Categories
ಬೆಂಗಳೂರು ಮಲ್ನಾಡ್ ರಾಜ್ಯ

ಬಂಗಾರಪ್ಪ ಜನ್ಮ ದಿನೋತ್ಸವಕ್ಕೆ ಹುಟ್ಟೂರು ಸಜ್ಜು!

ಬಂಗಾರಪ್ಪ ಜನ್ಮ ದಿನೋತ್ಸವಕ್ಕೆ ಹುಟ್ಟೂರು ಸಜ್ಜು!
– ಅ. 26 ರಂದು ಬಂಗಾರಪ್ಪ -93 ಜನ್ಮ ದಿನೋತ್ಸವ ಕಾರ್ಯಕ್ರಮ
– ಬಂಗಾರಪ್ಪನವರ ಚಿಂತನೆಗಳು ಹಾಗೂ ಸುಸ್ಥಿರ ಬದುಕು ಪ್ರಸ್ತುತತೆಯ ವಿಷಯದ ಬಗ್ಗೆ ಚರ್ಚೆ
– ಬಂಗಾರ ಪ್ರಶಸ್ತಿ ಪ್ರದಾನ ಸಮಾರಂಭ: ಸರ್ವರಿಗೂ ಸ್ವಾಗತ

NAMMUR EXPRESS NEWS
ಎಸ್ ಬಂಗಾರಪ್ಪ ಫೌಂಡೇಶನ್ ಎಸ್ ಬಂಗಾರಪ್ಪ ವಿಚಾರ ವೇದಿಕೆ ಸಮಾಜವಾದಿ ಚಿಂತಕ, ಅಭಿವೃದ್ಧಿಯ ಹರಿಕಾರ ಬಡವರ ಬಂಧು, ಮಾಜಿ ಮುಖ್ಯಮಂತ್ರಿ ಶ್ರೀ ಎಸ್. ಬಂಗಾರಪ್ಪ -93 ಜನ್ಮ ದಿನೋತ್ಸವ ನಮನ ಚಿಂತನ ಸನ್ಮಾನ ಕಾರ್ಯಕ್ರಮ ಅಕ್ಟೋಬರ್ 26ರ ಭಾನುವಾರ ಸಂಜೆ 5:00ಯಿಂದ ಈ ಕಾರ್ಯಕ್ರಮ ಬಂಗಾರಧಾಮ ಸೊರಬದಲ್ಲಿ ಹಮ್ಮಿಕೊಳ್ಳಲಾಗಿದೆ.
ವಿಚಾರ ಸಂಕೀರ್ಣ ಕಾರ್ಯಕ್ರಮ ಅಕ್ಟೋಬರ್ 26 ಭಾನುವಾರದಂದು ಬೆಳೆಗ್ಗೆ 10:30 ಕ್ಕೆ ಡಾ.ರಾಜಕುಮಾರ್ ರಂಗಮಂದಿರ ಸೊರಬದಲ್ಲಿ ಬಂಗಾರಪ್ಪನವರ ಚಿಂತನೆಗಳು ಹಾಗೂ ಸುಸ್ಥಿರ ಬದುಕು ಪ್ರಸ್ತುತತೆಯ ವಿಷಯದ ಬಗ್ಗೆ ಸಾಕಷ್ಟು ರೀತಿಯ ಚರ್ಚೆಗಳು ನಡೆಯಲಿದೆ. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಎಸ್‌. ಜಿ ಸಿದ್ದರಾಮಯ್ಯ ಅವರು ನಡೆಸಿ ಕೊಡಲಿದ್ದಾರೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಳೇಗೌಡ ನಾಗವಾರ ಮೈಸೂರು ಇವರು ನಡೆಸಿಕೊಡಲಿದ್ದಾರೆ. ವಿಚಾರ ಮಂಡನೆಯನ್ನು ಹೆಚ್ ಎಲ್ ಪುಷ್ಪ ಅವರ ಹಾಗೂ ಮಂಜುನಾಥ್ ಅವರು ನಡೆಸಿಕೊಳ್ಳಲಿದ್ದಾರೆ.
ಬಂಗಾರ ಪ್ರಶಸ್ತಿ ಪುರಸ್ಕೃತ ಸಾಹಿತ್ಯ ಬಂಗಾರ ಕಾಳೇಗೌಡ ನಾಗವಾರ ಪ್ರಸಿದ್ಧ ಸಾಹಿತಿಗಳು, ಮೈಸೂರು, ಧರ್ಮ ಬಂಗಾರ ಧರ್ಮ ಪ್ರವರ್ತಕ ಗುಬ್ಬಿ ತೋಟದಪ್ಪ ಧರ್ಮ ಸಂಸ್ಥೆ ಬೆಂಗಳೂರು ಇದರ ಪರವಾಗಿ ಎಲ್ ರೇವಣ್ಣ ಸಿದ್ದಯ್ಯ ನಿವೃತ್ತ ಪೋಲಿಸ್ ಮಹಾನಿರ್ದೇಶಕರು, ಜಾನಪದ ಕ್ಷೇತ್ರದಿಂದ ಬಂಗಾರ ರಾಧಾಬಾಯಿ ಮಾದರ್, ಕಲಾ ಕ್ಷೇತ್ರದಿಂದ ಬಂಗಾರ ರಾಜಣ್ಣ ರಂಗಭೂಮಿಯಿಂದ ಕಲಾವಿದರು ಗುಲ್ಬರ್ಗ ಇವರಿಗೆ ಬಂಗಾರ ಪ್ರಶಸ್ತಿ ಪುರಸ್ಕೃತ ನೀಡಲಾಗುತ್ತದೆ.

ಪ್ರಶಸ್ತಿ ಪ್ರಧಾನ ಸಮಾರಂಭ ಕಾರ್ಯಕ್ರಮದ ಉದ್ಘಾಟನೆಯನ್ನು ಸಚಿವ ಕೆ. ಎಚ್ ಮುನಿಯಪ್ಪನವರು ನಡೆಸಿಕೊಡಲಿದ್ದಾರೆ. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆರ್ ವಿ ದೇಶಪಾಂಡೆ ಹಾಗೂ ಸಂತೋಷ್ ಲಾಡ್, ಬೇಳೂರು ಗೋಪಾಲಕೃಷ್ಣ, ಕೆ. ಎನ್ ತಿಲಕ್ ಕುಮಾರ್, ವೇಣುಗೋಪಾಲ್ ನಾಯಕ್, ನಾಗರಾಜ್ ಮೂರ್ತಿಯವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದಾರೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಧು ಬಂಗಾರಪ್ಪ ನಡೆಸಿಕೊಡಲಿದ್ದಾರೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿಗಳಿಂದ ಆಳ್ವಾಸ್ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ನಡೆಯಲಿದೆ. ರಾಜ್ಯದ ವಿವಿಧ ಮೂಲೆಗಳಿಂದ ಬಂಗಾರಪ್ಪ ಅಭಿಮಾನಿಗಳು ಆಗಮಿಸಲಿದ್ದಾರೆ
ಆಯೋಜಕರು ಸರ್ವರಿಗೂ ಆದರದ ಸ್ವಾಗತವನ್ನು ಕೋರಿದ್ದಾರೆ.

Categories
ಚಿಕ್ಕಮಗಳೂರು ಮಲ್ನಾಡ್

ರೈಲ್ವೇ ಇಲಾಖೆ ಅಧಿಕಾರಗಳ ಸಮಯ ಪ್ರಜ್ಞೆಯಿಂದ ತಪ್ಪಿದ ಅನಾಹುತ

ರೈಲ್ವೇ ಇಲಾಖೆ ಅಧಿಕಾರಗಳ ಸಮಯ ಪ್ರಜ್ಞೆಯಿಂದ ತಪ್ಪಿದ ಅನಾಹುತ

* ಭಾರೀ ಮಳೆಗೆ ಕೊಚ್ಚಿ ಹೋಗಿದ್ದ ಹಳಿಯ ಮೇಲಿನ ಜಲ್ಲಿ ಕಲ್ಲು
* ಅಪಾಯ ಅರಿತ ಅಧಿಕಾರಿಗಳಿಂದ ಲೋಕೋ ಪೈಲೆಟ್‌ಗೆ ಸೂಚನೆ

NAMMMUR EXPRESS NEWS
ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಅನೇಕ ಸಮಸ್ಯೆಗಳು ಉಂಟಾಗಿದೆ. ಕಳೆದ ನಾಲ್ಕು ದಿನಗಳಿಂದ ಸುರಿದ ಭಾರೀ ಮಳೆಗೆ ರೈಲ್ವೆ ಹಳಿಗೆ ಹಾಕಿದ್ದ ಜಲ್ಲಿ ಕಲ್ಲು ಕೊಚ್ಚಿ ಹೋಗಿದ್ದು, ಈ ನಡುವೆ ರೈಲ್ವೇ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ದೊಡ್ಡ ಅನಾಹುವೊಂದು ತಪ್ಪಿರುವ ಘಟನೆ ತಾಲೂಕಿನ ಕಣಿವೆ ಗ್ರಾಮದಲ್ಲಿ ನಡೆದಿದೆ.
ಕಳೆದ ನಾಲ್ಕು ದಿನಗಳಿಂದ ಮಲೆನಾಡು ಹಾಗೂ ಬಯಲುಸೀಮೆ ಭಾಗದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಚಿಕ್ಕಮಗಳೂರು ತಾಲೂಕಿನ ಕಣಿವೆ ಗ್ರಾಮದಲ್ಲಿ‌ ರೈಲ್ವೇ ಹಳಿ ಲಯ ತಪ್ಪಿ ಹಳಿಗೆ ಹಾಕಿದ್ದ ಜಲ್ಲಿ ಕಲ್ಲುಗಳು ಕೊಚ್ಚಿ ಹೋಗಿತ್ತು.
ಬುಧವಾರ ರಾತ್ರಿಯಿಡೀ ಸುರಿದ ಮಳೆಯಿಂದ ಕಾಲುವೆಯ ನೀರು ಉಕ್ಕಿ ಹರಿದ ಪರಿಣಾಮ ಹಳಿಯಲ್ಲಿದ್ದ ಜಲ್ಲಿ ಕಲ್ಲುಗಳು ಕೊಚ್ಚಿ ಹೋಗಿದ್ದವು.
ಈ ನಡುವೆ ಗುರುವಾರ ಬೆಳಗ್ಗೆ ಚಿಕ್ಕಮಗಳೂರಿನಿಂದ ಶಿವಮೊಗ್ಗ ಕಡೆಗೆ ಹೊರಟ್ಟಿದ್ದ ಪ್ಯಾಸೆಂಜರ್ ರೈಲು ಕಣಿವೆ ಬಳಿ ಆಗಮಿಸಿದೆ. ಈ ವೇಳೆ ರೈಲ್ವೇ ಸಿಬ್ಬಂದಿ ತಕ್ಷಣ ರೈಲು ನಿಲ್ಲಿಸುವಂತೆ ಲೋಕೋ ಪೈಲಟ್‌ಗೆ ಮಾಹಿತಿ ನೀಡಿದ್ದಾರೆ. ಎಚ್ಚೆತ್ತ ಲೋಕೋ ಪೈಲಟ್ ರೈಲನ್ನು ನಿಲ್ಲಿಸಿದ್ದು. ಈ ವೇಳೆ ರೈಲ್ವೇ ಸಿಬ್ಬಂದಿಗಳು ತುರ್ತು ದುರಸ್ತಿ ಕಾರ್ಯ ಕೈಗೊಂಡು ರೈಲಿನ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ತಾತ್ಕಾಲಿಕ ದುರಸ್ತಿ ಕಾರ್ಯ ಪೂರ್ಣಗೊಂಡು 30 ನಿಮಿಷಗಳ ಬಳಿಕ ರೈಲು ಶಿವಮೊಗ್ಗದತ್ತ ಪ್ರಯಾಣ ಬೆಳೆಸಿದೆ

Categories
ಜ್ಯೋತಿಷ್ಯ ದಿನ ರಾಶಿ ಭವಿಷ್ಯ

ಈ ದಿನದ ರಾಶಿ ಭವಿಷ್ಯ ಹೇಗಿದೆ?

