Categories
ತೀರ್ಥಹಳ್ಳಿ

ಕಾಂಗ್ರೆಸ್, ಬಿಜೆಪಿ ವಿರುದ್ಧ ಜೆಡಿಎಸ್ ವಾಕ್ ಬಾಣ!

ಕಾಂಗ್ರೆಸ್, ಬಿಜೆಪಿ ವಿರುದ್ಧ ಜೆಡಿಎಸ್ ವಾಕ್ ಬಾಣ!
– ತೀರ್ಥಹಳ್ಳಿಯಲ್ಲಿ ಜನರಿಗೆ ಸಮಸ್ಯೆ: ಕುಣಜೆ ಕಿರಣ್
– ಶರಾವತಿ ಮುಳುಗಡೆ ಸಂತ್ರಸ್ತರಿಗೆ ಏನೂ ಮಾಡಿಲ್ಲ
– ಸ್ಥಳೀಯ ಸಂಸ್ಥೆ ಚುನಾವಣೆ ನಡೆಸದೆ ಮೋಸ

NAMMUR EXPRESS NEWS
ತೀರ್ಥಹಳ್ಳಿ: ಕಾಂಗ್ರೆಸ್, ಬಿಜೆಪಿ ವಿರುದ್ಧ ತೀರ್ಥಹಳ್ಳಿ ಜೆಡಿಎಸ್ ವಾಕ್ ಬಾಣ ಬಿಟ್ಟಿದೆ. ಎರಡೂ ಸರ್ಕಾರ ಬಂದರೂ ತೀರ್ಥಹಳ್ಳಿಯಲ್ಲಿ ಜನರಿಗೆ ಸಮಸ್ಯೆ ಕಡಿಮೆ ಆಗಿಲ್ಲ. ಶರಾವತಿ ಮುಳುಗಡೆ ಸಂತ್ರಸ್ತರಿಗೆ ಏನೂ ಮಾಡಿಲ್ಲ, ಸ್ಥಳೀಯ ಸಂಸ್ಥೆ ಚುನಾವಣೆ ನಡೆಸದೆ ಮೋಸ ಮಾಡಲಾಗಿದೆ ಎಂದು ತೀರ್ಥಹಳ್ಳಿ ಜೆಡಿಎಸ್ ಅಧ್ಯಕ್ಷರಾದ ಕುಣಜೆ ಕಿರಣ್ ಪ್ರಭಾಕರ ಹೇಳಿಕೆ ನೀಡಿದ್ದಾರೆ. ತೀರ್ಥಹಳ್ಳಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತೀರ್ಥಹಳ್ಳಿಯಲ್ಲಿ ಬಿಜೆಪಿ ಸರ್ಕಾರದ ಸಚಿವರು ಇದ್ದರು. ಈಗ ಕಾಂಗ್ರೆಸ್ ಸರ್ಕಾರದ ಇಬ್ಬರು ಮುಖಂಡರು ಇದ್ದಾರೆ. ಆದರೆ ಜನರಿಗೆ ಇವರಿಂದ ಯಾವುದೇ ಅನುಕೂಲ ಆಗಿಲ್ಲ. ರೈತರಿಗೆ ಸಮಸ್ಯೆ ಉಂಟಾಗಿದ್ದರೂ ಇವರು ಮಾತನಾಡುತ್ತಿಲ್ಲ. ಸರ್ಕಾರ 200 ಯೂನಿಟ್ ಉಚಿತ ಅಂದು ಹೇಳಿ ಉಚಿತ ನೀಡದೆ ಸರಾಸರಿ ಬಳಕೆ ಅಂತ ಹೇಳಿ ಗೊಂದಲ ಸೃಷ್ಟಿ ಮಾಡಿದೆ ಅದನ್ನು ಸರಿಪಡಿಸಬೇಕು ಎಂದು ಕಿರಣ್ ಪ್ರಭಾಕರ್ ಹೇಳಿದರು.

ಮಲೆನಾಡಿನ ತೀರ್ಥಹಳ್ಳಿಯನ್ನು ಬರ ಪೀಡಿತ ಕ್ಷೇತ್ರಕ್ಕೆ ಸೇರಿಸಬೇಕು. ಶರಾವತಿ ಮುಳುಗಡೆ ಸಂತ್ರಸ್ತರಿಗೆ ಹೂ ಮೂಡಿಸಬೇಡಿ. ಸಂತ್ರಸ್ತರಿಗೆ ಆಗಿರುವ ಅನ್ಯಾಯವನ್ನು ಈ ಇಲ್ಲಿನ ನಾಯಕರು ಸರಿಪಡಿಸಬೇಕು. ಭೂ ಮಂಜೂರು ಮಾಡಿಲ್ಲ ಈಗ ಕೇಂದ್ರದ ಮೇಲೆ ಬೆಟ್ಟು ಮಾಡಿ ತೋರಿಸುತ್ತಾರೆ ಎಂದರು. ಯುವ ಜೆಡಿಎಸ್ ಅಧ್ಯಕ್ಷರಾದ ತಲಬಿ ರಾಘವೇಂದ್ರ ಮಾತನಾಡಿ ಗ್ರಾಮೀಣ ಭಾಗದ ಶಾಲಾ ಮಕ್ಕಳು ಹಾಗೂ ಕೂಲಿ ಕಾರ್ಮಿಕರ ಅನುಕೂಲಕ್ಕಾಗಿ ಸಾರಿಗೆ ಬಸ್ ವ್ಯವಸ್ಥೆಯನ್ನು ತರಬೇಕು. ಹರಳಿಮಠ ಹಾರೋಗೋಳಿಗೆಯ ಶಾಲಾ ಮಕ್ಕಳಿಗೆ ಬಸ್ ವ್ಯವಸ್ಥೆ ಇಲ್ಲದೆ ತುಂಬಾ ತೊಂದರೆಯಾಗುತ್ತಿದೆ ಎಂದರು.
ಗುರುದತ್, ತಲಬಿ ರಾಘವೇಂದ್ರ, ಶೈಲಾ ನಾಗರಾಜ್, ಚಂದ್ರಕಲಾ ಇದ್ದರು.

ರಾಜಕಾರಣ ನಾಟಕ ಬಿಟ್ಟು ಜನರ ಕೆಲಸ ಮಾಡಿ!

ಎಲೆಚುಕ್ಕೆ ರೋಗದ ಬಗ್ಗೆ ಯಾರು ಮಾತನಾಡುತ್ತಿಲ್ಲ ಸಂಶೋಧನೆ ಕೇಂದ್ರ ಇದ್ದರೂ ಕೂಡ ಉಪಯೋಗ ಆಗುತ್ತಿಲ್ಲ. ಬಿಜೆಪಿ ಮತ್ತು ಕಾಂಗ್ರೆಸ್ ಚುನಾವಣೆ ವಿಷಯದಲ್ಲಿ ಒಂದೇ ಆಗಿದೆ. ಇಬ್ಬರು ಕೂಡ ರಾಜಕಾರಣದ ನಾಟಕ ಬಿಟ್ಟು ಕೆಲಸ ಮಾಡಬೇಕು ಎಂದು ಕಿರಣ್ ಹೇಳಿದರು.

ಸ್ಥಳೀಯ ಸಂಸ್ಥೆ ಚುನಾವಣೆ ಮಾಡಿಲ್ಲ!

ಸ್ಥಳೀಯ ಸಂಸ್ಥೆಗಳಾದ ಎಪಿಎಂಸಿ, ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಚುನಾವಣೆ ಆಗಿಲ್ಲ, ಎಲ್ಲದರಲ್ಲೂ ರಾಜಕೀಯ ಪ್ರತಿಷ್ಠೆ ಮಾಡುತ್ತಾರೆ. ಇವರ ಸ್ವಾರ್ಥ ಬಿಟ್ಟು ಚುನಾವಣೆ ಮಾಡಲಿ. ತೀರ್ಥಹಳ್ಳಿಯಲ್ಲಿ ದೊಡ್ಡ ಕ್ರೀಡಾಂಗಣ ಇದ್ದರೂ ಅಲ್ಲಿ ಆಡಲು ಸಾಧ್ಯವಿಲ್ಲದಂತಾಗಿದೆ. ಯಾವ ರಾಜಕಾರಣಿಗೂ ಕ್ರೀಡಾಂಗಣ ಬಗ್ಗೆ ಆಸಕ್ತಿ ಇಲ್ಲ ಎಂದು ಕಿರಣ್ ಹೇಳಿದರು.

