Categories
ಉಡುಪಿ

ಉಡುಪಿ: ಕುಂಬಳೆಯಲ್ಲಿ ನಾಪತ್ತೆಯಾಗಿದ್ದ ಪ್ರೇಮಿಗಳು ಪತ್ತೆ

ಉಡುಪಿ: ಕುಂಬಳೆಯಲ್ಲಿ ನಾಪತ್ತೆಯಾಗಿದ್ದ ಪ್ರೇಮಿಗಳು ಪತ್ತೆ

NAMMUR EXPRESS NEWS
ಉಡುಪಿ: ನಾಪತ್ತೆಯಾಗಿದ್ದ ಪ್ರೇಮಿಗಳನ್ನು ಇಂದ್ರಾಳಿಯ ರೈಲು ನಿಲ್ದಾಣದಲ್ಲಿ ರಕ್ಷಿಸಿರುವ ಘಟನೆ ನಡೆದಿದೆ. ಪರಸ್ಪರ ಪ್ರೀತಿಸುತ್ತಿದ್ದ ಪ್ರೇಮಿಗಳಿಗೆ ಮನೆಯಲ್ಲಿ ವಿರೋಧ ವ್ಯಕ್ತವಾಗಿ ನಾಪತ್ತೆಯಾಗಿದ್ದರು. ಮನೆ‌ಮಂದಿ ಹುಡುಕಾಟ ನಡೆಸಿದರೂ, ಯುವಕ ಯುವತಿ ಪತ್ತೆಯಾಗದೆ ಇರುವುದರಿಂದ‌, ಕುಂಬಳೆ ಪೋಲಿಸ್ ಠಾಣೆಯ‌ಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.
ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಯುವಕ ಯುವತಿಯ ವರ್ತನೆಯಲ್ಲಿ ಅನುಮಾನಗೊಂಡು ವಿಚಾರಿಸಿದಾಗ, ಕುಂಬಳೆಯಿಂದ ನಾಪತ್ತೆಯಾಗಿದ್ದವರೆಂದು ತಿಳಿದುಬಂದಿದೆ. ಬಳಿಕ ಅವರು ಇಂದ್ರಾಳಿಯ ರೈಲು ನಿಲ್ದಾಣದಲ್ಲಿ ಇಳಿಸಿ, ಇನ್ಸ್ಪೆಕ್ಟರ್ ಮಧುಸೂದನ್ ಅವರಿಗೆ, ಹಸ್ತಾಂತರಿಸಿದರು. ಪ್ರೇಮಿಗಳನ್ನು ಉಡುಪಿ ನಗರ ಮಹಿಳಾ ಪೋಲಿಸ್ ಠಾಣೆಯ‌ ವಶಕ್ಕೆ ಒಪ್ಪಿಸಿದರು. ಅಲ್ಲಿ ವಿಚಾರಿಸಲ್ಪಟ್ಟಾಗ ಕುಂಬಳೆಯಿಂದ ನಾಪತ್ತೆಯಾಗಿದ್ದ ಪ್ರೇಮಿಗಳೆಂದು ದೃಢಪಟ್ಟಿತು. ಬಳಿಕ ಪ್ರೇಮಿಗಳನ್ನು ಕುಂಬಳೆಯ ಪೋಲಿಸರಿಗೆ ನೀಡಲಾಯಿತು.

Categories
ಉಡುಪಿ

ಹೆಜಮಾಡಿ : ಟೋಲ್ಗೇಟ್ ಬಳಿ ಲಾರಿಗೆ ಡಿಕ್ಕಿ, ಇಬ್ಬರಿಗೆ ಗಾಯ

ಹೆಜಮಾಡಿ : ಟೋಲ್ಗೇಟ್ ಬಳಿ ಲಾರಿಗೆ ಡಿಕ್ಕಿ, ಇಬ್ಬರಿಗೆ ಗಾಯ

NAMMUR EXPRESS NEWS
ಹೆಜಮಾಡಿ: ಹೆಜಮಾಡಿ ಟೋಲ್ ಪ್ಲಾಜಾದ ಬಳಿ ಪಾರ್ಕ್ ಮಾಡಲಾದ ಲಾರಿಯೊಂದರ ಹಿಂಬದಿಗೆ ಇನೋವಾ ಕಾರೊಂದು ಡಿಕ್ಕಿಯಾದ ಪರಿಣಾಮ ಕಾರಲ್ಲಿದ್ದ ಇಬ್ಬರು ಪ್ರಯಾಣಿಕರು ಗಾಯಗೊಂಡ ಘಟನೆ ನಡೆದಿದೆ. ಕೋಡಿಕರೆ ನಿವಾಸಿ ಲೋಕೇಶ್ (43) ಹಾಗೂ ಕುಳಾಯಿ ನಿವಾಸಿ ವಿರಾಜ್(29) ಗಾಯಗೊಂಡವರು.
ಕಾರ್ಯಕ್ರಮಕ್ಕೆ ತೆರಳಿ ವಾಪಾಸಾಗುತ್ತಿದ್ದಾಗ, ಈ ಘಟನೆ ಘಟಿಸಿದೆ. ಮರ ದಿಮ್ಮಿಗಳನ್ನು ಹೇರಿಕೊಂಡಿದ್ದ ಲಾರಿಯನ್ನು ಹೆಜಮಾಡಿ ಟೋಲ್ ಗೇಟಿನ ಕೆಲವೆ ಮೀಟರ್ ಗಳ ಅಂತರದಲ್ಲಿ ಪಾರ್ಕ್ ಮಾಡಲಾಗಿತ್ತು. ಇದನ್ನು ಗಮನಿಸದ ಕಾರು ಚಾಲಕ ಹಿಂಬದಿಯಿಂದ ಗುದ್ದಿದ್ದಾನೆ.
ಡಿಕ್ಕಿಯ ತೀವ್ರತೆಗೆ ಕಾರು ನಜ್ಜುಗುಜ್ಜಾಗಿದೆ. ಕಾರಿನಲ್ಲಿ ಸಿಲುಕಿಕೊಂಡಿದ್ದ ವಿರಾಜ್ ರನ್ನು ಹೊರತೆಗೆಯಲು ಸ್ಥಳೀಯರು ಮತ್ತು ಟೋಲ್ ಸಿಬ್ಬಂದಿ ಸುಮಾರು ಒಂದು ಗಂಟೆಗಳ ಶ್ರಮಿಸಿದ್ದಾರೆ ಎಂದು ತಿಳಿದು ಬಂದಿದೆ.
ಗಾಯಾಳುಗಳಿಬ್ಬರನ್ನೂ ಮಂಗಳೂರಿನ ಎಜೆ ಆಸ್ಪತ್ರೆಗೆ ಸಾಗಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಎಂಬುದಾಗಿ ಅವರ ಮಿತ್ರ ವಲಯ ತಿಳಿಸಿದೆ.
ಸ್ಥಳಕ್ಕೆ ಪಡುಬಿದ್ರಿ ಪೊಲೀಸರು ಆಗಮಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

