Categories
ಉಡುಪಿ ಕರಾವಳಿ ಕಾರ್ಕಳ ಕುಂದಾಪುರ ದಕ್ಷಿಣ ಕನ್ನಡ ಮಂಗಳೂರು

ಕರಾವಳಿ ಟಾಪ್ ನ್ಯೂಸ್

ಕರಾವಳಿ ಟಾಪ್ ನ್ಯೂಸ್

* ಬೆಳ್ತಂಗಡಿ: ಪೊಲೀಸರ ನಡೆಗೆ ಪ್ರತಿಭಟನಾಕಾರರ ಆಕ್ರೋಶ

* ಸುಳ್ಯ: ಪ್ರಯಾಣಿಕರು ಇಳಿಯುವ ಸ್ಥಳದಲ್ಲಿ ಬಸ್ ನ ಬಾಗಿಲು ತೆರೆಯದ ಚಾಲಕ

* ಪುತ್ತೂರು: ಮಧ್ಯಾಹ್ನದ ಸಮಯದಲ್ಲಿ ಅಂಗಡಿಯೊಳಗೆ ನುಗ್ಗಿ ಕಳ್ಳತನ

* ಕುಂದಾಪುರ: ಅಂದರ್ ಬಾಹರ್ ಜುಗಾರಿ ಅಡ್ಡೆ ಮೇಲೆ ದಾಳಿ

* ಕಾರ್ಕಳ: ಚರಂಡಿಗೆ ಉರುಳಿದ ಕಾರ್

* ಮಂಗಳೂರು: ಮಾದಕ ದ್ರವ್ಯ ಸೇವನೆ; ಆರೋಪಿಗಳ ಬಂಧನ

* ಉಡುಪಿ: ಸ್ಕೂಟರ್ ಮತ್ತು ಕಾರ್ ನಡುವೆ ಢಿಕ್ಕಿ

* ಬೈಂದೂರು: ವೈಯಕ್ತಿಕ ಕಾರಣದಿಂದ ಕಾಲೇಜ್ ವಿದ್ಯಾರ್ಥಿ ಆತ್ಮಹತ್ಯೆ

* ಉಳ್ಳಾಲ: ರಸ್ತೆ ದಾಟುತ್ತಿದ್ದ ಪಾದಾಚಾರಿ ಸಾವು

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್

* ಬೆಳ್ತಂಗಡಿ: ಪೊಲೀಸರ ನಡೆಗೆ ಪ್ರತಿಭಟನಾಕಾರರ ಆಕ್ರೋಶ

ಬೆಳ್ತಂಗಡಿ: ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯ ಕೇಳಲು ಹೋದ ಸಂದರ್ಭದಲ್ಲಿ, ಪೊಲೀಸರು ಕಾವಲು ನಿಂತ ಘಟನೆ ಸೋಮವಾರದಂದು ನಡೆದಿದೆ. ನ್ಯಾಯ ಒದಗಿಸಬೇಕೆಂದು ಸೌಜನ್ಯ ಪರ ಹೋರಾಟಗಾರರು ತಹಶೀಲ್ದಾರರಿಗೆ ಮನವಿಯನ್ನು ಸಲ್ಲಿಸಲು ತೆರಳಿದ್ದರು.‌ ಈ ಸಮಯದಲ್ಲಿ ತಹಶೀಲ್ದಾರರು ತಮ್ಮ ಕಛೇರಿಯಲ್ಲಿ ಇರಲಿಲ್ಲ. ಹೋರಾಟಗಾರ್ತಿಯೊಬ್ಬರು ಕರೆ ಮಾಡಿ ಕೇಳಿದಾಗ “ನಾನು ರಜೆಯಲ್ಲಿದ್ದೇನೆ ಮತ್ತು ನೀವು ಅಪಾಯಿಂಟ್ಮೆಂಟ್ ತೆಗೆದುಕೊಂಡು ಬಂದಿಲ್ಲ” ಎಂದು ತಿಳಿಸಿದ್ದಾರೆ. ಇದರಿಂದ ಹೋರಾಟಗಾರರು ಆಕ್ರೋಶಗೊಂಡಿದ್ದಾರೆ. “ಮನವಿ ಸಲ್ಲಿಸಲು ಬರಲು ಕೂಡ ಹೋರಾಟಗಾರರು ಅಪಾಯಿಂಟ್ಮೆಂಟ್ ತೆಗೆದುಕೊಂಡು ಬರಬೇಕೇ?” ಎಂದು ಅವರು ಮಾಧ್ಯಮಗಳ ಮುಂದೆ ವಿರೋಧ ವ್ಯಕ್ತಪಡಿಸಿದ್ದಾರೆ. ಉಪತಹಶೀಲ್ದಾರರು ಕೂಡ ಇರದೇ, ಕೋಣೆಗೆ ಬೀಗ ಹಾಕಿದ್ದರಿಂದ, ಮನವಿಯನ್ನು ಟಪಾಲು ವಿಭಾಗದಲ್ಲಿ ಸಲ್ಲಿಸಿ ಬಂದರು ಎನ್ನಲಾಗಿದೆ.‌ ಹಾಗೆಯೇ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಿದ ಕಾರಣಕ್ಕೆ ಹೋರಾಟಗಾರರು ಬೇಸರ ವ್ಯಕ್ತಪಡಿಸಿದ್ದು “ನಾವು ನ್ಯಾಯ ಕೇಳಲು ಬಂದಿರುವುದು ಅಷ್ಟೇ. ಯಾವುದೇ ರೀತಿಯ ಹಲ್ಲೆ ನಡೆಸಲು ಅಲ್ಲ. ನಮ್ಮನ್ನು ಭಯೋತ್ಪಾದಕರಂತೆ ಕಾಣಲಾಗುತ್ತಿದೆ. ನಮ್ಮದು ಶಾಂತಿಯುತ ಹೋರಾಟ ಅದನ್ನು ಹತ್ತಿಕ್ಕಲು ಯಾರಿಂದಲೂ ಸಾಧ್ಯವಿಲ್ಲ. ತಹಶೀಲ್ದಾರರು ಗೈರಾಗಿರುವ ಕುರಿತು ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಪಡೆದುಕೊಳ್ಳುತ್ತೇವೆ” ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಇದಕ್ಕೂ ಮೊದಲು ಮಹೇಶ್ ಶೆಟ್ಟಿ ತಿಮರೋಡಿ ಪರ ಹೋರಾಟ ಮಾಡಲು ಅನುಮತಿ ಪಡೆದಿದ್ದು, ಅದನ್ನು ನಿರಾಕರಿಸಲಾಗಿತ್ತು ಎನ್ನುವ ಸಂಗತಿ ತಿಳಿದುಬಂದಿದೆ.

* ಸುಳ್ಯ: ಪ್ರಯಾಣಿಕರು ಇಳಿಯುವ ಸ್ಥಳದಲ್ಲಿ ಬಸ್ ನ ಬಾಗಿಲು ತೆರೆಯದ ಚಾಲಕ

ಸುಳ್ಯ: ಸ್ವಯಂ ಚಾಲಿತ ಬಾಗಿಲನ್ನು ಹೊಂದಿರುವ, ಸುಳ್ಯ ಮತ್ತು ಕೊಯನಾಡು ನಡುವಿನ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ ನ ಚಾಲಕ, ಪ್ರಯಾಣಿಕರು ಇಳಿಯಬೇಕಾದ ಜಾಗದಲ್ಲಿ ಬಸ್ ಅನ್ನು ನಿಲ್ಲಿಸದೆ, ಬಾಗಿಲನ್ನು ತೆರೆಯದೆ ಸತಾಯಿಸಿದ ಘಟನೆ ಕಳೆದೆರಡು ದಿನಗಳ ಹಿಂದೆ ನಡೆದಿದೆ. ಕೊಯನಾಡಿನಿಂದ ಸುಳ್ಯಕ್ಕೆ ಬರುತ್ತಿದ್ದ ಸಮಯದಲ್ಲಿ ಕೂಡ ಇದೇ ರೀತಿ ವರ್ತಿಸಿದ್ದಾನೆ. ಇದರಿಂದ ಪ್ರಯಾಣಿಕರು ಅಸಮಾಧಾನಗೊಂಡು, ಪುತ್ತೂರು ಹಾಗೂ ಸುಳ್ಯ ನಿಗಮದ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ತಕ್ಷಣ ಪ್ರಯಾಣಿಕರ ಮನವಿಗೆ ಸ್ಪಂದಿಸಿದ ಇಲಾಖಾಧಿಕಾರಿಗಳು, ಚಾಲಕನಾದ ಗಫರ್ ನಿಗೆ ಶಿಕ್ಷೆಯ ರೂಪದಲ್ಲಿ ಮಾರ್ಗ ಮಧ್ಯದಲ್ಲಿಯೇ ಬಸ್ ನಿಂದ ಇಳಿಸಿ, ಮತ್ತೊಂದು ಬಸ್ ಗೆ ನಿಯೋಜಿಸಿದರು ಎನ್ನುವ ಸಂಗತಿ ತಿಳಿದುಬಂದಿದೆ.‌

