ಮಲ್ನಾಡ್ ಟಾಪ್ ನ್ಯೂಸ್
ಇರಾನ್ ಯುದ್ಧ ದಲ್ಲಿ ಸಿಲುಕಿದ ಕೊಪ್ಪದ ಹುಡುಗ!
– ಗಡಿಕಲ್ ಸಮೀಪದ ಹುಡುಗ ನಾಪತ್ತೆ: ಪೋಷಕರ ಆಕ್ರೋಶ
ಡೀಸೆಲ್ ಸೋರಿಕೆ: ಉರಿದು ಹೋದ ಸರ್ಕಾರಿ ಬಸ್!
– ಚಿಕ್ಕಮಗಳೂರಲ್ಲಿ ರಸ್ತೆ ಮಧ್ಯ ನಿಂತ ಬಸ್
ಮೋದಿ ವಿರುದ್ಧಬರಹ: ಬಿಂದು ಗೌಡ ವಿರುದ್ಧ ತೀರ್ಥಹಳ್ಳಿಯಲ್ಲಿ ಕೇಸ್!
– ತೀರ್ಥಹಳ್ಳಿ ಬಿಜೆಪಿ ಯುವ ಮೋರ್ಚಾದಿಂದ ದೂರು
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಕೊಪ್ಪ: ಇರಾನ್ ಅಮೇರಿಕಾ ಯುದ್ಧ ಇದೀಗ ವಿಶ್ವದಲ್ಲಿ ಭಾರೀ ಆತಂಕಕ್ಕೆ ಕಾರಣ ಆಗಿರುವ ನಡುವೆ ಕಳೆದ ಐದು ತಿಂಗಳಿನಿಂದ ಮಾರ್ಚಂಟ್ ನೇವಿಯಲ್ಲಿ ಉದ್ಯೋಗದಲ್ಲಿದ್ದ ಹಿರೇಕೂಡಿಗೆ ಗ್ರಾಮದ ನಿಶ್ಚಿತ್ ಎನ್ನುವ ಹೆಸರಿನ ಯುವಕ ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದಲ್ಲಿ ಸಿಲುಕಿರುವ ಘಟನೆ ಇದೀಗ ಬೆಳಕಿಗೆ ಬಂದಿದೆ.
ಪರಿಣಾಮವಾಗಿ ನಿಶ್ಚಿತ್ ಕುಟುಂಬಸ್ಥರು ಆತಂಕಕ್ಕೀಡಾಗಿದ್ದಾರೆ. ಯುದ್ಧದ ವರದಿ ಬಿತ್ತರಗೊಳ್ಳುತ್ತಿದ್ದಂತೆ ನಿಶ್ಚಿತ್ ಅವರ ಪೋಷಕರು ಆತನನ್ನು ಸಂಪರ್ಕಿಸಲು ಪ್ರಯತ್ನಿಸಿದ್ದಾರೆ. ಆದರೆ ಯಾವುದೇ ರೀತಿಯ ಸಂಪರ್ಕ ಲಭ್ಯವಾಗಿಲ್ಲ ಎನ್ನುವ ಸಂಗತಿ ತಿಳಿದುಬಂದಿದೆ.
ಇದರಿಂದಾಗಿ ಅಲ್ಲಿ ನಿಶ್ಚಿತ್ ಅವರ ಪರಿಸ್ಥಿತಿ ಏನಾಗಿದೆ ಎನ್ನುವುದರ ಕುರಿತು ಯಾವುದೇ ರೀತಿಯ ಮಾಹಿತಿ ಸಿಗುತ್ತಿಲ್ಲ. ಅಲ್ಲದೆ ಸ್ಥಳೀಯ ಪೊಲೀಸ್ ಇಲಾಖೆ ಕೂಡ ಯಾವುದೇ ಅಧಿಕೃತ ಮಾಹಿತಿಯನ್ನು ನೀಡದಿರುವುದು ಪೋಷಕರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.
ಈ ಹಿನ್ನೆಲೆಯಲ್ಲಿ ನಿಶ್ಚಿತ್ ಅವರ ಪೋಷಕರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೊರೆ ಹೋಗಿದ್ದಾರೆ. ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಿ ನಿಶ್ಚಿತ್ ನನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆ ತರಬೇಕು ಎಂದು ಕುಟುಂಬಸ್ಥರು ಮನವಿ ಮಾಡಿಕೊಂಡಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ.
ಡೀಸೆಲ್ ಸೋರಿಕೆ: ಉರಿದು ಹೋದ ಸರ್ಕಾರಿ ಬಸ್!
