Categories
ದಿನ ರಾಶಿ ಭವಿಷ್ಯ ರಾಜ್ಯ

ಈ ದಿನದ ರಾಶಿ ಭವಿಷ್ಯ ಹೇಗಿದೆ?

ಈ ದಿನದ ರಾಶಿ ಭವಿಷ್ಯ ಹೇಗಿದೆ?
– ಶನಿ ದೇವರ ಕೃಪೆಯಿಂದ ಯಾವ ರಾಶಿಯವರಿಗೆ ಲಾಭ? ಯಾವ ರಾಶಿಯವರಿಗೆ ನಷ್ಟ?

NAMMUR EXPRESS NEWS
ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು?

** ಮೇಷ ರಾಶಿ :
​ಮೇಷ ರಾಶಿಯವರು ಇಂದು ಕೆಲವು ಅಹಿತಕರ ಸುದ್ದಿಗಳನ್ನು ಸ್ವೀಕರಿಸಬಹುದು. ಕೆಲವು ಪ್ರಮುಖ ಕೆಲಸಗಳಲ್ಲಿ ಅನಗತ್ಯ ವಿಳಂಬವಾಗಬಹುದು. ವ್ಯಾಪಾರದಲ್ಲಿ ಲಾಭವಿದೆ. ಭೂಮಿ, ಕಟ್ಟಡಗಳು ಮತ್ತು ವಾಹನಗಳಿಗೆ ಸಂಬಂಧಿಸಿದ ಕೆಲಸಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ. ನಿಮ್ಮ ಕೆಲಸಗಳನ್ನು ಬೇರೆಯವರಿಗೆ ಬಿಟ್ಟುಕೊಡಬೇಡಿ.

** ವೃಷಭ ರಾಶಿ :
ಇಂದು ಉದ್ಯೋಗದಲ್ಲಿ ಬಡ್ತಿ ಸಿಗುವ ಸಾಧ್ಯತೆ ಇದೆ. ವ್ಯಾಪಾರದಲ್ಲಿ ಹೊಸ ಸಹವರ್ತಿಗಳು ರೂಪುಗೊಳ್ಳುತ್ತಾರೆ. ನಿಮ್ಮ ವ್ಯಾಪಾರದ ಪರಿಸ್ಥಿತಿ ಸುಧಾರಿಸುತ್ತದೆ. ಹೊಸ ಕೈಗಾರಿಕೆಗಳಲ್ಲಿ ಹೆಚ್ಚು ಕಾರ್ಯನಿರತತೆ ಇರುತ್ತದೆ. ಸರ್ಕಾರದ ನೆರವಿನಿಂದ ಯಾವುದೇ ಪ್ರಮುಖ ಕಾರ್ಯಗಳಲ್ಲಿ ಅಡೆತಡೆಗಳು ನಿವಾರಣೆಯಾಗುತ್ತವೆ.

** ಮಿಥುನ ರಾಶಿ :
ಇಂದು ನಿಮ್ಮ ಧೈರ್ಯ ಮತ್ತು ಶೌರ್ಯ ಹೆಚ್ಚಾಗುತ್ತದೆ. ಕೆಲವು ಅಪಾಯಕಾರಿ ಕೆಲಸಗಳಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ. ಬಲದೊಂದಿಗೆ ಸಂಬಂಧಿಸಿದ ಜನರು ಗಮನಾರ್ಹ ಯಶಸ್ಸನ್ನು ಪಡೆಯುತ್ತಾರೆ. ವ್ಯಾಪಾರದಲ್ಲಿ ಹೊಸ ಪ್ರಯೋಗಗಳು ಲಾಭದಾಯಕವಾಗುತ್ತವೆ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಆಸಕ್ತಿ ಹೆಚ್ಚಲಿದೆ. ಉದ್ಯೋಗದಲ್ಲಿ ಬಡ್ತಿಯೊಂದಿಗೆ ಪ್ರಮುಖ ಜವಾಬ್ದಾರಿಯನ್ನು ನೀವು ಪಡೆಯುತ್ತೀರಿ.

** ಕರ್ಕಾಟಕ ರಾಶಿ :
ಇಂದು ನಿಮ್ಮ ಬಾಕಿಯಿರುವ ಕೆಲಸಗಳು ಪೂರ್ಣಗೊಳ್ಳುವ ಸಾಧ್ಯತೆಯಿದೆ. ಕಾರ್ಯಕ್ಷೇತ್ರದಲ್ಲಿ ಎದುರಾಗುವ ಅಡೆತಡೆಗಳು ಕಡಿಮೆಯಾಗುತ್ತವೆ. ಹೊಸ ಆದಾಯದ ಮೂಲಗಳು ಹೆಚ್ಚಾಗುತ್ತವೆ. ಶಿಕ್ಷಣ, ಆರ್ಥಿಕ ಮತ್ತು ಕೃಷಿ ಕ್ಷೇತ್ರದಲ್ಲಿ ಕೆಲಸ ಮಾಡುವ ಜನರು ಲಾಭದಾಯಕವಾಗಲಿದೆ. ವ್ಯಾಪಾರ ಕ್ಷೇತ್ರದಲ್ಲಿ ಕೆಲಸ ಮಾಡುವ ಜನರಿಗೆ ಹೊಸ ವ್ಯವಹಾರದಲ್ಲಿ ಆಸಕ್ತಿ ಹೆಚ್ಚಾಗಲಿದೆ.

** ಸಿಂಹ ರಾಶಿ :
ಇಂದು ದಿನವು ಕೆಲವು ಒಳ್ಳೆಯ ಸುದ್ದಿಗಳೊಂದಿಗೆ ಪ್ರಾರಂಭವಾಗಲಿದೆ. ಕೆಲಸದ ಸ್ಥಳದಲ್ಲಿ ಅನಗತ್ಯ ಓಡಾಟ ಇರುತ್ತದೆ. ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸಲು ನಿಮಗೆ ಅವಕಾಶ ಸಿಗಲಿದೆ. ವ್ಯವಹಾರದಲ್ಲಿ ನಿಮ್ಮ ಬುದ್ಧಿವಂತಿಕೆಯು ಯಾವುದೇ ದೊಡ್ಡ ನಷ್ಟವನ್ನು ತಡೆಯುತ್ತದೆ. ಉದ್ಯೋಗದಲ್ಲಿ ಕೆಲಸ ಮಾಡುವ ಜನರು ತಮ್ಮ ಸಿಹಿ ಸ್ವಭಾವ ಮತ್ತು ಸಿಹಿ ಮಾತುಗಳಿಗಾಗಿ ತಮ್ಮ ಬಾಸ್‌ನಿಂದ ವಿಶೇಷ ಮೆಚ್ಚುಗೆಯನ್ನು ಪಡೆಯುತ್ತಾರೆ.

** ಕನ್ಯಾ ರಾಶಿ :
ಕನ್ಯಾ ರಾಶಿಯವರಿಗೆ ಇಂದು ನಿಮಗೆ ಸಂತೋಷ ಮತ್ತು ಸಮೃದ್ಧ ದಿನವಾಗಿರುತ್ತದೆ. ಪ್ರಮುಖ ಕಾರ್ಯಗಳಲ್ಲಿ ಬುದ್ಧಿವಂತಿಕೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಿ. ವಿರೋಧಿಗಳು ಪ್ರಗತಿಯ ಬಗ್ಗೆ ಅಸೂಯೆಪಡುತ್ತಾರೆ. ಸಾಮಾಜಿಕ ಪ್ರತಿಷ್ಠೆಯ ಕ್ಷೇತ್ರದಲ್ಲಿ ಉನ್ನತ ಸ್ಥಾನದಲ್ಲಿರುವ ಜನರೊಂದಿಗೆ ಸಂಪರ್ಕವನ್ನು ಮಾಡಲಾಗುವುದು. ವ್ಯಾಪಾರದಲ್ಲಿ ಪಾಲುದಾರರಾಗುವಿರಿ.

** ತುಲಾ ರಾಶಿ :
ಇಂದು ದೂರದ ಪ್ರಯಾಣವನ್ನು ತಪ್ಪಿಸಿ ಇಲ್ಲದಿದ್ದರೆ ನೀವು ಪ್ರಯಾಣಿಸುವಾಗ ಗಾಯಗೊಳ್ಳಬಹುದು. ಕೆಲಸದ ಪ್ರದೇಶದಲ್ಲಿ ಯಾವುದೇ ಪ್ರಮುಖ ಯೋಜನೆಯ ಜವಾಬ್ದಾರಿಯನ್ನು ನಿಮ್ಮಿಂದ ಹಿಂಪಡೆಯಬಹುದು. ಜಗಳಗಳಿಂದ ದೂರವಿರಿ. ವ್ಯವಹಾರದಲ್ಲಿ, ಲಾಭ ಅಥವಾ ನಷ್ಟ ಸಾಧ್ಯ. ಮದ್ಯಪಾನ ಮಾಡಿ ನಂತರ ವಾಹನ ಚಲಾಯಿಸುವುದು ಮಾರಣಾಂತಿಕವಾಗಬಹುದು.

** ವೃಶ್ಚಿಕ ರಾಶಿ :
ಇಂದು ನೀವು ಉದ್ಯೋಗದಲ್ಲಿ ಬಡ್ತಿಯ ಬಗ್ಗೆ ಒಳ್ಳೆಯ ಸುದ್ದಿಯನ್ನು ಪಡೆಯುತ್ತೀರಿ. ಯಾವುದೇ ಪ್ರಮುಖ ಕೆಲಸದಲ್ಲಿ ಅಡೆತಡೆಗಳು ಕುಟುಂಬದ ಹಿರಿಯ ಸದಸ್ಯರ ಸಹಾಯದಿಂದ ದೂರವಾಗುತ್ತವೆ. ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡುವವರಿಗೆ ಅಧೀನ ಅಧಿಕಾರಿಗಳನ್ನು ಹೊಂದಿರುವ ಸಂತೋಷ ಸಿಗುತ್ತದೆ. ವ್ಯಾಪಾರ ಕ್ಷೇತ್ರದಲ್ಲಿ ಸಮರ್ಪಣಾ ಮನೋಭಾವದಿಂದ ಕೆಲಸ ಮಾಡಿ.

