ್ಲಿ ಸಮುದಾಯ ಆರೋಗ್ಯ ಕೇಂದ್ರ ನಿರ್ಮಾಣಗೊಂಡಿದೆ.ನೂತನ ಸಮುದಾಯ ಆರೋಗ್ಯ ಕೇಂದ್ರದಲ್ಲಿ 30 ಹಾಸಿಗೆಗಳ ವ್ಯವಸ್ಥೆ ಇದೆ. 6 ವೈದ್ಯರು ಸೇರಿದಂತೆ 33 ಆರೋಗ್ಯ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ.

ಆಸ್ಪತ್ರೆಗಾಗಿ ಜಾಗ ದಾನ ಮಾಡಿದ್ದ ಕುಟುಂಬ!

ಆರಗ ಜ್ಞಾನೇಂದ್ರ ಅವರು ಮಾತನಾಡಿ ಸಮುದಾಯ ಆರೋಗ್ಯ ಕೇಂದ್ರ ಕೋಣಂದೂರು ಉದ್ಘಾಟನೆಗೊಂಡಿರುವುದು ತುಂಬಾ ಹೆಮ್ಮೆಯ ಸಂಗತಿ. ಕೋಣಂದೂರಿನಲ್ಲಿ ಜಾಗವೇ ಇರಲಿಲ್ಲ ಆದರೆ ಎರಡು ಕುಟುಂಬದವರು ಈ ಆರೋಗ್ಯ ಕೇಂದ್ರಕ್ಕೆ ಕೆಲವು ವರ್ಷಗಳ ಹಿಂದೆಯೇ ಜಾಗವನ್ನು ನೀಡಿದ್ದು ಆದ್ದರಿಂದ ಆ ಕುಟುಂಬಕ್ಕೆ ಸಾಕಷ್ಟು ರೀತಿಯ ಒಳಿತು ಆಗಲಿ ಎಂದು ನಾನು ಪ್ರಾರ್ಥನೆ ಮಾಡುತ್ತೇನೆ ಎಂದು ಆಗರ ಜ್ಞಾನೇಂದ್ರ ಅವರು ತಿಳಿಸಿದರು.

ಎಲ್ಲಾ ಸೌಲಭ್ಯ ಒದಗಿಸಲು ಸರ್ಕಾರ ಬದ್ಧ: ದಿನೇಶ್ ಗುಂಡೂರಾವ್ 

ಅರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಮಾತನಾಡಿ, ಸಮುದಾಯ ಆರೋಗ್ಯ ಕೇಂದ್ರ ಕಟ್ಟಿರುವುದು ತುಂಬಾ ಸಂತೋಷವಾಗಿದೆ. ಈ ಆರೋಗ್ಯ ಕೇಂದ್ರ ಉದ್ಘಾಟನೆಗೊಂಡಿದೆ, ಹೊರತು ಲೋಕಾರ್ಪಣೆಗೊಂಡಿಲ್ಲ ಎಲ್ಲಾ ರೀತಿಯ ಸಿಬ್ಬಂದಿಗಳು, ವ್ಯವಸ್ಥೆಗಳು ಪೂರ್ಣವಾದರೆ ಮಾತ್ರ ಲೋಕಾರ್ಪಣೆಗೊಂಡಿದೆ ಎಂದರ್ಥ. ಈ ಆರೋಗ್ಯ ಕೇಂದ್ರಕ್ಕೆ ಅಗತ್ಯವಿರುವ ಸಿಬ್ಬಂದಿಗಳು, ಸಲಕರಣೆ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಕೂಡ ಮಾಡಿಕೊಡುತ್ತೇವೆ ಎಂಬುದಾಗಿ ಭರವಸೆಯನ್ನು ನೀಡಿದರು.

Categories
ಚಿಕ್ಕಮಗಳೂರು

ಕೊಪ್ಪ ಬಂಟರ ಭವನ ಇಂದು ಉದ್ಘಾಟನೆ!

