Categories
ಬೆಂಗಳೂರು ರಾಜ್ಯ

ಚಂಡ ಮಾರುತ ಎಫೆಕ್ಟ್ : 7 ದಿನ ಭಾರೀ ಮಳೆ!

ಚಂಡ ಮಾರುತ ಎಫೆಕ್ಟ್ : 7 ದಿನ ಭಾರೀ ಮಳೆ!
– ರಾಜ್ಯದಲ್ಲಿ ಬಹುತೇಕ ಜಿಲ್ಲೆಗಳಿಗೆ ಮಳೆ ಅಲರ್ಟ್
– ಹವಾಮಾನ ವೈಫಲ್ಯದಿಂದ ರೈತರ ಬದುಕು ಗೋಳು
– ಅಡಿಕೆ ಬಂದರೂ ಅಡಿಕೆ ಸುಲಿತಕ್ಕೆ ತೊಂದರೆ

NAMMUR EXPRESS NEWS
ಬೆಂಗಳೂರು: ಮಳೆ ಮಳೆ ಮಳೆ… ಈ ವರ್ಷ ಏಪ್ರಿಲ್ ಇಂದ ಒಂದೇ ಸಮನೆ ಸುರಿಯುತ್ತಿರುವ ಮಳೆ ರೈತರು ಮತ್ತು ಜನ ಸಾಮಾನ್ಯರ ಬದುಕನ್ನು ಈ ವರ್ಷ ಬಲಿ ಪಡೆದಿದೆ. ಭಾರೀ ಮಳೆ ಕಾರಣ ವ್ಯವಹಾರ ಕ್ಷೇತ್ರಕ್ಕೂ ಮಂಕು ಕವಿದಿದೆ. ಈಗಾಗಲೇ ಮಳೆ ಬಿಟ್ಟು 2 ತಿಂಗಳಾಗಬೇಕಿದ್ದರೂ ಇನ್ನು ಮಳೆ ಬಿಟ್ಟಿಲ್ಲ.
ಬಂಗಾಳಕೊಲ್ಲಿಯಲ್ಲಿ ರೂಪುಗೊಂಡಿರುವ ಮೋಂಥಾ ಚಂಡಮಾರುತ ಪರಿಣಾಮ ರಾಜ್ಯದಲ್ಲಿ 7 ದಿನ ಭಾರೀ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಜ್ಯದಲ್ಲಿ ಇಂದಿನಿಂದ 7 ದಿನ ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ. ನಾಗರಿಕರು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ, ಸುರಕ್ಷಿತರಾಗಿರಿ ಎಂದು ಹವಾಮಾನ ಇಲಾಖೆ ಮನವಿ ಮಾಡಿದೆ.
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವು ಚಂಡಮಾರುತವಾಗಿ ಪರಿವರ್ತನೆಯಾಗಿದ್ದು, ಆಂಧ್ರದ ಉತ್ತರ ಭಾಗ ಹಾಗೂ ಒಡಿಶಾಗೆ ಅಪ್ಪಳಿಸಿದ್ದು. ಇದರ ಪರಿಣಾಮವಾಗಿ ರಾಜ್ಯದ ಕರಾವಳಿ, ಉತ್ತರ ಒಳನಾಡು ಹಾಗೂ ಮಲೆನಾಡು ಭಾಗದ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ.
ಮುಂದಿನ 7 ದಿನ ಕರಾವಳಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್, ಬೆಳಗಾವಿ, ಧಾರಾವಾಡ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಒಂದೆರಡು ಕಡೆಯಲ್ಲಿ ಗಂಟೆಗೆ 30 ರಿಂದ 40 ಕಿಲೋಮೀಟರ್ ವೇಗದಲ್ಲಿ ಗಾಳಿಯೊಂದಿಗೆ ಭಾರೀ ಮಳೆಯಾಗುವ ಸಂಭವವಿದೆ. ಉತ್ತರ ಹಾಗೂ ದಕ್ಷಿಣ ಒಳನಾಡಿನ ಎಲ್ಲಾ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಕಾರಣ ಯೆಲ್ಲೋ ಅಲರ್ಟ್ ನೀಡಲಾಗಿದೆ. ಬೆಳಗಾವಿ, ಧಾರವಾಡದಲ್ಲಿ ನಿರಂತರ ಗಾಳಿಯೊಂದಿಗೆ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಬೀದ‌ರ್, ಗದಗ, ಬಾಗಲಕೋಟೆ, ಕಲಬುರ್ಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ ಜಿಲ್ಲೆಯ ಕೆಲವೆಡೆ ಸಾಧಾರಣ ಮಳೆಯಾಗುವ ಮುನ್ಸೂಚನೆಯನ್ನು ನೀಡಿದೆ.
ದಕ್ಷಿಣ ಒಳನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಜಿಲ್ಲೆಯಲ್ಲೂ ಭಾರೀ ಮಳೆಯಾಗಲಿದೆ. ಬಳ್ಳಾರಿ, ಬೆಂಗಳೂರು ನಗರ, ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಕೋಲಾರ, ದಾವಣಗೆರೆ, ಕೊಡಗು, ಮಂಡ್ಯ, ರಾಮನಗರ, ಮೈಸೂರು, ವಿಜಯನಗರ, ತುಮಕೂರು ಜಿಲ್ಲೆಯಲ್ಲೂ ಕೆಲವೆಡೆ ಸಾಧಾರಣ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.

Categories
ರಾಜ್ಯ

ಮಾನವೀಯತೆಯ ರಾಜಕುಮಾರ

ಮಾನವೀಯತೆಯ ರಾಜಕುಮಾರ

ಪುನೀತ್ ಎಂದೆಂದಿಗೂ ಅಮರ…!

ಪುನೀತ್ ರಾಜ್ ಕುಮಾರ್ 4ನೇ ವರ್ಷದ ಪುಣ್ಯ ಸ್ಮರಣೆ

ಸಹಾಯ… ಸೇವೆ… ಮಾನವೀಯತೆಗಾಗಿ ಬದುಕು ಮೀಸಲಿಟ್ಟ ರಿಯಲ್ ಹೀರೋಗೆ ನಮನ

ಕನ್ನಡದ ರಿಯಲ್ ಹೀರೋ, ಮಾನವೀಯತೆಯ ಮತ್ತೊಂದು ಮುಖ, ಲಕ್ಷ ಲಕ್ಷ ಜನರಿಗೆ ಸಹಕಾರ ಮಾಡಿದ್ದ ನಟ ಪುನೀತ್ ರಾಜ್‌ಕುಮಾರ್ ಅವರು ನಿಧನ ಹೊಂದಿ ಇಂದಿಗೆ (ಅಕ್ಟೋಬರ್ 29) 4ನೇ ವರ್ಷ. ಅವರ ಪುಣ್ಯ ಸ್ಮರಣೆ ರಾಜ್ಯದ ಮೂಲೆ ಮೂಲೆಯಲ್ಲಿ ನಡೆಯುತ್ತಿದೆ. 46 ವರ್ಷ ವಯಸ್ಸು ಆಗಿದ್ದ ಪುನೀತ್ ಅವರು ಹೃದಯಾಘಾತದಿಂದ ಮೃತರಾಗಿದ್ದು, ಅವರ ಸೇವೆ ಇಡೀ ರಾಜ್ಯ, ದೇಶಕ್ಕೆ ಮಾದರಿ ಆಗಿತ್ತು.

