Categories
ರಾಷ್ಟ್ರೀಯ ವಾರ್ತೆ

ಏರಲಿದೆ ಮೊಬೈಲ್‌ ಕರೆ ದರ!

ಏರಲಿದೆ ಮೊಬೈಲ್‌ ಕರೆ ದರ!
– ಎಲೆಕ್ಷನ್ ಮುಗಿದ ಬಳಿಕ ಶೇ.20ರಷ್ಟು ಹೆಚ್ಚಳ
– ಮೊಬೈಲ್ ಗ್ರಾಹಕರಿಗೆ ಶಾಕಿಂಗ್ ನ್ಯೂಸ್

NAMMUR EXPRESS NEWS
ಹೊಸದಿಲ್ಲಿ: ಭಾರತೀಯ ಟೆಲಿಕಾಂ ಕಂಪನಿಗಳು ಮೇನಲ್ಲಿ ಮೊಬೈಲ್ ಕರೆ/ಡೇಟಾ ಪ್ಯಾಕ್ ದರವನ್ನು ಶೇ.20ರಷ್ಟು ಹೆಚ್ಚಿಸುವ ಸಾಧ್ಯತೆಯಿದೆ ಎಂದು ಟ್ರೋಕರೇಜ್ ಸಂಸ್ಥೆ ಬ್ಯಾಂಕ್ ಆಫ್ ಅಮೆರಿಕಾ ಸೆಕ್ಯುರಿಟೀಸ್ ವರದಿಯಲ್ಲಿ ಹೇಳಲಾಗಿದೆ. “ಕಳೆದ 2 ವರ್ಷಗಳ ಬಳಿಕ ದರ ಹೆಚ್ಚಳಕ್ಕೆ ಟೆಲಿಕಾಂ ಕಂಪನಿಗಳು ಮುಂದಾಗಿವೆ. ಟೆಲಿಕಾಂ ಉದ್ಯಮಕ್ಕೆ ಈ ಬೆಲೆ ಹೆಚ್ಚಳ ಅನಿವಾರ್ಯವಾಗಿದೆ. ಅದರಲ್ಲೂ ವೊಡಾಫೋನ್ ಐಡಿಯಾಕ್ಕೆ ಇದರ ಅಗತ್ಯ ಹೆಚ್ಚಿದೆ. ಏರ್‌ಟೆಲ್, ಜಿಯೊ ಸೇರಿದಂತೆ ಇತರ ಟೆಲಿಕಾಂ ಕಂಪನಿಗಳಿಗೆ ದರ ಹೆಚ್ಚಳದಿಂದ ಅನುಕೂಲವಾಗಲಿದೆ,” ಎಂದು ವರದಿಯಲ್ಲಿ ಹೇಳಲಾಗಿದೆ. ಮೇ ಅಥವಾ ನಂತರ ಭಾರತದ ಟೆಲಿಕಾಂ ಕಂಪನಿಗಳು ದರ ಹೆಚ್ಚಿಸುವ ಸಾಧ್ಯತೆ ಇದೆ ಎಂದು ಏಜೆನ್ಸಿಯೊಂದು ವರದಿ ಮಾಡಿದೆ.

ಎರಡು ವರ್ಷದ ಬಳಿಕ ಶೇ. 20ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ದರ ಹೆಚ್ಚಳ ಕಾಣಲಿದ್ದೇವೆ. ಸಾರ್ವತ್ರಿಕ ಚುನಾವಣೆಗಳ ಬಳಿಕ ಇದು ನಡೆಯಬಹುದು. ಟೆಲಿಕಾಂ ಉದ್ಯಮದ ಆರೋಗ್ಯಕ್ಕೆ ಈ ಬೆಲೆ ಹೆಚ್ಚಳ ಬಹಳ ಅವಶ್ಯ ಇದೆ. ಅದರಲ್ಲೂ ವೊಡಾಫೋನ್ ಐಡಿಯಾಗೆ ಇದು ಬೇಕಾಗಿದೆ,ಎಂದು ಟ್ರೋಕರೇಜ್ ಸಂಸ್ಥೆಯಾದ ಬ್ಯಾಂಕ್‌ ಆಫ್‌ ಅಮೆರಿಕಾ ಸೆಕ್ಯೂರಿಟೀಸ್‌ನ ಅನಾಲಿಸ್ಟ್‌ವೊಬ್ಬರು ಹೇಳಿದ್ದಾಗಿ ತಿಳಿದುಬಂದಿದೆ. 2021ರ ಡಿಸೆಂಬರ್ ತಿಂಗಳಲ್ಲಿ ಟೆಲಿಕಾಂ ಕಂಪನಿಗಳು ಗಣನೀಯವಾಗಿ ದರಗಳನ್ನು ಹೆಚ್ಚಿಸಿದ್ದವು. ಅಲ್ಲಿಂದೀಚೆಗೆ ಡಾಟಾ ದರಗಳಲ್ಲಿ ಹೆಚ್ಚಿನ ಏರಿಕೆ ಆಗಿಲ್ಲ. ಇದೇ ವೇಳೆ, ಟೆಲಿಕಾಂ ಸೇವೆಗಳ ದರ ಹೆಚ್ಚಳದಿಂದ ಭಾರ್ತಿ ಏರ್ಟೆಲ್‌ ಸಂಸ್ಥೆಗೆ ಹೆಚ್ಚು ಅನುಕೂಲವಾಗಬಹುದು.

ಏರ್ಟೆಲ್‌ನಲ್ಲಿ ಹೈ ಎಂಡ್ ಯೂಸರ್‌ಗಳ ಸಂಖ್ಯೆ ಹೆಚ್ಚಿರುವುದರಿಂದ ಅದಕ್ಕೆ ಬೆಲೆ ಏರಿಕೆಯ ಲಾಭ ಹೆಚ್ಚು ಆಗಬಹುದು ಎಂದು ಅಭಿಪ್ರಾಯಪಟ್ಟಿರುವ ಟ್ರೋಕರೇಜ್ ಸಂಸ್ಥೆ, ಇದೇ ಕಾರಣಕ್ಕೆ ಏರ್‌ಟೆಲ್‌ಗೆ ತಾನು ಅಂಡರ್‌ ರ್ಫಾರ್ಮಿಂಗ್ ಎಂದು ನೀಡಿದ್ದ ರೇಟಿಂಗ್ ಅನ್ನು ನ್ಯೂಟ್ರಲ್‌ಗೆ ಬದಲಾಯಿಸಿದೆ. 2023ರ ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗಿನ ಕ್ವಾರ್ಟ‌್ರನಲ್ಲಿ ಭಾರತದ ಟೆಲಿಕಾಂ ಕಂಪನಿಗಳು ಹೆಚ್ಚು ಆದಾಯ ಪಡೆದಿರುವ ಸಾಧ್ಯತೆ ಇದೆ. ಪ್ರತೀ ಬಳಕೆದಾರನಿಂದ ಸಿಗುವ ಸರಾಸರಿ ಆದಾಯವನ್ನು (ಎಆರ್‌ಪಿಯು) ಎಲ್ಲಾ ಟೆಲಿಕಾಂ ಕಂಪನಿಗಳು ಕಾಣಲಿವೆ. ಈ ಹಿನ್ನೆಲೆಯಲ್ಲಿ ಏಪ್ರಿಲ್, ಮೇ ತಿಂಗಳ ನಂತರ ಶೇ. 20ರಷ್ಟು ದರ ಹೆಚ್ಚಾದರೆ ಟೆಲಿಕಾಂ ಕಂಪನಿಗಳ ಆರೋಗ್ಯ ಗಣನೀಯವಾಗಿ ಸುಧಾರಿಸುವ ಸಾಧ್ಯತೆ ಇದೆ. ಕುತೂಹಲದ ಸಂಗತಿ ಎಂದರೆ ಭಾರತದಲ್ಲಿರುವ ಟೆಲಿಕಾಂ ದರಗಳು ಜಾಗತಿಕ ಸರಾಸರಿಗೆ ಹೋಲಿಸಿದರೆ ಬಹಳ ಕಡಿಮೆ ಇದೆ. ರಿಲಾಯನ್ಸ್‌ ಜಿಯೋ ಮಾರುಕಟ್ಟೆಗೆ ಬಂದ ಬಳಿಕ ದರಗಳು ಬಹಳಷ್ಟು ಇಳಿಕೆಯಾಗಿದ್ದವು. ಈಗ ಒಮ್ಮತದಿಂದ ಎಲ್ಲಾ ಕಂಪನಿಗಳು ಬೆಲೆಗಳನ್ನು ಹೆಚ್ಚಿಸುತ್ತಿವೆ.

Categories
ರಾಷ್ಟ್ರೀಯ ವಾರ್ತೆ

ವಾಹನ ಸವಾರರೇ ಗಮನಿಸಿ..!

ವಾಹನ ಸವಾರರೇ ಗಮನಿಸಿ..!
– ಮಾಲಿನ್ಯ ಪರೀಕ್ಷೆಗೆ ರೂಲ್ಸ್ ಚೇಂಜ್!
– ಹೊಸ ನಿಯಮ ಇಂತಿವೆ.!

NAMMUR EXPRESS NEWS
ನವದೆಹಲಿ: ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ BS-VI ಮಾಲಿನ್ಯ ಮಾನದಂಡಗಳ ಅಡಿಯಲ್ಲಿ ಅನುಮೋದನೆ ಪಡೆಯುವ ವಾಹನಗಳಿಗೆ ಹೊಸ ಹೊರಸೂಸುವಿಕೆ ಪರೀಕ್ಷೆಗಳ ಅಧಿಸೂಚನೆ ಹೊರಡಿಸಿದೆ. ಸರ್ಕಾರ ಹೊರಡಿಸಿದ ಹೊಸ ಮಾನದಂಡಗಳ ಪ್ರಕಾರ, ಪ್ಲೆಕ್ಸ್-ಇಂಧನ ಆಯ್ಕೆಯನ್ನು ಹೊಂದಿರುವ ಎಲ್ಲಾ ದ್ವಿ-ಇಂಧನ ವಾಹನಗಳು ಅನಿಲ ಮಾಲಿನ್ಯಕಾರಕ ಮತ್ತು ಕಣ ಮಾಲಿನ್ಯಕಾರಕ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ. ಆದಾಗ್ಯೂ, ಹೈಡ್ರೋಜನ್ ನಲ್ಲಿ ಚಲಿಸುವ ವಾಹನಗಳು ನೈಟ್ರೋಜನ್ ಆಕ್ಸೆಡ್ ಪರೀಕ್ಷೆಗೆ ಮಾತ್ರ ಒಳಗಾಗಬೇಕಾಗುತ್ತದೆ.ಜನವರಿ 5 ರಂದು ಸರ್ಕಾರ ಹೊರಡಿಸಿದ ಅಧಿಸೂಚನೆಯ ಪ್ರಕಾರ, ದ್ವಿ-ಇಂಧನವು ಪ್ಲೆಕ್ಸ್ ಇಂಧನವನ್ನು ಹೊಂದಿದ್ದರೆ, ಎರಡೂ ಪರೀಕ್ಷೆಗಳು ಅನ್ವಯವಾಗುತ್ತವೆ. ವಾಹನವು ಹೈಡ್ರೋಜನ್ ನಲ್ಲಿ ಚಲಿಸುತ್ತಿದ್ದರೆ, NOX ಹೊರಸೂಸುವಿಕೆಯ ಪರೀಕ್ಷೆಗಳನ್ನು ಮಾತ್ರ ನಡೆಸಲಾಗುತ್ತದೆ.