ಇದನ್ನೂ ಓದಿ : ತೀರ್ಥಹಳ್ಳಿ ರೆಸಾರ್ಟ್ ಅಲ್ಲಿ ಸಿಕ್ತು ವಿದೇಶಿ ಮದ್ಯ, ಪ್ರಾಣಿಗಳ ಕೊಂಬು!

[embedyt] https://www.youtube.com/watch?v=rTGqP21dgrM%5B/embedyt%5D

HOW TO APPLY : NEET-UG COUNSELLING 2023

Categories
ಉಡುಪಿ

ಉಡುಪಿ ಜಿಲ್ಲೆಯಲ್ಲಿ 2 ದಿನ ಲಕ್ಷ್ಮಿ ಹೆಬ್ಬಾಳ್ಕರ್ ರೌಂಡ್ಸ್!

ಉಡುಪಿ ಜಿಲ್ಲೆಯಲ್ಲಿ 2 ದಿನ ಲಕ್ಷ್ಮಿ ಹೆಬ್ಬಾಳ್ಕರ್ ರೌಂಡ್ಸ್!
– ಉಸ್ತುವಾರಿ ಸಚಿವರ ಪ್ರವಾಸ: ಸ್ವಾತಂತ್ರ್ಯ ದಿನದಲ್ಲಿ ಹಾಜರ್
– ಏನೇನು ಕಾರ್ಯಕ್ರಮ… ಎಲ್ಲೆಲ್ಲಿ ಭೇಟಿ?

NAMMUR EXPRESS NEWS
ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಆಗಸ್ಟ್ 14 ಮತ್ತು 15 ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳುತ್ತಿದ್ದು, ಪ್ರವಾಸದ ವಿವರಗಳು ಇಂತಿವೆ.ಆಗಸ್ಟ್ 14 ರಂದು ಮಧ್ಯಾಹ್ನ 12.15 ಕ್ಕೆ ಉಡುಪಿ ತಾಲೂಕು ಪಂಚಾಯತ್ ಆವರಣದಲ್ಲಿ, ಮಹಿಳಾ ಸ್ವ ಸಹಾಯ ಸಂಘಗಳ ಉತ್ಪನ್ನಗಳ ಮಾರಾಟ ಕೇಂದ್ರ ಸಂಜೀವಿನಿ ಸೂಪರ್ ಮಾರ್ಕೆಟ್ ಉದ್ಘಾಟನೆ.1 ಗಂಟೆಗೆ ಜಿಲ್ಲಾ ಪಂಚಾಯತ್ ಸಂಪನ್ಮೂಲ ಕೇಂದ್ರದಲ್ಲಿ, ಉಡುಪಿ ಜಿಲ್ಲಾ ಸರಕಾರಿ ಪದವಿ ಪೂರ್ವ ಕಾಲೇಜುಗಳ ವಿಜ್ಞಾನ ವಿದ್ಯಾರ್ಥಿಗಳಿಗಾಗಿ ಸಿಇಟಿ/ಜೆಇಇ/ನೀಟ್ ಆನ್ ಲೈನ್ ತರಬೇತಿಗೆ ಚಾಲನೆ.2 ಗಂಟೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರವಾಸೋದ್ಯಮ ಹಾಗೂ ಮೀನುಗಾರಿಕಾ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ. 4 ಗಂಟೆಗೆ ಕಾರ್ಕಳ ತಾಲೂಕು ಮುಡಾರು ಗ್ರಾಮ ಪಂಚಾಯತ್‌ ಕಟ್ಟಡ ಉದ್ಘಾಟನೆ ನಂತರ ಉಡುಪಿ ಪ್ರವಾಸಿ ಮಂದಿರದಲ್ಲಿ ವಾಸ್ತವ್ಯ ಮಾಡಲಿದ್ದಾರೆ.

ಆಗಸ್ಟ್ 15 ರಂದು ಬೆಳಗ್ಗೆ 8.30 ರಿಂದ 11 ರ ವರೆಗೆ ಜಿಲ್ಲಾಡಳಿತ ಉಡುಪಿ ವತಿಯಿಂದ, ಅಜ್ಜರಕಾಡು ಮಹಾತ್ಮ ಗಾಂಧೀ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಸ್ವಾತಂತ್ರೋತ್ಸವ ಸಮಾರಂಭದ ಅಂಗವಾಗಿ ಹಮ್ಮಿಕೊಂಡಿರುವ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು. ಮಧ್ಯಾಹ್ನ 12.30 ಕ್ಕೆ ಕುಂದಾಪುರ ತಾಲೂಕಿನ ಹಾರ್ದಳ್ಳಿ-ಮಂಡಳ್ಳಿ ಗ್ರಾಮ ಪಂಚಾಯತ್ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸುವರು.

ಇದನ್ನೂ ಓದಿ : ತೀರ್ಥಹಳ್ಳಿ ರೆಸಾರ್ಟ್ ಅಲ್ಲಿ ಸಿಕ್ತು ವಿದೇಶಿ ಮದ್ಯ, ಪ್ರಾಣಿಗಳ ಕೊಂಬು!

[embedyt] https://www.youtube.com/watch?v=rTGqP21dgrM%5B/embedyt%5D

HOW TO APPLY : NEET-UG COUNSELLING 2023

Categories
ಕರಾವಳಿ

ಕರಾವಳಿ ಟಾಪ್ ನ್ಯೂಸ್

– ಕಾರ್ಕಳ: ಹಣ ದೋಚಿದ ನಕಲಿ ಸ್ವಾಮಿಗಳು!
– ಕಾರು ಬೈಕ್ ಡಿಕ್ಕಿ: ಪೊಲೀಸ್ ಗೆ ಗಾಯ
– ವರಂಗ: ಮರಕ್ಕೆ ಗುದ್ದಿದ ಸ್ಕೂಟಿ: ಸ್ಥಳದಲ್ಲೇ ಸಾವು
– ತಲೆಮರೆಸಿಕೊಂಡ ಆರೋಪಿಯ ಬಂಧನ
– ಕರಾವಳಿಯಲ್ಲಿ ಮತ್ತೊಮ್ಮೆ ಎನ್‌ಐಎ ದಾಳಿ!
– ಹೃದಯಾಘಾತವಾಗಿ ವಿದ್ಯಾರ್ಥಿನಿ ನಿಧನ
– ನಲ್ಲೂರಿನಲ್ಲಿ ದೇವಿ ವಿಗ್ರಹ ಪತ್ತೆ

NAMMUR EXPRESS NEWS
ದಾರಿ ಕೇಳುವ ನೆಪದಲ್ಲಿ ಸ್ವಾಮೀಜಿ ವೇಷಧಾರಿಗಳು ಹಣ ದೋಚಿದ ಘಟನೆ ಕಾರ್ಕಳ ತಾಲೂಕಿನ ಬೈಲೂರಿನಲ್ಲಿ ಭಾನುವಾರ ನಡೆದಿದೆ. ಕೆ.ಎಸ್ ದಿನೇಶ್ ಆಚಾರ್ಯ ಎಂಬವರು ಆ.13ರ ಬೆಳಿಗ್ಗೆ ಬೈಲೂರು ಪೇಟೆಯಲ್ಲಿದ್ದ ಸಂದರ್ಭ ಇಂಡಿಕಾ ಕಾರಿನಲ್ಲಿ ಬಂದ ಇಬ್ಬರು ಸ್ವಾಮೀಜಿ ವೇಷಧಾರಿಗಳು ಸುಬ್ರಹ್ಮಣ್ಯ ಕಡೆಗೆ ದಾರಿ ಯಾವುದೆಂದು ಕೇಳಿದ್ದರು. ತಕ್ಷಣವೇ ಸ್ವಾಮೀಜಿಗಳೆಂಬ ಭಾವನೆಯಲ್ಲಿ ಸುಬ್ರಹ್ಮಣ್ಯ ಕಡೆಗೆ ದಾರಿ ತೋರಿಸಲು ಅವರ ಬಳಿ ದಿನೇಶ್ ತೆರಳಿದ್ದು, ಈ ವೇಳೆ ಸ್ವಾಮೀಜಿ ವೇಷಧಾರಿಗಳು ದಿನೇಶರ ತಲೆಗೆ ಕೈಯಿಟ್ಟು ಕೈಯಲ್ಲಿ ರುದ್ರಾಕ್ಷಿ ಮಣಿಕೊಟ್ಟು ಅದರ ಸುವಾಸನೆ ಪಡೆಯಲು ತಿಳಿಸಿದರು, ಅವರು ಹೇಳಿದಂತೆ ಮಾಡಿದ ದಿನೇಶ್ ಬಳಿಕ ಮಂಪರಿಗೆ ಒಳಗಾಗಿ ತನ್ನಲ್ಲಿದ್ದ ರೂ. 5 ಸಾವಿರವನ್ನೂ ಆ ಅಸಾಮಿ ಸ್ವಾಮೀಜಿಗಳಿಗೆ ನೀಡಿರುತ್ತಾರೆ. ಒಂದೈದು ನಿಮಿಷದ ಬಳಿಕ ವಾಸ್ತವ ವಿಚಾರ ದಿನೇಶ್ ಅವರ ಅರಿವಿಗೆ ಬಂದಾಗ ಕಳ್ಳ ಸ್ವಾಮೀಜಿಗಳು ಅಲ್ಲಿಂದ ಕಾರು ಸಹಿತ ಪರಾರಿಯಾಗಿರುತ್ತಾರೆ. ಇಬ್ಬರು ಸ್ವಾಮೀಜಿ ವೇಷಧಾರಿಗಳೊಂದಿಗೆ ಓರ್ವ ಕಾರು ಚಾಲಕ ಇದ್ದ ಎಂದು ಹೇಳಲಾಗಿದೆ.