ಪುನೀತ್ ಸಾವಿನ ನಂತರ ಅಂದಿನಿಂದ ಇಂದಿನವರೆಗೆ ಅವರ ಅಭಿಮಾನಿಗಳು, ಸಂಘ ಸಂಸ್ಥೆಗಳು ಸಾವಿರಾರು ರಕ್ತದಾನ, ನೇತ್ರದಾನ ಶಿಬಿರ ಮಾಡಿವೆ. ಸಾವಿರಾರು ದೇಹ ದಾನ ನಡೆದಿದೆ.
ಪುನೀತ್ ರಾಜ್‌ಕುಮಾ‌ರ್ ಅವರು ನಿಧನ ಹೊಂದಿದ ಬಳಿಕ ಅವರು ಮಾಡಿದ ಒಳ್ಳೆಯ ಕೆಲಸಗಳ ವಿಷಯಗಳು ಗೊತ್ತಾದವು. ಸಾಮಾನ್ಯವಾಗಿ ಪುನೀತ್ ಅವರು ಎಲ್ಲಿಯೂ ತಾವು ಮಾಡಿದ್ದನ್ನು ಹೇಳಿಕೊಳ್ಳುತ್ತಿರಲಿಲ್ಲ. ಇದಕ್ಕೆ ಅವರ ಕುಟುಂಬದವರು ಹಾಕಿಕೊಟ್ಟ ಮಾರ್ಗದರ್ಶನವೇ ಕಾರಣ. ಅವರ ನೆನಪು ಇಡೀ ಕನ್ನಡಿಗರಿಗೆ ಮರೆಯಲಾಗದ ದಿನವಾಗಿದೆ. ಅವರ ಹೆಸರಲ್ಲಿ ಅಥವಾ ನಿಮ್ಮ ತಂದೆ, ತಾಯಂದಿರ, ಪ್ರೀತಿ ಪಾತ್ರರ ನೆನಪಲ್ಲಿ ಕಷ್ಟದಲ್ಲಿರುವವರ ಬದುಕಿಗೆ ಸಣ್ಣ ಸಹಾಯ ಮಾಡಿ. ಅದು ನಿಮ್ಮ ಬದುಕನ್ನು ಸಾರ್ಥಕಗೊಳಿಸುತ್ತದೆ.

ಪುನೀತ್ ಅವರ ನೆನಪು ಅಮರ… ಅವರ ಸೇವೆ ಮುಂದುವರಿಸೋಣ

ಪುನೀತ್ ಮತ್ತೆ ಹುಟ್ಟಿ ಬನ್ನಿ…!

Categories
ದಿನ ರಾಶಿ ಭವಿಷ್ಯ ರಾಜ್ಯ

ಈ ದಿನದ ರಾಶಿ ಭವಿಷ್ಯ ಹೇಗಿದೆ?

ಈ ದಿನದ ರಾಶಿ ಭವಿಷ್ಯ ಹೇಗಿದೆ?
– ವಿನಾಯಕನ ಕೃಪೆಯಿಂದ ಯಾವ ರಾಶಿಯವರಿಗೆ ಲಾಭ? ಯಾವ ರಾಶಿಯವರಿಗೆ ನಷ್ಟ?

NAMMUR EXPRESS NEWS
ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು?

** ಮೇಷ ರಾಶಿ :
ಇಂದು ಮೇಷ ರಾಶಿಯವರಿಗೆ ಕೆಲಸದ ಸ್ಥಳದಲ್ಲಿ ಅನಗತ್ಯ ವಾದಗಳನ್ನು ತಪ್ಪಿಸಿ. ಆಸ್ತಿ ವಿಚಾರದಲ್ಲಿ ಕುಟುಂಬದಲ್ಲಿ ಕಲಹ ಉಂಟಾಗಬಹುದು. ನಿಮ್ಮ ಮಾತಿನ ಮೇಲೆ ಹಿಡಿತವಿರಲಿ. ಅತಿಯಾದ ಕೋಪವನ್ನು ತಪ್ಪಿಸಿ ಮತ್ತು ಶಾಂತ ಮನಸ್ಸಿನಿಂದ ನಿರ್ಧಾರಗಳನ್ನು ತೆಗೆದುಕೊಳ್ಳಿ. ಪಾಲುದಾರಿಕೆ ವ್ಯವಹಾರದಲ್ಲಿ ಯಾರನ್ನೂ ಕುರುಡಾಗಿ ನಂಬಬೇಡಿ. ಇಂದು ಪಿತ್ರಾರ್ಜಿತ ಆಸ್ತಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದಗಳಿಂದ ಮುಕ್ತಿ ದೊರೆಯಲಿದೆ.

** ವೃಷಭ ರಾಶಿ :
ಇಂದು ಸ್ವಯಂ ನಿಯಂತ್ರಣದಲ್ಲಿರಿ. ಕೋಪವನ್ನು ತಪ್ಪಿಸಿ. ಸಂಭಾಷಣೆಯಲ್ಲಿಯೂ ಸಮತೋಲನದಿಂದಿರಿ. ನೀವು ಹಳೆಯ ಸ್ನೇಹಿತರನ್ನು ಭೇಟಿ ಮಾಡಬಹುದು. ರುಚಿಕರವಾದ ಆಹಾರದಲ್ಲಿ ಆಸಕ್ತಿ ಹೆಚ್ಚಾಗಬಹುದು. ತಂದೆಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಸಂದರ್ಭಗಳು ಅನುಕೂಲಕರವಾಗಿರುತ್ತದೆ. ಇಂದು ದೀರ್ಘಕಾಲದ ಸಮಸ್ಯೆಗಳಿಂದ ಪರಿಹಾರವನ್ನು ಪಡೆಯುತ್ತೀರಿ. ಹಣಕಾಸಿನ ವಿಷಯಗಳಲ್ಲಿ ಇಂದು ತೆಗೆದುಕೊಳ್ಳುವ ನಿರ್ಧಾರಗಳ ಬಗ್ಗೆ ಎಚ್ಚರವಿರಲಿ.

** ಮಿಥುನ ರಾಶಿ :
ಇಂದು ಸಂದರ್ಭಗಳು ಪ್ರತಿಕೂಲವಾಗಿರಲಿವೆ. ಎಚ್ಚರಿಕೆಯಿಂದ ವಾಹನ ಚಲಾಯಿಸಿ. ಗಾಯಗಳು ಸಂಭವಿಸಬಹುದು. ಸಾಮಾಜಿಕ ಸ್ಥಾನಮಾನ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ಆದರೆ, ವ್ಯವಹಾರದಲ್ಲಿ ಹಣ ನಷ್ಟವಾಗುವ ಲಕ್ಷಣಗಳಿವೆ. ಆದ್ದರಿಂದ, ಹಣಕಾಸಿನ ವಿಷಯಗಳಲ್ಲಿ ಬುದ್ಧಿವಂತಿಕೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಿ. ಕಚೇರಿಯಲ್ಲಿ ಅನಗತ್ಯ ವಾದ ವಿವಾದಗಳಿಂದ ದೂರವಿರಿ.

** ಕರ್ಕಾಟಕ ರಾಶಿ :
ಇಂದು ಉದ್ಯೋಗ ಮತ್ತು ವ್ಯವಹಾರದಲ್ಲಿ ವಾತಾವರಣವು ಅನುಕೂಲಕರವಾಗಿರುತ್ತದೆ. ನಿಮ್ಮ ಕೆಲಸದಲ್ಲಿ ನೀವು ಬಯಸಿದ ಫಲಿತಾಂಶಗಳನ್ನು ಪಡೆಯುತ್ತೀರಿ. ಆರ್ಥಿಕ ಲಾಭಕ್ಕಾಗಿ ಹೊಸ ಅವಕಾಶಗಳು ದೊರೆಯಲಿವೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಹಣದ ಒಳಹರಿವು ಹೆಚ್ಚಾಗುತ್ತದೆ. ಹೊಸ ಯೋಜನೆಗೆ ಜವಾಬ್ದಾರಿ ಸಿಗಲಿದೆ. ಆದಾಯದ ಮೂಲವಾಗಲಿದೆ. ಕಚೇರಿ ಸಭೆಗಳಲ್ಲಿ ನಿಮ್ಮ ಆಲೋಚನೆಗಳನ್ನು ಹಂಚಿಕೊಳ್ಳಲು ಹಿಂಜರಿಯಬೇಡಿ.

