ಟಾಪ್ 4 ನ್ಯೂಸ್ ಕರ್ನಾಟಕ
ಚಾಮರಾಜನಗರ : ವಿಷದ ಕಾಯಿ ತಿಂದು 12 ಮಕ್ಕಳು ಅಸ್ವಸ್ಥ..!!
– ಬಳ್ಳಾರಿ : ಓರ್ವ ವಿದ್ಯಾರ್ಥಿ ಮೇಲೆ ಮನಸೋ ಇಚ್ಛೆ ಹಲ್ಲೆ..!!
– ಯಾದಗಿರಿ : ಅಂಗನವಾಡಿಯಲ್ಲಿ ಮಕ್ಕಳನ್ನು ಕೂಡಿಟ್ಟು ಜಮೀನು ಕೆಲಸಕ್ಕೆ ಹೋದ ಸಹಾಯಕಿ!
– ಬೆಳಗಾವಿ : ಜಮೀನಿನಲ್ಲಿ ಹೈಟೆಕ್ ವಾಮಾಚಾರ ಪತ್ತೆ..!!
NAMMUR EXPRESS NEWS
ಚಾಮರಾಜನಗರ: ವಿಷದ ಕಾಯಿ ತಿಂದು 12 ಮಕ್ಕಳು ಅಸ್ವಸ್ಥರಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಯರಿಯೂರಿನಲ್ಲಿ ನಡೆದಿದೆ. ಮಕ್ಕಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಸಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಬ್ಬು ಕಟಾವು ಮಾಡಲು ಯಳಂದೂರು ತಾಲೂಕಿನ ಯರಿಯೂರಿಗೆ ಬಂದಿದ್ದ ಕಾರ್ಮಿಕರ ಮಕ್ಕಳು ವಿಷದ ಕಾಯಿ ತಿಂದು ಆಸಸರಾಗಿದ್ದಾರೆ. ಹಣ್ಣೆಂದು ಭಾವಿಸಿ ಮರಳೆಕಾಯಿ ವಾಂತಿ ಮಾಡಿಕೊಳ್ಳುತ್ತಿದ್ದನ್ನು ಕಂಡು ಪಾಲಕರು ಆಸ್ಪತ್ರೆಗೆ ಸೇರಿಸಿದ್ದಾರೆ.
– ಬಳ್ಳಾರಿ : ಓರ್ವ ವಿದ್ಯಾರ್ಥಿ ಮೇಲೆ ಮನಸೋ ಇಚ್ಛೆ ಹಲ್ಲೆ..!!
ಬಳ್ಳಾರಿ : ಅಪ್ರಾಪ್ತ ಬಾಲಕಿಯ ಫೋಟೋ ವಾಟ್ಸ್‌ಆಪ್ ಸ್ಟೇಟಸ್ ಇಟ್ಟಿದ್ದಕ್ಕೆ ಯುವಕನ ಮೇಲೆ ಮನಸೋ ಇಚ್ಚೆ ಹಲ್ಲೆ ಮಾಡಿರುವ ಘಟನೆ ಬಳ್ಳಾರಿ ನಗರದ ರೆಡಿಯೋ ಪಾರ್ಕ್ ಬಳಿಯ ಐಟಿಐ ಕಾಲೇಜು ಆವರಣದಲ್ಲಿ ನಡೆದಿದೆ. ದೊಡ್ಡಬಸವ (19) ಹಲ್ಲೆಗೊಳಗಾದ ಯುವಕ. ದೊಡ್ಟಬಸವ ಅಪ್ರಾಪ್ತ ಬಾಲಕಿಯ ಫೋಟೋವನ್ನು ತನ್ನ ವಾಟ್ಸ್‌ಆಪ್ ಸ್ಟೇಟ್‌ಸ್‌ಗೆ ಹಾಕಿಕೊಂಡಿದ್ದನು. ಆಗ, ಬಾಲಕಿಯ ಅಣ್ಣ ದೊಡ್ಡಬಸವನನ್ನು ಪ್ರಶ್ನೆ ಮಾಡಿದ್ದಾನೆ. ಈ ವಿಚಾರವಾಗಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ಸಿಟ್ಟು ಇಟ್ಟುಕೊಂಡಿದ್ದ ಬಾಲಕಿಯ ಅಣ್ಣ, ತನ್ನ ಸ್ನೇಹಿತರನ್ನ ಕರೆದುಕೊಂಡು ಬಂದು ಐಟಿಐ ಕಾಲೇಜು ಆವರಣದಲ್ಲಿ ದೊಡ್ಡಬಸವನಿಗೆ ಮನಸೋ ಇಚ್ಚೆ ಹೊಡೆಸಿದ್ದಾನೆ. ದೊಡ್ಡಬಸವನ ಮೇಲೆ ಹಲ್ಲೆ ಮಾಡುತ್ತಿರುವುದನ್ನು ಬಾಲಕಿಯ ಅಣ್ಣ ವಿಡಿಯೋ ಮಾಡಿಕೊಂಡಿದ್ದಾನೆ. ದೊಡ್ಡಬಸವನ ತುಟಿ, ದವಡೆ, ಬೆನ್ನು, ಎದೆ, ಪಕ್ಕೆಲಬು ಹಾಗೂ ಸೊಂಟಕ್ಕೆ ತೀವ್ರವಾಗಿ ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿದ ಆರೋಪಿಗಳಾದ ಶಶಿಕುಮಾರ್, ಸಾಯಿಕುಮಾರ್ ಸೇರಿದಂತೆ 10 ಜನರ ವಿರುದ್ಧ ಕೌಲಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
– ಯಾದಗಿರಿ : ಅಂಗನವಾಡಿಯಲ್ಲಿ ಮಕ್ಕಳನ್ನು ಕೂಡಿಟ್ಟು ಜಮೀನು ಕೆಲಸಕ್ಕೆ ಹೋದ ಸಹಾಯಕಿ!
