Categories
ರಾಷ್ಟ್ರೀಯ ವಾರ್ತೆ

ರಾಜ್‌ಕೋಟ್‌ ಗೇಮ್‌ ಝೋನ್‌ ಅಗ್ನಿ ಅವಘಡ

ರಾಜ್‌ಕೋಟ್‌ ಗೇಮ್‌ ಝೋನ್‌ ಅಗ್ನಿ ಅವಘಡ
– ಅಧಿಕಾರಿಗಳ ನಿರ್ಲಕ್ಷ್ಯದಿಂದ 28 ಜನರು ಮೃತ್ಯು
– ಪೊಲೀಸ್ ಇನ್ಸ್‌ಪೆಕ್ಟರ್‌ಗಳು, ಐವರು ಅಧಿಕಾರಿಗಳನ್ನು ಅಮಾನತು
– ಸರ್ಕಾರದಿಂದ ಮೃತರ ಕುಟುಂಬಕ್ಕೆ ಪರಿಹಾರ

NAMMUR EXPRESS NEWS
ಗುಜರಾತ್ ಸರ್ಕಾರ ಸೋಮವಾರ, 28 ಜೀವಗಳನ್ನು ಬಲಿ ಪಡೆದ ರಾಜ್‌ಕೋಟ್ ಗೇಮ್ ಝೋನ್ ಅಗ್ನಿ ದುರಂತಕ್ಕೆ ಸಂಬಂಧಿಸಿದಂತೆ ನಿರ್ಲಕ್ಷ್ಯ ತೋರಿದ ಇಬ್ಬರು ಪೊಲೀಸ್ ಇನ್ಸ್‌ಪೆಕ್ಟರ್‌ಗಳು, ಪಾಲಿಕೆ ಸಿಬ್ಬಂದಿ ಸೇರಿದಂತೆ ಐವರು ಅಧಿಕಾರಿಗಳನ್ನು ಅಮಾನತುಗೊಳಿಸಿದೆ.

ಅಧಿಕಾರಿಗಳ ನಿರ್ಲಕ್ಷ್ಯ:
ಗೇಮ್ ಝೋನ್ ಕಾರ್ಯನಿರ್ವಹಿಸಲು ಅನುಮತಿ ನೀಡುವಲ್ಲಿ ನಿರ್ಲಕ್ಷ್ಯ ತೋರಿದ ಅಧಿಕಾರಿಗಳನ್ನು ದುರ್ಘಟನೆಗೆ ಹೊಣೆಗಾರರನ್ನಾಗಿ ಮಾಡಲಾಗಿದೆ ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ. ಶನಿವಾರದಂದು ಬೆಂಕಿ ಸ್ಫೋಟಗೊಂಡ ಈ ಸ್ಥಳದಲ್ಲಿ ಅಗ್ನಿಶಾಮಕ ಎನ್ಒಸಿ ಇಲ್ಲದೆ ಕಾರ್ಯನಿರ್ವಹಿಸುತ್ತಿತ್ತು. ಆಟದ ವಲಯವು ರಸ್ತೆಗಳು ಮತ್ತು ಕಟ್ಟಡಗಳ ಇಲಾಖೆಯಿಂದ ಅನುಮತಿಗಳನ್ನು ಪಡೆದಿದೆ.

ಎನ್‌ಒಸಿ ಪಡೆಯಲು ಅಗ್ನಿಶಾಮಕ ಸುರಕ್ಷತಾ ಸಲಕರಣೆಗಳ ಪುರಾವೆಯನ್ನು ಸಹ ಸಲ್ಲಿಸಿದೆ, ಅದು ಪ್ರಕ್ರಿಯೆಯಲ್ಲಿದ್ದು ಇನ್ನೂ ಪೂರ್ಣಗೊಂಡಿಲ್ಲ ಎಂದು ರಾಜ್‌ಕೋಟ್ ಪೊಲೀಸ್ ಕಮಿಷನರ್ ರಾಜು ಭಾರ್ಗವ ತಿಳಿಸಿದ್ದರು. ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಶನಿವಾರ ಬೆಂಕಿ ಅವಘಡ ಸಂಭವಿಸಿದ ಸ್ಥಳವನ್ನು ಪರಿಶೀಲಿಸಿ ಇಂತಹ ಗಂಭೀರ ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಮತ್ತು ಶಿಕ್ಷಾರ್ಹ ಕ್ರಮ ಕೈಗೊಳ್ಳಲು ಸಂಬಂಧಿಸಿದ ಇಲಾಖೆಗಳಿಗೆ ಸೂಚನೆ ನೀಡಿದ ಒಂದು ದಿನದ ನಂತರ ಐವರು ಅಧಿಕಾರಿಗಳನ್ನು ಸರ್ಕಾರ ಅಮಾನತುಗೊಳಿಸಿದೆ. ಅಮಾನತುಗೊಂಡವರಲ್ಲಿ ರಾಜ್‌ಕೋಟ್ ಮುನ್ಸಿಪಲ್ ಕಾರ್ಪೊರೇಷನ್‌ನ ನಗರ ಯೋಜನಾ ವಿಭಾಗದ ಸಹಾಯಕ ಎಂಜಿನಿಯರ್ ಜೈದೀಪ್ ಚೌಧರಿ, ಆರ್‌ಎಂಸಿ ಸಹಾಯಕ ನಗರ ಯೋಜಕ ಗೌತಮ್ ಜೋಷಿ, ರಾಜ್‌ಕೋಟ್ ರಸ್ತೆಗಳು ಮತ್ತು ಕಟ್ಟಡಗಳ ಇಲಾಖೆಯ ಉಪ ಕಾರ್ಯನಿರ್ವಾಹಕ ಎಂಜಿನಿಯರ್ ಎಂಆರ್ ಸುಮಾ ಮತ್ತು ಪೊಲೀಸ್ ಇನ್‌ಸ್ಪೆಕ್ಟರ್‌ಗಳಾದ ವಿಆರ್ ಪಟೇಲ್ ಮತ್ತು ಎನ್‌ಐ ರಾಥೋಡ್ ಸೇರಿದ್ದಾರೆ.

ರಾಜ್‌ಕೋಟ್‌ನ ನಾನಾ-ಮಾವಾ ಪ್ರದೇಶದ ಟಿಆರ್‌ಪಿ ಗೇಮ್ ಝೋನ್‌ನಲ್ಲಿ ಶನಿವಾರ ಸಂಜೆ ಸಂಭವಿಸಿದ ಬೆಂಕಿ ಅವಘಡದಲ್ಲಿ 9 ಮಕ್ಕಳು ಸೇರಿದಂತೆ 28 ಜನರು ಮೃತಪಟ್ಟಿದ್ದಾರೆ.

ಮೃತರ ಕುಟುಂಬಕ್ಕೆ ಪರಿಹಾರ:
ಈ ಘಟನೆಗೆ ಸಂಬಂಧಿಸಿ ಈಗಾಗಲೇ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದಾರೆ. ಗೇಮ್ ಝೋನ್‌ನ ಆರು ಪಾಲುದಾರರು ಮತ್ತು ಇನ್ನೊಬ್ಬ ಆರೋಪಿ ವಿರುದ್ಧ ವಿವಿಧ ಆರೋಪಗಳ ಮೇಲೆ ಎಫ್‌ಐಆರ್ ದಾಖಲಾಗಿದೆ. ಗುಜರಾತ್ ಹೈಕೋರ್ಟ್ ಇದೊಂದು ಸ್ವಯಂಪ್ರೇರಿತ, “ಮಾನವ ನಿರ್ಮಿತ ದುರಂತ” ಎಂದು ಬಣ್ಣಿಸಿದೆ. ಪೆಟ್ರೋಲ್, ಫೈಬರ್‌ಗಳು ಮತ್ತು ಫೈಬರ್‌ಗ್ಲಾಸ್ ಶೀಟ್‌ಗಳಂತಹ ಹೆಚ್ಚು ದಹಿಸುವ ವಸ್ತುಗಳ ಸಂಗ್ರಹವನ್ನು ಈ ಸೌಲಭ್ಯದಲ್ಲಿ ಸಂಗ್ರಹಿಸಲಾಗಿದೆ ಎಂದು ಹೈಕೋರ್ಟ್ ಹೇಳಿದೆ. ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡವನ್ನು ರಚಿಸಿದ್ದು, ಮೃತರ ಕುಟುಂಬಕ್ಕೆ 4 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದೆ. ಕೇಂದ್ರ ಸರ್ಕಾರವು ಮೃತರ ಕುಟುಂಬಕ್ಕೆ 2 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದೆ.

