Categories
ಅಡಿಕೆ-ದರ

ಅಡಿಕೆ ದರ ಎಷ್ಟಿದೆ?

ಅಡಿಕೆ ದರ ಎಷ್ಟಿದೆ?
– ರಾಶಿ ಎಷ್ಟು? ಬೆಟ್ಟೆ ಎಷ್ಟು?

NAMMUR EXPRESS NEWS
ಸರಕು
62289-75600-78369

ಬೆಟ್ಟೆ
48009-60300-61099

ರಾಶಿ
47569-57000-58201

ಗೊರಬಲು
22009-31600-33659

Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ಸ್ಕೈ ಫಂಡ್ ಮಾರ್ಟ್ ಕಛೇರಿ ಉದ್ಘಾಟನೆ

ತೀರ್ಥಹಳ್ಳಿಯಲ್ಲಿ ಸ್ಕೈ ಫಂಡ್ ಮಾರ್ಟ್ ಕಛೇರಿ ಉದ್ಘಾಟನೆ
– ಆರಗ, ಕಿಮ್ಮನೆ ಸೇರಿ ಅನೇಕ ಗಣ್ಯರ ಶುಭಾಶಯ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಕೊಪ್ಪ ಸರ್ಕಲ್ ಸಂಗೀತಾ ಮೊಬೈಲ್ಸ್ ಮೇಲ್ಭಾಗ ನೂತನವಾಗಿ ಸ್ಕೈ ಫಂಡ್ ಮಾರ್ಟ್ ಕಛೇರಿ ಉದ್ಘಾಟನೆಗೊಂಡಿದೆ.
ಉದ್ಘಾಟನೆಯನ್ನು ಯೋಶಧಮ್ಮ ಕಲ್ಮನೆ ನೆರವೇರಿಸಿದರು. ಕರ್ನಾಟಕದ ಮಾಜಿ ಗೃಹಸಚಿವ ಹಾಗೂ ಶಾಸಕ ಶ್ರೀ ಆರಗ ಜ್ಞಾನೇಂದ್ರ, ಕರ್ನಾಟಕದ ಮಾಜಿ ಶಿಕ್ಷಣ ಸಚಿವ ಶ್ರೀ ಕಿಮ್ಮನೆ ರತ್ನಾಕರ್, ಪರಿಚಿತ ಉದ್ಯಮಿ ರಮೇಶ್ ಬಾಬು ಶಿವಮೊಗ್ಗ, ಶ್ರೀ ಶ್ರೀ ರವಿಶಂಕರ್ ವಿದ್ಯಾಮಂದಿರ್ ಶಿವಮೊಗ್ಗ, ತಪಸ್ವಿ ರವಿ ಎಂಟರ್ಪ್ರೈಸಸ್ ತೀರ್ಥಹಳ್ಳಿ, ರವಿ ನಂದನ್ ವಾಸ್ತು ಕನ್ಸ್ಟ್ರಕ್ಷನ್, ಲಯನ್ಸ್ ಕ್ಲಬ್ ಅಧ್ಯಕ್ಷರು ಹಾಗೂ ಸದಸ್ಯರು, ರೋಟರಿ ಕ್ಲಬ್ ಅಧ್ಯಕ್ಷರು ಹಾಗೂ ಸದಸ್ಯರು, ಅನೇಕ ಸ್ಥಳೀಯ ಹೂಡಿಕೆದಾರರು, ಗ್ರಾಹಕರು, ಹಾಗೂ ನಮ್ಮ ತೀರ್ಥಹಳ್ಳಿ ಮತ್ತು ಶಿವಮೊಗ್ಗದ ಬಂಧುಮಿತ್ರರು ಶುಭ ಕೋರಿದರು. ಗಣ್ಯರು, ಸ್ನೇಹಿತರು, ವ್ಯಾಪಾರಸ್ಥರು, ಮತ್ತು ಸಮಾಜ ಸೇವಕರು ಈ ಕ್ಷಣವನ್ನು ವಿಶೇಷವಾಗಿಸಿದರು.

ಕೊಪ್ಪ ಸರ್ಕಲ್, ಸಂಗೀತಾ ಮೊಬೈಲ್ ಶಾಪ್ ಮೇಲ್ಭಾಗ, ತೀರ್ಥಹಳ್ಳಿ

Mob: 9223401102, 95910 80693
http://www.skyfundsmart.com 

Categories
ಚಿಕ್ಕಮಗಳೂರು

ಕೊಪ್ಪ ತಾಲೂಕಲ್ಲಿ ವಿಶ್ವನಾಥ್ ಗದ್ದೆಮನೆ ಸೇವಾ ಹೆಜ್ಜೆ!

ಕೊಪ್ಪ ತಾಲೂಕಲ್ಲಿ ವಿಶ್ವನಾಥ್ ಗದ್ದೆಮನೆ ಸೇವಾ ಹೆಜ್ಜೆ!
* ವಿಶ್ವನಾಥ್ ಅಭಿಮಾನಿಗಳ ಬಳಗದಿಂದ ತಾಲೂಕಿನ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪರಿಕರ ವಿತರಣೆ
* ಗೋಲೋಕ ಗೋ ಶಾಲೆಗೆ ಪ್ರತಿ ತಿಂಗಳು ಸಹಾಯದ ಭರವಸೆ

NAMMMUR EXPRESS NEWS
ಕೊಪ್ಪ: ಸಮಾಜ ಸೇವಕರು, ಉದ್ಯಮಿಗಳು ಆದ ವಿಶ್ವನಾಥ್ ಗದ್ದೆಮನೆ ಅವರಿಂದ ಕೊಪ್ಪ ತಾಲೂಕಿನ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪರಿಕರ ವಿತರಣೆ ಮಾಡಲಾಯಿತು. ಈ ಮೂಲಕ ವಿಶ್ವನಾಥ್ ಅವರ ಸಮಾಜ ಸೇವೆ ಎಲ್ಲರಿಗೂ ಮಾದರಿ ಆಯಿತು.
ಕೊಪ್ಪ ತಾಲೂಕಿನ ವಿವಿಧ ಶಾಲೆಗಳಾದ ಬಸರೀಕಟ್ಟೆ, ಜಯಪುರ, ನಿಲುವಾಗಿಲು,ಕಮ್ಮರಡಿ,ಹರಿಹರಪುರ,ಕೊಪ್ಪ ಭಾಗದ ಸುಮಾರು 40 ಶಾಲೆಗಳ 2500ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್, ಒಂದು ಜೊತೆ ಟ್ರಾಕ್ ಸೂಟ್,ಒಂದು ಜೊತೆ ಯೂನಿ ಫಾರಂನ್ನು ವಿತರಿಸಲಾಯಿತು.

ಮೂರು ತಾಲೂಕಿನ ಎಲ್ಲಾ ಶಾಲೆಗಳಿಗೆ ವಿತರಣೆ ಗುರಿ

ಆಗಸ್ಟ್ 15ರ ಸ್ವಾತಂತ್ರ್ಯ ದಿನದ ಒಳಗೆ ಶೃಂಗೇರಿ,ಕೊಪ್ಪ,ಎನ್.ಆರ್ ಪುರ ತಾಲೂಕಿನ ಎಲ್ಲಾ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪರಿಕರಗಳನ್ನು ನೀಡುವ ಗುರಿ ಹೊಂದಿರುವ ವಿಶ್ವನಾಥ್ ಅಭಿಮಾನ ಬಳಗ ತಂಡ ಕಳೆದ ತಿಂಗಳು ಶೃಂಗೇರಿ, ಮತ್ತು ತೀರ್ಥಹಳ್ಳಿ ತಾಲೂಕಿನ ಶಾಲೆಗಳಿಗೆ ಭೇಟಿನೀಡಿ ಶೈಕ್ಷಣಿಕ ಪರಿಕರ ವಿತರಿಸಿತ್ತು.

* ಗೋಲೋಕ ಗೋಶಾಲೆಗೆ ಪ್ರತಿ ತಿಂಗಳು ಸಹಾಯದ ಭರವಸೆ

ಸಮಾಜ ಸೇವೆಯ ಮುಂದುವರಿದು ಕೊಪ್ಪ ತಾಲೂಕಿನ ಹರಿಹರಪುರ ಬಳಿಯ ಗೋಲೋಕ ಗೋಶಾಲೆಗೆ ಭೇಟಿ ನೀಡಿದ ವಿಶ್ವನಾಥ್ ಗದ್ದೆಮನೆಯವರು ಟ್ರಸ್ಟ್‌ನ ಸೇವಾ ಕಾರ್ಯವನ್ನು ಅಭಿನಂದಿಸಿ,ಶ್ಲಾಘಿಸಿದರು. ಈ ಶ್ರೇಷ್ಠ ಕಾರ್ಯಕ್ಕೆ ತನ್ನ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿ, ಮುಂದಿನ ದಿನಗಳಲ್ಲಿ ಸಹಕಾರ ನೀಡುವ ಇಂಗಿತ ವ್ಯಕ್ತಪಡಿಸಿದರು. ಈ ‌ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ರಾಮಸ್ವಾಮಿ, ಶೈಲೇಶ್ ಹೊಳ್ಳ ಸೇರಿದಂತೆ ಗೋಲೋಕ ಟ್ರಸ್ಟ್‌ನ ಸದಸ್ಯರು ಉಪಸ್ಥಿತರಿದ್ದರು.

