Categories
ಚಿಕ್ಕಮಗಳೂರು

ಕೊಪ್ಪಕ್ಕೆ ಜು.24ಕ್ಕೆ ನಿಖಿಲ್ ಕುಮಾರಸ್ವಾಮಿ ಭೇಟಿ

ಕೊಪ್ಪಕ್ಕೆ ಜು.24ಕ್ಕೆ ನಿಖಿಲ್ ಕುಮಾರಸ್ವಾಮಿ ಭೇಟಿ
– ಶೃಂಗೇರಿ ಕ್ಷೇತದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ
– ರಾಜೇಂದ್ರ ಅವರ ನಿವಾಸಕ್ಕೆ ಭೇಟಿ
– ಶೃಂಗೇರಿ ಕ್ಷೇತ್ರದಲ್ಲಿ ನಿಖಿಲ್ ಸಂಚಲನ!
– ಸರ್ವರನ್ನು ಸ್ವಾಗತಿಸಿದ ಜೆಡಿಎಸ್ ನಾಯಕ ಸುಧಾಕರ್ ಶೆಟ್ಟಿ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಕೊಪ್ಪ: ಮಲೆನಾಡಿನ ವಿವಿಧ ಭಾಗಗಳಿಗೆ ಭೇಟಿ ನೀಡುತ್ತಿರುವ, ಜೆಡಿಎಸ್ ಪಕ್ಷದ ಯುವ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಇದೇ ಜು. 24ರಂದು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿಗೆ ಭೇಟಿ ನೀಡಲಿದ್ದಾರೆ. ಜಾತ್ಯತೀತ ಜನತಾ ದಳ ಶೃಂಗೇರಿ ಕ್ಷೇತ್ರದ ಜನರೊಂದಿಗೆ ಜನತಾ ದಳ ಎಂಬ ಕಲ್ಪನೆ ಜತೆ ಶೃಂಗೇರಿ ಕ್ಷೇತ್ರದಲ್ಲಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ.
ಬೆಳಿಗ್ಗೆ ಎಂಟು ವರೆ ಸುಮಾರಿಗೆ ನರಸಿಂಹರಾಜಪುರ ತಾಲ್ಲೂಕಿನ ಎಚ್ ಟಿ ರಾಜೇಂದ್ರ ಅವರ ನಿವಾಸಕ್ಕೆ ಆಗಮಿಸಿ, ಬಳಿಕ ಮಧ್ಯಾಹ್ನ ಎರಡೂವರೆ ಸಮಯಕ್ಕೆ ಕೊಪ್ಪದ ಬಾಳಗಡಿ ದ್ಯಾವೇಗೌಡ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆಯಲಿರುವ ಕ್ಷೇತ್ರ ಮಟ್ಟದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ, ಕಾರ್ಯಕ್ರಮದ ಕುರಿತು ಮಾತನಾಡಲಿದ್ದಾರೆ, ಎಂಬ ಮಾಹಿತಿಯನ್ನು ರಾಜ್ಯದ ಜೆಡಿಎಸ್ ಹಿರಿಯ ಉಪಾಧ್ಯಕ್ಷರಾದ ಎಸ್. ಸುಧಾಕರ ಶೆಟ್ಟಿ ಮಾಹಿತಿ ನೀಡಿದ್ದಾರೆ.
ಜೆಡಿಎಸ್ ನಾಯಕರು ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ್ದು ದಿವಾಕರ್ ಭಟ್, ರಾಮಸ್ವಾಮಿ, ಕಣಿವೆ ವಿನಯ್ ಮೊದಲಾದವರು ಭಾಗವಹಿಸಿದ್ದರು. ಅಲ್ಲದೆ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಮನವಿ ಮಾಡಿಕೊಂಡಿದ್ದಾರೆ.‌

ದಿನಾಂಕ: 24, ಜುಲೈ, ಮಧ್ಯಾಹ್ನ 2:30ಕ್ಕೆ
ಸ್ಥಳ : ಎಂ.ಎಸ್.ದ್ಯಾವೇಗೌಡ ಒಕ್ಕಲಿಗರ ಸಮುದಾಯ ಸಭಾ ಭವನ, ಕೊಪ್ಪ

ಶೃಂಗೇರಿ ಕ್ಷೇತದ ಸಮಸ್ತ ಜನತೆಗೆ, ಎಲ್ಲಾ ಜೆಡಿಎಸ್ ನಾಯಕರು, ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳಿಗೆ ಸ್ವಾಗತ

ಸುಧಾಕರ್ ಎಸ್ ಶೆಟ್ಟಿ
ರಾಜ್ಯ ಹಿರಿಯ ಉಪಾಧ್ಯಕ್ಷರು, ಜಾತ್ಯತೀತ ಜನತಾ ದಳ, ಕರ್ನಾಟಕ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.