ಇದಲ್ಲದೆ, ರಸ್ತೆ ಸಾರಿಗೆ ಸಚಿವಾಲಯ ಹೊರಡಿಸಿದ ಅಧಿಸೂಚನೆಯ ಪ್ರಕಾರ, ಶೇಕಡಾ 7 ರಷ್ಟು ಜೈವಿಕ ಡೀಸೆಲ್‌ ಮಿಶ್ರಣವನ್ನು ಹೊಂದಿರುವ ವಾಹನಗಳನ್ನು ಡೀಸೆಲ್ (ಬಿ 7) ಗಾಗಿ ಪರೀಕ್ಷಿಸಲಾಗುವುದು ಮತ್ತು ಶೇಕಡಾ 7 ಕ್ಕಿಂತ ಹೆಚ್ಚು ಜೈವಿಕ ಡೀಸೆಲ್ ಮಿಶ್ರಣವನ್ನು ಹೊಂದಿರುವ ವಾಹನಗಳನ್ನು ಮಿಶ್ರಣದ ಪ್ರಕಾರ ಪರೀಕ್ಷಿಸಲಾಗುವುದು. ಮೊದಲೇ ನಿರ್ಧರಿಸಿದ ಮತ್ತು ನಿಯತಕಾಲಿಕವಾಗಿ ಪರಿಷ್ಕೃತ ಕಾರ್ಯವಿಧಾನದ ಪ್ರಕಾರ CO2 ಹೊರಸೂಸುವಿಕೆ ಮತ್ತು ಇಂಧನ ಬಳಕೆಯನ್ನು ಎಐಎಸ್ 137 ನಲ್ಲಿ ಅಳೆಯಲಾಗುವುದು ಎಂದು ಅದು ಹೇಳುತ್ತದೆ. ಅಧಿಸೂಚನೆಯ ಪ್ರಕಾರ, ತಯಾರಕರು ಉತ್ಪಾದನಾ ಪರೀಕ್ಷೆಯಾಗಿ ಗ್ಯಾಸೋಲಿನ್‌ ಅಥವಾ ಗ್ಯಾಸೋಲಿನ್ ಅನ್ನು ಇಂಧನವಾಗಿ ಆಯ್ಕೆ ಮಾಡುವ ಆಯ್ಕೆಯನ್ನು ಹೊಂದಿರುತ್ತಾರೆ.

ಪ್ರತಿ ವಾಹನ ಮಾದರಿಗೆ (ರೂಪಾಂತರಗಳನ್ನು ಒಳಗೊಂಡಂತೆ) ಉತ್ಪಾದನಾ ಅವಧಿಯನ್ನು ವರ್ಷಕ್ಕೆ ಒಮ್ಮೆ ಲೆಕ್ಕಹಾಕಲಾಗುತ್ತದೆ ಮತ್ತು ಪ್ರತಿ ವರ್ಷ, ನಿರ್ದಿಷ್ಟ ಉತ್ಪಾದನಾ ಘಟಕವನ್ನು ಹೊಂದಿರುವ ಕನಿಷ್ಠ 50% ಮಾದರಿಗಳನ್ನು ಪರೀಕ್ಷೆಗೆ ಯಾದೃಚ್ಛಿಕವಾಗಿ ಆಯ್ಕೆ ಮಾಡಲಾಗುತ್ತದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಮೇ 9, 2023 ರಂದು ಎಂ ಮತ್ತು ಎನ್ ವರ್ಗದ ವಾಹನಗಳಿಗೆ ಕಡ್ಡಾಯ ಪರೀಕ್ಷೆಗಳ ಕರಡನ್ನು ಪ್ರಕಟಿಸಿತು. ಇದು ಖಾಸಗಿ ಮತ್ತು ವಾಣಿಜ್ಯ ವಾಹನಗಳನ್ನು ಒಳಗೊಂಡಿದೆ. ಮಧ್ಯಸ್ಥಗಾರರಿಂದ ಪ್ರತಿಕ್ರಿಯೆ ಪಡೆದ ನಂತರ ಪರೀಕ್ಷೆಯನ್ನು ತಿಳಿಸಲಾಯಿತು. ವಾಹನಗಳಿಂದ ಉಂಟಾಗುವ ಮಾಲಿನ್ಯವನ್ನು ನಿಗ್ರಹಿಸುವುದು ಮತ್ತು ವಾಹನ ತಯಾರಕರು ಹಸಿರು ಇಂಧನ ತಂತ್ರಜ್ಞಾನಕ್ಕೆ ಅಪ್ಡೇಟ್ ಆಗುವುದನ್ನು ಖಚಿತಪಡಿಸಿಕೊಳ್ಳುವುದು ಈ ಪರೀಕ್ಷೆಗಳ ಉದ್ದೇಶವಾಗಿದೆ.

Categories
ರಾಷ್ಟ್ರೀಯ ವಾರ್ತೆ

ರಾಮಜ್ಯೋತಿ ಪಡೆದು ಕಾಶಿಗೆ ಹೊರಟ ಮುಸ್ಲಿಂ ಮಹಿಳೆಯರು!

ರಾಮಜ್ಯೋತಿ ಪಡೆದು ಕಾಶಿಗೆ ಹೊರಟ ಮುಸ್ಲಿಂ ಮಹಿಳೆಯರು!
– ಯಾರೀ ಮಹಿಳೆಯರು ಗೊತ್ತಾ..?
– ಸೌಹಾರ್ದಕ್ಕಾಗಿ ಹೀಗೊಂದು ನಡೆ!

NAMMUR EXPRESS NEWS
ನವದೆಹಲಿ: ರಾಷ್ಟ್ರಕ್ಕೆ ರಾಷ್ಟ್ರವೇ ಕಾತುರದಿಂದ ಕಾಯುತ್ತಿರುವ ಅಯೋಧ್ಯೆಯ ರಾಮನ ಪ್ರತಿಷ್ಠಾಪನೆಗೆ ತಮ್ಮಿಂದಾದ ಕಾಣಿಕೆಯನ್ನು ಸಮಸ್ತ ಜನರೂ ನೀಡುತ್ತಿರುವ ಸಂದರ್ಭದಲ್ಲಿ ಇಲ್ಲೊಂದು ಕಾಣಿಕೆ ಹೀಗಿದೆ. ಮತಗಳ ನಡುವಿನ ಸೌಹಾರ್ದದ ಕೊಂಡಿ ಬೆಸೆಯಲು ಮುಸ್ಲಿಂ ಮಹಿಳೆಯರಾದ ನಜೀನ್ ಅನ್ಸಾರಿ ಹಾಗೂ ನಜ್ಮಾ ಪರ್ವೀನ್ ರಾಮ ಜ್ಯೋತಿ ತರಲು ಕಾಶಿಯಿಂದ ಅಯೋಧ್ಯೆಗೆ ತೆರಳಿದ ಅಪರೂಪದ ವಿದ್ಯಮಾನವಿದು. ನಜೀನ್ ಅನ್ಸಾರಿ, ಮುಸ್ಲಿಂ ಮಹಿಳಾ ಪ್ರತಿಷ್ಠಾನದ ರಾಷ್ಟ್ರೀಯ ಅಧ್ಯಕ್ಷೆ. ರಾಮಪಂಥ್ ಆಯೋಜಿಸಿದ್ದ ರಾಮಜ್ಯೋತಿ ಯಾತ್ರೆಯ ನೇತೃತ್ವ ವಹಿಸಿದ್ದ ಆಕೆ, ತಂಡವನ್ನು ಕಾಶಿಯಿಂದ ಅಯೋಧ್ಯೆಗೆ ಮುನ್ನಡೆಸಿದರು.

ಅಲ್ಲಿ ಮಹಾಂತ ಶಂಭು ಪ್ರಭು ದೇವಾಚಾರ್ಯ ಅವರಿಂದ ರಾಮಜ್ಯೋತಿ ಪಡೆದ ಆಕೆ, ಈ ದೇಶ ರಾಮನದ್ದು ಎಂದು ಹೇಳಿದರು. ರಾಮನ ರಾಷ್ಟ್ರವಿದು, ಅವನಿಲ್ಲದೆ ಭಾರತದ ಶ್ರೇಷ್ಠ ಸಂಸ್ಕೃತಿಯನ್ನು ವಿವರಿಸಲು ಸಾಧ್ಯವಿಲ್ಲ. ಶಾಂತಿ ಮತ್ತು ಏಕತೆಗಾಗಿ ಪ್ರತಿ ಮನೆಯಲ್ಲೂ ರಾಮಜ್ಯೋತಿ ಬೆಳಗಿಸುವುದು ಅಗತ್ಯ. ನಾವು ರಾಮನ ಮಕ್ಕಳೇ. ಯಾವುದೇ ಕಾರಣಕ್ಕೂ ಅವನಿಂದ ಬೇರ್ಪಡುವುದು ಸಾಧ್ಯವಿಲ್ಲ. ಮುಸ್ಲಿಮರು ಈ ಸಂತೋಷದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು, ಎಂದು ಕರೆ ನೀಡಿದರು.