Categories
ಉಡುಪಿ

ಬೈಂದೂರು ಬಂಟರ ಸಂಘದ ನೂತನ ವೆಬ್‌ಸೈಟ್, ಗ್ರಂಥಾಲಯ ಲೋಕಾರ್ಪಣೆ

ಬೈಂದೂರು ಬಂಟರ ಸಂಘದ ನೂತನ ವೆಬ್‌ಸೈಟ್, ಗ್ರಂಥಾಲಯ ಲೋಕಾರ್ಪಣೆ
– Bansbyndoor.com ವೆಬ್ ಮೂಲಕ ಸಂಘದ ಮಾಹಿತಿ
– ಶಾಸಕರಾದ ಗುರುರಾಜ್ ಗಂಟಿಹೊಳೆ ಉದ್ಘಾಟನೆ
– ಕುಂದಾಪುರ ಫೋರ್ಥ್ ಫೋಕಸ್ ಸಂಸ್ಥೆಯಿಂದ ವೆಬ್ ಅಭಿವೃದ್ಧಿ

NAMMUR EXPRESS NEWS
ಬೈಂದೂರು: ಬಂಟರ ಯಾನೆ ನಾಡವರ ಸಂಘ (ರಿ.), ಬೈಂದೂರಿನ ಅಧಿಕೃತ ವೆಬ್‌ಸೈಟ್ Bansbyndoor.com ಹಾಗೂ ನೂತನ ಗ್ರಂಥಾಲಯದ ಲೋಕಾರ್ಪಣೆ ಸಮಾರಂಭ ಇತ್ತೀಚಿಗೆ ಬೈಂದೂರಿನ ಬಂಟರ ಭವನದಲ್ಲಿ ವಿಜೃಂಭಣೆಯಿಂದ ನಡೆಯಿತು. ಸಮಾರಂಭವನ್ನು ಬೈಂದೂರು ಶಾಸಕರಾದ ಗುರುರಾಜ್ ಗಂಟಿಹೊಳೆ ಉದ್ಘಾಟಿಸಿದರು. ಅವರು ಲ್ಯಾಪ್‌ಟಾಪ್‌ನಲ್ಲಿ ಬಟನ್ ಒತ್ತುವ ಮೂಲಕ ವೆಬ್‌ಸೈಟ್‌ನ್ನು ಲೋಕಾರ್ಪಣೆಗೊಳಿಸಿ, ನಂತರ ಜ್ಯೋತಿ ಬೆಳಗಿಸುವ ಮೂಲಕ ಗ್ರಂಥಾಲಯದ ಪ್ರಾರಂಭಕ್ಕೆ ಸಾಂಕೇತಿಕ ಚಾಲನೆ ನೀಡಿದರು. ಅದಷ್ಟೇ ಅಲ್ಲದೆ, ಗ್ರಂಥಾಲಯದ ಆರಂಭಿಕ ಪುಸ್ತಕ ಸಂಗ್ರಹವನ್ನೂ ಅವರು ಬಿಡುಗಡೆ ಮಾಡಿದರು.

Bansbyndoor.com ವೆಬ್‌ಸೈಟ್‌ ಮುಖಾಂತರ ವಿದ್ಯಾರ್ಥಿವೇತನ, ಸಾಧಕರ ಸನ್ಮಾನ ಹಾಗೂ ಸಂಘದ ವಿವಿಧ ಸಮಾಜಮುಖಿ ಯೋಜನೆಗಳ ಮಾಹಿತಿ ತಂತ್ರಜ್ಞಾನ ಪ್ರಯುಕ್ತ ಸಮಾಜದ ಸದಸ್ಯರಿಗೆ ಸುಲಭವಾಗಿ ಲಭ್ಯವಾಗಲಿದೆ ಎಂಬ ಭರವಸೆಯನ್ನು ಅವರು ವ್ಯಕ್ತಪಡಿಸಿದರು. ಈ ವೇದಿಕೆಯಿಂದ ಸಂಘದ ಕಾರ್ಯವೈಭವ ಹೆಚ್ಚಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಸಾಲ್ಗದ್ದೆ ಶಶಿಧರ್ ಶೆಟ್ಟಿ ವಹಿಸಿದ್ದರು. ಉಪಾಧ್ಯಕ್ಷರಾದ ಜಗದೀಶ್ ಶೆಟ್ಟಿ ಕುದ್ರುಕೊಡು, ಗೋಕುಲ್ ಶೆಟ್ಟಿ ಉಪ್ಪುಂದ, ಕರುಣಾಕರ್ ಶೆಟ್ಟಿ ತೆಗ್ಗರ್ಸೆ, ಮಾಜಿ ಅಧ್ಯಕ್ಷರಾದ ನಾಕಟ್ಟೆ ಜಗನ್ನಾಥ ಶೆಟ್ಟಿ, ಹಾಗೂ ಪದಾಧಿಕಾರಿಗಳಾದ ಚುಚ್ಚಿ ನಾರಾಯಣ ಶೆಟ್ಟಿ, ನಿತಿನ್ ಶೆಟ್ಟಿ ಬೈಂದೂರು, ಜೈರಾಮ್ ಶೆಟ್ಟಿ ಗಂಟಿಹೊಳೆ, ಜೈರಾಮ್ ಶೆಟ್ಟಿ, ಸಂತೋಷ್ ಶೆಟ್ಟಿ ಬೈಂದೂರು, ಪ್ರದೀಪ್ ಶೆಟ್ಟಿ ಕಾರಿಕಟ್ಟೆ, ದಿವಾಕರ್ ಶೆಟ್ಟಿ ನೆಲ್ಯಾಡಿ, ದಿವಾಕರ್ ಶೆಟ್ಟಿ ಉಪ್ಪುಂದ, ಹಾಗೂ ಮಹಿಳಾ ಪದಾಧಿಕಾರಿಗಳಾದ ಶ್ರೀಮತಿ ಮಮತಾ ಶೆಟ್ಟಿ ಮತ್ತು ಶ್ರೀಮತಿ ಉಷಾ ಶೆಟ್ಟಿ ಉಪಸ್ಥಿತರಿದ್ದರು.

ವೆಬ್‌ಸೈಟ್ ಅಭಿವೃದ್ಧಿ ಕಾರ್ಯವನ್ನು ನಿಭಾಯಿಸಿದ ಕುಂದಾಪುರದ ಫೋರ್ಥ್ ಫೋಕಸ್ ಸಂಸ್ಥೆಯ ನಿರ್ದೇಶಕರಾದ ವಿ. ಗೌತಮ್ ನಾವಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ತಾವು ರೂಪಿಸಿದ್ದ ತಂತ್ರಜ್ಞಾನ ಸಹಕಾರದ ಬಗ್ಗೆ ಮೆಚ್ಚುಗೆ ಪಡೆದರು.