** ಧನಸ್ಸು ರಾಶಿ :
ಇಂದು ನಿಮಗೆ ಧನಾತ್ಮಕ ದಿನವಾಗಿರುತ್ತದೆ. ಭಾವನೆಗಳನ್ನು ಹತೋಟಿಯಲ್ಲಿಟ್ಟುಕೊಳ್ಳಿ. ಸಾಮಾಜಿಕ ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ನಿಮ್ಮ ಮೇಲೆ ನಂಬಿಕೆ ಇರಲಿ. ಯಾರಿಂದಲೂ ದಾರಿ ತಪ್ಪಬೇಡಿ. ಕೆಲಸದ ಕ್ಷೇತ್ರದಲ್ಲಿ ಯಾವುದೇ ದೊಡ್ಡ ನಿರ್ಧಾರವನ್ನು ಹಠಾತ್ತನೆ ತೆಗೆದುಕೊಳ್ಳುವುದು ಸಮಸ್ಯೆಗಳನ್ನು ಹೆಚ್ಚಿಸಬಹುದು. ನಿಮ್ಮ ವಿರೋಧಿಗಳ ಪಿತೂರಿಗಳ ಬಗ್ಗೆ ಎಚ್ಚರದಿಂದಿರಿ.

** ಮಕರ ರಾಶಿ :
ಇಂದು ದಿನವು ವಿಪರೀತ ಖರ್ಚಿನಿಂದ ಪ್ರಾರಂಭವಾಗಲಿದೆ. ಕೆಲವು ಅಶುಭ ಸುದ್ದಿಗಳನ್ನು ಪಡೆಯುವ ಸಾಧ್ಯತೆಗಳಿವೆ. ಕೆಲಸದ ಪ್ರದೇಶದಲ್ಲಿ ಪ್ರಮುಖ ಕೆಲಸಗಳಲ್ಲಿ ವಿಳಂಬವಾಗಬಹುದು. ಅಧೀನದಲ್ಲಿರುವವರು ವ್ಯವಹಾರದಲ್ಲಿ ಮೋಸ ಮಾಡಬಹುದು. ಬೇರೆ ಪ್ರಯಾಣಕ್ಕೆ ಹೋಗುವ ಸಾಧ್ಯತೆಗಳಿವೆ. ಪ್ರಯಾಣ ಮಾಡುವಾಗ ಜಾಗರೂಕರಾಗಿರಿ ಮತ್ತು ಜಾಗರೂಕರಾಗಿರಿ.

** ಕುಂಭ ರಾಶಿ :
ಇಂದು, ಕೆಲಸದಲ್ಲಿ ನಿಮ್ಮ ಹಿರಿಯ ಸಹೋದ್ಯೋಗಿಗಳೊಂದಿಗೆ ಹೆಚ್ಚಿನ ಸಮನ್ವಯವನ್ನು ರಚಿಸಲು ಪ್ರಯತ್ನಿಸಿ. ವ್ಯಾಪಾರಕ್ಕೆ ಸಂಬಂಧಿಸಿದ ವ್ಯಕ್ತಿಯು ಆರ್ಥಿಕ ಲಾಭವನ್ನು ಪಡೆಯುವ ಸಾಧ್ಯತೆಯಿದೆ. ವ್ಯವಹಾರದಲ್ಲಿ ಕೆಲವು ಘರ್ಷಣೆಗಳು ಉಂಟಾಗಬಹುದು. ಉದ್ಯೋಗದಲ್ಲಿ ಅಧೀನ ಅಧಿಕಾರಿಗಳೊಂದಿಗೆ ಆತ್ಮೀಯತೆ ಹೆಚ್ಚಲಿದೆ.

** ಮೀನ ರಾಶಿ :
ಇಂದು ನಿಮಗೆ ಲಾಭ ಮತ್ತು ಪ್ರಗತಿಯ ದಿನವಾಗಿರುತ್ತದೆ. ಕೆಲಸ ಹಂತ ಹಂತವಾಗಿ ನಡೆಯಲಿದೆ ಯಾರನ್ನೂ ಅತಿಯಾಗಿ ನಂಬಬೇಡಿ. ನಿಮ್ಮ ಮೇಲೆ ನಂಬಿಕೆ ಇರಲಿ. ಕೌಟುಂಬಿಕ ಸಮಸ್ಯೆಗಳಿಂದ ಮಾನಸಿಕ ಒತ್ತಡ ಹೆಚ್ಚಾಗಬಹುದು. ತಾಳ್ಮೆಯಿಂದಿರಿ ಮತ್ತು ಯಾರೊಂದಿಗೂ ಕಟುವಾದ ಮಾತುಗಳನ್ನು ಹೇಳಬೇಡಿ. ಯೋಜಿತ ರೀತಿಯಲ್ಲಿ ಕೆಲಸ ಮಾಡಿ. ಕೆಲಸದ ಕ್ಷೇತ್ರದಲ್ಲಿ ನಿಮ್ಮ ಸಹೋದರ ಸಹೋದರಿಯರ ಬೆಂಬಲವನ್ನು ನೀವು ಮುಂದುವರಿಸುತ್ತೀರಿ.

Categories
ತೀರ್ಥಹಳ್ಳಿ ಮಲ್ನಾಡ್

ತೀರ್ಥಹಳ್ಳಿ ಬಾಳೆಬೈಲಿನಲ್ಲಿ ಆಕ್ರಮ ಗೋಸಾಗಾಟ…!

ತೀರ್ಥಹಳ್ಳಿ ಬಾಳೆಬೈಲಿನಲ್ಲಿ ಆಕ್ರಮ ಗೋಸಾಗಾಟ…!
* ರಾತ್ರಿ ವೇಳೆ ಪೋಲಿಸ್ ಠಾಣೆ ಎದುರು ಧರಣಿಗೆ ಕೂತ ಯುವಕರು
* ಮಲೆನಾಡಲ್ಲಿ ಹಬ್ಬಿದ ಅಕ್ರಮ ಗೋ ಸಾಗಣೆ ದಂಧೆ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ಬಾಳೆಬೈಲು ಸಮೀಪ ಅಕ್ಟೋಬರ್ 23 ರಂದು ರಾತ್ರಿ ಸುಮಾರು 11:30 ಸಮಯದಲ್ಲಿ ಅಕ್ರಮ ಗೋಸಾಗಾಟದ ಕೃತ್ಯಗಳಲ್ಲಿ ಹಿಂದೆ ಹಲವಾರು ಬಾರಿ ಸಿಕ್ಕಿಬಿದ್ದಿದ್ದ ಮಾಳೂರು ಶರತ್ ಎಂಬ ವ್ಯಕ್ತಿ ಇದೀಗ ಮತ್ತೆ ಹಳೆಯ ದಂಧೆಗೆ ಕೈ ಹಾಕಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಮೊನ್ನೆ ಮೊನ್ನೆ ತಾನೆ ಅಕ್ರಮ ಗೋಸಾಗಾಟ ಮಾಡಿದ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ ಈತನ ವಿರುದ್ಧ ಈಗ ಮತ್ತೆ ಅಕ್ರಮ ಗೋ ಸಾಗಾಟ ಪ್ರಕರಣ ದಾಖಲಾಗಿದೆ.
ಪೊಲೀಸರು ಮತ್ತು ಗೋ ರಕ್ಷಕರು ಈತನ ಮೊಬೈಲ್ ಪರಿಶೀಲನೆ ವೇಳೆ ಆಘಾತಕಾರಿ ಮಾಹಿತಿಗಳು ಹೊರಬಿದ್ದಿದೆ, ಗೋ ರಕ್ಷಕರ ಹತ್ಯೆ ಹುನ್ನಾರ, ಆಂತರಿಕ ಸಂಚುಗಳ ಶಂಕೆ ಮತ್ತಷ್ಟು ಗಂಭೀರವಾಗಿದೆ.ಈತನ ಮೊಬೈಲ್‌ನಲ್ಲಿ ದೊರೆತ ಫೋಟೋಗಳು ಹಾಗೂ ಸಂವಹನ ದಾಖಲೆಗಳು, ಸಂಶಯಾಸ್ಪದ ಸಂಪರ್ಕವನ್ನು ತೋರಿಸುತ್ತಿವೆ. ಜನಪ್ರತಿನಿಧಿಗಳೂ, ಸಾಮಾಜಿಕ ಮುಖಂಡರೂ ಈ ಜಾಲದಲ್ಲಿ ಶಾಮೀಲಾಗಿದ್ದಾರೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿವೆ.
ಗೋಸಾಗಾಟದ ಹೆಸರಿನಲ್ಲಿ ನಡೆಯುತ್ತಿರುವ ಈ ದಂಧೆ ಕೇವಲ ಆರ್ಥಿಕ ಲಾಭಕ್ಕಾಗಿ ಅಲ್ಲ, ರಾಜಕೀಯ ಲಾಭಕ್ಕೂ ಪೂರಕವಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಪೊಲೀಸರು ಈತನಿಂದ ವಶಪಡಿಸಿಕೊಂಡ ಮೊಬೈಲ್ ಡೇಟಾ, ಗೋಸಾಗಾಟದ ಹಿಂದಿರುವ ‘ಮಾಸ್ಟರ್ ಮೈಂಡ್’ ಹುಡುಕಾಟ ತೀವ್ರಗೊಂಡಿದ್ದು, ಹಲವು ಅನುಮಾನಿತರು ಈಗ ಪೊಲೀಸರ ಕಣ್ಣಿನ ನಂಟಿನಲ್ಲಿ ಇದ್ದಾರೆ.ಹಿಂದೆ ಕಳ್ಳತನ ಪ್ರಕರಣದಲ್ಲೂ ಇದೇ ವ್ಯಕ್ತಿ ಸಿಕ್ಕಿಬಿದ್ದಿದ್ದ. ಈಗ ಮತ್ತೆ ಇದೇ ರೀತಿಯ ಕೃತ್ಯಕ್ಕೆ ಕೈ ಹಾಕಿರುವುದು ಆತ ಏಕಾಂಗಿಯಾಗಿ ಕೆಲಸ ಮಾಡುತ್ತಿಲ್ಲ ಎಂಬುವುದು ತಿಳಿದು ಬರುತ್ತಿದೆ.
ಪೊಲೀಸ್ ಇಲಾಖೆಯು ಇವನನ್ನು ಮತ್ತೆ ಎರಡೇ ದಿನಕ್ಕೆ ನಿರಪರಾಧಿ ಎಂದು ಘೋಷಣೆ ಮಾಡಿ ಹೊರಬಿಡುತ್ತಾರೆ ಎಂಬ ನಿರಾಸೆಯನ್ನು ಹೊತ್ತ ಗೋ ಸಂರಕ್ಷಕ ಯುವಕರು ತೀರ್ಥಹಳ್ಳಿ ಪೊಲೀಸ್ ಠಾಣೆ ಎದುರು ರಾತ್ರಿ ಧರಣಿಗೆ ಕುಳಿತಿದ್ದರು. ನಂತರ ಪಿಎಸ್ಐ ಅವರು ಯುವಕರನ್ನು ಅವರ ಪ್ರತಿಭಟನೆಯನ್ನ ಶಾಂತ ಗೊಳಿಸಿ ಅಶೋಕ್ ಐಲ್ಯಾಂಡ್ ವಾಹನವನ್ನು ಮತ್ತು ಗೋ ಕಳ್ಳನನ್ನು ಕಷ್ಟಡಿಗೆ ತೆಗೆದುಕೊಂಡು ಎಫ್ಐಆರ್ ದಾಖಲಿಸಿದ್ದಾರೆ.