ರಾಮನ ಆದರ್ಶಗಳು ಮತ್ತು ಚಾರಿತ್ರ್ಯ ಇಂದು ಇಡೀ ಜಗತ್ತಿನ ಅಗತ್ಯವಾಗಿದೆ. ರಾಮನ ಹೆಸರು ಜಗತ್ತನ್ನು ಭಯೋತ್ಪಾದನೆ ಮತ್ತು ಹಿಂಸಾಚಾರದಿಂದ ಮುಕ್ತಗೊಳಿಸಲು ಸಮರ್ಥವಾಗಿದೆ. ರಾಮಜ್ಯೋತಿಯು ಮನೆಗಳನ್ನು ಮಾತ್ರವಲ್ಲದೆ ಜನರ ಆತ್ಮವನ್ನೂ ಬೆಳಗಿಸುತ್ತದೆ ಎಂದರು. ಇನ್ನು ನಜ್ಮಾ ಮಾತನಾಡಿ, ‘ಜನರು ಧರ್ಮವನ್ನು ಬದಲಾಯಿಸಬಹುದು ಆದರೆ ಪೂರ್ವಜರು, ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದರು. ಈ ಯಾತ್ರೆ ಸಂದರ್ಭದಲ್ಲಿ ಕಾಶಿಯಿಂದ ಅಯೋಧ್ಯೆವರೆಗೆ ದಾರಿಯುದ್ದಕ್ಕೂ ಅನೇಕ ಸ್ಥಳಗಳಲ್ಲಿ ಮುಸ್ಲಿಂ ಸಮುದಾಯದ ಜನರು ಯಾತ್ರೆಯಲ್ಲಿ ಭಾಗವಹಿಸಿದ ಸದಸ್ಯರನ್ನು ಸ್ವಾಗತಿಸಿದ್ದು ವಿಶೇಷವಾಗಿತ್ತು. ರಾಮಜ್ಯೋತಿ ಪಡೆದು ಇಬ್ಬರೂ ಭಾನುವಾರ ಕಾಶಿಗೆ ಮರಳಿದ್ದಾರೆ.

ಯಾರೀ ಮಹಿಳೆಯರು?:

ಕಾಶಿ ನಿವಾಸಿಗಳಾದ ನಜೀನ್ ಅನ್ಸಾರಿ ಮತ್ತು ಡಾ. ನಜ್ಮಾ ಪರ್ವೀನ್ ಕಳೆದ 17 ವರ್ಷಗಳಿಂದ ರಾಮನ ಭಕ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. 2006ರಲ್ಲಿ ಭಯೋತ್ಪಾದಕರು ಕಾಶಿಯ ಸಂಕಟ್ ಮೋಚನ್ ದೇಗುಲದಲ್ಲಿ ಬಾಂಬ್ ಸ್ಫೋಟಿಸಲು ಸಂಚು ರೂಪಿಸಿದಾಗ ನಜೀನ್ ಮತ್ತು ಡಾ.ನಜ್ಮಾ ಅವರು 70 ಮುಸ್ಲಿಂ ಮಹಿಳೆಯರೊಂದಿಗೆ ಸಂಕಟ್ ಮೋಚನ್ ದೇವಸ್ಥಾನಕ್ಕೆ ತೆರಳಿ ಹನುಮಾನ್ ಚಾಲೀಸಾ ಪಠಿಸಿದರು. ಈ ಮೂಲಕ ಹಿಂದೂ-ಮುಸ್ಲಿಂ ನಡುವೆ ಹುಟ್ಟಿಕೊಂಡಿದ್ದ ದ್ವೇಷವನ್ನು ಕೊನೆಗಾಣಿಸುವ ಪ್ರಯತ್ನ ಮಾಡಿದರು. ಪ್ರತಿ ವರ್ಷ ರಾಮನವಮಿ ಮತ್ತು ದೀಪಾವಳಿಯಂದು ಅವರು ನೂರಾರು ಮುಸ್ಲಿಂ ಮಹಿಳೆಯರೊಂದಿಗೆ ಭಗವಾನ್ ಶ್ರೀರಾಮನ ಮಹಾ ಆರತಿಯನ್ನು ಮಾಡುತ್ತಾರೆ. ನಜೀನ್ ಅವರು ಹನುಮಾನ್‌ ಚಾಲೀಸಾವನ್ನು ಉರ್ದುವಿನಲ್ಲಿ ಬರೆದಿದ್ದಾರೆ. ಡಾ. ನಜ್ಮಾ ಅವರು ಬಿಎಚ್‌ಯುನಿಂದ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಪಿಎಚ್‌ಡಿ ಮಾಡಿದ್ದಾರೆ.

ಪೂರ್ವಜರನ್ನು ಸೇರಿಸುವ ಕಾರ್ಯಕ್ರಮ:

ಜನವರಿ 7 ರಂದು ಕಾಶಿಯ ಸುಭಾಷ್ ಭವನದಲ್ಲಿ ವಿಶಾಲ ಭಾರತ ಸಂಸ್ಥಾನ ಮತ್ತು ರಾಮಪಂಥ್ ವತಿಯಿಂದ ‘ನಿಮ್ಮ ಪೂರ್ವಜರನ್ನು ಸೇರಿಕೊಳ್ಳಿ, ರಾಮನನ್ನು ಸೇರಿಕೊಳ್ಳಿ’ ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಪೂರ್ವ ಉತ್ತರ ಪ್ರದೇಶದ ನೂರಾರು ಮುಸ್ಲಿಂ ಕಾರ್ಯಕರ್ತರು ಇದರಲ್ಲಿ ಭಾಗವಹಿಸಿದ್ದಾರೆ.

Categories
ರಾಷ್ಟ್ರೀಯ ವಾರ್ತೆ

ಎಚ್ಚರಕ್ಕೆ! ನಿಮ್ಮ ಹೆಸರಲ್ಲೂ ನಕಲಿ ಸಿಮ್!

ಎಚ್ಚರಕ್ಕೆ! ನಿಮ್ಮ ಹೆಸರಲ್ಲೂ ನಕಲಿ ಸಿಮ್!
– ದೇಶಾದ್ಯಂತ 55 ಲಕ್ಷ, ರಾಜ್ಯದಲ್ಲಿ 25 ಸಾವಿರ ಸಂಪರ್ಕ ಕಡಿತ!
– ಹೊಸ ನಿಯಮವೇನು? ಸಿಮ್ ಪರಿಶೀಲನೆ ಹೇಗೆ?

NAMMUR EXPRESS NEWS
ನವದೆಹಲಿ: ಆಧಾರ್, ವೋಟರ್ ಐಡಿ, ಪಾನ್ ಕಾರ್ಡ್, ಮಾರ್ಕ್ಸ್ ಕಾರ್ಡ್ ಹೀಗೆ ಪ್ರತಿಯೊಂದು ವೈಯಕ್ತಿಕ ದಾಖಲೆಯನ್ನೂ ನಕಲಿಯಾಗಿ ಸೃಷ್ಟಿಸಿ ದುರ್ಬಳಕೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ, ಇಂಥ ದಾಖಲೆಗಳನ್ನೇ ಕೊಟ್ಟು ‘ಸಿಮ್ ಕಾರ್ಡ್’ ಖರೀದಿಸುವ ದಂಧೆಯೂ ಹೆಚ್ಚಾಗುತ್ತಾ ಇದೆ. ಯಾರದ್ದೋ ಹೆಸರಲ್ಲಿ ಇನ್ಯಾರೋ ದಾಖಲೆ ಸಲ್ಲಿಸಿ ಖರೀದಿಸುವ ಸಿಮ್ ಕಾರ್ಡ್ ಗಳನ್ನು ಅಪರಾಧ ಕೃತ್ಯಕ್ಕೆ ಬಳಸುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಈ ಮಧ್ಯೆ ಜ.1ರಿಂದ ಅನುಷ್ಠಾನಕ್ಕೆ ಬಂದಿರುವ 2023ರ ದೂರಸಂಪರ್ಕ ಕಾಯ್ದೆಯಿಂದ ನಕಲಿ ಸಿಮ್ ಕಾರ್ಡ್ ದಂಧೆಗೆ ಕಡಿವಾಣ ಬೀಳುವ ಆಶಾಭಾವನೆ ವ್ಯಕ್ತವಾಗಿದೆ.

ಸೈಬರ್ ಕ್ರೖೆಂ, ಆರ್ಥಿಕ ಅಪರಾಧ, ಬ್ಯಾಂಕ್​ಗಳಿಗೆ ವಂಚನೆ, ಭಯೋತ್ಪಾದನಾ ಚಟುವಟಿಕೆ ಹೀಗೆ ಪ್ರತಿಯೊಂದಕ್ಕೂ ನಕಲಿ ಸಿಮ್ಳನ್ನೇ ಬಳಸಿರುವುದು ಪೊಲೀಸ ತನಿಖೆಯಲ್ಲಿ ದೃಢಪಟ್ಟಿದೆ. ಕೇಂದ್ರ ದೂರ ಸಂಪರ್ಕ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ದೇಶಾದ್ಯಂತ ಪೋರ್ಜರಿ ದಾಖಲೆ ಕೊಟ್ಟು ಖರೀದಿಸಿದ್ದ ಬರೋಬ್ಬರಿ 55.52 ಲಕ್ಷ ಸಿಮ್ ಕಾರ್ಡ್​ಗಳ ಸಂಪರ್ಕ ಕಡಿತಗೊಳಿಸಲಾಗಿದೆ. ರಾಷ್ಟ್ರೀಯ ಸೈಬರ್ ಅಪರಾಧ ವರದಿ ಪೋರ್ಟಲ್​ನಲ್ಲಿ (ಎನ್​ಸಿಸಿಆರ್​ಪಿ) ತನಿಖಾ ಸಂಸ್ಥೆಗಳು ಮಾಡಿದ ವರದಿ ಆಧರಿಸಿ ಸೈಬರ್ ಕ್ರೖೆಂ ಹಾಗೂ ಆರ್ಥಿಕ ಅಪರಾಧ ಪ್ರಕರಣಗಳಲ್ಲಿ ಬಳಕೆಯಾಗಿರುವ 2.78 ಲಕ್ಷ ಸಿಮ್ ಕಾರ್ಡ್​ಗಳ ಸಂಪರ್ಕವನ್ನು ರದ್ದುಗೊಳಿಸಲಾಗಿದೆ.

ಹೊಸ ನಿಯಮವೇನು?

• 2024 ಜ.1 ರಿಂದ ಹೊಸ ದೂರಸಂಪರ್ಕ ಕಾಯ್ದೆ ಜಾರಿಯಾಗಿದ್ದು, ಸಿಮ್ ಕಾರ್ಡ್ ಖರೀದಿ ನಿಯಮ ಬಿಗಿ ಮಾಡಲಾಗಿದೆ.

  • ಸಿಮ್ ಕಾರ್ಡ್ ಡೀಲರ್‌ಗಳು ಪೊಲೀಸ್ ಪರಿಶೀಲನೆ ಮತ್ತು ಬಯೋಮೆಟ್ರಿಕ್ಸ್‌ಗೆ ಒಳಗಾಗುವುದು ಕಡ್ಡಾಯವಾಗಿದೆ.
  • ನೋಂದಣಿ ಮಾಡಿಸದೆ ಸಿಮ್ ಕಾರ್ಡ್ ಮಾರಾಟ ಮಾಡುವಂತಿಲ್ಲ. ಅಕ್ರಮವಾಗಿ ಮಾರಾಟ ಮಾಡಿದರೆ ಡೀಲರ್‌ಗಳೇ ಹೊಣೆಗಾರರು.