ಕಾರ್ಯದರ್ಶಿಗಳಾದ ನಿತಿನ್ ಶೆಟ್ಟಿ, ಬೈಂದೂರ್ ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು. ಅಧ್ಯಕ್ಷರಾದ ಸಾಲ್ಗದ್ದೆ ಶಶಿಧರ್ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು ಹಾಗೆ ಜಯರಾಮ್ ಶೆಟ್ಟಿ ಬಿ ವಂದಿಸಿದರು.

Categories
ರಾಜ್ಯ

ಮಂಡಗದ್ದೆ ಬಳಿ ನದಿಗೆ ಉರುಳಿದ ಕಾರು

ಟಾಪ್ 3 ನ್ಯೂಸ್

ಮಂಡಗದ್ದೆ ಬಳಿ ನದಿಗೆ ಉರುಳಿದ ಕಾರು
– ತೆಕ್ಕಟ್ಟೆ ಮೂಲದ ಮಹಿಳೆ ಸಾವು, 6 ಮಂದಿ ಪ್ರಾಣಾಪಾಯದಿಂದ ಪಾರು

– ಸಾಗರ: 9ನೇ ತರಗತಿ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ!
– ಆನಂದಪುರ: ವೃದ್ದೆಯನ್ನು ಕಂಬಕ್ಕೆ ಕಟ್ಟಿ ಅಮಾನುಷವಾಗಿ ಹಲ್ಲೆ!

NAMMUR EXPRESS NEWS
ಮಂಡಗದ್ದೆ: ಶಿವವೊಗ್ಗ ಜಿಲ್ಲೆಯ ಮಂಡಗದ್ದೆಯಲ್ಲಿ ಭೀಕರ ಕಾರು ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಕುಂದಾಪುರದ ತೆಕ್ಕಟ್ಟೆ ಮೂಲದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ತೆಕ್ಕಟ್ಟೆಯ ಮಣಿಕಂಠ ಟ್ರಾನ್ಸ್‌ಪೋರ್ಟ್ ಮಾಲೀಕ ಶಂಕರ ದೇವಾಡಿಗ ಶಿವಮೊಗ್ಗದಲ್ಲಿರುವ ಮಗಳ ಮನೆಗೆ ಮಾರುತಿ ಸ್ವಿಫ್ಟ್ ಕಾರಿನಲ್ಲಿ ಕುಟುಂಬ ಸದಸ್ಯರೊಂದಿಗೆ ತೆರಳುತ್ತಿದ್ದರು. ಸುರಿಯುತ್ತಿದ್ದ ಭಾರೀ ಮಳೆ ಹಾಗೂ ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಪಲ್ಟಿಯಾಗಿ ರಸ್ತೆ ಸಮೀಪದ ನದಿಗೆ ಉರುಳಿದೆ. ಕಾರು ನೀರಿನಲ್ಲಿ ಮುಳುಗುತ್ತಿದಂತೆ ಸ್ಥಳೀಯರು ಧಾವಿಸಿ ರಕ್ಷಣೆಗಿಳಿದರೂ ಶಂಕರ ದೇವಾಡಿಗ ಅವರ ಪತ್ನಿ ಸವಿತಾ ದೇವಾಡಿಗ (57) ಅಸುನೀಗಿದರು. ಶಂಕರ ದೇವಾಡಿಗ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪುತ್ರರಾದ ಅರುಣ್ ದೇವಾಡಿಗ ಹಾಗೂ ಎಂಜಿನಿಯರ್ ಅಶ್ವತ್ಥ ದೇವಾಡಿಗ, ಪುತ್ರಿ ಅಮೃತಾ, ಅಳಿಯ ಸುರೇಶ್ ದೇವಾಡಿಗ ಹಾಗೂ 2.5 ವರ್ಷದ ಅಭಿಶ್ರೇಯ್ ಅವರು ಪವಾಡ ಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯಿಂದ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಸವಿತಾ ಅವರಿಗೂ ಹೆಚ್ಚಿನ ಗಾಯಗಳಾಗಿಲ್ಲ, ಆದರೂ ಅಪಘಾತದ ಸಂದರ್ಭ ಉಂಟಾದ ಆಘಾತದಿಂದ ಸಾವು ಸಂಭವಿಸಿರಬಹುದು ಎಂದು ವೈದ್ಯರು ತಿಳಿಸಿದ್ದಾರೆ.

– ಸಾಗರ: 9ನೇ ತರಗತಿ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ!

ಸಾಗರ: ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಒಂದು ದುರಂತ ಘಟನೆ ನಡೆದಿದೆ. ಆವಿನಹಳ್ಳಿ ಹೋಬಳಿಯ ತುಂಬೆ ಗ್ರಾಮದಲ್ಲಿ 14 ವರ್ಷದ 9ನೇ ತರಗತಿಯ ವಿದ್ಯಾರ್ಥಿಯೊಬ್ಬ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆ ಸೋಮವಾರ ಸಂಜೆ 4 ಗಂಟೆ ಸುಮಾರಿಗೆ ವರದಿಯಾಗಿದೆ.
ಮೃತನನ್ನು ಇಕ್ಕೇರಿಯ ಸರ್ಕಾರಿ ಪ್ರೌಢಶಾಲೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ನಿಖಿಲ್ (14) ಎಂದು ಗುರುತಿಸಲಾಗಿದೆ. ಈತ ರೇಣುಕೇಶ್ ಅವರ ಪುತ್ರ ಎಂದು ತಿಳಿದುಬಂದಿದೆ. ನಿಖಿಲ್ ಭಾನುವಾರ ದಿನವಿಡೀ ಆಟವಾಡಿಕೊಂಡು ಮನೆಗೆ ಬಂದಿದ್ದ ಎನ್ನಲಾಗಿದೆ. ಆಟದ ಬಗ್ಗೆಯೇ ಹೆಚ್ಚು ಗಮನ ಹರಿಸಿದ್ದಕ್ಕೆ ತಂದೆ ರೇಣುಕೇಶ್ ಗ್ರಾಮೀಣ ಭಾಷೆಯಲ್ಲಿ ಮಗನನ್ನು ಸ್ವಲ್ಪ ಗದರಿಸಿದ್ದಾರೆ. ಆದರೆ, ನಂತರ ಸಮಾಧಾನಪಡಿಸಿ ಊಟ ಮಾಡಿಸಿದ್ದಾರೆ ಎಂದು ತಿಳಿದುಬಂದಿದೆ.
ಸೋಮವಾರ ಬೆಳಿಗ್ಗೆ ನಿಖಿಲ್ ಶಾಲೆಗೆ ಹೋಗಿರಲಿಲ್ಲ. ತಂದೆ ರೇಣುಕೇಶ್ ಹೊಲಗದ್ದೆಗೆ ಕೆಲಸಕ್ಕೆ ತೆರಳಿದ್ದರು. ತಾಯಿ ಪಕ್ಕದ ಮನೆಗೆ ಮಾತನಾಡಲು ಹೋಗಿದ್ದರೆ, ಅಜ್ಜಿ ಸೊಪ್ಪು ಕಡಿಯಲು ತೋಟಕ್ಕೆ ಹೋಗಿದ್ದರು. ಈ ವೇಳೆ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ, ನಿಖಿಲ್ ಮನೆಯ ಅಟ್ಟದ ಮೇಲೆ ಸಹೋದರಿಯ ವೇಲಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ತಾಯಿ ಮನೆಗೆ ಬಂದು ನೋಡಿದಾಗ, ನಿಖಿಲ್ ಒದ್ದಾಡುತ್ತಿದ್ದುದನ್ನು ಗಮನಿಸಿ ಕೂಡಲೇ ನೇಣು ಕತ್ತರಿಸಿ, ಆಸ್ಪತ್ರೆಗೆ ಸಾಗಿಸಲು ಯತ್ನಿಸಿದ್ದಾರೆ. ಆದರೆ, ಮಾರ್ಗ ಮಧ್ಯದಲ್ಲಿಯೇ ನಿಖಿಲ್ ಪ್ರಾಣಪಕ್ಷಿ ಹಾರಿಹೋಗಿದೆ. ಬಾಲಕನ ಮೃತದೇಹವನ್ನು ಸಾಗರ ಉಪ ವಿಭಾಗೀಯ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆಗೆ ಇರಿಸಲಾಗಿದೆ. ಸಾಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ದಾಖಲಾಗಿದೆ.