ಹಿರ್ಗಾನದಲ್ಲಿ ಬೈಕ್ ಕಾರು ಡಿಕ್ಕಿ – ಕರ್ತವ್ಯಕ್ಕೆ ತೆರಳುತ್ತಿದ್ದ ಪೊಲೀಸ್‌ಗೆ ಗಾಯ : 

ಕಾರ್ಕಳ ಪಟ್ಟಣ ಸಮೀಪದ ಹಿರ್ಗಾನದಲ್ಲಿ ಬೈಕ್‌ ಹಾಗೂ ಕಾರು ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಪರಿಣಾಮ ಸವಾರ ಹೆಬ್ರಿ ಠಾಣೆಯ ಪೊಲೀಸ್ ಮನೋಜ್ ಗಾಯಗೊಂಡಿರುತ್ತಾರೆ. ಹೊಸ್ಕಾರಿನ ಕಾರ್ಯಕ್ರಮದ ಬಂದೋಬಸ್ತಿಗಾಗಿ ಪೊಲೀಸರು ಹೆಬ್ರಿಯಿಂದ ಬೈಕ್ ನಲ್ಲಿ ಬರುತ್ತಿದ್ದಂತೆ ಹೀರ್ಗಾನ ಎಂಬಲ್ಲಿ ಕಾರಿಗೆ ಡಿಕ್ಕಿಯಾಗಿದೆ. ಗಾಯಾಳು ಮನೋಜ್ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮರಕ್ಕೆ ಗುದ್ದಿದ ಸ್ಕೂಟಿ – ಸವಾರ ಸ್ಥಳದಲ್ಲೇ ಸಾವು

ಸ್ಕೂಟಿಯೊಂದು ಮರಕ್ಕೆ ಗುದ್ದಿದ ಪರಿಣಾಮ ಸವಾರ ಸ್ಥಳದಲ್ಲೇ ಸಾವಿಗೀಡಾದ ಘಟನೆ ವರಂಗ ಪೇಟೆಯಲ್ಲಿ ಭಾನುವಾರ ಸಂಭವಿಸಿದೆ. ಸೂರಿಮಣ್ಣು ಪ್ರಭಾಚಂದ್ರ ಆಚಾರ್ಯ (50) ಎಂಬವರೇ ದಾರುಣವಾಗಿ ಮೃತಪಟ್ಟ ವ್ಯಕ್ತಿ. ಪ್ರಭಾಚಂದ್ರ ಅವರು ಮುನಿಯಾಲಿನಿಂದ ಸೂರಿಮಣ್ಣು ಕಡೆಗೆ ಸಾಗುತ್ತಿದ್ದ ವೇಳೆ ದುರ್ಘಟನೆ ನಡೆದಿದೆ. ಅವಿವಾಹಿತರಾಗಿರುವ ಮೃತರು ಓರ್ವ ಸಹೋದರ ಹಾಗೂ ಮೂವರು ಸಹೋದರಿಯರನ್ನು ಅಗಲಿದ್ದಾರೆ.

17 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ!

ಹಳೆಯ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಆರೋಪಿಯೋರ್ವನನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಪುದು ಗ್ರಾಮದ ಕುಮ್ಮೆಲು ನಿವಾಸಿ ಕೃಷ್ಣ(೪೧) ಬಂಧಿತ ಆರೋಪಿ. ಕಳ್ಳತನ ಪ್ರಕರಣದಲ್ಲಿ ಜೈಲುವಾಸ ಅನುಭವಿಸಿ ಜಾಮೀನು ಮೇಲೆ ಬಿಡುಗಡೆಗೊಂಡಿದ್ದ ಈತ ಅ ಬಳಿಕ ಸುಮಾರು 17 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಈತನನ್ನು ಪೊಲೀಸ್ ನಿರೀಕ್ಷಕ ಎಚ್. ನಾಗರಾಜ್ ಅವರ ಮಾರ್ಗದರ್ಶನದಲ್ಲಿ ಗ್ರಾಮಾಂತರ ಠಾಣಾಧಿಕಾರಿ ಹರೀಶ್ ಹಾಗೂ ಸಿಬ್ಬಂದಿಗಳಾದ ಗಣೇಶ್ ಪ್ರಸಾದ್, ರಾಧಾಕೃಷ್ಣನ್, ಯೋಗೇಶ್ ಡಿ.ಎಲ್, ಹಾಗೂ ವಿಜಯ್ ರವರು ಮಾಹಿತಿ ಸಂಗ್ರಹಿಸಿ ಬಡಗ ಮಿಜಾರು ಎಂಬಲ್ಲಿ ಪತ್ತೆ ಹಚ್ಚಿ ವಶಕ್ಕೆ ಪಡೆದುಕೊಂಡಿದ್ದರು.

ಕರಾವಳಿಯಲ್ಲಿ ಮತ್ತೊಮ್ಮೆ ಎನ್‌ಐಎ ದಾಳಿ

ರಾಷ್ಟ್ರೀಯ ತನಿಖಾ ಸಂಸ್ಥೆ ಭಾನುವಾರ ಮತ್ತೊಮ್ಮೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾಕ್ಕೆ ಸಂಬಂಧಿಸಿದ ವ್ಯಕ್ತಿಗಳ ಮನೆ ಹಾಗೂ ಇನ್ನಿತರ ಸಂಸ್ಥಾಪನೆಗಳ ಮೇಲೆ ದಾಳಿ ನಡೆಸಿ ಕೆಲವು ವಸ್ತುಗಳನ್ನು ವಶಪಡಿಸಿಕೊಂಡಿದೆ. ಐದು ರಜ್ಯಗಳಲ್ಲಿ ನಡೆದ ಎನ್‌ಐಎ ಕಾರ್ಯಾಚರಣೆ ಅಂಗವಾಗಿ ದಕ್ಷಿಣ ಕನ್ನಡದಲ್ಲೂ ದಾಳಿ ನಡೆಸಲಾಗಿತ್ತು. ಬಂಟ್ವಾಳದ ನಂದಾವರ ಸಮೀಪ ಬೋಗೋಡಿಯಲ್ಲಿ ಉಬ್ರಾಹಿಂ ಮತ್ತು ಕುಂಪನಮಜಲು ಎಂಬಲ್ಲಿ ಮುಷ್ಕಾಕ್ ಎಂಬವರ ಮನೆ ಮೇಲೆ ದಾಳಿ ನಡೆಸಲಾಗಿದೆ. ಇದಲ್ಲದೆ ಉಲ್ಲಾಳ ಸೇರಿ ಇನ್ನೂ ಮೂರು ಕಡೆ
ಶೋಧ ಕಾರ್ಯಾಚರಣೆ ಕೈಗೊಂಡಿದೆ. ಜನರಲ್ಲಿ ಕೋಮು ಭಾವನೆಗಳನ್ನು ಹುಟ್ಟುಹಾಕುವ ಮೂಲಕ ಶಾಂತಿ ಕದಡುವ ಮತ್ತು ದೇಶವನ್ನು ಅಸ್ಥಿರಗೊಳಿಸುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಪಿತೂರಿಯನ್ನು ವಿಫಲಗೊಳಿಸುವ ಸಲುವಾಗಿ ಎನ್‌ಐಎ ಐದು ರಾಜ್ಯಗಳಲ್ಲಿ ದಾಳಿ ನಡೆಸಿದೆ. ಕರ್ನಾಟಕ, ಕೇರಳ, ಮಹಾರಾಷ್ಟ್ರ ಪಶ್ಚಿಮ ಬಂಗಾಳ ಮತ್ತು ಬಿಹಾರದ 14 ಸ್ಥಳಗಳಲ್ಲಿ ಶೋಧ ನಡೆಸಲಾಗಿದ್ದು, ಹಲವಾರು ಡಿಜಿಟಲ್ ಸಾಧನಗಳು ಮತ್ತು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಕೇರಳದ ಕಣ್ಣೂರು ಮತ್ತು ಮಲಪ್ಪುರಂ ಜಿಲ್ಲೆಗಳಲ್ಲಿ ದಾಳಿ ನಡೆದಿದೆ.