** ಸಿಂಹ ರಾಶಿ :
ಸಿಂಹ ರಾಶಿಯವರಿಗೆ ಇಂದು ನಿಮಗೆ ತುಂಬಾ ಶುಭ ದಿನವಾಗಲಿದೆ. ಉದ್ಯೋಗ ಹುಡುಕಾಟ ಪೂರ್ಣಗೊಳ್ಳಲಿದೆ. ಪರಿಸ್ಥಿತಿಗಳು ಕ್ರಮೇಣ ಅನುಕೂಲಕರವಾಗುತ್ತವೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿಯ ಸಾಧ್ಯತೆ ಇರುತ್ತದೆ. ಸಾಮಾಜಿಕ ಸ್ಥಾನಮಾನ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ವ್ಯಾಪಾರದಲ್ಲಿ ಆರ್ಥಿಕ ಲಾಭ ದೊರೆಯಲಿದೆ. ಆದರೆ, ಕೆಲವರು ತಮ್ಮ ವೃತ್ತಿಜೀವನದಲ್ಲಿ ಸಣ್ಣ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.

** ಕನ್ಯಾ ರಾಶಿ :
ಇಂದು ಸಣ್ಣ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ವ್ಯಾಪಾರ ವಹಿವಾಟುಗಳಿಗೆ ಸಹಿ ಹಾಕುವಾಗ ವ್ಯಾಪಾರಸ್ಥರು ಸ್ವಲ್ಪ ಎಚ್ಚರಿಕೆ ವಹಿಸಬೇಕು. ಹಣಕಾಸಿನ ವಿಷಯಗಳಲ್ಲಿ ಯಾರನ್ನೂ ಕುರುಡಾಗಿ ನಂಬಬೇಡಿ ಮತ್ತು ಹಣಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ತರಾತುರಿಯಲ್ಲಿ ತೆಗೆದುಕೊಳ್ಳಬೇಡಿ. ನಿಮ್ಮ ಕುಟುಂಬದ ಸದಸ್ಯರ ಆರೋಗ್ಯದ ಕಡೆ ಗಮನ ಕೊಡಿ. ನಿಮ್ಮ ಸಂಗಾತಿಯೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯಿರಿ.

** ತುಲಾ ರಾಶಿ :
ಇಂದು ಕೆಲಸದ ಸವಾಲುಗಳು ಹೆಚ್ಚಾಗುತ್ತವೆ. ನಿಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯದ ಕಡೆ ಗಮನ ಕೊಡಿ. ವ್ಯಾಪಾರಿಗಳು ವ್ಯಾಪಾರದಲ್ಲಿ ತೊಂದರೆಗಳನ್ನು ಎದುರಿಸಬಹುದು. ತಾಳ್ಮೆಯನ್ನು ಕಾಪಾಡಿಕೊಳ್ಳಿ. ಶಾಂತ ಮನಸ್ಸಿನಿಂದ ನಿರ್ಧಾರಗಳನ್ನು ತೆಗೆದುಕೊಳ್ಳಿ. ವೃತ್ತಿ ಬೆಳವಣಿಗೆಗೆ ಹೊಸ ಅವಕಾಶಗಳ ಮೇಲೆ ಕಣ್ಣಿಡಿ. ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ನಿರ್ಲಕ್ಷಿಸಬೇಡಿ.

** ವೃಶ್ಚಿಕ ರಾಶಿ :
ಇಂದು ಟೀಮ್ ವರ್ಕ್ ಮೇಲೆ ಗಮನ ಹರಿಸಿ. ಉದ್ಯೋಗದಲ್ಲಿ ಸಹೋದ್ಯೋಗಿಗಳೊಂದಿಗೆ ಒಟ್ಟಾಗಿ ಕೆಲಸ ಮಾಡಿ ಮತ್ತು ಸವಾಲುಗಳನ್ನು ಜಯಿಸಲು ಪರಸ್ಪರ ಪ್ರೇರೇಪಿಸುತ್ತಿರಿ. ಇಂದು ಹೊಸ ಆದಾಯದ ಮೂಲಗಳಿಂದ ಆರ್ಥಿಕ ಲಾಭವಿದೆ. ಇಂದು, ಹಿಂದಿನ ನೆನಪುಗಳು ಗೊಂದಲವನ್ನು ಹೆಚ್ಚಿಸಬಹುದು. ನಿಮ್ಮ ಭಾವನೆಗಳನ್ನು ನಿಯಂತ್ರಿಸಿ.

** ಧನಸ್ಸು ರಾಶಿ :
ಇಂದು ಸೋಮಾರಿತನದಿಂದ ದೂರವಿರಿ. ನಿಮ್ಮ ಗುರಿಗಳನ್ನು ಸಾಧಿಸಲು ಹೊಸ ಪ್ರಯತ್ನಗಳನ್ನು ಮಾಡಿ. ಹೊಸ ಕೆಲಸವನ್ನು ಪ್ರಾರಂಭಿಸಲು ಇಂದು ಶುಭ ದಿನವಾಗಿದೆ. ಹಿಂದಿನ ತಪ್ಪುಗಳಿಂದ ಕಲಿಯುವ ಮೂಲಕ ಜೀವನದಲ್ಲಿ ಮುನ್ನಡೆಯಿರಿ. ಮನೆಯಲ್ಲಿ ಶುಭ ಕಾರ್ಯಗಳನ್ನು ಆಯೋಜಿಸಬಹುದು. ಕುಟುಂಬದೊಂದಿಗೆ ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡಬಹುದು.

** ಮಕರ ರಾಶಿ :
ಇಂದು ಕುಟುಂಬ ಜೀವನದಲ್ಲಿ ಸಂತೋಷ ಇರುತ್ತದೆ. ಕೆಲವರ ಮದುವೆ ನಿಶ್ಚಯವಾಗಬಹುದು. ನಿಮ್ಮ ಸಂಗಾತಿಯೊಂದಿಗೆ ನೀವು ಭೋಜನವನ್ನು ಯೋಜಿಸಬಹುದು. ನಿಮ್ಮ ಬಿಡುವಿಲ್ಲದ ವೇಳಾಪಟ್ಟಿಯಿಂದ ಸ್ವಲ್ಪ ಸಮಯವನ್ನು ತೆಗೆದುಕೊಳ್ಳಿ ಮತ್ತು ನಿಮ್ಮ ಸಂಗಾತಿಯೊಂದಿಗೆ ಕೆಲವು ಸ್ಮರಣೀಯ ಕ್ಷಣಗಳನ್ನು ಕಳೆಯಿರಿ. ಇದು ಪ್ರೀತಿಯ ಸಂಬಂಧಗಳಲ್ಲಿ ಮಾಧುರ್ಯವನ್ನು ತರುತ್ತದೆ. ಆದಾಗ್ಯೂ, ಹೆಚ್ಚಿನ ಜವಾಬ್ದಾರಿಯಿಂದ ಕಚೇರಿ ಕೆಲಸವನ್ನು ನಿರ್ವಹಿಸಿ.

** ಕುಂಭ ರಾಶಿ :
ಇಂದು ಕುಂಭ ರಾಶಿಯವರಿಗೆ ನಿಮ್ಮ ಕಠಿಣ ಪರಿಶ್ರಮವು ಫಲಿತಾಂಶವನ್ನು ನೀಡುತ್ತದೆ. ವೃತ್ತಿ ಜೀವನದಲ್ಲಿ ಪ್ರಮುಖ ಬದಲಾವಣೆಗಳಾಗಲಿವೆ. ನಿಮ್ಮ ಎಲ್ಲಾ ಕೆಲಸಗಳಲ್ಲಿ ನೀವು ಅಪಾರ ಯಶಸ್ಸನ್ನು ಪಡೆಯುತ್ತೀರಿ. ಬಹುಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ಯಶಸ್ವಿಯಾಗುತ್ತವೆ. ರೋಮ್ಯಾಂಟಿಕ್ ಜೀವನ ಉತ್ತಮವಾಗಿರುತ್ತದೆ.

