Categories
ಮೈಸೂರು

ಹೊಸ ವರ್ಷಕ್ಕೆ ನಿರುದ್ಯೋಗಿ ಡಿಪ್ಲೋಮಾ, ಪದವೀಧರರಿಗೆ ಹಣ?!

ಹೊಸ ವರ್ಷಕ್ಕೆ ನಿರುದ್ಯೋಗಿ ಡಿಪ್ಲೋಮಾ, ಪದವೀಧರರಿಗೆ ಹಣ?!
– ಡಿಸೆಂಬರ್ ಅಥವಾ ಜನವರಿಯಲ್ಲಿ ಯೋಜನೆ ಜಾರಿ
– ಯುವನಿಧಿ ಬಗ್ಗೆ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?

NAMMUR EXPRESS NEWS
ಮೈಸೂರು: ಹೊಸ ವರ್ಷಕ್ಕೆ ನಿರುದ್ಯೋಗಿ ಡಿಪ್ಲೋಮಾ, ಪದವೀಧರರಿಗೆ ಯುವ ನಿಧಿ ಹಣ ಜಮೆ ಆಗಲಿದೆಯಾ? ಹೌದು. ಎನ್ನುತ್ತಿವೆ ಸರ್ಕಾರದ ಮೂಲಗಳು. ಡಿಸೆಂಬರ್ ಅಥವಾ ಜನವರಿಯಲ್ಲಿ ಯೋಜನೆ ಜಾರಿಯಾಗಲಿದೆ. ಹಾಗಾದ್ರೆ ಯುವನಿಧಿ ಬಗ್ಗೆ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು. ಇಲ್ಲಿದೆ ಮಾಹಿತಿ. ರಾಜ್ಯ ಸರ್ಕಾರದ 5ನೇ ಗ್ಯಾರಂಟಿ ಯೋಜನೆಯಾದ ಯುವನಿಧಿ ಯೋಜನೆಯನ್ನು ಡಿಸೆಂಬರ್ ಅಥವಾ ಜನವರಿಯಲ್ಲಿ ಚಾಲನೆ ನೀಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿರುದ್ಯೋಗಿ ಡಿಪ್ಲೋಮಾ, ಪದವೀಧರರಿಗೆ 2 ವರ್ಷಗಳವರೆಗೆ ಅಂದರೆ 24 ತಿಂಗಳು ಡಿಪ್ಲೋಮಾ ಮಾಡಿದವರಿಗೆ 1,500 ರೂ. ಹಾಗೂ ಪದವೀಧರರಿಗೆ 3000 ರೂ. ನಿರುದ್ಯೋಗ ಭತ್ಯೆ ನೀಡುವ ಯುವನಿಧಿ ಯೋಜನೆಯನ್ನು ಡಿಸೆಂಬರ್ ಅಥವಾ ಜನರಿಯಲ್ಲಿ ಜಾರಿಗೆ ತರುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನು ಆಗಸ್ಟ್ 29 ಅಥವಾ 30 ಕ್ಕೆ ಮಹಿಳೆಯರಿಗೆ 2,000 ರೂ.ಸಹಾಯಧನ ನೀಡುವ ಗೃಹಲಕ್ಷ್ಮೀ ಯೋಜನೆಗೆ ಬೆಳಗಾವಿಯಲ್ಲಿ ಚಾಲನೆ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ಭೂತಾನ್ ಅಡಿಕೆ ಬಂದ್ರೂ ತೊಂದರೆ ಇಲ್ಲ- ಆರಗ ಜ್ಞಾನೇಂದ್ರ

[embedyt] https://www.youtube.com/watch?v=rTGqP21dgrM%5B/embedyt%5D

HOW TO APPLY : NEET-UG COUNSELLING 2023

Categories
ಚಿಕ್ಕಮಗಳೂರು

ಮೂಡಿಗೆರೆ ಅಪಘಾತ: ಇಬ್ಬರ ದುರ್ಮರಣ!

ಮೂಡಿಗೆರೆ ಅಪಘಾತ: ಇಬ್ಬರ ದುರ್ಮರಣ!
– ಬಸ್, ಕಾರು ನಡುವೆ ಭೀಕರ ಅಪಘಾತ
– ಸಿಎಂ ಬಗ್ಗೆ ತಿಥಿ ಪೋಸ್ಟ್ ಹಾಕಿದವನ ಮೇಲೆ ಕೇಸ್!
– ವಿದ್ಯುದಾಘಾತಕ್ಕೆ ಒಂದೇ ಕುಟುಂಬದ ಮೂವರ ಬಲಿ
– ಮೊಮ್ಮಗಳ ರಕ್ಷಣೆಗೆ ಹೋದ ಅಜ್ಜ-ಅಜ್ಜಿ ಸಾವು

NAMMUR EXPRESS NEWS
ಮೂಡಿಗೆರೆ: ಸರ್ಕಾರಿ ಬಸ್‌-ಪ್ರವಾಸಿಗರ ಕಾರು ಮುಖಾಮುಖಿ ಡಿಕ್ಕಿಯಾಗಿ ಕಾರಿನಲ್ಲಿದ್ದ ತಾಯಿ-ಮಗ ಸ್ಥಳದಲ್ಲೇ ಮೃತಪಟ್ಟು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮೂಡಿಗೆರೆ ತಾಲೂಕಿನ ಮುದ್ರೆಮನೆ ಬಳಿ ಶನಿವಾರ ನಡೆದಿದೆ. ಮೂಲತಃ ಬೆಂಗಳೂರಿನ ಕೋಣನಕುಂಟೆಯ ಪೂಜಾ ಹಿರೇಮಠ, ರಾಜಶೇಖರ್ ಹಿರೇಮರ್ಠ ಮೃತ ದುರ್ದೈವಿಗಳು. ಶಿವಯಾಗಯ್ಯ ಹಿರೇಮಠ ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಸ್ಥಿತಿ ಚಿಂತಾಜನಕವಾಗಿದೆ. ಧರ್ಮಸ್ಥಳದಿಂದ ಮೂಡಿಗೆರೆ ಮಾರ್ಗವಾಗಿ ಬೆಂಗಳೂರಿಗೆ ತೆರಳುತ್ತಿದ್ದ ಕಾರು ಹಾಗೆ ಸಕಲೇಶಪುರದಿಂದ ಮೂಡಿಗೆರೆ ಕಡೆ ತೆರಳುತ್ತಿದ್ದ ಸರ್ಕಾರಿ ಬಸ್ ಪರಸ್ಪರ ಡಿಕ್ಕಿಯಾಗಿವೆ. ಮೂಡಿಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಸಿದ್ದರಾಮಯ್ಯ ಬಗ್ಗೆ ತಿಥಿ ಪೋಸ್ಟ್ ಹಾಕಿದವನ ಮೇಲೆ ಕೇಸ್!

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಯುವಕನ ವಿರುದ್ಧ ಇದೀಗ ದೂರು ದಾಖಲಾಗಿದೆ. ಬಿಜೆಪಿ ಕಾರ್ಯಕರ್ತನ ವಿರುದ್ಧ ಮೂಡಿಗೆರೆ ಪೊಲೀಸ್ ಠಾಣೆ ಹಾಗೂ ಜಿಲ್ಲಾಸೆನ್ ಪೊಲೀಸ್ ಠಾಣೆಯಲ್ಲಿ ಕಾಂಗ್ರೆಸ್ ಮುಖಂಡರು ದೂರು ದಾಖಲಿಸಿದ್ದಾರೆ. ಮೂಡಿಗೆರೆ ಪ್ರಜ್ವಲ್ ಎಂಬಾತ ಸಿದ್ದರಾಮಯ್ಯ ಅವರ ಹೆಸರು ಹಾಕಿ ತಿಥಿ ಕಾರ್ಡ್ ಹಾಗೂ ಡಿ.ಕೆ.ಶಿವಕುಮಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಪೋಸ್ಟ್ ಗಳನ್ನು ತನ್ನ ಫೇಸ್‌ಬುಕ್ ಖಾತೆ ಹಾಗೂ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದನು. ಅಲ್ಲದೇ ಈ ಅವಹೇಳನಕಾರಿ ಪೋಸ್ಟ್ ಗಳನ್ನು ಹಿಂದೂ ಸಾಮ್ರಾಜ್ಯ ಮೂಡಿಗೆರೆ ಎಂಬ ಫೇಸ್‌ಬುಕ್ ಖಾತೆಯಲ್ಲೂ ಹಂಚಿಕೊಂಡಿದ್ದ.ಈ ಪೋಸ್ಟ್ ಗಳನ್ನು ಗಮನಿಸಿದ ಕಾಂಗ್ರೆಸ್‌ ಮುಖಂಡರು ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಜ್ವಲ್ ವಿರುದ್ಧ ದೂರು ದಾಖಲಿಸಿದ್ದಾರೆ.