Categories
ರಾಜ್ಯ ರಾಷ್ಟ್ರೀಯ ವಾರ್ತೆ

6000 ಉದ್ಯೋಗಿಗಳನ್ನು ವಜಾಗೊಳಿಸಿದ ಪೇಟಿಎಂ!

6000 ಉದ್ಯೋಗಿಗಳನ್ನು ವಜಾಗೊಳಿಸಿದ ಪೇಟಿಎಂ!
– ಕಾರ್ಯ ಕ್ಷಮತೆ ಇಲ್ಲದ ಉದ್ಯೋಗಿಗಳಿಗೆ ಗೇಟ್ ಪಾಸ್
– ಉದ್ಯೋಗ ಇನ್ನು ಕಷ್ಟ ಕಷ್ಟ…!

NAMMUR EXPRESS NEWS
ನವದೆಹಲಿ: ಪೇಟಿಎಂ ಮಾತೃಸಂಸ್ಥೆ ಒನ್ 97 ಕಮ್ಯುನಿಕೇಷನ್ಸ್ ಈ ಹಣಕಾಸು ವರ್ಷದಲ್ಲಿ ತನ್ನ ಉದ್ಯೋಗಿಗಳ ವೆಚ್ಚವನ್ನು ಗಮನಾರ್ಹವಾಗಿ ಕಡಿಮೆ ಮಾಡಲು ನೋಡುತ್ತಿದೆ ಎಂದು ಫೈನಾನ್ಷಿಯಲ್ ಎಕ್ಸ್ಪ್ರೆಸ್ ವರದಿ ಮಾಡಿದೆ. ಕಂಪನಿಯು ತನ್ನ ಉದ್ಯೋಗಿಗಳಲ್ಲಿ ಸುಮಾರು 15-20 ಪ್ರತಿಶತದಷ್ಟು ಕಡಿತಗೊಳಿಸಬಹುದು ಎಂದು ವರದಿ ಹೇಳಿದೆ. ಹೆಚ್ಚುತ್ತಿರುವ ನಷ್ಟವನ್ನು ನಿರ್ವಹಿಸಲು, ಒನ್ 97 ಕಮ್ಯುನಿಕೇಷನ್ಸ್ ತನ್ನ ಉದ್ಯೋಗಿಗಳನ್ನು 5,000-6,300 ಉದ್ಯೋಗಿಗಳನ್ನು ಕಡಿಮೆ ಮಾಡುವ ಮೂಲಕ 400-500 ಕೋಟಿ ರೂ.ಗಳನ್ನು ಉಳಿಸುವ ಗುರಿಯನ್ನು ಹೊಂದಿದೆ. 2023ರ ಹಣಕಾಸು ವರ್ಷದಲ್ಲಿ ಕಂಪನಿಯು ಸರಾಸರಿ 32,798 ಉದ್ಯೋಗಿಗಳನ್ನು ಹೊಂದಿದ್ದು, 29,503 ಸಕ್ರಿಯ ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. 2024ರ ಹಣಕಾಸು ವರ್ಷದಲ್ಲಿ ಒಟ್ಟು ಉದ್ಯೋಗಿಗಳ ವೆಚ್ಚ ಶೇ.34ರಷ್ಟು ಏರಿಕೆಯಾಗಿ 3,124 ಕೋಟಿ ರೂ.ಗೆ ತಲುಪಿದ್ದು, ಪ್ರತಿ ಉದ್ಯೋಗಿಯ ಸರಾಸರಿ ವೆಚ್ಚ 10.6 ಲಕ್ಷ ರೂ.ಗೆ ಏರಿಕೆಯಾಗಿದೆ.

ಕಾರ್ಯಾಚರಣೆಯನ್ನು ಸುಗಮಗೊಳಿಸಲು ಮತ್ತು ವೆಚ್ಚವನ್ನು ಕಡಿತಗೊಳಿಸಲು ಡಿಸೆಂಬರ್ ನಲ್ಲಿ 1,000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸುವುದರೊಂದಿಗೆ ಕಡಿತ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದೆ ಎಂದು ವರದಿ ಸೂಚಿಸುತ್ತದೆ. 2024ರ ಹಣಕಾಸು ವರ್ಷದಲ್ಲಿ ಉದ್ಯೋಗಿಗಳ ನಿಖರ ಸಂಖ್ಯೆಯನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ. ಹೂಡಿಕೆದಾರರ ಪ್ರಸ್ತುತಿಯಲ್ಲಿ, ತಂತ್ರಜ್ಞಾನ, ವ್ಯಾಪಾರಿ ಮಾರಾಟ ಮತ್ತು ಹಣಕಾಸು ಸೇವೆಗಳಲ್ಲಿನ ಹೂಡಿಕೆಗಳಿಂದಾಗಿ ಉದ್ಯೋಗಿಗಳ ವೆಚ್ಚ ಹೆಚ್ಚಾಗಿದೆ ಎಂದು ಕಂಪನಿ ಗಮನಿಸಿದೆ. ಮುಂದುವರಿಯುತ್ತಾ, ಈ ಕ್ಷೇತ್ರಗಳಲ್ಲಿ ಹೂಡಿಕೆ ಮಾಡುವುದನ್ನು ಮುಂದುವರಿಸುತ್ತಾ, ಕಂಪನಿಯು ಇತರ ಇಲಾಖೆಗಳಲ್ಲಿ ವೆಚ್ಚವನ್ನು ಕಡಿತಗೊಳಿಸಲು ಯೋಜಿಸಿದೆ.

Categories
ರಾಜ್ಯ ರಾಷ್ಟ್ರೀಯ ವಾರ್ತೆ

ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಸರ್ವರ್ ಡೌನ್.!

ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಸರ್ವರ್ ಡೌನ್.!
– ಏಕಾಏಕಿ ಖಾತೆಗಳು ಲಾಗೌಟ್‌
– ಬಳಕೆದಾರರ ಪರದಾಟ

NAMMUR EXPRESS NEWS
ನವದೆಹಲಿ: ಮೆಟಾ ಒಡೆತನದ ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂ ಸರ್ವರ್ ಡೌನ್ ಆಗಿದ್ದು, ಸಾಮಾಜಿಕ ಜಾಲತಾಣಗಳಿಲ್ಲದೆ ಪ್ರಪಂಚದಾದ್ಯಂತದ ಜನ ಪರದಾಡುತ್ತಿದ್ದಾರೆ.ಇಂಟರ್‌ನೆಟ್ ಟ್ರಾಫಿಕ್ ಮೇಲೆ ನಿಗಾ ಇರಿಸುವ ಡೌನ್‌ ಡಿಟೆಕ್ಟರ್ ಸಂಸ್ಥೆಯ ಪ್ರಕಾರ, ಸಾವಿರಾರು ಬಳಕೆದಾರರ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂ ವಿಶ್ವಾದ್ಯಂತ ಕಾರ್ಯನಿರ್ವಹಿಸುತ್ತಿಲ್ಲ. ಈ ಬಗ್ಗೆ ಸುಮಾರು 18,000ಕ್ಕೂ ಹೆಚ್ಚು ವರದಿಗಳು ಬಂದಿದ್ದು, ಆ ಪೈಕಿ ಶೇ. 59ರಷ್ಟು ಮಂದಿ ಅಪ್ಲಿಕೇಶನ್ ಪ್ರವೇಶಿಸುವಾಗ ಸಮಸ್ಯೆಗಳನ್ನು ಎದುರಿಸಿದರೆ ಶೇ. 34ರಷ್ಟು ಬಳಿಕೆದಾರರು ಸರ್ವರ್ ಸಂಪರ್ಕ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಶೇ. 7ರಷ್ಟು ಮಂದಿಗೆ ಲಾಗಿನ್ ಮಾಡುವಾಗ ಸಮಸ್ಯೆ ಕಂಡು ಬಂದಿದೆ.

ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂ ಬಳಕೆದಾರರು ತಾವು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಆ್ಯಪ್ ಓಪನ್ ಮಾಡುವಾಗ Something went wrong. There’s an issue and the page could not be loaded’, ‘Error loading media ಮುಂತಾದ ಮೆಸೇಜ್ ಕಂಡು ಬರುತ್ತಿದೆ ಎಂದು ಬಳಕೆದಾರರು ದೂರಿದ್ದಾರೆ. ಇಂಟರ್‌ನೆಟ್ ಮೇಲ್ವಿಚಾರಣಾ ಗುಂಪು ನೆಟ್‌ಬ್ಲಾಕ್ಸ್ ಕೂಡ ಎರಡು ಸಾಮಾಜಿಕ ಜಾಲತಾಣದ ವೆಬ್‌ಸೈಟ್‌ಗಳು ಪ್ರಸ್ತುತ ‘ಅಂತಾರಾಷ್ಟ್ರೀಯ ಸ್ಥಗಿತಗಳನ್ನು ಅನುಭವಿಸುತ್ತಿವೆ ಎಂಬ ಅಂಶವನ್ನು ಗಮನಿಸಿದೆ.

ಇನ್‌ಸ್ಟಾಗ್ರಾಂ ಮತ್ತು ಫೇಸ್‌ಬುಕ್ ಸೇರಿದಂತೆ ಮೆಟಾ ಪ್ಲಾಟ್‌ಫಾರ್ಮ್‌ಗಳು ಪ್ರಸ್ತುತ ಅಂತಾರಾಷ್ಟ್ರೀಯ ಸ್ಥಗಿತಗಳನ್ನು ಅನುಭವಿಸುತ್ತಿವೆ. ಇದು ದೇಶೀಯ ಮಟ್ಟದ ಇಂಟರ್‌ನೆಟ್ ಅಡೆತಡೆಗಳು ಅಥವಾ ಫಿಲ್ಟರಿಂಗ್‌ಗೆ ಸಂಬಂಧಿಸಿಲ್ಲ ಎಂದು ನೆಟ್‌ಬ್ಲಾಕ್ಸ್ ತಿಳಿಸಿದೆ. ವಿಶೇಷವೆಂದರೆ ಈ ವರ್ಷದ ಮಾರ್ಚ್‌ನಲ್ಲಿಯೂ ಇದೇ ರೀತಿಯ ಸಮಸ್ಯೆ ಕಂಡು ಬಂದಿತ್ತು. ಪ್ರಪಂಚದಾದ್ಯಂತದ ಲಕ್ಷಾಂತರ ಬಳಕೆದಾರರು ತಮ್ಮ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂ ಖಾತೆ ಲಾಗ್ ಔಟ್ ಆಗುತ್ತಿರುವ ಬಗ್ಗೆ ದೂರು ನೀಡಿದ್ದರು.

Categories
ರಾಷ್ಟ್ರೀಯ ವಾರ್ತೆ

ಹಂದಿ ಕಿಡ್ನಿ ಹಾಕಿಸಿಕೊಂಡಿದ್ದವ ಸಾವು!

ಹಂದಿ ಕಿಡ್ನಿ ಹಾಕಿಸಿಕೊಂಡಿದ್ದವ ಸಾವು!
– ಕಸಿ ಚಿಕಿತ್ಸೆ ನಡೆದ ಎರಡೇ ತಿಂಗಳಿನಲ್ಲಿ ನಿಧನ
– ಸಕ್ಕರೆ ಕಾಯಲೆ ಹಿನ್ನೆಲೆ ಹೊಸ ಪ್ರಯೋಗ

NAMMUR EXPRESS NEWS
ಹಂದಿ ಕಿಡ್ನಿ ಅಳವಡಿಸಿಕೊಂಡ ವಿಶ್ವದ ಮೊದಲ ವ್ಯಕ್ತಿ ಎಂಬ ಐತಿಹಾಸಿಕ ದಾಖಲೆಗೆ ಕಾರಣನಾದ ರಿಚರ್ಡ್ ಸ್ಲೇಮನ್ ಅವರು ಈ ಶಸ್ತ್ರಚಿಕಿತ್ಸೆ ನಡೆದು 2 ತಿಂಗಳ ಬಳಿಕ ಪ್ರಾಣ ಬಿಟ್ಟಿದ್ದಾರೆ. ಅಮೆರಿಕಾದ ಮೂಲದ 62 ವರ್ಷ ಪ್ರಾಯದ ರಿಚರ್ಡ್ ಸ್ಲೇಮನ್ ಅವರಿಗೆ 2 ತಿಂಗಳ ಹಿಂದಷ್ಟೇ ತಳೀಯವಾಗಿ ಮಾರ್ಪಡಿಸಿದ ಹಂದಿಯ ಕಿಡ್ನಿಯನ್ನು ಅಳವಡಿಸಲಾಗಿತ್ತು. ಈ ಮೂಲಕ ಹಂದಿಯ ಕಿಡ್ನಿಯನ್ನು ಪಡೆದ ವಿಶ್ವದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದರು. ಆದರೆ ಇದಾದ ಎರಡು ತಿಂಗಳ ನಂತರ ಅವರು ಸಾವಿಗೀಡಾಗಿದ್ದಾರೆ.

ಬೋಸ್ಟನ್‌ನ ಮ್ಯಾಸಚುಸೆಟ್ಸ್‌ನ ಆಸ್ಪತ್ರೆಯಲ್ಲಿ ಈ ಶಸ್ತ್ರಚಿಕಿತ್ಸೆ ನಡೆದಿತ್ತು. ಶಸ್ತ್ರಚಿಕಿತ್ಸೆ ನಡೆದ 2 ವಾರಗಳ ನಂತರ ಅವರು ಮನೆಗೆ ಮರಳಿದ್ದರು. ಡಯಲಿಸೀಸ್‌ನಲ್ಲಿಯೂ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರಿಚರ್ಡ್ ಸ್ಲೇಮನ್ ಅವರು ಹಂದಿ ಕಿಡ್ನಿಯ ಕಸಿಗೆ ಒಳಗಾಗುವ ಪ್ರಕ್ರಿಯೆಗೆ ಮುಂದಾದರು. ಡಯಲಿಸೀಸ್‌ನಲ್ಲಿನ ಸಮಸ್ಯೆಯಿಂದಾಗಿ ಅವರು ಪ್ರತಿ ಎರಡು ವಾರಗಳಿಗೊಮ್ಮೆ ಆಸ್ಪತ್ರೆಗೆ ದಾಖಲಾಗಬೇಕಾಗಿತ್ತು. ಹೀಗಾಗಿ ಅವರು ಹಂದಿ ಕಿಡ್ನಿ ಕಸಿಗೆ ಒಳಗಾಗಲು ಬಯಸಿದ್ದರು. ‘ಇದು ಕೇವಲ ನನಗೆ ಮಾತ್ರ ಸಹಾಯ ಮಾಡುವುದಿಲ್ಲ, ಇದು ಬದುಕಲು ಕಿಡ್ನಿ ಕಸಿಗೆ ಒಳಗಾಗಲೇಬೇಕು ಎಂಬ ಸ್ಥಿತಿಯಲ್ಲಿರುವ ಅನೇಕರಿಗೆ ಒಂದು ಭರವಸೆಯ ಮಾರ್ಗವಾಗಿದೆ ಎಂದು ಅವರು ಕಸಿ ಪ್ರಕ್ರಿಯೆಗೆ ಒಳಗಾದ ಸಂದರ್ಭದಲ್ಲಿ ಹೇಳಿಕೊಂಡಿದ್ದರು.