* ಪುತ್ತೂರು: ಮಧ್ಯಾಹ್ನದ ಸಮಯದಲ್ಲಿ ಅಂಗಡಿಯೊಳಗೆ ನುಗ್ಗಿ ಕಳ್ಳತನ

ಪುತ್ತೂರು: ಅಂಗಡಿಯ ಮಾಲೀಕರು ಮಧ್ಯಾಹ್ನದ ಸಮಯದಲ್ಲಿ ಶೌಚಾಲಯಕ್ಕೆ ಹೋಗಿ ಬರುವುದರೊಳಗಾಗಿ, ಅಂಗಡಿಯಲ್ಲಿ ಇರಿಸಿದ್ದ ಹಣ ಕಳುವಾದ ಘಟನೆ, ಸೋಮವಾರದಂದು ಗುಂಡಿಜೆ ಟ್ರೇಡರ್ಸ್ ನಲ್ಲಿ ನಡೆದಿದೆ.‌ ಮಾಲೀಕರು ಅಂಗಡಿಯ ಶಟರ್ ಅನ್ನು ತೆರೆದಿಟ್ಟು, ಹಣವನ್ನು ಇರಿಸಿದ ಡ್ರಾವರ್ ಗೆ‌ ಬೀಗ ಹಾಕಿ, ಅಂಗಡಿಯ ಹಿಂಭಾಗದಲ್ಲಿರುವ ಶೌಚಾಲಯಕ್ಕೆ ತೆರಳಿದ್ದರು. ಮರಳಿ ಬರುವ ಹೊತ್ತಿಗೆ ಡ್ರಾವರ್ ಮುರಿದು ಬಿದ್ದಿದ್ದು, ಅದರಲ್ಲಿ ಇರಿಸಿದ್ದ ಐದು ಲಕ್ಷ ರೂಪಾಯಿಯಷ್ಟು ಹಣ ಕಳ್ಳತನವಾಗಿದೆ. ಅಂಗಡಿಯೊಳಗೆ ಸಿ ಸಿ ಕ್ಯಾಮೆರಾ ಇದ್ದರೂ, ಅದನ್ನು ರಿಚಾರ್ಜ್ ಮಾಡಿಸದ ಕಾರಣ ಕಾರ್ಯನಿರ್ವಹಿಸುತ್ತಿಲ್ಲ. ಅಲ್ಲದೆ ಹೊರಗೆ ಹಾಕಲಾದ ಸಿಸಿ ಕ್ಯಾಮೆರಾದ ಸ್ವಿಚ್ ಕೂಡ ಆಫ್ ಮಾಡಿದ್ದರು ಎನ್ನಲಾಗಿದೆ. ಅಲ್ಲದೆ ವಾಣಿಜ್ಯ ಸಂಕಿರ್ಣದಲ್ಲಿ ಹತ್ತಕ್ಕೂ ಹೆಚ್ಚು ಕೊಠಡಿಗಳನ್ನು ಬಾಡಿಗೆಗೆ ನೀಡಲಾಗಿದ್ದು, ಒಂದು ಸಿಸಿ ಕ್ಯಾಮೆರಾ ಕೂಡ ಅಳವಡಿಸಿಲ್ಲ, ಪ್ರತಿಯೊಂದು ಅಂಗಡಿಯ ಎದುರಿಗೆ ನಿಂತು ಕಾವಲು ಕಾಯುವುದೇ ಪೊಲೀಸರ ಕೆಲಸವಲ್ಲ, ಸಾರ್ವಜನಿಕರು ಕೂಡ ಎಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜವಾಬ್ದಾರಿರಹಿತ ಕಾರ್ಯನಿರ್ವಹಣೆಯಿಂದಾಗಿ ಈ ರೀತಿಯ ಸನ್ನಿವೇಶ ಎದುರಾಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.‌

* ಕುಂದಾಪುರ: ಅಂದರ್ ಬಾಹರ್ ಜುಗಾರಿ ಅಡ್ಡೆ ಮೇಲೆ ದಾಳಿ

ಕುಂದಾಪುರ: ಹಣವನ್ನು ಪಣವಾಗಿಟ್ಟು ಇಸ್ಪೀಟ್ ಅಂದರ್ ಬಾಹರ್ ಆಡುತ್ತಿದ್ದ ಅಡ್ಡೆಯ ಮೇಲೆ ಪೊಲೀಸರು ದಾಳಿ ನಡೆಸಿದ ಘಟನೆ, ಕಾವ್ರಾಡಿ ಗ್ರಾಮದ ಮರಾಸಿ ರಸ್ತೆಯಲ್ಲಿರುವ ಹಾಡಿಯಲ್ಲಿ ನಡೆದಿದೆ. ಆರೋಪಿಗಳಾದ ಅನಿಲ್, ಪೂರ್ಣೇಶ್, ರಘು ಮತ್ತು ಯೋಗೀಶ್ ಅವರನ್ನು ಬಂಧಿಸಲಾಗಿದೆ. ಈ ಸಂದರ್ಭದಲ್ಲಿ ಜುಗಾರಿ ಆಟಕ್ಕೆ ಬಳಸಿದ ಇಸ್ಪೀಟ್ ಎಲೆಗಳನ್ನು, 2480 ರೂಪಾಯಿ ನಗದು ಹಣವನ್ನು ಇನ್ನಿತರ ಕೆಲವು ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

* ಕಾರ್ಕಳ: ಚರಂಡಿಗೆ ಉರುಳಿದ ಕಾರ್

ಕಾರ್ಕಳ: ವಾಹನಕ್ಕೆ ಸ್ಥಳಾವಕಾಶವನ್ನು ಕೊಡಲು ಹೋಗಿ, ಕಾರೊಂದು ಚರಂಡಿಗೆ ಉರುಳಿದ ಘಟನೆ ಕಾಬೆಟ್ಟುವಿನಲ್ಲಿ ನಡೆದಿದೆ. ಬೈಪಾಸ್ ರಸ್ತೆಯಿಂದ ಕಾಬೆಟ್ಟು ಕಡೆಗೆ ತೆರಳುತ್ತಿದ್ದ ಕಾರು, ಎದುರಿನಿಂದ ಬರುತ್ತಿದ್ದ ವಾಹನಕ್ಕೆ ಸ್ಥಳಾವಕಾಶ ಮಾಡಿಕೊಡಲು ಹೋದ ಸಂದರ್ಭದಲ್ಲಿ, ಈ ರೀತಿ ಸಂಭವಿಸಿದೆ. ಚರಂಡಿ ಹುಲ್ಲಿನಿಂದ ಆವೃತವಾಗಿರುವ ಕಾರಣ ಚಾಲಕನ ಗಮನಕ್ಕೆ ಬರಲಿಲ್ಲ ಎನ್ನಲಾಗಿದೆ. ಕಾರಿನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ರೀತಿಯ ಅಪಾಯ ಸಂಭವಿಸಿಲ್ಲ. ಪುರಸಭಾ ವ್ಯಾಪ್ತಿಗೆ ಒಳಪಡುವ ಈ ಚರಂಡಿಯ ಸ್ವಚ್ಛತೆಯ ಕುರಿತು, ಸಂಬಂಧಿತ ವ್ಯಕ್ತಿಗಳು ಗಮನಹರಿಸದಿದ್ದ ಕಾರಣ ಅಪಘಾತ ಸಂಭವಿಸಿದೆ ಎನ್ನುವ ಸಂಗತಿ ತಿಳಿದುಬಂದಿದೆ.

* ಮಂಗಳೂರು: ಮಾದಕ ದ್ರವ್ಯ ಸೇವನೆ; ಆರೋಪಿಗಳ ಬಂಧನ

* ಮಂಗಳೂರು: ಮಾದಕ ವಸ್ತುಗಳ ಸೇವನೆಗೆ ಸಂಬಂಧಿಸಿದಂತೆ, ಕಳೆದೆರಡು ದಿನಗಳ ಹಿಂದೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಶೇಡಿಗುರಿ ಈರಿ ಮೈದಾನದ ಸಮೀಪದ, ಸಾರ್ವಜನಿಕ ರಸ್ತೆಯೊಂದರ ಪಕ್ಕದಲ್ಲಿ ಇಬ್ಬರು ವ್ಯಕ್ತಿಗಳು ಸಿಗರೇಟ್ ಸೇದುತ್ತಾ ನಿಂತಿದ್ದು, ಪೊಲೀಸರಿಗೆ ಅನುಮಾನ ಬಂದ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಲಾಗಿದೆ. ಈ ಸಂದರ್ಭದಲ್ಲಿ ಮಾದಕ ದ್ರವ್ಯವನ್ನು ಸಿಗರೇಟಿನೊಳಗೆ ತುಂಬಿಸಿ, ಸೇದಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದು, ಅವರನ್ನು ತಪಾಸಣೆಗೆ ಒಳಪಡಿಸಿದಾಗ ಅವರು ನೀಡಿದ ಹೇಳಿಕೆ ದೃಢಪಟ್ಟಿದೆ. ಆರೋಪಿಗಳನ್ನು ಅಶೋಕ ನಗರದ ಕುಂದರ್ ಕಾಂಪೌಂಡ್ ನಿವಾಸಿ ಶರತ್ ಕುಮಾರ್ ಮತ್ತು ಸುಲ್ತಾನ್ ಬತ್ತೇರಿ ಅಪಾರ್ಟ್ ಮೆಂಟ್ ನ ನಿವಾಸಿಯಾದ ಮಂಜುನಾಥ ಸಂಗಪ್ಪಾ ನಾಗೂರು ಎಂದು ಗುರುತಿಸಲಾಗಿದೆ. ಇಬ್ಬರ ವಿರುದ್ಧ ಎನ್ ಡಿಪಿಎಸ್ ಕಾಯ್ದೆಯಡಿ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

