Categories
ದಿನ ರಾಶಿ ಭವಿಷ್ಯ

ಈ ದಿನದ ರಾಶಿ ಭವಿಷ್ಯ ಹೇಗಿದೆ?

ಈ ದಿನದ ರಾಶಿ ಭವಿಷ್ಯ ಹೇಗಿದೆ?
– ಗುರು ರಾಯರ ಕೃಪೆಯಿಂದ ಯಾವ ರಾಶಿಯವರಿಗೆ ಲಾಭ? ಯಾವ ರಾಶಿಯವರಿಗೆ ನಷ್ಟ?

NAMMUR EXPRESS NEWS
ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು?

** ಮೇಷ ರಾಶಿ :
​ಮೇಷ ರಾಶಿಯವರಿಗೆ ಇಂದು ಏರಿಳಿತಗಳಿಂದ ತುಂಬಿರಬಹುದು. ಆರೋಗ್ಯದ ಬಗ್ಗೆ ಮನಸ್ಸು ಚಿಂತಿತವಾಗಿರುತ್ತದೆ. ನೀವು ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ವೃತ್ತಿಪರ ಜೀವನದಲ್ಲಿ ನಿಮ್ಮ ಕೆಲಸವನ್ನು ಪ್ರಶಂಸಿಸಲಾಗುತ್ತದೆ. ಆತ್ಮವಿಶ್ವಾಸ ಹೆಚ್ಚಾಗುತ್ತದೆ. ನೀವು ಕೆಲಸದಲ್ಲಿ ನಿಮ್ಮ ಅತ್ಯುತ್ತಮ ಸಾಧನೆಯನ್ನು ಮಾಡುತ್ತೀರಿ. ಪ್ರೀತಿಪಾತ್ರರಿಂದ ಬೆಂಬಲ ಪಡೆಯುತ್ತೀರಿ.

** ವೃಷಭ ರಾಶಿ :
ವೃಷಭ ರಾಶಿಯವರಿಗೆ ಆರ್ಥಿಕ ಸ್ಥಿತಿ ಬಲವಾಗಿರುತ್ತದೆ. ಹಣವನ್ನು ಉಳಿಸಲು ನಿಮಗೆ ಹೊಸ ಅವಕಾಶಗಳು ಸಿಗುತ್ತವೆ. ಸರ್ಕಾರಿ ಉದ್ಯೋಗಿಗಳಿಗೆ ವರ್ಗಾವಣೆಯಾಗಬಹುದು. ಆಡಳಿತ ಪಕ್ಷದಿಂದ ನಿಮಗೆ ಬೆಂಬಲ ಸಿಗುತ್ತದೆ. ಪ್ರೇಮ ಸಂಬಂಧಗಳಲ್ಲಿ ಮಾಧುರ್ಯ ಇರುತ್ತದೆ. ಒಡಹುಟ್ಟಿದವರೊಂದಿಗಿನ ಸಂಬಂಧಗಳು ಉತ್ತಮವಾಗಿರುತ್ತವೆ. ಶೈಕ್ಷಣಿಕ ಕೆಲಸದಲ್ಲಿ ನೀವು ಹೊಸ ಸಾಧನೆಗಳನ್ನು ಸಾಧಿಸುವಿರಿ.

** ಮಿಥುನ ರಾಶಿ :
ಮಿಥುನ ರಾಶಿಯವರಿಗೆ ಇಂದು ಅನೇಕ ಆದಾಯದ ಮೂಲಗಳಿಂದ ಹಣ ಸಿಗುತ್ತದೆ. ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಪ್ರಗತಿಗೆ ನಿಮಗೆ ಅನೇಕ ಸುವರ್ಣ ಅವಕಾಶಗಳು ಸಿಗುತ್ತವೆ. ನೀವು ಹಳೆಯ ಸ್ನೇಹಿತರು ಅಥವಾ ಸಹೋದ್ಯೋಗಿಗಳನ್ನು ಭೇಟಿಯಾಗುತ್ತೀರಿ. ಸಾಮಾಜಿಕ ಸ್ಥಾನಮಾನ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ಇಂದು ಪ್ರಯಾಣ ಮಾಡುವುದನ್ನು ತಪ್ಪಿಸಿ. ಸಾಧ್ಯವಾದರೆ, ಇಂದು ಪ್ರಮುಖ ಕೆಲಸಗಳನ್ನು ಮಾಡಬೇಡಿ.

** ಕರ್ಕಾಟಕ ರಾಶಿ :
ಇಂದು ಕಟಕ ರಾಶಿಯವರು ದೀರ್ಘಕಾಲದ ಕಾಯಿಲೆಗಳಿಂದ ಪರಿಹಾರ ಪಡೆಯುತ್ತೀರಿ. ಹಣಕಾಸಿನ ವಿಷಯಗಳಿಗೆ ಸ್ವಲ್ಪ ಗಮನ ಕೊಡಿ. ಹೊಸ ಹಣಕಾಸು ಯೋಜನೆಯನ್ನು ರೂಪಿಸಿ. ಈ ವಾರ ನಿಮ್ಮ ಆಲೋಚನೆಗಳು ಮತ್ತು ಸಲಹೆಗಳನ್ನು ಕಚೇರಿಯಲ್ಲಿ ಪ್ರಶಂಸಿಸಲಾಗುತ್ತದೆ. ಕುಟುಂಬದೊಂದಿಗೆ ಸಮಯ ಕಳೆಯಿರಿ. ಕುಟುಂಬ ಜೀವನದ ಸಮಸ್ಯೆಗಳನ್ನು ನಿರ್ಲಕ್ಷಿಸಬೇಡಿ. ಎಚ್ಚರಿಕೆಯಿಂದ ಯೋಚಿಸಿದ ನಂತರ ಕೆಲವರು ಇಂದು ರಿಯಲ್ ಎಸ್ಟೇಟ್ ಅಥವಾ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಬಹುದು.

** ಸಿಂಹ ರಾಶಿ :
ಸಿಂಹ ರಾಶಿಯವರು ಇಂದು ಶಕ್ತಿ ಮತ್ತು ಆತ್ಮವಿಶ್ವಾಸದಿಂದ ತುಂಬಿರುತ್ತೀರಿ. ಹಣಕಾಸಿನ ವಿಷಯಗಳಲ್ಲಿ ಏರಿಳಿತಗಳು ಉಂಟಾಗುತ್ತವೆ. ಅತಿಯಾದ ಖರ್ಚಿನಿಂದಾಗಿ ಮನಸ್ಸು ಅಸಮಾಧಾನಗೊಳ್ಳಬಹುದು. ಕಚೇರಿಯಲ್ಲಿ ನಿಮ್ಮ ಕಾರ್ಯಕ್ಷಮತೆಯ ಮೇಲೆ ಗಮನಹರಿಸಿ. ಕೆಲಸದಲ್ಲಿ ಅಸಡ್ಡೆ ಮಾಡಬೇಡಿ. ಮೊದಲು ಪ್ರಮುಖ ಕೆಲಸಗಳನ್ನು ಪೂರ್ಣಗೊಳಿಸಿ. ಕೆಲಸಕ್ಕೆ ಸಂಬಂಧಿಸಿದಂತೆ ಪ್ರಯಾಣಿಸುವ ಸಾಧ್ಯತೆಗಳಿವೆ, ಆದರೆ ಇದೀಗ ದೀರ್ಘ ಪ್ರಯಾಣಗಳನ್ನು ಮುಂದೂಡಿ.

** ಕನ್ಯಾ ರಾಶಿ :
ಇಂದು ಕನ್ಯಾ ರಾಶಿಯವರಿಗೆ ತುಂಬಾ ಶುಭದಿನ. ಜೀವನದ ಎಲ್ಲಾ ಸಮಸ್ಯೆಗಳಿಂದ ನೀವು ಪರಿಹಾರ ಪಡೆಯುತ್ತೀರಿ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಪಾರ ಯಶಸ್ಸನ್ನು ಪಡೆಯುತ್ತಾರೆ. ಮನೆಯಲ್ಲಿ ಶುಭ ಕಾರ್ಯಗಳನ್ನು ಆಯೋಜಿಸುವುದು ಸಾಧ್ಯ. ಶೈಕ್ಷಣಿಕ ಕೆಲಸದಲ್ಲಿ ನಿಮಗೆ ಒಳ್ಳೆಯ ಸುದ್ದಿ ಸಿಗುತ್ತದೆ. ಕುಟುಂಬ ಮತ್ತು ಸ್ನೇಹಿತರ ಸಹಾಯದಿಂದ, ನೀವು ಹಣ ಗಳಿಸಲು ಅನೇಕ ಅವಕಾಶಗಳನ್ನು ಪಡೆಯುತ್ತೀರಿ. ನಿಮ್ಮ ಪ್ರೀತಿಪಾತ್ರರಿಂದ ಪ್ರೀತಿ ಮತ್ತು ಬೆಂಬಲವನ್ನು ಪಡೆಯುತ್ತೀರಿ.

** ತುಲಾ ರಾಶಿ :
ಇಂದು ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಆರ್ಥಿಕ ಸ್ಥಿತಿ ಬಲವಾಗಿರುತ್ತದೆ. ನೀವು ಮಾನಸಿಕವಾಗಿ ಆರೋಗ್ಯವಾಗಿರುತ್ತೀರಿ. ಕುಟುಂಬ ಜೀವನದಲ್ಲಿ ನಿಮಗೆ ಒಳ್ಳೆಯ ಸುದ್ದಿ ಸಿಗುತ್ತದೆ. ಬಹಳ ಸಮಯದ ನಂತರ ನೀವು ವಿಶೇಷ ವ್ಯಕ್ತಿಯನ್ನು ಭೇಟಿಯಾಗುತ್ತೀರಿ. ಆಸ್ತಿಗೆ ಸಂಬಂಧಿಸಿದ ವಿವಾದಗಳನ್ನು ಪರಿಹರಿಸಲು ಇಂದು ಅತ್ಯುತ್ತಮ ಸಮಯ. ಸಂಬಂಧದಲ್ಲಿ ನಿಮ್ಮ ಸಂಗಾತಿಯ ಬಗ್ಗೆ ಪ್ರಾಮಾಣಿಕರಾಗಿರಿ. ನಿಮ್ಮ ಸಂಗಾತಿಯೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯಿರಿ.

** ವೃಶ್ಚಿಕ ರಾಶಿ :
ಇಂದು, ವೃಶ್ಚಿಕ ರಾಶಿಯ ಜನರ ಜೀವನದಲ್ಲಿ ಅನೇಕ ಸಕಾರಾತ್ಮಕ ಬದಲಾವಣೆಗಳು ಬರುತ್ತವೆ. ಆರೋಗ್ಯ ಸುಧಾರಿಸುತ್ತದೆ. ಹಣದ ಹರಿವು ಹೆಚ್ಚಾಗುತ್ತದೆ. ಆರ್ಥಿಕ ಸ್ಥಿತಿ ಬಲವಾಗಿರುತ್ತದೆ. ನೀವು ಕುಟುಂಬ ಅಥವಾ ಸ್ನೇಹಿತರೊಂದಿಗೆ ರಜೆಯನ್ನು ಯೋಜಿಸಬಹುದು. ಕೆಲವು ಜನರಿಗೆ ಪೂರ್ವಜರ ಆಸ್ತಿಯಿಂದ ಆರ್ಥಿಕ ಲಾಭಗಳು ದೊರೆಯುತ್ತವೆ. ವೃತ್ತಿಪರ ಜೀವನದ ಸವಾಲುಗಳನ್ನು ನಿಭಾಯಿಸಲು ನೀವು ಆತ್ಮವಿಶ್ವಾಸದಿಂದ ಇರುತ್ತೀರಿ.

