Categories
ಮಾಹಿತಿ ರಾಜ್ಯ

ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ಭಾಗ್ಯ!

ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ಭಾಗ್ಯ!
– ಆನ್‌ಲೈನ್ ಅರ್ಜಿ ಆಹ್ವಾನ: ಏನಿದು ಯೋಜನೆ?
– ಕುಶಲಕರ್ಮಿಗಳಿಗೆ ಬಂಡವಾಳ ಹೂಡಿಕೆ ಸಹಾಯಧನ

NAMMUR EXPRESS NEWS
ಉಚಿತ ಹೊಲಿಗೆ ಯಂತ್ರ ಹಾಗೂ ಇತರೆ ಉಚಿತವಾಗಿ ಸುಧಾರಿತ ಉಪಕರಣಗಳನ್ನು ಮಹಿಳೆಯರು ಸ್ವಂತ ಉದ್ಯೋಗ ಮಾಡಲು ಸರ್ಕಾರದ ಯೋಜನೆಯಡಿ ಪಡೆದುಕೊಳ್ಳಬಹುದು. ಸರ್ಕಾರ ಗ್ರಾಮೀಣ ಕುಶಲಕರ್ಮಿ, ಗುಡಿ ಕೈಗಾರಿಕೆಯನ್ನು ಪ್ರೋತ್ಸಹಿಸಲು ಈ ಯೋಜನೆಯನ್ನು ರೂಪಿಸಿದ್ದು 2023-24ನೇ ಸಾಲಿನಲ್ಲಿ ವಿವಿಧ ಯೋಜನೆಗಳ ಅಡಿಯಲ್ಲಿ ವೃತ್ತಿನಿರತ ಗ್ರಾಮೀಣ ಕುಶಲಕರ್ಮಿ ಗುಡಿ ಕೈಗಾರಿಕೆಯಲ್ಲಿ ತೊಡಗಿಕೊಂಡಿರುವ ಅರ್ಹ ಅಭ್ಯರ್ಥಿಗಳು ತಮ್ಮ ಕಸುಬನ್ನು ಮುಂದುವರೆಸಿಕೊಂಡು ಹೋಗಲು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಸೌಲಭ್ಯವನ್ನು ಪಡೆಯಲು ಇಚ್ಚಿಸುವರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ಯೋಜನೆಗೆ ಅರ್ಹತೆ ಹೊಂದಿರುವ ವೃತ್ತಿಪರ ಕುಶಲಕರ್ಮಿಗಳು ಅಗತ್ಯ ದಾಖಲೆಗೊಂದಿಗೆ ಇಲಾಖೆ ನಿಗದಿ ಪಡಿಸಿರುವ ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸಿ. ವೃತ್ತಿಪರ ಕುಶಲಕರ್ಮಿಗಳಿಗೆ ಉಚಿತವಾಗಿ ಸುಧಾರಿತ ಉಪಕರಣ ಸರಬರಾಜು ಯೋಜನೆಯಡಿ ವಿದ್ಯುತ್ ಚಾಲಿತ ಮರಗೆಲಸ, ದೋಬಿ, ಗಾರೆಕೆಲಸ, ಕಮ್ಮಾರಿಕೆ, ಕ್ಷೌರಿಕ ಮತ್ತು ವಿದ್ಯುತ್ ಚಾಲಿತ ಹೊಲಿಗೆಯಂತ್ರ ವೃತ್ತಿಯ ಉಪಕರಣಗಳನ್ನು ಪಡೆಯಲು ಬೇಕಾಗುವ ದಾಖಲೆಗಳು ಈ ಕೇಳಗಿನಂತಿವೆ.

1. ಪಾಸ್ಪೋರ್ಟ್ ಗಾತ್ರದ ಭಾವಚಿತ್ರ
2. ಜಾತಿ ಪ್ರಮಾಣ ಪತ್ರ
3. ಹೊಲಿಗೆ ತರಬೇತಿ ಪಡೆದ ಪ್ರಮಾಣ ಪತ್ರ
4. ರೇಷನ್ ಕಾರ್ಡ್/ ವೋಟರ್ ಐ.ಡಿ ಹೊಂದಿದ್ದಲ್ಲಿ ಪ್ರತಿ ಲಗತ್ತಿಸುವುದು.
4. ರೇಷನ್ ಕಾರ್ಡ್/ ವೋಟರ್ ಐ.ಡಿ ಹೊಂದಿದ್ದಲ್ಲಿ ಪ್ರತಿ ಲಗತ್ತಿಸುವುದು.
5. ಮರಗೆಲಸ, ಗಾರೆಕೆಲಸ, ಕ್ಷೌರಿಕ ಹಾಗೂ ಧೋಬಿ ಕಸುಬಿನ ಕುಶಲಕರ್ಮಿಯಾಗಿದ್ದಲ್ಲಿ ಆಯಾ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಯವರಿಂದ ಧೃಡೀಕರಣ ಪತ್ರ/ ಕಾರ್ಮಿಕ ಇಲಾಖೆಯಿಂದ ವಿತರಿಸಿದ ಕುಶಲಕರ್ಮಿ ಗುರುತಿನ ಚೀಟಿ ಪ್ರತಿ,

ಯೋಜನೆ 2: ಜಿಲ್ಲಾ ಉದ್ಯಮ ಬಂಡವಾಳ ಹೂಡಿಕೆ:

ಗ್ರಾಮೀಣ ಪ್ರದೇಶದ ಕುಶಲಕರ್ಮಿಗಳಿಗೆ ಬಂಡವಾಳ ಹೂಡಿಕೆ ಸಹಾಯಧನ ಯೋಜನೆಯಡಿ ಸಹಾಯಧನ ಪಡೆಯಲು ಈ ದಾಖಲೆಗಳು ಅಗತ್ಯ
1. ಪಾಸ್ಪೋರ್ಟ್ ಗಾತ್ರದ ಭಾವಚಿತ್ರ
2. ಜಾತಿ ಪ್ರಮಾಣ ಪತ್ರ
3. ಬ್ಯಾಂಕ್ ಪಾಸ್ ಪುಸ್ತಕ
4. ನಿಗದಿತ ನಮೂನೆಯಲ್ಲಿ ಬ್ಯಾಂಕ್‌ನಿಂದ ಸಾಲ ಮಂಜೂರಾತಿ/ಬಿಡುಗಡೆಯಾಗಿರುವ ಪತ್ರ

ಯೋಜನೆ 3: ಕುಶಲಕರ್ಮಿಗಳಿಗೆ ಬಡ್ಡಿ ಸಹಾಯಧನ ಕುಶಲಕರ್ಮಿಗಳಿಗೆ ಬಡ್ಡಿ ಸಹಾಯಧನ ಯೋಜನೆಯಡಿ

ಸಹಾಯಧನ ಪಡೆಯುವವರು ಈ ದಾಖಲೆಗಳನ್ನು ನೀಡಬೇಕು.
6. ಸ್ಥಳೀಯ ಸಂಸ್ಥೆಯಿಂದ ಪಡೆದ ಪರವಾನಿಗಿ ಪತ್ರ
7. ಬ್ಯಾಂಕಿನಿಂದ ಬಡ್ಡಿ ಸಹಾಯಧನದ ನಮೂನೆ ಪತ್ರ
ಹೆಚ್ಚಿನ ಮಾಹಿತಿಗಾಗಿ ಸಂಬಂದಪಟ್ಟ ತಾಲ್ಲೂಕು ಕೈಗಾರಿಕಾ ವಿಸ್ತರಣಾಧಿಕಾರಿಗಳು/ ಉಪ ನಿರ್ದೇಶಕರ ಕಛೇರಿ, ಗ್ರಾಮೀಣ ಕೈಗಾರಿಕೆಗಳು (ಖಾದಿ ಮತ್ತು ಗ್ರಾಮೋದ್ಯೋಗ, ಇವರನ್ನು ಸಂಪರ್ಕಿಸಬಹುದು.

ಇದನ್ನೂ ಓದಿ : ಚಂದ್ರನಂಗಳದಲ್ಲಿ ಭಾರತದ ಮುದ್ರೆ!

Categories
ಕರಾವಳಿ

ಕರಾವಳಿ ಟಾಪ್ ನ್ಯೂಸ್

ಹಾಡಹಗಲೇ ಯುವತಿ ಕತ್ತು ಸೀಳಿದ ಯುವಕ!
– ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ಪಟ್ಟಣದಲ್ಲಿ ಘಟನೆ
– ಉಡುಪಿಯಲ್ಲಿ 8 ಲಕ್ಷ ಮೌಲ್ಯದ ವಸ್ತು ಜತೆ ಕಳ್ಳ ಅರೆಸ್ಟ್!: ಕದ್ದ ಚಿನ್ನ ಅಡ ಇಟ್ಟು ಮೋಜು ಮಸ್ತಿ!
– ಬೆಳ್ತಂಗಡಿ: ಕಡವೆ ಬೇಟೆ: ಮೂವರ ಬಂಧನ
– ಮಂಗಳೂರಲ್ಲಿ ಮರಳು ಮಾಫಿಯಾಕ್ಕೆ ಬ್ರೇಕ್?