Categories
ರಾಷ್ಟ್ರೀಯ ವಾರ್ತೆ ವೈರಲ್ ವೀಡಿಯೊಗಳು

ಅಯ್ಯೋ ಬಂತು ಮೀನಿನ ಮಳೆ…!

ಅಯ್ಯೋ ಬಂತು ಮೀನಿನ ಮಳೆ…!
– ಆಗಸದಿಂದ ಬೀಳುತ್ತಿದ್ದ ಮೀನು ಕಂಡು ಎಲ್ಲರಿಗೂ ಅಚ್ಚರಿ!
– ಯಾಕೆ ಆಕಾಶದಿಂದ ಬಿದ್ದಿದ್ದು ಮೀನು? ಇಲ್ಲಿದೆ ಇಂಟರೆಸ್ಟಿಂಗ್ ಸ್ಟೋರಿ!

NAMMUR EXPRESS NEWS
ಜೋರು ಮಳೆ ಸುರಿಯುತ್ತಿರುವಾಗ ನೀರಿನ ಹನಿಯೊಂದಿಗೆ ಮೀನುಗಳೂ ಬಿದ್ದರೆ ಹೇಗಿರುತ್ತದೆ…? ಹೌದು. ಇಂತಹ ಘಟನೆ ಇರಾನಿನಲ್ಲಿ ನಡೆದಿದ್ದು ಜನರಿಗೆ ಕುತೂಹಲ ಮೂಡಿಸಿದೆ. ಇರಾನ್‌ನ ‘ಯಸುಜ್’ ನಗರದಲ್ಲಿ ನಡೆದ ಘಟನೆ ಈಗ ವೈರಲ್ ಆಗುತ್ತಿದೆ. ‘ಯಸುಜ್’ ಇರಾನ್‌ನ ಸಣ್ಣ ಹಾಗೂ ಕೈಗಾರಿಕಾ ನಗರ. ಸದ್ಯ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಮಳೆಯೊಂದಿಗೆ ಮೀನುಗಳು ಬೀಳುತ್ತಿರುವುದನ್ನು ಕಾಣಬಹುದು. ಹೀಗೆ ಮೇಲಿಂದ ಬಿದ್ದ ಮೀನುಗಳು ರಸ್ತೆಯ ತುಂಬಾ ಬಿದ್ದಿರುವುದು ಕೂಡಾ ಕಾಣಿಸುತ್ತದೆ. ಹೀಗೆ ಕಣ್ಣೆದುರು ಮೀನು ಬಿದ್ದಾಗ ಕುತೂಹಲದಿಂದ ಎತ್ತಿಕೊಂಡ ಜನರು ಅದರ ದೃಶ್ಯವನ್ನೂ ಸೆರೆ ಹಿಡಿದಿದ್ದಾರೆ. ಸಹಜವಾಗಿಯೇ ಈ ದೃಶ್ಯ ಅಚ್ಚರಿ ಮೂಡಿಸುವಂತಿದೆ.

ಇನ್ನು ಈ ಬಗ್ಗೆ ನೆಟ್ಟಿಗರ ಬಗೆಬಗೆಯ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಹಲವರು ಇದು ಪ್ರಕೃತಿಯ ಪವಾಡ ಎಂದು ಕರೆದರೆ, ಇನ್ನೊಂದಷ್ಟು ಮಂದಿ ಇದು ಹವಾಮಾನ ಬದಲಾವಣೆಯ ಪರಿಣಾಮ ಎಂದು ಹೇಳುತ್ತಾರೆ. ಕೆಲವರು ಇದು ನಕಲಿ ವಿಡಿಯೋ ಎಂದೂ ಅಭಿಪ್ರಾಯಪಟ್ಟಿದ್ದಾರೆ. ಸದ್ಯ ಈ ವಿಡಿಯೋ ಬೇರೆ ಬೇರೆ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹರಿದಾಡುತ್ತಿದೆ.

ಹಿಂದೆಯೂ ಮೀನಿನ ಮಳೆ ಆಗಿತ್ತು!

ಇಂತಹ ವಿದ್ಯಮಾನ ನಡೆಯುತ್ತಿರುವುದು ಇದೇ ಮೊದಲೇನೂ ಅಲ್ಲ. ಈ ಹಿಂದೆಯೂ ಇಂತಹ ಘಟನೆಗಳು ನಡೆದಿವೆ. ಸಾಮಾನ್ಯವಾಗಿ ಇದನ್ನು ಆನಿಮಲ್ ರೈನ್ ಅರ್ಥಾತ್ ಪ್ರಾಣಿ ಮಳೆ ಎಂದು ಕರೆಯಲಾಗುತ್ತದೆ. ಇದರ ಹಿಂದಿನ ಕಾರಣಗಳ ಸುಂಟರಗಾಳಿ. ಪ್ರಬಲವಾಗಿ ಬೀಸುವ ಸುಂಟರಗಾಳಿ ನದಿ, ಕೊಳ ಅಥವಾ ಸಮುದ್ರದ ನೀರಿನ ಮೇಲ್ಮೈಯಲ್ಲಿ ತಿರುಗಿದಾಗ ಅದು ಅಲ್ಲಿನ ಜಲಚರ ಪ್ರಾಣಿಗಳನ್ನೂ ಎಳೆದುಕೊಳ್ಳುತ್ತದೆ. ಈ ಶಕ್ತಿಶಾಲಿ ಸುಂಟರಗಾಳಿಯ ಸುಳಿಯಲ್ಲಿ ಮೀನು, ಕಪ್ಪೆಗಳು, ಆಮೆಗಳು ಮತ್ತು ಏಡಿಗಳಂತಹ ಜೀವಿಗಳು ಸಿಲುಕಿಕೊಳ್ಳುತ್ತವೆ. ಹೀಗೆ ಪ್ರಬಲವಾಗಿ ಬೀಸುವ ಈ ಮಾರುತದೊಂದಿಗೆ ಹಾರುವ ಬರುವ ಈ ಮೀನುಗಳು ಗಾಳಿಯ ತೀವ್ರತೆ ಕಡಿಮೆಯಾದಾಗ ಕೆಳಗೆ ಬೀಳಲು ಪ್ರಾರಂಭಿಸುತ್ತವೆ ಎಂದು ಹೇಳಲಾಗುತ್ತದೆ.

Categories
ರಾಜ್ಯ ರಾಷ್ಟ್ರೀಯ ವಾರ್ತೆ

ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಗ್ಯಾಸ್ ಫ್ರೀ!

ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಗ್ಯಾಸ್ ಫ್ರೀ!
– ಸಿಗಲಿದೆ ಉಚಿತ ಗ್ಯಾಸ್ ಸಿಲಿಂಡರ್‌ ಸಂಪರ್ಕ
– ವರ್ಷಕ್ಕೆ ಮೂರು ಉಚಿತ ಸಿಲಿಂಡರ್‌