** ಧನಸ್ಸು ರಾಶಿ :
ಇಂದು, ಧನು ರಾಶಿಯವರಿಗೆ ದೀರ್ಘಕಾಲದ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ. ಬಾಕಿ ಉಳಿದಿರುವ ಹಣವನ್ನು ಹಿಂತಿರುಗಿಸಲಾಗುತ್ತದೆ. ವೃತ್ತಿಪರ ಜೀವನದಲ್ಲಿ ಪ್ರಗತಿಯ ಸಾಧ್ಯತೆ ಇರುತ್ತದೆ. ಕುಟುಂಬ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಕೆಲವರು ಹೊಸ ಆಸ್ತಿಯನ್ನು ಖರೀದಿಸಬಹುದು. ದೀರ್ಘ ಪ್ರಯಾಣದ ಸಾಧ್ಯತೆ ಇರುತ್ತದೆ. ವಿದ್ಯಾರ್ಥಿಗಳು ಶೈಕ್ಷಣಿಕ ಕೆಲಸದಲ್ಲಿ ಅಪಾರ ಯಶಸ್ಸನ್ನು ಪಡೆಯುತ್ತಾರೆ.

** ಮಕರ ರಾಶಿ :
ಇಂದು ಮಕರ ರಾಶಿಯವರಿಗೆ ಸಾಮಾನ್ಯವಾಗಿರುತ್ತದೆ. ಮನಸ್ಸು ಆರೋಗ್ಯದ ಬಗ್ಗೆ ಚಿಂತಿತವಾಗಿರುತ್ತದೆ. ಕುಟುಂಬದೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯಿರಿ. ವ್ಯವಹಾರದಲ್ಲಿ ಬೆಳವಣಿಗೆಗೆ ಹಲವು ಅವಕಾಶಗಳಿವೆ. ನೀವು ನಿಮ್ಮ ಪ್ರೀತಿಪಾತ್ರರೊಂದಿಗೆ ಎಲ್ಲೋ ಹೋಗಬಹುದು ಅಥವಾ ರಜೆಯನ್ನು ಯೋಜಿಸಬಹುದು. ಕೆಲವರ ಆದಾಯ ಹೆಚ್ಚಾಗುತ್ತದೆ. ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಶೈಕ್ಷಣಿಕ ಕೆಲಸವು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ.

** ಕುಂಭ ರಾಶಿ :
ಇಂದು ದಿನವು ಕುಂಭ ರಾಶಿಯವರಿಗೆ ಶಕ್ತಿ ಮತ್ತು ಆತ್ಮವಿಶ್ವಾಸದಿಂದ ತುಂಬಿರುತ್ತದೆ. ಆರ್ಥಿಕ ವಿಷಯಗಳಲ್ಲಿ ದಿನವು ಉತ್ತಮವಾಗಿರುತ್ತದೆ. ಹೊಸ ಆದಾಯದ ಮೂಲಗಳು ಸೃಷ್ಟಿಯಾಗುತ್ತವೆ. ವೃತ್ತಿಪರ ಜೀವನದಲ್ಲಿ ಎಲ್ಲವೂ ಚೆನ್ನಾಗಿರುತ್ತದೆ. ವೃತ್ತಿ ಬೆಳವಣಿಗೆಗೆ ಲೆಕ್ಕವಿಲ್ಲದಷ್ಟು ಅವಕಾಶಗಳಿವೆ. ಕೆಲವರು ಭೂಮಿ ಅಥವಾ ವಾಹನ ಖರೀದಿಸಲು ಹಣವನ್ನು ಖರ್ಚು ಮಾಡಬಹುದು. ಇಂದು ಗೃಹೋಪಯೋಗಿ ಉಪಕರಣಗಳು ಅಥವಾ ಎಲೆಕ್ಟ್ರಾನಿಕ್ ಸಾಧನಗಳನ್ನು ಖರೀದಿಸಲು ಶುಭವಾಗಿರುತ್ತದೆ.

** ಮೀನ ರಾಶಿ :
ಮೀನ ರಾಶಿಯವರಿಗೆ ಇಂದು ಸಾಲದಿಂದ ಮುಕ್ತಿ ಸಿಗುತ್ತದೆ. ಕೆಲಸದ ಸವಾಲುಗಳನ್ನು ನೀವು ನಿಭಾಯಿಸಲು ಸಾಧ್ಯವಾಗುತ್ತದೆ. ತಂಡದ ಬೆಂಬಲದೊಂದಿಗೆ, ಪ್ರತಿಯೊಂದು ಕೆಲಸವು ಸಕಾರಾತ್ಮಕ ಫಲಿತಾಂಶಗಳನ್ನು ಪಡೆಯುತ್ತದೆ. ವಿದೇಶದಲ್ಲಿ ಕೆಲಸ ಮಾಡುವ ಅವಕಾಶವನ್ನು ನೀವು ಪಡೆಯಬಹುದು. ಪ್ರೇಮ ಜೀವನದಲ್ಲಿ ನೀವು ಸ್ವಲ್ಪ ಜಾಗರೂಕರಾಗಿರಬೇಕು. ಸಂಬಂಧದಲ್ಲಿ ಮೂರನೇ ವ್ಯಕ್ತಿಯ ಹಸ್ತಕ್ಷೇಪ ಹೆಚ್ಚಾಗಲು ಬಿಡಬೇಡಿ.

Categories
ಕಾರ್ಕಳ

ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಅಧ್ಯಕ್ಷರಾಗಿ ಉದ್ಯಮಿ ಸುರೇಂದ್ರ ನಾಯಕ್

ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಅಧ್ಯಕ್ಷರಾಗಿ ಉದ್ಯಮಿ ಸುರೇಂದ್ರ ನಾಯಕ್

ಕಾರ್ಕಳ : ಕಾರ್ಕಳದ ಪ್ರತಿಷ್ಠಿತ ರೋಟರಿ ಸಂಸ್ಥೆ ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಇದರ 2025-26ನೆ ಸಾಲಿನ ನೂತನ ಅಧ್ಯಕ್ಷರಾಗಿ ಉದ್ಯಮಿ Rtn PHF ಸುರೇಂದ್ರ ನಾಯಕ್ ಮತ್ತು ಕಾರ್ಯದರ್ಶಿಯಾಗಿ Rtn ರಾಘವೇಂದ್ರ ಕಾಮತ್ ಅವರು ಆಯ್ಕೆಯಾಗಿರುತ್ತಾರೆ. ಸಂಸ್ಥೆಯ
ಖಜಾಂಚಿಯಾಗಿ Rtn PHF ಸುರೇಶ್ ನಾಯಕ್, Rtn PHF ಉಪೇಂದ್ರ ವಾಗ್ಲೆ, ಜಂಟಿ ಕಾರ್ಯದರ್ಶಿ Rtn ಮಾಧವಿ ಕೆ, ಕ್ಲಬ್ ಸರ್ವಿಸ್ Rtn PHF ಚಿರಾಗ್ ರಾವ್, ಕಮ್ಯೂನಿಟಿ ಸರ್ವಿಸ್ Rtn PHF ಪ್ರಶಾಂತ್ ಬೆಳಿರಾಯ, ಇಂಟರ್ನ್ಯಾಷನಲ್ ಸರ್ವಿಸ್ Rtn PHF ಪ್ರಕಾಶ್ ಪೈ, ವೊಕೇಷನಲ್ ಸರ್ವಿಸ್ Rtn ಗಣೇಶ್ ಬರ್ಲಾಯ, ಯೂತ್ ಸರ್ವಿಸ್ Rtn ಪ್ರಕಾಶ್ ವಾಗ್ಲೆ, TRF Rtn ವಿನೋದ್ ಕುಮಾರ್ ಆರ್, ಐ ಟಿ & ವೆಬ್ಸೈಟ್ Rtn PHF ಶ್ರೀವರ್ಮ ಅಜ್ರಿ, ಪಬ್ಲಿಕ್ ಇಮೇಜ್ Rtn ರಮೇಶ್ ಶೆಟ್ಟಿ, ಕ್ಲಬ್ ಪ್ರೋಗ್ರಾಮ್ ಕಮಿಟಿ Rtn ಸುಬ್ರಹ್ಮಣ್ಯ ಉಪಾಧ್ಯ, ಮೆಂಬರಿಶಿಪ್ Rtn ಅಶೋಕ್ ಕಾಮತ್ ಮತ್ತು ಸಾರ್ಜೆಂಟ್ ಅಟ್ ಆರ್ಮ್ ಪ್ರಮುಖರಾಗಿ Rtn ಅಬ್ದುಲ್ ರೆಹಮಾನ್ ಆಯ್ಕೆಯಾಗಿರುತ್ತಾರೆ. ರೋಟರಿ ಪೂರ್ವ ಗವರ್ನರ್ ಡಾ. ಭರತೇಶ್ ಆದಿರಾಜ್ ಮತ್ತು ರೋಟರಿ ಕ್ಲಬ್, ಕಾರ್ಕಳ ಪೂರ್ವಾಧ್ಯಕ್ಷರಾದ Rtn PHF ಚಂದ್ರ ಶೇಖರ್ ಹೆಗ್ಡೆ ಇವರ ಮಾರ್ಗದರ್ಶನದಲ್ಲಿ ಈ ಕ್ಲಬ್ ಏಳು ವರ್ಷ ಉತ್ತಮ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ವಿ 8 ನೆ ವರ್ಷಕ್ಕೆ ಪಾದಾರ್ಪಣೆ ಮಾಡಿರುತ್ತದೆ. ಪದಗ್ರಹಣ ಸಮಾರಂಭವು ಕಾರ್ಕಳ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಸಭಾಂಗಣದಲ್ಲಿ ನಡೆಯಲಿರುವುದು. ಪದಗ್ರಹಣ ಅಧಿಕಾರಿಯಾಗಿ ನಿಟ್ಟೆ ಕ್ಯಾಂಪಸ್ ನಿಟ್ಟೆ ಯುನಿವರ್ಸಿಟಿ ನಿರ್ದೇಶಕರಾದ Rtn PHF A ಯೋಗೀಶ್ ಹೆಗ್ಡೆ ಇವರು ಪದಗ್ರಹಣ ನೆರವೇರಿಸಿಕೊಡಲಿದ್ದಾರೆ.