NAMMUR EXPRESS NEWS
ಪುತ್ತೂರು: ಮಹಿಳಾ ಪೊಲೀಸ್ ಸ್ಟೇಷನ್ ಬಳಿಯೇ ಯುವತಿಗೆ ಯುವಕನೊಬ್ಬ ಚೂರಿಯಿಂದ ಚುಚ್ಚಿದ ಘಟನೆ ಆ.24ರಂದು ಮಧ್ಯಾಹ್ನ ನಡೆದಿದೆ. ಗಾಯಾಳು ಮಹಿಳೆಯನ್ನು ಪೊಲೀಸರೇ ಆಸ್ಪತ್ರೆಗೆ ಕರೆದೊಯ್ದಿದ್ದು ಮಂಗಳೂರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ. ನಡೆದುಕೊಂಡು ಹೋಗುತ್ತಿದ್ದಾಗ ಬೈಕ್ ನಿಂದ ಬಂದ ವ್ಯಕ್ತಿಯಿಂದ ಈ ಕೃತ್ಯ ಎಸೆಯಲಾಗಿದೆ. ಇರಿತಕ್ಕೊಳಗಾದ ಯುವತಿಯನ್ನು ವಿಟ್ಲ ಮೂಲದ ಗೌರಿ(20.ವ) ಎಂದು ಗುರುತಿಸಲಾಗಿದೆ. ಚೂರಿಯಿಂದ ಗೌರಿಯ ಹತ್ಯೆಗೆ ಯತ್ನಿಸಿದ ಯುವಕ ಕುತ್ತಿಗೆಗೆ ಚೂರಿ ಇರಿದು ಬಳಿಕ ತಾನು ಬಂದಿದ್ದ ಬೈಕ್ ನಲ್ಲಿ ಪರಾರಿಯಾಗಿದ್ದು ಪೊಲೀಸರು ಆತನನ್ನು ಬಂಧಿಸಿದ್ದಾರೆ ಎನ್ನಲಾಗಿದೆ. ಆರೋಪಿ ಮಣಿನಾಲ್ಕೂರು ಗ್ರಾಮದ ನೈಬೇಳು ನಿವಾಸಿ ಪದ್ಮರಾಜ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈತ ಜೆಸಿಬಿ ಆಪರೇಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಎನ್ನಲಾಗುತ್ತಿದೆ.

ಉಡುಪಿಯಲ್ಲಿ 8 ಲಕ್ಷ ಮೌಲ್ಯದ ವಸ್ತು ಜತೆ ಕಳ್ಳ ಅರೆಸ್ಟ್!: ಕದ್ದ ಚಿನ್ನ ಅಡ ಇಟ್ಟು ಮೋಜು ಮಸ್ತಿ

ಉಡುಪಿಯ ಉದ್ಯಾವರ ಬೊಳ್ಳೆ ನಿವಾಸಿ ಅನಿತಾ ಡಿ. ಸಿಲ್ವಾ ಅವರ ಮನೆಯಲ್ಲಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಕಳ್ಳನನ್ನು ಕಾಪು ಪೊಲೀಸರು ಬಂಧಿಸಿದ್ದು ಚಿನ್ನಾಭರಣ, ನಗದು, ಸ್ಕೂಟಿ ಸಹಿತ 8,02,083 ರೂಪಾಯಿ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಕಟಪಾಡಿ ಏಣಗುಡ್ಡೆ ಗ್ರಾಮದ ಅಚ್ಚಡ ನಿವಾಸಿ ಜೋನ್ ಪ್ರಜ್ವಲ್ ಫೆರ್ನಾಂಡಿಸ್ (32)ಬಂಧಿತ ಆರೋಪಿ. ಬಂಧಿತನಿಂದ 6,90,713 ರೂಪಾಯಿ ಮೌಲ್ಯದ ಚಿನ್ನಾಭರಣ, ನಗದು, ಮೋಟಾರು ಸೈಕಲ್ ಸಹಿತ ಬೆಲೆಬಾಳುವ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಆತ ನೀಡಿದ ಮಾಹಿತಿಯ ಮೇರೆಗೆ ವಿವಿಧ ಸಹಕಾರಿ ಸಂಘಗಳು, ಫೈನಾನ್ಸ್ಗಳು, ಚಿನ್ನಾಭರಣ ಅಂಗಡಿಗಳಿಗೆ ತೆರಳಿದ ಪೊಲೀಸರು ಚಿನ್ನಾಭರಣಗಳನ್ನು ಸ್ವಾಧೀನಕ್ಕೆ ತೆಗೆದುಕೊಂಡಿದ್ದಾರೆ. ಮದ್ಯ ವ್ಯಸನ, ಸಾಲ ಮತ್ತು ಜೂಜಾಟದ ಸುಳಿಗೆ ಸಿಲುಕಿದ್ದ ಆರೋಪಿ ಚಿನ್ನಾಭರಣಗಳನ್ನು ಮಾರಾಟ ಮಾಡಿದ ಮತ್ತು ಒತ್ತೆಯಿಟ್ಟ ಹಣವನ್ನು ಇಸ್ಪೀಟ್, ಜೂಜಾಟ ಮತ್ತು ಮದ್ಯ ವ್ಯಸನಕ್ಕೆ ಬಳಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಳ್ತಂಗಡಿ: ಕಡವೆ ಬೇಟೆ: ಮೂವರು ಅರೆಸ್ಟ್!

ಬೆಳ್ತಂಗಡಿ ತಾಲೂಕು ಪಟ್ರಿಮ ಗ್ರಾಮದ ದಡಂತಮಲೆ ಮೀಸಲು ಅರಣ್ಯದ ಒಳಭಾಗದ ಬಟ್ಟಾಡಿ ಬಳಿ ಕಪಿಲಾ ನದಿ ತೀರದಲ್ಲಿ ಮಾಂಸಕ್ಕಾಗಿ ಅಕ್ರಮವಾಗಿ ಕಡವೆ ಬೇಟೆಯಾಡಿದ ಮೂವರನ್ನು ಬಂದೂಕು ಸಹಿತ ಉಪ್ಪಿನಂಗಡಿ ಅರಣ್ಯ ಇಲಾಖೆಯ ಅಧಿಕಾರಿಗಳು ಬಂಧಿಸಿದ್ದಾರೆ. ಬುಧವಾರ ಡಿಆರ್ ಎಫ್ಒ ಸಿ.ಎನ್. ಲೋಕೇಶ್ ಅಶೋಕ್ ,ರಾವುತಪ್ಪ, ಅರಣ್ಯ ಪಾಲಕರಾದ ವಿನಯ ಚಂದ್ರ ಹಾಗೂ ಕಿಶೋರ್ ಗಸ್ತು ನಿರತರಾಗಿದ್ದು, ಖಚಿತ ವರ್ತಮಾನದ ಮೇರೆಗೆ ಕಾದು ಕುಳಿತಿದ್ದರು. ಇದೇ ವೇಳೆ ಬೇಟೆಯಾಡಿದ ಶಬ್ದ ಕೇಳಿದ ಬೆನ್ನಲ್ಲೇ ಕಾಡಿನಲ್ಲಿ ಸುತ್ತುವರಿದು ಆರೋಪಿಗಳನ್ನು ಬಂಧಿಸಿದ್ದರು. ನಾಲ್ಕು ವರ್ಷದ ಹೆಣ್ಣು ಕಡವೆಯನ್ನು ಬೇಟೆಯಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋವಿ ಸಹಿತ ಆರೋಪಿಗಳಾದ ಸುದೇಶ್ ಪಟ್ರಮೆ, ಪುನೀತ್, ಕೋಟ್ಯಪ್ಪ ಗೌಡ ಅವರನ್ನು ಅರಣ್ಯಾಧಿಕಾರಿಗಳು ವಶಕ್ಕೆಪಡೆದಿದ್ದಾರೆ. ಆರೋಪಿ ಲೋಕೇಶ್ ತಲೆಮರೆಸಿಕೊಂಡಿದ್ದಾನೆ.

ಮಂಗಳೂರಲ್ಲಿ ಮರಳು ಮಾಫಿಯಾಕ್ಕೆ ಬ್ರೇಕ್?

ಮಂಗಳೂರಿನ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಪೆರ್ಮನ್ನೂರು ಗ್ರಾಮದ ಕಲ್ಲಾಪು ಮತ್ತು ಉಳ್ಳಾಲದ ಕೋಟೆ ಪುರದಲ್ಲಿ ಅಕ್ರಮವಾಗಿ ದಾಸ್ತಾನಿಟ್ಟ ಮರಳು ಅಡ್ಡೆಗೆ ಉಳ್ಳಾಲ ಠಾಣಾ ಪೊಲೀಸರು ಗುರುವಾರ ಬೆಳಗ್ಗಿನ ಜಾವಾ ದಾಳಿ ನಡೆಸಿದ್ದಾರೆ. ಈ ಸಂದರ್ಭ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ KL 29- 482 ಪಿಕಪ್ ವಾಹನ ಮತ್ತು 12 ಲೋಡಿನಷ್ಟು ಸಾಮಾನ್ಯ ಮರಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಶಪಡಿಸಿಕೊಂಡ ಮರಳು ಮತ್ತು ವಾಹನವನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಹಸ್ತಾಂತರ ಮಾಡಿದ್ದಾರೆ

ಇದನ್ನೂ ಓದಿ : ಚಂದ್ರನಂಗಳದಲ್ಲಿ ಭಾರತದ ಮುದ್ರೆ!