– ಆನಂದಪುರ: ವೃದ್ದೆಯನ್ನು ಕಂಬಕ್ಕೆ ಕಟ್ಟಿ ಅಮಾನುಷವಾಗಿ ಹಲ್ಲೆ!

ಆನಂದಪುರ : ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಆನಂದಪುರ ಸಮೀಪದ ಗೌತಮಪುರ ಗ್ರಾಮದಲ್ಲಿ ಅಮಾನುಷ ಘಟನೆಯೊಂದು ಬೆಳಕಿಗೆ ಬಂದಿದೆ. ವೃದ್ಧೆಯೊಬ್ಬರನ್ನು ಕಂಬಕ್ಕೆ ಕಟ್ಟಿ ನಿರ್ದಯವಾಗಿ ಹಲ್ಲೆ ಮಾಡಲಾಗಿದೆ. ಗೌತಮಪುರ ಗ್ರಾಮದ 67 ವರ್ಷದ ಹುಚ್ಚಮ್ಮ ಕೊಲ್ಲಪ್ಪ ಎಂಬುವರು ತಮ್ಮ ಮನೆಯ ಜಾಗದಲ್ಲಿ ಪಕ್ಕದ ಮನೆಯಲ್ಲಿ ಬಾಡಿಗೆಗೆ ವಾಸವಿದ್ದ ಪ್ರೇಮ ಎಂಬುವವರು ಕಸ ಹಾಕಿದ್ದನ್ನು ಪ್ರಶ್ನಿಸಿದ್ದಾರೆ. “ಇಲ್ಲಿ ಕಸ ಹಾಕಬೇಡಿ” ಎಂದು ಹೇಳಿದ್ದಕ್ಕೆ ಪ್ರೇಮ ಮತ್ತು ಅವರ ಮನೆಯ ಸದಸ್ಯರೆಲ್ಲರೂ ಸೇರಿಕೊಂಡು ವೃದ್ದೆ ಹುಚ್ಚಮ್ಮ ಅವರಿಗೆ ಕೆಟ್ಟದಾಗಿ ಬೈದಿದ್ದಾರೆ ಎನ್ನಲಾಗಿದೆ. ವೃದ್ಧೆ ಹುಚ್ಚಮ್ಮ ಅವರನ್ನು ಮನೆಯಿಂದ ಎಳೆದುಕೊಂಡು ಹೋಗಿ ಕಂಬಕ್ಕೆ ಕಟ್ಟಿ ಅಮಾನುಷವಾಗಿ ಹಲ್ಲೆ ಮಾಡಿದ್ದಾರೆ. ಈ ಘಟನೆಯು ಆನಂದಪುರ ಸುತ್ತಮುತ್ತ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

Categories
ಕುಂದಾಪುರ

ಕುಂದಾಪುರ : ಕೋಟೇಶ್ವರದಲ್ಲಿ ಮಾರಕಾಸ್ತ್ರದೊಂದಿಗೆ ಮನೆಗೆ ನುಗ್ಗಿದ ಕಳ್ಳರು!

ಕುಂದಾಪುರ : ಕೋಟೇಶ್ವರದಲ್ಲಿ ಮಾರಕಾಸ್ತ್ರದೊಂದಿಗೆ ಮನೆಗೆ ನುಗ್ಗಿದ ಕಳ್ಳರು! 

NAMMUR EXPRESS NEWS
ಕೋಟೇಶ್ವರ ಮನೆಯೊಂದರಲ್ಲಿ ಕಳ್ಳತನ ನಡೆಸುವ ತಲುವಾಗಿ ಮನೆಗೆ ನುಗ್ಗಿದ ಘಟನೆ ನಡೆದಿದೆ. ಬಾಗಿಲಿನ ನೆಟ್ ಮುರಿದ ವ್ಯಕ್ತಿಗಳಿಗೆ ಗ್ರಿಲ್ ಮುರಿಯಲು ಸಾಧ್ಯವಾಗಿಲ್ಲ. ವ್ಯಕ್ತಿಯೊಬ್ಬ ಮಚ್ಚಿನಂತಹ ಮಾರಕ ಅಸ್ತ್ರವನ್ನು ಉಪಯೋಗಿಸಿ ಬಾಗಿಲ ಸಂದಿಯಿಂದ ಹಾಕಿ ಬಾಗಿಲು ಮುರಿಯಲು ಯತ್ನಿಸಿದ್ದಾನೆ ಎನ್ನಲಾಗಿದೆ.
ಈ ಸಂದರ್ಭ ಮನೆಯಲ್ಲಿದ್ದ ಮಹಿಳೆಗೆ ಎಚ್ಚರವಾಗಿ ದುಬೈಯಲ್ಲಿದ್ದ ಮನೆ ಮಾಲಕರಿಗೆ ಕರೆ ಮಾಡಿದ್ದಾರೆ. ಅವರು ಸ್ಥಳೀಯ ವ್ಯಕ್ತಿಯೋರ್ವರನ್ನು ಸಂಪರ್ಕಿಸಿ, ಕುಂದಾಪುರ ಪೊಲೀಸರನ್ನು ಕೂಡ ಸಂಪರ್ಕಿಸಿ ವಿಷಯ ತಿಳಿಸಿದ್ದಾರೆ. ಮಹಿಳೆಯ ಕಿರುಚಾಟ ಕೇಳಿಸಿಕೊಂಡ ದುಷ್ಕರ್ಮಿಗಳ ತಂಡ ಓಡಿ ಹೋಗಿದ್ದಾರೆ.
ಕುಂದಾಪುರ ಪೊಲೀಸ್ ಅಧಿಕಾರಿಗಳು ಮನೆಗೆ ತಕ್ಷಣ ಭೇಟಿ ನೀಡಿ ಧೈರ್ಯ ತುಂಬಿದ್ದಾರೆ. ಫೋನ್ ಸಂಖ್ಯೆ ನೀಡಿ ಯಾವುದೇ ತುರ್ತು ಸಂದರ್ಭ ತಮ್ಮನ್ನು ಸಂಪರ್ಕಿಸುವಂತೆ ತಿಳಿಸಿದ್ದಾರೆ.