ಕೊಪ್ಪ ಬಂಟರ ಭವನ ಇಂದು ಉದ್ಘಾಟನೆ!
– ಮೇ 29ರ ಸಂಜೆ 5 ಗಂಟೆಯಿಂದ ಕಾರ್ಯಕ್ರಮ
– ಉದ್ಘಾಟನಾ ಸಮಾರಂಭಕ್ಕೆ ಸರ್ವರಿಗೂ ಸ್ವಾಗತ
– ಹರಿಹರಪುರ ರಸ್ತೆಯಲ್ಲಿ ನಿರ್ಮಾಣಗೊಂಡಿದೆ ಸುಂದರ ಕಟ್ಟಡ

NAMMUR EXPRESS NEWS
ಬಂಟರ ಯಾನೆ ನಾಡವರ ಸಂಘ (ರಿ.), ಕೊಪ್ಪ
ಅನನ್ಯ ವಿಜಯ ಅಜಿಲ ಸ್ಮಾರಕ ‘ಬಂಟರ ಭವನ’ ಉದ್ಘಾಟನಾ ಸಮಾರಂಭವನ್ನು 29-05-2025 ಸಂಜೆ 5 ಗಂಟೆಯಿಂದ, ಬಂಟರ ಭವನ, ಅನನ್ಯ ವಿಜಯನಗರ NH 169, ಹರಿಹರಪುರ ರಸ್ತೆ, ಕೊಪ್ಪ ಇಲ್ಲಿ ನೆರವೇರಲಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ. ಎಸ್ ಸುಬ್ರಮಣ್ಯ ಶೆಟ್ಟಿ, ಅಧ್ಯಕ್ಷರು ಬಂಟರ ಯಾನೆ ನಾಡವರ ಸಂಘ ಕೊಪ್ಪ ಇವರು ನಡೆಸಿ ಕೊಡಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆ ಮತ್ತು ನಾಮಫಲಕದ ಅನಾವರಣವನ್ನು ಪ್ರಕಾಶ್ ಶೆಟ್ಟಿ ಅವರು ನಡೆಸಲಿದ್ದಾರೆ, ಆಶಾ ಪ್ರಕಾಶ್ ಶೆಟ್ಟಿ ಮಹಾದ್ವಾರದ ಉದ್ಘಾಟನೆಯನ್ನು ಗೀತಾ ವಿಜಯ ಅವರು ನೆರವೇರಿಸಲಿದ್ದಾರೆ. ನೂತನ ರಸ್ತೆಯ ಉದ್ಘಾಟನೆಯನ್ನು ಟಿ. ಡಿ ರಾಜೇಗೌಡರು ಅವರು, ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಸದಾಶಿವ ಕೆ ಶೆಟ್ರು, ಸಾಧಕರಿಗೆ ಸನ್ಮಾನವನ್ನು ಮೋಹನ್ ಆಳ್ವ ಅವರು, ವೇದಿಕೆಯ ಉದ್ಘಾಟನೆಯನ್ನು ಸುಧಾಕರ್ ಎಸ್ ಶೆಟ್ಟಿ ಅವರು, ಫೋಟೋ ಗ್ಯಾಲರಿ ಉದ್ಘಾಟನೆಯನ್ನು ಅನಿಲ್ ಶೆಟ್ಟಿ ಅವರು, ಭೋಜನಾ ಶಾಲೆಯ ಉದ್ಘಾಟನೆಯನ್ನು ಕಿಶೋರ್ ಕುಮಾರ್ ಹೆಗಡೆ ಅವರು, ಪಾಕಶಾಲೆ ಉದ್ಘಾಟನೆಯನ್ನು ಸುಧಾಕರ್ ಶೆಟ್ಟಿ ಅವರು, ಸಂಘದ ಆಡಳಿತ ಕಚೇರಿಯ ಉದ್ಘಾಟನೆಯನ್ನು ಸತೀಶ್ ಶೆಟ್ಟಿ ಅವರು, ವಧು-ವರರ ಕೊಠಡಿಯ ಉದ್ಘಾಟನೆಯನ್ನು ಮೋಹನ್ ಬಿ ಎಸ್ ಶೆಟ್ಟಿ ಅವರು, ಅತಿಥಿಗಳ ಕೊಠಡಿಯ ಉದ್ಘಾಟನೆಯನ್ನು ರಾಘವೇಂದ್ರ ಶೆಟ್ಟಿ ಅವರು ನೆರವೇರಿಸಲಿದ್ದಾರೆ. ವಿವಿಧ ರೀತಿಯ ಕಾರ್ಯಕ್ರಮಗಳು ಕೂಡ ಈ ಉದ್ಘಾಟನಾ ಸಮಾರಂಭದಲ್ಲಿ ನೆರವೇರಲಿದೆ. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕೋಟಾ ಶ್ರೀನಿವಾಸ ಪೂಜಾರಿ, ಗುರ್ಮೆ ಸುರೇಶ್ ಶೆಟ್ಟಿ, ಡಿ.ಎನ್. ಜೀವರಾಜ್, ಗೋವಿಂದ ರಾಜ್, ಸುಕುಮಾರ ಶೆಟ್ಟಿ, ಡಾ. ಭಾನುತೇಜ ಅಜಿಲ, ಆರ್. ಕೆ ಶೆಟ್ಟಿ, ಸಿ ಎ ಅಶೋಕ್ ಶೆಟ್ಟಿ, ಪ್ರಭಾಕರ ಶೆಟ್ಟಿ, ಪುರಂಧರ ಶೆಟ್ಟಿ, ಈ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆರ್. ಉಪೇಂದ್ರ ಶೆಟ್ಟಿ, ವಿಜಯ ಹೆಗ್ಡೆ, ಸುಗ್ಗಿ ಸುಧಾಕರ್ ಶೆಟ್ಟಿ, ಅಶ್ವಿನ್ ಶೆಟ್ಟಿ, ಆನಂದ ಶೆಟ್ಟಿ, ಯಶೋಧಾ ನಾರಾಯಣ ಶೆಟ್ಟಿ, ಸಂಜೀವ ಶೆಟ್ಟಿ, ಪ್ರಕಾಶ್ ಶೆಟ್ಟಿ, ಸುಧೀರ್ ಶೆಟ್ಟಿ, ಗಿರಿಜಾ ಎಂ. ಶೆಟ್ಟಿ ಆಗಮಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಸರ್ವರಿಗೂ ಆದರದ ಸ್ವಾಗತವನ್ನು ಅಧ್ಯಕ್ಷರು ಮತ್ತು ಸದಸ್ಯರು, ಬಂಟರ ಯಾನೆ ನಾಡವರ ಸಂಘ (ರಿ). ಕೊಪ್ಪ ಹಾಗೂ ಅಧ್ಯಕ್ಷರು ಮತ್ತು ಸದಸ್ಯರು ‘ಸಿರಿ’ ಬಂಟರ ಮಹಿಳಾ ಒಕ್ಕೂಟ ಕೊಪ್ಪ ಇವರು ಕೋರಿದ್ದಾರೆ.