ಈ ದಿನದ ರಾಶಿ ಭವಿಷ್ಯ ಹೇಗಿದೆ?
– ಮಹಾಲಕ್ಷ್ಮಿ ತಾಯಿಯ ಕೃಪೆಯಿಂದ ಯಾವ ರಾಶಿಯವರಿಗೆ ಶುಭ ? ಯಾವ ರಾಶಿಯವರಿಗೆ ಅಶುಭ ?

NAMMUR EXPRESS NEWS
ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು?

** ಮೇಷ ರಾಶಿ :
ಇಂದು, ಮೇಷ ರಾಶಿಯವರು ನಿಮ್ಮ ಆದಾಯವನ್ನು ಹೆಚ್ಚಿಸಲು ಅನೇಕ ಸುವರ್ಣ ಅವಕಾಶಗಳನ್ನು ಪಡೆಯುತ್ತೀರಿ. ಕೌಟುಂಬಿಕ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಕೆಲಸದ ನಿಮಿತ್ತ ಪ್ರಯಾಣ ಮಾಡುವ ಅವಕಾಶವಿರುತ್ತದೆ. ನೀವು ಕುಟುಂಬ ಅಥವಾ ಸ್ನೇಹಿತರೊಂದಿಗೆ ಮೋಜು ತುಂಬಿದ ಕ್ಷಣಗಳನ್ನು ಆನಂದಿಸುವಿರಿ. ನೀವು ಶೈಕ್ಷಣಿಕ ಕೆಲಸದಲ್ಲಿ ಅಪಾರ ಯಶಸ್ಸನ್ನು ಪಡೆಯುತ್ತೀರಿ.

** ವೃಷಭ ರಾಶಿ :
ಇಂದು ನೀವು ನಿಮ್ಮ ಕೆಲಸದಲ್ಲಿ ನಿರೀಕ್ಷೆಗಿಂತ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ವ್ಯಾಪಾರದಲ್ಲಿ ಲಾಭ ಇರುತ್ತದೆ. ಪೂರ್ವಿಕರ ಆಸ್ತಿಯಿಂದ ಆರ್ಥಿಕ ಲಾಭವಾಗಲಿದೆ. ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿವೆ. ಕುಟುಂಬದ ಬೆಂಬಲದಿಂದ ಸಂಪತ್ತು ಹೆಚ್ಚಾಗುವ ಸಾಧ್ಯತೆ ಇದೆ. ಕಠಿಣ ಪರಿಶ್ರಮವು ಫಲಿತಾಂಶವನ್ನು ನೀಡುತ್ತದೆ. ವೃತ್ತಿ ಜೀವನದಲ್ಲಿ ಯಶಸ್ಸಿನ ಮೆಟ್ಟಿಲುಗಳನ್ನು ಏರುವಿರಿ.

** ಮಿಥುನ ರಾಶಿ :
ಇಂದು ದೊಡ್ಡ ಮೊತ್ತದ ಹೂಡಿಕೆಯನ್ನು ತಪ್ಪಿಸಿ. ಆರ್ಥಿಕ ಲಾಭಕ್ಕಾಗಿ ಹೊಸ ಅವಕಾಶಗಳ ಮೇಲೆ ನಿಗಾ ಇರಿಸಿ. ಉದ್ಯಮಿಗಳಿಗೆ ಪಾಲುದಾರಿಕೆಯೊಂದಿಗೆ ಹೊಸ ವ್ಯವಹಾರವನ್ನು ಪ್ರಾರಂಭಿಸಲು ಅವಕಾಶ ಸಿಗುತ್ತದೆ. ಕೌಟುಂಬಿಕ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಪ್ರಯಾಣದ ಅವಕಾಶವಿರುತ್ತದೆ. ನೀವು ಕುಟುಂಬ ಅಥವಾ ಸ್ನೇಹಿತರೊಂದಿಗೆ ಪ್ರವಾಸವನ್ನು ಯೋಜಿಸಬಹುದು.

** ಕರ್ಕಾಟಕ ರಾಶಿ :
ಇಂದು ಮನೆಗೆ ಅತಿಥಿಗಳ ಆಗಮನದಿಂದ ಸಂತಸದ ವಾತಾವರಣ ಇರುತ್ತದೆ. ನೀವು ನಕಾರಾತ್ಮಕತೆಯಿಂದ ಮುಕ್ತಿ ಪಡೆಯುತ್ತೀರಿ. ಮನಸ್ಸು ಸಂತೋಷವಾಗಿರುತ್ತದೆ. ಕುಟುಂಬದ ಸದಸ್ಯರ ನೆರವಿನಿಂದ ಹಣ ಸಂಪಾದಿಸಲು ಹೊಸ ಅವಕಾಶಗಳು ದೊರೆಯಲಿವೆ. ವ್ಯಾಪಾರದಲ್ಲಿ ಬೆಳವಣಿಗೆಗೆ ಹೊಸ ಅವಕಾಶಗಳಿವೆ.

** ಸಿಂಹ ರಾಶಿ :
ಇಂದು ಯಾರಿಗೂ ದೊಡ್ಡ ಮೊತ್ತದ ಸಾಲ ನೀಡುವುದನ್ನು ತಪ್ಪಿಸಿ. ಕೌಟುಂಬಿಕ ಜೀವನದಲ್ಲಿ ಸಂತಸದ ವಾತಾವರಣ ಇರುತ್ತದೆ. ಕುಟುಂಬ ಅಥವಾ ಸ್ನೇಹಿತರ ಸಹಾಯದಿಂದ, ನೀವು ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಪರಿಹಾರವನ್ನು ಪಡೆಯುತ್ತೀರಿ. ಸಾಮಾಜಿಕ ಸ್ಥಾನಮಾನ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ಆಧ್ಯಾತ್ಮಿಕ ಕೆಲಸದಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಪ್ರೀತಿಪಾತ್ರರನ್ನು ಭೇಟಿಯಾಗುವಿರಿ.

** ಕನ್ಯಾ ರಾಶಿ :
ಇಂದು ಕನ್ಯಾ ರಾಶಿಯವರು ಇತರರಿಗೆ ಸಹಾಯ ಮಾಡಿ. ಇದರಿಂದ ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚುತ್ತದೆ. ಹೊಸ ಆಸ್ತಿ ಅಥವಾ ವಾಹನವನ್ನು ಖರೀದಿಸುವ ಅವಕಾಶವಿರುತ್ತದೆ. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ಉದ್ಯಮಿಗಳಿಗೆ ಹೊಸ ಸ್ಟಾರ್ಟ್ ಅಪ್ ಪ್ರಾರಂಭಿಸಲು ಇದು ಉತ್ತಮ ಸಮಯ. ನಿಮ್ಮ ಕೆಲಸದಲ್ಲಿ ನೀವು ಬಯಸಿದ ಫಲಿತಾಂಶಗಳನ್ನು ಪಡೆಯುತ್ತೀರಿ. ಆರ್ಥಿಕ ಲಾಭಕ್ಕೆ ಹಲವು ಅವಕಾಶಗಳು ದೊರೆಯಲಿವೆ.

** ತುಲಾ ರಾಶಿ :
ಇಂದು ತುಲಾ ರಾಶಿಯ ಜನರು ತಮ್ಮ ಖರ್ಚುಗಳನ್ನು ನಿಯಂತ್ರಿಸಬೇಕಾಗುತ್ತದೆ. ಕೌಟುಂಬಿಕ ಜೀವನದಲ್ಲಿ ಸಂತೋಷ ಇರುತ್ತದೆ. ಸಾಮಾಜಿಕ ಸ್ಥಾನಮಾನ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ವೃತ್ತಿಯಲ್ಲಿ ಉನ್ನತಿಗೆ ಹಲವು ಅವಕಾಶಗಳು ದೊರೆಯಲಿವೆ. ಆದಾಗ್ಯೂ, ಕಚೇರಿಯಲ್ಲಿ ಅನಗತ್ಯ ವಾದಗಳನ್ನು ತಪ್ಪಿಸಿ. ಹಿರಿಯರ ಸಲಹೆಯಂತೆ ಎಲ್ಲ ಕೆಲಸಗಳನ್ನು ಮಾಡುತ್ತೇನೆ.

** ವೃಶ್ಚಿಕ ರಾಶಿ :
ಇಂದು ನೀವು ಹಣಕಾಸಿನ ವಿಷಯಗಳಲ್ಲಿ ಸಣ್ಣ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಮನೆಯಲ್ಲಿ ಪ್ರಮುಖ ಕೆಲಸಗಳಿಗಾಗಿ ನೀವು ಹಣವನ್ನು ಖರ್ಚು ಮಾಡಬೇಕಾಗಬಹುದು. ನೀವು ಕಿರಿಯ ಸಹೋದರ ಅಥವಾ ಸಹೋದರಿ ಅಥವಾ ಆಪ್ತ ಸ್ನೇಹಿತರಿಗೆ ಹಣಕಾಸಿನ ಸಹಾಯವನ್ನು ನೀಡಬೇಕಾಗಬಹುದು. ಸಂಬಂಧಗಳಲ್ಲಿ ಭಾವನೆಗಳ ಏರಿಳಿತಗಳು ಸಾಧ್ಯ.

** ಧನಸ್ಸು ರಾಶಿ :
ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಕುಟುಂಬ ಸದಸ್ಯರಿಂದ ಬೆಂಬಲ ಸಿಗಲಿದೆ. ಕೆಲಸ ಕಾರ್ಯಗಳಿಗೆ ಇದ್ದ ಅಡೆತಡೆಗಳು ನಿವಾರಣೆಯಾಗುತ್ತವೆ. ನಿಮ್ಮ ಪ್ರೀತಿಪಾತ್ರರೊಡನೆ ಪ್ರಯಾಣಿಸುವ ಅವಕಾಶವಿರುತ್ತದೆ. ಗಡುವಿನ ಮೊದಲು ಕಚೇರಿ ಕೆಲಸವನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಕುಟುಂಬ ಜೀವನದ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಿ.