** ಮೀನ ರಾಶಿ :
ಇಂದು ಹಣದ ವ್ಯವಹಾರಗಳನ್ನು ತಪ್ಪಿಸಿ. ವೈಯಕ್ತಿಕ ಬೆಳವಣಿಗೆಯತ್ತ ಗಮನ ಹರಿಸಿ. ಹೊಸ ಕೌಶಲ್ಯಗಳನ್ನು ಕಲಿಯಿರಿ. ಇದು ವೃತ್ತಿ ಬೆಳವಣಿಗೆಗೆ ಹೊಸ ಅವಕಾಶಗಳನ್ನು ಒದಗಿಸುತ್ತದೆ. ಕಚೇರಿಯಲ್ಲಿ ಅನಗತ್ಯ ಚರ್ಚೆಗಳಿಂದ ದೂರವಿರಿ. ನಿಮ್ಮ ಕಾರ್ಯಕ್ಷಮತೆಯ ಮೇಲೆ ಕೇಂದ್ರೀಕರಿಸಿ. ಇಂದು ವೈವಾಹಿಕ ಜೀವನದಲ್ಲಿ ಸಂತೋಷದ ವಾತಾವರಣವಿರುತ್ತದೆ ಮತ್ತು ಸಂಬಂಧಗಳಲ್ಲಿನ ಕಹಿ ದೂರವಾಗುತ್ತದೆ.

Categories
ತೀರ್ಥಹಳ್ಳಿ ಮಲ್ನಾಡ್

ಕ್ಯಾನ್ಸರ್ ಜಾಗೃತಿ ಮೂಡಿಸಿದ ಪುಸ್ತಕ ಬಿಡುಗಡೆ!

ಕ್ಯಾನ್ಸರ್ ಜಾಗೃತಿ ಮೂಡಿಸಿದ ಪುಸ್ತಕ ಬಿಡುಗಡೆ!
– ಗಾಯತ್ರಿ ಶೇಷಗಿರಿ ಅವರ ‘ಜೋಪಾನ ಸಖಿ ಜೋಪಾನ’ ಪುಸ್ತಕ ಬಿಡುಗಡೆ
– ಸ್ತನ ಕ್ಯಾನ್ಸರ್ ಕಾಯಿಲೆಯನ್ನು ಒಡಲಾಳದ ಚಿತ್ರಣವನ್ನು ಅಕ್ಷರ ರೂಪಕ್ಕೆ ತಂದ ಕೃತಿ

NAMMUR EXPRESS NEWS
ತೀರ್ಥಹಳ್ಳಿ: ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದು ಸಾವಿರಾರು ಜನರ ಬದುಕಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವಾಗಿ ಹೊರ ಹೊಮ್ಮಿದ ಅಪರೂಪದ ಕಾರ್ಯಕ್ರಮಕ್ಕೆ ತೀರ್ಥಹಳ್ಳಿ ಸಾಕ್ಷಿ ಆಯಿತು.
ಅ. 26 ರಂದು ತೀರ್ಥಹಳ್ಳಿ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಗಾಯತ್ರಿ ಶೇಷಗಿರಿ ಅವರ ‘ಜೋಪಾನ ಸಖಿ ಜೋಪಾನ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪುಸ್ತಕ ಬಿಡುಗಡೆ ಜತೆಗೆ ಕ್ಯಾನ್ಸರ್ ಎಂಬ ಮಹಾಮಾರಿ ಆತಂಕದ ಮಾಹಿತಿ ನೀಡುವ, ಜಾಗೃತಿ ಮೂಡಿಸುವ ಕಾರ್ಯಕ್ರಮ ಆಗಿಹೊರ ಹೊಮ್ಮಿತು.

ನಮ್ಮ ಮನಸ್ಸಿನಲ್ಲಿರುವ ಭಾವನೆಗಳನ್ನು, ಭಾವ ತೀವ್ರತೆಯನ್ನು ಯಥಾ ರೂಪದಲ್ಲಿ ದಾಖಲಿಸುವುದೇ ಬಲು ಕಷ್ಟ. ಅಂತದರಲ್ಲಿ ಇನ್ನೊಬ್ಬರು ಅನುಭವಿಸುವ ನೋವಿಗೆ ಅಕ್ಷರ ರೂಪಕೊಟ್ಟು ಬರವಣಿಗೆಗೆ ನ್ಯಾಯ ಒದಗಿಸುವುದು ಅತ್ಯಂತ ಕ್ಲಿಷ್ಟಕರ ಸಂಗತಿ. ಈ ವಿಚಾರದಲ್ಲಿ ತೀರ್ಥಹಳ್ಳಿಯ ಲೇಖಕಿ ಗಾಯತ್ರಿ ಶೇಷಗಿರಿ ತಮ್ಮ ಮೊದಲ ಪ್ರಯತ್ನದಲ್ಲೇ ಯಶಸ್ಸು ಸಾಧಿಸಿದ್ದಾರೆ ಎಂದು ಖ್ಯಾತ ಸಾಹಿತಿಗಳೂ, ವಿಶ್ರಾಂತ ಪ್ರಾಧ್ಯಾಪಕರೂ ಆದ ಡಾ|ಸಣ್ಣರಾಮ ಅಭಿನಂದಿಸಿದರು. ವೇದಿಕೆಯಲ್ಲಿ ಗಾಯತ್ರಿ ಶೇಷಗಿರಿ, ಮೆಡಿಕಲ್ ಅಂಕಾಲಜಿಸ್ಟ್ ಡಾ||ಅಪರ್ಣ ಶ್ರೀವತ್ಸ, ಸಾಹಿತಿ ಡಾ||ಬಿ.ಗಣಪತಿ, ಕಸಾಪ ಅಧ್ಯಕ್ಷ ಟಿ.ಕೆ.ರಮೇಶ್ ಶೆಟ್ಟಿ ಉಪಸ್ಥಿತರಿದ್ದರು. ಸ್ತನ ಕ್ಯಾನ್ಸರ್ ಕಾಯಿಲೆಯನ್ನು ಅನುಭವಿಸಿದ ತಾಯಂದಿರ ಒಡಲಾಳದ ಚಿತ್ರಣವನ್ನು ಲೇಖಕಿ ವಿಶಿಷ್ಟವಾಗಿ ಅಕ್ಷರ ರೂಪಕ್ಕೆ ತಂದ ಕೃತಿಯಿಂದಾಗಿದೆ. ನೋವುಂಡ ಹೆಣ್ಣಿನ ಬದುಕಿನ ನೋವುಗಳು ಮತ್ತೊಬ್ಬ ಹೆಣ್ಣಿಗೆ ಮಾತ್ರ ಗೊತ್ತಾಗಲು ಸಾಧ್ಯ. ಈ ಸಮಾಜಕ್ಕೆ ತಾಯಂದಿರು ನೀಡುವ ಕರುಳಿನ ಕರೆಯ ಚಿತ್ರಣವಿಲ್ಲಿದೆ ಎಂದರು.

