Categories
ದಿನ ರಾಶಿ ಭವಿಷ್ಯ

ಈ ದಿನದ ರಾಶಿ ಭವಿಷ್ಯ ಹೇಗಿದೆ?

ಈ ದಿನದ ರಾಶಿ ಭವಿಷ್ಯ ಹೇಗಿದೆ?
– ಮಹಾ ಶಿವನ ಕೃಪೆಯಿಂದ ಯಾವ ರಾಶಿಯವರಿಗೆ ಒಳಿತು ? ಯಾವ ರಾಶಿಯವರಿಗೆ ಕೆಡಕು?

NAMMUR EXPRESS NEWS
ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು?

** ಮೇಷ ರಾಶಿ :
ಇಂದು ಮೇಷ ರಾಶಿಯವರ ವೃತ್ತಿ ಜೀವನದಲ್ಲಿ ಹೊಸ ಸಾಧನೆಗಳನ್ನು ಸಾಧಿಸುವಿರಿ. ಶೈಕ್ಷಣಿಕ ಕೆಲಸದಲ್ಲಿ ಪ್ರಮುಖ ಬದಲಾವಣೆಗಳಾಗಲಿವೆ. ಇಂದು ನೀವು ಕುಟುಂಬದೊಂದಿಗೆ ಎಲ್ಲೋ ಹೊರಗೆ ಹೋಗಬಹುದು. ಮನೆಯಲ್ಲಿ ಶುಭ ಕಾರ್ಯಗಳನ್ನು ಆಯೋಜಿಸಬಹುದು. ಈ ಕಾರಣದಿಂದಾಗಿ ಕುಟುಂಬ ಜೀವನದಲ್ಲಿ ಸಂತೋಷದ ವಾತಾವರಣ ಇರುತ್ತದೆ.

** ವೃಷಭ ರಾಶಿ :
ಇಂದು ದೀರ್ಘ ಬಾಕಿಯಿರುವ ಕೆಲಸಗಳು ಯಶಸ್ವಿಯಾಗುತ್ತವೆ. ಹೊಸ ಬದಲಾವಣೆಗಳಿಗೆ ಸಿದ್ಧರಾಗಿರಿ. ಕಚೇರಿ ರಾಜಕೀಯದಿಂದ ದೂರವಿರಿ. ಶೈಕ್ಷಣಿಕ ಕೆಲಸದಲ್ಲಿ ಏರುಪೇರು ಉಂಟಾಗುವುದು. ಇಂದು ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಕೌಟುಂಬಿಕ ಜೀವನದಲ್ಲಿ ಸಂತೋಷ ಮತ್ತು ಶಾಂತಿಯು ಅಖಂಡವಾಗಿ ಉಳಿಯುತ್ತದೆ. ಕುಟುಂಬದೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವಿರಿ.

** ಮಿಥುನ ರಾಶಿ :
ಇಂದು ವೃತ್ತಿ ಜೀವನದಲ್ಲಿನ ಅಡೆತಡೆಗಳು ನಿವಾರಣೆಯಾಗುತ್ತವೆ. ಬಹಳ ದಿನಗಳಿಂದ ಬಾಕಿ ಉಳಿದಿರುವ ಹಣ ವಾಪಸ್ ಬರಲಿದೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಇಂದು ನೀವು ಆಸ್ತಿ ಸಂಬಂಧಿತ ವಿವಾದಗಳಿಂದ ಪರಿಹಾರವನ್ನು ಪಡೆಯುತ್ತೀರಿ. ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ಆಹ್ಲಾದಕರ ವಾತಾವರಣ ನಿರ್ಮಾಣವಾಗುತ್ತದೆ.

** ಕರ್ಕಾಟಕ ರಾಶಿ :
ಇಂದು ಕಟಕ ರಾಶಿಯವರಿಗೆ ದಿನವು ಅತ್ಯುತ್ತಮವಾಗಿರುತ್ತದೆ. ಹೊಸ ಹೂಡಿಕೆ ಅವಕಾಶಗಳ ಮೇಲೆ ನಿಗಾ ಇರಿಸಿ. ಪ್ರತಿದಿನ ಯೋಗ ಮತ್ತು ವ್ಯಾಯಾಮ ಮಾಡಿ. ಇಂದು ನೀವು ಪ್ರವಾಸವನ್ನು ಯೋಜಿಸಬಹುದು. ಜೀವನದಲ್ಲಿ ಅನೇಕ ಪ್ರಮುಖ ಬದಲಾವಣೆಗಳಾಗುತ್ತವೆ. ಕೌಟುಂಬಿಕ ಜೀವನದಲ್ಲಿ ಸಂತಸದ ವಾತಾವರಣ ಇರುತ್ತದೆ. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ವೃತ್ತಿ ಜೀವನದಲ್ಲಿ ಪ್ರಗತಿ ಕಾಣುವಿರಿ.

** ಸಿಂಹ ರಾಶಿ :
ಇಂದು ವೃತ್ತಿಪರ ಜೀವನದ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಿ. ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಮಯ ಕಳೆಯಿರಿ. ನೀವು ಇಂದು ಜಿಮ್ ಅನ್ನು ಪ್ರಾರಂಭಿಸಬಹುದು. ಇದರಿಂದ ನಿಮ್ಮ ಫಿಟ್ನೆಸ್ ಉತ್ತಮವಾಗಿರುತ್ತದೆ. ಇದಲ್ಲದೆ, ನಿಮ್ಮ ನೆಚ್ಚಿನ ಹವ್ಯಾಸಕ್ಕಾಗಿ ನೀವು ಸ್ವಲ್ಪ ಸಮಯವನ್ನು ತೆಗೆದುಕೊಳ್ಳಬಹುದು. ವಿದ್ಯಾರ್ಥಿಗಳು ತಮ್ಮ ಶ್ರಮದ ಫಲವನ್ನು ಪಡೆಯುತ್ತಾರೆ. ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯುತ್ತೀರಿ.

** ಕನ್ಯಾ ರಾಶಿ :
ಇಂದು ನಿಮ್ಮ ಸಂಗಾತಿಯೊಂದಿಗೆ ಹೆಚ್ಚು ಸಮಯ ಕಳೆಯಿರಿ. ನಿಮ್ಮ ದೀರ್ಘಾವಧಿಯ ಸಂಬಂಧದ ಗುರಿಗಳನ್ನು ಅವರೊಂದಿಗೆ ಹಂಚಿಕೊಳ್ಳಿ. ವಿದ್ಯಾರ್ಥಿಗಳು ಇಂದು ಪ್ರತಿಷ್ಠಿತ ಸಂಸ್ಥೆಯಲ್ಲಿ ಪ್ರವೇಶ ಪಡೆಯಬಹುದು. ಸರ್ಕಾರಿ ನೌಕರರಿಗೆ ಬಡ್ತಿ ಸಿಗಬಹುದು. ಗಡುವಿನ ಮೊದಲು ಎಲ್ಲಾ ಕಚೇರಿ ಕಾರ್ಯಗಳನ್ನು ಪೂರ್ಣಗೊಳಿಸಿ. ನಿಮ್ಮ ಫಿಟ್ನೆಸ್ ಬಗ್ಗೆ ಗಮನ ಕೊಡಿ.

** ತುಲಾ ರಾಶಿ :
ಇಂದು ನಿಮಗೆ ತುಂಬಾ ಶುಭ ದಿನವಾಗಲಿದೆ. ವ್ಯಾಪಾರದಲ್ಲಿ ಆರ್ಥಿಕ ಲಾಭವಾಗಲಿದೆ. ಉದ್ಯಮಿಗಳು ವ್ಯಾಪಾರದಲ್ಲಿ ಲಾಭ ಗಳಿಸುವರು. ಕೌಟುಂಬಿಕ ಜೀವನದಲ್ಲಿನ ಸಮಸ್ಯೆಗಳು ದೂರವಾಗುತ್ತವೆ. ಸಮಯವನ್ನು ಸರಿಯಾಗಿ ಬಳಸಿಕೊಳ್ಳಿ. ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಿ. ಕೆಲಸದ ಕಾರಣದಿಂದ ಹೆಚ್ಚು ಒತ್ತಡವನ್ನು ತೆಗೆದುಕೊಳ್ಳಬೇಡಿ

** ವೃಶ್ಚಿಕ ರಾಶಿ :
ಇಂದು ನೀವು ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಿರಿ. ಕಚೇರಿಯಲ್ಲಿ ಕೆಲವು ಪ್ರಮುಖ ಪ್ರಾಜೆಕ್ಟ್‌ಗಳ ಜವಾಬ್ದಾರಿಯನ್ನು ನೀವು ಪಡೆಯುತ್ತೀರಿ. ಹೂಡಿಕೆಗೆ ಸಂಬಂಧಿಸಿದ ನಿರ್ಧಾರಗಳನ್ನು ಬಹಳ ಚಿಂತನಶೀಲವಾಗಿ ತೆಗೆದುಕೊಳ್ಳಿ. ತರಾತುರಿಯಲ್ಲಿ ಹಣ ಖರ್ಚು ಮಾಡುವುದನ್ನು ತಪ್ಪಿಸಿ. ಇಂದು ನೀವು ನಿಮ್ಮ ಸಂಗಾತಿಯೊಂದಿಗೆ ವಿಹಾರವನ್ನು ಯೋಜಿಸಬಹುದು. ಕೌಟುಂಬಿಕ ಜೀವನದಲ್ಲಿ ಸಣ್ಣಪುಟ್ಟ ಸಮಸ್ಯೆಗಳಿರುತ್ತವೆ.

** ಧನಸ್ಸು ರಾಶಿ :
ಇಂದು ನಿಮ್ಮ ಜೀವನದಲ್ಲಿ ಶಕ್ತಿ ಮತ್ತು ಉತ್ಸಾಹ ಹೆಚ್ಚಾಗುತ್ತದೆ. ಕಚೇರಿಯಲ್ಲಿ ನೆಟ್‌ವರ್ಕಿಂಗ್ ಹೆಚ್ಚಾಗಲಿದೆ. ಸಹೋದ್ಯೋಗಿಗಳೊಂದಿಗೆ ಸಂಬಂಧವು ಉತ್ತಮವಾಗಿರುತ್ತದೆ. ತಂಡದ ಕೆಲಸದಿಂದ ಎಲ್ಲಾ ಕಾರ್ಯಗಳು ಸುಲಭವಾಗಿ ಯಶಸ್ವಿಯಾಗುತ್ತವೆ. ಇಂದು ನೀವು ಹೊಸ ಯೋಜನೆಯಲ್ಲಿ ಕೆಲಸ ಮಾಡುವ ಅವಕಾಶವನ್ನು ಪಡೆಯಬಹುದು. ದಾಂಪತ್ಯ ಜೀವನದಲ್ಲಿ ಸಂತಸದ ವಾತಾವರಣ ಇರುತ್ತದೆ.

** ಮಕರ ರಾಶಿ :
ಇಂದು ಮಕರ ರಾಶಿಯವರಿಗೆ ಸಕಾರಾತ್ಮಕ ದಿನವಾಗಲಿದೆ. ಒಳ್ಳೆಯ ಸುದ್ದಿ ಸಿಗಲಿದೆ. ಕಚೇರಿಯಲ್ಲಿ ನಿಮ್ಮ ಕಾರ್ಯಕ್ಷಮತೆ ಉತ್ತಮವಾಗಿರುತ್ತದೆ. ವೃತ್ತಿ ಜೀವನದಲ್ಲಿ ದೊಡ್ಡ ಬದಲಾವಣೆಗಳಾಗಲಿವೆ. ಜನರು ನಿಮ್ಮ ಕಾರ್ಯಗಳನ್ನು ಹೊಗಳುತ್ತಾರೆ. ಇಂದು ಪೂರ್ವಿಕರ ಆಸ್ತಿಯಿಂದ ಆರ್ಥಿಕ ಲಾಭವಾಗಲಿದೆ. ಆಸ್ತಿ ಸಂಬಂಧಿತ ವಿವಾದಗಳಿಂದ ನೀವು ಪರಿಹಾರವನ್ನು ಪಡೆಯುತ್ತೀರಿ. ನಿಮ್ಮ ಆರೋಗ್ಯದ ಕಡೆ ಗಮನ ಕೊಡಿ.

** ಕುಂಭ ರಾಶಿ :
ಇಂದು ಕುಂಭ ರಾಶಿಯವರು ಕುಟುಂಬ, ವೃತ್ತಿ, ಹಣ, ಆರೋಗ್ಯ ಅಥವಾ ಪ್ರೀತಿಯ ವಿಷಯವಾಗಿರಲಿ, ಜೀವನದಲ್ಲಿ ಯಾವುದೇ ಬದಲಾವಣೆಯನ್ನು ಸಕಾರಾತ್ಮಕ ಚಿಂತನೆಯೊಂದಿಗೆ ಸ್ವೀಕರಿಸಿ. ವೃತ್ತಿಪರ ಜೀವನದಲ್ಲಿ ಉನ್ನತ ಅಧಿಕಾರಿಗಳಿಂದ ಬೆಂಬಲವನ್ನು ಪಡೆಯುತ್ತೀರಿ. ನೀವು ಶೈಕ್ಷಣಿಕ ಕೆಲಸದಲ್ಲಿ ಉತ್ತಮ ಯಶಸ್ಸನ್ನು ಪಡೆಯುತ್ತೀರಿ. ಸಾಮಾಜಿಕ ಸ್ಥಾನಮಾನ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ.

** ಮೀನ ರಾಶಿ :
ಇಂದು ನಿಮಗೆ ಶುಭ ದಿನವಾಗಿರುತ್ತದೆ. ಬಹಳ ದಿನಗಳಿಂದ ಅಂಟಿಕೊಂಡಿದ್ದ ಹಣ ವಾಪಸ್ ಬರುತ್ತದೆ. ವೃತ್ತಿ ಜೀವನದಲ್ಲಿ ಪ್ರಮುಖ ಬದಲಾವಣೆಗಳಾಗಲಿವೆ. ಕಚೇರಿಯಲ್ಲಿ ಬಡ್ತಿ ಅಥವಾ ಮೌಲ್ಯಮಾಪನದ ಸಾಧ್ಯತೆಗಳು ಹೆಚ್ಚಾಗುತ್ತವೆ. ಕೌಟುಂಬಿಕ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಅಖಂಡವಾಗಿ ಉಳಿಯುತ್ತದೆ. ಪ್ರಯಾಣದ ಅವಕಾಶವಿರುತ್ತದೆ. ನಿಮ್ಮ ಆರೋಗ್ಯದ ಕಡೆ ಗಮನ ಕೊಡಿ.