Categories
ಕಾರ್ಕಳ

ನಿಟ್ಟೆ: ಶಾಲೆಯ ಇಂಟರಾಕ್ಟ್ ಕ್ಲಬ್‌ಗೆ ಮಹತ್ವದ ಚಾಲನೆ

ನಿಟ್ಟೆ: ಶಾಲೆಯ ಇಂಟರಾಕ್ಟ್ ಕ್ಲಬ್‌ಗೆ ಮಹತ್ವದ ಚಾಲನೆ

NAMMUR EXPRESS NEWS
ಡಾ. ಎನ್. ಎಸ್. ಎ. ಎಂ.ಎಂ. ಕನ್ನಡ ಮಾಧ್ಯಮ ಪ್ರೌಢ ಶಾಲೆ ನಿಟ್ಟೆ ಇಲ್ಲಿ 2025–26ನೇ ಸಾಲಿನ ಇಂಟರಾಕ್ಟ್ ಕ್ಲಬ್ಿನ ಉದ್ಘಾಟನೆ ಮತ್ತು ಪದಗ್ರಹಣ ಸಮಾರಂಭ ಬೃಹತ್ ರೂಪದಲ್ಲಿ ಜರುಗಿತು. Zone 5 (3182) ರ ಝೋನಲ್ ಕೋಆರ್ಡಿನೇಟರ್‌ರಾದ ರೊಟೇರಿಯನ್ ಶ್ರೀ ವಿಷ್ಣುಮೂರ್ತಿ ಸರಳಾಯ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ನೂತನ ಪದಾಧಿಕಾರಿಗಳಿಗೆ ಪದಪ್ರದಾನ ಮಾಡಿ.clubನ ಶಿಕ್ಷಣ ಮತ್ತು ಸೇವಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿಟ್ಟೆ ರೋಟರಿ ಕ್ಲಬ್‌ನ ನೂತನ ಅಧ್ಯಕ್ಷ ರೊಟೇರಿಯನ್ ಡಾ. ರಘುನಂದನ್ ಕೆ.ಆರ್. ವಹಿಸಿಕೊಂಡರು. ಮಾತನಾಡಿದ ಅವರು ಸೈಬರ್ ಸುರಕ್ಷತೆ, ರಸ್ತೆ ಸುರಕ್ಷತೆ ಮತ್ತು ಪರಿಸರ ರಕ್ಷಣೆಯಂತಹ ಸಾಮಾಜಿಕ ಕಳಕಳಿ ಇರುವ ವಿಷಯಗಳ ಬಗ್ಗೆ ಇಂಟರಾಕ್ಸ್ ಸದಸ್ಯರು ಶೈಕ್ಷಣಿಕ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ರಾಧಾ ಪ್ರಭು, ಕ್ಲಬ್ ಸಂಯೋಜಕ ಹಿರಿಯ शिक्षಕರಾದ ಶ್ರೀ ಚಂದ್ರ ನಾಯ್ಕ್ ಟಿ ಹಾಗೂ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕು. ಅನುಷ್ಕಾ ಮತ್ತು ತಂಡವು ಪ್ರಾರ್ಥನೆ ನಡೆಸಿದ್ದು, ಅತಿಥಿಗಳ ಪರಿಚಯವನ್ನು ಕು. ಖ್ಯಾತಿ ಮಾಡಿದರು. ಕಾರ್ಯಕ್ರಮ ನಿರೂಪಣೆಯನ್ನು ಕು. ಅನನ್ಯ ಆಚಾರ್ಯ ನಡೆಸಿ, ಕರೆದ ಶುಭಾಶಯಗಳಿಗೆ ನೂತನ ಅಧ್ಯಕ್ಷೆ ಕು. ಮಾನ್ವಿ ಜಿ ಧನ್ಯವಾದಗಳನ್ನು ಹೇಳಿದರು.

ಈಶೈಕ್ಷಣಿಕ ಸಾಲಿನ ಇಂಟರಾಕ್ಟ್ ಕ್ಲಬ್ ಪದಾಧಿಕಾರಿಗಳನ್ನಾಗಿ — ಅಧ್ಯಕ್ಷೆ: ಕು. ಮಾನ್ವಿ ಜಿ (10), ಉಪಾಧ್ಯಕ್ಷೆ: ಖ್ಯಾತಿ (9), ಕಾರ್ಯದರ್ಶಿ: ಸಿಪಾ (10), ಕೋಶಾಧಿಕಾರಿ: ರಣೀತ್ (9), ಸೇವಾನಿರ್ದೇಶಕಿ: ಅನ್ವಿತಾ (8) ಮತ್ತು ಯುವಜನಸೇವಾ ನಿರ್ದೇಶಕಿ: ಸ್ಪರ್ಶ್ (8) ಇವರನ್ನು ಆಯ್ಕೆ ಮಾಡಲಾಯಿತು. ಸಭೆಯು ವಿದ್ಯಾರ್ಥಿಗಳ ನೇತೃತ್ವ ಸಾಮರ್ಥ್ಯ ಮತ್ತು ಸಾಮಾಜಿಕ ಬದ್ಧತೆಯನ್ನು ಉತ್ತೇಜಿಸುವಂತೆ ರಾಮ್ಯವಾಗಿ ನೆರವೇರಿತು.

Categories
ತೀರ್ಥಹಳ್ಳಿ

ರಾಷ್ಟ್ರ ಮಟ್ಟದಲ್ಲಿ ತೀರ್ಥಹಳ್ಳಿ ಹುಡುಗಿ ಸಾನ್ವಿ ಜೋಯಿಸ್ ಸಾಧನೆ

ರಾಷ್ಟ್ರ ಮಟ್ಟದಲ್ಲಿ ತೀರ್ಥಹಳ್ಳಿ ಹುಡುಗಿ ಸಾನ್ವಿ ಜೋಯಿಸ್ ಸಾಧನೆ
– ಖೇಲೊ ಇಂಡಿಯಾ ವುಮೆನ್ಸ್ ಲೀಗ್ ನಲ್ಲಿ ಚಿನ್ನದ ಪದಕ
– ನಮ್ಮೂರ್ ಎಕ್ಸ್ ಪ್ರೆಸ್ ಮಾಧ್ಯಮದ ಶುಭಾಶಯಗಳು

NAMMUR EXPRESS NEWS
ತೀರ್ಥಹಳ್ಳಿ: ಬೆಂಗಳೂರಿನ ಸಿಎಂಆರ್ ವಿಶ್ವವಿದ್ಯಾಲಯ ಕ್ಯಾಂಪಸ್ ಇಂದೋರ್ ಹಾಲ್ನಲ್ಲಿ ಭಾನುವಾರ ನಡೆದ ಅಸ್ಮಿತ ಖೇಲೊ ಇಂಡಿಯಾ ವುಮೆನ್ಸ್ ಲೀಗ್ನ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಎಂ ಜೆ ಸ್ಕೂಲ್ ಆಫ್ ಮಾರ್ಷಲ್ ಆರ್ಟ್ಸ್ ತೀರ್ಥಹಳ್ಳಿಯ ವಿದ್ಯಾರ್ಥಿನಿ ಸಾನ್ವಿ ಜೋಯಿಸ್ ಚಿನ್ನದ ಪದಕ ದೊಂದಿಗೆ ಪ್ರಥಮ ಸ್ಥಾನವನ್ನು ಪಡೆದು ಮುಂದಿನ ಹಂತಕ್ಕೆ ಆಯ್ಕೆಯಾಗಿದ್ದಾಳೆ.
ತೀರ್ಥಹಳ್ಳಿ ನಿವಾಸಿಗಳಾದ ಅರ್ಚನಾ ಜೋಯಿಸ್ ಮತ್ತು ಮಹಾಬಲ ಜೋಯಿಸ್ ಅವರ ಪುತ್ರಿ ಹಾಗೂ ಪ್ರಸ್ತುತ ವಾಗ್ದೇವಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎಂಟನೇ ತರಗತಿ ವ್ಯಾಸಂಗ ಮಾಡುತ್ತಿರುತ್ತಾಳೆ. ಈ ಸಾಧನೆಯನ್ನು ಶಿವಮೊಗ್ಗ ಜಿಲ್ಲಾ ಕಿಕ್ ಬಾಕ್ಸಿಂಗ್ ಅಸೋಸಿಯೇಷನ್ ಅಧ್ಯಕ್ಷರಾದ ಚಂದನ್ ಪಾಟೀಲ್, ಪ್ರಧಾನ ಕಾರ್ಯದರ್ಶಿಗಳಾದ ಚಂದ್ರಕಾಂತ್ ಜಿ ಭಟ್ ಮತ್ತು ಸದಸ್ಯರು ಅಭಿನಂದಿಸಿ ಮುಂದಿನ ಹಂತಕ್ಕೆ ಶುಭ ಹಾರೈಸಿದ್ದಾರೆ.