ಸ್ತನ ಕ್ಯಾನ್ಸರ್ ಕುರಿತು ಶಿವಮೊಗ್ಗದ ಎನ್.ಹೆಚ್.ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಅಂಕಾಲಜಿಸ್ಟ್ ಡಾ.ಅಪರ್ಣ ಶ್ರೀವತ್ಸ ಮಾತನಾಡಿ ಸ್ತನ ಕ್ಯಾನ್ಸರ್ ಪೀಡಿತ ಮಹಿಳೆಯರ ಧ್ವನಿಗಳ ಮೂಲಕ, ಜಾಗೃತಿ, ಸಹಾನುಭೂತಿ ಮತ್ತು ಸಮಯೋಚಿತ ಚಿಕಿತ್ಸೆ ಕೂಡ ಔಷಧಿಯಷ್ಟೇ ಮುಖ್ಯ ಎಂದರು. ಸಮಾರಂಭದಲ್ಲಿ ತೀರ್ಥಹಳ್ಳಿ ಕ.ಸಾ.ಪ.ಅಧ್ಯಕ್ಷ ಟಿ.ಕೆ.ರಮೇಶ್ ಶೆಟ್ಟಿ, ಅಧ್ಯಕ್ಷತೆವಹಿಸಿದ್ದ ಸಾಹಿತಿ, ನಿವೃತ್ತ ಪ್ರಾಂಶುಪಾಲ ಡಾ.ಬಿ.ಗಣಪತಿ, ಲೇಖಕಿ ಗಾಯತ್ರಿ ಶೇಷಗಿರಿ ಉಪಸ್ಥಿತರಿದ್ದು ಮಾತನಾಡಿದರು. ಕ.ಸಾ.ಪ.ಪ್ರಮುಖ ಪ್ರಸನ್ನ ಸ್ವಾಗತಿಸಿ,ಗಾಯತ್ರಿ ಶೇಷಗಿರಿ ಪ್ರಾಸ್ತಾಪಿಸಿ, ನಾಗರಾಜ್ ಸೌಳಿ ವಂದಿಸಿ, ಶಿಲ್ಪಾ ಕಾರ್ಯಕ್ರಮ ನಿರೂಪಿಸಿದರು. ಮಲೆನಾಡಿನ ಸಾಹಿತಿಗಳು, ಗಣ್ಯರು ಭಾಗವಹಿಸಿದ್ದರು. ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಆಗಮಿಸಿ ರಂಗ ಮಂದಿರದ ಕೊನೆ ಕುರ್ಚಿಯಲ್ಲಿ ಸಾಮಾನ್ಯರಾಗಿಕುಳಿತು ಗಮನ ಸೆಳೆದರು.

Categories
Uncategorized

ಅ.29 ರಂದು ಕೊಪ್ಪದಲ್ಲಿ ಸರ್ಕಾರದ ವಿರುದ್ಧ ಜೆಡಿಎಸ್‌ನಿಂದ ಪ್ರತಿಭಟನೆ

ಅ.29 ರಂದು ಕೊಪ್ಪದಲ್ಲಿ ಸರ್ಕಾರದ ವಿರುದ್ಧ ಜೆಡಿಎಸ್‌ನಿಂದ ಪ್ರತಿಭಟನೆ

* ಶೃಂಗೇರಿ ಕ್ಷೇತ್ರದಲ್ಲಿ ಗುಂಡಿ ಬಿದ್ದ ರಸ್ತೆಗಳು, ಕ್ಷೇತ್ರದ ಹಲವು ಸಮಸ್ಯೆಗಳ ಕುರಿತು
* ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸುಧಾಕರ್ ಎಸ್ ಶೆಟ್ಟಿಯಿಂದ ಪ್ರತಿಭಟನೆಗೆ ಕರೆ

NAMMMUR EXPRESS NEWS
ಕೊಪ್ಪ: ಶೃಂಗೇರಿ ಕ್ಷೇತ್ರದಾದ್ಯಂತ ಗುಂಡಿಬಿದ್ದ ರಸ್ತೆಗಳು,ಹಕ್ಕು ಪತ್ರ ಸಮಸ್ಯೆ,ರೈತರ ವಿರುದ್ಧ ಎಸ್‌ಐಟಿ ರಚನೆ ಹಾಗೂ ಕ್ಷೇತ್ರ ಅಭಿವೃದ್ಧಿಯಲ್ಲಿ ಹಿನ್ನೆಡೆಯಾಗಿರುವುದನ್ನು ಖಂಡಿಸಿ ಅ.29ರಂದು ಕೊಪ್ಪದಲ್ಲಿ ಜೆಡಿಎಸ್‌ನಿಂದ ರಾಜ್ಯ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆಗೆ ಕರೆ ನೀಡಲಾಗಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಶೃಂಗೇರಿ ಕ್ಷೇತ್ರದಲ್ಲಿ ಅಭಿವೃದ್ಧಿಗೆ ಭಾರೀ ಹಿನ್ನಡೆಯಾಗಿದ್ದು,ಕ್ಷೇತ್ರದಲ್ಲಿ ರಸ್ತೆಗಳು ಗುಂಡಿಮಯವಾಗಿದೆ,ಹಕ್ಕುಪತ್ರಕ್ಕೆ ಅರ್ಜಿ ಸಲ್ಲಿಸಿದವರಿಗೆ ಹಕ್ಕುಪತ್ರ ನೀಡುತ್ತಿಲ್ಲ,ರೈತರ ವಿರುದ್ಧ ಸರ್ಕಾರ ಎಸ್‌ಐಟಿ ರಚಿಸಿ ಒತ್ತುವರಿ ತೆರವು ಹೆಸರಿನಲ್ಲಿ ರೈತರ ಕೃಷಿ ಜಮೀನನ್ನು ಕಸಿದುಕೊಳ್ಳತ್ತಿರುವುದನ್ನ ವಿರೋಧಿಸಿ ಹಾಗೂ ಈ ಬಗ್ಗೆ ಸರ್ಕಾರ ಹಾಗೂ ಶಾಸಕರನ್ನು ಎಚ್ಚರಿಸಲು ನಾಳೆ ಪ್ರತಿಭಟನೆಗೆ ಕರೆಕೊಡಲಾಗಿದ್ದು,ಕೊಪ್ಪದ ಕುವೆಂಪು ವೃತ್ತದಿಂದ ಮುಖ್ಯ ಬಸ್ ನಿಲ್ದಾಣದವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಲಿದ್ದು ನಂತರ ಮುಖ್ತ ಬಸ್ ನಿಲ್ದಾಣದಲ್ಲಿ ಪ್ರತಿಭಟನಾ ಸಭೆ ನಡೆಯಲಿದೆ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸುಧಾಕರ್ ಎಸ್ ಶೆಟ್ಟಿ ತಿಳಿಸಿದ್ದಾರೆ. ಪ್ರತಿಭಟನೆಯಲ್ಲಿ ಎಲ್ಲಾ ರೈತರು,ಸಾರ್ವಜನಿಕರು ಪಾಲ್ಗೊಂಡು ಪ್ರತಿಭಟನೆಯನ್ನು ಯಶಸ್ವಿಗೊಳಿಸಿ ಸರ್ಕಾರದ ಗಮನಸೆಳೆಯುವಲ್ಲಿ ಸಹಕರಿಸುವಂತೆ ಕೋರಿದ್ದಾರೆ.

Categories
ಅಡಿಕೆ-ದರ ಮಲ್ನಾಡ್ ರಾಜ್ಯ

ಅಡಿಕೆ ದರ ಎಷ್ಟಿದೆ?

ಅಡಿಕೆ ದರ ಎಷ್ಟಿದೆ?
– ಬೆಟ್ಟೆ ಎಷ್ಟು? ರಾಶಿ ಎಷ್ಟು?

NAMMUR EXPRESS NEWS

ಸರಕು
59000-84200-94999

ಬೆಟ್ಟೆ
54629-73000-79099

ರಾಶಿ
52366-64000-67099

ಗೊರಬಲು
22189-41600-44730

ಹೊಸ ರಾಶಿ
57129-64000-64599

Categories
ಬೆಂಗಳೂರು ರಾಜ್ಯ

ಇನ್ನು ಮುಂದೆ ಪೊಲೀಸರಿಗೆ ನೀಲಿ ಟೋಪಿ!