Categories
ಕರಾವಳಿ

ಟಾಪ್ 10 ನ್ಯೂಸ್ ಕರಾವಳಿ

ಟಾಪ್ 10 ನ್ಯೂಸ್ ಕರಾವಳಿ

* ಮಂಗಳೂರು: ಸುಹಾಸ್ ಶೆಟ್ಟಿ ಹತ್ಯೆ‌ ಪ್ರಕರಣಕ್ಕೆ ಟ್ವಿಸ್ಟ್!
* ಬೆಳ್ತಂಗಡಿ: ಶಿಶಿಲ ದೇವಾಲಯದಲ್ಲಿ ಮೀನು ಹಿಡಿದವರಿಗೆ ಶಾಕ್
* ಕಾಪು: ಟೆಂಪೋ ಸ್ಕೂಟರ್ ಡಿಕ್ಕಿ; ಬೈಕ್ ಸವಾರನ ಸಾವು
* ಪುತ್ತೂರು: ರಸ್ತೆಯಲ್ಲಿ ಬಿದ್ದಿದ್ದ ಹಾಸಿಗೆ: ಕುತೂಹಲ!
* ಬ್ರಹ್ಮಾವರ: ಸರಗಳ್ಳನ ಬಂಧನ
* ಉಳ್ಳಾಲ: ಸರ್ಕಾರಿ ಬಸ್ ಕಂಡಕ್ಟರ್ ಜೀವ ಉಳಿಸಿದ ಚಾಲಕ
* ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಗುಡ್ಡ ಕುಸಿತದ ಭೀತಿ
* ಕುಂದಾಪುರ: ಮಹಿಳಾ ಲೇಖಕಿ ವೈದೇಹಿ ಅವರಿಗೆ ಪತಿ ವಿಯೋಗ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಬ್ರಹ್ಮಾವರ: ಮಂಜುನಾಥ ಮಯ್ಯ ಎನ್ನುವ ಎರಡು ಸರಗಳ್ಳತನ ಪ್ರಕರಣದ ಆರೋಪ ಹೊತ್ತಿದ್ದ ಕಳ್ಳನನ್ನು ಪೊಲೀಸರು ಸೆರೆಹಿಡಿದಿದ್ದಾರೆ. ಕಳೆದ ಕೆಲವು ತಿಂಗಳ ಹಿಂದೆ, ವಯಡ್ತಾಡಿ ಗ್ರಾಮದ ಐವತ್ತೇಳು ವರ್ಷದ ಮಹಿಳೆಯೊಬ್ಬರು ಪಕ್ಕದ ಮನೆಯ ಕಾರ್ಯಕ್ರಮವೊಂದಕ್ಕೆ ತೆರಳುತ್ತಿದ್ದಾಗ, ಆರೋಪಿಯು ದ್ವಿಚಕ್ರವಾಹನದಲ್ಲಿ ಆಗಮಿಸಿ, ಇಪ್ಪತ್ತೆಂಟು ಗ್ರಾಂ ತೂಕದ ಚಿನ್ನದ ಕರಿಮಣಿ ಸರವನ್ನು ದೋಚಿದ್ದ.‌ ಉಡುಪಿಯ ಎಸ್ ಪಿ ಅರುಣ್.ಕೆ ಮತ್ತು ಹೆಚ್ಚುವರಿ ಎಸ್ ಪಿ ಆದ ಎಸ್.ಟಿ ಸಿದ್ಧಲಿಂಗಪ್ಪ, ಪರಮೇಶ್ವರ ಹೆಗಡೆ ಅವರ ಮಾರ್ಗದರ್ಶನದಂತೆ ಹಾಗೂ ಡಿವೈಎಸ್ ಪಿ ಪ್ರಭು ಅವರ ನಿರ್ದೇಶನದಂತೆ ಬ್ರಹ್ಮಾವರದ ವೃತ್ತ ನಿರೀಕ್ಷಕರಾದ ದಿವಾಕರ್ ಪಿ.ಎಂ, ಕಾನೂನು ಮತ್ತು ಸುವ್ಯವಸ್ಥೆ ಪಿಎಸ್ಐ ಆಗಿರುವ ಸುದರ್ಶನ್ ದೊಡ್ಡಮನಿ, ತನಿಖಾ ಪಿಎಸ್ಐ ಮಹಾಂತೇಶ್ ಮತ್ತು ಇತರೆ ಸಿಬ್ಬಂದಿಗಳನ್ನೊಳಗೊಂಡ ತಂಡವು ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ. ಆರೋಪಿಯಿಂದ ಸುಮಾರು ಒಂದು ಲಕ್ಷದ ಅರವತ್ತು ಸಾವಿರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಹಾಗೂ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

* ಮಂಗಳೂರು: ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ; ಎನ್ಐಎ ಅಧಿಕಾರಿಗಳ ದಾಳಿ

ಮಂಗಳೂರು: ಸುಹಾಸ ಶೆಟ್ಟಿ ಹತ್ಯೆಗೆ ಸಂಬಂಧಿಸಿದಂತೆ ಶನಿವಾರದಂದು ಬಜ್ಪೆ ಹಾಗೂ ಸೂರತ್ಕಲ್ ವ್ಯಾಪ್ತಿಯ ಸುಮಾರು ಹದಿಮೂರು ಮನೆಗಳ ಮೇಲೆ ಎನ್ಐಎ ಅಧಿಕಾರಿಗಳ ತಂಡ ದಾಳಿ ನಡೆಸಿದೆ.‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳ ಮನೆಯ ಮೇಲೆ ದಾಳಿ ನಡೆಸಿ, ಮಾಹಿತಿಯನ್ನು ಕಲೆಹಾಕಿದರು ಎನ್ನಲಾಗಿದೆ.

* ಬೆಳ್ತಂಗಡಿ: ಶಿಶಿಲ ದೇವಾಲಯದಲ್ಲಿ ಮೀನು ಹಿಡಿಯಲು ಬಂದವರಿಗೆ ಪೊಲೀಸರಿಂದ ಎಚ್ಚರಿಕೆ

ಬೆಳ್ತಂಗಡಿ: ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶಿಶಿಲ ದೇವಾಲಯದ ಎದುರಿನ ನದಿಯಲ್ಲಿ ಸಾವಿರಾರು ಮೀನುಗಳಿದ್ದು, ಅವು ದೇವರ ಮೀನುಗಳಾಗಿರುವುದರಿಂದ ಹಿಡಿಯಲು ಅವಕಾಶವಿಲ್ಲ. ಅಷ್ಟೇ ಅಲ್ಲದೆ ದೇವಾಲಯದ ಸುತ್ತಮುತ್ತ ಎರಡು ಕಿಲೋಮೀಟರ್ ವ್ಯಾಪ್ತಿಯವರೆಗೂ ಮೀನುಗಾರಿಕೆಯನ್ನು ನಿಷೇಧಿಸಲಾಗಿದೆ. ಆದರೆ ಕಳೆದ ರಾತ್ರಿ ಇಬ್ಬರು ವ್ಯಕ್ತಿಗಳು ದೇವಾಲಯದ ಮೀನುಗಳನ್ನು ಬಲೆ ಹಾಕಿ ಹಿಡಿಯಲು ಬಂದಿದ್ದಾರೆ. ದೇವಾಲಯದ ಬಳಿ ಬೆಳಕನ್ನು ಕಂಡ ಸ್ಥಳೀಯರು ಅಲ್ಲಿಗೆ ಆಗಮಿಸಿದ್ದಾರೆ, ಸಂಗತಿ ತಿಳಿದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮೀನುಗಳನ್ನು ಹಿಡಿಯದಂತೆ ಎಚ್ಚರಿಕೆ ನೀಡಿ ವಾಪಸ್ ಕಳಿಸಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.

* ಕಾಪು: ಟೆಂಪೋ ಸ್ಕೂಟರ್ ಡಿಕ್ಕಿ; ಬೈಕ್ ಸವಾರನ ಸಾವು

ಕಾಪು: ಮಂಗಳೂರು ಕಡೆಯಿಂದ ಉಡುಪಿಗೆ ತೆರಳುತ್ತಿದ್ದ ಸ್ಕೂಟರ್ ಗೆ, ಟೆಂಪೋವೊಂದು ಬಂದು ಡಿಕ್ಕಿ ಹೊಡೆದ ಘಟನೆ ಕಾಪು ಶ್ರೀ ಕಾಳಿಕಾಂಬ ಆಟೋ ವರ್ಕ್ಸ್ ಮುಂದೆ ಶನಿವಾರ ಸಂಜೆ ನಡೆದಿದೆ.‌ ಡಿಕ್ಕಿ ಹೊಡೆದ ಪರಿಣಾಮವಾಗಿ ಸ್ಕೂಟರ್ ಸವಾರ ಸೋಮನಾಥ್ ಎನ್ನುವವರು ಗಂಭೀರವಾಗಿ ಗಾಯಗೊಂಡಿದ್ದರಿಂದ ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

* ಪುತ್ತೂರು: ರಸ್ತೆಯಲ್ಲಿ ಬಿದ್ದಿದ್ದ ಹಾಸಿಗೆ; ಅನುಮಾನಕ್ಕೆ ತೆರೆಯೆಳೆದ ಪೊಲೀಸರು.

ಪುತ್ತೂರು: ಸೇಡಿಯಾಪು ಬಳಿಯ ಕಡಂಬು ಎಂಬಲ್ಲಿ, ರಸ್ತೆಯ ಬದಿಯಲ್ಲಿ ಹಾಸಿಗೆಯೊಂದು ಸುರುಳಿಯಾಗಿ, ಸುತ್ತಿದ್ದು ಕೆಲವು ಗಂಟೆಗಳ ಕಾಲ ಸ್ಥಳೀಯರ ಕುತೂಹಲಕ್ಕೆ ಕಾರಣವಾಗಿತ್ತು. ಅಲ್ಲದೆ ಯಾರಾದರೂ ಕೊಲೆ ಮಾಡಿ ಮೃತದೇಹವನ್ನು ಇದರಲ್ಲಿ ಹಾಕಿ ಇಟ್ಟಿರಬಹುದು ಎಂಬ ಭಯವೂ ಆವರಿಸಿಕೊಂಡಿತ್ತು. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಹಾಸಿಗೆಯನ್ನು ಬಿಚ್ಚಿ ನೋಡಿದಾಗ ಏನೂ ಇಲ್ಲದ್ದು ತುಸು ಸಮಾಧಾನವನ್ನುಂಟು ಮಾಡಿತು. ಜನರ ಊಹಾಪೋಹಗಳಿಗೆ ಈ ಮೂಲಕ ತೆರೆಯೆಳೆಯಲಾಯಿತು.

* ಉಳ್ಳಾಲ: ಸರ್ಕಾರಿ ಬಸ್ ಕಂಡಕ್ಟರ್ ಜೀವ ಉಳಿಸಿದ ಚಾಲಕ.

ಉಳ್ಳಾಲ: ಮುಡಿಪುವಿನಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ, ಸರ್ಕಾರಿ ಬಸ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂಜೀವ್ ಅವರು ಪ್ರಯಾಣಿಕರಿಗೆ ಟಿಕೆಟ್ ನೀಡುತ್ತಿದ್ದ ಸಂದರ್ಭದಲ್ಲಿ ತಲೆಸುತ್ತಲಾರಂಭಿಸಿದ್ದು, ಕಂಬಳಪದವು ತಲುಪುತ್ತಿದ್ದಂತೆ ಪ್ರಜ್ಞೆ ತಪ್ಪಿದ್ದಾರೆ. ಆಗ ಅದೇ ಬಸ್ ಅನ್ನು ಚಲಾಯಿಸುತ್ತಿದ್ದ ಅವೀಶ್ ಮದರನ್ ಎನ್ನುವ ಚಾಲಕ ಕಂಡಕ್ಟರ್ ನ ಚಿಂತಾಜನಕ ಸ್ಥಿತಿಯನ್ನು ಕಂಡು, ಕೂಡಲೇ ದೇರಳಕಟ್ಟೆ ಕಣಚೂರು ಆಸ್ಪತ್ರೆಗೆ ಬಸ್ ಅನ್ನು ತಂದು ಅವರನ್ನು ದಾಖಲಿಸಿದ್ದಾರೆ.‌ ಚಾಲಕ ಅವೀಶ್ ಅವರ ಸಮಯ ಪ್ರಜ್ಞೆಯಿಂದ ಕಂಡಕ್ಟರ್ ಸಂಜೀವ್ ಬದುಕುಳಿದಿದ್ದು, ಸಾರ್ವಜನಿಕರಿಂದ ಅಪಾರ ಪ್ರಶಂಸೆ ವ್ಯಕ್ತವಾಗಿದೆ. ಅವೀಶ್ ಅವರನ್ನು ಆಸ್ಪತ್ರೆಯ ವತಿಯಿಂದ ಸನ್ಮಾನಿಸಿ ಗೌರವವನ್ನು ಸೂಚಿಸಿದ್ದಾರೆ.‌

* ಸುಳ್ಯ: ಆಪ್ತ ಕಾರ್ಯದರ್ಶಿಗಳ ನೇಮಕ

ಸುಳ್ಯ: ವಿಧಾನ ಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಅವರು ಸುಳ್ಯ ಮೂಲದ ಹಾಗೂ ಕೇಂದ್ರ ಸಚಿವರಾದ ಡಿ.ವಿ.‌ಸದಾನಂದ ಗೌಡ ಅವರ ಆಪ್ತ ಕಾರ್ಯದರ್ಶಿಯಾಗಿ ಹದಿನೈದು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಜಯಪ್ರಕಾಶ್ ಎಣ್ಣೆ ಮಜಲು ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪಂಚಾಯತ್ ಅಭಿವೃದ್ಧಿಯ ಅಧಿಕಾರಿಯಾಗಿ ಕಾರ್ಯನಿರ್ವಹಿಸಿ ಅನುಭವವುಳ್ಳ ಅವಿನಾಶ್ ಬಿ. ಆರ್ ಅವರನ್ನು ಆಪ್ತ ಕಾರ್ಯದರ್ಶಿಗಳನ್ನಾಗಿ ನೇಮಕ ಮಾಡಿದ್ದಾರೆ.