Categories
ಹೆಲ್ತ್ ಎಕ್ಸ್ಪ್ರೆಸ್

ಆರೋಗ್ಯ ಎಕ್ಸ್ ಪ್ರೆಸ್! || ರಾತ್ರಿ ನಿದ್ದೆ ಬರುವುದಿಲ್ಲವೇ ಹೀಗೆ ಮಾಡಿ ಸೊಂಪಾಗಿ ಮಲಗುವಿರಿ!

ಆರೋಗ್ಯ ಎಕ್ಸ್ ಪ್ರೆಸ್!

ರಾತ್ರಿ ನಿದ್ದೆ ಬರುವುದಿಲ್ಲವೇ ಹೀಗೆ ಮಾಡಿ ಸೊಂಪಾಗಿ ಮಲಗುವಿರಿ!

NAMMUR EXPRESS NEWS
ಪ್ರತಿಯೊಬ್ಬ ಮನುಷ್ಯನಿಗೂ ನಿದ್ರೆ ಬಹಳ ಮುಖ್ಯ. ರಾತ್ರಿಯಲ್ಲಿ ಕನಿಷ್ಠ 7-8 ಗಂಟೆಗಳ ನಿದ್ರೆಯನ್ನು ಮಾಡಬೇಕು. ನಿದ್ರೆ ಕಡಿಮೆಯಾದರೆ ಅದು ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
ಆಧುನಿಕ ಜೀವನಶೈಲಿಯಲ್ಲಿ ಅನೇಕ ಜನರು ನಿದ್ರೆಯಿಲ್ಲದೆ ದಣಿದಿದ್ದಾರೆ. ಅನೇಕ ಜನರು ರಾತ್ರಿಯಲ್ಲಿ ಮಲಗಲು ತೊಂದರೆ ಅನುಭವಿಸುತ್ತಾರೆ. ಬೆಳಿಗ್ಗೆ ಎದ್ದಾಗ ಸಾಕಷ್ಟು ಕಿರಿಕಿರಿಯನ್ನು ಅನುಭವಿಸುತ್ತಾರೆ. ಅವರು ಮಾನಸಿಕವಾಗಿ ಮಾತ್ರವಲ್ಲದೆ ಆರೋಗ್ಯದ ದೃಷ್ಟಿಯಿಂದಲೂ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಸಾಕಷ್ಟು ನಿದ್ರೆ ಮಾಡದಿರುವುದು ಬೊಜ್ಜು, ಹೃದ್ರೋಗ ಮತ್ತು ಟೈಪ್ 2 ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ. ಆದ್ದರಿಂದಲೇ ರಾತ್ರಿ ನಿದ್ದೆ ಬರದಿದ್ದರೆ ಕೆಲವೊಂದು ಸಲಹೆಗಳನ್ನು ಪಾಲಿಸಲೇಬೇಕು.