ಮೊಮ್ಮಗಳ ರಕ್ಷಣೆಗೆ ಹೋದ ಅಜ್ಜ-ಅಜ್ಜಿ ಸಾವು

ವಿದ್ಯುತ್ ಶಾಕ್ ಹೊಡೆದು ಒಂದೇ ಕುಟುಂಬದ ಮೂವರು ದಾರುಣವಾಗಿ ಪ್ರಾಣ ಕಳೆದುಕೊಂಡ ಭಯಾನಕ ಘಟನೆ ಬೆಳಗಾವಿಯ ಶಾಹುನಗರದ ಮೊದಲನೇ ಕ್ರಾಸ್‌ನ ಮನೆಯಲ್ಲಿ ಸಂಭವಿಸಿದೆ. ಶನಿವಾರ ರಾತ್ರಿ ನಿರ್ಮಾಣ ಹಂತದ ಮನೆಯ ಶೆಡ್‌ನಲ್ಲಿ ಈ ದುರಂತ ಸಂಭವಿಸಿದ್ದು, ವಾಚ್‌ಮನ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ, ಅವರ ಪತ್ನಿ ಮತ್ತು ಮೊಮ್ಮಗು ಪ್ರಾಣ ಕಳೆದುಕೊಂಡಿದ್ದಾರೆ

ಈರಪ್ಪ ಗಂಗಪ್ಪ ರಾಥೋಡ(55), ಶಾಂತವ್ವ ಈರಪ್ಪ ರಾಥೋಥ (50), ಅನ್ನಪೂರ್ಣ ಹೊನ್ನಪ್ಪ ಲಮಾಣಿ (8) ಮೃತರು. ಇವರು ಮೂಲತಃ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಅರಗಂಚಿ ತಾಂಡಾದ ನಿವಾಸಿಗಳು.ಪಂಪ್ ಸ್ವಿಚ್ ಆಫ್ ಮಾಡಲು ಹೋಗಿದ್ದಮೊಮ್ಮಗಳಿಗೆ ಶಾಕ್ಭಾನುವಾರ ಬೆಳಗ್ಗೆ ಬೋರ್‌ವೆಲ್‌ನ ಮೋಟಾರ್ ಬಂದ್ ಮಾಡುವ ವೇಳೆ ಎಂಟು ವರ್ಷದ ಬಾಲಕಿ ಅನ್ನಪೂರ್ಣ ಲಮಾಣಿಗೆ ವಿದ್ಯುತ್‌ ತಂತಿ ತಾಗಿತ್ತು.

ಈ ವೇಳೆ ಶಾಕ್‌ಗೆ ಒಳಗಾದ ಬಾಲಕಿ ಜೋರಾಗಿ ಕಿರುಚಿಕೊಂಡಳು. ತಕ್ಷಣವೇ ಓಡಿಬಂದ ಈರಪ್ಪ ರಾಥೋಡ ಹಾಗೂ ಶಾಂತವ್ವ ರಾಥೋಡ ಅವರು ಮಗುವಿನ ರಕ್ಷಣೆಗಾಗಿ ಪ್ರಯತ್ನಿಸಿದರು. ಆಗ ಆ ವಿದ್ಯುತ್‌ ಈರಪ್ಪ ರಾಥೋಡ ಹಾಗೂ ಗಂಗವ್ವ ರಾಥೋಡ್‌ ತಾಗಿ ಸ್ಥಳದಲ್ಲೇ ಮೂವರೂ ಮೃತಪಟ್ಟರು.ಶಾಹುನಗರದ ಸರ್ಕಾರಿ ಕನ್ನಡ ಶಾಲೆಯಲ್ಲಿ ಎರಡನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಅನ್ನಪೂರ್ಣಳನ್ನು ರಕ್ಷಿಸಲು ಹೋಗಿ ಅವಳ ಅಜ್ಜ ಮತ್ತು ಅಜ್ಜಿ ಕೂಡಾ ಪ್ರಾಣ ಕಳೆದುಕೊಂಡರು.

ಇದನ್ನೂ ಓದಿ : ಭೂತಾನ್ ಅಡಿಕೆ ಬಂದ್ರೂ ತೊಂದರೆ ಇಲ್ಲ- ಆರಗ ಜ್ಞಾನೇಂದ್ರ

[embedyt] https://www.youtube.com/watch?v=rTGqP21dgrM%5B/embedyt%5D

HOW TO APPLY : NEET-UG COUNSELLING 2023

Categories
ಹೊಸನಗರ

ವರಾಹಿ ಲಯನ್ಸ್ 25ನೇ ವರ್ಷಕ್ಕೆ ನೂತನ ಸಾರಥಿಗಳು!

ವರಾಹಿ ಲಯನ್ಸ್ 25ನೇ ವರ್ಷಕ್ಕೆ ನೂತನ ಸಾರಥಿಗಳು!
– 3ನೇ ಬಾರಿಗೆ ಅಧ್ಯಕ್ಷರಾಗಿ ಲಯನ್ ಎಚ್ ವಾಸಪ್ಪ ಮಾಸ್ತಿ ಕಟ್ಟೆ ಅಧಿಕಾರ ಸ್ವೀಕಾರ
– ಲೀಲಾವತಿ ವಿ ರಾವ್ ಅವರಿಗೆ ಕಾರ್ಯದರ್ಶಿ ಹುದ್ದೆ

NAMMUR EXPRESS NEWS
ಹೊಸನಗರ: ಹೊಸ ನಗರ ತಾಲೂಕು ವರಾಹಿ ಲಯನ್ಸ್ ಕ್ಲಬ್ ನೂತನ ಅಧ್ಯಕ್ಷರಾಗಿ ಮೂರನೇ ಬಾರಿಗೆ ಲಯನ್ ಎಚ್ ವಾಸಪ್ಪ ಮಾಸ್ತಿ ಕಟ್ಟೆ ಅಧಿಕಾರ ಸ್ವೀಕರಿಸಿದ್ದಾರೆ. ಮಾಸ್ತಿ ಕಟ್ಟೆ ಖೈರಗುಂದ ಗ್ರಾಮ ಪಂಚಾಯತಿಯ ಸಭಾಂಗಣದಲ್ಲಿ ನಡೆದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಲಯನ್ಸ್ ಜಿಲ್ಲೆ 317 ಸಿ, ಪ್ರಾಂತ್ಯ7 ರ, ಪ್ರಾಂತೀಯ ಅಧ್ಯಕ್ಷರಾದ ಎಂ ಜೆ ಎಫ್ ಲಯನ್ ವೇದಮೂರ್ತಿ ,ಶಿರಾಳಕೊಪ್ಪ ಇವರು ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಲಯನ್ಸ್ ಸಂವಿಧಾನದಂತೆ ಪ್ರಮಾಣವಚನ ಬೋಧಿಸುವುದರ ಮೂಲಕ ಕಾರ್ಯಕ್ರಮವನ್ನು ನೆರವೇರಿಸಿಕೊಟ್ಟರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಾಸ್ತಿಕಟ್ಟೆಯಂತಹ ಪುಟ್ಟ ಗ್ರಾಮದಲ್ಲಿ ನಿರಂತರ 24 ವರ್ಷಗಳ ಕಾಲ ಲಯನ್ಸ್ ಸಂಸ್ಥೆಯನ್ನು ಮುನ್ನಡೆಸಿಕೊಂಡು ಬಂದ ಎಲ್ಲರನ್ನು ಅಭಿನಂದಿಸಿ ದರು.

ಮಲೆನಾಡಿನ ದಟ್ಟ ಅರಣ್ಯದ ಪ್ರದೇಶವಾಗಿರುವ ಈ ಭಾಗದಲ್ಲಿ ಅನೇಕ ಡ್ಯಾಮ್ ಗಳು ನಿರ್ಮಾಣವಾಗಿದ್ದು ಈ ಭಾಗದ ಜನರು ತ್ಯಾಗಮಯಿಗಳಾಗಿದ್ದು ಅನೇಕ ಸಮಸ್ಯೆಗಳು ನಡುವೆ ಬದುಕನ್ನು ಕಟ್ಟಿಕೊಂಡಿದ್ದು ಶ್ಲಾಘನೀಯ ಎಂದರು.
ವರಾಹಿ ಲಯನ್ಸ್ ಕ್ಲಬ್ ನಾ ಕಂಡಂತೆ ಲಯನ್ಸ್ ಜಿಲ್ಲೆಯಲ್ಲಿ ಅತ್ಯುತ್ತಮ ಕಾರ್ಯಕ್ರಮಗಳನ್ನು ಸೇವೆಗಳನ್ನು ನೀಡುತ್ತಾ ಬಂದಿದ್ದು ಜಿಲ್ಲೆಯಲ್ಲಿ ಈ ಹಿಂದೆ ಹಿಂದೆ ಟಾಪ್ ಹತ್ತರಲ್ಲಿ ತನ್ನ ಸ್ಥಾನವನ್ನು ಪಡೆದುಕೊಂಡಿತ್ತು .ಅತ್ಯಂತ ಕ್ರಿಯಾಶೀಲ ಸದಸ್ಯರು ಇರುವ ಈ ತಂಡದಲ್ಲಿ ಬಹಳಷ್ಟು ಜನ ಹಿರಿಯ ಸದಸ್ಯರಿದ್ದು ಅವರೆಲ್ಲರ ಸಹಕಾರದಿಂದ, ಅನುಭವದ ಮೂಲಕ ಈ ಕ್ಲಬ್ಬನ್ನು ಮುನ್ನಡೆಸಿಕೊಂಡು ಬಂದಿದ್ದಾರೆ ಎಂದರು.

