Categories
ರಾಷ್ಟ್ರೀಯ ವಾರ್ತೆ

ಮತ್ತೆ ಕೊರೋನಾ ಶಾಕ್..?!

ಮತ್ತೆ ಕೊರೋನಾ ಶಾಕ್..?!
– ಕೇರಳದಲ್ಲಿ ಮತ್ತೆ ಕೊರೋನಾ ಹೆಚ್ಚಳ
– ಲಾಕ್‌ ಡೌನ್‌ ಮಾಡುವ ಸಾಧ್ಯತೆ
– ಪರಿಸ್ಥಿತಿಯ ಮೇಲ್ವಿಚಾರಣೆಗೆ ಕರೆ

NAMMUR EXPRESS NEWS
ತಿರುವನಂತಪುರಂ: ದೇಶವನ್ನೇ ಕಾಡಿದ್ದ ಸಾಂಕ್ರಮಿಕ ರೋಗ ಕರೋನಾ ಮತ್ತೆ ಕೇರಳದಲ್ಲಿ ಉಲ್ಬಣವಾಗಿದ್ದು, ಜನ ಸಂಚಾರಕ್ಕೆ ನಿರ್ಬಂಧಗಳನ್ನು ವಿಧಿಸುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ. ಭಾರತದಲ್ಲಿ ಮೊದಲ ಪ್ರಕರಣ ಕೇರಳದಲ್ಲೇ ಕಂಡು ಬಂದಿತ್ತು. ಈಗ ಮತ್ತೆ ಅದೇ ರಾಜ್ಯದಲ್ಲಿ ಸಂಕ್ರಾಮಿಕ ರೋಗದ ಪ್ರಕರಣಗಳು ಹೆಚ್ಚಾಗುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ನಿರಂತರ ಮುಂಜಾಗ್ರತೆ ವಹಿಸುವಂತೆ ಸೂಚನೆಗಳನ್ನು ನೀಡಲಾಗಿದೆ. ಸಿಂಗಾಪುರ, ಮಲೇಷ್ಯಾ ಮತ್ತು ಇಂಡೋನೇಷ್ಯಾದಂತಹ ಏಷ್ಯಾದ ಹಲವಾರು ದೇಶಗಳಲ್ಲಿ ಕೊರೋನಾ ಪ್ರಕರಣಗಳು ದಾಖಲೆಯ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿರುವ ಈ ಸಮಯದಲ್ಲಿ ಕೇರಳದಲ್ಲೂ ಕೊರೋನಾ ತ್ವರಿತ ಏರಿಕೆ ಕಂಡಿದೆ. ಓಮಿಕ್ರಾನ್‌ನ ಉಪ ತಳಿಯಾದ ಜೆಎನ್.1 ಹೆಚ್ಚಳವು ಕೇರಳದಲ್ಲಿ ಈಗ ಆತಂಕಕ್ಕೆ ಕಾರಣವಾಗಿದೆ.

ಈ ಬಗ್ಗೆ ಚಿಂತಿಸಬೇಕಾಗಿಲ್ಲ. ಆದರೆ ವೈರಸ್‌ಗಳ ನಿರಂತರ ಮೇಲ್ವಿಚಾರಣೆ ಮಾಡುವ ಅಗತ್ಯವಿದೆ ಎಂದು ತಜ್ಞರು ಹೇಳಿದ್ದಾರೆ. ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಲೇ ಇದ್ದರೆ ಕೇರಳ ಸರ್ಕಾರವು ಸೂಕ್ಷ್ಮ ಪ್ರದೇಶಗಳಲ್ಲಿ ನಿರ್ಬಂಧಗಳು ಮತ್ತು ತಡೆಗಟ್ಟುವ ಕ್ರಮಗಳನ್ನು ವಿಧಿಸಬಹುದು ಎಂದು ಹೇಳಲಾಗುತ್ತಿದೆ. ಕೇವಲ ಒಂದು ತಿಂಗಳಲ್ಲಿ ಕೇರಳದಲ್ಲಿ ಸಕ್ರಿಯ ಪ್ರಕರಣಗಳು 33 ರಿಂದ 768 ಕ್ಕೆ ಏರಿಕೆಯಾಗಿದ್ದು ಆತಂಕವನ್ನು ಉಂಟುಮಾಡಿದೆ. ಜೆಎನ್.1 ಗೆ ಸಂಬಂಧಿಸಿದ ಸಾಮಾನ್ಯ ಲಕ್ಷಣಗಳೆಂದರೆ ಜ್ವರ, ಕೆಮ್ಮು, ಸುಸ್ತು, ಮೂಗು ಕಟ್ಟುವಿಕೆ, ಸ್ರವಿಸುವ ಮೂಗು, ಅತಿಸಾರ ಮತ್ತು ತಲೆನೋವು. ಇದರ ಹರಡುವಿಕೆಯ ತೀವ್ರತೆಯನ್ನು ಕಡಿಮೆ ಮಾಡಲು ನಡೆಯುತ್ತಿರುವ ಸಂಶೋಧನೆ ಮತ್ತು ಎಚ್ಚರಿಕೆ ಅಗತ್ಯವಾಗಿದೆ ಎಂದು ಕೊಚ್ಚಿಯ ಅಮೃತಾ ಆಸ್ಪತ್ರೆಯ ಸಾಂಕ್ರಾಮಿಕ ರೋಗಗಳ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಡಾ. ದೀಪು ಟಿ.ಎಸ್. ತಿಳಿಸಿದ್ದಾರೆ. ಪರಿಸ್ಥಿತಿಯ ಮೇಲ್ವಿಚಾರಣೆಗೆ ಕರೆ: ಈ ಬಗ್ಗೆ ಭಾರತ ಚಿಂತಿಸಬೇಕಾಗಿಲ್ಲ.

ಆದರೆ ನಾವು ಜಾಗರೂಕರಾಗಿರಬೇಕು. ಜಾಗರೂಕತೆಯು ವೈಜ್ಞಾನಿಕ ಸಮುದಾಯಕ್ಕೆ ಮಾತ್ರವಲ್ಲದೆ ಸಾಮಾನ್ಯ ಜನರಿಗೂ ಅಗತ್ಯವಿದೆ ಎಂದು ಡಾ ಗಿಲಾಡಾ ಹೇಳಿದ್ದಾರೆ. ಭಾರತೀಯ ಸಾರ್ಸ್-ಕೋವ್-2 ಜೀನೋಮಿಕ್ಸ್ ಕನ್ಫೋರ್ಟಿಯಂ ನ ಇತ್ತೀಚಿನ ಮಾಹಿತಿಯು ಕೇರಳದಲ್ಲಿ ಜೆಎನ್.1 ರೂಪಾಂತರದ ವೈರಸ್ ಇದೆ ಎಂದಿದೆ. ನಿಮಗಿದು ತಿಳಿದಿರಲಿ: ಪ್ರಸ್ತುತ ಕೋವಿಡ್ ಪ್ರಕರಣಗಳಲ್ಲಿ ಏರಿಕೆಯನ್ನು ಕಾಣುತ್ತಿದ್ದು ಜೆಎನ್.1 – ಬಿಎ.2.86 ಒಮಿಕ್ರಾನ್ ರೂಪಾಂತರದ ಉಪ ತಳಿಯಾಗಿದೆ. ಇದು ಇತರ ದೇಶಗಳಿಗೆ ಹರಡುವ ಮೊದಲು ಆಗಸ್ಟ್‌ನಲ್ಲಿ ಲಕ್ಸೆಂಬರ್ಗ್‌ನಲ್ಲಿ ಮೊದಲು ಪತ್ತೆಯಾಯಿತು. ಬಿಎ.2.86 ಅನ್ನು “ಪಿರೋಲಾ” ರೂಪಾಂತರ ಎಂದೂ ಕರೆಯುತ್ತಾರೆ.