ಹೃದಯಾಘಾತವಾಗಿ ವಿದ್ಯಾರ್ಥಿನಿ ನಿಧನ

ಅನಾರೋಗ್ಯದಿಂದ ಬಳಲಿ ಚಿಕಿತ್ಸೆ ಪಡೆದು ಮನೆಯಲ್ಲಿದ್ದ ಯುವತಿ ಲೋ ಬಿಪಿ ಆಗಿ ಹೃದಯಾಘಾತವಾಗಿ ಕಾರ್ಯಕ್ರಮ ಕಳೆದ ದಿನ(ಆ.13) ನಡೆದಿದೆ. ಬೆಳ್ತಂಗಡಿ ತಾಲೂಕಿನ ನರಿಯ ಗ್ರಾಮದ ಗಂಡಿಬಾಗಿಲು ಜಾತಿಮಾರು ಸರೋಜ ದಂಪತಿಗಳ ಮಗಳು ಸುಮಾ(19) ಮೃತ ಯುವತಿ ನಿವಾಸಿ ರಾಜು ದೇವಾಡಿಗ ಮತ್ತು ಸರೋಜ ದಂಪತಿಗಳ ಮಗಳು ಸುಮಾ(19) ಮೃತ ಯುವತಿ ಈಕೆ ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ಮೊದಲ ವರ್ಷದ ನರ್ಸಿಂಗ್‌ ವಿದ್ಯಾಭ್ಯಾಸ ಮಾಡುತ್ತಿದ್ದು, ಆ.9ರಂದು ಅನಾರೋಗ್ಯದ ಕಾರಣದಿಂದ ಸ್ಥಳೀಯ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾಳೆ. ಬಳಿಕ ಆ.13 ರಂದು ಅನಾರೋಗ್ಯ ಹೆಚ್ಚಾದ ಸಂಜೆ ಮತ್ತೆ ಅಸ್ವಸ್ಥಗೊಂಡಿದ್ದು ಮಂಗಳೂರು ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ಬಿಪಿಯಿಂದ ಹೃದಯಾಘಾತವಾಗಿ ಸಾವನ್ನಪ್ಪಿದ್ದಾಳೆ.

ನಲ್ಲೂರಿನಲ್ಲಿ ದೇವಿಯ ವಿಗ್ರಹ ಪತ್ತೆ!

ಕಾರ್ಕಳದ ನಲ್ಲೂರು ಕ್ರಾಸ್‌ನ ರಸ್ತೆ ಬದಿಯಲ್ಲಿ ದೇವಿಯ ವಿಗ್ರಹವೊಂದು ಆ. 14 ರಂದು ಬೆಳಿಗ್ಗೆ ಪತ್ತೆಯಾಗಿದೆ. ಶಿವ ಘಾಮಿಣಿ ದೇವಿಯ ವಿಗ್ರಹ ಎನ್ನಲಾಗುತಿದ್ದು, ಈ ಕಲ್ಲಿನ ಮೂರ್ತಿ ಸುಮಾರು 2.5 ಇಂಚು ಉದ್ದವಿದೆ. ಸ್ಥಳೀಯ ಶಿಲ್ಪಿಗಳ ಪ್ರಕಾರ ಈ ವಿಗ್ರಹವು ತಮಿಳುನಾಡಿನ ಶಿಲ್ಪ ಶೈಲಿಯಲ್ಲಿದೆ. ಸುಮಾರು 60-70 ವರ್ಷಗಳ ಹಿಂದೆ ಕೆತ್ತಲ್ಪಟ್ಟಿರಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ವಿಗ್ರಹ ಯಾವುದೇ ರೀತಿಯಲ್ಲಿ ಭಿನ್ನವಾಗಿಲ್ಲ, ಗಂಧದ ಲೇಪನವಿದ್ದು, ನಿತ್ಯ ಪೂಜಿಸಲ್ಪಡುತ್ತಿದ್ದ ವಿಗ್ರಹ ಎನ್ನಲಾಗುತ್ತಿದೆ.

ಇದನ್ನೂ ಓದಿ : ತೀರ್ಥಹಳ್ಳಿ ರೆಸಾರ್ಟ್ ಅಲ್ಲಿ ಸಿಕ್ತು ವಿದೇಶಿ ಮದ್ಯ, ಪ್ರಾಣಿಗಳ ಕೊಂಬು!

[embedyt] https://www.youtube.com/watch?v=rTGqP21dgrM%5B/embedyt%5D

HOW TO APPLY : NEET-UG COUNSELLING 2023

Categories
ತೀರ್ಥಹಳ್ಳಿ ಮಲ್ನಾಡ್

ಪ್ರವಾಸಿ ತಾಣಗಳಲ್ಲಿ ಈಗ ಪ್ರವಾಸಿಗರ ಸಂಭ್ರಮ!

ಪ್ರವಾಸಿ ತಾಣಗಳಲ್ಲಿ ಈಗ ಪ್ರವಾಸಿಗರ ಸಂಭ್ರಮ!
– ಮಳೆ ಬಿಟ್ಟ ಕಾರಣ ಮಲೆನಾಡಿಗೆ ಪ್ರವಾಸಿಗರ ಲಗ್ಗೆ
– ಹೊಸನಗರದ ಕೊಡಚಾದ್ರಿ ಗಿರಿ ಪ್ರವೇಶ ತೆರವು
– ಒಂದೇ ದಿನ ಅತೀ ಹೆಚ್ಚು ವಾಹನಗಳ ಓಡಾಟ!

NAMMUR EXPRESS NEWS
ತೀರ್ಥಹಳ್ಳಿ/ಹೊಸನಗರ: ಸತತವಾಗಿ ರಜೆ ಇರುವ ಕಾರಣ ಪ್ರವಾಸಿಗರು ಇದೀಗ ಮಲೆನಾಡ ಕಡೆ ಪ್ರಯಾಣ ಬೆಳೆಸಿದ್ದು ಶನಿವಾರ, ಭಾನುವಾರ ಪ್ರವಾಸಿಗರಿಂದ ತುಂಬಿ ಹೋಗಿತ್ತು. ಪ್ರವಾಸಿ ತಾಣಗಳು, ಹೋಟೆಲ್, ಹೋಂ ಸ್ಟೇಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿರುವುದು ಕಂಡು ಬಂದಿತು. ಬೆಂಗಳೂರು, ಮೈಸೂರು ಸೇರಿದಂತೆ ಹೊರ ಭಾಗದ ಪ್ರವಾಸಿಗರು ಹೆಚ್ಚಿದ್ದರು.

ವಾಹನಗಳ ಸಂಖ್ಯೆ ಹೆಚ್ಚಳ

ತೀರ್ಥಹಳ್ಳಿ, ಶೃಂಗೇರಿ, ಹೊಸನಗರ ಸಾಗರ ಭಾಗದಲ್ಲಿ ರಸ್ತೆಗಳಲ್ಲಿ ವಾಹನ ಸಂಖ್ಯೆ ಹೆಚ್ಚಾಗಿದ್ದು ಕಂಡು ಬಂದಿತು.
ಬೈಕ್ ರೈಡರ್ಗಳು ರಸ್ತೆ ಮೇಲೆ ಪ್ರವಾಸದ ಸಂತಸದಲ್ಲಿದ್ದರು. ಹೋಟೆಲ್, ಹೋಂ ಸ್ಟೇ ಫುಲ್ ಫುಲ್ ಆಗಿದ್ದವು.