Categories
ಸಿನಿಮಾ

ಅತ್ಯುತ್ತಮ ಕನ್ನಡ ಚಲನಚಿತ್ರ ಪ್ರಶಸ್ತಿ ಪಡೆದ ‘777 ಚಾರ್ಲಿ!

ಅತ್ಯುತ್ತಮ ಕನ್ನಡ ಚಲನಚಿತ್ರ ಪ್ರಶಸ್ತಿ ಪಡೆದ ‘777 ಚಾರ್ಲಿ!
– ಪುಷ್ಪ ಸಿನಿಮಾ ನಟನೆಗಾಗಿ ಅಲ್ಲು ಅರ್ಜುನ್‌ಗೆ ರಾಷ್ಟ್ರೀಯ ಪ್ರಶಸ್ತಿ

NAMMUR EXPRESS NEWS
69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು (ನ್ಯಾಷನಲ್ ಫಿಲಂ ಅವಾರ್ಡ್ಸ್ ) ಆಗಸ್ಟ್ 24ರಂದು ದೆಹಲಿಯಲ್ಲಿ ಘೋಷಣೆಯಾಗುತ್ತಿದೆ. 2021ರಲ್ಲಿ ಬಿಡುಗಡೆ ಆದ ಅಥವಾ ಸೆನ್ಸಾರ್ ಆದ ಸಿನಿಮಾಗಳಲ್ಲಿ ಅತ್ಯುತ್ತಮವಾದ ಸಿನಿಮಾ, ನಟ-ನಟಿ ಹಾಗೂ ತಂತ್ರಜ್ಞರನ್ನು ಗುರುತಿಸಿ ಪ್ರಶಸ್ತಿ ಘೋಷಿಸಲಾಗುತ್ತಿದೆ. 69 ನೇ ನ್ಯಾಷನಲ್ ಫಿಲಂ ಅವಾರ್ಡ್ಸ್ 2021ನೇ ಸಾಲಿನ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದುಕೊಂಡ ಆಲಿಯಾ ಭಟ್, ಕೃತಿ ಸನಾನ್ 2021ನೇ ಸಾಲಿನ ರಾಷ್ಟ್ರೀಯ ಚಲಚಚಿತ್ರ ಪ್ರಶಸ್ತಿ ಪ್ರಕಟ ಮಾಡಲಾಗಿದ್ದು, ಆಲಿಯಾ ಭಟ್, ಕೃತಿ ಸನಾನ್‌ಗೆ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ. ಗಂಗೂಬಾಯಿ ಸಿನಿಮಾದಲ್ಲಿನ ನಟನೆಗಾಗಿ ಆಲಿಯಾ ಭಟ್‌ಗೆ ಪ್ರಶಸ್ತಿ ಬಂದಿದ್ದು, ಪುಷ್ಪ ಸಿನಿಮಾ ನಟನೆಗಾಗಿ ಅಲ್ಲು ಅರ್ಜುನ್‌ಗೆ ರಾಷ್ಟ್ರೀಯ ಪ್ರಶಸ್ತಿ ದೊರೆತಿದೆ.

69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಇಂದು ದೆಹಲಿಯಲ್ಲಿ ಘೋಷಣೆ ಮಾಡಲಾಗಿದ್ದು, ಇದೀಗ ಅತ್ಯುತ್ತಮ ಕನ್ನಡ ಚಲನಚಿತ್ರವಾಗಿ ‘777 ಚಾರ್ಲಿ ಪ್ರಶಸ್ತಿ ಪಡೆದುಕೊಂಡಿದೆ. ರಕ್ಷಿತ್ ಶೆಟ್ಟಿ, ಸಂಗೀತಾ ಶೃಂಗೇರಿ ನಟನೆಯ ಶ್ವಾನ ಪ್ರೀತಿಯ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್ಲಲ್ಲಿ ಸದ್ದು ಮಾಡಿತ್ತು.

ಇದನ್ನೂ ಓದಿ : ಚಂದ್ರನಂಗಳದಲ್ಲಿ ಭಾರತದ ಮುದ್ರೆ!

Categories
ಮಲ್ನಾಡ್

ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ ಜೋರು!

ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ ಜೋರು!
– ದೇಗುಲದಲ್ಲಿ ಭಕ್ತರ ಸಾಲು ಸಾಲು: ಮನೆಯಲ್ಲಿ ಹಬ್ಬದ ವಾತಾವರಣ
– ಮಲೆನಾಡಲ್ಲಿ ಕಳೆಗಟ್ಟಿದ ವರ ಮಹಾಲಕ್ಷ್ಮಿ ಹಬ್ಬ

NAMMUR EXPRESS NEWS
ಮಲೆನಾಡು: ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ ಎಲ್ಲೆಲ್ಲು ಮನೆ ಮಾಡಿದೆ. ಮನೆ, ದೇವಸ್ಥಾನದಲ್ಲಿ ಲಕ್ಷ್ಮಿ ಪೂಜೆಗೆ ಸಿದ್ಧತೆ ನಡೆಯುತ್ತಿದೆ. ಎಲ್ಲಾ ಕಡೆ ಖರೀದಿ ಜೋರಾಗಿದೆ. ಶಿವಮೊಗ್ಗದ ಗಾಂಧಿ ಬಜಾರ್‌, ಶಿವಪ್ಪನಾಯಕ ಪ್ರತಿಮೆ ಎದುರಿನ ರಸ್ತೆಯಲ್ಲಿ ಗುರುವಾರ ಮಧ್ಯಾಹ್ನದಿಂದಲೂ ಖರೀದಿ ಭರಾಟೆ ಜೋರಿದೆ. ಶ್ರಾವಣ ಮಾಸದ ಪ್ರಮುಖ ಹಬ್ಬವಾಗಿರುವುದರಿಂದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದಾರೆ.
ಲಕ್ಷ್ಮಿ ದೇವಿಯನ್ನು ಪ್ರತಿಷ್ಠಾಪಿಸಿ ಪೂಜೆ ಮಾಡುತ್ತಾರೆ. ಈ ಹಿನ್ನೆಲೆ ಅಲಂಕಾರಿಕ ವಸ್ತುಗಳು, ಸೀರೆ, ಬಾಳೆ ಕಂದು, ಹಣ್ಣು, ಪೂಜಾ ಸಾಮಗ್ರಿಗಳು, ಸಿಹಿ ತಿನಿಸುಗಳ ಡಿಮ್ಯಾಂಡ್ ಹೆಚ್ಚಿದೆ. ಜನ ಹೆಚ್ಚಾಗಿ ಖರೀದಿ ಮಾಡುತ್ತಿರುವುದರಿಂದ ಅಂಗಡಿ ಮಾಲೀಕರ ಮೊಗದಲ್ಲಿ ಮಂದಹಾಸ ಮೂಡಿದೆ. ಮಲೆನಾಡಿನ ಎಲ್ಲಾ ತಾಲೂಕು ಕೇಂದ್ರದಲ್ಲಿ ಜನರ ಖರೀದಿ ಹೆಚ್ಚಿದೆ.

ಇದನ್ನೂ ಓದಿ : ಚಂದ್ರನಂಗಳದಲ್ಲಿ ಭಾರತದ ಮುದ್ರೆ!