• ನಿಯಮ ಪಾಲಿಸದ ಡೀಲರ್‌ಗಳಿಗೆ 10 ಲಕ್ಷ ರೂ. ದಂಡ ವಿಧಿಸಲು ಅವಕಾಶ.

*ಸೈಬರ್ ಕ್ರೈಂ, ಆರ್ಥಿಕ ಅಪರಾಧ, ಭಯೋತ್ಪಾದಕ ಕೃತ್ಯಕ್ಕೆ ಬಳಕೆ.

*ಡಿಜಿಟಲ್ ಅಕ್ರಮಕ್ಕೆ 2.78 ಲಕ್ಷ ಸಿಮ್ ಬಳಕೆ ಆಗಿರುವುದು ದೃಢ.

* ಜ.1ರಿಂದ ಜಾರಿಯಾದ ಹೊಸ ಕಾಯ್ದೆಯಿಂದ ಅಕ್ರಮಕ್ಕೆ ಕಡಿವಾಣ ನಿರೀಕ್ಷೆ.

ಸಿಮ್ ಪರಿಶೀಲನೆ ಹೇಗೆ?

• ಟೆಲಿಕಾಂ ಅನಾಲಿಟಿಕ್ಸ್ ಫಾರ್ ಫ್ರಾಡ್ ಮ್ಯಾನೇಜ್‌ಮೆಂಟ್ ಆ್ಯಂಡ್ ಕನ್‌ಪ್ಯೂಮರ್ ಪ್ರೊಟೆಕ್ಷನ್ ವೆಬ್‌ಸೈಟ್‌ಗೆ ಭೇಟಿ ನೀಡಿ.

• ನಿಮ್ಮ ಮೊಬೈಲ್ ಸಂಖ್ಯೆ ಹಾಗೂ ಅಲ್ಲಿರುವ ಕ್ಯಾಪ್ಟಾ ನಮೂದಿಸಿ, ಓಕೆ ಕೊಟ್ಟರೆ ಮೊಬೈಲ್ ನಂಬರ್‌ಗೆ ಒಟಿಪಿ ಬರುತ್ತದೆ.

• ಒಟಿಪಿ ನಮೂದಿಸಿದ ಕೂಡಲೇ ಲಾಗಿನ್ ಆಗುತ್ತದೆ. ನಿಮ್ಮ ಹೆಸರಿನ ದಾಖಲೆಯಲ್ಲಿ ಎಷ್ಟು ಸಿಮ್ ಖರೀದಿಸಲಾಗಿದೆ ಎಂಬುದು ಸಂಖ್ಯೆಸಹಿತ ಕಾಣಿಸುತ್ತದೆ.

• ಸಂಖ್ಯೆ ಎದುರಿಗೆ ನಾಟ್ ಮೈ ನಂಬರ್, ನಾಟ್ ರಿಕ್ವೆರ್, ರಿಕ್ಷೆರ್ ಎಂದು 3 ಆಯ್ಕೆಗಳು ಬರುತ್ತವೆ.

• ನೀವು ಖರೀದಿಸದ ನಂಬರ್ ಬಂದರೆ ನಾಟ್ ಮೈ ನಂಬರ್ ಅಥವಾ ನಾಟ್ ರಿಕ್ವೆರ್ ಆಯ್ಕೆ ಮಾಡಿ ರಿಪೋರ್ಟ್ ಮಾಡಬಹುದು.

Categories
ರಾಷ್ಟ್ರೀಯ ವಾರ್ತೆ

ಅಗ್ನಿವೀರ ಹುದ್ದೆಗಳಿಗೆ ಅರ್ಜಿ ಆಹ್ವಾನ!

ಅಗ್ನಿವೀರ ಹುದ್ದೆಗಳಿಗೆ ಅರ್ಜಿ ಆಹ್ವಾನ!
– ಶಿಕ್ಷಣ ಅರ್ಹತೆ: PUC ಪಾಸ್!
– 3,500ಕ್ಕೂ ಹೆಚ್ಚು ಹುದ್ದೆಗಳು!
– ಅರ್ಜಿ ಸಲ್ಲಿಕೆ ಹೇಗೆ? ಯಾವಾಗ?

NAMMUR EXPRESS NEWS
ನವದೆಹಲಿ: ಭಾರತೀಯ ವಾಯುಪಡೆ ಸೇನೆಯು ಪ್ರತಿ ವರ್ಷ ಅಗ್ನಿಪಥ ಯೋಜನೆಯ ಅಡಿಯಲ್ಲಿ ನಾಲ್ಕು ವರ್ಷದ ಅವಧಿಗೆ ಅಗ್ನಿವೀರರ ನೇಮಕಾತಿ ಮಾಡಿಕೊಳ್ಳುತ್ತಿದ್ದು ಈ ವರ್ಷದ ಮೊದಲ ಅಧಿಸೂಚನೆ ಪ್ರಕಟಣೆ ಮಾಡಿದೆ.

• ನೇಮಕಾತಿ ಸಂಸ್ಥೆ: ಭಾರತೀಯ ವಾಯು ಸೇನಾ
• ಖಾಲಿ ಹುದ್ದೆಗಳು : 3,500ಕ್ಕೂ ಹೆಚ್ಚು ಹುದ್ದೆಗಳು
• ಹುದ್ದೆಗಳ ಹೆಸರು : ಅಗ್ನಿವೀರ ವಾಯು
• ಅರ್ಜಿ ಸಲ್ಲಿಕೆ : ಆನ್ ಲೈನ್‌ ಮುಖಾಂತರ
• ಉದ್ಯೋಗ ಸ್ಥಳ : ಭಾರತದಾದ್ಯಂತ

ವಿದ್ಯಾರ್ಹತೆ ಮತ್ತು ವಯೋಮಿತಿ ವಿವರ :

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಪಿಯುಸಿ ವಿಜ್ಞಾನ ವಿಷಯದಲ್ಲಿ ಶೇ.50 ಅಂಕಗಳೊಂದಿಗೆ ಪಾಸಾಗಿರಬೇಕು. ಅದೇ ರೀತಿ ಮೂರು ವರ್ಷ ಡಿಪ್ಲೋಮಾ ಇನ್ ಇಂಜಿನಿಯರಿಂಗ್ ಶಿಕ್ಷಣ ಮುಗಿಸಿದವರು ಅಥವಾ ಎರಡು ವರ್ಷಗಳ ವೊಕೇಶನಲ್ ಮತ್ತು ನಾನ್ ವೊಕೇಶನಲ್ ಕೋರ್ಸ್ ಮುಗಿಸಿದವರು ಕೂಡ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ವಯೋಮಿತಿ 2004ರ ಜನವರಿ 2 ಮತ್ತು 2007ರ ಜುಲೈ 2ರ ನಡುವೆ ಜನಿಸಿದ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ. ಅದೇ ರೀತಿ ಗರಿಷ್ಠ ವಯಸ್ಸು ಮತ್ತು ಅಭ್ಯರ್ಥಿಗಳ ಎತ್ತರ ನೋಡುವುದಾದರೆ, ಗರಿಷ್ಟ ವಯಸ್ಸು ಯಾವುದೇ ಕಾರಣಕ್ಕೂ 21 ವರ್ಷ ಮೀರಿರಬಾರದು ಮತ್ತು ಕನಿಷ್ಠ ಎತ್ತರ 152.5 ಸೆಂ. ಇರಬೇಕು.

ಮಾಸಿಕ ಸಂಬಳ ಮತ್ತು ಆಯ್ಕೆ ವಿಧಾನ ಹೇಗೆ?

ಅಗ್ನಿಪಥ ಯೋಜನೆಗೆ ಸಂಬಂಧಿಸಿದ ಈ ನೇಮಕಾತಿಯ ಅಡಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ನಾಲ್ಕು ವರ್ಷದ ಅವಧಿಗೆ ಪ್ರತಿ ವರ್ಷದ ಮಾಸಿಕ ಸಂಬಳ

• 1 ನೇ ವರ್ಷ: 30,000 ರೂಪಾಯಿ
• 2 ನೇ ವರ್ಷ: 33,000 ರೂಪಾಯಿ
• 3 ನೇ ವರ್ಷ : 36,500 ರೂಪಾಯಿ
• 4 ನೇ ವರ್ಷ: 40,000 ರೂಪಾಯಿ

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳಿಗೆ ಮೊದಲನೆಯ ಹಂತದಲ್ಲಿ ಕಂಪ್ಯೂಟ‌ರ್ ಆಧಾರಿತ ಪರೀಕ್ಷೆ ನಡೆಸುತ್ತಾರೆ. ಈ ಪರೀಕ್ಷೆಯನ್ನು ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ನಡೆಸಲಾಗುವುದು. ಈ ಪರೀಕ್ಷೆಯಲ್ಲಿ ಪಾಸಾದ ಅರ್ಹ ಅಭ್ಯರ್ಥಿಗಳಿಗೆ ದೈಹಿಕ ಪರೀಕ್ಷೆ ಮತ್ತು ವೈದ್ಯಕೀಯ ಪರೀಕ್ಷೆ ನಡೆಸಿ ನಂತರದಲ್ಲಿ ದಾಖಲಾತಿ ಪರಿಶೀಲನೆ ಮುಖಾಂತರ ಅಭ್ಯರ್ಥಿಗಳನ್ನು ಅಂತಿಮವಾಗಿ ಆಯ್ಕೆ ಮಾಡಿಕೊಳ್ಳಲಾಗುವುದು.

ಅರ್ಜಿ ಶುಲ್ಕಗಳ ವಿವರ

ಅರ್ಜಿ ಸಲ್ಲಿಸಲು ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಾಗಿ 550 ರೂಪಾಯಿ ನಿಗದಿಪಡಿಸಲಾಗಿದ್ದು, ಈ ಅರ್ಜಿ ಶುಲ್ಕವನ್ನು ಆನ್‌ಲೈನ್ ಮುಖಾಂತರ ಪಾವತಿಸಬೇಕು. ಒಮ್ಮೆ ಪಾವತಿಸಿದ ಅರ್ಜಿ ಶುಲ್ಕವನ್ನು ಮತ್ತೆ ಹಿಂಪಡೆಯಲು ಸಾಧ್ಯವಿಲ್ಲ.