ರಾತ್ರಿ ನಿದ್ದೆ ಬರೋದಿಲ್ವಾ? ಹಾಗಾದ್ರೆ ರಾಗಿ ಸೇವಿಸಬೇಕಂತೆ

ಮನುಷ್ಯನ ಜೀವನದಲ್ಲಿ ನಿದ್ದೆ ಎಷ್ಟು ಮುಖ್ಯ ಅನ್ನೋದು ಗೊತ್ತೇ ಇದೆ. ನಿದ್ರೆ ಒಂಥರಾ ಅಮಲು ಎಂದೇ ಹೇಳಬಹುದು. ನಿದ್ದೆ ಸರಿಯಾಗದಿದ್ದರೆ ಎಷ್ಟೆಲ್ಲಾ ಆರೋಗ್ಯ ಸಮಸ್ಯೆಗಳು ಕಾಡುತ್ತವೆ ಎನ್ನುವುದು ಗೊತ್ತೆ ಇದೆ. ನಮ್ಮಲ್ಲಿ ಹೆಚ್ಚಿನವರು ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಾರೆ.
ಸರಿಯಾಗಿ ನಿದ್ರೆಬರ ಬೇಕಾದರೆ ಒಂದು ವಾರದವರೆಗೆ ಈ ಆಹಾರವನ್ನು ಸೇವಿಸುವುದು ಪ್ರಯೋಜನಕಾರಿಯಾಗಿದೆ. ಇದರಲ್ಲಿ ನೀವು ರಾಗಿ ಮತ್ತು ಸಿಹಿ ಗೆಣಸು ತಿನ್ನಲು ಪ್ರಾರಂಭಿಸಿ. ರಾಗಿ ಮೆಗ್ನೀಸಿಯಮ್ನಲ್ಲಿ ಸಮೃದ್ಧವಾಗಿದೆ ಮತ್ತು ಅಕ್ಕಿಯಂತೆ ಬೇಯಿಸಲಾಗುತ್ತದೆ. ಇದರೊಂದಿಗೆ 100 ರಿಂದ 150 ಗ್ರಾಂ ಸಿಹಿ ಗೆಣಸು ಸೇವಿಸಿ.

ಮೆಗ್ನೀಸಿಯಮ್ ಪಡೆಯಲು ನೀವು ಡಾರ್ಕ್ ಚಾಕೊಲೇಟ್

ಮೆಗ್ನೀಸಿಯಮ್ ಪಡೆಯಲು ನೀವು ಡಾರ್ಕ್ ಚಾಕೊಲೇಟ್ ಅನ್ನು ಸಹ ಸೇವಿಸಬಹುದು. ಇದರಲ್ಲಿ ಈ ಪೋಷಕಾಂಶ ಹೇರಳವಾಗಿದ್ದು ಇದರೊಂದಿಗೆ ಕಬ್ಬಿಣ, ತಾಮ್ರ, ಮ್ಯಾಂಗನೀಸ್, ಪ್ರಿಬಯಾಟಿಕ್ ಫೈಬರ್ ಕೂಡ ಲಭ್ಯವಿದೆ. ಆದರೆ ಇದನ್ನು ಸಮತೋಲಿತ ಪ್ರಮಾಣದಲ್ಲಿ ಮಾತ್ರ ಸೇವಿಸಬೇಕು.