* ಉಡುಪಿ: ಸ್ಕೂಟರ್ ಮತ್ತು ಕಾರ್ ನಡುವೆ ಢಿಕ್ಕಿ

ಉಡುಪಿ: ಭಾನುವಾರದಂದು ನಡೆದ ರಸ್ತೆ ಅಪಘಾತದಲ್ಲಿ, ಶಿರ್ವ ಪೊಲೀಸ್ ಠಾಣೆಯ ಎಎಸ್ಐ ಆದ ಸುದೇಶ್ ಶೆಟ್ಟಿ ಅವರ ಪುತ್ರಿ, ಖಾಸಗಿ ಕಾಲೇಜೊಂದರಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿದ್ದ ಸ್ಪರ್ಶ ಅವರು ಸಾವನ್ನಪ್ಪಿದ ಘಟನೆ, ನಿಟ್ಟೂರಿನ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಡಿಪೋ ಬಳಿ ನಡೆದಿದೆ. ಭಾನುವಾರ ರಾತ್ರಿ ಉಡುಪಿ ಮತ್ತು ಕುಂದಾಪುರ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ರಾಕೇಶ್ ಎನ್ನುವ ವ್ಯಕ್ತಿಯು, ಕಾರನ್ನು ಸಂತೆಕಟ್ಟೆ ಕಡೆಗೆ ವೇಗವಾಗಿ ಚಲಾಯಿಸಿಕೊಂಡು ಬಂದಿದ್ದು, ಅದೇ ಕಡೆಗೆ ಬರುತ್ತಿದ್ದ ಸ್ಕೂಟರ್ ಗೆ ಢಿಕ್ಕಿ ಹೊಡೆದಿದ್ದರು. ಪರಿಣಾಮವಾಗಿ ಸ್ಕೂಟರ್ ನಲ್ಲಿದ್ದ ಸ್ಪರ್ಶ ಮತ್ತು ಆಕೆಯ ತಾಯಿ ಶರ್ಮಿಳಾ ಅವರು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶರ್ಮಿಳಾ ಅವರಿಗೆ ಚಿಕಿತ್ಸೆಯನ್ನು ಮುಂದುವರಿಸಲಾಗಿದ್ದು, ಸ್ಪರ್ಶ ಅವರ ತಲೆಗೆ ಗಂಭೀರವಾಗಿ ಗಾಯವಾಗಿದ್ದ ಹಿನ್ನೆಲೆಯಲ್ಲಿ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

* ಬೈಂದೂರು: ವೈಯಕ್ತಿಕ ಕಾರಣದಿಂದಾಗಿ ಕಾಲೇಜ್ ವಿದ್ಯಾರ್ಥಿ ಆತ್ಮಹತ್ಯೆ

ಬೈಂದೂರು: ವಿದ್ಯಾಭ್ಯಾಸದ ವಿಚಾರವಾಗಿ ಮನನೊಂದು ಕಾಲೇಜು ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ, ಕಳೆದೆರಡು ದಿನಗಳ ಹಿಂದೆ ನಾವುಂದದಲ್ಲಿ ನಡೆದಿದೆ. ನಾವುಂದ ನಿವಾಸೆಯಾದ ಸ್ಕಂದ ಎಸ್ ಎಸ್ ಎಲ್ ಸಿ ವರೆಗೆ ಹುಟ್ಟೂರಿನಲ್ಲಿ ವಿದ್ಯಾಭ್ಯಾಸ ಪಡೆದಿದ್ದು, ಪದವಿ ಪೂರ್ವ ವಿದ್ಯಾಭ್ಯಾಸಕ್ಕಾಗಿ ಅವನನ್ನು ಪೋಷಕರು ಬೆಂಗಳೂರಿನ ಕಾಲೇಜಿಗೆ ಸೇರಿಸಿದ್ದರು. ದೀಪಾವಳಿ ಹಬ್ಬದ ರಜೆಗೆಂದು ಆಗಮಿಸಿದ್ದ ಸ್ಕಂದ, ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡಲು ಇಷ್ಟವಿಲ್ಲವೆಂದು ಪೋಷಕರಿಗೆ ತಿಳಿಸಿದ್ದಾನೆ.‌ ಹಬ್ಬದ ರಜೆ ಮುಗಿದರೂ ಬೆಂಗಳೂರಿಗೆ ಹಿಂತಿರುಗಲು ಮನಸ್ಸು ಮಾಡಲಿಲ್ಲ. ಅಲ್ಲದೆ ಎರಡು ಮೂರು ಬಾರಿ ನಿಗದಿಪಡಿಸಿದ್ದ ಬಸ್ ಟಿಕೆಟ್ ಅನ್ನು ರದ್ದುಪಡಿಸಿದ್ದ. ಇದರಿಂದ ಬೇಸತ್ತ ತಂದೆ ತಾಯಿಗಳು, ಆತನ ಭವಿಷ್ಯದ ಕುರಿತು ಸಾಕಷ್ಟು ಬುದ್ಧಿ ಮಾತು ಹೇಳಿದ್ದರು.‌ ಇದರಿಂದಾಗಿ ಮಾನಸಿಕವಾಗಿ ನೊಂದ ಸ್ಕಂದ, ತನ್ನ ಕೋಣೆಯಲ್ಲಿನ ಫ್ಯಾನಿಗೆ ಚೂಡಿದಾರದ ವೆಲನ್ನು ಕಟ್ಟಿ, ನೇಣು ಬಿಗಿದುಕೊಂಡಿದ್ದಾನೆ. ಇದನ್ನು ಗಮನಿಸಿದ ಪೋಷಕರು ತಕ್ಷಣ ಸ್ಕಂದನನ್ನು ಕುಂದಾಪುರದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ವೈದ್ಯರು ಪರೀಕ್ಷಿಸಿದ ಬಳಿಕ ತಿಳಿದು ಬಂದ ಸಂಗತಿ ಎಂದರೆ, ಸ್ಕಂದನನ್ನು ಆಸ್ಪತ್ರೆಗೆ ಕರೆ ತರುವ ಮೊದಲೇ, ಮಾರ್ಗಮಧ್ಯದಲ್ಲೇ ಸಾವನ್ನಪ್ಪಿದ್ದ.‌ ಘಟನೆಗೆ ಸಂಬಂಧಿಸಿದಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

* ಉಳ್ಳಾಲ: ರಸ್ತೆ ದಾಟುತ್ತಿದ್ದ ಪಾದಾಚಾರಿ ಸಾವು

ಉಳ್ಳಾಲ: ರಸ್ತೆ ದಾಟುತ್ತಿದ್ದ ಸಮಯದಲ್ಲಿ ಲಾರಿಯೊಂದು ಢಿಕ್ಕಿ ಹೊಡೆದ ಪರಿಣಾಮವಾಗಿ, ಪಾದಾಚಾರಿಯೊಬ್ಬರು ಮೃತಪಟ್ಟ ಘಟನೆ, ಸೋಮವಾರದಂದು ರಾಷ್ಟ್ರೀಯ ಹೆದ್ದಾರಿ 66ರ ಸಮೀಪದ ತೊಕ್ಕೊಟ್ಟು ಮೇಲ್ಸೇತುವೆಯ ಬಳಿ ನಡೆದಿದೆ. ಸೋಮೇಶ್ವರ ಗ್ರಾಮದ ರಾಮಚಂದ್ರ ಎನ್ನುವವರು ಮದುವೆ ಸಮಾರಂಭವೊಂದನ್ನು ಮುಗಿಸಿ, ಮೇಲ್ಸೇತುವೆಯ ಬಳಿ ಉಳ್ಳಾಲದ ಬಸ್ಸಿನಿಂದ ಇಳಿದು, ಹೆದ್ದಾರಿಯನ್ನು ದಾಟುತ್ತಿದ್ದಾಗ, ಮಂಗಳೂರಿನ ಕಡೆಗೆ ತೆರಳುತ್ತಿದ್ದ ಲಾರಿ ಢಿಕ್ಕಿ ಹೊಡೆದಿದೆ. ಗಂಭೀರವಾಗಿ ಗಾಯಗೊಂಡಿದ್ದ ರಾಮಚಂದ್ರ ಅವರನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆಸ್ಪತ್ರೆಯನ್ನು ತಲುಪುವ ಮೊದಲೇ ಮಾರ್ಗಮಧ್ಯದಲ್ಲೇ ಅವರು ಸಾವನ್ನಪ್ಪಿದರು ಎನ್ನುವ ಸಂಗತಿ ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿದಂತೆ ಮಂಗಳೂರು ದಕ್ಷಿಣ ಸಂಚಾರಿ ಠಾಣೆಯ ಪೊಲೀಸರು ಲಾರಿಯನ್ನು ವಶಪಡಿಸಿಕೊಂಡು, ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

Categories
ಕರಾವಳಿ ಬೆಂಗಳೂರು ಮಲ್ನಾಡ್ ರಾಜ್ಯ

ಆಭರಣ ಪ್ರಿಯರಿಗೆ ಗುಡ್ ನ್ಯೂಸ್..!

ಆಭರಣ ಪ್ರಿಯರಿಗೆ ಗುಡ್ ನ್ಯೂಸ್..!
– ಚಿನ್ನದ ಬೆಲೆ ಇಳಿಕೆ… ಇನ್ನು ಇಳಿಯುತ್ತಾ?
– ಬೆಳ್ಳಿ ಬೆಲೆಯಲ್ಲೂ ಕೂಡ ಭಾರೀ ಇಳಿಕೆ

NAMMUR EXPRESS NEWS
ಚಿನ್ನದ ಬೆಲೆ ಹಿಂದಿನ ಎರಡು ದಿನಕ್ಕೆ ಹೋಲಿಸಿದ್ರೆ ಇಂದು ಭಾರೀ ಇಳಿಕೆಯಾಗಿದೆ. ಹೆಚ್ಚಿನವರು ಚಿನ್ನದ ಮೇಲಿನ ಹೂಡಿಕೆ ಬೆಸ್ಟ್‌ ಅಂತಾರೆ. ಆದ್ರೆ ಬೆಲೆ ಏರಿಕೆಯಿಂದಾಗಿ ಇತ್ತೀಚೆಗೆ ಖರೀದಿಸೋದೆ ಬೇಡವೆಂಬಂತಾಗಿದೆ. ಆದ್ರೆ ಇಂದು ಬಂಗಾರ ಪ್ರಿಯರಿಗೆ ಗುಡ್‌ ನ್ಯೂಸ್‌ ಸಿಕ್ಕಂತಾಗಿದೆ.