ಕೊಡಚಾದ್ರಿ ಗಿರಿ ಪ್ರವಾಸಿಗರಿಗೆ ಮುಕ್ತ!

ಪ್ರವಾಸಿಗರ ಸುರಕ್ಷತೆ ಹಿತದೃಷ್ಟಿಯಿಂದ ಹೊಸನಗರ ತಾಲೂಕಿನ ಕೊಡಚಾದ್ರಿ ಗಿರಿ ಪ್ರವೇಶ ನಿರ್ಬಂಧಿಸಿ ಆದೇಶ ಹೊರಡಿಸಿದ್ದ ವನ್ಯಜೀವಿ ಅರಣ್ಯ ವಿಭಾಗ ಪ್ರವೇಶ ನಿರ್ಬಂಧವನ್ನು ತಾತ್ಕಾಲಿಕವಾಗಿ ತೆರವುಗೊಳಿಸಿದೆ. ಕೊಡಚಾದ್ರಿ ಗಿರಿಯತ್ತ ಜೀಪ್‌ಗಳ ಓಡಾಟ ಮತ್ತೆ ಶುರು ಆಗಿದೆ. ಪ್ರವಾಸಿಗರ ಒತ್ತಡಕ್ಕೆ ಮಣಿದ ವನ್ಯ ಜೀವಿ ಇಲಾಖೆ ಮೌಕಿಕವಾಗಿ ಕೊಡಚಾದ್ರಿ ನಿರ್ಬಂಧ ತೆರವು ಆದೇಶ ನೀಡಿದ್ದು, ಭಾನುವಾರದಿಂದಲೇ ಕೊಡಚಾದ್ರಿಗೆ ಜೀಪ್ ಮೂಲಕ ತೆರಳಲು ಅವಕಾಶ ನೀಡಿದೆ. ಕೇವಲ ವಾಹನದಲ್ಲಿ ಮಾತ್ರ ತೆರಳಲು ಅವಕಾಶ ನೀಡಲಾಗಿದೆ. ಗಿರಿ ಚಾರಣಕ್ಕೆ ಅವಕಾಶ ನಿರಾಕರಿಸಿದ್ದು, ಜೀಪ್ ಮಾಲೀಕರಿಗೆ ಹಾಗೂ ಪ್ರವಾಸಿಗರಿಗೆ ಕೆಲವು ಷರತ್ತು ವಿಧಿಸಿದೆ.

‘ಕೊಡಚಾದ್ರಿ ರಸ್ತೆ ಸಂಚಾರಕ್ಕೆ ಯೋಗ್ಯವಾಗಿಲ್ಲದ ಕಾರಣ ನೀಡಿ ಕೊಡಚಾದ್ರಿ ತೆರಳುವ ಸಂಧರ್ಭದಲ್ಲಿ ಯಾರಿಗಾದರೂ ಪ್ರಾಣ ಹಾನಿಯಾದರೆ ಅಥವಾ ಯಾವುದೇ ತೆರನಾದ ಅಪಾಯ ಉಂಟಾದರೆ ಅದಕ್ಕೆ ನಾವೇ ಜವಾಬ್ದಾರರು’ ಎಂದು ಮುಚ್ಚಳಿಕೆ ಬರೆದು ಕಟ್ಟಿನಹೊಳೆಯ ತನಿಖಾ ಠಾಣೆಯಲ್ಲಿ ವನ್ಯ ಜೀವಿ ಇಲಾಖೆಯ ಅನುಮತಿ ಪಡೆದು ಕೊಡಚಾದ್ರಿಗೆ ಹೋಗಬಹುದಾಗಿದೆ.

ಇದನ್ನೂ ಓದಿ : ಭೂತಾನ್ ಅಡಿಕೆ ಬಂದ್ರೂ ತೊಂದರೆ ಇಲ್ಲ- ಆರಗ ಜ್ಞಾನೇಂದ್ರ

[embedyt] https://www.youtube.com/watch?v=rTGqP21dgrM%5B/embedyt%5D

HOW TO APPLY : NEET-UG COUNSELLING 2023

Categories
ತೀರ್ಥಹಳ್ಳಿ

ಮಳೆ ಬಿಸಿಲು: ಮಲೆನಾಡಿನಲ್ಲಿ ಹೆಚ್ಚಿದ ಅನಾರೋಗ್ಯ

ಮಳೆ ಬಿಸಿಲು: ಮಲೆನಾಡಿನಲ್ಲಿ ಹೆಚ್ಚಿದ ಅನಾರೋಗ್ಯ
– ಆಸ್ಪತ್ರೆಗಳ ಮುಂದೆ ಜನವೋ ಜನ
– ಶೀತ ಜ್ವರ ಮೈ ಕೈ ನೋವುಗಳಿಂದ ಬಳಲುತ್ತಿರುವ ಜನ
– ಮಕ್ಕಳ ಬಗ್ಗೆಯೂ ಎಚ್ಚರ – ಎಚ್ಚರ!

NAMMUR EXPRESS NEWS
ತೀರ್ಥಹಳ್ಳಿ/ಕೊಪ್ಪ: ಮಲೆನಾಡಿನಲ್ಲಿ ಕಳೆದೊಂದು ವಾರದಿಂದ ಮಳೆ ಕಡಿಮೆಯಾಗಿದೆ. ಮಳೆ ಬಿಸಿಲು ಶುರುವಾಗಿದೆ, ಕೊಂಚ ಮಳೆ ಕೊಂಚ ಬಿಸಿಲು ಇರುವುದರಿಂದ ವಾತಾವರಣ ಸಂಪೂರ್ಣ ಹದಗೆಟ್ಟಿದೆ, ಇದರಿಂದಾಗಿ ಆರೋಗ್ಯ ಸ್ಥಿತಿಯಲ್ಲಿ ಏರುಪೇರು ಕಂಡು ಬರುತ್ತಿದೆ. ಜನರಲ್ಲಿ ಶೀತ, ಜ್ವರ, ಕೆಮ್ಮು, ಮೈಕೈ ನೋವು ಸೇರಿದಂತೆ ಅನೇಕ ರೋಗಗಳು ಹೆಚ್ಚಾಗಿದ್ದು ಸಾಂಕ್ರಾಮಿಕ ರೋಗಗಳು ಹರಡುತ್ತಿವೆ. ಇನ್ನು ಕಣ್ಣು ಕೆಂಪು ಮದ್ರಾಸ್ ಐ ಕೂಡ ಹೆಚ್ಚಿದ್ದು ಕಣ್ಣು ಬೇನೆಯಿಂದ ಜನ ಕಂಗಾಲಾಗಿದ್ದಾರೆ. ಇದು ಕೂಡ ವ್ಯಾಪಕವಾಗಿ ಹರಡುತ್ತಿದೆ. ಇನ್ನೂ ಆಸ್ಪತ್ರೆಗಳಲ್ಲಿ ಜನರ ಸಂಖ್ಯೆ ಹೆಚ್ಚಾಗಿದ್ದು ಅನಾರೋಗ್ಯದ ಪ್ರಮಾಣ ಹೆಚ್ಚಳವಾಗಿದೆ. ಒಂದು ಕಡೆ ಕುಡಿಯುವ ನೀರಿನಲ್ಲಿ ಕೂಡ ಕೆಲವೆಡೆ ಅನಾರೋಗ್ಯ ವಾತಾವರಣದ ಏರುಪೇರಿನಿಂದಾಗಿ ಅನಾರೋಗ್ಯ ಹೆಚ್ಚಿದ್ದು ಈ ಬಗ್ಗೆ ಜಾಗೃತಿ ವಹಿಸಬೇಕಿದೆ. ಮಕ್ಕಳಲ್ಲಿ ಕೂಡ ಅನಾರೋಗ್ಯ ಹೆಚ್ಚಳವಾಗುತ್ತಿದ್ದು ಪೋಷಕರು ಜಾಗೃತಿ ವಹಿಸಬೇಕು.