Categories
ಕಾರ್ಕಳ

ಕ್ರೈಸ್ಟ್ ಕಿಂಗ್ ನಲ್ಲಿ ಪತ್ರಿಕಾ ದಿನಾಚರಣೆ: ಪ್ರಜಾಪ್ರಭುತ್ವಕ್ಕೆ ಮಾಧ್ಯಮದ ಮಹತ್ತರ ಕೊಡುಗೆ

ಕ್ರೈಸ್ಟ್ ಕಿಂಗ್ ನಲ್ಲಿ ಪತ್ರಿಕಾ ದಿನಾಚರಣೆ: ಪ್ರಜಾಪ್ರಭುತ್ವಕ್ಕೆ ಮಾಧ್ಯಮದ ಮಹತ್ತರ ಕೊಡುಗೆ

ಕಾರ್ಕಳ: ಕ್ರೈಸ್ಟ್ ಕಿಂಗ್ ಪದವಿಪೂರ್ವ ಕಾಲೇಜಿನಲ್ಲಿ ಪತ್ರಿಕಾ ದಿನಾಚರಣೆ ಜುಲೈ ೧ರಂದು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ವಿಶ್ರಾಂತ ಹಿರಿಯ ಪತ್ರಕರ್ತ ಬಿಪಿನ್‌ಚಂದ್ರ ಪಾಲ್ ನಕ್ರೆ ಆಗಮಿಸಿ ದೀಪ ಬೆಳಗಿಸುವ ಮೂಲಕ ಉದ್ಘಾಟನೆ ನೆರವೇರಿಸಿದರು.

ಪತ್ರಿಕಾ ಧರ್ಮ ಅನುಸರಿಸುವಿಕೆ ಅಗತ್ಯ:
ಬಳಿಕ ಮಾತನಾಡಿದ ಬಿಪಿನ್‌ಚಂದ್ರ ಪಾಲ್, “ಪ್ರಜಾಪ್ರಭುತ್ವ ಉಳಿಯುವಲ್ಲಿ ಪತ್ರಿಕಾ ಮಾಧ್ಯಮಗಳ ಪಾತ್ರ ಅಪಾರವಾಗಿದೆ. ಪತ್ರಿಕೆಗೆ ಮತ್ತು ಪತ್ರಕರ್ತರಿಗೆ ಪತ್ರಿಕಾ ಧರ್ಮವೇ ಪ್ರಧಾನವಾಗಬೇಕು. ಈ ಕಾಲಘಟ್ಟದಲ್ಲಿ ಪತ್ರಕರ್ತರು ಹಲವು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಆದರೂ ಧೈರ್ಯದಿಂದ, ನಿಷ್ಠೆಯಿಂದ ಮತ್ತು ನಿಷ್ಠುರ ಸತ್ಯವನ್ನು ಬರೆಯುವ ಧೈರ್ಯವಿರಬೇಕು. ಪತ್ರಕರ್ತರು ಯಾರೊಬ್ಬರ ಪರವಾಗಿಯೂ ಇರದೆ, ಎಲ್ಲರ ಪರವಾಗಿ ಕೆಲಸ ಮಾಡಬೇಕು” ಎಂದು ಹೇಳಿದರು.

ಪತ್ರಕರ್ತರಿಗೆ ಅಭಿನಂದನೆ:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ಪೀಟರ್ ಫೆರ್ನಾಂಡಿಸ್ ಮಾತನಾಡಿ, “ಪತ್ರಕರ್ತರು ಧ್ವನಿಯಿಲ್ಲದ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಾಮಾಜಿಕ ಮಾಧ್ಯಮಗಳ ಪ್ರಭಾವದ ನಡುವೆಯೂ ಮುದ್ರಿತ ಮಾಧ್ಯಮಗಳು ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡಿವೆ. ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿರುವ ಪತ್ರಕರ್ತರು ನಿಜಕ್ಕೂ ದೇಶಪ್ರೇಮಿಗಳಾಗಿದ್ದಾರೆ” ಎಂದರು.

ವಸ್ತುನಿಷ್ಠ ವರದಿ ಮುಖ್ಯ:
ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮಹಮ್ಮದ್ ಷರೀಫ್ ಮಾತನಾಡಿ, “ಪತ್ರಕರ್ತರು ರಾಗ-ದ್ವೇಷವಿಲ್ಲದೆ, ಪಕ್ಷಪಾತವಿಲ್ಲದೆ ವಸ್ತುನಿಷ್ಠವಾಗಿ ವರದಿ ಮಾಡುವುದು ಪತ್ರಿಕಾ ಧರ್ಮವಾಗಿದೆ. ಮಾಹಿತಿ ಸಂಗ್ರಹ, ವಿಶ್ಲೇಷಣೆ ಮತ್ತು ಜವಾಬ್ದಾರಿ ಎಂಬ ಮೂರು ಅಂಶಗಳು ಪತ್ರಕರ್ತರ ಕಾರ್ಯವಿಧಾನದ ಅವಿಭಾಜ್ಯ ಭಾಗವಾಗಿರಬೇಕು” ಎಂದರು.

ಹಿರಿಯರ ಗೌರವ, ಅನುಭವ ಹಂಚಿಕೆ:
ಈ ಸಂದರ್ಭದಲ್ಲಿ ಮಾಧ್ಯಮಬಿಂಬ ಪತ್ರಿಕೆಯ ಹಿರಿಯ ವರದಿಗಾರ ಸತೀಶ ಎಚ್. ಶೆಟ್ಟಿಯವರನ್ನು ಕ್ರೈಸ್ಟ್ ಕಿಂಗ್ ಎಜುಕೇಷನ್ ಟ್ರಸ್ಟ್ ಗೌರವಿಸಿತು. ಅವರು ತಮ್ಮ ವರದಿಗಾರಿಕೆ ಅನುಭವಗಳನ್ನು ಹಂಚಿಕೊಂಡರು.
ಪತ್ರಿಕಾಗೋಷ್ಠಿಗೆ ಹಾಜರಿದ್ದ ಸ್ಥಳೀಯ ಪತ್ರಕರ್ತರು, ವರದಿಗಾರರು ಹಾಗೂ ಛಾಯಾಗ್ರಾಹಕರನ್ನು ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.

ಹಾಜರಾತಿ ಮತ್ತು ನಿರೂಪಣೆ:
ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಾಚಾರ್ಯ ಲಕ್ಷ್ಮೀ ನಾರಾಯಣ ಕಾಮತ್, ಪ್ರೌಢಶಾಲಾ ಮುಖ್ಯಶಿಕ್ಷಕಿ ಶ್ರೀಮತಿ ಜೋಸ್ನಾ ಸ್ನೇಹಲತಾ, ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕ ರುಡಾಲ್ಫ್ ಕಿಶೋರ್ ಲೋಬೊ, ಮಾಧ್ಯಮಬಿಂಬ ಹಾಗೂ ಸ್ವಯಂ ಟೈಮ್ಸ್‌ ನ ವಸಂತ್ ಕುಮಾರ್, ನಿವೃತ್ತ ಪತ್ರಕರ್ತ ಪ್ರದೀಪ್ ನಾಯಕ್ ಉಪಸ್ಥಿತರಿದ್ದರು.
ದೀಪಕ್ ಸ್ವಾಗತಿಸಿದರು, ಉಮೇಶ್ ಬೆಳ್ಳಿಪ್ಪಾಡಿ ನಿರೂಪಣೆ ನಡೆಸಿದರು, ಮತ್ತು ಮೇಘಶ್ರೀ ವಂದಿಸಿದರು.

Categories
ಚಿಕ್ಕಮಗಳೂರು ಮಲ್ನಾಡ್

ಕೊಪ್ಪ ಶಮಿತಾ ಅನುಮಾನಾಸ್ಪದ ಸಾವು ಪ್ರಕರಣ: ಬೀದಿಗಿಳಿದ ಎಬಿವಿಪಿ

ಕೊಪ್ಪ ಶಮಿತಾ ಅನುಮಾನಾಸ್ಪದ ಸಾವು ಪ್ರಕರಣ: ಬೀದಿಗಿಳಿದ ಎಬಿವಿಪಿ

* ಕೊಪ್ಪದಲ್ಲಿ ಸುರಿವ ಮಳೆಯಲ್ಲೂ ಪ್ರತಿಭಟನೆ
* ಕೊಪ್ಪ ಮೊರಾರ್ಜಿ ವಸತಿ ಶಾಲೆ ಪ್ರಿನ್ಸಿಪಲ್ ಸಸ್ಪೆಂಡ್ ಮಾಡಿ ಆದೇಶ

NAMMMUR EXPRESS NEWS
ಕೊಪ್ಪ: ತಾಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಜೂ.28 ರಂದು 9 ನೇ ತರಗತಿ ವಿದ್ಯಾರ್ಥಿನಿ ಶಮಿತಾ ನೇಣುಬಿಗಿದುಕೊಂಡ ಸ್ಥಿತಿಯಲ್ಲಿ ಅನುಮಾನಾಸ್ಪದವಾಗಿ ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆಗೆ ಒತ್ತಾಯಿಸಿ ಹಾಗೂ ಶಮಿತಾ ಸಾವಿಗೆ ನ್ಯಾಯ ಒದಗಿಸಲು ಒತ್ತಾಯಿಸಿ ಪಟ್ಟಣದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕೊಪ್ಪ ಚಲೋ ಮೂಲಕ ಬೀದಿಗಿಳಿದಿದೆ.
ನಗರದ ವಾಟರ್ ಟ್ಯಾಂಕ್‌ನಿಂದ ಬಸ್ ನಿಲ್ದಾಣದ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿತು ನಂತರ ಸುರಿವ ಮಳೆಯನ್ನೂ ಲೆಕ್ಕಿಸದೇ ರಸ್ತೆಯಲ್ಲೇ ಕುಳಿತು ಶಾಲೆಯ ಅವ್ಯವಸ್ಥೆ, ಸಿಬ್ಬಂದಿಗಳನ್ನು ಅಮಾನತುಗೊಳಿಸಿ ತನಿಖೆ ನಡೆಸುವಂತೆ ಮತ್ತು ಸೂಕ್ತ ತನಿಖೆ ನಡೆಸುವಂತೆ ತಮ್ಮ ಆಕ್ರೋಶ ವ್ಯಕ್ತಪಡಿಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.

* ಮೊರಾರ್ಜಿ ವಸತಿ ಶಾಲೆಯ ಪ್ರಿನ್ಸಿಪಲ್ ಸಸ್ಪೆಂಡ್
ಪ್ರಕರಣದ ಕುರಿತು ಶಾಲೆಯ ಅವ್ಯವಸ್ಥೆ ಕುರಿತು ಭಾರೀ ಆಕ್ರೋಶ ವ್ಯಕ್ತವಾಗಿ ಹಲವು ಪ್ರತಿಭಟನೆಗಳು ನಡೆಯುತ್ತಿವೆ. ಈಗ ವಸತಿ ಶಾಲೆಯ ಪ್ರಿನ್ಸಿಪಲ್ ರಜನಿ ಹಾಗೂ ವಾರ್ಡನ್ ಸುಂದರ ನಾಯ್ಕ್‌ನನ್ನು ಸಸ್ಪೆಂಡ್ ಮಾಡಲಾಗಿದೆ.
ಕರ್ತವ್ಯಲೋಪದ ಆರೋಪದ ಮೇಲೆ ಪ್ರಿನ್ಸಿಪಲ್ ಹಾಗೂ ವಾರ್ಡನ್‌ ಇಬ್ಬರನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಲಾಗಿದೆ.