•ಉಡುಪಿ: ನ್ಯಾಯಾಲಯವನ್ನು ನಿಂದಿಸಿದ ವಕೀಲರು

ಉಡುಪಿ: ಮಾರಕಾಸ್ತ್ರಗಳಿಂದ ಹೊಡೆದಾಡಿಕೊಂಡ, ಮಲ್ಪೆ ಪೊಲೀಸ್ ಠಾಣೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದ ವೇಳೆ ಆರೋಪಿ ಪರ ವಕೀಲರಾದ ಮೊಹಮ್ಮದ್ ಇಕ್ಬಾಲ್ ಅವರು ಉದ್ದೇಶಪೂರ್ವಕವಾಗಿ ಕಾನೂನುಬಾಹಿರವಾದ ಅಸಂಬದ್ಧ, ಅವಾಚ್ಯ ಶಬ್ದಗಳನ್ನು ಬಳಸಿ, ವಿಚಾರಣೆಗೆ ಅಡಚಣೆಯನ್ನುಂಟು ಮಾಡಿದ್ದಲ್ಲದೆ, ನ್ಯಾಯಾಧೀಶರನ್ನು ನಿಂದಿಸಿ ಅಪಮಾನಗೊಳಿಸಿದ್ದಾರೆ. ಆಗ ನ್ಯಾಯಾಧೀಶರು ಘಟನೆಗೆ ಸಂಬಂಧಿಸಿದಂತೆ ಐಪಿಸಿ ಕಾಲಂ 228 ಅಥವಾ ಬಿಎನ್ಎಸ್ ಕಾಲಂ 267ರ ಅನ್ವಯ ಪ್ರಕರಣವನ್ನು ದಾಖಲಿಸಿ, ವಕೀಲರನ್ನು ಬಂಧಿಸಲು ಪೊಲೀಸರಿಗೆ ಆದೇಶ ಹೊರಡಿಸುತ್ತಾರೆ. ಬಳಿಕ ತಪ್ಪಿನ ಅರಿವಾದ ವಕೀಲರು ಕ್ಷಮಾಪಣಾ ಪತ್ರವನ್ನು ಬರೆದು, ನ್ಯಾಯಾಲಯಕ್ಕೆ ಒಪ್ಪಿಸುವ ಮೂಲಕ ಶಿಕ್ಷೆಯಿಂದ ಪಾರಾಗಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

* ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಗುಡ್ಡ ಕುಸಿತದ ಭೀತಿ

ಬಂಟ್ವಾಳ: ರಾಜ್ಯಾದ್ಯಂತ ಮಳೆಯ ಪ್ರಮಾಣ ಕೊಂಚ ಕಡಿಮೆಯಾಗಿದ್ದರೂ, ಹಿಂದಿನ ಮಳೆಯಿಂದ ಉಂಟಾದ ಸಮಸ್ಯೆಗಳಿಂದ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಳ್ಳಲಾಗಿಲ್ಲ. ಇದಕ್ಕೆ ನಿದರ್ಶನ ಎಂದರೆ ಮೈಸೂರು ಬಂಟ್ವಾಳ ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಗುಡ್ಡ ಕುಸಿತದ ಭೀತಿ ಉಂಟಾಗಿದೆ.‌ ಈಗಾಗಲೇ ರಸ್ತೆಯ ಅರ್ಧಭಾಗದವರೆಗೂ ಸುಮಾರು ಇಪ್ಪತ್ತು ಅಡಿಗಳಷ್ಟು ಮಣ್ಣು ಜಾರಿಕೊಂಡು ಬಂದಿದ್ದು, ಒಂದು ಕಡೆಯಿಂದ ಮಾತ್ರ ವಾಹನಗಳು ಸಂಚರಿಸುವಂತಹ ಸನ್ನಿವೇಶ ಎದುರಾಗಿದೆ.‌ ಮತ್ತೆ ಮಳೆ ಪ್ರಾರಂಭಗೊಂಡು, ಅಧಿಕ ಪ್ರಮಾಣದಲ್ಲಿ ಸುರಿದರೆ ರಸ್ತೆ ಸಂಪೂರ್ಣವಾಗಿ ಬಂದ್ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಹೆದ್ದಾರಿ ಉಪ ವಿಭಾಗದ ಅಧಿಕಾರಿಗಳು ಆಗಮಿಸಿ, ಪರಿಶೀಲನೆ ನಡೆಸಿದರು.

* ಕುಂದಾಪುರ: ಖ್ಯಾತ ಮಹಿಳಾ ಲೇಖಕಿ ವೈದೇಹಿ ಅವರಿಗೆ ಪತಿ ವಿಯೋಗ

ಕುಂದಾಪುರ: ವೈದೇಹಿ ಕಾವ್ಯನಾಮದ ಮೂಲಕ ಕನ್ನಡ ಸಾಹಿತ್ಯದಲ್ಲಿ ಚಿರಪರಿಚಿತರಾದ ಜಾನಕಿ ಶ್ರೀನಿವಾಸಮೂರ್ತಿ ಅವರ ಪತಿ ಕೆ.ಎಲ್. ಶ್ರೀನಿವಾಸಮೂರ್ತಿ ಅವರು ಇಂದು ಬೆಳಿಗ್ಗೆ ಹೃದಯಘಾತದಿಂದ ನಿಧನರಾಗಿದ್ದಾರೆ. ಮೂಲತಃ ಶಿವಮೊಗ್ಗ ಜಿಲ್ಲೆಯವರಾದ ಶ್ರೀನಿವಾಸ ಮೂರ್ತಿ ಅವರು ಕುಂದಾಪುರದ ಅಳಿಯ. ನಿವೃತ್ತಿಯ ಬಳಿಕ ಪತ್ನಿ ವೈದೇಹಿ ಅವರೊಂದಿಗೆ ಮಣಿಪಾಲದ ಇರುವಂತಿಗೆ ಮನೆಯಲ್ಲಿ ವಾಸವಾಗಿದ್ದರು. ಶ್ರೀನಿವಾಸಮೂರ್ತಿಯವರು ಪತ್ನಿ ವೈದೇಹಿ ಮತ್ತು ಲೇಖಕಿ ಪುತ್ರಿಯರಾದ ನಯನ ಕಶ್ಯಪ್ ಮತ್ತು ಪಲ್ಲವಿ ರಾವ್ ಅವರನ್ನು ಅಗಲಿದ್ದಾರೆ.

Categories
ಟೆಕ್

ಮನುಷ್ಯ ರೋಬೋಟ್ ಆಗ್ತಿದ್ದಾನೆ ಹುಷಾರ್..!

ಡಿಜಿಟಲ್ ಪ್ರಪಂಚ

ಮನುಷ್ಯ ರೋಬೋಟ್ ಆಗ್ತಿದ್ದಾನೆ ಹುಷಾರ್..!

– ಸಾಮಾಜಿಕ ಜಾಲತಾಣವೆಂಬ ಜಾಲದೊಳಗೆ ಸಿಕ್ಕಿಬಿದ್ದ ಜನ!
– ಯುವ ಜನತೆ ಭವಿಷ್ಯಕ್ಕೆ ಒಳಿತೋ ಕೆಡಕೋ..?

ವಿಶೇಷ ಲೇಖನ: ಸುರಕ್ಷಾ ಮಾನಪ್ಪ ತೋರಳಿ

ಸಾಮಾಜಿಕ ಜಾಲತಾಣದ ಒಳಹೊಕ್ಕು ಜೀವನದ ದಾರಿ ಬದಲಾಗಿದೆ. ನಮ್ಮನ್ನ ನಾವು ಅರಿಯುವುದರಲ್ಲಿ ಎಡವುತ್ತಿದ್ದೇವೆ. ಗೂಗಲ್ ಗುಂಗಿನಲ್ಲಿ ನಿಘಂಟುಗಳ ಗುರುತೇ ಮರೆಯಾಗಿದೆ. ಅತೀ ಸರಳ ದಾರಿ ಹುಡುಕಿ ಹೊರಡುವ ಪರಿಯಲ್ಲಿ ಅತ್ಯದ್ಬುತಗಳ ಅರಿವೇ ಅಳಿಸಿ ಹೋಗಿದೆ. ಬಾಂಧವ್ಯ ಮರೆಯಾಗಿದೆ. ಸಂಪ್ರದಾಯ ಕಳೆದು ಹೋಗಿದೆ.
ನಿಜವಾದ ಬದುಕಿನ ದುಃಖ ಸಂತೋಷ ಜಗಳ ಅಸೂಯೆ ಎಲ್ಲವನ್ನ ಹಿಂದಿನ ಪೀಳಿಗೆಗಳಷ್ಟೇ ಕಂಡಿದೆ. ಈಗ ಎಲ್ಲಾ ಭಾವನೆಗಳು ಕೇವಲ ಸ್ಟೇಟಸ್ ಸ್ಟೋರಿ ಗಳ ಮೂಲಕವೇ ಹೊರಬೀಳುತ್ತೆ..!. ಹಾಗಾದ್ರೆ ನಾವು ಎತ್ತ ಸಾಗುತ್ತಿದ್ದೇವೆ..!?.
ಜೊತೆಗೂಡಿ ಆಡಿದ ಮಾತು, ಒಟ್ಟಾಗಿ ಸೇರಿ ಮಾಡಿದ ಕೆಲಸ. ಇವೆಲ್ಲವೂ ಹೊತ್ತು ಸಾಗಿದ್ದೇ ವಿಸ್ಮಯ.! ಕೂಡು ಕುಟುಂಬ ಎಂದರೆ ಮರೆಯಾಗಿದೆ. ಕೇವಲ ಹಬ್ಬ ಹರಿದಿನಕ್ಕಷ್ಟೇ ಜೊತೆಗೂಡುವ ಸಂಬಂಧಗಳು ಕೇವಲ ಒಂದು ದಿನದ ಸಂತಸವಾದರೆ ಹಿಂದೆ ಜೊತೆಯಾಗಿ ಕಾಲ ಕಳೆಯುತ್ತಿದವರ ಬದುಕು ನಿಜಕ್ಕೂ ಎಷ್ಟು ಸುಂದರ ಎಂದೆನಿಸುತ್ತೆ. ಹಿಂದೆ ಕಡಿಮೆ ಖರ್ಚು ಅತೀ ಸಂತಸವಾದ ಬದುಕಾದರೆ, ಇಂದು ಅತೀ ಹೆಚ್ಚು ಖರ್ಚು ಮಾಡುವುದು ಸಂತಸದ ಬದುಕು ಎಂದು ಬಿಂಬಿಸುತ್ತಿದೆ ಇಂದಿನ ಡಿಜಿಟಲ್ ಪ್ರಪಂಚ..!
ನಮ್ಮವರು ತಮ್ಮವರು ಎಂಬುದು ಕೇವಲ ಮಾತುಗಳಲ್ಲಷ್ಟೇ ಕಾಣಬಹುದು. ಇಂದಿನ ಯುಗವನ್ನ ಗಮನಿಸಿದರೆ ಖಂಡಿತ ಇನ್ನೂ ಹೆಚ್ಚಿನ ಅಚ್ಚರಿ ಮುಂದೆ ಕಾಣುತ್ತೇವೆ. ಆದರೆ ಅದು ಕೇವಲ ಅಚ್ಚರಿ ಅಷ್ಟೇ.. ಓಡುವ ಈ ಯುಗದಲ್ಲಿ ಸುಸ್ತಾಗಿ ಕುಳಿತಂತಿದೆ ನಮ್ಮ ಪೀಳಿಗೆ.

ಸಾಮಾಜಿಕ ಜಾಲತಾಣವು ಒಳ್ಳೆ ಸಂದೇಶವನ್ನು ಸಹ ನೀಡಿದೆ ಆದರೆ ನಾವು ಬಳಸಿಕೊಂಡಂತೆ.! ಅತಿಯಾದರೆ ಅಮೃತವು ವಿಷ ಎಂಬಂತೆ ಇಂದಿನ ದಿನಗಳಲ್ಲಿ ಜನರು ಅತಿಯಾಗಿ ಅವಲಂಬಿತರಾಗಿ ತಮ್ಮನ್ನು ತಾವೇ ಹಿಂದುಳಿಸಿಕೊಂಡಂತಾಗಿದೆ. ಕ್ರಿಯಾಶೀಲತೆ ಅಂದರೆ ಮೊಬೈಲ್ ಅನ್ನುವಷ್ಟು ಕೆಟ್ಟ ಹಂತಕ್ಕೆ ನಮ್ಮ ಯುವ ಜನತೆ ತಲುಪಿದ್ದಾರೆ.
ಅಷ್ಟೇ ಅಲ್ಲದೆ ತಮಗೇ ಅರಿವಿಲ್ಲದೆ ಅನೇಕರು ಮಾನಸಿಕ ಒತ್ತಡ, ಖಿನ್ನತೆ , ಏಕಾಂತ ಭಾವನೆಗಳನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಯಾರದೋ ದಿನಚರಿ ನೋಡುವ ಭರದಲ್ಲಿ ತಮ್ಮ ಗುರಿಯನ್ನೇ ಮರೆತಿದ್ದಾರೆ. ಯಾರನ್ನೋ ಹೋಲಿಕೆ ಮಾಡಿಕೊಂಡು ಇರುವ ಜೀವನ ಕಳೆದುಕೊಳ್ಳುತ್ತಿದ್ದಾರೆ. ಯಾವುದೇ ಸಂಬಂಧಗಳಿಗೆ ಬೆಲೆ ಇಲ್ಲದಂತಾಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಬಂದಿದ್ದೆಲ್ಲ ನಿಜ ಅನ್ನುವ ದುಸ್ಥಿತಿ ಎದುರಾಗಿದೆ.

ಗುಡಿಯಲ್ಲಿರಬೇಕಿದ್ದ ಭಕ್ತಿ ಸ್ಟೋರಿ ಸ್ಟೇಟಸ್ ಮೂಲಕ ಹೊರಹೊಮ್ಮುತ್ತಿದೆ. ನಿಶ್ಯಬ್ಧ ನೆಮ್ಮದಿಯಿಂದ ಕೂಡಿದ ದೇವಸ್ಥಾನದ ಮೂಲೆ ಮೂಲೆಯು ಪೋಟೋ ಕ್ಲಿಕ್ಕಿಸುವ ಸದ್ದನ್ನಷ್ಟೇ ಗೋಚರಿಸುತ್ತಿದೆ.
ನಿಜವಾದ ಮಾನವೀಯತೆ ಮರೆಯಾಗಿ ರೀಲ್ಸ್ ಮಾಡಲು ಶೋಕಿ ಮಾಡುವುದು ಹೆಚ್ಚಾಗಿದೆ.

ದಾನ ಧರ್ಮ ಎಂಬುದು ಪ್ರಚಾರ ಪ್ರಸಾರ ಎಂಬಂತಾಗಿದೆ. ಹಿಂದೆ ಹಿರಿಯರಿಂದ ಶಾಸ್ತ್ರ ಸಂಪ್ರದಾಯಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದ ನಾವು ಈಗ ಪ್ರತಿಯೊಂದಕ್ಕೂ ಗೂಗಲ್ ಮೊರೆ ಹೋಗುವುದನ್ನು ಕಂಡರೆ ನಿಜಕ್ಕೂ ಅಚ್ಚರಿ..

ಹೊಸ ಹೊಸ ತಂತ್ರಜ್ಞಾನದ ಅಳವಡಿಕೆಯಿಂದ ಬಹುಶಃ ಮುಂದಿನ ದಿನಗಳಲ್ಲಿ ಜನರು ಸ್ವಂತಿಕೆ ಎಂಬುದೇ ಮರೆತು ಬದುಕುವ ಪರಿಸ್ಥಿತಿಯೂ ಬರಬಹುದು. ಯೋಚನಾಶೀಲ ಅಥವಾ ಬುದ್ಧಿಶಕ್ತಿಯಲ್ಲೂ ಹಿಂದಿನ ಪೀಳಿಗೆಗಿಂತ ಅಪಾರಮಟ್ಟದ ಹಿಂದುಳಿಯುವಿಕೆಯನ್ನು ಸಹ ಗಮನಿಸಬಹುದು. ಮನುಷ್ಯ ರೋಬೋಟ್ ಆಗ್ತಿದ್ದಾನೆ ಹುಷಾರ್..!

Categories
ದಿನ ರಾಶಿ ಭವಿಷ್ಯ

ಈ ದಿನದ ರಾಶಿ ಭವಿಷ್ಯ ಹೇಗಿದೆ?

ಈ ದಿನದ ರಾಶಿ ಭವಿಷ್ಯ ಹೇಗಿದೆ?
– ಯಾವ ರಾಶಿಯವರಿಗೆ ಲಾಭ? ಯಾವ ರಾಶಿಯವರಿಗೆ ನಷ್ಟ?