24 ವರ್ಷ ತುಂಬಿ 25ಕ್ಕೆ ಕಾಲಿಡುತ್ತಿರುವ ಈ ಕ್ಲಬ್ಬಿನ ನೂತನ ಅಧ್ಯಕ್ಷರಾಗಿ ಸಾರಥ್ಯ ವಹಿಸಿಕೊಂಡಿರುವ ಲಯನ್ ಎಚ್ ವಾಸಪ್ಪ ಇವರು 25ನೇ ವರ್ಷದ ಬೆಳ್ಳಿ ಹಬ್ಬದ ಸಂದರ್ಭದಲ್ಲಿ ನೂತನ ಅಧ್ಯಕ್ಷರಾಗಿದ್ದು ಅವರಿಗೆ ಲಯನ್ಸ್ ಕ್ಲಬ್ನ ಬೆಳ್ಳಿಹಬ್ಬವನ್ನು ಆಚರಿಸುವ ಒಂದು ಸುವರ್ಣ ಅವಕಾಶ ಒದಗಿ ಬಂದಿದ್ದು ಅವರು ಅತ್ಯುತ್ತಮವಾಗಿ ಬೆಳ್ಳಿ ಹಬ್ಬವನ್ನು ಆಚರಿಸುವ ಭರವಸೆ ನನಗಿದೆ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾ ಈ ಕಾರ್ಯಕ್ರಮಕ್ಕೆ ಕಬ್ಬಿನ ಎಲ್ಲಾ ಸದಸ್ಯರು ಕೈಜೋಡಿಸಬೇಕೆಂದು ಕರೆ ನೀಡಿದರು. ವರಾಹಿ ಕ್ಲಬ್ ವತಿಯಿಂದ ಮಾಸ್ತಿಕಟ್ಟೆಯ ಆಟೋ ಚಾಲಕರನ್ನು ಗುರುತಿಸಿ ಅವರ ಸೇವೆಯನ್ನು ನೆನಪಿಸಿ ಆಹಾರದ ಕಿಟ್ಟುಗಳನ್ನು ನೀಡಿದರು.

ನೂತನ ಅಧ್ಯಕ್ಷರಾದ ಲಯನ್ ಎಚ್ ವಾಸಪ್ಪ ಮಾತನಾಡಿ ಮೂರನೇ ಬಾರಿಗೆ ಅಧ್ಯಕ್ಷನಾಗಲು ಅವಕಾಶ ನೀಡಿದ ವರಾಹಿ ಕ್ಲಬ್ಬಿನ ಸರ್ವ ಸದಸ್ಯರಿಗೂ ಅಭಿನಂದನೆ ಸಲ್ಲಿಸಿದರು. ಪ್ರಾಂತ್ಯ ಅಧ್ಯಕ್ಷರಾಗಿ ಅತ್ಯುತ್ತಮ ಕಾರ್ಯಕ್ರಮವನ್ನು ನೆರವೇರಿಸಿಕೊಟ್ಟ ಲಯನ್ ಹೆಚ್ ಕೆ ವಿದ್ಯಾನಂದ ರಾವ್ ಅವರಿಗೆ ಅಭಿನಂದನೆ ಸಲ್ಲಿಸಿದರು. ವರಾಯಿ ಕ್ಲಬ್ಬಿನ ನೂತನ ಕಾರ್ಯದರ್ಶಿಯಾಗಿ ಲಯನ್ ಲೀಲಾವತಿ ವಿ ರಾವ್ ಹಾಗೂ ಖಜಾಂಚಿಯಾಗಿ ಲಯನ್ ವೈ ಕೆ ವೆಂಕಟೇಶ್ ಹೆಗ್ಗಡೆ ಹಾಗೂ ಎಲ್ಲಾ ಸದಸ್ಯರು ಪ್ರಮಾಣವಚನ ಸ್ವೀಕರಿಸಿದರು.

ಪ್ರಾಂತೀಯ ಅಧ್ಯಕ್ಷರು ನೂತನ ಅಧ್ಯಕ್ಷರಿಗೆ ಹಾಗೂ ನಿಕಟಪೂರ್ವ ಅಧ್ಯಕ್ಷರಿಗೆ ಸನ್ಮಾನಿಸಿ ಗೌರವಿಸಿದರು. ಹಾಗೂ ಜಿಲ್ಲಾ ಅವಾರ್ಡ್ ನೈಟ್ ನಲ್ಲಿ ಪಡೆದ ವಾರಾಹಿ ಕ್ಲಬ್ಬಿನ ಅವಾರ್ಡ್ ಗಳನ್ನು ವಿತರಿಸಿದರು.ಪ್ರಾಂತೀಯ ಅಧ್ಯಕ್ಷರನ್ನು ನಿಕಟ ಪೂರ್ವ ಪ್ರಾಂತೀಯ ಅಧ್ಯಕ್ಷರಾದ ಲಯನ್ ಎಚ್ ಕೆ ವಿದ್ಯಾನಂದ ರಾವ್ ಪರಿಚಯಿಸಿ ಮಾತನಾಡಿದರು. ನೂತನ ಅಧ್ಯಕ್ಷರನ್ನು ಲಯನ್ ಕಾರ್ತಿಕ್ ಅವರು ಸಭೆಗೆ ವಿಶೇಷವಾಗಿ ಪರಿಚಯಿಸಿದರು ವಲಯ ಅಧ್ಯಕ್ಷರಾದ ಲಯನ್ ಪ್ರಸನ್ನ ಕುಮಾರ್, ಲಯನ್ ಶಿವರಾಜ್ ಗೌಡ, ನಿಕಟ ಪೂರ್ವ ಕಾರ್ಯದರ್ಶಿ ಲಯನ್ ವೆಂಕಟೇಶ್ ಗೌಡ, ಖಜಾಂಚಿ ಲಯನ್ ಬಿ ಟಿ ಸಂಪತ್ ಕುಮಾರ್ ಸಭೆಯಲ್ಲಿ ಉಪಸ್ಥಿತರಿದ್ದರು. ಸುಂದರಾಂಗಿ ನಾಗೇಶ್ ಪ್ರಾರ್ಥಿಸಿದರು. ಲ. ವೈ ಕೆ ವೆಂಕಟೇಶ್ ಹೆಗ್ಗಡೆ ಸ್ವಾಗತಿಸಿದರು. ಲ. ಅಶ್ವಿನಿ ಹೆಗಡೆ ನಿರೂಪಿಸಿದರು.ಲಯನ್ ಲೀಲಾವತಿ ವಿ ರಾವ್ ಎಲ್ಲರನ್ನು ವಂದಿಸಿದರು.

ಇದನ್ನೂ ಓದಿ : ಭೂತಾನ್ ಅಡಿಕೆ ಬಂದ್ರೂ ತೊಂದರೆ ಇಲ್ಲ- ಆರಗ ಜ್ಞಾನೇಂದ್ರ

[embedyt] https://www.youtube.com/watch?v=rTGqP21dgrM%5B/embedyt%5D

HOW TO APPLY : NEET-UG COUNSELLING 2023

Categories
ಬೆಂಗಳೂರು

ಬಿಬಿಎಂಪಿ ಲ್ಯಾಬ್‌ಗೆ ಬೆಂಕಿ: ಭಾರೀ ದುರಂತ!

ಬಿಬಿಎಂಪಿ ಲ್ಯಾಬ್‌ಗೆ ಬೆಂಕಿ: ಭಾರೀ ದುರಂತ!
– ಮುಖ್ಯ ಎಂಜಿನಿಯರ್ ಸೇರಿ 9 ಮಂದಿ ಗಂಭೀರ
– ಪೊಲೀಸ್ ತನಿಖೆ: ಹಲವರು ಆಸ್ಪತ್ರೆಗೆ ದಾಖಲು
– ರಾಜಕೀಯ ಬಣ್ಣಕ್ಕೆ ತಿರುಗಿದ ಘಟನೆ?

NAMMUR EXPRESS NEWS
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಕೇಂದ್ರ ಕಚೇರಿ ಆವರಣದ ಕಟ್ಟಡದಲ್ಲಿರುವ ಗುಣ ನಿಯಂತ್ರಣ ಪ್ರಯೋಗಾಲಯದಲ್ಲಿ ಸಂಭವಿಸಿದ ಭಾರೀ ಅಗ್ನಿ ಅವಘಡದಲ್ಲಿ ಪ್ರಯೋಗಾಲಯದ ಮುಖ್ಯ ಅಭಿಯಂತರ ಸೇರಿ 9 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಶುಕ್ರವಾರ ಸಂಜೆ ನಡೆದಿದೆ. ಸಂಜೆ 5ರ ಸುಮಾರಿಗೆ ಈ ಘಟನೆ ನಡೆದಿದೆ. ಈ ಘಟನೆಯಲ್ಲಿ ಪ್ರಯೋಗಾಲಯದ ಮುಖ್ಯ ಅಭಿಯಂತರ ಶಿವಕುಮಾರ್, ಕಾರ್ಯಪಾಲಕ ಎಂಜಿನಿಯರ್‌ಗಳಾದ ಕಿರಣ್, ಸಂತೋಷ್ ಕುಮಾರ್, ವಿಜಯಮಾಲಾ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಶ್ರೀಧರ್, ಪ್ರಥಮ ದರ್ಜೆ ಸಹಾಯಕ ಸಿರಾಜ್, ಆಪರೇಟರ್ ಜ್ಯೋತಿ, ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ಕನ್ಸಲ್ವೆಂಟ್ ಶ್ರೀನಿವಾಸ, ಗಣಕಯಂತ್ರ ನಿರ್ವಾಹಕ ಮನೋಜ್ ಗಾಯಗೊಂಡಿದ್ದಾರೆ. ಅವಘಡದಲ್ಲಿ 9 ಮಂದಿಗೂ ಶೇ.35-40ರಷ್ಟು ಸುಟ್ಟು ಗಾಯಗಳಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಘಟನೆ?