Categories
ತೀರ್ಥಹಳ್ಳಿ

ತೀರ್ಥಹಳ್ಳಿ ಆಸ್ಪತ್ರೆ ವೈದ್ಯರ ವರ್ಗಾವಣೆ: ಜು.10ಕ್ಕೆ ಬೃಹತ್ ಪ್ರತಿಭಟನೆ

ತೀರ್ಥಹಳ್ಳಿ ಆಸ್ಪತ್ರೆ ವೈದ್ಯರ ವರ್ಗಾವಣೆ: ಜು.10ಕ್ಕೆ ಬೃಹತ್ ಪ್ರತಿಭಟನೆ
– 6 ಮಂದಿ ವೈದ್ಯರ ವರ್ಗಾವಣೆ ಆದೇಶ: ಹಲವು ಸಂಘಟನೆಗಳ ಹೋರಾಟ
– ಅರೋಗ್ಯ ಇಲಾಖೆ ಅಧಿಕಾರಿಗಳ ಜತೆ ಆರಗ ಚರ್ಚೆ

NAMMUR EXPRESS NEWS
ತೀರ್ಥಹಳ್ಳಿ: ಸರ್ಕಾರಿ ಆಸ್ಪತ್ರೆಯಾಗಿರುವ ಜಯಚಾಮರಾಜೇಂದ್ರ ಆಸ್ಪತ್ರೆಯಿಂದ ಪ್ರಮುಖ ಆರು ವೈದ್ಯರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶಿಸಿದ್ದರ ವಿರುದ್ಧ ಇದೀಗ ತೀರ್ಥಹಳ್ಳಿಯಲ್ಲಿ ಗುರುವಾರ ಭಾರೀ ಹೋರಾಟ ನಡೆಯಲಿದೆ.
ತೀರ್ಥಹಳ್ಳಿ ಸಮಾನ ಮನಸ್ಕರ ವೇದಿಕೆ ಅಧ್ಯಕ್ಷರಾದ ಸೊಪ್ಪುಗುಡ್ಡೆ ರಾಘವೇಂದ್ರ ಅವರ ನೇತೃತ್ವದಲ್ಲಿ ತೀರ್ಥಹಳ್ಳಿಯ ವರ್ತಕರ ಸಂಘ, ಕರವೇ, ನಾರಾಯಣ ಗುರು ವಿಚಾರ ವೇದಿಕೆ, ವೈದ್ಯರ ಸಂಘ, ಆಟೋ ಚಾಲಕರ ಮತ್ತು ಮಾಲೀಕರ ಸಂಘ ಸೇರಿ ಅನೇಕ ಅನೇಕ ಸಂಘಟನೆಗಳು ಹೋರಾಟದಲ್ಲಿ ಭಾಗಿಯಾಗಲಿವೆ.
ತೀರ್ಥಹಳ್ಳಿಯ ಸರ್ಕಾರಿ ಆಸ್ಪತ್ರೆ ವೈದ್ಯರ ಅಸಮರ್ಪಕ ವರ್ಗಾವಣೆ ಇದೀಗ ಭಾರೀ ಜನ ಆಕ್ರೋಶಕ್ಕೆ ಕಾರಣವಾಗಿದೆ.
ಶಾಸಕ ಆರಗ ಜ್ಞಾನೇಂದ್ರ ಸೇರಿ ಅನೇಕರು ಈ ಬಗ್ಗೆ ಅಸಮಾಧಾನ ಪಡಿಸಿದರೂ ಯಾವ ಮನವಿಗೂ ಸರ್ಕಾರ ಸೊಪ್ಪು ಹಾಕಿಲ್ಲ. ಇನ್ನು ಸರ್ಕಾರ ಹಾಗೂ ಅರೋಗ್ಯ ಇಲಾಖೆಯ ಈ ನಡೆ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ವರ್ಗಾವಣೆಗೊಂಡ ವೈದ್ಯರು ಯಾರು ಯಾರು?

ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಗಣೇಶ್, ಮಕ್ಕಳ ತಜ್ಞರಾಗಿದ್ದ ಡಾ. ಪ್ರಭಾಕರ್ ಹಾಗೂ ಕಣ್ಣಿನ ತಜ್ಞರಾಗಿದ್ದ ಡಾ. ಮಹಿಮಾ, ಮೂಳೆ ತಜ್ಞರಾದ ಡಾ.ನಿಶ್ಚಲ್, ಕಿವಿ ಮೂಗು ತಜ್ಞರಾಗಿದ್ದ ಡಾ. ರವಿಕುಮಾರ್ ಹಾಗೂ ಮತ್ತೊರ್ವ ವೈದ್ಯರನ್ನು ಸೇರಿದಂತೆ ಒಟ್ಟು ಆರು ಮಂದಿ ವೈದ್ಯರನ್ನು ಸರ್ಕಾರ ವರ್ಗಾವಣೆ ಮಾಡಿದ್ದು ಈ ಪೈಕಿ ಮೂವರು ಕೊಪ್ಪ ಸರ್ಕಾರಿ ಆಸ್ಪತ್ರೆಗೆ ವರ್ಗಾವಣೆಗೊಂಡಿದ್ದಾರೆ.
ಶಾಸಕ ಆರಗ ಜ್ಞಾನೇಂದ್ರ ಆಸ್ಪತ್ರೆಗೆ ಭೇಟಿ ನೀಡಿ ಅಧಿಕಾರಿಗಳ ಜೊತೆಗೆ ಚರ್ಚೆ ಮಾಡಿದ್ದರು. ನಂತರ ಯಾರನ್ನು ವರ್ಗಾವಣೆ ಮಾಡಬಾರದು ಎಂದು ಶಾಸಕ ಆರಗ ಜ್ಞಾನೇಂದ್ರ ಆರೋಗ್ಯ ಮಂತ್ರಿಗಳಿಗೆ ಪತ್ರ ಬರೆದಿದ್ದರು.
ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಬೆಂಗಳೂರಿನಲ್ಲಿ ಅರೋಗ್ಯ ಇಲಾಖೆ ಆಯುಕ್ತರನ್ನು ಭೇಟಿಯಾಗಿ ತಾಲೂಕಿನ ವೈದ್ಯರ ವರ್ಗಾವಣೆ ಕುರಿತು ಚರ್ಚಿಸಿದರು.

Categories
ತೀರ್ಥಹಳ್ಳಿ

ಮಹಿಳಾ ಒಕ್ಕಲಿಗರ ಸಂಘದ ಕೆಂಪೇಗೌಡ ಜಯಂತ್ಯೋತ್ಸವ ಯಶಸ್ವಿ

ಮಹಿಳಾ ಒಕ್ಕಲಿಗರ ಸಂಘದ ಕೆಂಪೇಗೌಡ ಜಯಂತ್ಯೋತ್ಸವ ಯಶಸ್ವಿ
– ತೀರ್ಥಹಳ್ಳಿಯಲ್ಲಿ ನಡೆದ ಕಾರ್ಯಕ್ರಮ: ನೂರಾರು ಮಂದಿ ಭಾಗಿ
– ಮಹಿಳಾ ಒಕ್ಕಲಿಗರ ಸಂಘದ 2ನೇ ವರ್ಷದ ಸಂಭ್ರಮಾಚರಣೆ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲ್ಲೂಕು ಮಹಿಳಾ ಒಕ್ಕಲಿಗರ ಸಂಘ (ರಿ.) ತೀರ್ಥಹಳ್ಳಿ – ಶಿವಮೊಗ್ಗ ಜಿಲ್ಲೆ 2024-25 ನೇ ಸಾಲಿನ 2 ನೇ ವರ್ಷದ ಸಂಭ್ರಮಾಚರಣೆ ಮತ್ತು ನಾಡಪ್ರಭು ಶ್ರೀ ಕೆಂಪೇಗೌಡರವರ 516 ನೇ ಜಯಂತ್ಯೋತ್ಸವವನ್ನು ಮಂಗಳವಾರ ಸುವರ್ಣ ಸಹಕಾರ ಭವನ, ಟಿ.ಎ.ಪಿ.ಸಿ.ಎಂ.ಎಸ್. ತೀರ್ಥಹಳ್ಳಿಯಲ್ಲಿ ನೆರವೇರಿಸಲಾಯಿತು. ಈ ಕಾರ್ಯಕ್ರಮದ ದಿವ್ಯಸಾನಿಧ್ಯದಲ್ಲಿ ಒಕ್ಕಲಿಗರ ಸಮಾಜದ ಸಾಯಿನಾಥ್ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾಕಮ್ಮ ಅಧ್ಯಕ್ಷರು, ತೀರ್ಥಹಳ್ಳಿ ತಾಲ್ಲೂಕು ಮಹಿಳಾ ಒಕ್ಕಲಿಗರ ಸಂಘ (ರಿ.), ತೀರ್ಥಹಳ್ಳಿ ಇವರು ವಹಿಸಿದ್ದರು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಆರಗ ಜ್ಞಾನೇಂದ್ರ. ಮಾಜಿ ಗೃಹ ಸಚಿವರು ಹಾಗೂ ಶಾಸಕರು ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರ ಇವರು ನೆರವೇರಿಸಿದ್ದರು. ಈ ಕಾರ್ಯಕ್ರಮದ ಗೌರವಾನ್ವಿತ ಮುಖ್ಯ ಅತಿಥಿಗಳಾಗಿ ಆರ್. ಮದನ್ ಉದ್ಯಮಿಗಳು ಹಾಗೂ ಪ್ರಗತಿಪರ ಕೃಷಿಕರು ತೀರ್ಥಹಳ್ಳಿ, ನಾಗಭೂಷಣ್ ಸಹಕಾರ ಸಂಘಗಳ ಉಪ ನಿಬಂಧಕರು ಶಿವಮೊಗ್ಗ, ಸಿರಿಬೈಲ್ ಧರ್ಮೇಶ್ ನಿರ್ದೇಶಕರು, ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘ (ರಿ.), ಬೆಂಗಳೂರು, ರಮೇಶ್ ಹೆಗಡೆ ಅಧ್ಯಕ್ಷರು, ಜಿಲ್ಲಾ ಒಕ್ಕಲಿಗರ ಸಂಘ (ರಿ.), ಶಿವಮೊಗ್ಗ, ಹೆಚ್.ಎನ್. ವಿಜಯದೇವ್ ಅಧ್ಯಕ್ಷರು, ಸಹ್ಯಾದ್ರಿ ಸಮೂಹ ಸಂಸ್ಥೆ, ತೀರ್ಥಹಳ್ಳಿ, ಡಾ॥ ಶಾಂತ ಸುರೇಂದ್ರ, ಅಧ್ಯಕ್ಷರು, ಅಖಿಲ ಕರ್ನಾಟಕ ಒಕ್ಕಲಿಗರ ರಾಜ್ಯ ಮಹಿಳಾ ಘಟಕ, ಒಕ್ಕಲಿಗರ ಸಂಘದ ಕೃಷ್ಣಮೂರ್ತಿ ಕೂಳೂರು ಇವರು ಉಪಸ್ಥಿತರಿದ್ದರು. ಮುಖ್ಯ ಭಾಷಣಕಾರರಾಗಿ ಡಾ॥ ಕೃಷ್ಣಮೂರ್ತಿ, ನಿವೃತ್ತ ಪ್ರಾಂಶುಪಾಲರು, ಶೃಂಗೇರಿ, ಕಿರಣ್ ಪ್ರಭಾಕರ್, ಪ್ರಗತಿಪರ ಕೃಷಿಕರು, ಪ್ರತಿಮಾ ಡಾಕಪ್ಪ, ಅಧ್ಯಕ್ಷರು, ಅಖಿಲ ಕರ್ನಾಟಕ ಒಕ್ಕಲಿಗರ ಜಿಲ್ಲಾ ಮಹಿಳಾ ಘಟಕ, ಶಿವಮೊಗ್ಗ ಈ ಕಾರ್ಯಕ್ರಮಕ್ಕೆ ಮಾನ್ಯ ಸಂಘದ ಸದಸ್ಯರುಗಳು ಹಾಗೂ ಸಮಾಜ ಬಾಂಧವರು ಆಗಮಿಸಿ, ಸಮಾರಂಭವನ್ನು ಯಶಸ್ವಿಗೊಳಿಸಿದ್ದರು.
ತೀರ್ಥಹಳ್ಳಿ ತಾಲ್ಲೂಕು ಮಹಿಳಾ ಒಕ್ಕಲಿಗರ ಸಂಘ (ರಿ.), ಆಡಳಿತ ಮಂಡಳಿಯ ನಿರ್ವಾಹಕರಾಗಿ ಡಾಕಮ್ಮ ಗೌಡ ಅಧ್ಯಕ್ಷರು, ಶೈಲಾ ಅಶ್ವಥ್ ಮೂರ್ತಿ ಉಪಾಧ್ಯಕ್ಷರು, ಸರಸ್ವತಿ ಸಂದೇಶ್ ಗೌಡ ಪ್ರಧಾನ ಕಾರ್ಯದರ್ಶಿ, ಶೋಭ ಹೆಚ್.ಪಿ. ಖಜಾಂಚಿ, ಸಚಿತಾ ಜಯರಾಂ ಸಹಕಾರ್ಯದರ್ಶಿ, ಸುಜಿನಿ ಟಿ. ಗೌಡ ನಿರ್ದೇಶಕರು, ದಾಕ್ಷಾಯಿಣಿ ವೆಂಕಟೇಶ್ ನಿರ್ದೇಶಕರು, ಪ್ರೀತಿ ಗಿರೀಶ್ ನಿರ್ದೇಶಕರು, ಸರೋಜ ಗೌಡ ನಿರ್ದೇಶಕರು, ಸಂದ್ಯಾ ರಮೇಶ್, ವಿಶಾಲ ಪ್ರಪುಲ್ಲ ನಿರ್ದೇಶಕರು, ಕೆ.ಎ. ಅನುರಾಧ ನಿರ್ದೇಶಕರು ಸೇರಿ ಅನೇಕರು ಹಾಜರಿದ್ದರು.