Categories
ರಾಷ್ಟ್ರೀಯ ವಾರ್ತೆ

ಹಿಂದೂಗಳಿಗೆ ಮತ್ತೊಂದು ಜಯ..!

ಹಿಂದೂಗಳಿಗೆ ಮತ್ತೊಂದು ಜಯ..!
– ಶ್ರೀ ಕೃಷ್ಣ ಜನ್ಮ ಭೂಮಿ ಸರ್ವೇಗೆ ಹೈಕೋರ್ಟ್ ಅಸ್ತು
– ಏನಿದು ವಿವಾದ… ಹಿಂದೂಗಳಿಗೆ ಸಿಹಿ ಸುದ್ದಿ

NAMMUR EXPRESS NEWS
ಅಲಹಾಬಾದ್: ಭಗವಾನ್ ಶ್ರೀಕೃಷ್ಣನ ಜನ್ಮಸ್ಥಳ ಮಥುರಾದಲ್ಲಿ ಕೃಷ್ಣ ದೇವಸ್ಥಾನದ ಪ್ರದೇಶದಲ್ಲಿ ಶಾಹಿ ಈದ್ಧಾ ಮಸೀದಿ ನಿರ್ಮಿಸಲಾಗಿದ್ದು, ಈ ಬಗ್ಗೆ ಹಿಂದೂ ಪರ ಅರ್ಜಿದಾರರು ದೇವಾಲಯ ಸಂಕೀರ್ಣದ ವೈಜ್ಞಾನಿಕ ಸಮೀಕ್ಷೆ ಮಾಡಲು ಅನುಮತಿ ಕೋರಿ ಅಲಹಾಬಾದ್‌ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದರು. ಶಾಹಿ ಇದ್ದಾ ಮಸೀದಿ ಸಂಕೀರ್ಣವನ್ನು ಪರಿಶೀಲಿಸಲು ಆಯೋಗವನ್ನು ನೇಮಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ಗುರುವಾರ ಅಂಗೀಕರಿಸಿದೆ. ಅರ್ಜಿದಾರರ ಪರ ವಕೀಲ ರಂಜನಾ ಅಗ್ನಿಹೋತ್ರಿ ಮಾಧ್ಯಮದ ಜೊತೆ ಮಾತನಾಡಿ, ಸ್ಥಳವನ್ನು ಸಮೀಕ್ಷೆ ಮಾಡಲು ಆಯೋಗವನ್ನು ನೇಮಿಸಬೇಕೆಂಬ ನಮ್ಮ ಮನವಿಯನ್ನು ನ್ಯಾಯಾಲಯವು ಅನುಮತಿಸಿದೆ.

ಆದೇಶವನ್ನು ಅಪ್‌ಲೋಡ್ ಮಾಡಿದ ಬಳಿಕ ಹೆಚ್ಚಿನ ವಿವರಗಳು ಹೊರಬರಲಿವೆ ಎಂದಿದ್ದಾರೆ. ಮಥುರಾದಲ್ಲಿರುವ ಶಾಹಿ ಈದ್ಯಾ ಮಸೀದಿಯನ್ನು ಮೊಘಲ್ ಚಕ್ರವರ್ತಿ ಔರಂಗಜೇಬನ ಆದೇಶದ ಮೇರೆಗೆ ಕೃಷ್ಣ ಜನ್ಮಸ್ಥಳದ ಪಕ್ಕದಲ್ಲಿ ನಿರ್ಮಿಸಲಾಗಿದೆ ಎನ್ನುವ ಐತಿಹ್ಯಗಳಿವೆ. ಹಿಂದೂ ದೇವಾಲಯವನ್ನು ಕೆಡವಿ ಈದ್ಯಾ ಮಸೀದಿಯನ್ನು ನಿರ್ಮಾಣ ಮಾಡಲಾಗಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ. ಗುರುವಾರ ಮಧ್ಯಾಹ್ನ ಸುದ್ದಿಗಾರರೊಂದಿಗೆ ಮಾತನಾಡಿದ ವಕೀಲ ವಿಷ್ಣು ಶಂಕರ್ ಜೈನ್, ಅಡ್ವೊಕೇಟ್ ಕಮಿಷನರ್ ನೇಮಕ ಮಾಡಬೇಕು ಎಂಬ ನಮ್ಮ ಬೇಡಿಕೆಗೆ ನ್ಯಾಯಾಲಯ ಅನುಮತಿ ನೀಡಿದೆ. ಅಡ್ವಕೇಟ್ ಕಮಿಷನ‌ರ್ ಯಾರಾಗುತ್ತಾರೆ.

ವಿಧಾನಗಳೇನು ಮತ್ತು ಅದು ತ್ರಿಸದಸ್ಯ ಸಮಿತಿಯಾಗಬಹುದೇ? ಈ ಎಲ್ಲಾ ವಿಷಯಗಳು ಡಿಸೆಂಬರ್ 18ರಂದು ನಿರ್ಧಾರವಾಗುತ್ತವೆ ಎಂದಿದ್ದಾರೆ. ಶಾಹಿ ಈದ್ಲಾ ಮಸೀದಿಯಲ್ಲಿ ಸಾಕಷ್ಟು ಸಂಕೇತಗಳು ಮತ್ತು ಚಿಹ್ನೆಗಳು ಇವೆ ಮತ್ತು ವಾಸ್ತವಿಕ ಸ್ಥಿತಿಯನ್ನು ತಿಳಿಯಲು ನಿಜವಾದ ಅಡ್ವಕೇಟ್ ಕಮಿಷನರ್ ಅಗತ್ಯವಿದೆ ಎಂದು ನಾವು ಒತ್ತಾಯಿಸಿದ್ದೇವೆ. ನ್ಯಾಯಾಲಯವು ನಮ್ಮ ಅರ್ಜಿಯನ್ನು ಅಂಗೀಕರಿಸಿದೆ ಎಂದು ಅವರು ತಿಳಿಸಿದ್ದಾರೆ.

Categories
ರಾಷ್ಟ್ರೀಯ ವಾರ್ತೆ

ರೂಪದರ್ಶಿಗಳಾಗಿ ನಟಿಸುತ್ತಿದ್ದ ನಟರಿಗೆ ಶಾಕ್..!

ರೂಪದರ್ಶಿಗಳಾಗಿ ನಟಿಸುತ್ತಿದ್ದ ನಟರಿಗೆ ಶಾಕ್..!
– ಶಾರೂಕ್, ಅಕ್ಷಯ್, ಅಜಯ್‌ ದೇವಗನ್ ಅವರಿಗೆ ನೋಟಿಸ್
– ತಂಬಾಕು ಜಾಹೀರಾತಿನಲ್ಲಿ ನಟಿಸಿದ್ದಕ್ಕೆ ಶಿಕ್ಷೆ?!

NAMMUR EXPRESS NEWS
ಗುಟ್ಕಾ ಜಾಹೀರಾತುಗಳಲ್ಲಿ ರೂಪದರ್ಶಿಗಳಾಗಿ ಕಾಣಿಸಿಕೊಂಡಿರುವ ನಟರಾದ ಅಕ್ಷಯ್ ಕುಮಾರ್, ಶಾರುಖ್ ಖಾನ್ ಮತ್ತು ಅಜಯ್ ದೇವಗನ್ ಅವರಿಗೆ ತಂಬಾಕು ಉತ್ಪನ್ನದ ಬಳಕೆಯನ್ನು ಉತ್ತೇಜಿಸಿರುವುದನ್ನು ಪ್ರಶ್ನಿಸಿ ಕೇಂದ್ರೀಯ ಗ್ರಾಹಕ ರಕ್ಷಣೆ ಪ್ರಾಧಿಕಾರ ಅಕ್ಟೋಬರ್ 20ರಂದು ನೋಟಿಸ್‌ ಜಾರಿ ಮಾಡಿದೆ ಎಂದು ಕೇಂದ್ರ ಸರ್ಕಾರದ ಡೆಪ್ಯಟಿ ಸಾಲಿಸಿಟರ್ ಜನರಲ್ ಎಸ್.ಬಿ.ಪಾಂಡೆ ಅಲಹಾಬಾದ್ ಹೈಕೋರ್ಟ್‌ ಲಖನೌ ಪೀಠಕ್ಕೆ ತಿಳಿಸಿದ್ದಾರೆ.