ನೇಮಕಾತಿಯ ಪ್ರಮುಖ ದಿನಾಂಕಗಳು

• ಅರ್ಜಿ ಸಲ್ಲಿಸಲು ಆರಂಭ ದಿನಾಂಕ : 17-01-2024
• ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 06-02-2024

ಸಹಾಯ ವಾಣಿ : (011) 25699606

Categories
ರಾಷ್ಟ್ರೀಯ ವಾರ್ತೆ

ಇನ್ನು ಮುಂದೆ ರಕ್ತ ಮಾರಾಟ ಮಾಡುವಂತಿಲ್ಲ!

ಇನ್ನು ಮುಂದೆ ರಕ್ತ ಮಾರಾಟ ಮಾಡುವಂತಿಲ್ಲ!
– ಸಂಸ್ಕರಣಾ ಶುಲ್ಕ ಹೊರತುಪಡಿಸಿ ಉಳಿದೆಲ್ಲಾ ಶುಲ್ಕ ಮನ್ನಾ!
– ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ ಮಾರ್ಗಸೂಚಿ!

NAMMUR EXPRESS NEWS
ನವದೆಹಲಿ: ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯು, ಇನ್ನು ಮುಂದೆ ಆಸ್ಪತ್ರೆಗಳು ಅಥವಾ ಖಾಸಗಿ ರಕ್ತ ಬ್ಯಾಂಕುಗಳು ರಕ್ತವನ್ನು ಮಾರಾಟ ಮಾಡುವಂತಿಲ್ಲ ಎಂದು ಸೂಚನೆ ನೀಡಿದೆ. ಸಂಸ್ಕರಣಾ ಶುಲ್ಕ ಒಂದನ್ನು ಬಿಟ್ಟು ಉಳಿದೆಲ್ಲಾ ಶುಲ್ಕಗಳನ್ನು ರದ್ದು ಮಾಡಿರುವುದಾಗಿ ತಿಳಿಸಿದೆ. ಈಗ ಆಸ್ಪತ್ರೆಗಳು ಮತ್ತು ಖಾಸಗಿ ರಕ್ತ ಬ್ಯಾಂಕುಗಳಲ್ಲಿ ರಕ್ತಕ್ಕಾಗಿ ಹೆಚ್ಚು ಶುಲ್ಕ ವಿಧಿಸಲಾಗುತ್ತಿದೆ ಎಂಬುದನ್ನು ಗಮನಿಸಿ ಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ನಡೆದ ಡ್ರಗ್ಸ್ ಕನ್ಸಲೇಟಿವ್ ಕಮಿಟಿಯ 62ನೇ ಸಭೆಯ ಆಧಾರದ ಮೇಲೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅದು ತಿಳಿಸಿದೆ.

ದೇಶದ ಆಸ್ಪತ್ರೆಗಳು ಮತ್ತು ಖಾಸಗಿ ರಕ್ತ ಬ್ಯಾಂಕುಗಳು ಪ್ರತಿ ಯೂನಿಟ್ ರಕ್ತಕ್ಕೆ ಹೆಚ್ಚುವರಿ ಶುಲ್ಕ ವಿಧಿಸುತ್ತವೆ ಎಂದು ತಿಳಿದುಬಂದಿದೆ. ಹೀಗೆ ವಿಧಿಸಲಾಗುವ ಮೊತ್ತವು ಪ್ರತಿ ಯೂನಿಟ್‌ಗೆ ₹ 2,000 ರಿಂದ 10,000ರ ನಡುವೆ ಇರುತ್ತದೆ. ಅಪರೂಪದ ರಕ್ತದ ಪ್ರಕಾರಗಳ ವಿಚಾರದಲ್ಲಿ ಶುಲ್ಕ ಹೆಚ್ಚಾಗುತ್ತದೆ. ಹೀಗಾಗಿ, ಹಣ ಹೆಚ್ಚಿದ್ದರೂ, ರೋಗಿಯು ಶುಲ್ಕ ಪಾವತಿಸಿ ಖರೀದಿ ಮಾಡುತ್ತಾನೆ.

ಸಂಸ್ಕರಣಾ ಶುಲ್ಕ ಎಷ್ಟು?

ಇನ್ನು ಮುಂದೆ ₹250ರಿಂದ 1,550ರ ವರೆಗೆ ಸಂಸ್ಕರಣಾ ಶುಲ್ಕ ವಿಧಿಸಬಹುದು. ಸಂಪೂರ್ಣ ರಕ್ತದ ಪ್ಯಾಕೆಟ್ ಮತ್ತು ಪ್ಯಾಕ್ ಮಾಡಿದ ಕೆಂಪು ರಕ್ತ ಕಣಗಳನ್ನು ವಿತರಿಸುವಾಗ 1,550 ಪಡೆಯಬಹುದು. ತಾಜಾ ಹೆಪ್ಪುಗಟ್ಟಿದ ಪ್ಲಾಸ್ಮಾ ಮತ್ತು ಪ್ಲೇಟೈಟ್ ವಿಚಾರದಲ್ಲಿ 400 ರು. ಶುಲ್ಕ ವಿಧಿಸಬಹುದು. ಸರಕಾರಿ ಆಸ್ಪತ್ರೆಗಳಲ್ಲಿ ಈ ಸಂಸ್ಕರಣಾ ಶುಲ್ಕಗಳು ಕಡಿಮೆ ಇರುತ್ತದೆ. ಬಿಳಿ ರಕ್ತ ಕಣಗಳು, ಕೆಂಪು ರಕ್ತ ಕಣಗಳು, ಹೆಪ್ಪುಗಟ್ಟಿದ ಪ್ಲಾಸ್ಮಾ ಮತ್ತು ಪ್ಲೇಟೈಟ್‌ಗಳಂತಹ ಘಟಕಗಳಲ್ಲಿ 200ರಿಂದ 1,100 ರು. ಪಡೆಯಬಹುದಾಗಿದೆ. ವಿವಿಧ ರಾಜ್ಯಗಳಿಗೆ ಈ ಸಂಬಂಧ ಪತ್ರ ಬರೆಯಲಾಗಿದ್ದು, 2022ರ ಪರಿಷ್ಕೃತ ಮಾರ್ಗಸೂಚಿ ಅನು ಸರಿಸುವಂತೆ ಸೂಚಿಸಲಾಗಿದೆ.

Categories
ರಾಷ್ಟ್ರೀಯ ವಾರ್ತೆ

ಇತಿಹಾಸದಲ್ಲಿ ಮೊದಲ ಬಾರಿ ಅಯ್ಯಪ್ಪ ಸ್ವಾಮಿ ದರ್ಶನ ಪಡೆದ ಮಂಗಳಮುಖಿ.!!

ಇತಿಹಾಸದಲ್ಲಿ ಮೊದಲ ಬಾರಿ ಅಯ್ಯಪ್ಪ ಸ್ವಾಮಿ ದರ್ಶನ ಪಡೆದ ಮಂಗಳಮುಖಿ.!!
– ಶಬರಿಮಲೆ ಪ್ರವೇಶಿಸಿದ ಮಂಗಳಮುಖಿ ನಿಶಾ ಕ್ರಾಂತಿ!
– ಟ್ರಾನ್ಸ್‌ಜೆಂಡ‌ರ್ ಅನ್ನೋ ಗುರುತಿನ ಪತ್ರದ ಆಧಾರದ ಮೇಲೆ ಕೇರಳ ಸರ್ಕಾರದ ಅನುಮತಿ!

NAMMUR EXPRESS NEWS
ಕೇರಳ: ಶತಮಾನಗಳಿಂದಲೂ ಮಹಿಳೆಯರಿಗೆ ಶಬರಿಮಲೆ ದೇವಸ್ಥಾನ ಪ್ರವೇಶಿಸಲು ಅವಕಾಶ ನೀಡದ ಸಂಪ್ರದಾಯ ಮುಂದುವರಿದಿತ್ತು. ಆದರೆ ಈ ಬಾರಿ ಶಬರಿಮಲೆ ದೇವಸ್ಥಾನದಲ್ಲಿ ಮಂಗಳಮುಖಿಯೊಬ್ಬರು ಭೇಟಿ ನೀಡಿದ್ದು ಸಂಚಲನ ಮೂಡಿಸಿದ್ದಾರೆ. ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಮಂಗಳಮುಖಿಯೊಬ್ಬರು ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದಿದ್ದಾರೆ. ಆಜನ್ಮ ಬ್ರಹ್ಮಚಾರಿ ಅಂತ ಕರೆಯಲಾಗೋ ಅಯ್ಯಪ್ಪನ ಈ ಪುಣ್ಯಕ್ಷೇತ್ರಕ್ಕೆ ಸಾಮಾನ್ಯವಾಗಿ 10 ರಿಂದ 50 ವರ್ಷದೊಳಗಿನ ಮಹಿಳೆಯರಿಗೆ ಎಂಟ್ರಿ ಇಲ್ಲ. ಈ ಸಂಪ್ರದಾಯವನ್ನ ಚಾಚೂ ತಪ್ಪದೇ ಶತಮಾನಗಳಿಂದ ಪಾಲಿಸಿಕೊಂಡು ಬರಲಾಗಿದೆ. ಆದರೆ ಇದೀಗ ಮೊದಲ ಬಾರಿಗೆ ತೃತೀಯಲಿಂಗಿ ಜೋಗಿನಿ ನಿಶಾ ಡಿಸೆಂಬರ್ 31 ರಂದು ಶಬರಿಮಲೆಗೆ ಬಂದು ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದಿದ್ದಾರೆ. ಅಂದ ಹಾಗೆ ಅವರು ಟ್ರಾನ್ಸ್‌ಜೆಂಡ‌ರ್ ಅನ್ನೋ ಗುರುತಿನ ಪತ್ರದ ಆಧಾರದ ಮೇಲೆ ಕೇರಳ ಸರ್ಕಾರ ಅವರಿಗೆ ಭೇಟಿ ನೀಡೋಕೆ ಅವಕಾಶ ನೀಡಿತ್ತು.