ತೀರ್ಥಹಳ್ಳಿ ತಾಲೂಕು ಸೇರಿದಂತೆ ಕೊಪ್ಪ, ಶೃಂಗೇರಿ, ಎನ್ ಆರ್ ಪುರ, ಹೊಸನಗರ, ಸಾಗರ, ಶಿವಮೊಗ್ಗ, ಚಿಕ್ಕಮಗಳೂರು ಭಾಗದಲ್ಲಿ ಅನಾರೋಗ್ಯ ಹೆಚ್ಚಳವಾಗಿದ್ದು ಮಲೆನಾಡಿನಲ್ಲಿ ಆತಂಕ ಎದುರಾಗಿದೆ.

ಆಸ್ಪತ್ರೆಗಳಲ್ಲಿ ಜನವೋ ಜನ: ಸಿಬ್ಬಂದಿ ಪರದಾಟ

ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಸಿಬ್ಬಂದಿಗಳು ಸಮರ್ಪಕವಾಗಿ ಚಿಕಿತ್ಸೆ ನೀಡುವ ಮೂಲಕ ಜನರ ಆರೋಗ್ಯ ಕಾಪಾಡುವಲ್ಲಿ ತಮ್ಮ ಜವಾಬ್ದಾರಿಯನ್ನು ಮೆರೆಯಬೇಕೆಂಬ ಅಗ್ರಹ ವ್ಯಕ್ತವಾಗಿದೆ. ಕೆಲವು ಅವ್ಯವಸ್ಥೆ ಕಂಡು ಬರುತ್ತಿದ್ದು ತಕ್ಷಣ ಆಯಾ ಶಾಸಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಗಮನವಹಿಸಬೇಕಿದೆ. ಇನ್ನು ಆಸ್ಪತ್ರೆಗಳಲ್ಲಿ ಸಿಬ್ಬಂದಿ ಕೊರತೆ ಕಂಡು ಬರುತ್ತಿದ್ದು, ಸರ್ಕಾರ ಗಮನ ವಹಿಸಬೇಕಿದೆ.

ಇದನ್ನೂ ಓದಿ : ಭೂತಾನ್ ಅಡಿಕೆ ಬಂದ್ರೂ ತೊಂದರೆ ಇಲ್ಲ- ಆರಗ ಜ್ಞಾನೇಂದ್ರ

[embedyt] https://www.youtube.com/watch?v=rTGqP21dgrM%5B/embedyt%5D

HOW TO APPLY : NEET-UG COUNSELLING 2023

Categories
ತೀರ್ಥಹಳ್ಳಿ

ವಿದ್ಯುತ್ ಕಡಿತ: ತೀರ್ಥಹಳ್ಳಿ ಬಿಜೆಪಿಯಿಂದ ಪ್ರತಿಭಟನೆ

ವಿದ್ಯುತ್ ಕಡಿತ: ತೀರ್ಥಹಳ್ಳಿ ಬಿಜೆಪಿಯಿಂದ ಪ್ರತಿಭಟನೆ
– ಆ.14ರಂದು ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ಹೋರಾಟ
– ತೀರ್ಥಹಳ್ಳಿ ತಾಲೂಕು ಕಛೇರಿ ಮುಂದೆ ಪ್ರತಿಭಟನೆ

NAMMUR EXPRESS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನಲ್ಲಿ ವಿದ್ಯುತ್ ಸರಬರಾಜು ವೈಫಲ್ಯ ಖಂಡಿಸಿ ಆ.14ರಂದು ತೀರ್ಥಹಳ್ಳಿಯಲ್ಲಿ ಶಾಸಕ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ಬಿಜೆಪಿ ಪ್ರತಿಭಟನೆ ನಡೆಸಲಿದೆ.  14-08-2023 ರ ಸೋಮವಾರ ಬೆಳಿಗ್ಗೆ 10.30 ಗಂಟೆಗೆ ಜ್ಞಾನೇಂದ್ರರವರ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರದ ವಿದ್ಯುತ್ ಸರಬರಾಜು ವ್ಯತ್ಯಯ ಮತ್ತು ಹಲವು ವಿಚಾರದಲ್ಲಿ ಸರ್ಕಾರದ ವೈಫಲ್ಯ ಖಂಡಿಸಿ ತೀರ್ಥಹಳ್ಳಿ ತಾಲೂಕು ಕಛೇರಿ ಮುಂದೆ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ತೀರ್ಥಹಳ್ಳಿ ತಿಳಿಸಿದೆ  ಬಿಜೆಪಿ ಪಕ್ಷದ ಕಚೇರಿ, ಕೊಪ್ಪ ಸರ್ಕಲ್, ತೀರ್ಥಹಳ್ಳಿ ಇಲ್ಲಿಂದ ಪ್ರತಿಭಟನೆ ಹೊರಡಲಿದ್ದು ಎಲ್ಲಾ ಬಿಜೆಪಿ ಮುಖಂಡರು, ಕಾರ್ಯಕರ್ತರು ಆಗಮಿಸಲು ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು ಬಿಜೆಪಿ ತೀರ್ಥಹಳ್ಳಿ ಮಂಡಲ ಮನವಿ ಮಾಡಿದ್ದಾರೆ.

ಇದನ್ನೂ ಓದಿ : ಭೂತಾನ್ ಅಡಿಕೆ ಬಂದ್ರೂ ತೊಂದರೆ ಇಲ್ಲ- ಆರಗ ಜ್ಞಾನೇಂದ್ರ

[embedyt] https://www.youtube.com/watch?v=rTGqP21dgrM%5B/embedyt%5D

HOW TO APPLY : NEET-UG COUNSELLING 2023

Categories
ಅಡಿಕೆ-ದರ

ಅಡಿಕೆ ದರ ಎಷ್ಟಿದೆ? 13-08-2023

ಅಡಿಕೆ ದರ ಎಷ್ಟಿದೆ?
– ಸರಕು ದರ ಕೊಂಚ ಏರಿಕೆ
– ಯಾವುದಕ್ಕೆ ಎಷ್ಟು ದರ ಇದೆ?

NAMMUR EXPRESS NEWS
ಸರಕು – 58009 – 81150
ಬೆಟ್ಟೆ –   49009 – 52009
ರಾಶಿ –   47099 – 51009
ಗೊರಬಲು – 37009 – 40009

ಇದನ್ನೂ ಓದಿ : ಭೂತಾನ್ ಅಡಿಕೆ ಬಂದ್ರೂ ತೊಂದರೆ ಇಲ್ಲ- ಆರಗ ಜ್ಞಾನೇಂದ್ರ

[embedyt] https://www.youtube.com/watch?v=rTGqP21dgrM%5B/embedyt%5D

HOW TO APPLY : NEET-UG COUNSELLING 2023

Categories
ಬೆಂಗಳೂರು ಸಿನಿಮಾ

ನಟ ಉಪೇಂದ್ರ ವಿರುದ್ಧ ಜಾತಿ ನಿಂದನೆ ಕೇಸ್!

ನಟ ಉಪೇಂದ್ರ ವಿರುದ್ಧ ಜಾತಿ ನಿಂದನೆ ಕೇಸ್!
– ಬೆಂಗಳೂರಿನಲ್ಲಿ ದೂರು ದಾಖಲು: ಏನಿದು ಕೇಸ್
– ಘಟನೆ ಬಳಿಕ ಸಾಮಾಜಿಕ ಜಾಲತಾಣದಿಂದ ಡಿಲೀಟ್

NAMMUR EXPRESS NEWS
ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ವಿರುದ್ಧ ಬೆಂಗಳೂರು ಪೊಲೀಸರು ಜಾತಿ ನಿಂದನೆ ಆರೋಪದಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ನಟ ಉಪೇಂದ್ರ ಅವರು ನೀಡಿದ್ದ ಹೇಳಿಕೆಯೊಂದು ಸಾಮಾಜಿಕ ಜಾಲಾತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗಿತ್ತು. ನಿರ್ದಿಷ್ಟ ಸಮಾಜದ ಬಗ್ಗೆ ಅವಹೇಳನಕಾರಿ ಮಾತನಾಡಿದ್ದರು ಎಂದು ಉಲ್ಲೇಖಿಸಿ ದೂರು ನೀಡಲಾಗಿತ್ತು. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಿಂದ ದೂರು ಸ್ವೀಕರಿಸಿದ ಪೊಲೀಸರು, ಉಪೇಂದ್ರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.