ಪದ್ಮ ಪ್ರಶಸ್ತಿಗಳನ್ನು ಪಡೆದಿರುವ ಸೆಲೆಬ್ರಿಟಿಗಳು ಮತ್ತು ಸಿನೆಮಾ ಕಲಾವಿದರು ತಂಬಾಕು ಬಳಕೆ ಉತ್ತೇಜಿಸುವ ಜಾಹೀರಾತುಗಳಲ್ಲಿ ಕಾಣಿಸಿಕೊಂಡು ಯುವ ಸಮುದಾಯದ ದಿಕ್ಕು ತಪ್ಪಿಸುತ್ತಿರುವುದನ್ನು ಆಕ್ಷೇಪಿಸಿ ಅಡ್ವೊಕೇಟ್ ಮೋತಿಲಾಲ್ ಯಾದವ್‌ ಎನ್ನುವವರು ದಾವೆ ಹೂಡಿದ್ದಾರೆ.ಈ ದಾವೆಗೆ ಪ್ರತಿಕ್ರಿಯೆ ಸಲ್ಲಿಸರುವ ದುಬೆ ಈಗಾಗಲೇ ಶಾರೂಕ್ ಖಾನ್, ಅಕ್ಷಯ್ ಕುಮಾರ್ ಮತ್ತು ಅಜಯ್ ದೇವಗನ್‌ಗೆ ಶೋಕಾಸ್‌ ನೋಟಿಸ್‌ ಜಾರಿಯಾಗಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದ್ದಾರೆ.

Categories
ರಾಷ್ಟ್ರೀಯ ವಾರ್ತೆ

ಭಾರತದಲ್ಲಿ ವಿಶ್ವದ ಮೊದಲ 3ಡಿ ಮುದ್ರಿತ ದೇಗುಲ!

ಭಾರತದಲ್ಲಿ ವಿಶ್ವದ ಮೊದಲ 3ಡಿ ಮುದ್ರಿತ ದೇಗುಲ!
– ತೆಲಂಗಾಣದಲ್ಲಿದೆ ನ.24ರಿಂದ ದರುಶನಕ್ಕೆ ಮುಕ್ತ
– ಮಾನವನ ಭಕ್ತಿಗೆ ವಿಸ್ಮಯ-ಸ್ಫೂರ್ತಿದಾಯಕ ಸಾಕ್ಷಿ

NAMMUR EXPRESS NEWS
ತೆಲಂಗಾಣದಲ್ಲಿ ತಲೆಯೆತ್ತಿರುವ ವಿಶ್ವದ ಮೊದಲ 3ಡಿ ಮುದ್ರಿತ ದೇವಾಲಯ ಉದ್ಘಾಟನೆಗೊಂಡಿದೆ. ವಾಸ್ತುಶಿಲ್ಪದ ಸೌಂದರ್ಯ ಮತ್ತು ತಾಂತ್ರಿಕ ಜ್ಞಾನದೊಂದಿಗೆ ಅಸಾಧಾರಣ ರೀತಿಯಲ್ಲಿ ನಿರ್ಮಿಸಲಾದ ಆಧ್ಯಾತ್ಮಿಕ ಅದ್ಭುತವೇ ಸಿದ್ದಿಪೇಟೆಯಲ್ಲಿನ ಶ್ರೀಪಾದ ಕಾರ್ಯ ಸಿದ್ದೇಶ್ವರ ಸ್ವಾಮಿ ದೇವಸ್ಥಾನ. ಸಿಂಪ್ಲಿಫೋರ್ಜ್ ಕ್ರಿಯೇಷನ್ಸ್‌ ಸಹಯೋಗದಲ್ಲಿ ಅಪ್ಪುಜಾ ಇನ್ಸಾಟೆಕ್ ಅವರಿಂದ ಈ ವಿನೂತನ ದೇವಾಲಯವನ್ನು ನಿರ್ಮಿಸಲಾಗಿದ್ದು, ಸಿದ್ದಿಪೇಟೆಯ ಹೃದಯಭಾಗದಲ್ಲಿರುವ ಬೂರುಗಪಲ್ಲಿ ಮತ್ತು ವಾಯಪುರಿ ಎಂದು ಕರೆಯಲ್ಪಡುವ ಈ ದೇವಾಲಯವು ಸಾಂಸ್ಕೃತಿಕ ಪರಂಪರೆಗೆ ಸಾಕ್ಷಿಯಾಗಿದೆ.

ಈ ಭವ್ಯವಾದ ರಚನೆಯು 35.5 ಅಡಿ ಎತ್ತರ ಮತ್ತು 4,000 ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ. ಇದು ಮಾನವನ ಭಕ್ತಿಗೆ ಒಂದು ವಿಸ್ಮಯ-ಸ್ಫೂರ್ತಿದಾಯಕ ಸಾಕ್ಷಿಯಾಗಿದೆ. ಪ್ರತಿಷ್ಠಾಪನೆ ಪೂರ್ಣಗೊಂಡ ನಂತರ ನವೆಂಬರ್ 24 ರಿಂದ ಮೂರ್ತಿಗಳು ಸಾರ್ವಜನಿಕರ ದರ್ಶನಕ್ಕೆ ಮುಕ್ತವಾಗಲಿದೆ. ಸಂಪೂರ್ಣ 3 ಡಿ ಪ್ರಿಂಟಿಂಗ್ ಅಲ್ಲಿ ದೇಗುಲ ನಿರ್ಮಾಣ ಮಾಡಲಾಗಿದೆ.

Categories
ರಾಷ್ಟ್ರೀಯ ವಾರ್ತೆ

ಪಠ್ಯದಲ್ಲಿ ರಾಮಾಯಣ, ಮಹಾ ಭಾರತ?!

ಪಠ್ಯದಲ್ಲಿ ರಾಮಾಯಣ, ಮಹಾ ಭಾರತ?!
– ಶಾಲಾ ಪಠ್ಯಪುಸ್ತಕಗಳಲ್ಲಿ ಆಮೂಲಾಗ್ರ ಬದಲಾವಣೆ
– ಪಠ್ಯ ಪರಿಷ್ಕರಣಾ ಸಮಿತಿ ಚಿಂತನೆ