ತೃತೀಯಲಿಂಗಿ ನಿಶಾ ಕ್ರಾಂತಿ ಮಾತನಾಡಿ, ಶಬರಿಮಲೆ ಬೆಟ್ಟದಲ್ಲಿ ಅಯ್ಯಪ್ಪ ಸ್ವಾಮಿಯ ದರ್ಶನ ನೀಡಿದ ಕೇರಳ ಸರ್ಕಾರಕ್ಕೆ ಧನ್ಯವಾದ. ಅನೇಕ ತೃತೀಯಲಿಂಗಿಗಳು ಅಯ್ಯಪ್ಪ ಮಾಲೆ ಧರಿಸಿ ಭಗವಂತನ ದರ್ಶನ ಪಡೆಯಲು ಬಯಸುತ್ತಾರೆ. ತೃತೀಯಲಿಂಗಿಯಾಗಿ ದರ್ಶನ ನೀಡುತ್ತಿರುವುದು ಉತ್ತಮ ಬೆಳವಣಿಗೆ. ಅಯ್ಯಪ್ಪನ ದರ್ಶನಕ್ಕೆಂದು ಶಬರಿಮಲೆ ಬೆಟ್ಟವನ್ನು ಹತ್ತಿದ ನಂತರ ಎಲ್ಲರಂತೆ ತಾನೂ ಹುಟ್ಟಿ ಧನ್ಯಳಾಗಿದ್ದೇನೆ ಎಂದು ನಿಶಾ ಕ್ರಾಂತಿ ಹೇಳಿದ್ದಾರೆ. ಶಬರಿಮಲೆಯು ಕೇರಳ ರಾಜ್ಯದ ಶಬರಿಮಲೆ ಬೆಟ್ಟಗಳಲ್ಲಿರುವ ಪ್ರಸಿದ್ಧ ಪುಣ್ಯಕ್ಷೇತ್ರವಾಗಿದೆ. ಬಯಸಿದ ಇಷ್ಟಾರ್ಥಗಳು ಈಡೇರುತ್ತವೆ ಎಂಬುದು ಜನರ ನಂಬಿಕೆ. ಪ್ರತಿ ವರ್ಷ ನವೆಂಬರ್ ತಿಂಗಳಲ್ಲಿ ಭಕ್ತರು ಅಯ್ಯಪ್ಪ ದೀಕ್ಷಾ ಮಾಲೆಗಳನ್ನು ಧರಿಸುತ್ತಾರೆ ಮತ್ತು ಸಂಕ್ರಾಂತಿಯ ಸಮಯದಲ್ಲಿ ಶಬರಿಮಲೆಯಲ್ಲಿ ಅಯ್ಯಪ್ಪನನ್ನು ಭೇಟಿ ಮಾಡುತ್ತಾರೆ.

Categories
ರಾಷ್ಟ್ರೀಯ ವಾರ್ತೆ

ಗ್ಯಾಸ್‌ ಸಿಲಿಂಡ‌ರ್ ಬಳಕೆ ಮಾಡುವವರಿಗೆ ಹೊಸ ರೂಲ್ಸ್.!

ಗ್ಯಾಸ್‌ ಸಿಲಿಂಡ‌ರ್ ಬಳಕೆ ಮಾಡುವವರಿಗೆ ಹೊಸ ರೂಲ್ಸ್.!
– ಈ ನಿಯಮ ಪಾಲಿಸುವುದು ಕಡ್ಡಾಯ ಎಂದ ಸರ್ಕಾರ!

NAMMUR EXPRESS NEWS
ನವದೆಹಲಿ: ಎಲ್ ಪಿ ಜಿ ಗ್ಯಾಸ್ ಸಿಲೆಂಡ‌ರ್ ಅನ್ನು ಉಚಿತವಾಗಿ ಬಿಪಿಎಲ್ ಕಾರ್ಡ್ ಹೊಂದಿರುವ ಅಥವಾ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಕೇಂದ್ರ ಸರ್ಕಾರ ವಿತರಣೆ ಮಾಡಿದೆ. ಇದಕ್ಕಾಗಿಯೇ ಪ್ರಧಾನಮಂತ್ರಿ ಉಜ್ವಲ ಯೋಜನೆಯನ್ನು ಜಾರಿಗೆ ತರಲಾಗಿದೆ. ಇಂದು ಲಕ್ಷಾಂತರ ಕುಟುಂಬಗಳು ಉಚಿತವಾಗಿ ಎಲ್ ಪಿ ಜಿ ಗ್ಯಾಸ್‌ ಕನೆಕ್ಷನ್‌ ಪಡೆದುಕೊಳ್ಳುವಂತಾಗಿದೆ. ಉಜ್ವಲ ಯೋಜನೆಯ ಅಡಿಯಲ್ಲಿ ಮನೆ ಮನೆಯಲ್ಲಿಯೂ ಇಂದು ಗ್ಯಾಸ್ ಸಿಲಿಂಡ‌ರ್ ಬಳಕೆ ಕಾಣಬಹುದು. ಗ್ಯಾಸ್ ಸಿಲೆಂಡ‌ರ್ ಬಳಕೆ ಮಾಡುವಾಗ ಸಾಕಷ್ಟು ಮುತುವರ್ಜಿ ವಹಿಸುವುದು ಅತ್ಯಗತ್ಯ. ಇಲ್ಲವಾದರೆ ದೊಡ್ಡ ಅನಾಹುತವನ್ನೇ ಎದುರಿಸಬೇಕಾಗುತ್ತದೆ. ಗ್ಯಾಸ್ ಬಳಕೆ ಮಾಡುವ ಸಂದರ್ಭದಲ್ಲಿ ಯಾವುದೇ ರೀತಿಯ ಅವಘಡಗಳು ಸಂಭವಿಸದ ಹಾಗೇ ಮುನ್ನೆಚ್ಚರಿಕೆಯನ್ನು ವಹಿಸಲು ಪ್ರತಿಯೊಬ್ಬರಿಗೂ ಸರ್ಕಾರವು ಸೂಚನೆಯನ್ನು ನೀಡಿದೆ. ಇದಕ್ಕಾಗಿಯೇ ಎಲ್ ಪಿಜಿ ಗ್ಯಾಸ್ ಸಿಲಿಂಡರ್‌ ಬಳಕೆ ಮಾಡುವ ಪ್ರತಿಯೊಬ್ಬರಿಗೂ ಹೊಸ ರೂಲ್ಸ್ ಅನ್ನು ಸರ್ಕಾರ ಕಡ್ಡಾಯಗೊಳಿಸಿದೆ.

ಸಿಲಿಂಡ‌ರ್ ಸುರಕ್ಷತೆಗಾಗಿ ಸರ್ಕಾರ ಈ ಹೊಸ ನಿಯಮವನ್ನು ಮಾಡಿದೆ. ಗ್ಯಾಸ್ ಸಿಲಿಂಡ‌ರ್ ಬಳಸುವವರು ಪಂಚವಾರ್ಷಿಕ ಅನಿಲ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಸರ್ಕಾರ ತಿಳಿಸಿದೆ. ಇನ್ನು ಮುಂದೆ ಭಾರತ ಗ್ಯಾಸ್ ನಂತಹ ಕಂಪನಿಗಳು ಸುರಕ್ಷತೆ ಹೊಂದಿರುವ ಎಲ್‌ಪಿಜಿ ಕನೆಕ್ಷನ್ ಕುಟುಂಬಗಳಿಗೆ ಮಾತ್ರ ಸಿಲಿಂಡ‌ರ್ ವಿತರಣೆ ಮಾಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಗ್ಯಾಸ್ ಸಿಲೆಂಡ‌ರ್ ಸುರಕ್ಷತೆ ಇಲ್ಲದೆ ಇರುವ ಕುಟುಂಬಗಳಿಗೆ ಇನ್ನು ಮುಂದೆ ಗ್ಯಾಸ್‌ ವಿತರಣೆಯನ್ನು ಸ್ಥಗಿತಗೊಳಿಸಲಾಗುವುದು. ಅನಿಲ ಸುರಕ್ಷತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಭಾರತ್‌ ಸಿಲೆಂಡ‌ರ್ ಈ ಹೊಸ ಉಪಕ್ರಮ ಕೈಗೊಂಡಿದೆ. ತನ್ನ ಗ್ರಾಹಕರ ಮನೆಗೆ ಸಿಬ್ಬಂದಿಗಳನ್ನು ಕಳುಹಿಸಿ ಪಂಚ ವಾರ್ಷಿಕ ಅನಿಲ ಸುರಕ್ಷತೆ ಬಗ್ಗೆ ಮಾಹಿತಿಯನ್ನು ನೀಡಿ ಗ್ಯಾಸ್‌ ಸಿಲಿಂಡ‌ರ್ ಸುರಕ್ಷತೆ ಪರಿಶೀಲನೆ ನಡೆಸಲಾಗುತ್ತದೆ.

ತಮ್ಮ ಪ್ರತಿ ಗ್ರಾಹಕರ ಮನೆಗೂ ಹೋಗಿ ಗ್ಯಾಸ್‌ ಸಿಲಿಂಡರ್ ನ ಸುರಕ್ಷತೆಯನ್ನು ಪರೀಕ್ಷೆ ಮಾಡಿ ವರದಿ ಸಲ್ಲಿಸಲಾಗುತ್ತದೆ. ಈ ಸಮಯದಲ್ಲಿ ಗ್ರಾಹಕರು 236 ರೂಪಾಯಿಗಳನ್ನು ಪಾವತಿ ಮಾಡಬೇಕು ಎಂದು ತಿಳಿಸಿದೆ. ನಿಮ್ಮ ಗ್ಯಾಸ್ ಸಿಲೆಂಡರ್ ಬಳಕೆ ಸುರಕ್ಷಿತವಾಗಿದ್ದರೆ ಅದೇ ರೀತಿ ವರದಿ ನೀಡಲಾಗುತ್ತದೆ ಹಾಗೂ ಬಳಸುತ್ತಿರುವ ಪೈಪ್ ಅಥವಾ ಟ್ಯೂಬ್ ಯಾವುದೇ ಐದು ವರ್ಷಕ್ಕಿಂತ ಹಳೆಯದಾಗಿದ್ದರೆ ಅಥವಾ ಅಪಾಯದ ಮಟ್ಟವನ್ನು ತಲುಪಿದ್ದರೆ ತಕ್ಷಣವೇ ಅದನ್ನು ಬದಲಾಯಿಸಲು ನಿಮಗೆ ಸೂಚನೆ ನೀಡಲಾಗುವುದು. ಭಾರತ್ ಗ್ಯಾಸ್‌ ಗ್ರಾಹಕರು ನೀವಾಗಿದ್ದರೆ ನಿಮ್ಮ ಮನೆಗೆ ಸಿಬ್ಬಂದಿಗಳು ಬಂದಾಗ ಅವರ ಐಡೆಂಟಿಟಿ ಕಾರ್ಡ್ ಚೆಕ್ ಮಾಡಿ ನಂತರ ಮನೆಯ ಒಳಗೆ ಬಿಡಿ. ಇದು ಭಾರತ್ ಗ್ಯಾಸ್ ನೀಡಿರುವ ಸೂಚನೆಯಾಗಿದೆ.

Categories
ರಾಷ್ಟ್ರೀಯ ವಾರ್ತೆ

10 ಲಕ್ಷ ಸಾಲಕ್ಕೆ 3 ಲಕ್ಷ ರೂ ಸಬ್ಸಿಡಿ..!