ಸ್ಥಳೀಯರು ಹೇಳೋದೇನು..?

ಬಿಜೆಪಿಯವರು ಮೊನ್ನೆ ಮೊನ್ನೆ ಅಷ್ಟೇ ಗೋ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಘೋಷಣೆ ಕೂಗಿ ಪ್ರತಿಭಟನೆ ಮಾಡಿದ ಹೆಜ್ಜೆಯ ಗುರುತುಗಳೇ ಇನ್ನು ಅಳಿಸಿಲ್ಲ ಇಂತಹ ಸ್ಥಿತಿಯಲ್ಲಿ ಮತ್ತೆ ಗೋ ಅಕ್ರಮ ಮಾರಾಟ ಮುನ್ನೆಲೆಗೆ ಬರುತ್ತಿರುವುದು ತೀರಾ ಅಸಹಜ ಪ್ರಕ್ರಿಯೆಯಾಗಿದೆ. ಸ್ಥಳೀಯರು ಪೊಲೀಸರ ಕ್ರಮವನ್ನು ಸ್ವಾಗತಿಸಿ, ಈಗ ಮತ್ತೆ ಸಿಕ್ಕಿಬಿದ್ದ ವ್ಯಕ್ತಿಗೆ ಹಿಂದಿನ ಬಾರಿ ಕಾನೂನು ತೀವ್ರ ಶಿಕ್ಷೆ ನೀಡದಿರುವುದೇ ಈಗಿನ ಪುನರಾವರ್ತನೆಗೆ ಕಾರಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಇಂತಹವರು ಕೇವಲ ಕಳ್ಳರಲ್ಲ, ಸಮಾಜದ ನೈತಿಕತೆಯ ಕಳ್ಳರು. ಕಠಿಣ ಕ್ರಮದಷ್ಟೇ ಈ ರೀತಿ ಅಕ್ರಮ ದಂಧೆಗಳನ್ನು ತಡೆಯಬಹುದು ಎಂದು ಹಿರಿಯ ನಾಗರಿಕರೊಬ್ಬರು ವಿಷಾದಿಸಿದ್ದಾರೆ.ಒಮ್ಮೆ ಸಿಕ್ಕಿಬಿದ್ದರೂ, ಮತ್ತೆ ಹಳೆಯ ದಂಧೆಗೆ ಕೈ ಹಾಕಿದ ವ್ಯಕ್ತಿಯ ಈ ಕೃತ್ಯ ಅಕ್ರಮ ಗೋಸಾಗಾಟದ ಆಳವಾದ ಜಾಲವನ್ನು ಬಹಿರಂಗಪಡಿಸಿದೆ.

Categories
ತೀರ್ಥಹಳ್ಳಿ

ಟಾಪ್ 3 ನ್ಯೂಸ್ ತೀರ್ಥಹಳ್ಳಿ

ಟಾಪ್ 3 ನ್ಯೂಸ್ ತೀರ್ಥಹಳ್ಳಿ

ತೀರ್ಥಹಳ್ಳಿ: ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ..!!
– ತೀರ್ಥಹಳ್ಳಿ : ಮೇಗರವಳ್ಳಿ ಬಳಿ ಕಾರು ಅಪಘಾತ!
– ತೀರ್ಥಹಳ್ಳಿ: ದಲಿತ ಹುಡುಗನ ಮೇಲೆ ಹಲ್ಲೆ, ಪಟಾಕಿ ಮಳಿಗೆಗೆ ಬೆಂಕಿ ಇಡುವುದಾಗಿ ಬೆದರಿಕೆ!

NAMMUR EXPRESS NEWS
ತೀರ್ಥಹಳ್ಳಿ : ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಕಾರೊಂದು ಡಿಕ್ಕಿ ಹೊಡೆದ ಘಟನೆ ತೀರ್ಥಹಳ್ಳಿ ಕೊಪ್ಪ ಮಾರ್ಗ ಮಧ್ಯೆಯ ಕುಂಬಾರದಡಿಗೆ ಬಳಿ ನಡೆದಿದೆ. ತೀರ್ಥಹಳ್ಳಿಯ ಕುರುವಳ್ಳಿ ಸಮೀಪದ ಕುಂಬಾರದಡಿಗೆ ಬಳಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿರುವ ಪರಿಣಾಮ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಕೊಪ್ಪ ಭಾಗದಿಂದ ತೀರ್ಥಹಳ್ಳಿಗೆ ಬರುವಾಗ ಈ ಅವಘಡ ಸಂಭವಿಸಿದೆ. ವಿದ್ಯುತ್ ಕಂಬ ಮುರಿದು ಬಿದ್ದಿದೆ. ಚಾಲಕನ ನಿಯಂತ್ರಣ ತಪ್ಪಿ ಈ ಅಪಘಾತ ಸಂಭವಿಸಿರಬಹುದು ಎಂದು ಹೇಳಲಾಗುತ್ತಿದ್ದು ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ಜರುಗಿದೆ..

– ತೀರ್ಥಹಳ್ಳಿ : ಮೇಗರವಳ್ಳಿ ಬಳಿ ಕಾರು ಅಪಘಾತ!

ತೀರ್ಥಹಳ್ಳಿ : ತಾಲೂಕಿನ ಆಗುಂಬೆ ಹೋಬಳಿಯ ಮೇಗರವಳ್ಳಿ ತಿರುವಿನಲ್ಲಿ ಕಾರೊಂದು ಅಪಘಾತಕ್ಕಿಡಾಗಿದೆ. ಶಿವಮೊಗ್ಗದಿಂದ ಮಂಗಳೂರು ಮಾರ್ಗವಾಗಿ ಚಲಿಸುತಿದ್ದ ಕಾರು ಮೇಗರವಳ್ಳಿ ತಿರುವಿನಲ್ಲಿ ಚಾಲಕನ ಹಿಡಿತಕ್ಕೆ ಸಿಗದೇ ಪಲ್ಟಿಯಾಗಿದ್ದು ನಾಲ್ಕು ಚಕ್ರ ಮೇಲಾಗಿ ಬಿದ್ದ ಪರಿಣಾಮ ಕಾರು ಸಂಪೂರ್ಣ ಜಖಂ ಆಗಿದೆ ಈ ಘಟನೆಯಲ್ಲಿ ಕಾರಿನಲ್ಲಿದ್ದವರು ಉಡುಪಿ ಮೂಲದವರಾಗಿದ್ದು ಅದೃಷ್ಟವಶಾತ್ ಪಾರಾಗಿದ್ದಾರೆ. ತೀರ್ಥಹಳ್ಳಿಯ ಜೆ ಸಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಸದ್ಯ ಆಗುಂಬೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಜರುಗಿದೆ.

– ತೀರ್ಥಹಳ್ಳಿ: ದಲಿತ ಹುಡುಗನ ಮೇಲೆ ಹಲ್ಲೆ, ಪಟಾಕಿ ಮಳಿಗೆಗೆ ಬೆಂಕಿ ಇಡುವುದಾಗಿ ಬೆದರಿಕೆ!

ತೀರ್ಥಹಳ್ಳಿ : ತಾಲೂಕಿನ ಸಾರ್ವಜನಿಕ ಕ್ರೀಡಾಂಗಣದಲ್ಲಿ ಪಟಾಕಿ ಮಳಿಗೆ ಇಟ್ಟುಕೊಂಡಿದ್ದ ವ್ಯಾಪಾರಿಗಳು ಹಾಗೂ ಕೆಲಸಕ್ಕಿರುವ ದಲಿತ ಹುಡುಗನ ಮೇಲೆ ಕೆಲವು ರಾಜಕೀಯ ಮುಖಂಡ ಜೊತೆಗೆ ಅವರ ತಂಡ ಬೈಕಿನಲ್ಲಿ ಬಂದು ಹಲ್ಲೆ ಮಾಡಿದ್ದು ಅಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಪಟಾಕಿ ಮಳಿಗೆ ಸುಟ್ಟು ಹಾಕುವುದಾಗಿ ಬೆದರಿಕೆ ಹಾಕಿದ್ದು ಬೆಳಕಿಗೆ ಬಂದಿದೆ. ಇನ್ನು ಇಬ್ಬರಿಗೆ ಮೂರ್ನಾಲ್ಕು ಜನರಿಂದ ಹಲ್ಲೆ ಮಾಡಿದ್ದ ಪರಿಣಾಮ ಸರ್ಕಾರಿ ಆಸ್ಪತ್ರೆಗೆ ಹೋದಾಗ ಅವರನ್ನು ತಡೆದಿದ್ದಲ್ಲದೆ ಪೋಷಕರಿಗೂ ಬೆದರಿಕೆ ನೀಡಿದ್ದು, ಈ ಸಂಬಂಧ ಗಾಯಳುಗಳು ಶಿವಮೊಗ್ಗದ ಮ್ಯಾಕ್ಸ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಘಟನೆಯಲ್ಲಿ 50ಗ್ರಾಂ ಚಿನ್ನದ ಚೈನ್ ಹಾಗೂ 1 ಲಕ್ಷ ರು ನಗದು ಕಳೆದಿದ್ದು ಸದ್ಯ ಪೊಲೀಸ್ ವಿಚಾರಣೆ ನಂತರ ಪೂರ್ಣ ಮಾಹಿತಿ ಸಿಗಲಿದೆ.

Categories
ಅಡಿಕೆ-ದರ ಮಲ್ನಾಡ್

ಅಡಿಕೆ ದರ ಎಷ್ಟಿದೆ?

ಅಡಿಕೆ ದರ ಎಷ್ಟಿದೆ?
– ಬೆಟ್ಟೆ ಎಷ್ಟು? ರಾಶಿ ಎಷ್ಟು?