NAMMUR EXPRESS NEWS
ನವದೆಹಲಿ: ಪಠ್ಯಪುಸ್ತಕಗಳಲ್ಲಿ ಆಮೂಲಾಗ್ರ ಬದಲಾವಣೆ ತರಲು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ ರಚಿಸಿರುವ ಪಠ್ಯ ಪರಿಷ್ಕರಣಾ ಸಮಿತಿ ಚಿಂತನೆ ನಡೆಸಿದೆ. ಮಹಾಭಾರತ, ರಾಮಾಯಣವನ್ನು ಶಾಲೆಗಳ ಇತಿಹಾಸ ಪಠ್ಯದಲ್ಲಿ ಅಳವಡಿಸುವಂತೆ ಶಿಫಾರಸು ಮಾಡಿದೆ. ತರಗತಿಯ ಗೋಡೆಗಳಲ್ಲಿ ಸ್ಥಳೀಯ ಭಾಷೆಯಲ್ಲಿ ಸಂವಿಧಾನದ ಪ್ರಸ್ತಾವನೆ ಇರುವ ಫಲಕ ಹಾಕಬೇಕು ಎಂದು ಹೇಳಲಾಗಿದೆ. ಇತ್ತೀಚೆಗಷ್ಟೇ ಪಠ್ಯಗಳಲ್ಲಿ ಇಂಡಿಯಾ ಹೆಸರನ್ನು ಭಾರತ ಎಂದು ಬದಲಿಸಲು ಪಠ್ಯ ಪರಿಷ್ಕರಣಾ ಸಮಿತಿ ಶಿಫಾರಸು ಮಾಡಿತ್ತು. ಇದಾದ ನಂತರ ರಾಮಾಯಣ, ಮಹಾಭಾರತ ಸೇರ್ಪಡೆಗೆ ಶಿಫಾರಸು ಮಾಡಿದ್ದು, ಎನ್.ಸಿ.ಇ.ಆ‌ರ್.ಟಿ. ಇನ್ನು ಯಾವುದೇ ಅಂತಿಮ ತೀರ್ಮಾನ ಕೈಗೊಂಡಿಲ್ಲ. ಶೀಘ್ರದಲ್ಲಿ ಈ ಬಗ್ಗೆ ಅಂತಿಮವಾಗಲಿದೆ.

Categories
ರಾಷ್ಟ್ರೀಯ ವಾರ್ತೆ

ಕ್ರಿಕೆಟ್‌ ವಿಶ್ವಕಪ್‌: ಸೋಲಿನ ನೋವಲ್ಲಿ ದೇಶ!

ಕ್ರಿಕೆಟ್‌ ವಿಶ್ವಕಪ್‌: ಸೋಲಿನ ನೋವಲ್ಲಿ ದೇಶ!
– ಛೇ..ಎಲ್ಲೆಲ್ಲೂ ಅದೇ ಚರ್ಚೆ: ಸಮಾಧಾನ
– ಆಸ್ಟ್ರೇಲಿಯಾ ವಿರುದ್ದ ಭಾರತ ಸೋತಿದ್ದೇಕೆ..?

NAMMUR EXPRESS NEWS
ವಿಶ್ವಕಪ್‌ನಲ್ಲಿ ಭಾರತ ಕ್ರಿಕೆಟ್‌ ತಂಡದ ಸೋಲನ್ನು ಭಾರತೀಯರಿಗೆ ಪಂದ್ಯ ಮುಗಿದು ಒಂದು ದಿನ ಕಳೆದರೂ ಮರೆಯಲು ಆಗುತ್ತಿಲ್ಲ. ಭಾರತೀಯ ಆಟಗಾರರು ಕಣ್ಣೀರು ಸುರಿಸಿದ್ದಾರೆ. ಎಲ್ಲೆಲ್ಲೂ ಹತಾಶೆ ಕಂಡು ಬಂತು. ಆದರೆ ಈಗ ಅದೇ ಚರ್ಚೆ ಎಲ್ಲೆಡೆ ಕಂಡು ಬರುತ್ತಿದೆ. ಲೀಗ್‌ ಹಂತದಲ್ಲಿ ಸತತ 9 ಪಂದ್ಯಗಳನ್ನು ಗೆದ್ದಿರುವ ಭಾರತ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್‌ ತಂಡವನ್ನು ಭರ್ಜರಿಯಾಗಿಯೇ ಸೋಲಿಸಿ ವಿಶ್ವಕಪ್‌ ಫೈನಲ್‌ಗೆ ತಲುಪಿ ನೂರು ಕೋಟಿ ಜನರ ಮನಸು ಗೆದ್ದಿತ್ತು. ಇನ್ನೇನು ಗೆಲುವು ನಮ್ಮದೇ ಅನ್ನುವಷ್ಟರಲ್ಲಿ ಕೈಚೆಲ್ಲಿತು. ಭಾರತ 20 ವರ್ಷಗಳ ಹಿಂದಿನ ಸೇಡನ್ನು ತೀರಿಸಿಕೊಳ್ಳುತ್ತದೆ ಎಂದು ಕಾದು ಕುಳಿತಿದ್ದ ಭಾರತೀಯರಿಗೆ ಸೋಲನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಫಲಿಸಲಿಲ್ಲ ಭಾರತ ರಣತಂತ್ರ

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನ ಪಿಚ್, ನಿರೀಕ್ಷೆಗಿಂತ ನಿಧಾನವಾಗಿ ಮತ್ತು ಶುಷ್ಕವಾಗಿದ್ದು ನಿರ್ಣಾಯಕ ಪಾತ್ರವಹಿಸಿತ್ತು. ಜೊತೆಗೆ ಭಾರತ ತಂಡ ಮಾಡಿಕೊಂಡಿದ್ದ ರಣತಂತ್ರ ಫಲಿಸಲೇ ಇಲ್ಲ. ಎರಡನೇ ಇನ್ನಿಂಗ್ಸ್‌ನಲ್ಲಿ ಪಿಚ್‌ ಸ್ವರೂಪ ಬದಲಾಗಿತ್ತು. ನಿಧಾನಗತಿಯ ಪಿಚ್‌ ಲಾಭ ಪಡೆಯವಲ್ಲಿ ಭಾರತ ವಿಫಲವಾಯ್ತು. ಆಸ್ಟ್ರೇಲಿಯಾ ನಾಯಕ ಪ್ಯಾಟ್‌ ಕಮ್ಮಿನ್ಸ್‌ ಚಾಣಾಕ್ಷತೆ ಪಂದ್ಯದಲ್ಲಿ ಸಕ್ಸಸ್‌ ಆಗಿದೆ. ಬೌಲಿಂಗ್‌ ಬದಲಾವಣೆಯ ಮೂಲಕ ಭಾರತೀಯ ಆಟಗಾರರನ್ನು ಕಟ್ಟಿ ಹಾಕಿದ್ದಾರೆ.

ಆಸ್ಟ್ರೇಲಿಯಾ ತಂಡದ ಬ್ಯಾಟಿಂಗ್‌

ಭಾರತ ನೀಡಿದ್ದ ಗುರಿಯನ್ನು ಬೆನ್ನತ್ತಲು ಹೊರಟ ಆಸ್ಟ್ರೇಲಿಯಾ ತಂಡಕ್ಕೆ ಆರಂಭದಲ್ಲೇ ಆಕ್ರಮಣಕಾರಿ ಆಟಕ್ಕೆ ಮುಂದಾಗಿತ್ತು. ಟ್ರಾವೆಸ್‌ ಹೆಡ್‌ ಹಾಗೂ ಲಾಬುಶಂಗೆ ಉತ್ತಮ ಜೊತೆಯಾಟ ಬ್ರೇಕ್ ಮಾಡಲು ಸಾಧ್ಯವಾಗಲಿಲ್ಲ. ಇನ್ನು ಇಬ್ಬನಿ ಕಾರಣ ಒದ್ದೆಯಾದ ಚೆಂಡಿನ ಕಾರಣದಿಂದಾಗಿ ಸ್ಪಿನ್ನರ್‌ಗಳು ಹೆಚ್ಚು ಟರ್ನ್‌ ಮಾಡೋದಕ್ಕೆ ಸಾಧ್ಯವಾಗಿಲ್ಲ. ಇದು ಆಸ್ಟ್ರೇಲಿಯಾ ಆಟಗಾರರಿಗೆ ವರದಾನವಾಗಿತ್ತು. ಅಲ್ಲದೇ ಉತ್ತಮ ಜೊತೆಯಾಟಕ್ಕೂ ಸಹಕಾರಿಯಾತ್ತು.
ಆಸ್ಟ್ರೇಲಿಯಾವನ್ನು ಕಟ್ಟಿ ಹಾಕಲು ಬೌಲರ್‌ಗಳನ್ನು ಬಳಸಿಕೊಂಡ ರೀತಿ ಸರಿಯಾಗಿ ಇರಲಲ್ಲ. ಅಷ್ಟೇ ಅಲ್ಲ ಭಾರತ ಫೀಲ್ಡಿಂಗ್‌ ಕೂಡ ಹೇಳಿಕೊಳ್ಳುವಷ್ಟು ಚೆನ್ನಾಗಿ ಇರಲಿಲ್ಲ.