ಡ್ರೈ ಫ್ರೂಟ್ಸ್‌ ಸೇವಿಸಿ

ಡ್ರೈ ಫ್ರೂಟ್ಸ್‌ಗಳಿಂದಲೂ ಮೆಗ್ನೀಸಿಯಮ್ ಕೊರತೆಯನ್ನು ನೀಗಿಸಬಹುದು. ಬಾದಾಮಿ, ಗೋಡಂಬಿ, ಬ್ರೆಜಿಲ್ ಬೀಜಗಳು ಅದರಲ್ಲಿ ವಿಶೇಷವಾಗಿ ಸಮೃದ್ಧವಾಗಿವೆ. ಅವುಗಳಲ್ಲಿರುವ ಆರೋಗ್ಯಕರ ಕೊಬ್ಬುಗಳು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಇತರ ಧಾನ್ಯಗಳು ಸಹ ಪ್ರಯೋಜನಕಾರಿ

ರಾಗಿಯಂತಹ ಇತರ ಧಾನ್ಯಗಳು ಸಹ ಮೆಗ್ನೀಸಿಯಮ್ ಅನ್ನು ಒದಗಿಸುತ್ತವೆ. ನಿದ್ರೆ ಪಡೆಯಲು, ನೀವು ರಾತ್ರಿಯ ಊಟದಲ್ಲಿ ಗೋಧಿ, ಓಟ್ಸ್, ಬಾರ್ಲಿ ಮತ್ತು ಕ್ವಿನೋವಾವನ್ನು ತಿನ್ನಬಹುದು.

Categories
ಕ್ರಿಕೆಟ್ ಕ್ರೀಡಾ ಸುದ್ದಿ

ಇಂದು ಆರ್‌ಸಿಬಿ ಹಾಗೂ ಪಂಜಾಬ್ ನಡುವೆ ಕ್ವಾಲಿಫಯರ್-1 ಪಂದ್ಯ

ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್ 

ಐಪಿಎಲ್ – 2025
* ಇಂದು ಆರ್‌ಸಿಬಿ ಹಾಗೂ ಪಂಜಾಬ್ ನಡುವೆ ಕ್ವಾಲಿಫಯರ್-1 ಪಂದ್ಯ
* ಗೆದ್ದವರು ಫೈನಲ್ ಪ್ರವೇಶ,ಸೋತವರಿಗೆ ಇನ್ನೊಂದು ಅವಕಾಶ
* ಹೇಗಿದೆ ತಂಡಗಳ ಬಲಾಬಲ,ಪಿಚ್,ಆಟಗಾರರು ಇಲ್ಲಿದೆ ಮಾಹಿತಿ

NAMMMUR EXPRESS SPORTS NEWS
ಚಂಡೀಗಢ:ಇಂದು ಐಪಿಎಲ್​ -18 ನೇ ಆವೃತ್ತಿಯ ಮೊದಲ ಕ್ವಾಲಿಫೈರ್​ ಪಂದ್ಯ ನಡೆಯಲಿದೆ. ಇದರಲ್ಲಿ ಅಂಕಪಟ್ಟಿಯಲ್ಲಿ ಅಗ್ರ ಎರಡು ಸ್ಥಾನಗಳಲ್ಲಿರುವ ಪಂಜಾಬ್ ಕಿಂಗ್ಸ್​ ಮತ್ತು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿವೆ. ಐಪಿಎಲ್​ 2025ರ ಋತುವಿನಲ್ಲಿ ಈ ತಂಡಗಳು ಅತ್ಯುತ್ತಮ ಪ್ರದರ್ಶನ ನೀಡಿದ್ದು ಕಪ್​ ಗೆಲ್ಲುವ ಫೆವರೀಟ್​ ತಂಡಗಳಾಗಿವೆ.
ಆರ್​ಸಿಬಿ ಇದುವರೆಗೂ 14 ಪಂದ್ಯಗಳನ್ನು ಆಡಿದ್ದು ಇದರಲ್ಲಿ 9ರಲ್ಲಿ ಗೆಲುವು ಸಾಧಿಸಿದ್ದು 4ರಲ್ಲಿ ಸೋಲನ್ನು ಕಂಡಿದೆ. ಒಂದು ಪಂದ್ಯ ಡ್ರಾನಲ್ಲಿ ಕೊನೆಗೊಂಡಿದೆ. ಸದ್ಯ ಆರ್​ಸಿಬಿ 19 ಅಂಕಗಳನ್ನು ಪಡೆದುಕೊಂಡು ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಪಂಜಾಬ್​ ತಂಡ 14 ಪಂದ್ಯಗಳಲ್ಲಿ 9ರಲ್ಲಿ ಗೆದ್ದು 4ರಲ್ಲಿ ಸೋಲನ್ನು ಕಂಡು 9ರಲ್ಲಿ ಗೆಲುವು ಸಾಧಿಸಿದೆ. ಒಂದು ಪಂದ್ಯ ಡ್ರಾನಲ್ಲಿ ಕೊನೆಗೊಂಡಿದೆ. ಇದರೊಂದಿಗೆ 19 ಅಂಕಗಳನ್ನು ಪಡೆದುಕೊಂಡಿದೆ. ನೆಟ್​ ರನ್​ರೇಟ್​ ಹೆಚ್ಚಿರುವ ಕಾರಣ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇಂದು ಗೆಲ್ಲುವ ತಂಡವು ನೇರ ಫೈನಲ್‌ಗೆ ಪ್ರವೇಶ ಪಡೆಯಲಿದ್ದು,ಸೋತ ತಂಡಕ್ಕೆ ಇನ್ನೊಂದು ಅವಕಾಶ ಇರಲಿದೆ.