ನಮ್ಮೂರ್ ಎಕ್ಸ್ ಪ್ರೆಸ್ ಮಾಧ್ಯಮದ ಶುಭಾಶಯಗಳು 

Categories
ತೀರ್ಥಹಳ್ಳಿ

ಸಾಲದ ಕಿರಿಕಿರಿ: ತೀರ್ಥಹಳ್ಳಿಯಲ್ಲಿ ದಂಪತಿಗಳ ಆತ್ಮಹತ್ಯೆ!

ಸಾಲದ ಕಿರಿಕಿರಿ: ತೀರ್ಥಹಳ್ಳಿಯಲ್ಲಿ ದಂಪತಿಗಳ ಆತ್ಮಹತ್ಯೆ!
– ಕಾಡಿನಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ
– ಹೊಸನಗರ : ಸರ್ಕಾರಿ ಶಾಲೆ ನೀರಿನ ತೊಟ್ಟಿಗೆ ವಿಷ ಬೆರೆಸಿದ ಬಾಲಕ!

NAMMUR EXPRESS NEWS
ತೀರ್ಥಹಳ್ಳಿ : ಮನೆಗಾಗಿ ಸಾಲ ಮಾಡಿಕೊಂಡಿದ್ದ ದಂಪತಿಗಳು, ಮನೆಯಲ್ಲಿ ನಡೆದ ಸಣ್ಣ ಪುಟ್ಟ ಕಿರಿ ಕಿರಿಯಿಂದಾಗಿ ಮನನೊಂದು ಮರಕ್ಕೆ ನೇ‌ಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ತೀರ್ಥಹಳ್ಳಿ ತಾಲೂಕಿನ ಬಿಳುವೆ ಗ್ರಾಮದ ಕಣಬೂರು ಸಮೀಪದ ಹಲ್ಯಾಪುರ ಎಂಬಲ್ಲಿ ನಡೆದಿದೆ. ಈ ಘಟನೆ ಇದೀಗ ಭಾರೀ ಚರ್ಚೆಗೂ ಕಾರಣವಾಗಿದೆ.
ದಂಪತಿಗಳಿಬ್ಬರು ಮನೆಯಿಂದ 200 ಮೀ ದೂರದ ಕಾಡಿನಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗುಂಡ ನಾಯ್ಕ (72 ವರ್ಷ) ಲಕ್ಷ್ಮಮ್ಮ (58 ವರ್ಷ) ಮೃತರು. ಮನೆಗಾಗಿ ಸಾಲ ಮಾಡಿಕೊಂಡಿದ್ದರು. ಇದನ್ನು ಮನೆಯಲ್ಲಿ ಪ್ರಶ್ನೆ ಮಾಡಿದ್ದಾರೆ. ಇದರಿಂದ ಮನೆಯಲ್ಲಿ ಕಿರಿ ಕಿರಿ ಉಂಟಾಗಿದ್ದು ಮನನೊಂದ ದಂಪತಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

– ಹೊಸನಗರ : ಸರ್ಕಾರಿ ಶಾಲೆಯ ನೀರಿನ ತೊಟ್ಟಿಗೆ ವಿಷ ಬೆರೆಸಿದ ಬಾಲಕ..!!

ಹೊಸನಗರ : ಸರ್ಕಾರಿ ಶಾಲೆಯ ನೀರಿನ ತೊಟ್ಟಿಗೆ ವಿಷ ಬೆರೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಕೃತ್ಯ ಎಸಗಿರುವುದು 5ನೇ ತರಗತಿ ಬಾಲಕ ಎಂದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ. ಹುಡುಗಾಟಿಕೆಯಿಂದ ಬಾಲಕ ಈ ತೊಟ್ಟಿಗೆ ವಿಷ ಬೆರೆಸಿದ್ದನು ಎಂದು ತನಿಖೆಯಿಂದ ತಿಳಿದು ಹೇಳಿದ್ದರು. ತಾಲೂಕಿನ ಹೂವಿನಕೋಣಿಯ ಸರ್ಕಾರಿ ಶಾಲೆಯ ನೀರಿನ ತೊಟ್ಟಿಗೆ ವಿಷ ಬೆರೆಸಲಾಗಿತ್ತು. ಈ ನೀರನ್ನು ಕುಡಿದಿದ್ದ ಕೆಲವು ಮಕ್ಕಳು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲು ಆಗಿದ್ದರು. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಟ್ವಿಟ್ ಮಾಡಿ ಇದು ಭಯೋತ್ಪಾದನೆಗಿಂತ ಗಂಭೀರವಾದ ವಿಷಯ ಎಂದು ಹೇಳಿದ್ದರು. ಈ ಸಂಬಂಧ ಸಿಎಂ ಸಿದ್ದರಾಮಯ್ಯ ಅವರು ಶಿವಮೊಗ್ಗದ ಎಸ್ ಪಿಗೆ ಕರೆ ಮಾಡಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಆದೇಶಿಸಿದ್ದರು. ಇದರ ಬೆನ್ನಲ್ಲೇ ಎಸ್ ಪಿ ಮಿಥುನ್ ಕುಮಾರ್ ಅವರು ಪ್ರಕರಣದ ತನಿಖೆ ಕುರಿತು ತೀರ್ಥಹಳ್ಳಿ ಡಿವೈಎಸ್‌ಪಿ ಅರವಿಂದ್ ಕಲಗುಜ್ಜಿ ನೇತೃತ್ವದಲ್ಲಿ ಮೂರು ತಂಡಗಳನ್ನು ರಚಿಸಿ ಒಟ್ಟು 18 ಪೊಲೀಸರನ್ನು ತನಿಖೆಗೆ ನಿಯೋಜನೆ ಮಾಡಲಾಗಿತ್ತು. ಫುಲ್ ಅಲರ್ಟ್ ಆಗಿದ್ದ ಪೊಲೀಸರು, ವಿವಿಧ ಆಯಾಮಗಳಲ್ಲಿ ತನಿಖೆ ಆರಂಭಿಸಿದ್ದರು. ಪ್ರಕರಣ ಭೇದಿಸಲು ಮೂರು ತಂಡಗಳು ಶ್ರಮಿಸಿದ್ದವು. ಟೆಕ್ನಿಕಲ್ ಎವಿಡೆನ್ಸ್ ಕಲೆಹಾಕಲು ಪೊಲೀಸರು ಮುಂದಾಗಿದ್ದರು. ಟವರ್ ಡಂಪ್ ಮೂಲಕ ತನಿಖೆ ಕೈಗೊಂಡಿದ್ದರು. ಆದರೆ ಇದೀಗ 5ನೇ ತರಗತಿಯ ಬಾಲಕನೇ ಈ ಕೃತ್ಯ ನಡೆಸಿರುವುದು ಎಂದು ತನಿಖೆಯಿಂದ ಬೆಳಕಿಗೆ ಬಂದಿದೆ.

Categories
ಕರಾವಳಿ

ಭಟ್ಕಳ: ಇನ್ನು ಪತ್ತೆ ಆಗದ ಮೀನುಗಾರರು!

ಟಾಪ್ ನ್ಯೂಸ್ ಕರಾವಳಿ

ಭಟ್ಕಳ: ಇನ್ನು ಪತ್ತೆ ಆಗದ ಮೀನುಗಾರರು!

* ಮಂಗಳೂರು: ಷಡ್ಯಂತ್ರಕ್ಕೆ ತುತ್ತಾದ ಉಪ ನಿರ್ದೇಶಕಿ
* ಬೆಳ್ತಂಗಡಿ: ವಿಷಬೀಜ ಬಿತ್ತಿದ ದುಷ್ಕರ್ಮಿಯ ವಿರುದ್ಧ ತನಿಖೆ
* ಉಡುಪಿ: ಲಿಂಕ್ ಮೂಲಕ ಹಣ ಪಾವತಿಸಿದ ವ್ಯಕ್ತಿಗೆ ವಂಚನೆ
* ಬಂಟ್ವಾಳ: ಕಾಣಿಕೆ ಹುಂಡಿಯ ಹಣ ಕಳುವು; ಆರೋಪಿಗಳ ಬಂಧನ
* ಕುಂದಾಪುರ: ಹೆದ್ದಾರಿಯಲ್ಲಿ ಅಪಘಾತ: ಮಹಿಳೆ ಸಾವು