** ಮಕರ ರಾಶಿ :
ಇಂದು ನೀವು ಹಣಕಾಸಿನ ವಿಷಯಗಳಲ್ಲಿ ಸಣ್ಣ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ವ್ಯಾಪಾರಕ್ಕೆ ಸಂಬಂಧಿಸಿದಂತೆ ಪ್ರಯಾಣಿಸುವ ಅವಕಾಶವಿರುತ್ತದೆ. ನೀವು ಹಳೆಯ ಹೂಡಿಕೆಯಿಂದ ಉತ್ತಮ ಲಾಭವನ್ನು ಪಡೆಯುತ್ತೀರಿ. ವ್ಯಾಪಾರದಲ್ಲಿ ಬೆಳವಣಿಗೆಗೆ ಹೊಸ ಅವಕಾಶಗಳಿವೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ನಿಮ್ಮ ಕೆಲಸದ ಸಕಾರಾತ್ಮಕ ಫಲಿತಾಂಶಗಳನ್ನು ನೀವು ಪಡೆಯುತ್ತೀರಿ.

** ಕುಂಭ ರಾಶಿ :
ಇಂದು ಕುಂಭ ರಾಶಿಯ ಜನರು ಹಳೆಯ ಹೂಡಿಕೆಗಳಿಂದ ಉತ್ತಮ ಲಾಭವನ್ನು ಪಡೆಯುತ್ತಾರೆ. ವ್ಯಾಪಾರದಲ್ಲಿ ಲಾಭ ಇರುತ್ತದೆ. ಆತ್ಮವಿಶ್ವಾಸ ಹೆಚ್ಚಲಿದೆ. ಕಚೇರಿಯ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸುವಿರಿ. ಕುಟುಂಬದೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯಿರಿ. ನೀವು ಸ್ನೇಹಿತರೊಂದಿಗೆ ಪ್ರವಾಸವನ್ನು ಯೋಜಿಸಬಹುದು. ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ನೀವು ಆಹ್ವಾನಗಳನ್ನು ಸ್ವೀಕರಿಸಬಹುದು.

** ಮೀನ ರಾಶಿ :
ಇಂದು, ಮೀನ ರಾಶಿಯ ಜನರು ತಮ್ಮ ಕೆಲಸದಲ್ಲಿ ಆಹ್ಲಾದಕರ ಫಲಿತಾಂಶಗಳನ್ನು ಪಡೆಯುತ್ತಾರೆ. ಶೈಕ್ಷಣಿಕ ಕೆಲಸದಲ್ಲಿ ಆಸಕ್ತಿ ಇರುತ್ತದೆ. ಪ್ರಯಾಣದ ಅವಕಾಶವಿರುತ್ತದೆ. ಕಚೇರಿ ಕಾರ್ಯಗಳನ್ನು ವ್ಯವಸ್ಥಿತವಾಗಿ ಪೂರ್ಣಗೊಳಿಸಿ. ಕುಟುಂಬದೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವಿರಿ. ಆಧ್ಯಾತ್ಮಿಕ ಕೆಲಸದಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಧಾರ್ಮಿಕ ಕಾರ್ಯಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುವಿರಿ.

Categories
ಚಿಕ್ಕಮಗಳೂರು ಮಲ್ನಾಡ್ ಶಿವಮೊಗ್ಗ

ಇದೇನಾ ಡಿಜಿಟಲ್ ಇಂಡಿಯಾ..?: ನೆಟ್ವರ್ಕ್ ಇಲ್ಲ.. ಕಾಲ್ ಇಲ್ಲ!

ಇದೇನಾ ಡಿಜಿಟಲ್ ಇಂಡಿಯಾ..?: ನೆಟ್ವರ್ಕ್ ಇಲ್ಲ.. ಕಾಲ್ ಇಲ್ಲ!
– ಮಲೆನಾಡಿನ ಅನೇಕ ಕಡೆ ಸತ್ತೋದ ಬಿ.ಎಸ್.ಎನ್ ಎಲ್ ನೆಟ್ವರ್ಕ್
– ಜನರ ಜೀವನಕ್ಕೆ ಸಮಸ್ಯೆ: ಶುರುವಾಗಿದೆ ಹೋರಾಟ

ನಮಗೆ ಬೇಕು ನೆಟ್ವರ್ಕ್ ಅಭಿಯಾನ!

NAMMUR EXPRESS NEWS
ಶಿವಮೊಗ್ಗ/ ಚಿಕ್ಕಮಗಳೂರು: ಸರ್ಕಾರದ ಸ್ವಾಧೀನದಲ್ಲಿರುವ ಮತ್ತು ಭಾರತದ ಪ್ರಮುಖ ನೆಟ್ ವರ್ಕ್ ಸಂಸ್ಥೆಯಾದ ಬಿಎಸ್ಎನ್ಎಲ್ ಇತ್ತೀಚಿನ ದಿನಗಳಲ್ಲಿ ತನ್ನ ಕಾರ್ಯಕ್ಷಮತೆಯ ಕುಂಠಿತದಿಂದಾಗಿ, ಸಾರ್ವಜನಿಕರಿಂದ ದೋಷಾರೋಪಣೆಗೆ ಒಳಗಾಗಿದೆ. ಅಲ್ಲದೆ ನೆಟ್ವರ್ಕ್ ಅಡಚಣೆಗಳ ಆಗರವಾಗಿದೆ ಬಿಎಸ್ಎನ್ಎಲ್ ಸಂಸ್ಥೆ. ಗ್ರಾಹಕರು ತಮಗಿರುವ ಪ್ಯಾಕೇಜ್ ಹಾಕಿಸಿದರೂ ನೆಟ್ವರ್ಕ್ ಸಿಗಲ್ಲ. ಜತೆಗೆ ಸಿಕ್ಕರೂ ಕರೆ ಸ್ವೀಕಾರ ಆಗಲ್ಲ. ಕೇಳಲ್ಲ ಹೀಗೆನೂರೆಂಟು ಸಮಸ್ಯೆಗಳು ಗ್ರಾಹಕರನ್ನು ಕಾಡುತ್ತಿವೆ.
ಬಿಎಸ್ಎನ್ಎಲ್ ನೆಟ್ವರ್ಕ್ ನಂಬಿಕೊಂಡ ಹಲವಾರು ಕಛೇರಿಗಳು, ಸಂಘ ಸಂಸ್ಥೆಗಳು, ಮೊಬೈಲ್ ಬಳಕೆದಾರರು ಬಿಎಸ್ಎನ್ಎಲ್ ನ ಜಾಲತಾಣಗಳು ತಕ್ಷಣ ಕಾರ್ಯವನ್ನು ನಿರ್ವಹಿಸಲು ಸ್ಪಂದಿಸದ ಹಿನ್ನೆಲೆಯಲ್ಲಿ,ನೆಟ್ ವರ್ಕ್ ವಿಚಾರದಲ್ಲಿ ಬದಲಾವಣೆ ಬಯಸಿದ್ದಾರೆ ಹಾಗೂ ಬಯಸುತ್ತಿದ್ದಾರೆ. ಆದರೆ ಅನೇಕ ಊರುಗಳಲ್ಲಿ ಬೇರೆ ನೆಟ್ವರ್ಕ್ ಕೂಡ ಇಲ್ಲದಾಗಿದೆ.
ವರ್ಕ್ ಫ್ರಮ್ ಹೋಂ, ವಿದ್ಯಾರ್ಥಿಗಳಿಗೆ ಇದರಿಂದ ಅವರ ಭವಿಷ್ಯ ಕತ್ತಲೆ ಆಗಿದೆ. ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ, ಕರಾವಳಿ ಭಾಗದ ಅರಣ್ಯ ಹಾಗೂ ಬೆಟ್ಟ ಗುಡ್ಡ ಪ್ರದೇಶಗಳಲ್ಲಿ ನೆಟ್ವರ್ಕ್ ಇಲ್ಲದೆ ನೂರಾರು ಜನ ಜೀವ ಕಳೆದುಕೊಂಡಿದ್ದಾರೆ. ಇದಕ್ಕೆ ನಿದರ್ಶನ ಎನ್ನುವಂತೆ ಹಿಂದುಳಿದ ತಾಲ್ಲೂಕು ಎನಿಸಿಕೊಂಡ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಬಹುತೇಕ ಭಾಗಗಳಲ್ಲಿ ಬಿಎಸ್ಎನ್ಎಲ್ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ಸ್ಥಳೀಯರು ಬಿಎಸ್ಎನ್ಎಲ್ ಹುಡುಕಿಕೊಡಿ ಎಂದು ಮನವಿ ಮಾಡಿಕೊಳ್ಳುವಂತಾಗಿದೆ. ಇದು ಇಂದಿನದಲ್ಲ ಕಳೆದ ಎರಡು ಮೂರು ವರ್ಷಗಳಿಂದ ಎದುರಿಸುತ್ತಿರುವ ಸಮಸ್ಯೆಯಾಗಿದೆ. ಕೂಡಲೇ ಸಂಸದರು, ಶಾಸಕರು, ಅಧಿಕಾರಿಗಳು ಗಮನಿಸಬೇಕಿದೆ. ಇಲ್ಲವಾದಲ್ಲಿ ಸಾವಿರಾರು ಜನರ ಬದುಕು ಕತ್ತಲೆಯಾಗಲಿದೆ ಎಂಬ ಅಗ್ರಹ ವ್ಯಕ್ತವಾಗಿದೆ.

 

ಜನಪ್ರತಿನಿಧಿಗಳು, ಅಧಿಕಾರಿಗಳು, ಎಲ್ಲಾ ಸಾಮಾಜಿಕ ಜಾಲ ತಾಣಗಳಲ್ಲಿ ಶೇರ್ ಮಾಡಿ… ಹೋರಾಟಕ್ಕೆ ಕೈ ಜೋಡಿಸೋಣ.

Categories
ಅಡಿಕೆ-ದರ ಚಿಕ್ಕಮಗಳೂರು ಮಲ್ನಾಡ್ ರಾಜ್ಯ ಶಿವಮೊಗ್ಗ

ಅಡಿಕೆ ದರ ಎಷ್ಟಿದೆ?

ಅಡಿಕೆ ದರ ಎಷ್ಟಿದೆ?
– ರಾಶಿ ಎಷ್ಟು? ಬೆಟ್ಟೆ ಎಷ್ಟು?