ಭಾರತ ಬ್ಯಾಟಿಂಗ್ ಕಳಪೆ!

ಆಸ್ಟ್ರೇಲಿಯಾದ ಪ್ರತೀ ಆಟಗಾರರು ಅದ್ಬುತ ಫೀಲ್ಡಿಂಗ್‌ ಭಾರತಕ್ಕೆ ಸಂಕಷ್ಟಕ್ಕೆ ನೂಕಿತ್ತು. ಇದೇ ಕಾರಣದಿಂದ ಭಾರತ ಕೇವಲ 241 ರನ್‌ಗಳಿಸಲಷ್ಟೇ ಸಾಧ್ಯವಾಯಿತು ಭಾರತ ತಂಡದ ಪರ ಶರ್ಮ, ವಿರಾಟ್‌ ಕೊಹ್ಲಿ ಹಾಗೂ ಕೆಎಲ್‌ ರಾಹುಲ್‌ ಹೊರತು ಪಡಿಸಿ ಉಳಿದ ಯಾವುದೇ ಆಟಗಾರರು ಉತ್ತಮ ಜೊತೆಯಾಟ ನೀಡುವಲ್ಲಿ ವಿಫಲವಾಗಿದ್ದು, ಭಾರತ ಸೋಲಿಗೆ ಪ್ರಮುಖ ಕಾರಣ. ಶುಭಮನ್‌ ಗಿಲ್‌, ಶ್ರೇಯಸ್‌ ಅಯ್ಯರ್‌, ಸೂರ್ಯಕುಮಾರ್‌ ಯಾದವ್‌, ರವೀಂದ್ರ ಜಡೇಜಾ ಆಡಲಿಲ್ಲ. ಕೆಎಲ್‌ ರಾಹುಲ್‌ ನಿಧಾನಗತಿಯ ಬ್ಯಾಟಿಂಗ್ ಭಾರತಕ್ಕೆ ಮಾರಕವಾಯಿತು. ಆದರೆ ಆಸ್ಟ್ರೇಲಿಯಾ ಬ್ಯಾಟಿಂಗ್ ಪಕ್ಕಾ ಮಾಡಿತು. ವಿಶ್ವ ಕಪ್ ಗೆದ್ದಿತು.

Categories
ರಾಷ್ಟ್ರೀಯ ವಾರ್ತೆ

ಸೋತರೂ ಬೆಸ್ಟ್ ಭಾರತ..!

ಸೋತರೂ ಬೆಸ್ಟ್ ಭಾರತ..!
– ವಿಶ್ವ ಕಪ್ ಅಲ್ಲಿ ಸತತ ಪಂದ್ಯ ಗೆದ್ದು ದಾಖಲೆ
– ಬ್ಯಾಟಿಂಗ್, ಬೌಲಿಂಗ್ ಅಲ್ಲೂ ಮಿಂಚಿಂಗ್: ವಿಶ್ವ ಕಪ್ ರನ್ನರ್ ಹಿರಿಮೆ

NAMMUR EXPRESS NEWS
ಅಹಮದಾಬಾದ್ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ವಿಶ್ವ ಕಪ್ ಫೈನಲ್ ಪಂದ್ಯ ಭಾರತ -ಆಸ್ಟ್ರೇಲಿಯಾ ನಡುವೆ ನಡೆದಿದ್ದು ಭಾರತ ಕಹಿ ಕಂಡಿದೆ. ಆದರೆ ಭಾರತ ಈ ಬಾರಿ ಬೆಸ್ಟ್ ಟೀಮ್ ಆಗಿದೆ. ಭಾರತ ಗೆದ್ದೇ ಗೆಲ್ಲುತ್ತದೆ ಎಂದು ನೂರಾರು ಕೋಟಿ ಜನರ ಹಾರೈಕೆ ನಮ್ಮ ಟೀಮ್ ಇಂಡಿಯಾಕ್ಕಿತ್ತು. ಆದರೆ ಕೊಂಚ ಯಾಮಾರಿದ ಕಾರಣ ಆಸಿಸ್ ಕಪ್ ಗೆದ್ದಿತು.
ಆದರೆ ಸತತವಾಗಿ 10 ಪಂದ್ಯ ಗೆದ್ದು ಭಾರತ ಈ ಪಂದ್ಯದಲ್ಲಿ ಹೊಸ ದಾಖಲೆ ಬರೆದಿದೆ. ಸತತವಾಗಿ 10 ಪಂದ್ಯ ಗೆದ್ದಿದ್ದು ಕೊಹ್ಲಿ 50ನೇ ಶತಕ ಗಳಿಸಿದ್ದು, ಪ್ರತಿ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿತ್ತು. ಆದರೆ ಕೊನೆ ಪಂದ್ಯದಲ್ಲಿ ಆಸಿಸ್ ಮುಂದೆ ತಲೆಬಾಗಬೇಕಾಯಿತು.

Categories
ರಾಷ್ಟ್ರೀಯ ವಾರ್ತೆ

6ನೇ ಬಾರಿಗೆ ಆಸಿಸ್ ಚಾಂಪಿಯನ್..!

6ನೇ ಬಾರಿಗೆ ಆಸಿಸ್ ಚಾಂಪಿಯನ್..!
– ಆಸ್ಟ್ರೇಲಿಯಾಕ್ಕೆ ವಿಶ್ವ ಕಪ್ ವಿನ್ನರ್ ಕಿರೀಟ
– ಕೋಟಿ ಕೋಟಿ ಭಾರತೀಯರಿಗೆ ಬೇಸರ

NAMMUR EXPRESS NEWS
ಮತ್ತೆ ಆಸ್ಟ್ರೇಲಿಯಾ ವಿಶ್ವ ಕಪ್ ಎತ್ತಿ ಹಿಡಿದಿದೆ. ಈ ಮೂಲಕ ಇಡೀ ದೇಶದ ಕ್ರಿಕೆಟ್ ಅಭಿಮಾನಿಗಳಲ್ಲಿ ಹೊಸ ನಿರಾಸೆ ಕಂಡು ಬಂತು. 241 ರನ್ ಗುರಿ ಕೊಟ್ಟಿದ್ದ ಭಾರತ 10 ಓವರ್ ಒಳಗೆ 3 ವಿಕೆಟ್ ಕಬಳಿಸಿತು. ಅಲ್ಲಿಂದ ವಿಕೆಟ್ ಬೀಳಲಿಲ್ಲ. ಕೊನೆಗೂ ಗೆದ್ದಿತು. ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್ ಅವರ 137 ರನ್ ಗಳಿಸಿ ಆಸ್ಟ್ರೇಲಿಯಾ ಭಾರತ ಬೌಲಿಂಗ್ ದಾಳಿಗೆ ಪ್ರತ್ಯುತ್ತರ ನೀಡಿದರು. ಇಡೀ ದೇಶದಲ್ಲಿ ಜನರು ಬೇಸರ ಪಟ್ಟರು. ಆದರೆ 9 ಪಂದ್ಯದಲ್ಲಿ ವಿರಾಟ ಪ್ರದರ್ಶನ ಮಾಡಿದ್ದ ಭಾರತ ಕೊನೆ ಪಂದ್ಯದಲ್ಲಿ ಎಡವಿತು. ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಮೂರು ವಿಭಾಗದಲ್ಲಿ ಕಳಪೆ ಪ್ರದರ್ಶನ ನೀಡಿತು. ಕೋಟಿ ಕೋಟಿ ಭಾರತೀಯರ ಹಾರೈಕೆ ಫಲ ನೀಡಲಿಲ್ಲ. ಆಸ್ಟ್ರೇಲಿಯಾ ಸಂಘಟಿತ ಹೋರಾಟದಿಂದ ಗೆಲುವು ಕಂಡರು.