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಭಟ್ಕಳ: ಭಟ್ಕಳ ತಾಲೂಕಿನ ಶಿರಾಲಿ ಅಳ್ವೆಕೋಡಿ ಸಮುದ್ರದಲ್ಲಿ ದೋಣಿ ದುರಂತದಿಂದ ನೀರುಪಾಲಾಗಿದ್ದ ನಾಲ್ವರ ಪೈಕಿ ಇಬ್ಬರ ಮೃತದೇಹ ಪತ್ತೆಯಾಗಿದ್ದು, ಇನ್ನುಳಿದ ಇಬ್ಬರ ಸುಳಿವು ಪತ್ತೆ ಆಗಲಿಲ್ಲ.
ತೆಂಗಿನಗುಂಡಿ ಬಂದರಿನಿಂದ ಮಂಗಳವಾರ ಪಾತಿ ದೋಣಿ ಮೂಲಕ ಮೀನುಗಾಗಿಕೆಗೆ ತೆರಳಿದ್ದ ಜಾಲಿಕೋಡಿಯ ರಾಮಕೃಷ್ಣ ಮೊಗೇರ, ಅಳ್ವೆಕೋಡಿಯ ಮುಂಗ್ರಿಮನೆ ಗಣೇಶ ಮಂಜುನಾಥ ಮೊಗೇರ, ಅಳ್ವೆಕೋಡಿ ಸದ್ಬಾವಿಯ ಸತೀಶ ತಿಮ್ಮಪ್ಪ ಮೊಗೇರ, ಮುರ್ಡೇಶ್ವರ ಕನ್ನಡ ಶಾಲೆ ನಿವಾಸಿ ನಿಶ್ಚಯ ಮೊಗೇರ ಹಾಗೂ ಇನ್ನಿಬ್ಬರು ಸೇರಿದಂತೆ ಒಟ್ಟೂ 6 ಮಂದಿ ಮೀನುಗಾರಿಕೆಗೆ ತೆರಳಿದ್ದರು.
ಇವರಿದ್ದ ದೋಣಿ ಮಂಗಳವಾರ ಮಧ್ಯಾಹ್ನ ಅಳ್ವೆಕೋಡಿ-ತೆಂಗಿನಗುಂಡಿ ಹೊರಗಡೆಯ ಅರಬ್ಬಿ ಸಮುದ್ರದಲ್ಲಿ ಭಾರೀ ಅಲೆಯ ಹೊಡೆತಕ್ಕೆ ಸಿಲುಕಿ ಮುಗುಚಿದ ಪರಿಣಾಮ ಆರೂ ಜನ ನೀರು ಪಾಲಾಗಿದ್ದರು. ಆದರೆ ಅವರಲ್ಲಿ ಇಬ್ಬರು ಈಜಿ ದಡ ಸೇರಿದ್ದರು.
ನಾಪತ್ತೆಯಾದ ನಾಲ್ವರ ಪೈಕಿ ಗುರುವಾರ ಮಧ್ಯಾಹ್ನ ರಾಮಕೃಷ್ಣ ಮೊಗೇರ ಮೃತದೇಹ ಹೆಬಳೆ ಹೊನ್ನೆಗದ್ದೆ ಸಮುದ್ರ ತೀರದಲ್ಲಿ ಪತ್ತೆಯಾಗಿತ್ತು. ಶನಿವಾರ ಗಣೇಶ ಮೊಗೇರ ಶವ ಪತ್ತೆಯಾಗಿದೆ. ಉಳಿದಂತೆ ಸತೀಶ ಮೊಗೇರ ಹಾಗೂ ನಿಶ್ಚಿತ ಮೊಗೇರ ಕುರಿತು ಯಾವುದೇ ಸುಳಿವು ಲಭ್ಯವಾಗಿಲ್ಲ. ಸ್ಥಳೀಯ ಮೀನುಗಾರರು, ಕರಾವಳಿ ಕಾವಲು ಪಡೆ ಸಿಬ್ಬಂದಿ, ಕೋಸ್ಟಲ್ ಗಾರ್ಡ್ ನವರು, ಪೊಲೀಸರು ಸ್ಥಳದಲ್ಲಿ ಹುಡುಕಾಟ ನಡೆಸಿದ್ದಾರೆ. ಸಹಾಯಕ ಆಯುಕ್ತ ಕಾವ್ಯರಾಣಿ ಮತ್ತು ತಹಶೀಲ್ದಾ‌ರ್ ನಾಗೇಂದ್ರ ಕೋಳಶೆಟ್ಟಿ ಮತ್ತಿತರ ಅಧಿಕಾರಿಗಳು ಅಳ್ವೆಕೋಡಿ ಬಂದರಿಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.
ಕಣ್ಮರೆಯಾದ ಮೀನುಗಾರರ ಕುರಿತು ಯಾವುದೇ ಸುಳಿವು ದೊರೆಯದ್ದರಿಂದ ಕುಟುಂಬಸ್ಥರಿಗಷ್ಟೇ ಅಲ್ಲ, ಮೀನುಗಾರರ ಸಮುದಾಯವೇ ಮರಗುತ್ತಿದೆ. ಇತ್ತೀಚಿನ ಗಂಗೊಳ್ಳಿ ದೋಣಿ ದುರಂತದ ನೆನಪು ಮಾಸುವ ಮುನ್ನವೇ ತೆಂಗಿನಗುಂಡಿ ಬಂದರಿನಲ್ಲಿ ಆದ ದೋಣಿ ದುರಂತ ಮೀನುಗಾರರನ್ನು ಕಂಗೆಡಿಸಿದ್ದು ಮಾತ್ರ ಸತ್ಯ.

* ಮಂಗಳೂರು: ಷಡ್ಯಂತ್ರಕ್ಕೆ ತುತ್ತಾದ ಉಪ ನಿರ್ದೇಶಕಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕಿ ಕೃಷ್ಣವೇಣಿ ಎನ್ನುವವರು, ಸುಳ್ಳು ವದಂತಿಯ ಹಿನ್ನೆಲೆಯಲ್ಲಿ ಪೊಲೀಸರಿಂದ ಬಂಧನಕ್ಕೆ ಒಳಗಾದ ಘಟನೆ ಮಂಗಳೂರಿನಲ್ಲಿ ಮೇ ತಿಂಗಳಿನಲ್ಲಿ ನಡೆದಿತ್ತು. ಮನೆ ಕಟ್ಟುವ ವಿಚಾರಕ್ಕೆ ಸಂಬಂಧಿಸಿದಂತೆ, ದೃಢೀಕರಣ ಪತ್ರ ನೀಡಲು ಲಂಚವನ್ನು ಕೇಳಿದ್ದಾರೆ ಎಂಬ ಆರೋಪವನ್ನು ಕೃಷ್ಣವೇಣಿಯ ಮೇಲೆ ಹೊರೆಸಲಾಗಿತ್ತು. ಆರೋಪದ ಆಧಾರದ ಮೇಲೆ ಲೋಕಾಯುಕ್ತ ಅಧಿಕಾರಿಗಳು ಕೃಷ್ಣವೇಣಿ ಅವರನ್ನು ಬಂಧಿಸಲು ಪೊಲೀಸರಿಗೆ ಆದೇಶವನ್ನು ನೀಡಿದ್ದರು. ಈ ಸಂಗತಿಯನ್ನು ವಿರೋಧಿಸಿ ಕೃಷ್ಣವೇಣಿ ಅವರು ಉಚ್ಚನ್ಯಾಯಾಲಯಕ್ಕೆ ಕೆಲವು ದಾಖಲೆಗಳೊಂದಿಗೆ ರಿಟ್ ಅರ್ಜಿಯನ್ನು ಸಲ್ಲಿಸಿದ್ದರು. ಅಕ್ರಮ ಮರಳು ವ್ಯವಹಾರಕ್ಕೆ ಬೆಂಬಲ ನೀಡುತ್ತಿದ್ದ ಗಣಿ ಮತ್ತು ಭೂ ಇಲಾಖೆಯ ಅಧಿಕಾರಿಗಳ ಅಪರಾಧಗಳನ್ನು ಬಯಲಿಗೆ ತರಲು ಮತ್ತು ವ್ಯವಹಾರ ಪಾರದರ್ಶಕವಾಗಿರಬೇಕು ಎಂಬ ಉದ್ದೇಶದಿಂದ ಕೃಷ್ಣವೇಣಿ ಅವರು ತಮ್ಮ ಇಲಾಖೆಯಲ್ಲಿ ಜಿಪಿಎಸ್ ಸೇರಿದಂತೆ ಇನ್ನೂ ಹಲವಾರು ಸುಧಾರಿತ ತಂತ್ರಜ್ಞಾನವನ್ನು ಅಳವಡಿಸಲು ಮುಂದಾಗಿದ್ದರು. ಇದರಿಂದ ತನ್ನ ಬಣ್ಣ ಬಯಲಾಗುತ್ತದೆ ಎಂಬುದನ್ನು ಅರಿತ ಅಧಿಕಾರಿಯೊಬ್ಬರು, ಕೃಷ್ಣವೇಣಿ ಅವರ ವಿರುದ್ಧ ಇಲ್ಲಸಲ್ಲದ ಅಪವಾದಗಳನ್ನು ಹೊರೆಸಿ, ಕೃಷ್ಣವೇಣಿ ಅವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದ್ದರು. ಉಚ್ಚನ್ಯಾಯಾಲಯವು ಪ್ರಕರಣಕ್ಕೆ ಸಂಬಂಧಿಸಿದಂತೆ ಪೂರ್ವಾಪರವನ್ನು ಪರಿಶೀಲಿಸಿ, ಕೃಷ್ಣವೇಣಿ ಅವರು ನಿರಪರಾಧಿ ಎಂದು ಘೋಷಿಸಿ, ಅಧಿಕಾರವನ್ನು ಅಮಾನತುಗೊಳಿಸಿದ್ದನ್ನು ಹಿಂಪಡೆದುಕೊಂಡು, ಅವರು ಉಪನಿರ್ದೇಶಕಿಯಾಗಿ ಮುಂದುವರೆಯಲು ಅವಕಾಶ ನೀಡುವಂತೆ ರಾಜ್ಯ ಗಣಿ ಮತ್ತು ಭೂ ಇಲಾಖೆಗೆ ಆದೇಶವನ್ನು ಹೊರಡಿಸಿದೆ.