ಬಿಬಿಎಂಪಿ ಕೇಂದ್ರ ಕಚೇರಿಯ ಆವರಣದ ಆನೆಕ್ಸ್-2 ಕಟ್ಟಡದಲ್ಲಿ ಗುಣ ನಿಯಂತ್ರಣ ಪ್ರಯೋಗಾಲಯ ಹಾಗೂ ಕಚೇರಿ ಇದೆ. ಇಲ್ಲಿ ಬಿಬಿಎಂಪಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ವಸ್ತುಗಳ ಗುಣಮಟ್ಟದ ಪರೀಕ್ಷೆ ಮಾಡಲಾಗುತ್ತದೆ. ವೈಜ್ಞಾನಿಕವಾಗಿ ರಾಸಾಯನಿಕಗಳನ್ನು ಬಳಸಿ ವಸ್ತುಗಳ ಗುಣಮಟ್ಟ ಪರೀಕ್ಷಿಸಲಾಗುತ್ತದೆ. ಸಂಜೆ 5 ಗಂಟೆ ಸುಮಾರಿಗೆ ಬೆಂಜಿನ್ ರಾಸಾಯನಿಕ ಬಳಸಿ ಪರೀಕ್ಷೆ ಮಾಡುವಾಗ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆಯಿದೆ. ಈ ವೇಳೆ ಪ್ರಯೋಗಾಲಯದ ಮೂರು ಹಾಟ್ ಏರ್ ಓವನ್ ಪೈಕಿ ಒಂದು ಓವನ್‌ಗೆ ಬೆಂಕಿ ತಾಕಿ ಸ್ಫೋಟಗೊಂಡಿದೆ. ಸ್ಫೋಟದ ರಭಸಕ್ಕೆ ಇಡೀ ಪ್ರಯೋಗಾಲಯಕ್ಕೆ ಬೆಂಕಿ ಆವರಿಸಿರುವ ಸಾಧ್ಯತೆಯಿದೆ.

ಸ್ಫೋಟದ ವೇಳೆ ಪ್ರಯೋಗಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮುಖ್ಯ ಎಂಜಿನಿಯರ್ ಸೇರಿದಂತೆ 9 ಮಂದಿ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಗಾಯಗೊಂಡಿದ್ದಾರೆ. ಪ್ರಾಣ ಉಳಿಸಿಕೊಳ್ಳಲು ಹೊರಗೆ ಓಡಿ ಬಂದಿದ್ದಾರೆ. ಈ ವೇಳೆ ಸಾರ್ವಜನಿಕರು ಹಾಗೂ ನೌಕರರು ಈ 9 ಮಂದಿಯ ನೆರವಿಗೆ ಧಾವಿಸಿ ಮೈ ಮೇಲೆ ನೀರು ಎರಚಿ ಬೆಂಕಿ ನಂದಿಸಿದ್ದಾರೆ. ಅಗ್ನಿ ಅವಘಡದ ವಿಚಾರ ತಿಳಿದು ಹಿರಿಯ ಪೊಲೀಸ್ ಅಧಿಕಾರಿಗಳು, ಹಲಸೂರು ಗೇಟ್ ಠಾಣೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದರು.

ಮತ್ತೊಂದೆಡೆ ಕೂಡಲೇ ಆ0ಬುಲೆನ್ಸ್‌ಗಳನ್ನು ಕರೆಸಿ ಗಾಯಾಳುಗಳನ್ನು ಸಮೀಪದ ಸೇಂಟ್ ಮಾರ್ಥಾಸ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಇಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಸದ್ಯಕ್ಕೆ ವಿಕ್ಟೋರಿಯಾ ಆಸ್ಪತ್ರೆಯ ಸುಟ್ಟಗಾಯಗಳ ವಿಭಾಗದಲ್ಲಿ 9 ಮಂದಿಗೂ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಈ ಸಂಬಂಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಕಡತ, ಕಂಪ್ಯೂಟರ್ ಬೆಂಕಿಗಾಹುತಿ!

ಪ್ರಯೋಗಾಲಯದಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಬಿಬಿಎಂಪಿಯ ವಿವಿಧ ಕಾಮಗಾರಿಗಳಿಗೆ ಸಂಬಂಧಿಸಿದ ಕಡತಗಳು, ಕಂಪ್ಯೂಟರ್‌ಗಳು ಹಾಗೂ ಪ್ರಾಯೋಗಾಲಯದ ಉಪಕರಣಗಳು, ಪೀಠೋಪಕರಣಗಳಿಗೆ ಹಾನಿಯಾಗಿದೆ. ಎಷ್ಟು ಕಡತ, ಯಾವ ಕಾಮಗಾರಿಗೆ ಸಂಬಂಧಿಸಿದ ಕಡತಗಳು ಬೆಂಕಿಗಾಹುತಿಯಾಗಿವೆ ಎಂಬುದರ ಬಗ್ಗೆ ಬಿಬಿಎಂಪಿ ಅಧಿಕಾರಿಗಳೇ ಮಾಹಿತಿ

ನೀಡಬೇಕಿದೆ. ಎಫ್‌ಎಸ್ಎಲ್ ತಂಡ ಭೇಟಿ:

ಬೆಂಕಿ ಅವಘಡದ ಹಿನ್ನೆಲೆಯಲ್ಲಿ ಗುಣ ನಿಯಂತ್ರಣ ಪ್ರಯೋಗಾಲಯಕ್ಕೆ ವಿಧಿವಿಜ್ಞಾನ ಪ್ರಯೋಗಾಲಯ(ಎಫ್‌ಎಸ್‌ಎಲ್)ದ ತಜ್ಞರ ತಂಡ ಭೇಟಿ ನೀಡಿ ಪರಿಶೀಲಿಸಿದೆ. ಅವಘಡಕ್ಕೆ ನಿಖರ ಕಾರಣ ಸದ್ಯಕ್ಕೆ ತಿಳಿದಿಲ್ಲ. ಬೆಂಜಿನ್ ರಾಸಾಯನಿಕ ಬಳಸಿ ಪ್ರಯೋಗ ಮಾಡುವಾಗ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆಯಿದೆ. ಹೆಚ್ಚಿನ ತನಿಖೆಯಿಂದ ಘಟನೆಗೆ ನಿಖರ ಕಾರಣ ಗೊತ್ತಾಗಲಿದೆ.

ಇದನ್ನೂ ಓದಿ : ಭೂತಾನ್ ಅಡಿಕೆ ಬಂದ್ರೂ ತೊಂದರೆ ಇಲ್ಲ- ಆರಗ ಜ್ಞಾನೇಂದ್ರ

[embedyt] https://www.youtube.com/watch?v=rTGqP21dgrM%5B/embedyt%5D

HOW TO APPLY : NEET-UG COUNSELLING 2023

Categories
ಮಲ್ನಾಡ್

ಸೌಜನ್ಯ ಪ್ರಕರಣ: ಮಲೆನಾಡಲ್ಲಿ ಹೋರಾಟ!

ಸೌಜನ್ಯ ಪ್ರಕರಣ: ಮಲೆನಾಡಲ್ಲಿ ಹೋರಾಟ!
– ಶೃಂಗೇರಿಯಲ್ಲಿ ಮರು ತನಿಖೆ ನಡೆಸುವಂತೆ ಎಬಿವಿಪಿ ಪಟ್ಟು
– ಕೊಪ್ಪ ಮೂಲದ ಯುವಕ ಅಪಘಾತಕ್ಕೆ ಬಲಿ
– ಚಿಕ್ಕಮಗಳೂರಲ್ಲಿ ಮುಂಜಾನೆ ಅಪಘಾತ
– ಕಡೂರು ಶಾಸಕರ ವಿರುದ್ಧ ಪೊಲೀಸ್ ಮೆಸೇಜ್!

NAMMUR EXPRESS NEWS
ಧರ್ಮಸ್ಥಳ: ಧರ್ಮಸ್ಥಳದ ಸೌಜನ್ಯ ಪ್ರಕರಣದ ನ್ಯಾಯಕ್ಕಾಗಿ ಇದೀಗ ಮಲೆನಾಡಲ್ಲೂ ಹೋರಾಟ ಶುರುವಾಗಿದೆ.
ಶೃಂಗೇರಿಯಲ್ಲಿ ಮರು ತನಿಖೆ ನಡೆಸುವಂತೆ ಎಬಿವಿಪಿ ವತಿಯಿಂದ ಮನವಿ ಮಾಡಲಾಗಿದೆ. ಧರ್ಮಸ್ಥಳ ಮೂಲದ ವಿದ್ಯಾರ್ಥಿನಿಯಾದ ಸೌಜನ್ಯಳ ಅತ್ಯಾಚಾರ ಮತ್ತು ಕೊಲೆ ಪ್ರಕರಣವು 2012 ರಲ್ಲಿ ನಡೆದಿತ್ತು. ಪ್ರಕರಣ ನಡೆದ ಮೊದಲ ದಿನದಿಂದಲೂ ವಿದ್ಯಾರ್ಥಿ ಪರಿಷತ್‌ ರಾಜ್ಯಾದ್ಯಂತ ಉಗ್ರ ಹೋರಾಟವನ್ನು ನಡೆಸಿ ಪ್ರಕರಣವನ್ನು ಭೇದಿಸಲು ಸಿ ಬಿ ಐ ತನಿಖೆಯನ್ನು ಆಗ್ರಹಿಸಿತ್ತು, ಎಬಿವಿಪಿಯ ಸಂಘಟಿತ ಹೋರಾಟದ ಪ್ರತಿಫಲವಾಗಿ ರಾಜ್ಯ ಸರ್ಕಾರವು ಈ ಪ್ರಕರಣದ ತನಿಖೆಯನ್ನು ಸಿ.ಬಿ.ಐ ಗೆ ವಹಿಸಿತು. ಅದರ ಸಿಬಿಐ ತನಿಖೆಯ ನಂತರ ನ್ಯಾಯಾಲಯದ ಅಂತಿಮ ತೀರ್ಪಿನಲ್ಲಿ ಕುಮಾರಿ ಸೌಜನ್ಯಳಿಗೆ ನ್ಯಾಯ ಸಿಗದೇ ಇರುವುದು ಅತ್ಯಂತ ಬೇಸರದ ಸಂಗತಿಯಾಗಿದೆ .

ಇದನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಖಂಡಿಸುತ್ತದೆ. ಸೌಜನ್ಯಳ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿ ಈ ಕೂಡಲೆ ಮರು ತನಿಖೆಗೆ ಆದೇಶಿಸಬೇಕು.ತನ್ಮೂಲಕ ನೈಜ ಅಪರಾಧಿಗಳನ್ನು ಪತ್ತೆ ಮಾಡಿ ಬಂಧಿಸಿ ಕುಮಾರಿ ಸೌಜನ್ಯಳಿಗೆ ಹಾಗೂ ನೊಂದ ಅವರ ಕುಟುಂಬಕ್ಕೆ ನ್ಯಾಯ ಒದಗಿಸಿಬೇಕೆಂದು ಎ ಬಿ ವಿ ಪಿ ಆಗ್ರಹಿಸುತ್ತದೆ. ಒಂದು ವೇಳೆ ರಾಜ್ಯ ಸರ್ಕಾರವು ಮರು ತನಿಖೆಗೆ ಆದೇಶಿಸದೇ ನ್ಯಾಯ ಒದಗಿಸುವಲ್ಲಿ ವಿಫಲವಾದರ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸುವುದಾಗಿ ಈ ಮೂಲಕ ಎಚ್ಚರಿಸುತ್ತೇವೆ.

ಜೊತೆಗೆ ಸೌಜನ್ಯ ಹಾಗೂ ಸಂಬಂಧಿತ ಘಟನೆಯನ್ನು ದಾಳವಾಗಿ ಉಪಯೋಗಿಸಿ ಧಾರ್ಮಿಕ ಶ್ರದ್ಧಾ ಕೇಂದ್ರಗಳ ಘನತೆಗೆ ಮತ್ತು ಸಾಮಾನ್ಯ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಪ್ರಕರಣಗಳು ಕಂಡುಬರುತ್ತಿದ್ದು ಇದನ್ನು ರಾಜ್ಯ ಸರ್ಕಾರ ಗಮನಿಸಿ ಕೂಡಲೇ ಹತ್ತಿಕ್ಕಬೇಕೆಂದು ವಿದ್ಯಾರ್ಥಿ ಪರಿಷತ್ ಆಗ್ರಹಿಸಿದೆ. ರಾಜ್ಯ ಕಾರ್ಯಕಾರಿಣಿ ಸದಸ್ಯ ಶೃಂಗ ಶೃಂಗೇರಿ, ನಗರ ಕಾರ್ಯದರ್ಶಿ ರಕ್ಷಿತ್, ಸಹ ಕಾರ್ಯದರ್ಶಿ ಸುಮಂತ್, ತಾಲೂಕು ಸಹ ಸಂಚಾಲಕ ಪ್ರಸಾದ್, ಸೋಶಿಯಲ್ ಮೀಡಿಯಾ ಪ್ರಮುಖ ಅನ್ವಿತ್ ಶೆಟ್ಟಿ, ಕ್ರೀಡಾ ಪ್ರಮುಖ ಚರಣ್, ವೀಕ್ಷಿತ್, ನಿತೀಶ್ ಭಟ್ ಇತರರು ಇದ್ದರು.

ಕೊಪ್ಪ ಮೂಲದ ಯುವಕ ಅಪಘಾತಕ್ಕೆ ಬಲಿ

ಎನ್.ಆರ್ ಪುರ ತಾಲೂಕಿನ ಬಿ.ಹೆಚ್ ಕೈಮರ ಸಮೀಪ ಮರವೊಂದಕ್ಕೆ ಇಂಡಿಕಾ ಕಾರು ಡಿಕ್ಕಿ ಹೊಡೆದು ಯುವಕನೊಬ್ಬ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ.ಬಿ.ಹೆಚ್ ಕೈಮರ ಸಮೀಪದ ನಾರಾಯಣ ಗುರು ಸಭಾ ಭವನ ಸಮೀಪದ ಮರವೊಂದಕ್ಕೆ ಕಾರು ರಭಸವಾಗಿ ಬಂದು ಡಿಕ್ಕಿ ಹೊಡೆದ ಪರಿಣಾಮ ಕಾರು ಚಾಲಕ ಸ್ಥಳದಲ್ಲಿಯೇ ಮೃತ ಪಟ್ಟಿದ್ದಾರೆ ಎಂದು ಅಂದಾಜಿಸಲಾಗಿದೆ. ಕಾರು ಸಂಪೂರ್ಣ ಜಖಂಗೊಂಡಿದೆ. ಮೃತರನ್ನು ಕೊಪ್ಪ ತ್ಯಾಗರಾಜ ರಸ್ತೆಯಲ್ಲಿ ಶ್ರೀ ಮೊಬೈಲ್ ಅಂಗಡಿಯ ಮಾಲೀಕರಾದ ಶ್ರೀಧರ್ ಎಂದು ಗುರುತಿಸಲಾಗಿದೆ.

ಚಿಕ್ಕಮಗಳೂರಲ್ಲಿ ಮುಂಜಾನೆ ಅಪಘಾತ

ಚಿಕ್ಕಮಗಳೂರು ನಗರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಬಳಿ ಬೆಳ್ಳಂಬೆಳಗ್ಗೆ ಅಪಘಾತ ಸಂಭವಿಸಿದೆ. ಸ್ಕೂಟಿ ಸವಾರರಿಗೆ ಫಾರ್ಚುನರ್ ಕಾರ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಆಸ್ಪತ್ರೆಗೆ ದಾಖಲಾಗಿದ್ದಾರೆ, ಅದರಲ್ಲಿ ಓರ್ವನ ಸ್ಥಿತಿ ಗಂಭೀರವಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಹಾಸನದ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಡೆಕೋರೇಷನ್ ಕೆಲಸ ಮಾಡುತ್ತಿದ್ದವರು ಕೆಎಸ್‌ಆರ್‌ಟಿಸಿ ಬಸ್ ಸ್ಟ್ಯಾಂಡ್‌ನಲ್ಲಿ ಬಂದಿದ್ದ ಪಾರ್ಸೆಲ್ ಅನ್ನು ತರಲು ಆಗಮಿಸಿದ್ದರು ಎನ್ನಲಾಗಿದೆ, ಅತಿ ವೇಗವಾಗಿ ಬಂದ ಫಾರ್ಚುನರ್ ಕಾರೊಂದು ಸ್ಕೂಟಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದು ಮಹಮ್ಮದ್ ಶಾದಾಬ್, ಮಹಮ್ಮದ್ ಶಕೀಲ್ ಅವರನ್ನು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.

ಕಡೂರು ಶಾಸಕರ ವಿರುದ್ಧ ಪೊಲೀಸ್ ಮೆಸೇಜ್!

ಕಡೂರು ಶಾಸಕ ಆನಂದ್ ವಿರುದ್ಧ ಇದೀಗ ಮಹಿಳಾ ಪೊಲೀಸ್ ಪೇದೆಯೊಬ್ಬರು ವಾಟ್ಸಾಪ್ ಸ್ಟೇಟಸ್ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲತಾ ಎಂಬ ಪೊಲೀಸ್ ಪೇದೆ ನನಗೆ ಏನಾದ್ರೂ ತೊಂದರೆ ಆದರೆ ಕಡೂರು ಶಾಸಕರೇ ಹೊಣೆ ಎಂದು ಸ್ಟೇಟಸ್ ಹಾಕಿರುವುದು ಇದೀಗ ಭಾರೀ ಸುದ್ದಿಗೆ ಕಾರಣ ಆಗಿದೆ.

ಇದನ್ನೂ ಓದಿ : ಭೂತಾನ್ ಅಡಿಕೆ ಬಂದ್ರೂ ತೊಂದರೆ ಇಲ್ಲ- ಆರಗ ಜ್ಞಾನೇಂದ್ರ

[embedyt] https://www.youtube.com/watch?v=rTGqP21dgrM%5B/embedyt%5D

HOW TO APPLY : NEET-UG COUNSELLING 2023

Categories
ತೀರ್ಥಹಳ್ಳಿ ಶಿವಮೊಗ್ಗ

ವಿದ್ಯುತ್ ಕಡಿತದ ವಿರುದ್ಧ ತೀರ್ಥಹಳ್ಳಿಯಲ್ಲಿ ಪ್ರತಿಭಟನೆ!?

ವಿದ್ಯುತ್ ಕಡಿತದ ವಿರುದ್ಧ ತೀರ್ಥಹಳ್ಳಿಯಲ್ಲಿ ಪ್ರತಿಭಟನೆ!?
– ಯುವ ಬಿಜೆಪಿಯಿಂದ ಪ್ರತಿಭಟನೆ: ಕುಕ್ಕೆ ಪ್ರಶಾಂತ್
– ರಿಪ್ಪನ್‌ಪೇಟೆ ಸಮೀಪ ಅಪಘಾತ: ಓರ್ವನಿಗೆ ಗಾಯ
– ಶಿವಮೊಗ್ಗದಲ್ಲಿ ಯುವಕ ನೀರಿಗೆ ಬಿದ್ದು ನಾಪತ್ತೆ

NAMMUR EXPRESS NEWS
ತೀರ್ಥಹಳ್ಳಿ: (Thirthahalli news ) ತೀರ್ಥಹಳ್ಳಿ ತಾಲೂಕಿನಾದ್ಯಂತ ಪ್ರತಿದಿನ ಸಂಜೆಯ ವೇಳೆ ಗಂಟೆಗಳ ಕಾಲ ವಿದ್ಯುತ್ ಕಡಿತ ಗೊಳಿಸಲಾಗುತ್ತಿದ್ದು ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಮಕ್ಕಳಿಗೆ ಓದಲು ಸಹ ಆಗುತ್ತಿಲ್ಲ. ಈ ಸಮಸ್ಯೆ ಹೀಗೆ ಮುಂದುವರಿದರೆ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಕುಕ್ಕೆ ಪ್ರಶಾಂತ್ ( Kukke Prashanth )  ಎಚ್ಚರಿಕೆ ನೀಡಿದ್ದಾರೆ. ನಮ್ಮೂರ್ ಎಕ್ಸ್ ಪ್ರೆಸ್ ಮಾಧ್ಯಮಕ್ಕೆ ಹೇಳಿಕೆ ನೀಡಿದ ಅವರು, ರಾಜ್ಯ ಸರ್ಕಾರದ ಗ್ಯಾರೆಂಟಿಗಳಲ್ಲಿ ಒಂದಾಗಿರುವ ಗೃಹಜ್ಯೋತಿ ಯೋಜನೆ ಜಾರಿ ಬಳಿಕ ಈ ಸಮಸ್ಯೆ ಎದುರಾಗಿದೆ. ಒಂದು ಕಡೆ ಫ್ರೀ ಕೊಟ್ಟು ಇನ್ನೊಂದು ಕಡೆ ವಿದ್ಯುತ್ ತೆಗೆದರೆ ಏನು ಪ್ರಯೋಜನ ಎಂದು ಪ್ರಶ್ನಿಸಿದ್ದಾರೆ.