ಇನ್ನು ಮುಂದೆ ಪೊಲೀಸರಿಗೆ ನೀಲಿ ಟೋಪಿ!
– ಹಳೆ ಕಾಲದ ಟೋಪಿಗೆ ಗುಡ್ ಬೈ ಹೇಳಿದ ರಾಜ್ಯ ಸರ್ಕಾರ
– ಹೊಸ ಟೋಪಿ ಹಾಕಿ ಪೋಸ್ ಕೊಟ್ಟ ಪೊಲೀಸರು

ವಿಶೇಷ ವರದಿ: ಸಿದ್ಧಾಂತ್

NAMMUR EXPRESS NEWS
ಬೆಂಗಳೂರು: ಪೊಲೀಸ್ ಟೋಪಿ ಈಗ ಬದಲಾಗಲಿದೆ. ಕರ್ನಾಟಕ ಪೊಲೀಸರಿಗೆ ಪೀಕ್‌ ಕ್ಯಾಪ್‌ ಅನ್ನು ಸರ್ಕಾರ ವಿತರಣೆ ಮಾಡಿದೆ.
ಇನ್ನು ಮುಂದೆ ಪೊಲೀಸರಿಗೆ ನೀಲಿ ಟೋಪಿ ಸಿಗಲಿದ್ದು ಹಳೆ ಕಾಲದ ಟೋಪಿಗೆ ಗುಡ್ ಬೈ ಹೇಳಲಾಗಿದೆ. ರಾಜ್ಯ ಸರ್ಕಾರ ಕೊಟ್ಟ ಹೊಸ ಟೋಪಿ ಹಾಕಿ ಪೊಲೀಸರು ಗೌರವ ಸಲ್ಲಿಸಿದ್ದಾರೆ.
ಮಂಗಳವಾರ ಬೆಂಗಳೂರಲ್ಲಿ ಕರ್ನಾಟಕ ರಾಜ್ಯ ಪೊಲೀಸ್‌ ಸಿಬ್ಬಂದಿಯ ಪೀಕ್‌ ಕ್ಯಾಪ್‌ ವಿತರಣೆ ಹಾಗೂ ಮಾದಕ ದ್ರವ್ಯ ವಿರೋಧಿ ಕಾರ್ಯಪಡೆ ಉದ್ಘಾಟನೆ ಮತ್ತು ಸನ್ಮಿತ್ರ ಕೈಪಿಡಿ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಸಿಎಂ ಸಿದ್ದರಾಮಯ್ಯ ಹಾಗೂ ಗೃಹಸಚಿವರಾದ ಜಿ.ಪರಮೇಶ್ವರ್‌, ಡಿಸಿಎಂ ಡಿಕೆ ಶಿವಕುಮಾರ್ ಸೇರಿ ಅಧಿಕಾರಿಗಳು ಹಾಜರಿದ್ದರು. ಈ ವೇಳೆ ಹಳೇ ಕಾಲದ ಸ್ಲೋಚ್‌ ಹ್ಯಾಟ್‌ಗೆ ವಿದಾಯ ಹೇಳಿ ಪೊಲೀಸ್‌ ಸಿಬ್ಬಂದಿಗೆ ಹೊಸ ಪೀಕ್‌ ಕ್ಯಾಪ್‌ ವಿತರಣೆ ಮಾಡಲಾಯಿತು. ಎಲ್ಲಾಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಹೊಸ ಟೋಪಿ ಧರಿಸಿದರು. ಪ್ರತಿ ಠಾಣೆಗೂ ಶೀಘ್ರದಲ್ಲಿ ಹೊಸ ಟೋಪಿ ರವಾನೆ ಆಗಲಿದೆ.

ಹೊಸ ಟೋಪಿ ಏಕೆ..?

ಪ್ರತಿಭಟನೆ, ಆರೋಪಿಯನ್ನು ಹಿಡಿಯಲು ಓಡುವಾಗ, ಲಾಠಿಪ್ರಹಾರದ ವೇಳೆ ಸ್ಲೋಚ್‌ ಕ್ಯಾಪ್‌ ಕೆಳಗೆ ಬೀಳುತ್ತಿತ್ತು. ಪೊಲೀಸರ ಹ್ಯಾಟ್‌ ಕೆಳಗೆ ಬಿದ್ದರೆ ಸಮವಸ್ತ್ರಕ್ಕೆ ಅಗೌರವ ತೋರಿದಂತಾಗುತ್ತದೆ. ಹೀಗಾಗಿ ಕಳೆದ 4 ದಶಕಗಳಿಂದ ಪೀಕ್‌ ಕ್ಯಾಪ್‌ ನೀಡುವಂತೆ ಪೊಲೀಸರು ಬೇಡಿಕೆಯಿಟ್ಟಿದ್ದರು. ಕೊನೆಗೆ ಸರ್ಕಾರ ಹೊಸ ಮಾದರಿಯ ಕಡು ನೀಲಿ ಬಣ್ಣದ ಪೀಕ್‌ ಕ್ಯಾಪ್‌ ವಿತರಿಸಲು ಒಪ್ಪಿಗೆ ನೀಡಿತ್ತು. ಹೊಸ ಪೀಕ್‌ ಕ್ಯಾಪ್‌ನಲ್ಲಿ ಎಲಾಸ್ಟಿಕ್‌ ಇರುವುದರಿಂದ ಪೊಲೀಸರ ತಲೆಯಲ್ಲಿ ಸರಿಯಾಗಿ ಕೂರಲಿವೆ. ಇಂದಿನಿಂದ ರಾಜ್ಯದ 1 ಲಕ್ಷ ಪೊಲೀಸ್‌ ಸಿಬ್ಬಂದಿಗೆ ಹೊಸ ಪೀಕ್‌ ಕ್ಯಾಪ್‌ ಸಿಗಲಿದೆ.

Categories
ಮಲ್ನಾಡ್ ಶಿವಮೊಗ್ಗ

ಯುವ ಸಹಕಾರಿ ಅಜಿತ್ ಅವರಿಗೆ ಮಹತ್ವದ ಹುದ್ದೆ

ಯುವ ಸಹಕಾರಿ ಅಜಿತ್ ಅವರಿಗೆ ಮಹತ್ವದ ಹುದ್ದೆ
– ಶಿವಮೊಗ್ಗ ಜಿಲ್ಲಾ ಸಹಕಾರ ಕ್ಷೇತ್ರಕ್ಕೆ ಅಜಿತ್ ಗೌಡ ಎಂಟ್ರಿ
– ಜಿಲ್ಲಾ ಸಹಕಾರಿ ಮಾರಾಟ ಒಕ್ಕೂಟಕ್ಕೆ ತೀರ್ಥಹಳ್ಳಿಯ ನಿರ್ದೇಶಕರಾಗಿ ಆಯ್ಕೆ

NAMMUR EXPRESS NEWS
ಶಿವಮೊಗ್ಗ: ಜಿಲ್ಲಾ ಸಹಕಾರಿ ಮಾರಾಟ ಒಕ್ಕೂಟಕ್ಕೆ ತೀರ್ಥಹಳ್ಳಿಯ ನಿರ್ದೇಶಕರಾಗಿ ತೀರ್ಥಹಳ್ಳಿ ಶರಾವತಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹೆಚ್.ವಿ. ಅಜಿತ್ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಈ ಮೂಲಕ ಜಿಲ್ಲಾ ಸಹಕಾರ ಕ್ಷೇತ್ರಕ್ಕೆ ಅಜಿತ್ ಎಂಟ್ರಿ ಆಗಿದ್ದಾರೆ.
ಇತ್ತೀಚಿಗೆ ಜರುಗಿದ ನಿರ್ದೇಶಕರುಗಳ ಆಯ್ಕೆ ಸಂದರ್ಭದಲ್ಲಿ ಅಜಿತ್ ಅವರ ಕಾರ್ಯ ಚಟುವಟಿಕೆ ಮತ್ತು ಸಹಕಾರಿ ಸಂಘಗಳ ಅಭಿವೃದ್ಧಿಯತ್ತ ಅವರಿಗಿರುವ ಆಸಕ್ತಿ ಮತ್ತು ಕಾಳಜಿಯನ್ನು ಗಮನಿಸಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