Categories
ಪುತ್ತೂರು

ಪುತ್ತೂರು: ಬಿಜೆಪಿ ಶಾಸಕರಿಂದ ಯಾವುದೇ ನ್ಯಾಯ ದೊರಕಿಲ್ಲ!!’

ಪುತ್ತೂರು: ಬಿಜೆಪಿ ಶಾಸಕರಿಂದ ಯಾವುದೇ ನ್ಯಾಯ ದೊರಕಿಲ್ಲ!!’

* ಮದುವೆಯಾಗುವುದಾಗಿ ನಂಬಿಸಿ ವಂಚನಾ ಪ್ರಕರಣ, ಸಂತ್ರಸ್ತೆ ತಾಯಿಯಿಂದ ಪತ್ರಿಕಾಗೋಷ್ಠಿ

NAMMUR EXPRESS NEWS
ಪುತ್ತೂರು: ‘ನನ್ನ ಮಗಳಿಗೆ ಪ್ರಪೋಸ್ ಮಾಡಿ ಮದುವೆಯಾಗುವುದಾಗಿ ನಂಬಿಸಿ ಯುವಕ ಮಗಳು ಗರ್ಭವತಿಯಾದಾಗ ನಾನು ಮದುವೆಯಾಗುವುದಿಲ್ಲ ಎಂದು ಹೇಳಿದ್ದಾನೆ. ನಮಗೆ ನ್ಯಾಯ ಸಿಗದಿದ್ದರೆ ನಾವು ಬಿಡುವುದಿಲ್ಲ. ಎಲ್ಲಿಯೂ ಪ್ರತಿಭಟನೆಗೂ ಸಿದ್ಧ ಎಂದು ಸಂತ್ರಸ್ತೆ ಯುವತಿಯ ತಾಯಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪಿ.ಜಿ.ಜಗನ್ನಿವಾಸ ರಾವ್ ಅವರ ಪುತ್ರ ಶ್ರೀಕೃಷ್ಣ ಜೆ.ರಾವ್‌ಗೆ ನನ್ನ ಮಗಳೊಂದಿಗೆ ಲವ್ ಇತ್ತು. ಆಕೆ 8 ರಿಂದ 10ನೇ ತರಗತಿಯ ತನಕ ರಾಮಕೃಷ್ಣ ಶಾಲೆಗೆ ಹೋಗಿದ್ದಳು. ಅಲ್ಲಿಂದ ನಂತರ ಮಂಗಳೂರಿನಲ್ಲಿ ಸಯನ್ಸ್ ವಿದ್ಯಾರ್ಥಿನಿಯಾಗಿ, ವಿದ್ಯಾರ್ಜನೆ ಪೂರ್ಣಗೊಳಿಸಿದ್ದಾಳೆ. ಈ ನಡುವೆ ಆಕೆ ಗರ್ಭಿಣಿಯಾಗಿರುವ ವಿಚಾರವನ್ನು ಶ್ರೀಕೃಷ್ಣನೇ ನನ್ನ ಬಳಿ ಬಂದು ಆಂಟಿ ನಮ್ಮಿಂದ ತಪ್ಪಾಗಿದೆ ಎಂದು ಹೇಳಿ ವಿಷಯ ತಿಳಿಸಿದ್ದ. ಈ ವಿಚಾರವನ್ನು ಅವನ ತಂದೆಗೂ ತಿಳಿಸಿದ್ದೆ. ಆಗ ಅವರೇ ಹಾಗಾದರೆ ಮದುವೆ ಮಾಡಿಸಿ ಬಿಡುವ ಎಂದು ತಿಳಿಸಿದ್ದರು. ಹಾಗೆ ಗರ್ಭಿಣಿಯ ಪರೀಕ್ಷೆಗೆಂದು ಪಿ.ಜಿ.ಜಗನ್ನಿವಾಸ ರಾವ್, ಅವರ ಪತ್ನಿ ಹಾಗು ನಾನು ಮತ್ತು ಮಗಳು ಜೊತೆಯಲ್ಲೇ ಅಥೇನಾ ಆಸ್ಪತ್ರೆಗೆ ಹೋದಾಗ ಮಗುವನ್ನು ತೆಗೆಸುವಂತೆ ಪರೀಕ್ಷೆ ಮಾಡಿದಾಗ ಆಕೆಗೆ 7 ತಿಂಗಳಾಗಿರುವುದರಿಂದ ಕಷ್ಟ ಸಾಧ್ಯ ಎಂದಿದ್ದರು.
ನಾನು ಜೂ.22ಕ್ಕೆ ಮಹಿಳಾ ಪೊಲೀಸ್ ಸ್ಟೇಷನ್‌ನಲ್ಲಿ ದೂರು ನೀಡಲು ಹೋದಾಗ ಪಿ.ಜಿ.ಜಗನ್ನಿವಾಸ ರಾವ್ ಅವರು ಠಾಣೆಗೆ ಬಂದು ನನ್ನ ಮಗನಿಗೆ 21 ವರ್ಷ ಆದ ತಕ್ಷಣ ರಿಜಿಸ್ಟರ್ ಮದುವೆ ಮಾಡಿಸುತ್ತೇನೆ ಎಂದು ಹೇಳಿ ಬಳಿಕ ಶಾಸಕರಿಗೆ ಕರೆ ಮಾಡಿದ್ದರು. ಶಾಸಕರ ಕರೆಯನ್ನು ನನಗೆ ಕೊಟ್ಟು ಶಾಸಕರೊಂದಿಗೆ ಮಾತನಾಡಲು ತಿಳಿಸಿದರು.
ಶಾಸಕರು ಪೋನ್‌ನಲ್ಲಿ ನನ್ನಲ್ಲಿ ಮಾತನಾಡಿ ಎಫ್‌ಐಆ‌ರ್ ಈಗ ಮಾಡಬೇಡಿ. ಜೂ.23ಕ್ಕೆ ಆವನಿಗೆ 21 ವರ್ಷ ಆದ ಬಳಿಕ ಅವರು ಮದುವೆ ಒಪ್ಪಿದಾರಲ್ಲ ಎಂದರು. ಹಾಗೆ ಠಾಣೆಯಲ್ಲಿ ಮುಚ್ಚಳಿಕೆ ಬರೆಸಿ ಇತ್ಯರ್ಥ ಆಗಿತ್ತು. ಆದರೆ ಹುಡುಗನಿಗೆ 21 ವರ್ಷ ಆದ ಬಳಿಕ ಅವರು ಮದುವೆ ಒಪ್ಪದಿರುವುದನ್ನು ಶಾಸಕರಿಗೆ ಕರೆ ಮಾಡಿ ತಿಳಿಸಿದೆ. ಅದಕ್ಕೆ ಅವರು ಮದುವೆಗೆ ಒಪ್ಪದಿದ್ದರೆ ನಿಮಗೆ ಹೇಗೆ ಬೇಕೋ ಹಾಗೆ ಕೇಸ್ ಮುಂದುವರಿಸಿ ಎಂದು ಹೇಳಿದ್ದಾರೆ ಎಂದು ಸಂತ್ರಸ್ತೆಯ ತಾಯಿ ಹೇಳಿದರು.