NAMMUR EXPRESS NEWS

ಸರಕು
60599-70200-74500

ಬೆಟ್ಟೆ

71099-74669

ರಾಶಿ
57009-65600-66009

ಗೊರಬಲು
30166-39200-43899

ಹೊಸ ರಾಶಿ
59036-65500-66099

Categories
ಉತ್ತರ ಕನ್ನಡ ಕರಾವಳಿ ಕಾರ್ಕಳ ದಕ್ಷಿಣ ಕನ್ನಡ ಪುತ್ತೂರು ಮಂಗಳೂರು

ಕರಾವಳಿ ಟಾಪ್ ನ್ಯೂಸ್

ಕರಾವಳಿ ಟಾಪ್ ನ್ಯೂಸ್

* ಪುತ್ತೂರು: ಅಕ್ರಮ ಗೋಸಾಗಾಟ; ಆರೋಪಿಯ ಕಾಲಿಗೆ ಗುಂಡು
* ಮಂಗಳೂರು: ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಮಹಿಳೆಗೆ ವಂಚನೆ
* ಸುಳ್ಯ: ಆಟೋ ಚಾಲಕನ ಅನುಮಾನಾಸ್ಪದ ಸಾವು
* ಕಾರ್ಕಳ: ನಕಲಿ ಚಿನ್ನ ಅಡವಿಟ್ಟು ಸಾಲ: ಕೇಸ್
* ಬ್ರಹ್ಮಾವರ: ಬೈಕ್ ಗೆ ಅಡ್ಡ ಬಂದ ಚಿರತೆ
* ಬೈಂದೂರು: ಆಟೋಗೆ ಢಿಕ್ಕಿ ಹೊಡೆದ ಕಾರ್; ಹಲವರಿಗೆ ಗಾಯ
* ಕುಮಟಾ: ಸಮುದ್ರದಲ್ಲಿ ಕೊಚ್ಚಿ ಹೋಗುತ್ತಿದ್ದ ಇಬ್ಬರ ರಕ್ಷಣೆ
* ಅಂಕೋಲಾ: ಸಾಲ ಬಾಧೆಯಿಂದ ಕೂಲಿ ಕಾರ್ಮಿಕ ಆತ್ಮಹತ್ಯೆ
* ಕಾಸರಗೋಡು: 12 ವರ್ಷಗಳಿಂದ ನಾಪತ್ತೆ: ಆರೋಪಿ ಬಂಧನ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಪುತ್ತೂರು: ಜಾನುವಾರುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಆರೋಪಿಗಳಲ್ಲಿ ಓರ್ವ ಪೊಲೀಸರಿಗೆ ಸೆರೆ ಸಿಕ್ಕಿದ್ದು, ಮತ್ತೊಬ್ಬ ಆರೋಪಿ ಪರಾರಿಯಾದ ಘಟನೆ ನಡೆದಿದೆ.ಈಚರ್ ವಾಹನದಲ್ಲಿ ಹತ್ತು ಜಾನುವಾರಗಳನ್ನು ಸಾಗಿಸುತ್ತಿದ್ದ ಹಿನ್ನೆಲೆಯಲ್ಲಿ, ಪೊಲೀಸರು ವಾಹನವನ್ನು ನಿಲ್ಲಿಸುವಂತೆ ಸೂಚಿಸಿದ್ದಾರೆ. ಆದರೆ ಚಾಲಕ ಪೊಲೀಸರನ್ನು ನಿರ್ಲಕ್ಷಿಸಿ ಪರಾರಿಯಾಗಲು ಪ್ರಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ಪೊಲೀಸರು ಈಚರ್ ಅನ್ನು ಹತ್ತು ಕಿಲೋಮೀಟರ್ ದೂರದವರೆಗೆ ಬೆನ್ನಟ್ಟಿದ್ದು, ವಾಹನವನ್ನು ನಿಧಾನಗತಿಯಲ್ಲಿ ಚಲಿಸಿದ ಚಾಲಕ, ಪೊಲೀಸರ ವಾಹನಕ್ಕೆ ಹಿಂದಿನಿಂದ ಢಿಕ್ಕಿ ಹೊಡೆದಿದ್ದಾನೆ. ಆಗ ಪಿಎಸ್ಐ ಅವರು ಎರಡು ಗುಂಡುಗಳನ್ನು ಹಾರಿಸಿದ್ದು, ಒಂದು ಈಚರ್ ವಾಹನಕ್ಕೆ ತಗುಲಿದ್ದು, ಮತ್ತೊಂದು ವಾಹನದ ಚಾಲಕನಾದ ಆರೋಪಿಯ ಕಾಲಿಗೆ ತಗುಲಿದೆ. ಆರೋಪಿಯನ್ನು ಕಾಸರಗೋಡು ಮೂಲದ ಅಬ್ದುಲ್ಲಾ ಎಂದು ಗುರುತಿಸಲಾಗಿದೆ. ಪರಾರಿಯಾದ ಆರೋಪಿ ಯಾರು ಎನ್ನುವುದರ ಕುರಿತು ಮಾಹಿತಿ ಲಭಿಸಿಲ್ಲ. ಗಾಯಗೊಂಡ ಅಬ್ದುಲ್ಲಾನನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.‌ ಅಬ್ದುಲ್ಲಾನ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಆತನ ವಿರುದ್ಧ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಗೋಹತ್ಯೆ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿತ್ತು ಎನ್ನುವ ಸಂಗತಿ ತಿಳಿದುಬಂದಿದೆ.

* ಮಂಗಳೂರು: ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಮಹಿಳೆಗೆ ವಂಚನೆ

ಮಂಗಳೂರು: ಅಪರಿಚಿತರು ಮಹಿಳೆಯೊಬ್ಬರಿಗೆ ಕರೆ ಮಾಡಿ, 42 ಲಕ್ಷ ರೂಪಾಯಿಯಷ್ಟು ಹಣವನ್ನು ಆನ್ ಲೈನ್ ಮೂಲಕ ದೋಚಿದ ಘಟನೆ ನಡೆದಿದೆ.‌ ಅಕ್ಟೋಬರ್ 7ರಂದು ಮಹಿಳೆಗೆ ಕರೆ ಮಾಡಿದ ಅಪರಿಚಿತರು, ಮುಂಬೈನ ಕೊಲಾಬ ಪೊಲೀಸ್ ಠಾಣೆಯಿಂದ ಮಾತನಾಡುತ್ತಿದ್ದು, ನಿಮ್ಮ ಹೆಸರಿನಲ್ಲಿ ಹೊಸ ಸಿಮ್ ವೊಂದನ್ನು ಖರೀದಿಸಲಾಗಿದೆ, ಅದಕ್ಕೆ ನಿಮ್ಮ ದೃಢೀಕರಣ ಪತ್ರ ಬೇಕಿದೆ, ಮುಂಬೈಗೆ ಬರಬೇಕಾಗುತ್ತದೆ ಎಂದು ತಿಳಿಸಿದ್ದಾರೆ. ಮಹಿಳೆಯು ಮುಂಬೈಗೆ ಬರಲು ನಿರಾಕರಿಸಿದ್ದರಿಂದ, ಅಪರಿಚಿತರು ಪತ್ರವೊಂದನ್ನು ಬರೆದು ವಾಟ್ಸಾಪ್ ಮೂಲಕ ಕಳುಹಿಸಿ ಎಂದಿದ್ದಾರೆ. ಬಳಿಕ ವಾಟ್ಸಾಪ್ ಕರೆ ಮಾಡಿ, ಸಿಬಿಐ ಅಧಿಕಾರಿ, ಆರ್‌ಬಿಐ ಮತ್ತು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ಕುರಿತು ಪ್ರಸ್ತಾಪಿಸಿ, ಮಹಿಳೆಯ ವೈಯಕ್ತಿಕ ಮತ್ತು ಬ್ಯಾಂಕ್ ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ. ಇದನ್ನು ನಿಜವೆಂದು ನಂಬಿದ ಮಹಿಳೆಯು ಅಕ್ಟೋಬರ್ 8 ರಿಂದ 17ರ ವರೆಗೆ ಹಂತಹಂತವಾಗಿ ಅಪರಿಚಿತರಿಗೆ ಹಣವನ್ನು ವರ್ಗಾಯಿಸಿದ್ದಾರೆ. ಆಗಲೇ 42 ಲಕ್ಷದಷ್ಟು ಹಣ ವರ್ಗಾವಣೆಯಾಗಿತ್ತು. ಅಪರಿಚಿತರು ಮತ್ತೆ ಹಣದ ಬೇಡಿಕೆ ಇಟ್ಟಾಗ, ಅನುಮಾನಗೊಂಡ ಮಹಿಳೆಯು ತನ್ನ ಮಕ್ಕಳು ಮತ್ತು ಸಹೋದರಿಯ ಬಳಿ ವಿಚಾರಿಸಿದ್ದಾರೆ. ಆಗ ತಾನು ಮೋಸ ಹೋಗಿರುವ ಕುರಿತು ಮಹಿಳೆಗೆ ಅರಿವಾಗಿದೆ. ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ತನ್ನಿಂದ ಆನ್ ಲೈನ್ ಮೂಲಕ ಹಣವನ್ನು ದೋಚಿದ್ದಾರೆ ಎಂದು ಮಹಿಳೆಯು ಮಂಗಳೂರಿನ ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.

* ಸುಳ್ಯ: ಆಟೋ ಚಾಲಕನ ಅನುಮಾನಾಸ್ಪದ ಸಾವು

ಸುಳ್ಯ: ಕಳೆದ ಕೆಲವು ದಿನಗಳ ಹಿಂದೆ ಅನುಮಾನಾಸ್ಪದವಾಗಿ ಸಾವಿಗೀಡಾದ ಬೆಟ್ಟಂಪಾಡಿಯ ಆಟೋ ಚಾಲಕ ಜಬ್ಬಾರ್ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ, ಅವರ ಕುಟುಂಬಸ್ಥರು ಸೂಕ್ತ ತನಿಖೆ ನಡೆಸುವಂತೆ ಕೇಳಿಕೊಂಡಿದ್ದಾರೆ. ಕಳೆದೆರಡು ದಿನಗಳ ಹಿಂದೆ ಪಶ್ಚಿಮ ವಲಯದ ಐಜಿಪಿ ಮತ್ತು ದಕ್ಷಿಣಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಭೇಟಿ ಮಾಡಿದ ಜಬ್ಬಾರ್ ಕುಟುಂಬದ ಸದಸ್ಯರು ಸೂಕ್ತ ತನಿಖೆಯ ಮೂಲಕ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯನ್ನು ವಿಧಿಸಿ ಎಂದು ಮನವಿಯನ್ನು ಸಲ್ಲಿಸಿದರು.

* ಕಾರ್ಕಳ: ನಕಲಿ ಚಿನ್ನ ಅಡವಿಟ್ಟು ಸಾಲ.