10 ಲಕ್ಷ ಸಾಲಕ್ಕೆ 3 ಲಕ್ಷ ರೂ ಸಬ್ಸಿಡಿ..!
– ಅತ್ಯಂತ ಕಡಿಮೆ ಬಡ್ಡಿಗೆ ಪಿಎಂ ನರೇಂದ್ರ ಮೋದಿ ಸರಕಾರದಿಂದ ಹೊಸ ಯೋಜನೆ!

NAMMUR EXPRESS NEWS
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರಕಾರ ಹಲವು ಯೋಜನೆಗಳನ್ನು ಪ್ರಕಟಿಸಿದೆ. ಅದರಲ್ಲೂ ಸಣ್ಣ ವ್ಯವಹಾರ ನಡೆಸುವವರಿಗಾಗಿಯೇ ಮೋದಿ ಪ್ರಧಾನಮಂತ್ರಿ ಮುದ್ರಾ ಯೋಜನೆಯನ್ನು ಪ್ರಕಟಿಸಿದೆ. ಯೋಜನೆಯ ಅಡಿಯಲ್ಲಿ ಅತ್ಯಂತ ಕಡಿಮೆ ಬೆಲೆಗೆ ಸಾಲ ದೊರೆಯುವುದು ಮಾತ್ರವಲ್ಲ, 10 ಲಕ್ಷದ ವರೆಗೆ ಸಾಲ ಸೌಲಭ್ಯ ದೊರೆಯಲಿದೆ. ಪ್ರಧಾನ ಮಂತ್ರಿ ಮುದ್ರಾ ಯೋಜಯನ್ನು ಸ್ವತಃ ವ್ಯವಹಾರ ಮಾಡುವವರಿಗಾಗಿಯೇ ಜಾರಿಗೆ ತರಲಾಗಿದೆ.

ಪ್ರಮುಖವಾಗಿ ಸೂಕ್ಷ್ಮ, ಸಣ್ಣ ವ್ಯವಹಾರಗಳಿಗಾಗಿ ಈ ಯೋಜನೆಯ ಮೂಲಕ ಸಾಲ ಸೌಲಭ್ಯವನ್ನು ನೀಡಲಾಗುತ್ತದೆ. ಮುದ್ರಾ ಯೋಜನೆಯಡಿ 50 ಸಾವಿರ ರೂಪಾಯಿಯಿಂದ 10 ಲಕ್ಷ ರೂಪಾಯಿ ವರೆಗೆ ಸಾಲ ದೊರೆಯುತ್ತದೆ. ಸರಕಾರಿ ಸ್ವಾಮ್ಯದ ವಾಣಿಜ್ಯ ಬ್ಯಾಂಕುಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್, ಮೈಕ್ರೋ ಫೈನಾನ್ಸ್ ಹಾಗೂ ಬ್ಯಾಂಕೇತರ ಹಣಕಾಸು ಸಂಸ್ಥೆಗಳ ಮೂಲಕ ಈ ಯೋಜನೆಗೆ ಸಾಲವನ್ನು ಪಡೆಯಬಹುದಾಗಿದೆ. ಶಿಶು, ಕಿಶೋ‌ರ್, ತರುಣ್ ಸೇರಿದಂತೆ ಒಟ್ಟು ಮೂರು ಯೋಜನೆಗಳ ಮೂಲಕ ಸಾಲ ಪಡೆಯಬಹುದಾಗಿದೆ.

ಶಿಶು ಮುದ್ರಾ ಯೋಜನೆಯಡಿ 50000 ಯಲ್ಲಿ 5 ಲಕ್ಷದಿಂದ 10 ಲಕ್ಷ ರೂಪಾಯಿ ವರೆಗೆ ಸಾಲ ಪಡೆಯಲು ಅವಕಾಶವಿದೆ. ಪ್ರಧಾನ ಮಂತ್ರಿ ಮುದ್ರಾ ಯೋಜನೆಯನ್ನು ಏಪ್ರಿಲ್ 8, 2015 ರಲ್ಲಿ ಆರಂಭಿಸಲಾಗಿದೆ. ಈ ಯೋಜನೆಯ ಅಡಿಯಲ್ಲಿ ಸಾಲವನ್ನು ಪಡೆಯಲು ವಾಣಿಜ್ಯ ಬ್ಯಾಂಕುಗಳು, ಆರ್‌ಆರ್‌ಬಿ, ಸಣ್ಣ ಹಣಕಾಸು ಬ್ಯಾಂಕುಗಳು, ಎಂಎಫ್ ಐ ಗಳು ಮತ್ತು ಎನ್ ಬಿಎಫ್ ಸಿ ಗಳ ಮೂಲಕ ಪಡೆಯಬಹುದಾಗಿದೆ.

ನೇರವಾಗಿ ಬ್ಯಾಂಕುಗಳನ್ನು ಸಂಪರ್ಕಿಸಿ ಸಾಲಕ್ಕೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಸಾಲ ಪಡೆಯುವವರು ನೇರವಾಗಿ ಆನ್‌ಲೈನ್ ಮೂಲಕವೂ ಅರ್ಜಿಯನ್ನು ಸಲ್ಲಿಸಲು ಅವಕಾಶ Ad. www.udyamimitra.in ವೆಬ್‌ಸೈಟ್‌ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಮುದ್ರಾ ಯೋಜನೆಯ ಮೂಲಕ 2015-2016ನೇ ಸಾಲಿನಲ್ಲಿ 3,48,80,924 ಮಂದಿಗೆ ಸಾಲವನ್ನು ವಿತರಣೆ ಮಾಡಲಾಗಿದೆ. ಒಟ್ಟು 137449.27 ಕೋಟಿ ರೂಪಾಯಿ ಸಾಲ ಮಂಜೂರಾತಿಯಾಗಿದ್ದು, ಈ ಪೈಕಿ 132954.73 ಕೋಟಿ ರೂಪಾಯಿ ಸಾಲ ವಿತರಣೆ ಮಾಡಲಾಗಿದೆ.

Categories
ರಾಷ್ಟ್ರೀಯ ವಾರ್ತೆ

ಶ್ರೀ ರಾಮ ಪ್ರಾಣ ಪ್ರತಿಷ್ಠಾಪನೆ!

ಶ್ರೀ ರಾಮ ಪ್ರಾಣ ಪ್ರತಿಷ್ಠಾಪನೆ!
– ದಿವ್ಯ ಘಳಿಗೆಗೆ ದಿನ ಗಣನೆ!
– ದೂರದರ್ಶನ/ಎಲ್ಇಡಿ ಮೂಲಕ ವೀಕ್ಷಣೆಗೆ ವ್ಯವಸ್ಥೆ!
– ಶ್ರೀರಾಮ ಜನ್ಮಭೂಮಿ ಮಂದಿರದ ಸಂಪೂರ್ಣ ವಿವರಗಳು

NAMMUR EXPRESS NEWS
ನವದೆಹಲಿ: ಅಯೋಧ್ಯೆಯ ಶ್ರೀ ರಾಮ ಮಂದಿರದ ಪ್ರಾಣ‌ ಪ್ರತಿಷ್ಠಾಪನೆಯ ದಿವ್ಯ ಕ್ಷಣವನ್ನು ಕಣ್ತುಂಬಿಕೊಳ್ಳಲು ಇಡೀ ರಾಷ್ಟ್ರವೇ ಪುಳಕದಿಂದ ಕಾಯುತ್ತಿದೆ. ಇತ್ತ ಅಯೋಧ್ಯೆಯಿಂದ ಮನೆ‌ ಮನೆಗೂ ಮಂತ್ರಾಕ್ಷತೆಯೊಂದಿಗೆ ನಿವೇದನಾ ಪತ್ರವೂ ಬಂದಿದೆ.

ಈ ಪತ್ರದಲ್ಲಿ ಏನಿದೆ? ನೋಡಿ :

ವಿಕ್ರಮ ಸಂವತ್ಸರ 2080, ಯುಗಾಬ್ದ 5125 ಶ್ರೀ ಶೋಭಕೃನ್ನಾಮ ಸಂವತ್ಸರ, ಉತ್ತರಾಯಣ ಹೇಮಂತ ಋತು, ಪುಷ್ಯ ಮಾಸ, ಶುಕ್ಲ ಪಕ್ಷ, ದ್ವಾದಶಿ, ಸೋಮವಾರ ( ದಿನಾಂಕ: 22-01-2024) ಈ ಶುಭದಿನದಂದು, ಅಯೋಧ್ಯೆಯ ಶ್ರೀರಾಮ ಜನ್ಮಸ್ಥಾನದಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ಮಂದಿರದ ನೆಲ ಅಂತಸ್ತಿನಲ್ಲಿರುವ ಗರ್ಭಗುಡಿಯಲ್ಲಿ ಶ್ರೀ ರಾಮಲಲ್ಲಾ( ಬಲರಾಮ) ನ ನೂತನ ವಿಗ್ರಹದ ಪ್ರಾಣ ಪ್ರತಿಷ್ಠಾಪನೆಯ ನೆರವೇರಲಿದೆ. ದಿನಾಂಕ: 22-01-2024 ರಂದು ಬೆಳಗ್ಗೆ 11 ರಿಂದ ಮಧ್ಯಾಹ್ನ 1ರ ಮಧ್ಯದಲ್ಲಿ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ. ಅಯೋಧ್ಯ ನಗರಿಯಲ್ಲಿ ಈ ಸಂದರ್ಭದಲ್ಲಿ ಅಭೂತಪೂರ್ವ ಸಂಭ್ರಮದ ವಾತಾವರಣವು ನಿರ್ಮಾಣವಾಗಲಿದೆ. ಈ ಅಮೃತಗಳಿಗೆಯಲ್ಲಿ ತಾವು ಸಹ ತಮ್ಮ ತಮ್ಮ ಗ್ರಾಮ ಮೋಹಲ್ಲ, ಕಾಲೋನಿ, ಬಸ್ತಿಗಳಲ್ಲಿರುವ ಮಂದಿರಗಳಲ್ಲಿ ಕಾರ್ಯಕ್ರಮವನ್ನು ಆಯೋಜಿಸುವುದು ಮಂದಿರ ಕೇಂದ್ರಿತವಾಗಿ ಈ ಕಾರ್ಯಕ್ರಮವನ್ನು ಆಯೋಜಿಸುವುದು ಆಯಾ ಗ್ರಾಮದಲ್ಲಿರುವ ಮಂದಿರದಲ್ಲಿ ಆಸು ಪಾಸಿನಲ್ಲಿರುವ ರಾಮ ಭಕ್ತರನ್ನು ಒಗ್ಗೂಡಿಸಿ, ಕಾರ್ಯಕ್ರಮವನ್ನು ಆಯೋಜಿಸುವುದು.