* ಬೆಳ್ತಂಗಡಿ: ವಿಷಬೀಜ ಬಿತ್ತಿದ ದುಷ್ಕರ್ಮಿಯ ವಿರುದ್ಧ ತನಿಖೆ

ಬೆಳ್ತಂಗಡಿ: ಫೇಸ್ ಬುಕ್ ನ ಕುಲುಮೆ ಎಂಬ ಗುಂಪಿನಲ್ಲಿ ಅಯ್ಶುಅಯ್ಶಾ ಎಂಬ ಹೆಸರಿನ ಖಾತೆಯ ಮೂಲಕ, ಕೋಮುಗಲಭೆಯನ್ನು ಪ್ರೇರೇಪಿಸುವಂತಹ ಮತ್ತು ಜನರ ಮನಸ್ಸಿನಲ್ಲಿ ವಿಷಬೀಜ ಬಿತ್ತುವಂತಹ ಸಂದೇಶಗಳನ್ನು ವ್ಯಕ್ತಿಯೊಬ್ಬರು ರವಾನಿಸುತ್ತಿದ್ದ ಹಿನ್ನೆಲೆಯಲ್ಲಿ, ಉಜಿರೆಯ ಪೊತ್ತುಮೋನು ಎನ್ನುವವರು ಆ ವ್ಯಕ್ತಿಯ ವಿರುದ್ಧ ದೂರು ನೀಡಿದ್ದಾರೆ.‌ ವ್ಯಕ್ತಿ ಯಾರು? ಅದರಲ್ಲಿ ಇರುವ ಹೆಸರು ನಿಜವಾದುದೆ ಅಥವಾ ಖಾತೆಗೆ ಬೇರೊಂದು ಹೆಸರು ನೀಡಲಾಗಿದೆಯೇ ಎಂಬಿತ್ಯಾದಿ ಸಂಗತಿಗಳ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದು, ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

* ಉಡುಪಿ: ಲಿಂಕ್ ಮೂಲಕ ಹಣವನ್ನು ಪಾವತಿಸಿದ ವ್ಯಕ್ತಿಗೆ ವಂಚನೆ

ಉಡುಪಿ: ಹರಿಪ್ರಸಾದ್ ಎನ್ನುವವರು ಕಳೆದ ಹತ್ತು ವರ್ಷಗಳ ಹಿಂದೆ ಮನೆಯನ್ನು ಕಟ್ಟಿಸುವ ಸಲುವಾಗಿ ಖಾಸಗಿ ಬ್ಯಾಂಕ್ ವೊಂದರಲ್ಲಿ ಗೃಹಸಾಲವನ್ನು ಪಡೆದಿದ್ದರು. ಆಗ ಅದೇ ಬ್ಯಾಂಕಿನವರು ಹರಿಪ್ರಸಾದ್ ಗೆ ಎಚ್ ಡಿ ಎಫ್ ಸಿ ಲೈಫ್ ಇನ್ಶೂರೆನ್ಸ್ ಅನ್ನು ಸಹ ಮಾಡಿಸಿದ್ದರು. ಇದರಿಂದಾಗಿ ಹರಿಪ್ರಸಾದ್ ಅವರು ಒಂದೆರಡು ಕಂತುಗಳ ತನಕ ಹಣವನ್ನು ಪಾವತಿಸಿದ್ದರು. ನಂತರ ವಿಮಾ ಕಂಪನಿಯಿಂದ ಯಾವುದೇ ನೋಟಿಸ್ ಬಾರದ ಹಿನ್ನೆಲೆಯಲ್ಲಿ, ಹರಿಪ್ರಸಾದ್ ಅವರಿಗೆ ನೆನಪಿಲ್ಲದೆ ಕಂತಿನ ಹಣವನ್ನು ಪಾವತಿಸಿರಲಿಲ್ಲ. ಆಗ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ, ನಿಮ್ಮ ವಿಮಾ ಕಂತಿನ ಹಣ ಬಾಕಿ ಇದೆ, ಈ ಕೂಡಲೇ ಪಾವತಿಸಿ ಎಂದು ತಿಳಿಸಿದ್ದಾನೆ. ಆಗ ಹರಿಪ್ರಸಾದ್ ಅವರಿಗೆ ತಮ್ಮ ವಿಮಾ ಕಂತಿನ ಹಣ ಬಾಕಿ ಇರುವುದರ ನೆನಪಾಗಿ, ವ್ಯಕ್ತಿಯು ಕಳುಹಿಸಿದ ಲಿಂಕ್ ಒತ್ತಿ, ಗೂಗಲ್ ಪೇ ಮೂಲಕ ಸುಮಾರು ತೊಂಭತ್ತು ಸಾವಿರ ರೂಪಾಯಿ ಹಣವನ್ನು ಪಾವತಿಸಿದ್ದಾರೆ. ಬಳಿಕ ಎಚ್ ಡಿ ಎಫ್ ಸಿ ಇನ್ಸೂರೆನ್ಸ್ ಕಂಪನಿಯ ಬಳಿ ವಿಚಾರಿಸಿದಾಗ ಯಾವುದೇ ಹಣ ಜಮೆಯಾಗಿಲ್ಲ ಎಂದು ತಿಳಿಸಿದ್ದಾರೆ. ಆಗ ಹರಿಪ್ರಸಾದ್ ಅವರಿಗೆ ತಾನು ಮೋಸ ಹೋಗಿರುವ ಸಂಗತಿ ತಿಳಿದುಬಂದಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಉಡುಪಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.‌ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

* ಬಂಟ್ವಾಳ: ಹುಂಡಿಯ‌ ಹಣ ಕಳುವು; ಆರೋಪಿಗಳ ಬಂಧನ

ಬಂಟ್ವಾಳ: ಜುಲೈ 26ರಂದು ದೇಲಂತಬೆಟ್ಟುವಿನಲ್ಲಿ, ಚರ್ಚಿನ ಕೆಳರಸ್ತೆಯ ಬದಿಯಲ್ಲಿ ಇರಿಸಲಾಗಿದ್ದ ಹುಂಡಿಯನ್ನು ಮೂವರು ಯುವಕರು ಒಡೆದು, ಹಣವನ್ನು ದೋಚಿದ್ದಾರೆ. ಹುಂಡಿಯಲ್ಲಿ ಸಂಗ್ರಹವಾಗಿದ್ದ ಸುಮಾರು 12 ರಿಂದ 15 ಸಾವಿರ ರೂಪಾಯಿಗಳನ್ನು ಲಪಟಾಯಿಸಿದ್ದಾರೆ. ಸ್ಥಳೀಯ ಧಾರ್ಮಿಕ ಕೇಂದ್ರದ ಅಧ್ಯಕ್ಷರಾದ ಡಿ ನಾರಾಯಣ ರಾವ್ ಅವರು ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಕರಣ ಬೆಳಕಿಗೆ ಬಂದಿದೆ. ಕೂಡಲೇ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ. ಇದರ ಹಿನ್ನೆಲೆಯಲ್ಲಿ ಪೊಲೀಸರು ಮೂವರು ಆರೋಪಿಗಳನ್ನು ನಿನ್ನೆಯ ದಿನ ಕಂಡುಹಿಡಿದು ಬಂಧನಕ್ಕೆ ಒಳಪಡಿಸಿದ್ದಾರೆ. ಆರೋಪಿಗಳನ್ನು ವಿಟ್ಲ ಕಸಬ ಗ್ರಾಮದ ನಿವಾಸಿಗಳಾದ ತ್ವಾಹಿದ್, ಉಮ್ಮದ್ ಫಾರೂಕ್ ಮತ್ತು ಮೊಹಮ್ಮದ್ ನಬೀಲ್ ಎಂದು ಗುರುತಿಸಲಾಗಿದೆ. ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

* ಕುಂದಾಪುರ: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅಪಘಾತ

ಕುಂದಾಪುರ: ಸಂಗಮ್ ಜಂಕ್ಷನ್ ಸಮೀಪದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬಸ್ ಮತ್ತು ಸ್ಕೂಟರ್ ನಡುವೆ ಅಪಘಾತ ಸಂಭವಿಸಿದ ಘಟನೆ ನಿನ್ನೆ ಸಂಜೆ ನಡೆದಿದೆ. ಬಸ್ ಸ್ಕೂಟರ್ ಗೆ ಡಿಕ್ಕಿ ಹೊಡೆದುದರ ಪರಿಣಾಮವಾಗಿ, ಸ್ಕೂಟರ್ ನಲ್ಲಿ ಹಿಂಬದಿ ಕುಳಿತಿದ್ದ ಹೊಸಮಠ ಚಾರುಕೊಟ್ಟಿಗೆ ನಿವಾಸಿ ಜಲಜಾ ಎನ್ನುವವರು ಸ್ಥಳದಲ್ಲೇ ಧಾರುಣವಾಗಿ ಸಾವನ್ನಪ್ಪಿದ್ದಾರೆ.‌ ಸ್ಕೂಟರ್ ಚಲಾಯಿಸುತ್ತಿದ್ದ ಜಲಜ ಅವರ ಪತಿ ನಾರಾಯಣ ಎನ್ನುವರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.‌ ಘಟನೆಗೆ ಸಂಬಂಧಿಸಿದಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Categories
ರಾಜ್ಯ

ಚಾಮರಾಜನಗರ : ವಿಷದ ಕಾಯಿ ತಿಂದು 12 ಮಕ್ಕಳು ಅಸ್ವಸ್ಥ..!!