ಕಳೆದ 15 ದಿನಗಳಿಂದ ತೀರ್ಥಹಳ್ಳಿ ತಾಲೂಕಿನ ವಿವಿಧ ಭಾಗಗಳಲ್ಲಿ ಸಂಜೆಯ ವೇಳೆ ವಿದ್ಯುತ್ ಇರುವುದಿಲ್ಲ. ಮೆಸ್ಕಾಂ ಸಿಬ್ಬಂದಿ ಸರಿಯಾಗಿ ಉತ್ತರ ನೀಡುತ್ತಿಲ್ಲ. ಸರ್ಕಾರ ಉಚಿತ ವಿದ್ಯುತ್ ಎಂದು ಘೋಷಿಸಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವುದು ಸರಿಯಲ್ಲ. ಹೀಗೆ ಮುಂದುವರಿದರೆ ತಾಲೂಕು ಯುವ ಬಿಜೆಪಿ ವತಿಯಿಂದ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಕುಕ್ಕೆ ಪ್ರಶಾಂತ್ ಎಚ್ಚರಿಕೆ ನೀಡಿದ್ದಾರೆ.

ಹೊಸನಗರ ತಾಲ್ಲೂಕು ರಿಪ್ಪನ್‌ಪೇಟೆಯಲ್ಲಿ ಅಪಘಾತ

( Hosanagara news ) ಹೊಸನಗರ ತಾಲ್ಲೂಕು ರಿಪ್ಪನ್‌ಪೇಟೆ ಸಮೀಪ ಕಾರು ಬೈಕ್‌ ನಡುವೆ ಡಿಕ್ಕಿಯಾಗಿದೆ. ಘಟನೆಯಲ್ಲಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ. ರಿಪ್ಪನ್‌ಪೇಟೆಯ ಹೊಸನಗರ ರಸ್ತೆಯ ಶರ್ಮಣ್ಯಾವತಿ ನದಿ ಸೇತುವೆ ಬಳಿಯಲ್ಲಿ ಘಟನೆ ಸಂಭವಿಸಿದೆ. ಹೊಸನಗರದ ಕಡೆಗೆ ತೆರಳುತಿದ್ದ ಬೈಕ್ ಹಾಗೂ ಹೊಸನಗರ ಕಡೆಯಿಂದ ರಿಪ್ಪನ್‌ಪೇಟೆ ಕಡೆಗೆ ಬರುತಿದ್ದ ಕಾರು ಪರಸ್ಪರ ಡಿಕ್ಕಿಯಾಗಿವೆ. ಹೊಸನಗರ ಕೊಡಚಾದ್ರಿ ಕಾಲೇಜಿನ ವಿದ್ಯಾರ್ಥಿ ಘಟನೆಯಲ್ಲಿ ಗಾಯಗೊಂಡಿದ್ದು, ಇನ್ನೊಬ್ಬ ವಿದ್ಯಾರ್ಥಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇಬ್ಬರಿಗೂ ಸ್ಥಳಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ.

ಪ್ರವಾಸಕ್ಕೆ ಬಂದು ತುಂಗಾ ಡ್ಯಾಮಿಗೆ ಬಿದ್ದ!

( Tunga dam ) ತುಂಗಾ ಡ್ಯಾಂನ ಎದುರು, ಪ್ರವಾಸಕ್ಕೆ ಬಂದಿದ್ದ ಯುವಕನೊಬ್ಬ ನೀರಿಗೆ ಬಿದ್ದು ನಾಪತ್ತೆಯಾಗಿದ್ದಾನೆ. ಈ ಬಗ್ಗೆ ತಡವಾಗಿ ವರದಿಯಾಗಿದ್ದು, ಶುಕ್ರವಾರ ಅಗ್ನಿಶಾಮಕ ಸಿಬ್ಬಂದಿ ಯುವಕನಿಗಾಗಿ ಹುಡುಕಾಟ ನಡೆಸಿದ್ದಾರೆ. ಇವತ್ತು ಕೂಡ ಹುಡುಕಾಟ ಮುಂದುವರಿಸುವ ಸಾಧ್ಯತೆ ಇದೆ. ಗಾಜನೂರು ಜಲಾಶಯದ ಚಾನಲ್ ಪಕ್ಕದಲ್ಲಿ ಮಿಳಘಟ್ಟದ ಹರೀಶ್ ಡ್ಯಾಂನ್ನ ಹತ್ತಿರದಿಂದ ನೋಡಲು ಹೋಗಿ ನಾಪತ್ತೆಯಾಗಿದ್ದಾನೆ.

ಇದನ್ನೂ ಓದಿ : ಭೂತಾನ್ ಅಡಿಕೆ ಬಂದ್ರೂ ತೊಂದರೆ ಇಲ್ಲ- ಆರಗ ಜ್ಞಾನೇಂದ್ರ

[embedyt] https://www.youtube.com/watch?v=rTGqP21dgrM%5B/embedyt%5D

HOW TO APPLY : NEET-UG COUNSELLING 2023

Categories
ರಾಷ್ಟ್ರೀಯ ವಾರ್ತೆ

ನಕಲಿ ಔಷಧ ಅಕ್ರಮ ಮಾರಾಟಕ್ಕೆ ಬ್ರೇಕ್?

ನಕಲಿ ಔಷಧ ಅಕ್ರಮ ಮಾರಾಟಕ್ಕೆ ಬ್ರೇಕ್?
– ಕೇಂದ್ರ ಸರ್ಕಾರದಿಂದ ಮಹತ್ವದ ಕ್ರಮ
– ಶೀಘ್ರದಲ್ಲಿ ರಾಷ್ಟ್ರೀಯ ಔಷಧ ಪೋರ್ಟಲ್
– ಮೆಡಿಕಲ್ ಅಕ್ರಮ ಕಡಿವಾಣಕ್ಕೂ ಪ್ಲಾನ್?!

NAMMUR EXPRESS NEWS
ನವದೆಹಲಿ: ಇ-ಫಾರ್ಮಸಿಗಳು ಮತ್ತು ಇ-ಕಾಮರ್ಸ್ ಪ್ಲಾಟ್ ಫಾರ್ಮ್ ಗಳು ಪ್ರಿಸ್ಕ್ರಿಪ್ಶ್ ನ್ ಔಷಧಿಗಳ ಅಕ್ರಮ ಮಾರಾಟವನ್ನು ಪರಿಶೀಲಿಸುವ ಪ್ರಯತ್ನದಲ್ಲಿ ಮತ್ತು ಡೇಟಾ ದುರುಪಯೋಗದಂತಹ ಸಂಭಾವ್ಯ ಅಪಾಯಗಳನ್ನು ಪರಿಹರಿಸಲು, ಆನ್ ಲೈನ್ ಔಷಧಿಗಳ ಮಾರಾಟಕ್ಕಾಗಿ ರಾಷ್ಟ್ರೀಯ ಪೋರ್ಟಲ್ ಅನ್ನು ಪ್ರಾರಂಭಿಸಲು ಕೇಂದ್ರ ಯೋಜಿಸಿದೆ ಎನ್ನಲಾಗಿದೆ. ಇದರೊಂದಿಗೆ, ನಕಲಿ ಔಷಧಿಗಳ ಮಾರಾಟ, ವ್ಯಸನಕಾರಿ ಮಾದಕವಸ್ತುಗಳು ಮತ್ತು ಸಂಭಾವ್ಯ ರಾಷ್ಟ್ರೀಯ ಭದ್ರತಾ ಕಾಳಜಿಗಳಂತಹ ಅಪಾಯಗಳನ್ನು ತಗ್ಗಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಆನ್ ಲೈನ್ ಅಲ್ಲಿ ಔಷಧಿಗಳನ್ನು ಮಾರಾಟ ಮಾಡುವ ಅಸ್ತಿತ್ವದಲ್ಲಿರುವ ಮಾದರಿಯ ಬಗ್ಗೆ ಕಳವಳ ವ್ಯಕ್ತಪಡಿಸಿದರು, ಸುಧಾರಿತ ವಿಧಾನಗಳ ಅಗತ್ಯವನ್ನು ಎತ್ತಿ ತೋರಿಸಿದರು. ಟಾಟಾ 1ಎಂಜಿ, ನೆಟ್ ಮೆಡ್ಸ್, ಅಮೆಜಾನ್, ಪ್ಲಿಪ್ ಕಾರ್ಟ್, ಪ್ರಾಕ್ಟೊ, ಅಪೊಲೊ ಮತ್ತು ಫಾರ್ಮ್ ಈಸಿ ಸೇರಿದಂತೆ ಪ್ರಮುಖ ಕಂಪನಿಗಳು ಈ ಸಭೆಯಲ್ಲಿ ಭಾಗವಹಿಸಿದ್ದವು.