Categories
ತೀರ್ಥಹಳ್ಳಿ

ವರಮಹಾ ಲಕ್ಷ್ಮಿ ಹಬ್ಬಕ್ಕೆ ದೇಗುಲಗಳಲ್ಲಿ ವಿಶೇಷ ಪೂಜೆ

ವರಮಹಾ ಲಕ್ಷ್ಮಿ ಹಬ್ಬಕ್ಕೆ ದೇಗುಲಗಳಲ್ಲಿ ವಿಶೇಷ ಪೂಜೆ
– ತೀರ್ಥಹಳ್ಳಿ ಮಾರಿಕಾಂಬಾ, ಇಂದಾವರ ಶ್ರೀ ಮಹಾಲಕ್ಷ್ಮಿ ಕಿತ್ತನಗದ್ದೆ ಸಾಂಬಸದಾಶಿವ, ತಿರುಮಲ ಶ್ರೀ ಲಕ್ಷ್ಮಿ ವೆಂಕಟರಮಣ ದೇವಸ್ಥಾನದಲ್ಲಿ ಹಬ್ಬದ ಆಚರಣೆ
– ಹಳ್ಳಿ ಹಳ್ಳಿಯ ದೇಗುಲದಲ್ಲಿ ವಿಶೇಷ ಪೂಜೆ

NAMMUR EXPRESS NEWS
ತೀರ್ಥಹಳ್ಳಿ: ವರ ಮಹಾಲಕ್ಷ್ಮಿ ಹಬ್ಬದ ಅಂಗವಾಗಿ ಆಗಸ್ಟ್ 25ರ ಶುಕ್ರವಾರತೀರ್ಥಹಳ್ಳಿ ಪಟ್ಟಣದ ಪ್ರಸಿದ್ಧ ದೇವಾಲಯಗಳಲ್ಲಿ ವಿಶೇಷ ಪೂಜೆ, ವೃತ ಆಚರಣೆ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.
ಶ್ರೀ ಮಾರಿಕಾಂಬಾ ದೇವಸ್ಥಾನದಲ್ಲಿ ಶ್ರೀ ವರಮಹಾಲಕ್ಷ್ಮೀ ವ್ರತಾಚರಣೆ ಯನ್ನು ವಿಜೃಂಭಣೆಯಿಂದ ಆಚರಿಸಲಾಗುವುದು. ಅಂದು ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 8ಗಂಟೆಯವರೆಗೆ ಶ್ರೀ ವರಮಹಾ ಲಕ್ಷ್ಮೀ ವಿಶೇಷ ವ್ರತಾಚರಣೆ ನಡೆಯುವುದು, ವಿಶೇಷವಾಗಿ ದೇವಿಯ ಸ್ತುತಿ ಅರ್ಚನೆ ಇರುತ್ತದೆ. ಅಂದು ದೇವಸ್ಥಾನಕ್ಕೆ ಆಗಮಿಸುವ ಎಲ್ಲಾ ಸುಮಂಗಲಿಯರಿಗೆ ಬಾಗಿನ ವಿತರಿಸಲಾಗುವುದು. ಭಾಗವಹಿಸಿದ ಭಕ್ತರಿಗೂ ಪ್ರಸಾದದ ವ್ಯವಸ್ಥೆ ಇರುತ್ತದೆ. ಭಕ್ತರು ಎಂದಿನಂತೆ ಶ್ರದ್ಧಾ ಭಕ್ತಿಯಿಂದ ಈ ದೇವತಾ ಕಾರ್ಯದಲ್ಲಿ ಭಾಗವಹಿಸಿ ಶ್ರೀ ದೇವಿಯ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಆಡಳಿತ ಮಂಡಳಿ ವಿನಂತಿಸಿದೆ.

ಇಂದಾವರದಲ್ಲಿ ವಿಶೇಷ ಪೂಜೆ!

ಇಂದಾವರ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಶ್ರೀ ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ಪೂಜಾ ಕಾರ್ಯ ಕ್ರಮಗಳು, ವಿಶೇಷವಾಗಿ ದೇವಿಗೆ ಅಭಿಷೇಕ, ದೇವಿಯ ಸ್ತುತಿ ಅರ್ಚನೆ ಹಾಗೂ ಬೆಳಿಗ್ಗೆ 10 ಗಂಟೆಗೆ ಶ್ರೀ ಸೂಕ್ತ ಹೋಮ ಮತ್ತು ಬಾಗಿನ ಪೂಜೆ, ಮಧ್ಯಾಹ್ನ ಮಹಾಪೂಜೆಯ ನಂತರ ಅನ್ನಸಂತರ್ಪಣೆ ಇರುತ್ತದೆ. ಪ್ರಶಾಂತ, ಪ್ರೇಕ್ಷಣೀಯ ಸ್ಥಳದಲ್ಲಿರುವ ಈ ದೇವಸ್ಥಾನಕ್ಕೆ ತಾವೆಲ್ಲರೂ ಆಗಮಿಸಿ ತನು-ಮನ-ಧನ ಸಹಕಾರ ವನ್ನಿತ್ತು ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕಾಗಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರು ಮತ್ತು ಸದಸ್ಯರು ವಿನಂತಿಸಿದ್ದಾರೆ.

ಕಿತ್ತನಗದ್ದೆ ಸಾಂಬಸದಾಶಿವ, ಮಹಿಷಮರ್ದಿನಿ ದೇವಸ್ಥಾನದಲ್ಲಿ ಬಾಗಿನ ಸಮರ್ಪಣೆ

ಕಿತ್ತನಗದ್ದೆ ಸಾಂಬಸದಾಶಿವ, ಮಹಿಷಮರ್ದಿನಿ ದೇವಸ್ಥಾನದಲ್ಲಿ ವರಮಹಾಲಕ್ಷ್ಮೀ ಪೂಜೆ ಹಾಗೂ ಮಹಿಳೆಯರಿಗೆ ಬಾಗಿನ ಸಮ ರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸದ್ಭಕ್ತರು, ಸುತ್ತಮುತ್ತ ಊರಿನ ಮಹಿಳೆಯರು ಈ ದೇವತಾ ಕಾರ್ಯದಲ್ಲಿ ಭಾಗವಹಿಸಿ ಶ್ರೀ ಸಾಂಬ ಸದಾಶಿವ ದೇವರ ಪ್ರಸಾದ ‘ಮಹಾತಾಯಿ ಮಹಿಷ ಮರ್ದಿನಿ ದೇವಿಯ ಸಿರಿಮುಡಿ ಗಂಧಪ್ರಸಾದ ಸ್ವೀಕರಿಸಿ ಪಾವನರಾಗಬೇಕೆಂದು ಶ್ರೀ ಸಾಂಬ ಸದಾಶಿವ ಹಾಗೂ ‘ಮಹಿಷ ಮರ್ದಿನಿ ದೇವಸ್ಥಾನದ ಆಡಳಿತ ಮಂಡಳಿಯವರು ವಿನಂತಿಸಿದ್ದಾರೆ.

ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಪೂಜೆ

ತೀರ್ಥಹಳ್ಳಿ ಪಟ್ಟಣದ ತಿರುಮಲ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಶ್ರೀ ಮಹಾಲಕ್ಷ್ಮೀ ಅಮ್ಮನವರ ಸನ್ನಿಧಿಯಲ್ಲಿ ಶ್ರೀ ವರಮಹಾಲಕ್ಷ್ಮೀ ವ್ರತಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಗುವುದು. ಬೆಳಿಗ್ಗೆ 9-30ಕ್ಕೆ ಕಲಶ ಸ್ಥಾಪನೆ, ಕುಂಕುಮಾರ್ಚನೆ, ಉಡಿ ತುಂಬುವುದು, ಮಧ್ಯಾಹ್ನ ಮಹಾಪೂಜೆ, ತೀರ್ಥಪ್ರಸಾದ ವಿತರಣೆ, ಸಂಜೆ 5-30ರಿಂದ ರಾತ್ರಿ 8ಗಂಟೆಯವರೆಗೆ ಕುಂಕುಮಾರ್ಚನೆ, ಉಡಿ ತುಂಬುವುದು, ಸುಮುಖ ಸಂಗೀತ ನೃತ್ಯ ಶಾಲೆಯ ವಿದ್ಯಾರ್ಥಿಗಳಿಂದ ವಿಶೇಷ ಭಜನೆ ಸೇರಿದಂತೆ ಶ್ರೀ ವರಮಹಾಲಕ್ಷ್ಮೀ ವಿಶೇಷ ವ್ರತಾಚರಣೆ ನಡೆಯುವುದು. ಭಕ್ತಾದಿಗಳು ಎಂದಿನಂತೆ ಶ್ರದ್ದಾಭಕ್ತಿಯಿಂದ ಈ ದೇವತಾ ಕಾರ್ಯದಲ್ಲಿ ಭಾಗವಹಿಸಿ ಶ್ರೀ ದೇವಿಯ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಆಡಳಿತ ಮಂಡಳಿ ವಿನಂತಿಸಿದೆ.

ಇದನ್ನೂ ಓದಿ : ಚಂದ್ರನಂಗಳದಲ್ಲಿ ಭಾರತದ ಮುದ್ರೆ!

Categories
ಕಾರ್ಕಳ

ಕ್ರಿಯೇಟಿವ್ ಕಾಲೇಜಿನಲ್ಲಿ “ಕ್ರಿಯೇಟಿವ್ ಕಲಿಕೆ”!