ಚಿಕ್ಕಮಗಳೂರು: ಸರ್ಕಾರಿ ಬಸ್ ಡೀಸೆಲ್ ಸೋರಿಕೆಯಾಗಿ ಹೊತ್ತಿ ಉರಿದ ಘಟನೆ ಚಿಕ್ಕಮಗಳೂರಿನ ಬೇಲೂರು ರಸ್ತೆಯಲ್ಲಿರುವ ಜೂನಿಯರ್ ಕಾಲೇಜಿನ ಬಳಿ ನಡೆದಿದೆ. ಚಿಕ್ಕಮಗಳೂರಿನಿಂದ ಹಾಸನಕ್ಕೆ ತೆರಳುತ್ತಿದ್ದ ಸರ್ಕಾರಿ ಬಸ್ ವೊಂದು ಡೀಸೆಲ್ ಸೋರಿಕೆಯಾಗಿ, ಬಿಸಿಲಿನ ಬೇಗೆಗೆ ಹೊತ್ತಿ ಉರಿದಿದೆ.
ಬಸ್ ನಲ್ಲಿ 32 ಜನ ಪ್ರಯಾಣಿಕರಿದ್ದು, ಚಾಲಕನ ಮುನ್ನೆಚ್ಚರಿಕೆಯಿಂದಾಗಿ, ಎಲ್ಲರೂ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಇಳಿದುದರ ಪರಿಣಾಮವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳದ ಸಿಬ್ಬಂದಿಗಳು ಬೆಂಕಿಯನ್ನು ನಂದಿಸಿದರು ಎನ್ನುವ ಸಂಗತಿ ತಿಳಿದುಬಂದಿದೆ.
ಮೋದಿ ವಿರುದ್ಧಬರಹ: ಬಿಂದು ಗೌಡ ವಿರುದ್ಧ ತೀರ್ಥಹಳ್ಳಿಯಲ್ಲಿ ಕೇಸ್!
– ತೀರ್ಥಹಳ್ಳಿ ಬಿಜೆಪಿ ಯುವ ಮೋರ್ಚಾದಿಂದ ದೂರು
ತೀರ್ಥಹಳ್ಳಿ: ಪ್ರತಿನಿತ್ಯ ಜಾಲತಾಣಗಳಲ್ಲಿ ಬಿಂದು ಸಿರ ಎಂಬ ಫೇಸ್ ಬುಕ್ ಹಾಗೂ ಇನ್ನಿತರ ಜಾಲತಾಣಗಳಲ್ಲಿ ಹೆಸರಾಂಕಿತ ಬಿಂದು ಗೌಡ ಎಂಬ ಮಹಿಳೆ ನಮ್ಮ ದೇಶದ ಪ್ರಧಾನಿಯವರ ಫೋಟೋ ಬಳಸಿ ಅವಹೇಳನವಾಗಿ ಪೋಸ್ಟ್ ಮಾಡಿದ್ದಲ್ಲದೇ ಸಮಾಜದಲ್ಲಿ ಘನತೆಯುಳ್ಳ ಅನೇಕ ವ್ಯಕ್ತಿಗಳ ಹಾಗೂ ನಮ್ಮ ದೇಶದ ಸಂಸ್ಕೃತಿ ವಿರುದ್ಧ ಕೆಟ್ಟಾಕೊಳಕ ಪದಗಳಿಂದ ಅವಮಾನಿಸಿ ದಿನನಿತ್ಯ ಹರಿಬಿಡುತ್ತಿದ್ದಾಳೆ.
ಇವುಗಳನ್ನ ಓದಿದವರಿಂದ ಬೈಗುಳ ಕೇಳಿಸಿಕೊಳ್ಳದೇ ದಿನ ನೆಮ್ಮದಿ ಸಿಗದ ಬಿಂದು ಗೌಡ ಅಲಿಯಾಸ್ ಬಿಂದು ಸಿರ ವಿರುದ್ಧ ಕೊನೆಗೂ ತೀರ್ಥಹಳ್ಳಿಯಲ್ಲಿ FIR ದಾಖಲಾಗಿದೆ. ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಂತೋಷ್ ದೇವಾಡಿಗ, ಪ್ರಧಾನ ಕಾರ್ಯದರ್ಶಿಗಳಾದ ಮಹಾಂತ್ ಗೌಡ, ಪ್ರದೀಪ್ ಗಬಡಿ,ಅವರು ಕಾನೂನಿನ ದಾರಿ ಹಿಡಿದು, ಕೋರ್ಟ್ ಮುಖಾಂತರ ಆದೇಶ ತಂದು, ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ FIR ದಾಖಲಿಸಿದ್ದಾರೆ.