ಕಾರ್ಕಳ: ನಾಗರಾಜ್ ಹಾಗೂ ರೇಣುಕಾ ಎನ್ನುವ ದಂಪತಿಗಳು ನಕಲಿ ಚಿನ್ನವನ್ನು ಅಡವಿಟ್ಟು, ಕಾರ್ಕಳದ ಗೋಕರ್ಣನಾಥ ಕೋ ಆಪರೇಟಿವ್ ಬ್ಯಾಂಕ್ ನಲ್ಲಿ ಲಕ್ಷಾಂತರ ರೂಪಾಯಿ ಸಾಲ ಪಡೆದು, ವಂಚಿಸಿದ ಘಟನೆ ನಡೆದಿದೆ. ನಾಗರಾಜ್ ಮತ್ತು ರೇಣುಕಾ ಕಳೆದ ವರ್ಷ ಅಕ್ಟೋಬರ್ 24 ರಿಂದ, 2025ರ ಸೆಪ್ಟೆಂಬರ್ 30ರವರೆಗೆ ಹಂತಹಂತವಾಗಿ ತಮ್ಮ ಬಳಿಯಿದ್ದ ನಕಲಿ ಚಿನ್ನಾಭರಣಗಳನ್ನು ಅಡವಿಟ್ಟು, ಸಾಲ ಪಡೆಯುತ್ತಾ ಬಂದಿದ್ದರು.‌ ಆಗ ಬ್ಯಾಂಕಿನ ಅಧಿಕೃತ ಚಿನ್ನ ಪರೀಕ್ಷಕರಾದ ಸತೀಶ್ ಆಚಾರ್ಯ ಅವರ ಬಳಿ ನಾಗರಾಜ್ ಮತ್ತು ರೇಣುಕಾ ಅಡವಿಟ್ಟ ಚಿನ್ನವನ್ನು ಪರೀಕ್ಷೆಗೆ ಒಳಪಡಿಸಿದಾಗ, ಅದು ಅಸಲಿ ಎನ್ನುವುದು ದೃಢಪಟ್ಟಿತ್ತು.‌ ಹೀಗಾಗಿ ಅವರಿಗೆ ಬ್ಯಾಂಕಿನವರು ಚಿನ್ನಾಭರಣಗಳ ಮೇಲೆ ಸಾಲವನ್ನು ನೀಡಿದ್ದರು.‌ ಆಗ ನಾಗರಾಜ್ ತಮ್ಮ ಸಾಲದ ಖಾತೆಯಿಂದ 5.26 ಲಕ್ಷ ಮತ್ತು ರೇಣುಕಾ ತಮ್ಮ ಚಿನ್ನಾಭರಣ ಅಡವಿಟ್ಟು 5.32 ಲಕ್ಷದಷ್ಟು ಹಣವನ್ನು ಸಾಲ ಪಡೆದಿದ್ದರು ಎನ್ನಲಾಗಿದೆ. ಕಳೆದ ಒಂದು ವರ್ಷದಿಂದ ಸ್ವಲ್ಪವೂ ಅನುಮಾನ ಬಾರದ ರೀತಿಯಲ್ಲಿ ದಂಪತಿಗಳು 10.58ಲಕ್ಷದಷ್ಟು ಹಣವನ್ನು ಸಾಲ ಮಾಡಿದ್ದರು. ಅಕ್ಟೋಬರ್ 9ರಂದು ರೇಣುಕಾ ಬ್ಯಾಂಕಿಗೆ ಬಂದು ತನ್ನ ಗಂಡ ನಾಗರಾಜ್ ಅವರು ಅಡವಿರಿಸಿದ ಚಿನ್ನಾಭರಣವನ್ನು ಮತ್ತೆ ಅಡವಿರಿಸುತ್ತೇನೆ, ಪುನಃ ನನಗೆ ಅದರ ಆಧಾರದ ಮೇಲೆ ಒಂದು ಲಕ್ಷ ಹಣವನ್ನು ಸಾಲವಾಗಿ ನೀಡಿ ಎಂದು ಕೇಳಿದ್ದರು. ಪದೇ ಪದೇ ಚಿನ್ನಾಭರಣ ಅಡವಿರಿಸಿ ಸಾಲವನ್ನು ಪಡೆಯುತ್ತಿರುವುದನ್ನು ಕಂಡು, ಅನುಮಾನಗೊಂಡ ಗೋಕರ್ಣನಾಥ ಕೋ ಆಪರೇಟಿವ್ ಬ್ಯಾಂಕ್ ನ ಮ್ಯಾನೇಜರ್ ಆದ ಲಕ್ಷ್ಮಣ್ ಶೇಟ್ ಅವರು, ದಂಪತಿಗಳು ಅಡವಿರಿಸಿದ 19276 ಸಂಖ್ಯೆಯ ಚಿನ್ನಾಭರಣಗಳನ್ನು ಮರುಪರಿಶೀಲಿಸಲು ಸತೀಶ್ ಆಚಾರ್ಯ ಅವರಿಗೆ ತಿಳಿಸಿದಾಗ, ಚಿನ್ನದ ಎರಡು ಗುಂಡುಗಳನ್ನು ಕರಗಿಸಿ ಭಾರತ್ ಟೆಸ್ಟಿಂಗ್ ಸೆಂಟರ್ ನಲ್ಲಿ ಪರೀಕ್ಷಿಸಿದಾಗ ಅದು ನಕಲಿ ಎನ್ನುವುದು ಬೆಳಕಿಗೆ ಬಂದಿದೆ. ಅದೇ ರೀತಿ ನಾಗರಾಜ್ ರೇಣುಕಾ ಅಡವಿರಿಸಿದ ಎಲ್ಲಾ ಚಿನ್ನಾಭರಣಗಳನ್ನು ಪರಿಶೀಲಿಸಿದಾಗ ಎಲ್ಲವೂ ನಕಲಿ ಎನ್ನುವುದು ದೃಢಪಟ್ಟಿದೆ. ಸತೀಶ್ ಆಚಾರ್ಯ ಕೂಡ ದಂಪತಿಗಳೊಂದಿಗೆ ಸೇರಿ ಬ್ಯಾಂಕ್ ಗೆ ವಂಚಿಸಿದ್ದಾನೆ ಎನ್ನುವ ಸಂಗತಿ ತಿಳಿದುಬಂದಿದೆ.‌ ಈ ಹಿನ್ನೆಲೆಯಲ್ಲಿ ನಾಗರಾಜ್, ರೇಣುಕಾ ಅವರೊಂದಿಗೆ ಸತೀಶ್ ಆಚಾರ್ಯ ವಿರುದ್ಧ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

* ಬ್ರಹ್ಮಾವರ: ಬೈಕ್ ಗೆ ಅಡ್ಡ ಬಂದ ಚಿರತೆ

ಬ್ರಹ್ಮಾವರ: ಭಾಸ್ಕರ್ ಶೆಟ್ಟಿ ಎನ್ನುವವರು ಬೈಕ್ ನಲ್ಲಿ ತಮ್ಮ ಮನೆಗೆ ಹಿಂತಿರುಗುತ್ತಿದ್ದ ಸಂದರ್ಭದಲ್ಲಿ, ಚಿರತೆಯೊಂದು ಅಡ್ಡ ಬಂದ ಘಟನೆ, ಕಳೆದೆರಡು ದಿನಗಳ ಹಿಂದೆ ನಾಲ್ಕೂರು ಗ್ರಾಮದ ನಂಚಾರಿನಲ್ಲಿ ನಡೆದಿದೆ.‌ ಚಿರತೆ ಅಡ್ಡ ಬಂದಿದುದರಿಂದ ಭಾಸ್ಕರ್ ಶೆಟ್ಟಿ ಅವರಿಗೆ ಬೈಕ್ ನ ಮೇಲಿನ ನಿಯಂತ್ರಣ ತಪ್ಪಿ, ಚಿರತೆಗೆ ಢಿಕ್ಕಿ ಹೊಡೆದು, ಪಲ್ಟಿ ಹೊಡೆದಿದ್ದಾರೆ. ಇದರ ಪರಿಣಾಮವಾಗಿ ಚಿರತೆ ಸಾವನ್ನಪ್ಪಿದ್ದು, ಭಾಸ್ಕರ್ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ.‌ ಗಾಯಗೊಂಡ ಭಾಸ್ಕರ್ ಅವರನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ಕಳುಹಿಸಿದರು.‌ ಸ್ಥಳಕ್ಕೆ ಆಗಮಿಸಿದ ಹೆಬ್ರಿ ಅರಣ್ಯ ಇಲಾಖೆಯವರು, ಮೃತಪಟ್ಟ ಚಿರತೆಯನ್ನು ಪರಿಶೀಲಿಸಿದರು. ಅಪಘಾತಕ್ಕೆ ಸಂಬಂಧಿಸಿದಂತೆ ಕುಂದಾಪುರದ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

* ಬೈಂದೂರು: ಆಟೋಗೆ ಢಿಕ್ಕಿ ಹೊಡೆದ ಕಾರ್; ಹಲವರಿಗೆ ಗಾಯ

ಬೈಂದೂರು: ಕುಂದಾಪುರದ ಕಡೆಯಿಂದ ಬೈಂದೂರು ಕಡೆಗೆ ತೆರಳುತ್ತಿದ್ದ ಕಾರೊಂದು ಆಟೋಗೆ ಢಿಕ್ಕಿ ಹೊಡೆದ ಘಟನೆ, ಕಳೆದೆರಡು ದಿನಗಳ ಹಿಂದೆ ರಾಷ್ಟ್ರೀಯ ಹೆದ್ದಾರಿ 66ರ ನಾಯಕಕಟ್ಟೆ ಫ್ಲೈ ಓವರ್ ಬಳಿ ನಡೆದಿದೆ. ಓವರ್ ಟೇಕ್ ಮಾಡುವ ಭರದಲ್ಲಿ ಕಾರು, ಮುಂದೆ ಹೋಗುತ್ತಿದ್ದ ಆಟೋಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.‌ ಇದರ ಪರಿಣಾಮವಾಗಿ ಕಾರು ಮತ್ತು ಆಟೋ ಪಲ್ಟಿ ಹೊಡೆದಿದ್ದು, ಆಟೋದಲ್ಲಿ ಪ್ರಯಾಣಿಸುತ್ತಿದ್ದ ಮರ್ಲಿ, ಸವಿತಾ ಖಾರ್ವಿ, ಯಶೋಧಾ, ಶ್ರದ್ಧಾ, ಮಕ್ಕಳಾದ ಹರ್ಷಿತಾ, ರಿಷಾನ್ ಮತ್ತು ಆಟೋ ಚಾಲಕರಾದ ಜಲಂದರ ಅವರು ಗಾಯಗೊಂಡಿದ್ದಾರೆ.‌ ಘಟನೆಗೆ ಸಂಬಂಧಿಸಿದಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

* ಕುಮಟಾ: ಸಮುದ್ರದಲ್ಲಿ ಕೊಚ್ಚಿ ಹೋಗುತ್ತಿದ್ದ ಇಬ್ಬರ ರಕ್ಷಣೆ

ಕುಮಟಾ: ಬೆಂಗಳೂರಿನ ನೌಕರರ ಸಮಾಜದಿಂದ 9 ಜನರು ಪ್ರವಾಸಕ್ಕೆಂದು ಗೋಕರ್ಣಕ್ಕೆ ಆಗಮಿಸಿದ ಸಂದರ್ಭದಲ್ಲಿ, ಈಜಾಡಲೆಂದು ಸಮುದ್ರಕ್ಕೆ ಇಳಿದ ಇಬ್ಬರು ಸುಳಿಗೆ ಸಿಲುಕಿದ ಘಟನೆ, ಮಂಗಳವಾರದಂದು ನಡೆದಿದೆ.‌ ನಾಗೇಶ್ ಸುಬ್ರಹ್ಮಣ್ಯ ಮತ್ತು ಗಣೇಶ್ ಕೃಷ್ಣಪ್ಪ ಎನ್ನುವವರು ಈಜಾಡಲು ಹೋಗಿ ಸುಳಿಗೆ ಸಿಲುಕಿದ್ದಾರೆ.‌ ಇದನ್ನು ತಕ್ಷಣ ಗಮನಿಸಿದ ಕರ್ತವ್ಯನಿರತ ಜೀವರಕ್ಷಕ ಸಿಬ್ಬಂದಿಗಳಾದ ನಾಗೇಂದ್ರ ಕುರ್ಲೆ, ಮಂಜುನಾಥ ಹರಿಕಾಂತ ಅವರು ತಕ್ಷಣಕ್ಕೆ ಧಾವಿಸಿ, ಇಬ್ಬರನ್ನೂ ಹರಸಾಹಸಪಟ್ಟು ದಡಕ್ಕೆ ತಂದು, ಜೀವವನ್ನು ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ.‌ ಸಿಬ್ಬಂದಿಗಳಿಗೆ ನಾಗೇಶ್ ಸುಬ್ರಮಣ್ಯ ಮತ್ತು ಗಣೇಶ್ ಕೃಷ್ಣಪ್ಪ ಅವರೊಂದಿಗೆ ಬಂದಿದ್ದ, ನೌಕರರ ಸಮಾಜದ ಮಿತ್ರರಾದ ಶೇಖರ್ ಮತ್ತು ಗೋಕರ್ಣ ಮೈ ಸ್ಟಿಕ್ ಅಡ್ವೆಂಚರ್ಸ್ ಸಿಬ್ಬಂದಿಗಳು ಸಹಕಾರ ನೀಡಿದರು. ತಮ್ಮ ಜೀವದ ಹಂಗನ್ನು ತೊರೆದು, ಇಬ್ಬರ ಪ್ರಾಣವನ್ನು ಉಳಿಸಿದ ಜೀವರಕ್ಷಕ ಸಿಬ್ಬಂದಿಗಳ ಸಾಹಸಕ್ಕೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗಿದೆ.