NAMMUR EXPRESS NEWS

ಸರಕು
61199-85200-100007

ಬೆಟ್ಟೆ
61000-76000-76900

ರಾಶಿ
55009-65000-66501

ಗೊರಬಲು
35199-40100-44199

ಹೊಸ ರಾಶಿ
56109-65600-66501

Categories
ಚಿಕ್ಕಮಗಳೂರು ಶೃಂಗೇರಿ

ಗಾಂಧಿಮೈದಾನ ವರ್ತಕರ ನೆರವಿಗೆ ನಿಂತ ವಿಶ್ವನಾಥ್ ಗದ್ದೆಮನೆ

ಗಾಂಧಿಮೈದಾನ ವರ್ತಕರ ನೆರವಿಗೆ ನಿಂತ ವಿಶ್ವನಾಥ್ ಗದ್ದೆಮನೆ

* ಹೊಳೆ ಕರಾಬು ಆದೇಶ ಮಾಡಿ 26 ಅಂಗಡಿಗಳ ನೆಲಸಮ ಮಾಡಿದ್ದ ಜಿಲ್ಲಾಡಳಿತ
* ಅತಂತ್ರ ಸ್ಥಿತಿಗೆ ಬಂದಿದ್ದ ಗಾಂಧಿ ಮೈದಾನ ವರ್ತಕರು

NAMMMUR EXPRESS NEWS
ಶೃಂಗೇರಿ: ಪಟ್ಟದ ಗಾಂಧಿಮೈದಾನದಲ್ಲಿನ ಅಂಗಡಿಗಳ ತೆರವಿನಿಂದ ಅತಂತ್ರವಾಗಿದ್ದ 26 ಕುಟುಂಬಗಳ ನೆರವಿಗೆ ವಿಶ್ವನಾಥ್ ಗದ್ದೆಮನೆ ನಿಂತಿದ್ದಾರೆ.
ಅ.23 ರ ಗುರುವಾರ ಶೃಂಗೇರಿಯಲ್ಲಿ ಗಾಂಧಿಮೈದಾನದ ನೊಂದ ವರ್ತಕರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ ವಿಶ್ವನಾಥ್ ಗದ್ದೆಮನೆ,ನೊಂದ ಕುಟುಂಬಗಳ ಜೊತೆ ಸದಾ ಇರುವುದಾಗಿ ತಿಳಿಸಿದ್ದು, ಅಂಗಡಿಗಳನ್ನು ಕಳೆದುಕೊಂಡ ವರ್ತಕರಿಗೆ ಧನ ಸಹಾಯ ಮಾಡಿದರು.
ವಿಶ್ವನಾಥ್ ಗದ್ದೆಮನೆಯವರು ಮಾಡಿದ ಸಹಾಯ ಸ್ವೀಕರಿಸಿದ ವರ್ತಕರು ದಾನಿಗಳ ಸಹಾಯಕ್ಕೆ ಮತ್ತು ಅವರ ಸಾಂತ್ವನದ ಮಾತುಗಳಿಗೆ ಧನ್ಯವಾದ ತಿಳಿಸಿದರು. ಕಷ್ಟಕಾಲದಲ್ಲಿ ನೆರವಿಗೆ ಬಂದು ಮಾಡಿದ ಈ ಸಹಾಯದಿಂದ ಕುಟುಂಬ ನಿರ್ವಹಣೆಗೆ ಸಹಕಾರಿಯಾಗಿದ್ದು, ಈ ಸಂದರ್ಭದಲ್ಲಿ ಜೊತೆನಿಂತ ಎಲ್ಲರಿಗೂ ಧನ್ಯವಾದ ತಿಳಿಸಿದರು.
ಸ್ವತಃ ವಕೀಲರಾದ ವಿಶ್ವನಾಥ್ ಗದ್ದೆಮನೆಯವರು ವರ್ತಕರ ಕಾನೂನು ಹೋರಾಟದಲ್ಲಿ ಅಗತ್ಯಬಿದ್ದರೆ ಸಹಕರಿಸುವುದಾಗಿ ತಿಳಿಸಿದರು. ಯಾರೂ ಕೂಡ ಈ ಸಂಕಷ್ಟದಿಂದ ಎದೆಗುಂದದೆ ನ್ಯಾಯಕ್ಕಾಗಿ ಹೋರಾಡೋಣ,ಇಷ್ಟು ವರ್ಷಗಳ ನಿಮ್ಮೆಲ್ಲರ ಪರಿಶ್ರಮಕ್ಕೆ ದೇವರು ಒಳಿತನ್ನೇ ಮಾಡುತ್ತಾನೆ ಎಂದು ತಮ್ಮ ಆಶಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡ ಹಾಗೂ ಸಹಕಾರಿ ನಾಯಕ ರಾಮಸ್ವಾಮಿ ಶೆಟ್ಟಿಗದ್ದೆ,ವಿಶ್ವಹಿಂದೂ ಪರಿಷದ್ ಬಜರಂಗದಳ ಶೃಂಗೇರಿ ಜಿಲ್ಲಾಧ್ಯಕ್ಷರಾದ ಸುರೇಶ್, ವಿಶ್ವಹಿಂದೂ ಪರಿಷದ್ ಹಾಸನ ವಿಭಾಗ ಕಾರ್ಯದರ್ಶಿಗಳಾದ ಮಹೇಂದ್ರ,ವಿಶ್ವ ಹಿಂದೂ ಪರಿಷದ್ ಶೃಂಗೇರಿ ಜಿಲ್ಲಾ ಕಾರ್ಯದರ್ಶಿಗಳಾದ ದಿವೀರ್ ಮಲ್ನಾಡ್ ಹಾಗೂ ತಾಲೂಕು ಸಹ ಸಂಯೋಜಕರಾದ ಸಂತೋಷ್ ಕೆರೆಮನೆ ಇವರುಗಳು ಉಪಸ್ಥಿತರಿದ್ದರು.

Categories
ಚಿಕ್ಕಮಗಳೂರು ಮಲ್ನಾಡ್

ಶೃಂಗೇರಿ ಶಾಖಾ ಮಠದ ಪುರುಷೋತ್ತಮ ಭಾರತೀ ಸ್ವಾಮಿಗಳು ವಿಧಿವಶ

ಶೃಂಗೇರಿ ಶಾಖಾ ಮಠದ ಪುರುಷೋತ್ತಮ ಭಾರತೀ ಸ್ವಾಮಿಗಳು ವಿಧಿವಶ

* ಶಿವಗಂಗೆಯಲ್ಲಿರುವ ಶೃಂಗೇರಿ ಶಾಖಾ ಮಠ
* ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಸ್ವಾಮೀಜಿ

NAMMMUR EXPRESS NEWS
ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಶಿವಗಂಗೆಯಲ್ಲಿರುವ ಶೃಂಗೇರಿ ಶಾಖಾಮಠದ ಪುರುಷೋತ್ತಮ ಭಾರತೀ ಸ್ವಾಮೀಜಿ (75) ಇಂದು ವಿಧಿವಶರಾಗಿದ್ದಾರೆ.
ಬಹು ಅಂಗಾಗ ವೈಫಲ್ಯದಿಂದ ಬಳಲುತ್ತಿದ್ದ ಸ್ವಾಮೀಜಿಯವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಆದರೆ ಚಿಕಿತ್ಸೆ ಫಲಿಸದೇ ಇಂದು ಮೃತಪಟ್ಟಿದ್ದಾರೆ. ಇಂದು ಮಧ್ಯಾಹ್ನ 2 ಗಂಟೆಗೆ ಅವರ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ ಎಂದು ಮೂಲಗಳು ತಿಳಿಸಿದೆ.
ಪುರುಷೋತ್ತಮ ಭಾರತೀ ಸ್ವಾಮೀಜಿ ಅವರು ಶೃಂಗೇರಿ ಮಠದ ಉತ್ತರಾಧಿಕಾರಿಯಾಗಿ ನೇಮಕಗೊಂಡವರು. ಅವರನ್ನು ಶೃಂಗೇರಿ ಮಠದ ಭಾರತೀ ತೀರ್ಥ ಸ್ವಾಮೀಜಿ ಅವರು ತಮ್ಮ ಉತ್ತರಾಧಿಕಾರಿಯಾಗಿ ನೇಮಿಸಿದರು ಮತ್ತು ಅವರ ಪಟ್ಟಾಭಿಷೇಕ ಸಮಾರಂಭವು ಏಪ್ರಿಲ್ 2014 ರಲ್ಲಿ ನಡೆದಿತ್ತು.

Categories
ಜಾತಕ ಜ್ಯೋತಿಷ್ಯ ರಾಜ್ಯ

ಹಣ ಆಗಲು ಆಂಜನೇಯನ ಈ ಪೂಜೆ ಮಾಡಿ..!

ಹಣ ಆಗಲು ಆಂಜನೇಯನ ಈ ಪೂಜೆ ಮಾಡಿ..!

– ಧನಲಕ್ಷ್ಮಿ ನಿಲ್ಲಬೇಕಾದರೆ ಈ ವಿಧಾನ ಅನುಸರಿಸಿ…

ಹಣ ಹುಡುಕಿಕೊಂಡು ಓಡುವ ಬದಲು ಆಂಜನೇಯ ದೇವಾಲಯದ ಸಿಂಧೂರವನ್ನು ತೆಗೆದುಕೊಂಡು ನಿಮ್ಮ ಮನೆಯಲ್ಲಿ ಹೀಗೆ ಬರೆಯಿರಿ
ಇಂದಿನ ಯುಗದಲ್ಲಿ ಹಣವಿಲ್ಲದೆ ಏನೂ ಮಾಡಲು ಸಾಧ್ಯವಿಲ್ಲ ಎಂಬ ಮನಸ್ಥಿತಿಗೆ ಬಂದಿದ್ದೇವೆ. ಆ ಹಣ ಸಂಪಾದಿಸಲು ಹಗಲಿರುಳು ಎಷ್ಟೇ ಕಷ್ಟಪಟ್ಟರೂ ಸ್ವಲ್ಪ ಹೆಚ್ಚು ಸಂಪಾದಿಸಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಹಲವು ಕಾರಣಗಳಿದ್ದರೂ ನಮ್ಮಲ್ಲಿ ಹಣ ಕೂಡಿಬರುವುದಿಲ್ಲ, ಜಮಾಯಿಸಿದರೂ ಉಳಿಯುವುದಿಲ್ಲ ಎನ್ನುತ್ತಾರೆ. ಆ ಹಣದ ಆಕರ್ಷಣೆಯನ್ನು ಹೆಚ್ಚಿಸಲು ಕೆಲವು ಮಾಂತ್ರಿಕ ಪರಿಹಾರಗಳಿವೆ. ಅವುಗಳಲ್ಲಿ ಒಂದನ್ನು ನಾವು ಈಗ ಈ ಆಧ್ಯಾತ್ಮಿಕ ಪೋಸ್ಟ್‌ನಲ್ಲಿ ತಿಳಿಯಲಿದ್ದೇವೆ .