ಯಾದಗಿರಿ : ಮಕ್ಕಳನ್ನು ಅಂಗನವಾಡಿ ಕೇಂದ್ರದೊಳಗೆ ಕೂಡಿ ಹಾಕಿ ಬೀಗ ಹಾಕಿಕೊಂಡು ಜಮೀನು ಕೆಲಸಕ್ಕೆ ಹೋದ ಘಟನೆ ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಬೂದೂರು ಗ್ರಾಮದಲ್ಲಿ ನಡೆದಿದ್ದು, ಆಕೆಯ ಈ ವರ್ತನೆಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೂದೂರು ಗ್ರಾಮದ ಅಂಗನವಾಡಿ ಕೇಂದ್ರ-1ರ ಸಹಾಯಕಿ ಸಾವಿತ್ರಮ್ಮ ಕೇಂದ್ರಕ್ಕೆ ಬೀಗ ಹಾಕಿದಾಕೆ. ಈಕೆ ಬೀಗ ಹಾಕಿಕೊಂಡು ಜಮೀನು ಕೆಲಸಕ್ಕೆ ಹೋಗಿದ್ದಾರೆ. ಇತ್ತ ಮಕ್ಕಳು ಅತ್ತು ಕೂಗಾಡಿದ್ದನ್ನು ಆಲಿಸಿದ ಗ್ರಾಮಸ್ಥರು ವಿಷಯ ತಿಳಿದು ಹೌಹಾರಿದ್ದಾರೆ.
– ಬೆಳಗಾವಿ : ಜಮೀನಿನಲ್ಲಿ ಹೈಟೆಕ್ ವಾಮಾಚಾರ ಪತ್ತೆ..!!
ಬೆಳಗಾವಿ: ಸಾಧಾರಣವಾಗಿ ಲಿಂಬೆ ಹಣ್ಣು, ಅರಿಶಿಣ ಕುಂಕುಮ ಇಟ್ಟು ವಾಮಾಚಾರ ಮಾಡೋದು ಸಾಮಾನ್ಯ. ಆದರೆ ಬೆಳಗಾವಿಯಲ್ಲೊಂದು ಹೈಟೆಕ್ ವಾಮಾಚಾರ ಪ್ರಕರಣ ಬೆಳಕಿಗೆ ಬಂದಿದೆ. ಬೆಳಗಾವಿ ತಾಲೂಕಿನ ಯಳ್ಳೂರು ಗ್ರಾಮದ ಹೊರವಲಯದ ರೈತ ಸದಾನಂದ ದೇಸಾಯಿ ಎನ್ನುವ ರೈತನ ಹೊಲದಲ್ಲಿ ಮೊಬೈಲ್ ಇಟ್ಟು ವಾಮಾಚಾರ ಮಾಡಲಾಗಿದೆ. ಜಮೀನಿನ ರೈತರು ರೈತ ಮುಖಂಡ ರಾಜು ಮರವೆ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದು, ಅವರು ಸ್ಥಳಕ್ಕೆ ಹೋಗಿ ನೋಡಿದಾಗ ಲಿಂಬೆಹಣ್ಣು, ಮೊಸರನ್ನ ಜೊತೆಗೆ ಸ್ಮಾರ್ಟ್ ಫೋನ್ ಇರುವುದು ಕಂಡುಬಂದಿದೆ. ಇದು ಸ್ಟಾರ್ಟ್ ವಾಮಾಚಾರ ಎಂದೇ ಹೇಳಲಾಗುತ್ತಿದೆ. ಮೊಬೈಲ್ ಜೊತೆಗೆ ಲಿಂಬೆಹಣ್ಣು, ತೆಂಗಿನಕಾಯಿ, ಎಲೆ ಅಡಿಕೆ, ಕ್ಯಾರ್‌ಬೀಜ ಹಾಕಿ, ಗಿಡಕ್ಕೆ ಗಂಟು ಕಟ್ಟಲಾಗಿದೆ. ಕೆಲ ತಿಂಗಳಿಂದ ಸತತವಾಗಿ ಇಲ್ಲಿ ವಾಮಾಚಾರದ ವಸ್ತುಗಳು ಪತ್ತೆಯಾಗುತ್ತಿವೆ ಎನ್ನಲಾಗಿದೆ.