Categories
ರಾಷ್ಟ್ರೀಯ ವಾರ್ತೆ

ಗೆದ್ದು ಬಾ ಭಾರತ..!

ಗೆದ್ದು ಬಾ ಭಾರತ..!
– ಮೂರನೇ ವಿಶ್ವ ಕಪ್ ಗೆಲುವಿಗೆ ಭಾರತ ಸಜ್ಜು
– ಎಲ್ಲಾ ಜಿಲ್ಲಾ ಕ್ರೀಡಾಂಗಣಗಳಲ್ಲಿ ಲೈವ್ ಮ್ಯಾಚ್
– ಇಡೀ ದೇಶವೇ ಪಂದ್ಯಕ್ಕೆ ಕಾತುರ

NAMMUR EXPRESS NEWS
ಅಹಮದಾಬಾದ್ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ವಿಶ್ವ ಕಪ್ ಫೈನಲ್ ಪಂದ್ಯ ಭಾರತ -ಆಸ್ಟ್ರೇಲಿಯಾ ನಡುವೆ ನಡೆಯಲಿದ್ದು, ಇಡೀ ದೇಶದ ಜನತೆ ಭಾರತ ಗೆಲುವಿಗಾಗಿ ಪ್ರಾರ್ಥನೆ ಮಾಡುತ್ತಿದ್ದಾರೆ. ನ.19ರಂದು 2 ಗಂಟೆಗೆ ಮ್ಯಾಚ್ ಶುರುವಾಗಲಿದೆ. ಈಗಾಗಲೇ ಭಾರತ 9 ಪಂದ್ಯದಲ್ಲಿ 9 ಗೆದ್ದಿದೆ. ಆಸ್ಟ್ರೇಲಿಯಾ 9 ಮ್ಯಾಚ್ ಪೈಕಿ 7 ಗೆದ್ದಿದೆ. ಕಳೆದ ವಿಶ್ವಕಪ್ ನಲ್ಲಿ ಸೆಮಿ ಫೈನಲ್ ಪಂದ್ಯದಲ್ಲಿ ಸೋತಿದ್ದ ಭಾರತ ಈ ಬಾರಿ ಸತತವಾಗಿ 10 ಪಂದ್ಯಗಳನ್ನು ಗೆದ್ದು ಫೈನಲ್ ತಲುಪಿದ್ದು 1996, 2014ರ ನಂತರ ಮತ್ತೊಮ್ಮೆ ವಿಶ್ವಕಪ್ ಗೆ ಗೆಲ್ಲಲು ಕಾತುರವಾಗಿದೆ.

ಎಲ್ಲಾ ಜಿಲ್ಲಾ ಕ್ರೀಡಾಂಗಣಗಳಲ್ಲಿ ಲೈವ್ ಮ್ಯಾಚ್

ರಾಜ್ಯದ ಜಿಲ್ಲಾ ಕ್ರೀಡಾಂಗಣಗಳಲ್ಲಿ ಬಿಗ್‌ ಸ್ಕ್ರೀನ್‌ಲ್ಲಿ ಕ್ರಿಕೆಟ್‌ ವಿಶ್ವಕಪ್‌ ಫೈನಲ್‌ ಪಂದ್ಯ ನೇರ ಪ್ರಸಾರ ಮಾಡಿ ವೀಕ್ಷಣೆಗೆ ಕ್ರೀಡಾಪಟುಗಳಿಗೆ ಹಾಗೂ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಮಾಡಿಕೊಡಬೇಕು ಎಂದು ರಾಜ್ಯ ಸರ್ಕಾರ ತಿಳಿಸಿದೆ. ಈ ಬಗ್ಗೆ ರಾಜ್ಯ ಸರ್ಕಾರದ ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸುತ್ತೋಲೆ ಹೊರಡಿಸಿದೆ. ನವೆಂಬರ್‌ 19 ರಂದು ನಡೆಯಲಿರುವ ವಿಶ್ವಕಪ್ ಕ್ರಿಕೆಟ್ ವಂದ್ಯಾವಳಿಯ ಅಂತಿಮ ಪಂದ್ಯದ ನೇರ ಪ್ರಸಾರವನ್ನು ಎಲ್ಲಾ ಜಿಲ್ಲೆಗಳ ಜಿಲ್ಲಾ ಕ್ರೀಡಾಂಗಣಗಳಲ್ಲಿ ಪ್ರಸಾರ ಮಾಡಬೇಕು ಎಂದು ತಿಳಿಸಿದೆ.

ದೊಡ್ಡ ಪರದೆಯಲ್ಲಿ ಅವಕಾಶ

ಜಿಲ್ಲಾ ಕ್ರೀಡಾಂಗಣಗಳಲ್ಲಿ ಸಾರ್ವಜನಿಕರಿಗೆ / ಕ್ರೀಡಾಪಟುಗಳಿಗೆ ಅಗತ್ಯ ಅಳತೆಯ ದೊಡ್ಡ ಪರದೆಯಲ್ಲಿ ವೀಕ್ಷಿಸಲು ಅನುಕೂಲವಾಗುವಂತೆ ವ್ಯವಸ್ಥೆ ಕಲ್ಪಿಸಬೇಕು. ಈ ಬಗ್ಗೆ ಅಗತ್ಯ ಪ್ರಚಾರ ಕೈಗೊಂಡು, ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಪಂದ್ಯ ವೀಕ್ಷಿಸುವಂತೆ ಕ್ರಮ ವಹಿಸಬೇಕು ಎಂದು ತಿಳಿಸಿದೆ. ಇನ್ನು ಈ ಸಂದರ್ಭದಲ್ಲಿ ಸೂಕ್ತ ಭದ್ರತಾ ವ್ಯವಸ್ಥೆಯನ್ನು ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಪೊಲೀಸ್‌ ಇಲಾಖೆಗೆ ಸೂಚಿಸಲಾಗಿದೆ.

ಫೈನಲ್‌ ಪಂದ್ಯದಲ್ಲಿ ಏರ್‌ ಶೋ

ಭಾನುವಾರ ನಡೆಯಲಿರುವ ಐಸಿಸಿ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯ ಭಾರತ-ಆಸ್ಪ್ರೇಲಿಯಾ ಫೈನಲ್‌ ಪಂದ್ಯವು ಹಲವು ಕಾರಣಗಳಿಂದ ಕುತೂಹಲ ಮೂಡಿಸಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಮೈದಾನದಲ್ಲಿ ಪಂದ್ಯ ಪ್ರಾರಂಭಕ್ಕೂ ಮುನ್ನ ಭಾರತೀಯ ವಾಯು ಸೇನೆ ವಿಶೇಷ ಏರ್‌ ಶೋ ಹಮ್ಮಿಕೊಂಡಿದೆ. ವಾಯುಪಡೆಯ ಸೂರ್ಯಕಿರಣ್‌ ತಂಡದ ನೇತೃತ್ವದಲ್ಲಿ ವೈಮಾನಿಕ ಸಾಹಸ ಪ್ರದರ್ಶನ ನಡೆಯಲಿದೆ. ಈ ನಿಟ್ಟಿನಲ್ಲಿ ಶುಕ್ರವಾರದಿಂದಲೇ ಪೂರ್ವಭ್ಯಾಸ ಆರಂಭವಾಗಿದೆ.