Categories
ತೀರ್ಥಹಳ್ಳಿ

ಕಾಂಗ್ರೆಸ್ ಸರ್ಕಾರದ ವಿರುದ್ಧ ಜೆಡಿಎಸ್ ಹೋರಾಟ!

ಕಾಂಗ್ರೆಸ್ ಸರ್ಕಾರದ ವಿರುದ್ಧ ಜೆಡಿಎಸ್ ಹೋರಾಟ!
– ತೀರ್ಥಹಳ್ಳಿಯಲ್ಲಿ ಕುಣಜೆ ಕಿರಣ್ ಪ್ರಭಾಕರ್ ನೇತೃತ್ವದಲ್ಲಿ ಪ್ರತಿಭಟನೆ
– ಕಾಂಗ್ರೇಸ್ ಪಕ್ಷದ ಆಡಳಿತದಲ್ಲಿ ಭ್ರಷ್ಟಾಚಾರ ತಾಂಡವ

NAMMUR EXPRESS NEWS
ತೀರ್ಥಹಳ್ಳಿ: ರೈತರು ಹಾಗೂ ಸಾಮಾನ್ಯ ಜನರ ಬಗ್ಗೆ ಕಾಂಗ್ರೆಸ್ ಸರ್ಕಾರ ಅಸಡ್ಡೆ ತೋರುತ್ತಿದೆ. 2 ವರ್ಷದ ಆಡಳಿತದಲ್ಲಿ ಕಾಂಗ್ರೇಸ್ ಪಕ್ಷದ ಆಡಳಿತದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಆರೋಪಿಸಿ ತೀರ್ಥಹಳ್ಳಿಯಲ್ಲಿ ಕಾಂಗ್ರೆಸ್ ವಿರುದ್ಧ ಜೆಡಿಎಸ್ ಪ್ರತಿಭಟನೆ ಮಾಡಿದೆ.
ಜಾತ್ಯತೀತ ಜನತಾದಳ ತೀರ್ಥಹಳ್ಳಿ ತಾಲೂಕು ಆಶ್ರಯದಲ್ಲಿ ತಾಲೂಕು ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ಜೆಡಿಎಸ್ ಸಭೆಯಲ್ಲಿ
ತೀರ್ಥಹಳ್ಳಿ ತಾಲೂಕು ಅಧ್ಯಕ್ಷರಾದ ಕುಣಜೆ ಕಿರಣ್ ಪ್ರಭಾಕರ್ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಭ್ರಷ್ಟ ಆಡಳಿತ ಅರಣ್ಯ ಕಾಯ್ದೆಗಳ ಬಗ್ಗೆ ರೈತರಿಗೆ ಮಲೆನಾಡು ಭಾಗದಲ್ಲಿ ಅತಿಯಾದ ಮಳೆಯಿಂದ ತೊಂದರೆಗಳು ಒಳಗಾದರೂ ಸರ್ಕಾರ ಆಗಲಿ, ಉಸ್ತುವಾರಿ ಸಚಿವರಾಗಲಿ ಗಮನ ಹರಿಸುತ್ತಿಲ್ಲ ಎಂದು ಆರೋಪಿಸಿದರು. ಹಿರಿಯ ಮುಖಂಡರು, ಯುವ ಕಾರ್ಯಕರ್ತರುಗಳು ಭಾಗವಹಿಸಿದ್ದರು.
ಭಾರತ ರಾಷ್ಟ್ರೀಯ ಕಾಂಗ್ರೇಸ್ ಪಕ್ಷವು ಕರ್ನಾಟಕದಲ್ಲಿ ಕಳೆದ 2 ವರ್ಷಗಳಿಂದ ಆಡಳಿತವನ್ನು ನಡೆಸುತ್ತಿದ್ದು, ತನ್ನ ಆಡಳಿತದಲ್ಲಿ ಭ್ರಷ್ಟಾಚಾರ ತಾಂಡವ ಆಡುತ್ತಿದ್ದು, ಅಭಿವೃದ್ಧಿ ಕಾಮಗಾರಿಗಳು ಸಂಪೂರ್ಣವಾಗಿ ಕುಂಠಿತಗೊಂಡಿದ್ದು, ಆಡಳಿತ ನಡೆಸುತ್ತಿರುವ ಸರ್ಕಾರದ ಸಚಿವರುಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದು, ಇದಕ್ಕೆ ವಾಲ್ಮೀಕಿ ನಿಗಮ ಹಾಗೂ ವಸತಿ ಇಲಾಖೆಯಲ್ಲಿ ನಡೆದಿರುವ ಹಗರಣಗಳೇ ಸಾಕ್ಷಿಯಾಗಿರುತ್ತದೆ. ಭ್ರಷ್ಟಾಚಾರ ತೊಲಗಿಸಿ ಆಡಳಿತ ನಡೆಸುತ್ತೇವೆಂದು ಕರ್ನಾಟಕ ಜನ ತಡೆಗೆ ಭರವಸೆ ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷದ ಸರ್ಕಾರವು ಕಳೆದ 2 ವರ್ಷಗಳಿಂದ ತನ್ನ ಆಡಳಿತ ವ್ಯವಸ್ಥೆಯಲ್ಲಿ ದೀನದಲಿತರಿಗೆ ಶೋಷಿತ ವರ್ಗದವರಿಗೆ, ಬಡವರಿಗೆ, ರೈತರಿಗೆ ನೀಡಿದ ಭರವಸೆಗಳನ್ನೆಲ್ಲ ಗಾಳಿಗೆ ತೂರಿದ್ದು, ಸರ್ಕಾರದಲ್ಲಿ ತಳಮಟ್ಟದಿಂದ ಮೇಲ್ಮಟ್ಟದವರೆಗೂ ಭ್ರಷ್ಟಾಚಾರವು ತಾಂಡವ ಆಡುತ್ತಿದ್ದು, ಕರ್ನಾಟಕ ಜನತೆ ಬ್ರಮನಿರಸನಗೊಂಡಿರುತ್ತಾರೆ.
ಕರ್ನಾಟಕದಲ್ಲಿ ಅತಿವೃಷ್ಟಿ ಹಾಗೂ ಆರೋಗ್ಯ ಸಮಸ್ಯೆ ಉಂಟಾದರೂ ಸಹ ಸರ್ಕಾರದ ಸಚಿವರು ಸಮಸ್ಯೆ ಬಗೆಹರಿಸುವಲ್ಲಿ ನಿರ್ಲಕ್ಷವಹಿಸಿದ್ದು, ರಾಜ್ಯದಲ್ಲಿ ಕೊಲೆ, ಸುಲಿಗೆ, ಅತ್ಯಾಚಾರ ಪ್ರಕರಣಗಳು ದಿನನಿತ್ಯ ನಡೆಯುತ್ತಿದ್ದು, ಸರ್ಕಾರದ ಇರುವಿಕೆಯ ಬಗ್ಗೆ ಸಂಶಯ ಉಂಟಾಗಿರುತ್ತದೆ. ಹಾಗೂ ಸರ್ಕಾದಲ್ಲಿ ಆಂತರಿಕವಾಗಿ ಕಚ್ಚಾಟಗಳು ಮಿತಿಮೀರಿದ್ದು, ಜನ ಸಾಮಾನ್ಯರ ಸಮಸ್ಯೆ ಬಗೆಹರಿಸುವಲ್ಲಿ ಈ ಸರ್ಕಾರವು ಸಂಪೂರ್ಣವಾಗಿ ವಿಫಲಾಗಿರುತ್ತದೆ. ಆದ್ದರಿಂದ ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೇಸ್ ಪಕ್ಷದ ಸರ್ಕಾರವನ್ನು ವಜಾಗೊಳಿಸಿ, ರಾಜ್ಯಪಾಲರ ಆಡಳಿತವನ್ನು ಜಾರಿಗೊಳಿಸಿಕೊಡಬೇಕಾಗಿ ತೀರ್ಥಹಳ್ಳಿ ಜಾತ್ಯಾತೀತ ಜನತಾ ದಳವು ಅಗ್ರಹಪೂರ್ವಕವಾಗಿ ವಿನಂತಿಸಿಕೊಳ್ಳುತ್ತದೆ.
ಜೆಡಿಎಸ್ ಪ್ರಮುಖರಾದ ಗುರುದತ್ತ ಕುಡುವತ್ತಿ, ಯುವ ಜನತಾದಳ ಅಧ್ಯಕ್ಷರಾದ ರಾಘವೇಂದ್ರ ತಲಬಿ, ಸುರೇಂದ್ರ, ವೆಂಕಟೇಶ್, ಸಸಿತೋಟ ಡಾಕಪ್ಪ ಗೌಡ, ಪಟೇಲ್ ವೆಂಕಟೇಶ್, ಎಲ್ ಡಿ ಶೈಲಜಾ ಇವರು ಉಪಸ್ಥಿತರಿದ್ದರು.