* ಅಂಕೋಲಾ: ಸಾಲ ಬಾಧೆಯಿಂದ ಕೂಲಿ ಕಾರ್ಮಿಕ ಆತ್ಮಹತ್ಯೆ

ಅಂಕೋಲಾ: ಸಾಲಬಾಧೆ ಮತ್ತು ದೀಪಾವಳಿ ಹಬ್ಬಕ್ಕೆ ಹೆಂಡತಿ ಮನೆಗೆ ಬಾರದ ಕಾರಣ ನೊಂದು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಾವಿಕೇರಿ ಗ್ರಾಮದಲ್ಲಿ ನಡೆದಿದೆ. ಶಿವಾನಂದ ಶಂಕರ ಆಗರ ಕೂಲಿ ಕೆಲಸವನ್ನು ಮಾಡಿಕೊಂಡಿದ್ದು, ವ್ಯವಹಾರದ ಕಾರಣಕ್ಕಾಗಿ ಸಾಲ ಮಾಡಿದ್ದರು.‌ ಆರ್ಥಿಕ ದುಸ್ಥಿತಿಯ ಬಿಸಿ ಸಂಸಾರಕ್ಕೂ ತಟ್ಟಿದ್ದು, ಇದರ ಪರಿಣಾಮವಾಗಿ ಹೆಂಡತಿಯು ತವರುಮನೆಗೆ ತೆರಳಿದ್ದಳು ಎನ್ನಲಾಗಿದೆ.‌ ಸಾಲ ತೀರಿಸಲಾಗದೆ ಚಿಂತೆಗೊಳಗಾಗಿದ್ದ ಶಿವಾನಂದ ಶಂಕರ ಅವರು, ದೀಪಾವಳಿ ಹಬ್ಬಕ್ಕೂ ಪತ್ನಿ ಮನೆಗೆ ಹಿಂತಿರುಗಿ ಬಂದಿಲ್ಲವೆಂಬ ಕಾರಣದಿಂದ ಮಾನಸಿಕವಾಗಿ ನೊಂದಿದ್ದರು. ಈ ಹಿನ್ನೆಲೆಯಲ್ಲಿ ಮಂಗಳವಾರದಂದು ಮನೆಯ ಬಾಗಿಲು ಹಾಕಿಕೊಂಡು, ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಾವಿಗೆ ಸಂಬಂಧಿಸಿದಂತೆ ಅವರ ಸಹೋದರಿ ಭಾರತಿಯವರು ಹೇಳಿಕೆ ನೀಡಿದ್ದಾರೆ. ಹೇಳಿಕೆಯ ಆಧಾರದ ಮೇಲೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸುತ್ತಿದ್ದಾರೆ.

* ಕಾಸರಗೋಡು: 2014ರಲ್ಲಿ ಅಬಕಾರಿ ಜಾರಿ ಮತ್ತು ಲಾಟರಿ ನಿಷೇಧ ದಳ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಳೆದ 12 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಕೊನೆಗೂ ಪೊಲೀಸರ ಅತಿಥಿಯಾಗಿದ್ದಾನೆ. ಕಾಸರಗೋಡು ಮೂಲದ ಕೆ.ಚಂದ್ರಶೇಖರನ್ ನನ್ನು ಮಂಗಳವಾರದಂದು ದಕ್ಷಿಣ ಕನ್ನಡ ಜಿಲ್ಲೆಯ ಸೆನ್ ಪೊಲೀಸ್ ಠಾಣೆಯ ಪೊಲೀಸರು ಕಾಸರಗೋಡಿನ ನುಳ್ಳಿಪ್ಪಾಡಿಯಲ್ಲಿ ಬಂಧಿಸಿದ್ದಾರೆ. ಬಂಧನದ ಬಳಿಕ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂಧನವನ್ನು ವಿಧಿಸಿದೆ.

Categories
ಉತ್ತರ ಕನ್ನಡ ರಾಜ್ಯ ಹಾವೇರಿ

ಟಾಪ್ 4 ನ್ಯೂಸ್ ಕರ್ನಾಟಕ

ಟಾಪ್ 4 ನ್ಯೂಸ್ ಕರ್ನಾಟಕ

-ಹೋರಿ ಹಬ್ಬದಲ್ಲಿ ಹಾರಿ ಹೋಯ್ತು ಮೂರು ಜೀವ…!!
– ಕುಮಟಾ : ಪೊಲೀಸ್ ಚೆಕ್ ಪೋಸ್ಟ್ ಮೇಲೆ ಹರಿದ ಲಾರಿ..!!
– ಯಾದಗಿರಿ : ನವಜಾತ ಶಿಶು ಅದಲು-ಬದಲು
– ಚಿತ್ರದುರ್ಗ: ವಿದ್ಯಾರ್ಥಿಗೆ ಥಳಿಸಿದ್ದ ಶಿಕ್ಷಕ ಅರೆಸ್ಟ್

NAMMUR EXPRESS NEWS
ಹಾವೇರಿ: ಹಾವೇರಿ ಜಿಲ್ಲೆಯ ಹಲವು ಕಡೆಗಳಲ್ಲಿ ದೀಪಾವಳಿ ಹಬ್ಬದ ನಿಮಿತ್ತ ಬುಧವಾರ (ಅ.22) ಹಮ್ಮಿಕೊಂಡಿದ್ದ ‘ಕೊಬ್ಬರಿ ಹೋರಿ ಬೆದರಿಸುವ ಸ್ಪರ್ಧೆ’ ಹಾಗೂ ಹೋರಿಗಳ ಮೆರವಣಿಗೆ ಸಂದರ್ಭದಲ್ಲಿ ಹೋರಿ ಗುದ್ದಿ ಮೂವರು ಮೃತಪಟ್ಟಿದ್ದಾರೆ. ಹಾವೇರಿಯ ದಾನೇಶ್ವರಿನಗರದ ಚಂದ್ರಶೇಖರ ಕೋಡಿಹಳ್ಳಿ (70), ಹಾವೇರಿ ತಾಲ್ಲೂಕಿನ ದೇವಿಹೊಸೂರಿನ ಘನಿಸಾಬ ಮಹಮ್ಮದ್ ಹುಸೇನ್ ಬಂಕಾಪುರ (75) ಹಾಗೂ ಹಾನಗಲ್ ತಾಲ್ಲೂಕಿನ ತಿಳವಳ್ಳಿಯ ಭರತ್ ರಾಮಪ್ಪ ಹಿಂಗಮೇರಿ (24) ಮೃತರು. ಹೆಸ್ಕಾಂನ ನಿವೃತ್ತ ನೌಕರ ಚಂದ್ರಶೇಖರ್ ಕೋಡಿಹಳೊ ಅವರು ಹಾವೇರಿಯ ಹಳೇ ಪಿ.ಬಿ.ರಸ್ತೆಯಲ್ಲಿ ನಡೆದುಕೊಂಡು ಹೊರಟಿದ್ದರು. ಹಾವೇರಿಯ ವೀರಭದ್ರೇಶ್ವರ ದೇವಸ್ಥಾನ ಎದುರು ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಓಡಿದ ಹೋರಿ, ಹಳೇ ಪಿ.ಬಿ. ರಸ್ತೆಗೆ ಬಂದಿತ್ತು. ಇದೇ ಹೋರಿ, ಚಂದ್ರಶೇಖರ್ ಅವರಿಗೆ ಗುದ್ದಿ ಈ ಅವಘಡ ನಡೆದಿದೆ. ದೇವಿಹೊಸೂರು ಗ್ರಾಮದಲ್ಲಿ ದೀಪಾವಳಿ ಹಬ್ಬದ ನಿಮಿತ್ತ ಎತ್ತುಗಳನ್ನು ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಮೆರವಣಿಗೆಯಲ್ಲಿದ್ದ ಎತ್ತು ಬೆದರಿ ಹೊಂಡದ ಓಣಿಯಲ್ಲಿರುವ ಮನೆಯ ಕಟ್ಟೆ ಮೇಲೆ ಕುಳಿತಿದ್ದ ಘನಿಸಾಬ ಅವರ ಕುತ್ತಿಗೆ ಮತ್ತು ಎದೆಗೆ ಕೊಂಬಿನಿಂದ ತಿವಿದಿತ್ತು. ಅವರನ್ನು ಚಿಕಿತ್ಸೆಗಾಗಿ ಹಾವೇರಿಯ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.

– ಕುಮಟಾ : ಪೊಲೀಸ್ ಚೆಕ್ ಪೋಸ್ಟ್ ಮೇಲೆ ಹರಿದ ಲಾರಿ..!!