ಹೆಚ್. ವಿ.ಅಜಿತ್ ಇತ್ತೀಚಿನ ದಿನಗಳಲ್ಲಿ ಸಹಕಾರಿ ಕ್ಷೇತ್ರದಲ್ಲಿ ಉತ್ತಮ ಆಲೋಚನೆ ಮತ್ತು ಚಿಂತನೆಗಳನ್ನೂ, ಮುಂದಾಲೋಚನೆಗಳನ್ನೂ ಇರಿಸಿಕೊಂಡಿರುವ ಓರ್ವ ಕ್ರಿಯಾಶೀಲ ಯುವಕ. ಎಂ ಟೆಕ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದು ಕೈ ತುಂಬಾ ಸಂಬಳ ಗಳಿಸಿಕೊಳ್ಳಬಹುದಾದ ಅವಕಾಶಗಳಿದ್ದರೂ ಕೂಡ ಅದಕ್ಕೆ ಹಾತೊರೆಯದೇ ತಮ್ಮ ತಂದೆ ಬಸವಾನಿ ವಿಜಯ ದೇವ್‌ರವರ ಮಾರ್ಗದರ್ಶನದಂತೆ ಸಹಕಾರಿ ಕ್ಷೇತ್ರದಲ್ಲೇ ಮುಂದುವರಿಯಲು ಮನಸ್ಸು ಮಾಡಿದರು. ಅತ್ಯಂತ ಸೌಮ್ಯ ಸ್ವಭಾವಿಯೂ,ಸರಳತೆಯನ್ನು ಮೈಗೂಡಿಸಿಕೊಂಡ ಅಜಿತ್ ಸಹಕಾರ ಕ್ಷೇತ್ರದಲ್ಲಿ ಮಹತ್ವದನ್ನೂ ಸಾಧಿಸಬಹುದಾದ ಆಲೋಚನೆ ಇಲ್ಲವೆಂದು ಬಹಳಷ್ಟು ಜನ ಅಂದುಕೊಂಡಿದ್ದರು. ಆದರೆ ಶರಾವತಿ ಪತ್ತಿನ ನಿರ್ದೇಶಕರಾಗಿ ಆಯ್ಕೆಗೊಂಡು ಶರಾವತಿ ಪತ್ತಿನ ಅಧ್ಯಕ್ಷರಾದ ನಂತರ ಇಲ್ಲಿ ಅಜಿತ್ ಅವರು ಸಾಧಿಸಿದ ಸಾಧನೆ ಮತ್ತು ಸೊಸೈಟಿಯನ್ನು ಪ್ರಗತಿಯತ್ತ ಕೊಂಡೊಯ್ದ ದಿಟ್ಟ ಕ್ರಮ ಮಾತ್ರ ಎಲ್ಲರನ್ನೂ ಅಚ್ಚರಿಗೊಳಿಸಿದೆ.

ಸೊಸೈಟಿ ಎಂದಾದರೂ ಒಂದು ದಿನ ನಷ್ಟ ಸಂಭವಿಸಿದರೆ ಈ ಸೊಸೈಟಿಯಲ್ಲಿ ಷೇರು ತೊಡಗಿಸಿರುವ ಠೇವಣಿ ಇಟ್ಟಿರುವವರಿಗೆ ತೊಂದರೆಯಾಗಬಾರದು ಎಂಬ ದೃಷ್ಟಿಯಿಂದ ಪಟ್ಟಣದ ಹೃದಯ ಭಾಗಗಳಲ್ಲಿ ಕೋಟಿಗಟ್ಟಲೆ ಬೆಲೆಬಾಳುವ ಆಸ್ತಿ ಖರೀದಿಸಿ ಷೇರುದಾರರಿಗೆ ಭದ್ರತೆ ಕಲ್ಪಿಸಿರುವುದು ಅಜಿತ್ ರವರಲ್ಲಿನ ಪ್ರಗತಿಗಾಮಿ ಧೋರಣೆಯನ್ನು ತೋರಿಸುತ್ತದೆ. ತಾನೊಂದು ಸಂಸ್ಥೆಯ ಅಧ್ಯಕ್ಷನಾಗಿದ್ದರೂ ಸಹ ಹಮ್ಮು-ಬಿಮ್ಮು ತೋರದೆ ಅತ್ಯಂತ ಸರಳತೆಯಿಂದ ಎಲ್ಲರೊಂದಿಗೆ ಬೆರೆಯುವ ಅಜಿತ್‌ಗೆ ಶಿವಮೊಗ್ಗ ಜಿಲ್ಲಾ ಸಹಕಾರಿ ಮಾರಾಟ ಒಕ್ಕೂಟದ ನಿರ್ದೇಶಕರ ಹುದ್ದೆ ಸಹಕಾರಿ ಕ್ಷೇತ್ರದಲ್ಲಿ ಇನ್ನಷ್ಟು ಎತ್ತರದ ಹುದ್ದೆ ಅಲಂಕರಿಸಲು ಮೆಟ್ಟಿಲಾಗಿದೆ.
ಯುವ ಸಹಕಾರಿಯಾಗಿ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂಬುದು ನಮ್ಮೆಲರ ಆಶಯ.

Categories
ಕಾರ್ಕಳ ಶಿಕ್ಷಣ

ಕ್ರಿಯೇಟಿವ್ ಕಾಲೇಜಿನಲ್ಲಿ ಶಿಕ್ಷಕರ-ಪೋಷಕರ ಸಭೆ

ಕ್ರಿಯೇಟಿವ್ ಕಾಲೇಜಿನಲ್ಲಿ ಶಿಕ್ಷಕರ-ಪೋಷಕರ ಸಭೆ
– ಕಾರ್ಕಳ ಕ್ಯಾಂಪಸ್ ಅಲ್ಲಿ ಓಡಾಡಿ, ಆಡಳಿತ ಮಂಡಳಿ ಜತೆ ಪೋಷಕರ ಮಾತುಕತೆ
– ಮಕ್ಕಳು, ಪೋಷಕರಿಗೆ ಮಾಹಿತಿ ನೀಡಿದ ಸಂಸ್ಥಾಪಕರು

NAMMUR EXPRESS NEWS
ಕಾರ್ಕಳ: ಕಾರ್ಕಳದ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನಲ್ಲಿ ವಿವಿಧ ಹಂತಗಳಲ್ಲಿ ಶಿಕ್ಷಕರ – ಪಾಲಕರ ಸಭೆಯನ್ನು ಕಾಲೇಜಿನ ಸಪ್ತಸ್ವರ ಸಭಾಂಗಣದಲ್ಲಿ ನಡೆಸಲಾಯಿತು. ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆ, ಜೀವನ ಮೌಲ್ಯಗಳನ್ನು ಕುರಿತು ನಡೆದ ಕಾರ್ಯಕ್ರಮವು ಶಿಕ್ಷಕರು, ಪಾಲಕರು ಹಾಗೂ ವಿದ್ಯಾರ್ಥಿಗಳ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸುವ ವೇದಿಕೆಯಾಯಿತು.
ಸಹಸಂಸ್ಥಾಪಕರುಗಳಾದ ವಿದ್ವಾನ್ ಗಣಪತಿ ಭಟ್ ರವರು ಮಾತನಾಡಿ ‘ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಶಿಕ್ಷಣ ಸಂಸ್ಥೆ, ಪೋಷಕರು ಮತ್ತು ಶಿಕ್ಷಕರ ತ್ರಿಕೋನ ಸಹಕಾರ ಅತ್ಯವಶ್ಯಕ’ ಎಂದು ಹೇಳಿದರು.
ಅಶ್ವತ್ ಎಸ್.ಎಲ್ ರವರು ಮಾತನಾಡಿ, ‘ಶಿಕ್ಷಕರು ಮತ್ತು ಪಾಲಕರು ಇಬ್ಬರು ಒಂದೇ ಹಾದಿಯಲ್ಲಿ ನಡೆದು ವಿದ್ಯಾರ್ಥಿಗೆ ಮಾರ್ಗದರ್ಶನ ನೀಡಿದಾಗ, ಸಮಾಜಕ್ಕೆ ಒಳ್ಳೆಯ ನಾಗರಿಕರನ್ನು ರೂಪಿಸಲು ಸಾಧ್ಯವಾಗುತ್ತದೆ’ ಎನ್ನುತ್ತಾ ಕ್ರಿಯೇಟಿವ್ ನ ಕಾರ್ಯ ಯೋಜನೆಗಳ ಬಗ್ಗೆ ವಿವರಣೆಗಳನ್ನು ನೀಡಿದರು.
ಡಾ. ಬಿ. ಗಣನಾಥ ಶೆಟ್ಟಿ ರವರು ಮಾತನಾಡುತ್ತಾ ‘ ವಿದ್ಯಾರ್ಥಿಗಳು ತಮ್ಮ ಸಮಯವನ್ನು ಸದುಪಯೋಗಪಡಿಸಿಕೊಂಡು, ಶ್ರದ್ಧೆ ಮತ್ತು ಶ್ರಮದಿಂದ ಓದುತ್ತ ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ವಿಯಾಗಬೇಕು’ ಎಂದು ಕರೆ ನೀಡಿದರು.
ಗಣಪತಿ ಭಟ್ ಕೆ.ಎಸ್ ರವರು ಸಮಗ್ರ ಶೈಕ್ಷಣಿಕ ವಿವರಗಳನ್ನು ನೀಡಿ, ಶಿಕ್ಷಣ ಜೀವನಕ್ಕೆ ಬೆಳಕಾಗಲಿ ಎಂದು ಹಾರೈಸಿದರು. ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯವರು, ಉಪನ್ಯಾಸಕ- ಉಪನ್ಯಾಸಕೇತರ ವರ್ಗದವರು, ವಿದ್ಯಾರ್ಥಿಗಳು ಹಾಗೂ ಪೋಷಕ ವೃಂದದವರು ಪಾಲ್ಗೊಂಡಿದ್ದರು. ಉಪನ್ಯಾಸಕಿ ಶ್ರೀಮತಿ ಸ್ಮಿತಾ ಹಾಗೂ ಪ್ರಿಯಾಂಕ ತೀರ್ಥರಾಮ್ ರವರು ಕಾರ್ಯಕ್ರಮ ನಿರ್ವಹಿಸಿಕೊಟ್ಟರು.