* ಆರ್‌ಸಿಬಿ ಮತ್ತು ಪಂಜಾಬ್ ಹೆಡ್ ಟು ಹೆಡ್
ಈ ಆವೃತ್ತಿಯಲ್ಲಿ ಈ ತಂಡಗಳು ಎರಡು ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಪಂಜಾಬ್​ ಮತ್ತು ಬೆಂಗಳೂರು ತಂಡಗಳು ತಲಾ ಒಂದು ಬಾರಿ ಗೆಲುವು ಸಾಧಿಸಿದೆ. ಈ ಹಿಂದೆ ಇದೇ ಮೈದಾನದಲ್ಲಿ ಪಂಜಾಬ್​ ತಂಡವನ್ನು ಮಣಿಸಿದ್ದು ಆರ್​ಸಿಬಿಗೆ ಪ್ಲಸ್​ ಪಾಯಿಂಟ್​ ಆಗಿದೆ. ಇದುವರೆಗೂ ಐಪಿಎಲ್​ನಲ್ಲಿ ಈ ಎರಡು ತಂಡಗಳು 35 ಬಾರಿ ಮುಖಾಮುಖಿಯಾಗಿದ್ದು ಇದರಲ್ಲಿ ಪಂಜಾಬ್ ಒಂದು ಹೆಜ್ಜೆ ಮುಂದಿದೆ. ಆರ್​ಸಿಬಿ ವಿರುದ್ಧ 18 ಬಾರಿ ಗೆಲುವು ಸಾಧಿಸಿದ್ದು 17 ಸಲ ಸೋಲನ್ನು ಕಂಡಿದೆ. ಹಿಂದಿನ ಐದು ಪಂದ್ಯಗಳಲ್ಲಿ ಬೆಂಗಳೂರು ತಂಡ 3 ಬಾರಿ ಗೆಲುವು ಸಾಧಿಸಿದೆ.

* ಆರ್​ಸಿಬಿಯಿಂದ ಸ್ಟಾರ್​ ಪ್ಲೇಯರ್ ಔಟ್​
ಇಂದಿನ ಪಂದ್ಯದಲ್ಲಿ ಆರ್​ಸಿಬಿ ತಂಡದಿಂದ ಒಬ್ಬ ಆಟಗಾರ ಹೊರಗುಳಿಯಲಿದ್ದಾರೆ. ಹೌದು ಹಿಂದಿನ ಪಂದ್ಯದಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದ ಆಲ್​ರೌಂಡರ್​ ಲಿವಿಂಗ್​ಸ್ಟೋನ್ ಅವರನ್ನು ಇಂದು ತಂಡದಿಂದ ಹೊರಗಿಡಲಾಗುತ್ತಿದೆ. ಈ ಆವೃತ್ತಿಯಲ್ಲಿ ಲಿವಿಂಗ್​ಸ್ಟೋನ್​ ಕೇವಲ ಒಂದು ಅರ್ಧಶತಕ ಗಳಿಸಿದ್ದು ಬಿಟ್ಟರೇ ಉಳಿದ ಪಂದ್ಯಗಳಲ್ಲಿ ಅತೀ ಕಳಪೆ ಪ್ರದರ್ಶನ ತೋರಿದ್ದಾರೆ. ಇದೀಗ ಈ ಪ್ಲೇಯರ್​ ಸ್ಥಾನಕ್ಕೆ ಟಿಮ್​ ಡೇವಿಡ್​ ವಾಪಸ್ಸಾಗಲಿದ್ದಾರೆ. ತಂಡದಲ್ಲಿ ಕೆಲ ಬದಲಾವಣೆಗಳಾಗೋ ನಿರೀಕ್ಷೆಯಿದೆ.