ಭಾರತ ಹಾಗೂ ಆಸ್ಟ್ರೇಲಿಯಾ ಪ್ರಧಾನಿ ಪಂದ್ಯ ವೀಕ್ಷಣೆ

ಪಂದ್ಯ ವೀಕ್ಷಣೆಗೆ ಪ್ರಧಾನಿ ನರೇಂದ್ರ ಮೋದಿ, ಆಸ್ಪ್ರೇಲಿಯಾ ಉಪ ಪ್ರಧಾನಿ ರಿಚರ್ಡ್‌ ಮಾರ್ಲ್ಸ್ ಆಗಮಿಸಲಿದ್ದಾರೆ. ಈಗಾಗಲೇ ಅಹಮದಾಬಾದ್‌ಗೆ ವಿಮಾನ ಪ್ರಯಾಣದರ 6 ಪಟ್ಟು ಹೆಚ್ಚಾಗಿದೆ. ಅಲ್ಲದೆ, ನಗರದಲ್ಲಿ ಹೋಟೆಲ್‌ ರೂಮ್‌ಗಳಿಗೆ ಬಾಡಿಗೆ ಹಲವು ಪಟ್ಟು ಹೆಚ್ಚಾಗಿದ್ದು, 1 ಲಕ್ಷ ರೂ.ವರೆಗೂ ಪಡೆಯಲಾಗುತ್ತಿದೆ ಎಂದ ಮೂಲಗಳು ತಿಳಿಸಿವೆ.

ಭಾರತ-ಆಸ್ಟ್ರೇಲಿಯಾ ಪಂದ್ಯಕ್ಕೆ ಉಗ್ರನ ಬೆದರಿಕೆ

ಖಲಿಸ್ತಾನಿ ಭಯೋತ್ಪಾದಕ ಸಂಘಟನೆ ಸಿಖ್ಸ್ ಫಾರ್ ಜಸ್ಟಿಸ್ ಮುಖ್ಯಸ್ಥ ಗುರುಪತ್ವಂತ್ ಸಿಂಗ್ ಪನ್ನುನ್ ವಿಶ್ವಕಪ್ ಫೈನಲ್ ಪಂದ್ಯಕ್ಕೆ ಬೆದರಿಕೆ ಹಾಕಿದ್ದಾನೆ. ನಾಳಿನ ಫೈನಲ್ ಪಂದ್ಯ ನಡೆಯೋದಕ್ಕೆ ನಾವು ಬಿಡುವುದಿಲ್ಲ, ನಿಲ್ಲಿಸಿಯೇ ನಿಲ್ಲಿಸುತ್ತೇವೆ ಅಂತ ಬೆದರಿಕೆ ಹಾಕಿದ್ದಾನೆ.

Categories
ರಾಷ್ಟ್ರೀಯ ವಾರ್ತೆ

ಭಾರತ್ ಜೈ ಹೋ…!

ಭಾರತ್ ಜೈ ಹೋ…!
– ಕ್ರಿಕೆಟ್ ಇತಿಹಾಸದಲ್ಲಿ ದಾಖಲೆ ಪುಟ ತೆರೆದ ಭಾರತ
– ನ್ಯೂಜಿಲ್ಯಾಂಡ್ ವಿರುದ್ಧ ವಿರೋಚಿತ ಗೆಲುವು
– ಕೊಹ್ಲಿ, ಶಮಿ, ಅಯ್ಯರ್ ಪಂದ್ಯದ ಹೀರೋಸ್
– ಇನ್ನೇನಿದ್ರು ಈ ವಿಶ್ವ ಕಪ್ ನಮ್ದೇ..!

NAMMUR EXPRESS NEWS
ವಿಶ್ವಕಪ್‌ನ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ವಿಶ್ವ ದಾಖಲೆಯ 50ನೇ ಶತಕ, ಮಹಮ್ಮದ್‌ ಸೆಮಿ 7 ವಿಕೆಟ್ ಬೌಲಿಂಗ್‌ ಆರ್ಭಟ, ಶ್ರೇಯಸ್ ಅಯ್ಯರ್ ಶತಕ, ಗಿಲ್, ರೋಹಿತ್, ರಾಹುಲ್ ಬ್ಯಾಟಿಂಗ್, ಜಡೆಜಾ ಕ್ಯಾಚಿಂಗ್ ಸೇರಿ ಇಡೀ ಟೀಮ್ ಇಂಡಿಯಾ ಭರ್ಜರಿ ಆಟಕ್ಕೆ ನ್ಯೂಜಿಲೆಂಡ್‌ ತಂಡ ತತ್ತರಿಸಿ ಹೋಗಿದೆ. ಈ ಮೂಲಕ ಭಾರತ ನ್ಯೂಜಿಲೆಂಡ್‌ ವಿರುದ್ದ 70 ರನ್‌ಗಳ ಭರ್ಜರಿ ಗೆಲುವು ದಾಖಲಿಸಿದ್ದು, ವಿಶ್ವಕಪ್‌ ಫೈನಲ್‌ಗೆ ಪಯಣ ಬೆಳೆಸಿದೆ. ಮುಂಬೈನ ವಾಂಖಡೆ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್‌ 2023 ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಭಾರತ ತಂಡ, ಮೊದಲು ಟಾಸ್ ಗೆದ್ದು ಬ್ಯಾಟಿಂಗ್‌ ನಡೆಸಿತು. ಆರಂಭಿಕರಾದ ರೋಹಿತ ಶರ್ಮಾ ಹಾಗೂ ಶುಭಮನ್‌ ಗಿಲ್‌ ಜೋಡಿ 71 ರನ್‌ಗಳ ಜೊತೆಯಾಟ ಆಡಿ ರೋಹಿತ್‌ ಶರ್ಮಾ 47 ರನ್‌ ಗಳಿಸಿ ಔಟಾದರು. ಶುಭಮನ್‌ ಗಿಲ್‌ 80 ರನ್‌ ಗಳಿಸಿ ಕಾಲು ಪೆಟ್ಟು ಆಗಿದ್ದರಿಂದ ರಿರ್ಟೈರ್ಡ್‌ ಹರ್ಟ್‌ ಆದರು.

ನಂತರ ಬಂದ ರನ್ ಮಿಷನ್ ವಿರಾಟ್‌ ಕೊಹ್ಲಿ ಹಾಗೂ ಶ್ರೇಯಸ್‌ ಅಯ್ಯರ್‌ ಅಬ್ಬರಿಸಿ ಕೊಹ್ಲಿ 113 ಎಸೆತಗಳಲ್ಲಿ 117 ರನ್‌ ಬಾರಿಸಿ 50 ಶತಕದ ವಿಶ್ವದಾಖಲೆಯ ಶತಕ ಸಿಡಿಸಿದರು. , ಶ್ರೇಯಸ್‌ ಅಯ್ಯರ್‌ ಕೇವಲ 70 ಎಸೆತಗಳಲ್ಲಿ 105 ರನ್‌ ಗಳಿಸುವ ಮೂಲಕ ಸತತ ಶತಕ ಬಾರಿಸಿದ ಕೀರ್ತಿಗೆ ಪಾತ್ರರಾದರು. ಬಳಿಕ ಕನ್ನಡಿಗ ಕೆಎಲ್‌ ರಾಹುಲ್‌ ಅತೀ ಹೆಚ್ಚು 39 ರನ್‌ ಗಳಿಸಿದರು. ಭಾರತ ಅಂತಿಮವಾಗಿ 50 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 397 ರನ್‌ ಗಳಿಸಿ 378 ಗುರಿ ನೀಡಿತು. ನ್ಯೂಜಿಲೆಂಡ್‌ ಪರ ಬೌಲಿಂಗ್ ಅಲ್ಲಿ ಟೀಂ ಸೌಥಿ 3 ವಿಕೆಟ್‌ ಪಡೆದುಕೊಂಡರೆ , ಟ್ರೆಂಟ್‌ ಬೌಲ್ಟ್‌ 1 ವಿಕೆಟ್‌ ಪಡೆದುಕೊಂಡಿದ್ದಾರೆ.