ದೀಪಾವಳಿಗೂ ಮುನ್ನ ಚಿನ್ನದ ಬೆಲೆ ದಾಖಲೆ ಮಟ್ಟದಲ್ಲಿ ಏರಿಕೆ ಕಂಡಿತ್ತು. ಆದ್ರೆ ದೀಪಾವಳಿ ನಂತರ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ. ಇದೀಗ ನಿನ್ನೆಗಿಂತಲೂ ಇಂದು ಚಿನ್ನದ ಬೆಲೆ ಭಾರೀ ಇಳಿಕೆ ಕಂಡಿದೆ. ಇಂದು 24 ಕ್ಯಾರೆಟ್‌ ಚಿನ್ನದ 1 ಗ್ರಾಂ ಬೆಲೆ ಇಂದು ₹82 ರೂ.ನಷ್ಟು ಕಮ್ಮಿಯಾಗಿದ್ದು, ಒಟ್ಟು ಬೆಲೆ ₹12,246 ರೂ. ಆಗಿದೆ. ನಿನ್ನೆ ₹12,562 ರೂ ಇತ್ತು. ಅದೇ ರೀತಿ 8 ಗ್ರಾಂ ಚಿನ್ನದ ಬೆಲೆ ಇಂದು ₹97,968 ರೂ. ಆಗಿದ್ದು, ನಿನ್ನೆ ₹98,624 ಇತ್ತು. ಈ ಮೂಲಕ 8 ಗ್ರಾಂ ಚಿನ್ನದಲ್ಲಿ ಒಂದೇ ದಿನ ಬರೋಬ್ಬರಿ ₹656 ರೂ. ಇಳಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,22,460 ರೂ. ಆಗಿದ್ದು, ನಿನ್ನೆಗಿಂತ ₹820 ರೂ ಇಳಿಕೆಯಾಗಿದೆ. ಹಾಗೆಯೇ 100 ಗ್ರಾಂ ಚಿನ್ನದ ಒಟ್ಟು ಬೆಲೆ ₹12,24,600 ರೂ. ಆಗಿದೆ.

24K ಚಿನಕ್ಕೆ ಹೋಲಿಸಿದ್ರೆ 22K ಚಿನ್ನದ ಬೆಲೆ ಸ್ವಲ್ಪ ಕಡಿಮೆಯೇ ಇರುತ್ತೆ. ಇಂದು 22K ಚಿನ್ನದ 1 ಗ್ರಾಂ ಬೆಲೆ 11,225 ರೂ. ಆಗಿದ್ದು, ನಿನ್ನೆ ₹11,300 ರೂ. ಇತ್ತು. ಈ ಮೂಲಕ ಒಂದೇ ದಿನ ₹75 ರೂ. ಇಳಿಕೆಯಾಗಿದೆ. ಅದೇ ರೀತಿ 8 ಗ್ರಾಂ ಚಿನ್ನದ ಬೆಲೆ ಇಂದು ₹89,800 ರೂ. ಆಗಿದ್ದು, ನಿನ್ನೆಗಿಂತಲೂ ಇಂದು 600 ರೂ. ಕಮ್ಮಿಯಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,12,250 ರೂ ಆಗಿದ್ದು, ನಿನ್ನೆ ₹1,13,000 ರೂ ಇತ್ತು. ಇದರಲ್ಲೂ ನಿನ್ನೆಗೆ ಹೋಲಿಸಿದ್ರೆ ಇಂದು ₹750 ರೂ ಇಳಿಕೆಯಾಗಿದೆ. ಹಾಗೆಯೇ 100 ಗ್ರಾಂ ಚಿನ್ನದ ಬೆಲೆ ಇಂದು ₹11,22,500 ರೂ. ಆಗಿದ್ದು, ನಿನ್ನೆ ₹11,30,000 ರೂ. ಇತ್ತು. ಒಟ್ಟು ₹7,500 ರೂ. ಇಳಿಕೆಯಾಗಿದೆ.

ಭಾರತದಲ್ಲಿ ಇಂದು ಬೆಳ್ಳಿದರದಲ್ಲೂ ಭಾರೀ ಇಳಿಕೆಯಾಗಿದೆ. 1 ಗ್ರಾಂ ಬೆಳ್ಳಿ ಬೆಲೆ ಇಂದು ರೂ. ₹151 ಆಗಿದ್ದು, ನಿನ್ನೆ 155 ರೂ. ಇತ್ತು. ಈ ಮೂಲಕ ಬೆಳ್ಳಿ ಬೆಲೆಯಲ್ಲಿ ₹4 ರೂ. ಕಡಿಮೆಯಾಗಿದೆ. ಅಲ್ಲದೇ 10 ಗ್ರಾಂ ಬೆಳ್ಳಿ ಬೆಲೆ ಇಂದು ರೂ. 1,208 ಆಗಿದೆ. ಆದ್ರೆ ನಿನ್ನೆ ರೂ. 1,240 ಆಗಿತ್ತು. ಅದೇ ರೀತಿ 100 ಗ್ರಾಂ ಬೆಳ್ಳಿ ಬೆಲೆ ಇಂದು ರೂ. 15,100 ಆಗಿದ್ದು, 1 ಕಿಲೋಗ್ರಾಂ ಬೆಳ್ಳಿ ಬೆಲೆ ಇಂದು ರೂ. 1,51,000 ಆಗಿದೆ. ಪ್ರತಿಯಾಗಿ 100 ಗ್ರಾಂನಲ್ಲಿ ₹400 ರೂ. ಮತ್ತು 1000 ಗ್ರಾಂನಲ್ಲಿ 4,000 ರೂ. ಇಳಿಕೆಯಾಗಿದೆ. ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ. ಹೆಚ್ಚಿನವರು ಚಿನ್ನದ ಮೇಲಿನ ಹೂಡಿಕೆ ಸೇಫ್‌ ಅಂತಾನೇ ಹೇಳ್ತಾರೆ. ಆದ್ರೆ ಇತ್ತೀಚೆಗೆ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆಯಾಗಿದ್ದು ಹೂಡಿಕೆದಾರರಿಗೆ, ಖರೀದಿದಾರರು ಚಿನ್ನ ಖರೀದಿಗೆ ಹಿಂದೇಟು ಹಾಕುವಂತಾಗಿದೆ. ಆದ್ರೆ ಚಿನ್ನ ಖರೀದಿ, ಹೂಡಿಕೆ ಮಾಡುವ ಮುನ್ನ ಮಾರುಕಟ್ಟೆ ಬೆಳವಣಿಗೆಗಳನ್ನು ನೋಡಿಕೊಂಡರೆ ಉತ್ತಮ.

Categories
ದಕ್ಷಿಣ ಕನ್ನಡ ಮಂಗಳೂರು

ಮೃತನಾದ ವ್ಯಕ್ತಿ ಚಿತೆ ಮೇಲೆ ಎದ್ದು ಕುಳಿತ!

ಮೃತನಾದ ವ್ಯಕ್ತಿ ಚಿತೆ ಮೇಲೆ ಎದ್ದು ಕುಳಿತ!
– ಮಂಗಳೂರು ದೇರಳಕಟ್ಟೆಯಲ್ಲಿ ಅಚ್ಚರಿ ಘಟನೆ
– ತಲೆ, ಕಾಲು ಅಲ್ಲಾಡಿದ್ದರಿಂದ ಬದುಕಿದ ಜೀವ!

NAMMUR EXPRESS NEWS
ಮಂಗಳೂರು: ಮಂಗಳೂರು ದೇರಳಕಟ್ಟೆಯ ಆಸ್ಪತ್ರೆಯಲ್ಲಿ ಮೃತರೆಂದು ಘೋಷಿಸಲ್ಪಟ್ಟ 69 ವರ್ಷದ ರಘುನಾಥ ಗಟ್ಟಿ ಅವರ ದೇಹವನ್ನು ರಾತ್ರಿಯಿಡೀ ಶವಾಗಾರ (ಫ್ರೀಜರ್) ದಲ್ಲಿ ಇರಿಸಿದ್ದರು!. ಮರುದಿನ ಬೆಳಿಗ್ಗೆ ಮೃತದೇಹವನ್ನು ಕುಂಬಳೆಯ ಕಂಚಿಕಟ್ಟೆಯಲ್ಲಿರುವ ಮನೆಗೆ ತೆಗೆದುಕೊಂಡು ಹೋಗಲಾಯಿತು. ಕುಟುಂಬಸ್ಥರು ಮತ್ತು ನೆಂಟರು ಸೇರಿ ಅಂತ್ಯಸಂಸ್ಕಾರದ ಎಲ್ಲ ಸಿದ್ಧತೆಗಳನ್ನು ಮುಗಿಸಿ ದೇಹವನ್ನು ಚಿತೆಯ ಮೇಲೆ ಇರಿಸಬೇಕು ಎನ್ನುವಷ್ಟರಲ್ಲಿ ರಘುನಾಥ ಗಟ್ಟಿ ಅವರು ತಮ್ಮ ತಲೆ ಮತ್ತು ಕಾಲುಗಳನ್ನು ನಿಧಾನವಾಗಿ ಅಲ್ಲಾಡಿಸಲು ಶುರು ಮಾಡಿದರು. ಕೂಡಲೇ ಕುಟುಂಬಸ್ಥರು ಅವರನ್ನು ಕಾಸರಗೋಡಿನ ಆಸ್ಪತ್ರೆಗೆ ದಾಖಲಿಸಿದರು. ಈ ‘ಸತ್ತು ಬದುಕಿದ’ ಘಟನೆ ವೈದ್ಯಕೀಯ ಲೋಕದಲ್ಲಿ ಅಚ್ಚರಿ ಮೂಡಿಸಿದೆ.