Categories
ಉಡುಪಿ

ಉಡುಪಿ: ಗೋವಿನ ರುಂಡ ಪತ್ತೆ ಪ್ರಕರಣ, ಆರು ಮಂದಿ ಬಂಧನ

ಉಡುಪಿ: ಗೋವಿನ ರುಂಡ ಪತ್ತೆ ಪ್ರಕರಣ, ಆರು ಮಂದಿ ಬಂಧನ

NAMMUR EXPRESS NEWS
ಉಡುಪಿ: ಬ್ರಹ್ಮಾವರದ ಕುಂಜಾಲಿನಲ್ಲಿ ಗೋವಿನ ರುಂಡ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು 6 ಮಂದಿ ಆರೋಪಿಗಳನ್ನು ಸೋಮವಾರ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ರಾಮ ಕುಂಜಾಲು (49), ಪ್ರಸಾದ್ ಕುಂಜಾಲು (21), ನವೀನ್ ಮಟಪಾಡಿ (35), ಕೇಶವ ನಾಯ್ಕ ಅಡಿjಲ (50), ಸಂದೇಶ ಕುಂಜಾಲು (35) ಮತ್ತು ರಾಜೇಶ್ ಕುಂಜಾಲು (28) ಬಂಧಿತರು. 7ನೇ ಆರೋಪಿ ತಲೆಮರೆಸಿಕೊಂಡಿದ್ದಾನೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಜೂ. 28ರಂದು ರಾತ್ರಿ ಸುಮಾರು 11.30ಕ್ಕೆ ಆರೂರು ಗ್ರಾಮದ ಕುಂಜಾಲು ಜಂಕ್ಷನ್ ಬಳಿಯ ರಿಕ್ಷಾ ನಿಲ್ದಾಣದ ಎದುರು ಮುಖ್ಯ ರಸ್ತೆಯ ಮಧ್ಯೆ ಗೋವಿನ ತಲೆ ಮತ್ತು ಚರ್ಮ ಕಂಡು ಬಂದಿತ್ತು. ಪ್ರಕರಣ ದಾಖಲಿಸಿಕೊಂಡ ಬ್ರಹ್ಮಾವರ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಒಟ್ಟು 4
ತಂಡಗಳನ್ನು ರಚಿಸಿ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ್ದರು. ಸಿಸಿಟಿವಿ ಹಾಗೂ ವಾಹನಗಳ ಚಲನೆಯ ಆಧಾರದ ಮೇಲೆ ತನಿಖೆ ನಡೆಸಿ ಆರು ಮಂದಿಯನ್ನು ಬಂಧಿಸಲಾಗಿದೆ.
ದನಗಳನ್ನು ಕಡಿದು ಅವಶೇಷಗಳನ್ನು ವಾಹನದಲ್ಲಿ ಸಾಗಿಸುವಾಗ ಕೆಲವು ಅವಶೇಷ ರಸ್ತೆಯಲ್ಲಿ ಬಿದ್ದಿವೆ. ಪ್ರಕರಣದಲ್ಲಿ ಬಳಕೆಯಾದ ಸ್ಕೂಟರ್ ಹಾಗೂ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ವಧಿಸಿದ ದನದ ಮಾಂಸವನ್ನು ಸ್ವಂತಕ್ಕೆ ಬಳಸಿದ್ದು, ಮಾರಾಟ ಮಾಡುವ ಉದ್ದೇಶ ಇರಲಿಲ್ಲ ಎಂದು ತಿಳಿಸಿದರು.
ಸಿಸಿಟಿವಿ ಆಧಾರದಲ್ಲಿ ಪತ್ತೆ ಪ್ರಕರಣದ ತನಿಖೆಗಾಗಿ ರಚಿಸಿದ್ದ ವಿಶೇಷ ತಂಡವು ಘಟನೆ ನಡೆದ ಆಸುಪಾಸು ಭಾಗದ ಸುಮಾರು 3-4 ಕಿ.ಮೀ. ವ್ಯಾಪ್ತಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲನೆ ನಡೆಸಿದ್ದರು. ರಾಮ ಕುಂಜಾಲು ಎಂಬಾತ ಕೇಶವನಿಂದ ದನವನ್ನು ಪಡೆದುಕೊಂಡು ಕಾರಿನಲ್ಲಿ ತಂದು ವಧೆ ಮಾಡಿ ಅನಂತರ ಸ್ಕೂಟರ್‌ನಲ್ಲಿ ಕೊಂಡೊಯ್ಯುವ ವೇಳೆ ಅವಶೇಷಗಳು ಕೆಳಗೆ ಬಿದ್ದಿವೆ. ಅನಂತರ ಇದರ ಅರಿವಾಗುತ್ತಲೇ ಅವರು ಹಿಂದಿರುಗಿ ಬಂದಿದ್ದರು. ಆಗ ಅಲ್ಲಿ ಜನರು ಸೇರಿದ್ದನ್ನು ಕಂಡು ಅವರು ವಾಪಸಾಗಿದ್ದರು ಎನ್ನಲಾಗಿದೆ.
ಪ್ರಕರಣದ ಆರೋಪಿಗಳನ್ನು ಜಿಲ್ಲಾ ಪೊಲೀಸ್‌ ಅಧಿಕಾರಿಯಗಳು ತತ್‌ಕ್ಷಣ ಬಂಧಿಸಿರುವುದು ಉತ್ತಮ ವಿಚಾರವಾಗಿದೆ. ಹಾಗೆಯೇ ಕಳೆದ ಡಿಸೆಂಬರ್‌ನಲ್ಲಿ ಹಾರಾಡಿ ಗ್ರಾ.ಪಂ. ವ್ಯಾಪ್ತಿಯ ರಸ್ತೆ ಬದಿಯಲ್ಲಿ ಕೂಡ ಗೋವಿನ ಕಳೇಬರ ಹಾಗೂ ದೇಹದ ಭಾಗಗಳು ಎಸೆದಿರುವ ಬಗ್ಗೆಯೂ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಪ್ರಕರಣದ ಆರೋಪಿಗಳ ಬಂಧನಕ್ಕೂ ಪೊಲೀಸ್ ಇಲಾಖೆ ಮುಂದಾಗಬೇಕು. ಈ ಪ್ರಕರಣವನ್ನು ಕೂಲಂಕಷವಾಗಿ ತನಿಖೆ ನಡೆಸಿ, ಆರೋಪಿಗಳ ಹಿಂದೆ ಇರುವ ಕಾಣದ ಕೈಗಳು ಹಾಗೂ ಬ್ರಹ್ಮಾವರ ಪರಿಸರದಲ್ಲಿ ಅವ್ಯಾಹತವಾಗಿರುವ ದನಗಳ ಕಳ್ಳತನ ಹಾಗೂ ಅಕ್ರಮ ಕಸಾಯಿಗಳ ಬಗ್ಗೆ ಕಠಿನ ಕ್ರಮ ಕೈಗೊಂಡು ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ವಹಿಸಬೇಕು ಎಂದು ಶಾಸಕ ಯಶ್‌ಪಾಲ್‌ ಸುವರ್ಣ ಆಗ್ರಹಿಸಿದ್ದಾರೆ.