NAMMUR EXPRESS NEWS
ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು?

** ಮೇಷ ರಾಶಿ :
ಇಂದು ಮೇಷ ರಾಶಿಯವರು ನಿಮ್ಮ ವೈವಾಹಿಕ ಸಮಸ್ಯೆಗಳು ಮತ್ತು ಕಚೇರಿ ಸಮಸ್ಯೆಗಳನ್ನು ಎಚ್ಚರಿಕೆಯಿಂದ ನಿಭಾಯಿಸಿ. ನಿಮ್ಮ ಕೆಲಸದ ಮೇಲೆ ಕೇಂದ್ರೀಕರಿಸಿ. ನೀವು ಇಂದು ನಿಮ್ಮ ಹಣವನ್ನು ಬುದ್ಧಿವಂತಿಕೆಯಿಂದ ನಿರ್ವಹಿಸಬೇಕಾಗುತ್ತದೆ. ನಿಮ್ಮ ಆರೋಗ್ಯ ಇಂದು ಉತ್ತಮವಾಗಿರುತ್ತದೆ. ಪ್ರತಿಯೊಂದು ಸಂಬಂಧವು ಕಾಲಕಾಲಕ್ಕೆ ಸವಾಲುಗಳನ್ನು ಎದುರಿಸುತ್ತದೆ ಆದರೆ ನಾವು ಅವುಗಳನ್ನು ಹೇಗೆ ಎದುರಿಸುತ್ತೇವೆ ಎಂಬುದು ಮುಖ್ಯ.

** ವೃಷಭ ರಾಶಿ :
ಇಂದು ನಿಮ್ಮ ಆತ್ಮವಿಶ್ವಾಸವನ್ನು ತೋರಿಸುವಂತೆ ನಿಮ್ಮ ಮುಖದಲ್ಲಿ ನಗುವನ್ನು ಇಟ್ಟುಕೊಳ್ಳಿ. ಇಂದು ಪ್ರೀತಿಯ ವಿವಿಧ ಅಂಶಗಳನ್ನು ಅನ್ವೇಷಿಸಲು ಶಾಂತವಾಗಿರಿ. ಕಚೇರಿಯಲ್ಲಿ ನಿಮ್ಮ ಉತ್ಪಾದಕತೆ ಹೆಚ್ಚಾಗಿರುತ್ತದೆ. ಇಂದು ಆರೋಗ್ಯ ಮತ್ತು ಆರ್ಥಿಕ ಜೀವನ ಎರಡೂ ಉತ್ತಮವಾಗಿರುತ್ತದೆ. ನೀವು ಅಗತ್ಯ ಹೂಡಿಕೆ ನಿರ್ಧಾರಗಳನ್ನು ಚಿಂತನಶೀಲವಾಗಿ ತೆಗೆದುಕೊಳ್ಳಬಹುದು. ಸವಾಲುಗಳು ಜೀವನದ ಸಹಜ ಭಾಗವಾಗಿದೆ, ಆದರೆ ಅವುಗಳನ್ನು ಹೇಗೆ ಜಯಿಸುವುದು ಎಂದು ತಿಳಿಯಿರಿ.

** ಮಿಥುನ ರಾಶಿ :
ಇಂದು ನಿಮಗೆ ಶುಭ ದಿನವಾಗಲಿದೆ. ದಿನವನ್ನು ಇನ್ನಷ್ಟು ಉತ್ತಮಗೊಳಿಸಲು, ಇಂದು ನಿಮ್ಮ ಪ್ರೀತಿಯ ಜೀವನದ ಮೇಲೆ ಕೇಂದ್ರೀಕರಿಸಿ. ಕೆಲಸದಲ್ಲಿ ಉತ್ಪಾದಕರಾಗಿರಿ ಮತ್ತು ಎಲ್ಲಾ ನಿಯೋಜಿಸಲಾದ ಕಾರ್ಯಗಳನ್ನು ಸರಿಯಾಗಿ ಪೂರ್ಣಗೊಳಿಸಿ. ನಿಮ್ಮ ಹಣಕಾಸು ಮತ್ತು ಆರೋಗ್ಯ ಎರಡೂ ದಿನವಿಡೀ ಉತ್ತಮವಾಗಿರುತ್ತದೆ. ಸಕಾರಾತ್ಮಕ ಸಂಬಂಧಗಳನ್ನು ಕಾಪಾಡಿಕೊಳ್ಳುವುದು ದೀರ್ಘಾವಧಿಯಲ್ಲಿ ನಿಮಗೆ ಪ್ರಯೋಜನಕಾರಿಯಾಗಿದೆ.

** ಕರ್ಕಾಟಕ ರಾಶಿ :
ಇಂದು ಪ್ರಣಯ ಸಂಬಂಧಿ ಸಮಸ್ಯೆಗಳಿಗೆ ಇಂದು ಪರಿಹಾರ ಕಂಡುಕೊಳ್ಳಿ. ನಿಮ್ಮ ಕೆಲಸದ ಬಗ್ಗೆಯೂ ಗಮನವಿರಲಿ. ಪ್ರಮುಖ ವಿತ್ತೀಯ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿ ಮತ್ತು ನಿಮ್ಮ ಆರೋಗ್ಯವೂ ದಿನವಿಡೀ ಉತ್ತಮವಾಗಿರುತ್ತದೆ. ವಿಷಕಾರಿ ಸಂಬಂಧದಲ್ಲಿರುವವರು, ನಿಮ್ಮ ಸಂಗಾತಿಯೊಂದಿಗೆ ಮುಖಾಮುಖಿಯಾಗಿ ವಿಷಯಗಳನ್ನು ಚರ್ಚಿಸಲು ನೀವು ಬಯಸದಿದ್ದರೂ ಸಹ, ಶಾಂತ ಮತ್ತು ಸಕಾರಾತ್ಮಕ ರೀತಿಯಲ್ಲಿ ಪ್ರತ್ಯೇಕಿಸಲು ಪ್ರಯತ್ನಿಸಿ.

** ಸಿಂಹ ರಾಶಿ :
ಇಂದು ಸಿಂಹ ರಾಶಿಯವರು ನಿಮ್ಮ ವೃತ್ತಿಪರ ಸಂಬಂಧವನ್ನು ಗಟ್ಟಿಯಾಗಿರಿಸಲು ಸಮಸ್ಯೆಗಳನ್ನು ಪರೀಕ್ಷಿಸಿ. ಉದ್ಯೋಗ ಮತ್ತು ವೈಯಕ್ತಿಕ ಜೀವನದ ನಡುವೆ ಸಮತೋಲನವನ್ನು ಕಾಪಾಡಿಕೊಳ್ಳಿ ಮತ್ತು ಎಲ್ಲಾ ವೃತ್ತಿಪರ ಗುರಿಗಳನ್ನು ಸಾಧಿಸಲು ಪ್ರಯತ್ನಿಸಿ. ಇಂದು ಯಾವುದೇ ಸಮಸ್ಯೆಗಳನ್ನು ಎದುರಿಸಲು ಅವುಗಳನ್ನು ಹೊರದಬ್ಬುವ ಬದಲು, ಒಂದು ಹೆಜ್ಜೆ ಹಿಂದಕ್ಕೆ ಇರಿಸಿ ಮತ್ತು ಭಾವನೆಗಳನ್ನು ಶಾಂತಗೊಳಿಸಲು ಸಮಯವನ್ನು ನೀಡಿ.

** ಕನ್ಯಾ ರಾಶಿ :
ಇಂದು ನೀವು ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದ ಬಗ್ಗೆ ಸ್ವಲ್ಪ ಚಿಂತಿತರಾಗಬಹುದು. ದೇಹಕ್ಕೆ ಅಗತ್ಯವಿರುವ ಕಾರಣ ವಿಶ್ರಾಂತಿ ಪಡೆಯಿರಿ. ಆರೋಗ್ಯವು ಉತ್ತಮವಾಗಿರುತ್ತದೆ ಆದರೆ ಭಾರವಾದ ವಸ್ತುಗಳನ್ನು ಎತ್ತುವುದನ್ನು ತಪ್ಪಿಸಿ. ಇಂದಿನ ಡಿಜಿಟಲ್ ಯುಗದಲ್ಲಿ, ನಿಮ್ಮ ವೈಯಕ್ತಿಕ ಮಾಹಿತಿಯನ್ನು ರಕ್ಷಿಸಲು ಆನ್‌ಲೈನ್ ಭದ್ರತೆಗೆ ಆದ್ಯತೆ ನೀಡುವುದು ಅವಶ್ಯಕ. ಇಂದು ಹಣದ ಕೊರತೆ ಇರುವುದಿಲ್ಲ. ಆದರೆ ಒತ್ತಡದಿಂದ ದೂರವಿರಿ.

** ತುಲಾ ರಾಶಿ :
ಇಂದು ನಿಮ್ಮ ಸುತ್ತಲೂ ಸಕಾರಾತ್ಮಕತೆ ಇರಲಿದೆ. ಪ್ರೀತಿಯನ್ನು ವ್ಯಕ್ತಪಡಿಸಲು ಮತ್ತು ಅದನ್ನು ಮರಳಿ ಪಡೆಯಲು ಇಂದು ಶುಭ ದಿನ. ಎಲ್ಲಾ ವ್ಯವಹಾರ ಗುರಿಗಳನ್ನು ಪೂರೈಸಲು ಜಾಗರೂಕರಾಗಿರಿ. ಇಂದು ನಿಮ್ಮ ಸಂಪತ್ತು ಮತ್ತು ಆರೋಗ್ಯ ಎರಡೂ ಉತ್ತಮವಾಗಿದೆ. ಇತ್ತೀಚೆಗೆ ನೀವು ನಿಮ್ಮ ಸ್ವಂತ ಅಗತ್ಯಗಳ ಮೇಲೆ ಕೇಂದ್ರೀಕರಿಸುವ ಬದಲು ಇತರರನ್ನು ಮೆಚ್ಚಿಸಲು ಹೆಚ್ಚು ಶಕ್ತಿಯನ್ನು ವ್ಯಯಿಸುತ್ತಿದ್ದೀರಿ. ಈ ನಿಮ್ಮ ನಡವಳಿಕೆಯನ್ನು ಬದಲಾಯಿಸಿಕೊಳ್ಳಿ.

** ವೃಶ್ಚಿಕ ರಾಶಿ :
ಇಂದು ನಿಮ್ಮ ಪ್ರೇಮ ಜೀವನದಲ್ಲಿ ಸಂತೋಷವಾಗಿರಿ. ಹೂಡಿಕೆ ನಿರ್ಧಾರಗಳನ್ನು ಚಿಂತನಶೀಲವಾಗಿ ತೆಗೆದುಕೊಳ್ಳಿ. ಹಣಕಾಸು ಮತ್ತು ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸುವುದು ಒಳ್ಳೆಯದು. ಹಣಕಾಸಿನ ವಿಚಾರದಲ್ಲಿ ಯಾರನ್ನೂ ಕುರುಡಾಗಿ ನಂಬಬೇಡಿ. ಆರ್ಥಿಕ ನಷ್ಟ ಉಂಟಾಗಬಹುದು. ಇಂದು ನಿಮ್ಮ ಕನಸುಗಳು ನನಸಾಗಲಿವೆ. ವೃತ್ತಿ ಜೀವನದಲ್ಲಿ ಉತ್ತಮ ಪ್ರಗತಿ ಕಾಣುವಿರಿ. ನೀವು ಕುಟುಂಬದೊಂದಿಗೆ ವಿಹಾರವನ್ನು ಯೋಜಿಸಬಹುದು. ಇದು ಕೌಟುಂಬಿಕ ಜೀವನದಲ್ಲಿ ಸಂತೋಷವನ್ನು ತರುತ್ತದೆ.

** ಧನಸ್ಸು ರಾಶಿ :
ಇಂದು ಉದ್ಯೋಗ ಮತ್ತು ವ್ಯಾಪಾರಕ್ಕೆ ವಾತಾವರಣವು ಅನುಕೂಲಕರವಾಗಿರುತ್ತದೆ. ಬಾಸ್ ನಿಮ್ಮ ಕೆಲಸವನ್ನು ಮೆಚ್ಚುತ್ತಾರೆ. ಉದ್ಯೋಗದಲ್ಲಿ ಬಡ್ತಿ ಸಾಧ್ಯತೆ ಹೆಚ್ಚಲಿದೆ. ನೀವು ಕಿರಿಯ ಸಹೋದರ ಸಹೋದರಿಯರಿಗೆ ಸಹಾಯ ಮಾಡಬೇಕಾಗಬಹುದು. ವ್ಯಾಪಾರಕ್ಕೆ ಸಂಬಂಧಿಸಿದಂತೆ ಪ್ರಯಾಣಿಸುವ ಅವಕಾಶವಿರುತ್ತದೆ. ನೀವು ಹೊಸ ಆಸ್ತಿ ಅಥವಾ ವಾಹನವನ್ನು ಖರೀದಿಸಲು ಯೋಚಿಸಬಹುದು. ಅವಿವಾಹಿತ ಜನರು ವಿಶೇಷ ವ್ಯಕ್ತಿಯನ್ನು ಭೇಟಿಯಾಗುತ್ತಾರೆ.

** ಮಕರ ರಾಶಿ :
ಇಂದು ಮಕರ ರಾಶಿಯವರು ನಿಮ್ಮ ದೇಹ ಮತ್ತು ಮನಸ್ಸಿನ ಅಗತ್ಯಗಳನ್ನು ಆಲಿಸುವುದು ಮುಖ್ಯ. ನಿಮ್ಮ ಮೇಲೆ ಹೆಚ್ಚು ಒತ್ತಡ ಹೇರುವುದನ್ನು ತಪ್ಪಿಸಿ ಮತ್ತು ಕೆಲಸವನ್ನು ಪೂರ್ಣಗೊಳಿಸಲು ನಿಮ್ಮ ಸಮಯವನ್ನು ತೆಗೆದುಕೊಳ್ಳಿ. ಜೀವನ ಮತ್ತು ಕೆಲಸದ ನಡುವೆ ಸಮತೋಲನವನ್ನು ಕಾಪಾಡಿಕೊಳ್ಳುಸುವುದು ಮುಖ್ಯ. ನಿಮ್ಮ ಶಕ್ತಿಯನ್ನು ಸರಿಯಾದ ಸ್ಥಳದಲ್ಲಿ ಬಳಸಿ. ನೀವು ಸವಾಲುಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಎದುರಿಸಲು ಸಾಧ್ಯವಾಗುತ್ತದೆ.