NAMMUR EXPRESS NEWS
ನವದೆಹಲಿ: ಗ್ಯಾಸ್ ಉಚಿತವಾಗಿ ಸಿಗುವ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. 2016 ರಲ್ಲಿ, ಕೇಂದ್ರ ಸರ್ಕಾರವು ಅರಣ್ಯನಾಶವನ್ನು ತಡೆಗಟ್ಟುವುದರ ಜೊತೆಗೆ ಮನೆಯಲ್ಲಿ ಅಡುಗೆ ಮಾಡುವ ಪ್ರಕ್ರಿಯೆಯನ್ನ ಸುಲಭಗೊಳಿಸುವ ಉದ್ದೇಶದಿಂದ ಎಲ್ಲಾ ಅರ್ಹ ಜನರಿಗೆ ಉಚಿತ ಗ್ಯಾಸ್ ಸಂಪರ್ಕವನ್ನು ನೀಡಲು ಪ್ರಾರಂಭಿಸಿತು. ಇದರ ಭಾಗವಾಗಿ ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ವರ್ಷಕ್ಕೆ 3 ಸಿಲಿಂಡರ್‌’ಗಳನ್ನ ನೀಡುವ ಯೋಜನೆಯನ್ನು ಪರಿಚಯಿಸಿದೆ. ಆದರೆ ಬಿಪಿಎಲ್ ಪಡಿತರ ಚೀಟಿದಾರರು ಮಾತ್ರ ಈ ಯೋಜನೆಯ ಮೂಲಕ 3 ಸಿಲಿಂಡರ್ ಪಡೆಯಲು ಅರ್ಹರಾಗಿರುತ್ತಾರೆ. 2016ರಲ್ಲಿ ಆರಂಭವಾದ ಈ ಯೋಜನೆ ಈಗಲೂ ಮುಂದುವರಿದಿದೆ. ಈ ಯೋಜನೆಯಿಂದ ಈಗಾಗಲೇ ಅನೇಕ ಅರ್ಹರು ಪ್ರಯೋಜನ ಪಡೆದಿದ್ದಾರೆ.
ಈ ಯೋಜನೆಯ ಮೂಲಕ ಪ್ರಯೋಜನಗಳನ್ನ ಪಡೆಯಲು, ನೀವು ಖಚಿತವಾಗಿ ಅರ್ಜಿ ಸಲ್ಲಿಸಬೇಕು. ಅಲ್ಲದೆ ಅರ್ಜಿದಾರರು ಬಿಪಿಎಲ್ ಪಡಿತರ ಚೀಟಿ ಹೊಂದಿರಬೇಕು. ಆಗ ಮಾತ್ರ ನೀವು ಈ ಯೋಜನೆಗೆ ಅರ್ಹರಾಗುತ್ತೀರಿ. ಆದ್ದರಿಂದ ಅರ್ಹ ಕುಟುಂಬಗಳು ಈ ಯೋಜನೆಯ ಪ್ರಯೋಜನಗಳನ್ನ ಪಡೆಯಲು ವೆಬ್‌ಸೈಟ್ www.pmuy.gov.in ಮೂಲಕ ಅರ್ಜಿ ಸಲ್ಲಿಸಬಹುದು.

ಅಗತ್ಯ ದಾಖಲೆಗಳು.!

ಈ ಯೋಜನೆಗೆ ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್, ಬ್ಯಾಂಕ್ ವಿವರಗಳು ಮತ್ತು ಇತರ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು. ಪ್ರತಿ ವರ್ಷ ಮೂರು ಉಚಿತ ಸಿಲಿಂಡರ್‌ಗಳನ್ನ ನೀಡುವ ಮೂಲಕ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಬೆಂಬಲ ನೀಡುವ ಗುರಿಯನ್ನ ಕೇಂದ್ರ ಸರ್ಕಾರ ಹೊಂದಿದೆ. .

Categories
ಉಡುಪಿ ಕರಾವಳಿ ಯಶಸ್ಸಿನ ಕಥೆಗಳು ರಾಷ್ಟ್ರೀಯ ವಾರ್ತೆ

ಉಡುಪಿ ಹುಡುಗ ಈಗ ಅಮೇರಿಕಾದಲ್ಲಿ ಬಾಸ್!

ಉಡುಪಿ ಹುಡುಗ ಈಗ ಅಮೇರಿಕಾದಲ್ಲಿ ಬಾಸ್!
– ಅಮೆರಿಕದಲ್ಲಿ ಜನಿಸಿ ಸ್ಕ್ಯಾನ್ ಫರ್ಡ್ ವಿವಿಯಿಂದ ಎಂಎಸ್ ಪದವಿ ಪಡೆದಿರುವ ಕನ್ನಡಿಗ
– ಕರಾವಳಿ ಮೂಲದ ಕಾರ್ತಿಕ್ ಕಂಟೆಂಟ್‌ಫುಲ್ ಎಂಬ ಕಂಪೆನಿಯ ಸಿಇಒ

NAMMUR EXPRESS NEWS
ಉಡುಪಿ: ಕನ್ನಡದ ಮಣ್ಣು ಅನೇಕ ಸಾಧಕರನ್ನು ವಿಶ್ವಕ್ಕೆ ಕೊಟ್ಟಿದೆ. ಅದರಲ್ಲೂ ಕರಾವಳಿ ಪ್ರತಿಭೆಗಳ ಕಣಜ. ಇದೀಗ ಅಮೆರಿಕದ ಕಂಟೆಂಟ್‌ಫುಲ್ ಎಂಬ ಕಂಪೆನಿಯ ಸಿಇಒ ಆಗಿ ಉಡುಪಿ ಮೂಲದ ಕಾರ್ತಿಕ್ ರಾವ್ ಇತ್ತೀಚೆಗೆ ನೇಮಕಗೊಂಡಿದ್ದಾರೆ. ಉಡುಪಿ ತಾಲೂಕು ಅಲೆವೂರು ಮೂಲದವರಾದ ಅಮೆರಿಕ ನಿವಾಸಿ ದಿವಂಗತ ಡಾ. ಸುಬ್ರಹ್ಮಣ್ಯ ರಾವ್ ಅವರ ಮಗನಾಗಿರುವ ಕಾರ್ತಿಕ್, ಉನ್ನತ ಹುದ್ದೆಗೇರಿರುವುದು ನಾಡಿನ ಹೆಮ್ಮೆಯಾಗಿದೆ. ಮೈಕ್ರೋಸಾಫ್ಟ್, ಆಲ್ಬಾ ಬೆಟ್, ನೊವಾರ್ಟಿಸ್, ಎಡೋಬ್, ಐಬಿಎಂ ಸಹಿತ 30ಕ್ಕೂ ಅಧಿಕ ಜಾಗತಿಕ ಕಂಪನಿಗಳಿಗೆ ಭಾರತೀಯರು ಯಶಸ್ವಿಸಿ ಇಒಗಳಾಗಿದ್ದು, ಈಗ ಉಡುಪಿ ಮೂಲದ ಕಾರ್ತಿಕ್ ರಾವ್ ಸಾಧಕರ ಸಾಲಿಗೆ ಸೇರಿದ್ದಾರೆ. ಅಮೆರಿಕದ ಕಂಟೆಂಟ್‌ಫುಲ್ (ಡೆನ್ವರ್ ಆಂಡ್ ಸಾನ್ ಫ್ರಾನ್ಸಿಸ್ಕೊ ಆಂಡ್ ಬರ್ಲಿನ್) ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕಾರ್ತಿಕ್ ಅಧಿಕಾರ ವಹಿಸಿಕೊಂಡಿದ್ದಾರೆ. 2019ರಿಂದ ಸಿಇಒ ಆಗಿದ್ದ ಸ್ಟೀವ್ ಫ್ಲೋವನ್ ಬದಲಿಗೆ ಅವರು ಕಂಪನಿಯನ್ನು ಮುನ್ನಡೆಸಲಿದ್ದಾರೆ.