Categories
ಜ್ಯೋತಿಷ್ಯ

ಸಾವಿನ ಸೂಚನೆ ನೀಡುವ 5 ಲಕ್ಷಣಗಳು..!!

ಸಾವಿನ ಸೂಚನೆ ನೀಡುವ 5 ಲಕ್ಷಣಗಳು..!!

1.ಒಬ್ಬ ವ್ಯಕ್ತಿಯು ತನ್ನ ಸಾವಿನ ಮೊದಲು ತನ್ನ ಜೀವನದ ಹಳೆಯ ದಿನಗಳನ್ನು ಮೆಲುಕು ಹಾಕಲು ಪ್ರಾರಂಭಿಸುತ್ತಾನೆ. ಅದರ ಮೂಲಕ ಅವನು ತನ್ನ ಜೀವನದ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳನ್ನು ನೆನಪಿಸಿಕೊಳ್ಳುತ್ತಾನೆ.

2. ಮನುಷ್ಯನಿಗೆ ಮರಣ ಸಮೀಪಿಸುವಾಗ ಆತನಿಗೆ ತಾನು ಮಾಡಿದ ಎಲ್ಲ ಕೆಟ್ಟ ಕಾರ್ಯಗಳ ಅರಿವಾಗುತ್ತದೆ.

3. ಕೈಯಲ್ಲಿರುವ ರೇಖೆಗಳು ಕೂಡ ಆ ವ್ಯಕ್ತಿಗೆ ಸ್ಪಷ್ಟವಾಗಿ ಕಾಣಿಸುವುದಿಲ್ಲ. ವ್ಯಕ್ತಿಯು ಸಾವಿನ ಸಮೀಪದಲ್ಲಿರುವಾಗ ವಿಚಿತ್ರ ವಿಚಿತ್ರವಾಗಿ ಮಾತನಾಡುತ್ತಾನೆ.

4. ಗರುಡ ಪುರಾಣದಲ್ಲಿ ಹೇಳಿದಂತೆ ಒಬ್ಬ ವ್ಯಕ್ತಿಯು ಸತ್ತಾಗ ಅವನು ನಿಗೂಢವಾದ ಬಾಗಿಲನ್ನು ನೋಡುತ್ತಾನೆ. ಕೆಲವರು ಜ್ವಾಲೆಗಳನ್ನು ನೋಡುತ್ತಾರೆ.

5. ಒಬ್ಬ ವ್ಯಕ್ತಿಯು ಸಾವಿನ ಸಮೀಪದಲ್ಲಿದ್ದಾಗ ಅವನು ಯಮದೂತನನ್ನು ನೋಡುತ್ತಾನೆ. ಕಾರಣವಿಲ್ಲದೆ ನಗುತ್ತಾನೆ.

 

ಲೇಖನ:
ಧಾರ್ಮಿಕಚಿಂತಕರು ಮತ್ತು ಸಲಹೆಗಾರರು
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ ಜ್ಯೋತಿಷ್ಯಶಾಸ್ತ್ರತಜ್ಞರು 8548998564

Categories
ರಾಜ್ಯ

ರಾಜ್ಯದಲ್ಲಿ ಮತ್ತೆ ಮಳೆಯ ಆರ್ಭಟ..!!

ರಾಜ್ಯದಲ್ಲಿ ಮತ್ತೆ ಮಳೆಯ ಆರ್ಭಟ..!!
– ಜುಲೈ ಮೊದಲ ವಾರ ವಾಡಿಕೆಗಿಂತ ಹೆಚ್ಚು ಮಳೆ
– ಎಲ್ಲೆಲ್ಲಿ ಮಳೆ ಅಲರ್ಟ್‌? ಈ ಜಿಲ್ಲೆಗಳಲ್ಲಿ ಅಪ್ಪಳಿಸಲಿದೆ ವರುಣ

NAMMUR EXPRESS NEWS
ಕರ್ನಾಟಕದಲ್ಲಿ ಜೂನ್‌ ತಿಂಗಳ ಬಳಿಕವೂ ಮಳೆ ಆರ್ಭಟ ಮುಂದುವರಿದಿದೆ. ಜುಲೈ ತಿಂಗಳಲ್ಲಿ ವಾಡಿಕೆಗಿಂತ ಇನ್ನೂ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅಲ್ಲದೇ ಜುಲೈ ಮೊದಲ ವಾರದಲ್ಲಿ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಮಳೆಯ ತೀವ್ರತೆ ಇನ್ನಷ್ಟು ಜಾಸ್ತಿಯಾಗಲಿದೆ. ಈಗ ದಕ್ಷಿಣ ಕನ್ನಡ ಜಿಲ್ಲೆ ಕೊಡಗಿಗೆ ಭಾರೀ ಮಳೆ ಅಲರ್ಟ್‌ ನೀಡಿದ್ದು, ಮುಂದಿನ 24 ಗಂಟೆಯಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅಲ್ಲದೆ ರಾಜ್ಯದಲ್ಲಿ ಮುಂದಿನ ಐದು ದಿನ ವರುಣನ ಆರ್ಭಟ ಜೋರಾಗಲಿದೆ.