Categories
ತೀರ್ಥಹಳ್ಳಿ

ಅಕ್ರಮ ಪಹಣಿ ವಿರುದ್ಧ ಸಿಡಿದೆದ್ದ ಜನ!

ಅಕ್ರಮ ಪಹಣಿ ವಿರುದ್ಧ ಸಿಡಿದೆದ್ದ ಜನ!
– ಬೆಜ್ಜವಳ್ಳಿ: ದಬ್ಬಣಗದ್ದೆ ಗ್ರಾಮದಲ್ಲಿ ಖಾತೆ ಪಹಣಿ ಮಾಡೋದು ಬೇಡ: ಜಿಲ್ಲಾ ಆಡಳಿತಕ್ಕೆ ಮನವಿ

– ಬೆಜ್ಜವಳ್ಳಿ: ವಳಗೇರಿ ರಸ್ತೆ ಅವ್ಯವಸ್ಥೆ: ಜನರ ಪರದಾಟ!
– ಗಡಿಕಲ್: ಕರೆಂಟ್ ಲೈನ್ ತುಳಿದು ಹಸು ಸಾವು!

ತೀರ್ಥಹಳ್ಳಿ ತಾಲೂಕು ಬೆಜ್ಜವಳ್ಳಿ ಗ್ರಾಮ ಪಂಚಾಯತ್ ದಬ್ಬಣಗದ್ದೆ ಗ್ರಾಮದ 83ರ ಜಮೀನನ್ನು ಬೇರೆಯವರ ಹೆಸರಿಗೆ ಖಾತೆ ಪಹಣಿ ಮಾಡಿ ಕೊಡಬಾರದು ಎಂದು ಅಗ್ರಹಿಸಿ ದಬ್ಬಣಗದ್ದೆ ಗ್ರಾಮಸ್ಥರು ಹಾಗೂ ಹೋರಾಟಗಾರರು ಉಪ ವಿಭಾಗ ಅಧಿಕಾರಿಗೆ ಮನವಿ ನೀಡಿದ್ದಾರೆ.
ತೀರ್ಥಹಳ್ಳಿ ತಾಲ್ಲೂಕು, ಮುತ್ತೂರು ಹೋಬಳಿ, ದಬ್ಬಣಗದ್ದೆ ಗ್ರಾಮದ ಸ.ನಂ. 83 ರಲ್ಲಿ ಒಟ್ಟು 220 ಎಕರೆ 33 ಗುಂಟೆ ಇದ್ದು, ಇದರಲ್ಲಿ ಮೈನರ್ ಫಾರೆಸ್ಟ್ ಮತ್ತು ದನಕ್ಕೆ ಮುಫತ್ತು ಭೂಮಿಯಾಗಿರುತ್ತದೆ. ದನಕ್ಕೆ ಮುವತ್ತು ಭೂಮಿಯಲ್ಲಿ ಹಲವಾರು ಗ್ರಾಮಸ್ಥರು ಪೂರ್ವಿಕರ ಕಾಲದಿಂದಲೂ ವಾಸದ ಮನೆಗಳನ್ನು ಕಟ್ಟಿಕೊಂಡು ವಾಸವಾಗಿರುತ್ತಾರೆ. ವಾಸದ ಮನೆ, ಮನೆಗೆ ಹೊಂದಿಕೊಂಡು ಕೊಟ್ಟಿಗೆ, ಗೊಬ್ಬರ ಗುಂಡಿ, ಒಕ್ಕುವ ಕಣ ಹಿತ್ತಲು ಇತ್ಯಾದಿಗಳನ್ನು ಮಾಡಿಕೊಂಡಿರುತ್ತಾರೆ. ಹಲವಾರು ಜನರು ಸ.ನಂ. 83 ರಲ್ಲಿ ಬಗರ್ ಹುಕುಂಸಾಗುವಳಿ ಮಾಡಿಕೊಂಡು ಬಂದಿದ್ದು, ಬಗರ್ ಹುಕುಂ ಸಕ್ರಮೀಕರಣ ಕಾಯಿದೆಯನ್ವಯ ಮಂಜೂರಾಗಿ ಮ್ಯುಟೇಷನ್, ಖಾತೆ ಪಹಣೆ ದಾಖಲಾಗಿದ್ದು, ಅವರವರ ಸಾಗುವಳಿಯಲ್ಲಿರುತ್ತದೆ. ಈ ಭೂಮಿಯಲ್ಲಿ ಮುಖ್ಯ ಟಾರ್ ರಸ್ತೆಗಳು, ಗಾಡಿ ದಾರಿಗಳು, ಕಾಲು ದಾರಿಗಳು ಇರುತ್ತವೆ. ವಾಸದ ಮನೆಗಳು, ಸಾಗುವಳಿ ಜಮೀನುಗಳು ಹೊರತುಪಡಿಸಿ ಉಳಿದ ಪ್ರದೇಶದಲ್ಲಿ ದಟ್ಟವಾದ ನೈಸರ್ಗಿಕ ಕಾಡು ಇರುತ್ತೆದೆ. ಉಳಿದ ಜಾಗ ಜಾನುವಾರು ಮೇವು, ರೈತಾಪಿ ಕಸುಬಿಗೆ ಪೂರಕವಾದ ಸೊಪ್ಪು, ದರಗು ಇತ್ಯಾದಿಗಳಿಗೆ ಉಪಯೋಗಿಸಿಕೊಂಡು ಬರಲಾಗುತ್ತಿದೆ.
ಆದರೆ ಈಗ ಖಾಸಗಿ ವ್ಯಕ್ತಿ ಒಬ್ಬರು ನೂರಾರು ವರ್ಷದ ತಮ್ಮ ಹಿಂದಿನ ತಲೆಮಾರನ್ನು ಮುಂದಿಟ್ಟುಕೊಂಡು ದಬ್ಬಣಗದ್ದೆ ಗ್ರಾಮದ ಸ.ನಂ. 17. 83 ಮತ್ತು 84 ರಲ್ಲಿ ಸರ್ಕಾರಿ ಎಂದು ನಮೂದಾಗಿರುವ ಜಮೀನುಗಳನ್ನು ತಮ್ಮ ಹೆಸರಿಗೆ ಖಾತೆ ಪಹಣಿ ಸ್ಥಾಪಿಸಿಕೊಡಲು ಅರ್ಜಿ ಸಲ್ಲಿಸಿ ಪ್ರಯತ್ನಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿದ್ದು, ನೂರಾರು ವರ್ಷಗಳಿಂದ ಸರ್ಕಾರಿ ಭೂಮಿಯಾಗಿರುವುದನ್ನು ಖಾಸಗಿಯವರು ದಾಖಲಾತಿಗಳನ್ನು ಸೃಷ್ಟಿಸಿಕೊಂಡು ಇದರಲ್ಲಿ ತಮ್ಮ ಹಕ್ಕುದಾರಿಕೆ ಇದೆ ಎಂದು ಈಗ ತಮ್ಮ ಹೆಸರಿಗೆ ಹಕ್ಕುದಾಖಲೆ ಮಾಡಿಕೊಳ್ಳುವುದಕ್ಕೆ ನಮ್ಮ ತಕರಾರು ಹಾಗೂ ಆಕ್ಷೇಪಣೆ ಇರುವುದನ್ನು ತಮ್ಮ ಅವಗಾಹನೆಗೆ ತರಬಯಸುತ್ತೇವೆ ಎಂದು ಉಪ ವಿಭಾಗ, ಶಿವಮೊಗ್ಗ ಇವರಿಗೂ, ತಹಶೀಲ್ದಾರ್, ತೀರ್ಥಹಳ್ಳಿ ತಾಲ್ಲೂಕು ಇವರಿಗೂ ಮನವಿ ಮಾಡಿಕೊಂಡಿರುವುದನ್ನು ತಮ್ಮ ಅವಗಾಹನೆಗೆ ತರಬಯಸುತ್ತೇವೆ.ತಾವು ಈ ಬಗ್ಗೆ ಗ್ರಾಮಸ್ಥರು ಹಾಗೂ ಸಾಗುವಳಿದಾರರ ಸಮ್ಮುಖದಲ್ಲಿ ದಬ್ಬಣಗದ್ದೆ ಗ್ರಾಮದ ಸ.ನಂ. 17, 83 ಮತ್ತು 84ರ ಜಮೀನುಗಳ ಸ್ಥಳ ಖುದ್ದು ಪರಿಶೀಲನೆ ನಡೆಸಿ, ವಾಸ್ತವಾಂಶಗಳನ್ನು ಪರಿಶೀಲಿಸಿ, ನೂರಾರು ವರ್ಷಗಳಿಂದ ಸರ್ಕಾರಿ ಭೂಮಿಯಾಗಿರುವುದನ್ನು ಈಗ ಖಾಸಗಿಯವರು ದಾಖಲೆಗಳನ್ನು ಸೃಷ್ಟಿಸಿಕೊಂಡು ತಮ್ಮ ಹೆಸರಿಗೆ ಹಕ್ಕುದಾಖಲೆ ಮಾಡಿಸಿಕೊಳ್ಳಲು ಹೊರಟಿರುವುದು ಕಾನೂನು ಬಾಹಿರವಾಗಿರುವುದನ್ನು ತಾವು ಪರಿಶೀಲಿಸಿ, ಖಾಸಗಿ ವ್ಯಕ್ತಿ ನೀಡಿರುವ ಪ್ರಸ್ತಾವನೆಯನ್ನು ತಿರಸ್ಕರಿಸಿ ರದ್ದುಪಡಿಸಿಕೊಡಬೇಕೆಂದು, ಸ.ನಂ. 17, 83 ಮತ್ತು 84ರ ಜಮೀನುಗಳನ್ನು ಸರ್ಕಾರಿ ಭೂಮಿಯಾಗಿ ಮುಂದುವರೆಸಿಕೊಡಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಪೂರ್ಣೇಶ್ ಕೆಳಕೇರಿ (ಕೆಡಿಪಿ ಸದಸ್ಯರು ಮತ್ತು ಯುವ ಕಾಂಗ್ರೆಸ್ ಅಧ್ಯಕ್ಷರು ತೀರ್ಥಹಳ್ಳಿ ), ಸುರೇಂದ್ರ ಹಾರೆಕೊಪ್ಪ, ರವಿ ಹಾರೆಕೊಪ್ಪ, ರಾಘವೇಂದ್ರ ಹಾರೇಕೊಪ್ಪ, ಮಂಜುನಾಥ್ ಹಾರೆಕೊಪ್ಪ, ರಾಘವೇಂದ್ರ ಭೀಮನಕೊಂಡ, ಶ್ರೀನಂದ ದಬ್ಬಣಗದ್ದೆ ಡಿಸಿ ಅವರಿಗೆ ರೈತರು ಗ್ರಾಮಸ್ತರ ಪರವಾಗಿ ಮನವಿ ಕೊಟ್ಟವರು