ಹಲವು ಪ್ರಮುಖ ಹುದ್ದೆ ಅಲಂಕರಿಸಿದ್ದ ಕಾರ್ತಿಕ್

ಉಡುಪಿ ತಾಲೂಕು ಅಲೆವೂರು ಮೂಲದ ಅಮೆರಿಕ ನಿವಾಸಿ ದಿ. ಡಾ. ಸುಬ್ರಹ್ಮಣ್ಯ ರಾವ್ ಅವರ ಪುತ್ರ ಕಾರ್ತಿಕ್ ರಾವ್ (46) ಅಮೆರಿಕದಲ್ಲಿ ಹುಟ್ಟಿ ಎಂಎಸ್ (ಸ್ಕ್ಯಾನ್ ಫರ್ಡ್ ವಿವಿಯಿಂದ ಇಂಡಸ್ಟ್ರಿಯಲ್ ಎಂಜಿನಿಯರಿಂಗ್ ) ಪೂರೈಸಿದ್ದಾರೆ. 20 ವರ್ಷಗಳಿಂದ ನಾಯಕತ್ವದ ಅನುಭವದೊಂದಿಗೆ ಕಂಪನಿಯ ಸ್ಥಾಪಕ, ನಿರ್ವಹಣಾ ಕಾರ್ಯನಿರ್ವಾಹಕನಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಕಾರ್ತಿಕ್ ಸಂಸ್ಥಾಪಕ ಮತ್ತು ಸಿಇಒ ಆಗಿದ್ದ ಕ್ಲೋಡ್ ಮಾನಿಟರಿಂಗ್‌ಗೆ ಸಂಬಂಧಿಸಿದ ಸಿಗ್ನಲ್ ಎಫ್ ಎಕ್ಸ್ ಕಂಪನಿಯನ್ನು ಇತ್ತೀಚೆಗೆ ಸ್ಪ್ಲಂಕ್ ಕಂಪನಿಯು 1.05 ಬಿಲಿಯನ್ ಡಾಲರ್ ಮೊತ್ತಕ್ಕೆ ಸ್ವಾಧೀನಪಡಿಸಿಕೊಂಡಿದೆ. ವಿಎಂವೇರ್ ಸಂಸ್ಥೆಯ ಪ್ರೊಡಕ್ಟ್ ಮ್ಯಾನೇಜ್‌ಮೆಂಟ್ ಮತ್ತು ವರ್ಲ್ಡ್ ವೈಡ್ ಮಾರ್ಕೆಟಿಂಗ್ ವಿಭಾಗದ ಉಪಾಧ್ಯಕ್ಷರಾಗಿದ್ದ ಕಾರ್ತಿಕ್, ಕಂಪನಿಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಅಪ್ಪ, ಅಜ್ಜನೂ ಪ್ರತಿಭಾವಂತರು!

ತಂದೆ, ಉಡುಪಿ ಅಲೆವೂರಿನ ದಿವಂಗತ ಡಾ. ಎಲ್. ಸುಬ್ರಹ್ಮಣ್ಯ ರಾವ್ ಚೆನ್ನೈನ ಸ್ಪ್ಯಾನ್ಸಿ ಮೆಡಿಕಲ್ ಕಾಲೇಜಿನಿಂದ ಚಿನ್ನದ ಪದಕ ಪಡೆದಿದ್ದು, ಕ್ಯಾನ್ಸರ್ ಸ್ಪೆಷಲಿಸ್ಟ್ ಆಗಿದ್ದರು. ತಾಯಿ ರಜಿ ರಾವ್ ಹಿರಿಯ ಚಲನಚಿತ್ರ ನಿರ್ದೇಶಕ ಬಿ. ವಿಠಲ ಆಚಾರ್ಯರ ಪುತ್ರಿ. ಅಜ್ಜ ದಿವಂಗತ ಜಿ. ಲಕ್ಷ್ಮೀನಾರಾಯಣ್, ಇಂಡಿಯನ್ ಬ್ಯಾಂಕ್ ಚೇರ್ ಮೆನ್ ಮತ್ತು ಎಂಡಿಯಾಗಿದ್ದರು.

Categories
ರಾಜಕೀಯ ರಾಷ್ಟ್ರೀಯ ವಾರ್ತೆ

ಬಿಜೆಪಿ ಖಾತೆ ಓಪನ್!

ಬಿಜೆಪಿ ಖಾತೆ ಓಪನ್!
– ಚುನಾವಣೆಗೂ ಮುನ್ನವೇ ಗೆಲುವು ಸಾಧಿಸಿದ ಬಿಜೆಪಿ
– ಮೋದಿ ತವರಲ್ಲಿ ಗುಜರಾತ್‌ನ 26 ಸ್ಥಾನಗಳ ಪೈಕಿ ಮೊದಲ ಗೆಲುವು

NAMMUR EXPRESS NEWS
ನವ ದೆಹಲಿ: ದೇಶದಲ್ಲಿ ಬಿಜೆಪಿ ತನ್ನ ಗೆಲುವಿನ ಖಾತೆ ತೆರೆದಿದೆ. ಈಗಾಗಲೇ ದೇಶದಲ್ಲಿ ಲೋಕ ಸಭಾ ಚುನಾವಣೆ ಶುರುವಾಗಿದೆ. ಜೂ.4ರಂದು ಫಲಿತಾಂಶ ಬರಲಿದೆ.

ಮೊದಲ ಗೆದ್ದವರು ಯಾರು?

ಏಪ್ರಿಲ್ 22 ರಂದು ಬಿಜೆಪಿಯ ಮುಖೇಶ್ ದಲಾಲ್ ಅವರು ಸೂರತ್‌ನ ಲೋಕಸಭಾ ಕ್ಷೇತ್ರದಿಂದ ಎಲ್ಲಾ ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ಹಿಂತೆಗೆದುಕೊಂಡ ಹಿನ್ನಲೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮುಖೇಶ್ ದಲಾಲ್ ವಿಜೇಯದ ಪರಿಣಾಮ ಗುಜರಾತ್‌ನ 26 ಸ್ಥಾನಗಳ ಪೈಕಿ ಒಂದನ್ನು ಬಿಜೆಪಿ ಚುನಾವಣೆಗೂ ಮೊದಲೇ ವಶಪಡಿಸಿಕೊಂಡಿದೆ.
ನಾಮಪತ್ರ ಹಿಂಪಡೆಯುವ ಕೊನೆಯ ದಿನವಾದ ಸೋಮವಾರ ಬಹುಜನ ಪಕ್ಷೇತರರು ಮತ್ತು ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಪ್ಯಾರೇಲಾಲ್ ಭಾರ್ತಿ ಸೇರಿದಂತೆ ಎಂಟು ಅಭ್ಯರ್ಥಿಗಳು ತಮ್ಮ ಪತ್ರಗಳನ್ನು ಹಿಂಪಡೆದಿದ್ದಾರೆ. ಭಾನುವಾರ ಸೂರತ್‌ನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ನೀಲೇಶ್ ಕುಂಭಾಣಿ ಅವರ ಫಾರಂ ಕೂಡ ರದ್ದಾಗಿತ್ತು, ಅದರ ನಂತರ ಎಲ್ಲಾ ಸ್ವತಂತ್ರ ಅಭ್ಯರ್ಥಿಗಳು ಇಂದು ತಮ್ಮ ನಾಮಪತ್ರವನ್ನು ಹಿಂಪಡೆದಿದ್ದಾರೆ. ಪರಿಣಾಮ ಮುಖೇಶ್ ದಲಾಲ್ ಅವಿರೋಧವಾಗಿ ಸಂಸದರಾಗಿ ಆಯ್ಕೆಯಾಗಿದ್ದಾರೆ.

ಸೂರತ್‌ ಕ್ಷೇತ್ರದಲ್ಲಿ ಬಿಜೆಪಿ ವಿರುದ್ಧದ 8 ಅಭ್ಯರ್ಥಿಗಳ ಪೈಕಿ 7 ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ಹಿಂಪಡೆದಿದ್ದಾರೆ. ಹಾಗಾಗಿ ಬಿಜೆಪಿಯ ಮುಖೇಶ್ ದಲಾಲ್ ಅವರನ್ನು ಅವಿರೋಧವಾಗಿ ಘೋಷಿಸಲಾಗಿದೆ. ಬಿಜೆಪಿಯ ಮುಖೇಶ್ ದಲಾಲ್‌ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಸಿ.ಆ‌ರ್.ಪಾಟೀಲ್‌ ಅಭಿನಂದನೆ ಸಲ್ಲಿಸಿದ್ದಾರೆ. ಮೇ 7 ರಂದು ಸೂರತ್ ಸಂಸದೀಯ ಸ್ಥಾನಕ್ಕೆ ಈಗ ಯಾವುದೇ ಮತದಾನ ಇರುವುದಿಲ್ಲ.

Categories
ಮಾಹಿತಿ ರಾಜ್ಯ ರಾಷ್ಟ್ರೀಯ ವಾರ್ತೆ

ಹಿರಿಯ ನಾಗರೀಕರಿಗೂ ಇನ್ಶೂರೆನ್ಸ್ ಭಾಗ್ಯ!