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 85489 98564

ತಾಯಿ ಮಹಾಲಕ್ಷ್ಮಿ, ಕುಬೇರ ಮುಂತಾದವರ ಪೂಜೆಯನ್ನು ನಮ್ಮ ಬಳಿಗೆ ತರಲು ಮತ್ತು ಅದನ್ನು ಹೆಚ್ಚಿಸಲು ಮತ್ತು ಉಳಿಸಿಕೊಳ್ಳಲು ಸಾಮಾನ್ಯ ಪರಿಪಾಠ ಎಲ್ಲರಿಗೂ ತಿಳಿದಿದೆ. ಆದರೆ ಆಂಜನೇಯನ ಆರಾಧನೆಯು ನಮ್ಮ ಧನವನ್ನು ಹೆಚ್ಚಿಸಲು, ಸಾಲವನ್ನು ಪಡೆಯಲು, ನಮ್ಮ ಆರೋಗ್ಯವನ್ನು ಸುಧಾರಿಸಲು ಮತ್ತು ಶತ್ರುಗಳ ಬಾಧೆಯಿಲ್ಲದೆ ಶಾಂತಿಯುತವಾಗಿ ಇರಲು ತುಂಬಾ ಶಕ್ತಿಯುತವಾಗಿದೆ ಎಂದು ಹೇಳಲಾಗುತ್ತದೆ. ಅಂತಹ ಆಂಜನೇಯನನ್ನು ಪೂಜಿಸುವ ಮೂಲಕವೇ ನಾವೀಗ ಈ ಹಣದ ಹರಿವಿಗೆ ಪರಿಹಾರ ಮಾಡಿಕೊಳ್ಳಲು ಹೊರಟಿದ್ದೇವೆ.
ಈ ಪೂಜೆಯನ್ನು ಗುರುವಾರ ಅಥವಾ ಶನಿವಾರದಂದು ಮಾಡಬೇಕು ಇದರಿಂದ ಹಣವು ನಮಗೆ ಮುಕ್ತವಾಗಿ ಹರಿಯುತ್ತದೆ . ಈ ಎರಡು ದಿನಗಳಲ್ಲಿ ನಿಮ್ಮ ಆದ್ಯತೆಯ ನಾಲ್ವರನ್ನು ಆಯ್ಕೆಮಾಡಿ. ಈ ದಿನ ನಿಮ್ಮ ಮನೆಯ ಸಮೀಪದ ಆಂಜನೇಯರ ದೇವಸ್ಥಾನಕ್ಕೆ ಹೋಗಿ ಆಂಜನೇಯನ ಮುಂದೆ ಎರಡು ತಂಬಿಟ್ಟುಗಳನ್ನು ಇಟ್ಟು ಅದರಲ್ಲಿ ತುಪ್ಪ ಸುರಿದು ಬತ್ತಿ ಇಟ್ಟು ದೀಪ ಹಚ್ಚಿ ಆ ದೀಪದ ಮುಂದೆ ಕುಳಿತು ನಿಮ್ಮ ಋಣ ಸಮಸ್ಯೆ ಏನೇ ಇರಲಿ ಎಂದು ಮನಃಪೂರ್ವಕವಾಗಿ ಪ್ರಾರ್ಥಿಸಿ. ಅಥವಾ ಹಣಕಾಸಿನ ಅಗತ್ಯವಿರಬಹುದು, ಅದನ್ನು ಪರಿಹರಿಸಲಾಗುವುದು.

ನಂತರ ಆಂಜನೇಯನ ದೇವಸ್ಥಾನದಲ್ಲಿ ಸೆಂಟೂರವನ್ನು ಅರ್ಪಿಸಲಾಗುವುದು. ನೀವು ಈ ಕೇಸರಿ ಕುಂಕುಮವನ್ನು ವೀಳ್ಯದೆಲೆಯಲ್ಲಿ ತೆಗೆದುಕೊಳ್ಳಬೇಕು ಮತ್ತು ಕೈಯಲ್ಲಿ ಅಲ್ಲ. ಆಂಜನೇಯ ದೇವಸ್ಥಾನದಲ್ಲಿ ಅವರಿಗೆ ವೀಳ್ಯದೆಲೆಯನ್ನು ಕಡ್ಡಾಯವಾಗಿ ತೊಡಿಸಿ, ಹಾಗೂ ವೀಳ್ಯದೆಲೆಯನ್ನು ಕೇಳಿ ಮನೆಗೆ ತಗೆದುಕೊಳ್ಳಿ. ಈ ವೀಳ್ಯದೆಲೆಯನ್ನು ಪೂಜಾ ಕೋಣೆಯಲ್ಲಿ ಇಟ್ಟು ದೀಪವನ್ನು ಹಚ್ಚಿ ಪೂಜಿಸಿ.

ಈಗ ಈ ಶತಾಧಿಪತಿಯೊಂದಿಗೆ ನೀವು ಹಣವನ್ನು ಇಡುವ ಬೀರುವಿನಲ್ಲಿ ಅಥವಾ ತಿಜೋರಿನ ಕೆಳಭಾಗದಲ್ಲಿ ಸ್ವಸ್ತಿಕ ಚಿಹ್ನೆಯನ್ನು ಎಳೆಯಿರಿ. ನಂತರ ಕೇಸರಿ ಕುಂಕುಮವನ್ನು ಅನ್ನು ಅದರ ಮೇಲೆ ಇರಿಸಿ. ಬಿರೋ ಆಗಿದ್ದರೆ ಸ್ವಸ್ತಿಕ್ ಚಿಹ್ನೆಯನ್ನು ಬಿಡಿಸಿ ಅದರ ಮೇಲೆ ಹಣ ಹಾಕಿ. ಮುಂದೆ ಮನೆಯ ಅನ್ನದ ಪಾತ್ರೆ. ಹೀಗಾಗಿ ಬಡತನ ಎಂಬ ಪದಕ್ಕೆ ಮನೆಯಲ್ಲಿ ಅವಕಾಶವಿಲ್ಲ.

ಮೂರನೆಯದಾಗಿ, ನೀವು ಉಪ್ಪಿನ ಜಾಡಿಯನ್ನು ತೆಗೆದುಕೊಂಡು ಅದರ ಕೆಳಗೆ ಉಪ್ಪಿನ ಜಾಡಿಯನ್ನು ಇಟ್ಟು, ಸ್ವಸ್ತಿಕ ಚಿಹ್ನೆಯನ್ನು ಬಿಡಿಸಿ ಅದರ ಮೇಲೆ ಉಪ್ಪು ಹಾಕಿದರೆ, ನಿಮ್ಮ ಎಲ್ಲಾ ಸಾಲದ ಸಮಸ್ಯೆಗಳು ಶೀಘ್ರದಲ್ಲೇ ಪರಿಹಾರವಾಗುವ ಸಾಧ್ಯತೆಗಳಿವೆ. ಈ ಮೂರು ಸ್ಥಳಗಳಲ್ಲಿ ಬರೆದಿರುವ ಸ್ವಸ್ತಿಕ ಚಿಹ್ನೆಯನ್ನು ನೀವು ಪ್ರತಿ ವಾರ ಅಳಿಸಬೇಕು ಮತ್ತು ಅದನ್ನು ಹೊಸದಾಗಿ ಬರೆಯಬೇಕು.

ಈ ಸ್ವಸ್ತಿಕ ಚಿಹ್ನೆಯು ಹಣವನ್ನು ಆಕರ್ಷಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ತಿಳಿದಿದೆ. ಅದರಲ್ಲೂ ಆಂಜನೇಯನ ದೇವಸ್ಥಾನದಲ್ಲಿ ಅವರ ಕಾಣಿಕೆ ಸೆಂಟೂರವನ್ನು ಬರೆದು ಪೂಜಿಸಿದರೆ ನಿಮ್ಮ ಸ್ವಾಮಿಯ ಮನೆಗೆ ಹಣ ಬಂದು ಋಣ, ಬಡತನ ಮುಂತಾದ ಸಮಸ್ಯೆಗಳು ನಿವಾರಣೆಯಾಗಿ ಸಮೃದ್ಧ ಜೀವನ ನಡೆಸುತ್ತೀರಿ. ಈ ವೀಳ್ಯದೆಲೆ ಪರಿಹಾರವನ್ನು ಆತ್ಮವಿಶ್ವಾಸದಿಂದ ಮಾಡುವುದರಿಂದ ಋಣಬಾಧೆಯಿಲ್ಲದೆ ಶಾಂತಿ ಮತ್ತು ಸಂಪತ್ತಿನ ಜೀವನಕ್ಕೆ ದಾರಿ ಕಂಡುಕೊಳ್ಳಬಹುದು ಎಂಬ ಆಲೋಚನೆಯೊಂದಿಗೆ ಲೇಖನವನ್ನು ಮುಗಿಸಬಹುದು.

ಲೇಖನ: ಧಾರ್ಮಿಕಚಿಂತಕರು ಮತ್ತು ಸಲಹೆಗಾರರು
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ಜ್ಯೋತಿಷ್ಯರು 8548998564

Categories
ಉಡುಪಿ ಕರಾವಳಿ ಕಾರ್ಕಳ ದಕ್ಷಿಣ ಕನ್ನಡ ಮಂಗಳೂರು

ಕರಾವಳಿ ಟಾಪ್ 9 ಕ್ರೈಂ ನ್ಯೂಸ್

ಕರಾವಳಿ ಟಾಪ್ 9 ಕ್ರೈಂ ನ್ಯೂಸ್

* ಉಳ್ಳಾಲ: ದೀಪಾವಳಿ ಆಚರಣೆ; ಪಟಾಕಿ ಸಿಡಿದು ಇಬ್ಬರಿಗೆ ಗಾಯ
* ಉಡುಪಿ: ವಿವಾಹಪೂರ್ವ ಗರ್ಭಿಣಿಯಾದ ಯುವತಿ
* ಬೆಳ್ತಂಗಡಿ: ಆತ್ಮಹತ್ಯೆಗೆ ಶರಣಾದ ಶಿಕ್ಷಕಿ
* ಬಂಟ್ವಾಳ: ಚರಂಡಿಯ ಮೇಲೆ ಹತ್ತಿದ ಕಾರ್
* ಮಣಿಪಾಲ್: ಮಸಾಜ್ ಪಾರ್ಲರ್ ಹೆಸರಿನಲ್ಲಿ ವೇಶ್ಯಾವಾಟಿಕೆ
* ಕಾರ್ಕಳ: ಅಕ್ರಮ ಕಲ್ಲುಕೋರೆಯ ಮೇಲೆ ದಾಳಿ
* ಮಂಗಳೂರು: ಅಪರಿಚಿತ ಯುವಕನ ಶವ ಪತ್ತೆ
* ಭಟ್ಕಳ: ಅಂದರ್ ಬಾಹರ್ ಜೂಜಾಟದ ಮೇಲೆ ಪೊಲೀಸರ ದಾಳಿ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಉಳ್ಳಾಲ: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಎಷ್ಟೇ ಜಾಗರೂಕರಾಗಿದ್ದರೂ ಸಾಲುವುದಿಲ್ಲ. ಪ್ರತಿ ವರ್ಷ ಪಟಾಕಿ ನೆಪದಲ್ಲಿ ಅನಾಹುತ ತಪ್ಪಿದ್ದಲ್ಲ. ಅದೇ ರೀತಿ ಈ ವರ್ಷವೂ ಕೂಡ ರಾಜ್ಯಾದ್ಯಂತ ದೀಪಾವಳಿ ಸಂಭ್ರಮದ ನಡುವೆ ಪಟಾಕಿ ಹಚ್ಚುವ ಸಮಯದಲ್ಲಿ ಹಲವರು ಗಾಯಗೊಂಡಿದ್ದಾರೆ.‌ ಉಳ್ಳಾಲದ ಪಾವೂರು ಗ್ರಾಮದ ಮಲಾರ್ ಹೌಸ್ ಎನ್ನುವಲ್ಲಿ 11 ವರ್ಷದ ಇಬ್ಬರು ಬಾಲಕರು ಪಟಾಕಿ ಸಿಡಿಸಿ, ಉಳಿದ ಚೂರುಗಳನ್ನು ಪೇಪರ್ ನಲ್ಲಿ ಸುತ್ತಿ, ಬೆಂಕಿ ಹಚ್ಚಿದ ಪರಿಣಾಮದಿಂದಾಗಿ ಅದು ಸ್ಪೋಟಗೊಂಡು ಗಾಯಗೊಂಡಿದ್ದಾರೆ. ಇಬ್ಬರೂ ದೇರಳಕಟ್ಟೆ ಆಸ್ಪತ್ರೆಯಲ್ಲಿ ಸುಟ್ಟ ಗಾಯಗಳಿಗೆ ಚಿಕಿತ್ಸೆ ಪಡೆಯುತ್ತಿದ್ದು, ಘಟನೆಗೆ ಸಂಬಂಧಿಸಿದಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