ಕರೆಂಟ್ ಲೈನ್ ತುಳಿದು ಹಸು ಸಾವು

* ಕಡೆಮಕ್ಕಿ ಪ್ರಮೋದ್‌ರವರ ತೋಟದಲ್ಲಿ ಘಟನೆ: ಮೆಸ್ಕಾಂ ನಿರ್ಲಕ್ಷ್ಯ
* ಕೆಇಬಿಗೆ ಅನೇಕ ಬಾರಿ ಸಮಸ್ಯೆ ಬಗ್ಗೆ ದೂರು,ಬಗೆಹರಿಯದ ಸಮಸ್ಯೆ

ತೀರ್ಥಹಳ್ಳಿ: ತೋಟದಲ್ಲಿ ಕರೆಂಟ್ ಲೈನ್ ತುಂಡಾಗಿ ಬಿದ್ದ ಪರಿಣಾಮ ಹಸುವೊಂದು ಬಲಿಯಾದ ಘಟನೆ ತಾಲೂಕಿನ ಕಡೆಮಕ್ಕಿ ಪ್ರಮೋದ್ ಎಂಬುವರ ತೋಟದಲ್ಲಿ ನಡೆದಿದೆ.ಈ ಸಮಯದಲ್ಲಿ ಅದೇ ಜಮೀನಿನಲ್ಲಿ ಹಲವು ಕೂಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು ಎನ್ನಲಾಗಿದ್ದು,ಆಗಬಹುದಾಗಿದ್ದ ಭಾರೀ ಅನುಹುತವೊಂದು ತಪ್ಪಿದೆ.ಈ ಸಂಬಂಧ ಮೆಸ್ಕಾಂ ವಿರುದ್ಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಘಟನೆಗೆ ಮೆಸ್ಕಾಂ ನಿರ್ಲಕ್ಷ್ಯವೇ ಕಾರಣ, ಗ್ರಾಮಸ್ಥರ ಆಕ್ರೋಶ: ಪ್ರಮೋದ್‌ರವರ ತೋಟದಲ್ಲಿ ಹಾದುಹೋಗಿರುವ ಕರೆಂಟ್ ಲೈನ್ ಸಮಸ್ಯೆ ಬಗ್ಗೆ ಹಾಗೂ ಅಪಾಯದ ಸುಳಿವಿರುವ ಬಗ್ಗೆ ಈ ಹಿಂದೆ ಅನೇಕ ತೀರ್ಥಹಳ್ಳಿ ಮೆಸ್ಕಾಂ ಕಛೇರಿಗೆ ದೂರು ನೀಡಲಾಗಿತ್ತಾದರೂ ಅಧಿಕಾರಗಳು ಯಾವುದೇ ಕ್ರಮಕೈಗೊಳ್ಳದಿರುವುದು ಈ ಘಟನೆಗೆ ಕಾರಣವಾಗಿದೆ. ಅಲ್ಲದೇ ಆ ಸಂದರ್ಭದಲ್ಲಿ ಕೃಷಿ ಕಾರ್ಮಿಕರು,ರೈತರು ಅದೇ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದರು ಇದರಿಂದ ಭಾರಿ ಅನಾಹುತವೊಂದು ತಪ್ಪಿ ವಿದ್ಯುತ್ ಶಾಕ್‌ಗೆ ಪ್ರಮೋದ್‌ರವರ ಹಸು ಬಲಿಯಾಗಿದೆ. ಈ ಘಟನೆಗೆ ಮೆಸ್ಕಾಂ ನಿರ್ಲಕ್ಷ್ಯವೇ ಕಾರಣವೆಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

– ವಳಗೇರಿ ರಸ್ತೆ ಅವ್ಯವಸ್ಥೆ: ಜನರ ಪರದಾಟ! 

ಬೆಜ್ಜವಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ವಳಗೇರಿಯಲ್ಲಿ ರಸ್ತೆ ಅವ್ಯವಸ್ಥೆಯಿಂದ ಜನತೆ ಪರದಾಟ ನಡೆಸುತ್ತಿದ್ದಾರೆ.ಶಾಲಾ ಕಾಲೇಜು ಮಕ್ಕಳು ಕೂಡ ಇದೆ ಮಾರ್ಗದಲ್ಲಿ ಸಂಚಾರ ಮಾಡಬೇಕು. ಅದರೆ ಕೆಸರು ಮಯ ರಸ್ತೆ ಸಮಸ್ಯೆಯಿಂದ ಜನರಿಗೆ ತೊಂದರೆ ಆಗುತ್ತಿದೆ. ಈ ಬಗ್ಗೆ ಗ್ರಾಮಸ್ಥರು ದೂರಿದ್ದಾರೆ.

Categories
ಮಂಗಳೂರು

ತುಳುವಿನ ಬಿಗ್ ಬಜೆಟ್ ಸಿನಿಮಾ ಜೈ ತುಳು..!

ತುಳುವಿನ ಬಿಗ್ ಬಜೆಟ್ ಸಿನಿಮಾ ಜೈ ತುಳು..!
– ರೂಪೇಶ್ ಶೆಟ್ಟಿ ಹೀರೋ…ಅದ್ವಿತಿ ಶೆಟ್ಟಿ ಹೀರೋಯಿನ್
– ನವೆಂಬರ್ 14ರಂದು ಚಿತ್ರ ಬಿಡುಗಡೆಗೆ ಸಜ್ಜು

NAMMUR EXPRESS NEWS
ಮಂಗಳೂರು: ಮಂಗಳೂರು ಮೂಲದ ರೂಪೇಶ್ ಶೆಟ್ಟಿ ಅವರು ಜೈ ತುಳು ಎಂಬ ಚಿತ್ರವೊಂದನ್ನು ನಿರ್ದೇಶಿಸಿದ್ದು, ಚಿತ್ರದ ನಾಯಕ ಕೂಡ ಅವರೇ ಆಗಿದ್ದಾರೆ. ನಾಯಕಿಯಾಗಿ ಅದ್ವಿತಿ ಶೆಟ್ಟಿ ಅವರು ಆಯ್ಕೆಯಾಗಿದ್ದಾರೆ. ಇದು ತುಳುವಿನ ಬಿಗ್ ಬಜೆಟ್ ಚಿತ್ರವಾಗಿದ್ದು, ಬೆಂಗಳೂರಿನಲ್ಲಿ ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ಅವರು ನವೆಂಬರ್ 14ರಂದು ಚಿತ್ರ ಬಿಡುಗಡೆಯಾಗಲಿದೆ ಎಂದು ದಿನಾಂಕವನ್ನು ಘೋಷಿಸಿದರು. ಈಗಾಗಲೇ ಗಿರಿಗಿಟ್, ಗಮ್ಜಾಲ್ ಮತ್ತು ಸರ್ಕಸ್ ಚಿತ್ರಗಳ ಮೂಲಕ ಯಶಸ್ವಿಯಾಗಿರುವ ರೂಪೇಶ್ ಶೆಟ್ಟಿ ಅವರು ಜೈ ತುಳು ಎಂಬ ದೊಡ್ಡ ಮೊತ್ತದ ಚಿತ್ರವೊಂದಕ್ಕೆ ಕೈ ಹಾಕಿದ್ದಾರೆ. ಈ ಚಿತ್ರವು ಆರ್. ಎಸ್. ಸಿನಿಮಾಸ್, ಶೂಲಿನ್ ಫಿಲಂಸ್ ಮತ್ತು ಮುಗ್ರೋಡ್ ನಿರ್ಮಾಣ ಲಾಂಛನದಡಿಯಲ್ಲಿ ಅನಿಲ್ ಶೆಟ್ಟಿ, ಸುಧಾಕರ ಶೆಟ್ಟಿ ಮುಗ್ರೋಡಿ, ಮಂಜುನಾಥ ಅತ್ತಾವರ ಅವರ ನಿರ್ಮಾಣ ಮತ್ತು ದೀಕ್ಷಿತ್ ಆಳ್ವ ಅವರ ಸಹ ನಿರ್ಮಾಣದಲ್ಲಿ ತಯಾರಾಗುತ್ತಿದೆ.

ಚಿತ್ರತಂಡದಲ್ಲಿ ಯಾರು ಯಾರಿದ್ದಾರೆ..?

ಮಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿತ್ರೀಕರಣವನ್ನು ನಡೆಸಲಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಕಲಾವಿದರು ಈ ಚಿತ್ರದಲ್ಲಿ ಪಾತ್ರಗಳನ್ನು ನಿರ್ವಹಿಸಿದ್ದಾರೆ. ರೂಪೇಶ್ ಶೆಟ್ಟಿ ಅವರು ನಿರ್ದೇಶಕರಾಗಿರುವ ಈ ಚಿತ್ರಕ್ಕೆ ಪ್ರಸನ್ನ ಶೆಟ್ಟಿ ಬೈಲೂರು ಅವರು ಕಥೆ ಮತ್ತು ಸಂಭಾಷಣೆಯನ್ನು ಬರೆದಿದ್ದಾರೆ. ಲೊಯ್ ವೆಲೆಂಟಿನ್ ಸಲ್ದಾನ್ ಅವರ ಸಂಗೀತ, ವಿನುತ್ ಕೆ ಅವರ ಛಾಯಾಗ್ರಹಣ, ರಾಹುಲ್ ವಸಿಷ್ಠ ಅವರ ಸಂಕಲನ ಈ ಚಿತ್ರಕ್ಕಿದೆ. ನವೀನ್ ಶೆಟ್ಟಿ ಆರ್ಯನ್ಸ್ ಅವರು ಜೈ ತುಳು ಚಿತ್ರಕ್ಕೆ ಕಾರ್ಯನಿರ್ವಾಹಕ ನಿರ್ಮಾಪಕರಾಗಿ ಹಾಗೂ ನೃತ್ಯ ಸಂಯೋಜಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಸುನಿಲ್ ಶೆಟ್ಟಿ, ಡಾ. ದೇವದಾಸ್ ಕಾಪಿಕಾಡ್, ರಾಜ್ ದೀಪಕ್ ಶೆಟ್ಟಿ, ನವೀನ್ ಡಿ. ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ ಶೆಟ್ಟಿ ಮಾಣಿಬೆಟ್ಟು, ಉಮೇಶ್ ಮಿಜಾರ್ ತಾರಾಗಣದಲ್ಲಿದ್ದಾರೆ.

Categories
ಜ್ಯೋತಿಷ್ಯ

ಜಗದ್ಗುರು ಶಂಕರಾಚಾರ್ಯರು ಹೇಳಿ ಕೊಟ್ಟ ಈ ಒಂದು ಸಾಲಿನ ಪ್ರಾರ್ಥನಾ ಶ್ಲೋಕ ಮಂತ್ರವನ್ನು ಮಕ್ಕಳ ಕಿವಿಯಲ್ಲಿ ಪ್ರತಿದಿನ ಪಠಿಸಿ. ದಡ್ಡ ಮಕ್ಕಳನ್ನೂ ಅಧ್ಯಯನದಲ್ಲಿ ಉತ್ಕೃಷ್ಟಗೊಳಿಸಲು ಪ್ರಬಲ ಮಂತ್ರ.