** ಕುಂಭ ರಾಶಿ :
ಇಂದು ನೀವು ಹುಡುಕುವ ಪರಿಹಾರಗಳು ನಿಮ್ಮ ಮುಂದೆಯೇ ಇರುತ್ತವೆ. ಆದರೆ ವ್ಯಾಕುಲತೆಯಿಂದಾಗಿ ನೀವು ಅವುಗಳನ್ನು ನೋಡಲು ವಿಫಲರಾಗುತ್ತೀರಿ. ಇಂದಿನ ಕೆಲವು ಬದಲಾವಣೆಗಳು ನಿಮಗೆ ಆಶ್ಚರ್ಯ ತಂದರೂ ಸಹ ಅವುಗಳನ್ನು ಎದುರಿಸಲು ಸಿದ್ಧರಾಗಿರಿ. ಪ್ರೀತಿಯ ವಿಷಯಗಳಲ್ಲಿ ವಾದಕ್ಕೆ ಇಳಿಯದಿರುವುದು ಉತ್ತಮ. ವೃತ್ತಿ ಸಂಬಂಧಿತ ನಿರ್ಧಾರಗಳನ್ನು ಬುದ್ಧಿವಂತಿಕೆಯಿಂದ ತೆಗೆದುಕೊಳ್ಳಿ. ಕೆಲವರು ಹೊಸ ಆಸ್ತಿಯನ್ನು ಖರೀದಿಸಲು ಅಥವಾ ತಮ್ಮ ಹಳೆಯ ಮನೆಯನ್ನು ದುರಸ್ತಿ ಮಾಡಲು ಯೋಜಿಸಬಹುದು.

** ಮೀನ ರಾಶಿ :
ಇಂದು ವ್ಯಾಪಾರದಲ್ಲಿ ವಿಸ್ತರಣೆಯಾಗಲಿದೆ. ನೀವು ಸಾಲದಿಂದ ಮುಕ್ತರಾಗುತ್ತೀರಿ. ಮನೆಯಲ್ಲಿ ಶುಭ ಕಾರ್ಯಗಳನ್ನು ಆಯೋಜಿಸಲು ನೀವು ಹಣವನ್ನು ಖರ್ಚು ಮಾಡಬೇಕಾಗಬಹುದು. ನೀವು ಶೈಕ್ಷಣಿಕ ಕೆಲಸದಲ್ಲಿ ಅಪಾರ ಯಶಸ್ಸನ್ನು ಪಡೆಯುತ್ತೀರಿ. ನೀವು ಹೊಸ ಮನೆಯನ್ನು ಖರೀದಿಸಲು ಯೋಜಿಸಬಹುದು. ಒತ್ತಡದಿಂದ ಮುಕ್ತಿ ಪಡೆಯುತ್ತೀರಿ. ಹಾಗೆಯೇ ನಿಮ್ಮ ಆಹಾರದ ಬಗ್ಗೆಯೂ ಗಮನ ಕೊಡಿ. ಹೆಚ್ಚು ಹಸಿರು ತರಕಾರಿಗಳು ಮತ್ತು ಹಣ್ಣುಗಳನ್ನು ಸೇವಿಸಿ.

Categories
ತೀರ್ಥಹಳ್ಳಿ

ತೀರ್ಥಹಳ್ಳಿ ಅಭಿವೃದ್ಧಿಗೆ ಹಲವು ಯೋಜನೆ!

ತೀರ್ಥಹಳ್ಳಿ ಅಭಿವೃದ್ಧಿಗೆ ಹಲವು ಯೋಜನೆ!
– ಪಟ್ಟಣಕ್ಕೆ ಬರುತ್ತೆ ಸಿಸಿಟಿವಿ ಕಣ್ಣು ಗಾವಲು
– 80 ಲಕ್ಷ ವೆಚ್ಚದಲ್ಲಿ ಬಯಲು ರಂಗಮಂದಿರ

NAMMUR EXPRESS NEWS
ತೀರ್ಥಹಳ್ಳಿ: ಪಟ್ಟಣ ಪಂಚಾಯ್ತಿ ಅಧ್ಯಕ್ಷ ರಹಮತ್ ಉಲ್ಲಾ ಅಸಾದಿ ಆಗಸ್ಟ್ 1 ರಂದು ಪ.ಪಂ. ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿ ಕರೆದಿದ್ದರು. ತಾವು ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ರೂಪಿಸಿದ ಕಾರ್ಯಕ್ರಮ, ಅನುಷ್ಠಾನಗೊಳಿಸಿದ ಯೋಜನೆ, ತಮ್ಮ ಪ್ರಯತ್ನದಿಂದ ಮಂಜೂರಾತಿ-ಅನುಮೋದನೆ ಪಡೆದು ಸದ್ಯದಲ್ಲೇ ಕಾರ್ಯಗತವಾಗಲಿರುವಂತಹ ಕೆಲಸಗಳ ಕುರಿತು ಅಸಾದಿ ಮಾಹಿತಿ ನೀಡಿದರು. ಈ ಸಂದರ್ಭ ಪ. ಪಂ.ಉಪಾಧ್ಯಕ್ಷೆ ಗೀತಾ ರಮೇಶ್ ಉಪಸ್ಥಿತರಿದ್ದರು. ಪಟ್ಟಣ ಪಂಚಾಯ್ತಿಯಲ್ಲಿ ತಾವು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವಲ್ಲಿ ಎಲ್ಲಾ ಸಹ ಸದಸ್ಯರು, ಸಿಬ್ಬಂದಿ ವರ್ಗ, ಇಲಾಖಾ ಸಚಿವರು, ಕಿಮ್ಮನೆ ರತ್ನಾಕರ್, ಆರಗ ಜ್ಞಾನೇಂದ್ರ, ಆರ್.ಎಂ. ಮಂಜುನಾಥ ಗೌಡರು, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರ ಸಹಕಾರ ಇರುವುದನ್ನು ಅಸಾದಿ ಸ್ಮರಿಸಿದರು.

ತೀರ್ಥಹಳ್ಳಿ ಪಟ್ಟಣಕ್ಕೆ ಸಿಸಿಟಿವಿ ಕಣ್ಗಾವಲು

ಪಟ್ಟಣದ ನಾಗರೀಕರ ಸುರಕ್ಷತೆ ದೃಷ್ಟಿಯಿಂದ ಪಟ್ಟಣದ ವಿವಿಧ ಆಯಕಟ್ಟಿನ ಸ್ಥಳಗಳಲ್ಲಿ 40ಕ್ಕೂ ಅಧಿಕ ಸಿಸಿ ಕ್ಯಾಮರಾಗಳನ್ನು ಅಳವಡಿಸಿ ಅದರ ಜವಾಬ್ದಾರಿಯನ್ನು ಪೋಲಿಸ್ ಇಲಾಖೆಗೆ ನೀಡುವ ಕೆಲಸ ಶುರುವಾಗಿದ್ದು ಪೋಲಿಸ್ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಎಲ್ಲೆಲ್ಲಿ ಸಿಸಿ ಕ್ಯಾಮರಾ ಅಳವಡಿಸಬೇಕೆಂಬ ಸಲಹೆ ಪಡೆಯುವುದಾಗಿ ಅಸಾದಿ ತಿಳಿಸಿದರು.

80 ಲಕ್ಷದ ಕುವೆಂಪು ಬಯಲು ರಂಗಮಂದಿರ

ರಾಷ್ಟ್ರಕವಿ ಕುವೆಂಪು ಅವರ ಹೆಸರಲ್ಲಿ ತೀರ್ಥಹಳ್ಳಿ ಪ.ಪಂ. ಮೈದಾನದ ಜಾಗದಲ್ಲಿ ಸುವ್ಯವಸ್ಥಿತವಾದ ಬಯಲು ರಂಗ ಮಂದಿರವನ್ನು 80 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಬೇಕೆಂಬ ನನ್ನ ಆಲೋಚನೆಗೆ ಯಶಸ್ಸು ಸಿಕ್ಕಿದೆ. ಈಗಾಗಲೇ ಅನುದಾನದ ವ್ಯವಸ್ಥೆಯಾಗಿದ್ದು, ಶೀಘ್ರದಲ್ಲಿ ಟೆಂಡರ್ ಕರೆದು ಕೆಲಸ ಆರಂಭಿಸಲಾಗುವುದು ಎಂದು ಅಸಾದಿ ಮಾಹಿತಿ ನೀಡಿದರು.

ತಜ್ಞ ವೈದ್ಯರ ಚಿಕಿತ್ಸೆ ಪಟ್ಟಣ ಪಂಚಾಯತ್ ಕ್ಲಿನಿಕ್ ಆರಂಭ

ಪಟ್ಟಣ ಪಂಚಾಯ್ತಿ ಕ್ಲಿನಿಕ್ ಆರಂಭಿಸಿ ಪ್ರತಿವಾರ ತಜ್ಞ ವೈದ್ಯರನ್ನು ಇಲ್ಲಿಗೆ ಕರೆಸಿ ಉಚಿತ ಆರೋಗ್ಯ ತಪಾಸಣೆ ಚಿಕಿತ್ಸೆಗೆ ಯೋಜನೆ ಸಿದ್ಧವಾಗಿದೆ. ಹಲವು ಪರಿಣಿತ ವೈದ್ಯರು ಸಹಕಾರ ನೀಡುವುದಾಗಿ ಹೇಳಿದ್ದಾರೆ. ತೀರ್ಥಹಳ್ಳಿಯ ಮಹಾಜನತೆಗೆ ಪಟ್ಟಣ ಪಂಚಾಯ್ತಿ ಕ್ಲಿನಿಕ್ ಉಪಯೋಗವಾಗಲಿದೆ ಎಂದು ಅಸಾದಿ ನುಡಿದರು.

ಯುಪಿಎಸ್‌ಸಿ ಪರೀಕ್ಷೆಗಳಿಗೆ ತರಬೇತಿ

ಪಟ್ಟಣ ಪಂಚಾಯ್ತಿ ವತಿಯಿಂದ ಯುಪಿಎಸ್‌ ಪರೀಕ್ಷೆಗಳಿಗೆ ಸಿದ್ಧವಾಗುವ ತೀರ್ಥಹಳ್ಳಿಯ ಯುವಕ-ಯುವತಿಯರಿಗೆ ಉಚಿತ ಕೋಚಿಂಗ್ ಕ್ಲಾಸ್-ತರಬೇತಿಯನ್ನು ಕಲ್ಪಿಸುವ ನಿಟ್ಟಿನಲ್ಲಿ ತಾವು ಪ್ರಯತ್ನ ನಡೆಸುತ್ತಿರುವುದಾಗಿ ಅಸಾದಿ ಹೇಳಿದರು.

ಡಾ||ನಾರಾಯಣ ಸ್ವಾಮಿಯ ಸೇವೆಗೆ ಗೌರವ ಸಲ್ಲಿಸುವ ಉದ್ದೇಶದಿಂದ ಸಭಾಂಗಣ

ಪಟ್ಟಣ ಪಂಚಾಯ್ತಿ ಅಧ್ಯಕ್ಷರಾಗಿ ಸ್ಮರಣೀಯ ಸೇವೆ ಸಲ್ಲಿಸಿರುವ ತೀರ್ಥಹಳ್ಳಿಯ ಹಿರಿಯ ವೈದ್ಯರಾದ ಡಾ.ಟಿ.ನಾರಾಯಣ ಸ್ವಾಮಿ ಅವರ ಸೇವೆಗೆ ಗೌರವ ಸಲ್ಲಿಸುವ ಉದ್ದೇಶದಿಂದ ಪಟ್ಟಣ ಪಂಚಾಯ್ತಿ ನೂತನ ಕಟ್ಟಡದ ಸಭಾಂಗಣಕ್ಕೆ ಡಾ|ನಾರಾಯಣಸ್ವಾಮಿ ಹೆಸರನ್ನು ನಾಮಕರಣ ಮಾಡುವ ವಿಚಾರ ಮೊದಲು ಪ್ರಸ್ತಾಪಿಸಿದ್ದೇ ರೆಹಮತ್ ಉಲ್ಲಾ ಅಸಾದಿ. ಆ ನಂತರ ಸರ್ವ ಸದಸ್ಯರ ಸಮ್ಮತಿ ಮೇರೆಗೆ ನಿರ್ಣಯ ಸ್ವೀಕರಿಸಿ ಸಭಾಂಗಣಕ್ಕೆ ಹಿರಿಯ ಬಿಜೆಪಿ ನಾಯಕರು ಆಗಿರುವ ಡಾ||ನಾರಾಯಣ ಸ್ವಾಮಿ ಅವರ ಹೆಸರು ಇಡಲಾಗಿದೆ.

ತೀರ್ಥಹಳ್ಳಿ ಪಟ್ಟಣದಲ್ಲಿ ವಾಹನ ಪಾರ್ಕಿಂಗ್ ವ್ಯವಸ್ಥೆ

ಪಟ್ಟಣದ ಕೊಪ್ಪ ಸರ್ಕಲ್‌ನಿಂದ ಎಪಿಎಂಸಿ ವರೆಗೆ ವಾಹನ ಪಾರ್ಕಿಂಗ್ ಮಾಡುವ ವ್ಯವಸ್ಥೆ ಸುಧಾರಣೆಗೆ ಕ್ರಮ ಕೈಗೊಳ್ಳುವುದು. ಮೊದಲ ಅರ್ಧ ಗಂಟೆ ವಾಹನ ನಿಲುಗಡೆಗೆ ಯಾವ ಚಾರ್ಜ್‌ಗಳೂ ಇರುವುದಿಲ್ಲ. ಅರ್ಧ ಗಂಟೆಗಿಂತ ಹೆಚ್ಚು ಸಮಯ ವಾಹನ ನಿಲ್ಲಿಸಿದರೆ ಹಣ ಪಾವತಿ ಮಾಡಬೇಕಾಗುತ್ತದೆ. ಆ ವ್ಯವಸ್ಥೆ ರೂಪಿಸಲಾಗುವುದು. ಇದರಿಂದ ಇಡೀ ದಿನ ವಾಹನ ನಿಲ್ಲಿಸಿ ಬೇರೆ ಊರಿಗೆ ಹೋಗಿ ಬರುವವರಿಂದ ಆಗುತ್ತಿದ್ದ ರಗಳೆ ಕಡಿಮೆಯಾಗಲಿದೆ.

ವಿಜಯ ಮಂಟಪ ನವೀಕರಣಕ್ಕೆ 10 ಲಕ್ಷ

ದಸರಾ ಹಬ್ಬ ಆಚರಿಸಲ್ಪಡುವ ಕುಶಾವತಿ ಪಾರ್ಕಿನ ವಿಜಯ ಮಂಟಪವನ್ನು ನವೀಕರಣಗೊಳಿಸಲು 10 ಲಕ್ಷ ರೂ.ಗಳನ್ನು ಕಾಯ್ದಿರಿಸಿದ್ದೇವೆ. ಕುಶಾವತಿ ನೆಹರೂ ಪಾರ್ಕನ್ನು ಇನ್ನಷ್ಟು ಅಭಿವೃದ್ಧಿಗೊಳಿಸಿ ಮಕ್ಕಳ ಆಟಿಕೆ ಹಾಗೂ ಮನೋರಂಜನಾ ಸಾಮಾಗ್ರಿಗಳನ್ನು ಅನ್ನು ಸ್ಥಾಪಿಸಲಾಗುವುದು.