Categories
ಚಿಕ್ಕಮಗಳೂರು ಬೆಂಗಳೂರು ರಾಜ್ಯ

ಕಾಫಿನಾಡಲ್ಲಿ ಚಡ್ಡಿ ಗ್ಯಾಂಗ್‌ನ ಇಬ್ಬರು ಕಳ್ಳರು ಬಂಧನ

ಕಾಫಿನಾಡಲ್ಲಿ ಚಡ್ಡಿ ಗ್ಯಾಂಗ್‌ನ ಇಬ್ಬರು ಕಳ್ಳರು ಬಂಧನ

* ಬಂಧಿತ ಅಂತರ್ ರಾಜ್ಯ ಕಳ್ಳರಿಂದ 32 ಲಕ್ಷ ಮೌಲ್ಯದ ವಸ್ತುಗಳು ವಶಕ್ಕೆ
* ಎಲ್ಲೆಡೆ ಆತಂಕ ಸೃಷ್ಠಿಸಿರುವ ಚಡ್ಡಿ ಗ್ಯಾಂಗ್‌ ಬಂಧನಕ್ಕೆ ವಿಶೇಷ ತಂಡ ರಚಿಸಿದ್ದ ಎಸ್‌ಪಿ

NAMMMUR EXPRESS NEWS
ಚಿಕ್ಕಮಗಳೂರು: ಎಲ್ಲೆಡೆ ಆತಂಕ ಸೃಷ್ಠಿಸಿರುವ ಕುಖ್ಯಾತ ಚಡ್ಡಿ ಗ್ಯಾಂಗ್ ನ ಇಬ್ಬರನ್ನು ಬಂಧಿಸುವಲ್ಲಿ ಕಾಫಿನಾಡಿನ ಪೊಲೀಸರು ಯಶಸ್ವಿಯಾಗಿದ್ದಾರೆ. ಅ.25ರ ಶನಿವಾರ ಚಿಕ್ಕಮಗಳೂರು ನಗರ ಠಾಣೆಯ ಪೊಲೀಸರು ಕಳ್ಳರ ಹೆಡೆಮುರಿ ಕಟ್ಟಿದ್ದು, ಬಂಧಿತರಿಂದ ಕದ್ದಿದ್ದ 32 ಲಕ್ಷ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಬಂಧಿತರನ್ನು ಮಹಾರಾಷ್ಟ್ರ ಮೂಲದ ಪಪ್ಪು ಟಿಪ್ಪು ಪವಾರ್ ಹಾಗೂ ಮಂಗೇಶ್ ಅಂಕುಶ್ ಶಿಂಧೆ ಎಂದು ಗುರುತಿಸಲಾಗಿದೆ.
ಚಿಕ್ಕಮಗಳೂರು ನಗರ ಪೊಲೀಸರು ನಡೆಸಿದ ಈ ಕಾರ್ಯಚರಣೆ ಮೂಲಕ ಚಡ್ಡಿ ಗ್ಯಾಂಗಿನ 17 ಪ್ರಕರಣಗಳನ್ನು ಭೇದಿಸಿ, ಪೊಲೀಸರು 495 ಗ್ರಾಂ ಚಿನ್ನ, 1010ಗ್ರಾಂ ಬೆಳ್ಳಿ, 75 ಸಾವಿರ ಹಣ ವಶಕ್ಕೆ ಪಡೆದುಕೊಂಡಿದ್ದಾರೆ.
ಮನೆಯಲ್ಲಿ ಯಾರೂ ಇಲ್ಲದ ವೇಳೆ ಚಡ್ಡಿ ಗ್ಯಾಂಗ್‌ ಕಳ್ಳತನ ಮಾಡುತ್ತಿದ್ದು, ಚಿಕ್ಕಮಗಳೂರು ಸೇರಿ ಹೊರ ರಾಜ್ಯ ಹಾಗೂ ರಾಜ್ಯದ ವಿವಿಧ ಕಡೆ ಈ ಗ್ಯಾಂಗ್ ಕಳ್ಳತನ ಮಾಡಿದ್ದು, ಪ್ರಕರಣ ದಾಖಲಾಗಿದ್ದವು.
ಚಿಕ್ಕಮಗಳೂರು ನಗರದ ಪೊಲೀಸ್ ಕ್ವಾಟ್ರಸ್ಟ್‌ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಎಸ್ಪಿ ವಿಕ್ರಂ ಅವರು ವಿಶೇಷ ತಂಡ ರಚಿಸಿದ್ದು, ಎಎಸ್ಪಿ ಜಯಕುಮಾ‌ರ್, ಡಿವೈಎಸ್ಪಿ ಶೈಲೇಂದ್ರ, ನಗರ ರಾಣೆ ಪಿಐ ಅಭಯ್ ಪ್ರಕಾಶ್‌ ನೇತೃತ್ವದ ತಂಡ ರಚನೆ ಮಾಡಲಾಗಿತ್ತು.
ಎರಡೂವರೆ ತಿಂಗಳಲ್ಲಿ 400ಕ್ಕೂ ಹೆಚ್ಚು ಸಿಸಿಟಿವಿ ಫುಟೇಜ್ ಸಂಗ್ರಹ ಮಾಡಿದ್ದ ಪೊಲೀಸರ ತಂಡ ಚಡ್ಡಿ ಗ್ಯಾಂಗ್ ನ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರು ಚಿಕ್ಕಮಗಳೂರು, ಚಿತ್ರದುರ್ಗ, ಬಳ್ಳಾರಿ ಹಾಗೂ ಗದಗ ಎಲ್ಲಾ ಕಡೆ 3 ಪ್ರಕರಣದ ಆರೋಪಿಗಳಾಗಿದ್ದಾರೆ.

Categories
ಕ್ರೀಡಾ ಸುದ್ದಿ ತೀರ್ಥಹಳ್ಳಿ ಮಲ್ನಾಡ್ ಶಿಕ್ಷಣ

ಕ್ರೀಡೆಯಲ್ಲಿ ತೀರ್ಥಹಳ್ಳಿ ವಾಗ್ದೇವಿ ಸಾಧನೆ

ಕ್ರೀಡೆಯಲ್ಲಿ ತೀರ್ಥಹಳ್ಳಿ ವಾಗ್ದೇವಿ ಸಾಧನೆ
– ವಾಗ್ದೇವಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳ ಉತ್ತಮ ಪ್ರದರ್ಶನ
– ಪ್ರಥಮ ಸ್ಥಾನ ಪಡೆದು 04 ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

NAMMUR EXPRESS NEWS
ರಾಜ್ಯಮಟ್ಟಕ್ಕೆ ಆಯ್ಕೆಯಾದ ವಾಗ್ದೇವಿ ಆಂಗ್ಲಮಾಧ್ಯಮ ಪ್ರೌಢಶಾಲೆಯ 04 ವಿದ್ಯಾರ್ಥಿಗಳು ದಿನಾಂಕ 19- 10- 2025 ರಂದು ಶಾಲಾ ಶಿಕ್ಷಣ ಇಲಾಖೆ ಶಿವಮೊಗ್ಗ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ತೀರ್ಥಹಳ್ಳಿ, ಕ್ಷೇತ್ರ ಸಂಪನ್ಮೂಲ ಅಭಿವೃದ್ಧಿ ಕೇಂದ್ರ ತೀರ್ಥಹಳ್ಳಿ ಇವರ ಸಂಯುಕ್ತಾಶ್ರಯದಲ್ಲಿ ಚಿಟ್ಟೆಬೈಲಿನ ಪ್ರಜ್ಞಾಭಾರತಿ ಪ್ರೌಢಶಾಲೆಯಲ್ಲಿ ನಡೆದ ಶಿವಮೊಗ್ಗ ಜಿಲ್ಲಾಮಟ್ಟದ 17 ವರ್ಷ ವಯೋಮಿತಿ ಒಳಗಿನ ಬಾಲಕ -ಬಾಲಕಿಯರ ಜಿಲ್ಲಾಮಟ್ಟದ ಚೆಸ್ ಮತ್ತು ಯೋಗಾಸನ ಸ್ಪರ್ಧೆಯಲ್ಲಿ ವಾಗ್ದೇವಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ, ಉತ್ತಮ ಪ್ರದರ್ಶನವನ್ನು ನೀಡಿ, ಪ್ರಥಮ ಸ್ಥಾನವನ್ನು ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಆಯ್ಕೆಯಾದ ವಿದ್ಯಾರ್ಥಿಗಳ ವಿವರ ಈ ಕೆಳಗಿನಂತಿದೆ.
ಕ್ರ.ಸಂ         ಹೆಸರು                              ತರಗತಿ            ಸ್ಪರ್ಧೆ           ಸ್ಥಾನ
01              ಅಭಿನಂದನ್ ಹೊಳ್ಳ          10                  ಚೆಸ್            ಪ್ರಥಮ
02              ಪ್ರಥಮ್ ಟಿ.ಎನ್ ರಾವ್      9                   ಚೆಸ್            ಪ್ರಥಮ
03              ಹಿಮಾಂಶು ಶ್ರೀವಾಸ್ತವ್      9                   ಚೆಸ್           ಪ್ರಥಮ
04              ಆದ್ಯಾ ಎ.ಹೆಚ್                    8                   ಚೆಸ್           ಪ್ರಥಮ
05               ಸಾನ್ವಿ ಜೋಯ್ಸ್                 8                   ಯೋಗ       ತೃತೀಯ

ವಿದ್ಯಾರ್ಥಿಗಳ ಈ ಸಾಧನೆಯನ್ನು ವಾಗ್ದೇವಿ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಸದಸ್ಯರು ಶಿಕ್ಷಕ ವೃಂದ ಮತ್ತು ಪೋಷಕರು ಅಭಿನಂದಿಸಿ ರಾಜ್ಯಮಟ್ಟದ ಸ್ಪರ್ಧೆಗೆ ಶುಭ ಹಾರೈಸಿದ್ದಾರೆ.

Categories
Uncategorized

ಅ.31ಕ್ಕೆ ಅಮೆಜಾನ್ ಪ್ರೈಮ್ ಗೆ ಬರಲಿದೆ ಕಾಂತಾರ-1 ಸಿನಿಮಾ

ಅ.31ಕ್ಕೆ ಅಮೆಜಾನ್ ಪ್ರೈಮ್ ಗೆ ಬರಲಿದೆ ಕಾಂತಾರ-1 ಸಿನಿಮಾ
– ಬಿಡುಗಡೆಯಾದ ಒಂದು ತಿಂಗಳೊಳಗೆ ಓಟಿಟಿಗೆ
– ಕನ್ನಡದ ಎಲ್ಲಾ ಸಿನಿಮಾಗಳ ರೆಕಾರ್ಡ್ ಬ್ರೇಕ್ ಮಾಡಿದ ರಿಷಬ್ ಶೆಟ್ಟಿ!