ಕುಮಟಾ : ರಾಷ್ಟ್ರೀಯ ಹೆದ್ದಾರಿ 66 ರ ಕುಮಟಾ-ಅಂಕೋಲ ಹೆದ್ದಾರಿಯಲ್ಲಿ ಸರಕು ತುಂಬಿಕೊಂಡು ಬಂದ ಲಾರಿ ನಿಯಂತ್ರಣ ತಪ್ಪಿ ನೇರವಾಗಿ ಪೊಲೀಸ್ ಚೆಕ್‌ಪೋಸ್ಟ್ ಮೇಲೆ ಹರಿದು ಬಿದ್ದಿದ್ದು, ಚೆಕ್ ಪೋಸ್ಟ್ ಸಂಪೂರ್ಣ ನುಜ್ಜುಗುಜ್ಜಾಗಿದ್ದು ಅದೃಷ್ಟವಶಾತ್ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಗಳು ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿದೆ. ಅತೀ ವೇಗದಲ್ಲಿ ಬಂದ ಲಾರಿ ಚಾಲಕನ ನಿದ್ದೆ ಗಣ್ಣಿನಲ್ಲಿ ನಿಯಂತ್ರಣ ತಪ್ಪಿದ ಪರಿಣಾಮ ಈ ಘಟನೆ ನಡೆದಿದ್ದು, ಚೆಕ್ ಪೋಸ್ಟ್ ಬಳಿಯೇ ಇದ್ದ ಪೊಲೀಸರಿಗೆ ಚಿಕ್ಕಪುಟ್ಟ ಗಾಯಗಳಾಗಿದ್ದು ,ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹೆದ್ದಾರಿಯಲ್ಲಿ ರಸ್ತೆ ಕಾಮಗಾರಿ ಪೂರ್ಣ ಗೊಂಡಿಲ್ಲ ದ್ವಿಮುಖ ರಸ್ತೆ ನಿರ್ಮಾಣವಾಗಿದ್ದು ಒಂದು ಭಾಗ ಬಂದ್ ಮಾಡಲಾಗಿದೆ. ಆದರೇ ವೇಗವಾಗಿ ಬರುವ ವಾಹನಗಳಿಗೆ ಈ ರಸ್ತೆಯಲ್ಲಿ ಸಾಗುವಾಗ ಸಮರ್ಪಕ ನಾಮಫಲಕ ಇಲ್ಲದ ಕಾರಣ ಗೊಂದಲಕ್ಕೆ ಒಳಗಾಗುವ ಸವಾರರು ಈ ಭಾಗದಲ್ಲಿ ಹೇಗೆಬೇಕೋ ಹಾಗೆ ನುಗ್ಗುತಿದ್ದಾರೆ. ಹೀಗಾಗಿ ಈ ರೀತಿಯ ಘಟನೆ ನಡೆಯುತಿದ್ದು , ಈ ಅಪಘಾತಗಳಿಗೆ IRB ಕಂಪನಿ ನೇರ ಹೊಣೆ ಎಂಬುದು ಸ್ಥಳೀಯರ ಆರೋಪ. ಸಧ್ಯ ಘಟನೆ ಸಂಬಂಧ ಗೋಕರ್ಣ ಪೊಲೀಸರು ದೂರು ದಾಖಲಿಸಿಕೊಂಡಿದ್ದು ತನಿಖೆ ಕೈಗೊಂಡಿದ್ದಾರೆ.

– ಯಾದಗಿರಿ : ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನವಜಾತ ಶಿಶು ಅದಲು-ಬದಲು..!!

ಯಾದಗಿರಿ: ಯಾದಗಿರಿಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಅಲ್ಲಿನ ನರ್ಸ್ ನವಜಾತ ಶಿಶುಗಳನ್ನು ಅದಲು-ಬದಲು ಮಾಡಿದ ಆರೋಪ ಕೇಳಿ ಬಂದಿದೆ. ನಗರದ ಮಹಿಳೆಯೊಬ್ಬರು ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಸೋಮವಾರ ರಾತ್ರಿ ಆಕೆಗೆ ಹೆರಿಗೆಯಾಗಿದ್ದು ಹೆಣ್ಣು ಮಗುವಾದರೂ, ಗೀತಾ ಎಂಬ ನರ್ಸ್ ‘ನಿಮಗೆ ಗಂಡು ಮಗು ಜನಿಸಿದೆ’ ಎಂದು ತಿಳಿಸಿದ್ದರು. ಆದರೆ, ತಾಯಿ ಕಾರ್ಡ್‌ನಲ್ಲಿ ಹೆಣ್ಣು ಮಗು ಅಂತ ನಮೂದು ಮಾಡಲಾಗಿತ್ತು. ಬಳಿಕ ಕುಟುಂಬಸ್ಥರು ಜಿಲ್ಲಾ ಸರ್ಜನ್ ಕಚೇರಿಗೆ ಆಗಮಿಸಿ, ದೂರು ನೀಡಿದರು. ಬಳಿಕ ನೈಟ್ ಡ್ಯೂಟಿಯಲ್ಲಿದ್ದ ನರ್ಸ್ ಗೀತಾಳನ್ನು ಕರೆಸಿದ ಜಿಲ್ಲಾ ಸರ್ಜನ್‌ ವಿಚಾರಣೆ ನಡೆಸಿದಾಗ ಅಜಾಗರೂಕತೆಯಿಂದ ಈ ರೀತಿಯಾಗಿದೆ ಎಂದು ತಿಳಿದು ಬಂದಿತು.

ವಿದ್ಯಾರ್ಥಿಗೆ ಥಳಿಸಿದ್ದ ಶಿಕ್ಷಕ ಅರೆಸ್ಟ್!

ವಿದ್ಯಾರ್ಥಿ ಮೇಲೆ ಮನಸ್ಸೋ ಇಚ್ಛೆ ಥಳಿಸಿ, ಕಾಲಿನಿಂದ ಒದ್ದು, ಅಮಾನವೀಯವಾಗಿ ವರ್ತಿಸಿದ್ದ ಶಿಕ್ಷಕ ಕೊನೆಗೂ ಅರೆಸ್ಟ್ ಆಗಿದ್ದಾನೆ. ಚಿತ್ರದುರ್ಗ ಜಿಲ್ಲೆ‌ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಗ್ರಾಮದ ಸಂಸ್ಕೃತ ವೇದಾಧ್ಯಯನ ಶಾಲೆಯಲ್ಲಿ 9 ವರ್ಷದ ಬಾಲಕನ ಮೇಲೆ ಹಲ್ಲೆ ನಡೆಸಲಾಗಿತ್ತು. ಚಿತ್ರದುರ್ಗ ಜಿಲ್ಲೆ‌ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿಯ ಸಂಸ್ಕೃತ ವೇದಾಧ್ಯಯನ ಶಾಲೆಯಲ್ಲಿ ಶಿಕ್ಷಕ ವೀರೇಶ್ ಹೀರೇಮಠ್ ಎಂಬಾತ ತಲೆ, ಬೆನ್ನ ಮೇಲೆ ಹೊಡೆದು, ಕಾಲಿನಿಂದ ಹೀನಾಯವಾಗಿ ಒದ್ದು ರಾಕ್ಷಸನಂತೆ ವರ್ತಿಸಿದ್ದ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ರಾಜ್ಯಾದ್ಯಂತ ಆಕ್ರೋಶ ಭುಗಿಲೆದ್ದಿತ್ತು. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸೇರಿದಂತೆ ಸರ್ಕಾರದ ಪ್ರಮುಖರು ಶಿಕ್ಷಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಕಲಬುರಗಿಯಲ್ಲಿ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಆರೋಪಿ ಶಿಕ್ಷಕ ಅರೆಸ್ಟ್, ನ್ಯಾಯಾಂಗ ಬಂಧನ
ವೇದಾಧ್ಯಯನ ಶಾಲೆ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿದ ಆರೋಪಿ ಶಿಕ್ಷಕನನ್ನು ಅರೆಸ್ಟ್ ಮಾಡಲಾಗಿದೆ. ಕಲಬುರಗಿಯಲ್ಲಿ ಶಿಕ್ಷಕ ವಿರೇಶ್ ಹೀರೇಮಠ್‌ನನ್ನು ಬಂಧಿಸಲಾಗಿದೆ. ಕಾರ್ಯಾಚರಣೆ ನಡೆಸಿ ಚಿತ್ರದುರ್ಗ ಪೊಲೀಸರು, ಆತನನ್ನು ಬಂಧಿಸಿ ನಾಯಕನಹಟ್ಟಿಗೆ ಕರೆತಂದರು. ಬಳಿಕ ಚಳ್ಳಕೆರೆ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯ್ತು. ಈ ವೇಳೆ ವಿಚಾರಣೆ ನಡೆಸಿದ ನ್ಯಾಯಾಧೀಶರು, ಆರೋಪಿ ವೀರೇಶ್ ಹೀರೇಮಠ್‌ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ, ಆದೇಶಿಸಿದರು. ಇದೀಗ ಆರೋಪಿಯನ್ನು ಚಿತ್ರದುರ್ಗ ಜಿಲ್ಲಾ ಕಾರಾಗೃಹಕ್ಕೆ ಕಳುಹಿಸಲಾಗಿದೆ.

Categories
ಬೆಂಗಳೂರು ರಾಜ್ಯ

ನಿಮ್ಮ ಉಳಿತಾಯ ಖಾತೆ ಮೇಲೆ ಐಟಿ ಇಲಾಖೆ ಕಣ್ಣು..!!

ನಿಮ್ಮ ಉಳಿತಾಯ ಖಾತೆ ಮೇಲೆ ಐಟಿ ಇಲಾಖೆ ಕಣ್ಣು..!!
– 10 ಲಕ್ಷ ರೂ.ಗಳಿಗಿಂತ ಹೆಚ್ಚು ಹಣ ಠೇವಣಿ ಇಟ್ಟರೆ ಐಟಿ ನೋಟಿಸ್
– ಈ ವ್ಯವಹಾರಗಳನ್ನು ಮಾಡುತ್ತಿದ್ದರೆ ಹುಷಾರಾಗಿರಿ..!