ಜಗದ್ಗುರು ಶಂಕರಾಚಾರ್ಯರು ಹೇಳಿ ಕೊಟ್ಟ ಈ ಒಂದು ಸಾಲಿನ ಪ್ರಾರ್ಥನಾ ಶ್ಲೋಕ ಮಂತ್ರವನ್ನು ಮಕ್ಕಳ ಕಿವಿಯಲ್ಲಿ ಪ್ರತಿದಿನ ಪಠಿಸಿ. ದಡ್ಡ ಮಕ್ಕಳನ್ನೂ ಅಧ್ಯಯನದಲ್ಲಿ ಉತ್ಕೃಷ್ಟಗೊಳಿಸಲು ಪ್ರಬಲ ಮಂತ್ರ.

ನಾವು ನಮ್ಮ ಮಕ್ಕಳನ್ನು ಒಳ್ಳೆಯ ಶಾಲೆಗಳಲ್ಲಿ ಓದುವಂತೆ ಮಾಡುತ್ತೇವೆ, ಇದರಿಂದ ನಾವು ಕಷ್ಟಪಟ್ಟರೂ ಅವರು ಓದಬಹುದು ಮತ್ತು ಉತ್ತಮ ಅಂಕಗಳನ್ನು ಪಡೆಯುತ್ತಾರೆ. ಪ್ರಸ್ತುತ ಸನ್ನಿವೇಶದಲ್ಲಿ ಎಲ್ಲಾ ಮಕ್ಕಳು ಒಳ್ಳೆಯ ಮತ್ತು ಬುದ್ಧಿವಂತ ಮಕ್ಕಳು ಮತ್ತು ಓದುವ ಮಕ್ಕಳು. ಆದರೆ ಕೆಲವು ಮಕ್ಕಳು ಪರೀಕ್ಷೆಯ ಸಮಯದಲ್ಲಿ ಓದುವುದೆಲ್ಲವನ್ನೂ ಮರೆತುಬಿಡುತ್ತಾರೆ. ಕೆಲವು ಮಕ್ಕಳು ಯಾವಾಗಲೂ ಸ್ವಲ್ಪ ಜಡವಾಗಿರುತ್ತಾರೆ. ಇದು ಬದಲಾಗಬೇಕಾದರೆ ಸರಸ್ವತಿ ದೇವಿಯ ಕೃಪೆಗೆ ಪಾತ್ರರಾಗಬೇಕು. ಆ ಕೃಪೆಯನ್ನು ಪರಿಪೂರ್ಣವಾಗಿ ಪಡೆಯಲು ಈ ಒಂದು ಸಾಲಿನ ಮಂತ್ರ ಸಾಕು ಎನ್ನುತ್ತದೆ ಆಧ್ಯಾತ್ಮಿಕತೆ . ಈ ಪೋಸ್ಟ್‌ನಲ್ಲಿ, ಮಂತ್ರ ಯಾವುದು ಮತ್ತು ಅದನ್ನು ಹೇಗೆ ಹೇಳಬೇಕೆಂದು ನೀವು ವಿವರವಾಗಿ ನೋಡಬಹುದು.

ತಮ್ಮ ಮಕ್ಕಳು ಚೆನ್ನಾಗಿ ಓದಿ ಉತ್ತಮ ಸ್ಥಾನದಲ್ಲಿರಬೇಕು ಎಂಬುದು ಪೋಷಕರ ದೊಡ್ಡ ಕನಸು. ಇಂದು ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಭವಿಷ್ಯವನ್ನು ಹೊಂದಲು ಬೆಳಿಗ್ಗೆಯಿಂದ ಸಂಜೆಯವರೆಗೆ ದಣಿವರಿಯಿಲ್ಲದೆ ಶ್ರಮಿಸುತ್ತಾರೆ. ಅದಕ್ಕೆ ಆಧಾರವೆಂದರೆ ಅವರು ಉತ್ತಮ ಶಿಕ್ಷಣ ಪಡೆಯಬೇಕು. ಈ ಶಿಕ್ಷಣ ಪಡೆಯಲು ನಮ್ಮ ದೊಡ್ಡ ಶಾಲೆಗಳಿಗೆ ಸೇರಿಸಿದರೆ ಸಾಕಾಗುವುದಿಲ್ಲ. ಮಕ್ಕಳಿಗೆ ತಾವು ಓದಿದ ಪ್ರತಿಯೊಂದನ್ನೂ ಮನನ ಮಾಡಿಕೊಂಡು ಸರಿಯಾದ ಸಮಯದಲ್ಲಿ ವ್ಯಕ್ತಪಡಿಸುವ ಜಾಣ್ಮೆ ಇರಬೇಕು. ಅದಕ್ಕೆ ಈ ಒಂದು ಸಾಲಿನ ಮಂತ್ರ ಸಾಕು.

ಮಕ್ಕಳು ಚೆನ್ನಾಗಿ ಪಠಿಸಬೇಕಾದ ಮಂತ್ರ:

ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಶ್ರೀ ವಿಧುಶೇಖರ ಭಾರತ ಸನ್ನಿಧಾನಂ

ಶಾಲಾ ಮಕ್ಕಳಿಗೆ ಪ್ರಾರ್ಥನಾ ಶ್ಲೋಕಗಳನ್ನು ಕಲಿಸುವುದು

ಶಾರದಾ ಶಾರದಾಂಬೋಜ
ವದನ ವದನಾಂಬುಜೆ
ಸರ್ವದ ಸರ್ವಧಾಕಾಸ್ಮಂ
ಸನ್ನಿಧಿಮ್ಂ ಸನ್ನಿಧಿಮ್ಂ ಕ್ರೀಯಾತ್
ಶೃತಿ ಮೃತಿ ಪುರಾಣಾಮ್ಂ
ಆಲಯಂ ಕರುಣಾಲಾಯಂ ನಮಾಮಿ
ಭಗವತ್ ಪಾದ ಶಂಕರಂ ಲೋಕಶಂಕರಂ
ಶಾರದೇ ಪಾಯಿಹಿಮಾಮ್
ಶಂಕರ ರಕ್ಷಮಾಂ
ಶ್ರೀರಾಮ ಜಯರಾಮ ಜಯ ಜಯ ರಾಮ
ಶ್ರೀರಾಮ ಜಯ ರಾಮ ಜಯ ಜಯ ರಾಮ
ಶ್ರೀರಾಮ ಜಯರಾಮ ಜಯ ಜಯ ರಾಮ

ಓಂ ಆತ್ಮ ವಿದ್ಯಾ ಬ್ರಹ್ಮ ಸರಸ್ವತಿ ಮಕ್ಕಳು ರಾತ್ರಿ ಮಲಗಲು ಹೋದಾಗ ಪಾಲಕರು ಈ ಮಂತ್ರವನ್ನು ಪ್ರತಿದಿನ 16 ಬಾರಿ ಮಕ್ಕಳ ಕಿವಿಯಲ್ಲಿ ಜಪಿಸುವುದರಿಂದ ಅವರು ನೇರವಾಗಿ ಹಾಸಿಗೆಯಲ್ಲಿ ಮಲಗುತ್ತಾರೆ. ನಮ್ಮ ಉಪಪ್ರಜ್ಞೆ ಮನಸ್ಸು ನಾವು ಮಲಗುವ ಹತ್ತು ನಿಮಿಷಗಳ ಮೊದಲು ಏನಾಗುತ್ತದೆ ಮತ್ತು ಬೆಳಿಗ್ಗೆ ಎದ್ದ ಹತ್ತು ನಿಮಿಷಗಳಲ್ಲಿ ನಾವು ಯೋಚಿಸುವುದನ್ನು ಮಾಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತದೆ. ಈ ಮಂತ್ರವು ಅಂತಹ ಒಂದು ಪ್ರಯತ್ನವಾಗಿದೆ. ಮಕ್ಕಳು ರಾತ್ರಿ ಮಲಗುವ ಮುನ್ನ ಕಿವಿಯಲ್ಲಿ 16 ಬಾರಿ ಈ ಮಂತ್ರವನ್ನು ಜಪಿಸಿದರೆ ನೀವು ಚೆನ್ನಾಗಿ ಓದುತ್ತೀರಿ ಮತ್ತು ನಿಮ್ಮಲ್ಲಿ ಉತ್ತಮ ಪ್ರತಿಭೆ ಇರುತ್ತದೆ. ನಿಮಗೆ ಉತ್ತಮ ಜ್ಞಾಪಕ ಶಕ್ತಿ ಇದೆ. ‘ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುವೆ’ ಎಂಬ ಮಾತನ್ನು ಪುನರುಚ್ಚರಿಸುವ ಮೂಲಕ ಅವರ ಮನಸ್ಸಿನಲ್ಲಿ ನಂಬಿಕೆಯನ್ನು ಮೂಡಿಸಿ ಮಂತ್ರದ ಮೂಲಕ ಸರಸ್ವತಿಯ ಕೃಪೆಗೆ ಪಾತ್ರರಾಗುತ್ತೇವೆ.

ಈ ಮಂತ್ರವನ್ನು ಪಠಿಸಿದ ನಂತರ ಜೇನುತುಪ್ಪವನ್ನು ಖರೀದಿಸಿ ಸಮೀಪದ ಗಣೇಶನ ದೇವಸ್ಥಾನಕ್ಕೆ ಅಭಿಷೇಕ ಮಾಡಿದ ನಂತರ ಮಕ್ಕಳಿಗೆ ಪ್ರತಿದಿನ ಆ ಜೇನುತುಪ್ಪವನ್ನು ನೀಡುವುದರಿಂದ ಅವರ ಜ್ಞಾಪಕಶಕ್ತಿ ಹೆಚ್ಚುತ್ತದೆ ಮತ್ತು ಅವರ ಅಧ್ಯಯನದಲ್ಲಿ ಉತ್ತಮ ಪ್ರಗತಿಯಾಗುತ್ತದೆ ಎಂದು ಹೇಳಲಾಗುತ್ತದೆ.
ಮಕ್ಕಳು ಚೆನ್ನಾಗಿ ಓದಿ ಒಳ್ಳೆಯ ಸ್ಥಿತಿಯಲ್ಲಿರಲು ಶ್ರಮಿಸುವುದರ ಜೊತೆಗೆ ಹೆತ್ತವರಾದ ನಾವು ಪ್ರತಿದಿನ ಈ ಚಿಕ್ಕ ಉಪಾಯವನ್ನು ಮಾಡಿದರೆ ಅವರ ಜ್ಞಾಪಕಶಕ್ತಿ ಹೆಚ್ಚುತ್ತದೆ ಮತ್ತು ದೇವರ ಕೃಪೆಯೂ ಪ್ರಾಪ್ತಿಯಾಗುತ್ತದೆ ಮತ್ತು ಮಕ್ಕಳು ಚೆನ್ನಾಗಿ ಓದಿ ಮುಂದೆ ಬರುತ್ತಾರೆ ಎಂದರೆ ಏನೂ ಇಲ್ಲ. ಈ ಒಂದು ಕೆಲಸವನ್ನು ಮಾಡುವುದು ತಪ್ಪು.

ಲೇಖನ ಪ್ರಕಟ: ಧಾರ್ಮಿಕಚಿಂತಕರು ಮತ್ತು ಸಲಹೆಗಾರರು
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ಜ್ಯೋತಿಷ್ಯರು 8548998564