ಕ್ರಿಯೇಟಿವ್ ಕಾಲೇಜಿನಲ್ಲಿ “ಕ್ರಿಯೇಟಿವ್ ಕಲಿಕೆ”!
– ಕೆಸರ್ಡೋಂಜಿ ದಿನ: ಮಣ್ಣಿನೊಂದಿಗೆ ಕಲಿಕಾ ಅನುಭವ
– ಪ್ರಗತಿಪರ ಕೃಷಿಕರಿಗೆ ಸನ್ಮಾನ: ಮಾದರಿಯಾಯ್ತು ಕಾರ್ಯಕ್ರಮ
– ತುಳುನಾಡಿನ 50ಕ್ಕೂ ಅಧಿಕ ವಿಶೇಷ ತಿಂಡಿ ತಿನಿಸು ವಿತರಣೆ

NAMMUR EXPRESS NEWS
ಕಾರ್ಕಳ: ಕ್ರಿಯೇಟಿವ್ ಪಿಯು ಕಾಲೇಜಿನ ವಾಣಿಜ್ಯ ವಿದ್ಯಾರ್ಥಿಗಳಿಗೆ ಹೀರ್ಗಾನ ಗ್ರಾಮದ ಬೆಂಗಾಲ್ ಕೃಷಿ ಭೂಮಿಯಲ್ಲಿ ಕೆಸರ್ಡೊಂಜಿ ದಿನ – ಮಣ್ಣಿನೊಂದಿಗೆ ಕಲಿಕಾ ಅನುಭವ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ವಿದ್ಯಾರ್ಥಿಗಳ ಈ ಕ್ರಿಯೇಟಿವ್ ಕಲಿಕೆ ಗಮನ ಸೆಳೆಯಿತು. ನೇಜಿ ನೆಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಿರ್ಗಾನ ಗ್ರಾ. ಪಂ. ಮಾಜಿ ಅಧ್ಯಕ್ಷ ಸಂತೋಷ್‌ ಶೆಟ್ಟಿ, ಇಂದು ನಮಗೆ ಧನಾರ್ಜನೆಗೆ ಅನೇಕ ಮಾರ್ಗಗಳಿವೆ. ಆದರೆ, ಹೊಟ್ಟೆ ತುಂಬಿಸಲು ರೈತ ಬೆಳೆದ ಬೆಳೆಯೇ ಬೇಕಾಗುತ್ತದೆ. ಆಹಾರದ ಉತ್ಪಾದನೆ ಇಲ್ಲದೇ ಹೋದರೆ ಎಷ್ಟೇ ಹಣವಿದ್ದರೂ ಬದುಕಲು ಅಸಾಧ್ಯ ಆದ್ದರಿಂದ ವಿದ್ಯಾರ್ಥಿಗಳು ಕೃಷಿಯನ್ನು ತುಚ್ಛವಾಗಿ ಕಾಣದೇ ಭೂಮಿತಾಯಿಯ ಸೇವೆ ಎಂದು ಭಾವಿಸುವಂತಾಗಿ, ದೇಶದ ಆರ್ಥಿಕ ಪ್ರಗತಿಯಲ್ಲಿ ಕೃಷಿಯ ಪಾತ್ರ ಮತ್ತಷ್ಟು ಮಹತ್ವತೆ ಪಡೆಯಲಿ ಎಂದರು.

ಹೊತ್ತು ಊಟಕ್ಕೂ ಪರದಾಟ ಎಚ್ಚರ

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕ ಡಾ. ಗಣನಾಥ ಶೆಟ್ಟಿ ಮಾತನಾಡಿಕೈ ಕೆಸರಾದರೆ ಬಾಯಿ ಮೊಸರು ಎಂಬ ಮಾತಿದೆ. ಆದರೆ ಇಂದು ಆಧುನಿಕತೆಯ ಭರಾಟೆಯಲ್ಲಿ ಪ್ರಸ್ತುತ ಎಲ್ಲರೂ ಕೃಷಿ ಚಟುವಟಿಕೆಯಿಂದ ದೂರವಾಗುತ್ತಿದ್ದೇವೆ. ಇದೇ ಮುಂದುವರಿದಲ್ಲಿ ಮುಂದೊಂದು ದಿನ ಒಂದು ಹೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ಎದುರಾಗಬಹುದು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಕೃಷಿಯತ್ತ ಯೋಚಿಸಬೇಕಾಗಿದೆ

ಪ್ರಗತಿಪರ ಕೃಷಿಕರಿಗೆ ಸನ್ಮಾನ

ಪ್ರಗತಿಪರ ಕೃಷಿಕರಾದ ವಿಠಲ್ ಕುಲಾಲ್, ಗೋಕುಲ್ ದಾಸ್ ವಾಗ್ಲೆ ಅವರನ್ನು ಇದೇ ಸಂದರ್ಭ ಸನ್ಮಾನಿಸಲಾಯಿತು. ಬಳಿಕ, ತುಳುನಾಡಿನ 50ಕ್ಕೂ ಅಧಿಕ ವಿಶೇಷ ತಿಂಡಿ ತಿನಿಸುಗಳ ವಿತರಿಸಲಾಯಿತು. ಹಳೆಯ ಕಾಲದ ಕೃಷಿ ಉಪಕರಣಗಳ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು. ವಿದ್ಯಾರ್ಥಿಗಳಿಗೆ ಕೆಸರಿನಲ್ಲಿ ವಿವಿಧ ಆಟೋಟ ಕಾರ್ಯಕ್ರಮಗಳು ನಡೆದವು. ಪ್ರಗತಿಪರ ಕೃಷಿಕ ಜಗದೀಶ್ ಕಡಂಬ, ಉದ್ಯಮಿ ಶ್ರೀಧರ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದದರು. ತ್ರಿಶಾ ಶೆಟ್ಟಿ ಸ್ವಾಗತಿಸಿದರು. ಸಂಸ್ಥಾಪಕ ಅಮೃತ್ ರೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾನ್ವಿ ರಾವ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಸಂಜೆ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಕೆ. ಯೋಗೀಶ್ ಕಿಣಿ, ಕೃಷಿ ಸಂಸ್ಕೃತಿಯೇ ಭಾರತದ ಜೀವಾಳ ಇದನ್ನು ನಾವು ಅರಿತು ಬದುಕಬೇಕಾಗಿದೆ ಎಂದರು. ಪತ್ರಕರ್ತ ರಾಮ್ ಅಜೆಕಾರ್,ಕೃಷಿ ಬದುಕಿನ ಕುರಿತು ಮಾತನಾಡಿದರು.

ಸಂಸ್ಥಾಪಕ ಅಶ್ವತ್ ಎಸ್. ಎಲ್ ಮಾತನಾಡಿ, ವೈಜ್ಞಾನಿಕ ಪ್ರಗತಿಯಷ್ಟೇ, ಕೃಷಿ ಕ್ಷೇತ್ರದಲ್ಲೂ ಆವಿಷ್ಕಾರ ನಡೆದು ಆರೋಗ್ಯಯುತವಾದ ಸಮೃದ್ಧ ಬದುಕು ಎಲ್ಲರಿಗೂ ದೊರೆಯುವಂಯತಾಗಲಿ ಆಶಯ ವ್ಯಕ್ತಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿದ್ವಾನ್ ಗಣಪತಿ ಭಟ್ ಮಾತನಾಡಿ, ಕೃಷಿ ಚಟುವಟಿಕೆಯಲ್ಲಿತೊಡಗಿಸಿಕೊಂಡವರಿಗೆ ಬಡತನವಿಲ್ಲ, ಪ್ರತಿ ಅನ್ನದ ಅಗುಳಿನ ಮೇಲೆ ಅತೀವ ಗೌರವವಿರಲಿ ಎಂದು ಕಿವಿಮಾತು ಹೇಳಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಉಪನ್ಯಾಸಕ ವಿನಾಯಕ ಜೋಗ್ ಪ್ರಶಸ್ತಿ ವಿಜೇತ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ಸಂಸ್ಥಾಪಕರಾದ ಆದರ್ಶ ಎಂ.ಕೆ, ಅಮೃತ್ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಾಘವೇಂದ್ರ ರಾವ್ ಸ್ವಾಗತಿಸಿ, ಉಮೇಶ್ ಕಾರ್ಯಕ್ರಮ ನಿರೂಪಿಸಿದರು. ಚಂದ್ರಕಾಂತ ಆಚಾರ್ಯ ವಂದಿಸಿದರು.

ಇದನ್ನೂ ಓದಿ : ಚಂದ್ರನಂಗಳದಲ್ಲಿ ಭಾರತದ ಮುದ್ರೆ!

Categories
ಹೊಸನಗರ

ಅಂತೂ ಅರಸಾಳು ನಿಲ್ದಾಣದಲ್ಲಿ ರೈಲು ನಿಲ್ಲುತ್ತೆ!

