Categories
Uncategorized

ಮೊಬೈಲ್ ಬೆಲೆಯಲ್ಲಿ ಭಾರಿ ಏರಿಕೆ: ಬೆಲೆ ಡಬಲ್!? – ಮೆಮೊರಿ ಚಿಪ್ ಗಳ ಬೆಲೆ ಹೆಚ್ಚಳ ಮತ್ತು ರೂಪಾಯಿ ಮೌಲ್ಯ ಕುಸಿತದ ಎಫೆಕ್ಟ್ – ಮೊಬೈಲ್ ಖರೀದಿ ಮಾಡುವವರು ಬೇಗ ಮಾಡಿ!

ನವದೆಹಲಿ: ಭಾರತದಲ್ಲಿ 2026ನೇ ವರ್ಷದಲ್ಲಿ ಮೊಬೈಲ್ ಫೋನ್ ಗಳ ಬೆಲೆ ಶೇಕಡ 16ರಷ್ಟು ಏರಿಕೆಯಾಗಿದೆ ಎಂದು ಕೌಂಟರ್ ಪಾಯಿಂಟ್ ರಿಸರ್ಚ್ ತಿಳಿಸಿದೆ.
10.000 ರೂಪಾಯಿಗಳಿಗಿಂತ ಕಡಿಮೆ ಬೆಲೆ ಇರುವ ಮೊಬೈಲ್ ಫೋನ್ ಗಳ ಬೆಲೆ ಸರಾಸರಿ ಶೇಕಡ 32ರಷ್ಟು ಏರಿಕೆಯಾಗಿದೆ.
ಮೆಮೊರಿ ಚಿಪ್ ಗಳ ಬೆಲೆ ಹೆಚ್ಚಳ ಮತ್ತು ರೂಪಾಯಿ ಮೌಲ್ಯ ಕುಸಿತದಿಂದಾಗಿ ಆಮದು ಬಿಡಿಭಾಗಗಳ ವೆಚ್ಚ ಹೆಚ್ಚಿರುವುದು ಇದಕ್ಕೆ ಕಾರಣವಾಗಿದೆ ಎಂದು ಹೇಳಲಾಗಿದೆ. ಈ ವಿಭಾಗದ ಮಾರಾಟವು ಶೇಕಡ 65ರಷ್ಟು ಕುಸಿದಿದೆ ಎನ್ನುವ ಮಾಹಿತಿ ಲಭಿಸಿದೆ.
10.000-15.000 ರೂಪಾಯಿ ವಿಭಾಗದ ಮಾರಾಟವು ಶೇಕಡ 20ರಷ್ಟು ಇಳಿಕೆಯಾಗಿದೆ. ಆದರೆ, 20.000 ರೂಪಾಯಿಗಳಿಗಿಂತ ಹೆಚ್ಚಿನ ಬೆಲೆ ಇರುವ ಮೊಬೈಲ್ ಫೋನ್ ಗಳ ಬೇಡಿಕೆ ಹಾಗೆಯೇ ಮುಂದುವರಿದಿದೆ ಎನ್ನಲಾಗಿದೆ.
ಮಾಹಿತಿಯ ಪ್ರಕಾರ 2026ನೇ ಸಾಲಿನ ಎರಡನೇ ತ್ರೈಮಾಸಿಕದಲ್ಲಿ ಸ್ಮಾರ್ಟ್ ಫೋನ್ ಗಳ ಮಾರಾಟದ ಬೆಲೆ ಸರಾಸರಿ 318 ಡಾಲರ್ ತಲುಪಿದ್ದು, ದಾಖಲೆ ನಿರ್ಮಿಸಿದೆ.
ಭಾರತದಲ್ಲಿ ಮಾರಾಟವಾಗುವ ಶೇಕಡ 99ರಷ್ಟು ಮೊಬೈಲ್ ಫೋನ್ ಗಳು ದೇಶದಲ್ಲೇ ತಯಾರಾಗುತ್ತಿದೆ ಎನ್ನುವ ಮಾಹಿತಿ ಮೂಲಗಳಿಂದ ಲಭಿಸಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.