NAMMUR EXPRESS NEWS
ಬೆಂಗಳೂರು : ಕನ್ನಡದ ಅತಿ ಹೆಚ್ಚು ಗಳಿಕೆಯ ಸಿನಿಮಾಗಳಲ್ಲಿ ಒಂದಾಗಿರುವ ‘ಕಾಂತಾರ 1’ ಸಿನಿಮಾ ಅ.31 ರಂದು ಪ್ರೈಮ್‌ ವಿಡಿಯೋದಲ್ಲಿ ಬಿಡುಗಡೆಯಾಗುತ್ತಿದೆ. ಸಿನಿಮಾ ಬಿಡುಗಡೆಯಾದ 1 ತಿಂಗಳ ಒಳಗೆ ಈ ಸಿನಿಮಾ ಓಟಿಟಿಗೆ ಬರುತ್ತಿರುವುದು ಅಚ್ಚರಿ ಹುಟ್ಟಿಸಿದೆ. ಪ್ರೈಮ್ ವೀಡಿಯೋ ‘ಕಾಂತಾರ 1’ ಬಿಡುಗಡೆ ವಿಚಾರವನ್ನು ಅಧಿಕೃತವಾಗಿ ಘೋಷಿಸಿದ್ದು, ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಪ್ರಸಾರ ಮಾಡುವುದಾಗಿ ಘೋಷಿಸಿದೆ. ಹಿಂದಿ ಆವೃತ್ತಿ ಕುರಿತು ಯಾವುದೇ ಮಾಹಿತಿ ನೀಡಿಲ್ಲ. 125 ಕೋಟಿ ರು.ಗೆ ಮಾರಾಟ ಆಗಿರುವುದರಿಂದ ‘ಕಾಂತಾರ 1’ ಚಿತ್ರವನ್ನು ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣುತ್ತಿರುವಾಗಲೇ ಓಟಿಟಿಯಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇತ್ತೀಚೆಗೆ ಸಿನಿಮಾ 813 ಕೋಟಿ ರು. ಸಂಗ್ರಹ ಮಾಡಿ, ಈ ವರ್ಷದ ಅತಿ ಹೆಚ್ಚು ಗಳಿಕೆಯ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಜೊತೆಗೆ ಚಿತ್ರಮಂದಿರಗಳಲ್ಲಿ ಈಗಲೂ ಜನಭರಿತ ಪ್ರದರ್ಶನ ಕಾಣುತ್ತಿದ್ದು, 1000 ಕೋಟಿ ರು. ಸಂಗ್ರಹಿಸುವ ನಿರೀಕ್ಷೆ ಇದೆ. ಈ ಮಧ್ಯೆ ಸಿನಿಮಾ ಓಟಿಟಿಗೆ ಬರುತ್ತಿರುವುದು ಬಹುತೇಕರ ಹರ್ಷಕ್ಕೆ ಮತ್ತು ಅಚ್ಚರಿಗೆ ಕಾರಣವಾಗಿದೆ. ರಿಷಬ್ ನಟನೆ, ನಿರ್ದೇ ಶನದ ಚಿತ್ರದ ಪ್ರಮುಖ ಪಾತ್ರದಲ್ಲಿ ರುಕ್ಕಿಣಿ ವಸಂತ್, ಗುಲ್ಬನ್ ದೇವಯ್ಯ ನಟಿಸಿದ್ದಾರೆ.

Categories
ಬೆಂಗಳೂರು ರಾಜ್ಯ

ಇನ್ನು 5 ದಿನ ಭಾರೀ ಮಳೆ…!

ಇನ್ನು 5 ದಿನ ಭಾರೀ ಮಳೆ…!
– ಕರ್ನಾಟಕದ ಅನೇಕ ಭಾಗಕ್ಕೆ ಇನ್ನು ಡೇಂಜರ್
– ಮಲೆನಾಡು, ಕರಾವಳಿಯಲ್ಲಿ ಮಳೆ ಅಬ್ಬರ
– ರೈತರೇ ಎಚ್ಚರ: ಮೊಂಥಾ ಚಂಡಮಾರುತ ಎಫೆಕ್ಟ್

NAMMUR EXPRESS NEWS
ಬೆಂಗಳೂರು: ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಹಲವು ದಿನಗಳಿಂದ ಸುರಿಯುತ್ತಿದ್ದ ಮಳೆಯು ಮುಂದಿನ ಎರಡರಿಂದ ಐದು ದಿನಗಳ ಕಾಲ ಮತ್ತೆ ಅಬ್ಬರಿಸಲಿದೆ. ಮೊಂಥಾ ಚಂಡಮಾರುತ ಇಂದು ಮಂಗಳವಾರ ಆಂಧ್ರಪ್ರದೇಶ ಕರಾವಳಿ ಭಾಗಕ್ಕೆ ಚಂಡಮಾರುತ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇದರಿಂದ ವಿವಿಧ ರಾಜ್ಯಗಳ ಜೊತೆಗೆ ಕರ್ನಾಟಕಕ್ಕೆ ಭಾರೀಯಿಂದ ಅತ್ಯಧಿಕ ಮಳೆ ಬರಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.
ಕರ್ನಾಟಕ ರಾಜ್ಯದಲ್ಲಿ ಕರಾವಳಿ, ಮಲೆನಾಡು ಹಾಗೂ ಇತರ ಒಳನಾಡು ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರೀ ಮಳೆ ಆಗುತ್ತಲೇ ಇದೆ. ಮುಂದಿನ 48 ಗಂಟೆಗಳ ಕಾಲ ಮೊಂಥಾ ಚಂಡಮಾರುತ ಪರಿಣಾಮವಾಗಿ ವಿವಿಧ ಜಿಲ್ಲೆಗಳಲ್ಲಿ ಮಳೆ ಆರ್ಭಟ ಕಂಡು ಬರಲಿದೆ. ಕರಾವಳಿ ಹಾಗೂ ಒಳನಾಡಿನ ಈ ಕೆಳಗಿನ ಜಿಲ್ಲೆಗಳಲ್ಲಿ ಭಾರೀ ಮಳೆ ಮುಂದುವರಿಯಲಿದೆ ಎಂದು ಕರ್ನಾಟಕ ಹವಾಮಾನ ತಜ್ಞರು ತಿಳಿಸಿದ್ದಾರೆ.

ಎಲ್ಲೆಲ್ಲಿ ಮಳೆ…ಭಾರೀ ಅಲರ್ಟ್

ಕರಾವಳಿ ದಕ್ಷಿಣ ಕನ್ನಡ ಜಿಲ್ಲೆ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಅತ್ಯಧಿಕ ಮಳೆ ಬರುವ ಕಾರಣಕ್ಕೆ ಇಂದು ಆರೆಂಜ್ ಅಲರ್ಟ್ ಹಾಗೂ ನಾಳೆ ಬುಧವಾರ ಇದೇ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಮಂಗಳೂರು, ಉಡುಪಿ ಕರಾವಳಿ ಭಾಗದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಈ ಭಾಗದ ಶಾಲೆ, ಕಾಲೇಜುಗಳಿಗೆ ಇಂದು ಮತ್ತು ನಾಳೆ ರಜೆ ಘೋಷಣೆ ಆಗುವ ಸಾಧ್ಯತೆ ಇದೆ.
ಅದೇ ರೀತಿ ಒಳನಾಡಿನ ಜಿಲ್ಲೆಗಳಾದ ಬಾಗಲಕೋಟೆ, ಬೆಳಗಾವಿ, ಗದಗ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಚಿಕ್ಕಬಳ್ಳಾಪುರ, ಕೊಡಗು, ಕೋಲಾರ, ಮೈಸೂರು ಭಾಗಗಳಲ್ಲಿ ಸಾಧಾರಣದಿಂದ ಭಾರೀ ಮಳೆ ಆಗಲಿದೆ. ಇಲ್ಲಿ ಕನಿಷ್ಠ 65 మిలి మింటరానిందె 115మిలి మింటరోవరిగి భారిల ಮಳೆ ಆಗಲಿದ್ದು, ಒಂದು ದಿನ ಯೆಲ್ಲೋ ಅಲರ್ಟ್ ನೀಡಲಾಗಿದೆ. ಮಳೆ ನಿರೀಕ್ಷಿತ ಪ್ರದೇಶಗಳಲ್ಲಿ ಮಬ್ಬು ವಾತಾವರಣ, ಚಳಿಎದುರಾಗಿದೆ.
ಹಿಂಗಾರು ಮಳೆ ಒಳನಾಡಿನ ಜಿಲ್ಲೆಗಳಲ್ಲಿ ಕಳೆದ 10 ದಿನಗಳಿಂದ ಅಬ್ಬರ ಶುರುವಿಟ್ಟುಕೊಂಡಿದೆ. ಆಗಾಗ ಬಿಸಿಲು ಮರೆಯಾಗುತ್ತಿದ್ದಂತೆ ಜಿಟಿ ಜಿಟಿ ರೂಪದಲ್ಲಿ ಆರಂಭವಾಗುವ ಮಳೆ, ಕೆಲವೆಡೆ ಗಂಟೆಗಳ ಕಾಲ ಸುರಿದಿದೆ. ಅನೇಕ ಜಿಲ್ಲೆಗಳು ಕಳೆದ ಒಂದೇ ವಾರದಲ್ಲಿ ಉತ್ತಮ ಹಿಂಗಾರು ಮಳೆ ಕಂಡಿವೆ.

ಬೆಂಗಳೂರು ಮಳೆ ಮುನ್ಸೂಚನೆ

ಬೆಂಗಳೂರಿನಲ್ಲಿ ಇಂದು ಮತ್ತು ನಾಳೆ ಸಾಮಾನ್ಯ ವಾತಾವರಣ ಕಂಡು ಬರಲಿದೆ. ಆಗಾಗ ಮಬ್ಬು ಕವಿಯಲಿದ್ದು, ಹಗುರ ಮಳೆ ಬರುವ ನಿರೀಕ್ಷೆ ಇದೆ. ತಾಪಮಾನ ಗರಿಷ್ಠ 30 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ ಕಂಡು ಬರಲಿದೆ. ಒಂದೆರಡು ಕಡೆಗಳಲ್ಲಿ ಇಂದು ಸಂಜೆ ಇಲ್ಲವೇ ಬುಧವಾರ ಬೆಳಗ್ಗೆ ಜೋರು ಮಳೆ ಆಗುವ ಸಂಭವವಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ತಿಳಿಸಿದೆ.