ಅಂತೂ ಅರಸಾಳು ನಿಲ್ದಾಣದಲ್ಲಿ ರೈಲು ನಿಲ್ಲುತ್ತೆ!
– ಹೊಸನಗರ, ತೀರ್ಥಹಳ್ಳಿ ಭಾಗದ ಪ್ರಯಾಣಿಕರಿಗೆ ಅನುಕೂಲ
– ಪೂಜೆ ಮಾಡಿ ರೈಲನ್ನು ಸ್ವಾಗತಿಸಿದ ಸ್ಥಳೀಯರು

NAMMUR EXPRESS NEWS
ಹೊಸನಗರ: ಬಹು ವರ್ಷಗಳ ಬೇಡಿಕೆಯಾಗಿದ್ದ ಅರಸಾಳು ರೈಲ್ವೆ ನಿಲ್ದಾಣದಲ್ಲಿ ರೈಲು ನಿಲುಗಡೆ ಬೇಡಿಕೆ ಈಗ ಈಡೇರಿದೆ.
ಹೊಸನಗರ, ರಿಪ್ಪನಪೇಟೆ, ಹುಂಚ, ಕೋಣಂದೂರು ಹಾಗೂ ಸುತ್ತಮುತ್ತಲಿನ ಊರಿನ ಪ್ರಯಾಣಿಕರು ಅರಸಾಳು ರೈಲ್ವೆ ನಿಲ್ದಾಣ ಸಮೀಪವಿದ್ದರೂ ರೈಲಿಗಾಗಿ ಆನಂದಪುರ ಹೋಗುವ ಅನಿವಾರ್ಯತೆ ಇತ್ತು. ಇದೀಗ ಅರಸಾಳು ಮೂಲಕ ಶಿವಮೊಗ್ಗ, ಬೆಂಗಳೂರು ಸೇರಿ ರಾಜ್ಯದ ಹಲವೆಡೆಗೆ ರೈಲು ಪ್ರಯಾಣ ಮಾಡಬಹುದಾಗಿದೆ. ಸಾರ್ವಜನಿಕರ ಹಾಗೂ ಪ್ರಯಾಣಿಕರ ಬಹು ವರ್ಷಗಳಿಂದ ಅರಸಾಳು (ಮಾಲ್ಗುಡಿ) ರೈಲ್ವೆ ನಿಲ್ದಾಣದಲ್ಲಿ ರೈಲು ನಿಲುಗಡೆ ಮಾಡುವಂತೆ ಅನೇಕ ಬಾರಿ ಮನವಿ ಸಲ್ಲಿಸಿದ್ದರು. ಈ ವಿಷಯವನ್ನು ಸಂಸದರಾದ ಬಿ.ವೈ ರಾಘವೇಂದ್ರರವರ ಗಮನಕ್ಕೂ ತರಲಾಗಿತ್ತು. ಸಂಸದರ ವಿಶೇಷ ಪ್ರಯತ್ನದಿಂದ ಆ.24ರ ಇಂದಿನಿಂದ (24-08-2023 ) ದಿನ ನಾಲ್ಕು ಮುಖ್ಯ ರೈಲುಗಳು ಅರಸಾಳು ರೈಲು ನಿಲ್ದಾಣದಲ್ಲಿ ನಿಲ್ಲಲಿವೆ.

ಪೂಜೆ ಸಲ್ಲಿಸಿ ಸ್ವಾಗತಿಸಿದ

ಅರಸಾಳು ರೈಲ್ವೆ ನಿಲ್ಧಾಣದಲ್ಲಿ ಪ್ರಪ್ರಥಮವಾಗಿ ನಿಲುಗಡೆಯಾದ ರೈಲಿಗೆ ಪೂಜೆ ಸಲ್ಲಿಸಿ ಸ್ವಾಗತ ಕೋರಲಾಯಿತು.
ದಶಕಗಳ ಬೇಡಿಕೆ ಈಡೇರಿಸಿರುವ ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅವರಿಗೆ, ಸಂಸದರಾದ ಬಿ.ವೈ ರಾಘವೇಂದ್ರ ಸೇರಿದಂತೆ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳಿಗೆ ಧನ್ಯವಾದ ಅರ್ಪಿಸಲಾಯಿತು. ಪ್ರಾಯೋಗಿಕವಾಗಿ ನೀಡಲಾಗುತ್ತಿರುವ ಈ ನಿಲುಗಡೆಯನ್ನು ಸಮರ್ಥವಾಗಿ ಬಳಕೆ ಮಾಡಿಕೊಂಡಲ್ಲಿ ಮಾತ್ರ ಮುಂದಿನ ದಿನಗಳಲ್ಲಿ ಈ ನಿಲುಗಡೆಯನ್ನು ಮುಂದುವರೆಸುವ ಸಾಧ್ಯತೆಗಳಿರುವುದರಿಂದ, ಪ್ರಯಾಣಿಕರು ಈ ಅಮೂಲ್ಯ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳಬೇಕಾಗಿ ವಿನಂತಿ ಯುವ ನಾಯಕ, ಮಾಜಿ ತಾಪಂ ಅಧ್ಯಕ್ಷ ವೀರೇಶ್ ಆಲವಳ್ಳಿ ಮನವಿ ಮಾಡಿದ್ದಾರೆ.

ಅರಸಾಳಿನಲ್ಲಿ ರೈಲು ನಿಲುಗಡೆ ಶಾಸಕ ಆರಗ ಜ್ಞಾನೇಂದ್ರ ಸಂತಸ

ಬಹಳ ವರ್ಷಗಳ ಬೇಡಿಕೆಯಾಗಿದ್ದ ಅರಸಾಳು ರೈಲು ನಿಲ್ದಾಣ ಸ್ಥಾಪನೆಯಾಗಿ ರೈಲು ನಿಲುಗಡೆ ಗುರುವಾರದಿಂದ ಆರಂಭವಾಗಿದ್ದು,ಶಾಸಕ ಜ್ಞಾನೇಂದ್ರ ಹರ್ಷ ವ್ಯಕ್ತಪಡಿಸಿದ್ದಾರೆ, ಬಹಳ ವರ್ಷಗಳಿಂದ ಈ ನಿಲುಗಡೆಗೆ ಪತ್ರ ಮುಖೇನ ಒತ್ತಾಯಿಸಿದ್ದನ್ನು ನೆನಪಿಸಿಕೊಂಡಿರುವ ಶಾಸಕರು, ತೀರ್ಥಹಳ್ಳಿ ಮತ್ತು ಹುಂಚ ಹೋಬಳಿಯ ಸಾರ್ವಜನಿಕರಿಗೆ ರೈಲು ಸೇವೆ ಹತ್ತಿರವಾಗಿದ್ದಕ್ಕೆ ಸಂತಸ ವ್ಯಕ್ತಪಡಿಸಿ ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಲು ಕೋರಿದ್ದಾರೆ, ಅರಸಾಳು ಕುಂಸಿ ನಿಲ್ದಾಣದಲ್ಲಿ ರೈಲು ನಿಲುಗಡೆಗೆ ಶ್ರಮವಹಿಸಿದ ಸಂಸದ ಬಿ ವೈ ರಾಘವೇಂದ್ರರವರನ್ನು ಶಾಸಕರು ಅಭಿನಂದಿಸಿದ್ದಾರೆ.

ಇದನ್ನೂ ಓದಿ : ಚಂದ್ರನಂಗಳದಲ್ಲಿ ಭಾರತದ ಮುದ್ರೆ!

Categories
ಕರಾವಳಿ ಮಂಗಳೂರು

ತುಳು ಭಾಷೆಯಲ್ಲಿ ಮೊದಲ ಸಂಶೋಧನಾ ಅಧ್ಯಯನ ಪ್ರಕಟ

ತುಳು ಭಾಷೆಯಲ್ಲಿ ಮೊದಲ ಸಂಶೋಧನಾ ಅಧ್ಯಯನ ಪ್ರಕಟ
– ತುಳುವಿನಲ್ಲಿ ಪಿ.ಹೆಚ್.ಡಿ ಗಳಿಸಿದ ಮಂಗಳೂರಿನ ಡಾ.ವಿ.ಕೆ.ಯಾದವ್
– ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಂಸ್ಥಾಪಕ ಡಾ ಎಂ ಮೋಹನ್ ಆಳ್ವರಿಂದ ಆ.27ಕ್ಕೆ ಅನಾವರಣ

NAMMUR EXPRESS NEWS
ಮಂಗಳೂರು: ತುಳು ಭಾಷೆಯಲ್ಲಿ ಸಂಶೋಧನಾ ಅಧ್ಯಯನವನ್ನು ಪ್ರಕಟಿಸಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಈ ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕರೊಬ್ಬರು ಪಾತ್ರರಾಗಿದ್ದಾರೆ. ಮಂಗಳೂರಿನ ಸಸಿಹಿಷ್ಣುವಿನ ಡಾ.ವಿ.ಕೆ.ಯಾದವ್ ಅವರು ಆಂಧ್ರಪ್ರದೇಶದ ಕುಪ್ಪಂನ ದ್ರಾವಿಡ ವಿಶ್ವವಿದ್ಯಾಲಯದಿಂದ ‘ಮೊಗವೀರನ ಸಾಂಸ್ಕೃತಿಕ ಬದ್ ಬೊಕ್ಕ ಆರ್ಥಿಕ ಚಿಂತನೆ’ (ಮೊಗವೀರ ಸಮುದಾಯದ ಸಾಂಸ್ಕೃತಿಕ ಮತ್ತು ಆರ್ಥಿಕ ಚಿಂತನೆಗಳು) ಕುರಿತು ತಮ್ಮ ಪಿಹೆಚ್ ಡಿ ಪೂರ್ಣಗೊಳಿಸಿದ್ದಾರೆ. ವಿಶ್ವವಿದ್ಯಾಲಯದ ತುಳು ಅಧ್ಯಯನ ವಿಭಾಗದ ಮುಖ್ಯಸ್ಥ ಡಾ.ಜಿ.ಎಸ್.ಶಿವಕುಮಾರ್ ಅವರ ಮಾರ್ಗದರ್ಶನದಲ್ಲಿ ಪಿ ಹೆಚ್ ಡಿ ಪದವಿ ಗಳಿಸಿದ್ದಾರೆ.