Categories
ಬೆಂಗಳೂರು ರಾಜ್ಯ

ಆರ್ ಎಸ್ ಎಸ್ ನಿರ್ಬಂಧಕ್ಕೆ ರಾಜ್ಯ ಸರ್ಕಾರಕ್ಕೆ ತೀವ್ರ ಮುಖಭಂಗ..!!

ಆರ್ ಎಸ್ ಎಸ್ ನಿರ್ಬಂಧಕ್ಕೆ ರಾಜ್ಯ ಸರ್ಕಾರಕ್ಕೆ ತೀವ್ರ ಮುಖಭಂಗ..!!
– ‘RSS’ ಪಥಸಂಚಲನ ನಿರ್ಬಂಧಕ್ಕೆ ಹೈಕೋರ್ಟ್ ಮಧ್ಯಂತರ ತಡೆ
– ನ್ಯಾಯಮೂರ್ತಿ ಎಂ ನಾಗಪ್ರಸನ್ನ ಹೈಕೋರ್ಟ್ ನಿಂದ ಆದೇಶ

NAMMUR EXPRESS NEWS
ರಾಜ್ಯದಲ್ಲಿ ಆರ್ ಎಸ್ ಎಸ್ ನಿರ್ಬಂಧಕ್ಕೆ ಮುಂದಾಗಿದ್ದ ರಾಜ್ಯ ಸರ್ಕಾರಕ್ಕೆ ಇದೀಗ ಭಾರಿ ಮುಖಭಂಗ ಆಗಿದ್ದು, ಪಥ ಸಂಚಲನ ನಿರ್ಬಂಧಿಸಲು ಮುಂದಾಗಿದ್ದ ರಾಜ್ಯ ಸರ್ಕಾರಕ್ಕೆ ಹಿನ್ನಡೆಯಾಗಿದೆ ರಾಜ್ಯ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ಇದೀಗ ಮಧ್ಯಂತರ ತಡೆ ನೀಡಿದೆ. ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಈ ಆದೇಶ ಹೊರಡಿಸಿದೆ.

ಸಚಿವ ಪ್ರಿಯಾಂಕ ಖರ್ಗೆ ರಾಜ್ಯದಲ್ಲಿ ಆರ್‌ಎಸ್‌ ಚಟುವಟಿಕೆಗಳಿಗೆ ನಿರ್ಬಂಧ ಸೇರುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದರು. ಈ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟದಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಆದೇಶ ಹೊರಡಿಸಿತ್ತು. ಇದೀಗ ಈ ಒಂದು ವಿಚಾರಕ್ಕೆ ಸಂಬಂಧಪಟ್ಟಂತೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದ್ದು ರಾಜ್ಯ ಸರ್ಕಾರಕ್ಕೆ ತೀವ್ರ ಹಿನ್ನೆಡೆಯಾಗಿದೆ. ಧಾರವಾಡದ ಹೈಕೋರ್ಟ್ ಪೀಠದಲ್ಲಿ ಪುನಃಶ್ಚೇತನ ಸೇವಾ ಸಂಸ್ಥೆ ಹುಬ್ಬಳ್ಳಿಯ ಎನ್‌ಜಿಓ ರಿಟ್ ಅರ್ಜಿ ಸಲ್ಲಿಸಿತ್ತು. ಅರ್ಜಿಯಲ್ಲಿ ಆದೇಶ ಕಾನೂನು ಬಾಹಿರ ಮತ್ತು ಸಂವಿಧಾನ ಬಾಹಿರವಾಗಿದೆ. ಆದೇಶದಲ್ಲಿ 10 ಜನಕ್ಕಿಂತ ಹೆಚ್ಚು ಸೇರುವಂತಿಲ್ಲ ಎಂದು ನಿರ್ಬಂಧ ವಿಧಿಸಿತ್ತು. ಈ ನಿರ್ಬಂಧ ವಿಧಿಸಲು ಕಾನೂನಿನಲ್ಲಿ ಅವಕಾಶ ಇಲ್ಲ. ಇದು ಸಂವಿಧಾನದ ಆರ್ಟಿಕಲ್ 91 ಎ ಪ್ರಕಾರ ಜನಗಳು ಸಭೆ ಸಮಾರಂಭಗಳಲ್ಲಿ ಜನ ಸೇರುವ ಹಕ್ಕಿದೆ ಆ ಹಕ್ಕನ್ನು ಉಲ್ಲಂಘನೆ ಮಾಡಲಾಗುತ್ತದೆ.

ಇದನ್ನು ನಿಯಂತ್ರಿಸಕ್ಕೆ ಸರ್ಕಾರ ಆದೇಶ ಮೂಲಕ ಮುಂದಾಗಿದ್ದು ಇದು ಸಂವಿಧಾನ ಬಾಹಿರ ಎಂದು ಅಶೋಕ್ ಹಾರನಹಳ್ಳಿ ವಾದ ಮಾಡಿದರು. ಹೈಕೋರ್ಟ್ ಕೂಡ ಈ ವಾದವನ್ನು ಒಪ್ಪಿ ನ್ಯಾಯಮೂರ್ತಿ ನಾಗಪ್ರಸನ್ನ ಅವರ ಪೀಠ ಇದು ಸಂಪೂರ್ಣವಾಗಿ ಕಾನೂನು ಬಾಹಿರವಾಗಿದೆ ಎಂದು ಮೇಲ್ನೋಟಕ್ಕೆ ಕಂಡು ಬಂದಿದ್ದು ಸಂವಿಧಾನ ಕೊಟ್ಟಿರುವ ಮೂಲಭೂತ ಹಕ್ಕನ್ನು ಸರ್ಕಾರದ ಒಂದು ಆದೇಶದ ಮೂಲಕ ಕಿತ್ತುಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಸರ್ಕಾರ ಏನು ಸಾಧಿಸಲು ಆದೇಶಕ್ಕೆ ಮಧ್ಯಂತರ ತಡೆ ನೀಡಿದರು. ಇನ್ನು ರಾಜ್ಯ ಸರ್ಕಾರದ ಪರ ವಕೀಲರು ವಾದ ಮಾಡಲು ಒಂದು ದಿನದ ಕಾಲಾವಕಾಶ ಕೇಳಿದ್ದು ಕೋರ್ಟ್ ನಿಮಗೆ ನೋಟಿಸ್ ನೀಡುತ್ತೆ ವಾದ ಮಾಡಿ ಎಂದು ಹೇಳಿ ಹೈಕೋರ್ಟ್ ಆದೇಶ ನೀಡಿತು.