ತುಂಗಾ ತೀರದ ಸೌಂದರ್ಯೀಕರಣ: ಪಾರ್ಕ್‌ನಲ್ಲಿ ಅಂಡ‌ರ್ ಗ್ರಂಡ್‌ ಫೌಂಟೇನ್

ತೀರ್ಥಹಳ್ಳಿ ಪಟ್ಟಣಕ್ಕೆ ಬರುವವರು ತುಂಗಾ ತೀರಾ ಹಾಗೂ ಕುಶಾವತಿ ಪಾರ್ಕಿಗೆ ಭೇಟಿ ಕೊಡುತ್ತಾರೆ. ಈ ಎರಡೂ ಸ್ಥಳಗಳನ್ನು ಪ್ರವಾಸಿ ತಾಣವಾಗಿ ರೂಪಿಸುವ ನಿಟ್ಟಿನಲ್ಲಿ ತುಂಗಾತೀರದ ಸೌಂದರ್ಯೀಕರಣ, ಕೂರುವ ವ್ಯವಸ್ಥೆ ಮಾಡಲಾಗುತ್ತದೆ. ಕುಶಾವತಿ ಪಾರ್ಕ್‌ ದಸರಾ ಮಂಟಪವನ್ನು ಇನ್ನಷ್ಟು ಅಂದವಾಗಿ ರೂಪಿಸಲಾಗುತ್ತಿದೆ ಮತ್ತು ಪಾರ್ಕಿನಲ್ಲಿ ಮಕ್ಕಳಿಗಾಗಿ ಅಂಡರ್ ಗೌಂಡ್ ಫೌಂಟೇನ್ ನಿರ್ಮಿಸಿ ನೀರಿನಲ್ಲಿ ಆಟವಾಡುವ ವ್ಯವಸ್ಥೆ ಮಾಡಲಾಗುವುದು ಎಂದು ಅಸಾದಿ ಯೋಜನೆ ವಿವರಿಸಿದರು.

ಕಿತ್ತನಗದ್ದೆ ಬಳಿ ಆಶ್ರಯ ಬಡಾವಣೆ ನಿರ್ಮಾಣಕ್ಕೆ ಸ್ಥಳ

ಪಟ್ಟಣದ ನಿವೇಶನ ರಹಿತ ಬಡ ಕುಟುಂಬಗಳಿಗೆ ಆಶ್ರಯ ನಿವೇಶನ ಕಲ್ಪಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಕಾರ್ಯಗತಗೊಳಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಸೂಕ್ತ ಸರ್ಕಾರಿ ಜಾಗಗಳು ಎಲ್ಲೂ ಸಿಗುತ್ತಿರಲಿಲ್ಲ. ಇದೀಗ ಕಿತ್ತನಗದ್ದೆ ನೆಲ್ಲಿಗುಡ್ಡದ ಬಳಿ 15 ಎಕರೆಯಷ್ಟು ಸರ್ಕಾರಿ ಭೂಮಿ ಇರುವುದು ಖಾತ್ರಿಯಾಗಿದೆ. ಆ ಜಾಗವನ್ನು ಆಶ್ರಯ ಬಡಾವಣೆಗಾಗಿ ಪಡೆದುಕೊಳ್ಳಲು ಪ್ರಯತ್ನ ನಡೆದಿದೆ ಎಂದು ಅಸಾದಿ ಹೇಳಿದರು.

ಪ.ಪಂ.ನಿಂದ ಲಾಡ್ಜ್ ನಿರ್ಮಾಣ

ಪಟ್ಟಣ ಪಂಚಾಯ್ತಿ ಅದಾಯ ಕ್ರೋಢೀಕರಿಸುವ ಉದ್ದೇಶದಿಂದ ಮುಖ್ಯ ಬಸ್‌ ನಿಲ್ದಾಣದ ಪ.ಪಂ. ಕಾಂಪ್ಲೆಕ್ಸ್‌ನ ಮೊದಲ ಅಂತಸ್ತಿನಲ್ಲಿ ಸುವ್ಯವಸ್ಥಿತ ರೀತಿಯಲ್ಲಿ ಲಾಡ್ಡಿಂಗ್ ರೂಂಗಳನ್ನು ನಿರ್ಮಿಸಿ ಬಾಡಿಗೆ ನೀಡಲಾಗುತ್ತದೆಂದು ಅಸಾದಿ ಹೇಳಿದರು.
ಅಭಿವೃದ್ಧಿ ವಿಚಾರದಲ್ಲಿ ಕಾಮಗಾರಿಗಳ ಅನುಷ್ಟಾನದ ವಿಚಾರದಲ್ಲಿ ತೀರ್ಥಹಳ್ಳಿ ಪಟ್ಟಣ ಪಂಚಾಯ್ತಿ ಮಾದರಿಯಾಗಿದೆ. ಹಲವು ಕೋಟಿ ಮೊತ್ತದ ಕಾಮಗಾರಿ ನಡೆಯುತ್ತಿದೆ. ರಾಜ್ಯ-ಕೇಂದ್ರ ಸರ್ಕಾರಗಳ ಎಲ್ಲಾ ಯೋಜನೆಗಳನ್ನೂ ಅತ್ಯಂತ ಯಶಸ್ವಿಯಾಗಿ ಜಾರಿಗೊಳಿಸಿದ ಹೆಮ್ಮೆ ನಮ್ಮದು. ನಮ್ಮ ಪ.ಪಂ ಸಾಧನೆಯನ್ನು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರೂ ಮೆಚ್ಚಿ ಅಭಿನಂದಿಸಿದ್ದಾರೆ ಎಂದು ಅಸಾದಿ ಹೇಳಿದರು

Categories
ಹಾಸನ

ಹಾಸನ ಸಂಸದ ಪ್ರಜ್ವಲ್ ಜೀವಾವಧಿ ಜೈಲು!

ಹಾಸನ ಸಂಸದ ಪ್ರಜ್ವಲ್ ಜೀವಾವಧಿ ಜೈಲು!
– ಮನೆ ಕೆಲಸ ಮಾಡುವ ಮಹಿಳೆ ಮೇಲೆ ಅತ್ಯಾಚಾರ ಕೇಸ್
– ಪ್ರಜ್ವಲ್‌ ಒಂದು ವರ್ಷದಿಂದಲೂ ಜೈಲಿನಲ್ಲೇ ಇದ್ದಾರೆ!

NAMMUR EXPRESS NEWS
ಹಾಸನ: ಮನೆ ಕೆಲಸ ಮಾಡುವ ಮಹಿಳೆ ಮೇಲೆ ಅತ್ಯಾಚಾರ ಮಾಡಿದ ಪ್ರಕರಣದಲ್ಲಿ ಹಾಸನದ ಕ್ಷೇತ್ರದ ಜೆಡಿಎಸ್‌ ಮಾಜಿ ಸಂಸದ ಹಾಗೂ ಹೆಚ್‌.ಡಿ.ದೇವೇಗೌಡರ ಮೊಮ್ಮಗ ಪ್ರಜ್ವಲ್‌ ರೇವಣ್ಣಗೆ ಕೋರ್ಟ್‌ ಶಿಕ್ಷೆ ವಿಧಿಸಿದೆ.
ಶುಕ್ರವಾರ ಈ ಪ್ರಕರಣದ ತೀರ್ಪು ಪ್ರಕಟಿಸಿದ್ದ ಕೋರ್ಟ್‌, ಅತ್ಯಾಚಾರ ಕೇಸ್‌ನಲ್ಲಿ ಪ್ರಜ್ವಲ್‌ ರೇವಣ್ಣ ದೋಷಿ ಎಂದು ಹೇಳಿತ್ತು. ಶನಿವಾರದಂದು ಶಿಕ್ಷೆಯ ಪ್ರಮಾಣದ ಅಂತಿಮ ತೀರ್ಪು ನೀಡುವುದಾಗಿ ಹೇಳಿತ್ತು. ಕೊನೆಗೂ ವಿಶೇಷ ಕೋರ್ಟ್ ಅಂತಿಮ ತೀರ್ಪು ನೀಡಿದೆ. ಶಿಕ್ಷೆಯ ಪ್ರಮಾಣವನ್ನೂ ಪ್ರಕಟಿಸಿದೆ.
ಮನೆ ಕೆಲಸದಾಕೆ ನೀಡಿದ್ದ ದೂರಿನ ಅನ್ವಯ ಪ್ರಜ್ವಲ್ ರೇವಣ್ಣ ಅಪರಾಧಿ ಎಂದು ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಅವರು ತೀರ್ಪು ನೀಡಿದ್ದಾರೆ. ಇಂದು ಶಿಕ್ಷೆಯೂ ಪ್ರಕಟವಾಗಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನ್ಯಾಯಾಧೀಶರಾದ ಸಂತೋಷ್ ಗಜಾನನ್ ಭಟ್ ಅವರು ವಾದ-ವಿವಾದಗಳನ್ನು ಆಲಿಸಿದ ನಂತರ ಶನಿವಾರ ಮಧ್ಯಾಹ್ನ ಶಿಕ್ಷೆಯ ಅಂತಿಮ ತೀರ್ಪನ್ನು ಪ್ರಕಟಿಸುವುದಾಗಿ ಹೇಳಿದ್ದರು.
ಸರ್ಕಾರದ ಪರ ವಾದ ಮಂಡಿಸಿದ ಬಿ.ಎನ್.ಜಗದೀಶ್, ʼಪ್ರಜ್ವಲ್ ಕೃತ್ಯವು ಅತ್ಯಂತ ಹೀನ, ಜೀವನೋಪಾಯಕ್ಕಾಗಿ ಕೆಲಸಕ್ಕೆ ಸೇರಿದ್ದ ಆ ಅನಕ್ಷರಸ್ಥ ಮಹಿಳೆಯ ಮೇಲೆ ಇಂತಹ ಘೋರ ಕೃತ್ಯ ಎಸಗಿದ್ದಾರೆ. ವಿಡಿಯೋಗಳು ಎಲ್ಲೆಡೆ ಹರಿದಾಡಿದ್ದರಿಂದ ಸಂತ್ರಸ್ತ ಮಹಿಳೆಯು ಮಾನಸಿಕ ಹಿಂಸೆ ಅನುಭವಿಸಿದ್ದಲ್ಲದೆ ಆತ್ಮಹತ್ಯೆಗೂ ಯತ್ನಿಸಿದ್ದರು ಎಂದು ವಾದ ಮಾಡಿದ್ದರು. ಪ್ರಜ್ವಲ್ ಒಬ್ಬ ಚಟಗಾರ, ಅವರ ವಿರುದ್ಧ ಇನ್ನೂ ಮೂರು ಅತ್ಯಾಚಾರ ಕೇಸ್‌ಗಳು ಬಾಕಿ ಇವೆ ಎಂದೂ ಉಲ್ಲೇಖಿಸಿದ್ದರು.
ಪ್ರಜ್ವಲ್‌ ಪರ ವಾದ ಮಂಡಿಸಿದ್ದ ವಕೀಲರು, ಪ್ರಜ್ವಲ್ ಹಣಕ್ಕಾಗಿ ರಾಜಕೀಯಕ್ಕೆ ಬಂದಿದ್ದಲ್ಲ, ಜನಸೇವೆ ಅವರ ಉದ್ದೇಶ. ಲೋಕಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗ ಈ ವಿಡಿಯೋಗಳನ್ನು ದುರುದ್ದೇಶದಿಂದ ಹರಿಬಿಡಲಾಗಿತ್ತು. ಇದು ಅವರ ರಾಜಕೀಯ ಭವಿಷ್ಯ ಹಾಳು ಮಾಡಲು ನಡೆಸಿದ ಕುತಂತ್ರ ಎಂದು ಪ್ರತಿವಾದಿಸಿದ್ದರು. ಪ್ರಜ್ವಲ್‌ ಒಂದು ವರ್ಷದಿಂದಲೂ ಜೈಲಿನಲ್ಲೇ ಇದ್ದಾರೆ. ಈ ಕೇಸ್‌ನಿಂದ ಅವರು ಅಪಾರ ನಷ್ಟವನ್ನೂ ಅನುಭವಿಸಿದ್ದಾರೆ. ಹಾಗಾಗಿ ಅವರ ವೃತ್ತಿ ಜೀವನಕ್ಕೆ ಮಾರಕವಾಗುವ ಯಾವುದೇ ಶಿಕ್ಷೆ ಕೊಡಬಾರದು ಎಂದು ಕೋರಿದ್ದರು.

* ಪ್ರಜ್ವಲ್‌ ರೇವಣ್ಣ ಹೇಳಿದ್ದೇನು?
ಕೋರ್ಟ್‌ ಎದುರು ಮಾತನಾಡಿದ ಪ್ರಜ್ವಲ್‌ ರೇವಣ್ಣ, ನಾನು ಹಲವು‌ ಮಹಿಳೆಯ ಜೊತೆ ಈ ಕೃತ್ಯ ನಡೆಸಿದ್ದೇನೆ ಎಂಬ ಆರೋಪ ಹೊರಿಸಿದ್ದಾರೆ. ಆದರೆ ನಾನು ಸಂಸದನಾಗಿದ್ದ ಸಮಯದಲ್ಲಿ ಯಾಕೆ ಯಾರೂ ಈ ಆರೋಪ ಮಾಡಲಿಲ್ಲ? ನಾನು ಅತ್ಯಾಚಾರ ಮಾಡಿದ್ದರೆ ಅವರು ಯಾಕೆ ಯಾರಿಗೂ ಹೇಳಲಿಲ್ಲ? ಲೋಕಸಭೆ ಚುನಾವಣೆ ಸಮಯದಲ್ಲೇ ಈ ಆರೋಪ ಯಾಕೆ ಮಾಡಿದರು? ಪೊಲೀಸರೇ ಈ ಕೆಲಸ ಮಾಡಿದ್ದಾರೆ ಎಂದು ಪ್ರಜ್ವಲ್‌ ಕಣ್ಣೀರಿಟ್ಟಿದ್ದರು. ನಾನು ಮೆಕ್ಯಾನಿಕಲ್ ಇಂಜಿನಿಯರಿಂಗ್ ಓದಿದ್ದೇನೆ. ಕಳೆದ ಆರು ತಿಂಗಳಿಂದ ತಂದೆ ತಾಯಿಯನ್ನು ನೋಡಿಲ್ಲ. ಕೋರ್ಟ್‌ ಏನೇ ತೀರ್ಮಾನ ಕೈಗೊಂಡರೂ ಅದಕ್ಕೆ ಬದ್ಧ. ಆದೇಶಕ್ಕೆ ತಲೆ ಬಾಗುತ್ತೇನೆ. ಶಿಕ್ಷೆ ನೀಡುವಾಗ ನನ್ನ ಕುಟುಂಬವನ್ನು ಪರಿಗಣಿಸಿ ಎಂದು ಬೇಡಿಕೊಂಡಿದ್ದರು.

* ಪ್ರಜ್ವಲ್‌ಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್

ಮಹಿಳೆ ಮೇಲೆ ಅತ್ಯಾಚಾರ ಮಾಡಿರುವ ಕೇಸ್‌ನಲ್ಲಿ ಪ್ರಜ್ವಲ್‌ ರೇವಣ್ಣ ಅಪರಾಧಿ ಎಂದು ತೀರ್ಪು ನೀಡಿರುವ ಜನಪ್ರತಿನಿಧಿಗಳ ನ್ಯಾಯಾಲಯ, ಪ್ರಜ್ವಲ್‌ ರೇವಣ್ಣ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಇದರ ಜೊತೆ ಐದು ಲಕ್ಷ ದಂಡ ಕೂಡ ವಿಧಿಸಲಾಗಿದೆ. ಈ ಮೂಲಕ ಪ್ರಜ್ವಲ್‌ ರೇವಣ್ಣ ಕೇಸ್‌ನಲ್ಲಿ ಕೋರ್ಟ್‌ ಮಹತ್ವದ ತೀರ್ಪು ಪ್ರಕಟಿಸಿದೆ. ಇದರಿಂದ ಪ್ರಜ್ವಲ್‌ ರಾಜಕೀಯ ಜೀವನ ಕೂಡ ಅಂತ್ಯ ಎಂದು ಹೇಳಲಾಗುತ್ತಿದೆ.