* ಉಡುಪಿ: ವಿವಾಹಪೂರ್ವ ಗರ್ಭಿಣಿಯಾದ ಯುವತಿ

ಉಡುಪಿ: ಹೊರರಾಜ್ಯದ ಯುವತಿಯೊಬ್ಬಳು ವಿವಾಹಪೂರ್ವದಲ್ಲಿ ಗರ್ಭಿಣಿಯಾಗಿದ್ದು, ಯುವತಿಯಲ್ಲಿ ಧೈರ್ಯ ತುಂಬಿ, ಆಕೆ ಹೆತ್ತ ಮಗುವನ್ನು ಮತ್ತೊಬ್ಬ ಪೋಷಕರಿಗೆ ದತ್ತು ಕೊಡಿಸುವ ಮೂಲಕ ವಿಶು ಶೆಟ್ಟಿ ಅವರು ಮಾನವೀಯತೆ ಮೆರೆದಿದ್ದಾರೆ. ಪ್ರೀತಿಯ ಬಲೆಗೆ ಬಿದ್ದು, ಗರ್ಭಿಣಿಯಾಗಿದ್ದ ಯುವತಿಯು ತನ್ನ ತಪ್ಪಿನಿಂದಾಗಿ ಆದ ಘಟನೆಯಿಂದ ಒತ್ತಡಕ್ಕೆ ಸಿಲುಕಿದ್ದಳು. ಆಗ ಯುವತಿಯ ನೆರವಿಗೆ ಬಂದ ಸಮಾಜ ಸೇವಕರಾದ ವಿಶು ಶೆಟ್ಟಿ ಅವರು, ಆಕೆಗೆ ಸಾಂತ್ವನ ಕೇಂದ್ರದ ಸಂಪರ್ಕ ನೀಡಿ, ಸಮಾಲೋಚನೆ ನಡೆಸುವ ಮೂಲಕ ಯುವತಿಯಲ್ಲಿ ಧೈರ್ಯ ತುಂಬಿ, ಪ್ರಾಣಹಾನಿ ಮಾಡಿಕೊಳ್ಳುವ ದುರಂತದಿಂದ ತಪ್ಪಿಸಿದ್ದಾರೆ. ಬಳಿಕ ಆಕೆಗೆ ಒಂದು ತಿಂಗಳ ಕಾಲ ಆಶ್ರಯ ನೀಡಿ, ಆಸ್ಪತ್ರೆಯೊಂದರಲ್ಲಿ ಹೆರಿಗೆಗೆ ವ್ಯವಸ್ಥೆ ಕಲ್ಪಿಸಿ, ಯುವತಿ ಹೆತ್ತ ಮಗುವನ್ನು ಕಾನೂನು ಪ್ರಕಾರ ಮಕ್ಕಳಿಲ್ಲದ ದಂಪತಿಗಳಿಗೆ ದತ್ತು ಕೊಡಿಸುವ ಮೂಲಕ ಇಬ್ಬರ ಬದುಕಿನಲ್ಲೂ ಆಶಾಕಿರಣ ಮೂಡಿಸಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ.

* ಬೆಳ್ತಂಗಡಿ: ಆತ್ಮಹತ್ಯೆಗೆ ಶರಣಾದ ಶಿಕ್ಷಕಿ

ಬೆಳ್ತಂಗಡಿ: ಕಳೆದ ಎರಡು ವರ್ಷಗಳಿಂದ ಶಾಲೆಯ ಗೌರವಾನ್ವಿತ ಶಿಕ್ಷಕಿ ಎನಿಸಿಕೊಂಡಿದ್ದ ತೇಜಸ್ವಿನಿ ಅವರ ಮೃತದೇಹ, ಬಾವಿಯಲ್ಲಿ ಪತ್ತೆಯಾಗಿರುವ ಘಟನೆ ನಡೆದಿದೆ. ಅರಸಿನಮಕ್ಕಿಯ ಅನುದಾನಿತ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ತೇಜಸ್ವಿನಿ ಅವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಬಾವಿಯಲ್ಲಿ ಸಿಕ್ಕಿರುವ ಅವರ ಮೃತದೇಹದಿಂದ ಕಾಲುಜಾರಿ ಬಾವಿಗೆ ಬಿದ್ದರೋ ಅಥವಾ ಖಿನ್ನತೆಯಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೋ ಎನ್ನುವ ಸಂಗತಿ ಸ್ಪಷ್ಟವಾಗಿ ತಿಳಿದುಬಂದಿಲ್ಲ.‌ ಸ್ಥಳಕ್ಕೆ ಆಗಮಿಸಿದ ಧರ್ಮಸ್ಥಳ ಪೊಲೀಸರು ಪರಿಶೀಲನೆಯನ್ನು ನಡೆಸಿ, ಪ್ರಕರಣವನ್ನು ದಾಖಲಿಸಿಕೊಂಡರು ಎನ್ನುವ ಸಂಗತಿ ತಿಳಿದುಬಂದಿದೆ.

* ಬಂಟ್ವಾಳ: ಚರಂಡಿಯ ಮೇಲೆ ಹತ್ತಿದ ಕಾರ್

ಬಂಟ್ವಾಳ: ಕಳೆದ ಕೆಲವು ದಿನಗಳಿಂದ ಸುರಿದ ಮಳೆಯಿಂದಾಗಿ ಚಾಲಕನ ನಿಯಂತ್ರಣ ತಪ್ಪಿ, ಕಾರೊಂದು ಚರಂಡಿಯ ಮೇಲೆ ಹತ್ತಿದ ಘಟನೆ, ಬುಧವಾರ ರಾತ್ರಿ ಕಲ್ಲಡ್ಕ ಸಮೀಪದ ಕುದ್ರುಬೆಟ್ಟುವಿನಲ್ಲಿ ನಡೆದಿದೆ. ಪುತ್ತೂರು ನಿವಾಸಿಯಾದ ಇರ್ಶಾದ್ ಅವರು ತಮ್ಮ ಪತ್ನಿಯೊಂದಿಗೆ ಮಂಗಳೂರಿಗೆ ತೆರಳುತ್ತಿದ್ದರು ಎನ್ನುವ ಸಂಗತಿ ತಿಳಿದುಬಂದಿದೆ. ಇದರಿಂದಾಗಿ ಯಾವುದೇ ರೀತಿಯ ತೊಂದರೆ ಸಂಭವಿಸದೇ, ಇಬ್ಬರೂ ಪಾರಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎನ್ನಲಾಗಿದೆ.

ಮಣಿಪಾಲ: ಪಾರ್ಲರ್ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ

* ಮಣಿಪಾಲ: ಕಳೆದೆರಡು ದಿನಗಳ ಹಿಂದೆ ಮಣಿಪಾಲ ಠಾಣೆಯ ಪೊಲೀಸ್ ನಿರೀಕ್ಷಕರಾದ ಮಹೇಶ್ ಪ್ರಸಾದ್ ಅವರಿಗೆ, ಮಸಾಜ್ ಪಾರ್ಲರ್ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ, ದಾಳಿ ನಡೆಸಿದ ಘಟನೆ ನಡೆದಿದೆ. ಈ ಸಂದರ್ಭದಲ್ಲಿ ಇಬ್ಬರು ಆರೋಪಿಗಳನ್ನು ಸೆರೆ ಹಿಡಿಯಲಾಗಿದ್ದು, ಆರೋಪಿಗಳನ್ನು ಇಮ್ರಾನ್ ಮತ್ತು ಜೈಬಾಯ್ ಎಂದು ಗುರುತಿಸಲಾಗಿದೆ. ಮಣಿಪಾಲದಲ್ಲಿ ಸೆಲ್ಯೂನ್ ಆ್ಯಂಡ್ ಸ್ಪಾ ಬಾಡಿ ಮಸಾಜ್ ಕೇಂದ್ರವನ್ನು ಇಟ್ಟುಕೊಂಡಿದ್ದ ಮಹೇಶ್ ಹಾಗೂ ಅಶೋಕ್ ಅವರ ವ್ಯವಹಾರಕ್ಕೆ ಆರೋಪಿಗಳು ಸಹಕಾರ ನೀಡುತ್ತಿದ್ದರು ಎಂದು ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿದಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

•ಕಾರ್ಕಳ: ಅಕ್ರಮ ಕಲ್ಲುಕೋರೆಯ ಮೇಲೆ ದಾಳಿ

ಕಾರ್ಕಳ: ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ನಡೆಸುತ್ತಿದ್ದ ಕಲ್ಲುಕೋರೆ ಮೇಲೆ ಪೊಲೀಸರು ದಾಳಿ ನಡೆಸಿದ ಘಟನೆ ಎರ್ಲಪಾಡಿ ಗ್ರಾಮದ ಜಾರ್ಕಳದಲ್ಲಿ ನಡೆದಿದೆ. ಸರ್ವೇ ನಂಬರ್ 245ರಲ್ಲಿ ಕಲ್ಲುಕೋರೆ ನಡೆಸುತ್ತಿರುವ ಖಚಿತವಾದ ಮಾಹಿತಿ ಬಂದ ಹಿನ್ನೆಲೆಯಲ್ಲಿ, ಕಾರ್ಕಳದ ಉಪನಿರೀಕ್ಷಕರಾದ ಮುರಳಿಧರ ನಾಯ್ಕ ಮತ್ತು ಸಿಬ್ಬಂದಿಗಳು ದಾಳಿ ನಡೆಸಿದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ರಾಜೇಶ್ ಶೆಟ್ಟಿ ಎನ್ನುವಾತ ಅಕ್ರಮವಾಗಿ ಸುಮಾರು 9,500 ರೂಪಾಯಿಯಷ್ಟು ಬೆಲೆಬಾಳುವ, 800 ಸೈಜು ಶಿಲೆಕಲ್ಲುಗಳನ್ನು ಸಾಗಾಟ ಮಾಡಲು ರಾಶಿ ಹಾಕಿ ಇಟ್ಟುಕೊಂಡಿರುವುದು ಕಂಡುಬಂದಿದೆ. ಘಟನೆಗೆ ಸಂಬಂಧಿಸಿದಂತೆ ಕಾರ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