* ಆರ್​ಸಿಬಿ ಫ್ಯಾನ್ಸ್​ಗೆ ಗುಡ್​ನ್ಯೂಸ್​ !!
ಹೌದು, ಲಕ್ನೋ ವಿರುದ್ಧ ನಡೆದಿದ್ದ ಪಂದ್ಯದಿಂದ ಸ್ಫೋಟಕ ಹಿಟ್ಟರ್​ ಟಿಮ್​ ಡೇವಿಡ್​ ಹೊರಗುಳಿದಿದ್ದರು. ಕಳೆದ ಪಂದ್ಯದಲ್ಲಿ ಗಾಯಕ್ಕೆ ತುತ್ತಾಗಿದ್ದ ಡೇವಿಡ್​ ಇಂದು ಆರ್‌ಸಿಬಿ ಪರ ಕಣಕ್ಕಿಳಿಯಲಿದ್ದಾರೆ. ಲಕ್ನೋ ವಿರುದ್ಧದ ಪಂದ್ಯದಲ್ಲಿ ಡೇವಿಡ್ ಬದಲಿಗೆ ಲಿವಿಂಗ್‌ಸ್ಟೋನ್ ಕಣಕ್ಕಿಳಿದಿದ್ದರು. ಆದರೆ, ಶೂನ್ಯಕ್ಕೆ ಪೆವಿಲಿಯನ್​ ಸೇರಿದ್ದರು. ಇದೀಗ ಮುಂದಿನ ಪಂದ್ಯಕ್ಕೆ ಡೇವಿಡ್​ ಲಭ್ಯರಿರುತ್ತಾರೆ ಎಂದು ವರದಿಯಾಗಿದೆ. ಡೇವಿಡ್ ಫಿಟ್​ ಆಗಿದ್ದು ಈ ಪಂದ್ಯದಲ್ಲಿ ಆಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಆವೃತ್ತಿಯಲ್ಲಿ ಟಿಮ್​ ಡೇವಿಡ್​ ಆರ್‌ಸಿಬಿ ಪರ ಉತ್ತಮ ಪ್ರದರ್ಶನ ನೀಡಿದ್ದಾರೆ. ಈ ವರೆಗೂ ಆಡಿರುವ 12 ಪಂದ್ಯಗಳಲ್ಲಿ 185.15 ಸ್ಟ್ರೈಕ್​ ರೇಟ್​ನೊಂದಿಗೆ 185 ರನ್​ ಬಾರಿಸಿದ್ದಾರೆ. ಬೆಂಗಳೂರಿನಲ್ಲಿ ನಡೆದಿದ್ದ ಪಂಜಾಬ್​ ವಿರುದ್ಧದ ಪಂದ್ಯದಲ್ಲಿ 22 ಎಸೆತಗಳಲ್ಲಿ 50 ರನ್​ ಬಾರಿಸಿದ್ದು, ಈ ಆವೃತ್ತಿಯ ಬೆಸ್ಟ್​ ಇನ್ನಿಂಗ್ಸ್​ ಆಗಿದೆ. ಒಟ್ಟಾರೆ ಟಿ-20 ಸ್ವರೂಪದಲ್ಲಿ ಡೆವಿಡ್​ ಐದು ಸಾವಿರಕ್ಕೂ ಹೆಚ್ಚಿನ ರನ್​ ಗಳಿಸಿದ್ದು 332 ಸಿಕ್ಸರ್​ಗಳನ್ನು ಬಾರಿಸಿದ್ದಾರೆ.

ಇಂದಿನ ಪಂದ್ಯ ಮುಲ್ಲಾನ್​ಪುರದ ಮಹಾರಾಜ ಯಧವೀಂದ್ರ ಸಿಂಗ್​ ಮೈದಾನದಲ್ಲಿ ನಡೆಯಲಿದೆ.