ಪುಸ್ತಕ ರೂಪದಲ್ಲಿ ಹೊರತಂದಿರುವ ಇವರ ಪ್ರಬಂಧವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಂಸ್ಥಾಪಕ ಡಾ ಎಂ ಮೋಹನ್ ಆಳ್ವ ಅವರು ಆಗಸ್ಟ್ 27 ರಂದು ಅನಾವರಣಗೊಳಿಸಲಿದ್ದಾರೆ. ಎರಡು ವರ್ಷಗಳ ಹಿಂದೆ ಸಂಗೀತಾ ಅವರು ತುಳುವಿನಲ್ಲಿ ಪಿಹೆಚ್ ಡಿ ಮಾಡಿದ್ದರು, ಆದರೆ ಅದು ಪ್ರಕಟವಾಗಿರಲಿಲ್ಲ. ತುಳುವಿನಲ್ಲಿ ಪ್ರಕಟವಾದ ಮೊದಲ ಪಿಹೆಚ್ ಡಿ ಪ್ರಬಂಧ ಇದಾಗಿದೆ ಎಂದು ಹೇಳಿದ ಯಾದವ್, ತುಳು ಭಾಷೆ ಮತ್ತು ಸಾಹಿತ್ಯದಲ್ಲಿ ಸಂಶೋಧನೆ ಮಾಡುವವರಿಗೆ ಇದು ಸಹಾಯ ಮಾಡುತ್ತದೆ ಎಂದು ಹೇಳಿದರು.

ಪ್ರಬಂಧ ತುಳುನಾಡ ಹೆಮ್ಮೆ!

ಪ್ರಸ್ತುತ, ದ್ರಾವಿಡ ವಿಶ್ವವಿದ್ಯಾಲಯ ಮಾತ್ರ ಇತರ ದ್ರಾವಿಡ ಭಾಷೆಗಳ ಜೊತೆಗೆ ತುಳು ಭಾಷೆಯಲ್ಲಿ ಪಿಹೆಚ್ ಡಿ ಮಾಡಲು ಅವಕಾಶ ನೀಡುತ್ತದೆ. ಮೊಗವೀರ ಸಮುದಾಯದಲ್ಲಿ ಮಾತ್ರ ಕಂಡುಬರುವ ತುಳು ಭಾಷೆಯ ಕೆಲವು ವಿಭಿನ್ನ ವ್ಯಂಜನಗಳು ಮತ್ತು ಉಚ್ಚಾರಣೆಗಳನ್ನು ಸಹ ಸಂಶೋಧನಾ ಅಧ್ಯಯನದಲ್ಲಿ ದಾಖಲಿಸಲಾಗಿದೆ ಎಂದು ಲೇಖಕ ಚಂದ್ರಹಾಸ ಕಣಂತೂರು ಹೇಳಿದ್ದಾರೆ. ತುಳು ಅಕಾಡೆಮಿಯ ಮಾಜಿ ಸದಸ್ಯ ಬೆನೆಟ್ ಜಿ ಅಮ್ಮಣ್ಣ, ತುಳು ಭಾಷೆ ಮತ್ತು ಸಾಹಿತ್ಯದ ಇತಿಹಾಸದಲ್ಲಿ ಇದು ಮಹತ್ವದ ಬೆಳವಣಿಗೆಯಾಗಿದೆ, ವಿಶೇಷವಾಗಿ ತುಳು ಭಾಷೆಗೆ ಸಾಂವಿಧಾನಿಕ ಮಾನ್ಯತೆ ಸಿಗದ ಹಿನ್ನೆಲೆಯಲ್ಲಿ ಅಧ್ಯಯನ ಮತ್ತು ಸಾಹಿತ್ಯದ ಕೊರತೆಯನ್ನು ಉಲ್ಲೇಖಿಸಿ ಪ್ರಕಟಿಸಲಾಗಿದೆ. ಪುಸ್ತಕ ಬಿಡುಗಡೆಗೂ ಮುನ್ನ ತುಳು ಕವಿಗೋಷ್ಠಿ ನಡೆಯಲಿದ್ದು, 12 ಜನ ಭರವಸೆಯ ಕವಿಗಳು ಬಾಗವಹಿಸಲಿದ್ದಾರೆ.

ಇದನ್ನೂ ಓದಿ : ಚಂದ್ರನಂಗಳದಲ್ಲಿ ಭಾರತದ ಮುದ್ರೆ!

Categories
ತೀರ್ಥಹಳ್ಳಿ

ತೀರ್ಥಹಳ್ಳಿ ಪ್ರಮುಖ ಸುದ್ದಿಗಳು

ಚಂದ್ರಯಾನ ಸಕ್ಸಸ್: 2 ಕಿಮಿ ನಡೆದು ಮಕ್ಕಳ ಶುಭಾಶಯ!
– ಕೋಣಂದೂರಿನ ಸ್ವಾಮಿ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆ ಮಕ್ಕಳ ಶುಭಾಶಯ
– ವಿನಯ್ ಗುರೂಜಿ ಭಕ್ತರಿಂದ ಕೋಮನೆ ಶಾಲೆಯಲ್ಲಿ ವಿನಯ್ ಗುರೂಜಿ ಹುಟ್ಟು ಹಬ್ಬ ಆಚರಣೆ

NAMMUR EXPRESS THIRTHAHALLI :
ತೀರ್ಥಹಳ್ಳಿ ತಾಲ್ಲೂಕಿನ ಕೋಣಂದೂರಿನ ಸ್ವಾಮಿ ವಿವೇಕಾನಂದ ಆಂಗ್ಲಮಾಧ್ಯಮ ಶಾಲಾವತಿಯಿಂದ 23-08-2023ರ ಚಂದ್ರಯಾನ 3ರ ಯಶಸ್ಸಿಗೆ ಶುಭಹಾರೈಸುವ ಸಲುವಾಗಿ 1ನೇ ತರಗತಿಯ ಚಿಣ್ಣರರಿಂದ 7ನೇ ತರಗತಿವರೆಗಿನ ಎಲ್ಲಾ ಮಕ್ಕಳು ಕೋಣಂದೂರು ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯಿಂದ ಸಿ.ಕೆ.ವೃತ್ತ ಮಾರ್ಗವಾಗಿ ಮತ್ತು ಸಿ.ಕೆ. ವೃತ್ತದಿಂದ ಆಸ್ಪತ್ರೆಯವರೆಗೆ ಸಾಗಿ ನಮ್ಮ ಇಸ್ರೋ ವಿಜ್ಞಾನಿಗಳಿಗೆ ಶುಭಕೋರಿದ್ದಾರೆ. ಜಾಥಾದಲ್ಲಿ ವಿದ್ಯಾರ್ಥಿಗಳೊಂದಿಗೆ ಶಿಕ್ಷಕರು, ಪೋಷಕರು ಪಾಲ್ಗೊಂಡು ಈ ಜಾತವನ್ನು ಯಶಸ್ವಿಗೊಳಿಸಿದ್ದಾರೆ. ಒಟ್ಟು 2:30 ಕಿ.ಮೀ ಜಾಥಾದಲ್ಲಿ ಮಕ್ಕಳೆಲ್ಲರೂ ಹರ್ಷೋದ್ಧಾರದೊಂದಿಗೆ ಜಯಕಾರ ಕೂಗುತ್ತ ಸಾಗಿರುತ್ತಾರೆ. ಇಸ್ರೋ ವಿಜ್ಞಾನಿಗಳ ಸಾಧನೆಯು ಮಕ್ಕಳಗೆ ಸ್ಪೂರ್ತಿಯಾಗಲಿ ಎಂಬುದೇ ವಿದ್ಯಾಸಂಸ್ಥೆಯ ಆಶಯವಾಗಿದೆ.