Categories
ಚಿಕ್ಕಮಗಳೂರು ಶೃಂಗೇರಿ

ತಾಲೂಕಿನಲ್ಲಿ ಯೂರಿಯಾಗೆ ಎಂಆರ್‌ಪಿಗಿಂತ ಹೆಚ್ಚಿನ ಬೆಲೆ,ರೈತರ ಆಕ್ರೋಶ

ತಾಲೂಕಿನಲ್ಲಿ ಯೂರಿಯಾಗೆ ಎಂಆರ್‌ಪಿಗಿಂತ ಹೆಚ್ಚಿನ ಬೆಲೆ,ರೈತರ ಆಕ್ರೋಶ

* ತಹಶೀಲ್ದಾರ್ ಮುಖಾಂತರ ಜಂಟಿ ಕೃಷಿ ನಿರ್ದೇಶಕರಿಗೆ ಮನವಿ
* ಇಲಾಖೆ ಅಧಿಕಾರಿಗಳ ನಿರ್ದೇಶನದಂತೆ 266.50 ರೂ.ಬೆಲೆಯ ಗೊಬ್ಬರ 300 ರೂ.ಗೆ ಮಾರಾಟ

NAMMMUR EXPRESS NEWS
ಶೃಂಗೇರಿ: ತಾಲೂಕಿನಲ್ಲಿ ಯೂರಿಯಾ ಗೊಬ್ಬರಕ್ಕೆ ಎಂಆರ್‌ಪಿ ಗಿಂತ ಅಧಿಕ ಬೆಲೆಯನ್ನು ನಿಗದಿ ಮಾಡಿ ಮಾರಾಟ ಮಾಡಲಾಗುತ್ತಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಚಿಕ್ಕಮಗಳೂರು ಜಂಟಿ ಕೃಷಿ ನಿರ್ದೇಶಕರಿಗೆ ತಹಶೀಲ್ದಾರ್ ಮುಖಾಂತರ ಮನವಿ ಸಲ್ಲಿಸಲಾಯಿತು.
ಯೂರಿಯಾ ಗೊಬ್ಬರದ ದರವು 266.50 ರೂ. ಆದರೆ ಗೊಬ್ಬರ ಮಾರಾಟಗಾರರು 300 ರೂ. ಗಳಿಗೆ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

* ಕೃಷಿ ಇಲಾಖೆಯ ಅಧಿಕಾರಿಗಳ ಸೂಚನೆ ಮೇರೆಗೆ 300 ರೂ.ಗೆ ಮಾರಾಟ
ಅಧಿಕ ದರ ನಿಗದಿಗೊಳಿಸಿ ಮಾರಾಟವಾಗುತ್ತಿರುವ ಬಗ್ಗೆ ಅಂಗಡಿಯವರಲ್ಲಿ ಕೇಳಿದಾಗ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರು 300 ರೂ ಗಳಿಗೆ ಮಾರಾಟ ಮಾಡಿ ಎಂದು ನಮಗೆ ಹೇಳುತ್ತಿದ್ದು,ಈ ಹೆಚ್ಚಿನ ದರವು ಲಾರಿ ಬಾಡಿಗೆಯಾಗಿ ಪಡೆಯುತ್ತಿದ್ದೇವೆ ಎಂದು ತಿಳಿಸಿದ್ದಾರೆ ಎಂಬ ವಿಷಯ ಗೊತ್ತಾಗಿದೆ.
ತಾಲೂಕಿನಲ್ಲಿ ಕೃಷಿ ಇಲಾಖೆ ಅಧಿಕಾರಿಗಳ ರೀತಿಯ ಸೂಚನೆಯಿಂದ ರೈತರಿಗಾಗುತ್ತಿರುವ ನಷ್ಟವನ್ನು ಪರಿಶೀಲಿಸಿ ಕಾನೂನು ಕ್ರಮ ಕೈಗೊಂಡು ಮುಂದೆ ಈ ರೀತಿ ಆಗದಂತೆ ತಡೆದು ರೈತರಿಗೆ ನ್ಯಾಯಯುತವಾದ ಬೆಲೆಯಲ್ಲಿ ಗೊಬ್ಬರವನ್ನು ಮಾರಾಟ ಮಾಡಬೇಕೆಂದು ರೈತರು ತಮ್ಮ ಮನವಿಯಲ್ಲಿ ತಿಳಿಸಿದ್ದಾರೆ.
ಹಾಗೂ ಈಗ ರೈತರ ಬಳಿ ಪಡೆದ ಹೆಚ್ಚುವರಿ ಹಣ ವಾಪಸ್ ಕೊಡಬೇಕಾಗಿ ಪತ್ರದ ಮೂಲಕ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಕಾನೊಳ್ಳಿ ಚಂದ್ರಶೇಖರ್, ಬಂಡ್ಲಾಪುರ ಶ್ರೀಧ‌ರ್ ರಾವ್, ಪೂರ್ಣೇಶ್ ಮತ್ತಿತರರು ಉಪಸ್ಥಿತರಿದ್ದರು.

Categories
ಜ್ಯೋತಿಷ್ಯ ದಿನ ರಾಶಿ ಭವಿಷ್ಯ ರಾಜ್ಯ

ಈ ದಿನದ ರಾಶಿ ಭವಿಷ್ಯ ಹೇಗಿದೆ?

ಈ ದಿನದ ರಾಶಿ ಭವಿಷ್ಯ ಹೇಗಿದೆ?
– ಯಾವ ರಾಶಿಯವರಿಗೆ ಶುಭ ? ಯಾವ ರಾಶಿಯವರಿಗೆ ಅಶುಭ ?

NAMMUR EXPRESS NEWS
ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು?

** ಮೇಷ ರಾಶಿ :
ಇಂದು ಮೇಷ ರಾಶಿಯವರಿಗೆ ಬಹಳ ಶುಭ ದಿನವಾಗಲಿದೆ. ವ್ಯಾಪಾರದಲ್ಲಿ ಆರ್ಥಿಕ ಲಾಭ ದೊರೆಯಲಿದೆ. ಆದರೆ ಅಜ್ಞಾತ ಭಯದಿಂದ ಮನಸ್ಸು ತೊಂದರೆಗೊಳಗಾಗುತ್ತದೆ. ಮಾನಸಿಕ ಗೊಂದಲ ಉಂಟಾಗಲಿದೆ. ಭಾವನೆಗಳಲ್ಲಿ ಏರುಪೇರು ಸಾಧ್ಯ. ಕೆಲಸದ ಸಂಬಂಧದಲ್ಲಿ ಪ್ರಯಾಣಿಸುವ ಅವಕಾಶವೂ ಇರುತ್ತದೆ. ಆಸ್ತಿ ಅಥವಾ ವಾಹನ ಖರೀದಿ ಸಾಧ್ಯ.

** ವೃಷಭ ರಾಶಿ :
ನೀವು ಇಂದು ಬಹಳ ಜಾಗರೂಕರಾಗಿರಬೇಕು. ಆರ್ಥಿಕ ನಷ್ಟದ ಲಕ್ಷಣಗಳಿವೆ. ವೃತ್ತಿ ಜೀವನದಲ್ಲಿ ಪ್ರಗತಿಗೆ ಹೊಸ ಅವಕಾಶಗಳು ದೊರೆಯಲಿವೆ. ಹೊಸ ಸವಾಲುಗಳನ್ನು ನಿಭಾಯಿಸಲು ನೀವು ಆತ್ಮವಿಶ್ವಾಸವನ್ನು ತೋರುತ್ತೀರಿ. ಕುಟುಂಬದ ಸದಸ್ಯರೊಂದಿಗೆ ಹಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದಗಳಿಂದ ನೀವು ಪರಿಹಾರವನ್ನು ಪಡೆಯುತ್ತೀರಿ.

** ಮಿಥುನ ರಾಶಿ :
ಇಂದು ವೃತ್ತಿ ಜೀವನದಲ್ಲಿ ಪ್ರಗತಿಗೆ ಹಲವು ಅವಕಾಶಗಳು ದೊರೆಯಲಿವೆ. ಹಣದ ವಿಚಾರದಲ್ಲಿ ಬಹಳ ಜಾಗರೂಕರಾಗಿರಿ. ಬುದ್ಧಿವಂತಿಕೆಯಿಂದ ಹೂಡಿಕೆ ಮಾಡಿ. ಇದು ಭವಿಷ್ಯದಲ್ಲಿ ಉತ್ತಮ ಆದಾಯವನ್ನು ನೀಡುತ್ತದೆ. ಕುಟುಂಬ ಸದಸ್ಯರೊಂದಿಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಸಾಧ್ಯ. ತಾಳ್ಮೆಯನ್ನು ಕಾಪಾಡಿಕೊಳ್ಳಿ. ಬುದ್ಧಿವಂತಿಕೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಿ.

** ಕರ್ಕಾಟಕ ರಾಶಿ :
ಇಂದು ನಿಮ್ಮ ಆರೋಗ್ಯದ ಕಡೆ ಗಮನ ಕೊಡಿ. ಇಂದು ಹಣಕಾಸಿನ ವಿಷಯಗಳಲ್ಲಿ ಏರಿಳಿತಗಳು ಕಂಡುಬರುತ್ತವೆ. ಕೌಟುಂಬಿಕ ಜೀವನದಲ್ಲಿ ಸಂತಸದ ವಾತಾವರಣ ಇರುತ್ತದೆ. ಸಂಪತ್ತು ಮತ್ತು ಆಸ್ತಿಯಲ್ಲಿ ಹೆಚ್ಚಳದ ಸಾಧ್ಯತೆಗಳಿವೆ. ಸಾಮಾಜಿಕ ಸ್ಥಾನಮಾನ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶವನ್ನು ಪಡೆಯುತ್ತಾರೆ.