ಟಾಪ್ 4 ನ್ಯೂಸ್ ಕರ್ನಾಟಕ

ಚಾಮರಾಜನಗರ : ವಿಷದ ಕಾಯಿ ತಿಂದು 12 ಮಕ್ಕಳು ಅಸ್ವಸ್ಥ..!!
– ಬಳ್ಳಾರಿ : ಓರ್ವ ವಿದ್ಯಾರ್ಥಿ ಮೇಲೆ ಮನಸೋ ಇಚ್ಛೆ ಹಲ್ಲೆ..!!
– ಯಾದಗಿರಿ : ಅಂಗನವಾಡಿಯಲ್ಲಿ ಮಕ್ಕಳನ್ನು ಕೂಡಿಟ್ಟು ಜಮೀನು ಕೆಲಸಕ್ಕೆ ಹೋದ ಸಹಾಯಕಿ!
– ಬೆಳಗಾವಿ : ಜಮೀನಿನಲ್ಲಿ ಹೈಟೆಕ್‌ ವಾಮಾಚಾರ ಪತ್ತೆ..!!

NAMMUR EXPRESS NEWS
ಚಾಮರಾಜನಗರ: ವಿಷದ ಕಾಯಿ ತಿಂದು 12 ಮಕ್ಕಳು ಅಸ್ವಸ್ಥರಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಯರಿಯೂರಿನಲ್ಲಿ ನಡೆದಿದೆ. ಮಕ್ಕಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಸಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಬ್ಬು ಕಟಾವು ಮಾಡಲು ಯಳಂದೂರು ತಾಲೂಕಿನ ಯರಿಯೂರಿಗೆ ಬಂದಿದ್ದ ಕಾರ್ಮಿಕರ ಮಕ್ಕಳು ವಿಷದ ಕಾಯಿ ತಿಂದು ಆಸಸರಾಗಿದ್ದಾರೆ. ಹಣ್ಣೆಂದು ಭಾವಿಸಿ ಮರಳೆಕಾಯಿ ವಾಂತಿ ಮಾಡಿಕೊಳ್ಳುತ್ತಿದ್ದನ್ನು ಕಂಡು ಪಾಲಕರು ಆಸ್ಪತ್ರೆಗೆ ಸೇರಿಸಿದ್ದಾರೆ.

– ಬಳ್ಳಾರಿ : ಓರ್ವ ವಿದ್ಯಾರ್ಥಿ ಮೇಲೆ ಮನಸೋ ಇಚ್ಛೆ ಹಲ್ಲೆ..!!

ಬಳ್ಳಾರಿ : ಅಪ್ರಾಪ್ತ ಬಾಲಕಿಯ ಫೋಟೋ ವಾಟ್ಸ್‌ಆಪ್ ಸ್ಟೇಟಸ್​ ಇಟ್ಟಿದ್ದಕ್ಕೆ ಯುವಕನ ಮೇಲೆ ಮನಸೋ ಇಚ್ಚೆ ಹಲ್ಲೆ ಮಾಡಿರುವ ಘಟನೆ ಬಳ್ಳಾರಿ ನಗರದ ರೆಡಿಯೋ ಪಾರ್ಕ್​ ಬಳಿಯ ಐಟಿಐ ಕಾಲೇಜು ಆವರಣದಲ್ಲಿ ನಡೆದಿದೆ. ದೊಡ್ಡಬಸವ (19) ಹಲ್ಲೆಗೊಳಗಾದ ಯುವಕ. ದೊಡ್ಟಬಸವ ಅಪ್ರಾಪ್ತ ಬಾಲಕಿಯ ಫೋಟೋವನ್ನು ತನ್ನ ವಾಟ್ಸ್‌ಆಪ್ ಸ್ಟೇಟ್‌ಸ್‌ಗೆ ಹಾಕಿಕೊಂಡಿದ್ದನು. ಆಗ, ಬಾಲಕಿಯ ಅಣ್ಣ ದೊಡ್ಡಬಸವನನ್ನು ಪ್ರಶ್ನೆ ಮಾಡಿದ್ದಾನೆ. ಈ ವಿಚಾರವಾಗಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ಸಿಟ್ಟು ಇಟ್ಟುಕೊಂಡಿದ್ದ ಬಾಲಕಿಯ ಅಣ್ಣ, ತನ್ನ ಸ್ನೇಹಿತರನ್ನ ಕರೆದುಕೊಂಡು ಬಂದು ಐಟಿಐ ಕಾಲೇಜು ಆವರಣದಲ್ಲಿ ದೊಡ್ಡಬಸವನಿಗೆ ಮನಸೋ ಇಚ್ಚೆ ಹೊಡೆಸಿದ್ದಾನೆ. ದೊಡ್ಡಬಸವನ ಮೇಲೆ ಹಲ್ಲೆ ಮಾಡುತ್ತಿರುವುದನ್ನು ಬಾಲಕಿಯ ಅಣ್ಣ ವಿಡಿಯೋ ಮಾಡಿಕೊಂಡಿದ್ದಾನೆ. ದೊಡ್ಡಬಸವನ ತುಟಿ, ದವಡೆ, ಬೆನ್ನು, ಎದೆ, ಪಕ್ಕೆಲಬು ಹಾಗೂ ಸೊಂಟಕ್ಕೆ ತೀವ್ರವಾಗಿ ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿದ ಆರೋಪಿಗಳಾದ ಶಶಿಕುಮಾರ್, ಸಾಯಿಕುಮಾರ್ ಸೇರಿದಂತೆ 10 ಜನರ ವಿರುದ್ಧ ಕೌಲಬಜಾರ್ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

– ಯಾದಗಿರಿ : ಅಂಗನವಾಡಿಯಲ್ಲಿ ಮಕ್ಕಳನ್ನು ಕೂಡಿಟ್ಟು ಜಮೀನು ಕೆಲಸಕ್ಕೆ ಹೋದ ಸಹಾಯಕಿ!

ಯಾದಗಿರಿ : ಮಕ್ಕಳನ್ನು ಅಂಗನವಾಡಿ ಕೇಂದ್ರದೊಳಗೆ ಕೂಡಿ ಹಾಕಿ ಬೀಗ ಹಾಕಿಕೊಂಡು ಜಮೀನು ಕೆಲಸಕ್ಕೆ ಹೋದ ಘಟನೆ ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಬೂದೂರು ಗ್ರಾಮದಲ್ಲಿ ನಡೆದಿದ್ದು, ಆಕೆಯ ಈ ವರ್ತನೆಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೂದೂರು ಗ್ರಾಮದ ಅಂಗನವಾಡಿ ಕೇಂದ್ರ-1ರ ಸಹಾಯಕಿ ಸಾವಿತ್ರಮ್ಮ ಕೇಂದ್ರಕ್ಕೆ ಬೀಗ ಹಾಕಿದಾಕೆ. ಈಕೆ ಬೀಗ ಹಾಕಿಕೊಂಡು ಜಮೀನು ಕೆಲಸಕ್ಕೆ ಹೋಗಿದ್ದಾರೆ. ಇತ್ತ ಮಕ್ಕಳು ಅತ್ತು ಕೂಗಾಡಿದ್ದನ್ನು ಆಲಿಸಿದ ಗ್ರಾಮಸ್ಥರು ವಿಷಯ ತಿಳಿದು ಹೌಹಾರಿದ್ದಾರೆ.

– ಬೆಳಗಾವಿ : ಜಮೀನಿನಲ್ಲಿ ಹೈಟೆಕ್‌ ವಾಮಾಚಾರ ಪತ್ತೆ..!!