ಬೌಲಿಂಗ್ ಅಲ್ಲಿ ಮಿಂಚಿದ ಶಮಿ!

ಡ್ವೇನ್‌ ಕಾನ್ವೆ 13 ರನ್‌ ಗಳಿಸಿ ಆಡುತ್ತಿದ್ದಾಗ ಮೊಹಮ್ಮದ್‌ ಸೆಮಿ ಬಲಿ ಪಡೆದರು. ನಂತರ ಯುವ ಆಲ್‌ರೌಂಡರ್‌ ರಚಿನ್‌ ರವೀಂದ್ರ ಅವರನ್ನು ಕೂಡ ಸೆಮಿ ಔಟ್‌ ಮಾಡಿದರು. ನಂತರ ನಾಯಕ ಕೇನ್‌ ವಿಲಿಯಂಸನ್‌ ಜೊತೆಯಾದ ಮಿಚೆಲ್‌ ಇನ್ನಿಂಗ್ಸ್‌ ಕಟ್ಟಲು ಮುಂದಾಗಿ ಈ ಜೋಡಿ 2ನೇ ವಿಕೆಟ್‌ಗೆ ಬರೋಬ್ಬರಿ 190 ರನ್‌ ಗಳ ಜೊತೆಯಾಟ ಆಡಿತು. ಭಾರತದ ಬೌಲಿಂಗ್ ಪಡೆ ಇಬ್ಬರ ತಡೆಯಲು ಸುಸ್ತಾದರು. ವಿಲಿಯಂಸನ್‌ 69 ರನ್‌ ಗಳಿಸಿ ,ಮಿಚೆಲ್ 119 ಎಸೆತಗಳಲ್ಲಿ 134 ರನ್‌ ಸಿಡಿಸಿದರು. ಆದರೆ ಈ ಜೋಡಿಯನ್ನು ಕೂಡ ಮಹಮ್ಮದ್‌ ಶಮಿ ಔಟ್ ಮಾಡುವ ಮೂಲಕ ಇಂಡಿಯಾ ಗೆಲುವಲ್ಲಿ ಹೀರೋ ಆದರು. ಒಂದು ಬಾರಿ ಶಮಿ ವಿಲಿಯಮ್ಸನ್ ಕ್ಯಾಚ್ ಕೈ ಬಿಟ್ಟರು. ಆದರೆ ಅವರ ಬಲಿ ಪಡೆದರು. ಈ ಮೂಲಕ ವಿಶ್ವ ಕಪ್ ಕ್ರಿಕೆಟ್ ಅಲ್ಲಿ 50 ವಿಕೆಟ್ ಪಡೆದ ಮೊದಲ ಆಟಗಾರ ಎಂಬ ಖ್ಯಾತಿ ಪಡೆದರು.

ಬಳಿಕ ಗ್ಲೇನ್‌ ಫಿಲಿಫ್‌ 41 ರನ್‌ ಗಳಿಸಿದ್ದು ಹೊರತು ಪಡಿಸಿದರೆ ಉಳಿದ ಯಾವುದೇ ಆಟಗಾರರು ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ನಿಲ್ಲಲು ಅವಕಾಶವನ್ನೇ ನೀಡಲಿಲ್ಲ. ಶಮಿ 9.5 ಓವರ್‌ ಬೌಲಿಂಗ್‌ ಮಾಡಿದ್ದು, 57 ರನ್‌ ನೀಡಿ 7 ವಿಕೆಟ್‌ ಕಬಳಿಸುವ ಮೂಲಕ ನ್ಯೂಜಿಲೆಂಡ್‌ ಆಟಗಾರರನ್ನು ಮನೆಗೆ ಕಳುಹಿಸಿದರು. ನ್ಯೂಜಿಲೆಂಡ್‌ ತಂಡ 48.5 ಓವರ್‌ಗಳಲ್ಲಿ 327 ರನ್‌ ಗಳಿಸುವ ಮೂಲಕ ಆಲೌಟ್‌ ಆಗಿ ವಿಶ್ವ ಕಪ್ ಟೂರ್ನಿಯಿಂದ ಹೊರ ಬಿದ್ದರು.

ಭಾರತ ಮತ್ತೆ ಫೈನಲ್: ದೇಶದೆಲ್ಲೆಡೆ ಸಂಭ್ರಮ!

4ನೇ ಬಾರಿ ಭಾರತ ಫೈನಲ್ ಪ್ರವೇಶ ಮಾಡಿದ್ದು 4 ಬಾರಿ ಪೈಕಿ,3 ಬಾರಿ ಗೆದ್ದಿದೆ. ಒಂದು ಬಾರಿ ಸೋತಿತ್ತು. ಈಗ ಗುರುವಾರ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವೆ ಸೆಮಿ ಫೈನಲ್ ನಡೆಯಲಿದ್ದು, ಅಲ್ಲಿ ಗೆದ್ದವರ ಮೇಲೆ ನ.19ರಂದು ಭಾರತ ಸ್ಪರ್ಧೆ ಮಾಡಲಿದೆ. ಇದೇ ಮೊದಲ ಬಾರಿಗೆ 10 ಪಂದ್ಯ ಗೆದ್ದು ಆಡಿದ ಎಲ್ಲಾ ಪಂದ್ಯ ಗೆದ್ದಿದೆ.

ಶಮಿ ಪಂದ್ಯ ಶ್ರೇಷ್ಠ: ಪ್ರಧಾನಿ ಮೆಚ್ಚುಗೆ

ಭಾರತ ತಂಡಕ್ಕೆ ಎಲ್ಲೆಡೆ ಅಭಿನಂದನೆಗಳ ಸುರಿಮಳೆ ಹರಿದು ಬರುತ್ತಿದೆ. ಪ್ರಧಾನಿ ಮೋದಿ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೊಹ್ಲಿ, ಅಯ್ಯರ್, 7 ವಿಕೆಟ್ ಸಾಧನೆ ಮಾಡಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಶಮಿಗೆ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ದೇಶದ ಮೂಲೆ ಮೂಲೆಯಲ್ಲೂ ಸಂಭ್ರಮರಾತ್ರಿ ಆಚರಣೆ ಆಯಿತು. ಪಟಾಕಿ, ಡಿಜೆ ಹಾಕಿ ಭಾರತದ ಭಾವುಟ ಹಾರಿಸಿ ಸಂಭ್ರಮಪಟ್ಟರು.

ಮದುವೆ, ಹಬ್ಬದಲ್ಲೂ ಕ್ರಿಕೆಟ್ ಕ್ರೇಜ್!

ಸೆಮಿ ಫೈನಲ್ ಪಂದ್ಯದ ಹಿನ್ನೆಲೆ ಇಡೀ ಭಾರತ ಈ ಪಂದ್ಯದ ಮೇಲೆ ಕಣ್ಣಿಟ್ಟಿತ್ತು. ಗೆಲ್ಲುತ್ತಿದ್ದಂತೆ ಪಟಾಕಿ ಸಿಡಿಸಿ ಕೇಕೆ ಹಾಕಿ ಸಂಭ್ರಮಿಸಿದರು.

ಸಚಿನ್, ಅನುಷ್ಕಾ ಸೇರಿ ಅನೇಕರ ಸಂಭ್ರಮ

ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್, ನಟಿ, ಕೊಹ್ಲಿ ಮಡದಿ ಅನುಷ್ಕಾ ಶರ್ಮ ಸೇರಿ ಅನೇಕ ತಾರೆಯರು ಭಾರತ ತಂಡಕ್ಕೆ ಮೈದಾನದಲ್ಲಿ ಹಾಜರಾಗಿ ಸ್ಫೂರ್ತಿ ತುಂಬಿದರು.