** ಸಿಂಹ ರಾಶಿ :
ಇಂದು ಸಿಂಹ ರಾಶಿಯವರಿಗೆ ಸಾಲದಿಂದ ಮುಕ್ತಿ ಸಿಗಲಿದೆ. ಉದ್ಯೋಗದಲ್ಲಿ ಸಹೋದ್ಯೋಗಿಗಳ ಸಹಾಯದಿಂದ ಕೆಲಸದ ಅಡೆತಡೆಗಳು ನಿವಾರಣೆಯಾಗುತ್ತವೆ. ಹಣದ ಹರಿವಿಗೆ ಹೊಸ ದಾರಿಗಳು ಸುಗಮವಾಗಲಿವೆ. ನೀವು ಕುಟುಂಬ ಮತ್ತು ಸ್ನೇಹಿತರಿಂದ ಬೆಂಬಲವನ್ನು ಪಡೆಯುತ್ತೀರಿ. ಕುಟುಂಬದೊಂದಿಗೆ ಎಲ್ಲೋ ಹೋಗಬಹುದು. ಇಂದು ನಿಮ್ಮ ಬಹುಕಾರ್ಯಕ ಕೌಶಲ್ಯವನ್ನು ಕಚೇರಿಯಲ್ಲಿ ಪ್ರಶಂಸಿಸಲಾಗುತ್ತದೆ.

** ಕನ್ಯಾ ರಾಶಿ :
ಇಂದು ಸಾಮಾನ್ಯ ದಿನವಾಗಲಿದೆ. ಮಕ್ಕಳ ಆರೋಗ್ಯದ ಬಗ್ಗೆ ಮನಸ್ಸು ಚಿಂತಿಸಲಿದೆ. ಆರ್ಥಿಕ ವಿಷಯಗಳಲ್ಲಿಯೂ ಏರಿಳಿತಗಳು ಕಂಡುಬರುತ್ತವೆ. ವೃತ್ತಿ ಜೀವನದಲ್ಲಿ ಗೌರವ ಹೆಚ್ಚುವುದು. ಕುಟುಂಬ ಮತ್ತು ಸ್ನೇಹಿತರೊಂದಿಗೆ ಮೋಜಿನ ಕ್ಷಣಗಳನ್ನು ಆನಂದಿಸುವಿರಿ. ಆಸ್ತಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದಗಳಿಂದ ಕೆಲವರಿಗೆ ಪರಿಹಾರ ದೊರೆಯಲಿದೆ.

** ತುಲಾ ರಾಶಿ :
ಇಂದು ಹಣಕಾಸಿನ ವಿಚಾರದಲ್ಲಿ ಬಹಳ ಎಚ್ಚರಿಕೆ ಅಗತ್ಯ. ಬುದ್ಧಿವಂತಿಕೆಯಿಂದ ಹಣವನ್ನು ಖರ್ಚು ಮಾಡಿ. ತರಾತುರಿಯಲ್ಲಿ ಯಾವುದೇ ವಸ್ತುವನ್ನು ಖರೀದಿಸುವುದನ್ನು ತಪ್ಪಿಸಿ. ವೃತ್ತಿ ಜೀವನದಲ್ಲಿ ಹೊಸ ಬದಲಾವಣೆಗಳಾಗಲಿವೆ. ಆದರೆ ಕುಟುಂಬ ಸದಸ್ಯರೊಂದಿಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಉಂಟಾಗಬಹುದು. ಜಂಕ್ ಫುಡ್ ತಪ್ಪಿಸಿ. ನಿಮ್ಮ ಆರೋಗ್ಯದ ಕಡೆ ಗಮನ ಕೊಡಿ.

** ವೃಶ್ಚಿಕ ರಾಶಿ :
ಇಂದು ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಹಣಕಾಸಿನ ವಿಷಯಗಳಲ್ಲಿ ಅದೃಷ್ಟವಂತರು. ಹಣದ ಒಳಹರಿವು ಹೆಚ್ಚಾಗುತ್ತದೆ. ಕಚೇರಿ ರಾಜಕೀಯದಿಂದಾಗಿ ಗೊಂದಲಗಳು ಸ್ವಲ್ಪ ಹೆಚ್ಚಾಗಬಹುದು. ಕೌಟುಂಬಿಕ ಜೀವನದಲ್ಲಿ ಸ್ವಲ್ಪ ಒತ್ತಡವಿರುತ್ತದೆ. ಕುಟುಂಬ ಸದಸ್ಯರೊಂದಿಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಸಾಧ್ಯ.

** ಧನಸ್ಸು ರಾಶಿ :
ಇಂದು ಅನೇಕ ಆದಾಯದ ಮೂಲಗಳಿಂದ ಆರ್ಥಿಕ ಲಾಭವಾಗಲಿದೆ. ಇದು ನಿಮ್ಮ ಜೀವನಶೈಲಿಯ ಮೇಲೆ ಪರಿಣಾಮ ಬೀರುತ್ತದೆ. ಸೌಕರ್ಯಗಳು ಮತ್ತು ಐಷಾರಾಮಿ ಜೀವನವನ್ನು ನಡೆಸುವಿರಿ. ಜೀವನದಲ್ಲಿ ಅನೇಕ ದೊಡ್ಡ ಬದಲಾವಣೆಗಳಾಗುತ್ತವೆ. ಭೂಮಿ ಅಥವಾ ವಾಹನವನ್ನು ಖರೀದಿಸುವ ಅವಕಾಶವಿರುತ್ತದೆ. ಶೈಕ್ಷಣಿಕ ಕೆಲಸದಲ್ಲಿ ಕಠಿಣ ಪರಿಶ್ರಮಕ್ಕೆ ಪ್ರತಿಫಲ ದೊರೆಯಲಿದೆ.

** ಮಕರ ರಾಶಿ :
ಇಂದು ನಿಮ್ಮ ಖರ್ಚು ಮಾಡುವ ಅಭ್ಯಾಸಗಳ ಮೇಲೆ ನಿಗಾ ಇರಿಸಿ. ಖರ್ಚುಗಳು ಇಂದು ಇದ್ದಕ್ಕಿದ್ದಂತೆ ಹೆಚ್ಚಾಗಬಹುದು. ಇದರಿಂದ ಮನಸ್ಸು ತೊಂದರೆಗೊಳಗಾಗುತ್ತದೆ. ವೃತ್ತಿ ಜೀವನದಲ್ಲಿ ವೃತ್ತಿ ಬೆಳವಣಿಗೆಗೆ ಹಲವು ಸುವರ್ಣಾವಕಾಶಗಳು ದೊರೆಯಲಿವೆ. ಕುಟುಂಬದ ಜವಾಬ್ದಾರಿಗಳು ಹೆಚ್ಚಾಗಲಿವೆ. ನೀವು ಸ್ನೇಹಿತರೊಂದಿಗೆ ಎಲ್ಲೋ ಪ್ರಯಾಣಿಸಲು ಯೋಜಿಸಬಹುದು.

** ಕುಂಭ ರಾಶಿ :
ಇಂದು ಹೊಸ ಹೂಡಿಕೆ ಅವಕಾಶಗಳ ಮೇಲೆ ನಿಗಾ ಇರಿಸಿ. ಇಂದು ವೃತ್ತಿಪರ ಜೀವನದಲ್ಲಿ ಅನೇಕ ಏರಿಳಿತಗಳು ಕಂಡುಬರುತ್ತವೆ. ಕುಟುಂಬದವರ ಬೆಂಬಲದಿಂದ ಎಲ್ಲಾ ಸಮಸ್ಯೆಗಳು ಬಗೆಹರಿಯುತ್ತವೆ. ಕೌಟುಂಬಿಕ ಜೀವನದಲ್ಲಿ ಸಂತಸದ ವಾತಾವರಣ ಇರುತ್ತದೆ. ನೀವು ಶೈಕ್ಷಣಿಕ ಕೆಲಸದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ಕಚೇರಿಯಲ್ಲಿ ನಿಮ್ಮ ಕಾರ್ಯಕ್ಷಮತೆ ಉತ್ತಮವಾಗಿರುತ್ತದೆ.

** ಮೀನ ರಾಶಿ :
ಇಂದು ನಿಮ್ಮ ಮನಸ್ಸು ಅತಿಯಾದ ಖರ್ಚುಗಳಿಂದ ತೊಂದರೆಗೊಳಗಾಗುತ್ತದೆ. ನಿಮ್ಮ ಬಜೆಟ್ಗೆ ಗಮನ ಕೊಡಿ. ಹಣವನ್ನು ಬುದ್ಧಿವಂತಿಕೆಯಿಂದ ಬಳಸಿ. ಯಾವುದೇ ದುಬಾರಿ ವಸ್ತುಗಳನ್ನು ತರಾತುರಿಯಲ್ಲಿ ಖರೀದಿಸಬೇಡಿ. ನೀವು ಕುಟುಂಬ ಮತ್ತು ಸ್ನೇಹಿತರೊಂದಿಗೆ ವಿಹಾರವನ್ನು ಯೋಜಿಸಬಹುದು. ಕೆಲವರಿಗೆ ಪೂರ್ವಿಕರ ಆಸ್ತಿಯಿಂದ ಆರ್ಥಿಕ ಲಾಭವಾಗಲಿದೆ.

Categories
ಅಡಿಕೆ-ದರ ಬೆಂಗಳೂರು ರಾಜ್ಯ

ಅಡಿಕೆ ದರ ಎಷ್ಟಿದೆ?

ಅಡಿಕೆ ದರ ಎಷ್ಟಿದೆ?
– ರಾಶಿ ಎಷ್ಟು? ಬೆಟ್ಟೆ ಎಷ್ಟು?

NAMMUR EXPRESS NEWS

ಸರಕು
65509-84200-98696

ಬೆಟ್ಟೆ
52009-72800-77069

ರಾಶಿ
50009-65500-66109

ಗೊರಬಲು
32009-41600-45699

ಹೊಸ ರಾಶಿ
60009-65600-66559