ಬೆಳಗಾವಿ: ಸಾಧಾರಣವಾಗಿ ಲಿಂಬೆ ಹಣ್ಣು, ಅರಿಶಿಣ ಕುಂಕುಮ ಇಟ್ಟು ವಾಮಾಚಾರ ಮಾಡೋದು ಸಾಮಾನ್ಯ. ಆದರೆ ಬೆಳಗಾವಿಯಲ್ಲೊಂದು ಹೈಟೆಕ್ ವಾಮಾಚಾರ ಪ್ರಕರಣ ಬೆಳಕಿಗೆ ಬಂದಿದೆ. ಬೆಳಗಾವಿ ತಾಲೂಕಿನ ಯಳ್ಳೂರು ಗ್ರಾಮದ ಹೊರವಲಯದ ರೈತ ಸದಾನಂದ ದೇಸಾಯಿ ಎನ್ನುವ ರೈತನ ಹೊಲದಲ್ಲಿ ಮೊಬೈಲ್ ಇಟ್ಟು ವಾಮಾಚಾರ ಮಾಡಲಾಗಿದೆ. ಜಮೀನಿನ ರೈತರು ರೈತ ಮುಖಂಡ ರಾಜು ಮರವೆ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದು, ಅವರು ಸ್ಥಳಕ್ಕೆ ಹೋಗಿ ನೋಡಿದಾಗ ಲಿಂಬೆಹಣ್ಣು, ಮೊಸರನ್ನ ಜೊತೆಗೆ ಸ್ಮಾರ್ಟ್‌ ಫೋನ್‌ ಇರುವುದು ಕಂಡುಬಂದಿದೆ. ಇದು ಸ್ಟಾರ್ಟ್ ವಾಮಾಚಾರ ಎಂದೇ ಹೇಳಲಾಗುತ್ತಿದೆ. ಮೊಬೈಲ್ ಜೊತೆಗೆ ಲಿಂಬೆಹಣ್ಣು, ತೆಂಗಿನಕಾಯಿ, ಎಲೆ ಅಡಿಕೆ, ಕ್ಯಾರ್‌ಬೀಜ ಹಾಕಿ, ಗಿಡಕ್ಕೆ ಗಂಟು ಕಟ್ಟಲಾಗಿದೆ. ಕೆಲ ತಿಂಗಳಿಂದ ಸತತವಾಗಿ ಇಲ್ಲಿ ವಾಮಾಚಾರದ ವಸ್ತುಗಳು ಪತ್ತೆಯಾಗುತ್ತಿವೆ ಎನ್ನಲಾಗಿದೆ.

Categories
ಚಿಕ್ಕಮಗಳೂರು

ಎನ್ ಆರ್ ಪುರ ಕಾಡಾನೆ ಸೆರೆಗೆ ಆದೇಶ,ಇಂದಿನಿಂದ ಕಾರ್ಯಾಚರಣೆ

ಎನ್ ಆರ್ ಪುರ ಕಾಡಾನೆ ಸೆರೆಗೆ ಆದೇಶ,ಇಂದಿನಿಂದ ಕಾರ್ಯಾಚರಣೆ 

* ಶಾಸಕ ರಾಜೇಗೌಡ ಹಾಗೂ ಡಾ.ಕೆ ಪಿ ಅಂಶುಮಂತ್‌ರಿಂದ ಸರ್ಕಾರಕ್ಕೆ ಮನವಿ
* ಸಿಬ್ಬಂದಿಗಳಿಗೆ ಧೈರ್ಯ ತುಂಬಿದ ಅಂಶುಮಂತ್,ಗ್ರಾಮಸ್ಥರಿಂದ ಸಹಕಾರದ ಮನವಿ
* ಕಾಡುಪ್ರಾಣಿಗಳಿಂದ ಶಾಶ್ವತ ಪರಿಹಾರ ಕಲ್ಪಿಸುವಂತೆ ಜೀವರಾಜ್ ಮನವಿ

NAMMMUR EXPRESS NEWS
ಎನ್ ಆರ್ ಪುರ: ಶೃಂಗೇರಿ ಕ್ಷೇತ್ರದಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿದ್ದು ರೈತರ ಜಮೀನಿಗೆ ನುಗ್ಗಿ ಅಪಾರ ಪ್ರಮಾಣದ ಬೆಳೆ ನಾಶ ಮಾಡುತ್ತಿವೆ. ಕಳೆದ ಕೆಲವು ದಿನಗಳ ಹಿಂದಷ್ಟೇ ಬಾಳೆಹೊನ್ನೂರು ಭಾಗದಲ್ಲಿ ನಾಲ್ಕು ದಿನಗಳ ಅಂತರದಲ್ಲಿ ಇಬ್ಬರು ಕಾಡಾನೆ ದಾಳಿಯಿಂದ ಮೃತಪಟ್ಟ ಘಟನೆಯೂ ನಡೆಯಿತು.ನಂತರ ಒಂದು ಕಾಡಾನೆಯನ್ನು ಸೆರೆ ಹಿಡಿಯಲಾಗಿತ್ತು. ಆದರೆ ಅಷ್ಟಕ್ಕೆ ಮುಗಿಯದ ಸಮಸ್ಯೆ ಈಗ ಎನ್ ಆರ್ ಪುರ,ಕೊಪ್ಪ ಭಾಗದಲ್ಲಿ ಮುಂದುವರೆದಿದೆ ರೈತರ ಜಮೀನಿಗೆ ನಿರಂತರ ದಾಳಿ ಮಾಡುತ್ತಿರುವ ಕಾಡಾನೆಗಳು ಅಪಾರ ಪ್ರಮಾಣದ ಬೆಳೆ ನಾಶ ಮಾಡುತ್ತಿದ್ದು,ರೈತರು ಕಂಗಾಲಾಗಿದ್ದಾರೆ.
ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ ರಾಜೇಗೌಡ ಹಾಗೂ ಭದ್ರಾ ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಡಾ. ಕೆ ಪಿ ಅಂಶುಮಂತ್‌ ಅರಣ್ಯ ಸಚಿವರಿಗೆ ತೊಂದರೆ ಕೊಡುತ್ತಿರುವ ಪುಂಡಾನೆಯನ್ನು ಸೆರೆ ಹಿಡಿಯುವಂತೆ ಮನವಿ ಮಾಡಿದ್ದರು. ಮನವಿಗೆ ಸ್ಪಂದಿಸಿದ ಅರಣ್ಯ ಸಚಿವರು ತಾಲೂಕಿನ ಮಡಬೂರು ಗ್ರಾಮದಲ್ಲಿ ಉಪಟಳ ನೀಡುತ್ತಿರುವ ಒಂದು ಕಾಡಾನೆಯನ್ನು ಸೆರೆ ಹಿಡಿಯುವಂತೆ ಆದೇಶಿದ್ದು ಅದರಂತೆ ತಾಲೂಕಿನ ಮಡಬೂರು ಗ್ರಾಮದ ಕಪ್ಪೂರಿನಿಂದ ಕಾಡಾನೆ ಸೆರೆ ಕಾರ್ಯಾಚರಣೆ ಆರಂಭವಾಗಲಿದ್ದು, ಭಾನುವಾರ ಸಂಜೆ 5:00 ಗಂಟೆಗೆ ಕಡಹಿನಬೈಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಾಂಧಿಗ್ರಾಮಕ್ಕೆ ಸಕ್ರೇಬೈಲಿನ ನಾಲ್ಕು ಆನೆಗಳು ಆಗಮಿಸಿದ್ದು,ಇನ್ನೂ ಮೂರು ಆನೆಗಳ ತಂಡ ಮಡಿಕೇರಿಯಿಂದ ಬರಲಿದ್ದು ಕಾರ್ಯಚರಣೆಯಲ್ಲಿ ಒಟ್ಟು ಏಳು ಆನೆಗಳು ಭಾಗವಹಿಸಲಿವೆ ಎಂದು ಕಡಹಿನಬೈಲ್ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷ ಸುನಿಲ್ ಕುಮಾರ್ ಮಾಹಿತಿ ನೀಡಿದ್ದಾರೆ.
ಗಾಂಧಿ ಗ್ರಾಮದ ಕೆ ಎನ್ ನಾಗರಾಜ್ ರವರ ಮನೆಯ ಪಕ್ಕದ ಆವರಣದಲ್ಲಿ ಕರೆತಂದಿರುವ ಆನೆಗಳನ್ನು ಕಡಹಿನಬೈಲು ಗ್ರಾಮ ಪಂಚಾಯಿತಿ ವತಿಯಿಂದ ಬರಮಾಡಿಕೊಳ್ಳಲಾಗಿದೆ.
ಇಂದು ಬೆಳಿಗ್ಗೆಯಿಂದ ಕಾರ್ಯಾಚರಣೆಗೆ ಇಳಿಯುವ ಅರಣ್ಯ ಇಲಾಖೆ ಕಾಡಾನೆ ಇರುವ ಸ್ಥಳ ಗುರುತಿಸಿ ಕಾರ್ಯಾಚರಣೆಯನ್ನು ಮುಂದುವರಿಸಲಿದ್ದಾರೆ, ಕಾರ್ಯಾಚರಣೆ ಯಶಸ್ವಿಯಾಗಲಿ ಹಾಗೂ ಒಂಟಿ ಸಲಗವನ್ನು ಶೀಘ್ರ ಹಿಡಿದು ಸ್ಥಳಾಂತರಿಸಲಿ ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಈ ಕಾರ್ಯಾಚರಣೆಯು ಕೊಪ್ಪ ಅರಣ್ಯ ಸಂರಕ್ಷಣಾಧಿಕಾರಿಗಳ ನೇತೃತ್ವದಲ್ಲಿ ನಡೆಯಲಿದ್ದು, ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ್ ರವರು ಸ್ಥಳದಲ್ಲೇ ಮೊಕ್ಕಾಮ್ ಹೂಡಿದ್ದಾರೆ. ಅವರೊಂದಿಗೆ ಸಹಾಯಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಾಬು ರಾಜೇಂದ್ರ ಪ್ರಸಾದ್, ನರಸಿಂಹರಾಜಪುರದ ವಲಯ ಅರಣ್ಯಾಧಿಕಾರಿ ಪ್ರವೀಣ್, ಚಿಕ್ಕಅಗ್ರಹಾರ ವಲಯ ಅರಣ್ಯಧಿಕಾರಿ ಆದರ್ಶ್, ಆನೆ ಕಾರ್ಯಾಚರಣೆ ತಂಡ ಹಾಗೂ ಐವತ್ತಕ್ಕೂ ಹೆಚ್ಚು ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ.