ಮೆಡಿಕಲ್ ಅಕ್ರಮ ಕಡಿವಾಣಕ್ಕೂ ಪ್ಲಾನ್?!

ದೇಶದ ಮೆಡಿಕಲ್ ಉದ್ಯಮ ಬೆಳೆಯುತ್ತಿದ್ದಂತೆ ಅನೇಕ ಮೆಡಿಸಿನ್ ನಕಲಿ ಅಥವಾ ಗುಣ ಮಟ್ಟದಲ್ಲಿ ಇಲ್ಲ ಎಂಬ ಆರೋಪ ಇದೆ. ಈ ಹಿನ್ನೆಲೆ ಮೆಡಿಕಲ್ ಅಕ್ರಮ ಕಡಿವಾಣಕ್ಕೂ ಸರ್ಕಾರ ಮುಂದಾಗಿದೆ ಎನ್ನಲಾಗಿದೆ.

ಇದನ್ನೂ ಓದಿ : ಭೂತಾನ್ ಅಡಿಕೆ ಬಂದ್ರೂ ತೊಂದರೆ ಇಲ್ಲ- ಆರಗ ಜ್ಞಾನೇಂದ್ರ

[embedyt] https://www.youtube.com/watch?v=rTGqP21dgrM%5B/embedyt%5D

HOW TO APPLY : NEET-UG COUNSELLING 2023

Categories
ಬೆಂಗಳೂರು

ಶನಿವಾರದಿಂದ ಸಾಲು ಸಾಲು ರಜೆ : ಎಲ್ಲಾ ಬಸ್ ರಶ್

ಶನಿವಾರದಿಂದ ಸಾಲು ಸಾಲು ರಜೆ!
– ಊರಿನ ಕಡೆ ಹೊರಟ ಜನ: ಎಲ್ಲಾ ಬಸ್ ರಶ್
– ಟಿಕೆಟ್ ದರ ಹೆಚ್ಚಳ: ಎಲ್ಲೆಡೆ ಟ್ರಾಫಿಕ್ ಜಾಮ್

NAMMUR EXPRESS NEWS
ಬೆಂಗಳೂರು: ಶನಿವಾರದಿಂದ ಸಾಲು ಸಾಲು ರಜೆ ಇದೆ ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿರುವ ಹೊರ ಜಿಲ್ಲೆಗಳ ಜನರು ತಮ್ಮೂರಿನ ಕಡೆ ಮುಖ ಮಾಡುತ್ತಿದ್ದಾರೆ. ಶಕ್ತಿ ಯೋಜನೆ ಕಾರಣ ಸರ್ಕಾರಿ ಬಸ್ ತುಂಬಿ ಹೋಗಿವೆ. ಇತ್ತ ಖಾಸಗಿ ಬಸ್, ರೈಲುಗಳಲ್ಲಿ ಕೂಡ ಸೀಟ್ ಇಲ್ಲ. ಖಾಸಗಿ ಬಸ್ ಮಾಲೀಕರು, ಹಿಗ್ಗಾಮುಗ್ಗಾ ಟಿಕೆಟ್ ದರ ಹೆಚ್ಚು ಮಾಡುವ ಮೂಲಕ ಬಿಗ್ ಶಾಕ್ ಕೊಟ್ಟಿದ್ದಾರೆ. ಶನಿವಾರದ ರಜೆ.. ಆ ಮೇಲೆ ಭಾನುವಾರ.. ಸೋಮವಾರ ಮತ್ತೊಂದು ರಜೆ ಹಾಕಿಕೊಂಡರೆ ಮಂಗಳವಾರ ಆಗಸ್ಟ್ 15ರ ರಜೆ.ಹೀಗಾಗಿ ರಾಜಧಾನಿ ಜನ ಊರ ಕಡೆ ಹೊರಟಿದ್ದಾರೆ.

ಇತರೆ ಊರುಗಳಲ್ಲಿಯೂ ಬಸ್ ರಶ್

ಎಲ್ಲಾ ಊರಲ್ಲೂ ಸರ್ಕಾರಿ ಬಸ್ ರಶ್ ಆಗಿವೆ. ಶನಿವಾರದಿಂದಲೇ ಬಸ್ ಅಲ್ಲಿ ಜನರ ಸಂಖ್ಯೆ ಹೆಚ್ಚಾಗಿದೆ.

ಇದನ್ನೂ ಓದಿ : ಭೂತಾನ್ ಅಡಿಕೆ ಬಂದ್ರೂ ತೊಂದರೆ ಇಲ್ಲ- ಆರಗ ಜ್ಞಾನೇಂದ್ರ

[embedyt] https://www.youtube.com/watch?v=rTGqP21dgrM%5B/embedyt%5D

HOW TO APPLY : NEET-UG COUNSELLING 2023

Categories
ರಾಜ್ಯ

ವಿದೇಶಿ ಅಡಿಕೆ ಕಳ್ಳ ಸಾಗಣೆ ಜಾಲ ಬಯಲು!

ವಿದೇಶಿ ಅಡಿಕೆ ಕಳ್ಳ ಸಾಗಣೆ ಜಾಲ ಬಯಲು!
– 4.43 ಕೋಟಿ ಮೌಲ್ಯದ 50 ಮೆಟ್ರಿಕ್ ಟನ್ ಅಡಿಕೆ ವಶ
– ಸಮುದ್ರ ಮಾರ್ಗದಲ್ಲಿ ಕೊಲ್ಲಿ ರಾಷ್ಟ್ರಗಳಿಗೆ ರವಾನೆ?
– ಕರಾವಳಿಯಲ್ಲಿ ಸಿಕ್ಕಿ ಬಿತ್ತು ರಕ್ತಚಂದನ ಗ್ಯಾಂಗ್!

NAMMUR EXPRESS NEWS
ರಾಜ್ಯದಲ್ಲಿ ಅಡಿಕೆ ಕಳ್ಳ ಸಾಗಣೆ ಜಾಲ ಬಯಲು ಆಗಿದೆ. ಸುಮಾರು 4.43 ಕೋಟಿ ಮೌಲ್ಯದ 50 ಮೆಟ್ರಿಕ್ ಟನ್ ಅಡಿಕೆ ವಶವಾಗಿದ್ದು ಸಮುದ್ರ ಮಾರ್ಗದಲ್ಲಿ ಕೊಲ್ಲಿ ರಾಷ್ಟ್ರಗಳಿಗೆ ರವಾನೆ ಆಗುತ್ತಿತ್ತು ಎನ್ನಲಾಗಿದೆ. ಆದಾಯ ಗುಪ್ತಚರ ನಿರ್ದೇಶನಾಲಯ 4.43 ಕೋಟಿ ಮೌಲ್ಯದ ಅಡಿಕೆ ಅಕ್ರಮ ಸಾಗಣೆಯಲ್ಲಿ ತೊಡಗಿದೆ ಎನ್ನಲಾದ ಎರಡು ಅಪರಾಧ ಜಾಲಗಳನ್ನು ಭೇದಿಸಿದ್ದು, ಐವರು ಕಾರ್ಯಕರ್ತರನ್ನು ಬಂಧಿಸಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ 50 ಮೆಟ್ರಿಕ್ ಟನ್ ಕಳ್ಳಸಾಗಣೆ ಅಡಿಕೆ ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಅಡಿಕೆಗಳನ್ನು ದುಬೈ ಹಾಗೂ ಯುಎಇ ನಿಂದ ಎರಡು ವಿಭಿನ್ನ ಸರಕುಗಳ ತ್ವರಿತ ಸುಣ್ಣದ ಉಂಡೆಗಳು ಮತ್ತು ಜಿಪ್ಸಮ್ ಪೌಡರ್‌ನಲ್ಲಿ ಕಳ್ಳಸಾಗಣೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮೊದಲ ಪ್ರಕರಣದಲ್ಲಿ ನಿರ್ದಿಷ್ಟ ಗುಪ್ತಚರ ಆಧಾರದ ಮೇಲೆ ಯುಎಇ, ದುಬೈನಿಂದ ಸಾಗಿಸಲಾದ 40-ಅಡಿ ಕಂಟೇನರ್‌ ಅನ್ನು ತಡೆಹಿಡಿಯಿತು. ಅಲ್ಲಿ ಆಮದು ಸರಕುಗಳನ್ನು ಕ್ವಿಕ್ ಲೈಮ್ ಲುಂಪ್ಸ್ ಎಂದು ಘೋಷಿಸಲಾಯಿತು. ಕಂಟೇನರ್ ನ ವಿವರವಾದ ಪರೀಕ್ಷೆಯು ಸುಮಾರು 25.9 ಮೆಟ್ರಿಕ್ ಟನ್ ಅಡಿಕೆಯನ್ನು ವಿಭಜಿತ ರೂಪದಲ್ಲಿ ನೀಡಿತು ಮತ್ತು 2.23 ಕೋಟಿ ಮೌಲ್ಯದ್ದಾಗಿದೆ ಇದನ್ನು ಕಸ್ಟಮ್ಸ್ ಆಕ್ಟ್, 1962 ರ ನಿಬಂಧನೆಗಳ ಅಡಿಯಲ್ಲಿ ವಶಪಡಿಸಿಕೊಳ್ಳಲಾಗಿದೆ.