Categories
ಸಿನಿಮಾ

ನಟಿ ರಮ್ಯಾಗೆ ದರ್ಶನ್ ಫ್ಯಾನ್ಸ್ ನಿಂದನೆ..!!

ನಟಿ ರಮ್ಯಾಗೆ ದರ್ಶನ್ ಫ್ಯಾನ್ಸ್ ನಿಂದನೆ..!!
– ಇಬ್ಬರು ಸಾಮಾಜಿಕ ಜಾಲತಾಣ ಬಳಕೆದಾರರನ್ನು ಬಂಧಿಸಿದ ಪೊಲೀಸರು
– ಒಟ್ಟು 13 ಮಂದಿಯ ಮಾಹಿತಿ ಸಂಗ್ರಹಿಸಿರುವ ಸಿಸಿಬಿ

NAMMUR EXPRESS NEWS
ನಟಿ ರಮ್ಯಾ ಅವರಿಗೆ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಸಂದೇಶಗಳು ಬಂದಿದ್ದವು. ರೇಣುಕಾಸ್ವಾಮಿ ಪ್ರಕರಣದಲ್ಲಿ ಅವರು ವ್ಯಕ್ತಪಡಿಸಿದ ಅಭಿಪ್ರಾಯಗಳು ದರ್ಶನ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ರಮ್ಯಾ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತ್ವರಿತವಾಗಿ ಕಾರ್ಯಪ್ರವೃತ್ತರಾಗಿದ್ದು, ಇಬ್ಬರನ್ನು ಬಂಧಿಸಿದ್ದಾರೆ. ಮತ್ತು ಉಳಿದವರಿಗಾಗಿ ಬಲೆ ಬೀಸಿದ್ದಾರೆ.

ಸುಪ್ರೀಂ ಕೋರ್ಟಿನಲ್ಲಿ ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಡೆಯುತ್ತಿದ್ದಾಗ, ರಮ್ಯಾ ‘ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗೋ ಭರವಸೆ ಇದೆ’ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಯು ದರ್ಶನ್ ಅಭಿಮಾನಿಗಳಲ್ಲಿ ಆಕ್ರೋಶವನ್ನು ಹುಟ್ಟುಹಾಕಿತ್ತು. ಪರಿಣಾಮವಾಗಿ, ರಮ್ಯಾ ಅವರ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ಕೆಳಗೆ ಅಶ್ಲೀಲ ಮತ್ತು ಕೆಟ್ಟ ಕಮೆಂಟುಗಳನ್ನು ಬರೆದು ಕಿರುಕುಳ ನೀಡಲಾಗಿತ್ತು. ಜೊತೆಗೆ ಅಶ್ಲೀಲ ಸಂದೇಶಗಳನ್ನು ಸಹ ಕಳುಹಿಸಲಾಗಿತ್ತು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ರಮ್ಯಾ, ಸೈಬ‌ರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ದೂರು ದಾಖಲಾದ ನಂತರ, ಸಿಸಿಬಿ ಸೈಬರ್ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಮತ್ತು ಚಿತ್ರದುರ್ಗ ಮೂಲದ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದಾರೆ. ಒಬ್ಬನನ್ನು ವಶಕ್ಕೆ ಪಡೆದಿದ್ದಾರೆ. ಒಟ್ಟು 13 ಮಂದಿಯ ಮಾಹಿತಿ ಸಂಗ್ರಹಿಸಿರುವ ಸಿಸಿಬಿ. ಈ ಪ್ರಕರಣ ಇಲ್ಲಿಗೆ ನಿಲ್ಲುವುದಿಲ್ಲ ಎಂದು ಪೊಲೀಸರು ತಿಳಿಸಿದ್ದು, ದೂರಿನಲ್ಲಿ ದಾಖಲಾಗಿರುವ ಇತರ ವ್ಯಕ್ತಿಗಳಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ.
ಈ ಪ್ರಕರಣದ ಮೂಲಕವಾದರೂ ಸಾಮಾಜಿಕ ಜಾಲತಾಣಗಳಲ್ಲಿ ಬೇಜವಬ್ದಾರಿಯಿಂದ ಕಮೆಂಟು ಮಾಡುವ ಪ್ರವೃತ್ತಿಗೆ ಕಡಿವಾಣ ಬೀಳಲಿದೆಯೇ ಕಾದು ನೋಡಬೇಕು.

Categories
ಕಾರ್ಕಳ

ಕ್ರೈಸ್ಟ್ ಕಿಂಗ್ ಟೇಬಲ್ ಟೆನ್ನಿಸ್‌ನಲ್ಲಿ ಏಳು ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆ

ಕ್ರೈಸ್ಟ್ ಕಿಂಗ್ ಟೇಬಲ್ ಟೆನ್ನಿಸ್‌ನಲ್ಲಿ ಏಳು ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆ
– ಸುಂದರ ಪುರಾಣಿಕ್ ಸ್ಮಾರಕ ಪ್ರೌಢಶಾಲೆ ಪೆರ್ವಾಜೆ ನಡೆದ ಟೇಬಲ್ ಟೆನ್ನಿಸ್ ಪಂದ್ಯಾಟ
– ಕಾರ್ಕಳ ತಾಲೂಕು ಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾಟ

NAMMUR EXPRESS NEWS
ಕಾರ್ಕಳ: ಶಾಲಾ ಶಿಕ್ಷಣ ಇಲಾಖೆ, ಕರ್ನಾಟಕ ಸರ್ಕಾರ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕಾರ್ಕಳ ಇವರ ಆಶ್ರಯದಲ್ಲಿ ಸುಂದರ ಪುರಾಣಿಕ್ ಸ್ಮಾರಕ ಪ್ರೌಢಶಾಲೆ ಪೆರ್ವಾಜೆ ಇಲ್ಲಿ ನಡೆದ ಕಾರ್ಕಳ ತಾಲೂಕು ಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾಟದಲ್ಲಿ ಕ್ರೈಸ್ಟ್ ಕಿಂಗ್ ಆಂಗ್ಲಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ಏಳು ವಿದ್ಯಾರ್ಥಿಗಳು ತಮ್ಮ ಕ್ರೀಡಾಪಟುತನದಿಂದ ಜಿಲ್ಲಾಮಟ್ಟಕ್ಕೆ ಆಯ್ಕೆಯಾದರು.

ಪ್ರಾಥಮಿಕ ವಿಭಾಗದ ಬಾಲಕರ ತಂಡ ಪ್ರಥಮ ಸ್ಥಾನ ಪಡೆದು ಮುಂದಿನ ಹಂತಕ್ಕೆ ಲಾಭ ಪಡೆದುಕೊಂಡಿದೆ. ಈ ತಂಡದಲ್ಲಿ ಎಂಟನೇ ತರಗತಿಯ ಅದ್ವಿತ್ ಡಿ.ವಿ, ಏಳನೇ ತರಗತಿಯ ಮೊಹಮ್ಮದ್ ಅಯಾನ್ ಹಾಗೂ ಶೇಖ್ ಮೊಹಮ್ಮದ್ ಶಿಫಾನ್ ತಂಡವನ್ನು ಪ್ರತಿನಿಧಿಸಿದರು. ಬಾಲಕಿಯರ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದ್ದು, ಎಂಟನೇ ತರಗತಿಯ ಐಶ್ವರ್ಯ ಮತ್ತು ಆರನೇ ತರಗತಿಯ ಡೆಲ್ಸಿಯಾ ಡಿ’ಸೋಜ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದರು. ಪ್ರೌಢಶಾಲಾ ವಿಭಾಗದ ಬಾಲಕರ ತಂಡ ದ್ವಿತೀಯ ಸ್ಥಾನ ಪಡೆದಿದ್ದು, ಹತ್ತನೇ ತರಗತಿಯ ಅಮೃತ್ ಶೆಟ್ಟಿಗಾರ್ ಮತ್ತು ಒಂಬತ್ತನೇ ತರಗತಿಯ ತನ್ಮಯ್ ಶೆಟ್ಟಿ ಅವರು ತಂಡವನ್ನು ಪ್ರತಿನಿಧಿಸಿದರು.

ಇನ್ನು ಏಳನೇ ತರಗತಿಯ ಅನ್ವಿಶ್ ಪೂಜಾರಿ ಮತ್ತು ಆರನೇ ತರಗತಿಯ ಮಿಲನ್ ಡಿ’ಸೋಜ ಅವರು ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟದಲ್ಲಿ ಗಮನ ಸೆಳೆದರು. ಇದೇ ವೇಳೆ ಏಳನೇ ತರಗತಿಯ ರಿಯಾ ಸಿಕ್ವೇರಾ, ಆರನೇ ತರಗತಿಯ ಸಾಚಿ ಸುವರ್ಣ ಹಾಗೂ ಸೃಷ್ಟಿ, ಹತ್ತನೇ ತರಗತಿಯ ಅನುಷ್ ಶೆಟ್ಟಿ, ಒಂಬತ್ತನೇ ತರಗತಿಯ ಶಾನ್ ಡಿ’ಸೋಜ ಮತ್ತು ಅಶ್ವಿನ್ ಅವರು ದ್ವಿತೀಯ ಸ್ಥಾನ ಪಡೆದು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.

Categories
ಕರಾವಳಿ

ಉಡುಪಿ: ಮಹಿಳೆಯ ಲಕ್ಷ ಲಕ್ಷ ಹಣ ದೋಚಿದ ಸೈಬರ್ ಕಳ್ಳರು!

ಕರಾವಳಿ ಟಾಪ್ ನ್ಯೂಸ್

* ಉಡುಪಿ: ಮಹಿಳೆಯ ಲಕ್ಷ ಲಕ್ಷ ಹಣ ದೋಚಿದ ಸೈಬರ್ ಕಳ್ಳರು!
* ಕಾಪು: ಫೈನಾನ್ಸ್ ಆಫೀಸರ್ ಆತ್ಮಹತ್ಯೆ
* ಮೂಡಬಿದರೆ: ಗಾಂಜಾ ಮಾರಾಟ ಮಾಡುತ್ತಿದ್ದವ ಅರೆಸ್ಟ್!
* ಬೈಂದೂರು: ಅಕ್ರಮ ಜಾನುವಾರು ಸಾಗಾಟ: ಮತ್ತೆ ಇಬ್ಬರ ಬಂಧನ
* ಕುಂದಾಪುರ: ಕಾರು ಸ್ಕೂಟರ್ ನಡುವೆ ಭೀಕರ ಅಪಘಾತ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಉಡುಪಿ: ಲಿಯೋಲಾ ಎಂಬ ಮಹಿಳೆಗೆ ಜುಲೈ 22 ರಂದು ಟೆಲಿಕಾಂ ರೆಗ್ಯುಲೇಟರ್ ಆಫ್ ಇಂಡಿಯಾ ಎಂಬ ಹೆಸರಿನಲ್ಲಿ, ಮಹಿಳೆಯ ಸಿಮ್ ಕಾರ್ಡ್ ನಲ್ಲಿ ಕಿರುಕುಳ ಮತ್ತು ಸುಳ್ಳು ಜಾಹೀರಾತು ಬಂದಿದ್ದು, ಹಲವಾರು ದೂರುಗಳು ದಾಖಲಾಗಿವೆ ಎಂದು ವಾಟ್ಸಾಪ್ ಕರೆ ಮಾಡಿ ಹೇಳಿದ್ದಾರೆ. ಜೊತೆಗೆ ಮುಂಬೈ ಪೊಲೀಸರಿಗೆ ಕರೆಯನ್ನು ವರ್ಗಾವಣೆ ಮಾಡುತ್ತೇವೆ, ಅವರೊಂದಿಗೆ ಮಾತನಾಡಿ ಎಂದು ತಿಳಿಸಿದ್ದಾರೆ. ಮಧ್ಯಾಹ್ನ ಪುನಃ ವಾಟ್ಸಪ್ ಕರೆ ಬಂದಿದ್ದು, ನಿಮ್ಮ ಆಧಾರ್ ಕಾರ್ಡ್ ಮನಿ ಲಾಂಡ್ರಿಂಗ್ ಕೇಸ್ ನಲ್ಲಿದೆ, ನಿಮ್ಮ ವಾರೆಂಟ್ ಮೇಲೆ ದಸ್ತಗಿರಿ ಮಾಡುತ್ತೇವೆ. ಮುಂದಿನ ಇಪ್ಪತ್ತನಾಲ್ಕು ಗಂಟೆಗಳ ಕಾಲ ವಾಟ್ಸಪ್ ಕಾಲ್ ನಲ್ಲೇ ಇರಬೇಕು, ಮೊಬೈಲ್ ಡಾಟಾ ಆಫ್ ಮಾಡಿ ಎಲ್ಲಿಗೂ ಹೋಗಬಾರದು. ನಿಯಮವನ್ನು ಉಲ್ಲಂಘಿಸಿದರೆ ನಿಮ್ಮನ್ನು ಬಂಧಿಸುತ್ತೇವೆ‌ ಎಂದು ಮಹಿಳೆಗೆ ಬೆದರಿಕೆ ಒಡ್ಡಿದ್ದಾರೆ. ಇಪ್ಪತ್ತೈದರಂದು ಮಹಿಳೆಯಿಂದ ತಮ್ಮ ಬ್ಯಾಂಕ್ ಖಾತೆಗೆ ನಾಲ್ಕು ಲಕ್ಷ ರೂಪಾಯಿಯನ್ನು ವರ್ಗಾಯಿಸಿಕೊಂಡು ವಂಚಿಸಿದ್ದಾರೆ. ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಸಂಭವಿಸಿದ ಈ ಪ್ರಕರಣವು ಸೆನ್ ಠಾಣೆಯಲ್ಲಿ ದಾಖಲಾಗಿದೆ.