* ಮಂಗಳೂರು: ಅಪರಿಚಿತ ಯುವಕನ ಶವ ಪತ್ತೆ

ಮಂಗಳೂರು: ಬಂದರಿನ ಹಳೆಯ ದಕ್ಕೆಯ ಬಳಿ, ಪರ್ಶಿಯನ್ ದೋಣಿಗಳನ್ನು ನಿಲ್ಲಿಸುವ ಯಾರ್ಡ್ ನ ನದಿ ಕಿನಾರೆಯಲ್ಲಿ ಬುಧವಾರದಂದು ಅಪರಿಚಿತ ಯುವಕನೊಬ್ಬನ ಶವ ಪತ್ತೆಯಾಗಿದೆ. ಕೊಳೆತ ಸ್ಥಿತಿಯಲ್ಲಿ ಮೃತದೇಹ ಕಂಡುಬಂದಿದೆ ಎನ್ನಲಾಗಿದೆ. ಯುವಕನ ಮೃತದೇಹವನ್ನು ವೆನ್ಲಾಕ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

* ಭಟ್ಕಳ: ಅಂದರ್ ಬಾಹರ್ ಜೂಜಾಟದ ಮೇಲೆ ಪೊಲೀಸರ ದಾಳಿ

ಭಟ್ಕಳ: ಕಳೆದ ಕೆಲವು ದಿನಗಳ ಹಿಂದೆ, ಸಂಜೆ ಮೈದಾನದ ಪಕ್ಕದಲ್ಲಿ ಮೇಣದಬತ್ತಿಯ ಬೆಳಕು ಕಂಡು ಬಂದು, ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ, ಉಪನಿರೀಕ್ಷಕರಾದ ನವೀನ್ ಅವರ ನೇತೃತ್ವದ ತಂಡ ದಾಳಿ ನಡೆಸಿದ ಘಟನೆ, ಜಾಲಿ ತೆಲಗೇರಿ ಕ್ರಿಕೆಟ್ ಮೈದಾನದ ಸಮೀಪದ ಪ್ರದೇಶದಲ್ಲಿ ನಡೆದಿದೆ. ಪರಿಶೀಲನೆ ನಡೆಸಿದ ಸಂದರ್ಭದಲ್ಲಿ, ಹಣ ಮತ್ತು ಇಸ್ಪೀಟ್ ಎಲೆಗಳನ್ನು ಬಳಸಿಕೊಂಡು ಜೂಜಾಟದಲ್ಲಿ ತೊಡಗಿರುವುದು ಕಂಡುಬಂದಿದೆ. ದಾಳಿ ನಡೆಸಿದ ಸಮಯದಲ್ಲಿ ತೆಲಗೇರಿಯಲ್ಲಿ ಸೆಂಟ್ರಿಂಗ್ ಕೆಲಸ ಮಾಡಿಕೊಂಡಿದ್ದ ಮಾದೇವಗೊಂಡ, ಹನುಮನಗರದ ಶಂಕರ ನಾಯ್ಕ ಸೇರಿದಂತೆ ಏಳು ಮಂದಿ ಪರಾರಿಯಾಗಿದ್ದು, ಶೇಡಕುಳಿಯ ಮೀನುಗಾರ ನಾರಾಯಣಗೊಂಡ ಎನ್ನುವ ವ್ಯಕ್ತಿ ಸಿಕ್ಕಿಬಿದ್ದಿದ್ದು, ಹಬ್ಬದ ಆಟ ಎಂದು ಪೊಲೀಸರ ಮನವೊಲಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ ಎನ್ನುವ ಸಂಗತಿ ತಿಳಿದುಬಂದಿದೆ. ಈ ಸಂದರ್ಭದಲ್ಲಿ ಆರೋಪಿಗಳು ಆಟಕ್ಕೆ ಬಳಸಿದ ಇಸ್ಪೀಟ್ ಎಲೆಗಳು, ಮೇಣದಬತ್ತಿಗಳು, 1700 ರೂಪಾಯಿ ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ. ಪರಾರಿಯಾದವರ ಕುರಿತು ಶೋಧನಾ ಕಾರ್ಯವನ್ನು ನಡೆಸುತ್ತಿದ್ದಾರೆ

Categories
ರಾಜ್ಯ

ಟಾಪ್ 4 ನ್ಯೂಸ್ ಕರ್ನಾಟಕ

ಟಾಪ್ 4 ನ್ಯೂಸ್ ಕರ್ನಾಟಕ

ಉತ್ತರ ಕನ್ನಡ: ಜೋಗಿಕೊಪ್ಪ ಗ್ರಾಮದಲ್ಲಿ ಇಲಿಜ್ವರ ಪತ್ತೆ..!!
– ಬೆಂಗಳೂರು: ತಿಗಣೆ ಔಷಧದ ವಾಸನೆಗೆ ಪದವೀಧರ ಸಾವು..!!
– ಬಂಗಾರಪೇಟೆ : 3 ವರ್ಷದ ಮಗಳ ಮೇಲೆ ತಂದೆ ಲೈಂಗಿಕ ದೌರ್ಜನ್ಯ!
– ರಸ್ತೆಯಲ್ಲೇ ಹೊತ್ತಿ ಉರಿದ ಬೆಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್.!

NAMMUR EXPRESS NEWS
ಉತ್ತರ ಕನ್ನಡ: ತಾಲ್ಲೂಕಿನ ಕಿರವತ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೋಗಿಕೊಪ್ಪ ಗ್ರಾಮದಲ್ಲಿ ಒಂದು ಇಲಿಜ್ವರ (ಲೆಪ್ಟೊಸ್ಪೈರೋಸಿಸ್) ಪ್ರಕರಣ ವರದಿಯಾಗಿದೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ನರೇಂದ್ರ ಪವಾರ ತಿಳಿಸಿದ್ದಾರೆ. ‘ಈ ವರ್ಷ ಒಟ್ಟು 7 ಪ್ರಕರಣಗಳು ವರದಿಯಾಗಿವೆ. ಇದು ಒಂದು ಬ್ಯಾಕ್ಟೀರಿಯಾ ಸೋಂಕು. ಸೋಂಕಿತ ಇಲಿಗಳು ಮತ್ತು ಇತರ ದಂಶಕಗಳ (ರೊಡೆಂಟ್ಸ್‌) ಮೂತ್ರದ ಮೂಲಕ ಹರಡುತ್ತದೆ. ಜ್ವರ, ತಲೆ ನೋವು, ಸುಸ್ತು, ಮೈ-ಕೈ ನೋವುಗಳಂತಹ ಲಕ್ಷಣಗಳು ಇರುತ್ತದೆ. ಇಂಥ ಲಕ್ಷಣಗಳಿದ್ದಲ್ಲಿ ತಕ್ಷಣ ವೈದ್ಯರನ್ನು ಭೇಟಿ ಮಾಡಿ ಸೂಕ್ತ ಚಿಕಿತ್ಸೆ ಪಡೆಯಬೇಕು’ ಎಂದು ತಿಳಿಸಿದ್ದಾರೆ.

– ಬೆಂಗಳೂರು: ತಿಗಣೆ ಔಷಧದ ವಾಸನೆಗೆ ಪದವೀಧರ ಸಾವು..!!

ಬೆಂಗಳೂರು : ಪಿಜಿಯಲ್ಲಿ ಸಿಂಪಡಿಸಲಾಗಿದ್ದ ತಿಗಣೆ ಔಷಧಿ ವಾಸನೆ ತಾಳಲಾರದೆ ಬಿ.ಟೆಕ್ ಪದವೀಧರ ಅಸ್ವಸ್ಥಗೊಂಡು ಮೃತಪಟ್ಟಿರುವ ಘಟನೆ ಹೆಚ್ ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದು ತಡವಾಗಿ ಬೆಳಕಿಗೆ ಬಂದಿದೆ. ಆಂಧ್ರಪ್ರದೇಶದ ತಿರುಪತಿಂತು ನಿವಾಸಿಯಾದ ಪವನ್ (21) ಮೃತ ಪದವೀಧರ. ಕಳೆದ 3 ತಿಂಗಳಿಂದ ಅಶ್ವತ್ ನಗರದ ಬಿಎಂಆ‌ರ್ ಪಿ.ಜಿ.ಯೊಂದರಲ್ಲಿ ನೆಲೆಸಿದ್ದರು. ಇವರು ನಗರದ ಐಟಿ ಕಂಪನಿಗಳಲ್ಲಿ ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದರು. ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಊರಿಗೆ ತೆರಳಿದ್ದರು.
ಪಿ.ಜಿಯಲ್ಲಿ ತಿಗಣೆ ಸಮಸ್ಯೆ ಹೆಚ್ಚಾಗಿದ್ದರಿಂದ ಔಷಧಿ ಸಿಂಪಡಿಸಲು ಪಿ.ಜಿ.ಮಾಲೀಕರು ಪವನ್ ಉಳಿದುಕೊಂಡಿದ್ದ ಕೊಠಡಿಯ ಮಾಸ್ಟರ್ ಕೀ ಬಳಸಿ ಆತನ ರೂಮಿಗೆ ಔಷಧಿ ಸಿಂಪಡಿಸಿದ್ದರು. ಊರಿಗೆ ಹೋಗಿದ್ದ ಪವನ್ ಅ.19ರಂದು ಪಿಜಿಗೆ ವಾಪಸ್ಸಾಗಿದ್ದಾರೆ. ಎಂದಿನಂತೆ ರಾತ್ರಿ ಮಲಗಿದ್ದು, ಮಾರನೇ ದಿನ ಬೆಳಗ್ಗೆ ಅಸ್ವಸ್ಥಗೊಂಡಿದ್ದರು. ವಿಷಯ ತಿಳಿದು ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಪವನ್ ಮೃತಪಟ್ಟಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಬೌರಿಂಗ್ ಆಸ್ಪತ್ರೆಗೆ ರವಾನಿಸಲಾಗಿದೆ. ಪವನ್ ಸಾವಿನ ಬಗ್ಗೆ ಪೋಷಕರಿಗೆ ಮಾಹಿತಿ ನೀಡಲಾಗಿದೆ. ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

– ಬಂಗಾರಪೇಟೆ : 3 ವರ್ಷದ ಮಗಳ ಮೇಲೆ ತಂದೆ ಲೈಂಗಿಕ ದೌರ್ಜನ್ಯ!