ದೂರದರ್ಶನ ಅಥವಾ ಎಲ್ಇಡಿ ಪರದೆ ಮೇಲೆ ಪ್ರೊಜೆಕ್ಟರ್ ಹಾಗೂ ಯಾವುದೇ ತರಹದ ಪರದೆಯಲ್ಲಿ ಅಯೋಧ್ಯೆಯ ಕಾರ್ಯಕ್ರಮವನ್ನು ನೇರವಾಗಿ ವೀಕ್ಷಿಸಲು ವ್ಯವಸ್ಥೆ ಮಾಡುವುದು, ಆಯಾ ಮಂದಿರದಲ್ಲಿ ಪ್ರತಿಷ್ಠಾಪನೆಯಾಗಿರುವ ವಿವಿಧ ದೇವತೆಗಳ ಭಜನೆ, ಕೀರ್ತನೆ, ಪೂಜೆ ಮತ್ತು ಆರತಿಗಳನ್ನು ಮಾಡುವುದು. ಶ್ರೀರಾಮ ಜಯರಾಮ ಜಯ ಜಯ ರಾಮ ವಿಜಯ ಮಹಾಮಂತ್ರವನ್ನು ಸಾಮೂಹಿಕವಾಗಿ 108 ಬಾರಿ ಜಪ ಮಾಡುವುದು. ಇದರ ಜೊತೆಗೆ ಹನುಮಾನ್ ಚಾಲೀಸಾ, ಸುಂದರಕಾಂಡ ಪಾರಾಯಣ, ರಾಮರಕ್ಷಾ ಸ್ತೋತ್ರದ ಪಠಣಗಳನ್ನು ಸಹ ಜೋಡಿಸಿಕೊಳ್ಳಬಹುದು. ಇದರಿಂದ ಎಲ್ಲಾ ದೇವಾದಿ ದೇವತೆಗಳು ಪ್ರಸನ್ನರಾಗಲಿ ಮತ್ತು ವಾತಾವರಣವು ಸ್ವಸ್ತಿಕವಾಗಿ ರಾಮಮಯವಾಗಲಿ. ಪ್ರತಿಷ್ಠಾಪನೆಯ ನಂತರ ಶಂಖನಾದ ಮತ್ತು ಗಂಟನಾದದೊಂದಿಗೆ ಆರತಿ ಮತ್ತು ಪ್ರಸಾದದ ವಿತರಣೆಯನ್ನು ಮಾಡುವುದು, ಈ ಶುಭದಿನದಂದು ಎಲ್ಲ ದೂರದರ್ಶನ ಚಾನೆಲ್ ಗಳಲ್ಲಿ ಪ್ರಾಣ ಪ್ರತಿಷ್ಠಾಪನ ಕಾರ್ಯಕ್ರಮದ ನೇರಪ್ರಸಾರ ಇರುತ್ತದೆ.

ಪ್ರಾಣ ಪ್ರತಿಷ್ಠಾಪನೆಯ ದಿನದಂದು ಸಂಜೆ ಸೂರ್ಯಾಸ್ತವಾದ ಮೇಲೆ ತಮ್ಮ ತಮ್ಮ ಮನೆಗಳ ಮುಂದೆ ಎಲ್ಲಾ ದೇವಾದಿದೇವತೆಗಳನ್ನು ಪ್ರಸನ್ನಗೊಳಿಸಲು ದೀಪಗಳನ್ನು ಬೆಳಗುವುದು. ಜಗತ್ತಿನ ಕೋಟಿ ಕೋಟಿ ಮನೆಗಳ ಮುಂದೆ ದೀಪೋತ್ಸವ ನಡೆದು ಇಡೀ ಜಗತ್ತು ದೀಪಗಳ ಮಾಲೆಯಿಂದ ಜ್ಯೋತಿರ್ಮಯವಾಗುವುದು. ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾಪನೆಯ ದಿನದ ನಂತರ ಪ್ರಭು ಶ್ರೀ ರಾಮಲಲ್ಲ ದರ್ಶನ ಮತ್ತು ನವ ನಿರ್ಮಿತ ಭವ್ಯ ಜನ್ಮಭೂಮಿ ಮಂದಿರವನ್ನು ದರ್ಶಿಸಲು ತಮಗೆ ಅನುಕೂಲದ ಸಮಯದಲ್ಲಿ ಪರಿವಾರ ಸಮೇತರಾಗಿ ಅಯೋಧ್ಯ ನಗರಿಗೆ ಬರುವಂತೆ ಮತ್ತು ಅದರಿಂದ ಪ್ರಭು ಶ್ರೀರಾಮಚಂದ್ರನ ಸಂಪೂರ್ಣ ಕೃಪೆಗೆ ಪಾತ್ರರಾಗುವಂತೆ ತಮ್ಮಲ್ಲಿ ವಿನಂತಿಸುತ್ತೇವೆ. ವಿ. ಸು : ಈ ಪ್ರತಿಷ್ಠಾಪನೆಯ ದಿನ ಯಾವುದೇ ಮೆರವಣಿಗೆ, ಶೋಭಾಯಾತ್ರೆ, ಸಾರ್ವಜನಿಕ ಕಾರ್ಯಕ್ರಮ ಮತ್ತು ಪಟಾಕಿ ಸಿಡಿಸುವುದಕ್ಕೆ ಅವಕಾಶವಿರುವುದಿಲ್ಲ.

ಶ್ರೀರಾಮ ಜನ್ಮಭೂಮಿ ಮಂದಿರದ ವಿವರಣೆ ಮತ್ತು ಪರಿಚಯ :

– ಪರಂಪರಾನುಗತ ಶೈಲಿಯಲ್ಲಿ ಮಂದಿರ ನಿರ್ಮಾಣ.
– ಪೂರ್ವ ಪಶ್ಚಿಮವಾಗಿ ಉದ್ದ 380 ಅಡಿ, ಅಗಲ 250 ಅಡಿ ಮತ್ತು ಎತ್ತರ 161 ಅಡಿ ಅಳತೆಯಲ್ಲಿ ಮಂದಿರ ನಿರ್ಮಾಣ.
– ಮೂರು ಮಹಡಿಗಳ ಮಂದಿರ ಪ್ರತಿ ಮಹಡಿಯ ಎತ್ತರ 20 ಅಡಿ, ಒಟ್ಟು 392 ಸ್ತಂಭಗಳು ಮತ್ತು 44 ಬಾಗಿಲುಗಳು.
– ನೆಲಮಹಡಿಯ ಗರ್ಭಗೃಹದಲ್ಲಿ ಶ್ರೀರಾಮಲಲ್ಲನ ವಿಗ್ರಹ ಮತ್ತು ಮೊದಲನೇ ಮಹಡಿಯ ಗರ್ಭಗುಡಿಯಲ್ಲಿ ಶ್ರೀರಾಮ್ ದರ್ಬಾರ್.
– ಒಟ್ಟು ಐದು ಮಂಟಪಗಳು : ನೃತ್ಯ ಮಂಟಪ, ರಂಗಮಂಟಪ, ಸಭಾ ಮಂಟಪ, ಪ್ರಾರ್ಥನಾ ಮಂಟಪ ಮತ್ತು ಕೀರ್ತನ ಮಂಟಪ.
– ಸ್ತಂಭಗಳು ಮತ್ತು ಬಾಗಿಲುಗಳ ಮೇಲೆ ದೇವಾದಿ ದೇವತೆಗಳ ಮತ್ತು ದೇವಾಂಗನಿಯರ ಮೂರ್ತಿಗಳು.
– 16.5 ಅಡಿ ಎತ್ತರವನ್ನು 32 ಮೆಟ್ಟಿಲುಗಳಲ್ಲಿ ಕ್ರಮಿಸಿ, ಸಿಂಹದ್ವಾರದ ಮೂಲಕ ಪೂರ್ವದಿಕ್ಕಿನಿಂದ ಮಂದಿರಕ್ಕೆ ಪ್ರವೇಶ.
– ದಿವ್ಯಾಂಗರು ಮತ್ತು ವೃದ್ಧರಿಗಾಗಿ ಜಾರು ಮೆಟ್ಟಿಲು ಮತ್ತು ಲಿಫ್ಟ್ ವ್ಯವಸ್ಥೆ.
– ಆಯತಾಕಾರವಾಗಿ ಮಂದಿರದ ಸುತ್ತಲೂ ಪರಿಕ್ರಮ – ಉದ್ದ 732 ಮೀಟರ್, ಅಗಲ 4.25 ಮೀಟರ್.
– ಮಂದಿರದ ನಾಲ್ಕು ಮೂಲೆಗಳಲ್ಲಿ ನಾಲ್ಕು ಮಂದಿರಗಳು: ಭಗವಾನ್ ಸೂರ್ಯ, ಭಗವಾನ್ ಶಂಕರ, ಭಗವಾನ್ ಗಣಪತಿ, ದೇವಿ ಭಗವತಿ, ದಕ್ಷಿಣ ದಿಕ್ಕಿನಲ್ಲಿ ಹನುಮಂತ ಮತ್ತು ಉತ್ತರ ದಿಕ್ಕಿನಲ್ಲಿ ಮಾತಾ ಅನ್ನಪೂರ್ಣೇಶ್ವರಿಯ ಮಂದಿರ.
– ಮಂದಿರದ ಸಮೀಪದಲ್ಲಿ ಪೌರಾಣಿಕ ಕಾಲದ ಸೀತಾ ಕೊಳ.
– ಶ್ರೀ ರಾಮ ಜನ್ಮಭೂಮಿ ಮಂದಿರದ ಪರಿಸರದಲ್ಲಿ ಪ್ರಾಸ್ತವಿತ ಅನ್ನ ಮಂದಿರಗಳು : ಮಹರ್ಷಿ ವಾಲ್ಮೀಕಿ, ಮಹರ್ಷಿ ವಿಶ್ವಮಿತ್ರ, ಮಹರ್ಷಿ ಅಗಸ್ತ್ಯ, ನಿಶಾದರಾಜ ಗುಹ, ಮಾತಾ ಶಬರಿ ಮತ್ತು ದೇವಿ ಅಹಲ್ಯ.
– ನೈರುತ್ಯ ಭಾಗದಲ್ಲಿ ನವರತ್ನ ಕುಬೇರ ಪೀಠದಲ್ಲಿ ಸ್ಥಿತನಾದ ಶಿವ ಮಂದಿರದ ಜೀರ್ಣೋದ್ಧಾರ ಮತ್ತು ರಾಮಭಕ್ತ ಜಟಾಯು ರಾಜನ ಪ್ರತಿಮೆಯ ಸ್ಥಾಪನೆ ಯಾಗಿದೆ.