ರಾಜ್ಯದಲ್ಲಿ ಮುಂಗಾರು ಅಬ್ಬರ ಮತ್ತೆ ಜೋರಾಗಿದೆ. ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ವರುಣ ಅಕ್ಷರಶಃ ಅಬ್ಬರಿಸಿ ಬೊಬ್ಬಿರಿದಿದ್ದಾನೆ. ಮಳೆ ಹೊಡೆತಕ್ಕೆ ಜಲಾಶಯಗಳು, ಕೆರೆ ಕಟ್ಟಡಗಳು, ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿದೆ. ಇದನ್ನು ಸುಧಾರಿಸಿಕೊಳ್ಳುತ್ತಿರುವಾಗಲೇ ಮತ್ತೆ ದಕ್ಷಿಣ ಕನ್ನಡ ಹಾಗೂ ಕೊಡಗಿಗೆ ಭಾರೀ ಮಳೆ ಅಲರ್ಟ್ ನೀಡಲಾಗಿದ್ದು ಯೆಲ್ಲೋ ಅಲರ್ಟ್‌ ಘೋಷಣೆ ಮಾಡಲಾಗಿದೆ. ಜೂನ್‌ 30ರಿಂದ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಹೆಚ್ಚಿನ ಕಡೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಬೆಳಗಾವಿ, ಬೀದರ್, ಬಾಗಲಕೋಟೆ, ಧಾರವಾಡ, ಕೊಪ್ಪಳ, ಕಲಬುರಗಿ, ಗದಗ, ಹಾವೇರಿ, ವಿಜಯಪುರ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಇನ್ನೂ ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ, ಹಾಸನ, ಮಂಡ್ಯ, ಮೈಸೂರು, ಕೊಡಗು, ಕೋಲಾರ, ರಾಮನಗರ, ಶಿವಮೊಗ್ಗ, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಜುಲೈ 5ರವರೆಗೆ ಮಳೆ ಅಲರ್ಟ್‌ ನೀಡಲಾಗಿದೆ.

Categories
ಚಿಕ್ಕಮಗಳೂರು

ಜಂಬಿಟ್ಟಿಗೆ ಉತ್ಪಾದನೆ ಪುನರಾರಂಭಿಸಲು ತಹಶೀಲ್ದಾರ್,MLA,MP ಗೆ ಮನವಿ

ಜಂಬಿಟ್ಟಿಗೆ ಉತ್ಪಾದನೆ ಪುನರಾರಂಭಿಸಲು ತಹಶೀಲ್ದಾರ್,MLA,MP ಗೆ ಮನವಿ

* ದಕ್ಷಿಣ ಕನ್ನಡದಲ್ಲಿ ಜಂಬಿಟ್ಟಿಗೆ ಉತ್ಪಾದನೆ ಸ್ಥಗಿತ
* ಕಾರ್ಮಿಕ ಮಿತ್ರ ಬಳಗ ಹಾಗೂ ಶೃಂಗಗಿರಿ ಖಾಸಗಿ ಕಟ್ಟಡ ಗುತ್ತಿಗೆದಾರರ ಸಂಘದಿಂದ ಮನವಿ

NAMMMUR EXPRESS NEWS
ಶೃಂಗೇರಿ : ದಕ್ಷಿಣ ಕನ್ನಡದಲ್ಲಿ ಜಂಬಿಟ್ಟಿಗೆ (ಕೆಂಪುಕಲ್ಲು) ಉತ್ಪಾದನೆ ಸ್ಥಗಿತಗೊಂಡಿದ್ದು,ಈ ಹಿನ್ನೆಲೆಯಲ್ಲಿ ಕಟ್ಟಡ ನಿರ್ಮಾಣ ಕಾರ್ಯಗಳು ಸ್ಥಗಿತಗೊಂಡಿದೆ. ಇದರಿಂದ ಕಟ್ಟಡ ಕಾರ್ಮಿಕರು ಕೆಲಸವಿಲ್ಲದೇ ಮನೆಯಲ್ಲೇ ಕೂರುವಂತಹ ಪರಿಸ್ಥಿತಿ ಎದುರಾಗಿದೆ ಹಾಗಾಗಿ ಕೂಡಲೇ ಈ ಆದೇಶವನ್ನು ಮರುಪರಿಶೀಲಿಸಿ ಜಂಬಿಟ್ಟಿಗೆ ಉತ್ಪಾದನೆಯನ್ನು ಪುನರಾಂಭಗೊಳಿಸಬೇಕು ಎಂದು ಕಾರ್ಮಿಕ ಮಿತ್ರ ಬಳಗ ಶೃಂಗೇರಿ ಹಾಗೂ ಶೃಂಗಗಿರಿ ಖಾಸಗಿ ಕಟ್ಟಡ ಗುತ್ತಿಗೆದಾರರ ಸಂಘದ ವತಿಯಿಂದ ತಾಲೂಕಿನ ತಹಶೀಲ್ದಾರ್,ಶಾಸಕರು ಹಾಗೂ ಸಂಸದರಿಗೆ ಮನವಿ ಸಲ್ಲಿಸಲಾಯಿತು.
ಮಲೆನಾಡು ಭಾಗದಲ್ಲಿ ಈ ಕೆಲಸವನ್ನೇ ಆಧರಿಸಿ ಸಾವಿರಾರು ಕುಟುಂಬಗಳು ಜೀವನ ನಡೆಸುತ್ತಿದೆ. ಸರ್ಕಾರದ ಈ ನಿಯಮದಿಂದ ಸಾವಿರಾರು ಕುಟುಂಬಗಳು ಜೀವನ ನಡೆಸುವುದೇ ಕಷ್ಟವಾಗಿದೆ. ಆದ್ದರಿಂದ ಸರ್ಕಾರ ಹಾಗೂ ಇಲಾಖೆ ಅಧಿಕಾರಿಗಳು ಈ ಆದೇಶವನ್ನು ಪುನರ್ ಪರಿಶೀಲಿಸಿ ಜಂಬಿಟ್ಟಿಗೆ ಉತ್ಪಾದನೆ ಪುನರಾರಂಭಿಸಬೇಕು ಎಂದು ಕಾರ್ಮಿಕ ಮಿತ್ರ ಬಳಗ ಶೃಂಗೇರಿ ಇದರ ಅಧ್ಯಕ್ಷರಾದ ರಮೇಶ್ ಶೂನ್ಯ ಸರ್ಕಾರ ಹಾಗೂ ಇಲಾಖೆಯನ್ನು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಅಧ್ಯಕ್ಷ ರಮೇಶ್ ಶೂನ್ಯ,ಉಪಾಧ್ಯಕ್ಷ ಪ್ರಶಾಂತ್ ಕೆ.ಶೆಟ್ಟಿ,ಕಾರ್ಯದರ್ಶಿ ವಿಶ್ವಾಸ್ ಜಿ.ವಿ,ಶೃಂಗಗಿರಿ ಖಾಸಗಿ ಕಟ್ಟಡ ಗುತ್ತಿಗೆದಾರರ ಸಂಘದ ಅಧ್ಯಕ್ಷ ಭಾಸ್ಕರ್ ಪೂಜಾರಿ,ಪ್ರಧಾನ ಕಾರ್ಯದರ್ಶಿ ರಾಜೇಶ್ ಶೆಟ್ಟಿ,ಕಾರ್ಯದರ್ಶಿ ಶ್ರೀಹರ್ಷ,ಮುನಿಸ್ವಾಮಿ,ರಮೇಶ್ ಬಿ,ರಾಜು ಕೆ.ಎಸ್‌ರವರುಗಳು ಉಪಸ್ಥಿತರಿದ್ದರು.