ಹಿರಿಯ ನಾಗರೀಕರಿಗೂ ಇನ್ಶೂರೆನ್ಸ್ ಭಾಗ್ಯ!
– 65 ವರ್ಷ ಮೇಲ್ಪಟ್ಟವರಿಗೂ ಆರೋಗ್ಯ ವಿಮೆ
– ವಿಮೆ ಪ್ರೀಮಿಯಂ ಮೊತ್ತ ಹೆಚ್ಚಾಗುವ ಸಾಧ್ಯತೆ
– ವಿಮೆ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆ: ಏನಿದು ಹೊಸ ನಿಯಮ?

NAMMUR EXPRESS NEWS
ಹೊಸದಿಲ್ಲಿ: ಇನ್ನು ಮುಂದೆ 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರೂ ಆರೋಗ್ಯ ವಿಮೆ ಸೌಲಭ್ಯವನ್ನು ಪಡೆಯಬಹುದಾಗಿದೆ. ‘ಆರೋಗ್ಯ ವಿಮೆ ಖರೀದಿಗೆ ನಿಗದಿ ಮಾಡಲಾಗಿದ್ದ 65 ವರ್ಷ ವಯೋಮಿತಿಯನ್ನು ‘ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ’ (ಐಆರ್‌ಡಿಐಎ) ರದ್ದುಗೊಳಿಸಿದ್ದು, ಇದರೊಂದಿಗೆ 65 ವರ್ಷ ಮೇಲ್ಪಟ್ಟವರೂ ವಿಮೆಗೆ ಅರ್ಹತೆ ಪಡೆದಿದ್ದಾರೆ. ಆದರೆ, ವಿಮೆ ಪ್ರೀಮಿಯಂ ಮೊತ್ತ ಕೊಂಚ ಹೆಚ್ಚಾಗುವ ಸಾಧ್ಯತೆಯಿದೆ.
ಆರೋಗ್ಯ ವಿಮೆಯು ಎಲ್ಲಾ ವಯೋಮಾನದವರಿಗೂ ಉದ್ದೇಶಿಸಲಾಗಿದ್ದು ನೀಡಲು ಹಿರಿಯ ನಾಗರಿಕರು, ವಿದ್ಯಾರ್ಥಿಗಳು, ಮಕ್ಕಳು, ಮಾತೃತ್ವ, ಹಾಗೂ ಇತರೆ ವರ್ಗದವರಿಗೆ ವಿಭಿನ್ನ ರೂಪದಲ್ಲಿ ವಿಮೆ ಪಾಲಿಸಿಗಳನ್ನು ವಿನ್ಯಾಸಗೊಳಿಸುವಂತೆ ಸಂಸ್ಥೆಗಳಿಗೆ ಸೂಚಿಸಲಾಗಿದೆ. ವಿಮಾ ಇನ್ನು ಮುಂದೆ ಪ್ರಾಧಿಕಾರ ನಿಗದಿಪಡಿಸಿದ ಷರತ್ತುಗಳಿಗೆ ಒಳಪಟ್ಟು ವಯಸ್ಸು, ವಿಮೆ ಮೊತ್ತ ಸೇರಿದಂತೆ ಮತ್ತಿತರ ಮಾನದಂಡಗಳ ಮೇಲೆ ವಿಮಾ ಪಾಲಿಸಿಗಳನ್ನು ಸಂಸ್ಥೆಗಳು ವಿನ್ಯಾಸಗೊಳಿಸಲಿವೆ.

ಕಾಯುವಿಕೆಯೂ ಕಡಿತ

ವಿಮಾ ನಿಯಮಗಳನ್ನು ಗ್ರಾಹಕ ಸ್ನೇಹಿಯಾಗಿ ರೂಪಿಸಲಾಗುತ್ತದೆ. ಅಸ್ತಿತ್ವದಲ್ಲಿರುವ ಕಾಯಿಲೆಗಳನ್ನು ವಿಮೆ ವ್ಯಾಪ್ತಿಗೆ ತರಲು ಇದುವರೆಗೂ ಇದ್ದ ಕಾಯುವಿಕೆ ಅವಧಿಯನ್ನು 46 ತಿಂಗಳಿಂದ 36 ತಿಂಗಳಿಗೆ ಕಡಿತಗೊಳಿಸಲು ತೀರ್ಮಾನಿಸಲಾಗಿದೆ. ಆರೋಗ್ಯ ವಿಮೆ ಪಾಲಿಸಿ ಕೊಳ್ಳಲು ನಿಗದಿ ಮಾಡಲಾಗಿದ್ದ ವಯೋಮಿತಿ ರದ್ದುಗೊಳಿಸಿದ ಪರಿಣಾಮ ವಿಮಾ ಕ್ಷೇತ್ರದ ಬೆಳವಣಿಗೆಗೆ ಮತ್ತಷ್ಟು ಪುಷ್ಟಿ ದೊರೆತಂತಾಗಿದೆ.

Categories
ರಾಷ್ಟ್ರೀಯ ವಾರ್ತೆ

ಭಾರತದಲ್ಲಿತ್ತು 1000 ಕಿಲೋ ತೂಕದ ಹಾವು!

ಭಾರತದಲ್ಲಿತ್ತು 1000 ಕಿಲೋ ತೂಕದ ಹಾವು!
– ಅಳಿವಿನಂಚಿನಲ್ಲಿರುವ ʼಟೈಟಾನೊಬೊವಾʼ
– 36ರಿಂದ ಸುಮಾರು 50 ಅಡಿ ಉದ್ದದ ಹಾವು

NAMMUR EXPRESS NEWS
ಜಗತ್ತಿನ ಅತೀ ದೊಡ್ಡ, ಭಾರೀ ಗಾತ್ರದ ಹಾವು ಭಾರತದಲ್ಲಿ ಬದುಕಿತ್ತು ಎಂಬುದು ಇದೀಗ ಸಂಶೋಧನೆಯಿಂದ ಗೊತ್ತಾಗಿದೆ.
ಗುಜರಾತ್‌ನಲ್ಲಿ ಪತ್ತೆಯಾದ ಪ್ರಾಚೀನ ಹಾವೊಂದರ ಪಳೆಯುಳಿಕೆಗಳು ಅದರ ಭಾರೀ ಗಾತ್ರ ಹಾಗೂ ತೂಕವನ್ನು ತಿಳಿಯಪಡಿಸಿವೆ. ಅದು ಸುಮಾರು 50 ಅಡಿ ಉದ್ದ ಹಾಗೂ 1,000 ಕೆಜಿ ತೂಕವಿತ್ತಂತೆ! 2005ರಲ್ಲಿ ಗುಜರಾತ್‌ನಲ್ಲಿ ಪತ್ತೆಯಾದ ಪಳೆಯುಳಿಕೆಗಳು, ಭೂಮಿಯ ಮೇಲೆ ಅಸ್ತಿತ್ವದಲ್ಲಿದ್ದ ಅತಿದೊಡ್ಡ ಹಾವಿನದ್ದು ಆಗಿವೆ. ಇದನ್ನು ಸಂಶೋಧಕರು “ವಾಸುಕಿ ಇಂಡಿಕಸ್” ಎಂದು ಹೆಸರಿಸಿದ್ದಾರೆ. ಇದು 4.7 ಕೋಟಿ ವರ್ಷಗಳ ಹಿಂದೆ ಕಚ್‌ನ ಜವುಗು ಪ್ರದೇಶಗಳಲ್ಲಿ ವಾಸಿಸಿತ್ತು. ವಿಜ್ಞಾನ ಪತ್ರಿಕೆಗಳಲ್ಲಿ ಇದು ವರದಿಯಾಗಿದೆ. ಈ ಜಾತಿಯ ಹಾವು 36ರಿಂದ ಸುಮಾರು 50 ಅಡಿ ಉದ್ದದವರೆಗೂ ಬೆಳೆಯುತ್ತಿತ್ತು.