ಇತ್ತೀಚಿಗೆ ನಡೆದ ಕಾರ್ಯಕ್ರಮವೊಂದರಲ್ಲಿ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಲ್ಲದೇ, ಅವಹೇಳನ ಶಬ್ದ ಬಳಕೆ ಮಾಡಿದ್ದಾರೆ ಎಂದು ಉಪೇಂದ್ರ ವಿರುದ್ಧ ಮದೂಸೂಧನ್ ಕೆ.ಎಸ್ ಎಂಬುವವರು ದೂರು ಸಲ್ಲಿಸಿದ್ದಾರೆ. ನಟನಾ ಪೋಸ್ಟ್ ಮತ್ತು ಹೇಳಿಕೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನಲೆ ಸಿಕೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಅಟ್ರಾಸಿಟಿ ಕೇಸ್ ದಾಖಲಾಗಿದೆ. ತನ್ನ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದಂತೆ ಉಪೇಂದ್ರ ತಾವು ಹಾಕಿದ್ದ ವಿಡಿಯೋವನ್ನು ಫೇಸ್ ಬುಕ್ ಮತ್ತು ಸಾಮಾಜಿಕ ಜಾಲತಾಣದಿಂದ ಡಿಲೀಟ್ ಮಾಡಿದ್ದಾರೆ. ಬಳಿಕ ಕ್ಷಮೆ ಕೂಡ ಕೇಳಿದ್ದಾರೆ.

ಇದನ್ನೂ ಓದಿ : ಭೂತಾನ್ ಅಡಿಕೆ ಬಂದ್ರೂ ತೊಂದರೆ ಇಲ್ಲ- ಆರಗ ಜ್ಞಾನೇಂದ್ರ

[embedyt] https://www.youtube.com/watch?v=rTGqP21dgrM%5B/embedyt%5D

HOW TO APPLY : NEET-UG COUNSELLING 2023

Categories
ಮಂಗಳೂರು

ಬೆಕ್ಕುಗಳಿಗೂ ಬಂತಾ ರೋಗ.. ಸಾಯುತ್ತಿವೆ ಬೆಕ್ಕು!

ಬೆಕ್ಕುಗಳಿಗೂ ಬಂತಾ ರೋಗ.. ಸಾಯುತ್ತಿವೆ ಬೆಕ್ಕು!
– ಜ್ವರ, ರಕ್ತ ವಾಂತಿ, ರಕ್ತ ಬೇಧಿ ಕಾಯಲೆ
– ನಿಮ್ಮ ಮನೆ ಬೆಕ್ಕುಗಳ ಬಗ್ಗೆ ಇರಲಿ ಎಚ್ಚರ..!
– ಇದರಿಂದ ಮನುಷ್ಯರಿಗೆ ತೊಂದರೆ ಇಲ್ಲ

NAMMUR EXPRES NEWS
ಮಂಗಳೂರು: ಇದೀಗ ಬೆಕ್ಕುಗಳಿಗೆ ರೋಗ ಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಲ್ಲಿ ನೂರಾರು ಬೆಕ್ಕುಗಳು ಸಾವನ್ನಪ್ಪುತ್ತಿವೆ. ಜ್ವರ, ರಕ್ತ ವಾಂತಿ, ರಕ್ತ ಬೇಧಿಯಿಂದ ಆರಂಭವಾಗುವ ತೊಂದರೆಗಳು ಸಾವಿನೊಂದಿಗೆ ಅಂತ್ಯವಾಗುತ್ತಿದೆ. ರಾಜ್ಯದ ಇನ್ನೂ ಕೆಲವು ಭಾಗಗಳಲ್ಲಿ ಕಂಡುಬಂದಿರುವ ಈ ಸಮಸ್ಯೆ ಬಗ್ಗೆ ಜನರು ಆತಂಕಗೊಂಡಿದ್ದಾರೆ. ಕೆಲವರು ಬೆಕ್ಕುಗಳ ಸಂಪರ್ಕದಿಂದ ತಮಗೂ ತೊಂದರೆ ಆಗಬಹುದು ಎಂಬ ಆತಂಕದಿಂದ ಕ್ಯಾಬಿಸ್ ವೈರಸ್ ಇಂಜೆಕ್ಷನ್ ಚುಚ್ಚಿಸಿಕೊಳ್ಳುವುದು ಕೂಡಾ ಕಂಡುಬರುತ್ತಿದೆ. ಹಾಗಾಗಿ ಬೆಕ್ಕುಗಳ ಬಗ್ಗೆ ನಿಮಗೆ ಎಚ್ಚರ ಇರಬೇಕು.

ಏನಿದು ವೈರಸ್ ಕಾಯಿಲೆ, ಲಕ್ಷಣಗಳೇನು? ಚಿಕಿತ್ಸೆ ಹೇಗೆ?

1. ಬೆಕ್ಕುಗಳನ್ನು ಕಾಡುತ್ತಿರುವ ಈ ಕಾಯಿಲೆಗೆ ಮೂಲ ಕಾರಣ ಫೆಲೈನ್ ಪ್ಯಾನ್ಸು ಕೋಪೆನಿಯಾ ವೈರಸ್.
2. ಈ ವೈರಸ್ ದಾಳಿ ಮಾಡಿದಾಗ ಬೆಕ್ಕಿನ ದೇಹದಲ್ಲಿ ಬಿಳಿ ರಕ್ತ ಕಣಗಳ ಇಳಿಕೆಗೆ ಕಾರಣವಾಗುತ್ತದೆ.
3. ಫೆಲೈನ್ ಪ್ಯಾನ್ಸು ಕೋಪೆನಿಯಾ ವೈರಸ್ (ಎಫ್‌ಪಿಎಲ್‌ವಿ) ಎಂಬುದು ಪಾರ್ವೊವೈರಸ್ ಕುಟುಂಬದ ವೈರಸ್.
4. ವೈರಸ್ ಸೋಂಕಿಗೆ ಒಳಗಾದ ಬೆಕ್ಕಿನಲ್ಲಿ ಹೆಚ್ಚಿನ ಜ್ವರ, ವಾಂತಿ, ರಕ್ತಸಿಕ್ತವಾಗಿ ಅತಿಸಾರ, ಹಸಿವಿನ ಕೊರತೆ, ಅನೋರೆಕ್ಸಿಯಾ ಮತ್ತು ನಿರ್ಜಲೀಕರಣದ ಲಕ್ಷಣಗಳು ಕಾಣಿಸುತ್ತಿದ್ದು ಕೊನೆಗೆ ಬೆಕ್ಕುಗಳ ಮರಣವು ಸಂಭವಿಸುತ್ತದೆ.
5. ಬೆಕ್ಕುಗಳ ಪರಸ್ಪರ ಸಂಪರ್ಕದಿಂದ ಈ ಸೋಂಕು ಹರಡುತ್ತದೆ. ಆರಂಭದಲ್ಲಿ ಆದರೆ ಇದಕ್ಕೆ ವ್ಯಾಕ್ಸಿನೇಷನ್ ಪರಿಹಾರವಿದೆ.

ಮನುಷ್ಯರಿಗೆ ಹರಡುತ್ತದಾ?

ಬೆಕ್ಕು ಹೊರತುಪಡಿಸಿ ಇತರ ಪ್ರಾಣಿಗಳಿಗೆ ಅಥವಾ ಮನುಷ್ಯರಿಗೆ ಹರಡುವ ರೋಗವಲ್ಲ ಎನ್ನಲಾಗಿದೆ. ಆದರೂ ಮುನ್ನೆಚ್ಚರಿಕೆ ವಹಿಸಬೇಕು. ಹಲವು ಕಡೆಗಳಲ್ಲಿ ಬೆಕ್ಕು ಕಚ್ಚಿದೆ ಅಥವಾ ಪರಚಿದೆ ಎಂದು ಕ್ಯಾಬಿಸ್ ಇಂಜೆಕ್ಷನ್ ತೆಗೆದುಕೊಳ್ಳುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇದರಿಂದಾಗಿ ತೊಂದರೆ ಇಲ್ಲ, ಆದರೆ ಅದಕ್ಕಿಂತ ಮುಂಚೆ ಆಯಾ ಭಾಗಗಳಲ್ಲಿ ಇರುವ ನಮ್ಮ ಪಶುವೈದ್ಯಾಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಿ ಎನ್ನುವುದು ವೈದ್ಯರ ಸಲಹೆ.
ಅಲೆಮಾರಿ ಬೆಕ್ಕುಗಳು ಮತ್ತು ಸಾಕು ಬೆಕ್ಕುಗಳೂ ಎಫ್‌ಪಿಎಲ್ ಸೋಂಕಿಗೆ ಬಲಿಯಾಗುತ್ತಿವೆ. ಸೋಂಕಿತ ಬೆಕ್ಕುಗಳಲ್ಲಿ ತೀವ್ರವಾಗಿ ನಿರ್ಜಲೀಕರಣ ಕಾಣಿಸಿ ಬೆಕ್ಕುಗಳು ಕ್ಷೀಣಿಸುತ್ತದೆ. ಆದರೆ, ಲಸಿಕೆ ಹಾಕಿದ ಬೆಕ್ಕುಗಳು ಸುರಕ್ಷಿತವಾಗಿವೆ. ವಯಸ್ಕ ಬೆಕ್ಕುಗಳು ತಮ್ಮದೇಹದ ರೋಗ ನಿರೋಧಕ ಶಕ್ತಿಯನ್ನು ಅವಲಂಬಿಸಿ ಬದುಕಬಹುದು ಎನ್ನುತ್ತಾರೆ ಡಾ.ಅರುಣ್ ಕುಮಾರ್ ಶೆಟ್ಟಿ.