•ಕಾಪು: ಫೈನಾನ್ಸ್ ಆಫೀಸರ್ ಆತ್ಮಹತ್ಯೆ

ಕಾಪು: ರಾಜೇಶ್ ನಾಯ್ಕ ಎನ್ನುವವರು ಬೆಳ್ಮಣ್ ಕಾಡಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಹಲವಾರು ವರ್ಷಗಳ ಕಾಲ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಫೈನಾನ್ಸ್ ಆಫೀಸರ್ ಆಗಿ ಕಾರ್ಯನಿರ್ವಹಿಸಿದ್ದರು ಎನ್ನಲಾಗಿದೆ. ಮೂಲತಃ ಕಾಪು ತಾಲ್ಲೂಕಿನವರಾದ ರಾಜೇಶ್ ಅವರ ಆತ್ಮಹತ್ಯೆಗೆ ಕಾರಣ ಏನೆನ್ನುವುದು ಸ್ಪಷ್ಟವಾಗಿ ತಿಳಿದುಬಂದಿಲ್ಲ. ಘಟನೆಗೆ ಸಂಬಂಧಿಸಿದಂತೆ ಕಾರ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

* ಮೂಡಬಿದರೆ: ಗಾಂಜಾ ಮಾರಾಟ ಮಾಡುತ್ತಿದ್ದ ವಾಹನ ಪೊಲೀಸರ ವಶಕ್ಕೆ

ಮೂಡಬಿದರೆ: ಎರಡು ವಾಹನಗಳಲ್ಲಿ ಗಾಂಜಾ ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿದ್ದ ಖಚಿತವಾದ ಮಾಹಿತಿ ಬಂದ ಹಿನ್ನೆಲೆಯಲ್ಲಿ, ಪೊಲೀಸರು ಆರೋಪಿಗಳನ್ನು ಮೂಡಬಿದರೆಯ ಬೆಳುವಾಯಿಯ ಕಾಂತಾವರ ಕ್ರಾಸ್ ನ ಮಠದ ಕೆರೆ ಎಂಬಲ್ಲಿ ಪತ್ತೆ ಹಚ್ಚಿದ್ದು, ಇದು ಸಿಸಿಬಿ ಪೊಲೀಸ್ ತಂಡವು ಮಾದಕ ವಸ್ತುಗಳ ಅಕ್ರಮ ಸಾಗಾಟ ವಿರುದ್ಧ ಕೈಗೊಂಡಿರುವ ಕಾರ್ಯಾಚರಣೆಯ ಭಾಗವಾಗಿದೆ ಎಂದು ಹೇಳಲಾಗಿದೆ. ಆರೋಪಿಗಳನ್ನು ಬಂಧಿಸುವ ಸಂದರ್ಭದಲ್ಲಿ 123 ಕೆ.ಜಿ ಗಾಂಜಾ, ಎರಡು ವಾಹನಗಳು, ಐದು ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಕ್ಕೆ ತೆಗೆದುಕೊಂಡ ವಸ್ತುಗಳ ಮೌಲ್ಯ ಸುಮಾರು 46.20.000 ಇರಬಹುದು ಎಂದು ಅಂದಾಜಿಸಲಾಗಿದೆ. ಸೆರೆಸಿಕ್ಕ ಆರೋಪಿಗಳನ್ನು ಕಾಸರಗೋಡು ಮೂಲದ ಮಸೂದ್ ಎಂಕೆ, ಮೊಹಮ್ಮದ್ ಆಶಿಕ್ ಮತ್ತು ಸುಬೇರ್ ಎಂದು ಗುರುತಿಸಲಾಗಿದೆ.‌ ಅಪರಾಧಕ್ಕೆ ಸಂಬಂಧಿಸಿದಂತೆ ಮೂಡಬಿದರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

* ಬೈಂದೂರು: ಅಕ್ರಮ ಜಾನುವಾರು ಸಾಗಾಟ ಮತ್ತೆ ಇಬ್ಬರ ಬಂಧನ

ಬೈಂದೂರು: ಬೈಂದೂರು ಪೊಲೀಸ್ ಠಾಣೆಯ ಪಿಎಸ್ಐ ತಿಮ್ಮೇಶ್ ಬಿ.ಎನ್ ಅವರ ನೇತೃತ್ವದಲ್ಲಿ ಮಾಹಿತಿ ಬಂದ ಹಿನ್ನೆಲೆಯಲ್ಲಿ, ಅಕ್ರಮವಾಗಿ ಜಾನುವಾರುಗಳನ್ನು ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ, ಹೇರೂರಿನ ಗುಂಜನಗುಡ್ಡೆ ಬಳಿ ವಾಹನದ ಮೇಲೆ ದಾಳಿ ನಡೆಸಿದ್ದಾರೆ.‌ ಪೊಲೀಸರು ವಾಹನವನ್ನು ಪರಿಶೀಲಿಸಿದಾಗ ಹಸುಗಳನ್ನು ಸಾಗಿಸುತ್ತಿರುವುದು ಕಂಡುಬಂದಿದೆ. ಕೂಡಲೇ ಪೊಲೀಸರು ಹಸುಗಳನ್ನು ರಕ್ಷಿಸಿ, ಆರೋಪಿಗಳನ್ನು ವಾಹನದ ಸಮೇತ ವಶಕ್ಕೆ ತೆಗೆದುಕೊಂಡಿದ್ದಾರೆ. ಆರೋಪಿಗಳನ್ನು ಬೈಂದೂರಿನ ರಮೇಶ್ ಮೊಗವೀರ ಮತ್ತು ಅಬ್ದುಲ್ ಖಯೂಮ್ ಎಂದು ಗುರುತಿಸಲಾಗಿದೆ.

* ಕುಂದಾಪುರ: ಕಾರು ಸ್ಕೂಟರ್ ನಡುವೆ ಭೀಕರ ಅಪಘಾತ.

ಕುಂದಾಪುರ: ದುರ್ಗಾಂಬ ಬಸ್ ಡಿಪೋ ಸಮೀಪದ ಹೆದ್ದಾರಿಯಲ್ಲಿ ಎದುರುಬದುರಾಗಿ ಬರುತ್ತಿದ್ದ ಕಾರು ಮತ್ತು ಸ್ಕೂಟರ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಸ್ಕೂಟರ್ ನಲ್ಲಿದ್ದ ಸಾಸ್ತಾನ ಮೂಲದ ಇಬ್ಬರು ಯುವಕರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನುವ ಸಂಗತಿ ತಿಳಿದು ಬಂದಿದೆ.

Categories
ಕರಾವಳಿ

ಮಂಗಳೂರಲ್ಲಿ ಭಾರೀ ದುರಂತ!

ಕರಾವಳಿ ಟಾಪ್ ನ್ಯೂಸ್

ಮಂಗಳೂರಲ್ಲಿ ಭಾರೀ ದುರಂತ!

* ಅಮೋನಿಯಾ ಸೋರಿಕೆಯಿಂದ 25 ಮಂದಿ ಕಾರ್ಮಿಕರು ಅಸ್ವಸ್ಥ
* ಬಂಟ್ವಾಳ: ನಾಪತ್ತೆಯಾಗಿದ್ದ ಯುವಕ, ನದಿಯಲ್ಲಿ ಶವವಾಗಿ ಪತ್ತೆ.
* ಪುತ್ತೂರು: ಕೋರ್ಟ್ ಆದೇಶ ಉಲ್ಲಂಘಿನೆ: ಆರೋಪಿ ಅರೆಸ್ಟ್
* ಬೆಳ್ತಂಗಡಿ: ಎಸ್ಐ ಹೆದರಿಕೆ; ಹೊಸ ತಿರುವು

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಮಂಗಳೂರು: ಬೈಕಂಪಾಡಿಯ ಮೀನು ಸಂಸ್ಕರಣ ಘಟಕದಲ್ಲಿ ಅಮೋನಿಯಾ ಸೋರಿಕೆಯಾದ ಹಿನ್ನೆಲೆಯಲ್ಲಿ, ಇಪ್ಪತ್ತೈದಕ್ಕೂ ಹೆಚ್ಚು ಜನ ಕಾರ್ಮಿಕರು ಅಸ್ವಸ್ಥಗೊಂಡಿದ್ದಾರೆ.‌ ಪೈಪ್ ಲೈನ್ ಗೆ ಹಾನಿಯುಂಟಾದ ಪರಿಣಾಮವಾಗಿ, ಗುರುವಾರ ನಡೆದ ಈ ದುರಂತದಲ್ಲಿ ಕಾರ್ಮಿಕರನ್ನು ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಲ್ಲಿ ಇಬ್ಬರು ಸಾಮಾನ್ಯ ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಒಬ್ಬರು ಐಸಿಯುನಲ್ಲಿದ್ದರು. ಉಳಿದ ನಾಲ್ವರು ಈಗಾಗಲೇ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು, ಇನ್ನಿಬ್ಬರು ಬಿಡುಗಡೆಗೊಳ್ಳಲಿದ್ದಾರೆ ಎಂದು ಕಾರ್ಖಾನೆಯ ಬಾಯ್ಲರ್ಸ್ ಇಲಾಖೆಯ ಮೂಲಗಳಿಂದ ತಿಳಿದುಬಂದಿದೆ. ಉಳಿದ ಕಾರ್ಮಿಕರ ಸಂಗತಿ ಸ್ಪಷ್ಟವಾಗಿ ತಿಳಿದುಬಂದಿಲ್ಲ. ಸರಿಯಾದ ವರದಿ ತಿಳಿದುಬಂದ ನಂತರ ಕಾರ್ಖಾನೆಯ ಕಾಯ್ದೆಯ ಪ್ರಕಾರ ಸಂಬಂಧಿತ ವ್ಯಕ್ತಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.

* ಬಂಟ್ವಾಳ: ನಾಪತ್ತೆಯಾಗಿದ್ದ ಯುವಕ, ನದಿಯಲ್ಲಿ ಶವವಾಗಿ ಪತ್ತೆ

ಬಂಟ್ವಾಳ: ಕಳೆದ ಕೆಲವು ದಿನಗಳ ಹಿಂದೆ, ಕೆಲಸಕ್ಕೆ ತೆರಳಿದ್ದ ಯುವಕ ಹೇಮಂತ್ ಮರಳಿ ಮನೆಗೆ ಬಂದಿರಲಿಲ್ಲ. ಜಕ್ರಿಬೆಟ್ಟು ಕಿಂಡಿ ಅಣೆಕಟ್ಟಿನ ಬಳಿ ಆತನ ಸ್ಕೂಟರ್ ಮತ್ತು ಮೊಬೈಲ್ ಪತ್ತೆಯಾಗಿದ್ದರ ಹಿನ್ನೆಲೆಯಲ್ಲಿ, ಸ್ಥಳೀಯರು ಮತ್ತು ಅಗ್ನಿಶಾಮಕ ದಳದವರು ನೀರಿನಲ್ಲಿ ಶೋಧನಾ ಕಾರ್ಯ ನಡೆಸಿದ್ದರು. ಆದರೂ ಯಾವುದೇ ಸುಳಿವು ದೊರೆತಿರಲಿಲ್ಲ. ನಿನ್ನೆಯ ದಿನ ಕಂಕನಾಡಿ ಪೊಲೀಸ್ ಠಾಣೆಯ ವ್ಯಾಪ್ತಿಗೆ ಒಳಪಟ್ಟಿರುವ ‌ ಬಜಾಜ್ ಮುಗೇರು ಎನ್ನುವಲ್ಲಿ, ನೇತ್ರಾವತಿ ನದಿಯ ಮಧ್ಯಭಾಗದಲ್ಲಿ ತೇಲಾಡುವ ಸ್ಥಿತಿಯಲ್ಲಿ ಹೇಮಂತ್ ಮೃತದೇಹ ಪತ್ತೆಯಾಗಿದೆ. ನಾಲ್ಕು ದಿನಗಳಿಂದಲೂ ಶೋಧನಾ ಕಾರ್ಯ ನಡೆಸಿದರೂ ಯಾವುದೇ ರೀತಿಯ ಪ್ರಯೋಜನವಾಗಿರಲಿಲ್ಲ. ಹೀಗಾಗಿ ತುಂಬೆ ಅಣೆಕಟ್ಟಿನ ಕೆಳಭಾಗದಲ್ಲಿ ಮೂರು ತಂಡಗಳನ್ನು ಒಳಗೊಂಡು, ಡ್ರೋನ್ ಮೂಲಕ ಶೋಧನೆಯನ್ನು ಮುಂದುವರಿಸಲಾಯಿತು. ಸಂಜೆಯ ವೇಳೆ ತೇಲಾಡುತ್ತಿರುವ ಮೃತದೇಹ ಡ್ರೋನ್ ನಲ್ಲಿ ಪತ್ತೆಯಾಗಿದ್ದು, ಶವವನ್ನು ಮೇಲಕ್ಕೆ ತರಲಾಯಿತು ಎನ್ನುವುದು ಮೂಲಗಳಿಂದ ತಿಳಿದುಬಂದಿದೆ.

* ಪುತ್ತೂರು: ನ್ಯಾಯಾಲಯದ ನಿಯಮ ಉಲ್ಲಂಘಿಸಿದ ಆರೋಪಿಯ ಬಂಧನ

ಪುತ್ತೂರು: ಸೋಮವಾರಪೇಟೆ ಮೂಲದ ಹನೀಫ್ ಎಂಬ ಆರೋಪಿಯು 2018ರಲ್ಲಿ ಜಾಮೀನು ಪಡೆದು ಬಿಡುಗಡೆಗೊಂಡ ಬಳಿಕ, ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಈತನ ವಿರುದ್ಧ 35/ 2001, ಕಾಲಂ 379 ಹಾಗೂ 34 ಭಾರತೀಯ ದಂಡ ಸಂಹಿತೆ ಪ್ರಕರಣ ದಾಖಲಾಗಿತ್ತು. ಹನೀಫ್ ನನ್ನು ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ ಪೊಲೀಸರು ಪತ್ತೆ ಹಚ್ಚಿದ್ದು, ಈತನ ವಿರುದ್ಧ ಪುತ್ತೂರು ಪೊಲೀಸ್ ಠಾಣೆಯಲ್ಲಿ ಕಾಲಂ 269 ಪ್ರಕರಣವನ್ನು ದಾಖಲಿಸಿಕೊಂಡು, ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಲಯವು ಹನೀಫ್ ನಿಗೆ ನ್ಯಾಯಾಂಗ ಬಂಧನವನ್ನು ವಿಧಿಸಿದೆ.

* ಬೆಳ್ತಂಗಡಿ: ಎಸ್ಐ ಹೆದರಿಕೆ; ಹೊಸ ತಿರುವು

ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ರಚನೆಗೊಂಡಿರುವ ವಿಶೇಷ ತನಿಖಾ ದಳದಲ್ಲಿರುವ ಸಬ್ ಇನ್ಸ್ಪೆಕ್ಟರ್ ಮಂಜುನಾಥ ಗೌಡ ಅವರು, ಅನಾಮಿಕನಿಗೆ ಪ್ರಕರಣವನ್ನು ಹಿಂಪಡೆಯುವಂತೆ ಬೆದರಿಕೆ ಒಡ್ಡಿದ್ದಾರೆ ಎಂದು ವಕೀಲರು ವಿಶೇಷ ತನಿಖಾ ದಳದ ಮುಖ್ಯಸ್ಥರಾದ ಪ್ರಣಬ್ ಮೊಹಾಂತಿ ಅವರಿಗೆ ದೂರು ನೀಡಿದ್ದಾರೆ. ಹೀಗಾಗಿ ಸಬ್ ಇನ್ಸ್ಪೆಕ್ಟರ್ ಮಂಜುನಾಥ ಗೌಡ ಅವರನ್ನು ವಿಶೇಷ ತನಿಖಾ ದಳದಿಂದ ಬಿಡುಗಡೆಗೊಳಿಸುವಂತೆ ವಕೀಲರು ಮನವಿ ಮಾಡಿಕೊಂಡಿದ್ದಾರೆ ಎನ್ನುವ ಸಂಗತಿ ಮೂಲಗಳಿಂದ ತಿಳಿದುಬಂದಿದೆ.