ಗಾತ್ರದಲ್ಲಿ ʼವಾಸುಕಿʼಯ ಗಾತ್ರ ಹಾಗೂ ತೂಕ ಈಗ ಅಳಿವಿನಂಚಿನಲ್ಲಿರುವ ʼಟೈಟಾನೊಬೊವಾʼವನ್ನು ಮೀರಿರಬಹುದು. ಇದು 42 ಅಡಿ ಅಳತೆಯ ಅತಿದೊಡ್ಡ ಹಾವು. ಇದು 1 ಟನ್ ಅಥವಾ 1,000 ಕಿಲೋಗ್ರಾಂಗಳಷ್ಟು ತೂಕವನ್ನು ಹೊಂದಿರಬಹುದು ಎಂದು ಸಂಶೋಧಕರು ಹೇಳುತ್ತಾರೆ. ಇಂದು ಜೀವಂತವಾಗಿರುವ ಅತಿದೊಡ್ಡ ಹಾವೆಂದರೆ ಏಷ್ಯಾದ 33 ಅಡಿ ಉದ್ದದ ರೆಟಿಕ್ಯುಲೇಟೆಡ್ ಹೆಬ್ಬಾವು. ಅದರ ದೊಡ್ಡ ಗಾತ್ರವನ್ನು ಪರಿಗಣಿಸಿದರೆ, ವಾಸುಕಿಯು ನಿಧಾನವಾಗಿ ಚಲಿಸುವ ಹೊಂಚು ದಾಳಿ ಪರಭಕ್ಷಕವಾಗಿತ್ತು. ಅದು ಅನಕೊಂಡಗಳು ಮತ್ತು ಹೆಬ್ಬಾವುಗಳಂತೆ ಸುತ್ತುವರಿದು ಬಿಗಿಯುವಿಕೆಯ ಮೂಲಕ ತನ್ನ ಬೇಟೆಯನ್ನು ಪಡೆಯುತ್ತಿತ್ತು” ಎಂದು ಐಐಟಿ-ರೂರ್ಕಿಯಲ್ಲಿ ಪ್ಯಾಲಿಯಂಟಾಲಜಿಯ ಪೋಸ್ಟ್‌ ಡಾಕ್ಟರಲ್ ಸಂಶೋಧಕ ಮತ್ತು ಅಧ್ಯಯನದ ಪ್ರಮುಖ ಲೇಖಕ ದೇಬಜಿತ್ ದತ್ತಾ ಹೇಳುತ್ತಾರೆ. “ಈ ಹಾವು ಕರಾವಳಿಯ ಸಮೀಪವಿರುವ ಜೌಗು ಪ್ರದೇಶದಲ್ಲಿ ಜಾಗತಿಕ ತಾಪಮಾನವು ಇಂದಿನಕ್ಕಿಂತ ಹೆಚ್ಚಿರುವ ಸಮಯದಲ್ಲಿ ವಾಸಿಸುತ್ತಿತ್ತು” ಎಂದಿದ್ದಾರೆ.

ಹಿಂದೂ ಪುರಾಣಗಳಲ್ಲಿ ʼವಾಸುಕಿʼ ಎಂಬ ಭಾರೀ ನಾಗರಾಜನ ಕತೆಗಳು ಇವೆ. ಇದನ್ನು ಸಾಮಾನ್ಯವಾಗಿ ಶಿವನ ಕುತ್ತಿಗೆಗೆ ಸುತ್ತುವಂತೆ ಚಿತ್ರಿಸಲಾಗುತ್ತದೆ. ಸಮುದ್ರ ಮಥನಕ್ಕೆ ಈ ಹಾವನ್ನು ಬಳಸಿಕೊಳ್ಳಲಾಗಿತ್ತು ಎಂದು ಕತೆಯಿದೆ. ಈ ಹಿನ್ನೆಲೆಯಲ್ಲಿ ಸಂಶೋಧಕರು ಇದಕ್ಕೆ ʼವಾಸುಕಿ ಇಂಡಿಕಸ್ʼ ಎಂಬ ಹೆಸರನ್ನು ನೀಡಿದ್ದಾರೆ. ಇದು ಬಹಳ ಸಾಂಕೇತಿಕವಾಗಿದೆ” ಎಂದು ನಾಮಕರಣದ ನಂತರ ದತ್ತ ಹೇಳಿದ್ದಾರೆ. “ವಾಸುಕಿ ನಮ್ಮ ಸರ್ಪರಾಜ. ಹೀಗಾಗಿ ಇಲ್ಲಿರುವ ಅಸಾಧಾರಣವಾದ ದೊಡ್ಡ ಗಾತ್ರದ ಹಾವೂ ಅದೇ” ಎಂದು ಅವರು ವಿವರಿಸಿದರು. ವಾಸುಕಿ ಇಂಡಿಕಸ್‌ನ ಪಳೆಯುಳಿಕೆಯನ್ನು IIT-ರೂರ್ಕಿಯ ಪ್ರಾಗ್ಜೀವಶಾಸ್ತ್ರದ ಪ್ರಾಧ್ಯಾಪಕ ಸುನಿಲ್ ಬಾಜಪೇಯಿ ಅವರು 2005ರಲ್ಲಿ ಕಂಡುಹಿಡಿದರು. ಅವರು ಕಚ್‌ನಲ್ಲಿರುವ ಕಲ್ಲಿದ್ದಲು ಗಣಿಯಲ್ಲಿ ಅವಶೇಷಗಳನ್ನು ಪತ್ತೆಹಚ್ಚಿದರು.

ಆ ಸಮಯದಲ್ಲಿ, ʼಸೈಂಟಿಫಿಕ್ ಅಮೇರಿಕನ್ʼ ಪ್ರಕಾರ, ಅವಶೇಷಗಳು ಈಗಾಗಲೇ ತಿಳಿದಿರುವ ಇತಿಹಾಸಪೂರ್ವ ಜಾತಿಯ ಮೊಸಳೆಗೆ ಸೇರಿವೆ ಎಂದು ಬಾಜಪೇಯಿ ನಂಬಿದ್ದರು. 2022ರವರೆಗೆ ಪಳೆಯುಳಿಕೆ ಅವರ ಪ್ರಯೋಗಾಲಯದಲ್ಲಿ ಇತ್ತು. ಅದೇ ವರ್ಷ ಪ್ರಯೋಗಾಲಯಕ್ಕೆ ಸೇರಿದ ದತ್ತಾ ಅವುಗಳನ್ನು ಪರೀಕ್ಷಿಸಲು ಪ್ರಾರಂಭಿಸಿದರು. ಆ ಚೂರುಗಳು ಬೇರೆ ಜಾತಿಗೆ ಸೇರಿದವು ಎಂದು ಇಬ್ಬರಿಗೂ ಅರಿವಾಯಿತು. ಪಳೆಯುಳಿಕೆಯು 2005ರಲ್ಲಿ ಕಂಡುಬಂದಿದೆ, ಆದರೆ ನಾನು ಬೇರೆ ಬೇರೆ ಪಳೆಯುಳಿಕೆಗಳ ಮೇಲೆ ಕೆಲಸ ಮಾಡುತ್ತಿರುವುದರಿಂದ, ಅದು ಹಾಗೇ ಉಳಿಯಿತು. 2022ರಲ್ಲಿ ನಾವು ಪಳೆಯುಳಿಕೆಯನ್ನು ಮರು-ಪರಿಶೀಲಿಸಲು ಪ್ರಾರಂಭಿಸಿದ್ದೇವೆ. ಆರಂಭದಲ್ಲಿ ಅದರ ಗಾತ್ರದಿಂದಾಗಿ, ಇದು ಮೊಸಳೆ ಎಂದು ನಾನು ಭಾವಿಸಿದೆ. ಆದರೆ ನಂತರ ಅದು ಹಾವಿನದ್ದಾಗಿದೆ ಎಂದು ಅರಿತುಕೊಂಡೆವು” ಎಂದು ಬಾಜಪೇಯಿ ತಿಳಿಸಿದರು.