ಬಂಗಾರಪೇಟೆ: ಮೂರು ವರ್ಷದ ಹೆತ್ತ ಮಗಳ ಮೇಲೆಯೇ ತಂದೆ ಲೈಂಗಿಕ ದೌರ್ಜನ್ಯ ಎಸಗಿರುವ ರಾಕ್ಷಸ ಕೃತ್ಯ ಪಟ್ಟಣದ ಸಿ. ರಹೀಂ ಕಾಂಪೌಂಡ್ ಬಡಾವಣೆಯಲ್ಲಿ ನಡೆದಿದೆ. 32 ವರ್ಷದ ಆರೋಪಿಯನ್ನು ಬಂಗಾರಪೇಟೆ ಪೊಲೀಸರು ಬಂಧಿಸಿದ್ದಾರೆ. ತಾಲೂಕಿನ ಬೂದಿಕೋಟೆ ಹೋಬಳಿ ಯಳೇಸಂದ್ರದ ಈ ದುರುಳ ಸದ್ಯಕ್ಕೆ ಪಟ್ಟಣದ ಸಿ.ರಹೀಂ ಕಾಂಪೌಂಡ್ ಬಡಾವಣೆಯಲ್ಲಿ ವಾಸವಾಗಿದ್ದಾನೆ. ಅ. 19ರಂದು ಮಧ್ಯಾಹ್ನ 3-30ರ ಸಮಯದಲ್ಲಿ ಮನೆಯಲ್ಲಿ ಯಾರೂ ಇಲ್ಲದ ವೇಳೆ 3 ವರ್ಷದ ಮಗಳ ಮೇಲೆಯೇ ಈ ಕೃತ್ಯ ಎಸಗಿದ್ದಾನೆಂದು ಆತನ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸ್ ನಿರೀಕ್ಷಕ ಆರ್. ದಯಾನಂದ್, ಎಎಸ್‌ಐ ಶ್ರೀನಿವಾಸ್‌, ಮುಖ್ಯಪೇದೆ ನಾಗೇಶ್ ನೇತೃತ್ವದ ತಂಡ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.

– ರಸ್ತೆಯಲ್ಲೇ ಹೊತ್ತಿ ಉರಿದ ಬೆಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್

ಆಂಧ್ರಪ್ರದೇಶದ ಕರ್ನೂಲ್ ಬಳಿ ಖಾಸಗಿ ಬಸ್ ವೊಂದು ಹೊತ್ತಿ ಉರಿದಿದ್ದು, ಹಲವರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಕರ್ನೂಲ್ ಜಿಲ್ಲೆಯ ಉಲ್ಲಿಂದಕೊಂಡ ಕ್ರಾಸ್ ನಲ್ಲಿ ಭೀಕರ ಅಪಘಾತ ಸಂಭವಿಸಿದೆ. ಬೆಂಗಳೂರಿನಿಂದ ಹೈದರಾಬಾದ್ ಗೆ ಬರುತ್ತಿದ್ದ ಕಾವೇರಿ ಟ್ರಾವೆಲ್ಸ್ ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬಸ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಪ್ರಯಾಣಿಕರು ಬೆಂಕಿಯಲ್ಲಿ ಸಿಲುಕಿಕೊಂಡಿದ್ದಾರೆ. ಅಪಘಾತದ ಸಮಯದಲ್ಲಿ ಬಸ್ ನಲ್ಲಿ 40 ಪ್ರಯಾಣಿಕರು ಇದ್ದರು ಎಂದು ವರದಿಯಾಗಿದೆ. 12 ಪ್ರಯಾಣಿಕರು ಇಳಿದು ಉಳಿದ ಪ್ರಯಾಣಿಕರು ಬಸ್ ನಲ್ಲೇ ಇದ್ದರು ಎಂದು ತೋರುತ್ತದೆ. ಬೆಳಗಿನ ಜಾವ 3:30 ಕ್ಕೆ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ. ಘಟನೆಯಲ್ಲಿ ಹಲವಾರು ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಗಾಯಾಳುಗಳನ್ನು ಕರ್ನೂಲ್ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದಾಗ್ಯೂ, ಬಸ್ ಚಾಲಕ ಮತ್ತು ಸಹಾಯಕ ಇಬ್ಬರೂ ಅಪಘಾತದಿಂದ ಪಾರಾಗಿದ್ದಾರೆ. ಬೆಳಗಿನ ಜಾವ 3.30 ಕ್ಕೆ ಅಪಘಾತ ಸಂಭವಿಸಿದೆ. ಆ ಸಮಯದಲ್ಲಿ ಭಾರೀ ಮಳೆಯಾಗುತ್ತಿತ್ತು. ಆ ಸಮಯದಲ್ಲಿ, ಒಬ್ಬ ಬೈಕ್ ಸವಾರ.. ಬಸ್ಸಿನ ದಾರಿಯಲ್ಲಿ ಬಂದಿದ್ದಾನೆ ಎಂದು ತಿಳಿದುಬಂದಿದೆ. ಬೈಕ್ ಬಸ್ಸಿಗೆ ಡಿಕ್ಕಿ ಹೊಡೆದಿದೆ ಮತ್ತು ಬಸ್ ನೊಳಗೆ ಹೋಯಿತು. ಡೀಸೆಲ್ ಟ್ಯಾಂಕರ್ ಗೆ ಡಿಕ್ಕಿ ಹೊಡೆದಾಗ ಬಸ್ಸಿನ ಮುಂಭಾಗ ಬೆಂಕಿಗೆ ಆಹುತಿಯಾಗಿದೆ ಎಂದು ತಿಳಿದುಬಂದಿದೆ. ಬೆಂಕಿ ಕ್ರಮೇಣ ಬಸ್ಸಿನಾದ್ಯಂತ ವೇಗವಾಗಿ ಹರಡಿತು ಎಂದು ತಿಳಿದುಬಂದಿದೆ. ಅಗ್ನಿಶಾಮಕ ದಳ ಸ್ಥಳಕ್ಕೆ ತಲುಪುವ ಹೊತ್ತಿಗೆ.. ಬಸ್ ಸಂಪೂರ್ಣವಾಗಿ ಸುಟ್ಟು ಹೋಗಿತ್ತು. ಬಸ್ ಚಾಲಕ ಮತ್ತು ಸಹಾಯಕ ಬದುಕುಳಿದಿದ್ದಾರೆ ಎಂದು ತಿಳಿದುಬಂದಿದೆ. ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ವ್ಯಕ್ತಿ ಬದುಕುಳಿದಿದ್ದಾರೋ ಅಥವಾ ಸತ್ತಿದ್ದಾರೋ ಎಂಬುದು ಇನ್ನೂ ತಿಳಿದಿಲ್ಲ. ಆದಾಗ್ಯೂ ಬಸ್ಸಿನ ಕೆಳಗಿರುವ ಲಗೇಜ್ ವಿಭಾಗದ ಬಳಿ ಶವ ಪತ್ತೆಯಾಗಿದೆ. ಅದು ಬೈಕ್ ಸವಾರನಾಗಿರಬಹುದು ಎಂಬ ಅನುಮಾನವಿದೆ.

Categories
ಬೆಂಗಳೂರು ರಾಜ್ಯ

ಕರ್ನಾಟಕದಲ್ಲಿಂದು ಭಾರೀ ಮಳೆಯ ಮುನ್ಸೂಚನೆ

ಕರ್ನಾಟಕದಲ್ಲಿಂದು ಭಾರೀ ಮಳೆಯ ಮುನ್ಸೂಚನೆ

* 3 ಜಿಲ್ಲೆಗಳಿಗೆ ಆರೆಂಜ್,27 ಜಿಲ್ಲೆಗಳಿಗೆ ಯಲ್ಲೋ ಅಲರ್ಟ್
* ಮಳೆಯ ಜೊತೆ ಗಾಳಿಯೂ ಇರಲಿದೆ ಎಚ್ಚರ!

NAMMMUR EXPRESS NEWS
ಬೆಂಗಳೂರು: ರಾಜ್ಯಾದ್ಯಂತ ಮಳೆ ಮುಂದುವರೆದಿದ್ದು ಅಕಾಲಿಕ ಮಳೆಗೆ ಜನಜೀವನ ಅಸ್ಥವ್ಯಸ್ಥವಾಗಿದೆ. ಇಂದೂ ಕೂಡ ಭಾರಿ ಮಳೆಯಾಗುವ ಸಾಧ್ಯತೆಯ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆ ರಾಜ್ಯದ 3 ಜಿಲ್ಲೆಗಳಿಗೆ ಆರೆಂಜ್ ಮತ್ತು 27 ಜಿಲ್ಲೆಗಳಿಗೆ ಎಲ್ಲೋ ಅಲರ್ಟ್ ಘೋಷಿಸಿದೆ.ಕರಾವಳಿಯಲ್ಲಿ ಮಳೆ ಮುಂದುವರಿಯಲಿದ್ದು, ದಕ್ಷಿಣ ಒಳನಾಡು, ಉತ್ತರ ಒಳನಾಡು, ಕರಾವಳಿ ಮತ್ತು ಘಟ್ಟ ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಸಂಭವವಿದೆ. ಬೆಂಗಳೂರಿನಲ್ಲಿ ಸಾಧಾರಣ ಮಳೆಯಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದಲ್ಲಿ ಭಾರಿ ಪ್ರಮಾಣದ ಮಳೆಯಾಗಲಿದ್ದು, ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಮಳೆ ಜೊತೆ ಗಾಳಿಯ ವೇಗ ಕೂಡ ಗಂಟೆಗೆ 30-40 ಕಿ.ಮೀ. ಇರುವ ಸಾಧ್ಯತೆ ಇದ್ದು ಈ ಹಿನ್ನಲೆಯಲ್ಲಿ ಮುನ್ನೆಚ್ಚರಿಕೆಯಾಗಿ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಸೂಚಿಸಲಾಗಿದೆ.
ದಕ್ಷಿಣ ಒಳನಾಡು ಭಾಗದ ಜಿಲ್ಲೆಗಳಾದ ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಗಂಟೆಗೆ 30-40 ಕಿ.ಮೀ ವೇಗದ ಬಿರುಗಾಳಿಯೊಂದಿಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇರಲಿದೆ ಎಂದು ಹವಾಮಾನ ಇಲಾಖೆ ಘೋಷಿಸಿದೆ. ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರದಲ್ಲಿ ಗುಡುಗು ಸಹಿತ ಸಣ್ಣ ಪ್ರಮಾಣದ ಮಳೆಯಾಗುವ ಸಾಧ್ಯತೆ ಇದೆ.