ಇನ್ನು ಎರಡನೇ ಪ್ರಕರಣದಲ್ಲಿ 40-ಅಡಿ ಕಂಟೇನರ್ ಅನ್ನು ದುಬೈ ಯುಎಇಯಿಂದ ಸಾಗಿಸಲಾಯಿತು. ಅಲ್ಲಿ ಆಮದು ಸರಕುಗಳನ್ನು ಜಿಪ್ಸಮ್ ಪೌಡರ್ ಎಂದು ಘೋಷಿಸಲಾಗಿದೆ. ವಿವರವಾದ ಪರೀಕ್ಷೆಯು ಸಂಪೂರ್ಣ ರವಾನೆಯನ್ನು ತಪ್ಪಾಗಿ ಘೋಷಿಸಲಾಗಿದೆ ಎಂದು ತಿಳಿದುಬಂದಿದೆ ಮತ್ತು ಇದು ಸಂಪೂರ್ಣ ರೂಪದಲ್ಲಿ ಅಡಿಕೆಗಳನ್ನು ನೀಡಿತು, ಸೆಣಬಿನ ಗೋಣಿ ಚೀಲಗಳಲ್ಲಿ ಪ್ಯಾಕ್ ಮಾಡಲ್ಪಟ್ಟಿದೆ ಎಂದು ಮೂಲಗಳು ತಿಳಿಸಿವೆ. ಕಳ್ಳಸಾಗಣೆಯಾದ ಅಡಿಕೆ ಸುಮಾರು 25.8 ಮೆಟ್ರಿಕ್ ಟನ್ ತೂಕವಿದ್ದು 2.2 ಕೋಟಿ ಮೌಲ್ಯರೂ ಆಗಿದೆ. ಇದನ್ನು ಕಸ್ಟಮ್ಸ್ ಆಕ್ಟ್ 1962 ರ ನಿಬಂಧನೆಗಳ ಅಡಿಯಲ್ಲಿ ವಶಪಡಿಸಿಕೊಳ್ಳಲಾಗಿದೆ. ಹೆಚ್ಚಿನ ತನಿಖೆಯಿಂದ ಇತರ ಕೆಲವು ಕಂಟೈನರ್‌ಗಳ ಮೂಲಕ ಇದೇ ರೀತಿಯ ಕಳ್ಳಸಾಗಣೆ ನಡೆಸಲಾಗಿದೆ ಎಂದು ತಿಳಿದಿದೆ. ಬಂಧಿತ ವ್ಯಕ್ತಿಗಳ ವಿಚಾರಣೆ ಮತ್ತು ಸಂಪೂರ್ಣ ತನಿಖೆಯಿಂದ ಇನ್ನೂ ಎರಡು ಹೆಚ್ಚುವರಿ ಕಂಟೈನರ್‌ಗಳಲ್ಲಿ ಅಡಿಕೆಯನ್ನು ಕಳ್ಳಸಾಗಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ರಕ್ತ ಚಂದನ ಕಳ್ಳಸಾಗಣೆ ಮಾಡುತ್ತಿದ್ದ ಇಬ್ಬರು ಅರೆಸ್ಟ್

ರಕ್ತ ಚಂದನವನ್ನು ಕಳ್ಳಸಾಗಣೆ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿ 125 ಕೆ.ಜಿ ರಕ್ತಚಂದನವನ್ನು ವೇಣೂರು ವಲಯಾರಣ್ಯಧಿಕಾರಿ ನೇತೃತ್ವದ ತಂಡವು ವಶಕ್ಕೆ ಪಡೆದ ಘಟನೆ ಬೆಳ್ತಂಗಡಿಯ ವೇಣೂರು ಸಮೀಪ ಕರಿಮಣೇಲು ಎಂಬಲ್ಲಿ ನಡೆದಿದೆ. ಆರೋಪಿತರಾದ ಬಂಟ್ವಾಳ ಮಾವಿನಕಟ್ಟೆ ನಿವಾಸಿ ಖಾಲಿದ್ ಹಾಗೂ ಗುರುವಾಯನಕೆರೆ ನಿವಾಸಿ ದೀಕ್ಷಿತ್ ಅವರನ್ನು ಬಂಧಿಸಲಾಗಿದೆ. ಆರೋಪಿಗಳು ವೇಣೂರು ಕರಿಮಣೇಲು ಎಂಬಲ್ಲಿಂದ ಅಕ್ರಮವಾಗಿ ರಕ್ತಚಂದನ ಸಾಗಾಟ ಮಾಡುತ್ತಿದ್ದರು. ಈ ವೇಳೆ.ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ವಲಯಾರಣ್ಯಧಿಕಾರಿ ಮಹೀಮ್ ನನ್ನು ನೇತೃತ್ವದ ತಂಡ ಆರೋಪಿಗಳು ಸಹಿತ 125 ಕೆ.ಜಿ. ರಕ್ತಚಂದನ ಸಾಗಾಟಕ್ಕೆ ಬಳಸಿದ ವಾಹನ ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ : ಭೂತಾನ್ ಅಡಿಕೆ ಬಂದ್ರೂ ತೊಂದರೆ ಇಲ್ಲ- ಆರಗ ಜ್ಞಾನೇಂದ್ರ

[embedyt] https://www.youtube.com/watch?v=rTGqP21dgrM%5B/embedyt%5D

HOW TO APPLY : NEET-UG COUNSELLING 2023

Categories
ತೀರ್ಥಹಳ್ಳಿ

ಹೆಗ್ಗೋಡು, ತೂದೂರು, ತೀರ್ಥಮುತ್ತೂರು, ಹಾರೋಗೋಳಿಗೆ ಅಧ್ಯಕ್ಷರು, ಉಪಾಧ್ಯಕ್ಷರು ಯಾರು?

ಹೆಗ್ಗೋಡು, ತೂದೂರು, ತೀರ್ಥಮುತ್ತೂರು, ಹಾರೋಗೋಳಿಗೆ ಅಧ್ಯಕ್ಷರು, ಉಪಾಧ್ಯಕ್ಷರು ಯಾರು?
– 4 ಗ್ರಾಮ ಪಂಚಾಯತ್ ಅಲ್ಲಿ ಯಾವ ಪಕ್ಷ ಗೆದ್ದಿತು?

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕು ಹೆಗ್ಗೋಡು ಗ್ರಾ. ಪಂ. ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಕೃಷ್ಣಮೂರ್ತಿ ಮತ್ತು ಉಪಾಧ್ಯಕ್ಷರಾಗಿ ಯಶೋಧ ಸುಧಾಕರ್ ಆಯ್ಕೆಯಾಗಿದ್ದಾರೆ.
ಕೃಷ್ಣಮೂರ್ತಿ ಅವರಿಗೆ 6 ಮತ ಪಡೆದು ಆಯ್ಕೆ ಆಗಿದ್ದಾರೆ. ಈ ಹಿಂದಿನ ಉಪಾಧ್ಯಕ್ಷರಾಗಿದ್ದ ಯಶೋಧ ಸುಧಾಕರ್ ಅವರೇ ಮೀಸಲಾತಿ ಬಂದಿದ್ದರಿಂದ ಉಪಾಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ. ಈ ವೇಳೆ

ತೂದೂರು ಗ್ರಾಮ ಪಂಚಾಯತ್ ಕಾಂಗ್ರೆಸ್ ವಶ

ತೂದೂರು ಗ್ರಾಮ ಪಂಚಾಯತ್ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಶಶಿಕಲಾ ದೇವರಾಜ್, ಉಪಾಧ್ಯಕ್ಷರಾಗಿ ಅರವಿಂದ್ ಬೇಗುವಳ್ಳಿ ಆಯ್ಕೆ ಆಗಿದ್ದಾರೆ.

ಹಾರೋಗೋಳಿಗೆ: ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಭಾರತಿ,ಉಪಾಧ್ಯಕ್ಷರಾಗಿ ಮಯ್ಯದ್ದಿ ಆಯ್ಕೆ

ಹಾರೋಗೊಳಿಗೆ ಗ್ರಾಮ ಪಂಚಾಯತ್ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಭಾರತಿ, ಉಪಾಧ್ಯಕ್ಷರಾಗಿ ಮಯ್ಯದ್ದಿ ಆಯ್ಕೆ ಆಗಿದ್ದಾರೆ.

ತೀರ್ಥಮುತ್ತೂರು:ಅಧ್ಯಕ್ಷರಾಗಿ ಉಷಾ ಸುಬ್ರಮಣ್ಯ ಹಾಗೂ ಉಪಾಧ್ಯಕ್ಷರಾಗಿ ಗಿರೀಶ್ ಬಾವಣಿ

ತೀರ್ಥಮುತ್ತೂರು ಗ್ರಾಮ ಪಂಚಾಯತ್ ಕಾಂಗ್ರೆಸ್ ಬೆಂಬಲಿತರು ಆಯ್ಕೆಯಾಗಿದ್ದಾರೆ.
ಅಧ್ಯಕ್ಷರಾಗಿ ಉಷಾ ಸುಬ್ರಮಣ್ಯ ಹಾಗೂ ಉಪಾಧ್ಯಕ್ಷರಾಗಿ ಗಿರೀಶ್ ಬಾವಣಿ ಆಯ್ಕೆಯಾಗಿದ್ದಾರೆ. ಈ ವೇಳೆ ಪೂರ್ಣೇಶ್ ಕೊಡಿಗೆಬೈಲು ಸೇರಿದಂತೆ ಅನೇಕರು ಹಾಜರಿದ್ದರು.

ಇದನ್ನೂ ಓದಿ : ಭೂತಾನ್ ಅಡಿಕೆ ಬಂದ್ರೂ ತೊಂದರೆ ಇಲ್ಲ- ಆರಗ ಜ್ಞಾನೇಂದ್ರ

[embedyt] https://www.youtube.com/watch?v=rTGqP21dgrM%5B/embedyt%5D

HOW TO APPLY : NEET-UG COUNSELLING 2023