NAMMUR EXPRESS NEWS
ಹಣದ ವಹಿವಾಟಿನ ಮುಖ್ಯ ಮೂಲ ಉಳಿತಾಯ ಖಾತೆ. ಎಲೆಕ್ಟ್ರಾನಿಕ್ ಮೂಲಕ ವಹಿವಾಟು ನಡೆಸಿದರೆ ಹಣ ಎಲ್ಲಿಂದ ಬಂತು? ಅದು ಎಲ್ಲಿಗೆ ಹೋಯಿತು ಎಂಬುದನ್ನು ಕಂಡುಹಿಡಿಯಲು ಒಂದು ಮಾರ್ಗವಿದೆ. ನಗದು ವಹಿವಾಟು ನಡೆಸಿದಾಗ, ಆದಾಯ ಎಲ್ಲಿಂದ ಬಂತು ಎಂಬುದಕ್ಕೆ ಪುರಾವೆಗಳನ್ನು ಒದಗಿಸಬೇಕು. ಐಟಿ ಗಮನಿಸಬಹುದಾದ ಉಳಿತಾಯ ಖಾತೆ ವಹಿವಾಟಿನ ಕೆಲವು ಪ್ರಮುಖ ವಿವರಗಳು ಇವೆ.
ನಿಮ್ಮ ಎಲ್ಲಾ ಉಳಿತಾಯ ಖಾತೆಗಳಲ್ಲಿ ಒಂದು ವರ್ಷದಲ್ಲಿ ನೀವು 10 ಲಕ್ಷ ರೂ.ಗಳಿಗಿಂತ ಹೆಚ್ಚು ಹಣವನ್ನು ಠೇವಣಿ ಇಟ್ಟರೆ, ಬ್ಯಾಂಕುಗಳು ಅದನ್ನು ಆದಾಯ ತೆರಿಗೆ ಇಲಾಖೆಯ ಗಮನಕ್ಕೆ ತರುತ್ತವೆ. ಆ ಹಣ ಎಲ್ಲಿಂದ ಬಂತು ಎಂದು ಕೇಳುವ ಐಟಿ ನೋಟಿಸ್ ನಿಮಗೆ ಬರಬಹುದು. ಹಣ ಎಲ್ಲಿಂದ ಬಂತು ಎಂಬುದಕ್ಕೆ ನೀವು ಪುರಾವೆ ತೋರಿಸಬೇಕಾಗುತ್ತದೆ. ನಿಮ್ಮ ಕ್ರೆಡಿಟ್ ಕಾರ್ಡ್ ಬಳಕೆ 10 ಲಕ್ಷ ರೂ. ಮೀರಿದರೆ, ಬ್ಯಾಂಕುಗಳು ಮತ್ತು ಕ್ರೆಡಿಟ್ ಕಾರ್ಡ್ ಕಂಪನಿಗಳು ಅದನ್ನು ಐಟಿ ಗಮನಕ್ಕೆ ತರುತ್ತವೆ. ಅದೇ ರೀತಿ, ನೀವು 1 ಲಕ್ಷ ರೂ.ಗಿಂತ ಹೆಚ್ಚಿನ ಮೊತ್ತವನ್ನು ನಗದು ಮೂಲಕ ಪಾವತಿಸಿದರೆ, ಅದು ಕೂಡ ಐಟಿ ಗಮನಕ್ಕೆ ಬರುತ್ತದೆ.
ಅತಿ ದೊಡ್ಡ ನಗದು ವಹಿವಾಟು ನಡೆಸುವುದು ಐಟಿ ಇಲಾಖೆಯೊಂದಿಗೆ ಅನುಮಾನಗಳನ್ನು ಹುಟ್ಟುಹಾಕುತ್ತದೆ. ಅತಿಯಾದ ನಗದು ಹಿಂಪಡೆಯುವಿಕೆ ಅಥವಾ ಅತಿಯಾದ ನಗದು ಠೇವಣಿಗಳ ಸಂದರ್ಭದಲ್ಲಿ ಐಟಿ ಇಲಾಖೆ ನೋಟಿಸ್‌ಗಳನ್ನು ಕಳುಹಿಸಬಹುದು.
30 ಲಕ್ಷ ರೂ.ಗಿಂತ ಹೆಚ್ಚಿನ ಮೌಲ್ಯದ ಯಾವುದೇ ಸ್ಥಿರ ಆಸ್ತಿಯನ್ನು ಖರೀದಿಸಿದರೆ ಅಥವಾ ಮಾರಾಟ ಮಾಡಿದರೆ, ಉಪ ನೋಂದಣಿ ಇಲಾಖೆಯು ಆ ಮಾಹಿತಿಯನ್ನು ಐಟಿ ಇಲಾಖೆಗೆ ಕಳುಹಿಸುತ್ತದೆ. ಐಟಿ ಇಲಾಖೆಯು ಅದನ್ನು ಪರಿಶೀಲಿಸುತ್ತದೆ. ಒಟ್ಟಿನಲ್ಲಿ ಜನರನ್ನು ಸುಖಾಸುಮ್ಮನೆ ಸರ್ಕಾರ ಬಿಡುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.

Categories
ಕೊಪ್ಪ ಚಿಕ್ಕಮಗಳೂರು ಶೃಂಗೇರಿ

ಕೊಪ್ಪದಲ್ಲಿ ಮಹಿಳೆಯರಿಗಾಗಿ ಬೃಹತ್ ಉದ್ಯೋಗ ಮೇಳ

ಕೊಪ್ಪದಲ್ಲಿ ಮಹಿಳೆಯರಿಗಾಗಿ ಬೃಹತ್ ಉದ್ಯೋಗ ಮೇಳ
* ಅ. 28ರಂದು ಕೊಪ್ಪದಲ್ಲಿ ಅಮ್ಮ ಫೌಂಡೇಶನ್ ಮತ್ತು ಟಾಟಾ ಕಮ್ಯುನಿಕೇಶನ್ ಸಹಯೋಗದಲ್ಲಿ ಆಯೋಜನೆ
* ಮಹಿಳೆಯರ ಸಬಲೀಕರಣದ ನಿಟ್ಟಿನಲ್ಲಿ ಬೃಹತ್‌ ಉದ್ಯೋಗ ಮೇಳ

NAMMMUR EXPRESS NEWS
ಕೊಪ್ಪ: ಮಹಿಳಾ ಸಬಲೀಕರಣದ ನಿಟ್ಟಿನಲ್ಲಿ ಅಮ್ಮಾ ಫೌಂಡೇಷನ್ ವತಿಯಿಂದ ಕೊಪ್ಪದ ಬಂಟರ ಭವನದಲ್ಲಿ ಯುವತಿಯರಿಗಾಗಿ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ ಎಂದು ಅಮ್ಮ ಫೌಂಡೇಷನ್‌ನ ಸಂಸ್ಥಾಪಕರಾದ ಸುಧಾಕರ್ ಎಸ್ ಶೆಟ್ಟಿ ತಿಳಿಸಿದ್ದಾರೆ. ಅ.28 ರ ಮಂಗಳವಾರದಂದು ಅಮ್ಮಾ ಫೌಂಡೇಷನ್ ಹಾಗೂ ಟಾಟಾ ಕಮ್ಯುನಿಕೇಶನ್ ಇವರ ಸಹಯೋಗದಲ್ಲಿ ನಡೆಯಲಿರುವ ಬೃಹತ್ ಉದ್ಯೋಗ ಮೇಳದಲ್ಲಿ 18 ರಿಂದ 34 ವರ್ಷದೊಳಗಿನ SSLC / PUC / ಡಿಪ್ಲೋಮಾ / ITI / ಯಾವುದೇ ಪದವಿ ಪಾಸ್ ಅಥವಾ ಫೇಲ್ ಆದ ಯುವತಿಯರು ಪಾಲ್ಗೊಳ್ಳಬಹುದಾಗಿದೆ.
ಟಾಟಾ ಕಮ್ಯುನಿಕೇಶನ್ ರಾಜ್ಯದಾದ್ಯಂತ ಸುಮಾರು 20,000 ಮಹಿಳೆಯರಿಗೆ ಉದ್ಯೋಗಾವಕಾಶ ಒದಗಿಸುತ್ತಿದ್ದು, ಒಂದು ವರ್ಷ ತರಬೇತಿ ಕೂಡ ನೀಡಲಾಗುತ್ತದೆ. ಮಾಸಿಕ ವೇತನ 19,000/- ರೂ. ಇರಲಿದ್ದು, ಉಚಿತ ಹಾಸ್ಟೆಲ್ ಹಾಗು ಮೂರು ಹೊತ್ತಿನ ಊಟ ಮತ್ತು ತಿಂಡಿ ಉಚಿತವಾಗಿರಲಿದೆ.
ಶೃಂಗೇರಿ ಕ್ಷೇತ್ರದ ಶೃಂಗೇರಿ,ಕೊಪ್ಪ, ಎನ್.ಆರ್.ಪುರ, ಬಾಳೆಹೊನ್ನೂರು ಪ್ರದೇಶದ ಸುಮಾರು 1000 ಮಹಿಳೆಯರು ಈ ಕಾರ್ಯಕ್ರಮದಲ್ಲಿ ಉದ್ಯೋಗಾವಕಾಶ ಪಡೆಯಲಿದ್ದಾರೆ ಎಂದು ಹೇಳಲಾಗಿದೆ.
ಈ ಮಾಹಿತಿಯನ್ನು ಅರ್ಹ ಮಹಿಳೆಯರಿಗೆ ತಲುಪಿಸಿ, ಅವರು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಲು ಪ್ರೋತ್ಸಾಹಿಸುವಂತೆ ಅಮ್ಮ ಫೌಂಡೇಷನ್‌ನ ಸ್ಥಾಪಕರಾದ ಸುಧಾಕರ್ ಎಸ್ ಶೆಟ್ಟಿ ಮನವಿ ಮಾಡಿದ್ದಾರೆ.

Categories
ಕೊಪ್ಪ ಚಿಕ್ಕಮಗಳೂರು ಶೃಂಗೇರಿ

ಕೊಪ್ಪ ಜೆಡಿಎಸ್ ಪಕ್ಷಕ್ಕೆ ನೂತನ ಸಾರಥಿಗಳು!

ಕೊಪ್ಪ ಜೆಡಿಎಸ್ ಪಕ್ಷಕ್ಕೆ ನೂತನ ಸಾರಥಿಗಳು!
– ರಾಜ್ಯ ಜೆಡಿಎಸ್ ಉಪಾಧ್ಯಕ್ಷರಾದ ಸುಧಾಕರ್ ಶೆಟ್ಟಿ ನೇತೃತ್ವದಲ್ಲಿ ಪದಾಧಿಕಾರಿಗಳ ಆಯ್ಕೆ
– ಕೊಪ್ಪ ತಾಲೂಕಲ್ಲಿ ಜೆಡಿಎಸ್ ಬಲಪಡಿಸಲು ಮುಖಂಡರ ಪ್ಲಾನ್

NAMMUR EXPRESS NEWS
ಕೊಪ್ಪ: ಶೃಂಗೇರಿ ಕ್ಷೇತ್ರ ಜೆಡಿಎಸ್ ಪಕ್ಷದ ಕೊಪ್ಪ ಬಾಳಗಡಿಯ ಜೆಡಿಎಸ್ ಕಚೇರಿಯಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷ ಎ ಎನ್ ರಾಮಸ್ವಾಮಿ ಕಗ್ಗ ಅಧ್ಯಕ್ಷತೆಯಲ್ಲಿ ಸರ್ವಾನುಮತದಿಂದ ಪಕ್ಷದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಜೆಡಿಎಸ್ ಕೊಪ್ಪ ತಾಲೂಕು ಉಪಾಧ್ಯಕ್ಷರಾಗಿ ವಾಸಪ್ಪ ಕುಂಚೂರು, ಕೊಪ್ಪ ತಾಲೂಕು ಕಸಬಾ ಹೋಬಳಿಯ ಅಧ್ಯಕ್ಷರಾಗಿ ಪೂರ್ಣೇಶ್ ಕೂಸುಗೊಳ್ಳಿ, ಕಸಬಾ ಹೋಬಳಿಯ ಪ್ರಧಾನ ಕಾರ್ಯದರ್ಶಿಯಾಗಿ ಮಂಜುನಾಥ ಬಚ್ಚಣಿಕೆ, ಕೊಪ್ಪ ನಗರ ಘಟಕದ ಅಧ್ಯಕ್ಷರಾಗಿ ಚಂದ್ರಶೇಖರ್ ಕೊಪ್ಪ ರವರನ್ನು ಆಯ್ಕೆಮಾಡಲಾಯಿತು.
ರಾಜ್ಯ ಜೆಡಿಎಸ್ ಉಪಾಧ್ಯಕ್ಷರಾದ ಸುಧಾಕರ್ ಶೆಟ್ಟಿ ಅವರ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ಶೃಂಗೇರಿ ಕ್ಷೇತ್ರಧ್ಯಕ್ಷರಾದ ದಿವಾಕರ್ ಭಟ್ ಸೇರಿದಂತೆ ಜೆಡಿಎಸ್ ಮುಖಂಡರುಗಳು ಹಾಗೂ ತಾಲ್ಲೂಕು ಸಮಿತಿಯ ಸದಸ್ಯರುಗಳು ಹಾಜರಿದ್ದರು.