* ಶೀಘ್ರವೇ ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಿ- ಡಿ ಎನ್ ಜೀವರಾಜ್
ಭಾನುವಾರ ಸಂಜೆ ಗಾಂಧಿ ಗ್ರಾಮಕ್ಕೆ ಭೇಟಿ ನೀಡಿದ ಮಾಜಿ ಸಚಿವ ಡಿ ಎನ್ ಜಿವರಾಜ್ ಉಪ ಅರಣ್ಯ ಸಂರಕ್ಷಣಾಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರವಾಗಿ ರೈತರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಲ್ಪಿಸಿ ಕೊಡುವಂತೆ ಹಾಗೂ ರೈತರ ತೋಟ ಜಮೀನುಗಳನ್ನು ಆನೆಯಿಂದ ರಕ್ಷಿಸಲು ರೈಲ್ವೆ ಬ್ಯಾರಿಕೇಡ್ ನಂತಹ ತಡೆಗೋಡೆಗಳನ್ನು ನಿರ್ಮಾಣ ಮಾಡಿಸುವಂತೆ ಸರ್ಕಾರದ ಮೇಲೆ ಒತ್ತಡ ತರುವಂತೆ ಹೇಳಿದರು. ಅಲ್ಲದೆ ಈ ಬಗ್ಗೆ ಕೇಂದ್ರ ಸರ್ಕಾರದ ಸಂಬಂಧಪಟ್ಟ ಸಚಿವರೊಂದಿಗೆ ಮಾತನಾಡುವುದಾಗಿಯೂ ಅವರು ತಿಳಿಸಿದರು.

* ಕಾರ್ಯಾಚರಣೆ ಸಿಬ್ಬಂದಿಗಳಿಗೆ ಧೈರ್ಯ ತುಂಬಿದ ಡಾ.ಅಂಶುಮಂತ್
ಭದ್ರಾ ಅಚ್ಚುಕಟ್ಟು ಪ್ರಾಧಿಕಾರ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಡಾ. ಕೆ ಪಿ ಅಂಶುಮಂತ್ ಗಾಂಧಿ ಗ್ರಾಮಕ್ಕೆ ಆಗಮಿಸಿ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಹಾಗೂ ಸಿಬ್ಬಂದಿಯವರೊಂದಿಗೆ ಮಾತನಾಡಿ ಧೈರ್ಯ ತುಂಬುವ ಕೆಲಸ ಮಾಡಿದ್ದು, ಎಲ್ಲಾ ರೀತಿಯ ಸಹಕಾರವನ್ನು ನೀಡುವುದಾಗಿ ಇಲಾಖೆ ಅಧಿಕಾರಿಗಳಿಗೆ ಭರವಸೆ ನೀಡಿದರು. ಸ್ಥಳದಲ್ಲಿದ್ದ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿ ಇಲಾಖೆಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ಒಂಟಿ ಸಲಗವನ್ನು ಹಿಡಿಯುವ ನಿಟ್ಟಿನಲ್ಲಿ ಎಲ್ಲ ರೀತಿಯ ಸಹಕಾರವನ್ನು ನೀಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್‌ನ ತಾಲೂಕು ಹಾಗೂ ಗ್ರಾಮ ಪಂಚಾಯಿತಿ ಮಟ್ಟದ ಮುಖಂಡರುಗಳು ಉಪಸ್ಥಿತರಿದ್ದರು.

Categories
ಬೆಂಗಳೂರು

ಆಗಸ್ಟ್ 4 ರಿಂದ ಮತ್ತೆ ಮುಂಗಾರು ಆರಂಭ..!!

ಆಗಸ್ಟ್ 4 ರಿಂದ ಮತ್ತೆ ಮುಂಗಾರು ಆರಂಭ..!!
– 8 ಜಿಲ್ಲೆಗೆ ಯೆಲ್ಲೋ ಅಲರ್ಟ್‌
– ಹವಾಮಾನ ಇಲಾಖೆಯ ಮುನ್ಸೂಚನೆ

NAMMUR EXPRESS NEWS
ಬೆಂಗಳೂರು: ರಾಜ್ಯದಲ್ಲಿ ದುರ್ಬಲವಾಗಿದ್ದ ಮುಂಗಾರು ಮಳೆ ಸೋಮವಾರದಿಂದ ಮತ್ತೆ ಚುರುಕಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆಗಸ್ಟ್‌ 4 ರಿಂದ 10 ರವೆರೆಗ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಲಿದ್ದು, ಮೊದಲ ಮತ್ತು ಕೊನೆಯ ಎರಡು ದಿನ ಯೆಲ್ಲೋ ಅಲರ್ಟ್‌, ಆಗಸ್ಟ್‌ 6 ರಿಂದ ಆಗಸ್ಟ್‌ 8 ರವರೆಗೆ ಆರೇಂಜ್‌ ಅಲರ್ಟ್‌ ನೀಡಲಾಗಿದೆ. ಇದೇ ವೇಳೆ ದಕ್ಷಿಣ ಮತ್ತು ಉತ್ತರ ಒಳನಾಡಿನ ಜಿಲ್ಲೆಗಳಲ್ಲೂ ವ್ಯಾಪಕ ಮಳೆಯಾಗಲಿದ್ದು, ಆಗಸ್ಟ್‌ 4 ಮತ್ತು 5 ರಂದು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಕೋಲಾರ, ಶಿವಮೊಗ್ಗ, ತುಮಕೂರು ಮತ್ತು ಕೊಡಗು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ನೀಡಲಾಗಿದೆ.

– ಕೇರಳದಲ್ಲಿಯೂ 3 ದಿನ ಭಾರೀ ಮಳೆ

ವಾತಾವರಣದ ಮೇಲ್ಮಟ್ಟದಲ್ಲಿ(5.8 ಕಿ.ಮೀ) ಚಂಡಮಾರುತ ರೂಪುಗೊಂಡಿರುವುದರಿಂದ ಕೇರಳ ರಾಜ್ಯದಲ್ಲಿ ಮತ್ತೆ ಮಳೆಯ ಭೀತಿ ಎದುರಾಗಿದೆ. ಮುಂದಿನ ಮೂರು ದಿನಗಳವರೆಗೆ ರಾಜ್ಯದ ನಾನಾ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆ. 5 ರಂದು ರಾಜ್ಯದಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ನಾನಾ ಜಿಲ್ಲೆಗಳಲ್ಲಿ ಅಲರ್ಟ್‌ ಘೋಷಿಸಲಾಗಿದೆ. ಸೋಮವಾರ ಕೇರಳದ ಇಡುಕ್ಕಿ, ಎರ್ನಾಕುಳಂ ಮತ್ತು ತ್ರಿಶೂರ್‌ ಜಿಲ್ಲೆಗಳಲ್ಲಿಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ. ತಿರುವನಂತಪುರ, ಕೊಲ್ಲಂ, ಪತ್ತನಂತಿಟ್ಟ, ಆಲಪ್ಪುಯ, ಕೊಟ್ಟಾಯಂ, ಪಾಲಕ್ಕಾಡ್‌, ಮಲಪ್ಪುರಂ, ಕೋಝಿಕೋಡ್‌, ವಯನಾಡ್‌, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಿಗೆ ಯಲ್ಲೋ ಅಲರ್ಟ್‌ ಘೋಷಿಸಲಾಗಿದೆ.

ಚಂಡಮಾರುತ ಎಚ್ಚರಿಕೆ : ದಕ್ಷಿಣ ತಮಿಳುನಾಡು ಮತ್ತು ಮನ್ನಾರ್‌ ಕೊಲ್ಲಿಮೇಲೆ ಮೇಲ್ಮಟ್ಟದಲ್ಲಿ(5.8 ಕಿ.ಮೀ.) ಚಂಡಮಾರುತ ಪರಿಚಲನೆ ರೂಪುಗೊಂಡಿದೆ. ಕೇರಳದಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಆ. 5ರಂದು ಭಾರಿ ಮಳೆಯಾಗುವ ಸಾಧ್ಯತೆ ಇದೆ.