ವಿನಯ್ ಗುರೂಜಿ ಹುಟ್ಟು ಹಬ್ಬ: ಸಾಮಾಜಿಕ ಸೇವೆ
– ಮೇಗರವಳ್ಳಿ ವಿನಯ್ ಗುರೂಜಿ ಭಕ್ತ ವೃಂದದಿಂದ ಕಾರ್ಯಕ್ರಮ

ತೀರ್ಥಹಳ್ಳಿ: ಅವಧೂತ ಶ್ರೀ ವಿನಯ್ ಗುರೂಜಿಯವರ ಹುಟ್ಟು ಹಬ್ಬದ ವಿಶೇಷವಾಗಿ ಮೇಗರವಳ್ಳಿ ಭಕ್ತ ವೃಂದದಿಂದ ಒಂದರಿಂದ ಐದರವರೆಗೆ ಓದುತ್ತಿರುವ ಸರಕಾರಿ ಕೋಮನೆ ಶಾಲಾ ಮಕ್ಕಳಿಗೆ ಹುಟ್ಟುಹಬ್ಬದ ಅಂಗವಾಗಿ ಸಿಹಿ ಹಂಚಲಾಯಿತು. ಹಾಗೂ 25 ಮಕ್ಕಳಿಗೆ ಡ್ರಾಯಿಂಗ್ ಕಿಟ್ ವಿತರಣೆ ಮಾಡಲಾಯಿತು. ಕೇಕ್ ಅನ್ನು ಕಟ್ ಮಾಡಿ ವಿನಯ್ ಗುರೂಜಿ ಅವರ ಹುಟ್ಟು ಹಬ್ಬವನ್ನು ಆಚರಿಸಲಾಯಿತು. ಮೇಗರವಳ್ಳಿ ಭಕ್ತ ವೃಂದದ ಅಭಿಲಾಶ್, ಮೇಲಿನ ಕುರುವಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಬಂಡೆ ವೆಂಕಟೇಶ್ಹಾಗೂ ಎಸ್ ಟಿ ಎಂ ಸಿ ಸದಸ್ಯರು ಹಾಗೂ ಉಪಾಧ್ಯಕ್ಷರು, ಪೋಷಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಅವಧೂತ ವಿನಯ್ ಗುರೂಜಿಯವರ ಹುಟ್ಟು ಹಬ್ಬದ ಅಂಗವಾಗಿ ಬಡ ಮಕ್ಕಳಿಗೆ ಸಹಾಯ ಮಾಡುವ ಕಾರ್ಯವನ್ನು ವಿನಯ್ ಗುರೂಜಿ ಭಕ್ತ ವೃಂದ ಮೇಗರವಳ್ಳಿ ಇವರು ಕಳೆದ 3 ವರ್ಷದಿಂದ ನಡೆಸಿಕೊಂಡು ಬರುತ್ತಿದ್ದಾರೆ.

ಇದನ್ನೂ ಓದಿ : ಚಂದ್ರನಂಗಳದಲ್ಲಿ ಭಾರತದ ಮುದ್ರೆ!

Categories
ಮಲ್ನಾಡ್

ಟಾಪ್ ನ್ಯೂಸ್ ಮಲ್ನಾಡ್

ಗಾಂಧಿ ಪ್ರತಿಮೆ ಒಡೆದ ಇಬ್ಬರು ಅರೆಸ್ಟ್!
– ಹೊಳೆಹೊನ್ನೂರು ಘಟನೆ: ಪ್ರವಾಸ ಹೋದವರಿಂದ ಕೃತ್ಯ
– ಶಿಕಾರಿಪುರ: ಯುವಕ ಅಪಘಾತಕ್ಕೆ ಬಲಿ
– ಚಿಕ್ಕಮಗಳೂರು: ಸ್ಕೂಟಿಯಲ್ಲೇ ಗಾಂಜಾ ಸಾಗಣೆ

NAMMUR EXPRESS NEWS
ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಹೊಳೆಹೊನ್ನೂರು ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ, ಮಹಾತ್ಮಗಾಂಧೀಜಿ ಸರ್ಕಲ್‌ನಲ್ಲಿದ್ದ ಗಾಂಧೀಜಿ ಪ್ರತಿಮೆಯನ್ನು ಧ್ವಂಸಗೊಳಿಸಿದ ಪ್ರಕರಣವನ್ನು ಪೊಲೀಸರು ಭೇಧಿಸಿದ್ದಾರೆ. ಇಬ್ಬರನ್ನು ವಶಕ್ಕೆ ಪಡೆದಿದ್ದು ಇನ್ನು ಅನೇಕರು ಘಟನೆಯಲ್ಲಿ ಭಾಗಿಯಾಗಿದ್ದಾರಾ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಶಿವಮೊಗ್ಗ ಎಸ್ ಪಿ ಮಿಥುನ್ ಕುಮಾರ್ ಮಾಹಿತಿ ನೀಡಿದ್ದು,ಆರೋಪಿಗಳ ಪತ್ತೆಗೆ ಮೂರು ತಂಡ ರಚಿಸಲಾಗಿತ್ತು. ಸುಮಾರು 50 ಜನ ಪೊಲೀಸ್ ಸಿಬ್ಬಂದಿ ತಂಡದಲ್ಲಿದ್ದರು. ಇದೀಗ ತನಿಖೆಯ ಫಲವಾಗಿ ಇದೀಗ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಚಿತ್ರದುರ್ಗದ ಗಣೇಶ್ ಮತ್ತು ವಿನಯ್ ಬಂಧಿತ ಆರೋಪಿಗಳು ಎಂದು ತಿಳಿಸಿದ್ದಾರೆ.ಆರೋಪಿಗಳು ಚಿತ್ರದುರ್ಗ ಸಮೀಪ ಪಂಡ್ರಹಳ್ಳಿಯವರಾಗಿದ್ದು, ಕೃಷಿ ಕೆಲಸ ಮಾಡಿಕೊಂಡಿದ್ದವರು. ಚಿತ್ರದುರ್ಗದಿಂದ ಜೋಗಕ್ಕೆ ಹೋಗುವ ಮಾರ್ಗದಲ್ಲಿ ಈ ಆರೋಪಿಗಳು ಈ ದುಷ್ಕೃತ್ಯವನ್ನು ಎಸಗಿದ್ದಾರೆ, ಪ್ರತಿಮೆ ಧ್ವಂಸ ಮಾಡಿದ ಇಬ್ಬರು ನಂತರ ಶಿವಮೊಗ್ಗಕ್ಕೆ ಹೋಗಿ ವಾಪಸ್ ಹಳ್ಳಿಗೆ ಹೋಗಿದ್ದರು. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ವಿಚಾರಣೆ ವೇಳೆ ಇನ್ನಷ್ಟು ವಿಷಯ ತಿಳಿದು ಬರಲಿದೆ ಎಂದು ತಿಳಿಸಿದ್ದಾರೆ.

ಸ್ಕೂಟಿಯಲ್ಲಿ ಗಾಂಜಾ ಸಾಗಿಸುತ್ತಿದ್ದ ಆರೋಪಿ ಬಂಧನ

ಸ್ಕೂಟಿಯಲ್ಲಿ ಗಾಂಜಾ ಸಾಗಿಸುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಬಾಳೆಹಳ್ಳಿಯಲ್ಲಿ ನಡೆದಿದೆ. ಮನೋಜ್‌ ಎಂಬಾತ ಚಿಕ್ಕಮಗಳೂರಿಗೆ ಸ್ಕೂಟಿಯಲ್ಲಿ ಗಾಂಜಾ ಸಾಗಿಸುತ್ತಿದ್ದ ವೇಳೆ ಪೊಲೀಸರು ಬಂಧಿಸಿದ್ದು, ಆರೋಪಿಯಿಂದ 1 ಕೆಜಿ 175 ಗ್ರಾಂ ಗಾಂಜಾ ಮತ್ತು ಕೃತ್ಯಕ್ಕೆ ಬಳಸಿದ್ದ ಸ್ಕೂಟಿಯನ್ನು ಜಪ್ತಿ ಮಾಡಲಾಗಿದೆ. ಬಸವನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಶಿಕಾರಿಪುರದಲ್ಲಿ ಯುವಕ ಅಪಘಾತಕ್ಕೆ ಬಲಿ

ಶಿಕಾರಿಪುರ ಪಟ್ಟಣದ ಹೊರವಲಯದ ಕೆಎಸ್ ಆರ್ ಟಿಸಿ ಡಿಪೋ ಎದುರು ಒಂದೇ ವಾರದಲ್ಲಿ ಎರಡನೇ ಅಪಘಾತವಾಗಿದ್ದು 2ನೇ ಬಲಿಯಾಗಿದೆ. ಶಿಕಾರಿಪುರ ಪಟ್ಟಣ ಹೊರವಲಯದಲ್ಲಿ ನಿರ್ಮಾಣವಾಗಿರುವ ಕೆಎಸ್ ಆರ್ ಟಿಸಿ ಡಿಪೋ ಎದುರು ಕಳೆದ ಎರಡು ದಿನಗಳ ಹಿಂದೆ ಎರಡು ಬೈಕ್ ಗಳ ನಡುವೆ ಮುಖಮುಖಿ ಡಿಕ್ಕಿಯಾಗಿ ಒರ್ವ ಸ್ಥಳದಲ್ಲಿಯೇ ಸಾವನ್ನಪ್ಪಿದರು. ಮೂರು ಜನ ಗಂಭೀರವಾಗಿ ಗಾಯಗೊಂಡಿದ್ದರು. ಇದೀಗ ಮತ್ತೆ ಬೈಕ್, ಬಸ್ ನಡುವೆ ಅಪಘಾತ ಸಂಭವಿಸಿ ಅಪಘಾತದಲ್ಲಿ ಗಜೇಂದ್ರ ಆಚಾರ್ ಬಿನ್ ಶಂಕರ್ ಆಚಾರ್ (21) ವರ್ಷ ಸ್ಥಳದಲ್ಲಿಯೇ ಸಾವನ್ನಪ್ಪಿದಾನೆ. ಹಿಂಬದಿಯ ಕೂತಿದ ಯುವಕನಿಗೆ ಗಾಯವಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ : ಚಂದ್ರನಂಗಳದಲ್ಲಿ ಭಾರತದ ಮುದ್ರೆ!