Categories
Uncategorized

ಏಷ್ಯನ್ ಗೇಮ್ಸ್ ನಲ್ಲಿ ಪದಕ ಗೆದ್ದ ಕನ್ನಡ ಕುವರಿಯರು! – ಕೊಪ್ಪದ ಹುಡುಗಿ ಸ್ನೇಹಾ ರಿಲೇಯಲ್ಲಿ ಕಂಚಿನ ಪದಕ – ಚಿನ್ನದ ಪದಕ ಗೆದ್ದ ಪೂವಮ್ಮ: ಅಭಿನಂದನೆಗಳು

ಚಿಕ್ಕಮಗಳೂರು/ ಮಂಗಳೂರು: ಜಪಾನ್ ನಲ್ಲಿ ನಡೆದಂತಹ 2026ನೇ ಸಾಲಿನ ಏಷ್ಯನ್ ಗೇಮ್ಸ್ ನಲ್ಲಿ ಮಿಶ್ರ 4×100 ಮೀಟರ್ ರಿಲೇ ಸ್ಪರ್ಧೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಅಥ್ಲಿಟ್ ಸ್ನೇಹಾ ಶಾನುವಳ್ಳಿ ಕಂಚಿನ ಪದಕವನ್ನು ಗೆಲ್ಲುವ ಮೂಲಕ, ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ.
ಈ ಸಾಧನೆಗೆ ಮಲೆನಾಡು ಹೆಮ್ಮೆಪಡುತ್ತಿದ್ದು, ಎಲ್ಲೆಡೆಯಿಂದ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.‌ ಅವರ ಕ್ರೀಡಾ ಪಯಣ ಮತ್ತಷ್ಟು ಯಶಸ್ಸಿನಿಂದ ಸಾಗಿ, ದೇಶಕ್ಕೆ ಅವರಿಂದ ಮತ್ತಷ್ಟು ಪದಕಗಳು ಲಭಿಸುವಂತಾಗಲಿ ಎಂದು ಹೃದಯಪೂರ್ವಕವಾಗಿ ಹಾರೈಸಲಾಗಿದೆ.

ಚಿನ್ನದ ಪದಕಕ್ಕೆ ಕೊರಳೊಡ್ಡಿದ ಪೂವಮ್ಮ

ಬೆಂಗಳೂರು: ಜಪಾನ್ ನಲ್ಲಿ ನಡೆದ 2026ನೇ ಸಾಲಿನ ಏಷ್ಯನ್ ಗೇಮ್ಸ್ ನ 4×100 ಮೀಟರ್ ರಿಲೇ ವಿಭಾಗದಲ್ಲಿ ಎಂ.ಆರ್. ಪೂವಮ್ಮ ಅವರು ಚಿನ್ನದ ಪದಕಕ್ಕೆ ಕೊರಳೊಡ್ಡುವ ಮೂಲಕ ಕನ್ನಡಿಗರಿಗೆ ಹೆಮ್ಮೆಯನ್ನು ತಂದಿದ್ದಾರೆ. ಇದು ಪೂವಮ್ಮ ಅವರಿಗೆ ಎರಡನೇ ಬಾರಿ ದೊರೆತ ಪದಕವಾಗಿದೆ. ಅಷ್ಟೇ ಅಲ್ಲದೆ ಎಂ‌.ಆರ್.ಪೂವಮ್ಮ ಅವರು 4×100 ಮೀಟರ್ ರಿಲೇ ತಂಡದ ಸದಸ್ಯೆ ಕೂಡ ಆಗಿದ್ದಾರೆ. ಇತ್ತೀಚಿಗೆ ಅವರು ಬೆಳ್ಳಿ ಪದಕವನ್ನು ಗಳಿಸಿದಂತಹ 4×100 ಮಿಶ್ರ ರಿಲೇ ತಂಡದಲ್ಲಿದ್ದರು‌.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.