ಬೆಕ್ಕು ಸಾಕಿದವರು ಏನು ಮಾಡಬೇಕು?

1. ಸಾಕು ಪ್ರಾಣಿಗಳ ಮಾಲೀಕರು ತಮ್ಮ ಬೆಕ್ಕುಗಳಿಗೆ ಲಸಿಕೆ ಹಾಕಿಸಲು ಮುಂದೆ ಬರುತ್ತಿಲ್ಲ.

2. ಹೆಚ್ಚಿನವರು ಸಾಕು ಪ್ರಾಣಿಗಳು ಸಂಪೂರ್ಣವಾಗಿ ಅನಾರೋಗ್ಯಕ್ಕೆ ಒಳಗಾದ ನಂತರವೇ, ಅವರು ವೈದ್ಯಕೀಯ ಸಹಾಯವನ್ನು ಪಡೆಯಲು ಧಾವಿಸುತ್ತಾರೆ.

3. ಬೆಕ್ಕುಗಳಿಗೆ ಸೋಂಕು ತಗುಲಿದೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಲು ಬೆಕ್ಕುಗಳ ನಡವಳಿಕೆ ಮತ್ತು ಆಹಾರ ಪದ್ಧತಿಯಲ್ಲಿ ಯಾವುದೇ ಬದಲಾವಣೆಯನ್ನು ಗಮನಿಸಬೇಕಾಗುತ್ತದೆ.

4. ಬೆಕ್ಕುಗಳಿಗೆ ಟ್ರೈಕ್ಯಾಟ್, ಫೆಲಿಜೆನ್ ಅಥವಾ ಫೆಲೋಸೆಲ್ ಲಸಿಕೆಯನ್ನು ನೀಡಬೇಕು.

5. ಲಸಿಕೆಗಳನ್ನು ಸದ್ಯಕ್ಕೆ ಸರ್ಕಾರವು ಜಾನುವಾರುಗಳಿಗೆ ಮಾತ್ರ ಪೂರೈಸುತ್ತಿದೆ. ಆದರೆ ಖಾಸಗಿ ವೈದ್ಯಕೀಯ ಅಂಗಡಿಗಳಲ್ಲಿ ಲಸಿಕೆಗಳು ಲಭ್ಯವಿದೆ.

6. ಸಾಕುಪ್ರಾಣಿಗಳ ಮಾಲೀಕರು ಲಸಿಕೆಯನ್ನು ತಾವೇ ಪ್ರಯೋಗ ಮಾಡಬಾರದು. ಅವರು ಆಯಾ ಪ್ರದೇಶಗಳ ಅರ್ಹ ಪಶುವೈದ್ಯರ ಸಹಾಯವನ್ನು ಪಡೆಯಬೇಕು ಎಂದು ಡಾ.ಅರುಣ್ ಕುಮಾರ್ ಶೆಟ್ಟಿ ಅವರು ಹೇಳಿದ್ದಾರೆ.

ಇದನ್ನೂ ಓದಿ : ಭೂತಾನ್ ಅಡಿಕೆ ಬಂದ್ರೂ ತೊಂದರೆ ಇಲ್ಲ- ಆರಗ ಜ್ಞಾನೇಂದ್ರ

[embedyt] https://www.youtube.com/watch?v=rTGqP21dgrM%5B/embedyt%5D

HOW TO APPLY : NEET-UG COUNSELLING 2023

Categories
ತೀರ್ಥಹಳ್ಳಿ

ತೀರ್ಥಹಳ್ಳಿ ರೆಸಾರ್ಟ್ ಅಲ್ಲಿ ಸಿಕ್ತು ವಿದೇಶಿ ಮದ್ಯ, ಪ್ರಾಣಿಗಳ ಕೊಂಬು!

ತೀರ್ಥಹಳ್ಳಿ ರೆಸಾರ್ಟ್ ಅಲ್ಲಿ ಸಿಕ್ತು ವಿದೇಶಿ ಮದ್ಯ, ಪ್ರಾಣಿಗಳ ಕೊಂಬು!
– ತೀರ್ಥಹಳ್ಳಿ ಪೊಲೀಸರ ತಡ ರಾತ್ರಿ ಕಾರ್ಯಾಚರಣೆ
– 50 ಜನರ ತಂಡದಿಂದ ದಾಳಿ: ಅಕ್ರಮ ಮದ್ಯ ವಶ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಭಾರತಿಪುರದಲ್ಲಿರುವ ಖಾಸಗಿ ರೆಸಾರ್ಟ್ ಮೇಲೆ ತೀರ್ಥಹಳ್ಳಿ ಡಿವೈಎಸ್ಪಿ ಗಜಾನನ ವಾಮನ ಸುತಾರ ಅವರ ತಂಡದಿಂದ ದಾಳಿ ಮಾಡಿ ಅಪಾರ ಪ್ರಮಾಣದ ವಿದೇಶಿ ಮದ್ಯ, ಕಾಡುಕೋಣ ಮತ್ತು ಜಿಂಕೆ ಕೋಡು,ಚರ್ಮ ಬಂದೂಕು ಮತ್ತು ಮದ್ದು ಗುಂಡುಗಳ ವಶ ಪಡಿಸಿಕೊಳ್ಳಲಾಗಿದೆ. ತೀರ್ಥಹಳ್ಳಿ ಖಾಸಗಿ ರೆಸಾರ್ಟ್ ನಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ತೀರ್ಥಹಳ್ಳಿ ಡಿವೈಎಸ್ಪಿ ಗಜಾನನ ವಾಮನ ಸುತಾರ, ಎಸೈ ಅಶ್ವತ್ ಗೌಡ, ಪೊಲೀಸ್ ಉಪ ನಿರೀಕ್ಷಕರಾದ ಸಾಗರ್ ಅತ್ತರವಾಲ, ನವೀನ್ ಕುಮಾರ್ ಮಠಪತಿ, ರಂಗನಾಥ ಅಂತರಗಟ್ಟಿ, ತೀರ್ಥಹಳ್ಳಿ ಹಾಗೂ ಆಗುಂಬೆ ಪೊಲೀಸ್ ಠಾಣೆ ಹಾಗೂ 50 ಜನ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಹೋಗಿ ದಾಳಿ ನಡೆಸಿ ಅಕ್ರಮವಾಗಿ ಸಂಗ್ರಹಿಸಿದ್ದ ಮದ್ಯತುಂಬಿದ ಬಾಟಲಿಗಳು, ಕಾಡುಕೋಣದ ಕೊಂಬುಗಳು, ಜಿಂಕೆ ಕೊಂಬುಗಳು ಮತ್ತು ಜೀವಂತ ಮದ್ದು ಗುಂಡುಗಳನ್ನು ವಶಪಡಿಸಿಕೊಂಡು ಆರೋಪಿತರ ವಿರುದ್ಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಲಾಗಿದೆ.

ಇದನ್ನೂ ಓದಿ : ಭೂತಾನ್ ಅಡಿಕೆ ಬಂದ್ರೂ ತೊಂದರೆ ಇಲ್ಲ- ಆರಗ ಜ್ಞಾನೇಂದ್ರ

[embedyt] https://www.youtube.com/watch?v=rTGqP21dgrM%5B/embedyt%5D

HOW TO APPLY : NEET-UG COUNSELLING 2023